SEARCH HERE

Tuesday 1 January 2019

mahabharata ಮಹಾಭಾರತ






In Mahabharat, Karna asks Lord Krishna - "My mother left me the moment I was born. Is it my fault I was born an illegitimate child?

I did not get the education from Dhronacharya because I was considered not a Kshatriya.

Parshu-Raam taught me but then gave me the curse to forget everything when he came to know I was  Son of Kunthi belong to Kshatriya.

A cow was accidentally hit by my arrow & its owner cursed me for no fault of mine.

I was disgraced in Draupadi's Swayamvar.

Even Kunthi finally told me the truth only to save her other sons.

Whatever I received was through Duryodhana's charity.

So how am I wrong in taking his side ???"

**Lord Krishna replies, "Karna, I was born in a jail.

Death was waiting for me even before my birth.

The night I was born I was separated from my birth parents.

From childhood, you grew up hearing the noise of swords, chariots, horses, bow, and arrows. I got only cow herd's shed, dung, and multiple attempts on my life even before I could walk!

No Army, No Education. I could hear people saying I am the reason for all their problems.

When all of you were being appreciated for your valour by your teachers I had not even received any education. I joined Gurukula of Rishi Sandipani only at the age of 16!

You are married to a girl of your choice. I didn't get the girl I loved & rather ended up marrying those who wanted me or the ones I rescued from demons.

I had to move my whole community from the banks of Yamuna to far off Sea shore to save them from Jarasandh. I was called a coward for running away!!

If Duryodhana wins the war you will get a lot of credit. What do I get if Dharmaraja wins the war? Only the blame for the war and all related problems...

Remember one thing, Karna. Everybody has Challenges in life to face.

LIFE IS NOT FAIR & EASY ON ANYBODY!!!

But what is Right (Dharma) is known to your Mind (conscience). No matter how much unfairness we got, how many times we were Disgraced, how many times we Fall, what is important is how you REACTED at that time.

Life's unfairness does not give you license to walk the wrong path...

Always remember, Life may be tough at few points, but DESTINY is not created by the SHOES we wear but by the STEPS we take..
***


King Drupada expressed that Draoupadi's Swayamvara function itself was arranged by him only for (pandavas)Arjuna....

So any one of the pandavas can marry Droupadhi. For this Dharmaraja said that all the five would marry her.

King Drupada/ Dhrishtadhyumna didnot like this.
At that time, Sri Vedavyasa devru( highest adhishtana) had been there to advise the King to donate her daughter to pandavas.

Draupadi is the avatar of five devis in one sense.So it was not adharma to marry five.

Inorder to clarify further, Sri Vedavyasa devru blessed the king with spritual eyes to see pandavas moola roopa. Further Bharathi devi and others joining with their respective husbands..

 After seeing the divine sight, the king was overjoyed and gave the consent that his daughter would marry five pandavas.

***

Mahabharata War was fought for 18 days.

Bhagvad Gita has 18 chapters.

The epic mahabaharta also has 18 chapters.

There were 11 armies in the Kaurava’side and 7 armies in the pandava’s side which is 11+7=18

Krishna shifted to Dwaraka after the 18th attack on Mathura.

The original name of mahabharata was jaya samhita . Jaya is a sanskrit name and its numerical value in sanskrit is 18.

Jarasandh attacked Mathura for 18 years.

18 trait constitute an ideal man or a woman.

Mahabharata has 1.8 million or 18 lakh words

8 million or 18 lakh words.

There were 153,090 chariots and Chariot riders in the side of the pandavas and 240,570 in the side of Kauravas if you add up the numbers you will get 18.

There were 153,090 Elephant riders in the Pandava’s side and 240,570 in the Kaurava’side side, if you add the numbers you will get 18, (I. E:1+5+3+0+9=0=18)

There total lose and casualties in both the pandavas and Kauravas were 1,530,900 and 2,405,700. If you add them it will again make 18.
Not only in the mahabharata, the number 18 is also significant in Sanatana Dharma:

The battle between Devas and Asuras lasted for 18 years

The number 18 when we split it and add it gives the number 9.

All the multiples of 9, i.e:9,18,36 etc when the numbers are added gives 9 again.

They say 9 is a constant number.

But the significance of 18 in the mahabharata is very mysterious and inexplicable
**








ಭಾರತದರ್ಶನ

ಈ ಶ್ರೇಷ್ಠ  ಮಹಾಭಾರತ ಗ್ರಂಥ ಪ್ರಮುಖವಾಗಿ  ಆಸ್ತಿಕಾದಿ ,  ಮನ್ವಾದಿ  ಮತ್ತು ಉಪಚರಾದಿಗಳೆಂಬ ಮೂರು ಪ್ರಮುಖ ಅರ್ಥಗಳಿಂದ ಕೂಡಿದ್ದಾಗಿದೆ. 

• ಕೌರವರು ಮತ್ತು ಪಾಂಡವರು ಸಾಮಾನ್ಯವಾದ ಐತಿಹಾಸಿಕ ಪುರುಷರೆಂಬುದು ಈ ಗ್ರಂಥದ ಆಸ್ತಿಕಾರ್ಥ.

• ಪಾಂಡವರು ಧರ್ಮದ ಪ್ರತಿನಿಧಿಗಳಾದರೆ ಇನ್ನು ಕೌರವರು ಅಧರ್ಮದ ಪ್ರತಿನಿಧಿಗಳೆಂಬುದಾಗಿ ಈ ಗ್ರಂಥದ ಮನ್ವಾದಿಯ ಅರ್ಥ. ಇದನ್ನು ನಮ್ಮ ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯ ಗ್ರಂಥದಲ್ಲಿ ಬಹು ಸುಂದರವಾಗಿ ಚಿತ್ರಿಸಿರುವರೂ ಕೂಡಾ.

• ಇನ್ನು ಈ ಗ್ರಂಥದಲ್ಲಿ ಬರುವ ಪ್ರತಿಯೊಂದು ವಾಕ್ಯವನ್ನು ಭಗವತ್ಪರವಾಗಿ ಅರ್ಥೈಸಿಕೊಳ್ಳುವದು ಉಪಚರಿತಾರ್ಥ.

ನಮ್ಮ ಶ್ರೀಮದಾಚಾರ್ಯರು ಈ ಮಹಾನ್ಗ್ರಂಥದ ಮನ್ವಾದಿ ಅರ್ಥವನ್ನು ಹೀಗೆ ತಿಳಿಸಿರುವರು---
ಧರ್ಮಕ್ಕೆ ಪ್ರತಿನಿಧಿ ಯುದಿಷ್ಠಿರ ನಾದರೆ  ಭಕ್ತಿ, ಜ್ಞಾನ , ವೈರಾಗ್ಯ ,ಪ್ರಜ್ಞಾ , ಮೇಧಾ , ಧೃತಿ , ಸ್ಥಿತಿ , ಯೋಗ , ಪ್ರಾಣ ಈ ಎಲ್ಲ ಬಲಗಳ ಪ್ರತಿನಿಧಿ ನಮ್ಮ ಭೀಮಸೇನದೇವರು ಮತ್ತು ಶ್ರವಣ , ಮನನ, ನಿಧಿದ್ಧ್ಯಾಸನಗಳ ಪ್ರತಿನಿಧಿ  ಅರ್ಜುನ ಮತ್ತು  ಒಳ್ಳೆಯಶೀಲ ಹಾಗೂ ವಿನಯಗಳ ಪ್ರತನಿಧಿಗಳು  ನಕುಲಮತ್ತು ಸಹದೇವರು.  ಮತ್ತು ಸಕಲವೇದಗಳ ಪ್ರತಿನಿಧಿಯು ದ್ರೌಪದೀದೇವಿಯರು. ಎಂಬುದಾಗಿ.

ಇಂತಹ ಅದ್ಭುತವಾದ ಅರ್ಥವನ್ನು ಕೇವಲ ಸಜ್ಜನರಿಗುಪಕಾರವಾಗಲೆಂದು  ಹೇಳಿದ ನಮ್ಮ ಶ್ರೀಮದಾಚಾರ್ಯರಿಗೊಂದು

********



ಚತುರ್ಮುಖ ಬ್ರಹ್ಮದೇವ ರ ಮಕ್ಕಳಲ್ಲಿ ಶ್ರೇಷ್ಠವಾದ ಅತ್ರಿಋಷಿ ಗಳು ಒಬ್ಬರಾಗಿದ್ದು  ಇವರಿಂದ  ಚಂದ್ರ ,  ಈ ಚಂದ್ರನಿಂದ ಬುಧ , ಈ ಬುಧನಿಂದ  ಪುರೂರವರಾಜ , ಈ ಪೂರೂರವರಾಜನಿಂದ  ಆಯುರಾಜ ,  ಈ ಆಯುರಾಜನಿಂದ  ಯಯಾತಿರಾಜರು  ಹುಟ್ಟಿದರು.

 ಈ ಯಯಾತಿರಾಜ ನಿಗೆ  ಇಬ್ಬರು ಮಡದಿಯರಿದ್ದು ಒಬ್ಬಳು ಅಸುರರ ಗುರುಗಳಾದ  ಶುಕ್ರಾಚಾರ್ಯರ ಮಗಳಾದ ದೇವಯಾನಿ ಯಾದರೆ  ಇನ್ನೊಬ್ಬಳು  ವೃಷಪರ್ವರಾಜನ ಮಗಳಾದ ಶರ್ಮಿಷ್ಠಾ ಹೀಗೆ  ಇಬ್ಬರು ಮಡದಿಯರಿದ್ದರು.

ಯಯಾತಿರಾಜನ ಮಡದಿ ದೇವಯಾನಿಯು ತುರ್ವಸುರಾಜ ನನ್ನು ಮಗನಾಗಿ ಪಡೆದರೆ  ಇನ್ನೊಬ್ಬ ಮಡದಿ ಶರ್ಮಿಷ್ಠೆಯು  ದ್ರುಹ್ಯರಾಜ, ಅನುರಾಜ ಮತ್ತು ಪುರೂರಾಜ ಈ ಮೂರೂ ಮಕ್ಕಳನ್ನು ಪಡೆದಳು.
  ಮುಂದೆ  ಆ ಯದುರಾಜ  ನ ವಂಶದಲ್ಲಿ ದತ್ತಾತ್ರೇಯರೂಪಿ ಭಗವಂತನ ಅನುಗ್ರಹದಿಂದ ಕಾರ್ತವೀರ್ಯಾರ್ಜುನ  ಹುಟ್ಟಿದನು. ಇದೇ ಯದುವಂಶದಲ್ಲಿ ಭಗವಾನ್ಕೃಷ್ಣನೂ ಕೂಡಾ ಅವತರಿಸಿದನು. ಆದರೆ ಪುರೂರಾಜನ ವಂಶದಲ್ಲಿ ಭರತಚಕ್ರವರ್ತಿ ಯು  ಹುಟ್ಟಿದನು. ಮುಂದೆ ಈ ಭರತನ ಪರಂಪರೆಯಲ್ಲಿ ಕುರುರಾಜ ನು ಜನಿಸಿದನು. ಈ ಕುರುರಾಜನ ವಂಶದಲ್ಲಿ ಪ್ರತೀಪರಾಜ ನು ಜನ್ಮವನ್ನು ಪಡೆದನು.

ಈ ಪ್ರತೀಪರಾಜ ನಿಗೆ  ದೇವಾಪಿ , ಬಾಹ್ಲೀಕ  ಮತ್ತು ಶಂತನು ಎಂಬ ಮೂರು ಮಕ್ಕಳು ಹುಟ್ಟಲಾಗಿ ದೇವಾಪಿ ಚರ್ಮರೋಗದಿಂದ ಬಳಲಿದವನಾಗಿ  ತಪಸ್ಸಿಗಾಗಿ ಅರಣ್ಯಕ್ಕೆ ಹೋದನಾದನಾದರೆ ಇನ್ನು  ಬಾಹ್ಲಿಕನು  ಪುತ್ರಿಕಾಪುತ್ರಧರ್ಮ ದಂತೆ ತನ್ನ ತಾಯಿಯ ತಂದೆಯ ಉತ್ತರಾಧಿಕಾರಿಯಾಗ್ತಾನೆ.  ಶಂತನು ಈ ಹಿಂದೆ ಬ್ರಹ್ಮಶಾಪಕ್ಕನುಗುಣವಾಗಿ  ಪ್ರತೀಪರಾಜನ ಮಗನಾಗಿ ಜನಿಸಿದ್ದನು. 
  ಈ ಬಾಹ್ಲೀಕರಾಜನು  ಪೂರ್ವಜನ್ಮದಲ್ಲಿ ದೈತ್ಯನಾದ ಹಿರಣ್ಯಕಶಿಪುವಿನ ಪುತ್ರನಾದ ಪ್ರಲ್ಹಾದ ನಾಗಿದ್ದನು.

ಮುಂದೆ ಈ ಬಾಹ್ಲೀಕರಾಜ ನಿಗೆ  ಏಕಾದಶರುದ್ರರಲ್ಲೊಬ್ಬನಾದ ಪತ್ರತಾಪ ಎಂಬ ರುದ್ರನು  ಸೋಮದತ್ತ ಎಂಬ ಹೆಸರಿನಿಂದ ಮಗನಾಗಿ ಹುಟ್ಟಿದನು. ಮುಂದೆ ಈ  ಸೋಮದತ್ತ ನಿಗೆ  ಭೂರಿ , ಭೂರಿಶ್ರವಸ್ ಹಾಗೂ ಶಲ ಎಂಬುದಾಗಿ ಮೂರು ಮಕ್ಕಳು ಹುಟ್ಟಿದರು ಮತ್ತು ಇವರೆಲ್ಲಾ ಭಗವದ್ಭಕ್ತರಾಗಿದ್ದುದು ವಿಶೇಷವು.
ಈ ಬಾಹ್ಲೀಕರಾಜನ  ಮಗನಾದ ಸೋಮದತ್ತನ ಮಕ್ಕಳಾದ ಭೂರಿ, ಭೂರಿಶ್ರವಸ್  ಹಾಗೂ  ಶಲ ಎಂಬ ಮೂರು ಪುತ್ರರು ಇವರೂ ಕೂಡಾ ಕ್ರಮವಾಗಿ ರುದ್ರಗಣಕ್ಕೆ ಸೇರಿದ ಅಜೈಕಪಾತ್ , ಅಹಿರ್ಬುದ್ಧಿ , ವೀರೂಪಾಕ್ಷರ ಅವತಾರಿಗಳೇ ಆಗಿದ್ದರು.
*
ಇನ್ನು  ಈ ಪ್ರತೀಪರಾಜನ  ಮೂರು ಜನ ಮಕ್ಕಳಲ್ಲೊಬ್ಬನಾದ ಶಂತನು ವಿನ ಜನ್ಮರಹಸ್ಯವನ್ನು ಸಂಕ್ಷಿಪ್ತವಾಗಿ ನೋಡೋದಾದರೆ---
 ಒಮ್ಮೆ ಚತುರ್ಮುಖಬ್ರಹ್ಮದೇವರು  ಪೌರ್ಣಿಮತಿಥಿಯಂದು ಸಮುದ್ರದ ಪಶ್ಚಿಮತೀರಕ್ಕೆ ಹೋದಾಗ ಅಲ್ಲಿ ಗಂಗೆಯಿಂದ ಕೂಡಿದ ಸಮುದ್ರರಾಜನಾದ ವರುಣ ನು ಅತ್ಯಂತ ವಿಲಾಸದಿಂದ ಉಕ್ಕೇರುತ್ತಾ  ಅವರ ಮೇಲೆ ನೀರನ್ನು ಎರಚಲಾಗಿ ಕುಪಿತರಾದ  ಆ ಚತುರ್ಮುಖಬ್ರಹ್ಮದೇವರು ಅಲ್ಲಿದ್ದ ಆ ವರುಣ-ಗಂಗೆಯರಿಗೆ  ಭೂಮಿಯಲ್ಲಿ ಮನುಷ್ಯರಾಗಿ  ಜನಿಸುವಂತೆ ಶಪಿಸಿದರು. ಅದರಂತೆ ಈ  ವರುಣನು ಮೊದಲು ಮಹಾಭಿಷಕ್ ಎಂಬ ರಾಜನಾಗಿ ಹುಟ್ಟಿ ಬಂದು  ಆನಂತರ ದೇಹವಿಯೋಗವಾದ ಬಳಿಕ  ಬ್ರಹ್ಮಸಭೆಗೆ ಬಂದಾಗ ಅಲ್ಲಿ ದೇವತೆಗಳಾದವರು ನಗ್ನಸ್ತ್ರಿಯರನ್ನು  ನೋಡಬಾರದೆಂಬ ನಿಯಮವಿದ್ದರೂ ಕೂಡಾ ಅಲ್ಲಿ ವಸ್ತ್ರಜಾರಿದ ಗಂಗೆಯನ್ನು ನೋಡುತ್ತಾ ನಿಂತನು. ಆಗ ಮತ್ತೆ ಕುಪಿತರಾದ  ಬ್ರಹ್ಮದೇವರು ನೀನು ಪುನಃ ಭೂಮಿಯಲ್ಲಿ ಮಾನವನಾಗಿ ಹುಟ್ಟುವಂತೆ ಶಪಿಸುವರು.ಹೀಗೆ ಶಾಪಗ್ರಸ್ಥರಾದ ವರುಣನು  ಈ ಪ್ರತೀಪರಾಜ ನ ಮಗನಾದ ಶಂತನು ಎಂಬುದಾಗಿ ಹುಟ್ಟಿದನು. ಇದು ಈ  ಶಂತನುವಿನ ಸಂಕ್ಷಿಪ್ತ ಕಥೆಯಷ್ಟೇ.

*
ಅಷ್ಟವಸುಗಳಲ್ಲಿ ಕೊನೆಯ ವಸುವಾದ ದ್ಯು ನಾಮಕ ವಸುವಿನ ಮಡದಿಯ ಹೆಸರು ವರಾಂಗೀ. ಎಂಬುದಾಗಿ. ಇವಳು ಮತ್ತು ಸುವಿಂದರಾಜ ನ ಹೆಂಡತಿಯಾದ  ವರಾಂಗೀ ಇಬ್ಬರೂ ಕೂಡಾ ಸ್ನೇಹಿತೆಯರಾಗಿದ್ದರು.
ಶ್ರೇಷ್ಫವಾದ ವಶಿಷ್ಠಋಷಿ ಗಳಲ್ಲಿ  ಅಮೃತವನ್ನೇ ಕರೆಯುವ ನಂದಿನಿ ಎಂಬ ಹೆಸರಿನ ಹಸುವಿತ್ತು. ಇದನ್ನು  ವರಾಂಗೀ(ಸುವಿಂದರಾಜನ ಹೆಂಡತಿ) ಇವಳು ಬಯಸಲಾಗಿ ಆಗ ತನ್ನ ಸ್ನೇಹಿತೆಯಾದ ವರಾಂಗೀ(ದ್ಯುನಾಮಕ ವಸುವಿನ ಹೆಂಡತಿ) ಗೆ ಹೇಳಲಾಗಿ ಆಗ ದ್ಯು ನಾಮಕ ವಸುವು ತನ್ನ ಹೆಂಡತಿಯ ಸ್ನೇಹಿತೆಗೋಸ್ಕರ  ಮತ್ತು  ತನ್ನ ಹೆಂಡತಿಯ ಪ್ರಚೋದನೆಯಿಂದ ತನ್ನ ಏಳೂಜನ ಸಹೋದರರೊಡಗೂಡಿ ಜ್ಞಾನಿವರೇಣ್ಯರಾದ ಆ ವಶಿಷ್ಠಋಷಿ ಗಳಲ್ಲಿದ್ದ  ಆ ನಂದಿನಿ ಎಂಬ ಹಸುವನ್ನು ಅಪಹರಿಸುವ ಯತ್ನವನ್ನೇ ಮಾಡಿದನು.  ಇದರ ಪರಿಣಾಮ ಆಗ ಜ್ಞಾನಿಗಳಾದ ವಶಿಷ್ಠಋಷಿಗಳು ಆ ಅಷ್ಟವಸುಗಳಿಗೆ ಮನುಷ್ಯರಾಗಿ ಜನ್ಮತಾಳುವಂತೆ ಶಾಪಕೊಟ್ಟರು. ಹೀಗೆ ಶಾಪಗ್ರಸ್ಥರಾದ ಅಷ್ಠವಸುಗಳಲ್ಲಿ ದ್ಯುನಾಮಕವಸುವನ್ನು ಹೊರತುಪಡಿಸಿ ಇನ್ನು ಏಳುವಸುಗಳು ಶಾಪದಿಂದ ಮುಕ್ತರಾಗಲು ನೇರವಾಗಿ ಗಂಗೆ ಯನ್ನು ಶರುಣಹೊಂದಲಾಗಿ ಹೀಗೆ ಪ್ರಾರ್ಥಿಸುತ್ತಾರೆ---
 "ನಾವು 'ದ್ಯು' ನಾಮಕ ವಸುವಿನಂತೆ  ಪ್ರಧಾನ ಅಪರಾಧಿಗಳಲ್ಲ. ಕಾರಣ ನಾವು ಹುಟ್ಟೋದಾದರೆ ನಿನ್ನ ಮಕ್ಕಳಾಗಿಯೇ ಹುಟ್ಟುತ್ತೇವೆ. ಹುಟ್ಟಿದತಕ್ಷಣ ನಮ್ಮನ್ನು  ಸಂಹರಿಸಿ ಈ ಜನ್ಮದಿಂದ ನೀನೇ ಉದ್ಧರಿಸು". ಎಂಬುದಾಗಿ.

  ಇವರ ಪ್ರಾರ್ಥನೆಗೆ ಗಂಗೆಯು ಒಪ್ಪಿದಳು.
******
ಯಾವದೋ ಸಂದರ್ಭದಲ್ಲಿ ಪ್ರತೀಪರಾಜನ ಮಗನಾದ ಶಂತನು ನದೀತೀರದಲ್ಲಿ   ಈ ಗಂಗೆ ಯನ್ನು ನೋಡಲಾಗಿ ಅವರಲ್ಲಿ ಪರಸ್ಪರ ಪ್ರೀತಿ ಹುಟ್ಟಿ ಅವರು ಮದುವೆಯಾಗಲು ಕೂಡಾ  ನಿರ್ಧರಿಸಿದರು. ಆದರೆ   ಆ ಗಂಗೆಯು ಮದುವೆಯಾಗಲು ಶಂತನುವಿಗೆ ಒಂದು ಕಟ್ಟಳೆಯನ್ನು ಹಾಕುವಳು ಹೀಗೇ-
ನೋಡು ನನ್ನ ನೀ ಮದುವೆಯಾಗೋದಾದರೆ  ನೀನು ನನ್ನನ್ನು ಯಾರೆಂದು ಕೇಳಬಾರದು ಮತ್ತು ನಾ ಏನೇ ಮಾಡಲಿ ಅದನ್ನು ನೀ ತಡೆಯಬಾರದು ಎಂಬುದಾಗಿ.  
  ಇದಕ್ಕೆ ಒಪ್ಪಿಗೆಯನ್ನು ತೆಗೆದುಕೊಂಡು ಗಂಗೆ ಮತ್ತು ಶಂತನುವಿನ ಮದುವೆಯೂ ಆಗಲಾಯಿತು. ಆನಂತರ ತನಗೆ ಹುಟ್ಟಿದ ಮಕ್ಕಳನ್ನು ಒಂದಾದ ಮೇಲೊಂದರಂತೆ ಸತತವಾಗಿ 7 ಮಕ್ಕಳನ್ನು ಕೊಂದಳು. ಅವರೇ ಆ ಏಳು ವಸುಗಳು. ಕೊನೆಗೆ 8ನೇ ಮಗುವನ್ನು (ದ್ಯುನಾಮಕ ವಸು) ಕೊಲ್ಲುವಾಗ ಆ ಶಂತನುಮಹಾರಾಜನು ಸಿಟ್ಟಿನಿಂದ  ಅವಳಿಗೆ ನೀನಾರು ಹೀಗೇಕೆ ಈ ಮಕ್ಕಳನ್ನು ಕೊಲ್ಲುವಿಯೆಂದು ಕೇಳಿ ತಡೆಯಲೆತ್ನಿಸಲಾಗಿ  ಆಗ ಆ ಗಂಗೆಯು ತನ್ನ ನಿಜವೃತ್ತಾಂತವನ್ನು ಹೇಳಿ ಆ ಮಗುವನ್ನು ಕೊಲ್ಲದೇ ಜ್ಞಾನಿಗಳಾದ ಬೃಹಸ್ಪತ್ಯಾಚಾರ್ಯ ರಲ್ಲಿ ವಿದ್ಯಾಭ್ಯಾಸಕ್ಕಾಗಿ ಬಿಟ್ಟು ಹೋದಳು. ಆ ಎಂಟನೆಯ ಮಗುವೇ ದೇವವೃತ(ದ್ಯುನಾಮಕ ವಸು)

   ಯಾವತ್ತೂ ದೇವತೆಗಳು  ತಮ್ಮ ಸ್ವರೂಪವು ಇನ್ನೊಬ್ಬರಿಗೆ ತಿಳಿದ ಬಳಿಕ ಈ ಭೂಲೋಕದಲ್ಲಿ ಇರುವಂತಿಲ್ಲವೆಂಬುದು ನಿಯಮ. ಅದರಂತೆ ಈ ನಿಯಮವನ್ನು ಆ ಗಂಗೆಯು ಮಾಡಿದ್ದು.
******
ಈ ದೇವವೃತ ನು ಜ್ಞಾನಿಗಳಾದ ಬ್ರಹಸ್ಪತ್ಯಾಚಾರ್ಯ ರಲ್ಲಿ 50 ವರ್ಷ  ಸಕಲವೇದಗಳನ್ನು, ಪರುಶುರಾಮದೇವ ರ ಬಳಿ 50ವರ್ಷ ಸಚ್ಛಾಸ್ತ್ರವನ್ನು ಅಧ್ಯಯನ ಮಾಡಿಯಾದ ಮೇಲೆ ತನ್ನ ತಂದೆಯ ಬಳಿಗೆ ಬಂದನು. ಅಲ್ಲಿ ಕೆಲ ಕಾಲವಿದ್ದು ಮತ್ತೆ ತಂದೆಯ ಅಪ್ಪಣೆ ಪಡೆದು ಪುನಃ ಅದೇ ಬ್ರಹಸ್ಪತ್ಯಾಚಾರ್ಯರ ಬಳಿ ಬಂದು 50ವರ್ಷಗಳ  ಕಾಲ ವೇದಾದಿಶಾಸ್ತ್ರಗಳ ಅಧ್ಯಯನವನ್ನೂ  ಮತ್ತೆ ಪರುಶುರಾಮದೇವರ ಬಳಿಗೆ ಬಂದು 50ವರ್ಷ ಅಸ್ತ್ರವಿದ್ಯೆಯನ್ನು ಮತ್ತು 300ವರ್ಷಗಳ ಕಾಲ ಸಚ್ಛಾಸ್ತವನ್ನು ಹೀಗೆ ದೇವವೃತನು ಒಟ್ಟಾರೆಯಾಗಿ 500ವರ್ಷಗಳ ಅದ್ಭುತವಾದ ಅಧ್ಯಯನವನ್ನು ಮಾಡಿದನು.
***


ಒಮ್ಮೆ ಶರದ್ವಾನ್ ಋಷಿಗಳು ತಪಸ್ಸಾನಚರಿಸುತ್ತಿದ್ದಾಗ  ಆಕಸ್ಮಿಕವಾಗಿ ಅವರ ಕಣ್ಣಿಗೆ ಊರ್ವಶಿ ಯು ಬೀಳಲಾಗಿ ತತ್ ಕ್ಷಣದಲ್ಲಿ ಅವರ ರೇತಸ್ಸು ಅಲ್ಲಿಯೇ ಇದ್ದ ಹುಲ್ಲಿನ ಮೇಲೆ ಬೀಳಲಾಗಿ ಅದರ ಪರಿಣಾಮ ಅಲ್ಲಿಯೇ ಒಂದು ಗಂಡು ಮತ್ತು ಒಂದು ಹೆಣ್ಣು  ಹೀಗೆ ಎರಡು ಮಕ್ಕಳು ಉದ್ಭವಿಸಲಾಗಿ ಅಲ್ಲಿಯೇ ಬಿಟ್ಟುಹೋದರು. ಇತ್ತ ಶಂತನುಮಹಾರಾಜ ಬೇಟೆಗೆ ಬರಲು ಆ ಎರಡು ಮಕ್ಕಳನ್ನು ನೋಡಲಾಗಿ ಅವುಗಳನ್ನು ತಾನೇ ಸಾಕಲು ನಿರ್ಧರಿಸಿದನು.  ಆ ಮಕ್ಕಳೇ ಕೃಪ  ಹಾಗೂ ಕೃಪೀ ಎಂದು ಪ್ರಸಿದ್ಧರಾದರು.
  ಮುಂದೆ ಇದೇ


ಕೃಪಾಚಾರ್ಯ ರು  ಭಗವಂತನ ಕುರಿತು ತಪಸ್ಸು ಮಾಡಲಾಗಿ ಸಂತುಷ್ಟನಾದ ಆ ಭಗವಂತನು ಇವರಿಗೆ ಸಪ್ತಋಷಿಗಳಲ್ಲಿ ಓರ್ವಋಷಿಯಾಗುವಂತೆ ವರವನ್ನೂ ಮತ್ತು ವೈವಸ್ವತಮನ್ವಂತರಪೂರ್ಣವಾದ ಆಯುಷ್ಯವನ್ನೂ ಸಹ ನೀಡಿದನು.  ಮುಂದೆ ಈ ಕೃಪಾಚಾರ್ಯರು ಗೌತಮಋಷಿಗಳಿಂದ ಶಸ್ತ್ರವಿದ್ಯೆಯನ್ನು ವಿಶ್ವಾಮಿತ್ರರಿಂದ ಸಕಲಶಾಸ್ತ್ರವಿದ್ಯೆಯನ್ನು  ವೇದವ್ಯಾಸದೇವರಿಂದ ವಿಶೇಷವಾಗಿ ಭಗವತ್ಜ್ಞಾನವನ್ನು ಪಡೆದರು.

********

ಈ ಭರದ್ವಾಜಋಷಿ ಗಳು ಬೃಹಸ್ಪತ್ಯಾಚಾರ್ಯ  ರ ಮಕ್ಕಳಾಗಿದ್ದು  ಇವರು ಒಮ್ಮೆ ಗಂಗಾತೀರಕ್ಕೆ ಬಂದಾಗ ಅಲ್ಲಿ ಘೃತಾಚಿ ಯನ್ನು ನೋಡಲಾಗುವ ಮೂಲಕ  ವೀರ್ಯ ಸ್ಖಲನವಾಗಲು ಅದನ್ನು ಅಲ್ಲಿಯೇ ಇದ್ದ ದ್ರೋಣ ದಲ್ಲಿ ಇಟ್ಟರು.  ಹೀಗೆ ಈ ಭರದ್ವಾಜರ ರೇತಸ್ಸಿನಿಂದ ಬ್ರಹ್ಮದೇವ ರ ಆವೇಶವುಳ್ಳ ಬೃಹಸ್ಪತ್ಯಾಚಾರ್ಯ ರು ದ್ರೋಣ ಎಂಬ ಹೆಸರಿನಿಂದ ಜನಿಸಿದರು.
   ಇನ್ನೊಂದೆಡೆ ಈ  ಪಾಂಚಾಲದೇಶ ದ           ಪೃಷತರಾಜ ನು ಉತ್ತಮಸಂತಾನಪ್ರಾಪ್ತಿಗಾಗಿ ತಪಸ್ಸನ್ನಾಚರಿಸಲು ಆಗ ಅಲ್ಲಿ ಆತನಿಗೆ ಅಪ್ಸರೆ ಯರ ದರ್ಶನವಾಗಲು ವೀರ್ಯಸ್ಖಲನವಾಗಲು ಆಗ ಅವರು ನಾಚಿಕೆಯಿಂದ ಆ ವೀರ್ಯವನ್ನು ತಮ್ಮ ಪಾದದಿಂದ ಮುಚ್ಚಿಕೊಳ್ಳಲು ಆ ವೀರ್ಯದಿಂದ ಜನಿಸಿದ ಗಂಡುಮಗುವೇ ದ್ರುಪದ.ನು.

(ಪದೇನ ದ್ರುದತ್ವಾತ್  ದ್ರುಪದಃ)

    ಈ ದ್ರುಪದರಾಜ ನು ಬ್ರಹ್ಮಸಭೆಯಲ್ಲಿ  ಗಾನಮಾಡುವ ಹೂಹೂ ಎಂಬ ಗಂಧರ್ವ ನ ಅವತಾರನಾಗಿದ್ದು 49 ಮರುತ್ತು ಗಳ ಮಧ್ಯದಲ್ಲಿ ಒಬ್ಬನಾದ ಆವಹ ಎಂಬ ಮರುತ್ತಿ ನ ಆವೇಶದಿಂದ ಯುಕ್ತನಾಗಿದ್ದನು. ಹೀಗೆ  ದ್ರುಪದ ನು  ಮತ್ತು ಮೇಲೆ ಹೇಳಿದ ದ್ರೋಣಾಚಾರ್ಯ ರು  ಶ್ರೇಷ್ಠವಾದ  ಭಾರದ್ವಾಜಋಷಿ ಗಳಲ್ಲಿ ವಿದ್ಯೆಯನ್ನು ಪಡೆದರು. ಆಗ ಇವರಲ್ಲಿ ಬಲವಾದ ಸ್ನೇಹಬೆಳೆದು ಆ ಸ್ನೇಹದ ಪರಿಣಾಮವಾಗಿ ಈ ದ್ರುಪದ ನು ದ್ರೋಣಾಚಾರ್ಯ ರಿಗೆ ಮುಂದೊಂದುದಿನ ತನ್ನ ರಾಜ್ಯದ ಅರ್ಧಭಾಗವನ್ನು ಕೊಡುವೆನೆಂದ ವಚನವನ್ನು ಕೊಟ್ಟನು.

**

ದ್ರೋಣಾಚಾರ್ಯರು ಅಧ್ಯಯನ ಮುಗಿಸಿದ ನಂತರ ಕೃಪಿ ಯನ್ನು ವಿವಾಹವಾಗಿ ಮುಂದೆ  ಯಾರಲ್ಲಿಯೂ ಏನೂ ದಾನವನ್ನು ಪಡೆಯದೇ ಶಿಲೋಂಛವೃತ್ತಿಯಿಂದ ತಮ್ಮ ಜೀವನವನ್ನು ಕಳೆಯಹತ್ತಿದರು.
********




  ಇತ್ತ ಶಂತನುಮಹಾರಾಜ ನು ಬೇಟೆಗೆಂದು ಬಂದಾಗ ಅಲ್ಲಿ ಸತ್ಯವತಿ ಯನ್ನು ನೋಡಲಾಗಿ ಅವಳನ್ನು ಮದುವೆಯಾಗಬಯಸಿದಾಗ ಅವಳ ತಂದೆಯಾದ ದಾಶರಾಜ ನು ಒಂದು ಅದ್ಭುತವಾದ ಕರಾರನ್ನು ಶಂತನುಮಹಾರಾಜನಿಗೆ ಹಾಕಿದನು ಹೀಗೆ--
" ಹೇ ರಾಜ! ನೀನು ಮುಂದೆ ನನ್ನ ಮಗಳಲ್ಲಿ ಹುಟ್ಟುವ ಮಗನಿಗೇನೇ ರಾಜ್ಯವನ್ನು ನೀಡುವುದಾದರೆ ಮಾತ್ರ ನನ್ನ ಮಗಳನ್ನು  ಮದುವೆಯಾಗು" ಎಂಬುದಾಗಿ.
   ಈಗ ಶಂತನು ಮಹಾರಾಜನು ಬಹುದಿನಗಳ ಕಾಲ ಚಿಂತೆಯಲ್ಲಿರಲು ಆಗ ಮಗನಾದ ದೇವವೃತ ನು ಇದನ್ನರಿತು ಕೇವಲ ತನ್ನ ತಂದೆಯ ಆಪೇಕ್ಷೆ ಪೂರೈಸಲು ಆ ದಾಶರಾಜನ ಹತ್ತಿರ ಹೋಗಿ ಹೀಗೆ ಪ್ರತಿಜ್ಞೆಗೈಯ್ಯುತ್ತಾನೆ--



"ನೀನು ನಿನ್ನ ಮಗಳಾದ ಸತ್ಯವತಿಯನ್ನು ನನ್ನ ತಂದೆಗೆ ಕೊಟ್ಟು ಮದುವೆಮಾಡು ಅವಳಲ್ಲಿ ಹುಟ್ಟುವ ಮಗನೇ ನನ್ನ ತಂದೆಯ ರಾಜ್ಯವನ್ನು ವಹಿಸಿಕೊಳ್ಳಲಿ. ಮೇಲಾಗಿ ನಾನು ಮದುವೆಯಾಗದೇ ನನ್ನ ಜೀವನಪರ್ಯಂತವಾಗಿ ಮದುವೇನೇ ಆಗದೇ ಅಖಂಡವಾದ ನೈಷ್ಟಿಕಬ್ರಹ್ಮಚರ್ಯವನ್ನಾಚರಿಸುವೆನು, ಚಿಂತೆ ಮಾಡದಿರು." ಎಂಬುದಾಗಿ. ಹೀಗೆ ಅದ್ಭುತವಾದ ಬಲು ಭೀಕರವಾದ ಪ್ರತಿಜ್ಞೆಮಾಡಿದನಾದ್ದರಿಂದ  ಈ ದೇವವೃತನಿಗೆ ಅಂದಿನಿಂದ ಭೀಷ್ಮ ಎಂಬ ಹೆಸರು ಪ್ರಾಪ್ತವಾಯಿತು.
  ಹೀಗೆ ಭೀಷ್ಮನ ಅದ್ಭುತವಾದ ಪ್ರತಿಜ್ಞೆಯು ಶಂತನು-ಸತ್ಯವತಿ ಯ ಮದುವೆಯಾಗಲು ಬಹುಮುಖ್ಯಕಾರಣವಾಯಿತು.



**********



ಭೀಷ್ಮ ರ ಅದ್ಭುತವಾದ ಶಪತದೊಂದಿಗೆ ಶಂತನು-ಸತ್ಯವತಿ ಯರ ವಿವಾಹವಾಗಿ ಇವರಲ್ಲಿ ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರ ಮಕ್ಕಳಾದವು. 
ಚಿತ್ರಾಂಗದನು ಅವಿವಾಹಿತನಾಗಿ  ಹೆಸರಿನ ನಿಮಿತ್ತದಿಂದ  ಚಿತ್ರಾಂಗದನೆಂಬ ಗಂಧರ್ವನೊಡನೆ  ಹೋರಾಡಿ  ಮೃತನಾದನು.

ಇತ್ತ ಭೀಷ್ಮ ರು ಕಾಶೀರಾಜ ನು ತನ್ನ ಮಕ್ಕಳ ಮದುವೆಗೆಂದು ಏರ್ಪಡಿಸಿದ ಸ್ವಯಂವರದಲ್ಲಿ ಪಾಲ್ಗೊಂಡು ಗೆದ್ದು ಆ ಹೆಣ್ಣುಮಕ್ಕಳಾದ ಅಂಬೆ, ಅಂಬಿಕೆ , ಅಂಬಾಲಿಕೆ ಯರನ್ನು  ಈ ತನ್ನ ವಿಚಿತ್ರವೀರ್ಯ ನಿಗೆ  ಮದುವೆಮಾಡಿಕೊಳ್ಳಲು ಹೇಳಿದರು. ಆಗ ಈ ಮೂರು ಜನ ಹೆಣ್ಣುಮಕ್ಕಳಲ್ಲಿ  ಅಂಬೆ( ದ್ಯು ನಾಮಕ ವಸುವಿನ ಮಡದಿ) ಯು ವಿಚಿತ್ರವೀರ್ಯನನ್ನು ಮದುವೆಯಾಗಲು ನಿರಾಕರಿಸಿದರೆ ಅಂಬಿಕೆ ಮತ್ತು ಅಂಬಾಲಿಕೆಯರು ಒಪ್ಪಿ ಮದುವೆಯಾದರು. ಆಗ ಅಂಬೆ ಯು ತಾನೇ   ಸ್ವಯಂವರದಲ್ಲಿ ಗೆದ್ದು ತನ್ನನ್ನು ವಿಚಿತ್ರವೀರ್ಯನಿಗೆ ಮದುವೆಮಾಡಹೊರಟ ಈ ಭೀಷ್ಮರ ಮೇಲೆ ಕೋಪಗೊಂಡು ಇವರನ್ನು ಸಂಹರಿಸಲು ಪರಶುರಾಮದೇವರನ್ನು ಶರಣುಹೊಂದಿದಳು. ಹೀಗೆ ಇವಳಿಂದ ಪ್ರಾರ್ಥಿತರಾದ ಪರುಶುರಾಮದೇವರು ತನ್ನ ಶಿಷ್ಯನೇ ಆದ ಭೀಷ್ಮರೊಂದಿಗೆ ಯುದ್ಧಮಾಡಲು ಸೋತರು. ನೋಡಿ ಈ ನಿತ್ಯಜಯವುಳ್ಳ ಪರುಶುರಾಮದೇವರು  ಈ ಭೀಷ್ಮರಿಗೆ ಕೀರ್ತಿಯನ್ನು ನೀಡುವದಕ್ಕೋಸ್ಕರವಾಗಿ  ಅವರಿಂದ ಪರಾಜಿತರಾದಂತೆ ನಟಿಸಿದರೆಂಬುದಾಗಿ. ಈಗ ಮುಂದೆ ಈ ಅಂಬೆಯು ತನ್ನ ಆಸೆ ಈಡೇರಿಸಿಕೊಳ್ಳಲು ರುದ್ರದೇವರನ್ನು ಶರಣುಹೊಂದಿದಳು.



*******



ಈಗ ಅಂಬೆ ಯು ಮತ್ತೆ ತನ್ನ ಶಪತವನ್ನು ಪೂರೈಸಲೋಸುಗವಾಗಿ ರುದ್ರ ದೇವರನ್ನು ಕುರಿತು ತಪಸ್ಸನ್ನಾಚರಿಸಲಾಗಿ  ಆ ರುದ್ರದೇವರು ಅವಳ ಬಯಕೆಯಂತೆ  ಭೀಷ್ಮಾಚಾರ್ಯ ರ ಮರಣಕ್ಕೆ ಸಹಾಯವಾಗಲು ಅವಳಿಗೊಂದು ಪದ್ಮಮಾಲೆ ಯೊಂದನ್ನು ನೀಡಿದರು. ಆ ಮಾಲೆಯನ್ನು ಅಂಬೆಯ ತೆಗೆದುಕೊಂಡು ಬಂದು ದ್ರುಪದರಾಜ ನ ಮಹಾದ್ವಾರದಲ್ಲಿಟ್ಟು ತನ್ನ ಯೋಗಸಾಮರ್ಥ್ಯದಿಂದ ದೇಹತ್ಯಾಗಮಾಡಿದಳು. ದ್ರುಪದನು ಆ ವಿಶೇಷವಾದ ಅಂದರೆ ಎಂದೂ ಬಾಡದ ಆ ಮಹಾದ್ವಾರದಲ್ಲಿಟ್ಟ ಆ ಮಾಲೆಯನ್ನು ನೋಡಲಾಗಿ ಅದನ್ನು ತಂದು ತನ್ನ ಕೋಶದಲ್ಲಿಟ್ಟುಕೊಂಡನು. ಆನಂತರ ಈ ದ್ರುಪದರಾಜ ನು ಪುತ್ರನಿಗೋಸ್ಕರವಾಗಿ ರುದ್ರದೇವರನ್ನು ಕುರಿತು ತಪವನ್ನಾಚರಿಸಲಾಗಿ ಆಗ ಆ ರುದ್ರದೇವರು ಅವನಿಗೆ-
  'ನಿನಗೆ ಹುಟ್ಟುವ ಮಗು ಮೊದಲು ಹೆಣ್ಣಾಗಿಯೇ ಹುಟ್ಟಿ ಆನಂತರದಿ ಗಂಡಾಗುವದು" ಎಂಬುದಾಗಿ ವರವನ್ನು ಕೊಡುತ್ತಾರೆ. ಅದರಂತೆ ಇವರ ವರದಿಂದ ಈ ಹಿಂದೆ ತನ್ನ ಯೋಗಸಾಮರ್ಥ್ಯದಿಂದ ದೇಹತ್ಯಾಗಮಾಡಿದಳೋ ಆ ಅಂಬೆ ಯೇ ದ್ರುಪದರಾಜ ನ ಮಗಳಾಗಿ ಶಿಖಂಡಿನಿ ಎಂಬ ಹೆಸರಿನಿಂದ ಜನಿಸಿದಳು. ಹೀಗಿರಲು ಈ ದ್ರುಪದರಾಜನು ತನ್ನ ಪುತ್ರವ್ಯಾಮೋಹದ ದೆಸೆಯಿಂದ ತನ್ನ ಈ ಮಗಳಿಗೇನೇ ಪುರುಷವೇಷವನ್ನು ಹಾಕಿ ದಶಾರ್ಣದೇಶಾಧಿಪತಿಯಾಗಿದ್ದ ಹಿರಣ್ಯವರ್ಮ ನ ಮಗಳ ಜೊತೆ ವಿವಾಹವನ್ನೇ ಮಾಡಿದನು. ಆಮೇಲೆ ಹಿರಣ್ಯವರ್ಮರಾಜನಿಗೆ  ಈ ಶಿಖಂಡಿನಿಯು ವಾಸ್ತವವಾಗಿ ಹೆಣ್ಣೆಂದು ಗೊತ್ತಾಗಿ ನನಗೆ ಮೋಸಮಾಡಿದ ಈ ದ್ರುಪದರಾಜನ ಮೇಲೆ ತನ್ನ ಸೇಡು ತೀರಿಸಿಕೊಳ್ಳಲು ಯುದ್ಧಕ್ಕೆ ಬಂದನು. ಈಗ ಈ ಶಿಖಂಡಿನಿಯು ತನ್ನ ತಂದೆಗೆ ತೊಂದರೆಯಾಗಬಹುದು ಇದನ್ನು ಪರಿಹರಿಸಲು ತುಂಬುರು ಗಂಧರ್ವ ನನ್ನು ಶರಣುಹೊಕ್ಕಳು. ಈ ತುಂಬುರುಗಂಧರ್ವನಿಗೆ  ಸ್ಥೂಣಾಕರ್ಣ  ನೆಂತಲೂ ಕರೆಯುತ್ತಾರೆ. ಇಂತಹ ತುಂಬುರುಗಂಧರ್ವರು ತನ್ನ ಪುರುಷದೇಹವನ್ನು ಆ ಶಿಖಂಡಿನಿಗೆ ನೀಡಿ ಅವಳ ಸ್ತ್ರೀದೇಹವನ್ನು ತಾನೇ ಸ್ವೀಕರಿಸಿದನು. ಅಲ್ಲದೇ ಈ ಶಿಖಂಡಿನಿ ಯ ಪುರುಷದೇಹದಲ್ಲಿ ಒಂದಂಶದಿಂದ ಇದ್ದರು ಕೂಡಾ.



*******

ಇತ್ತ ಸತ್ಯವತಿ ಯು ತಮ್ಮ ಕುಲದ  ವಂಶಾಭಿವೃದ್ಧಿಗಾಗಿ ವೇದವ್ಯಾಸದೇವರನ್ನು ಸ್ಮರಸಿ ತನ್ನ ಸೊಸೆಯಂದಿರಾದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ  ವಿಷ್ಣುಪಂಚಕಮಹಾವೃತವನ್ನು ಆಚರಿಸಲು ಆದೇಶಿಸಿದಳು. ನಂತರದಿ  ಮೊದಲು ಅಂಬಿಕೆ ಯು ಈ ವೇದವ್ಯಾಸದೇವರ ಬಳಿ ಬಂದು ಅವರ ಭಯಂಕರರೂಪವನ್ನು ನೋಡಲಾಗಿ ಕಣ್ಣು ಮುಚ್ಚಿಕೊಂಡಳು. ಇದರಿಂದಾಗಿ ವಾಯುದೇವರ ಆವೇಶದಿಂದ ಯುಕ್ತವಾದ  ಹಂಸ ನೆಂಬ ಗಂಧರ್ವನು ಆ ಅಂಬಿಕೆಗೆ  ಹುಟ್ಟುಕುರುಡನಾಗಿ ಹುಟ್ಟಿದನು.ವೇದವ್ಯಾಸದೇವರು ಮಗು ಬಲಶಾಲಿಯಾಗುವಂತೆ ಹರಿಸಿದರು ಈ ಮಗುವೇ ಧೃತರಾಷ್ಟ್ರ ನಂತರ ಈಗ ಅಂಬಾಲಿಕೆ ಯು ವೇದವ್ಯಾಸದೇವರ ಬಳಿ ಬರಲು ಅವರ ರೂಪವನ್ನು ನೋಡಿ ಕಣ್ಣುಮುಚ್ಚದಿದ್ದರೂ ಭಯಗ್ರಸ್ತಳಾಗಿ ಬಿಳಿಬಣ್ಣವನ್ನು ಹೊಂದಿದ ಪ್ರಯುಕ್ತ ಪಾಂಡುರೋಗದಿಂದ ಯುಕ್ತವಾದ  ಒಂದು ಮಗುವಿಗೆ ಜನ್ಮವಿತ್ತಳು , ಈ ಮಗುವೇ ಪಾಂಡುರಾಜ. ನು.
 (ಪರಾವಹ ಎಂಬ ಮರುತ್ ದೇವತೆಯೇ ಈ   ಪಾಂಡುರಾಜ)

  ಹೀಗೆ ಅಂಬಿಕೆಯಲ್ಲಿ ಹುಟ್ಟುಕುರುಡನಾದ ಮಗು ಇನ್ನು ಅಂಬಾಲಿಕೆಯಲ್ಲಿ ಪಾಂಬುರೋಗಗ್ರಸ್ಥ ಮಗು ಜನಿಸಿದ್ದನ್ನು  ಸತ್ಯವತಿಯು ನೋಡಿ ಮತ್ತೆ ಉತ್ತಮಪುತ್ರಸಂತಾನಕ್ಕಾಗಿ  ಮತ್ತೆ ಹಿರಿಯಸೊಸೆಯಾದ ಅಂಬಿಕೆಯನ್ನು  ವೇದವ್ಯಾಸದೇವರಲ್ಲಿ ಹೋಗಲು ಆದೇಶಿಸಿದಾಗ ಆಗ ಅಂಬಿಕೆಯು ತಾನು ಹೋಗಲು ಭಯಪಟ್ಟು ತನ್ನ ಸೇವಕಿಯನ್ನು ಅವರ ಬಳಿ ಕಳುಹಿಸಿದಾಗ  ಆ ಸೇವಕಿ(ದಾಸಿ) ಬಹಳ ಶ್ರದ್ಧೆ -ಭಕ್ತಿಯಿಂದ ಅವರ ದರುಶನ ಪಡೆದು ಅವರನುಗ್ರಹದಿಂದ ಯಮಧರ್ಮರಾಜನನ್ನೇ  ಮಗನಾಗಿ ಪಡೆದಳು. ಅವನೇ ವಿದುರನು.



********
ಈ  ಧೃತರಾಷ್ಟ್ರ ಪಾಂಡು ಮತ್ತು ವಿದುರ ರಿಗೆ ಹಿರಿಯರಾದ ಭೀಷ್ಮರು  ಯೋಗ್ಯವಾದ ಸಂಸ್ಕಾರವನ್ನು ಮಾಡಿಸಿದರು. ವೇದವ್ಯಾಸದೇವರು ಇವರಿಗೆ ಎಲ್ಲ ವಿದ್ಯೆಗಳನ್ನು ಉಪದೇಶಿಸಿದರೆ ಭೀಷ್ಮರು  ಅಸ್ತ್ರ-ಶಸ್ತ್ರಗಳನ್ನು ಅವರಿಗೆ  ತಾವೇ ಅಭ್ಯಾಸಮಾಡಿಸಿದರು. ಈ ಮೂವರಲ್ಲಿ ವಿದುರ ನು   ಬುದ್ಧಿವಂತನೂ ಮತ್ತು ನೀತಿಜ್ಞನೂ ಆದನು. 
    ವಿಚಿತ್ರವೀರ್ಯ ನಿಗೆ ಸಾರಥಿಯಾದ ಗವಲ್ಗಣ ನಿಗೆ  ಸಕಲಗಂಧರ್ವರಿಗೆಲ್ಲಾ ಒಡೆಯನಾದ ತುಂಬುರು ಎಂಬ  ಗಂಧರ್ವನು ಉದ್ವಹ  ನೆಂಬ ಮರುತ್ತಿನ ಆವೇಶದಿಂದ ಯುಕ್ತನಾಗಿ  ಒಬ್ಬ ಮಗನು  ಹುಟ್ಟಿದನು ಅವನೇ  ಸಂಜಯ ನು. ಇವನು  ವೇದವ್ಯಾಸದೇವರ ಶಿಷ್ಯನಾಗಿದ್ದು  ಸದಾ  ಈ ಧೃತರಾಷ್ಟ್ರ ನನ್ನನುಸರಿಸಿಯೇ ಇರುತ್ತಿದ್ದನು.

ಮುಂದೆ ಈ  ಧೃತರಾಷ್ಟ್ರ ನ ವಿವಾಹವು  ಗಾಂಧಾರದೇಶ ದ  ರಾಜನಾದ  ಸುಬಲ ನ ಮಗಳಾದ  ಗಾಂಧಾರಿ ಯೊಂದಿಗೆ  ನೆರವೇರಿತು. ಈ  ಗಾಂಧಾರಿ ಗೆ  ಒಬ್ಬ ಅಣ್ಣನಿದ್ದನು ಅವನೇ  ಶಕುನಿ ಯು.  ಈ ಶಕುನಿ ಯು   ದ್ವಾಪರಯುಗಕ್ಕೆ  ಅಭಿಮಾನಿಯಾದ ದ್ವಾಪರ ನೆಂಬ  ಹೆಸರುಳ್ಳ ಅಸುರನೇ  ಈ ಸುಬಲ  ನ ಮಗನಾಗಿ  ಹುಟ್ಟಿದ್ದನು.

********

ಪರಾವಹ ನೆಂಬ ಮರುತದೇವತೆಯ ನಿಯತಪತ್ನಿಯಾದ ಕುಂತಿ ಯು ಶೂರಸೇನರಾಜ ನಿಗೆ ಪೃಥೆ  ಎಂಬ ಹೆಸರಿನಿಂದ ಮಗಳಾಗಿ ಹುಟ್ಟಿದಳು.  ಇವಳನ್ನು ಶೂರಸೇನರಾಜ ನು  ಮಕ್ಕಳಿಲ್ಲದೇ ಗೊಣಗುತ್ತಿದ್ದ ತನ್ನ ಗೆಳೆಯನಾದ ಕುಂತೀಭೋಜ ನಿಗೆ  ದತ್ತುನೀಡಿದನು. ಈ ಕುಂತೀಭೋಜರಾಜನಾದರೂ ಪೂರ್ವದಲ್ಲಿ ಕೂರ್ಮ ನೆಂಬ ಮರುದೇವತೆಯು. ಹೀಗೆ ಕುಂತಿ ಅಥವಾ ಪೃಥೆಯನ್ನು ದತ್ತುಪಡೆದನಂತರ ಒಂದುದಿನ ರುದ್ರಾವತಾರರಾದ ದೂರ್ವಾಸಋಷಿಗಳು  ಈ ಕುಂತೀಬೋಜ ನ ಮನೆಗೆ ಬಂದರು. ಆಗ ಈ ಕುಂತೀದೇವಿ ಯು ಹದಿಮೂರುವರ್ಷಗಳ ಕಾಲ ಅವರ ಸೇವೆಮಾಡಲಾಗಿ ಈ ಸೇವೆಯಿಂದ  ಪ್ರಸನ್ನರಾದ  ದೂರ್ವಾಸರು ಋತುಸ್ನಾತಳಾದ ಈ ಕುಂತಿ ಗೆ  ಎಲ್ಲ ದೇವತೆಗಳನ್ನು ವಶಪಡಿಸಿಕೊಳ್ಳುವ ಒಂದು ಮಂತ್ರವನ್ನು ಉಪದೇಶಿಸಿದರು. ಕೂಡಲೇ ಅವರು ಉಪದೇಶಿಸಿದ ಮಂತ್ರವನ್ನು ಬಹಳ ಕುತೂಹಲದಿಂದ ಮೊದಲು ಸೂರ್ಯನನ್ನು ಆಹ್ವಾನಿಸಲಾಗಿ ಆ ಸೂರ್ಯದೇವನು ತನ್ನ ಅಂಶನಾದ ಸಹಜವಾಗಿ ಕರ್ಣಕುಂಡಲಗಳಿಂದುಕೂತನಾದ ಮಗನನ್ನು ಕೊಟ್ಟು ಅನುಗ್ರಹಿಸಿದನು. ಇವನೇ ಕರ್ಣನು. ತ್ರೇತಾಯುಗದಲ್ಲಿ ಸುಗ್ರೀವ ನಾಗಿದ್ದ ಸೂರ್ಯದೇವನು ವಾಲಿ ಯನ್ನು ಕೊಲ್ಲಿಸಿದ ಕಾರಣ ಸಹಸ್ರವರ್ಮನೆಂಬ  ಅಸುರ ನಿಂದ ಸಹಿತನಾಗಿ ಹೀಗೆ ಈ ಕುಂತಿಯಪುತ್ರನಾದನು.ಹೀಗೆ ಮದುವೆಗೆ ಮುಂಚೆ ಈ ಕರ್ಣ ಕುಂತಿಗೆ ಹುಟ್ಟಲಾಗಿ ತನಗೆಲ್ಲಿ ಅಪವಾದ ಬರುವುದೆಂದು ಅಂದುಕೊಂಡು ಆ ಮಗುವನ್ನು ಒಂದುಪೆಟ್ಟಿಗೆಯಲ್ಲಿಟ್ಟು ಅದನ್ನು ನದಿಯಲ್ಲಿ ತೇಲಿಬಿಟ್ಟಳು.ನಂತರ ಆ ಪೆಟ್ಟಿಗೆಯು ನದಿಯಿಂದ ಹರಿದು ಬರುತ್ತಾ ಚಂಪಾಪಟ್ಟಣದಲ್ಲಿ ಸೂತನಾದ ಆಧಿರಥ ನಿಗೆ ಸಿಗಲು ಆ ಮಗುವನ್ನು ಸಾಕಿ ಮುಂದೆ ತನ್ನ ಮಗನನ್ನಾಗಿಯೇ ಮಾಡಿಕೊಂಡನು.

   ಇತ್ತ ಈ  ಪಾಂಡುರಾಜ ನ ಮದುವೆ ಈ ಕುಂತೀದೇವಿ ಯೊಂದಿಗೆಯೂ ಮತ್ತು ವಿದುರ ನ ಮದುವೆಯು ಶೂರಸೇನನಿಂದ  ಶೂದ್ರಸ್ತ್ರೀಯಲ್ಲಿ ಹುಟ್ಟಿದ ಆರುಣಿ ಯೊಂದಿಗೆ ನೆರವೇರಿತು.

****

ಇತ್ತ ಮದ್ರದೇಶದ ರಾಜನಾದ ಋತಾಯನ ನು ತಾನು ಇಂದ್ರಸದೃಶನಾದ ಮಗನನ್ನು ಮತ್ತು ಶ್ರೇಷ್ಟಳಾದ ಮಗಳನ್ನು ಪಡೆಯುವದಕ್ಕೋಸ್ಕರವಾಗಿ ಬ್ರಹ್ಮದೇವ ರನ್ನು  ಕುರಿತು ತಪಸ್ಸುಮಾಡಲಾಗಿ ಅವರನುಗ್ರಹದಿಂದ  ಪ್ರಲ್ಹಾದರಾಜರ ಸಹೋದರನು ಮತ್ತು ವಿಶೇಷವಾಗಿ ಹರಿಭಕ್ತನೂ ಆದ ಸಲ್ಹಾದ  ನೇ ಇವನಿಗೆ ಮಗನಾಗಿ  ಶಲ್ಯ ಎಂಬ ನಾಮದಿಂದಲೂ  ಮತ್ತು ಪರಾವಹ ಮರುತ್ ದೇವತೆಯ ಮಡದಿಯೇ ಇವನಿಗೆ  ಮಾದ್ರಿ ಎಂಬ ನಾಮದಿಂದಲೂ  ಮಗಳಾಗಿ ಋತಾಯನನಿಗೆ ಜನಿಸಿದರು.
*******


ಮುಂದೆ  ಈ ಮಾದ್ರಿ ಯೂ ಪಾಂಡುರಾಜ ನನ್ನು ಮದುವೆಯಾದಳು.

  ವೇದವ್ಯಾಸದೇವರು  ಮುಂದೆ ನಡೆಯುವ ಕೌರವ-ಪಾಂಡವ ರ  ಯುದ್ಧದಲ್ಲಿ  ಈ ಸತ್ಯವತಿ ದೇವಿ ಯು  ಹಸ್ತಿನಾವತಿ ಯಲ್ಲಿರಬಾರದೆಂದು  ಸತ್ಯವತಿ , ಅಂಬಿಕೆ-ಅಂಬಾಲಿಕೆ ಯರನ್ನು  ಬದರೀಕಾಶ್ರಮ ಕ್ಕೆ  ಕರೆದೊಯ್ದರು. ಇವರಜೊತೆ  ಪಾಂಡುರಾಜ  ನೂ  ಕೂಡಾ ತನ್ನ ರಾಜ್ಯಭಾರವನ್ನು ಧೃತರಾಷ್ಟ್ರ ಮತ್ತು ವಿದುರ ರಿಗೊಪ್ಪಿಸಿ  ಹೋದನು.



********
ಒಮ್ಮೆ ಕಿಂದಮಋಷಿ ಗಳು  ಮನುಷ್ಯರೂಪದಿಂದ ಸದಾ ತಮ್ಮ ಹೆಂಡತಿಯೊಡನೆ ಕ್ರೀಡಿಸಲು ನಾಚಿಕೊಂಡವರಾಗಿ ಒಂದು ಸುಂದರವಾದ ಜಿಂಕೆಯರೂಪವನ್ನು ತಾಳಿ    ಕ್ರೀಡಿಸುತ್ತಿರಲು ಇದು ದೈವವಶಾತ್ ಪಾಂಡುರಾಜ ನ ಕಣ್ಣಿಗೆ ಬಿದ್ದು ಆಗ  ಆ ಜಿಂಕೆಯ ಮೇಲೆ  ಬಾಣಪ್ರಯೋಗಿಸಿದಾಗ   ಆಗ ಆ ಕಿಂದಮಋಷಿ ಗಳು ---
'ನೀನು ಸತಿಸಹಿತ ರತಿಯಲ್ಲಿರುವಾಗಲೇ ನೀನು ಮೃತ್ಯುವನ್ನು ಹೊಂದು' 
ಎಂಬುದಾಗಿ ಪಾಂಡುರಾಜ ವಿಗೆ ಶಾಪವನ್ನಿತ್ತರು. 

  ಈಗ ವಿರಕ್ತನಾದ ಪಾಂಡುರಾಜ ನು ಪವಿತ್ರವಾದ ಗಂಗಾನದಿಯಲ್ಲಿ ಸ್ನಾನಮಾಡಿ ಬದರೀಕಾಶ್ರಮ  ದಲ್ಲಿ ತಪವನ್ನಾಚರಿಸಹತ್ತಿದನು.

*******
ಇತ್ತ ದೇವತೆಗಳ ಗಾಯಕನಾದ ಉಗ್ರಸೇನ ನೆಂಬ ಗಂಧರ್ವನು  ಆಹುಕ ನಿಗೆ  ಮಗನಾಗಿ ಅದೇ ನಾಮದಿಂದಲೇ ಯಾದವರಲ್ಲಿ ಹುಟ್ಟಿದನು.  ಒಮ್ಮೆ ದ್ರುವಿಳ ಎಂಬ ಅಸುರನು ಈ ಉಗ್ರಸೇನ ನ ರೂಪವನ್ನೇ ಧರಿಸಿ ಉಗ್ರಸೇನ ನ  ಪತ್ನಿಯೊಡನೆ ಕೂಡಲಾಗಿ ಆಗ ಅವಳಲ್ಲಿ  ಕಾಲನೇಮಿ ಯೆಂಬ ದೈತ್ಯನು ಕಂಸ ನೆಂಬ  ಹೆಸರಿನಿಂದ ಜನಿಸುವನು. 
ವಿಪ್ರಚಿತ್ತಿ ಎಂಬ ಅಸುರನು ರುದ್ರ ದೇವರ ವರಬಲದಿಂದ  ಜರಾ ಎಂಬ ರಾಕ್ಷಸಿಗೆ ಮಗನಾಗಿ  ಜರಾಸಂಧ ಎಂಬ ಹೆಸರಿನಿಂದ ಜನಿಸಿದನು.

********
ಭಗವಂತನಿಂದ ಹತರಾದ ಮಧು-ಕೈಟಭ ರು ಹಂಸ-ಡಿಭಿಕ ಎಂಬ ಹೆಸರಿನಿಂದಲೂ ಮತ್ತು ಬಲಿ ಎಂಬ ಅಸುರನ ಆವೇಶದಿಂದ ಕೂಡಿದ ಬಲಿಚಕ್ರವರ್ತಿ ಯು ಸಾಲ್ವ ಎಂಬ ಹೆಸರಿನಿಂದಲೂ  ಬ್ರಹ್ಮದತ್ತ ನಿಗೆ ಮಕ್ಕಳಾಗಿ  ಜನಿಸಿದರು. ಬಲಿಚಕ್ರವರ್ತಿ ಯ ಮಗನಾದ ಬಾಣ ನೆಂಬ ಉತ್ತಮಜೀವಿಯು ಬಾಣಾಸುರ ನ ಆವೇಶದಿಂದ ಕೂಡಿಕೊಂಡು  ಕೀಚಕ ನಾಗಿ  ಹುಟ್ಟಿದನು.

*******
ಕುಬೇರ ನಲ್ಲಿರುವ ಸುಪ್ರತೀಕ ವೆಂಬ ಒಂದು ಆನೆಯಿತ್ತು. ಅದನ್ನು ನರಕಾಸುರ ನು ಕದ್ದು ತೆಗೆದುಕೊಂಡು ಹೋದನು. ಅದನ್ನು ಮತ್ತೆ ಪಡೆಯಲು ಆ ಕುಬೇರ ನು ಬಾಪ್ತಲ ನೆಂಬ ಅಸುರನಾವೇಶದಿಂದ ಕೂಡಿಕೊಂಡು ಭಗದತ್ತ ನೆಂಬ ಹೆಸರಿನಿಂದ ಆ ನರಕಾಸುರ ನಿಗೆ  ಮಗನಾಗಿ ಜನಿಸಿದನು. ನರಕಾಸುರ ನು ಮಡಿದನಂತರ ಭಗದತ್ತ ನಲ್ಲಿರುವ  ಅಸುರಾವೇಶವೂ ನಷ್ಟವಾಯಿತು. 
ಶಿನಿ ಎಂಬ ಯದುಪ್ರವೀರ ನಿಗೆ  ಸತ್ಯಕ ನೆಂಬ ಮಗನಿದ್ದನು. ಈ ಸತ್ಯಕ ನಿಗೆ ಕೃಷ್ಣಪಕ್ಷದ ಅಭಿಮಾನಿದೇವತೆಯು , ವಿಷ್ಣು-ಕಾಮ- " ಸಂವಹ" ನೆಂಬ ಮರುದ್ದೇವತೆ  ಹಾಗೂ ಗರುಡ ಇವರ  ಆವೇಶದಿಂದ ಸಹಿತನಾದ ಯುಯುಧಾನ ಎಂಬ ಹೆಸರಿನ ಮಗನು ಹುಟ್ಟಿದನು. ಇತ್ತ ಶುಕ್ಲಪಕ್ಷದ ಅಭಿಮಾನಿದೇವತೆ ಯು ಯಾದವರ ಭೋಜವಂಶ ದಲ್ಲಿ  ಜನಿಸಿದ ಹೃದಿಕ ನಿಗೆ  ಮಗನಾಗಿ  ಭಗವಂತ ನ ಶಂಖಕ್ಕೆ ಅಭಿಮಾನಿ ಅನಿರುದ್ಧ ನ ಹಾಗೂ ಪ್ರವಹವಾಯು ವಿನ  ಆವೇಶಗಳಿಂದ ಕೂಡಿಕೊಂಡು ಕೃತವರ್ಮ  ಎಂಬ  ಹೆಸರಿನಿಂದ ಅವತರಿಸಿದನು.

********

ಈ ಅಹುಕ ನಿಗೆ  ದೇವಕ ಎಂಬ ಇನ್ನೊಬ್ಬ ಮಗನೂ ಇದ್ದನು. ಇವನು ಗಂಧರ್ವ ಅಂಶಸಂಭೂತನಾಗಿದ್ದನು.ಈ ದೇವಕ ನಲ್ಲಿಯೇ  ದೇವಕಿ ಯು ಜನಿಸುತ್ತಾಳೆ. ಆದರೆ ಮುಂದೆ  ಈ ಅಹುಕ ನು ತನ್ನ ಮೊಮ್ಮಗಳಾದ ( ಮಗನಾದ ದೇವಕನ ಮಗಳು) ಈ ದೇವಕಿ ಯನ್ನೇ ತನ್ನ ಪುತ್ರಿಯನ್ನಾಗಿ ಸ್ವೀಕರಿಸಿ ಬೆಳೆಸಿದನು. ಹೀಗೆ ಅಹುಕ ನು ದೇವಕಿ ಯನ್ನು  ಮಗಳನ್ನಾಗಿ ಸ್ವೀಕರಿಸಿದರಿಂದಲೇ  ಅವಳು ಕಂಸ ನಿಗೆ  ಸೋದರತ್ತೆಯೂ ಆದಳು ಮತ್ತು ಅವನ ಚಿಕ್ಕಪ್ಪನಾದ ದೇವಕನ ಮಗಳಾಗಿದ್ದರಿಂದ ಅದೇ ಕಂಸ ನಿಗೆ ತಂಗಿ ಯೂ ಆದಳು.

*******
ಕಶ್ಯಪಋಷಿ ಗಳು  ತಮ್ಮ ಪತ್ನಿ ಅದಿತಿ ಯ ಪ್ರೇರಣೆಯಿಂದ ವರುಣದೇವರ ಹತ್ತಿರವಿದ್ದ ಅಮೃತವನ್ನು ನೀಡುವ ಹಸುವನ್ನು ಅಪಹರಿಸಿದರು. ಆ ಹಸುವನ್ನು ವರುಣದೇವರಿಗೆ  ಈ ಹಿಂದೆ  ಬ್ರಹ್ಮದೇವರು ಕೊಡಮಾಡಿದ್ದರು.
   ಇದರಿಂದ ಕುಪಿತರಾದ ವರುಣದೇವರು   'ಕ್ಷತ್ರಿಯರ ಗೋವುಗಳ ಪಾಲಕರಾಗಿ ಜನಿಸುವಂತೆ'  ಕಶ್ಯಪ , ಅದಿತಿ , ಸುರಭಿಯರನ್ನು ಶಪಿಸಿದರು. 
ಹೀಗೆ ಇವರ ಶಾಪದಂತೆ ಮುಂದೆ  ಕಶ್ಯಪರು ಶೂರ ನೆಂಬ ಯಾದವನಲ್ಲಿ ವಸುದೇವ ನಾಗಿ , ಯೂ  ಮತ್ತು  ಅದಿತಿ ಯು ದೇವಕಿ ಯಾಗಿಯೂ ಮತ್ತು ಇನ್ನು ಸುರಭಿ ಯು ಬಾಹ್ಲೀಕ ರಾಜನ ಮಗಳಾಗಿ ರೋಹಿಣಿ ಎಂಬ ಹೆಸರಿನಿಂದಲೂ ಜನಿಸಿದರು. ದ್ರೋಣ ನಾಮಕ ವಸುವು ನಂದಗೋಪ ನಾಗಿಯೂ ಮತ್ತು ಅವನ ಪತ್ನಿ ಧರಾದೇವಿ ಯು  ಯಶೋಧೆ ಯಾಗಿಯೂ ಹುಟ್ಟಿದಳು.
   ಮುಂದೆ ವಸುದೇವ ನಿಗೇ ದೇವಕಿ ಯೊಂದಿಗೆ ಮದುವೆಯೂ ಆಯಿತು.

********
ವಸುದೇವ ನು  ದೇವಕಿ ಯನ್ನಲ್ಲದೇ ಅವಳ ಆರೂಜನ ತಂಗಿಯರೆಲ್ಲರನ್ನೂ ಸಹ ಇವನೇ ಮದುವೆಯಾದನು. ಇವರೆಲ್ಲಾ ಪೂರ್ವದಲ್ಲಿ ಕಶ್ಯಪ ರ ಪತ್ನಿಯರೇ ಆಗಿದ್ದರು. 
ಒಮ್ಮೆ ಕಂಸ ನು ತನ್ನ ವಸುದೇವ-ದೇವಕಿ ಯರನ್ನು ರಥದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆ ಕಂಸ ನಿಗೆ ಹೀಗೆ  ಅಶರೀರವಾಣಿಯಾಗುವ ಮೂಲಕ ಅವನನ್ನು ಎಚ್ಚರಿಸುತ್ತದೆ-
'ನಿನ್ನ ಈ ತಂಗಿ ದೇವಕಿಯ ಎಂಟನೆಯ ಗರ್ಭದಿಂದಲೇ ನಿನಗೆ ಮೃತ್ಯು'  ಎಂಬುದಾಗಿ. 
   ಆ ಕೂಡಲೇ ಕಂಸ ನು ಕೋಪದಿಂದ  ತನ್ನ ತಂಗಿಯನ್ನೇ ಕೊಲ್ಲಲು ಮುಂದಾದಾಗ ಶೌರಿ ಯು ಅವನನ್ನು ತಡೆದನು.

********
ಕಶ್ಯಪ ರ ಮಡದಿಯಾಗಿದ್ದ ದಿತಿದೇವಿ ಯೂ ಸಹ ಕಾಶೀರಾಜ ನ  ಮಗಳಾಗಿ ಜನಿಸಿ ಮುಂದೆ ಇವಳೂ ಸಹ ವಸುದೇವ ನ ಪತ್ನಿಯಾದಳು. ಮಹಾಪಾಪಿಯಾದ ವೇನ ನು ಈ ಕಾಶೀರಾಜನ ಪುತ್ರಿಗೆ ಪೌಂಡ್ರಕ ವಾಸುದೇವ ಎಂಬ ಹೆಸರಿನಿಂದ ಮಗನಾಗಿ ಜನಿಸಿದನು.  ಇನ್ನು ಈ ಕಶ್ಯಪ ರ  ಹೆಂಡತಿಯಾಗಿದ್ದ ದನುದೇವಿ ಯು ಕರವೀರದೇಶದ ರಾಜ ನ ಮಗಳಾಗಿ ಇವಳೂ ಸಹ ವಸುದೇವ ನ ಪತ್ನಿಯಾದಳು. ಕುವಲಯಾಶ್ವರಾಜ ನಲ್ಲಿ  ಸನ್ನಿಹಿತನಾಗಿದ್ದ  ಶ್ರೀಹರಿ ಯಿಂದ  ಹತನಾದ ದುಂಧು ಎಂಬ ರಾಕ್ಷಸನೇ ಇವರಲ್ಲಿ ಸೃಗಾಲ ವಾಸುದೇವ  ಎಂಬ ಹೆಸರಿನಿಂದ ಜನಿಸಿದನು.

*******

ಈ ಪೌಂಡ್ರಕವಾಸುದೇವ ಮತ್ತು ಸೃಗಾಲವಾಸುದೇವ ರುಗಳು ಮುಂದೆ ಯಾದವರ ಶತೃಗಳಾದರು.  ಇತ್ತ ವಸುದೇವ ನು ದೇವಕಿ ಯ ತಂಗಿಯರಾದ ಮತ್ತು ತನ್ನ ಆರೂಜನ ಪತ್ನಿಯರಲ್ಲಿ  ಸುರರನ್ನೇ  ಮಕ್ಕಳಾಗಿ ಪಡೆದನು. 
  ಮರೀಚಿಮಹರ್ಷಿ ಗಳ  ಆರೂಜನ ಮಕ್ಕಳು ದೇವಲ ಋಷಿಗಳ ತೆಳ್ಳಗಿನ  ದೇಹವನ್ನು ನೋಡಿ ತಮಾಷೆಮಾಡಲಾಗಿ ಅವರಿಂದ - 'ಕಾಲನೇಮಿಯೆಂಬ ಅಸುರನಿಗೆ  ಮಕ್ಕಳಾಗಿ ಜನಿಸಿ'  ಎಂಬುದಾಗಿ ಶಾಪಕೊಳಗಾಗಿ  ಅದರಂತೆ ಜನಿಸಿದರೂ ಕೂಡಾ. ಬ್ರಹ್ಮದೇವರನ್ನು ಕುರಿತು ತಪಸ್ಸುಮಾಡಿ  ಅವಧ್ಯತ್ವವನ್ನು ಹೊಂದಿದ್ದ ಈ ಆರೂಜನ ಕಾಲನೇಮಿ ಯ ಪುತ್ರರನ್ನು  ಹಿರಣ್ಯಕಶಿಪುವು 'ನೀವೆಲ್ಲಾ ಭೂತಲದಲ್ಲಿ ಹುಟ್ಟಿ ನಿಮ್ಮ ತಂದೆಯೇ  ನಿಮ್ಮನ್ನು ಕೊಲ್ಲುವಂತಾಗಲಿ' ಎಂದೂ ಶಪಿಸಿದನು.
ದುರ್ಗಾದೇವಿ ಯು ಈ ಕಾಲನೇಮಿ ಯಲ್ಲಿ ಹುಟ್ಟಿದ ಆ ಆರೂಜನ ಮರೀಚಿಪುತ್ರರನ್ನು ಅವರ ಅಸುರದೇಹದಿಂದ ಹೊರತೆಗೆದು ದೇವಕಿ ಯ ಗರ್ಭದಲ್ಲಿ ಇಡುತ್ತಿದ್ದಳು. ದೇವಕಿ ಯಲ್ಲಿ ಹುಟ್ಟಿದ ಆರೂಜನರು ಕಾಲನೇಮಿ ಯ ಅವತಾರನೇ ಆದ ದುರುಳಕಂಸನಿಂದ  ಹತರಾದರು.

********

ದೇವಕಿ ಯ ಆರನೆಯ ಗರ್ಭಪಾತಸಮಯದಲ್ಲಿ  ಇತ್ತ ಪಾಂಡುರಾಜ ನಿಂದ ಆಜ್ಞಾಪ್ತಳಾದ ಕುಂತೀದೇವಿ ಯು  ಧರ್ಮದಿಂದಲೇ  ಈ ಭೂಮಿಯನ್ನು ರಕ್ಷಿಸುವ ಮಗನಾಪೇಕ್ಷೆಯಿಂದ ಯಮಧರ್ಮರಾಜ ನನ್ನೇ ಆಹ್ವಾನಿಸಲಾಗಿ ಆಗ    ಆ ಯಮಧರ್ಮರಾಜ ನೇ ಅವಳಲ್ಲಿ ಜನಿಸಿದನು. ಅವನೇ ಯುದಿಷ್ಠಿರ ನು.
    ಇತ್ತ ಗರ್ಭಿಣಿಯಾಗಿದ್ದ  ಗಾಂಧಾರಿ ಗೆ   ಈ ಕುಂತಿದೇವಿ  ಯು ತನಗಿಂತಲೂ ಮುಂಚಿತವಾಗಿ ಮಗನನ್ನು ಪಡೆದಳೆಂಬ ಸುದ್ದಿ ಬರಸಿಡಿಲಿನಂತೆ ತಿಳಿದು ಅದನ್ನು ಸಹಿಸಲಾರದೇ    ಇನ್ನೂ ಪೂರ್ಣವಾಗಿ ಬೆಳೆಯದ ತನ್ನ ಗರ್ಭವನ್ನೇ ಅದು ಹೊರಬರುವಂತೆ ತನ್ನ ಉದರವನ್ನೇ ಮರ್ಧಿಸಿದಳು. ಅಬ್ಬಾ ಇದೆಂತಹಾ  ಎಂತಹ ಕೃತ್ಯವಲ್ಲವೇ?. 
ಆಗ  ವೇದವ್ಯಾಸದೇವರು ಹೀಗೆ  ಗಾಂಧಾರಿ ಯ ಗರ್ಭದಿಂದ ಹೊರಬಂದ ಮಾಂಸದಪಿಂಡವನ್ನು 101 ಭಾಗಗಳನ್ನಾಗಿ ಮಾಡಿ ಆ ಪ್ರತಿಯೊಂದು ಪ್ರತ್ಯೇಕ ಭಾಗಗಳನ್ನು ಪ್ರತ್ಯೇಕವಾಗಿ ತುಪ್ಪದಿಂದ ತುಂಬಿದ 101ಮಡಿಕೆ ಗಳಲ್ಲಿ ಇಟ್ಟರು.

********

ಆ 101 ಮಡಿಕೆಗಳಿಂದ ದಿನಕ್ಕೊಬ್ಬರಂತೆ ಒಂದೊಂದು ಮಡಿಕೆಯಿಂದ ಸುಯೋಧನಾದಿ ಗಳು  ಹುಟ್ಟುತ್ತಾ ಬಂದರು. 
    101ನೆಯ ಮಡಿಕೆಯಲ್ಲಿ ಮಾಂಸತುಂಡಿನಿಂದ  ದುಃಶಲಾ ಎಂಬ ಕನ್ಯೆ ಜನಿಸಿದಳು ಮತ್ತು ಅತ್ಯಂತ ತಮೋಗುಣಸ್ವರೂಪನೂ , ಮಹಾಪಾಪಿಯೂ ಆದ ಕಲಿ ಯು ಬಹಳ ಬಲವುಳ್ಳವನಾಗಿ  ಹುಟ್ಟಿ  ಸುಯೋಧನ ಎಂದು ಪ್ರಸಿದ್ಧಿಯಾದನು.

********

ಮುಖ್ಯಪ್ರಾಣದೇವರ ಸನ್ನಿಧಾನದಿಂದ ಈ ಸುಯೋಧನ ನು ಬಹಳ ಬಲಿಷ್ಠನಾಗಿದ್ದನು. ಈ ಸುಯೋದನ ನ ನಂತರದಲ್ಲಿ ದುರುಳ ರಾವಣ ನ ಮಗನಾದ ಇಂದ್ರಜಿತು ವೇ ದುಃಶಾಸನ ನೆಂಬ ಹೆಸರಿನಿಂದ  ಧೃತರಾಷ್ಟ್ರ ನಿಗೆ  ಪುತ್ರನಾದನು. ಅತಿಕಾಯ ನು ವಿಕರ್ಣ ನೆಂಬ ಹೆಸರಿನಿಂದ ಜನಿಸಿದರೆ ಮೃಷಾನಾಮಕ ರಾಕ್ಷಸಿ ಯು ಈ ಅಭಿಮನ್ಯು ವಿನ  ನಾಶಕ್ಕೋಸ್ಕರ ರುದ್ರದೇವರಿಂದ  ವರವನ್ನು ಪಡೆದು  ದುಃಶಲೆ ಯಾಗಿ ಹುಟ್ಟಿದಳು, ಇನ್ನು ನೈರುತ್ಯದಿಕ್ಕಿಗೆ ಅಭಿಮಾನಿದೇವತೆಯಾದ  ನಿರ್ಋತಿ ಎಂಬ ರಾಕ್ಷಸನ ಅನುಜನಾದ ನಿರ್ಋತ ನು  ಧೃತರಾಷ್ಟ್ರ ನ ಪತ್ನಿಯಾದ ವೈಶ್ಯಕನ್ಯೆಯಲ್ಲಿ ಯುಯುತ್ಸು ಎಂಬ ಹೆಸರಿನಿಂದ ಜನಿಸಿದನು. ಸತ್ಕರ್ಮ ಕುಶಲನಾದ ಯುಯುತ್ಸು ವು  ಮೂಗಿನಗೋಳಕಕ್ಕೆ ಅಭಿಮಾನಿಗಳಾದ ವಾಯುದೇವರಾವೇಶದಿಂದ ಕೂಡಿದವನಾಗಿದ್ದು ಈ ಸುಯೋದನ ನಿಗೆ ಕಿರಿಯನೂ ಮತ್ತು  ದುಶ್ಯಾಸನ ನಿಗೆ ಹಿರಿಯನೂ ಆಗಿದ್ದನು.

********
 ಕುಂತೀದೇವಿ ಯವರು ಈಗ  ಧರ್ಮದ ರಕ್ಷಣೆಗಾಗಿ ಜ್ಞಾನಬಲ ಮತ್ತು ಬಾಹುಬಲಗಳಿಂದ  ಪೂರ್ಣರಾದ ಸಕಲದೇವತೆಗಳಲ್ಲಿಯೇ ಶ್ರೇಷ್ಟರಾದ ಸದಾ ಭಗವಂತನೊಂದಿಗೇನೇ ಇರುವ ಶ್ರೀಮುಖ್ಯಪ್ರಾಣದೇವರ ನ್ನು ಆಹ್ವಾನಿಸಲಾಗಿ ಈ ಮೂಲಕ ಅವರು ಒಂದಂಶದಿಂದ ಭೀಮಸೇನ ಎಂಬ ಸಾರ್ಥಕನಾಮದಿಂದ  ಕುಂತೀದೇವಿ ಯವರ ಪುತ್ರರಾಗಿ ಅವತರಿಸಿದರು.  ಈ ಮಹಾನುಭಾವರು ಅವತರಿಸುವ ಸಮಯದಲ್ಲಿ ಎಲ್ಲ ಅಸುರರು ಭೀತರಾಗಿ ರಕ್ತವನ್ನೇ ಕಾರಿದರು. ಅಬ್ಬಾ! ಅದೆಷ್ಟು ಭೀತಿ ನಮ್ಮ ಭೀಮಸೇನದೇವರ ಕಂಡು ಆ ಅಸುರರಿಗೆ. 
 ಒಮ್ಮೆ ಮಗುವಾದ ಭೀಮಸೇನ ರನ್ನು ಕುಂತೀದೇವಿ ಯವರು  ಎತ್ತಿಕೊಂಡು ವಿಹರಿಸುತ್ತಿದ್ದ ಸಮಯದಿ ಮಾರ್ಗಮಧ್ಯ ಒಂದು ಹುಲಿಯು ಘರ್ಜನೆಮಾಡಲಾಗಿ ಆಗ ತಾಯಿ ಕುಂತೀದೇವಿ ಯು ಹೆದರಿ ಆ ಮಗುವನ್ನು ಶತಶೃಂಗ ಪರ್ವತದ ಒಂದು ಬಂಡೆಯ ಮೇಲೆ ಕೈಬಿಟ್ಟಾಗ ಇಡೀ ಪರ್ವತವೇ ಸೀಳಿ ಚೂರುಚೂರಾಯಿತು.  ಈ ಘಟನೆ ಇವರ ಬಾಹುಬಲಕ್ಕೆ ಸಾಕ್ಷಿ ಅಲ್ಲದೇ ವೃಕ ಎಂಬ ಹೆಸರಿನ ಮಹಾಬೆಂಕಿಯೂ ಕೂಡಾ ಇವರ ಉದರದಲ್ಲಿದ್ದುದರಿಂದ ಇವರಿಗೆ ವೃಕೋದರ ಎಂತಲೂ ಕರೆಯುವರು.

*******
ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆಯ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ ಎಂದು ಹೆಸರುಪಡೆದಿದೆ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲಾ ಅಧ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ-ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತವು ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂತಹ  ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ.
ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ.
ಮಹಾಭಾರತವು ಏಳುಪಾತ್ರಗಳ ಮೂಲಕ ಹದಿನೆಂಟು ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ: 
(೧) ಧರ್ಮರಾಜ - ಧರ್ಮ(೧)
(೨) ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧)
(೩) ಅರ್ಜುನ - ಶ್ರವಣ, ಮನನ ಮತ್ತು ನಿಧಿಧ್ಯಾಸನ(೧೪)
(೪,೫) ನಕುಲ-ಸಹದೇವ - ಶೀಲ ಮತ್ತು ವಿನಯ(೧೬)
(೬) ದ್ರೌಪದಿ - ವೇದವಿದ್ಯೆ(೧೭)
(೭) ಶ್ರೀಕೃಷ್ಣ – ವೇದವೇದ್ಯ(೧೮)
ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ, ಮನನ ಮತ್ತು ನಿಧಿಧ್ಯಾಸನದೊಂದಿಗೆ  ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು.   ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು.

ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು . ಇದು ತತ್ವಶಾಸ್ತ್ರದ ಎಲ್ಲಾ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ. ಮಹಾಭಾರತದಲ್ಲಿ ಕೂಡಾ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.
ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು  ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ  ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ  ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ  ಪಾಂಡವರು ಸೋತು  ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೇ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗೂ ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. 

|| ಶ್ರೀ ಕೃಷ್ಣಾರ್ಪಣಮಸ್ತು ||

ಆಧಾರ:
‘ಭಗವದ್ಗೀತಾ-ಭಗವಂತನ ನಲ್ನುಡಿ’ 
******

ಆಪತ್ತುಗಳನ್ನು ಸ್ವಾಗತಿಸುವ ದಾರಿಗಳು...

ಜೀವನದಲ್ಲಿ ಆಪತ್ತುಗಳು ಬರುವದು ಅನೇಕ ವಿಧಗಳಿಂದ. ಆ ಅನೇಕ ವಿಧಗಳಲ್ಲಿ ನಾವು ಕೈಯ್ಯಾರೆ ತಂದುಕೊಳ್ಳುವ ವಿಧಾನಗಳು ಮೂರುವಿಧ. ಆ ಮುರೂ ವಿಧದ ಮಾರ್ಗಗಳನ್ನೂ ಶ್ರೀಮನ್ಮಹಾಭಾರತ ಪರಮ ಸುಂದರವಾಗಿ ತಿಳುಹಿಸಿಕೊಡುತ್ತದೆ.
"ಪರನಿಂದಾಸು ಪಾಂಡಿತ್ಯಂ
ಸ್ವೇಷು ಕಾರ್ಯೇಷ್ವನುದ್ಯಮಃ |
ಪ್ರದ್ವೇಷಶ್ಚ ಗುಣಜ್ಞೇಷು
ಪಂಥಾನೋ ಹ್ಯಾಪದಾಂ ತ್ರಯಃ ||" ಈ ರೀತಿಯಾಗಿ.

ಪರನಿಂದಾಸು ಪಾಂಡಿತ್ಯಂ
"ಪರರ ನಿಂದನೆಗೆ ನಾಲಿಗೆ ಬಲು ಮುಂದೆ" ಇದು ಒಂದು ಸಹಜ ನಿಯಮ. ತನ್ನ ದೋಷಗಳನ್ನು ಮುಚ್ಚಿಹಾಕಲೋ, ತಾನು ಭಾರೀ ಎಂದು ತೋರಿಸಿಕೊಳ್ಳಲೋ, ಅಥವಾ ಇನ್ನೇನೋ ಕಾರಣಕ್ಕೋ ಪರನಿಂದೆ ಸಹಜವಾಗಿ ನಡೆಯುತ್ತಿರತ್ತೆ. ಪರನಿಂದೆಯಲ್ಲಿಯ ಪಾಂಡಿತ್ಯ ಅದ್ಭುತವೇ. ಗುರೂಪದೇಶ, ಗುರುಮಾರ್ಗದರ್ಶನ ಸಿಗದೆ ಬರುವ ಪಾಂಡಿತ್ಯ ಎಂದರೆ ಅದು ಪರನಿಂದೆ. ಅಂತೆಯೇ ಶ್ರೀಮನ್ಮಹಾಭಾರತ ತಿಳಿಸುತ್ತದೆ ಪರನಿಂದೆ ನಮ್ಮ ಆಪತ್ತಿಗೆ, ಅನರ್ಥಗಳಿಗೆ ಮೊದಲ ಮಾಹಾ ಮಾರ್ಗ ಎಂದು.
ನಿದರ್ಶನ.... ನಿತ್ಯ ಬ್ರಾಹ್ಮಣ, ದೇವತಾ, ದೇವರ ನಿಂದೆಯಲ್ಲಿಯೇ ತೊಡಗಿದ ಕಾರಣ ಶಿಶುಪಾಲ ಮಹಾ ಬಲಿಷ್ಠನಾದರೂ ಅರ್ಥವತ್ತಾದ ಕಾರ್ಯ ಒಂದೂ ಮಾಡಲಿಲ್ಲ. ಅವನಿಗಾಗಿರುವದು ಮಾತ್ರ ಅನರ್ಥಗಳೆ.....
ಸ್ವೇಶು ಕಾರ್ಯೇಷು ಅನುದ್ಯಮಃ
ಯಶಸ್ಸಿನ ಚಿತ್ತಾರದಲ್ಲಿ ತೇಲಿಸುವಂತಹದ್ದು ಎಂದರೆ ಅದು ಪ್ರಯತ್ನಪೂರ್ವಕ ಸ್ವಕರ್ಮಾಚರಣೆ. ಅಂತೆಯೇ ಕೃಷ್ಣ ಗೀತೆಯಲ್ಲಿ "ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ" ಎಂದುಪದೇಶಿಸಿದ.
ಆದರೆ ಇಂದು ಪರರ ಕರ್ಮಗಳನ್ನು ಆಚರಿಸುವದರಲ್ಲಿಯ ಅಭಿರುಚಿ, ಆಸಕ್ತಿ, ಪ್ರಯತ್ನ, ತಾದಾತ್ಮ್ಯ ಇದ್ಯಾವದೂ ಸ್ವಕರ್ಮಾಚರಣೆಯಲ್ಲಿ ಕಿಂಚಿತ್ತೂ ಇಲ್ಲ. ಅಂತೆಯೇ ಸ್ವಧರ್ಮವಾದ ಸಂಧ್ಯೆ, ಪೂಜೆ, ಜಪ, ತಪಸ್ಸುಗಳು ಶೂನ್ಯ. ಸಾರ್ಥಕತೆಗೆ ಸ್ವಕರ್ಮಾಚರೆಣೆ ಪೂರ್ವಕ ತಪಸ್ಸೇ ಬೇಕು. ಸ್ವಕರ್ಮಾಚರಣೆಯೇ ಇಲ್ಲದಿರುವದರಿಂದ ಜೀವನದಲ್ಲಿ ಹೆಚ್ಚು ಅನರ್ಥಗಳ ಮಹಾಪೂರಗಳನ್ನೇ ಎದುರಿಸುವಂತಾಗಿದೆ.
ಪರಿಶುದ್ಧ ಬ್ರಾಹ್ಮಣ ದ್ರೋಣಾಚಾರ್ಯ, ಕೃಪಾಚಾರ್ಯ, ಅಶ್ವತ್ಥಾಮಾಚಾರ್ಯ ಮೊದಲಾದವರು. ಆದರೆ ದುರ್ಯೋಧನಪ್ರೀತ್ಯರ್ಥವಾಗಿ ಅಭಿರುಚಿ ಆಸಕ್ತಿ ಪ್ರಯತ್ನ ತಾದಾತ್ಮ್ಯ ಇವುಗಳನ್ನು ಬೆಳಿಸಿಕೊಂಡಿದ್ದು ಮಾತ್ರ ಕ್ಷಾತ್ರ ಧರ್ಮದಲ್ಲಿ. ಅಂತೆಯೇ ಅವರ ವ್ಯಕ್ತಿತ್ವಕ್ಕೆ ಸಿಗಲೇಬೇಕಾದ ಯಾವ ಯಶಸ್ಸೂ ದೊರೆಯಲಿಲ್ಲ. ಅನರ್ಥವೇ ಹೆಚ್ಚು ಪಡೆದಂತೆಯೇ ಆಯಿತು....
ಪ್ರದ್ವೇಶಶ್ಚ ಗುಣಜ್ಙೇಷು
ಅನರ್ಥಕ್ಕಿರುವ ಕೊನೇಯದಾದ ಮೂರನೇಯ ದಾರಿ "ಗುಣವಂತರನ್ನೇ ದ್ವೇಶಿಸುವದು."
ದ್ವೇಶ ನಿಂದೆ ಇವುಗಳು ಸಾಮಾನ್ಯವಾಗಿ ತನಗಿಂತಲೂ ಕಿರಿಯರ ಮೇಲಿರದು. ಗುಣವಂತರಮೇಲೇಯೆ ಇರುತ್ತದೆ. ಈ ಅವಸ್ಥೆ ಬರುವದು ತನ್ನಲ್ಲಿ ಯಾವ ಗುಣ ಇಲ್ಲವೆಂದಾದಾಗ ಮಾತ್ರ. ತನ್ನ ದೋಷಗಳನ್ನು ಮುಚ್ಚಿಹಾಕಿಕೊಳ್ಳಲು ಇರುವ ಸಹಜ ಮಾರ್ಗ ಎಂದರೆ ಗುಣವಂತರನ್ನು ದ್ವೇಶಿಸುವದು.
ಅದಕ್ಕೆ ನಿದರ್ಶನ ಕರ್ಣ. 
ನಿಜವಾಗಿಯೂ ಕರ್ಣ ಗುಣವಂತ. ಆದರೆ ದುಷ್ಟರ ಸಹವಾಸದಿಂದ ಆ ಎಲ್ಲ ಗುಣಗಳೂ ಪ್ರಕಾಶಕ್ಕೇ ಬಾರದಂತೆ ಆಗಿದ್ದವು. ಅವುಗಳನ್ನು ಮುಚ್ಚುಹಾಕಲು ಉಳಿದ ಮಾರ್ಗ ಗುಣವಂತರ ದ್ವೇಶ ಹಾಗಾಗಿ ಪಾಂಡವರ ದ್ವೇಶದಲ್ಲಿಯೇ ಕಾಲ ಕಳೆದ.

ದಾನ, ವೀರ್ಯ, ಪರಾಕ್ರಮ, ಶೌರ್ಯ ಪರೋಪಕಾರ ಮೊದಲಾದ ಗುಣಗಳ ಹಾಗೂ ಗುಣವಂತಿಕೆಯ ಲಾಭವಾಗಲಿಲ್ಲ. ಅಪಜಯ ಪರಾಜಯ ಬೆನ್ನು ಬಿಡಲಿಲ್ಲ. ಅನೇಕ ಕೆಟ್ಟ ಕೆಲಸಗಳಿಗೆ master plan ಕೊಟ್ಟವ ಕರ್ಣ ಎಂದಾದ. ಕೊನೆಗೆ ಸೋತು ಸತ್ತು ಹೋದ. ಹೀಗಾಗಲು ಮೂಲ ಕಾರಣ ಗುಣವಂತರಾದ ಪಾಂಡವರ ದ್ವೇಶ.

ಈ ರೀತಿಯಾಗಿ ಗುಣವಂತರ ದ್ವೇಶ, ಸ್ವಕರ್ಮಾಚರಣೆಯಲ್ಕಿಯ ಅನಾಸಕ್ತಿ, ಪರನಿಂದೆಯಲ್ಲಿಯ ಮಹಾಪಾಂಡಿತ್ಯ ಇವಗಳೇ ನಮ್ಮ ನಮ್ಮ ಅನರ್ಥ ಅಪಾಯ ಗಳನ್ನು ತಂದುಕೊಡುವ ಮೂರು ಮಹಾಮಾರ್ಗಗಳಾಗಿವೆ ಎಂದು ಮಹಾಭಾರತ ಬಹಳಸುಂದರವಾಗಿ ತಿಳುಹಿಸಿಕೊಡುತ್ತದೆ.

ಪಾಂಡವರು, ಪತ್ನಿಯರು, ಮಕ್ಕಳು
ಪಂಚ ಪಾಂಡವರ ಹೆಸರುಗಳು ಯಾರಿಗೆ ತಾನೇ ತಿಳಿದಿಲ್ಲ.

೧.ಯುಧಿಷ್ಟಿರ (ಧರ್ಮರಾಯ)

೨.ಭೀಮ

೩. ಅರ್ಜುನ

೪.ನಕುಲ

೫. ಸಹದೇವ


ಈ ಐದು ಮಂದಿ ಪಾಂಡವರ ಪತ್ನಿ - ದ್ರೌಪದಿ.

ಪಾಂಡವರಿಗೆ ದ್ರೌಪದಿ ಅಲ್ಲದೆ ಅವರ ಇತರೇ ಪತ್ನಿಯರು,ಮಕ್ಕಳು ಅವರ ಬಗ್ಗೆ ತಿಳಿಯೋಣ.
===========================
೧. ಯುಧಿಷ್ಟಿರ (ಧರ್ಮರಾಯ)


»ಹಾಗೂ ದ್ರೌಪದಿಯ ಮಗ - ಪ್ರತಿವಿಂದ್ಯ

»ಯುಧಿಷ್ಟಿರ ಹಾಗೂ ''ದೇವಿಕ''
ಮಗ - ಯುಧೇಯ(ಯೋಧ್ಯ)
ಮಗಳು - ಸುಥಾನು

ಒಟ್ಟು ಮೂರು ಮಕ್ಕಳು.
===========================
೨. ಭೀಮ.

»ಹಾಗೂ ದ್ರೌಪದಿಯ ಮಗ - ಸುತಸೋಮ

»ಭೀಮ ಹಾಗೂ "ಬಲಂದರ"(ವಲಂದರ) ಮಗ ಸ್ವರ್ಗ್

»ಭೀಮ ಹಾಗೂ "ಹಿಡಿಂಬೆ" ಮಗ- ಘಟೋತ್ಕಜ.

ಒಟ್ಟು ಮೂರು ಮಕ್ಕಳು.
===========================
೩. ಅರ್ಜುನ.
»ಹಾಗೂ ದ್ರೌಪದಿಯ ಮಗ - ಶೃತಿಕೀರ್ತಿ (ಶೃಧ್ದಕರ್ಣ)
» ಅರ್ಜುನ - "ಉಲೂಪಿ"(ಉಲೂಚಿ) ಮಗ - ಐರಾವಣ
»ಅರ್ಜುನ - "ಚಿತ್ರಾಂಗದ" ಮಗ - ಬಬ್ರುವಾಹನ.
» ಅರ್ಜುನ - "ಸುಭದ್ರೆ" ಮಗ- ಅಭಿಮನ್ಯು.
ಒಟ್ಟು ನಾಲ್ಕು ಮಕ್ಕಳು.
===========================
೪. ನಕುಲ
» ಹಾಗೂ ದ್ರೌಪದಿಯ ಮಗ - ಶಥಾನಿಕ.
» ನಕುಲ ಹಾಗೂ "ತ್ರೇಣುಮತಿ" ಮಗ - ನಿರ್ಮಿತ್.
ಇಬ್ಬರು ಮಕ್ಕಳು.
===========================
೫. ಸಹದೇವ.
»ಹಾಗೂ ದ್ರೌಪದಿಯ ಮಗ ಶೃತಕರ್ಮ(ಶೃತಸೇನ)
» ಸಹದೇವ ಹಾಗೂ "ವಿಜಯ" ಮಗ - ಸುಹೋತ್ರ.
ಇಬ್ಬರು ಮಕ್ಕಳು.
----------------------------------------------
ಹಾಗಾಗಿ, ಪಾಂಡವರಿಗೆ ದ್ರೌಪದಿಯೂ ಸೇರಿ ಒಟ್ಟು ಒಂಬತ್ತು ಪತ್ನಿಯರು.
ಹದಿಮೂರು ಗಂಡು ಮಕ್ಕಳು ಹಾಗೂ, ಒಬ್ಬ ಹೆಣ್ಣು ಮಗಳು.
ವಿ.ಎಸ್.ಮಣಿ.
ಧನ್ಯವಾದಗಳು.
********


ವಿಚಿತ್ರವೀರ್ಯನ ಮಕ್ಕಳು. 

ದೃತರಾಷ್ಟ್ರ → ಅಂಬಿಕೆಯ ಮಗ 

ಹಾಗೂ 

ಪಾಂಡು → ಅಂಬಾಲಿಕೆಯ ಮಗ

ವಿದುರ → ಅಂಬಿಕೆ, ಅಂಬಾಲಿಕೆಯರ ದಾಸಿಯಾದ "ಪರಿಶ್ರಮಿ" ಪುತ್ರ. 

ವಿದುರನು, ದೃತರಾಷ್ಟ್ರ ಮತ್ತು ಪಾಂಡುವಿಗೆ ಸೋದರ ಸಂಭಂದಿ.

ಇನ್ನು ಭೀಷ್ಮ → ದೃತರಾಷ್ಟ್ರ ಮತ್ತು ಪಾಂಡುವಿಗೆ, ದೊಡ್ಡಪ್ಪನ ಸಂಭಂದ. ಹಾಗಾಗಿ ಭೀಷ್ಮ- ಪಿತಾಮಹ ಎನಿಸಿಕೊಂಡ.


ವಿಚಿತ್ರವೀರ್ಯನಿಗೆ ಕ್ಷಯರೋಗ ಬಂದು ಮಕ್ಕಳಾಗುವ ಮೊದಲೆ ತೀರಿಕೊಂಡ. 

ಅಂಬಿಕೆ ಮತ್ತು ಅಂಬಾಲಿಕೆ ವಿಧವೆಯರಾದರು.

ಹಾಗಾಗಾದರೆ ಈ ವಿಧವೆಯರಾದ ಅಂಬಿಕೆ, ಅಂಬಾಲಿಕೆಯರಿಗೆ ಸಂತಾನ ಪ್ರಾಪ್ತಿಯಾದ್ದು ಹೇಗೆ?

|ದೃತರಾಷ್ಟ್ರ , ಪಾಂಡು , ವಿದುರ ಇವರ 

ಜನ್ಮ ರಹಸ್ಯ|

ನಿಯೋಗಿ ಪದ್ದತಿಯಂತೆ ವಿಚಿತ್ರವೀರ್ಯನ ಮರಣದ ನಂತರ ಸೋದರನಾದ 'ವ್ಯಾಸ' (ವೇದವ್ಯಾಸ) ಅಂಬಿಕೆ, ಅಂಬಾಲಿಕೆ, ಪರಿಶ್ರಮಿ ಅವರೊಡನೆ ಸಂಪರ್ಕದಿಂದ ಕ್ರಮವಾಗಿ ದೃತರಾಷ್ಟ್ರ , ಪಾಂಡು, ವಿದುರ, ಜನಿಸುತ್ತಾರೆ,(ನಿಯೋಗಿ ಪದ್ದತಿಯಂತೆ ಇದು ಅಕ್ರಮ ಸಂಬಂಧ ಎನಿಸುವುದಿಲ್ಲ) 

ಹಾಗಾಗಿ ದೃತರಾಷ್ಟ್ರ , ಪಾಂಡು , ವಿದುರ ಮೂರು ಮಂದಿಗೆ ವಿಚಿತ್ರವೀರ್ಯ ಮತ್ತು ವ್ಯಾಸರು, ಈ 'ಇಬ್ಬರೂ' ತಂದೆಯ ಸ್ಥಾನ ಪಡೆದುಕೊಂಡಂತೆ ಆಯಿತು.

|ಕುರುಡ - ದೃತರಾಷ್ಟ್ರ , ಬಿಳಿಚಿದ - ಪಾಂಡು|
ವಿಧವೆಯಾದ ವಿಚಿತ್ರವೀರ್ಯನ ಮಡದಿ "ಅಂಬಿಕೆ"ಯೊಂದಿಗೆ ವ್ಯಾಸ ಮುನಿಯು ಸಂಪರ್ಕಕ್ಕೆ ಬಂದಾಗ, ಮುನಿಯ ರೂಪವನ್ನು ಕಂಡು ಭಯದಿಂದ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ಅದರ ಫಲವಾಗಿ,ಧೃತರಾಷ್ಟ್ರನು ಕುರುಡನಾಗಿ ಜನಿಸಿದನು.
ಅಂಬಾಲಿಕೆಯು, ವ್ಯಾಸರನ್ನು ನೋಡಿ, ತನ್ನ ಕಣ್ಣುಗಳನ್ನು ತೆರೆದಿಟ್ಟುಕೊಂಡೇ ಇದ್ದಳು.
ಆ ವ್ಯಾಸರ ರೂಪವನ್ನು ದಿಟ್ಟಿಸಿ ನೋಡಿದ ಕಾರಣ, ಅಂಬಾಲಿಕೆಗೆ ಕಳೆಹೀನನಾದ ಬಿಳಿಚಿಕೊಂಡ ಪಾಂಡುವು ಜನಿಸಿದ. ಹಾಗಾಗಿ, ಈಗಲೂ ಬಿಳಿಚಿಕೊಂಡು, ಬಿಳಿಯ ಚರ್ಮ, ಬಿಳಿಯ ಮಚ್ಚೆಗಳು ಹೊಂದಿದವರನ್ನು "ಪಾಂಡು ರೋಗಿ" ಎನ್ನುವುದುಂಟು.

ಆದರೆ, ವ್ಯಾಸ ಮುನಿಯು ಪರಿಶ್ರಮಿಯನ್ನು ಆಲಂಗಿಸಿದಾಗ, ಯಾವುದೇ ಆತಂಕ ವ್ಯಕ್ತಪಡಿಸದೆ, ಸಾಮನ್ಯಳಂತೆ ವರ್ತಿಸಿದಳು.
ಹಾಗಾಗಿ "ವಿದುರ" ಯಾವುದೇ ವ್ಯತ್ಯಾಸಗಳು ಇಲ್ಲದೆ ಸಾಮನ್ಯನಂತೆ ಜನಿಸಿದ.

|ಪಾಂಡುವಿಗೆ ಹಸ್ತಿನಾಪುರದ ರಾಜ್ಯಭಾರ|
ವಿಚಿತ್ರವೀರ್ಯ ಹಾಗೂ ವ್ಯಾಸರ ಮಕ್ಕಳಲ್ಲಿ ದೃತರಾಷ್ಟ್ರ ಹಿರಿಯವನು.
ಆದರೆ, ರಾಜ ಧರ್ಮದ ಅನುಸಾರ ಪ್ರಜೆಗಳ ಹಿತದೃಷ್ಟಿಯಿಂದ ಕುರುಡನಾದ ದೃತರಾಷ್ಟ್ರನಿಗೆ ಹಸ್ತಿನಾಪುರದ ರಾಜನ ಪಟ್ಟ ಕಟ್ಟುವುದನ್ನು 'ವಿದುರ' ವಿರೋಧಿಸಿದ. 
ಹಾಗಾಗಿ, ದೃತರಾಷ್ಟ್ರನ ಕಿರಿಯ ಸೋದರನಾದ "ಪಾಂಡುವಿಗೆ" ರಾಜ್ಯದ ಪಟ್ಟ ಕಟ್ಟುತ್ತಾನೆ.

| ಪಾಂಡುರಾಜನ ರಾಜ್ಯ ಪರಿಪಾಲನೆ |
ಹಸ್ತಿನಾಪುರದ ರಾಜ 'ಪಾಂಡು' ಯುದ್ದದಲ್ಲಿ ಅನೇಕ ರಾಜ್ಯಗಳನ್ನು ಗೆದ್ದ. 
ಮದ್ರ ದೇಶವನ್ನು ಗೆದ್ದ ಪಾಂಡು, ಮದ್ರ ನರೇಶ 'ಶಲ್ಯನ' ಸಹೋದರಿ "ಮಾದ್ರಿ" ಯನ್ನು ವಿವಾಹವಾದ.

ಅನೇಕ ಯುದ್ದಗಳ ನಂತರ ವಿಶ್ರಾಂತಿಗಾಗಿ ಪತ್ನಿಯರಾದ ಕುಂತಿ ಹಾಗೂ ಮಾದ್ರಿಯರೊಂದಿಗೆ ಕೆಲವು ತಿಂಗಳು ವನವಿಹಾರಕ್ಕೆ ತೆರಳುವ ಮೊದಲು ತಾತ್ಕಾಲಿಕವಾಗಿ ದೃತರಾಷ್ಟ್ರನಿಗೆ ರಾಜ್ಯದ ಜವಾಬ್ದಾರಿಯನ್ನು ಹೊರಿಸಿ, ವನ ವಿಹಾರಕ್ಕೆ ತೆರಳಿದ.
|ಪಾಂಡು, ಪತ್ನಿಯರಾದ ಕುಂತಿ, ಮಾದ್ರಿಯೊಂದಿಗೆ ವನವಿಹಾರದಲ್ಲಿ|
ಹಲವು ದಿನಗಳು ಪಾಂಡುವು ಪತ್ನಿಯರೊಂದಿಗೆ ನೆಮ್ಮದಿಯಿಂದ ಕಾಲಕಳೆದ.
ಹತ್ತಿರದಲ್ಲಿದ್ದ "ಕಿಂದಮ" ಋಷಿಯ ಆಶ್ರಮಕ್ಕೆ ಆಗಾಗ ಪ್ರವಚನ ಕೇಳಲಿಕ್ಕೆ ಹೋಗಿಬರುತ್ತಿದ್ದರು.
ಇವರ ಶ್ರದ್ಧೆ ಬಕ್ತಿಗೆ ಮೆಚ್ಚಿ ಕಿಂದಮರು 'ಪುತ್ರ ಪ್ರಾಪ್ತಿರಸ್ತು' ಎಂದು ಆಶೀರ್ವದಿಸಿದ. ಅನುಗ್ರಹದಿಂದ ಪಾಂಡು ಹಾಗೂ ಪತ್ನಿಯರು ಸಂತೋಷಗೊಂಡರು.

| ಆಕಸ್ಮಿಕ ಘಟನೆ |
ಒಂದು ದಿನ ಮಧ್ಯಾನ್ಹ ಉಟದ ಸಮಯದಲ್ಲಿ ಯಾವುದೋ ಕಾಡು ಮೃಗದ ಕೂಗಿನ ಶಬ್ದವು ಕೇಳಿಬಂತು. ಊಟಕ್ಕೆ ಕೂಡಲು ಅಣಿಯಾಗಿದ್ದ ಪಾಂಡು, ತಕ್ಷಣವೇ ತನ್ನ ಬಿಲ್ಲು ಬಾಣಗಳನ್ನು ಹಿಡಿದು ಹೊರಟ. ಕಾಡಿನ ಕಿಂದಮರ ಆಶ್ರಮದ ಹತ್ತಿರ ಒಂದು ಹುಲಿಯನ್ನು ( ಕೆಲವು ಕಡೆ ಜಿಂಕೆ ಎಂಬ ಉಲ್ಲೇಖವಿದೆ) ಕಂಡು ಬಾಣ ಹೂಡಿದ. ಬಾಣದಿಂದ ತೀವ್ರ ಗಾಯಗೊಂಡ ಆ ಹುಲಿಯು, ಕಿಂದಮ ಹಾಗೂ ಅವನ ಪತ್ನಿಯು ಆಲಿಂಗನದಲ್ಲಿ ತೊಡಗಿರುವಂತೆ ರೂಪಾಂತರಗೊಂಡರು. ತೀವ್ರವಾಗಿ ಗಾಯಗೊಂಡ ಕಿಂದಮ ದಂಪತಿಗಳನ್ನು ನೋಡಿದ ಪಾಂಡು, ಸತ್ಯಾಂಶವನ್ನು ಅರಿಯದೆ, ತನ್ನಿಂದಾದ ತಪ್ಪಿಗಾಗಿ ಕಿಂದಮರಲ್ಲಿ ಕ್ಷಮೆ ಯಾಚಿಸಿದ.
ಆದರೆ, ಕಿಂದಮರು ನಿರಾಕರಣವಾಗಿ ಹುಲಿಯ ರೂಪದಲ್ಲಿ ಇದ್ದ ನಮ್ಮನ್ನು ಹತ್ಯೆ ಮಾಡಿದ ನೀನು ಶಾಪಕ್ಕೆ ಗುರಿಯಾಗುವುದು ಅನಿವಾರ್ಯ ಎಂದರು.

|ಕಿಂದಮರ ಶಾಪ|
ನೀನು, ಹುಲಿಯ ರೂಪದಲ್ಲಿ ಇದ್ದ ನಮ್ಮ ಮೇಲೆ ಬಾಣ ಪ್ರಯೋಗ ಮಾಡಲು ಯಾವುದೇ ಕಾರಣ ಇರಲಿಲ್ಲ, ಆದರೂ ವಿನಾಕಾರಣ ಬಾಣ ಪ್ರಯೋಗ ಮಾಡಿ ನಮ್ಮನ್ನು ಹತ್ಯೆಗೈದ ತಪ್ಪಿಗಾಗಿ, ನೀನು ಯಾವುದೇ ಸ್ತ್ರೀಯರೊಂದಿಗೆ ಮಿಲನದಲ್ಲಿ ತೊಡಗಿದ ತಕ್ಷಣವೇ ನಿನಗೆ ಮೃತ್ಯು ಬರಲಿ, ಎಂದು ಶಪಿಸಿ ಕಿಂದಮ ದಂಪತಿಗಳು ಇಹಲೋಕ ತ್ಯಜಿಸಿದರು.

ಕಿಂದಮರ ಶಾಪದಿಂದ ವಿಚಲಿತನಾದ ಪಾಂಡು ದಿಕ್ಕು ಕಾಣದೆ ಮುಂದೇನು ಎಂಬ ಯೋಚನೆಯಲ್ಲಿ ಚಿಂತಾಕ್ರಾಂತನಾದ.
ಆಗ, ಪತ್ನಿಯಾದ ಕುಂತಿಯು ಹಿಂದೆ ತನಗೆ ದೂರ್ವಾಸರು ನೀಡಿದ್ದ ಮಂತ್ರದ ಬಗ್ಗೆ ಹೀಗೆ ವಿವರಿಸಿದಳು.
ಬಹಳ ಹಿಂದೆ, ದೂರ್ವಾಸರು ನನ್ನ ಆಥಿತ್ಯಕ್ಕೆ ಮೆಚ್ಚಿ ನಾನು ಯಾವ ಇಷ್ಟ ದೇವತೆಯನ್ನು ಕುರಿತು ಪ್ರಾರ್ಥನೆ ಸಲ್ಲಿಸುತ್ತೇನೋ, ಆ ದೇವತೆಯ ಅನುಗ್ರಹದಿಂದ ಪುತ್ರ ಜನನ ಪ್ರಾಪ್ತಿಯಾಗುವುದಾಗಿ ಪಾಂಡುವಿಗೆ ತಿಳಿಸದಳು. 
ಇದರಿಂದ ಪ್ರಸನ್ನನಾದ ಪಾಂಡು, ದೂರ್ವಾಸರು ಅನುಗ್ರಹಿದ ಆ ಮಂತ್ರೋಪದೇಶವನ್ನು ಪ್ರಯೋಗಿಸಲು ಕುಂತಿಯನ್ನು ವಿನಂತಿಸಿದ. ಅದರಂತೆ ಯುಧಿಷ್ಟಿರ, ಭೀಮ, ಅರ್ಜುನರು ಜನಿಸಿದರು. ಸೋದರಿ ಮಾದ್ರಿಯ ಪರವಾಗಿ ಪ್ರಾರ್ಥಿಸಲು ನಕುಲ ಸಹದೇವರು ಜನಿಸಿದರು.

|ಪಾಂಡು ಹಾಗೂ ಮಾದ್ರಿಯ ಅಂತ್ಯ.|
ಕಿಂದಮರು ನೀಡಿದ ಶಾಪದಂತೆ, ಪಾಂಡುವು ಯಾವುದೇ ಸ್ತ್ರೀಯೋಂದಿಗೆ ಸುಖ ಅನುಭವಿಸದ ತಕ್ಷಣವೇ ಮರಣ ಹೊಂದುವುದು ಖಚಿತ.
ಆದರೆ, ಅದೇ ಕಿಂದಮರು ಪುತ್ರ ಪ್ರಾಪ್ತಿರಸ್ತು ಎಂಬ ವರವನ್ನೂ ಅನುಗ್ರಹಿಸಿದ್ದರು.
ದೂರ್ವಾಸರ ಮಂತ್ರದಂತೆ ಪುತ್ರರು ಜನಿಸಿದ್ದಾಯಿತು.

ಪುತ್ರ ಸಂತತಿಯ ಆನಂದದಲ್ಲಿ ಒಂದು ದಿನ ರಾತ್ರಿ, ಕಿಂದಮರು ನೀಡಿದ
ಶಾಪವನ್ನು ಮರೆತು, ಪಾಂಡು ಮತ್ತು ಮಾದ್ರಿಯರು ಆಲಿಂಗನದಲ್ಲಿ ಮೈಮರೆತರು. ಪರಿಣಾಮ, ಕಿಂದಮರ ಶಾಪದಂತೆ ಪಾಂಡುವ ಮೃತಪಟ್ಟ. ಈ ಘಟನೆಯಿಂದ ನೊಂದ ಮಾದ್ರಿಯು ಸಹಗಮನ ಪದ್ದತಿಯಂತೆ ತಾನೂ ಪತಿಯ ಚಿತೆಯೊಂದಿಗೆ ದೇಹ ತ್ಯಾಗ ಮಾಡಿದಳು.

|ವಿಧವೆಯಾದ ಕುಂತಿ ಹಾಗೂ ಮಕ್ಕಳು|
ಪತಿ ಪಾಂಡು ಹಾಗೂ ಸೋದರಿ ಮಾದ್ರಿಯ ಮರಣದ ನಂತರ, ಕುಂತಿ ಐದು ಮಕ್ಕಳೊಂದಿಗೆ ಹಸ್ತಿನಾಪುರಕ್ಕೆ ಹಿಂತಿರುಗಿದಳು.
ಪಾಂಡುವಿನ ಮರಣದಿಂದ ದೃತರಾಷ್ಟ್ರನೇ ಹಸ್ತಿನಾಪುರದ ರಾಜನಾಗಿ ಮುಂದುವರೆದ.
ಕೌರವರು ಹಾಗೂ ಪಾಂಡವರು ಚಿಕ್ಕಂದಿನಿಂದಲೇ ದಾಯಾದಿಗಳಾಗೇ ಬೆಳೆದರು. ತಂದೆ ಇಲ್ಲದ ಪಾಂಡವರಿಗೆ ಪಿತಾಮಹ ಭೀಷ್ಮ ಹಾಗೂ ವಿದುರನ ಅಭಯ, ಪ್ರೀತಿ ಸದಾ ಇದ್ದೇ ಇತ್ತು.
ಪಾಂಡವರು, ಕೌರವರು ಎಲ್ಲ ವಿದ್ಯೆಗಳನ್ನು ದ್ರೋಣಾಚಾರ್ಯ, ಕೃಪಾಚಾರ್ಯ ಮುಂತಾದವರಲ್ಲಿ ಕಲಿತರು.
ಮುಂದೆ, ಪಾಂಡವರಿಗೆ ಸಲ್ಲಬೇಕಿದ್ದ ಹಸ್ತಿನಾಪುರ ರಾಜ್ಯದ ಭಾಗವನ್ನು ನೀಡಲು ಕೌರವರು ನಿರಾಕರಿಸಿದರು.
ಇದಕ್ಕಾಗಿ ಶಕುನಿಯಿಂದ ಕುತಂತ್ರದ ವ್ಯೂಹದ ರಚನೆ, ಪಗಡೆಯಾಟ, ಪಾಂಡವರ ಸೋಲು ಮೊದಲಾದವುಗಳನ್ನು ಈ ಹಿಂದಿನ ಲೇಖನಗಳಲ್ಲಿ ವಿವರಿಸಲಾಗಿದೆ.
ಧರ್ಮನಿಷ್ಠೆಯಿಂದ ಎಲ್ಲ ಕಷ್ಟಗಳನ್ನು ಅನುಭವಿಸಿದ ಪಾಂಡವರು ಅನಿವಾರ್ಯ ಪರಿಸ್ಥಿತಿಯಲ್ಲಿ ಕುರುಕ್ಷೇತ್ರ ಯುದ್ಧವನ್ನು ಎದುರಿಸಿ, ಜಯಗಳಿಸಿ, ಮತ್ತೊಮ್ಮೆ ಧರ್ಮ ಪ್ರತಿಷ್ಠೆ ಸ್ಥಾಪಿಸಿ ರಾಜ್ಯವಾಳಿದರು ಎಂಬುದು ಸಮಾಜಕ್ಕೆ ನೀಡಿದ ಬಹು ದೊಡ್ಡ ಸಂದೇಶ.
ಧನ್ಯವಾದಗಳು.
*******


ಭಕ್ತಿ ಎಂಬುದು ವ್ಯಾಪಾರವಲ್ಲ

ತಮ್ಮಂದಿರನ್ನು ಕರೆದ ಯುಧಿಷ್ಠಿರ, 
‘ನಾಳೆ ಧನುರ್ಮಾಸದ ಕೊನೆಯ ದಿನ. ನನಗೆ ಶ್ರೀಕೃಷ್ಣನೊಂದಿಗೆ ಊಟ ಮಾಡಿ ವ್ರತ ಪೂರ್ಣಗೊಳಿಸಬೇಕೆಂಬ ಬಯಕೆ. ನಿಮ್ಮಲ್ಲಿ ಯಾರಾದರೂ ದ್ವಾರಕೆಗೆ ಹೋಗಿ ಸೂರ್ಯೋದಯಕ್ಕೂ ಮೊದಲು ಆತನನ್ನು ಕರೆತರುವಿರಾ?’ ಎಂದು ಕೇಳಿದ. ತಮ್ಮಂದಿರಿಗೆ ಅಚ್ಚರಿಯಾಯಿತು; ಕಾರಣ, ಹಸ್ತಿನಾವತಿಯಿಂದ ದ್ವಾರಕೆಗೆ ಹೋಗಿ ಬರಲು ಹತ್ತು ದಿನಗಳಾದರೂ ಬೇಕಿತ್ತು! ಅಷ್ಟರಲ್ಲಿ ಅಲ್ಲಿಗೆ ಬಂದ ಭೀಮಸೇನ ರಿಗೆ ವಿಷಯ ತಿಳಿದು ‘ನೀವು ಶ್ರೀಕೃಷ್ಣನನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಿ, ಸೂರ್ಯೋದಯಕ್ಕೂ ಮೊದಲು ಆತನನ್ನು ಕರೆತರುವ ಜವಾಬ್ದಾರಿ ನನ್ನದು’ ಎಂದ. ಆತನ ಆಶ್ವಾಸನೆಯಂತೆ ದ್ರೌಪದಿಗೆ ಭೋಜನದ ವ್ಯವಸ್ಥೆ ಮಾಡಲು ಸೂಚಿಸಲಾಯಿತು.

ಆದರೆ ಧರ್ಮರಾಯನಿಗೆ ಆ ರಾತ್ರಿ ನಿದ್ರೆ ಬಾರದಾಯಿತು. ಭೀಮ ದ್ವಾರಕೆಗೆ ಹೋಗಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸೇವಕನೊಬ್ಬನನ್ನು ಮಧ್ಯರಾತ್ರಿಯಲ್ಲೇ ಅವನ ಬಿಡಾರಕ್ಕೆ ಕಳಿಸಲಾಯಿತು. ಹಿಂದಿರುಗಿ ಬಂದ ಸೇವಕ, ಭೀಮಸೇನ ದೇವರು ನಿಶ್ಚಿಂತನಾಗಿ ಮಲಗಿದ್ದಾರೆ. ವಿಷಯವನ್ನು ಯುಧಿಷ್ಠಿರನಿಗೆ ತಿಳಿಸಿದ. ಚಿಂತಿತನಾದ ಯುಧಿಷ್ಠಿರ ತಾನೇ ಬಂದು ಭೀಮನನ್ನು ಎಬ್ಬಿಸಿದ. ಸ್ನಾನ ಸಂಧ್ಯಾವಂದನಾದಿಗಳನ್ನು ಮುಗಿಸಿದ ಭೀಮ, ದ್ರೌಪದಿ ಇರುವಲ್ಲಿಗೆ ಬಂದು ಭೋಜನ ಸ್ವೀಕರಿಸಿದ. 
ತರುವಾಯದಲ್ಲಿ, ದ್ರೌಪದಿ ಮತ್ತು ಯುಧಿಷ್ಠಿರರು ಗಮನಿಸುತ್ತಿರುವಂತೆಯೇ ದ್ವಾರಕೆಯ ಕಡೆಗೆ ತಿರುಗಿದ ಭೀಮ, ಮನದಲ್ಲೇ ಶ್ರೀಕೃಷ್ಣನನ್ನು ನೆನೆದು ಸಾಷ್ಟಾಂಗ ನಮಸ್ಕಾರ ಮಾಡಿ, ಎದ್ದು ತನ್ನ ಗದೆಯನ್ನು ಆಕಾಶಕ್ಕೆ ಎಸೆದು ಭಕ್ತಿಪರವಶನಾಗಿ, ‘ಪರಮಾತ್ಮ, ಈ ಗದೆ ನನ್ನ ತಲೆಯ ಮೇಲೆ ಬಿದ್ದು ಪ್ರಾಣ ಹೋಗುವುದರೊಳಗಾಗಿ ನೀನು ಇಲ್ಲಿರಬೇಕು. ನಿನ್ನ ಭಕ್ತನ ರಕ್ಷಣೆ ಮಾಡುವ ಹೊಣೆ ನಿನ್ನದು ತಂದೆ’ ಎಂದ ಮುಂದೇನಾಗುವುದೋ ಎನ್ನುವಷ್ಟರಲ್ಲಿ ಶ್ರೀಕೃಷ್ಣ ಆಕಾಶದಲ್ಲಿ ಪ್ರತ್ಯಕ್ಷನಾಗಿ ಗದೆಯನ್ನು ಹಿಡಿದು ಕೆಳಗಿಳಿದು ಬಂದು ಭೀಮನನ್ನು ಆಲಿಂಗಿಸಿಕೊಂಡ! ಅಲ್ಲಿಗೆ ಯುಧಿಷ್ಠಿರನ ಅಭೀಷ್ಠೆಯೂ ಈಡೇರಿತ್ತು!

ಹೌದು, ಭಗವಂತ ಭಕ್ತಿಗೊಲಿಯುತ್ತಾನೆ, ಭಕ್ತನ ಇಚ್ಛೆ ಈಡೇರಿಸುತ್ತಾನೆ. ಆದರೆ ಆತನ ಬಗೆಗೆ ನಮಗೆ ಸಂಪೂರ್ಣ ನಂಬಿಕೆ ಇರಬೇಕಷ್ಟೇ. 
ಕಣ್ತುಂಬಿ ಮೊರೆಯಿಟ್ಟಾಗ, ಕರುಣಾಸಿಂಧುವಾದ ಆತ ಆಪ್ತಮಿತ್ರನಂತೆ ಕಷ್ಟದಲ್ಲಿ ನಮ್ಮ ಕೈಹಿಡಿದು ನಡೆಸುತ್ತಾನೆ. ಭಕ್ತಿ ಎಂಬುದು ಭಕ್ತ ಮತ್ತು ಭಗವಂತನ ನಡುವೆ ಇರುವ ಒಡಂಬಡಿಕೆ. 
ಭಕ್ತಿಯಅಭಿವ್ಯಕ್ತಿಯೇ ಪ್ರಾರ್ಥನೆ. *
ಈ ದೃಷ್ಟಿ ಯಿಂದಲೇ ನಮ್ಮ ಪ್ರಾಚೀನ ಋಷಿಗಳು, ‘ಭಕ್ತಿ ಎಂದರೆ ವ್ಯಾಪಾರವಲ್ಲ, ಅದು ಸಂಪೂರ್ಣ ಸಮರ್ಪಣೆ, ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ’ ಎಂದಿದ್ದಾರೆ.
*******


ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ“ಧರ್ಮ“..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
“ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..
ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!
ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!
ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.
ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:”ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!?”
ಧರ್ಮರಾಜ ಉತ್ತರಿಸಿದ, “ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು”
ಮುಂದೆ ಸಾಗುತ್ತಿದ್ದಂತೆಯೇ ಸಹದೇವ ಧರೆಗುರುಳಿದಾಗ..
ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ಅಣ್ಣ, ಸಹದೇವನಿಗೇಕೆ ಹೀಗಾಯಿತು?”
ಧರ್ಮರಾಜ ಉತ್ತರಿಸಿದ: “ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.”
ಮತ್ತೆ ಕುಸಿದವನು ನಕುಲ, ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ”ವಾಯಿತೆಂದು ಧರ್ಮರಾಜ ಉತ್ತರಿಸಿದ.
ಮತ್ತೆ ಮೃತ್ಯುವಿನ ಸರದಿ ಅರ್ಜುನದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:”ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು?”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”
ಮಹಾಪ್ರಸ್ಥಾನ ಮುಂದುವರೆಯಿತು..
ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ?”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”
ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.
“ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ“ದ ಧರ್ಮರಾಜ.
“ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.
ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.
“ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು.”
ಚಕಿತನಾದ ಇಂದ್ರ ಹೇಳಿದ, “ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ“. (Dogs are not allowed..!)
“ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!
ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?
ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?
ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!!
ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!
ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?
ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?
ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?
ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …
ಭೋಜರಾಜನ ಜೀವನಸಂದೇಶವನ್ನು ಗಮನಿಸಿ:
ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||
(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)
ಧರ್ಮವಿರುವಲ್ಲಿ ಸಾವಿಲ್ಲ ,ನೋವಿಲ್ಲ..
ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು..!!
…ಧರ್ಮೋ ರಕ್ಷತಿ ರಕ್ಷಿತಃ …





ಕೃಪ, ಕೃತವರ್ಮ‌, ಅಶ್ವತ್ಥಾಮ ಈ ಮೂವರೂ ದುರ್ಯೋದನನು ಇದ್ದಲ್ಲಿಯೇ ಬಿಟ್ಟು, ದಕ್ಷಿಣದ ಕಡೆಗೆ ಹೊರಟರು. ತಮ್ಮ ಮುಂದಿರುವ ಕಾರ್ಯಭಾರವೇ ಅವರ ಮನಸ್ಸಿನಲ್ಲಿ ತುಂಬಿಕೊಂಡಿತ್ತು. ದಿನವೆಲ್ಲಾ ಬಾಣಗಳಿಂದಾದ ಗಾಯಗಳಿಂದ ತುಂಬಾ ಆಯಾಸಗೊಂಡಿದ್ದ ಅವರು, ಪಾಂಡವ ಪಾಳೆಯದ ಸಮೀಪದ ಒಂದು ಜಾಗಕ್ಕೆ ಬಂದು ಸೇರಿದರು. ಅದು ರಣರಂಗದ ಸಮೀಪದ ಒಂದು ಅರಣ್ಯವಾಗಿತ್ತು. ಅಲ್ಲಿ ದೊರಕಿದ ನೀರನ್ನು ಕುಡಿದು ಬಾಯಾರಿಸಿಕೊಂಡು, ಮರಗಳ ಅಡಿಯಲ್ಲಿ ಮಲಗಿಕೊಂಡರು. ತುಂಬ ಬಳಲಿದ್ದ ಕೃಪ ಕೃತವರ್ಮರಿಗೆ ತಲೆಯನ್ನು ನೆಲದ ಮೇಲಿಟ್ಟೊಡನೆಯೆ ಗಾಢವಾದ ನಿದ್ರೆ ಬಂದಿತು. ಅಶ್ವತ್ಥಾಮನಿಗೆ ನಿದ್ರೆ ಬರಲಿಲ್ಲ. ಅವನು ಕಣ್ಣುಬಿಟ್ಟುಕೊಂಡು ಎಲ್ಲಾ ಕಡೆಯಲ್ಲೂ ನೋಡುತ್ತಿದ್ದನು. ತನ್ನ ತಂದೆಯ ಸಾವಿಗಾಗಿ ಹಾಗೂ ದುರ್ಯೋದನನ ಸಾವಿಗಾಗಿ ಹೇಗೆ ಸೇಡು ತೀರಿಸಿಕೊಳ್ಳಬೇಕೆಂಬುದೇ ಅವನ ಮನಸ್ಸನ್ನು ತುಂಬಿಕೊಂಡಿತು.
ಸುತ್ತಲೂ ನೋಡುತ್ತಿದ್ದ ಅವನಿಗೆ ಮರದ ಮೇಲೆ ಕಾಗೆಗಳಿದ್ದುದು ಗೋಚರವಾಯಿತು. ಅವುಗಳೆಲ್ಲ ಗಾಢ ನಿದ್ರೆಗಳಲ್ಲಿದ್ದವು. ಇದ್ದಕ್ಕಿದ್ದಂತೆ ಭೀಕರವಾಗಿ ಕಾಣಿಸುತ್ತಿದ್ದ ಒಂದು ಗೂಬೆ ಸ್ವಲ್ಪವೂ ಶಬ್ದವಾಗದಂತೆ ಅಲ್ಲಿಗೆ ಬಂದಿತು. ತಕ್ಷಣವೇ ಅದು ನಿದ್ರಿಸುತ್ತಿದ್ದ ಕಾಗೆಗಳನ್ನು ಕೊಲ್ಲುವ ಕಾಯಕದಲ್ಲಿ ತೊಡಗಿತು. ಕ್ಷಣ ಮಾತ್ರದಲ್ಲಿ ಎಲ್ಲಾ ಕಾಗೆಗಳನ್ನೂ ಕೊಂದುಹಾಕಿದ ಅದು, ಸುಖವಾಗಿ ತಾನು ಎಲ್ಲಿಂದ ಬಂದಿತ್ತೋ ಅಲ್ಲಿಗೆ ಹೊರಟು ಹೋಯಿತು. ಆ ಗೂಬೆ ಅಶ್ವತ್ಥಾಮನ ಮನಸ್ಸಿನಲ್ಲಿ ಒಂದು ಗಾಢವಾದ ಯೋಚನೆ ಬರುವುದಕ್ಕೆ ಕಾರಣವಾಯಿತು.
"ಹೌದು, ಇದೇ ಸರಿ ಯಾದದ್ದು ಈಗ ನಾನು ಪಾಂಡವರ ಪಾಳೆಯಕ್ಕೆ ಹೋಗಿ ಅಲ್ಲಿದ್ದವರನ್ನೆಲ್ಲ ಕೊಲ್ಲುವೆನು. ಯುದ್ದ ಮುಗಿದಿರುವುದರಿಂದ ಬಹಳ ದಿನಗಳ ನಂತರ ಇಂದು ಅವರೆಲ್ಲ ಬಹಳ ಶಾಂತವಾಗಿ ನಿದ್ರಿಸುತ್ತಿರುವರು. ಅವರ ಮೇಲೆರಗಿ ನಾನು ತನ್ನ ಸೇಡನ್ನು ತೀರಿಸಿಕೊಳ್ಳುವೆನು‌". ಈ ಯೋಚನೆಯಿಂದ ಅಶ್ವತ್ಥಾಮನು ಎಷ್ಟು ಉದ್ರಿಕ್ತನಾದನೆಂದರೇ, ಅವನು ಕುಳಿತಲ್ಲಿ ಕುಳ್ಳಿರಲಾಗಲಿಲ್ಲ. ಉಳಿದಿಬ್ಬರನ್ನೂ ಗಡಬಡಿಸಿ ಎಬ್ಬಿಸಿ, ತನ್ನ ಮನಸ್ಸಿನ ಯೋಚನೆಯನ್ನು ತಿಳಿಸಿದನು. ಅವರು ಬಹುವಾಗಿ ಹೆದರಿದರು.
ಕೃಪನು:- 'ಅಶ್ವತ್ಥಾಮ, ಪಾಂಡವರನ್ನು ನೀನು ಕೊಲ್ಲುವ ನಿನ್ನ ಈ ಯೋಚನೆ ಸರಿಯಲ್ಲ. ದುರ್ಯೋದನನೇನೂ ಆದರ್ಶ ರಾಜನಾಗಿರಲಿಲ್ಲ; ಅವನು ಬಹು ಕ್ರೂರಿ, ಕಪಟಿ; ಇಷ್ಟೆಲ್ಲ ವರ್ಷಗಳು ಅವನು ಅವರನ್ನು ಕೆಟ್ಟದಾಗಿ‌ ನಡೆಸಿಕೊಂಡಿದ್ದವನು; ಅದಕ್ಕಾಗಿ ಅವರು ಅವನನ್ನು ಕೊಲ್ಲಬೇಕಾಯಿತು. ದುರ್ಯೋದನನ ತೊಡೆ ಮುರಿದದ್ದು, ಭೀಮ ನಮ್ಮೆಲ್ಲರ ಮುಂದೆ ಮಾಡಿದ ಪ್ರತಿಜ್ಞೆಯಂತೆ. ಅದು ಅನ್ಯಾಯದ ಯುದ್ಧ ಅಗಿದ್ದು ಎಂಬುದು ಒಪ್ಪುತ್ತೇನೆ; ಆದರೇ, ವಿಧಿಯ ಮೇಲೆ ನಾನು ತೀರ್ಮಾನ ಕೊಡಲಾರೆ. ನೀನು ರಾಜನ ‌ಹಾಗೂ ನಿನ್ನ ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳುವೆನು ಎಂದು ಪ್ರತಿಜ್ಞೆ ಮಾಡಿರುವೆ; ಸರಿಯೇ, ಆದರೆ, ಅದನ್ನು ನಾವು ಹಾಡುಹಗಲಲ್ಲೇ ನೆರವೇರಿಸೋಣ. ಆದರೇ, ಈ ನಿನ್ನ ಭೀಕರವಾದ ಯೋಚನೆ ಸರಿಯಲ್ಲ. ನೀನು ಹಾಗೇನಾದರೂ ಮಾಡಿದರೇ, ಅಪಕೀರ್ತಿಗೊಳಗಾಗುವೆ. ನಾನು ಇದನ್ನು ಒಪ್ಪಲಾರೆ. ಅಶ್ವತ್ಥಾಮ, ದಯವಿಟ್ಟು ಇಂತಹ ಪಾಪಕಾರ್ಯ ಮಾಡಲು ಹೊಗಬೇಡ‌. ಈವರೆಗೆ ಈ ನಿನ್ನ ಸತ್ಕೀರ್ತಿಯನ್ನು ಹಾಳು ಮಾಡಿಕೊಳ್ಳಬೇಡ" ಎಂದನು.
ಆದರೆ ಅಶ್ವತ್ಥಾಮನು ಒಂದೇ ಹಟ. ಕೃಪನ‌ ಮಾತನ್ನು ಲೆಕ್ಕಿಸಲಿಲ್ಲ‌.
ಅಶ್ವತ್ಥಾಮನು:- "ಧರ್ಮವು ತನ್ನ ದಡವನ್ನು ಮೀರಿದೆ. ಅನ್ಯಾಯದ ಚಾಲನೆ ಪಾಂಡವರಿಂದಲೇ ಪ್ರಾರಂಭವಾಗಿದೆ; ಆದ್ದರಿಂದ ನಾನು ಹೀಗೆ ಮಾಡಿದರೇ ತಪ್ಪೇನಿಲ್ಲ" ಎಂಬುದು ಅವನ ಭಾವನೆ. ದೃಷ್ಟದ್ಯುಮ್ನನ‌ ಕೈಲ್ಲಿ ತನ್ನ ತಂದೆ ಸತ್ತದ್ದು ಅವನ ಮನಸ್ಸಿನ ಮಾಯದ ಗಾಯವಾಗಿ ಹಾಗೆಯೇ ಉಳಿದಿತ್ತು. ಅದರ ಮೇಲೆ ಈಗ ದುರ್ಯೋದನನ‌ ಕೊಲೆ. ಅವನಿಗೆ ಹುಚ್ಚು ಹಿಡಿದಂತಾಗಿಬಿಟ್ಟಿತ್ತು. ಅವನು, "ನಾನೇನು ಮಾಡುತ್ತಿರುವೆನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನೀವು ನನ್ನನ್ನು ಬೆಂಬಲಿಸದಿದ್ದರೂ ನಾನೊಬ್ಬನೆ ಹೋಗಿ ಮಾಡಬೇಕಾದುದ್ದನ್ನು ನಾನೇ ಮಾಡುತ್ತೇನೆ" ಎಂದನು‌.
ಅನಂತರ ರಥವೇರಿ, ಶಂಕರನಿಂದ ಕೊಡಲ್ಪಟ್ಟ ಖಡ್ಗವನ್ನು ತೆಗೆದುಕೊಂಡು, ಅವರ ಪಾಳೆಯದ ಕಡೆಗೆ ಹೊರಟನು. ನಾವೂ ಬರುತ್ತೇವೆಂದು ಕೂಗಿಕೊಂಡು ಕೃಪ, ಕೃತವರ್ಮರು ಹೊರಟರು. ದುರ್ಯೋದನನ ಕಡೆ ಉಳಿದಿದ್ದ ಈ ಮೂವರು, ಸುಖವೋ-ಕಷ್ಟವೋ, ಒಳ್ಳೆಯದೋ‌-ಕೆಟ್ಟದ್ದೋ, ಅಲ್ಲಿಂದ ಮುಂದೆ ಹಂಚಿಕೊಳ್ಳುವುದೆಂದು ಮನಸ್ಸಿನಲ್ಲಿ‌ಯೇ ಅಂದುಕೊಂಡರು. ಅವರಿಗೆ ತಮ್ಮ‌ ನಾಯಕನ ಸಾವಿನ ಸೇಡನ್ನು ತೀರಿಸಿಕೊಳ್ಳಬೇಕಾಗಿದ್ದಿತು.
ರಥವು ಪಾಂಡವ ಪಾಳೆಯನ್ನು ಸೇರಿತು
ಅಶ್ವತ್ಥಾಮನು ಡೇರೆಗೊಳಕ್ಕೆ ಹೋದಾಗ, ಕೃಪ ಕೃತವರ್ಮರು ಹೊರಗೆ ಪಾಳೆಯದ ಪ್ರವೇಷ ದ್ವಾರದಲ್ಲಿ ನಿಂತಿದ್ದರು. "ಯಾರು ತಪ್ಪಿಸಿಕೊಂಡು ಹೋಗುವುದಕ್ಕೆ ಬಿಡುವುದಿಲ್ಲವೆಂದು" ಮಾತು ಕೊಟ್ಟರು. ಅಶ್ವತ್ಥಾಮನು ಕತ್ತಲಲ್ಲಿಯೇ ದೃಷ್ಟದ್ಯುಮ್ನನ ಡೇರೆಯೊಳಗೆ ಹೋದನು. ಶಾಂತವಾಗಿ ನಿದ್ರಿಸುತ್ತಿದ್ದ ಅವನ ಬಳಿಗೆ ಬೆಕ್ಕಿನ ಹೆಜ್ಜೆಯಿಟ್ಟು ನಡೆದು, ಅಶ್ವತ್ಥಾಮನು ದೃಷ್ಟದ್ಯಮ್ನನನ್ನು ತನ್ನ ಬಲವನ್ನೆಲ್ಲ ಬಿಟ್ಟು ಒದ್ದನು. ದೃಷ್ಟದ್ಯಮ್ನನಿಗೆ ಎಚ್ಚರವಾಯಿತು; ಆದರೇ ಆತ್ಮರಕ್ಷಣೆಗೆ ಅವಕಾಶವಿಲ್ಲದಂತೆ ಅಶ್ವತ್ಥಾಮನು ಅವನ ಜುಟ್ಟನ್ನು ಹಿಡಿದುಕೊಂಡು ಒಂದೇ ಸಮನೆ ಒದೆಯುತ್ತಿದ್ದನು. ಹಾಸಿಗೆ ಮೇಲೆ ಒತ್ತಿ ಮಲಗಿಸಿ, ಅಲ್ಲಿದ್ದ ಬಿಲ್ಲಿನ ನಾಣಿಯಿಂದ ದೃಷ್ಟದ್ಯಮ್ನನ ಕುತ್ತಿಗೆಗೆ ನೇಣು ಬಿಗಿಯ ತೊಡಗಿದನು.
ಆ ಸ್ಥಿತಿಯಲ್ಲಿ ದೃಷ್ಟದ್ಯುಮ್ನನು:- "ಬಾಣದಿಂದ ಹೊಡೆ. ನನ್ನೊಡನೆ ಹೋರಾಡು ನನ್ನನ್ನು ಸ್ವರ್ಗಕ್ಕೆ ಕಳುಹಿಸು. ಇದು ಕ್ಷತ್ರಿಯನಿಗೆ ತಕ್ಕ ಮರಣವಲ್ಲ" ಎಂದು ಗೊಣಗಿದನು.
ಅಶ್ವತ್ಥಾಮನು ಪಿಶಾಚಿ ಮೆಟ್ಟಿಕೊಂಡವನಂತೆ ನಕ್ಕು , "ಗುರುವನ್ನು ಕೊಂದಪಾಪಿ ನೀನು. ನಿನಗೆ ಸ್ವರ್ಗ ಬೇರೆ ಕೇಡು. ಚಿರಕಾಲ ನರಕದಲ್ಲಿರುವುದೇ ನಿನಗೆ ಯೋಗ್ಯವಾದದ್ದು" ಎಂದು ನೇಣನ್ನು ಬಿಗಿಗೊಳಿಸಿದನು; ಪ್ರಾಣ ಹೋಗುವವರೆಗೂ ಅವನನ್ನು ಒದೆಯುತ್ತಿದ್ದನು.
ಈ ಗಲಭೆಯಿಂದ ಸುತ್ತಮುತ್ತಣ ಜನರೆಲ್ಲ ಎಚ್ಚೆತ್ತರು. ಪಾಳೆಯಕ್ಕೆ ಯಾವುದೋ ರಾಕ್ಷಸ ಬಂದಿರುವನೆಂದು ಭಾವಿಸಿದರು. ಎದ್ದು ಬಂದ ಪಾಂಚಾಲರನ್ನೆಲ್ಲ ಅಶ್ವತ್ಥಾಮನು ಒಬ್ಬರನ್ನೂ ಬಿಡದೆ ಕೊಂದುಹಾಕಿದನು. ದ್ರೌಪದಿಯ ಮಕ್ಕಳು ತಮ್ಮಿಂದಾದಷ್ಟು ಹೋರಾಡಿದರೂ, ಆದರೇ ಪಾಳೆಯದಲ್ಲಿದ್ದವರನ್ನೆಲ್ಲ ಅಶ್ವತ್ಥಾಮನು ಸುಲಭವಾಗಿ ಕೊಂದುಹಾಕಿದನು‌. ಈವರೆಗೆ ಯುದ್ಧದಲ್ಲಿ ಪೆಟ್ಟಾಗದೇ ಇದ್ದ ಯುಧಾಮನ್ಯು, ಉತ್ತಮೌಜಸ್ ತಮ್ಮ ನಿದ್ರೆಯಲ್ಲಿಯೇ ಸತ್ತರು. ( ನಿದ್ದೆಯಿಂದ ಮಲ್ಕೊಂಡಾಗ ಅವರಿಗೆ ಗೊತ್ತಾಗದೇ ಖಡ್ಗದಿಂದ ಒಂದೇ ಬಾರಿಗೆ ಬೀಸಿದ ರಭಸಕ್ಕೆ ರುಂಡವು ಬೇರೆಯಾಗಿ ನಿದ್ದೆಯಲ್ಲಿಯೇ ಸತ್ತಿರಬಹುದು). ಶಿಖಂಡಿಯನ್ನು ಕೊಲೆ ಮಾಡಲಾಯಿತು. ಯಾರೂ ಓಡಿ ಹೋಗದಂತೆ ಕೃಪ ಕೃತವರ್ಮರು ನೋಡಿಕೊಂಡರು. ಎಲ್ಲರೂ ಸತ್ತಮೇಲೆ ಕೃಪನು ಪಾಳೆಯಕ್ಕೆ ಮೂರು ಕಡೆಯಿಂದ ಬೆಂಕಿಹಚ್ಚಿದರು. ಇದರಿಂದಾಗಿ ಅಶ್ವತ್ಥಾಮನ ವಿನಾಶಕಾರ್ಯ ಇನ್ನೂ ಸುಲಭವಾಯಿತು. ಅಂದು ಈ ಮೂವರು ಕ್ರೂರಪ್ರಾಣಿಗಳಿಗಿಂದ ಕ್ರೂರವಾಗಿದ್ದರು. ಪ್ರಾಣಿಗಳು ತಮ್ಮದೇ ಪ್ರಭೇದಗಳನ್ನು ಕೊಲ್ಲುವುದಿಲ್ಲ. ಅಲ್ಲದೇ ಅಪಾಯ ಎದುರಾದಾಗ ಅಥವಾ ಆಹಾರ ಬೇಕಾದಾಗ ಕೊಲ್ಲುತ್ತವೆ. ಆದರೇ, ಈ ಅಮಾನುಷ ಮಧ್ಯರಾತ್ರಿಯ ಕಗ್ಗೊಲೆ, ಮನುಷ್ಯರೆಂದು ಕರೆಯಬಾರದ ಮನುಷ್ಯರಿಂದಲೇ ನಡೆದೇ ಹೋಯಿತು.
ಮಹಾಕಾರ್ಯವನ್ನು ಮಾಡಿ ಮುಗಿಸಿದ ಆನಂದೋದ್ರೇಕದಿಂದ‌ ಕುಣಿಯುತ್ತ ಈ ಮೂವರೂ ದುರ್ಯೋದನನು ಸಾಯುತ್ತಿದ್ದಲ್ಲಿಗೆ ಓಡಿ ಹೋದರು. ಅವನ ಪ್ರಾಣ ಇನ್ನೂ ಹೋಗಿರಲಿಲ್ಲ. ಅವರು ಬರುತ್ತಿದ್ದ ಶಬ್ದವನ್ನು ಕೇಳಿ ಅವನು ತಲೆಯೆತ್ತಿದ. ಕಾಡುಪ್ರಾಣಿಗಳು ಈಗಾಗಲೇ ಅವನ ಹತ್ತಿರ ಬರಲಾರಂಭಿಸಿದ್ದವು. ಆತ್ಮರಕ್ಷಣೆಗಾಗಿ ಅವುಗಳನ್ನು ನಿವಾರಿಸಿಕೊಳ್ಳುವುದು ಅವನಿಗೆ ಬಹುದುಸ್ತರವಾಗಿದ್ದಿತು. ಮೂವರು ಇವನ ಬಳಿ ಬಂದು ಕುಳಿತರು. ದುರ್ಯೋದನನ ಏಕಮಾತ್ರ ಸಂಗತಿಯಾಗಿ ಅವನ ಗದೆ ಬಳಿಯಲ್ಲಿಯೇ ಬಿದ್ದಿತ್ತು.
ಅಶ್ವತ್ಥಾಮನು:- "ದುರ್ಯೋದನ, ನಾನು ಹೇಳುವುದನ್ನು ಗಮನವಿಟ್ಟು ಕೇಳು‌. ನಾನು ಪಾಂಡವ ಪಾಳೆಯನ್ನು ಸಂಪೂರ್ಣವಾಗಿ ನಾಶಮಾಡಿ ಬಂದಿದ್ದೇನೆ. ಅವರ ಕಡೆ ಬದುಕುಳಿದವರೆಂದರೇ ಪಂಚಪಾಂಡವರು, ಕೃಷ್ಣ, ಸಾತ್ಯಕಿ ಇಷ್ಟೇ ಜನ; ನಮ್ಮ‌ ಕಡೆ ನಾವು ಮೂವರು ಉಳಿದಿದ್ದೇವೆ" ಎಂದನು.
ಇದನ್ನು ಕೇಳಿದ ದುರ್ಯೋದನನಿಗೆ ಬಹು ಸಂತೋಷವಾಯಿತು.
ದುರ್ಯೋದನನು:- "ಭೀಷ್ಮ, ದ್ರೋಣ, ರಾಧೇಯರುಗಳಿಂದಲೂ ಆಗದ ಕೆಲಸವನ್ನು ಇಂದು ನೀನು ಸಾಧಿಸಿರುವೆ, ಅಶ್ವತ್ಥಾಮ. ನಿನ್ನ ಬಗ್ಗೆ ನನಗೆ ಹೆಮ್ಮೆ ಎನಿಸಿದೆ. ನಿನಗೆ ಶುಭವಾಗಲಿ. ನಾನು ಈಗ ಪ್ರಾಣತ್ಯಾಗ ಮಾಡಲು ಸಿದ್ದನಾಗಿರುವೆ. ಸ್ವರ್ಗದಲ್ಲಿ ಎಲ್ಲರೂ ಒಟ್ಟಿಗೆ ಸೇರೋಣ. ಈಗ ನಾನು ಹೋಗುತ್ತೇನೆ" ಎಂದನು.
ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.
("ಈ ಕ್ಷಣದಿಂದ ಸಂಜಯನ ದಿವ್ಯದೃಷ್ಟಿ ಹೊರಟುಹೊಯಿತೆಂದು ಹೇಳುವರು".)
ಉದಯಿಸಿದ ಇಂದಿನ ಸೂರ್ಯನು ಉಳಿದೆಲ್ಲ ದಿನಗಳಿಗಿಂತ ಅತ್ಯಂತ ಭಯಾನಕನಾಗಿದ್ದನು. ಹಿಂದಿನ ದಿನ ರಾತ್ರಿ ಪಾಂಡವ ಪಾಳೆಯದಲ್ಲಿ ಅಶ್ವತ್ಥಾಮನ ಕಣ್ಣು ತಪ್ಪಿಸಿ ಉಳಿದಿದ್ದವನೆಂದರೇ ದೃಷ್ಟದ್ಯುಮ್ನನ ಸಾರಥಿಯೊಬ್ಬನೆ. ಅವನು ಹೋಗಿ ಯುದಿಷ್ಟಿರನಿಗೆ ತಡರಾತ್ರಿ ನಡೆದಿದ್ದೆಲ್ಲವನ್ನೂ ವರದಿ ಮಾಡಿದನು. ಆಘಾತದಿಂದ ಮೂರ್ಛೆ ಹೋದ ಯುದಿಷ್ಟಿರನನ್ನು ಸಾತ್ಯಕಿಯು ಹಿಡುದುಕೊಂಡನು. ಪಾಂಡವರೆಲ್ಲ ಗರಬಡಿದಂತವರಾಗಿದ್ದರು‌‌. ಎಷ್ಟೊ ಹೊತ್ತಿನಮೆಲೆ ಚೇತರಿಸಿಕೊಂಡ ಯುದಿಷ್ಟಿರನು, ನಕುಲನಿಗೆ "ದ್ರೌಪದಿಯನ್ನು ಕರೆದುಕೊಂಡು ಬರುವಂತೆ" ಹೇಳಿದನು. ಅವನು ರಾಣಿವಾಸದ ಕಡೆಗೆ ಓಡಿದನು. ಸೋದರರೊಂದಿಗೆ ಪಾಳೆಯಕ್ಕೆ ನಡೆದ ಯುದಿಷ್ಟಿರನು ಅಲ್ಲಿಯ ಭೀಕರ ದೃಷ್ಟಿಯನ್ನು ನೋಡಿದನು. ಅವರೆಲ್ಲರೂ ಸತ್ತಿರುವರೆಂಬುದು ನಂಬುವುದಕ್ಕೇ ಆಗಲಿಲ್ಲ. ತಮ್ಮನ್ನೆಲ್ಲ ಈ ಮಹಾ ಯುದ್ಧದ ಮೂಲಕ ದಾಟಿಸಿದ ಈ ಅಗ್ನಿಪುತ್ರನಾದ ದೃಷ್ಟದ್ಯುಮ್ನನು ಊಹೆಗೂ ನಿಲುಕದ ಭೀಕರ ರೀತಿಯಲ್ಲಿ ಕೊಲೆ ಮಾಡಲ್ಪಟ್ಟಿರುವುದನ್ನು ನೋಡಿದನು. ದ್ರೌಪದಿಯ ಐವರು ಮಕ್ಕಳನ್ನೂ ಅಶ್ವತ್ಥಾಮನ ಖಢ್ಗದಿಂದ ಕತ್ತರಿಲ್ಪಟ್ಟಿತ್ತು. ಯುಧಾಮನ್ಯು, ಉತ್ತಮೌಜಸ್ಸರನ್ನು ಕಂಡು ಅರ್ಜುನನು ವಿಲವಿಲನೇ ಒದ್ದಾಡಿ ಹೋದನು. ಭೀಮ ಸಾತ್ಯಕಿ ಇಬ್ಬರೂ ದೃಷ್ಟದ್ಯುಮ್ನನ ದೇಹದ ಬಳಿ ಕುಳಿತರು. ಯಾರೂ ಯಾರನ್ನೂ ಸಮಾದಾನಪಡಿಸಲಾಗಲಿಲ್ಲ.
ನಕುಲನ ರಥ ಬರುವ ಶಬ್ದವು ಕೇಳಿಸಿತು‌. ಅವನು ದ್ರೌಪದಿಯನ್ನು ಕೆಳಕ್ಕಿಳಿಸಿದನು. ಎರಡು ಹೆಜ್ಜೆ ಇಟ್ಟ ಅವಳು, ಮಕ್ಕಳನ್ನು ನೋಡುತ್ತಲೇ ಭೂಮಿಯ ಮೇಲೆ ಬಿದ್ದುಬಿಟ್ಟಳು. ಅವಳ ದುಃಖ ಹೇಳತೀರದ್ದಾಗಿತ್ತು. ವಿಧಿಯನ್ನು ವಿಧ ವೀಧವಾಗಿ ಬೈದಳು. ತನ್ನ ಸೋದರರ, ಮಕ್ಕಳ ಶರೀರಗಳನ್ನು ಇಟ್ಟುಕ್ಕೊಂಡು ರೋದಿಸುತ್ತಿರುವ ಅವಳನ್ನು ನೋಡುವುದೇ ಹೃದಯವೇಧಕವಾಗಿತ್ತು. ತನ್ನದಾಗಿದ್ದ ಎಲ್ಲವನ್ನೂ ಅವಳು ಒಂದೇ ರಾತ್ರಿಯಲ್ಲಿ ಕಳೆದುಕೊಂಡಿದ್ದಳು. ಇಂಥಾದ್ದೂ ಈ ಹಿಂದೆ ಯಾರಿಗೂ, ಯಾವಾಗಲೂ ಸಂಭವಿಸಿರಲಿಲ್ಲ. ಇದ್ದಕ್ಕಿದ್ದಂತೆ ಅವಳು ಎದ್ದುನಿಂತಳು. ಕಣ್ಣೊರೆಸಿಕೊಂಡಳು. ಕಣ್ಣುಗಳಿಂದ ಬೆಂಕಿಯುಗುಳುತ್ತಾ
ದ್ರೌಪದಿ:- "ಅಶ್ವತ್ಥಾಮನನ್ನು ಕೊಲ್ಲುವವರೆಗೆ ನಾನು ಆಹಾರ ಸ್ವೀಕರಿಸುವುದಿಲ್ಲ; ಇಲ್ಲಿಯೇ ಪ್ರಾಣ ಬಿಡುತ್ತೇನೆ" ಎಂದಳು.
"ಅಶ್ವತ್ಥಾಮ ಚಿರಂಜೀವಿ, ಅವನನ್ನು ಕೊಲ್ಲಲಾಗುವುದಿಲ್ಲ" ಎಂದು ಎಲ್ಲರೂ ತಿಳಿ ಹೇಳಿದರು.
ಆಗ ದ್ರೌಪದಿಯು:- "ನನ್ನ ಸಹೋದರರ, ಮಕ್ಕಳ ಸೇಡನ್ನು ತೀರಿಸಿಕೊಳ್ಳಲೇ ಬೇಕು. ಅಶ್ವತ್ಥಾಮನ ತಲೆಯಲ್ಲಿ ಒಂದು ಮಣಿ ಇದೆ. ಎಂಬುದು ನನಗೆ ಗೊತ್ತು. ಅದನ್ನು ನನಗೆ ತಂದುಕೊಡಿ. ಅದನ್ನು ಅವನಿಂದ ಕಿತ್ತುಕೊಳ್ಳುವುದು ಸಾವಿಗಿಂತ ಕಡಿಮೆ ಏನೂ ಅಲ್ಲ. ಭಿಮ, ನೀನೆ ಇದನ್ನು ನನ್ನ ಪ್ರೀತಿಗಾಗಿ ಮಾಡಬೇಕು" ಎಂದಳು.
ಭೀಮನು, "ಹಾಗೆಯೇ ಆಗಲಿ" ಎಂದು, ನಕುಲನನ್ನು ಸಾರಥಿಯಾಗಿಟ್ಟುಕೊಂಡು ಅಶ್ವತ್ಥಾಮನನ್ನು ಹುಡುಕಿಕೊಂಡು ಹೋದರು. ಯುದಿಷ್ಟಿರನು ತನಗೆ ಅತೀವ ದುಃಖವಾಗಿದ್ದರೂ, ಸಂಕಟಪಡುತ್ತಿರುವ ದ್ರೌಪದಿಯನ್ನು ತನ್ನ ಮೃದುವಚನಗಳಿಂದ ಸಂತೈಸಲು ಯತ್ನಿಸಿದನು. ತನ್ನ ಐವರು ಮಕ್ಕಳನ್ನೂ ಕಳೆದುಕೊಂಡು, ಬುದ್ದಿಯೇ ವಿಕಲ್ಪವಾದವಳಂತೆ, ಬಿದ್ದು ರೋದಿಸುತ್ತೊರುವ ದ್ರೌಪದಿಯ ಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ.
ಒಬ್ಬನೇ ಹೋಗಿರುವ ಭೀಮನ ಗತಿಯೇನಾಗಿರುವುದೋ ಎಂದು ಕೃಷ್ಣನಿಗೆ ಆತಂಕವಾಯಿತು. ಅವನು ಯುದಿಷ್ಟಿರನ ಬಳಿಗೆ ಹೋಗಿ, "ಭೀಮನು ಗೆಳೆಯರನ್ನು ಮಕ್ಕಳನ್ನು ಕಳೆದುಕೊಂಡು ಈಗಾಗಲೇ ವಿಚಲಿತನಾಗಿದ್ದಾನೆ. ಈಗ ಆ ಕ್ರೂರ ಕೊಲೆಗೆಡುವ ಅಶ್ವತ್ಥಾಮನನ್ನು ಹುಡುಕಿಕೊಂಡು ಹೋಗಿದ್ದಾನೆ. ಅಶ್ವತ್ಥಾಮನ ಬಳಿ ದ್ರೋಣನು ಕೊಟ್ಟ ಬ್ರಹ್ಮಶೀರ್ಷವೆಂಬ ಬಹು ಶಕ್ತಿಶಾಲಿಯಾದ ಅಸ್ತ್ರವಿದೆ. ಅದನ್ನೇನಾದರೂ ಅವನು ಭೀಮನ ಮೇಲೆ ಪ್ರಯೋಗಿಸಿದರೇ, ನಮ್ಮ ಭೀಮನು ನಾಶವಾಗುವನು. ದ್ರೋಣನು ಮೊದಲು ಈ ಅಸ್ತ್ರವನ್ನು ಅರ್ಜುನನಿಗೆ ಬೋಧಿಸಿದನು. ಅಶ್ವತ್ಥಾಮನು ಅದನ್ನು ಪಡೆಯಬಯಸಿದಾಗ, ಅವನ ಮೇಲೆ ನಂಬಿಕೆಯಿಲ್ಲದ ದ್ರೋಣನು ಅದನ್ನು ಅವನಿಗೆ ನೀಡಲು ಇಷ್ಟಪಡಲಿಲ್ಲ. ಆದರೂ, ಹಟಮಾರಿ ಅಶ್ವತ್ಥಾಮನು ಅದನ್ನು ಯಾರಿಗೂ ಗೊತ್ತಿಲ್ಲದಂತೆ ಪಡೆದುಕೊಂಡನು. ನಾನು ಅರ್ಜುನನ್ನು ಕರೆದುಕೊಂಡು, ಭೀಮನ ರಕ್ಷಣೆಗೆ ಹೋಗುವೆನು" ಎಂದು, ಅವಸರ ಅವಸರವಾಗಿ ಹೊರಟನು.
ಅವರು ಕುರುಕ್ಷೇತ್ರದಿಂದ ಬಹುದೂರವಾಗಿ ಹೊರಟರು. ಕೊನೆಗೆ ಗಂಗಾನದಿ ತೀರದಲ್ಲಿ ವ್ಯಾಸರ ಹಿಂದೆ ಅವಿತುಡಿರುವುದನ್ನು ಕಂಡರು. ಭೀಮನೂ ಅವನನ್ನು ಹುಡುಕಿ, ದ್ವಂದ್ವ ಯುದ್ದಕ್ಕೆ ಆಹ್ವಾನಿಸುತ್ತಿದ್ದನು. ಕೃಷ್ಣಾರ್ಜಹುನರು ವಾಯುವೇಗದಿಂದ ಅಲ್ಲಿಗೆ ಹೋದರು.
ಅಶ್ವತ್ಥಾಮನು ಭೀಮನನ್ನು ನೋಡಿ ನಕ್ಕನು. ಅವನ ತೇಜಸ್ಸೆಲ್ಲ ಹೊರಟುಹೋಗಿ, ಈಗ ಅವನು ಪ್ರಾಣಿಗಳನ್ನು ಹಿಡಿದು, ಕೊಂದು, ಮಾರುವ ವಿಷಾದನಂತೆ ಕಾಣುತ್ತಿದ್ದನು. ಅವನ ಮುಖವು ಭಯಾನಕವಾಗಿದ್ದಿತು‌. ದ್ರೋಣನ ಮಗನ ಮುಖದ ಕಳೆಯೇ ಹೊರಟುಹೋಗಿದ್ದಿತ್ತು. ಕಠಿಣನಾಗಿಯೂ ಕ್ರೂರನಾಗಿಯೂ ಕಾಣಿತ್ತಿದ್ದನು. ಕ್ರೂರ ನಗುವನ್ನು ನಕ್ಕು, ಹತ್ತಿರದಲ್ಲಿದ್ದ ಹುಲ್ಲುದಳವನ್ನು ಕಿತ್ತು, ಅದರಲ್ಲಿ "ಬ್ರಹ್ಮಶೀರ್ಷ"ವನ್ನು ಅಭಿಮಂತ್ರಿಸಿ, ಅದನ್ನು ಭೀಮಾರ್ಜುನ ಮೇಲೆ ಪ್ರಯೋಗಿಸುತ್ತಾ, "ಲೋಕವು ಪಾಂಡವವಿಹೀನವಾಗಲಿ" ಎಂದನು.
ಕೃಷ್ಣನ ಊಹೆ ಸರಿಯಾಗಿದ್ದಿತು. ಅವನು ಅಸ್ತ್ರವನ್ನು ಅತಿ ಮಂತ್ರಿಸುವಾಗಲೇ, "ಅರ್ಜುನ, ಅವನೇನು ಮಾಡುತ್ತಿರುವನು ನೋಡು. ಬ್ರಹ್ಮಶೀರ್ಷಾಸನವನ್ನು ಅಭಿಮಂತ್ರಿಸುತ್ತಿರುವನು. ನಿನಗೂ ಅದು ಗೊತ್ತು. ನೀನು, ನಿನ್ನ ಗುರುವನ್ನು ಮೊಸಳೆಯ ಬಾಯಿಯಿಂದ ಬಿಡಿಸಿದಾಗ, ಆ ಸಂತೋಷಾರ್ಥವಾಗಿ ದ್ರೋಣನು ನಿನಗೆ ಅದನ್ನು ಉಪದೇಷಿಸಿರುವನು. ಈಗ ನೀನೂ ಭೀಮನೂ ಉಳಿಯಬೇಕಾದರೇ, ಅದೇ ಅಸ್ತ್ರವನ್ನು ನೀನೂ ಪ್ರಯೋಗಿಸಬೇಕು. ತ್ವರೆಮಾಡು" ಎಂದನು.
ಅರ್ಜುನನು ತಕ್ಷಣವೇ ಅಸ್ತ್ರ ಪ್ರಯೋಗ ಮಾಡಿದನು. ಎರಡೂ ಅಸ್ತ್ರಗಳ ಜ್ವಾಲೆಗಳು ಆಕಶವನ್ನು ತುಂಬಿದವು. ಲೋಕವೆಲ್ಲ ಅಲ್ಲೋಲ ಕಲ್ಲೋಲವಾಯಿತು. ಎರಡೂ ಅಸ್ತ್ರಗಳ ನಡುವೆ, ಅವುಗಳ ಸಂಗಟ್ಟನೆಯಾಗುವುದಕ್ಕಿಂತ ಮುಂಚೆ ವ್ಯಾಸರು ನಾರದರು ಬಂದು ನಿಂತರು. ತಮ್ಮ ಕೈಗಳಿಂದಲಡ ಅವುಗಳನ್ನು ತಡೆದು, "ಈ ಒಂದು ಅಸ್ತ್ರದ ಪ್ರಯೋಗವು ಭೂಮಿಯ ಮೇಲೆ ಆಗತಕ್ಕದ್ದಲ್ಲ. ಅದನ್ನು ತಕ್ಷಣವೇ ಉಪಸಂಹರಿಸಬೇಕು" ಎಂದರು.
ಅರ್ಜುನನು, "ಅಶ್ವತ್ಥಾಮನ ಅಸ್ತ್ರಕ್ಕೆ ಪ್ರತಿಯಾಗಿ ಬಿಟ್ಟವನು ನಾನು ನನಗೇನೂ ಲೋಕನಾಶದ ಉದ್ದೇಶವಿಲ್ಲ. ನಿಮ್ಮ ಮಾತಿನಂತೆ ನಡೆಯುತ್ತೇನೆ" ಎಂದು ತನ್ನ ಅಸ್ತ್ರವನ್ನು ಉಪಸಂಹರಿಸಿಕೊಂಡನು.
ಉಪಸಂಹರಿಸಲು ಸುಲಭವಾದ ಅಸ್ತ್ರವು ಅದಾಗಿರಲಿಲ್ಲ. ಅದಕ್ಕೆ ತೀವ್ರವಾದ ತಪೋಬಲ ಅಗತ್ಯವಾಗಿದ್ದಿತು. ಅರ್ಜುನನೇನೋ ಉಪಸಂಹರಿಸಿಬಿಟ್ಟರೂ, ಅಶ್ವತ್ಥಾಮನಿಗೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಲಿಲ್ಲ. ಕೊಲೆಗೆಡುಕನಾದ ಅವನಿಗೆ ಅದಕ್ಕೆ ಬೇಕಾದ ತಪೋಬಲವೆಲ್ಲಿ? ಅಸ್ತ್ರವು ಹಿಂದಕ್ಕೆ ಬರಲಿಲ್ಲ. ತನ್ನ ಪಾಪಗಳಿಂದ ಭೀತನಾದ ಅವನು ಆ ಇಬ್ಬರ ಋಷಿಗಳ ಕಾಲಿಗೆ ಬಿದ್ದು, "ನಾನೊಬ್ಬ ಪರಮಪಾಪಿ. ಅಸ್ತ್ರವು ನನ್ನ ಮಾತು ಕೇಳುತ್ತಿಲ್ಲ; ನನಗೇನು ಮಾಡಬೇಕೋ ತಿಳಿಯದಾಗಿದೆ. ಪಾಂಡವರ ಮೇಲೆ ಹುಚ್ಚು ಕೋಪದಲ್ಲಿ ನಾನು, "ಲೋಕವು ಪಾಂಡವವಿಹೀನವಾಗಲಿ" ಎಂದು ಹೇಳಿರುವೆನು.‌ ನಾನೀಗ ಅಸಹಾಯಕನಾಗಿ ನಿಮಗೆ ಶರಣಾಗಿರುವೆ. ದಯವಿಟ್ಟು ನನ್ನನ್ನು ಕಾಪಾಡಿ ಅಸ್ತ್ರದಿಂದ ನನ್ನನ್ನು ರಕ್ಷಿಸಿ" ಎಂದು ಗೋಳಿಟ್ಟನು.
ಋಷಿಗಳಿಬ್ಬರೂ:- "ಅಶ್ವತ್ಥಾಮ, ನೀನು ತುಂಬಾ ತಪ್ಪು ಮಾಡಿದಿಯಾ. ಈ ಅಸ್ತ್ರಕ್ಕಿಂತ ಮಿಗಿಲಾದ ಬ್ರಹ್ಮಾಸ್ತ್ರದಿಂದ ಇದನ್ನು ನಿವಾರಿಸುವುದಾದರೇ , ಅಸ್ತ್ರಪ್ರಯೋಗ ಭೂಮಿಯಲ್ಲಿ ಹನ್ನೆರಡು ವರ್ಷಗಳ ಕಾಲ ಮಳೆಬರುವುದಿಲ್ಲ. ಅದರಿಂದಾಗಿಯೇ ಅರ್ಜುನನು ಬೇರಾವ ಅಸ್ತ್ರಗಳನ್ನು ಬಳಸಲಿಲ್ಲ. ಇಂತಹ ಉತ್ತಮ ವ್ಯಕ್ತಿಗಳನ್ನು ನೀನು ದ್ವೇಷಿಸುತ್ತೀಯೇ, ಪಾಂಡವನಾಶಕ್ಕೆ ಸನ್ನಾಹ ಮಾಡಿದ್ದೀಯೇ. ದಯವಿಟ್ಟು ಹಾಗೆ ಮಾಡದೇ ನಿನ್ನ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೋ, ನಿನ್ನ ತಲೆಯಲ್ಲಿರುವ ಮಣಿಯನ್ನು ಪಾಂಡವರಿಗೆ ಕೊಡುವುದರಿಂದ ಇದು ಸಾಧ್ಯವಾಗುತ್ತದೆ" ಎನ್ನಲು,
ಅಶ್ವತ್ಥಾಮನಿಗೆ ಈ ಸಲಗೆ ಇಷ್ಟವಾಗಲಿಲ್ಲ.
ಅಶ್ವತ್ಥಾಮ;- "ಈ ಮಣಿ ಅತ್ಯಂತ ಮೌಲಿಕವಾದುದು, ಧರುಸಿದವನನ್ನು ಆಯುಧಗಳಿಂದ, ರೋಗಗಳಿಂದ, ಹಸಿವಿನಿಂದ ಪಾರುಮಾಡುವುದು. ನಾನಿದನ್ನು ಕೊಡುವುದಿಲ್ಲ. ಅಸ್ತ್ರವನ್ನು ನಾನು ಹಿಂದಕ್ಕೆ ಪಡೆಯಲಾರೆ. ಪಾಂಡವರ ಮೇಲೆ ಅದನ್ನು ಬಿಟ್ಟಿರುವೆ. ಅವರು ಬದುಕಿ ಉಳಿಯಬೇಕೆಂದು ನೀವು ಹೇಳುವುದಾದರೇ, ಅವರ ಕುಟುಂಬದ ಎಲ್ಲರ ಗರ್ಭಗಳನ್ನೂ ಅದು ನಾಶಪಡಿಸಲಿ; ಹಾಗೆ ಭವಿಷ್ಯದಲ್ಲಿ ಲೋಕವನ್ನು ಪಾಂಡವವಿಹೀನವನ್ನಾಗಿಸಲಿ" ಎಂದು ಅಸ್ತ್ರವನ್ನು ಗರ್ಭಸ್ಥ ಶಿಶು ಸಂಹಾರಕ್ಕೆಂದು ಕಳುಹಿಸಿದನು. ಅದು ಉತ್ತರೆಯ ಗರ್ಭದ ಲ್ಲಿದ್ದ ಅಭಿಮನ್ಯುವಿನ ಶಿಶುವನ್ನು ಕೊಲ್ಲಲು ಹೊರಟಿತು.
ಕೃಷ್ಣನಿಗೆ ಅಶ್ವತ್ಥಾಮನ ಮೇಲೆ ಹಿಂದೆಂದೂ ಇಲ್ಲದಷ್ಟು ಕೋಪಬಂದಿತು.
ಕೃಷ್ಣನು:- "ಅಶ್ವತ್ಥಾಮ, ಈ ಭೂಮಿಯಲ್ಲಿ ಜನ್ಮವೆತ್ತಿರುವ ತಿರ್ಯಕ್ ಜಂತುಗಳಲ್ಲಿ ನಿನ್ನಷ್ಟು ನೀಚ ಜಂತು ಇನ್ನೊಂದಿಲ್ಲ. ಅಭಿಮನ್ಯುವಿನ ಮಗುವನ್ನು ಅಸ್ತ್ರದಿಂದ ಕೊಲ್ಲುವೆಯಲ್ಲವೇ? ನಾನು ಅದಕ್ಕೆ ಜೀವವನ್ನು ಕೊಡುವೆ, ನೋಡುತ್ತಿರು. ನೀನು ಚಿರಂಜೀವಿ! ಯಾರೊಬ್ಬರೂ ಸ್ನೇಹಿತರಿಲ್ಲದೇ, ಯಾರೊಬ್ಬರಿಂದಲೂ ಒಂದೇ ಒಂದು ಪ್ರೀತಿಯ ನುಡಿಯನ್ನು ಕೇಳದೇ, ನೀನು ಈ ಭೂಮಿಯಲ್ಲಿ ಅಲೆಯುತ್ತಿರುವೆ. ಈ ಮಗು, ಕೌರವರ ಸಿಂಹಾಸನದ ಮೇಲೆ ಪ್ರತಿಷ್ಠಾಪಿತನಾಗಿ ಅರವತ್ತು ವರ್ಷಗಳ ‌ಕಾಲ ರಾಜ್ಯವಾಳುವುದನ್ನು ನೀನು ನೋಡುವೆ" ಎಂದು ಮಣಿಯನ್ನು ಅವನಿಂದ ಕಿತ್ತುಕೊಂಡನು.
ಅಶ್ವತ್ಥಾಮನು ಇಡೀ ಭೂಮಂಡಲವನ್ನು ತಿರುಗಲು ಅಲ್ಲಿಂದ ಹೊರಟನು.
ಇತಿ ಸೌಪ್ತಿಕಪರ್ವಂ ಸಂಪೂರ್ಣಂ....
-:ಶ್ರೀಕೃಷ್ಣಾರ್ಪಣಮಸ್ತು:-

ದೃತರಾಷ್ಟ್ರ ಏನಾದ?|•|
ಮಹಾಭಾರತ‌ದ ಕುರುಕ್ಷೇತ್ರ ಯುದ್ಧದ ನಂತರ ದೃತರಾಷ್ಟ್ರ ಮತ್ತು ಗಾಂಧಾರಿ ಏನಾದರು?
ಅದಕ್ಕೆ ಮೊದಲು ಒಂದು ಚೂರು ಸಂಧರ್ಭಗಳ ಹಿನ್ನೆಲೆ ನೋಡಿ, ಮುಂದೆ ಹೋಗೋಣ.
----------------------------------------------
ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ದೃತರಾಷ್ಟ್ರನ ಸೋದರನಾದ 'ವಿದುರ' ತೀರ್ಥಯಾತ್ರೆಯಲ್ಲಿದ್ದ. ಯುದ್ಧದಲ್ಲಿ ಏನಾಗಬಹುದು ಎಂಬುದನ್ನು ವಿದುರ ಮೊದಲೇ ಊಹಿಸಿದ್ದ.
ತೀರ್ಥಯಾತ್ರೆ ಮುಗಿಸಿ ಹಸ್ತಿನಾಪುರಕ್ಕೆ ಹಿಂತಿರುಗಿದ ವಿದುರನಿಗೆ, ತಾನು ಇಲ್ಲದ ಸಮಯದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸಿದವು ಎಂಬೆಲ್ಲಾ ವಿಚಾರಗಳನ್ನು ತಿಳಿದುಕೊಂಡ.
ದೃತರಾಷ್ಟ್ರನು ಚಿರಂಜೀವಿಗಳಾದ ಕೃಪಾಚಾರ್ಯ, ಅಶ್ವತ್ಥಾಮ ಮುಂತಾದವರನ್ನು ಹೊರತುಪಡಿಸಿ, ತನ್ನೆಲ್ಲಾ ಮಕ್ಕಳು, ದ್ರೋಣ, ಕರ್ಣ, ಶಕುನಿ ಎಲ್ಲರನ್ನೂ ಕಳೆದುಕೊಂಡು ಅತ್ಯಂತ ಶೋಕದಲ್ಲಿದ್ದಾನೆ.
ತನ್ನ ಆಪ್ತರಾದವರಲ್ಲಿ ಪತ್ನಿಯಾದ ಗಾಂಧಾರಿ ಮತ್ತು ಸಂಜಯ ಇವರನ್ನು ಉಳಿದು, ಬಹುತೇಕ ಎಲ್ಲರೂ ಮರಣ ಹೊಂದಿದ್ದಾರೆ, ತನ್ನವರು ಎಂಬುವವರು ಯಾರೂ ಉಳಿದಿಲ್ಲ.
ಅನಾಥನಂತಾದ ದೃತರಾಷ್ಟ್ರ ಮತ್ತು ಗಾಂಧಾರಿಯನ್ನು, ಧರ್ಮರಾಯ ತನ್ನ ಅರಮನೆಗೆ ಕರೆದ್ಯೊದು ಅವರಿಗೆ ಊಟ ಉಪಚಾರ ಮಾಡುತ್ತಿದ್ದಾನೆ.
ತೀರ್ಥಯಾತ್ರೆ ಮುಗಿಸಿ ಹಿಂತಿರುಗಿದ ವಿದುರ ಶೋಕದಲ್ಲಿರುವ ದೃತರಾಷ್ಟ್ರನಿಗೆ ನಮಸ್ಕರಿಸಿ, ಒಂದರಡು ಸಾಂತ್ವನದ ಮಾತು ಹೇಳಿ ಬರೋಣ ಅಂತ.., ವಿದುರ ದೃತರಾಷ್ಟ್ರನಲ್ಲಿಗೆ ಬಂದ.
ವಿದುರ ಬಂದಾ ಅಂದ್ರೆ, ದುರುಳರ ಪಾಲಿಗೆ ಯಮನು ಬಂದಂತೆಯೇ.! ಏನೋ ಹಾಗೇಯೇ ಬಂದು ಅಣ್ಣನಿಗೆ ನಾಲ್ಕು ಸಾಂತ್ವನದ ಮಾತು ಹೇಳಿ ಹೋಗುವನಲ್ಲ. ನಿಷ್ಟೂರವನ್ನು ಕಟ್ಟಿಕೊಂಡರೂ ಚಿಂತೆಯಿಲ್ಲ, ಹೇಳಬೇಕಾದದ್ದನ್ನು ನೇರವಾಗಿ ಹೇಳಿಯೇ ತೀರುವುದು ವಿದುರನ ಸಹಜ ಗುಣ.
|ದೃತರಾಷ್ಟ್ರ - ವಿದುರನ ನಡುವಿನ ಸಂಭಾಷಣೆ|
ವಿದುರ ಅಣ್ಣನಾದ ದೃತರಾಷ್ಟ್ರನಲ್ಲಿ ಬರುವ ವೇಳೆಯಲ್ಲಿ, ದೃತರಾಷ್ಟ್ರ ಊಟಕ್ಕೆ ಕುಳಿತಿದ್ದ. ಇನ್ನೇನು ಅನ್ನದ ತುತ್ತು ಕೈಯಿಂದ ಬಾಯಿಗೆ ಹೋಗಬೇಕು, ಅಷ್ಟರಲ್ಲಿ.....
ವಿದುರ:- ಅಣ್ಣಾ, ಊಟಕ್ಕೆ ಕುಳಿತಿದ್ದೀಯ, ಇನ್ನೂ ಬದುಕ ಬೇಕೆಂಬ ಆಸೆ ಇದೆಯೇ? ನೀನು ಈಗ ತಿನ್ನುತ್ತಿರುವ ಅನ್ನ ಯಾರದು? ಗೋತ್ತೋ.?
ನೀನು, ಯಾರನ್ನು ದ್ವೇಷ ಮಾಡಿ, ಅವರ ಸಂಪತ್ತು , ಸರ್ವಸ್ವವನ್ನೂ ಕಿತ್ತುಕೊಂಡು ಅವರನ್ನು ಸರ್ವನಾಶ ಮಾಡಲು ಹೊರಟಿದ್ದೆಯೋ, ಅವರೇ ಇಂದು ನಿನಗೆ ಅನ್ನ ನೀಡುತ್ತಿದ್ದಾರೆ, ಗೊತ್ತಿದೆ ತಾನೇ!
ಅಣ್ಣ , ಪಾಂಡವರು ವನವಾಸ, ಅಜ್ಞಾತ ವಾಸ ಮುಗಿಸಿ ಬಂದ ಸಮಯದಲ್ಲಿ ಒಂದು ದಿನ ರಾತ್ರಿ ನಿದ್ದೆ ಬರುತ್ತಿಲ್ಲ, ಏನಾದರೂ ನಾಲ್ಕು ವೇದಾಂತದ ಮಾತು ಹೇಳಯ್ಯ ವಿದುರ ಎಂದದ್ದು ಜ್ಞಾಪಕ ಇದೆಯೇ.?
ನಾನು ಹಲವಾರು ರೀತಿಯ ಉಪದೇಶ ನೀಡಿದೆ, ಯಾವುದಕ್ಕೂ ಸೊಪ್ಪು ಹಾಕಲಿಲ್ಲ, ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಟ್ಟೆ ಅಷ್ಟೇ.
ಅಂದು ನೀನು ಯಾರ ಕೈಯಲ್ಲಿ ರಾಜ್ಯವನ್ನು ಕೊಡಲು ಹೊರಟಿದ್ದೆ..? ದುರ್ಯೋಧನ, ದುಶ್ಯಾಸನ, ಕರ್ಣ, ಶಕುನಿ ಮುಂತಾದವರು.‌ ಅವರ ನಡೆ ನುಡಿಯ ಬಗ್ಗೆ ಪರಿಪರಿಯಾಗಿ ವಿವರಿಸಿ ಹೇಳಿದೆ, ಊಹೂಃ ಅದೆಲ್ಲಾ ನಿನ್ನ ತಲೆಗೆ ಹತ್ತಲೇ ಇಲ್ಲ.
ತಂದೆ ಇಲ್ಲದ ಪಾಂಡವರಿಗೆ ಅನ್ಯಾಯ ಮಾಡಬೇಡ, ರಾಜ್ಯದ ಸ್ವಲ್ಪ ಭಾಗವನ್ನಾದರೂ ಕೊಡು, ಅವರು ನಿನ್ನ ತಂಟೆಗೆ ಬರುವುದಿಲ್ಲ, ಅವರ ಪಾಡಿಗೆ ಅವರು ತೆಪ್ಪಗಿರುತ್ತಾರೆ ಎಂದೆ. ನನ್ನ ಮಾತು ಕೇಳಿದೆಯಾ.?
ನಿನಗೆ ಪಾಂಡವರ ಬಗ್ಗೆ ಕರುಣೆ ಇಲ್ಲ, ಮೊದಲಿಂದಲೂ ದಾಯಾದಿ ಮತ್ಸರ. ಆದರೆ, ಇಂದು ಯುಧಿಷ್ಟಿರನನ್ನು ನೋಡು..!
ಪಾಂಡವರು, ನಿನ್ನಿಂದ, ನಿನ್ನ ಮಕ್ಕಳಿಂದ ಅನುಭವಿಸಿದ ಕಷ್ಟಗಳು ಒಂದೆ,ಎರಡೆ? ಅಂದು ಎಲ್ಲವನ್ನು ತಿಳಿದೂ ಸುಮ್ಮನಿದ್ದೆ. ಎಲ್ಲ ಕಷ್ಟಗಳು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಪಾಂಡವರು, ಇಂದು ನನ್ನ ದೊಡ್ಡಪ್ಪ ಮಕ್ಕಳನ್ನು ಕಳೆದುಕೊಂಡ ನೋವಿನಲ್ಲಿ ಕುಗ್ಗಿ ಹೋಗಿದ್ದಾನೆ.
ನಿನ್ನನ್ನು ತಂದೆಯ ಸಮಾನನಾದವನು, ಎಂಬ ಅಭಿಮಾನದಿಂದ ನಿನಗೆ ಊಟ ಉಪಚಾರಗಳನ್ನು ನಿರ್ವಂಚನೆಯಿಂದ ಉಪಚರಿಸುತ್ತಿದ್ದಾನೆ.
ನೀನು ಪಾಂಡವರಿಗೆ ಯಾವುದೇ ಉಪಕಾರ ಮಾಡದಿದ್ದರೂ, ಇಂದು ಅವರ ಅನ್ನದ ಋಣದಲ್ಲಿ ಬದುಕುತ್ತಿದ್ದೀಯ...!
ನೀನು, ಯಾರಿಗೋಸ್ಕರ, ಯಾವುದಕ್ಕೋಸ್ಕರ ಇನ್ನೂs ಬದುಕಬೇಕೆಂಬ ಚಿಂತೆ ನಿನಗೆ.
ಹೀಗೆ ವಿದುರ ಅಣ್ಣನಿಗೆ ಹಿಗ್ಗಾ ಮುಗ್ಗಾ ಜಾಡಿಸಿ, ಜನ್ಮ ಜಾಲಾಡಿದ. ದೃತರಾಷ್ಟ್ರನು ತೆಪ್ಪಗೆ ಏನನ್ನೂ ಮಾತನಾಡದೆ ಸುಮ್ಮನಿದ್ದ.
ದೃತರಾಷ್ಟ್ರನ ಕೈಯಲ್ಲಿ ಇದ್ದ ಅನ್ನದ ತುತ್ತು ಮತ್ತೆ ತಟ್ಟೆಯಲ್ಲಿ ಬಿತ್ತು....!
ಅಣ್ಣಾ, ಹೇಳಬೇಕೆನಿಸಿದ್ದನ್ನು ನೇರವಾಗಿ ಹೇಳಿದ್ದೇನೆ. ಪ್ರಾಯಶಃ, ನಾನು ಇಷ್ಟೆಲ್ಲಾ ಹೇಳಿದಮೇಲೆ ನಿನಗೆ ಅನ್ನದ ಮೇಲಿನ ಮೋಹ ಕಳೆದು, ಅನ್ನ ಬೇಡವಾಯಿತೆ?
ಬದುಕು ಸಾಕು ಎನಿಸಿತೆ?
ನನ್ನನ್ನು ಕ್ಷಮಿಸು, ಮೊದಲೇ ನೋವಿನಲ್ಲಿರುವ ನಿನಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಿ ನಿನ್ನ ಮನಸ್ಸನ್ನು ಮತ್ತಷ್ಟು ನೋಯಿಸುವ ಉದ್ದೇಶ ನನಗಿಲ್ಲ.
ಇಷ್ಟೆಲ್ಲಾ ದುರ್ಘಟನೆಗಳಿಗೆ ಕಾರಣನಾದ ನೀನು ಈಗಲಾದರೂ ಬದಲಾವಣೆ ತಂದುಕೊಂಡಿದ್ದೀಯೋ, ಇಲ್ಲವೋ ಎಂಬುದನ್ನು ತಿಳಿಯುವ ಕುತೂಹಲ ಮಾತ್ರ.
ದೃತರಾಷ್ಟ್ರ:- ಅಯ್ಯಾ, ವಿದುರ.! ನಿನ್ನ ಯಾವ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ನನ್ನಿಂದಾದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕಾಲ ಮೀರಿಹೋಗಿದೆ. ಹಾಗಾಗಿ ಮೌನ ವಹಿಸದೆ ಬೇರೇನೂ ಮಾಡಲಿ. ಈಗಲಾದರೂ ಪಶ್ಚಾತ್ತಾಪಕ್ಕೆ ಏನಾದರೂ ಪ್ರಾಯಶ್ಚಿತ್ತದ ಹಾದಿ ಇದ್ದಲ್ಲಿ ತಿಳಿಸು, ಅದನ್ನು ಚಾಚೂ ತಪ್ಪದೆ ಮಾಡಿ ಮುನ್ನಡೆಯುತ್ತೇನೆ.
ವಿದುರ :- ಯಾವಾಗ ಅನ್ನದ ಮೇಲಿನ ವ್ಯಾಮೋಹ ಹೋಯಿತೋ, ಆಗ ವೈರಾಗ್ಯ ಬಂದು, ನಿನಗೆ ಬದುಕಿನ ಅರ್ಥ ತಿಳಿದಂತಾಯಿತು.
ನೀನು ಇಲ್ಲೇ ಪಾಂಡವರ ಜೊತೆ ಇದ್ದಲ್ಲಿ, ನಿನ್ನ ಮನಸ್ಸು ಮತ್ತೆ ವ್ಯಾಮೋಹದತ್ತ ಸೆಳೆಯುವ ಪ್ರಸಂಗ ಬರಬಹುದು. ಇಲ್ಲೇ ಹೆಚ್ಚು ಕಾಲ ಉಳಿಯುವುದು ಸರಿಯಲ್ಲ. ಸಾಕು ನೀನು ಅನುಭವಿಸಿದ ಸುಖ ಮತ್ತು ಇತರರಿಗೆ ಕೊಟ್ಟ ಕಷ್ಟಗಳು. ಮೊದಲು ಇಲ್ಲಿಂದ ಜಾಗ ಖಾಲಿಮಾಡಿ ಉತ್ತರ ದಿಕ್ಕಿಗೆ ನಡೆ.
ದೃತರಾಷ್ಟ್ರ :- ಏನೂ ಮಾತನಾಡದೆ ಮೇಲೆದ್ದು, ಪತ್ನಿ ಗಾಂಧಾರಿ ಮತ್ತು ಸಂಜಯನಿಗೆ ವಾನಪ್ರಸ್ಥಕ್ಕೆ ಹೊರಡಲು ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಿದ.
ಮರುದಿನ, ದೃತರಾಷ್ಟ್ರ , ಗಾಂಧಾರಿ, ಸಂಜಯ, ಕುಂತಿಯೊಂದಿಗೆ ಉತ್ತರ ದಿಕ್ಕಿನತ್ತ ಹೊರಟ. ಅಣ್ಣನ ಜೊತೆಗೆ ವಿದುರನೂ ಹೊರಟ.
ಕೆಲವು ದಿನಗಳ (ವರ್ಷ) ನಂತರ, ಆಕಸ್ಮಿಕವಾಗಿ ಕಾಡಿನ ಕಾಡ್ಗಿಚ್ಚಿನಲ್ಲಿ ಎಲ್ಲರೂ ಸುಟ್ಟುಹೋಗಿ ಮರಣ ಹೊಂದಿದರು.
==========================
ದೃತರಾಷ್ಟ್ರ ತನ್ನ ಜೀವನದಲ್ಲಿ ಎಂದೂ ಸುಖವನ್ನು ಕಾಣಲಿಲ್ಲ.
ತಾನು ಹಿರಿಯನಾದರೂ, ಹುಟ್ಟು ಕುರುಡ ಎಂಬ ಕಾರಣದಿಂದ, ತಮ್ಮನಾದ "ಪಾಂಡು"ವಿಗೆ ರಾಜ್ಯಾಭಿಷೇಕ.
ಆಕಸ್ಮಿಕವಾಗಿ "ಪಾಂಡುವಿನ" ಮರಣದಿಂದ ರಾಜ್ಯಾಭಿಷೇಕ. ಆದರೆ,ದುಷ್ಟರಾದ ಮಕ್ಕಳು, ಶಕುನಿಯ ಕುತಂತ್ರಗಳು ಸದಾ ಕಾಲವೂ ಕಾಡುತ್ತಲಿತ್ತು.
ಕೊನೆಗೆ, ದುರುಳರಾದ ಮಕ್ಕಳ ಮೇಲಿನ ವ್ಯಾಮೋಹದಿಂದ ಸರ್ವಸ್ವವನ್ನೂ ಕಳೆದುಕೊಂಡು, ತನ್ನ ಅಂತ್ಯಕ್ಕೆ ತಾನೇ ಕಾರಣವಾದ.
ಮಾನವರಿಗೆ ಮೋಹಗಳು ಸಹಜ, ಅದು ವ್ಯಾಮೋಹಗಳ ಹಾದಿ ಹಿಡಿಯಬಾರದು ಎಂಬ ಸಾರಾಂಶದೊಂದಿಗೆ.
ಇಲ್ಲಿ ಬಳಸಿರುವ ಪದ "ಅನ್ನ" ಎಂಬುದು ಕೇವಲ ಆಹಾರವಲ್ಲ , ಎಲ್ಲ ವಸ್ತುಗಳ ಮೇಲಿನ ವ್ಯಾಮೋಹ ಎಂಬ ಅರ್ಥ.
ಒಬ್ಬ ವ್ಯಕ್ತಿಗೆ 'ಅನ್ನದ' ಋಣ ತೀರಿತು ಎಂದರೆ, ಇಹಲೋಕದ ವ್ಯಾಮೋಹಗಳಿಂದ ಮುಕ್ತಿ ಹೊಂದಿ, ಬದುಕಿನ ಅಂತ್ಯಕ್ಕೆ ನಾಂದಿ ಎಂಬುದೇ ಸತ್ಯ.
******


ಭಗವಂತನಅವತಾರಸಮಾಪ್ತಿ


ಇವತ್ತು ನಾವು  ಕಾರಿನಲ್ಲಿ ಹೋಗುವಾಗ ಭಾಗವತ ವಿಷಯವನ್ನು ಚರ್ಚೆ ಮಾಡುತ್ತಾ ಹೋಗತಾ ಇದ್ವಿ  ,  ಕೆಲವು ಭಾಗವತದ  ವಿಷಯಗಳು  ಕುತುಹಲ ಭರಿತವಾಗಿವೆ...

ಆ ಭಗವಂತನ ಹುಟ್ಟು ಎಷ್ಟು ರೋಚಕವಾಗಿತ್ತೋ  ಅಷ್ಟೇ ರೋಚಕ ಅವನ ಅವತಾರ ಸಮಾಪ್ತಿ ... ಮುಯ್ಯಿಗೆ ಮುಯ್ಯಿ  ಎಂಬ ಶಬ್ದ ಎಷ್ಟು ಅರ್ಥ ಪೂರಿತವಾಗಿದೆ ಎಂದರೆ  ಭಗವಂತನ ಬಾಯಲ್ಲಿ ಈ ಶಬ್ಧ  ಬಂದಿದ್ದಕ್ಕೆ  ಯಾಕೆ  ಬಂತು ಈ ಶಬ್ಧ ಹೇಳುತ್ತೇನೆ ಕೇಳಿ....
 ಯುದ್ಧ ಮುಗಿದ ಮೇಲೆ   ಶ್ರೀ ಕೃಷ್ಣ ಸಹಿತ ಪಾಂಡವರು   ದೃತರಾಷ್ಟ್ರನನ್ನು  ಕಂಡು ಬರಲು ಹಸ್ತಿನಾವತಿಗೆ ಬರತಾರೆ , ದುಃಖದಲ್ಲಿದ್ದ ದೃತರಾಷ್ಟ್ರನನ್ನು   ಕೃಷ್ಣ ಸಮಾಧಾನ ಪಡಿಸಿ  ಎಲ್ಲರನ್ನೂ ಕರೆದುಕೊಂಡು  ಯುದ್ಧ ಭೂಮಿಗೆ ಬಂದಾಗ ಅಲ್ಲಿಯ ಪರಿಸ್ಥಿತಿ ಘನಘೋರ ವಾಗಿತ್ತು , ತಂದೆಯನ್ನು ಕಳೆದುಕೊಂಡ ಅಳುವ ಮಕ್ಕಳು ,  ಗಂಡನನ್ನು ಕಳೆದುಕೊಂಡ ಸ್ತ್ರೀಯರ  ಘೋರ ಆರ್ತನಾದ , ಮಕ್ಕಳನ್ನು ವೃದ್ಧ ತಂದೆತಾಯಿಯ ಕೂಗು   ಕೈ ಕಾಲು ಕಳೆದು ಕೊಂಡ ಸೈನಿಕರ  ನೋವಿನ ಕೂಗು  ಇದನ್ನೇಲ್ಲ ಕೇಳಿದ ಗಾಂಧಾರಿಗೆ  ದುಃಖ ತಡೆಯಲಾರದೆ  ಶ್ರೀಕೃಷ್ಣನಿಗೆ " ಕೃಷ್ಣ ಈ ಲಕ್ಷಾಂತರ ಹತಭಾಗಿನಿಯರ ದುಃಖಕ್ಕೆ ನೀನೆ ಕಾರಣ  , ನೀನು ಮನಸ್ಸು ಮಾಡಿದ್ದರೆ ಈ ಯುದ್ಧ ತಪ್ಪಿಸಬಹುದಿತ್ತು , ಆದರೆ ನೀನು  ಪಾಂಡವರಿಗೆ  ಯುದ್ಧ ಮಾಡುವಂತೆ ಪ್ರೇರೆಪಿಸಿ  ಕುರುಕುಲದವರು ತಮ್ಮತಮ್ಮಲ್ಲೇ ಹೊಡದಾಡಿ ಸಾಯುವಂತೆ ಮಾಡಿದೆ .ಅವರ ಪತ್ನಿಯರ ವೈಧವ್ಯಕ್ಕೆ ನೀನೇ ಕಾರಣ ಅದಕ್ಕೆ  ನಿನ್ನ ಯಾದವ ಕುಲದವರೂ ಹೀಗೆ ಪರಸ್ಪರ ಹೊಡೆದಾಡಿ ಸಾಯಲಿ , ಯಾದವರ ಪತ್ನಿ ಯರೂ  ಸಹ  ನನ್ನ ಸೊಸೆಯಂದಿರಂತೆಯೇ ವೈದವ್ಯ ವನ್ನು ಪಡೆಯಲಿ " ಅಂತ   ಭಗವಂತನಿಗೇ ಶಾಪವಿತ್ತಳು.   ಇದು ಕೂಡಾ ಭಗವಂತನ  ಒಂದು ಆಟ...‌

ಮುಂದೆ ಭಗವಂತನ ಯಾದವರ ಕುಲ ನಾಶಕ್ಕೆ  ಕಾರಣ ಬೇಕಲ್ಲ  ಯಾದವಿ ಕಲಹ ಆಗಬೇಕು , ಗಾಂಧಾರಿಯ ಶಾಪ  ಫಲಿಸಬೇಕು  ಅದಕ್ಕೆ ಕಾಲ ಹೇಗೆ ಕೂಡಿಬಂತು ಅಂದರೆ  ತರುಣ ಯಾದವರೆಲ್ಲ ಸೇರಿ ಮಹಾತೀರ್ಥ ಬಂಡಾರಕ ಕ್ಷೇತ್ರಕ್ಕೆ ಬಂದಿದ್ದರು . ಅಲ್ಲಿಗೆ  ವಿಶ್ವಾಮಿತ್ರ , ಕಣ್ವ , ನಾರದ ಮೊದಲಾದ ಮುನಿಗಳು ಬಂದಿದ್ದರು . ಯೌವ್ವನದ ಉನ್ಮತ್ತದಲ್ಲಿದ್ದ  ಯಾದವ ತರುಣರು ಮುನಿಗಳಿಗೆ ಉಪಹಾಸ ಮಾಡುವ ಸಲುವಾಗಿ  ಜಾಂಬವತಿ ಪುತ್ರ ಸಾಂಬನಿಗೆ  ಸೀರೆ ಉಡಿಸಿ , ಹೊಟ್ಟೆಯ ಮೇಲೆ ಒನಕೆಯನ್ನಿಟ್ಟು  ಮೇಲೆ ಸೀರೆಯ ಸೆರಗು ಮರೆ ಮಾಡಿ  ಋಷಿಗಳ  ಬಳಿಗೆ  ಬಂದು , ಸ್ತ್ರೀ ರೂಪಿಯಾದ ಸಾಂಬನನ್ನು ತೋರಿಸಿ  * ಈ ಸ್ತ್ರೀ ಗರ್ಭಿಣಿ ಯಾಗಿದ್ದಾಳೆ  , ಇವಳು ಪ್ರಸವಿಸಬಹುದು . ಹೆಣ್ಣೋ , ಗಂಡೋ  ಅಂತ , ಆಗ ವಿಶ್ವಾಮಿತ್ರರು ವಿಚಾರ ಮಾಡಿ  *  ಇವಳು  ಹೆರುವುದು ಹೆಣ್ಣು ಅಲ್ಲ ಗಂಡು ಅಲ್ಲ  , ನಿಮ್ಮ ಯಾದವ ಕುಲವಿಧ್ವಂಸಗೊಳಿಸುವ ಒನಕೆಯನ್ನ  * ಎಂದು ಹೇಳಿದರು.‌‌..

ಆಗ ಉಗ್ರಸೇನನಿಗೆ ಗಾಭರಿಯಾಯಿತು  ಆ ಒನಕೆಯನ್ನ  ಅರೆದು ಪುಡಿ ಮಾಡಿ ಸಮುದ್ರದಲ್ಲಿ ಚೆಲ್ಲಿಸಿದ..‌...
 ಆ ಚೆಲ್ಲಿದ ಪುಡಿಯಿಂದ  ಸಮುದ್ರದ ದಂಡೆಗುಂಟ  ಗಲಗಿನ ಜಾತಿಯ ಹುಲ್ಲು ಬೆಳೆಯಿತು ಅದೆಷ್ಟು ಗಟ್ಟಿಯಿತ್ತು ಎಂದರೆ ಕಬ್ಬಿಣದ ಷ್ಟೇ 
ಅಷ್ಟೋತ್ತಿಗಾಗಲೆ ಭಗವಂತನ ಅವತಾರ ಸಮಾಪ್ತಿಗೆ ಬಂದಿತ್ತು . ಎಲ್ಲ ದೇವತೆಗಳು ವಾವುದೇವರನ್ನ  ಭಗವಂತನೆಡೆಗೆ  ದೂತನಾಗಿ ಕಳುಹಿಸಿದರು  ರಾಕ್ಷಸರ ಸಂಹಾರದಿಂದ  ಅರ್ಧಭೂಭಾರ  ಇಳಿದಿದೆ ,  ಇನ್ನರ್ಧ ಯಾದವರ ನಾಶದಿಂದ ಇಳಿಯಬೇಕಾಗಿದೆ . ತಮ್ಮ ಕಾರ್ಯ ಮುಗಿಸಿ ಬೇಗನೆ ಆಗಮಿಸಲು  ದೇವತೆಗಳ ಆಗ್ರಹ , 

 ಬಲರಾಮ , ಶ್ರೀಕೃಷ್ಣ ಸಹಿತ  ಎಲ್ಲ ಯಾದವರು ಪ್ರಭಾಸ ಕ್ಷೇತ್ರಕ್ಕೆ  ಬಂದಿದ್ದರು .  ಊಟಮುಗಿಸಿ ಯಥೇಚ್ಛವಾಗಿ ಮದ್ಯಪಾನ  ಮಾಡಿದರು . ಆಗ ಮಾತು ಮಾತಿನಲ್ಲೇ ಶುರುವಾದ ಕಲಹ  ವಿಕೋಪಕ್ಕೆ ಹೋಗಿ  ಕೈಕೈಮಿಲಾಯಿಸಿದರು , ಅಲ್ಲಿಯೇ  ಸಮುದ್ರ ದಂಡೆಗುಂಟ ಬೆಳೆದಿದ್ದ  ಗಲಗಿನ  ಹುಲ್ಲನ್ನು ಕಿತ್ತು ಹೊಡೆದಾಡಲಾರಂಭಿಸಿದರು ,  ಶ್ರೀಕೃಷ್ಣ ,ಬಲರಾಮ  ಶಾಂತಿಗಾಗಿ ಮಾಡಿದ ಪ್ರಯತ್ನ ವ್ಯರ್ಥ ವಾದವು.  ಕೊನೆಗೆ ಹೊಡೆದಾಡಿ ಒಬ್ಬ ಯಾದವರು ಬದುಕಿ ಉಳಿಯಲಿಲ್ಲ ..

ಬಲರಾಮನ ಅವತಾರ ಸಮಾಪ್ತಿಯಾಗಿ  ಮಹಾ ಸರ್ಪವಾಗಿ ಸಮುದ್ರದಲ್ಲಿ  ಸೇರಿದನು.....

ಇದನ್ನೇಲ್ಲ ನೋಡಿದ ಕೃಷ್ಣ ಯೋಗಯುಕ್ತನಾಗಿ ಕುಳಿತಿರುವಾಗ  , ಒನಕೆಯನ್ನ ಪುಡಿ ಮಾಡಿ ಸಮುದ್ರಕ್ಕೆ ಹಾಕಿದಾಗ ಆ ಪುಡಿಯನ್ನ ಒಂದು ಮಿನು ನುಂಗಿರುತ್ತದೆ  ,  ಆ ಮಿನನ್ನು ಜಲಗಾರ   ಜರಾ ಅನ್ನುವವನಿಗೆ ಕೊಟ್ಟಿರುತ್ತಾನೆ , ಆ ಮಿನಿನ ಹೊಟ್ಟೆ ಸಿಳಿದಾಗ  ಸಿಕ್ಕಂತಹ ಲೋಹದಿಂದ  ಬಾಣಗಳನ್ನು ಮಾಡಿಸಿದ ...

 ಜರಾ ಅನ್ನುವವವ ಒಬ್ಬ ಬೇಟೆಗಾರ  ಅವನ ಬೇಟೆಗಾಗಿ ಬಿಟ್ಟಂತಹ ಬಾಣ  ಶ್ರೀಕೃಷ್ಣನ ಕಾಲಿಗೆ ಬಂದು ಬಡೆಯುತ್ತದೆ , ಆಗ  ಬೇಟೆಗಾರನಿ ಬಹಳ ಪಾಶ್ಚಾತ್ತಾಪದಲ್ಲಿ  ನೊಂದುಕೊಳ್ಳತಾನೆ 
ಆಗ ಭಗವಂತ ಹೇಳುತ್ತಾನೆ 
 * ಕಾರ್ಯ ಕಾರಣವಿಲ್ಲದೆ ಯಾವುದೂ ಆಗದು ,  ವಿಧಿ ನಿಯಮವನ್ನು ಮೀರಲು ಯಾರಿಗೂ ಸಾದ್ಯವಿಲ್ಲ .
 ರಾಮಾವತಾರದ  ವಾಲಿ ನೀನು , ನಾನು ಸುಗ್ರೀವನ ಪಕ್ಷ ವಹಿಸಿ  ಮರೆಯಲ್ಲಿದ್ದು ನಿನಗೆ ಬಾಣ ಬಿಟ್ಟಿದ್ದೆ  , ಆ ಕೃತ್ಯದ ಮುಯ್ಯವು  ಇದೀಗ ನನಗೆ ದೊರೆಯಿತು  . ಮುಯ್ಯಿಗೆ ಮುಯ್ಯಿ ತೀರಿತು ,ಪಶ್ಚಾತ್ತಾಪ ಪಡಬೇಡ  ನಿನಗೆ ಸದ್ಗತಿ ದೊರೆಯುತ್ತದೆ ಅಂತ ಹೇಳಿ ... ಭಗವಂತ ತನ್ನ ಅವತಾರ ಮಾಡಿ ವೈಕುಂಠಕ್ಕೆ ನಡೆದ....‌
******
 

ಮಹಾಭಾರತ : ಗ್ರಂಥ ಪರೀಕ್ಷಾ : ಭಾಗ -೦೧.

ನಾರಾಯಣಂ ನಮಸ್ಕೃತ್ಯ ನರಂಚೈವ ನರೋತ್ತಮಮ್ | ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||
ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ | ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್||
ಮಹತ್ವೇಚ ಗುರುತ್ವೇಚ ಧ್ರಿಯಮಾಣಂ ಯತೋಽಧಿಕಮ್| ಮಹತ್ತ್ವಾತ್ ಭಾರವತ್ತ್ವಾಚ್ಚ ಮಹಾಭರತಮುಚ್ಯತೇ ||

ಮಹಾಭಾರತವು ಸ್ಮೃತಿ,ಇತಿಹಾಸ,ಕಾವ್ಯ ಎಲ್ಲವೂ ಆಗಿರುವದರಿಂದ  ಪ್ರಭುಸಮ್ಮಿತ (ಇದಮಿತ್ಥಮ್ ಎಂಬುದಾಗಿ ಮಾರ್ಗದರ್ಶನ ಮಾಡುವ),ಮಿತ್ರಸಮ್ಮಿತ (ಸ್ನೇಹಿತರ ಹಿತನುಡಿಗಳಂತೆ) ಹಾಗೂ  ಕಾಂತಸಮ್ಮಿತ (ಪ್ರೀತಿಕರಳಾದ ಪತ್ನಿಯ ಮಾಧುರ್ಯದಿಂದ ಕೂಡಿದ ನೀತಿಮಾತುಗಳುಳ್ಳ) ಜನರಿಗೆ ಶ್ರೇಯಸ್ಸನ್ನು ಬೋಧಿಸುವದರಲ್ಲಿ ಅದ್ವಿತೀಯ ಗ್ರಂಥವೆನಿಸಿದೆ. ವೇದೋಪನಿಷತ್ತುಗಳ  "ಏಕಂ ಸತ್" ಎಂಬ ಪ್ರತಿಪಾದ್ಯವಾದ್ದರಿಂದ ಇದಕ್ಕೆ ಪಂಚಮವೇದವೆಂದೂ ಹೆಸರು.

ಈಗಿರುವ ಮುಖ್ಯ ಗ್ರಂಥದಲ್ಲಿ ಒಂದುಲಕ್ಷಕ್ಕಿಂತಲೂ ಹೆಚ್ಚು ಶ್ಲೋಕಗಳು   ಹದಿನೆಂಟು (೧೮) ಪರ್ವಗಳೂ  ,ಎರಡುಸಾವಿರ ನೂರೊಂಭತ್ತು (೨೧೦೯) ಅಧ್ಯಾಯಗಳಲ್ಲಿ ವಿಸ್ತೃತವಾಗಿದೆ.  ಇದಕ್ಕೆ ಅನುಬಂಧಿಯಾಗಿ ಶ್ರೀಕೃಷ್ಣನ ವಂಶಹಾಗೂ ಕಥೆಯನ್ನು ಹೇಳುವ ಹರಿವಂಶ ಎಂಬ ಖಿಲಗ್ರಂಥವೂ ಸೇರಿದೆ. 
ಧರ್ಮೇ ಚ ಅರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ | ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್||
ನಾಲ್ಕು ಪುರುಷಾರ್ಥಗಳು ಧರ್ಮವೂ, ಧರ್ಮದಿಂದ ಗಳಿಸಿದ ಅರ್ಥವೂ, ಇಂಥ ಅರ್ಥಗಳಿಂದ ಧರ್ಮಮಾರ್ಗದಲ್ಲಿ ಮಾಡುವ ಕಾಮ್ಯಕರ್ಮಗಳೂ (ಇಲ್ಲಿ "ಚ" ಎಂಬುವದು ಪುನರುಕ್ತವಾಗಿರುವದು ಒಂದಕ್ಕೊಂದು ಅನುಬಂಧಿಯಾಗಿ ಮೋಕ್ಷದಲ್ಲಿ ಕೂಡಿಕೊಳ್ಳುವ ಸಾಧನ ಸೂಚನೆಯೇ ಹೊರತು ಯಾವುದೇ ರೀತಿಯ ಶಾಸ್ತ್ರೀಯ ಅಥವಾ ವ್ಯಾಕರಣ ದೋಷವಿಲ್ಲ) ಇವುಗಳನ್ನು  ಕುರಿತಾದ ಉತ್ಕೃಷ್ಟ ನಿರೂಪಣೇ. ಈ ಗ್ರಂಥದಲ್ಲಿ ಏನೇನಿದೆಯೋ ಅದು ಎಲ್ಲಾ ಕಡೆಯಲ್ಲೂ ಪ್ರಚಲಿತವಾಗಿದೆ. ಇಲ್ಲು ಯಾವುದು ಇಲ್ಲವೋ ಅದು ಎಲ್ಲಿಯೂ ಇಲ್ಲ ಎಂಬುದಾಗಿ ಈ ಗ್ರಂಥವೇ ಸ್ವಘೋಷಣೆ ಮಾಡಿಕೊಂಡಿರುವದರಲ್ಲಿ ಅತಿಶಯೋಕ್ತಿಯಲ್ಲ.
ಮಹಾಭಾರತವನ್ನು ಕೂಲಂಕುಷವಾಗಿ ಪರಿಶೀಲಿಸಿದರೇ ಅದರಲ್ಲಿ ಮೂರುವಿಭಾಗ ಕಂಡುಬರುತ್ತದೆ.
ಅಷ್ಟೌಶ್ಲೋಕಸಹಸ್ರಾಣಿ ಅಷ್ಟೌಶ್ಲೋಕಶತಾನಿ ಚ || 
ಈ ಶ್ಲೋಕದ ಪ್ರಕಾರ ಮಹಾಭಾರತದಲ್ಲಿ ಎಂಟುಸಾವಿರದ ಎಂಟುನೂರು ಶ್ಲೋಕಗಳಿವೆ ಎಂದು ತಿಳಿಯಬರುತ್ತದೆ. 
ಚತುರ್ವಿಂಶತಿಸಾಹಸ್ರೀಂ ಚಕ್ರೇ ಭಾರತ ಸಂಹಿತಾಯಾಂ ||
ಈ ಶ್ಲೋಕದ ಪ್ರಕಾರ ಮಹಾಭಾರತದಲ್ಲಿ ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿವೆ ಎಂದು ತಿಳಿಯಬರುತ್ತದೆ. 
ಇದಂ ಶತಸಹಸ್ರಂ ತು ಶ್ಲೋಕಾನಾಂ ಪುಣ್ಯಕರ್ಮಣಾಮ್||
ಈ ಶ್ಲೋಕದ ಪ್ರಕಾರ ಮಹಾಭಾರತದಲ್ಲಿ ನೂರು ಸಾವಿರದ ಅರ್ಥಾತ್ ಒಂದುಲಕ್ಷ ಶ್ಲೋಕಗಳಿವೆ ಎಂದು ತಿಳಿಯಬರುತ್ತದೆ. 

ಇದಕ್ಕನುಗುಣವಾಗಿ ವ್ಯಾಸರು ವೈಶಂಪಾಯನರಿಗೂ , ವೈಶಂಪಾಯನರು ಜನಮೇಜಯನಿಗೂ ಮತ್ತು ಸೂತಪುರಾಣಿಕರು ನೈಮಿಷಾರಣ್ಯದಲ್ಲಿ ವಾಸವಿದ್ದ ಋಷಿಗಳಿಗೂ ಬೋಧಿಸಿದರು ಎಂಬುದಾಗಿ ಈ ಗ್ರಂಥವನ್ನು ಮೂರು ಜನರು ಉಪದೇಶಮಾಡಿದರು ಮತ್ತು ಮೂರು ಜನರು ಉಪದೇಶ ಪಡೆದರು ಎಂಬ ವಿಷಯವೂ ಪ್ರಸಿದ್ಧವಾಗಿದೆ. ಈ ಮೂರು ಘಟ್ಟಗಳಲ್ಲಿ ಈ ಗ್ರಂಥಕ್ಕೆ ಜಯ ,ಭಾರತ ಮತ್ತು ಮಹಾಭಾರತವೆಂಬ ಮೂರು ಪ್ರಸಿದ್ಧ ಹೆಸರುಗಳೂ ಇವೆ. ಆದ್ದರಿಂದ ಈ ಗ್ರಂಥದ ವಿಕಾಸದಲ್ಲಿ ಮೂರು ಘಟ್ಟಗಳೂ ಇದ್ದಿರಬಹುದು ಎಂಬುವದು ಅಧ್ಯಯನದಿಂದಲೇ ತಿಳಿಯುವಂಥದ್ದು.

ಅಶೋಕನ ಕಾಲದಲ್ಲಿ ವಿಮಲಸೂರಿಯಿಂದ  ಅಥವಾ (ವಿಮಲಕೀರ್ತಿ ಇದ್ದರೂ ಇರಬಹುದು) ಸಂಗ್ರಹವಾದ ಮಹಾಭಾರತವು ದುರ್ಯೋಧನಪರವಾಗಿರುವಂಥದ್ದು  ಕಂಡುಬರುತ್ತದೆ.ಇದರ ಪ್ರಭಾವ ಜೈನ ಮತದ ಹರಿವಂಶ ಪುರಾಣದಲ್ಲಿ ಕಂಡುಬರುತ್ತದೆ.ಜೈನರ ಈ ಗ್ರಂಥದ ಕಥಾ ನಾಯಕನೂ ಶ್ರೀಕೃಷ್ಣನೇ. ಆದರೇ ಇವನು ಭಾಗವತನೂ ಅಲ್ಲ  ಭಗವಂತನೂ ಅಲ್ಲ ,ಜೈನರ ಸುಪ್ರಸಿದ್ಧ ತೀರ್ಥಂಕರನಾದ ನೇಮಿನಾಥನ ಪರಂಪರೆಗೆ ಸೇರಿದವನು.ಮತ್ತು ಈ ಕೃಷ್ಣನ ಕಥೆಗಳು ಮಹಾಭಾರತಕ್ಕಿಂತ ಹೆಚ್ಚು ಭಿನ್ನವಾಗಿಲ್ಲದಿದ್ದರೂ ಕೌರವ ಪಾಂಡವರ ಯುದ್ಧಕಿಂತಲೂ ಕೃಷ್ಣ,ಬಲರಾಮ ಮತ್ತು ಜರಾಸಂಧನ ಯುದ್ಧವೇ ಅತ್ಯಂತ ಮಹತ್ವವುಳ್ಳದ್ದು ಎಂಬುದಾಗಿ ಪ್ರತಿಬಿಂಬಿತವಾಗಿದೆ.ಮತ್ತೂ ಆಘಾತಕಾರಿಯಾದ ಅಭಿಪ್ರಾಯ ಏನೆಂದರೇ ಜೈನರ ಹರಿವಂಶಪುರಾಣದಲ್ಲಿ ಕಂಡುಬರುವ ಈ ಶ್ಲೋಕ.
ಬದ್ಧಾಯುಷ್ಕತಯಾ ಮೃತ್ವಾ ತೃತೀಯಾಂ ಪೃಥಿವೀಮಿತಃ || ೪೨.೬೩|| ಎಂಬ ಶ್ಲೋಕದಲ್ಲಿ ಶ್ರೀಕೃಷ್ಣನು ಜರ ಎಂಬ ಬೇಡನಿಂದ ಹತನಾಗಿ ತಾನು ಮಾಡಿದ ಕರ್ಮಕ್ಕನುಗುಣವಾಗಿ ವಾಲುಕಾಪ್ರಭ ಎಂಬ  ಮೂರನೆಯ ನರಕಲೋಕಕ್ಕೆ ಹೋದನು ಎಂಬ ಉಲ್ಲೇಖವಿದೆ.ಈ ಶ್ಲೋಕವು ಈಗಿನ ಜೈನ ಹರಿವಂಶಪುರಾಣದಲ್ಲೂ ಕಂಡುಬರುತ್ತದೆ.ಈ ಮೂರನೆಯ ನರಕಲೋಕವೇನೆಂದು ಅವರ ತತ್ತ್ವಾರ್ಥ ಸೂತ್ರದಲ್ಲಿ ಕಂಡುಬರುತ್ತದೆ.

ತತ್ತ್ವಾರ್ಥ ಸೂತ್ರ :- ೦೧.೨೧ : ಭವಪ್ರತ್ಯಯೋಽವಧಿರ್ದೇವನಾರಕಾಣಮ್ || ೨೧||

ಮನುಷ್ಯನು ತನ್ನ ಹುಟ್ಟಿನಿಂದ ತಾನು ಮುಂದೆ ಏನನ್ನು ಅನುಭವಿಸುತ್ತಾನೆ ಎಂಬ ವಿಷಯ ಅತೀಂದ್ರಿಯ ಮತ್ತು ಅಗ್ರಾಹ್ಯವಾದರೂ ಅವನ ಕರ್ಮಕ್ಕನುಗುಣವಾಗಿ ದೇವಲೋಕವನ್ನೋ ನರಕವನ್ನೋ ಸೇರುತ್ತಾನೆ ಎಂಬುದಾಗಿ ದೂರದರ್ಶಿಗಳು ಹೇಳುತ್ತಾರೆ. 

ಸೂತ್ರಾರ್ಥಭಾಷ್ಯ :- ರತ್ನಶರ್ಕರಾವಾಲುಕಾಪಂಕಧೂಮತಮೋಮಹಾತಮಃಪ್ರಭಾ | ಘನಾಂಬುವಾತಾಕಾಶಪ್ರತಿಷ್ಠಿತಾಃ ಸಪ್ತಾಧೋಽ‍ಧಃ || ೦೩.೦೧||

ರತ್ನ ಶರ್ಕರಾ ವಾಲುಕಾ ಪಂಕ ಧೂಮ ತಮಃ ಮಹಾತಮಃ ಎಂಬ ಏಳು ಅಧೋಲೋಕಗಳು ಅರ್ಥಾತ್ ನರಕಗಳು ಪೃಥ್ವಿಯ ಒಳಗೆ ಅರ್ಥಾತ್ ಘನ,ಜಲ,ವಾಯು ಮತ್ತು ಆಕಾಶಗಳಿಂದ ಅವೃತವಾದ ಭೂಮಿಯ ಒಳಭಾಗದಲ್ಲಿದೆ
.
ಇಂಥ ಹಾಸ್ಯಾಸ್ಪದ ಅಭಿಪ್ರಾಯವು ಮೂಲ ಭಾರತದಲ್ಲಿ ಹಗಲುಗನ್ನಡಿಯನ್ನು ಹಿಡಿದು ನೋಡಿದರೂ ಕಂಡುಬರುವದಿಲ್ಲ.ಆದರೂ ಈ ಪ್ರಕ್ಷಿಪ್ತಕ್ಕೆ ಕಾರಣವೇನೋ ಅಧ್ಯಯನಕಾರರೇ ತಿಳಿಸಬೇಕು.
ಸುಮಾರು ೧೨೦೦ ವರ್ಷಗಳ ಹಿಂದೆ, ಅರ್ಥಾತ್ ೮ ನೇ ಶತಮಾನದಲ್ಲಿ  ವೈಷ್ಣವರು ದುರ್ಯೋಧನಪರವಾಗಿದ್ದ ಹಾಗೂ ಶ್ರೀಕೃಷ್ಣನಿಂದಾ ಉಲ್ಲೇಖಗಳನ್ನು ಮುಕ್ತಗೊಳಿಸಿ ಪಾಂಡವಪರ ಮಹಾಭಾರತವನ್ನು ದೃಢಪಡಿಸಿದರು.ಈ ಕಾಲದಲ್ಲಿ ಅರ್ಥಾತ್ ೮ ನೇ ಶತಮಾನದಲ್ಲಿ ಶೈವರಿಗೂ ವೈಷ್ಣವರಿಗೂ ಮನಸ್ತಾಪ ಇದ್ದಿತ್ತು ಎಂಬುವದು ಇತಿಹಾಸದಲ್ಲಿ ಉಲ್ಲೇಖವಿದೆ. . ಈಗಿರುವ ಮಹಾಭಾರತದ ಶ್ಲೋಕಗಳೆಲ್ಲವೂ ವ್ಯಾಸಕೃತವೇ ಎಂಬುದಾಗಿ ನಾವೇನೂ ವೀರಪ್ರತಿಜ್ಞೆಯನ್ನು ಮಾಡುವದಿಲ್ಲ.ಎಂಟನೇ ಶತಮಾನದ ನಂತರ  ಮಹಾಭಾರತವನ್ನು ದೃಢಪಡಿಸಿದ ಪಂಡಿತೋತ್ತಮರು ಜೈನರ ಮೂಲದೇವ ಪುರುಷನಾದ ವೃಷಭದೇವನ ಗುರುವಾದ ಭಗವಾನ್ ಶ್ರೀ ಶಂಕರನ ನಿಂದನೆ ,ಹಾಗೂ ಶೈವಮತ ನಿಂದನೆ ಇನ್ನೂ ಮತ್ತಷ್ಟು ದ್ವೇಷಯುಕ್ತವಾದ ಪ್ರಕ್ಷೇಪಗಳನ್ನು ಉಂಟುಮಾಡಿದರು ಎಂದು ಹೇಳಲು  ತದನಂತರ ಬಂದ ಮಹಾಭಾರತ,ಪುರಾಣಗಳಲ್ಲಿ ಕಾಣಸಿಗುವ ಪ್ರಕ್ಷೇಪಗಳೇ ಸಾಕ್ಷಿ. ಜೈನ ಹರಿವಂಶಪುರಾಣದಲ್ಲಿ ಕಾಣಬರುವ ಮೇಲೆ ಹೇಳಿದ ಹಾಸ್ಯಾಸ್ಪದ  ಪ್ರಕ್ಷೇಪಕ್ಕೆ ಎದಿರೇಟು ಎಂಬಂತೆ ಎಂಟನೆಯ ಶತಮಾನದಲ್ಲಿ ರಚಿತವಾದ ವೈಷ್ಣವಪರವಾದ ಕಾವ್ಯರೂಪದಲ್ಲಿದ್ದ   " ಭಾರತ "  ಅಥವಾ " ಕೃಷ್ಣ-ಪಾಂಡವ ಕಥಾ"  ಎಂಬ ಗ್ರಂಥದಲ್ಲೂ  ಇಂಥದ್ಧೇ ಹಾಸ್ಯಾಸ್ಪದ  ಪ್ರಕ್ಷೇಪಗಳು ಕಂಡುಬರುತ್ತದೆ. ಈ ಪ್ರಕ್ಷೇಪಗಳೂ ವ್ಯಾಸಕೃತಭಾರತಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನೇ ದ್ವೇಷರೂಪದಲ್ಲಿ ಹೊರಹಾಕುತ್ತಲೇ ಬಂದಿವೆ   ಇದರ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ವಿಸ್ತಾರವಾಗಿ ತಿಳಿಸಿಕೊಡುತ್ತೇನೆ.
ಹರಿ ಓಮ್ ತತ್ ಸತ್ 
ಸತ್ಯಪ್ರಕಾಶ ಸೀತಾರಾಮ.
ಮುಂದಿನ ಭಾಗ :-
ಮಹಾಭಾರತ : ಗ್ರಂಥ ಪರೀಕ್ಷಾ : ಭಾಗ -೦೧.

ಭಾರತ ಅಥವಾ ಕೃಷ್ಣ-ಪಾಂಡವಕಥಾ .
*********


ರಥದ ತುದಿಯಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ - ಕೃಷ್ಣಾರ್ಜುನರ ಮಹಾರಥ !
ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ, ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ, ಹೋಗುತ್ತಿತ್ತು.
ಪ್ರತಿಬಾರಿ ಕರ್ಣನ ಬಾಣ ತಾಗಿ, ಅರ್ಜುನನ ರಥವು ಏಳು ಅಡಿ, ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀ ಕೃಷ್ಣನು ಹೇಳುತ್ತಿದ್ದ - " ಎಷ್ಟು ವೀರಾಶಾಲಿಯಾಗಿದ್ದಾನೆ ಕರ್ಣ...!
"ಅರ್ಜುನನ ಬಾಣ ತಾಗಿ, ಕರ್ಣನ ರಥವು ಬಹಳ ದೂರ ಹಿಂದಕ್ಕೆ, ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ, ಸುಮ್ಮನೆ ಇರುತ್ತಿದ್ದ.
ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ತಿಕ್ಷ್ಣವಾಗಿ, ಕೃಷ್ಣನಿಗೆ ಹೇಳುತ್ತಾನೆ -ಓ ವಾಸುದೇವ ಕೃಷ್ಣ ಪರಮಾತ್ಮ ತಾವು ಎಂತಹ ಪಕ್ಷಬೇದ ಮಾಡುತ್ತಿದ್ದೀರಾ?
ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ,ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ, ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು "ಮಹಾವೀರ ಕರ್ಣ" ಅಂತ ಹೊಗುಳುತ್ತಿರುವುದೇಕೆ?
ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ - " ಏಯ್ ಪಾರ್ಥಾ ನಾನು ಹೇಳಿದ್ದು ಸರಿ. ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ, ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ. ಆದರೆ, ನಾವು ಇರದಿದ್ದರೆ, ನಿನ್ನ ರಥವು ಇಲ್ಲದಾಗುತ್ತಿತ್ತು. "
ಸತ್ಯವನ್ನು ಅರಿತಾಗ ಅರ್ಜುನ ತೆಪ್ಪಗಾದ. ಆದರೆ ತನ್ನ ಪ್ರತಿಭೆಯಲ್ಲಿ, ತುಂಬಾ ವಿಶ್ವಾಸ ಇಟ್ಟಿದ್ದ. ಅರ್ಜುನನಿಗೆ ಯುದ್ಧದ ಕೊನೆಯ ದಿನ ಶ್ರೀ ಕೃಷ್ಣ ನಿಂದ ಒಂದು ಸತ್ಯದ ಅರಿವಾಯಿತು.
ಸಾಧಾರಣವಾಗಿ, ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ.
ಆದರೆ , ಯುದ್ದದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ, ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ.
ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಬಸ್ಮವಾಯಿತು.
ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ. ಕೃಷ್ಣ ಹೇಳುತ್ತಾನೆ - " ಅರ್ಜುನಾ ನಿನ್ನ ರಥವು ಭೀಷ್ಮ , ಕೃಪಾಚಾರ್ಯ, ದ್ರೋಣ, ಕರ್ಣ ಮೊದಲಾದ ಅತಿರಥರುಗಳ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ಮಹಾರಥವನ್ನು ಸೃಷ್ಟಿಸಿದೆ. ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ, ಹೋಗುವ ಹಾಗೇ, ಅನಿಸಿತು.
ನಾನು ಎಂಬ" ಅಹಂ" ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಪರಿಧಿಯಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ.
ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥದಿಂದ ಇಳಿಯುವುದು. ನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು.
ಭಗವಂತನ ಯೋಗಶಕ್ತಿಯ "ಶ್ರೀರಕ್ಷೆ "ಇಲ್ಲದಿದ್ದರೆ ಕರ್ಣನ ಅತಿರಥದ ಮುಂದೆ, ಅರ್ಜುನನ ರಥ ಸೋಲುತಿತ್ತು. ಕೃಷ್ಣನ ಕೃಪಾಕಟಾಕ್ಷದಿಂದ ಅರ್ಜುನನ ರಥ ಮಹಾರಥವಾಯಿತು.
ಸಂಜೀವಿನಿ ಕುಡಿದವನು ಸಾಯಲಾರ ಹಾಗೆಯೇ, ನಾನು ಎಂಬ ಆಹಂಕಾರವಿದ್ದವನು ಎಂದು ಗೆಲ್ಲಲಾರ.
ಕೃಷ್ಣನ ತಂತ್ರ, ವಿಧುರನ ನೀತಿ, ಕರ್ಣನ ಧಾನ, ಭೀಮನ ಬಲ,ದುರ್ಯೋಧನನ ಛಲ, ಶಕುನಿಯ ಕುತಂತ್ರ, ಈ ಎಲ್ಲ ಕಲೆಗಳನ್ನು ಕಲಿತು ಜೀವನದ ಸಂದಿಗ್ದ ಪರಿಸ್ಥಿತಿಯಲ್ಲಿ, ಬಳಸಿಕೊಂಡವನು ಮಾತ್ರ ನಿಜವಾಗಿಯೂ ಎಲ್ಲವನ್ನು ಗೆಲ್ಲಬಲ್ಲ ಮಹಾರಥನಾಗುತ್ತಾನೆ.


 ಕೃಷ್ಣಾರ್ಪಣಮಸ್ತು
*******

#ಶ್ರೀಕೃಷ್ಣಪಾಂಡವರನ್ನುದೂರ್ವಾಸರಆಗ್ರಹದಿಂದ_ರಕ್ಷಿಸಿದ್ದು.
ವನವಾಸಕ್ಕೆ ಹೋದ ಪಾಂಡವರು ಋಷಿ ಮುನಿಗಳ ಜೊತೆ ಸಂತೋಷದಿಂದ ಇದ್ದಾರೆ ಎಂಬುದನ್ನು ಕೇಳಿದ ದುರ್ಯೋಧನನಿಗೆ ಹೊಟ್ಟೆ ಉರಿ ಉಂಟಾಯಿತು. ಅವರಿಗೆ ಕೇಡನ್ನು ಮಾಡುವುದು ಹೇಗೆ ಎಂದು ದುಶ್ಯಾಸನಾದಿಗಳೊಡನೆ ಆಲೋಚನೆ ಮಾಡಿದನು. ಅದೇ ಸಮಯಕ್ಕೆ 16,000 ಶಿಷ್ಯರೊಡನೆ ದೂರ್ವಾಸ ಮುನಿಗಳು ಅಲ್ಲಿಗೆ ಬಂದರು. ಅವರಿಗೆ ಅಪಾರವಾದ ಸತ್ಕಾರ ಮಾಡಿ ದುರ್ಯೋಧನನು ಭೂರಿ ಭೋಜನವಿತ್ತು ಉಪಚರಿಸಿದನು. ಅವರು ಹೊರಡುವ ವೇಳೆಯಲ್ಲಿ `ದುರ್ಯೋಧನ, ನಿನ್ನ ಪ್ರೀತಿಯೂ, ಉಪಚಾರವೂ ನನಗೆ ಬಹಳ ಸಂತೋಷವನ್ನುಂಟು ಮಾಡಿದೆ. ನಿನಗೆ ಬೇಕಾದ ವರವನ್ನು ಕೇಳು’ ಎಂದರು. ಆಗ ಪಾಂಡವರನ್ನು ಹಿಂಸಿಸುವ ಮನಸ್ಸುಳ್ಳ ದುರ್ಯೋಧನನು, ಅತಿ ವಿನಯವನ್ನು ನಟಿಸುತ್ತಾ `ಮಹಾಮುನಿವರ್ಯರೇ, ಪಾಂಡವರು ಈಗ ಕಾಡಿನಲ್ಲಿದ್ದಾರೆ, ಇಲ್ಲಿ ಬಂದು ಅತಿಥ್ಯವನ್ನು ಸ್ವೀಕರಿಸಿದಂತೆ ಅಲ್ಲಿಯೂ ಹೋಗಿ ಅವರಿಂದ ಉಪಚಾರ ಪಡೆದು ನಮ್ಮನ್ನು ಆಶೀರ್ವದಿಸಿದಂತೆ ಅವರಿಗೂ ಕೃಪೆ ಮಾಡಬೇಕು. ಆದರೆ ದ್ರೌಪದಿ ಊಟ ಮಾಡಿ ಮುಗಿಸಿದ ನಂತರ ನಿಮ್ಮ 16,000 ಶಿಷ್ಯರೊಡನೆ ಹಸಿವಿನಿಂದ ಅಲ್ಲಿಗೆ ಹೋಗಬೇಕು.’ ಎಂದು ಪ್ರಾರ್ಥಿಸಿದನು.

ಹೀಗೆ ದುರ್ಯೋಧನನು ಕೇಳಲು ಕಾರಣವುಂಟು. ಅದರಲ್ಲಿ ಒಂದು ದೊಡ್ಡ ಸಂಚೇ ಅಡಗಿದೆ. ವನವಾಸದಲ್ಲಿ ಸೂರ್ಯನು ಪಾಂಡವರಿಗೆ ಆಹಾರ ಸೌಕರ್ಯಕ್ಕಾಗಿ ಅಕ್ಷಯ ಪಾತ್ರೆಯನ್ನು ಕೊಟ್ಟಿದ್ದಾನೆ. ಅದರಲ್ಲಿ ಎಷ್ಟು ವಿಧವಾಗಿ ಬೇಕಾದರೂ, ಎಷ್ಟಾದರೂ ಭೋಜನವನ್ನು ಪಡೆಯಬಹುದು. ಆದರೆ ದ್ರೌಪದಿ ಊಟ ಮಾಡಿಬಿಟ್ಟರೆ ಅದರಲ್ಲಿ ಆಮೇಲೆ ಆಹಾರ ದೊರೆಯುವುದಿಲ್ಲ. ಆದ್ದರಿಂದಲೇ ದುರ್ಯೋಧನನು ದ್ರೌಪದಿಯ ಊಟವಾದ ಮೇಲೇ ಹಸಿವಿನಿಂದ 16,000 ಶಿಷ್ಯರೊಡನೆ ಹೋಗಬೇಕೆಂದು ತಿಳಿಸಿದ. ಆಗ ದೂರ್ವಾಸರಿಗೆ ಅತಿಥ್ಯ ಮಾಡಲಾದದೆ ಕಷ್ಟಪಡುತ್ತಾರೆ. ಆಗ ಕೋಪಗೊಂಡ ದೂರ್ವಾಸರು ಪಾಂಡವರನ್ನು ಶಪಿಸುತ್ತಾರೆ. ಆಗ ಪಾಂಡವರು ನಾಶವಾಗುತ್ತಾರೆ. ಇದೇ ದುರ್ಯೋಧನನ ಕುತಂತ್ರ. ದುರ್ಯೋಧನನು ತಿಳಿಸಿದಂತೆಯೇ ದೂರ್ವಾಸರು ತನ್ನ ಎಲ್ಲ ಶಿಷ್ಯರನ್ನು ಕರೆದುಕೊಂಡು ಪಾಂಡವರು ವಾಸವಾಗಿದ್ದ ಕಾಡಿಗೆ ಬಂದರು ಮಟ ಮಟ ಮಧ್ಯಾಹ್ನದಲ್ಲಿ ಪಾಂಡವರ ಗುಡಿಸಿಲಿಗೆ ಕಾಲಿಟ್ಟರು. ಧರ್ಮರಾಜನು ಮಹಾಮುನಿಯನ್ನು ಅತ್ಯಂತ ಭಕ್ತಿ ಆದರಗಳಿಂದ. ಎದುರುಗೊಂಡು ಉಪಚರಿಸಿದನು. ಅವನಿಗೆ ಯಾವ ಸಂದೇಹವೂ ಏರ್ಪಡಲಿಲ್ಲ.

ಅನಂತರ ಧರ್ಮರಾಜನು `ಸ್ವಾಮಿ ಮುನಿವರ್ಯರೇ ತಾವು ಸ್ನಾನ ಮಾಡಿ ತಮ್ಮ ಸಂಧ್ಯಾವಂದನೆ ಪೂಜೆ, ಅನುಷ್ಠಾನಗಳೆಲ್ಲವನ್ನೂ ಮಾಡಿಕೊಂಡು ಬರಬೇಕು’ ಎಂದು ಪ್ರಾರ್ಥಿಸಿದನು. ದೂರ್ವಾಸರು ತಮ್ಮ ಶಿಷ್ಯರೊಡನೆ ನದಿಗೆ ಹೊರಟರು. ಅವರೆಲ್ಲರೂ ಹಿಂತಿರುಗಿ ಬರುವಷ್ಟರಲ್ಲಿ ಅವರಿಗೆ ಮಾಡಬೇಕಿದ್ದ ಔತಣದ ಬಗ್ಗೆ ದ್ರೌಪದಿಯೊಡನೆ ಆಲೋಚಿಸಿದನು. ಆಗ ಅವಳು `ಆರ್ಯಪುತ್ರ, ಸೂರ್ಯ ಭಗವಾನನು ನನಗೆ ನೀಡಿರುವ ಅಕ್ಷಯ ಪಾತ್ರೆಯು ನಾನು ಊಟ ಮಾಡುವವರೆಗೆ ಮಾತ್ರವೇ ಭೋಜನವನ್ನು ನೀಡುತ್ತದೆ. ನಾನು ಈಗ ತಾನೇ ಊಟಮಾಡಿ ಮುಗಿಸಿದೆ. ಪಾತ್ರೆಯನ್ನು ತೊಳೆದೂಬಿಟ್ಟೆ. ಇನ್ನು ಮುಂದಿನ ವೇಳೆ ಬರುವವರೆಗೂ ಭೋಜನ ಇಲ್ಲವಲ್ಲ’ ಎಂದು ಬಹಳ ಚಿಂತಿತಳಾದಳು. ಅವರು ಹಿಂತಿರುಗಿ ಬಂದ ಒಡನೇ ಔತಣ ನೀಡದಿದ್ದರೆ ಮುನಿಗಳ ಶಾಪಕ್ಕೆ ಗುರಿಯಾಗಬೇಕಾಗುವುದಲ್ಲ, ಏನು ಮಾಡುವುದು ಎಂದು ಸಂಕಟಕ್ಕೆ ಒಳಗಾದರು.

ಆಪತ್ತಿನಲ್ಲೆಲ್ಲಾ ರಕ್ಷಿಸುವ ಕೃಷ್ಣನನ್ನು ಬಿಟ್ಟರೆ ಈಗ ತಮ್ಮ ಸಹಾಯಕ್ಕೆ ಬೇರಾರೂ ಇಲ್ಲ ಎಂದು ಯೋಚಿಸಿದ ದ್ರೌಪದಿ ಕೂಡಲೇ ಮನಸ್ಸಿನಲ್ಲಿ ಭಕ್ತಿಯಿಂದ ಕೃಷ್ಣನನ್ನು ಧ್ಯಾನಿಸಿದಳು. `ಹೇ ಕೃಷ್ಣ, ದುಃಖದಲ್ಲಿರುವವರ ಸಂಕಟವನ್ನು ಓಡೋಡಿ ಬಂದು ಪರಿಹರಿಸುವ ಕರುಣಾ ಸಾಗರನೇ, ಅಂದು ದುರ್ಯೋಧನನ ಖ್ಯಾತ ಸಭೆಯಲ್ಲಿ ನನ್ನ ಮಾನವನ್ನು ರಕ್ಷಿಸಲು ಬಂದವನೇ, ಇಂದಿನ ಈ ಆಪತ್ತಿನಿಂದಲೂ ನೀನೇ ನಮ್ಮನ್ನು ರಕ್ಷಿಸಬೇಕು’ ಎಂದು ಪ್ರಾರ್ಥಿಸಿದಳು. ತನ್ನ ಭಕ್ತಳಿಗೆ ಒದಗಿದ ಆಪತ್ತನ್ನು ಅರಿತ ಕೃಷ್ಣ ಪರಮಾತ್ಮ ಕೂಡಲೇ ದ್ರೌಪದಿಯ ಮುಂದೆ ಪ್ರತ್ಯಕ್ಷನಾದ. ದೂರ್ವಾಸರೂ ಶಿಷ್ಯರೂ ಬಂದಿರುವುದನ್ನು ದ್ರೌಪದಿ ತಿಳಿಸಿದಳು. ಆಗ ಕೃಷ್ಣ ನನಗೂ ಹಸಿವಾಗುತ್ತಿದೆ. ತಿನ್ನುವುದಕ್ಕೆ ಏನಿದೆ ನಿಮ್ಮಲ್ಲಿ? ಎಂದಾಗ ದುಃಖ ತಾಳಲಾರದೆ ದ್ರೌಪದಿ ಬಿಕ್ಕಿ ಬಿಕ್ಕಿ ಅತ್ತಳು. ಆಗ ಕೃಷ್ಣ ಹೇ ದ್ರೌಪದಿ, ನೀನು ತೊಳೆದಿಟ್ಟಿರುವ ಅಕ್ಷಯ ಪಾತ್ರೆಯನ್ನು ತೆಗೆದುಕೊಂಡು ಬಾ ಅದರಲ್ಲಿ ಏನಾದರೂ ಇದ್ದರೂ ಇರಬಹುದು. ಎಂದಾಗ `ಪರಿಹಾಸ್ಯ ಮಾಡುವಿಯಾ ಕೃಷ್ಣ’ ಎಂದು ದ್ರೌಪದಿ ಕೇಳಿದಾಗ `ಇಲ್ಲ ಇಲ್ಲ ನೀನು ತೆಗೆದುಕೊಂಡು ಬಾ’ ಎಂದು ಬಲವಂತ ಮಾಡಿದನು. ಕೃಷ್ಣನ ಮಾತನ್ನು ಮೀರಲಾರದೆ ತೊಳೆದು ಕವುಚಿ ಇಟ್ಟಿದ್ದ ಅಕ್ಷಯ ಪಾತ್ರೆಯನ್ನು ತಂದು ದ್ರೌಪದಿ ಕೃಷ್ಣನ ಕೈಗೆ ಕೊಟ್ಟಳು. ಅದನ್ನು ತಿರುಗಿಸಿ ತಿರುಗಿಸಿ ಸೂಕ್ಷ್ಮವಾಗಿ ನೋಡಿ `ದ್ರೌಪದಿ, ಇದೋ ನೋಡು ಪಾತ್ರೆಯ ಒಂದು ಮೂಲೆಯಲ್ಲಿ ಒಂದು ಅಗುಳು ಅನ್ನವೂ ಸೊಪ್ಪಿನ ಚೂರೂ ಅಂಟಿಕೊಂಡಿದೆ. ಇದು ನನಗೆ ಸಾಕು’ ಎಂದು ಹೇಳಿ ಅದನ್ನು ತನ್ನ ಬಾಯಲ್ಲಿ ಹಾಕಿಕೊಂಡು ತಿಂದುಬಿಟ್ಟನು.(ಆಗಿನ ಕಾಲದಲ್ಲೂ ,ತಾಯಿ ದ್ರೌಪದಿಗೂ ಪಾತ್ರೆ ತೊಳೆಯುವ ಕೆಲಸ ಬರುತ್ತಿರಲಿಲ್ಲವೇ 🤔 ಎಂದು ಮೂಗು ಮುರಿಯಬೇಡಿ. ಇದೂ ಕೂಡ ಭಕ್ತರಕ್ಷಣತತ್ಪರನಾದ ಶ್ರೀ ಕೃಷ್ಣ ಪರಮಾತ್ಮನ ಯೋಗಮಾಯೆ ಎಂದು ತಿಳಿಯಬೇಕು.) `ಲೋಕನಾಯಕನು ಇದರಿಂದ ತೃಪ್ತಿ ಹೊಂದಲಿ’ ಎಂದು ಹೇಳಿದನು. ಅನಂತರ ಧರ್ಮರಾಜನನ್ನು ಕರೆದು ದೂರ್ವಾಸ ಮುನಿಗಳನ್ನೂ ಶಿಷ್ಯರನ್ನೂ ಭೋಜನಕ್ಕೆ ಕರೆತರುವಂತೆ ತಿಳಿಸಿದನು. ಆಗ ಧರ್ಮರಾಜನು ಸಹದೇವನನ್ನು ಕರೆದು ಮುನಿಗಳನ್ನು ಕರೆದು ತಾ ಎಂದು ಆಜ್ಞಾಪಿಸಿದನು. ಆದರೂ ಭೋಜನವೇ ಇಲ್ಲವಲ್ಲ. ಅತಿಥಿಗಳಿಗೆ ಈ ಕೃಷ್ಣ ಏನು ಔತಣ ಮಾಡುವನೋ’ ಎಂದು ಪಾಂಡವರೂ ದ್ರೌಪದಿಯೂ ವ್ಯಾಕುಲಗೊಂಡರು.

ಅಲ್ಲಿ ನದಿಯಲ್ಲಿ ದೂರ್ವಾಸರೂ ಶಿಷ್ಯರೂ ಸ್ನಾನ ಮಾಡುತ್ತಿದ್ದರು. ಸಹದೇವನು ಅವರ ಬಳಿಗೆ ಹೋದನು. ಆಗ ಮುನಿವರ್ಯರಿಗೂ ಅವರ ಶಿಷ್ಯರಿಗೂ ಅಪಾರವಾಗಿ ತಿಂದು ಹೊಟ್ಟೆ ಭಾರವಾದ ಹಾಗೆ ತೋರಿತು. ಹೊಟ್ಟೆ ಭಾರವನ್ನು ತಡೆಯಲಾರದೆ ಒದ್ದಾಡುವಂತಾಯಿತು. ಆಗ ಅವರೆಲ್ಲರಿಗೂ ಅತ್ಯಂತ ಆಶ್ಚರ್ಯವಾಯಿತು. ಅವರಿಗೆ ಏನು ಮಾತನಾಡುವುದಕ್ಕೂ ತೋಚಲಿಲ್ಲ. ಆಗ ಒಬ್ಬ ಶಿಷ್ಯನು `ಹೇ ಗುರುವೇ, ಧರ್ಮರಾಜನಿಗೆ ಭೋಜನವನ್ನು ಸಿದ್ಧಪಡಿಸುವಂತೆ ಹೇಳಿಬಿಟ್ಟೆವಲ್ಲ. ಈಗ ಹೊಟ್ಟೆ ಅಪಾರವಾಗಿ ತುಂಬಿಹೋಗಿದೆ. ಒಂದು ಸಾಸಿವೆ ಕಾಳಿನಷ್ಟೂ ತಿನ್ನಲು ಸಾಧ್ಯವಿಲ್ಲವಲ್ಲ. ಭೋಜನವು ವ್ಯರ್ಥವಾಗಿ ಹೋಗುವುದಲ್ಲಾ ಏನು ಮಾಡುವುದು’ ಎಂದು ಕೇಳಿದನು. ಆಗ ದೂರ್ವಾಸರು `ನಾವಲ್ಲಿ ಹೋಗಿ ಊಟ ಮಾಡದಿದ್ದರೆ ಧರ್ಮಪುತ್ರನಿಗೆ ಬಹಳ ಬೇಸರವಾಗುತ್ತದೆ. ಪಾಂಡವರು ಕೋಪಾಗ್ನಿಯಿಂದ ನಮ್ಮನ್ನು ಸುಟ್ಟುಬಿಡುತ್ತಾರೆ. ಅವರು ಸಜ್ಜನರು. ಬಲಿಷ್ಠರು, ಭಕ್ತರು ವಿಶೇಷವಾಗಿ ಶ್ರೀಕೃಷ್ಣನಲ್ಲಿ ಭಕ್ತಿಯುಳ್ಳವರು. ಈಗ ಅವರನ್ನು ಹೋಗಿ ಕಾಣುವುದು ಸರಿಯಲ್ಲ’ ಎಂದು ಕಳವಳದಿಂದ ಹೇಳಿದರು. ಶಿಷ್ಯರೋ ಹೊಟ್ಟೆ ಹಿಡಿದುಕೊಂಡು ಕಷ್ಟಪಡುತ್ತಾ `ಅಯ್ಯೋ ಏಳಲೂ ಆಗುತ್ತಿಲ್ಲ’ ಎಂದು ಒದ್ದಾಡುತ್ತಿದ್ದರು. ದುಷ್ಟನಾದ ದುರ್ಯೋಧನನಿಗೆ ವರಕೊಟ್ಟದ್ದು ದೊಡ್ಡ ತಪ್ಪಾಗಿಹೋಯಿತಲ್ಲಾ ಎಂದು ದೂರ್ವಾಸರು ತೊಳಲಾಡಿದರು. ಆಗ ಅಲ್ಲಿಗೆ ಬಂದ ಸಹದೇವನು `ಮಹಾ ಮುನಿಗಳೇ, ತಾವು ಶಿಷ್ಯರೊಡನೆ ಭೋಜನಕ್ಕೆ ಬರಬೇಕು ತಮ್ಮನ್ನು ಶ್ರೀಕೃಷ್ಣನೂ ನನ್ನ ಅಣ್ಣಂದಿರೂ ಎದುರು ನೋಡುತ್ತಿದ್ದಾರೆ! ಎಂದನು. ಶ್ರೀ ಕೃಷ್ಣನ ಹೆಸರನ್ನು ಕೇಳಿದ ಕೂಡಲೇ ದೂರ್ವಾಸರು ಗಡಗಡ ನಡುಗಿದರು. ಶಿಷ್ಯರನ್ನು ನೋಡಿ `ಹೇಗಾದರೂ ಮಾಡಿ ಎದ್ದು ಬನ್ನಿ ಪಾಂಡವರು ಇರುವ ಸ್ಥಳಕ್ಕೆ ಹೋಗೋಣ, ಬೇರೆ ದಾರಿಯಿಲ್ಲ’ ಎಂದರು. ಎಲ್ಲರೂ ಎದ್ದು ಅತಿ ಕಷ್ಟದಿಂದ ಪಾಂಡವರ ಗುಡಿಸಿಲಿಗೆ ಬಂದರು.

ಧರ್ಮರಾಜನೂ ಉಳಿದವರೂ ಅವರನ್ನು ನಗುಮುಖದಿಂದ ಸ್ವಾಗತಿಸಿದರು. ಶ್ರೀ ಕೃಷ್ಣನು ದೂರ್ವಾಸರನ್ನು ದಿಟ್ಟಿಸಿ ನೋಡಿದನು. ದೂರ್ವಾಸರ ಮುಖವು ಭಯದಿಂದ ಬಿಳಿಚಿಕೊಂಡಿತ್ತು. ನಾಚಿಕೆಯಿಂದ ಅವರು ತಲೆ ತಗ್ಗಿಸಿದರು. ಶ್ರೀ ಕೃಷ್ಣನನ್ನು ಕುರಿತು ದೀನ ಸ್ವರದಿಂದ, `ಭಗವಂತನೇ ನಾನು ವಂಚನೆಗೆ ಸಹಾಯಕನಾಗಿಬಿಟ್ಟೆ. ಪುಣ್ಯಶಾಲಿಗಳಾದ ಪಾಂಡವರಿಗೆ ದ್ರೋಹ ಮಾಡಲು ಯತ್ನಿಸಿದೆ. ನಿನ್ನ ಪ್ರೇಮ, ಕೃಪೆ ಇರುವವರೆಗೆ ಅವರನ್ನು ಯಾರೂ ಏನೂ ಮಾಡಲೂ ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿಬೇಕು’ ಎಂದು ಪ್ರಾರ್ಥಿಸಿದರು. ಆಗ ದ್ರೌಪದಿ ಶ್ರೀ ಕೃಷ್ಣನನ್ನು ನೋಡಿ! ಹೇ ಪರಮಾತ್ಮ, ಈಗ ನಿನ್ನ ಯೋಜನೆಯ ಅರ್ಥವಾಗುತ್ತಿದೆ. ಒಂದು ಅಗುಳು ಅನ್ನಕ್ಕಾಗಿ ಏಕೆ ಹಸಿದು ಬಂದೆ ಎಂದು ತಿಳಿಯುತ್ತಿದೆ. ಆ ಒಂದು ಅಗುಳನ್ನು ನೀನು ಉಂಡದ್ದರಿಂದ ಈ ಮುನಿವರ್ಯರಿಗೂ ಅವರ ಶಿಷ್ಯರಿಗೆ ಅಪಾರವಾದ ತೃಪ್ತಿ ಉಂಟಾಗಿದೆ. ಇದರಿಂದಲೇ ಸಮಸ್ತ ಜೀವಿಗಳೂ ನಿನ್ನಲ್ಲಿ ಅಡಗಿವೆ ಎಂಬುದು ತಿಳಿಯುತ್ತದೆ. ನಮಗೆ ನೀನೇ  ಗುರು,ಗೆಳೆಯ, ಬಂಧು, ಬಾಂಧವ, ತಾಯಿ, ತಂದೆ ಆಗಿದ್ದೀಯೆ ಎಂದು ಹೇಳಿ ಭಕ್ತಿಯಿಂದ ನಮಸ್ಕರಿಸಿದಳು. ದೂರ್ವಾಸರನ್ನು ಶಿಷ್ಯರನ್ನೂ ಕ್ಷಮಿಸಿ ಶ್ರೀಕೃಷ್ಣನು ಅನುಗ್ರಹಿಸಿದನು. ಎಲ್ಲರೂ ಶ್ರೀಕೃಷ್ಣನನ್ನು ಹಾಡಿ ಕೊಂಡಾಡಿದರು.
**********


.
#ಚಕ್ರವ್ಯೂಹಚಾಲೆಂಜ್ #chakravyuhchallenge

ವಿಶ್ವ ಕಂಡು ಕೇಳರಿಯದ ರೌದ್ರ ಭಯಂಕರ ಯುದ್ದ 
ಮಹಾಭಾರತದ ಕುರುಕ್ಷೇತ್ರ ಕದನ. 
ಅತ್ಯಾಧುನಿಕ ಯಂತ್ರ-ತಂತ್ರ-ಅಸ್ತ್ರ-ಶಸ್ತ್ರ-ಪರಮಾಣು ಬಾಂಬ್ ಇವೆಲ್ಲದರ ಉಪಯೋಗ ಕುರುಕ್ಷೇತ್ರ ಯುದ್ದದಲ್ಲಾಗಿದೆಯೆಂದರೆ ಆ ಕಾಲದ ಜನರು ವೈಜ್ಞಾನಿಕವಾಗಿ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ನಮಗಿಂತ ಎಷ್ಟು ಮುಂದಿದ್ದರು ಎನ್ನುವುದನ್ನು ಯೋಚಿಸಿ. ಕುರುಕ್ಷೇತ್ರ ಯುದ್ದದ ರಣ ಭಯಂಕರ ಯುದ್ದ ತಂತ್ರವೆಂದರೆ “ಚಕ್ರವ್ಯೂಹ”. ಎದುರಾಳಿಯನ್ನು ಹಣಿಯಲು ಸಾಧ್ಯವೇ ಇಲ್ಲವೆಂದಾದಾಗ ಕೊನೆಯ ತಂತ್ರವಾಗಿ ಚಕ್ರವ್ಯೂಹವನ್ನು ಹೆಣೆಯಲಾಗುತ್ತಿತ್ತು. ಚಕ್ರವ್ಯೂಹದ ಹೆಸರು ಕೇಳಿದರೇನೇ ಸಾಕು ವೈರಿ ಸೈನಿಕರು ಮೂರ್ಛೆ ಹೋಗುತ್ತಿದ್ದರಂತೆ.

ಏಕೆಂದರೆ ಇಡಿಯ ವಿಶ್ವದಲ್ಲೇ ಚಕ್ರವ್ಯೂಹವನ್ನು ಭೇಧಿಸುವ ವಿದ್ಯೆ ಗೊತ್ತಿದ್ದದು ಕೇವಲ ಏಳು ಜನರಿಗೆ ಮಾತ್ರ! ಕೃಷ್ಣ, ದ್ರೋಣಾಚಾರ್ಯ, ಅರ್ಜುನ, ಭೀಷ್ಮ ಪಿತಾಮಹ, ಕರ್ಣ, ಅಶ್ವತ್ಥಾಮ ಮತ್ತು ಪ್ರದ್ಯುಮ್ನನನ್ನು ಹೊರತು ಪಡಿಸಿ ಬೇರಿನ್ನಾರಿಗೂ ಚಕ್ರವ್ಯೂಹವನ್ನು ಭೇಧಿಸುವ ರಹಸ್ಯ ಗೊತ್ತಿರಲಿಲ್ಲ. ಅಭಿಮನ್ಯುವಿಗೆ ಚಕ್ರವ್ಯೂಹದ ಒಳಗೆ ಪ್ರವೇಶವಾಗುವುದು ಗೊತ್ತಿತ್ತೇ ವಿನಹ ಹೊರ ಬರುವುದು ತಿಳಿದಿರಲಿಲ್ಲ. ಆದ್ದರಿಂದಲೇ ಮೋಸದಿಂದ ಕೌರವರು ಆತನನ್ನು ಕೊಂದದ್ದು. ಚಕ್ರವ್ಯೂಹದೊಳಗೆ ಒಮ್ಮೆ ಪ್ರವೇಶವಾಯಿತೆಂದರೆ ಮುಗಿಯಿತು ಮತ್ತೆ ಆತ ಜೀವಂತ ಹೊರಬರಲು ಸಾಧ್ಯವೇ ಇರಲಿಲ್ಲ.

ಚಕ್ರವ್ಯೂಹವೆಂಬ ತಂತ್ರವನ್ನು ಹೆಣೆಯುತ್ತಿದ್ದ ರೀತಿ ಅತ್ಯದ್ಭುತ! 48*128 ಮೈಲಿ ಹರವಿಕೊಳ್ಳುವ ಸುರುಳಿಯಾಕಾರದ ಈ ವ್ಯೂಹ ಗರಗರನೆ ತಿರು ತಿರುಗಿ ಮುಂದಡಿಯಿಟ್ಟರೆ ಶತ್ರು ಸೈನ್ಯ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಚೆಲ್ಲಾಪಿಲ್ಲಿಯಾಗುತ್ತಿತ್ತು! ಯುದ್ದ ಆರಂಭಕ್ಕೂ ಮುನ್ನ ಸೈನಿಕರು ಮಾನಸಿಕವಾಗಿ ಜರ್ಜರಿತರಾಗಿ ಯುದ್ದಾಸಕ್ತಿಯನ್ನೇ ಕಳೆದುಕೊಳ್ಳಬೇಕಾದರೆ ವ್ಯೂಹದ ಭೀಕರತೆ ಹೇಗಿರಬೇಕು ಯೋಚಿಸಿ. 1.8 ಮಿಲಿಯನ್ (18ಲಕ್ಷ)  ಸೈನಿಕರನ್ನೊಳಗೊಂಡ ಈ ವ್ಯೂಹ ಎಷ್ಟು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿತ್ತೆಂದರೆ ಒಬ್ಬೇ ಒಬ್ಬ ಸೈನಿಕನೂ ಅತ್ತಿಂದಿತ್ತ ವಾಲುತ್ತಿರಲಿಲ್ಲ. ಪ್ರತಿ ಸೈನಿಕನ ಸ್ಥಳ ಬದಲಾವಣೆಗೂ ನಿಶ್ಚಿತವಾದ ಒಂದು ಡೋಲು, ನಗಾರಿ ಇಲ್ಲವೇ ಶಂಖನಾದವಿರುತ್ತಿತ್ತು. ಈ ನಾದಗಳಿಗುಣವಾಗಿಯೇ ಚಕ್ರವ್ಯೂಹದೊಳಗಿನ ಸೈನಿಕರು ಸ್ಥಾನ ಬದಲಾವಣೆ ಮಾಡುತ್ತಿದ್ದರು ಹೊರತು ತಮ್ಮಷ್ಟಕ್ಕೇ ತಾವು ಸ್ಥಾನ ಪಲ್ಲಟವಾಗುವಂತಿರಲಿಲ್ಲ.

ವ್ಯೂಹದಲ್ಲಿ ಒಟ್ಟು ಏಳು ಪದರಗಳಿರುತ್ತಿದ್ದವು. ಹೊರಗಿನ ಪದರದಲ್ಲಿ ಸಾಧಾರಣ ಯುದ್ದ ಕೌಶಲ ಹೊಂದಿದ ಸೈನಿಕರಿರುತ್ತಿದ್ದರು. ಆದರೆ ಒಳ ಹೋದಂತೆಲ್ಲಾ ಪ್ರತಿ ಪದರಗಳ ಸೈನಿಕರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತಿತ್ತು. ಅತೀ ಒಳಗಿನ ಪದರ ಸೈನಿಕರು ಅತ್ಯಂತ ಬಲಾಢ್ಯರು ಮತ್ತು ಯುದ್ದ ಕೌಶಲ ನಿಪುಣರಾಗಿರುತ್ತಿದ್ದರು. ತೀರ ಹೊರಗಿನ ಪದರದಲ್ಲಿ ಕಾಲಾಳು ಸೈನಿಕರಿದ್ದರೆ, ಒಳ ಪದರಗಳಲ್ಲಿ ಆನೆ-ಕುದುರೆಯ ಮೇಲಿರುವ ಸೈನಿಕರಿರುತ್ತಿದ್ದರು. ಚಕ್ರವ್ಯೂಹದ ರಚನೆ ಗುರು ದೋಣಾಚಾರ್ಯರೇ ಮಾಡುತ್ತಿದ್ದುದು. ಇಂತಹ ಒಂದು ಅದ್ಬುತ ರಣತಂತ್ರ ಇಡಿಯ ವಿಶ್ವದಲ್ಲೇ ಆಗಲೂ ಇರಲಿಲ್ಲ, ಈಗಲೂ ಇಲ್ಲ!

ಥೇಟ್ ರಥದ ಚಕ್ರದಂತೇ ಕಾಣುವ ಈ ವ್ಯೂಹದ ರಚನೆ ಗಡಿಯಾರದ ಮುಳ್ಳಿನಂತೆ ಪ್ರತಿ ಘಳಿಗೆಯೂ ಚಲಿಸುತ್ತಿತ್ತು! ಪ್ರತಿ ಸೆಕಂಡಿಗೆ ಪ್ರತಿ ಸೈನಿಕನ ಸ್ಥಾನ ಪಲ್ಲಟವಾಗುತ್ತಿದ್ದುದ್ದರಿಂದ ಒಳ ಬರುವ ಮತ್ತು ಹೊರ ಹೋಗುವ ದಾರಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿತ್ತು! ಅದಕ್ಕೇ ಒಮ್ಮೆ ಚಕ್ರವ್ಯೂಹದ ಒಳ ಹೊಕ್ಕ ವ್ಯಕ್ತಿ ಹಿಂದಿರುಗಿ ಬರಲಾಗದೆ ಅದರೊಳಗೇ ಪ್ರಾಣ ತ್ಯಜಿಸುತ್ತಿದ್ದುದು. ಕುರುಕ್ಷೇತ್ರ ಯುದ್ದದಲ್ಲಿ ಯುಧಿಷ್ಟಿರನನ್ನು ಬಂಧಿಯಾಗಿಸಲು ಚಕ್ರವ್ಯೂಹವನ್ನು ಹೆಣೆಯಲಾಗುತ್ತದೆ. ಯುಧಿಷ್ಟಿರನಿಗೆ ಚಕ್ರವ್ಯೂಹ ಭೇದಿಸುವ ವಿದ್ಯೆ ತಿಳಿದಿರುವುದಿಲ್ಲ ಮತ್ತು ಆ ಸಂಧರ್ಭದಲ್ಲಿ ಕೃಷ್ಣಾರ್ಜುನ ಮತ್ತು ಪ್ರದ್ಯುಮ್ನ ಬೇರೆಡೆ ಯುದ್ದ ನಿರತರಾಗಿರುವುದರಿಂದಾಗಿ ಅರ್ಧಂಬರ್ಧ ವಿದ್ಯೆ ತಿಳಿದಿರುವ ಅಭಿಮನ್ಯು ಚಕ್ರವ್ಯೂಹ ಭೇಧಿಸುವ ನಿರ್ಧಾರ ಮಾಡುತ್ತಾನೆ.

ಅಭಿಮನ್ನು ವೀರಾವೇಶದಿಂದ ಹೋರಾಡಿದರೂ ಕೌರವರ ಕುತಂತ್ರದಿಂದಾಗಿ ಅವನು ಸಾವನ್ನಪ್ಪುತ್ತಾನೆ. ಚಕ್ರವ್ಯೂಹವೆಂದರೇನೆ ಸಾಕ್ಷಾತ್ ಮೃತ್ಯು ಕೂಪ. ಭೂಮಿಯಂತೆಯೇ ತನ್ನ ಅಕ್ಷದ ಸುತ್ತ ತಿರುಗುವ ಇದರ ಪ್ರತಿ ಪದರವೂ ತಮ್ಮಲ್ಲೇ ತಿರುಗುತ್ತಿದ್ದವು. ಭೂಮಿ ತನ್ನ ಅಕ್ಷದಲ್ಲಿ ಸುತ್ತುತ್ತಾ ಸೂರ್ಯನ ಸುತ್ತ ಪ್ರದಕ್ಷಿಣೆ ಬರುವಂತೆ ಚಕ್ರವ್ಯೂಹ ತಿರುಗುತ್ತಿರಬೇಕಾದರೆ ಭೇಧಿಸುವುದಾದರೂ ಹೇಗೆ ಸ್ವಲ್ಪ ಯೋಚಿಸಿ. ಇನ್ನು ಈ ಮೃತ್ಯು ಕೂಪವನ್ನು ಭೇಧಿಸಿ ಹೊರ ಬರುವವರು ಎಂಥಹ ಮಹಾನ್ ವೀರರಾಗಿರಬಹುದು? ಆತನ ಯುದ್ದ ನೈಪುಣ್ಯ ಎಂತಹುದಾಗಿರಬಹುದು? ಕಲ್ಪನೆಗೂ ನಿಲುಕದು. ಸಾವಿರಾರು ವರ್ಷಗಳ ಹಿಂದೆ ಇಂತಹ ಅತ್ಯದ್ಭುತ ಯುದ್ದ ತಂತ್ರವನ್ನು ಹೆಣೆದ ಮತ್ತು ಕಾರ್ಯಗತಗೊಳಿಸಿದ ನಮ್ಮ ಪೂರ್ವಜರ ಅಪಾರ ಜ್ಞಾನ ಮತ್ತು ಪಾಂಡಿತ್ಯಕ್ಕೆ ಶರಣು ಶರಣಾರ್ಥಿ.

ಕುರುಕ್ಷೇತ್ರ ಯುದ್ದದಲ್ಲಿ ಒಟ್ಟು ಮೂರು ಬಾರಿ ಚಕ್ರವ್ಯೂಹವನ್ನು ಹೆಣೆಯಲಾಗಿದೆ ಎನ್ನುತ್ತಾರೆ. ಕೃಷ್ಣನ ಕೃಪೆಯಿಂದಾಗಿ ಅರ್ಜುನ ಚಕ್ರವ್ಯೂಹವನ್ನು ಭೇಧಿಸಿ ಜಯದ್ರಥನ ವಧೆ ಮಾಡುತ್ತಾನೆ. ಘನ ವಿಜ್ಞಾನಿಗಳಿಗೆ ಇವತ್ತಿನ ವರೆಗೂ ಇಂತಹ ಒಂದು ಅದ್ಭುತ ಯುದ್ದ ತಂತ್ರದ ರಹಸ್ಯವನ್ನು ಭೇದಿಸುವ ಬಗೆ ತಿಳಿದಿಲ್ಲವೆಂದಾದರೆ ನಮ್ಮ ಪೂರ್ವಜರ ಪಾಂಡಿತ್ಯದ ಬಗ್ಗೆ ಹೆಮ್ಮೆ ಮೂಡಿ ಬರುತ್ತದೆ. ಆರ್ಯಾವರ್ತವೆಂದು ಸುಮ್ಮನೇ ಹೇಳಿಲ್ಲ. ಪ್ರಕಾಂಡ ಜ್ಞಾನಿಗಳಿದ್ದ ನಾಡೇ ಆರ್ಯಾವರ್ತ. 
ಅದೇ ನಮ್ಮ ಜನ್ಮ ಭೂಮಿ ಭಾರತ…..🙏🙏

ನಮ್ಮ ದೇಶ,  ನಮ್ಮ ಶಾಸ್ತ್ರ,  ನಮ್ಮ ಪರಂಪರೆ,  ನಮ್ಮ ಹೆಮ್ಮೆ.
**************

ಪಾಂಡವರ ಸಾವಿನ ರಹಸ್ಯ ಪಾಂಡವರ ಸಾವು ಹೇಗಿತ್ತು ಗೊತ್ತಾ..?

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ..
ನಕುಲನಾದರೋ ಅಪ್ರತಿಮ ರೂಪವಂತ. .
ಮೂರು ಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ..
ಸಹಸ್ರ ಸಹಸ್ರ ಗಂಡಾನೆಗಳ ಭೀಮನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ ಧರ್ಮರಾಜನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿದ್ದ ಏಕೈಕ ಸಂಪತ್ತೆಂದರೆ “ಧರ್ಮ“..!
ಹುಟ್ಟು ಹೆಸರು ಯುಧಿಷ್ಠಿರನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.

“ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..

ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ಧಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!

ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.

ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:”ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!?”
ಧರ್ಮರಾಜ ಉತ್ತರಿಸಿದ, “ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು. ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು”

ಮತ್ತೆ ಕುಸಿದವನು ನಕುಲ, ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ”ವಾಯಿತೆಂದು ಧರ್ಮರಾಜ ಉತ್ತರಿಸಿದ.

ಮತ್ತೆ ಮೃತ್ಯುವಿನ ಸರದಿ ಅರ್ಜುನದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:”ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು?”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”

ಮಹಾಪ್ರಸ್ಥಾನ ಮುಂದುವರೆಯಿತು..

ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ?”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ – ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”

ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.

“ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂದ” ಧರ್ಮರಾಜ.
“ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.

ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.

“ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು.”

ಚಕಿತನಾದ ಇಂದ್ರ ಹೇಳಿದ, “ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ“.

“ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!

ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?

ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?

ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನದಲ್ಲಿ ಧರ್ಮ ನಿಂತಿತ್ತು..!!

ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು, ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊಂಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!

ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?

ಬದುಕೆಂಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆಂಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ…ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?

ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?

ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿ ಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …

ಭೋಜರಾಜನ ಜೀವನಸಂದೇಶವನ್ನು ಗಮನಿಸಿ:

ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||

(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನ ಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)

ಧರ್ಮವಿರುವಲ್ಲಿ ಸಾವಿಲ್ಲ ,ನೋವಿಲ್ಲ.. ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ .. ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು..!!

…ಧರ್ಮೋ ರಕ್ಷತಿ ರಕ್ಷಿತಃ
***

ಮಾಂಡವ್ಯ ಋಷಿ ಹಾಗೂ ವಿದುರ ನಾಗಿ ಯಮಧರ್ಮನ ಜನನ

ಮಾಂಡವ್ಯ ಋಷಿ ಒಬ್ಬ ಸಿದ್ಧಪುರುಷರಾಗಿದ್ದರು. ಧ್ಯಾನಯೋಗಾದಿಗಳನ್ನು ನಡೆಸುತ್ತಾ ಅಪಾರ ವರ್ಚಸ್ಸನ್ನು ಗಳಿಸಿದ್ದರು. ದಿನದ ಬಹುಪಾಲು ಸಮಯವನ್ನು ತಮ್ಮ ಆಶ್ರಮದಲ್ಲಿ ತಪಶ್ಚರಣೆಯಲ್ಲಿ ಕಳೆಯುತ್ತಿದ್ದರು.  

ಒಮ್ಮೆ ಹೀಗಾಯ್ತು. ಅರಮನೆಗೆ ಕನ್ನ ಹಾಕಿದ ಕಳ್ಳರ ಗುಂಪೊಂದು ಭಟರಿಂದ ತಪ್ಪಿಸಿಕೊಂಡು ಓಡುತ್ತಾ ಮಾಂಡವ್ಯರ ಆಶ್ರಮ ಹೊಕ್ಕಿತು. ಇದೇ ಪ್ರಸ್ತ ಜಾಗವೆಂದು, ದೋಚಿದ ಸಂಪತ್ತೆಲ್ಲ ಅಲ್ಲೇ ಅಡಗಿಸಿ, ತಾವೂ ಅಡಗಿ ಕುಳಿತರು. ಕಳ್ಳರನ್ನು ಬೆನ್ನಟ್ಟಿದ ಭಟರೂ ಆಶ್ರಮವನ್ನು ತಲುಪಿದರು. “ಇಲ್ಲಿ ಕಳ್ಳರು ಬಂದುದನ್ನು ಕಂಡಿರಾ?” ಎಂದು ಮಾಂಡವ್ಯರನ್ನು ಕೇಳಿದರು. ಧ್ಯಾನನಿರತರಾಗಿದ್ದ ಮಾಂಡವ್ಯರಿಗೆ ಯಾವ ಪರಿವೆಯೂ ಇರಲಿಲ್ಲ. ಭಟರು ನಾಲ್ಕೈದು ಬಾರಿ ಪ್ರಶ್ನಿಸಿದರೂ ಅವರಿಂದ ಪ್ರತಿಕ್ರಿಯೆ ದೊರೆಯಲಿಲ್ಲ.

ಅಸಹನೆಯಿಂದ ಭಟರು ಆಶ್ರಮದ ಒಳಹೊಕ್ಕು ಜಾಲಾಡಿದರು. ಸಂಪತ್ತಿನ ಸಮೇತ ಕಳ್ಳರನ್ನು ಹಿಡಿದರು. ಈ ಋಷಿಯೂ ಕಳ್ಳರ ಗುಂಪಿನವನೇ ಅಂದುಕೊಂಡು ಮಾಂಡವ್ಯರನ್ನೂ ಎಳೆದೊಯ್ದರು. ರಾಜ ಮಾಲಿನ ಸಮೇತ ಕಳ್ಳರು ಸಿಕ್ಕಿದ್ದರಿಂದ ಎಲ್ಲರನ್ನೂ ಶೂಲಕ್ಕೇರಿಸಲು ಆದೇಶಿಸಿದ. ಕಳ್ಳರು ಶೂಲಕ್ಕೇರಿಸುತ್ತಲೇ ಸತ್ತುಹೋದರು. ಆದರೆ ಯೋಗಿಯಾಗಿದ್ದ ಮಾಂಡವ್ಯರು ಜೀವಿತರಾಗಿ ಇದ್ದುದಲ್ಲದೆ, ಶೂಲದ ಮೇಲೂ ಸ್ವಸ್ಥರಾಗೇ ಇದ್ದರು.

ಇದರಿಂದ ಸೋಜಿಗಪಟ್ಟ ರಾಜನು ಅವರ ಇತಿವೃತ್ತ ವಿಚಾರಿಸಲಾಗಿ, ಅವರೊಬ್ಬ ಋಷಿ ಎಂದು ತಿಳಿಯಿತು. ಪಶ್ಚಾತ್ತಾಪ ಪಟ್ಟ ರಾಜನು ಕ್ಷಮೆ ಯಾಚಿಸಿ, ಗೌರವಪೂರ್ವಕವಾಗಿ ನಡೆಸಿಕೊಂಡು, ಅವರ ಬೆನ್ನಿಗೆ ಚುಚ್ಚಲಾಗಿದ್ದ ಶೂಲವನ್ನು ತೆಗೆಯುವಂತೆ ಆಜ್ಞಾಪಿಸಿದನು. ಏನು ಮಾಡಿದರೂ ಶೂಲವನ್ನು ತೆಗೆಯಲಾಗಲಿಲ್ಲ. ಕೊನೆಗೆ ಸ್ವಲ್ಪ ಭಾಗವನ್ನು ಬೆನ್ನಿನಲ್ಲೇ ಉಳಿಸಿ, ಮಿಕ್ಕಿದ್ದನ್ನು ಕೊಯ್ದು ತೆಗೆಯಲಾಯಿತು. ಅಂದಿನಿಂದ ಮಾಂಡವ್ಯರು ಬೆನ್ನಿನಲ್ಲಿ ಶೂಲವನ್ನು ಹೊತ್ತುಕೊಂಡೇ ಓಡಾಡಬೇಕಾಯ್ತು. ಇದರಿಂದಾಗಿಯೇ ಅವರಿಗೆ ‘ಅಣಿ ಮಾಂಡವ್ಯ’ ಎಂಬ ಹೆಸರು ಬಂತು.

ಇದರಿಂದ ಬೇಸರಗೊಂಡ ಅಣಿಮಾಂಡವ್ಯರು ಯಮನಲ್ಲಿಗೆ ತೆರಳಿ, “ನನಗೇಕೆ ಈ ಶಿಕ್ಷೆ?” ಎಂದು ವಿಚಾರಿಸಿದರು. ಆಗ ಚಿತ್ರಗುಪ್ತನು ದಫ್ತರ ತೆಗೆದು “ಕಳೆದ ಜನ್ಮದಲ್ಲಿ ಬಾಲಕನಾಗಿದ್ದಾಗ ಪತಂಗಗಳ ಬೆನ್ನಿಗೆ ನೀವು ಮುಳ್ಳು ಚುಚ್ಚಿದ್ದಿರಿ. ಅದಕ್ಕಾಗಿ ಯಮಧರ್ಮ ನಿಮೆಗ ಈ ಶಿಕ್ಷೆ ನೀಡಿದ್ದಾನೆ” ಎಂದ. “ಹನ್ನೆರಡು ವರ್ಷಗಳ ಒಳಗಿನ ಮಕ್ಕಳ ತಪ್ಪುಗಳು ಅಪರಾಧವಲ್ಲ. ಅಷ್ಟೂ ತಿಳಿಯದೆ ನನಗೆ ಶಿಕ್ಷೆ ವಿಧಿಸಿರುವ ನೀನು ಭೂಮಿಯಲ್ಲಿ ಹುಟ್ಟು” ಎಂದು ಅಣಿಮಾಂಡವ್ಯರು ಯಮನಿಗೆ ಶಾಪ ಕೊಟ್ಟರು.

ಶಾಪ ಪಡೆದ ಯಮಧರ್ಮನು ದ್ವಾಪರ ಯುಗದಲ್ಲಿ ಕುರುಕುಲದ ಅರಸನ ದಾಸಿಯ ಮಗನಾಗಿ ‘ವಿದುರ’ನೆಂಬ ಹೆಸರಿನಿಂದ ಜನಿಸಿದನು
***


.
Then human lived to 150 to 200 year and had childhood till 40 years...krishna was 11 (today's 5)..when killed kans .. krishna was 46 (today's 23) in droupadi sayambara..Arjuna was his same age..krishna was 56(today's 28 young man)..when Arjuna married Subhadra..then Subhadra was 37 (today's 18)..krishna was 76(today's 38) at the time of dice game...krishna was 89 (today's 44)..at the time of war ..krishna was 125 (today's 63)..when he died...at the time of war Abhimanyu was 32 (today's 16 year boy).and Uttara was 29 (today's 14 year girl)..karna was 107 (today's 54)..bhisma was 186 (today's 92)...drona and shakuni was 141 (today's 70).
***


***
Y





No comments:

Post a Comment