SEARCH HERE

Tuesday 1 January 2019

ತೈತ್ತಿರೀಯ ಬ್ರಾಹ್ಮಣ taitareeya brahmana


taitareeya brahmana

(ಪ್ರಣಯನಂ ವಿಧತ್ತೇ— “ಅಪಃ ಪ್ರಣಯತಿ” (ತೈ.ಬ್ರಾ.೩.೨.೪) ಇತಿ |) ತೈತ್ತಿರೀಯ ಬ್ರಾಹ್ಮಣದಲ್ಲಿ ವಿಧಿವತ್ತಾಗಿ (ನೀರು)ತರುವುದನ್ನು (ಪ್ರ-ನಯನಂ, ನೀ ಪ್ರಾಪಣೇ ಧಾತುಃ, ನಯತಿ, ಆನಯತಿ ಇತ್ಯಾದಿ) ಅಥವಾ ಪ್ರಣಯನವಿಧಿಯನ್ನು ವಿಧಿಸುತ್ತಾನೆ― “ನೀರನ್ನು ತರುತ್ತಾನೆ” ಎಂಬುದಾಗಿ. (ತತ್-ಪ್ರಕಾರಃ ಕಲ್ಪೇ ದರ್ಶಿತಃ—) ಅದರ ವಿಧಾನವು ಬೌಧಾಯನಕಲ್ಪಸೂತ್ರದಲ್ಲಿ ತೋರಿಸಲ್ಪಟ್ಟಿದೆ—  (“ಅಥ ಉತ್ತರೇಣ ಗಾರ್ಹಪತ್ಯಮ್ ಉಪವಿಶ್ಯ ಕಗ್ಂಸಂ (ಕಂಸಂ) ವಾ ಚಮಸಂ ವಾ ಪ್ರಣೀತಾಪ್ರಣಯನಮ್ ಆನೀಯ) ಬಳಿಕ, ಮನೆಯ ಬಳಿಗೆ ಹೋಗಿ ಉತ್ತರದಿಕ್ಕಿನ ದ್ವಾರದಿಂದ ಒಳಕ್ಕೆ ಪ್ರವೇಶಿಸಿ (ಉಪವಿಶ್ಯ―> ಉಪ― ಸಮೀಪೇ, ವಿಷ್ಟ್ವಾ / ಪ್ರವಿಶ್ಯ―ವಿಶ ಪ್ರವೇಶನೇ. ಕ್ರಿಯಾಪದಕ್ಕೆ ಉಪಸರ್ಗವು ಸೇರಿದಾಗ ಕ್ತ್ವಾನ್ತಾವ್ಯಯವು ಲ್ಯಬನ್ತಾವ್ಯಯವಾಗುತ್ತದೆ. ಹೀಗಾಗಿ ಇಲ್ಲಿ ವಿಷ್ಟ್ವಾ ಎಂಬುದು ಉಪ ಎಂಬ ಉಪಸರ್ಗದಿಂದ ಉಪವಿಶ್ಯ ಎಂದಾಗಿದೆ.), ಜಲಮೂಲದಿಂದ ತಂದ (ಪ್ರಣೀತಾ) ಜಲವನ್ನು ಯಾಗವೇದಿಯ ಬಳಿತರುವುದಕ್ಕೆ ಬೇಕಾದ (ಪ್ರಣಯನಮ್―> ಪ್ರ-ನಯನಮ್― ಇಲ್ಲಿ ಪ್ರ ಶಬ್ದದ ರೇಫ / ರಕಾರದಿಂದಾಗಿ ನತ್ವವು ಣತ್ವವಾಗಿದೆ) ಕಂಸ ಅಥವಾ ಚಮಸವೆಂಬ ಯಜ್ಞಪಾತ್ರವಿಶೇಷವನ್ನು ತಂದು (ಆನೀಯ— ನೀತ್ವಾ),
 (ತಸ್ಮಿನ್, ತಿರಃಪವಿತ್ರಮ್ ಅಪಃ, ಆನಯನ್ ಆಹ) ಅದರಲ್ಲಿ / ಆ ಪಾತ್ರೆಯಲ್ಲಿ ಊರ್ಧ್ವಮುಖವಾದ ದರ್ಭಾಪವಿತ್ರಸಹಿತವಾದ ನೀರನ್ನು ತರುತ್ತಾ (ಆ-ನಯನ್― ಪಠನ್, ಶೃಣ್ವನ್ ಎಂಬಂತೆ) ಹೇಳುತ್ತಾನೆ, (‘ಬ್ರಹ್ಮನ್  ! ಅಪಃ ಪ್ರಣೇಷ್ಯಾಮಿ, ಯಜಮಾನ ! ವಾಚಂ ಯಚ್ಛ’ ಇತಿ”) ‘ಬ್ರಹ್ಮವಿದನೆ! ನೀರನ್ನು ತರುವೆನು. ಯಜ್ಞಕರ್ತೃವೆ! ವಾಗ್ದಾನಮಾಡು / ಮಾತು ಕೊಡು’ ಎಂಬುದಾಗಿ, (ಪ್ರಸೂತಃ ಸಮಂ ಪ್ರಾಣೈಃ ಧಾರಯಮಾಣಃ ವಿಷಿಞ್ಚನ್ ಹೃತ್ವಾ ಉತ್ತರೇಣ ಆಹವನೀಯಂ ದರ್ಭೇಷು ಸಾದಯಿತ್ವಾ ” ಇತಿ |) ಪಂಚಪ್ರಾಣೋಪಪ್ರಾಣಗಳೊಂದಿಗೆ ಪ್ರೇರಿತಬುದ್ಧಿಯುಳ್ಳವನಾಗಿ ಜಲಸೇಚನೆಯನ್ನು ಮಾಡುತ್ತಾ ಉತ್ತರದಿಕ್ಕಿನಿಂದ ಆಹವನೀಯಾಗ್ನಿಯನ್ನು ದರ್ಭೆಗಳಲ್ಲಿಟ್ಟು” ಎಂದು.  

(ಪ್ರಣಯನವಿಧೇಃ ಅರ್ಥವಾದಮ್ ಆಹ— “ಶ್ರದ್ಧಾ ವಾ ಆಪಃ | ಶ್ರದ್ಧಾಮ್ ಏವ ಆರಭ್ಯ ಪ್ರಣೀಯ ಪ್ರಚರತಿ ” (ತೈ.ಬ್ರಾ.೩.೨.೪) ಇತಿ |) ಪ್ರಣಯನವಿಧಿಯ / ನೀರು ತರುವುದರ ಅಂತರಾರ್ಥವನ್ನು ಹೇಳುತ್ತಾನೆ― “ಶ್ರದ್ಧೆಯೇ ನೀರು. ಶ್ರದ್ಧೆಯಿಂದಲೇ ಯಜ್ಞಕರ್ಮದಲ್ಲಿ ತೊಡಗಿ, ಶ್ರದ್ಧೆಯಿಂದಲೇ ನಡೆಸಿ, ಆಚರಿಸುತ್ತಾನೆ” ಎಂದಿದೆ ತೈತ್ತಿರೀಯ ಬ್ರಾಹ್ಮಣ. (ಅಪಾಂ ಶ್ರದ್ಧಾಜನಕತ್ವೇನ ಶ್ರದ್ಧಾರೂಪತ್ವಮ್ ಉಪಚರ್ಯತೇ |) ನೀರಿನ ಶ್ರದ್ಧಾಜನಕತ್ವದಿಂದ, ನೀರನ್ನು ಶ್ರದ್ಧಾರೂಪವಾಗಿ ಉಪಚರಿಸಲಾಗುತ್ತದೆ. ನೀರಿನಿಂದ / ಸ್ನಾನಾಚಮನಾದಿಗಳಲ್ಲಿ ನೀರಿನ ಬಳಕೆಯಿಂದ ಕರ್ಮಶ್ರದ್ಧೆಯುಂಟಾಗುವುದರಿಂದ, ನೀರು ಶ್ರದ್ಧಾರೂಪಿಯೆನ್ನಲಾಗಿದೆ. (ತತ್-ಜನಕತ್ವಂ ಚ ಶ್ರುತ್ಯನ್ತರೇ ಸಮಾಮ್ನಾತಮ್—) ನೀರು ಹೇಗೆ ಶ್ರದ್ಧೆಯುಂಟುಮಾಡುವುದೆಂಬ ಬಗ್ಗೆ ಬೇರೆ ಶ್ರುತಿ / ವೇದಭಾಗದಲ್ಲಿ ಉಪದಿಷ್ಟವಾಗಿದೆ― (“ಆಪೋ ಹ ಅಸ್ಮೈ ಶ್ರದ್ಧಾಂ ಸಂನಮನ್ತೇ ಪುಣ್ಯಾಯ ಕರ್ಮಣೇ” ಇತಿ |) “ಮಾನವನಿಗೆ / ಯಜಮಾನನಿಗೆ ನೀರು ಪುಣ್ಯಕರ್ಮಾಚರಣೆ ಮಾಡಲು ಶ್ರದ್ಧೆಯನ್ನು ರೂಪಿಸುತ್ತದೆ” ಎಂಬುದಾಗಿ. (ದೃಶ್ಯತೇ ಚ ಸ್ನಾನ-ಆಚಮನ-ಉಪೇತಸ್ಯ ಶ್ರದ್ಧಾ-ಅತಿಶಯಃ |) ಸ್ನಾನ, ಆಚಮನಗಳನ್ನು ಆಚರಿಸಿದ ವ್ಯಕ್ತಿಗೆ ವೇದೋಕ್ತ / ಪುಣ್ಯ ಕರ್ಮಗಳಲ್ಲಿ ಅತಿಶಯವಾದ ಶ್ರದ್ಧೆಯುಂಟಾಗುವುದು ಕಂಡುಬರುತ್ತದೆಯಲ್ಲವೆ?

****


ಪೂರ್ವೋಕ್ತಮೇವ ಪ್ರಣಯನವಿಧಿಂ ಪುನಃ ಪುನಃ ಅನೂದ್ಯ ಬಹುಧಾ ಸ್ತೌತಿ — 


ಹಿಂದೆಯೇ ಹೇಳಿದ ಜಲಪ್ರಣಯನವಿಧಿ / ನೀರು ತರುವ ವಿಧಾನ ವನ್ನು ಮತ್ತೆ ಮತ್ತೆ ಅನು-ವಾದಿಸಿ (ಅನುಸರಿಸಿ ಹೇಳಿ) ಬಹುವಿಧವಾಗಿ ಸ್ತುತಿಸುತ್ತಾನೆ―


 “ಅಪಃ ಪ್ರಣಯತಿ | ಯಜ್ಞೋ ವಾ ಆಪಃ | ಯಜ್ಞಮ್ ಏವ ಆರಭ್ಯ ಪ್ರಣೀಯ ಪ್ರಚರತಿ |


 ನೀರನ್ನು ತರುತ್ತಾನೆ. ಜಲರಾಶಿಯೇ ಯಜ್ಞ ಅಥವಾ ಯಜ್ಞದಷ್ಟು ಪವಿತ್ರ. (‘ಪ’ಕಾರಾಂತ ಸ್ತ್ರೀಲಿಂಗ ‘ಅಪ್ ’ ಶಬ್ದವು ನಿತ್ಯಬಹುವಚನಾಂತ. ಏಕ, ದ್ವಿ ವಚನರೂಪಗಳಿಲ್ಲ. ಇದರ ಪ್ರಥಮಾದಿ ಸಂಬೋಧನಾಂತ ೭ ವಿಭಕ್ತಿಯ ರೂಪಗಳು― ಆಪಃ, ಅಪಃ, ಅಬ್ಭಿಃ, ಅಬ್ಭ್ಯಃ, ಅಪಾಮ್, ಅಪ್ಸು, ಹೇ ಆಪಃ). ನೀರು ತರುವುದೆಂದರೆ ಯಜ್ಞವನ್ನಾರಂಭಿಸಿ ಮುಂದುವರಿಸಿ ಆಚರಿಸುವಷ್ಟೇ ಪವಿತ್ರವಾದುದು. ನೀರಿನ ಪ್ರಯೋಜನ ಯಜ್ಞಫಲದಷ್ಟೇ ಪಾವನಕಾರಿಯಾದುದು.   


ಅಪಃ ಪ್ರಣಯತಿ | ವಜ್ರೋ ವಾ ಆಪಃ | ವಜ್ರಮ್ ಏವ ಭ್ರಾತೃವ್ಯೇಭ್ಯಃ ಪ್ರಹತ್ಯ ಪ್ರಣೀಯ ಪ್ರಚರತಿ | 


ನೀರನ್ನು ತರುತ್ತಾನೆ. ವಜ್ರಾಯುಧವೇ ನೀರು / ನೀರೇ ವಜ್ರಾಯುಧದಷ್ಟು ಶಕ್ತಿಶಾಲಿ. ಅಂತಹ ಮಂತ್ರಿತ ಜಲವೆಂಬ ವಜ್ರಾಯುಧವನ್ನೇ ತಂದು ಶತ್ರುಗಳನ್ನು ಹತರನ್ನಾಗಿಸಿ ಮುನ್ನಡೆಯುತ್ತಾನೆ; ತನ್ನ ಕರ್ಮವನ್ನು ಸುಸೂತ್ರವಾಗಿ, ನಿರ್ವಿಘ್ನವಾಗಿ ಮುನ್ನಡೆಸುತ್ತಾನೆ.  


ಅಪಃ ಪ್ರಣಯತಿ | ಆಪೋ ವೈ ರಕ್ಷೋಘ್ನೀಃ | ರಕ್ಷಸಾಮ್ ಅಪಹತ್ಯೈ | 


ನೀರನ್ನು ತರುತ್ತಾನೆ. ಜಲವು ವಿಘ್ನಕಾರಿ ರಕ್ಷೋಗಣದ / ರಾಕ್ಷಸೀಶಕ್ತಿಯ / ಆಸುರೀಬುದ್ಧಿಯ ನಾಶಕಾರಕ. ಹಾಗಾಗಿ, ದುಷ್ಟತನದ ನಿವಾರಣೆಗಾಗಿ (ನೀರನ್ನು ತರುತ್ತಾನೆ).


  ಅಪಃ ಪ್ರಣಯತಿ | ಆಪೋ ವೈ ದೇವಾನಾಂ ಪ್ರಿಯಂ ಧಾಮ | ದೇವಾನಾಮ್ ಏವ ಪ್ರಿಯಂ ಧಾಮ ಪ್ರಣೀಯ ಪ್ರಚರತಿ | 


ನೀರನ್ನು ತರುತ್ತಾನೆ. ಜಲರಾಶಿಯೇ ದೇವತೆಗಳ ಪ್ರಿಯವಾದ ಧಾಮವಷ್ಟೆ? (ಜಲದಲ್ಲೇ ವಿಷ್ಣು, ವರುಣಾದಿ ಸಕಲದೇವತೆಗಳೂ ನೆಲೆಸಿರುವರು.) ಹೀಗೆ, ದೇವರುಗಳ ಪ್ರಿಯವಾದ ಮನೆಯೆನಿಸಿದ ಜಲವನ್ನೇ ತಂದು ಯಜ್ಞಾದಿ ಸಕಲ ಪವಿತ್ರಕರ್ಮಗಳನ್ನೂ ಆಚರಿಸುತ್ತಾನೆ.


 ಅಪಃ ಪ್ರಣಯತಿ | ಆಪೋ ವೈ ಸರ್ವಾಃ, ದೇವತಾಃ | ದೇವತಾಃ, ಏವ ಆರಭ್ಯ ಪ್ರಣೀಯ ಪ್ರಚರತಿ” (ತೈ.ಬ್ರಾ.೩.೨.೪) ಇತಿ |



ನೀರನ್ನು ತರುತ್ತಾನೆ. ಜಲಕಣಗಳೇ ಎಲ್ಲ ದೇವತೆಗಳ ಸ್ವರೂಪವೇ ಆಗಿವೆ. ನೀರಿನ ಹನಿಹನಿಗಳಲ್ಲೂ ಸಕಲದೇವತಾತತ್ತ್ವಗಳೂ ಅಡಗಿವೆ. ಹೀಗಾದ್ದರಿಂದ, ಸರ್ವದೇವತಾಸ್ವರೂಪವಾದ ಜಲವನ್ನು ತರುವ ಮೂಲಕ ಯಜ್ಞಕರ್ಮವನ್ನಾರಂಭಿಸಿ, ಮುಂದುವರಿಸಿ ಪರಿಪೂರ್ಣವಾಗಿ ಆಚರಿಸುತ್ತಾನೆ / ನಡೆಸುತ್ತಾನೆ— ಎಂದಿದೆ ತೈತ್ತಿರೀಯ ಬ್ರಾಹ್ಮಣ.
****
ಓಂ ಆಶಾಸ್ತೇऽಯಂ ಯಜಮಾನೋऽಸೌ | ಆಯುರಾಶಾಸ್ತೇ | ಸುಪ್ರಜಾಸ್ತ್ವಮಾಶಾಸ್ತೇ | ಸಜಾತವನಸ್ಯಾಮಾಶಾಸ್ತೇ | ಉತ್ತರಾಂ ದೇವಯಜ್ಯಾಮಾಶಾಸ್ತೇ | ಭೂಯೋ ಹವಿಷ್ಕರಣಮಾಶಾಸ್ತೇ | ದಿವ್ಯಂ ಧಾಮಾऽऽಶಾಸ್ತೇ | ವಿಶ್ವಂ ಪ್ರಿಯಮಾಶಾಸ್ತೇ | ಯದನೇನ ಹವಿಷಾऽऽಶಾಸ್ತೇ | ತದಶ್ಯಾತ್ತದೃಧ್ಯಾತ್ | ತದಸ್ಮೈ ದೇವಾ ರಾಸನ್ತಾಮ್ | ತದಗ್ನಿರ್ದೇವೋ ದೇವೇಭ್ಯೋ ವನತೇ | ವಯಮಗ್ನೇರ್ಮಾನುಷಾಃ | ಇಷ್ಟಂ ಚ ವೀತಂ ಚ | ಉಭೇ ಚ ನೋ ದ್ಯಾವಾ ಪೃಥಿವೀ ಅಗ್ಂಹಸಸ್ಪಾತಾಮ್ | ಇಹ ಗತಿರ್ವಾಮಸ್ಯೇದಂ ಚ | ನಮೋ ದೇವೇಭ್ಯಃ ||

ಭಟ್ಟಭಾಸ್ಕರಭಾಷ್ಯ—

ಆಶಾಸ್ತೇ ಅಯಂ ಯಜಮಾನಃ, ಅಸೌ—

ಏವಮ್ ಅಹಮ್ ಆಶಾಸೇ, ಅಯಮ್ ಅಪಿ ಯಜಮಾನಃ, ಇದಮ್ ಆಶಾಸ್ತೇ | ಋಧೇಃ ಲೇಟಿ ವ್ಯತ್ಯಯೇನ ಶಃ | ಅಸೌ— ಇತ್ಯತ್ರ ಯಜಮಾನ-ನಾಮ ಗೃಹ್ಯತೇ ವಿಷ್ಣುಶರ್ಮಾ ರುದ್ರಶರ್ಮಾ ಇತಿ | ಬ್ರಾಹ್ಮಣಂ ಚ— “ಯರ್ಹಿ (ಯಃ ಹಿ) ಹೋತಾ ಯಜಮಾನಸ್ಯ ನಾಮ ಗೃಹ್ಣೀಯಾತ್” ಇತಿ ||


ಹೀಗೆ / ಈ ರೀತಿಯಾಗಿ ನಾನು (ಪುರೋಹಿತನು) ಆಶಿಸುತ್ತೇನೆ / ಬಯಸುತ್ತೇನೆ, ಈ ಯಜಮಾನನೂ ಕೂಡ, ಇದನ್ನೇ ಬಯಸಿ ಆಶಿಸುತ್ತಾನೆ. “ಋಧು ವೃದ್ಧೌ” ಎಂಬ ವೃದ್ಧಿಸೂಚಕ ಧಾತುವಿಗೆ ವೈದಿಕ ಲೇಟ್ ಲಕಾರ ಪ್ರಯೋಗದಿಂದ ವ್ಯತ್ಯಾಸವಾಗಿ ಶ-ಕಾರವು ಬಂದಿದೆ. (ಹೀಗಾಗಿ ‘ಋಧ್ನೋತಿ’ ಗೆ ಬದಲಾಗಿ ‘ಆಶಾಸ್ತೇ’ ಬಂದಿದೆ). ಅಸೌ— ಎಂಬಲ್ಲಿ ಯಜಮಾನನ ವಿಷ್ಣುಶರ್ಮಾ / ರುದ್ರಶರ್ಮಾ ಇತ್ಯಾದಿ ಅಂಕಿತನಾಮವು  ಪರಿಗ್ರಹಿಸಲ್ಪಡುತ್ತದೆ. ಇದಕ್ಕೆ ಆಧಾರವಾಗಿ ತೈತ್ತಿರೀಯಬ್ರಾಹ್ಮಣಭಾಗ (ತೈ.ಸಂ.೧.೭.೪ರಲ್ಲಿ ಹೇಳಿದೆ)— “ಯಾರು ಹೋತೃವೆಂಬ ಋತ್ವಿಜನಿರುವನೋ ಆತನು (ಈ ಸಂದರ್ಭದಲ್ಲಿ) ಯಜ್ಞಕರ್ತೃ / ಯಜ-ಮಾನ ನ ಹೆಸರನ್ನು ತೆಗೆದುಕೊಳ್ಳಬೇಕು” ಎಂದು.
*******

ತೈತ್ತಿರೀಯಬ್ರಾಹ್ಮಣ ಅಷ್ಟಕ ೩, ಪ್ರಪಾಠಕ ೫, ಅನುವಾಕ ೧೦
ಓಂ ಆಶಾಸ್ತೇऽಯಂ ಯಜಮಾನೋऽಸೌ | ಆಯುರಾಶಾಸ್ತೇ | ಸುಪ್ರಜಾಸ್ತ್ವಮಾಶಾಸ್ತೇ | ಸಜಾತವನಸ್ಯಾಮಾಶಾಸ್ತೇ | ಉತ್ತರಾಂ ದೇವಯಜ್ಯಾಮಾಶಾಸ್ತೇ | ಭೂಯೋ ಹವಿಷ್ಕರಣಮಾಶಾಸ್ತೇ | ದಿವ್ಯಂ ಧಾಮಾऽऽಶಾಸ್ತೇ | ವಿಶ್ವಂ ಪ್ರಿಯಮಾಶಾಸ್ತೇ | ಯದನೇನ ಹವಿಷಾऽऽಶಾಸ್ತೇ | ತದಶ್ಯಾತ್ತದೃಧ್ಯಾತ್ | ತದಸ್ಮೈ ದೇವಾ ರಾಸನ್ತಾಮ್ | ತದಗ್ನಿರ್ದೇವೋ ದೇವೇಭ್ಯೋ ವನತೇ | ವಯಮಗ್ನೇರ್ಮಾನುಷಾಃ | ಇಷ್ಟಂ ಚ ವೀತಂ ಚ | ಉಭೇ ಚ ನೋ ದ್ಯಾವಾ ಪೃಥಿವೀ ಅಗ್ಂಹಸಸ್ಪಾತಾಮ್ | ಇಹ ಗತಿರ್ವಾಮಸ್ಯೇದಂ ಚ | ನಮೋ ದೇವೇಭ್ಯಃ ||

(ತೈತ್ತಿರೀಯಬ್ರಾಹ್ಮಣ ಅಷ್ಟಕ ೩, ಪ್ರಪಾಠಕ ೫, ಅನುವಾಕ ೧೦)

ಭಟ್ಟಭಾಸ್ಕರಭಾಷ್ಯ—

ಆಶಾಸ್ತೇ ಅಯಂ ಯಜಮಾನಃ, ಅಸೌ—

ಏವಮ್ ಅಹಮ್ ಆಶಾಸೇ, ಅಯಮ್ ಅಪಿ ಯಜಮಾನಃ, ಇದಮ್ ಆಶಾಸ್ತೇ | ಋಧೇಃ ಲೇಟಿ ವ್ಯತ್ಯಯೇನ ಶಃ | ಅಸೌ— ಇತ್ಯತ್ರ ಯಜಮಾನ-ನಾಮ ಗೃಹ್ಯತೇ ವಿಷ್ಣುಶರ್ಮಾ ರುದ್ರಶರ್ಮಾ ಇತಿ | ಬ್ರಾಹ್ಮಣಂ ಚ— “ಯರ್ಹಿ (ಯಃ ಹಿ) ಹೋತಾ ಯಜಮಾನಸ್ಯ ನಾಮ ಗೃಹ್ಣೀಯಾತ್” ಇತಿ ||

ಹೀಗೆ / ಈ ರೀತಿಯಾಗಿ ನಾನು (ಪುರೋಹಿತನು) ಆಶಿಸುತ್ತೇನೆ / ಬಯಸುತ್ತೇನೆ, ಈ ಯಜಮಾನನೂ ಕೂಡ, ಇದನ್ನೇ ಬಯಸಿ ಆಶಿಸುತ್ತಾನೆ. “ಋಧು ವೃದ್ಧೌ” ಎಂಬ ವೃದ್ಧಿಸೂಚಕ ಧಾತುವಿಗೆ ವೈದಿಕ ಲೇಟ್ ಲಕಾರ ಪ್ರಯೋಗದಿಂದ ವ್ಯತ್ಯಾಸವಾಗಿ ಶ-ಕಾರವು ಬಂದಿದೆ. (ಹೀಗಾಗಿ ‘ಋಧ್ನೋತಿ’ ಗೆ ಬದಲಾಗಿ ‘ಆಶಾಸ್ತೇ’ ಬಂದಿದೆ). ಅಸೌ— ಎಂಬಲ್ಲಿ ಯಜಮಾನನ ವಿಷ್ಣುಶರ್ಮಾ / ರುದ್ರಶರ್ಮಾ ಇತ್ಯಾದಿ ಅಂಕಿತನಾಮವು  ಪರಿಗ್ರಹಿಸಲ್ಪಡುತ್ತದೆ. ಇದಕ್ಕೆ ಆಧಾರವಾಗಿ ತೈತ್ತಿರೀಯಬ್ರಾಹ್ಮಣಭಾಗ (ತೈ.ಸಂ.೧.೭.೪ರಲ್ಲಿ ಹೇಳಿದೆ)— “ಯಾರು ಹೋತೃವೆಂಬ ಋತ್ವಿಜನಿರುವನೋ ಆತನು (ಈ ಸಂದರ್ಭದಲ್ಲಿ) ಯಜ್ಞಕರ್ತೃ / ಯಜ-ಮಾನ ನ ಹೆಸರನ್ನು ತೆಗೆದುಕೊಳ್ಳಬೇಕು” ಎಂದು.

ಇದಾನೀಂ ಋದ್ಧಿವಿಶೇಷಾನ್ ಏಕೈಕಶ್ಯೇನ ಆಹ— ಆಯುಃ ಶತವರ್ಷಪ್ರಮಾಣಮ್ | ಸುಪ್ರಜಾಸ್ತ್ವಂ ಶೋಭಮಾನ-ಅಪತ್ಯತ್ವಮ್ | ……| ಸಜಾತವನಸ್ಯಾಂ ಸಮಾನಜಾತೀಯೈಃ ಪ್ರಾಣೈಃ ವಾ ವನನಂ ಸೇವ್ಯತ್ವಮ್ ಆತ್ಮನಃ …..| ಉತ್ತರಾಮ್ ಉತ್ತರಕಾಲಭಾವಿನೀಂ ದೇವಯಜ್ಯಾಂ ದರ್ಶಪೂರ್ಣಮಾಸಾದಿಕಾಂ ಭೂಯಃ ಬಹುತರಂ ಹವಿಷ್ಕರಣಂ ಯಾಗಂ, ದಿವ್ಯಂ ದಿವಿ ಭವಂ ಧಾಮ ಸ್ಥಾನಮ್ | ಕಿಂ ಬಹುನಾ— ಸರ್ವಂ ಪ್ರಿಯಮ್ ಆತ್ಮನಃ, ಆಶಾಸ್ತೇ | 

ಈಗ ಸಂಪತ್-ಸಿದ್ಧಿವಿಶೇಷಗಳನ್ನು ಏಕೈಕಶಃ / ಒಂದೊಂದಾಗಿ (ಏಕೈಕಶಸ್ಯ ಭಾವಃ ಏಕೈಕಶ್ಯಮ್, ತೇನ ಏಕೈಕಶ್ಯೇನ— ಒಂದೊಂದಾಗಿ ಹೇಳುವಿಕೆಯ ಭಾವವು ಏಕೈಕಶ್ಯಮ್, ಆ ಭಾವದಿಂದ) ಹೇಳುತ್ತಾನೆ— ಆಯುಃ ಮಾನವನಿಗೆ ನಿಗದಿತವಾದ ನೂರುವರ್ಷಗಳ ದೀರ್ಘಾಯುಷ್ಯವನ್ನು; ಸು-ಪ್ರಜಾಸ್ತ್ವಂ ಶ್ರೇಷ್ಠವಾಗಿ ಶೋಭಿಸುವ ಸಂತತಿಯನ್ನು; ಸಜಾತವನಸ್ಯಾಂ ಸಮಾನಜಾತಿಯವರಿಂದ / ಮಾನವ ಸೇವಕರಿಂದ ತಾನು ಸೇವೆಮಾಡಲ್ಪಡುವ ಯೋಗ್ಯತೆಯನ್ನು ಅಥವಾ ಪಂಚಪ್ರಾಣೋಪಪ್ರಾಣಗಳಿಂದ ಸದಾ ಸೇವಿಸಲ್ಪಡುತ್ತಿರುವ ಆತ್ಮ / ಜೀವಾತ್ಮ ವು ತನ್ನದಾಗುವಂತೆ; ಉತ್ತರಾಂ ಇನ್ನು ಮುಂದಿನ ಭವಿಷ್ಯತ್ಕಾಲದಲ್ಲಿ, ದೇವಯಜ್ಯಾಂ ದರ್ಶ (ಯಾಗವಿಶೇಷ / ಅಮಾವಾಸ್ಯಾ—ವಿಧಾತೃ-ಸಿನೀವಾಲೀಯರ ಪುತ್ರ; “ಅನ್ಯೋऽನ್ಯಂ ಚನ್ದ್ರಸೂರ್ಯೌ ತು ದರ್ಶನಾದ್ದರ್ಶ ಉಚ್ಯತೇ”— ಮತ್ಸ್ಯಪುರಾಣ— ಸೂರ್ಯಚಂದ್ರರು ಪರಸ್ಪರರನ್ನು ಹಗಲೇ ದರ್ಶನಮಾಡುವುದರಿಂದ, ರಾತ್ರಿ ಚಂದ್ರನಿರದ ಅಮಾವಾಸ್ಯೆಯು ದರ್ಶ ಎನಿಸಿದೆ)-ಪೂರ್ಣಮಾಸ (ಯಾಗವಿಶೇಷ / ಪೌರ್ಣಮೀ) ಮುಂತಾದ, ಭೂಯಃ ಬಹುವಿಧವಾದ, ಹವಿಷ್ಕರಣಂ ಹವಿಃಪ್ರದಾನಿಸುವಿಕೆ / ಯಾಗಗಳನ್ನು; ದಿವ್ಯಂ ದೇವಲೋಕದಲ್ಲಿರುವ / ದಿವ್ಯವಾದ, ಧಾಮ ಪುಣ್ಯನಿವಾಸಸ್ಥಳವನ್ನು / ಸ್ವರ್ಗಾದಿ ಪುಣ್ಯಲೋಕಗಳನ್ನು; ಹೆಚ್ಚೇಕೆ? ತನಗೆ ಪ್ರಿಯವಾದುದೆಲ್ಲವನ್ನೂ (ಯಜಮಾನನು) ಬಯಸಿ, ಆಶಿಸುತ್ತಿರುವನು.

ಕಿಂ ಚ— ಯದ್ ಅನೇನ ಪ್ರಶಸ್ತತರ-ಆಜ್ಯೇನ ಪ್ರಹ್ರಿಯಮಾಣೇನ ಹವಿಷಾ ಆಶಾಸ್ತೇ ತದಶ್ಯಾತ್ ತತ್ಫಲಂ ಭುಙ್ಕ್ತಾಮ್, ತತ್ ಚ ಫಲಂ ಋಧ್ಯಾತ್ ಸಮೃದ್ಧಮ್ ಅಸ್ಯ ಭವತು | ತದಸ್ಮೈ ಯಜಮಾನಾಯ ದೇವಾಃ ಅಗ್ನಿ-ಆದಯಃ ರಾಸನ್ತಾಂ ಸಂಸಾಧಯನ್ತಾಮ್ | ತತ್-ಫಲಮ್ ಅಸ್ಮೈ ದಾತುಂ ಅಗ್ನಿಃ ದೇವಃ ಸನ್ ದೇವೇಭ್ಯೋ (ದೇವೇಭ್ಯಃ) ದೇವಸಕಾಶಾತ್ ವನತೇ ಸಂಭಜತೇ | ವಯಂ ಚ ಮಾನುಷಾಃ ಸನ್ತಃ ಅಗ್ನೇಃ ಏವ ಪ್ರಸಾದೇನ ಮನುಷ್ಯಸಕಾಶಾತ್ ತಸ್ಮೈ ದಾತುಂ ವನಾಮಃ | 

ಅಲ್ಲದೆ— ಯದ್ ಅನೇನ ಯಾವುದನ್ನು ಈ ಶ್ರೇಷ್ಠವಾದ ತುಪ್ಪವೆಂಬ ಹವಿಷಾ ಆಶಾಸ್ತೇ ತದ್ ಅಶ್ಯಾತ್ ಹವಿಸ್ಸಿನ ಸಮರ್ಪಣೆಯಿಂದ ಬಯಸುತ್ತಾನೋ, ಆ ಫಲವನ್ನು ಭೋಗಿಸುವಂತಾಗಲಿ, ಹಾಗೂ ಆ ಫಲವು ಋಧ್ಯಾತ್ ಈತನಿಗೆ ಸಮೃದ್ಧವಾಗಿ ದೊರಕಲಿ. ತದ್ ಅಸ್ಮೈ ಅದನ್ನು ಯಜಮಾನನಿಗೆ, ದೇವಾಃ ಅಗ್ನಿಯೇ ಮೊದಲಾದ ದೇವತೆಗಳು ರಾಸನ್ತಾಮ್ ಸಂಸಾಧಿಸಿ / ಸಂಪಾದಿಸಿ ಕೊಡಲಿ, ಒದಗಿಸಿ ಕೊಡಲಿ. ಆ ಫಲವನ್ನು ಈತನಿಗೆ ನೀಡಲು ಅಗ್ನಿಃ ಅಗ್ನಿಯು ದೇವನಾಗಿ ದೇವೇಭ್ಯಃ ಸಕಲ ದೇವತೆಗಳಿಂದ ವನತೇ ಭಜಿಸಲ್ಪಡುತ್ತಾನೆ, ವಿನಂತಿಸಲ್ಪಡುತ್ತಾನೆ. ವಯಂ ನಾವಾದರೋ (ಋತ್ವಿಜರಾದರೋ) ಮಾನುಷಾಃ ಮನುಷ್ಯರಾಗಿರುವುದರಿಂದ / ಭೂಮಿಯಲ್ಲಿನ ಮಾನುಷಲೋಕದ ಸುರರಾಗಿರುವುದರಿಂದ, ಪೃಥ್ವಿಯಲ್ಲಿ ದೇವಲೋಕದ ಪ್ರತ್ಯಕ್ಷದೇವನಾದ ಅಗ್ನೇಃ ಅಗ್ನಿಯ ಪ್ರಸಾದದಿಂದಲೇ / ಕೃಪೆಯಿಂದಲೇ / ಆಶೀರ್ವಾದದಿಂದಲೇ, ಮನುಷ್ಯರಿಂದ ಹವಿಸ್ಸನ್ನು ದೇವತೆಗಳಿಗೆ ಸಮರ್ಪಿಸಲು ಅಗ್ನಿಯನ್ನು ವಿನಂತಿಸುತ್ತಾ ಪ್ರಾರ್ಥಿಸುತ್ತೇವೆ (ವನ ಭಕ್ತೌ— ಭಜಿಸು).

ಕಿಂ ಪುನಃ ತತ್-ಫಲಮ್ ಇತಿ ಆಹ— ಇಷ್ಟಂ ಯಾಗನಿಮಿತ್ತಂ ಸ್ವರ್ಗಾದಿಕಮ್ | ವೀತಂ ಅಶನ-ಖಾದ್ಯಾದಿ-ರೂಪಂ ಯದ್ ಅಸ್ತಿ ತತ್-ಮಾನುಷಮ್ | 

ಹಾಗೆಯೇ, ಅದರ ಫಲವೇನೆಂದು ಮತ್ತೆ ಹೇಳುತ್ತಾನೆ— ಇಷ್ಟಂ ಕಾಮ್ಯ ಇಷ್ಟಿರೂಪೀ ಯಾಗಗಳಿಂದ ಮರಣೋತ್ತರವಾಗಿ ಪ್ರಾಪ್ತವಾಗುವ ದಿವ್ಯವಾದ ಸ್ವರ್ಗಾದಿ ಪರಗತಿಗಳು / ಶ್ರೇಯಸ್ಸು. ವೀತಂ ಚ ಹಾಗೂ ಈ ಮಾನುಷಲೋಕಕ್ಕೆ / ಇಹಕ್ಕೆ ಬೇಕಾದ ಅನ್ನಾಹಾರಪದಾರ್ಥಭಕ್ಷ್ಯಭೋಜ್ಯಾದಿ ಸಕಲ ಲೌಕಿಕಭೋಗಗಳು / ಪ್ರೇಯಸ್ಸು.

ಕಿಂ ಚ— ಉಭೇ ದ್ಯಾವಾ-ಪೃಥಿವ್ಯೌ ಅಂಹಸಃ ಪಾಪಾತ್ ಕರ್ಮ-ಅಪಚಾರ-ನಿಮಿತ್ತಾತ್ ಪಾತಾಮ್ ರಕ್ಷತಾಮ್ | ಇಹ ಹವಿಷಿ ವಾಮಸ್ಯ ವನನೀಯಸ್ಯ ಧನಸ್ಯ ಗತಿಃ ವ್ಯಾಪ್ತಿಃ | ಇದಂ ಚ ಏತತ್-ಹವಿರ್ಲಕ್ಷಣಂ ನಮಃ ಅನ್ನಂ ದೇವೇಭ್ಯಃ ಅಸ್ತು ಇತಿ ಶೇಷಃ | ಯದ್ವಾ— ಇದಮ್ ಏವ ನಮಃ ಪ್ರಶಸ್ತಂ ಹವಿಃ ದೇವೇಭ್ಯಃ, ಏವ, ದೇವಾಃ, ಏವ ಅಶ್ನನ್ತಿ ||

ಹಾಗೆಯೇ— ಉಭೇ ದೇವಲೋಕ-ಭೂಲೋಕಗಳೆಂಬ ಉಭಯ / ಎರಡೂ ಲೋಕಗಳ ಅಭಿಮಾನಿ ದೇವತೆಗಳು, ಅಂಹಸಃ (ನಾವು) ಮಾಡುವ ಕರ್ಮಗಳಲ್ಲಿ ಆಗಬಹುದಾದ ಅಪಚಾರ / ಪ್ರಮಾದ, ಲೋಪಾದಿ ಪಾಪಗಳಿಂದ, ಪಾತಾಮ್ ನಮ್ಮನ್ನು (ಋತ್ವಿಜ-ಯಜಮಾನರನ್ನು) ರಕ್ಷಿಸಲಿ. ಇಹ ಈ ಹವಿಸ್ಸಿನಲ್ಲಿ ವಾಮಸ್ಯ ಸರ್ವರಿಂದ ಪ್ರಶಂಸಿತವಾದ ಸಂಪತ್ತಿನ (ವಾಮಮ್— ಧನಮ್), ಗತಿಃ ಹರವು / ವ್ಯಾಪ್ತಿ-ವಿಸ್ತಾರಗಳಿವೆ. ಸಂಪತ್ತನ್ನುಂಟುಮಾಡುವ ಸಾಮರ್ಥ್ಯವಿದೆ. ಇದಂ ಚ ಈ ಯಜ್ಞಹವಿಸ್ಸಿನ ಗುಣಲಕ್ಷಣಗಳಿರುವ, ನಮಃ ಅನ್ನವು (‘ಸ'ಕಾರಾನ್ತ ನಪುಂಸಕಲಿಙ್ಗ ‘ನಮಸ್’ ಶಬ್ದಕ್ಕೆ ಯಾಸ್ಕ ‘ನಿಘಂಟು'ವಿನಲ್ಲಿ ‘ಅನ್ನಮ್’ ಎಂಬರ್ಥವಿದೆ), ದೇವೇಭ್ಯಃ ದೇವತೆಗಳಿಗಾಗಿ ಇರಲಿ ಎಂದರ್ಥ. ಅಥವಾ— ಈ ಶ್ರೇಷ್ಠವಾದ ಹವಿಸ್ಸು ದೇವತೆಗಳಿಗೇ ಮೀಸಲು, ದೇವತೆಗಳೇ ಇದನ್ನುಣ್ಣುತ್ತಾರೆ.
-ತೈತ್ತಿರೀಯಬ್ರಾಹ್ಮಣ ಅಷ್ಟಕ ೩, ಪ್ರಪಾಠಕ ೫, ಅನುವಾಕ ೧೦
*****

No comments:

Post a Comment