SEARCH HERE

Tuesday, 1 January 2019

ಪದ್ಧತಿ paddati custom

ಹಿರಿಯರ ಕಿವಿ ಮಾತು  🙏🏻
ಅವರ ಅನುಭವದ ಮುಂದೆ ಎಲ್ಲವು ಶೂನ್ಯ.  ಹಿರಿಯರು ಏನೋ ಹೇಳುತ್ತಾರೆ ಎಂದು ಮೂಗು ಮುರಿಯ ಬೇಡಿ.  ಒಮ್ಮೆ ಇದನ್ನ ಓದಿ ನೋಡಿ  ...🙏
1) ಸೋಮವಾರ ತಲೆಗೆಣ್ಣೆ ಹಾಕಬೇಡ
2) ಒಂಟಿ ಕಾಲಲ್ಲಿ ನಿಲಬೇಡ 
3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುದು ಬೇಡ
4) ಶುಕ್ರವಾರ ಸೊಸೆನ ತವರಿಗೆ ಕಳಿಸುದು ಬೇಡ
5) ಇಡೀ ಕುಂಬಳಕಾಯಿ ಮನೆಗೆ ತರಬೇಡ
6) ಮನೆಯಲ್ಲಿ ಉಗುರು ತೆಗಿಬೇಡ
7) ಮಧ್ಯಾಹ್ನ  ತುಳಸಿ ಕೊಯ್ಯಬೇಡ 
8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ / ತಲೆ ಬಾಚ ಬೇಡ 
9) ಉಪ್ಪು ಮೊಸರು  ಸಾಲ ಕೊಡುವುದು  ಬೇಡ 
10) ಬಿಸಿ ಅನ್ನಕ್ಕೆ ಮೊಸರು ಬೇಡ
11) ಊಟ ಮಾಡುವಾಗ ಮೇಲೆ  ಏಳ್ಬೇಡ 
12) ತಲೆ ಕೂದಲು ಒಲೆಗೆ ಹಾಕಬೇಡ 
13) ಹೊಸಿಲನ್ನು ತುಳಿದು ದಾಟಬೇಡ 
14)ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡ
15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ
16) ರಾತ್ರಿ ಹೊತ್ತಲ್ಲಿ ಬಟ್ಟೆ ಒಗಿಯಬೇಡ
17) ಒಡೆದ ಬಳೆ ದರಿಸಬೇಡ 
18) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ  
19) ಉಗುರು ಕಚ್ಚಲು ಬೇಡ 
20) ಅಣ್ಣ ತಮ್ಮ ಒಟ್ಟಿಗೆ ಚೌರ     ಮಾಡಿಸಬೇಡ
21) ಒಂಟಿ ಬಾಳೆಲೆ  ತರಬೇಡ 
22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ
23)ಮುಸಂಜೆ ಹೊತ್ತಲ್ಲಿ ಮಲಗಬೇಡ  
24) ಕಾಲು ತೊಳಿವಾಗ ಹಿಮ್ಮಡಿ  ತೊಳಿಯೋದು ಮರೀಬೇಡ
25) ಹೊಸಿಲ ಮೇಲೆ  ಕೂರಬೇಡ
26) ತಿಂದ ತಕ್ಷಣ ಮಲಗಬೇಡ 
27) ಹಿರಿಯರ ಮುಂದೆ ಕಾಲು ಚಾಚಿ / ಕಾಲ ಮೇಲೆ ಕಾಲು  ಹಾಕಿ ಕೂರಬೇಡ 
28) ಕೈ ತೊಳೆದು ನೀರನ್ನು  ಒದರಬೇಡಿ   29) ರಾತ್ರಿ ಊಟದ ತಟ್ಟೆ  ತೊಳೆಯದೇ ಬಿಡಬೇಡ 
30) ಎಂಜಲ ಕೈಯಲ್ಲಿ ಊಟ ಬಡಿಸಬೇಡ 
31) ಪಾತ್ರೆಗಳ ಮೇಲೆ ಎಂಜಲು  ಕೈ  ತೊಳಿಯಬೇಡ....
***********

ಇದು ನಮ್ಮ ಹಿರಿಯರು ಹಾಕಿ ಕೊಟ್ಟ 'ಪದ್ಧತಿ' .
ನಮ್ಮ ಪದ್ಧತಿ.  ನಾವು ಹೀಗೇ ಮಾಡುವದು. ಪದ್ಧತಿ ಪ್ರಕಾರವೇ ಹೋಗಬೇಕು.
ಏನಾದರೂ ಪದ್ಧತಿ ತಪ್ಪಬಾರದು.
ನಮ್ಮ ಮನೆತನದ ಪದ್ಧತಿ.
ನಮ್ಮ ಕುಲ ಧರ್ಮದ ಪದ್ಧತಿ.
ನಮ್ಮ ಊರಿನ ಪದ್ಧತಿ. ರಾಜ್ಯದ ಪದ್ಧತಿ. ನಮ್ಮ ದೇಶದ ಪದ್ಧತಿ. ನಮ್ಮ ಜನರ ಪದ್ಧತಿ. ನಮ್ಮ ಭಾಷೆಯ ಪದ್ಧತಿ!
ಹೀಗೆ ನೂರೆಂಟು ಹೇಳುತ್ತೇವೆ
ಹೇಳುತ್ತ ತಿರುಗಾಡುತ್ತಿರುತ್ಯೇವೆ.
ಏನಿದು ಪದ್ಧತಿ?
ಯಾಕೆ ಮೀರಬಾರದು?
ಎಲ್ಲದಕ್ಕೂ ಪದ್ಧತಿ ಇದೆ. ಪದ್ಧತಿಗೂ ಒಂದು ಪದ್ಧತಿ ಇದೆ! -
'ಪದ್ಭ್ಯಾಂ ಹತಿಃ' 'ಪದೇನ ಹತಿಃ' = ಪದ್ಧತಿಃ
ಪಾದಗಳಿಂದ ತುಳಿಯಲ್ಪಟ್ಟಿದ್ದು. ಅನುಭವಗಳಿಂದ ಪಡೆಯಲ್ಪಟ್ಟಿದ್ದು.
'ಸಂಪ್ರದಾಯ' ವೂ ಅಷ್ಟೇ.
'ಸಮ್ಯಕ್ ಪ್ರದಾಯ'
ಚೆನ್ನಾಗಿ ಕೊಡಲ್ಪಟ್ಟಿದ್ದು.
ಹಿರಿಯರು ಸಾಣೆ ಹಾಕಿ ಸೋಸಿ, ದೋಷ ನಿವಾರಿಸಿ, ಶುದ್ಧೀಕರಿಸಿ ಕೊಟ್ಟಿದ್ದು.
ಅಡವಿ ದಾಟಿ ಊರಿಂದ ಊರಿಗೆ ಹೋಗಬೇಕು. ಅಡವಿಯಲ್ಲಿ ದಾರಿ ತಪ್ಪಬಾರ ದು. ಏನು ಮಾಡ ಬೇಕು?
ಚಿರ ಕಾಲದಿಂದ ಜನ ತುಳಿದು ಹೋದ ಕಾಲುದಾರಿ ಇದೆ. ಮೂಡಿದ ಹೆಜ್ಜೆ ಗುರುತು ಇದೆ. ದಿಗ್ದರ್ಶನ ಮಾಡುತ್ತದೆ.
ಅನುಸರಿಸಿದರೆ ಸಾಕು.
ದಾರಿ ಸುರಕ್ಷಿತ ಸುರಳಿತ.
ಹಿರಿಯರು ಹಾಕಿಕೊಟ್ಡಿದ್ದಲ್ಲವೇ!
ಇದೇ ಪದ್ಧತಿ!
ಯಾಕೆ ಮೀರಬಾರದು?
ಇದು Time Tested  & Found correct.
ಪದ್ಧತಿಯ ಹಿಂದೆ ಹಿಂದಿನವರ ಅನುಭವದ ಅಮೃತ ತುಂಬಿದೆ.  ಹಿಂಬಾಲಿಸುವವರಿಗೆ ಹಿತವಾಗಲಿ ಎಂಬ ಹಾರ್ದಿಕ ಹಾರೈಕೆ ಹುದುಗಿದೆ.
ಎಲ್ಲ ಪ್ರತ್ಯಕ್ಷ ಪ್ರಮಾಣಿಸಿ ನೋಡಿ ನಂಬ ಬೇಕು ಎಂಬ ಹಠ ಸಲ್ಲ. ಹಾವು ವಿಷಮಯ. ಕಚ್ಚಿದರೆ ಸಾವು ಸಿದ್ಧ. ಇದು ಪ್ರಸಿದ್ಧ. ಇಲ್ಲ ಇದನ್ನು ಅನುಭವಿಸಿ, ಪರೀಕ್ಷಿಸಿ  ನಂಬ ಬೇಕು ಎನ್ನಲಾದೀತೇ? ಸಾಧ್ಯವಿಲ್ಲ. ಸಾಧು ಅಲ್ಲ.
ಹಳಬರನ್ನು ಏಕೆ ಅನುಸರಿಸ ಬೇಕು ಎಂಬ ಹಮ್ಮು ಬೇಕಿಲ್ಲ.
Old is Gold  ಮರೆಯ ಬೇಕಿಲ್ಲ.
ಹೊಸ ತಪ್ಪುಗಳ ಹವಣೆ ಬೇಡ.
ದಾರಿ ತಪ್ಪಿ ದಣಿಯ ಬೇಡ. ಮತ್ತೆ ಗೋಳಾಡುವ ಬವಣೆ ಬೇಡ.
ಹಿರಿಯರ ಸರಿ ಹೆಜ್ಜೆಯಲ್ಲಿ ಹೆಜ್ಜೆ ಹಾಕು.
ದಾರಿ ನೇರ. ಗುರಿ ಶೀಘ್ರ. ಸಾಕು.
ಮತ್ತೇನು ಬೇಕು!
ಹೇಳಲಿಲ್ಲವೇ ಜ್ಞಾನಿಗಳು.
ಪದ್ಧತಿ ಬಿಡಬೇಡ
ಬಿಟ್ಟು ಕೆಡಬೇಡ ಎಂದು.
ಎಲ್ಲವೂ ಅಷ್ಟೇ. ನಮ್ಮ ನಿತ್ಯ ಜೀವನವಿರಲಿ, ಪೂಜೆ ಪುನಸ್ಕಾರಗಳಿರಲಿ. ಹಬ್ಬ ಹುಣ್ಣಿಮೆ ಇರಲಿ. ಹುಟ್ಟು ಹಬ್ಬ, ಮುಂಜಿವೆ, ಮದುವೆ ಆದಿ ಸಂಸ್ಕಾರಗಳಿರಲಿ. ಸಾಮಾಜಿಕ  ಮಹದ ಉತ್ಸವ ಗಳಿರಲಿ. ಭಾಷೆ ಇರಲಿ. ದೇಶ
ಇರಲಿ, ಕೋಶ ಇರಲಿ. ಎಲ್ಲದಕ್ಕೂ ಇದೆ ಪದ್ಧತಿ.
ಇಲ್ಲವೇ ನಮ್ಮ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ
ಮತ್ತೆ ಎಲ್ಲೆಡೆಯಲ್ಲಿ Protocol.
ಅಂತೆಯೇ ಉಂಟು ಇಲ್ಲೂ.
ಬದಲಾವಣೆಗಳೇ ಬೇಡ ಪದ್ಧತಿಯಲ್ಲಿ ಎಂದಿಲ್ಲ. ದೇಶ, ಕಾಲ, ಕಾರಣಗಳ ಸ್ಥಿತಿಗತಿಯಿಂದ ಅನಿವಾರ್ಯ ಅಂತಿರಲು, ಮುಂದಿನವರಿಗೆ ಹಿತಕರ ಬಳುವಳಿಯಾಗುತ್ತಿರಲು ಏಕೆ ಬೇಡ?
ಅನೇಕ ಪದ್ಧತಿಗಳು ಅವಶ್ಯಕ ಬದಲಾವಣೆ ಕಂಡಿವೆಯಲ್ಲ.
ಪ್ರಾಚೀನ ದೃಷ್ಟಾಂತಗಳು  ಸಾಕಷ್ಟಿವೆ. ದೊಡ್ಡವರು ಹಾಕಿ ಕೊಟ್ಟ ದಾರಿಗಳಿವೆ. ಅವನ್ನು ಅನುಕರಿಸಿದವರಿದ್ಸಾರೆ. ಯಶಸ್ಸು ಪಡೆದವರು ತುಂಬಿದ್ದಾರೆ.
ಶ್ರೀ ರಾಮ ಸ್ವತಃ ಭಗವಂತ. ಯಾವ ಕಟ್ಟು ಪಾಡು ಪಾಲಿಸ ಬೇಕಾಗಿಲ್ಲ. ಆದರೂ -
ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ನಡೆದ.  ಮಾತೃಭಕ್ತಿಯನ್ನೂ ತೋರಿದ. ಆದರ್ಶ ಪುರುಷೋತ್ತಮನಾದ.
ಶ್ರೀ ಕೃಷ್ಣನೂ ಅಷ್ಟೇ. ಸರ್ವಜ್ಞ. ಸರ್ವೋತ್ತಮ.
ವಿದ್ಯೆ ಕಲಿಯ ಬೇಕಿರಲಿಲ್ಲ.
ಆದರೂ ಸಂದೀಪಿನಿ Univercityಗೆ ಹೋದ. ಅಡವಿಯ ಗುರುಕುಲದಲ್ಲಿದ್ದ.  ವಿದ್ಯೆ ಕಲಿತ. ಜಗಕೆ Degree ಕೊಡುವ ಜಗದೊಡೆಯ, ತಾನೂ Degree ತೆಗೆದುಕೊಂಡೇ ಬಂದ.
ಬಿಡಬೇಡಿ, ಇದು ಪದ್ಧತಿ ಎಂದ.
ಕುರುಕ್ಷೇತ್ರ. ಪಾಂಡವ ಕೌರವ ಸೈನಿಕರಿಂದ ತುಂಬಿದೆ.  ಯುದ್ಧ ಸ್ಫೋಟವಾಗಬೇಕು.  ಆತುರತೆ, ಆತಂಕಗಳ ತಾಂಡವ.
ಧರ್ಮರಾಜ ರಥದಿಂದ ಇಳಿದ. ಭರಭರನೇ ನಡೆದ. ಎಲ್ಲರೂ ಗಾಬರಿ.
ಶತ್ರುಪಕ್ಷಕ್ಕೆ ಬಂದ.
ಭೀಷ್ಮ ದ್ರೋಣರಿಗೆ ವಂದಿಸಿದ.
ಕಾರ್ಯ ಏನೇ ಇರಲಿ. ಗುರುಹಿರಿಯರಿಗೆ ನಮಸ್ಕರಿಸ ಬೇಕು. ಇದು ಪದ್ಧತಿ ಎಂದ.
ಜಗ ಹೌದೆಂದಿತು. ಮಹಾಭಾರತಯುದ್ಧ ಗೆದ್ದ.
ಹೀಗೆ ಪದ್ಧತಿ ಎಂಬ ಧರ್ಮ ರಕ್ಷೋ ರಕ್ಷತಿ.
ಶ್ರೀ ಕೃಷ್ಣನಗೆ ನಮಿಸೋಣ. ಆತನ ರಕ್ಷಣೆ ಹೊಂದೋಣ. ಹಿರಿಯ ಹಿರಿಯರ ಪದ್ಧತಿ ಅನುಸರಿಸೋಣ.
         ಶ್ರೀ ಕೃಷ್ಣಾರ್ಪಣಮಸ್ತು
********

ಇಂದಿನ ಆಚರಣೆಗಳ ಹಿಂದಿನ ವೈಜ್ಞಾನಿಕ ಕಾರಣ :
ಹೌದು, ನಾನು ಇದರ ಬಗ್ಗೆ ತುಂಬಾ ಮುಂಚೆಯೇ ಬರೆಯಬೇಕೆಂದುಕೊಂಡಿದ್ದೆ., ಆದರೆ ಬುದ್ಧಿ ಈ ವಿಚಾರವನ್ನು ಏಕೋ ಮರೆಯಾಗಿಸಿಯೇ ಇಟ್ಟಿತ್ತು. ಇಂದು ಸಾಹಿತ್ಯಕ ಗುಂಪೊಂದರಲ್ಲಿ ಇದರ ಬಗೆಗಿನ ಚರ್ಚೆ ಬಂದಾಗ ಎಲ್ಲವೂ ಒಮ್ಮೆ ಮನದಲ್ಲಿ ಹರಡಿ ನಿಂತವು. ಇನ್ನು ಬರೆಯದಿದ್ದರೆ ಕಷ್ಟ ಎನ್ನಿಸಿ ಬರೆಯಲು ಶುರುವಿಟ್ಟಿದ್ದೇನೆ..
ಹಿಂದಿನಿಂದ ನಡೆದು ಬಂದಿರುವ ಪ್ರತೀ ಆಚರಣೆಗಳನ್ನೂ ಪ್ರಶ್ನಿಸುತ್ತಾ ಸಾಗುವುದೇ ನಮ್ಮ ಬುದ್ಧಿವಂತಿಕೆಯೆಡೆಗಿನ ಅತಿನಂಬಿಕೆ ಎಂಬುದು ಎಲ್ಲೆಲ್ಲೂ ರಾರಾಜಿಸುತ್ತಿರುವ ಈ ಕಾಲಘಟ್ಟದಲ್ಲಿ ಹಿಂದಿನ ಪ್ರತೀ ಆಚರಣೆಯ ಹಿಂದೆಯೂ ಒಂದು ಅದ್ಭುತವಾದ ವಿಚಾರವಿತ್ತು ಎಂಬುದು ತಿಳಿಯಲೇ ಬೇಕಾಗುತ್ತದೆ..
ಬೆಳಗ್ಗೆ ಬಲಗಡೆ ತಿರುಗಿ ಎದ್ದು ಪ್ರಾತಃಮಂತ್ರ ಪಠಿಸಿ ಕೈ ಉಜ್ಜಿ ಕಣ್ಣಿಗೆ ಒತ್ತಿಕೊಂಡು ಹಸ್ತವನ್ನು ನೋಡಿ ಎದ್ದೇಳಬೇಕು ಎಂಬುದರಲ್ಲಿ ಮಂತ್ರ ಪಠಿಸುವುದು ಬಾಯಿ ನಾಲಗೆ ಮತ್ತು ಮೆದುಳಿಗೆ ಚೈತನ್ಯ ತರಲು, ಕೈ ಉಜ್ಜುವುದು ಶಾಖ ಸ್ಪುರಣೆಗೆಂದು, ಆ ಶಾಖವನ್ನು ಕಣ್ಣು ಮತ್ತು ಮುಖಕ್ಕೆ ಹರಡಲು ಕಣ್ಣಿಗೆ ಒತ್ತಿಕೊಳ್ಳುವುದೆಂದೂ ಮತ್ತು ಹಸ್ತ ನೋಡುವುದು ಇಂದಿನ ನಮ್ಮ ಕಾರ್ಯಗಳನ್ನು ನೆನಪಿಗೆ ತಂದುಕೊಳ್ಳಲು ಮತ್ತು ಕೊನೆಗೆ ಬಲ ಮಗ್ಗುಲಿಗೆ ತಿರುಗಿ ಏಳುವುದು ಇರುಳ ನಿದ್ರೆಯಲ್ಲಿ ನಾವು ಹೇಗೆ ಹೇಗೋ ಒದ್ದಾಡಿ ಮುದುಡಿ ತಿರುಗಿ ಹೊರಳಿ ಮಲಗಿದ್ದರೂ ಮನುಷ್ಯನ ದೇಹದ ಎಡಕ್ಕಿರುವ ಹೃದಯಕ್ಕೆ ಬೆಳಗಾಯಿತು ಎಂಬಲ್ಲಿ ಇರಬೇಕಾದ ಚುರುಕು ತರಲು ಎಂದೇ ಈಗ ಎಲ್ಲರಿಂದಲೂ ಅರ್ಥೈಸಲ್ಪಡುತ್ತಿದೆ..
ತಿಂಡಿ ಊಟ ಆಹಾರವನ್ನು ನೆಲದಲ್ಲಿ ಕುಳಿತೇ ತಿನ್ನಬೇಕು ಎಂಬಲ್ಲಿ ಗುರುತ್ವಾಕರ್ಷಣ ಶಕ್ತಿಯು ಆಹಾರದ ಮೂಲಕ ಮನುಷ್ಯನ ದೇಹ ಪ್ರವೇಶಿಸಲು ಹಾದಿಯಾಗುತ್ತದೆ ಎಂದು ಮತ್ತು ಮಂತ್ರ ಪಠಿಸಿ ತಟ್ಟೆಯ ಸುತ್ತ ನೀರು ಪ್ರೋಕ್ಷಣೆ ಮಾಡುವುದು ನೆಲ ಮತ್ತು ಗಾಳಿಯಲ್ಲಿರುವ ಧೂಳು ತಟ್ಟೆಯೊಳಕ್ಕೆ ಬೀಳದಂತೆ ಸೆಳೆಯಬಲ್ಲ ಶಕ್ತಿ ನೀರಿನ ಹನಿಗೆ ಇದೆ ಎಂಬ ಕಾರಣಕ್ಕಾಗಿ ಎಂದು ಸ್ಥಿತವಾಗುತ್ತಿದೆ..
ತಣ್ಣೀರಿನ ಸ್ನಾನ ಪೂಜೆ ಪುನಸ್ಕಾರ ಇತ್ಯಾದಿಗಳೂ ಕೂಡ ಶರೀರ ಮತ್ತು ಮನಸ್ಸಿನ ಆರೋಗ್ಯ ಮತ್ತು ಏಕಾಗ್ರತೆಗೆ ದಾರಿಗಳಾಗಿವೆ..
ಇರುಳಲ್ಲಿ ಮತ್ತು ಮನೆಯೊಳಗೆ ಉಗುರು ತೆಗೆಯಬಾರದು ಎಂಬುದರಲ್ಲಿ ಅದು ಹಾರಿ ಬಂದು ಊಟಕ್ಕೆ ಬಿದ್ದು ಹೊಟ್ಟೆ ಸೇರಿದರೆ ಆಗುವ ಅಪಾಯದ ವಿರುದ್ಧ ಜಾಗೃತವಾಗಿಸುವುದಾಗಿದೆ., ಬ್ಲೇಡ್ ಮತ್ತಿತರ ಲೋಹವೇ ಸಲೀಸಾಗಿ ಜಾರಿ ಸಾಗುವ ನಮ್ಮ ಕರುಳನ್ನು ಉಗುರು ಹೇಗೆ ಚುಚ್ಚಿ ಸೀಳಿ ಗಾಯಗೊಳಿಸಬಲ್ಲದು ಎಂಬುದನ್ನು ಈಗ ವೈಜ್ಞಾನಿಕವಾಗಿಯೇ ಅರಿತಾಗಿದೆ..
ದೇಹದ ಕಾಂತ ಕ್ಷೇತ್ರದ ಶಕ್ತಿ ಒಂದಾಗಲು ಎರಡೂ ಕೈಯನ್ನು ಸೇರಿಸಿ ನಮಸ್ಕರಿಸುವುದು, ದೇಹದ ಹಣೆಯ ಭಾಗದಲ್ಲೇ ಸ್ಥಿತವಾಗಿರುವ ಮುಖ್ಯ ನಾಡಿಗಳನ್ನು ಪ್ರೇರೇಪಿಸಲು ಭ್ರೂಮಧ್ಯದಲ್ಲಿ ಕುಂಕುಮ ಚಂದನ ಧರಿಸುವುದು, ನೀರಿನ ಚಲನೆ ದೇಹಕ್ಕೆ ಪ್ರತಿಕೂಲವಾಗದಂತೆ ತಡೆಯಲು ಕುಳಿತುಕೊಂಡೇ ನೀರನ್ನು ಸೇವಿಸಬೇಕಾದುದು, ಕಾಂತ ಕ್ಷೇತ್ರದ ಋಣಾತ್ಮಕ ಶಕ್ತಿಯಿಂದ ಇಡೀ ದೇಹಕ್ಕೆ ಆಗುವ ಅನಾಹುತಗಳನ್ನು ತಡೆಯಲು ಮಲಗುವಾಗ ತಲೆ ಇಡಬಾರದ ದಿಕ್ಕು ಪಶ್ಚಿಮವಾಗಿರುವುದು ಮತ್ತು ಇನ್ನಿತರ ಅನೇಕ ಆಚರಣೆಗಳಿವೆ ಆದರೂ ಅದರ ಬೆಳಕನ್ನು ನಾವು ತಿಳಿಯದೇ ಉಳಿದಿರುವುದೇ ನಮ್ಮ ತಪ್ಪು ನಡೆಗೆ ಹಾಗೂ ಋಣಾತ್ಮಕ ಚಿಂತನೆಗೆ ದಾರಿಯಾಗಿವೆ..
ನಮ್ಮ ದೇಹದ ನೀರಿನಂಶದ ಬೇಡಿಕೆಗಾಗಿ ದೇಹವೇ ತೋರುತ್ತಿದ್ದ ಬಿಕ್ಕಳಿಕೆಯ ಭಾವ ಈಗಿನ ಜನರಲ್ಲಿ ಕಡಿಮೆಯಾಗಿರುವುದು ಎಲ್ಲರ ಅರಿವಿಗೂ ಬಂದಿರಬಹುದು. ಅಲ್ಲಿ ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಈಗ ಇಲ್ಲ ಎಂಬುದು ನಿಜವಲ್ಲ, ಬದಲಾಗಿ ನಮ್ಮ ದೇಹವು ತನ್ನ ಜೀವಿತಾವಧಿಯನ್ನು ಇಳಿಸಿಕೊಳ್ಳುತ್ತಾ ಸಾಗಿರುವುದೇ ಕಾರಣವಾಗಿದೆ. ಆದ್ದರಿಂದಲೇ ಅದರ ನೀರಿನ ಬೇಡಿಕೆ ಕಡಿಮೆಗೊಳ್ಳುತ್ತಾ ಸಾಗಿದೆ. (ಮತ್ತೆ ಎಲ್ಲರಿಗೂ ಅರಿವಿರುವ ವಿಚಾರವೇನೆಂದರೆ ಮನುಷ್ಯನ ಸರಾಸರಿ ಜೀವಿತಾವಧಿ ಈಗ ಕೇವಲ 56 ವರ್ಷಗಳಾಗಿವೆ ಈಗ್ಗೆ 20 ವರ್ಷದ ಹಿಂದೆ ಅದು 70 ಆಗಿತ್ತು)..
ಒಟ್ಟಾರೆ ಎಲ್ಲ ಆಚರಣೆಗಳ ಒಗಟನ್ನು ಬಿಡಿಸಿಕೊಂಡು ನೋಡುವ, ತಿಳಿಯುವ ಮನುಷ್ಯನ ರೀತಿ ಸರಿಯೇ ಆದರೂ ಯಾವ ಆಚರಣೆಯ ಬಗ್ಗೆ ನಮಗೆ ಸಂಪೂರ್ಣ ವಿಚಾರ ತಿಳಿಯಲಿಲ್ಲವೋ ಅದನ್ನು ತಪ್ಪು ಎನ್ನುವುದನ್ನು ನಿಲ್ಲಿಸಬೇಕಾಗಿದೆ. ನಮ್ಮ ಪುರಾತನ ಭಾರತೀಯತೆ ನಿಜಕ್ಕೂ ಅದ್ವಿತೀಯ ಪರಮಾದ್ಭುತ ಬುದ್ಧಿಯ ಸಾರವಾಗಿತ್ತು. ಅಲ್ಲಿ ಸಿಕ್ಕದೇ ಉಳಿದದ್ದು ಯಾವುದೂ ಇರಲಿಲ್ಲ. ಆ ಹಾದಿಯಲ್ಲೇ ನಡೆಯಬೇಕಾಗಿದ್ದ ನಾವು ಅದರೆಡೆಗೆ ನಂಬಿಕೆ ಇರಿಸಿಕೊಳ್ಳಬೇಕಿತ್ತು. ಅದು ಆಗುತ್ತಿಲ್ಲ. ಅದೇ ತುಂಬಾ ಕಷ್ಟ ತೊಂದರೆಗಳಿಗೆ ದಾರಿಯಾಗಿದೆ ಎಂಬುದು ನನ್ನ ಮಾತು..
ಮತ್ತು ಈ ವಿಚಾರವನ್ನು ಸಾಕ್ಷೀಕರಿಸಲು ಕೊನೆಯ ಮಾತೊಂದನ್ನು ಹೇಳಲಿಚ್ಛಿಸುತ್ತೇನೆ., "ಜಪಾನ್‌ನ ಟೋಕಿಯೋ ಯೂನಿವರ್ಸಿಟಿಯಿಂದ ಕೇರಳದ ಪ್ರಸಿದ್ಧ ದೇವಾಲಯವೊಂದಕ್ಕೆ ಬಂದಿದ್ದ ಒಂದು ಅಧ್ಯಯನ ತಂಡ ಜಾಗಟೆಯ ಮತ್ತು ದೇಗುಲದ ಘಂಟೆಯ ಧ್ವನಿಯು ಆ ದೇವಸ್ಥಾನದ ಸುತ್ತಲಿನ ಪರಿಸರವನ್ನು (ಗಾಳಿ, ನೀರು, ಅಗ್ನಿ, ಪ್ರಾಣಿಪಕ್ಷಿ, ಮರಗಿಡ ಮತ್ತು ಮನುಷ್ಯನೂ ಸೇರಿ) ಸರ್ವಾಂತರ್ಗತವಾಗಿ ಶುಚಿಗೊಳಿಸಿ ಶುದ್ಧೀಕರಿಸಿದ ಬಗೆಯನ್ನು ಕಂಡು ಅಪ್ಪಣೆ ಪಡೆದು ಇಲ್ಲಿನ ಹಿಂದೂ ಪುರಾತನ ಗ್ರಂಥಗಳ ಪೂಜಾ ವಿಧಾನಗಳ ನಕಲು ಮಾಡಿಕೊಂಡು ಹೋಗಿ ಅದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಮಾಡುತ್ತಾ ಪ್ರತಿದಿನವೂ ಹೊಸ ಹೊಸ ವಿಚಾರಗಳನ್ನು ತಾವು ತಮ್ಮ ಬದುಕಿನಲ್ಲಿ ಸೇರಿಸಿಕೊಳ್ಳುತ್ತಾ ಸಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿರಬಹುದು., ಆದರೇಕೋ ಏನೋ ಹಿತ್ತಲ ಗಿಡ ನಮಗೆಂದೂ ಮದ್ದಾಗಲಿಲ್ಲ..,ನಮ್ಮ ಮನಸ್ಸಲ್ಲಿ ನಂಬಿಕೆಯ ಮತ್ತು ಒಪ್ಪಿಗೆಯ ಭಾವ ಬರುವುದಕ್ಕೂ ಪಾಶ್ಚಾತ್ಯರ ಅಪ್ಪಣೆಗೆ ಕಾದು ನಿಂತಿರುತ್ತೇವೆ...
ಧನ್ಯವಾದಗಳು....
----- ಪ್ರSuNन्ना -----
04ಡಿಸೆಂಬರ್2018
****

No comments:

Post a Comment