SEARCH HERE

Friday 9 April 2021

ramayana ರಾಮಾಯಣ




ಶ್ರೀರಾಮನ ಸೂರ್ಯವಂಶ ಇಂದಿಗೂ ಎಂದೆಂದಿಗೂ ಅಜರಾಮರ!! ಕಲಿಯುಗವನ್ನು ವಿಶ್ಲೇಷಿಸಿರುವ ಭಾಗವತ ಪುರಾಣದಲ್ಲಿದೆ ಸೂರ್ಯವಂಶದ ರಹಸ್ಯ!!

ಅದ್ಯಾವುದೇ ಆಧುನಿಕ ತಂತ್ರಜ್ಞಾನದ ಸಹಾಯವೇ ಇಲ್ಲದೇ, ಭೂತ, ಭವಿಷ್ಯ ಮತ್ತು ವರ್ತಮಾನ ಕಾಲದಲ್ಲಿ ಅದೇನೇನೆಲ್ಲ ಸಂಭವಿಸುತ್ತೆ ಅನ್ನೋದನ್ನು ವೇದ- ಪುರಾಣಗಳೇ ನಮಗೆ ತಿಳಿಸಿವೆ. ಆದರೆ, ಮಹಾವಿಷ್ಣುವಿನ ದಶಾವತಾರಗಳ ಪೈಕಿ 7ನೇಯ ಅವತಾರವಾಗಿರುವ ಮನುಕುಲ ತಿಲಕನಾದ ಶ್ರೀ ರಾಮನ ಅವತಾರದ ನಂತರ ಸೂರ್ಯವಂಶ ಅದೇನಾಯಿತು ಎಂಬ ಪ್ರಶ್ನೆಯು ಪ್ರಶ್ನೆಯಾಗಿ ಉಳಿಯದೇ ಅದಕ್ಕೂ ಉತ್ತರವನ್ನು ಕಲಿಯುಗದ ಬಗ್ಗೆ ಸವಿಸ್ತಾರವಾಗಿ ಹೇಳಿರುವ ಭಾಗವತ ಪುರಾಣದಲ್ಲಿ ವೇದವ್ಯಾಸರು ಸೂರ್ಯವಂಶ ದ ಕುರಿತಂತೆ ಮಾಹಿತಿ ಚೆಲ್ಲಿದ್ದಾರೆ.

ಜಗತ್ತನ್ನು ಸೃಷ್ಟಿಸಿದ ಚತುರ್ಮುಖ ಬ್ರಹ್ಮನ ಸಾಮರ್ಥ್ಯವನ್ನು ಹೊಂದಿರುವ ಶ್ರೇಷ್ಠ ಬ್ರಹ್ಮರ್ಷಿಗಳಲ್ಲಿ ಒಬ್ಬರಾಗಿರುವ ವಷಿಸ್ಠರು ಸೃಷ್ಟಿಯ ಮೊದಲ ವಂಶವೆಂದು ಕರೆಸಿಕೊಂಡ ಸೂರ್ಯವಂಶದ ಕುಲಪುರೋಹಿತರು. ಅಷ್ಟೇ ಅಲ್ಲದೇ, ಮನುಷ್ಯರ ಮಧ್ಯದಲ್ಲಿ ಇದ್ದು, ಸೃಷ್ಟಿಯಲ್ಲಾಗುವ ತಪ್ಪುಗಳನ್ನು ತಿದ್ದುತ್ತಾ ಜೀವಿಸುವ ಇವರು, ರಾಜರು ಅಧರ್ಮಮಾರ್ಗ ಹಿಡಿದ ಸಂದರ್ಭದಲ್ಲಿ ಅವರನ್ನು ಸನ್ಮಾರ್ಗದಲ್ಲಿ ಕೈಹಿಡಿದು ನಡೆಸಿದವರು ಕೂಡ ಹೌದು!!

ಸೂರ್ಯವಂಶದ ಕುಲಪುರೋಹಿತರಾಗಿರುವ ಇವರು ತನ್ನ ವಂಶ ದಿಲೀಪನಿಂದ ಕೊನೆಗೊಳ್ಳುತ್ತದೆ ಎಂದಾಗ ಅದನ್ನು ತಿಳಿದ ವಸಿಷ್ಠರು ತಮ್ಮ ದಿವ್ಯದೃಷ್ಟಿಯಿಂದ ಆತನ ಪೂರ್ವವೃತ್ತಾಂತವನ್ನು ಕಂಡರು. ಆಗ ದಿಲೀಪನು ಕಾಮಧೇನುವನ್ನು ಅಲಕ್ಷಿಸಿದ ತಪ್ಪಿನಿಂದ ಆತನಿಗೆ ಸಂತಾನಭಾಗ್ಯವನ್ನೇ ಕಳೆದುಕೊಂಡ ವಿಚಾರವನ್ನರಿತು ದಿಲೀಪನ ತಪ್ಪುನ್ನು ಹೇಳಿ ಅವನಿಗೆ ನಂದಿನಿಯ ಸೇವೆಯ ಪ್ರಾಯಶ್ಚಿತ್ತವನ್ನು ಆದೇಶಿಸಿದರು. ವಸಿಷ್ಠರ ಆದೇಶವನ್ನು ಶಿರಸಾವಹಿಸಿದ ಕಾರಣದಿಂದಾಗಿ ಆತನಿಗೆ ರಘು ಎಂಬ ಮಗು ಜನಿಸಿತು.

ಹಾಗಾಗಿ ಈ ಸೂರ್ಯವಂಶಕ್ಕೆ ರಘುವಂಶ ಎಂಬ ಹೆಸರು ಬರಲು ದಿಲೀಪನ ಮಗ ರಘ ಕಾರಣನಾದ. ಇನ್ನು ಈ ಸೂರ್ಯವಂಶದಲ್ಲಿ ಆದಿಬ್ರಹ್ಮನ ಅಂಗದಿಂದ ಮರೀಚಿ ಹುಟ್ಟಿದನಂತೆ, ಈ ಮರೀಚಿಯು ಕಶ್ಯಪನ ಹುಟ್ಟಿಗೆ ಕಾರಣನಾದ. ಇನ್ನು ಈ ಕಶ್ಯಪನಿಗೆ ವಿವತ್ಸು, ವಿವತ್ಸನ ಮಗ ವೈವಸ್ವತ (ಇವನಿಗೆ ವೈವಸ್ವತ ಮನು ಎಂದೂ ಕರೆಯುವರು)!! ಈ ವೈವಸ್ವತನಿಗೆ ಹುಟ್ಟಿದವೇ ಇಕ್ಷಾಕು. ಇನ್ನು ಈ ಇಕ್ಷಾಕುವಿಗೆ ನಿಮಿ, ವಿಕುಕ್ಷಿಗಳು ಮಕ್ಕಳು!! ಇವರಲ್ಲಿ ವಿಕುಕ್ಷಿ ವಿಗೆ ಪುರಂಜಯನೆಂಬ ಮಗ ಹುಟ್ಟಿದ. ಈ ಪುರಂಜಯನ ಮಗನೇ ನೇನಸ್ಸು, ನೇನಸ್ಸುವಿನ ಮಗ ಪೃಥುವಾದರೆ ಈ ಪೃಥುವಿನ ವಂಶದಲ್ಲಿ ಕುವಲಾಂಶ ಹಾಗೆಯೇ ಯೌವನಾಶ್ವರೂ ಜನಿಸಿದರು. ಯೌವನಾಶ್ವನ ಮಗ ಮಾಧಾಂತ. ಮಾಧಾಂತನಿಗೆ ಅಂಬರೀಷ ಮತ್ತು ಪುರುಕುತ್ಸರು ಮಕ್ಕಳು!! ಇದರಲ್ಲಿ ಈ ಪುರುಕುತ್ಸನ ಸಂತತಿಯಲ್ಲಿ ಹುಟ್ಟಿದವ ಸತ್ಯವೃತ, ಈ ಸತ್ಯವೃತನ ಮಗನೇ ತ್ರಿಶಂಕು!!

ಇನ್ನು ಈ ತ್ರಿಶಂಕುವಿನ ಮಗ ಸತ್ಯ ಹರಿಶ್ಚಂದ್ರ. ಈತನ ಮಗ ಲೋಹಿತಾಶ್ವ. ತದನಂತರ ಈ ಲೋಹಿತಾಶ್ವನ ಸಂತತಿಯಲ್ಲಿ ಸಗರ ರಾಜ ಜನ್ಮತಳೆದರೆ ಈ ಸಗರನಿಗೆ- ಸಮಂಜಸ, ಸಮಂಜಸನಿಗೆ-ಅಂಶುಮಾನ್, ಈ ಅಂಶುಮಾನ್ ಗೆ ದಿಲೀಪ ಹುಟ್ಟಿದರು!! ಈ ದಿಲೀಪನ ಮಗನೇ ಭಗೀರಥ. ಇನ್ನು ಈ ಭಗೀರಥನ ವಂಶದಲ್ಲಿ ಹುಟ್ಟಿದವನೇ ಸ್ಥೂಲಬಾಹು. ಈ ಸ್ಥೂಲಬಾಹುವಿನ ಮಗ ರಘು ಮತ್ತು ಇವನ ಮಗ ಅಜ!! ಅಜನ ಮಗ ದಶರಥ.

ಈ ದಶರಥನ ಮಗನೇ ನಮ್ಮ ಸೀತಾಪತಿ ಶ್ರೀರಾಮಚಂದ್ರ. ಇವನ ಮಕ್ಕಳು ಕುಶ-ಲವರು ಎಂಬ ವಿಚಾರಗಳ ಬಗ್ಗೆ ರಾಮಾಯಣ ಮಹಾನ್ ಗ್ರಂಥದಲ್ಲಿ ಉಲ್ಲೇಖವಿದೆ. ಆದರೆ ಲವ ಕುಶರ ನಂತರ ಶ್ರೀರಾಮನ ವಂಶವಾದ ಸೂರ್ಯವಂಶ ಅದೇನಾಯಿತು ಎಂಬ ವಿಚಾರಗಳ ಕುರಿತ ಉತ್ತರವನ್ನು ನಾವು ಕಂಡುಕೊಳ್ಳಲಿಲ್ಲ!! ಆದರೆ ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಉತ್ತರವಿದೆ. ಹೌದು… ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳಾದರೆ ಭರತನಿಗೆ ತಕ್ಷ-ಪುಷ್ಕಲರು. ಇನ್ನು ರಾಮನ ಸಹೋದರ ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳೆಂಬ ಮಕ್ಕಳಿದ್ದರೆ ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು ಎನ್ನುವ ಮಕ್ಕಳು!!

ಇವರಲ್ಲಿ ಸೀತಾರಾಮರ ಹಿರಿಯ ಮಗನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳಿದರೆ ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ ರಾಜ್ಯವಾಳುತ್ತಾನೆ!! ಭರತನ ಹಿರಿಯ ಪುತ್ರ ತಕ್ಷನು ತಕ್ಷಶಿಲೆಯಲ್ಲಿ, ಕಿರಿಯ ಪುತ್ರನಾದ ಪುಷ್ಕಲನು ಪುಷ್ಕಲಾವತದಲ್ಲಿದ್ದರೆ, ಲಕ್ಷಣನ ಮಕ್ಕಳಾದ ಅಂಗದನು ಕಾರುಪಥದಲ್ಲಿ, ಚಂದ್ರಕೇತುವು ಚಂದ್ರಕಾಂತದಲ್ಲಿ ರಾಜ್ಯವಾಳಿದರು. ಶತ್ರುಘ್ನನ ಮಕ್ಕಳಾದ ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಇನ್ನು, ಈ ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ ಜನಿಸಿದ. ಅವನಿಂದ ನಿಷಧ ಜನಿಸಿದರೆ ಈತನೇ ಮಗನೇ ನಭ. ನಭನಿಗೆ ಪುಂಡರೀಕ, ಪುಂಡಲೀಕನಿಗೆ ಕ್ಷೇಮಧನ್ವಾ ಈತನಿಗೆ ದೇವಾನೀಕ, ದೇವಾನೀಕನಿಗೆ ಅನೀಹ ಹುಟ್ಟಿದ. ತದನಂತರದಲ್ಲಿ ಪಾರಿಯಾತ್ರ, ಈತನಿಗೆ ಬಲಸ್ಥಲ ಜನಿಸಿದ!! ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದರೆ ಇವನಿಗೆ ಖಗಣ, ಈತನ ನಂತರ ವಿಧೃತಿ ಜನಿಸಿದ. ವಿಧೃತಿಗೆ ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ ಹಿರಣ್ಯನಾಭ ಜನಿಸಿದ. ಹಿರಣ್ಯನಾಭನ ಮಗನೇ ಪುಷ್ಯ. ಈತನಿಗೆ ಧ್ರುವಸಂಧಿ ಎಂಬ ಮಗ!!

ಈತನ ನಂತರದಲ್ಲಿ ಸುದರ್ಶನ ಹುಟ್ಟಿದ. ಈತನ ಮಗ ಅಗ್ನಿವರ್ಣನಾದರೆ ಅಗ್ನಿವರ್ಣನ ಮಗ ಶೀಘ್ರ. ಈ ಶೀಘ್ರನ ಮಗ ಮರು. ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದು ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾನಲ್ಲದೇ ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಾಶವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ ಎಂದು ಹೇಳಲಾಗಿದೆ. ಈ ಮರುವಿನ ಪ್ರಸುಶ್ರುತ ಎನ್ನುವ ಮಗ ಈ ಪ್ರಸುಶ್ರುತನ ಮಗನೇ ಸಂಧಿ. ತದನಂತರ ಸಂಧಿಯ ಮಗ ಅಮರ್ಷಣ. ಈತನನ ನಂತರದಲ್ಲಿ ಮಹಸ್ವಂತ, ಈತನ ಮಗ ವಿಶ್ವಸಾಹ್ವನಾದರೆ ಈ ವಿಶ್ವಸಾಹ್ವನಿಗೆ ಪ್ರಸೇನಜಿತ್ ಎನ್ನುವ ಮಗನಿದ್ದ.

ಈ ಪ್ರಸೇನಜಿತನಿಗೆ ತಕ್ಷಕ, ಈತನಿಗೆ ಬೃಹದ್ಬಲ, ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ ಎನ್ನುವ ವಿಚಾರ ಮಹಾಭಾರತದಲ್ಲಿದೆ. ಈ ಬೃಹದ್ಬಲನ ಮಗ ಬೃಹದ್ರಣ. ಈತನ ನಂತರದಲ್ಲಿ ಉರುಕ್ರಿ, ನಂತರ ವತ್ಸವೃದ್ಧ, ಈತನ ಮಗ ಪ್ರತಿವ್ಯೋಮ, ಈ ಪ್ರತಿವ್ಯೋಮನಿಗೆ ಭಾನು ಎಂಬ ಮಗ ಜನಿಸಿದ. ಈತನ ನಂತರ ದಿವಾಕ, ಈ ದಿವಾಕನ ನಂತರ ಸಹದೇವ , ನಂತರ ಬೃಹದಶ್ವ ಜನಿಸಿದ. ಈ ಬೃಹದಶ್ವನ ಮಗನೇ ಭಾನುಮಂತ ನಾದರೆ ಈತನಿಗೆ ಪ್ರತೀಕಾಶ್ವ. ಇವನಿಗೆ ಸುಪ್ರತೀಕ ಮಗನಾದರೆ ಈ ಸುಪ್ರತೀಕನಿಗೆ ಮರುದೇವ, ಈತನ ನಂತರ ಸುನಕ್ಷತ್ರ – ಪುಷ್ಕರ – ಅಂತರಿಕ್ಷ – ಸುತಪಸ – ಅಮಿತ್ರಜಿತ್ – ಬೃಹದ್ರಾಜ – ಬರ್ಹಿ – ಕೃತಂಜಯ – ರಣಂಜಯ – ಸಂಜಯ – ಶಾಕ್ಯ- ಶುದ್ಧೋದ – ಲಾಂಗಲ – ಪ್ರಸೇನಜಿತ್ – ಕ್ಷುದ್ರಕ – ರಣಕ – ಸುರಥ ನವರೆಗೆ ಸೂರ್ಯವಂಶವು ಮುಂದುವರೆಯುತ್ತಿರುತ್ತದೆ!! ಇನ್ನು ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು. ಇವರೆಲ್ಲರೂ ಕೂಡ ಇಕ್ಷ್ವಾಕು ವಂಶಸಂಭೂತರು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಈ ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತಾದರೂ ಸೂರ್ಯವಂಶವು ನಾಶವಾಗಿಲ್ಲ. ಸೂರ್ಯನು ಅದೇಗೆ ಶಾಶ್ವತನೋ ಅಂತೆಯೇ ಸೂರ್ಯವಂಶವೂ ಶಾಶ್ವತವಾದುದು. ಹಾಗಾಗಿ ಸೂರ್ಯವಂಶ ಕೊನೆಗೊಂಡಿಲ್ಲ… ಹೇಗೆಂದರೆ, ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದು ಈಗಲೂ ಕಲಾಪವೆಂಬ ಗ್ರಾಮದಲ್ಲಿ ವಾಸಿಸುತ್ತಿರುವ ಶೀಘ್ರನ ಮಗನಾದ ಮರುವು ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಾಶವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿರುವುದರಿಂದ ಸೂರ್ಯವಂಶ ವು ಇಂದಿಗೂ ಇದೆಯಲ್ಲದೇ ಯಾವತ್ತು ಅವನತಿ ಹೊಂದಲಾಗದು ಎನ್ನಲಾಗಿದೆ. ಹಾಗಾಗಿ ಶ್ರೀರಾಮನ ವಂಶ ಇಂದಿಗೂ ಇದೆ ಎನ್ನುವುದನ್ನು ಭಾಗವತ ಪುರಾಣ ಹೇಳುತ್ತದೆ.
*****


RAMAYANA

‘ Ra ’ means light, ‘ Ma ’ means within me, in my heart. 
So, 
Rama means the Light Within Me..

Rama was born to Dasharath & Kousalya.

Dasharath means ‘ 10 Chariots ’..
The ten chariots symbolize the 5 sense organs( Gnanendriya ) & 5 organs of action( Karmendriya ) ..

Kousalya means ‘ Skill ’..

The skillful rider of the 10 chariots can give birth to Ram..

When the 10 chariots are used skillfully,
Radiance is born within..

Rama was born in Ayodhya.
Ayodhya means ‘ a place where no war can happen ’..

When There Is No Conflict In Our Mind, Then The Radiance Can Dawn..

The Ramayana is not just a story which happened long ago..
It has a philosophical, spiritual significance and a deep truth in it..

It is said that the Ramayana is happening in our Own Body.

Our Soul is Rama, 
Our Mind is Sita, 
Our Breath or Life-Force ( Prana) is Hanuman, 
Our Awareness is Laxmana and 
Our Ego is Ravana..

When the Mind (Sita),is stolen by the Ego (Ravana), then the Soul (Rama) gets Restless..

Now the SOUL (Rama) cannot reach the Mind (Sita) on its own.. 
It has to take the help of the Breath – the Prana (Hanuman) by Being In Awareness(Laxmana)

With the help of the Prana (Hanuman), & Awareness(Laxmana),
The Mind (Sita) got reunited with The Soul (Rama) and The Ego (Ravana) died/ vanished..

In reality Ramayana is an eternal phenomenon happening all the time..

************

ರಾಮಾಯಣದಲ್ಲಿ ಏಳು ಕಾಂಡಗಳಿವೆ. ಹೆಸರು ಕಾಂಡಗಳಿಗೆ. ಸಂದೇಶ ನಮಗೆ.  ಕಾಂಡಗಳು ರಾಮಾಯಣದಲ್ಲಿ. ಬೇರುಗಳು ಸಾಧನೆಯಲ್ಲಿ! ಇವು ಸಾಧನೆಯ ಬೇರುಗಳು. ಲೌಕಿಕ, ಅಲೌಕಿಕ ಎರಡಕ್ಕೂ.

1) ಬಾಲಕಾಂಡ 2) ಅಯೋಧ್ಯಾ ಕಾಂಡ

3) ಅರಣ್ಯ ಕಾಂಡ  4) ಕಿಷ್ಕಿಂಧಾ ಕಾಂಡ

 5) ಸುಂದರ ಕಾಂಡ 6) ಯುದ್ಧ ಕಾಂಡ

7) ಉತ್ತರ ಕಾಂಡ.

ಅಧ್ಯಾತ್ಮಿಕ ಸಾಧನೆಯ ಏಳು ಮಜಲುಗಳು - ಹಂತಗಳು ಇವು.

1) ಬಾಲಕಾಂಡ -
ರಾಮ ಸದ್ಗುಣ ಧಾಮ.
ಗುಣವ ಕದ್ದವರ ಅಘವ ಕದೆವಾ!  
ರಾಮ ಜನಿಸಿದ. 
ಅರ್ಥ ಸಾಧಕ ಸದ್ಗುಣ ಅಳವಡಿಸಿಕೊಂಡ.
ಮಗು ರಾಮ ಮುಗ್ಧ. ನಿರ್ದೋಷ. ಸರ್ವರ ಪ್ರೀತಿಪಾತ್ರ.
ಸಾಧಕ ಪ್ರಥಮತಃ ಇದನ್ನು ಗಳಿಸ ಬೇಕು.
ರಾಮನ ಸದ್ಗುಣಗಳ ಕದಿಯ ಬೇಕು. 
ಮನಸ್ಸಿನ ಕಶ್ಮಲತೆ ಕಳೆದು ಕೊಳ್ಳಬೇಕು. 
ನಿರ್ಮಲನಾಗಿರಬೇಕು. ಎಲ್ಲರೊಳು ಬೆಲ್ಲದಂತಿದ್ದು ಪರಮಾತ್ಮನ ಪ್ರೀತಿಗೆ ಪಾತ್ರನಾಗ ಬೇಕು. 

2) ಅಯೋಧ್ಯಾ ಕಾಂಡ -
ಯುದ್ಧ ಮಾಡಲು ಸಾಧ್ಯ= ಯೋಧ್ಯಾ
ಯುದ್ಧ ಮಾಡಲು ಅಸಾಧ್ಯ= ಅಯೋಧ್ಯಾ.
ಅಯೋಧ್ಯಾ ನಗರದ ಮೇಲೆ ಯುದ್ಧ ಮಾಡಲು ಯಾರಿಗೂ ಸಾಧ್ಯವಿರಲಿಲ್ಲ.
ಸಾಧಕನ ಮನಸು ಇಂತಾಗ ಬೇಕು.
ಮದ, ಮತ್ಸರ, ಕೋಪ, ತಾಪ,   ಅಹಂಕಾರ, ಮಮಕಾರ, ಅಜ್ಞಾನ ಮೊದಲಾದ ದುರ್ಗುಣಗ ಳಿಗೆ ಅಯೋಧ್ಯಾ ಆಗಬೇಕು. ದುರ್ಗುಣಗಳ ಒಳಗೆ ಬಿಡಬಾ ರದು.
ಸದ್ಗುಣಗಳ ಹೊರಗೆ ಬಿಡಬಾರದು.
ಸದ್ಗುಣಗಳಿಗೆ ಯೋಧ್ಯಾ. ಆಶ್ರಯದ ಆಕರವಾಗ ಬೇಕು.
ಬೆಳೆಯುವ ರಾಮ ನಿದರ್ಶನ. ಪಿತೃವಾತ್ಸಲ್ಯ, 
ಮಾತೃವಾತ್ಸಲ್ಯ, ಭ್ರಾತೃವಾತ್ಸಲ್ಯ, ಪ್ರಜಾ ವಾತ್ಸಲ್ಯ ಹೀಗೆ ವಾತ್ಸಲ್ಯ ಮೂರ್ತಿ ಶ್ರೀರಾಮ.
ಶ್ರೀ ರಾಮ ಸದಾ ಮುಂದೆಯೇ ಸುತ್ತಾಡುತ್ತಿರ ಬೇಕು. ಸಾಧಕನ ಮನ ಸರ್ವದಾ ಅಯೋಧ್ಯೆ ಯ ಆನಂದದ ಅರಮನೆಯಾಗ ಬೇಕು. 
ಅಹಂಕಾರದ ಧನಸ್ಸು ಮುರಿಯ ಬೇಕು.
ಸೀತೆ = ವೇದಜ್ಞಾನ ಪಡೆಯ ಬೇಕು. 
ಸೀತಾ ರಾಮ = ಲಕ್ಷ್ಮೀ ನಾರಾಯಣರ ಅನುಗ್ರಹ ಹೊಂದಬೇಕು. 

3) ಅರಣ್ಯ ಕಾಂಡ -
ನಾಡು ಬಿಡು. ಕಾಡು ಸೇರು.
ವಿಷಯಸುಖ ತ್ಯಾಗ ಕಾಂಡವಿದು.
ರಾಮ ಪಟ್ಟಾಭಿಷೇಕ ಬಿಟ್ಡ. ಅರಮನೆ ಬಿಟ್ಟ. ಬಂಧುಬಾಂಧವರ ಅಗುಲಿದ. ಅಯೋಧ್ಯೆ ಬಿಟ್ಡ. ರಾಜಪೋಷಾಕು ಕಳೆದಿಟ್ಟ. ನಾರು ಬಟ್ಟೆ ಉಟ್ಟ. ಸುಖದ ಆಹಾರ ಬಿಟ್ಟ. ಗಡ್ಡೆಗೆಣಸು ತಿಂದ. ಹಂಸತೂಲಿಕಾ ಹಾಸಿಗೆ ಬಿಟ್ಟ. ಧರ್ಭದ
ಮೇಲೆ ಮಲಗಿದ. 
ಸೀತೆಯೂ ಅಷ್ಟೆ! ಸರ್ವಸುಖ ತ್ಯಾಜ್ಯ. ಪತಿಧರ್ಮ ಗ್ರಾಹ್ಯ. ಸುಖದ ಸುಪ್ಪತ್ತಿಗೆ ದೂರ ಸರಿಸಿದಳು.   ವನವಾಸಕ್ಕೆ ಅನುಸರಿಸಿದಳು.
ಅದೂ ಸಿಟ್ಟು, ಬೇಸರದಿಂದಲ್ಲ.ಆನಂದದಿಂದ!
ಪತಿ ರಾಮ 'ಆನಂದಮಯ' ನಲ್ಲವೇ!
ಅದು ಅವನಿಗೆ ಅನಿವಾರ್ಯವಿರಲಿಲ್ಲ. ಆದರೂ, ಲಕ್ಷ್ಮಣ ರಾಜ್ಯ ತ್ಯಜಿಸಿದ. 
ಭೋಜ್ಯ ತ್ಯಜಿಸಿದ. ಭೋಗ ತ್ಯಜಿಸಿದ.  ತ್ಯಾಗದ ಮೂರ್ತಿಯಾದ. ರಾಮ ಸೇವಾನಿರತನಾದ.
ಭರತನನ್ನು ನೋಡಿ.
ರಾಜ್ಯದಲ್ಲಿದ್ದೂ ಇಲ್ಲ. ಭೋಜ್ಯ, ಭೋಗ್ಯ ತ್ಯಾಜ್ಯ. ನಾರು ಬಟ್ಟೆ ಉಟ್ಟ. ಬೇರು ಗಡ್ಡೆ ತಿಂದ. ರಾಮಪಾದುಕೆ ಇಟ್ಟ. ರಾಜ್ಯ ಆಳಿದ.
ತ್ಯಾಗದ ತುದಿ ಮುಟ್ಟಿದ.
ಇಂತಿರ ಬೇಕು ಸಾಧಕನ ವಿರಕ್ತಿ.
ರಾಮಾಯಣದ ಅರಣ್ಯ ಕಾಂಡ ತ್ಯಾಗಮಯ.
ತ್ಯಾಗದ ಸಂಕೇತ. ವಿರಕ್ತಿಯ ಸಂದೇಶ. ಜ್ಞಾನ ಭಕ್ತಿಯ ಜೊತೆಗೆ ವಿರಕ್ತಿಯೂ ಮುಖ್ಯ ಸಾಧಕನಿಗೆ.
ತಥ್ಯ -   ಲೌಕಿಕ ಸಾಕು. ರಾಮ ಬೇಕು. 

4) ಕಿಷ್ಕಿಂಧಾ ಕಾಂಡ - 
ಕಿಂ ಕಿಂ ಧಾ? = ಕಿಷ್ಕಿಂಧಾ
ಯಾರು ಯಾರು ಏನೇನು ಧರಿಸಿದರು?
ಯಾರು ಯಾರು ಏನೇನು ಸಾಧಿಸಿದರು?
ಹನುಮನ ನಂಬಿದರೆ ಜಯ. ಇಲ್ಲದಿರೆ ಅಪಜಯ. ಇದು ಕಟ್ಟಿಟ್ಟ ಬುತ್ತಿ. - 
ಇದು ಈ ಕಾಂಡದ ಬೇರು.
ಈಶ ರಾಮ. ದಾಸ ಹನುಮ. ರಾಮ ಒಡೆಯ. ಹನುಮ ಭಕ್ತ. ಹನುಮ ಮುಂದೆ. ರಾಮ ಅವನ ಹಿಂದೆ. ಇಂತು ನಂಬಿದ ಹನುಮ. 
ಸುಗ್ರೀವ ಹನುಮನ ನಂಬಿದ. ಹಾರಿ ಹೋಯಿತು  ಪಾಪ.  ಕರಗಿತು ಅಂಜಿಕೆ.
ರಾಮನ ಸಖ್ಯ ಪ್ರಾಪ್ಯ. ಜೀವನ ಉದ್ಧಾರ.
ಹನುಮನ ನಂಬಲಿಲ್ಲ. ವಾಲಿ ನಾಶವಾದ. 
ರಾಮನ ಸೇವೆ ಧರಿಸಿದ ಹನುಮಂತ.
ರಾಮನ ಸೇವೆ ಧರಿಸಿದ ಸುಗ್ರೀವ.
ರಾಮನ ಸೇವೆ ಧರಿಸಿದರು ಸರ್ವ ಕಪಿಗಳು.
ರಾಮ = ರಕ್ಷಾ ಕವಚ.
ಜ್ಞಾನಿಗಳು ಧರಿಸಿದರು. ಆತ್ಮೋದ್ಧಾರ ಹೊಂದಿದರು. ಸದ್ಗತಿ ಪಡೆದರು.
ತಥ್ಯ - ಹನುಮನ ನಂಬು. 
           ರಾಮನ ಹೊಂದು.

5) ಸುಂದರ ಕಾಂಡ - 
ರಾಮ, ಹನುಮರ ನಂಬಿದ ಮೇಲೆ ಎಲ್ಲವೂ ಸುಂದರಮಯ.
ಕಾಮನ ಅಪ್ಪ ರಾಮ. ಸುಂದರ ತಮ. ಮೋಕ್ಷದಾಯಕ. 
ರಾಮಸೇವಾ ನಿರತ ಹನುಮ. ಎಲ್ಲರನ್ನು ರಾಮನ ಕಡೆ ಕರೆದೊಯ್ಯುವವ. ಸುಂದರತರ.
ಸೀತೆಯ ಸುಳಿವು ಸಿಕ್ಕಿತು. ಜ್ಞಾನದ ಮೂಲ ದೊರಕಿತು. ಸೀತೆ = ಜ್ಞಾನ -ವೇದಾಭಿಮಾನಿನಿ. ತ್ರಿಪುರ ಸುಂದರಿ.
ಲಂಕೆಗೆ ಹಾರಿದ್ದು ಸುಂದರ. ಸಮುದ್ರದಲ್ಲಿ ನಡುವೆ ಬಂದ ವಿಘ್ನಗಳ ನಿವಾರಣೆ ಸುಂದರ.
ಜ್ಞಾನದ ಮಾರ್ಗಕ್ಕೆ ಬಹು ವಿಘ್ನ. ಜಯಿಸಿದಾಗ ಸುಂದರ.
ಚಿನ್ನದ ನಗರಿ ಲಂಕಾ ಸುಂದರ. ಅರ್ಥ ಅಸುರರ ಕಾರ್ಯ - ಅಜ್ಞಾನ, ಮೋಹಕ.
ಸೀತೆ ಅಶೋಕವನದಲ್ಲಿ ದೊರೆತಿದ್ದು ಅತಿ ಸುಂದರ. 
ಕಳಕೊಂಡ ಜ್ಞಾನ ಮರಳಿ ಪಡೆದಂತೆ.
ಸೀತೆಗೆ ರಾಮನ ಉಂಗುರ. ಇದು ಅಭಯ ಹಸ್ತ.
ರಾಮನ ಪಾದಕಮಲಗಳಿಗೆ ಸೀತೆಯ ಚೂಡಾಮಣಿ ಸಮರ್ಪಣೆ.  
ಅರ್ಥ ಸೀತೆ ತನ್ನ ಶಿರ ರಾಮನ ಪಾದಕ್ಕಿಟ್ಟು ನಮಸ್ಕರಿಸಿದಂತೆ. - ಶರಣಾಗತಿ.
ತಥ್ಯ - ಶರಣಾಗತಿ ಹೊಂದಿದವರಿಗೆ ರಾಮನ ಅಭಯ ಅನುಗ್ರಹ.
ಹೀಗೆ ಎಲ್ಲವೂ ಸುಂದರ ಸುಂದರಕಾಂಡದಲ್ಲಿ.
ಶರಣು ಬಂದ ಸಾಧಕನ ಜೀವನ ಸುಂದರ, ಶುಭಮಂಗಳ.

6) ಯುದ್ಧಕಾಂಡ -
ರಾಮ - ರಾವಣರಿಗೆ ಘನಘೋರ ಯುದ್ಧ.
ರಾಮನಿಗೆ ಜಯ. ರಾವಣನಿಗೆ ಅಪಜಯ.
ದುಷ್ಟ - ಶಿಷ್ಟರ ಯುದ್ಧ.
ದೇವ - ದೈತ್ಯರ ಯುದ್ಧ.
ಸುಗುಣ - ದುರ್ಗುಣಗಳ ಯುದ್ಧ.
ಜ್ಞಾನ - ಅಜ್ಞಾನಗಳ ಯುದ್ಧ.
ದುಷ್ಟರಿಗೆ ಶಿಕ್ಷೆ. ಶಿಷ್ಟರಿಗೆ ರಕ್ಷೆ.
ಅಜ್ಞಾನದ ಮೇಲೆ ಸುಜ್ಞಾನದ ಜಯ.
ಎಲ್ಲವೂ ಕಲಿಯ ಬೇಕಾದದ್ದು. ಅರಿಯ ಬೇಕಾದದ್ದು. ಸಾಧಿಸ ಬೇಕಾದದ್ದು.
ಹೀಗೆ ಸಾಧಕನಲ್ಲಿ ಸಾತ್ವಿಕತೆಗೆ ಮೇಲುಗೈ.

7) ಉತ್ತರ ಕಾಂಡ -
  ಯಾರು, ಏನು ಉತ್ತರ ಪಡೆದರು -
ಯಾರು ಯಾರು ಏನೇನು ಫಲ ಪಡೆದರು, 
ಇದು ಫಲಕಾಂಡ.
ಸೀತೆ ರಾಮನ ಪಡೆದಳು.
ಹನುಮಂತ ದಿವ್ಯ ಸಹಭೋಗ ಪಡೆದ.
ಅಯೋಧ್ಯೆಯ ಜನ ರಾಮರಾಜ್ಯ ಪಡೆದರು.
ಭರತ ಅಣ್ಣನನ್ನು ಪಡೆದ.
ಸುಗ್ರೀವ, ಸತಿ, ಕ್ಷಿತಿ ಎರಡೂ ಹೊಂದಿದ.
ವಿಭೀಷಣ ಚಿರಪಟ್ಟ ಪಡೆದ. 
ಕಪಿಗಳು ರಾಮನ ಅನುಪಮ ಅನುಗ್ರಹ ಪಡೆದರು.
ಮರಳುವಾಗ ಶ್ರೀ ರಾಮ ಸಜ್ಜನರನ್ನೆಲ್ಲ 
ಮೋಕ್ಷಕ್ಕೇ ಕರೆದೊಯ್ದ!
ಇದಕ್ಕೂ ಹೆಚ್ಚು ಇನ್ನೇನು ಫಲಶ್ರುತಿ?
ರಾಮಾಯಣದ ಕಾಂಡಗಳ ಬೇರುಗಳು,
ಸಾಧನೆಯ ಏಳು ಹೆಜ್ಜೆಗಳಲ್ಲಿ ಹುದುಗಿವೆ.
ಏಳಿ. ಏಳಿಗೆಯ ಏಳು ಹೆಜ್ಜೆ ಇಡಿ.
ಏಳುಬೀಳುಗಳಿಲ್ಲದ ಶಾಶ್ವತ ಸುಖಮಯ 
ಶ್ರೀ ರಾಮ ಸನ್ನಿಧಿ ಹೊಂದಿ! 
ಕೋಸಲೇಂದ್ರನ ವರದೂತ   ಹನುಮನ ಅಂತರ್ಗತ ರಘುಕುಲತಿಲಕ ಶ್ರೀಸೀತಾರಾಮರಿಗೆ
ನಮಿಸೋಣ, ಸಮರ್ಪಿಸೋಣ.
    ಶ್ರೀ ಕೃಷ್ಣಾರ್ಪಣಮಸ್ತು
             ಡಾ. ವಿಜಯೇಂದ್ರ. ದೇಸಾಯಿ.

**********

ದಶರಥ ರಾಜನಿಗೆ ಪುತ್ರ ಸಂತಾನವಿಲ್ಲದ ಕಾರಣ ತಮ್ಮ ಕುಲ ಗುರುಗಳಾದ ವಶಿಷ್ಟರಲ್ಲಿ, ತಮ್ಮ ಅಳಲು ತೋಡಿಕೊಂಡ. ಕುಲ ಗುರುಗಳಾದ ವಶಿಷ್ಟರ ಸಲಹೆಯಂತೆ, ಋಶ್ಯಶೃಂಗರನ್ನು ಕರೆಯಿಸಿ "ಪುತ್ರಕಾಮೇಷ್ಟೀ" ಯಾಗವನ್ನು ಮಾಡಿಸಿದ ಫಲವಾಗಿ ಶ್ರೀರಾಮ, ಲಕ್ಷ್ಮಣ, ಭರತ, ಶತೃಘ್ನರು ಜನಿಸಿದರು.
ಧನ್ಯವಾದಗಳು.
ಶ್ರೀ ವಸಿಷ್ಠರು ರಾಜಸಭೆಯಲ್ಲಿ ಅನೇಕ ಬ್ರಹ್ಮರ್ಷಿ ಗಳ ಸನ್ನಿಧಿಯಲ್ಲಿ ಸುದೀರ್ಘವಾಗಿ ಇದನ್ನು ಅವರು ಉಪದೇಶಿಸುತ್ತಿದ್ದಾರೆ ಎಂಬುದನ್ನು ಓದುತ್ತಿರುವ ನಾವೇ ಮರೆತಿದ್ದೇವೆ. ಇನ್ನು ಅಲ್ಲಿರುವವರಿಗೆ ಎಂಥ ಅನುಭವ ಆಗಿರಬಹುದು? ವಾಲ್ಮೀಕಿಗಳು ಇದನ್ನು ವರ್ಣಿಸುತ್ತಿದ್ದಾರೆ.
‘ಮುನಿನಾಯಕರಾಗಿರುವ ಶ್ರೀ ವಸಿಷ್ಠರು ಶ್ರೀರಾಮನಿಗೆ ಈ ರೀತಿ ಉಪದೇಶಿಸುತ್ತಿರಲಾಗಿ, ಅಲ್ಲಿ ಸೇರಿರುವ ಜನರೆಲ್ಲ ಏಕಾಗ್ರತೆಯಿಂದ ಕೇಳುತ್ತ ಮೌನವಾಗಿ ಕುಳಿತಿದ್ದರು. ಅಲ್ಲಿರುವ ಶಾಂತತೆ ಹೇಗಿತ್ತೆಂದರೆ, ಶರೀರದ ಸ್ಪಂದನೆ ಇಲ್ಲದ್ದರಿಂದ ಧರಿಸಲ್ಪಟ್ಟ ಆಭರಣಗಳು ಸ್ವಲ್ಪವೂ ಶಬ್ದ ಮಾಡುತ್ತಿಲ್ಲ. ಪಂಜರದಲ್ಲಿರುವ ಪಕ್ಷಿಗಳೂ ಕೂಗಾಡುತ್ತಿಲ್ಲ, ಹಾರಾಡುತ್ತಲೂ ಇಲ್ಲ. ಸದಾ ಚಟುವಟಿಕೆಯಿಂದ ಕೂಡಿರುವ ಮಹಿಳೆಯರು ತಮ್ಮ ಸ್ಪಂದನೆಗಳನ್ನು ಮರೆತುಬಿಟ್ಟಿದ್ದಾರೆ. ಅಷ್ಟೇ ಏಕೆ, ಸಮಸ್ತ ರಾಜಸಭೆಯೂ ಭಿತ್ತಿಯಲ್ಲಿ ಬರೆದ ಚಿತ್ರದಂತೆ ಸ್ತಬ್ಧವಾಗಿದೆ. ವಸಿಷ್ಠರ ದಿವ್ಯೋಪದೇಶ ಕೇಳುತ್ತ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಸೂರ್ಯನ ಕಿರಣಗಳು ಪ್ರಖರತೆ ಕಳೆದುಕೊಳ್ಳುತ್ತ ಅಲ್ಪವಾಗತೊಡಗಿವೆ. ಇನ್ನೂ ಸೂರ್ಯಾಸ್ತಕ್ಕೆ ಎರಡು ಘಟಿಗಳಷ್ಟು ಕಾಲ (ಸುಮಾರು ಮುಕ್ಕಾಲು ಘಂಟೆ) ಉಳಿದಿದೆ. ದಿನವಿಡೀ ಚರ್ಮಕ್ಕೆ ಮಧುರಾನುಭವ ಉಂಟುಮಾಡಿದ ಬಿಸಿಲು ಕಳೆಗುಂದುತ್ತಿದೆ. ಬಿಸಿಲು ಕ್ಷೀಣಿಸಿದಂತೆಯೇ ದೈನಿಕ ವ್ಯವಹಾರಗಳು ಕಡಿಮೆಯಾಗತೊಡಗಿವೆ. ಆ ಹೊತ್ತಿಗೆ ಶರೀರಕ್ಕೆ ಹಿತವಾದ ಅನುಭವ ಉಂಟುಮಾಡುವಂತೆ ಗಾಳಿ ಬೀಸಿತು. ಕಮಲಗಳ ಪರಿಮಳದಿಂದ ಪುಷ್ಟಿಗೊಂಡ ಆ ಗಾಳಿಯು ವಸಿಷ್ಠರ ಉಪದೇಶವನ್ನು ಕೇಳಲು ತಾನೂ ಬಂದಿದ್ದೇನೆ ಎಂಬಂತೆ ಬೀಸತೊಡಗಿತು.
ಸ್ವಲ್ಪ ಹೊತ್ತಿಗೆ ಸೂರ್ಯನು ಅಸ್ತಾಚಲದ ಕಡೆಗೆ ಹೋಗತೊಡಗಿದನು. ವೇದಾಂತ ಶ್ರವಣಮಾಡಿದ ನಂತರ ಏಕಾಂತದಲ್ಲಿ ಕುಳಿತು ಅದನ್ನು ಮನನ ಮಾಡಬೇಕಾಗುತ್ತದೆ. ಸೂರ್ಯನು ಈ ತನಕ ಶ್ರವಣ ಮಾಡಿದ ಉಪದೇಶವನ್ನು ಮನನ ಮಾಡಲು ಏಕಾಂತಕ್ಕೆ ಹೋಗುತ್ತಿರುವಂತೆ ಗೋಚರಿಸುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ತಂಪಾದ ಇಬ್ಬನಿ ಬೀಳತೊಡಗಿತು. ಆ ಇಬ್ಬನಿಯು ವನಪ್ರದೇಶದಲ್ಲಿ ಒಂದು ರೀತಿಯ ಸಮತ್ವವಾಗಿ ಗೋಚರಿಸುತ್ತಿತ್ತು. ವೇದಾಂತವಿಜ್ಞಾನ ಶ್ರವಣ ಮಾಡಿದ್ದರಿಂದ ಮನಸ್ಸು ಶಾಂತವಾಗುತ್ತದೆ. ಅಂತಹ ಶಾಂತತೆ ಅಲ್ಲಿ ಉಂಟಾಗಿದೆಯೋ ಎಂಬ ಅನುಭವವಾಗುತ್ತಿತ್ತು.
ಎಲ್ಲ ದಿಕ್ಕುಗಳಲ್ಲಿಯೂ ಜನಗಳ ಸಂಚಾರ ಕಡಿಮೆ ಆಗತೊಡಗಿತು. ಜನಗಳ ಬಾಹ್ಯಸಂಚಾರ ಕಡಿಮೆ ಆಗುತ್ತಿರುವುದು ಬಾಹ್ಯ ಚಟುವಟಿಕೆಗಳು ಕಡಿಮೆಯಾಗುವುದನ್ನು ಸೂಚಿಸುತ್ತದೆ. ವೇದಾಂತವನ್ನು ಏಕಾಗ್ರತೆಯಿಂದ ಗಮನವಿಟ್ಟು ಕೇಳಲು ಶರೀರದ ಬಾಹ್ಯ ಚಟುವಟಿಕೆಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಜನಗಳ ಸಂಚಾರ ಬೀದಿಗಳಲ್ಲಿ ಕಡಿಮೆಯಾಗುತ್ತಿರುವುದನ್ನು ನೋಡಿದರೆ, ವಸಿಷ್ಠರು ಹೇಳುತ್ತಿರುವ ವೇದಾಂತವನ್ನು ಸಾವಧಾನತೆಯಿಂದ ಕೇಳಲು ಇಡೀ ಅಯೋಧ್ಯೆ ಬಾಹ್ಯ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಳ್ಳುತ್ತಿದೆಯೋ ಎಂಬಂತೆ ಕಾಣುತ್ತಿತ್ತು.
ಸೂರ್ಯನು ಅಸ್ತಾಚಲದತ್ತ ಹೊರಟಿರುವುದರಿಂದ ಎಲ್ಲ ವ್ಯಕ್ತಿ ಮತ್ತು ವಸ್ತುಗಳ ನೆರಳುಗಳು ದೀರ್ಘವಾದವು. ಇಡೀ ನೆರಳು ದೀರ್ಘವಾದಾಗ ಭುಜ, ಕುತ್ತಿಗೆ, ತಲೆಯ ಭಾಗಗಳ ನೆರಳುಗಳು ಸಹಜವಾಗಿ ದೀರ್ಘವಾಗುತ್ತವೆ. ಅವನ್ನು ನೋಡಿದರೆ ವಸಿಷ್ಠರ ಉಪದೇಶಕ್ರಮವನ್ನು ಗಮನವಿಟ್ಟು ಕೇಳಲು ಎಲ್ಲರ ಭುಜ, ಕುತ್ತಿಗೆ, ತಲೆಗಳು ಮುಂದಕ್ಕೆ ದೀರ್ಘವಾಗಿ ಬಾಗಿವೆಯೋ ಎಂಬಂತಿತ್ತು.
ಅಷ್ಟು ಹೊತ್ತಿಗೆ ದಶರಥನ ಸಿಂಹಾಸನದ ಎದುರು ದ್ವಾರಪಾಲಕನೊಬ್ಬ ಬಂದು ಬಗ್ಗಿ, ‘‘ದೇವ! ಸಾಯಂಕಾಲದ ಸ್ನಾನ, ದೇವತಾರ್ಚನೆ, ಬ್ರಾಹ್ಮಣಾರ್ಚನೆಗಳಿಗೆ ಕಾಲ ಅತಿಕ್ರಮಿಸುತ್ತಿದೆ’’ ಎಂದು ನಿವೇದಿಸಿದನು.
ಆಗ ವಸಿಷ್ಠರು ಮಧುರ ಮಾತುಗಳನ್ನು ಉಪಸಂಹಾರಗೊಳಿಸಿ ಕೊನೆಯಲ್ಲಿ ಹೇಳಿದರು – ‘‘ಮಹಾರಾಜ! ಈ ತನಕ ಶ್ರವಣ ಮಾಡಿದ ವಿಷಯಗಳನ್ನು ಇಲ್ಲಿಗೆ ನಿಲ್ಲಿಸೋಣ. ನಾಳೆ ಮುಂದಿನ ವಿಷಯಗಳನ್ನು ಹೇಳುತ್ತೇನೆ.’’ ಇದನ್ನು ಗಮನಿಸಿದ ಮಹಾರಾಜನು ‘‘ಹಾಗೆಯೇ ಆಗಲಿ’’ ಎನ್ನುತ್ತ, ಅಲ್ಲಿ ಬಂದಿರುವ ಎಲ್ಲ ದೇವತೆಗಳು, ಋಷಿಮುನಿಗಳು, ಬ್ರಾಹ್ಮಣರನ್ನು ಪೂಜಿಸಿದನು.
ಹೀಗೆ ಅಲ್ಲಿರುವವರಿಗೆ ಸತ್ಕಾರವಾದ ಕೂಡಲೇ ಸೇರಿದ್ದ ಜನರೆಲ್ಲ ಎದ್ದು ನಿಂತರು. ಮಹಾರಾಜನ ಸಮೇತ ಅಲ್ಲಿ ಸೇರಿರುವ ಇಡೀ ಮುನಿಮಂಡಲ ಎದ್ದುನಿಂತಿತು. ಆಗ ಅಲ್ಲಿ ಸತ್ಕರಿಸುವಾಗ ಸಮರ್ಪಿಸಿದ ರತ್ನರಾಶಿಗಳ ಪ್ರಭೆಯಿಂದ ಅವರ ಮುಖಗಳೆಲ್ಲ ಹೊಳೆಯುತ್ತಿದ್ದವು. ಎದ್ದು ನಿಲ್ಲುವಾಗ ಶರೀರದ ಅಂಗಗಳಲ್ಲಿ ಚಲನೆಯಾದ್ದರಿಂದ ಅವರ ಶರೀರದಲ್ಲಿ ಧರಿಸಲ್ಪಟ್ಟ ಕೇಯೂರಗಳು ಒಂದಕ್ಕೊಂದು ತಾಗಿ ಶಬ್ದ ಮಾಡಿದವು. ಬಳೆಗಳೂ ಶಬ್ದ ಮಾಡಿದವು. ಅವರ ತಲೆಯ ಮೇಲೆ ಇಷ್ಟುಹೊತ್ತು ಅನೇಕ ಜೇನುಹುಳಗಳು ಕುಳಿತಿದ್ದವು. ಈಗ ಅವರು ಎದ್ದ ತಕ್ಷಣ ಆ ಜೇನುಹುಳಗಳು ಗುಂಯ್ ಎನ್ನುತ್ತಾ ಹಾರತೊಡಗಿದವು. ಇದರಿಂದ ಅವರುಗಳ ಕೂದಲುಗಳೇ ಮಾತಾಡುತ್ತಿವೆಯೋ ಎನಿಸುತ್ತಿತ್ತು. ಆಭರಣಗಳ ಪ್ರಭೆಯಿಂದ ಎಲ್ಲ ದಿಕ್ಕುಗಳನ್ನೂ ಬಂಗಾರಮಯವನ್ನಾಗಿ ಮಾಡುತ್ತ ಅವರೆಲ್ಲ ಹೊರಡಲು ಉದ್ಯುಕ್ತರಾದರು. ಅವರ ಬುದ್ಧಿಯ ಒಳಗಾದರೋ ವಸಿಷ್ಠರ ಮಾತುಗಳ ಅರ್ಥಗಳೇ ಸುಳಿಯುತ್ತಿವೆ. ಹಾಗಾಗಿ ಅವರ ಇಂದ್ರಿಯವೃತ್ತಿಗಳೆಲ್ಲ ಶಾಂತವಾಗಿವೆ. ಈ ಸ್ಥಿತಿಯಲ್ಲೇ ಅವರು ಅಲ್ಲಿಂದ ಹೊರಟರು. ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ತಮ್ಮ ತಮ್ಮ ಕ್ರಮದಂತೆ ಸಾಯಂಸಂಧ್ಯಾಕಾಲೀನ ಕರ್ತವ್ಯಗಳನ್ನು ಪೂರೈಸಿ, ದಿನವಿಡೀ ನಡೆದ ಘಟನೆಗಳನ್ನು ಪರಸ್ಪರ ಹೇಳಿಕೊಳ್ಳುತ್ತ ಸಂತೋಷಪಡುತ್ತಿದ್ದರು.'


ಶ್ರೀಮದ್ರಾಮಾಯಣಾಮೃತಮ್ 🕉

(ವಿವಿಧ ರಾಮಾಯಣಗಳ ಹಾಗೂ ವ್ಯಾಖ್ಯೆಗಳ ತುಲನಾತ್ಮಕ ಸ್ವಾಧ್ಯಾಯ, ವಾಲ್ಮೀಕೀಯ-ಸಂಕ್ಷೇಪರಾಮಾಯಣ, ವಾಲ್ಮೀಕೀಯ-ರಾಮಾಯಣಕಥಾಸಾರಾಂಶ, ಗಾಯತ್ರೀರಾಮಾಯಣ ಹಾಗೂ ಸರ್ಗೈಕಶ್ಲೋಕರಾಮಾಯಣಮ್)
|| ಶ್ರೀ ಗುರುಗಣೇಶಾಭ್ಯಾಂ ನಮಃ ||
|| ಶ್ರೀಸರಸ್ವತ್ಯೈ ನಮಃ ||
|| ಸ್ವಸ್ತಿ ಶ್ರೀ ಉಮಾಮಹೇಶ್ವರಃ ಪ್ರಸನ್ನಃ ||
|| ಪ್ರಸೀದತು ಶ್ರೀಹನೂಮತ್ಸಮೇತಃ ಸೀತಾರಾಮಚನ್ದ್ರಃ ||
|| ಓಂ ನಮೋ ನಾರಾಯಣಾಯ ||

ಪೀಠಿಕೆ
ರಾಮಾಯಣ ಮತ್ತು ಮಹಾಭಾರತಗಳು ಭಾರತದೇಶದ ೨ ಪ್ರಧಾನ ಐತಿಹಾಸಿಕ ಗ್ರಂಥಗಳು. ಇವುಗಳ ಅಧ್ಯಯನವು ನಮಗೆ, ಆ ಕಾಲದ ಭಾರತದ ಚರಿತ್ರೆ, ಸನಾತನ ಭಾರತೀಯ ಸಂಸ್ಕೃತಿಯ ಪರಿಚಯ ಹಾಗೂ ನಾನಾ ಧರ್ಮಸೂಕ್ಷ್ಮಾದಿಗಳ ವಿಸ್ತಾರವಾದ ಮಾಹಿತಿಯನ್ನು  ನೀಡುತ್ತದೆ. 

*“ಗೀತೇ ರಾಮಾಯಣೇ ಪುಣ್ಯೇ ಪುರಾಣೇ ಭಾರತೇ ತಥಾ | 
ಆದೌ ಅನ್ತೇ ಚ ಮಧ್ಯೇ ಚ ಹರಿಃ ಸರ್ವತ್ರ ಗೀಯತೇ ||”*

 ಎಂಬ ಮಾತಿನಂತೆ, ಭಗವದ್ಗೀತೆ, ಸಂಗೀತ ಕೀರ್ತನಾದಿಗಳು, ರಾಮಾಯಣ, ಪುರಾಣಗಳು ಹಾಗೂ ಮಹಾಭಾರತ— ಇಂತಹ ಗ್ರಂಥಗಳಲ್ಲಿ ಆದಿ-ಮಧ್ಯ-ಅಂತ್ಯಗಳಲ್ಲೆಲ್ಲ ಭಗವಂತನೇ ಸ್ತುತಿಸಲ್ಪಟ್ಟಿರುವನು; ಆ ದಿವ್ಯಶಕ್ತಿಯ ಮಹಿಮೆಗಳೇ ಕೀರ್ತಿತವಾಗಿವೆ. ವರುಣ / ಪ್ರಚೇತಸ್ ಹಾಗೂ ಚರ್ಷಣೀ ದಂಪತಿಗಳ ಪುತ್ರರಾಗಿ ಪ್ರಾಚೇತಸರೆನಿಸಿದ ಆದಿಕವಿ ವಾಲ್ಮೀಕಿಮಹರ್ಷಿಗಳು ಬ್ರಹ್ಮ-ನಾರದಾದಿಗಳ ಅನುಗ್ರಹದಿಂದ, ವ್ಯಾಧನೊಬ್ಬನು ಕ್ರೌಂಚಮಿಥುನದಲ್ಲಿ ಗಂಡು ಕ್ರೌಂಚವನ್ನು ಹೊಡೆದುರುಳಿಸಿದ್ದನ್ನು ನೋಡಿ ಶೋಕದಿಂದ “ಶೋಕಃ ಶ್ಲೋಕತ್ವಮಾಗತಃ” ಎಂಬಂತೆ, ದುಃಖಭಾವದಲ್ಲಿ ಜಗತ್ತಿನ ಮೊದಲ ಅನುಷ್ಟುಪ್ ಛಂದೋಬದ್ಧವಾದ ಲೌಕಿಕಸಂಸ್ಕೃತಶ್ಲೋಕವೊಂದನ್ನು ಉದ್ಗರಿಸಿ, ಬಳಿಕ ಶ್ರೀರಾಮಚಂದ್ರನ ವಿಮಲಚರಿತವನ್ನು ಶ್ರೀಮದ್ರಾಮಾಯಣವೆಂಬ ೨೪,೦೦೦ ಶ್ಲೋಕಗಳ ಉದ್ಗ್ರಂಥರೂಪದಲ್ಲಿ ವಿರಚಿಸಿ, ಜಗತ್ತನ್ನೇ ಅನುಗ್ರಹಿಸಿದರು. “ಏವಮೇತತ್ ಪುರಾವೃತ್ತಮ್ ಆಖ್ಯಾನಂ ಭದ್ರಮ್ ಅಸ್ತು ವಃ”, “ಆದಿಕಾವ್ಯಮಿದಂ ಪ್ರೋಕ್ತಂ ಪುರಾ ವಾಲ್ಮೀಕಿನಾ ಕೃತಮ್”— ಇತ್ಯಾದಿ ರಾಮಾಯಣದ ಕುರಿತ ಹೇಳಿಕೆಗಳಿಂದ ಇದು ಕಾವ್ಯವೂ ಹೌದು, ಇತಿಹಾಸವೂ ಹೌದೆಂದು ತಿಳಿದುಬರುತ್ತದೆ. “ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ”, “ತತಃ ಪಶ್ಯತಿ ಧರ್ಮಾತ್ಮಾ ತತ್ಸರ್ವಂ ಯೋಗಮಾಸ್ಥಿತಃ” ಎಂಬ ಮಾತುಗಳಂತೆ, ರಾಮಾಯಣವು ವೇದತುಲ್ಯವೂ, ತಪೋಮುಖೇನ ಋಷಿದೃಷ್ಟವೂ ಆಗಿದ್ದು, ಕೇವಲ ಸಾಮಾನ್ಯ ಕವಿಕಲ್ಪಿತರಚನೆಯಲ್ಲ. ರಾಮಾಯಣವು ವಾಮನಮೂರ್ತಿಯಾದರೆ, ಮಹಾಭಾರತವು ತ್ರಿವಿಕ್ರಮರೂಪ. ಆದರೂ, ಇವೆರಡೂ ಒಬ್ಬ ಮಹಾವಿಷ್ಣುವಿನದೇ ವಿಭಿನ್ನ ಅವತಾರಗಳಾಗಿರುವಂತೆಯೇ, ಇವೆರಡೂ ಐತಿಹಾಸಿಕಕಾವ್ಯಗಳೂ ಒಂದೇ ಸನಾತನ ಸಂಸ್ಕೃತಿಗೆ ಹಿಡಿದ ೨ ಕೈಗನ್ನಡಿಗಳು; ಭಾರತೀಯತೆಯ ೨ ಕಣ್ಣುಗಳು. 

ಆದಿಕವಿ ಮಹರ್ಷಿ ವಾಲ್ಮೀಕಿ

ಭೃಗುವಂಶದಲ್ಲಿ ಜನಿಸಿದ ಇವರು ಬಾಲ್ಯದಲ್ಲೇ ಹೆತ್ತವರಿಂದ ಕೈತಪ್ಪಿ ಕಾಡಿನಲ್ಲಿ ಬೇಡರ ಗುಂಪಿನಲ್ಲಿ ಸೇರಿಕೊಂಡು “ ರೂಕ್ಷ ” ನೆಂಬ ಹೆಸರಿನಿಂದ ಕ್ರೂರಿಯಾಗಿ ಬೆಳೆದರು. ಇವರು ಸಪ್ತರ್ಷಿಗಳ ಕೃಪೆಯಿಂದ ರಾಮಮಂತ್ರವನ್ನು ನಿರಂತರ ಜಪಿಸಿ ಇವರ ಸುತ್ತ ಹುತ್ತ (ವಲ್ಮೀಕ) ಬೆಳೆದುದರಿಂದ ವಾಲ್ಮೀಕಿಯೆನಿಸಿದರು. ಆ ಹುತ್ತವು ಪ್ರಚೇತಸ್ / ವರುಣನಿಂದ ವರ್ಷಧಾರೆಯ ಮೂಲಕ ಕಳೆಯಲ್ಪಟ್ಟು ವಾಲ್ಮೀಕಿಗಳು ಪ್ರಾಚೇತಸರೆನಿಸಿದರೆಂಬ ಪ್ರತೀತಿಯೂ ಇದೆ. ಅಲ್ಲದೆ, ಭೃಗುವೂ ವರುಣವಂಶಜನಾದ್ದರಿಂದ, ಅದೇ ಕುಲದಲ್ಲಿ ವಾಲ್ಮೀಕಿಗಳೂ ಜನಿಸಿದ್ದರಿಂದ ಪ್ರಾಚೇತಸರೆನಿಸಿದರು.

ಶ್ರೀರಾಮನ ದೈವತ್ವ

ರಾಮಾಯಣವು ಕರುಣರಸಪ್ರಧಾನವಾಗಿದ್ದು, ನವರಸಪರಿಪುಷ್ಟವಾದ ಮಹಾಕಾವ್ಯ. ನಿರಾಕಾರನೂ, ನಿರ್ಗುಣನೂ ಆದ ಪರಬ್ರಹ್ಮನೇ  “ರಾಮೋ ವಿಗ್ರಹವಾನ್ ಧರ್ಮಃ”, “ವಿದ್ಧಿ ಮಾಂ ಋಷಿಭಿಃ ತುಲ್ಯಂ ಕೇವಲಂ ಧರ್ಮಮ್ ಆಸ್ಥಿತಮ್” ಎಂಬಂತೆ ಋಷಿಸದೃಶನಾಗಿ ಧರ್ಮವೇ ಮೂರ್ತಿವೆತ್ತಂತೆ ಶ್ರೀರಾಮಚಂದ್ರನಾಗಿ ಅವತರಿಸಿದನು. ಹೀಗೆ ಆ ಭಗವಂತನ ಮಾನುಷಾವತಾರದ ಲೀಲಾವಿಭೂತಿಯ ವಾಙ್ಮಯಪ್ರಸ್ತುತಿಯೇ ಶ್ರೀಮದ್ರಾಮಾಯಣ. 

“ವಿಷ್ಣೋ ಪುತ್ರತ್ವಮಾಗಚ್ಛ ಕೃತ್ವಾऽऽತ್ಮಾನಂ ಚತುರ್ವಿಧಮ್” — “ಹೇವಿಷ್ಣುವೇ! ನಿನ್ನ ನಾಲ್ಕು ಅಂಶಗಳಿಂದ ನನ್ನ ಪುತ್ರತ್ವವನ್ನು ನೀನು ಹೊಂದು”  (ಬಾಲಕಾಂಡ), “   “ಅರ್ಥಿತೋ ಮಾನುಷೇ ಲೋಕೇ ಜಜ್ಞೇ ವಿಷ್ಣುಸ್ಸನಾತನಃ” — “ಸನಾತನನಾದ ವಿಷ್ಣುವು ದೇವತೆಗಳಿಂದ ಹಾಗೂ ದಶರಥನಿಂದ ಪ್ರಾರ್ಥಿತನಾಗಿ ಈ ಮನುಷ್ಯಲೋಕದಲ್ಲಿ ಜನಿಸಿದನು.”  (ಅಯೋಧ್ಯಾಕಾಂಡ), “ಪ್ರೀಯತೇ ಸತತಂ ರಾಮಃ ಸ ಹಿ ವಿಷ್ಣುಃ ಸನಾತನಃ” — ಶ್ರೀರಾಮನು ಸತತವೂ ಪ್ರೀತಿಸಲ್ಪಡುತ್ತಾನೆ. ಯಾಕೆಂದರೆ, ಆತನೇ ಸನಾತನನಾದ ವಿಷ್ಣುವು.”_  (ಯುದ್ಧಕಾಂಡ)— ಈ ಎಲ್ಲಾ ರಾಮಾಯಣದ ವಾಕ್ಯಗಳು ಶ್ರೀರಾಮನು ಮಹಾವಿಷ್ಣುವಿನ ಅವತಾರವೆಂಬುದಾಕ್ಕೆ ಆಧಾರಗಳು. “ಯೋ ಜಾತಮಸ್ಯ ಮಹತೋ ಮಹಿಬ್ರವಾತ್” — “ಆತನ ಮಹಿಮೆಯಿಂದಲೇ ಆತನು ಹುಟ್ಟುತ್ತಾನೆ” , “ಪರಮಚ್ಛದೋ ವರ ಆವಿವೇಶ” — “ಮಹಾ ಮಾಯಾವಿಯಾದ ಪರಮಾತ್ಮನು ಅವತಾರರೂಪದಿಂದ ಶ್ರೇಷ್ಠರೀತಿಯಿಂದ ಜಗವನ್ನು ಪ್ರವೇಶಿಸಿದನು.” —  ಎಂಬ ವೇದಮಂತ್ರಗಳು ಭಗವಂತನು ಅವತಾರವೆತ್ತುತ್ತಾನೆಂಬುದಕ್ಕೆ ಪ್ರಮಾಣಗಳು. ರಾಮಾಯಣದಲ್ಲಿ ಹಾಗೂ ಇತರ ಹಲವು ಪುರಾಣಗಳ ಹಲವಾರು ಕಡೆಗಳಲ್ಲಿ ಶ್ರೀರಾಮನು ಪರಬ್ರಹ್ಮಸ್ವರೂಪನೆಂಬುದಕ್ಕೆ ಸಾಕಷ್ಟು ಆಧಾರಗಳಿವೆ.

ರಾಮಾಯಣದಲ್ಲಿ ನವರಸಗಳು

ಶೃಙ್ಗಾರಂ ಕ್ಷಿತಿನನ್ದಿನೀವಿಹರಣೇ ವೀರಂ ಧನುರ್ಭಞ್ಜನೇ |
ಕಾರುಣ್ಯಂ ಬಲಿಭುಙ್ಮುಖೇऽದ್ಭುತರಸಂ ಸಿನ್ಧೌ ಗಿರಿಸ್ಥಾಪನೇ ||
ಹಾಸ್ಯಂ ಶೂರ್ಪಣಖಾಮುಖೇ ಭಯವಹೇ ಭೀಭತ್ಸಮಾಜೇರ್ಮುಖೇ |
ರೌದ್ರಂ ರಾವಣಭಞ್ಜನೇ ಮುನಿಜನೇ ಶಾನ್ತಂ ವಪುಃ ಪಾತು ನಃ ||

ಭೂಜಾತೆಯಾದ ಪತ್ನಿ ಸೀತೆಯೊಂದಿಗೆ ವಿಹರಿಸುವಾಗ ಶೃಂಗಾರರಸವನ್ನೂ, ಶಿವಧನುಸ್ಸನ್ನು ಜನಕನ ಆಸ್ಥಾನದಲ್ಲಿ ಭಂಗಿಸಿದಾಗ ವೀರರಸವನ್ನೂ, ಪಿತೃಗಳಿಗೆ ಇಡುವ ಬಲಿ / ಊಟವನ್ನುಣ್ಣುವ ಕಾಗೆಯ ರೂಪದಲ್ಲಿದ್ದ ಕಾಕಾಸುರನ ಬಗ್ಗೆ ಕರುಣರಸವನ್ನೂ, ಸೇತುಬಂಧನದಲ್ಲಿ ಅದ್ಭುತರಸವನ್ನೂ, ಶೂರ್ಪಣಖೆಯ ವಿಷಯದಲ್ಲಿ ಹಾಸ್ಯರಸವನ್ನೂ, ಯುದ್ಧರಂಗದಲ್ಲಿ ಭೀಭತ್ಸವನ್ನೂ, ರಾವಣವಧೆಯಲ್ಲಿ ರೌದ್ರರಸವನ್ನೂ, ಋಷಿಮುನಿಗಳ ಹೃದಯದಲ್ಲಿ ಶಾಂತರಸವನ್ನೂ ತೋರಿದ ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನು ನಮ್ಮನ್ನು ಪಾಲಿಸಲಿ.

ರಾಮಾಯಣವೈವಿಧ್ಯ / ಶತಕೋಟಿರಾಮಾಯಣ

ರಾಮಾಯಣವು ಮೂಲದಲ್ಲಿ ವಾಲ್ಮೀಕಿನಿರ್ಮಿತವಾಗಿದ್ದರೂ, ಬಳಿಕ ಸಂಸ್ಕೃತಭಾಷೆಯಲ್ಲಿ ಅಧ್ಯಾತ್ಮರಾಮಾಯಣ, ವಾಸಿಷ್ಠರಾಮಾಯಣ, ಅಗಸ್ತ್ಯರಾಮಾಯಣ, ಆನಂದರಾಮಾಯಣ, ಅದ್ಭುತರಾಮಾಯಣ, ಸಪ್ತರ್ಷಿರಾಮಾಯಣ, ಗಾಯತ್ರೀರಾಮಾಯಣ ಮುಂತಾದ ಹಾಗೂ ಪ್ರಾದೇಶಿಕಭಾಷೆಗಳಲ್ಲಿ ಕಂಬರಾಮಾಯಣ, ತುಲಸೀರಾಮಾಯಣ, ಕೃತ್ತಿವಾಸರಾಮಾಯಣ, ರಂಗನಾಥರಾಮಾಯಣ, ತೊರವೆರಾಮಾಯಣ, ಜನಪ್ರಿಯರಾಮಾಯಣ, ಜನಪದರಾಮಾಯಣ, ಸಂಗ್ರಹರಾಮಾಯಣ, ಕೌಶಿಕರಾಮಾಯಣ, ಕುಮುದೇಂದುರಾಮಾಯಣ, ಚಿತ್ರರಾಮಾಯಣ, ನವನೀತರಾಮಾಯಣ, ವಾಲ್ಮೀಕಿ ವಚನರಾಮಾಯಣ, ರಾಮಾಯಣದರ್ಶನಂ, ರಾಮಾಯಣಮಹಾನ್ವೇಷಣಂ, ತೌಳವರಾಮಾಯಣ, ಸೀತಾಯನ, ಜೈನರಾಮಾಯಣ, ಬೌದ್ಧರಾಮಾಯಣ ಮುಂತಾದ   ನಾನಾ ರಾಮಾಯಣಗಳು ವಿರಚಿತವಾದವು. ಮೂಲ ವಾಲ್ಮೀಕಿರಾಮಾಯಣಕ್ಕೆ ನೂರಾರು ವ್ಯಾಖ್ಯಾನಗಳು ಬಂದವು. ವಾಲ್ಮೀಕಿರಾಮಾಯಣವನ್ನಾಧರಿಸಿ ಕವಿರತ್ನ ಕಾಳಿದಾಸನ ರಘುವಂಶ-ಮೇಘದೂತಗಳು,  ಮಹಾಕವಿ ಭಾಸನ ಪ್ರತಿಮಾ-ಅಭಿಷೇಕ ನಾಟಕಗಳು, ಭವಭೂತಿಯ ಉತ್ತರರಾಮಚರಿತ, ಮುರಾರಿಯ ಅನರ್ಘರಾಘವ, ವಿದರ್ಭರಾಜನ ರಾಮಾಯಣಚಂಪೂ, ಶ್ರೀವೇಂಕಟನಾಥರ ಹಂಸಸಂದೇಶ ಇತ್ಯಾದಿ ಹಲವಾರು ಕೃತಿಗಳು ವಿರಚಿಸಲ್ಪಟ್ಟವು. ಹೀಗೆ ವಾಲ್ಮೀಕಿರಾಮಾಯಣವು, “ಕಾವ್ಯಬೀಜಂ ಸನಾತನಮ್” ಎಂಬ (ಬೃಹದ್ಧರ್ಮಪುರಾಣ ೧/೩೦/೪೭) ಮಾತಿನಂತೆ ಅನೇಕ ಸಾಹಿತ್ಯಕೃತಿಗಳ ಮೂಲಾಧಾರವಾಗಿ ವಿಶ್ವಕಾವ್ಯವೆನಿಸಿದೆ. 

ರಾಮಾಯಣ ಮತ್ತು ತಪಸ್ಸು

ರಾಮಾಯಣದ ಮಹತ್ವವು ತಪೋಮೂಲವಾದುದು. “ತಪಸ್ಸ್ವಾಧ್ಯಾಯನಿರತಂ” —  ತಪಸ್ಸಿನಿಂದಲೇ ವಾಲ್ಮೀಕಿಮಹರ್ಷಿಗಳಿಗೆ ರಾಮಾಯಣವು ಸಿದ್ಧಿಸಿತೆಂದು ರಾಮಾಯಣದ ಮೊದಲ ಶ್ಲೋಕವೇ ಹೇಳಿದೆ. ಮುಂದೆ, ವಿಶ್ವಾಮಿತ್ರರ ತಪಸ್ಸು, ಗಂಗಾವತರಣಕ್ಕಾಗಿ ಭಗೀರಥನ ತಪಸ್ಸು, ಚೂಲಿ ಋಷಿ ಹಾಗೂ ಭೃಗುಮುನಿಗಳ ತಪಸ್ಸು ಮುಂತಾದವು ಬರುತ್ತವೆ. ರಾಮಾಯಣದ ಪ್ರಕಾರ ಸ್ವರ್ಗಾದಿ ಸಕಲ ಸುಖಭೋಗಗಳ ಮೂಲವು ತಪಸ್ಸೇ ಆಗಿರುವುದು. ರಾವಣನ ಮಹಾಬಲವೂ, ಸಕಲ ಸಾಮ್ರಾಜ್ಯಾದಿಭೋಗಗಳೂ ಆತನ ತಪಸ್ಸಾಧಿತವೇ ಆಗಿವೆ. ಶ್ರೀರಾಮನೂ ಶುದ್ಧ ರಾಜರ್ಷಿಯೇ ಎಂಬುದಕ್ಕೆ ಆತನ “ವಿದ್ಧಿ ಮಾಂ ಋಷಿಭಿಃ ತುಲ್ಯಮ್” ಎಂಬ ಮಾತೇ ಸಾಕ್ಷಿ. ರಾಮನು ವನವಾಸದಲ್ಲಿ ಅನೇಕ ಋಷ್ಯಾಶ್ರಮಗಳನ್ನು ಸಂದರ್ಶಿಸುತ್ತಾನೆ. ಅಲ್ಲಿ ಆತನು ನಾನಾ ಋಷಿಮುನಿಗಳನ್ನು ಭೇಟಿಯಾಗುತ್ತಾನೆ. ಅವರ ಕುರಿತ ಪ್ರಸ್ತಾಪ ಅರಣ್ಯಕಾಂಡದ ೬ನೆಯ ಸರ್ಗದಲ್ಲಿ ಹೀಗಿದೆ—

ವೈಖಾನಸಾ ವಾಲಖಿಲ್ಯಾಃ ಸಂಪ್ರಕ್ಷಾಲಾ ಮರೀಚಿಪಾಃ |
ಅಶ್ಮಕುಟ್ಟಾಶ್ಚ ಬಹವಃ ಪತ್ರಾಹಾರಾಶ್ಚ ತಾಪಸಾಃ ||
ದನ್ತೋಲೂಖಲಿನಶ್ಚೈವ ತಥೈವೋನ್ಮಜ್ಜಕಾಃ ಪರೇ |
ಗಾತ್ರಶಯ್ಯಾ ಆಶಯ್ಯಾಶ್ಚ ತಥೈವಾನವಕಾಶಿಕಾಃ ||
ಮುನಯಃ ಸಲಿಲಾಹಾರಾ ವಾಯುಭಕ್ಷಾಸ್ತಥಾಪರೇ |*
ಆಕಾಶನಿಲಯಾಶ್ಚೈವ ತಥಾ ಸ್ಥಂಡಿಲಶಾಯಿನಃ ||
ತಥೋರ್ಧ್ವವಾಸಿನೋ ದಾನ್ತಾಸ್ತಥಾऽऽರ್ದ್ರಪಟವಾಸಸಃ |
ಸಜಪಾಶ್ಚ ತಪೋನಿಷ್ಠಾಸ್ತಥಾ ಪಞ್ಚತಪೋನ್ವಿತಾಃ ||
ಸರ್ವೇ ಬ್ರಾಹ್ಮಶ್ರಿಯಾಯುಕ್ತಾ ದೃಢಯೋಗಸಮಾಹಿತಾಃ |
ಶರಭಂಗಾಶ್ರಮೇ ರಾಮಮಭಿಜಗ್ಮುಶ್ಚ ತಾಪಸಾಃ ||
(ಶ್ಲೋಕ ೨-೬)

೧) ವೈಖಾನಸರು— “ಯೇ ನಖಾಃ ತೇ ವೈಖಾನಸಾಃ”— ಯಾರು ಪರಮಪುರುಷನ ನಖ / ಉಗುರಿನಂತಹ ಅವಯವಗಳಿಂದ ಜನಿಸಿದರೋ ಅವರು ವೈಖಾನಸರು ಎಂದಿದೆ ಕೃಷ್ಣಯಜುರ್ವೇದೀಯ ತೈತ್ತಿರೀಯಾರಣ್ಯಕ ೧ /೨೩. “ವಿಖನಸಂ ಬ್ರಹ್ಮಾಣಂ ವಿದುಃ ತಪಸಾ ಇತಿ ವೈಖಾನಸಾಃ”— ವಿಖನಸ್ ಎಂದರೆ ಪರಬ್ರಹ್ಮ. ಆ ಪರಬ್ರಹ್ಮವನ್ನು ಯಾರು ತಪೋಮುಖೇನ ತಿಳಿದಿರುವರೋ ಅವರು ವೈಖಾನಸರು. ವಾನಪ್ರಸ್ಥರು ಎಂಬರ್ಥವೂ ಇದೆ.

೨) ವಾಲಖಿಲ್ಯರು ― “ಯೇ ವಾಲಾಃ ತೇ ವಾಲಖಿಲ್ಯಾಃ”― ಯಾರು ಪ್ರಜಾಪತಿಯ ರೋಮಗಳಂಥ ಅವಯವಗಳಿಂದುದಿಸಿದರೋ ಅವರು ವಾಲಖಿಲ್ಯರು (ಕೃ.ಯ.ತೈ.ಆ. ೧ / ೨೩). 

೩) ಸಂಪ್ರಕ್ಷಾಲರು— ಸರ್ವದಾ ಶರೀರವನ್ನು ಪ್ರಕ್ಷಾಲನೆ ಮಾಡಿಕೊಳ್ಳುತ್ತಿದ್ದವರು / ತೊಳೆದುಕೊಳ್ಳುತ್ತಿದ್ದವರು / ಸ್ನಾನನಿರತರು.

೪) ಮರೀಚಿಪರು— ಸೂರ್ಯಚಂದ್ರರ ಕಿರಣಗಳನ್ನು ಮಾತ್ರ ಪಾನಮಾಡಿಕೊಂಡು ತಪೋನಿರತರು.

೫) ಅಶ್ಮಕುಟ್ಟರು— ಕಲ್ಲಿನಿಂದ ಕುಟ್ಟಿದ ಆಹಾರವನ್ನು ಮಾತ್ರ ಸೇವಿಸುವವರು.

೬) ಪತ್ರಾಹಾರರು— ಕೇವಲ ತರಗೆಲೆಗಳನ್ನೇ ಸೇವಿಸಿ ತಪ ಗೈಯುವವರು.

೭) ದಂತೋಲೂಖಲಿಗಳು— ಉಲೂಖಲವೆಂದರೆ ಧಾನ್ಯಾದಿಗಳನ್ನು ಕುಟ್ಟುವ, ಮರದ ಸಾಧನ, ಒನಕೆ / ಪಾತ್ರೆ. ತಮ್ಮ ದಂತ / ಹಲ್ಲು ಗಳನ್ನೇ ಹಸಿಧಾನ್ಯಗಳನ್ನು ಕುಟ್ಟುವ ಸಾಧನ / ಪಾತ್ರೆಯನ್ನಾಗಿಸಿಕೊಂಡ ತಪಸ್ವಿಗಳು.

೮) ಉನ್ಮಜ್ಜಕರು— ಕುತ್ತಿಗೆಯವರೆಗೆ ನೀರಲ್ಲಿ ಮುಳುಗಿ ತಪಗೈಯುವವರು.

೯) ಗಾತ್ರಶಯ್ಯರು— ಕುಳಿತೇ ನಿದ್ರಿಸುವಂಥ ತಪಸ್ವಿಗಳು.

೧೦) ಅಶಯ್ಯರು— ಎಂದೂ ನಿದ್ರಿಸದವರು.

೧೧) ಅನವಕಾಶಿಕರು— ನಿರಂತರ ಸತ್ಕರ್ಮನಿರತಾಗಿದ್ದುದರಿಂದ ಎಂದೂ ಸಮಯಾವಕಾಶ / ಬಿಡುವೇ ಇಲ್ಲದವರು.

೧೨) ಸಲಿಲಾಹಾರರು— ಸಲಿಲ / ನೀರು ಮಾತ್ರವನ್ನು ಕುಡಿದು ಬದುಕುವವರು.

೧೩) ವಾಯುಭಕ್ಷರು— ಗಾಳಿಮಾತ್ರವನ್ನು ಸೇವಿಸಿ ಜೀವಿಸುವವರು.

೧೪) ಆಕಾಶನಿಲಯರು— ತೆರೆದ ಬಯಲಿನಲ್ಲೇ / ಮರದ ಮೇಲೆಯೇ ವಾಸವಾಗಿರುವವರು.

೧೫) ಸ್ಥಂಡಿಲಶಾಯಿಗಳು— ಯಜ್ಞಭೂಮಿಯಲ್ಲೇ ಮಲಗುವವರು.

೧೬) ಊರ್ಧ್ವವಾಸಿಗಳು— ಪರ್ವತಶಿಖರವೇ ಮುಂತಾದ ಉನ್ನತಸ್ಥಾನಗಳಲ್ಲಿ ವಾಸಿಸುವವರು.

೧೭) ದಾಂತರು— ಇಂದ್ರಿಯಗಳ ದಮನ / ನಿಗ್ರಹ ಮಾಡಿ ದಮವುಳ್ಳವರು. (ದಮ— ಇಂದ್ರಿಯನಿಗ್ರಹ, ಶಮ— ಮನೋನಿಗ್ರಹ)

೧೮) ಆರ್ದ್ರಪಟವಾಸಸರು— ಸದಾ ಒದ್ದೆ ಬಟ್ಟೆಯನ್ನೇ ಧರಿಸುವವರು.

೧೯) ಸಜಪರು— ನಿರಂತರ ಜಪನಿರತರು.

೨೦) ತಪೋನಿಷ್ಠರು— ತಪಸ್ಸು / ಪರಮಾತ್ಮವಿಚಾರದಲ್ಲೇ ಇರುವವರು.

೨೧) ಪಂಚತಪೋನ್ವಿತರು— ಬೇಸಿಗೆಯಲ್ಲಿ ಮೇಲಿನಿಂದ ಸೂರ್ಯತಾಪ, ಉಳಿದ ೪ ಕಡೆಗಳಿಂದ ಅಗ್ನಿಯ ತಾಪವನ್ನು ಸಹಿಸಿ ತಪಗೈಯುವ ಪಂಚಾಗ್ನಿಸೇವಿಗಳು.

ಬ್ರಹ್ಮತೇಜಸ್ಸಂಪನ್ನರಾದ ದೃಢವಾಗಿ ಪರಮಾತ್ಮಯೋಗಯುಕ್ತರಾದ ಶಮದಮಾದಿಸಹಿತರಾದ ಇಂಥ ತಾಪಸರೆಲ್ಲ ಶರಭಂಗಮಹರ್ಷಿಗಳ ಆಶ್ರಮದಲ್ಲಿ ಶ್ರೀರಾಮನ ಬಳಿಗೆ ಬಂದರು— ಎನ್ನುತ್ತವೆ ಮೇಲಿನ ಶ್ಲೋಕಗಳು. ಹೀಗೆ, ರಾಮಾಯಣಕ್ಕೂ ತಪಸ್ಸಿಗೂ ಅವಿನಾಭಾವ ಸಂಬಂಧವಿದೆ. (ಒಂದರ ವಿನಾ ಮತ್ತೊಂದಿಲ್ಲವೆಂಬುದಕ್ಕೆ ಅವಿನಾಭಾವಸಂಬಂಧ ಎನ್ನುವರು. ತಪವಿಲ್ಲದೆ ರಾಮಾಯಣವಿಲ್ಲ, ರಾಮಾಯಣ / ಪರಮಾತ್ಮಪಥವಿಲ್ಲದ ತಪವಿಲ್ಲ.)

ರಾಮಾಯಣದ ಆಧ್ಯಾತ್ಮಿಕ ಅರ್ಥ

ತೀರ್ತ್ವಾ ಮೋಹಾರ್ಣವಂ ಹತ್ವಾ ರಾಗದ್ವೇಷಾದಿರಾಕ್ಷಸಾನ್ |
ಶಾನ್ತಿಸೀತಾಸಮಾಯುಕ್ತಃ ಆತ್ಮಾರಾಮೋ ವಿರಾಜತೇ ||

“ಮೋಹಶರಧಿಯ ದಾಂಟಿ ದ್ವೇಷರಾಗಾದಿ ದನು
ಜಾದಿಗಳ ಸಂಹರಿಸಿ ಶಾಂತಿರೂಪಿಣಿಯ |
ಮಾತೆ ಸೀತೆಯ ಪಡೆದು ಆತ್ಮವದು ತನ್ನೊಳಗೆ
ತಾನೆ ರಮಿಸುತ ನಿಂತು ಬೆಳಗುತಿಹುದು ||”

ಎಂದಿರುವರು ಆದಿಶಂಕರಭಗವತ್ಪಾದರು.

ಆಚಾರ್ಯ ಶ್ರೀ ವೇದಾಂತದೇಶಿಕರು ಹೀಗೆ ಹೇಳಿದ್ದಾರೆ—

ದರ್ಪೋದಗ್ರದಶೇಂದ್ರಿಯಾನನಮನೋನಕ್ತಂಚರಾಧಿಷ್ಠಿತೇ |
ದೇಹೇऽಸ್ಮಿನ್ ಭವಸಿಂಧುನಾ ಪರಿಗತೇ ದೀನಾಂ ದಶಾಮಾಸ್ಥಿತಃ ||
ಅದ್ಯತ್ವೇ ಹನುಮತ್ಸಮೇನ ಗುರುಣಾ ಪ್ರಖ್ಯಾಪಿತಾರ್ಥಃ ಪುಮಾನ್ |
ಲಂಕಾರುದ್ಧವಿದೇಹರಾಜತನಯಾ ನ್ಯಾಯೇನ ಲಾಲಪ್ಯತೇ ||

ದರ್ಪದಿಂದ ಮತ್ತವಾಗಿ ಕೆರಳಿರುವ ಇಂದ್ರಿಯಗಳೆಂಬ ೧೦ ಮುಖಗಳುಳ್ಳ (೫ ಜ್ಞಾನೇಂದ್ರಿಯಗಳು + ೫ ಕರ್ಮೇಂದ್ರಿಯಗಳು) ಮನಸ್ಸೆಂಬ ನಿಶಾಚರ / ರಾಕ್ಷಸ ರಾವಣನು ಭವಸಾಗರದಿಂದಾವೃತವಾದ ಈ ದೇಹವೆಂಬ ಲಂಕೆಯನ್ನು ತನ್ನ ನಿಯಂತ್ರಣದಲ್ಲಿಟ್ಟಿರುವನು. ಅಂತಹ ದೇಹದಲ್ಲಿ ಸೆರೆಯಾದ ಜೀವವೇ ಸೀತೆಯು. ಹೀಗಿರಲು, ಭವತಾರಕಮಾರ್ಗದರ್ಶಕನಾದ ಗುರುವೇ ಹನುಮಸ್ವರೂಪಿಯು. ಆತನಿಗೂ ಪ್ರಭುವಾದ ದೇವದೇವ ಶ್ರೀರಾಮಚಂದ್ರನು ಇಂದ್ರಿಯಸಹಿತ ಮನವೆಂಬ ರಾವಣನ ಸೆರೆಯಿಂದ ಸೀತಾರೂಪೀ ಜೀವಾತ್ಮನನ್ನು ಬಿಡಿಸಿ, ಧರ್ಮ-ನ್ಯಾಯಗಳನ್ನು ಮರುಸ್ಥಾಪಿಸಿ ಪರಮಾನಂದವನ್ನೀಯುತ್ತಾನೆ.

ಪೀಠಿಕೆಯ ಮಂಗಲ

ಧನ್ಯಂ ಯಶಸ್ಯಮಾಯುಷ್ಯಂ ರಾಜ್ಞಾಂ ಚ ವಿಜಯಾವಹಮ್ |
ಇದಂ ಪವಿತ್ರಂ ಪಾಪಘ್ನಂ ಪುಣ್ಯಂ ವೇದೈಶ್ಚ ಸಮ್ಮಿತಮ್ ||
ಆಯುಷ್ಯಮಾರೋಗ್ಯಕರಂ ಯಶಸ್ಯಂ
ಸ್ತ್ರಿಯಶ್ಚ ಮುಖ್ಯಾಃ ಸುಖಮುತ್ತಮಂ ಚ |
ಯಃ ಕರ್ಣಾಞ್ಜಲಿಸಂಪುಟೈರಹರಹಃ ಸಮ್ಯಕ್ ಪಿಬತ್ಯಾದರಾತ್ |
ವಾಲ್ಮೀಕೇರ್ವದನಾರವಿನ್ದಗಲಿತಂ ರಾಮಾಯಣಾಖ್ಯಂ ಮಧು |
ಜನ್ಮವ್ಯಾಧಿಜರಾವಿಪತ್ತಿಮರಣೈರತ್ಯನ್ತಸೋಪದ್ರವಮ್ |
ಸಂಸಾರಂ ಸ ವಿಹಾಯ ಗಚ್ಛತಿ ಪುಮಾನ್ ವಿಷ್ಣೋಃ ಪದಂ ಶಾಶ್ವತಮ್ ||


ವಾಲ್ಮೀಕಿಯ ವದನಾರವಿಂದ / ಮುಖಕಮಲದಿಂದ ಹೊರಬಂದ ಈ ಪುಣ್ಯಕರವೂ, ಪರಮಪವಿತ್ರವೂ, ಪಾಪಹಾರಿಯೂ, ವೇದಸಮ್ಮತವೂ, ರಾಜರುಗಳಿಗೆ ವಿಜಯಪ್ರದವೂ, ಧನ್ಯತೆ ಹಾಗೂ ಯಶೋಮಯವಾದ ದೀರ್ಘಾಯುಷ್ಯಪ್ರದವೂ, ಆರೋಗ್ಯಕರವೂ ಆದ ಶ್ರೀಮದ್ರಾಮಾಯಣವೆಂಬ ಮಧುವನ್ನು / ಜೇನನ್ನು ಯಾವನು ತನ್ನ ಕಿವಿಗಳೆರಡರಿಂದ ದಿನದಿನವೂ ಆದರಾತಿಶಯಪೂರ್ವಕ ಸೂಕ್ತರೀತಿಯಿಂದ ಪಾನಮಾಡುತ್ತಾನೋ ಅಂತಹ ಮಾನವನು, ಶ್ರೇಷ್ಠಪತ್ನ್ಯಾದಿ ಸ್ತ್ರೀಯರನ್ನೂ, ಉತ್ತಮ / ಶ್ರೇಷ್ಠವಾದ ಸುಖವನ್ನೂ, ಜನನ-ರೋಗ-ವೃದ್ಧಾಪ್ಯ-ವಿಪತ್ತು-ಮರಣಾದಿ ಸಕಲ ಉಪದ್ರವ ಸಹಿತವಾದ ಸಂಸಾರವನ್ನು ತೊರೆದು ಶಾಶ್ವತಪದವಾದ ವಿಷ್ಣುವನ್ನೇ ಹೊಂದುತ್ತಾನೆ.
********

ರಾವಣನ ಒಳ್ಳೆಯ ಗುಣಗಳು ಯಾವುದಿತ್ತು?

ರಾವಣ ಕೆಟ್ಟವನಲ್ಲ....
ಸಮಯ-ಸಂದರ್ಭ ಮತ್ತು ಧರ್ಮ-ಕರ್ಮ ಅವನಿಂದ ಕೆಲವು ತಪ್ಪು ಕೆಲಸವನ್ನ ಮಾಡಿಸಿದವು. ಅದರಿಂದ ಅವನು ಕೆಟ್ಟವನು ಎನ್ನುವ ಹಣೆಪಟ್ಟಿ ಹೊತ್ತುಕೊಂಡಿದ್ದಾನೆ.

ಅವತಾರ ಪುರುಷರಾದಿಯಾಗಿ ಯಾವ ವ್ಯಕ್ತಿಯೂ ಪೂರ್ತಿ ಕೆಟ್ಟವನೂ ಅಲ್ಲ ಪೂರ್ತಿ ಒಳ್ಳೆಯವನೂ ಅಲ್ಲ. ಅವರವರ ಕರ್ಮಾನುಸಾರವಾಗಿ ಧನಾತ್ಮಕ ಮತ್ತು ಋಣಾತ್ಮಕ ಗುಣಗಳನ್ನು ಎಲ್ಲರೂ ಹೊಂದಿರಲೇಬೇಕು.

ಅದಕ್ಕೆ ರಾಮ-ರಾವಣರೂ ಹೊರತಲ್ಲ. ರಾವಣನ ಒಳ್ಳೆಯ ಗುಣಗಳನ್ನು ಸ್ವತಃ ರಾಮನೇ ಒಪ್ಪಿಕೊಂಡು ಪ್ರಶಂಸಿಸಿದ ನಿದರ್ಶನ ರಾಮಾಯಣ ಮಹಾ ಗ್ರಂಥದಲ್ಲಿ ಉಲ್ಲೇಖವಾಗಿದೆ.
ರಾವಣನ ಅಂತಹ ಕೆಲವು ಒಳ್ಳೆಯತನವನ್ನ ನೋಡೋಣ.

ರಾವಣನೊಬ್ಬ ಮಹಾನ್ ವಿದ್ವಾಂಸ, ಕವಿ, ಸಂಗೀತ ಗಾರ, ವೀಣಾ ವಾದಕ ಮತ್ತು ಜ್ಯೋತಿಷ್ಯ ಶಾಸ್ತ್ರ ಹಾಗೂ ವೇದಗಳಲ್ಲಿ ಪಾರಂಗತನಾಗಿದ್ದನು.
ಶಿವನಿಗೆ ಅತ್ಯಂತ ಪ್ರಿಯವಾದ ತಾಂಡವ ನೃತ್ಯದ ಸಂಯೋಜನೆ ಮಾಡಿದ್ದು ರಾವಣನೇ ಎಂದು ಹೇಳುತ್ತಾರೆ.
ರಾವಣನು ಮಹಾನ್ ಆಡಳಿತಗಾರ ಮತ್ತು ತನ್ನ ಪ್ರಜೆಗಳ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದ. ಆತನ ಆಡಳಿತವನ್ನು ಲಂಕಾದ ಸುವರ್ಣಯುಗ ಎಂದು ಪರಿಗಣಿಸಲಾಗಿತ್ತು.
ಸಾಯುತ್ತಿರುವ ರಾವಣನು ಲಕ್ಷ್ಮಣನಿಗೆ ಜೀವನದ ಸತ್ಯ, ಸಾರ ಮತ್ತು ರಹಸ್ಯವನ್ನ ಹೇಳಿದನಲ್ಲದೆ ತನ್ನಲ್ಲಿದ್ದ ಜ್ಞಾನವನ್ನೆಲ್ಲ ಧಾರೆ ಎರೆಯುತ್ತಾನೆ.
ರಾಮನಿಂದ ಹತನಾಗಿ ಮೋಕ್ಷ ಪಡೆಯುವ ಸಲುವಾಗಿಯೇ ರಾವಣನು ಸೀತೆಯನ್ನು ಅಪಹರಿಸುತ್ತಾನೆ ಮತ್ತು ಅದಕ್ಕಾಗಿ ಅವನು ಸೀತೆಯನ್ನು ಸ್ಪರ್ಷಿಸುವುದಿಲ್ಲ ಎನ್ನುವ ವಿಷಯ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. (ಸೀತೆಯನ್ನು ಸ್ಪರ್ಷ ಮಾಡಿದ್ದರೆ ರಾವಣ ಸುಟ್ಟು ಹೋಗುತ್ತಿದ್ದ ಅನ್ನುವುದೂ ಉಲ್ಲೇಖವಾಗಿದೆ).
ಸಮುದ್ರಕ್ಕೆ ಸೇತುವೆ ಕಟ್ಟುವಾಗ ರಾಮನು ಮಾಡಬೇಕಾದ ಒಂದು ಯಜ್ಞಕ್ಕೆ ಯಾರೂ ಪುರೋಹಿತರು ಸಿಗದಿದ್ದಾಗ ಶಿವ ಭಕ್ತ ಮತ್ತು ಮಹಾನ್ ಬ್ರಾಹ್ಮಣ ಸ್ವತಃ ರಾವಣನೇ ಪುರೋಹಿತನಾಗಿ ಬಂದು ಯುದ್ಧದಲ್ಲಿ ವಿಜಯಿಯಾಗು ಎಂದು ರಾಮನಿಗೆ ಆಶೀರ್ವಾದ ಮಾಡಿ ತನ್ನ ಕರ್ತವ್ಯ ನಿಷ್ಠೆ ಮೆರೆಯುತ್ತಾನೆ.
ರಾವಣನ ಶಿವ ಭಕ್ತಿ ಮತ್ತು ಆತನ ಉತ್ತಮ ಗುಣಗಳಿಗಾಗಿ ಶ್ರೀಲಂಕಾ ಮತ್ತು ಭಾರತದಲ್ಲಿ ಆತನ ದೇವಾಲಯಗಳು ಕೂಡಾ ಇವೆ.
ರಾಮನೊಂದಿಗೆ ಹೋಲಿಸಿದಾಗ ರಾವಣ ಒಬ್ಬ ಮಹಾನಾಯಕ ಅಲ್ಲದಿರಬಹುದು, ರಾಮನಂತೆ ಆದರ್ಶ ಪುರುಷ ಕೂಡಾ ಅಲ್ಲದಿರಬಹುದು. ಆದರೆ ಅವನು ಖಂಡಿತವಾಗಿಯೂ ಕೆಟ್ಟವನು ಅಥವಾ ವಿಲನ್ ಅಲ್ಲ.

ಬಹುಷಃ ರಾಮನ ಅತಿಯಾದ ಒಳ್ಳೆಯ ಗುಣಗಳೆದುರು ರಾವಣ ಒಳ್ಳೆಯವನಲ್ಲ ಎನ್ನುವುದು ಕೂಡಾ ಸತ್ಯವಿರಬಹುದು.

ವಿಷಯ ಸಂಗ್ರಹ :- ಓದಿದ್ದು ಮತ್ತು ಕೇಳಿದ್ದು.
***

ಸೀತೆಯ ಆದರ್ಶ

ಜನಕ ಮಹಾರಾಜನು ಯಜ್ಞಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಸೀತೆ ಭೂಮಿಯನ್ನು ಭೇದಿಸಿಕೊಂಡು ಹುಟ್ಟಿದ, ಅಯೋನಿಜೆಯಾದ ಸೀತಾಮಾತೆ ಜಗತ್ತಿನಲ್ಲಿ ಜನಕಪುತ್ರೀ ಎಂದು ಪ್ರಸಿದ್ಧಳಾದಳು. 

ಸೀತೆ ಹುಟ್ಟುವ ಮುಂಚೆ ಜನಕನ ರಾಜಧಾನಿ ಅಷ್ಟೇನೂ ಸುಭಿಕ್ಷವಾಗಿ ಇರಲಿಲ್ಲ, ಸೀತಾದೇವಿ ನೆಲೆಸಿದ ಬಳಿಕ ವೈಭವದ ರಾಜ್ಯಲಕ್ಷ್ಮಿಯಿಂದ ಕಂಗೊಳಿಸಿತು. 

ವನವಾಸ ಅನುಭವಿಸಿದರೂ ಪರವಾಗಿಲ್ಲ ರಾಮನಂತ ಗಂಡನೇ ಸಿಗಬೇಕು. ಪ್ರೀತಿಸುವ ಗಂಡ ಜೊತೆಗಿದ್ದರೆ ಅರಣ್ಯ ಕೂಡ ಅರಮನೆಯಂತೆ ಎನ್ನುವ ಸೂಕ್ಷ್ಮ ಸಂಗತಿಯನ್ನು ರಾಮಸೀತೆಯರ ವನವಾಸ, ಜೀವನ,ನೋಡಿ ನಾವು ಕಲಿಯಲೇಬೇಕು.

ವನವಾಸಕ್ಕೆ ಹೋಗಬೇಕಾದ ವಿಷಯ ತಿಳಿದಾಗ, ಕೌಸಲ್ಯ ದೇವಿಯ ಅಪ್ಪಣೆ ಪಡೆದು ಶ್ರೀರಾಮನು ಸೀತೆಯ ಅಂತಃಪುರಕ್ಕೆ ಬಾಡಿದ ಮುಖದೊಂದಿಗೆ ಆಗಮಿಸಿದ. ಕಾಡಿಗೆ ಹೋಗಬೇಕಲ್ಲ ಎಂಬ ಚಿಂತೆಯಿಂದಲ್ಲ, ಸೀತೆಯನ್ನು ಬಿಡಬೇಕಲ್ಲ ಎಂದಲ್ಲ,ಸೀತೆಯ  ಮನಸಿಗೆ ನೋವಾಗುವ ವಿಚಾರ ಹೇಳಬೇಕಲ್ಲ ಎಂಬ ಚಿಂತೆ ರಾಮನದಾಗಿತ್ತು. 

ತಂದೆಯು ಕೈಕೇಯಿಗೆ ಕೊಟ್ಟ ಮಾತಿನಂತೆ, ನಾನು ಅರಣ್ಯಕ್ಕೆ ಹೊರಟಿದ್ದೇನೆಂದು ಸಂಕ್ಷಿಪ್ತವಾಗಿ ವಿವರಿಸುತ್ತಾ, ತಾನಿಲ್ಲದ ಸಮಯದಲ್ಲಿ ಅರಮನೆಯಲ್ಲಿ ಸೀತೆ ಹೇಗಿರಬೇಕೆಂದು ಉಪದೇಶಿಸುತ್ತಾನೆ. ಆಗ ಸೀತೆ ಹೇಳುತ್ತಾಳೆ, ನೀವು ಕಾಡಿನಲ್ಲಿರುವಾಗ ನಾನು ಅರಮನೆಯಲ್ಲಿ ಸುಖವಾಗಿ ವಾಸಿಸುವುದೇ?  ಸಾಧ್ಯವೇ ಇಲ್ಲ. ನಿಮ್ಮೊಂದಿಗೆ ನಾನೂ ಬರುತ್ತೇನೆ. ಪತಿ ಇದ್ದಲ್ಲಿ ಸತಿ. ನಿಮ್ಮ ಸುಖದುಃಖಗಳಲ್ಲಿ ಹೆಜ್ಜೆ ಹಾಕಿ ಸದಾ ನಿಮ್ಮ  ಜೊತೆಗಿರುತ್ತೇನೆ ಎನ್ನುತ್ತಾಳೆ.

ಸೀತೆಯ ಮಾತಿನಿಂದ ಚಿಂತಿತನಾದ ರಾಮ,  ಅರಣ್ಯವೆಂದರೆ ಏನು ಭಾವಿಸಿರುವೆ? ಇದೇನು ಪ್ರಕೃತಿಯ ವಿಹಂಗಮ ನೋಟದಲ್ಲಿ ನಡೆಯುವ ವಿಹಾರದಂತೆ ಎಂದು ಭಾವಿಸಿರುವೆಯಾ?ಕ್ರೂರಮೃಗಗಳು,ಮಳೆ,ಬಿಸಿಲು,ಹೊತ್ತಿಗೆ ಸರಿಯಾಗಿ ಹೊಟ್ಟೆಗೆ ಸಿಗದೆ ಅನುಭವಿಸುವ ಉಪವಾಸ, ಕಷ್ಟದಲ್ಲಿರಬೇಕಾದ ಪರಿಸ್ಥಿತಿ , ಸುಕೋಮಲೆಯಾದ ನಿನಗೆ ತಾಳುವುದು ಸಾಧ್ಯವೇ ಇಲ್ಲ ಎಂದಾಗ,  ನಿಮ್ಮನ್ನ ಗಲಿ ನಾನಿಲ್ಲಿ ಇರಲಾರೆ. ಗಿಡ ಮರಗಳು,ಅರಳಿ ನಿಂತ ಹೂಗಳು, ಹರಿಯುವ ನೀರು, ಪ್ರಕೃತಿಯ ಮಡಿಲಲ್ಲಿ ನಿಮ್ಮೊಟ್ಟಿಗೆ ಇರುವ ಮನಸ್ಸಾಗಿದೆ ನಿಮ್ಮ ಪಾದ ಸೇವೆ ಮಾಡಿಕೊಂಡು ಇರುವೆ. ಎಂದು ಖಡಾಖಂಡಿತವಾಗಿ ಹೇಳುತ್ತಾಳೆ.

ಪತಿಗೆ ಕಷ್ಟಕಾಲ ಎದುರಿಸುವ ಸ್ಥಿತಿ ಬಂದೊದಗಿದಾಗಲೇ, ಮುಖ್ಯವಾಗಿ ಪತಿಯನ್ನನುಸರಿಸಬೇಕೆಂದು ಲೋಕನೀತಿ ಸಾರಿದ  ಸೀತಾಮಾತೆ ನಮಗೆ ಆದರ್ಶವಲ್ಲವೇ? 

ಒಮ್ಮೆ ವನವಾಸದ ಸಂದರ್ಭದಲ್ಲಿ ಅತ್ರಿಗಳ ಆಶ್ರಮಕ್ಕೆ ಬಂದರು.  ಋಷಿದಂಪತಿಗಳು ರಾಮಸೀತೆಯರನ್ನು  ಆದರದಿಂದ ಬರ ಮಾಡಿಕೊಂಡರು. ಆ ಪರಿಸರದಲ್ಲಿ ವಾಸಮಾಡುವಾಗ ಸೀತಾದೇವಿ ಶ್ರೀರಾಮನ ಸೇವೆಯನ್ನು ಅನನ್ಯವಾಗಿ ಮಾಡುವುದನ್ನು  ನೋಡಿದ ಅನುಸೂಯಾ ಬಹಳ ಸಂತೋಷಪಟ್ಟಳು. ಪತಿಸೇವೆಯನ್ನು ಇಷ್ಟು ರೀತಿ ಸೇವಾಭಾವದಿಂದ ಮಾಡುವುದನ್ನು ಕಂಡು ಆಶ್ಚರ್ಯ ಚಕಿತಳಾಗಿದ್ದಾಳೆ. ಸೀತೆಯ ಪಾತಿವೃತ್ಯನಿಷ್ಠೆಗಳನ್ನು ಕೊಂಡಾಡುತ್ತಾಳೆ. ಆ ಪ್ರಸಂಗದಲ್ಲಿ ಸೀತೆ ಅನುಸೂಯದೇವಿಗೆ ಹೀಗೆ ಹೇಳುತ್ತಾಳೆ. ಪತಿಯು ಹೇಗೆ ಬೇಕಾದರೂ ಇರಲಿ  ಅಧಾರ್ಮಿಕ ಪತಿಯಲ್ಲಿಯೂ ಕೂಡಾ ಭಗವಂತನನ್ನು ಕಾಣಬೇಕು. ಅವನು ಹಾದಿ ತಪ್ಪದಲ್ಲಿ ,ಸರಿಯಾದ ಸಮಯದಲ್ಲಿ ತಿದ್ದಿ,ಅವನಿಗೆ ಸಹಾಯಕಳಾಗಿ ನಡೆದು,ಪತಿಯ ಬಗ್ಗೆ ಪತ್ನಿನಿಷ್ಠೆಯನ್ನು ಆದರದಿಂದ ಮಾಡಲೇಬೇಕು.

ಹಾಗಿದ್ದಾಗ ಕುಸುಮಕೋಮಲ ಮನಸಿನ ,ಕರುಣೆಯ ಕಡಲಾದ, ಜಿತೇಂದ್ರಿಯನಾದ , ಧರ್ಮಾತ್ಮನಾದ ಭಗವಂತನೇ ನನಗೆ ಗಂಡನಾಗಿರುವಾಗ, ನಾನು ನನ್ನ ಪ್ರೀತಿಯ ಕರ್ತವ್ಯವನ್ನು ಹೇಗೆ ಬಿಡಲಿ? ಎಂದು ಹೇಳುತ್ತಾ ಶ್ರೀರಾಮಚಂದ್ರನ ಗುಣಗಳನ್ನು ಪ್ರೀತಿಯಿಂದ ಹೇಳುವ ಸೀತಾಮಾತೆ ನಮ್ಮೆಲ್ಲರಿಗೂ ಆದರ್ಶವಲ್ಲವೇ??

ನನ್ನ ಶ್ರೀರಾಮ ತಾಯಿಕೌಸಲ್ಯಳ ಬಳಿ ಯಾವ ಮಾತೃಪ್ರೇಮವನ್ನು ತೋರುತ್ತಾನೋ ಅದೇ ಪ್ರೀತಿಯನ್ನು ದಶರಥನ ಇತರ ಪತ್ನಿಯರಲ್ಲಿಯೂ ತೋರುತ್ತಾನೆ. ಇಷ್ಟೇ ಅಲ್ಲದೆ ಒಮ್ಮೆ ಕಣ್ಣಿಗೆ ಕಂಡ ಯಾವ ಸ್ತ್ರೀಯರೇ ಆದರೂ ಅವಳನ್ನು ತಾಯಿಯಂತೆ ಪ್ರೀತಿಸುತ್ತಾನೆ. ರಾಜಕುಮಾರನಾದರೂ ಒಂದಿನಿತೂ ಅಹಂಕಾರವಿಲ್ಲ.ಎಲ್ಲರನ್ನೂ,ಎಲ್ಲವನ್ನೂ, ನಿರ್ಮಲ ಮನಸ್ಸಿನಿಂದ ನೋಡುತ್ತಾನೆ ನನ್ನ ಶ್ರೀರಾಮಚಂದ್ರ ಎನ್ನುತ್ತಾಳೆ. ಅನುಸೂಯ ತನ್ನನ್ನು ಹೊಗಳಲು ಬಂದಾಗ ತನ್ನ ಪ್ರಶಂಸೆ ಕೇಳದೆ ಶ್ರೀರಾಮನ ಪ್ರಶಂಸೆಯನ್ನು ನಿರ್ಮಲ ಮನಸ್ಸಿನಿಂದ ಮಾಡಿದ ಸೀತಾಮಾತೆ ಜಗತ್ತಿನ ಸತಿಯರ ಕರ್ತವ್ಯವನ್ನು ತನ್ನ ಸದ್ವರ್ತನೆಯ ಮೂಲಕ ತೋರಿದ ಸೀತೆಯ ನೈತಿಕ ಹೃದಯಸ್ಪಂದನೆ ನಮಗೆಲ್ಲ ಆದರ್ಶವೇ ಅಲ್ಲವೇ?

ಸೀತೆಯ ಮೃದುನುಡಿಯನ್ನು ಕೇಳಿದ ಮಹಾಪತಿವ್ರತೆ ಅನುಸೂಯಾದೇವಿಯು ಬಹಳ ಸಂತೃಪ್ತಗೊಂಡು, ತನ್ನ ಆಶ್ರಮದಲ್ಲಿನ ಅನರ್ಘ್ಯ ವಸ್ತುಗಳನ್ನು ಸೀತೆಗೆ ಪ್ರೀತಿಯಿಂದ ನೀಡುತ್ತಾಳೆ.

 ವನವಾಸದ ವಿಷಯ ತೆಗೆದಾಗ ಕಳವಳಗೊಂಡ ತಾಯಿ ಕೌಸಲ್ಯೆ, ಮನಸಲ್ಲೇ ಮರುಗುತ್ತಾ, ರಾಮನಿಗೆ ನಿನ್ನೊಡನೆ ನಾನೂ ಬರುತ್ತೇನೆ ಎಂದು ಹೇಳಿದಾಗ, ಶ್ರೀರಾಮ ಹೇಳುತ್ತಾನೆ. ವೃದ್ಧಪತಿಯನ್ನು ಬಿಟ್ಟು ನನ್ನೊಟ್ಟಿಗೆ ಬರುವುದು ಸರಿಯೂ ಅಲ್ಲ ಧರ್ಮವೂ ಅಲ್ಲ. ವೃದ್ಧಪತಿಯ ಸೇವೆ ಮಾಡುತ್ತಾ ಸಾಧನೆ ಮಾಡಿಕೊಂಡು ಇರು ಎಂದು ತಾಯಿಗೆ ಹೇಳುತ್ತಾನೆ. ಇಲ್ಲಿ ಶ್ರೀರಾಮ ತಾಯಿಗೆ ಮಾಡಬೇಕಾದ ಕರ್ತವ್ಯವನ್ನು ನೆನಪಿಸುತ್ತಾನೆ.

ಸೀತಾಮಾತೆ ವನವಾಸದಲ್ಲಿ ಸಂಚರಿಸುವಾಗ, ಶ್ರೀರಾಮಲಕ್ಷ್ಮಣರಿಗೆ ಹೀಗೆ ಹೇಳುತ್ತಾಳೆ, 
ಸುಳ್ಳಿನ ವ್ಯವಹಾರ, ಪರಸ್ತ್ರೀಯರೊಡನೆ ಕೆಟ್ಟ ವರ್ತನೆ,ಹಿಂಸಾಪ್ರವೃತ್ತಿ, ಈ ಮೂರನ್ನು ಮಾಡಲೇಬಾರದು.ಮೊದಲಿನ ಎರಡಂತೂ ನೀವು ಮಾಡುವುದಿಲ್ಲ. ಆದರೆ ನೀವು ಶಸ್ತ್ರ ಗಳನ್ನು ಧರಿಸಿರುವುದು ನೋಡಿದಾಗ ಮನಸು ಚಿಂತೆಗೊಳಗಾಗುತ್ತದೆ. ನಿಮ್ಮ ಉದ್ದೇಶ ಅಮಾಯಕ ಜನರನ್ನು ರಕ್ಷಿಸುವುದೇ ಆದರೂ ಮುಂದೊಂದು ದಿನ ದುರುಪಯೋಗ ವಾಗಿ ಹಿಂಸಾಪ್ರವೃತ್ತಿ ಬೆಳೆಯಲು ಅವಕಾಶವಾಗಬಹುದು ಎಂದು ಕಳವಳ ವ್ಯಕ್ತಪಡಿಸುತ್ತಾಳೆ. ಅದಕ್ಕೊಂದು ಈ ಚಿಕ್ಕ ಕಥೆಯನ್ನೂ ಉದಾಹರಣೆಯಾಗಿ ಹೇಳುತ್ತಾಳೆ. 

ಋಷಿಯೊಬ್ಬ ಮೃಗಗಳು, ಹಕ್ಕಿಗಳು ನಲಿದಾಡುತ್ತಿರುವ ಪ್ರಕೃತಿ ರಮಣೀಯವಾದ ಅರಣ್ಯದಲ್ಲಿ ತಪಸ್ಸಿಗಾಗಿ ವಾಸಮಾಡುತ್ತಿದ್ದನು. ಇಂದ್ರನು ಅವನ ಪರೀಕ್ಷೆಗಾಗಿ ಬ್ರಾಹ್ಮಣ ವೇಷದಲ್ಲಿ ಆಗಮಿಸಿ ಹರಿತವಾದ ಕತ್ತಿಯನ್ನು ನೀಡಿ,ತಾನು ತಿರುಗಿ ಬರುವವರೆಗೂ ಜೋಪಾನ ಮಾಡಿಕೊಂಡು, ಯಥಾರೀತಿ ತನಗೆ ಮರಳಿ ಒಪ್ಪಿಸಬೇಕೆಂದು ಹೇಳಿ ಹೊರಡುತ್ತಾನೆ.   ಅವನಿಗೆ ಇದೇ ಸ್ಥಿತಿಯಲ್ಲಿ ನೀಡುವುದಕ್ಕಾಗಿ ದಿನವೂ  ಹರಿತಗೊಳಿಸುತ್ತಿದ್ದ. ಹರಿತವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಗಿಡಮರಗಳಲ್ಕಿ,ಪ್ರಾಣಿಪಕ್ಷಿಗಳಲ್ಲಿ ಪ್ರಯೋಗಿಸಲಾರಂಭಿಸಿ, ಆ ಮುನಿಯು ಕಾಲಕ್ರಮೇಣ ಹಿಂಸಕನಾಗಿ,ಬೇಡನಾಗಿ ಪರಿವರ್ತನೆಗೊಂಡ. ಶಸ್ತ್ರಗಳು ಜೊತೆಗಿದ್ದರೆ ಹೀಗೆ ಕೆಲವೊಂದು ಸಲ ನಮಗೆ ತಿಳಿಯದೇ  ನಮ್ಮನ್ನು ಅದು ಪ್ರಪಾತಕ್ಕೆಳೆಯುತ್ತದೆ ಎನ್ನುತ್ತಾಳೆ. 

ಆಗ ಶ್ರೀರಾಮನು
ಆಗ ಅವಳನ್ನು ಆಕ್ಷೇಪಿಸದೆ , ಹೀಗೆಹೇಳುತ್ತಾನೆ.
ಅಮಾಯಕ ಮುಗ್ಧ ಜನರು ಆರ್ತನಾದ ಮಾಡುವಂತಾಗಬಾರದು.ಆ ದೃಷ್ಟಿಯಿಂದಲೂ ಶಸ್ತ್ರವನ್ನು ಧರಿಸಿದ್ದೇನೆ. ಮುಗ್ಧ ಜನರ ಮೇಲೆ ನಿರಂತರ ಆಕ್ರಮಣ,ಭ್ರಷ್ಟಾಚಾರ,ದಕ್ಷತೆಯ ಹೊಣೆ ಹೊತ್ತ ನಾವು ಮೂಕಪ್ರೇಕ್ಷಕರಾಗುವುದು ಸರಿಯಲ್ಲ. ಹಾಗಾಗಿ ನಮ್ಮ ಕರ್ತವ್ಯವನ್ನು ನಿಭಾಯಿಸಿ ಇದು ದುರುಪಯೋಗವಾಗದಂತೆ ನೋಡಿಕೊಳ್ಳುವೆ ಎಂದು ಉತ್ತರಿಸುತ್ತಾ,ಅವಳು ಹೇಳಿದ ಸಲಹೆಯನ್ನು ಒಪ್ಪಿಕೊಂಡು, ಸಹೃದಯತೆಯಿಂದ ಸ್ವಾಗತಿಸಿ ಅಭಿನಂದಿಸುತ್ತಾನೆ. 
ನನ್ನ ಸಹಧರ್ಮಿಣಿಯಾದ ನೀನು ನನ್ನ ಪ್ರಾಣಕ್ಕಿಂತ ಮಿಗಿಲು ಎಂದು ಪ್ರೀತಿಯಿಂದ ಹೇಳುತ್ತಾನೆ. 

ದಂಪತಿಗಳು ತಮ್ಮ ಜೀವನದಲ್ಲಿ ಮುಕ್ತ ಮನಸ್ಸಿನಿಂದ ಪರಸ್ಪರ ಸಾಮರಸ್ಯದಿಂದ ಹೇಗೆ ವರ್ತಿಸಬೇಕೆಂದು ಈ ಸಂಧರ್ಭ ನಮಗೆಲ್ಲ ದಾರಿದೀಪವಾಗಿದೆ. ಹೀಗೆ ರಾಮನಿಗೆ ಮಾನವರು ಈ ಮೂರು ವ್ಯವಹಾರಗಳಿಂದ ದೂರವಿರಬೇಕು ಎಂದು ಹೇಳಿದ ಎಚ್ಚರಿಕೆಯ ಮಾತು ಇಡೀ ಸಮಾಜಕ್ಕೇ ಆದರ್ಶವಲ್ಲವೇ?

ರಾವಣನ ಅಂತ್ಯವಾದ ಮೇಲೆ ಅಶೋಕವನಕ್ಕೆ ಬಂದ ಹನುಮಂತ ಎಲ್ಲ ವಿಷಯಗಳನ್ನು ಹೇಳುತ್ತಾ, ಮಾತೆ,  ಅಶೋಕವನಕ್ಕೆ ರಾಮನ ಸಂದೇಶದೊಂದಿಗೆ ಬಂದ ಸಂದರ್ಭದಲ್ಲಿ, ಈ  ರಾಕ್ಷಸಿಯರು ನಾನಾ ರೀತಿಯಿಂದ ಕಟು ವಾಕ್ಯಗಳಿಂದ ನಿನ್ನನ್ನು ಹೆದರಿಸಿ , ನಿಂದಿಸಿ, ಮನಸ್ಸನ್ನು ನೋಯಿಸಿರುವ ಈ ರಾಕ್ಷಸಿಯರಿಗೆ ಮರಗಳನ್ನು ಕಿತ್ತು ಹೊಡೆದು ಬಡೆದು ತಕ್ಕ ಶಾಸ್ತಿ ಮಾಡಿಬಿಡುವೆ ಎಂದು ಅನುಮತಿ ಕೇಳಿದಾಗ, 

ಸೀತಾಮಾತೆ ಹೀಗೆ ಹೇಳುತ್ತಾಳೆ. 
ಆ ರಾಕ್ಷಸಿಯರು ನನ್ನ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಂಡಿರಬಹುದು.  ಆದರೆ ಅವರು ರಾವಣನ ಚಾಕರಿಯಲ್ಲಿದ್ದವರು.ಅವನು ಹೇಳಿದಂತೆ ನಡೆದಿದ್ದಾರೆ ಅಷ್ಟೇ, ತಮ್ಮ ಹೊಟ್ಟೆಪಾಡಿಗಾಗಿ ಕರ್ತವ್ಯವನ್ನು ಪಾಲಿಸಿರುವ , ರಾವಣನನ್ನು, ಅವಲಂಬಿಸಿದ ಆ ಬಡಪಾಯಿ ಜನರಿಗೆ ನಾವು ಯಾಕೆ ಶಿಕ್ಷೆ ನೀಡಬೇಕು? ಹಾಗೆ ವಿಚಾರ ಮಾಡಿದರೆ ತಪ್ಪು ಯಾರು ಮಾಡುವುದಿಲ್ಲ? ಎಲ್ಲರೂ ಮಾಡುತ್ತೇವೆ. ನಾವು ಎಷ್ಟು ತಪ್ಪು ಮಾಡಿದರೂ ನಮ್ಮ ತಪ್ಪುಗಳನ್ನು ಕ್ಷಮಿಸಿಕೊಳ್ಳುವಾಗ,  ಇನ್ನೊಬ್ಬರ  ತಪ್ಪನ್ನು ಕ್ಷಮಿಸಬೇಕು.ಎಂದು ಹನುಮನಿಗೆ ಹೇಳಿದ ಸೀತಾಮಾತೆಯ ಮೃದಧೋರಣೆ, ವಿಚಾರ, ನಮಗೆ ಆದರ್ಶವಲ್ಲವೇ?

ಸೀತಾಮಾತೆಯು ಎಂತಹ ಸಮಯದಲ್ಲೂ ಹೇಡಿಯಂತೆ ವರ್ತಿಸಲಿಲ್ಲ. ಅಲ್ಲಿಂದ ಪಾರಾಗಲು ಪುಕ್ಕಲುತನ ತೋರಲಿಲ್ಲ. ರಾವಣನ ಮುಂದೆ ಎಂದಿಗೂ ತನ್ನ ದೌರ್ಬಲ್ಯಗಳನ್ನು ತೋರಲಿಲ್ಲ. ಎಂದು ಮಧ್ಯದಲ್ಲಿ ತೋರಿಸಿಕೊಡುತ್ತಾರೆ ರಾವಣ ವಿಧವಿಧವಾದ ಆಮಿಷಗಳನ್ನು ತೋರಿಸಿ ಹೆದರಿಸಿದಾಗಲೂ ಅವನ ಮುಂದೆ ಒಂದು ಹುಲ್ಲುಕಡ್ಡಿಯನ್ನು ಇರಿಸಿ, ನೀನು ಈ ಹುಲ್ಲಿನಂತೆ ತೃಣಸಮಾನ ಎಂದು ತೋರಿಸುತ್ತಾ, ಶ್ರೀ ರಾಮನ ಮಹಾ ವ್ಯಕ್ತಿತ್ವ ಮತ್ತು ಪರಾಕ್ರಮವನ್ನು ವರ್ಣಿಸಿ,ಅವನಿಗೆ ಎಚ್ಚರಿಕೆ ನೀಡುತ್ತಾ,
ಅವನನ್ನು ನಿರ್ಭಯದಿಂದ ಖಂಡಿಸುತ್ತಾಳೆ. 

ಹನುಮನು, ಸೀತಾಮಾತೆಯನ್ನು ತಾನೇ ಕರೆದೊಯ್ಯುವುದಾಗಿ ಹೇಳಿದಾಗ, ಈ ದುಷ್ಟ  ರಾವಣನು ಕದ್ದು ನನ್ನನ್ನು ಅಪಹರಿಸಿರುವ.ಅದರಂತೆ ನಾನೂ ಕದ್ದು ಪಾರಾಗಲಾರೆ, ಈ ಅಪರಾಧಿಗೆ ತಕ್ಕ ಶಾಸ್ತಿಯಾಗಬೇಕು. ನನ್ನ ರಾಮನು ಸ್ವತಃ ಬಂದು ನನ್ನನ್ನು ಕರೆದುಕೊಂಡುಹೋಗುವವರೆಗೂ  ಕಾಯುತ್ತೇನೆ ಎಂದು ಹೇಳಿದ  ಸೀತಾಮಾತೆಯ ಸ್ವಾಭಿಮಾನ,ಧೈರ್ಯಗಳು ನಮಗೆ ಆದರ್ಶವಲ್ಲವೇ?

ಕೃಷ್ಣ  ಎಂದಾಕ್ಷಣ ಅವನ ಮೇಲಿನ ಸಲಿಗೆಯಿಂದ
ಜಾರ,ಚೋರ,ಪಕ್ಷಪಾತಿ ಎಂದೆಲ್ಲ ಹೇಳುವ ನಾವು, ರಾಮಾ ಎಂದಾಕ್ಷಣ ಸೌಮ್ಯ, ಮೃದುಸ್ವಭಾವದ ವ್ಯಕ್ತಿತ್ವ ಕಣ್ಮುಂದೆ ಸುಳಿದಾಡುತ್ತದೆ.  ಏಕಪತ್ನಿವ್ರತಸ್ಥ,ಮರ್ಯಾದಾಪುರುಷೋತ್ತಮ ಪಿತೃವಾಕ್ಯ ಪರಿಪಾಲಕ, ಗುರುಹಿರಿಯರ ಮಾತನ್ನು ಕೇಳುವವ, ಹಾಡಬಾರದು ಹಿರಿಯರ ಮಾತುಗಳು ಕೆಲವೊಂದು ಸಲ ನಮಗೆ ಬೇಸರವೆನಿಸಿದರೂ,ಅದರಿಂದ ಮುಂದೊಂದು ದಿನ ಒಳ್ಳೆಯದೇ ಆಗುತ್ತದೆ ಎನ್ನುವದನ್ನು ತೋರಿಸಿಕೊಟ್ಟ ಶ್ರೀರಾಮ ನಮಗೆಲ್ಲ ಆದರ್ಶಪ್ರಾಯ. 

 ರಾಮನ ವನವಾಸಕ್ಕೆ ಕೈಕೇಯಿಯೇ ಮೂಲಕಾರಣ ಎಂದು ನಾವು ಯೋಚಿಸುತ್ತೇವೆ.ಆದರೆ  ಕೈಕೇಯಿ ಸ್ವತಃ ಒಳ್ಳೆಯವಳೇ ಆಗಿದ್ದವಳು. ರಾಮನಿಗೆ ಪಟ್ಟಾಭಿಷೇಕ ವಿಷಯ ಹೇಳಿದ ಮಂಥರೆಯನ್ನು ಕಂಡು ಸಂತೋಷಗೊಂಡು ಆಕೆಯ ಕೈಗೆ ತನ್ನ ಆಭರಣವನ್ನು ಅವಳಿಗೆ ನೀಡಿ ಸಂಭ್ರಮಿಸಿದವಳು. ನಂತರದ ಮಂಥರೆಯ ಕಥೆ ಎಲ್ಲರಿಗೂ ಗೊತ್ತೇ ಇದೆ.  ಎಲ್ಲರೂ ಎಲ್ಲದಕ್ಕೂ ನಿಮಿತ್ತ ಮಾತ್ರವಷ್ಟೇ. ಕೈಕೇಯಿ ರಾಮನನ್ನು ವನವಾಸಕ್ಕೆ ಕಳಿಸಿದ್ದರಿಂದ ಅದೆಷ್ಟು ಜನರ ಉದ್ಧಾರವಾಯಿತು. ಪ್ರೀತಿಯಿಂದ ಪ್ರತಿ ಕ್ಷಣವೂ ರಾಮನ ದರ್ಶನಕ್ಕಾಗಿ ಕಾಯುತ್ತಿದ್ದ ಶಬರಿ, ಗುಹನ ಪ್ರೀತಿ, ಅಹಲ್ಯೆಯ ಶಾಪವಿಮೋಚನೆ, ಜಟಾಯು, ವಾಲಿನಿಗ್ರಹ, ಸುಗ್ರೀವ,ವಿಭೀಷಣರ ಉದ್ಧಾರ, ಹನುಮನ ಭಕ್ತಿ, ರಾವಣನ ಸಂಹಾರ,ಸೀತೆಯ ಪಾತಿವೃತ್ಯದ ಮಹಿಮೆ, ಒಂದೇ ಎರಡೇ, ಅಷ್ಟೇ ಅಲ್ಲದೇ ರಾಮಾಯಣದ ಕಣಕಣದಲ್ಲೂ ತುಂಬಿರುವ ಭಕ್ತಿ, ಮಾತಿಗೆ ಕಟ್ಟುಬಿದ್ದ ದಶರಥನ ಪರಿಸ್ಥಿತಿ, ಭರತನ ಭ್ರಾತೃಪ್ರೇಮ, ಲಕ್ಷ್ಮಣನ ತ್ಯಾಗ,  ಸೀತೆಯ ನಿಷ್ಠೆ,  

ಇವೆಲ್ಲವೂ ನಮಗೆ ಅಂತರಾತ್ಮದಲ್ಲಿರುವ ಅಂತಃಸತ್ವವನ್ನು ಬಡಿದೆಬ್ಬಿಸಿ ಆತ್ಮಬಲವನ್ನು ಗಟ್ಟಿ ಮಾಡುವಲ್ಲಿ ರಾಮಾಯಣ ಹಾಗೂ ಮಹಾಭಾರತ ಜಗತ್ತಿನಲ್ಲಿ  ಕಣ ಕಣದಲ್ಲಿ ಇಂದಿಗೂ ಜೀವಗಂಗೆಯಾಗಿ ಹರಿಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. 


ಸಮಗ್ರ ಮಾನವ ಕುಲಕ್ಕೆ ಆದರ್ಶವೆನಿಸುವ ಸೀತಾಮಾತೆಯ ವ್ಯಕ್ತಿತ್ವ ಮಹೋನ್ನತವಾದದ್ದು. ಭಾರತೀಯ ನಾರಿಯ ಪೂರ್ತಿ ಅಭಿವ್ಯಕ್ತಿಯನ್ನು ನಾವಿದರಲ್ಲಿ ಕಾಣಬಹುದು.  ಶ್ರೀರಾಮನ ಹೆಜ್ಜೆಗೆ ತಕ್ಕಂತೆ ಹೆಜ್ಜೆ ಇಡುತ್ತ ಸಮಗ್ರ ಸಮಾಜಕ್ಕೆ ಮಹಾನ್ ಆದರ್ಶವನ್ನು ತೋರಿದ ಮಹಾಮಾತೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಜಗನ್ಮಾತೆ ಸೀತೆಯಾಗಿ ಎಲ್ಲರ ಮನದಲ್ಲಿ ಬಹು ಭದ್ರವಾಗಿ ನೆಲೆಸಿರುವವಳು.
*****

ಪ್ರಾಮಾಣಿಕತೆಗೆ ಪುರಸ್ಕಾರ     ಎಲ್ಲರಿಗೂ ಹರಿದಿನದ ನಮಸ್ಕಾರಗಳು.
ವೈವಸ್ವತಮನುವಿನ ಹತ್ತುಮಕ್ಕಳಲ್ಲಿ ಕೊನೆಯವನಾದವ ನಾಭಾಗ.ಇವನು ಇನ್ನೂ ಅಧ್ಯಯನಕ್ಕಾಗಿ ಗುರುಕುಲದಲ್ಲಿರುವಾಗಲೇ ಇವನನ್ನು ಬಿಟ್ಟೇ ಇವನ ಅಣ್ಣಂದಿರು ತಂದೆಯ ಆಸ್ತಿಯನ್ನು ವಿಭಾಗಮಾಡಿಕೊಂಡರು.ನಾಭಾಗನಿಗೆ ಏನೂ ನೀಡಲಿಲ್ಲ.ನಾಭಾಗ ಬಂದು ನೋಡಿದ ಆಸ್ತಿಯಲ್ಲಾ ಪಾಲಾಗಿದೆ.ನನಗೆ ಕೊಡುವದು ಬೇಡ ಸೌಜನ್ಯಕ್ಕಾಗಿಯಾದರೂ ಕೇಳಬೇಡವೆ ಎಂದು ಅಣ್ಣಂದಿರನ್ನು ಕೇಳಿದ.ಆಗ ಅವರು ಹೋಗಿ ತಂದೆಗೆ ಕೇಳು ಎಂದರು.ತಂದೆ ಹತ್ತಿರ ಹೋಗಿ ಅಣ್ಣಂದಿರು ನನ್ನ ಭಾಗ ನೀಡದೆ ಪಾಲನ್ನು ಹಂಚಿಕೊಂಡಿದ್ದಾರೆ.ನನಗೆ ಏನೂ ಇಲ್ಲ ಎಂದನು.ಆಗ ಮನುವು ಹೋಗಲಿ ಅದು ನಿನಗೆ ಬೇಡ‌,ಅಲ್ಲಿ ಅಂಗೀರಸ ಗೋತ್ರದ ವಿಪ್ರರು ಯಜ್ಞ ಮಾಡುತ್ತಿದ್ದಾರೆ. ಅಲ್ಲಿ ಹೋಗು ಅವರಿಗೆ ಯಜ್ಞ ಮಧ್ಯದಲ್ಲಿ ಎರಡು ಮಂತ್ರಗಳನ್ನು ಮರೆಯುತ್ತಾರೆ .ಆ ಮಂತ್ರಗಳನ್ನು ನೀನು ನೆನಪಿಸು.ಆಗ ಅವರು ಪ್ರೀತರಾಗಿ ಯಾಗ ಮುಗಿದ ಮೇಲೆ ಉಳಿವ ಎಲ್ಲಾ ದ್ರವ್ಯವನ್ನು ನಿನಗೆ ಕೊಟ್ಟು ಹೋಗುತ್ತಾರೆ‌.ಅದರಿಂದ ನಿನ್ನ ಜೀವನ ನಿರ್ವಹಣೆ ಮಾಡಿಕೊಳ್ಳು ಎಂದು ಹೇಳಿದ.ಅದೇ ಪ್ರಕಾರ ನಾಭಾಗನು ಮಾಡಿದನು.ಯಾಗ ಮಾಡಿದ ಋಷಿಗಳು ಯಜ್ಞಮಾಡಿ ಉಳಿದ ಹಣವನ್ನು ಅಲ್ಲಿಯೇ ಬಿಟ್ಟು ಹೋದರು.ಅದನ್ನು ತೆಗೆದುಕೊಳ್ಳಲು ನಾಭಾಗನು ಉದ್ಯುಕ್ತನಾದಾಗ ಉತ್ತರ ದಿಕ್ಕಿನಿಂದ ಒಬ್ಬ ಕಡುಗಪ್ಪಿನ ವ್ಯಕ್ತಿ ಬಂದು ಇದು ನನಗೆ ಸೇರಿದ್ದು ನೀನು ಮುಟ್ಟಬಾರದು ಎಂದನು.ಇಲ್ಲಾ ಇದು ಋಷಿಗಳು ನನಗೆ ಕೊಟ್ಟದ್ದು ಎಂದು ನಾಭಾಗ ಹೇಳಿದನು.ಆಗ ಆ ವ್ಯಕ್ತಿ"ನಮ್ಮಲ್ಲಿ ಕಲಹ ಬೇಡ"ಹೋಗಿ ನಿನ್ನ ತಂದೆಯನ್ನು ಕೇಳು ಎಂದನು.ನಾಭಾಗ ತಂದೆಯ ಬಳಿ ಬಂದು ನಡೆದ ವಿಚಾರವನ್ನೆಲ್ಲ ತಿಳಿಸಿದ.ಆಗ ಮನುವು ಹೌದು ಮಗನೇ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಅವರೇ  ರುದ್ರದೇವರು.ಯಜ್ಞದ ಅವಶಿಷ್ಟ ದ್ರವ್ಯಕ್ಕೆ ರುದ್ರದೇವರೇ ಅಧಿಕಾರಿಗಳಾಗಿರುತ್ತಾರೆ.   ಉಚ್ಛೇಷಣ ಭಾಗೋ ವೈ ರುದ್ರಃ ಅದೆಲ್ಲವೂ ರುದ್ರದೇವರದು.ಅದರಮೇಲೆ ನಿನಗೆ ಅಧಿಕಾರವಿಲ್ಲ‌.ಆದ್ದರಿಂದ ಅವರಿಗೇ ಕೊಡು ಎಂದನು.ನಾಭಾಗನಿಗೆ ಅಣ್ಣತಮ್ಮಂದಿರೂ ಪಾಲು ಕೊಡಲಿಲ್ಲ.ತಂದೆ ಕಳಿಸಿದ ಯಜ್ಞದಲ್ಲೂ ಪಾಲು ಸಿಗಲಿಲ್ಲ. ಆದರೂ ತನ್ನ ಪ್ರಾಮಾಣಿಕತೆಯನ್ನು ಬಿಡಲಿಲ್ಲ.ತಂದ ಗಂಟನ್ನು ತೆಗೆದುಕೊಂಡು ಹೋಗಿ ರುದ್ರದೇವರಿಗೆ ಕೊಟ್ಟ.ತಂದೆ ನಿಮಗೆ ಕೊಡಲು ಹೇಳಿದ್ದಾರೆ ಎಂದ‌.ತಂದೆ ಧರ್ಮ ಬಿಡಲಿಲ್ಲ, ತನಯ ಸತ್ಯ ಬಿಡಲಿಲ್ಲ. ತಂದೆ ಮತ್ತು ಮಗನ ಪ್ರಾಮಣಿಕತೆಗೆ  ಸಂತುಷ್ಟರಾದ ರುದ್ರದೇವರು ನಾಭಾಗನನ್ನು ಹರಸಿದರು.ನಿನಗೆ ಯಜ್ಞಕ್ಕೆ ಸಂಬಂಧಿಸಿದ ಮಂತ್ರ ಮಾತ್ರವಲ್ಲ, ಬ್ರಹ್ಮಜ್ಞಾನವೇ ನಿನಗೆ ಬರಲಿ!!ಭಗವಂತನ ಸಾಕ್ಷಾತ್ಕಾರವನ್ನೇ ನೀನು ಪಡೆ!ಇಷ್ಟೇ ಅಲ್ಲದೇ ನನಗೆ ಸಂಬಂಧಿಸಿದ ದ್ರವ್ಯವನ್ನು ನಿನಗೆ ಕೊಡುತ್ತಿದ್ದೇನೆ ಸ್ವೀಕರಿಸು ಎಂದರು.ಸತ್ಯದಿಂದ,ತ್ಯಾಗದಿಂದ, ಧರ್ಮದಿಂದ ನಮಗೇನು ಲಾಭ ಎನ್ನುವದನ್ನು ತೋರಿಸಿಕೊಟ್ಟವ ನಾಭಾಗ. ಪ್ರಾಮಾಣಿಕತೆಯಿಂದ ಆದ್ಯಾತ್ಮಿಕ ಸಂಪತ್ತು,ಭೌತಿಕ ಸಂಪತ್ತು ಎರಡನ್ನು ಪಡೆದುಕೊಂಡ.ಅದಕ್ಕಿಂತ ಹೆಚ್ಚಾಗಿ ಮಹಾ ಭಗವದ್ಭಕ್ತ ಅಂಬರೀಶ ಮಹಾರಾಜನಂತಹ ಪುತ್ರನನ್ನು ಪಡೆದ.ಇಂತಹ  ನಾಭಾಗನ ಕಥೆ ಸದಾ ನಮ್ಮ ಚಿಂತನೆಗೆ ಬಂದರೆ ಸತ್ಯ, ಪ್ರಾಮಾಣಿಕತೆ,ತ್ಯಾಗ, ಇಂತಹ ಗುಣಗಳನ್ನು ಕಿಂಚಿತ್ತಾದರೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಯೋಗ್ಯತೆಯನ್ನುಪಡೆಯಬಹುದು.ಅಂತಹ ಯೋಗವನ್ನು ಭಾಗವತಪ್ರತಿಪಾದ್ಯನಾದ ಶ್ರೀಕೃಷ್ಣ  ನಮ್ಮೆಲ್ಲರಿಗೂಕರುಣಿಸಲಿ ಎಂದು ಪ್ರಾರ್ಥಿಸೋಣ.(ಸಂಗ್ರಹ)
ವ್ಯಾಸರಾಜ ಸಂತೆಕೆಲ್ಲೂರ ಕಲಬುರಗಿ
5.7.2021
***

ರಾಮಾಯಣ
1) ರಾಮಾಯಣ ರಚಿಸಿದವರು ಯಾರು?
ಉತ್ತರ: ವಾಲ್ಮಕಿ ಮಹರ್ಷಿಗಳು
2) ವಾಲ್ಮಿಕಿ ಯಾವ ವಂಶಜರು?
ಉತ್ತರ: ಭೃಗುವಂಶ
3) ವಾಲ್ಮಿಕಿಯ ತಂದೆಯ ಹೆಸರೇನು?
ಉತ್ತರ: ಪುಚೇತನ ಮಹರ್ಷಿಗಳು
4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು?
ಉತ್ತರ: ಹುತ್ತ
5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು?
ಉತ್ತರ: ೦೮
6)ರಾಮಾಯಣದ ಕಾಂಡಗಳು ಯಾವುವು?
ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 
7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? 
ಉತ್ತರ : ರಾಷ್ಟ್ರಕವಿ ಕುವೆಂಪು
8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ?
ಉತ್ತರ : ಕಂಬನ್
9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು?
ಉತ್ತರ : ಯುದ್ದಕಾಂಡ
10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? 
ಉತ್ತರ : ತ್ರೇತಾಯುಗ
11) ರಾಮನ ವಂಶ ಯಾವುದು ? 
ಉತ್ತರ : ಸೂರ್ಯವಂಶ 
12) ಸೂರ್ಯವಂಶದ ಮೊದಲ ರಾಜನ ಹೆಸರು ?
ಉತ್ತರ : ಇಕ್ಷ್ವಾಕು
13) ಇಕ್ಷ್ವಾಕುವಿನ ತಂದೆ ಯಾರು ? 
ಉತ್ತರ : ಸೂರ್ಯದೇವ
15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ?
ಉತ್ತರ : ರಘುವಂಶ
16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ?
ಉತ್ತರ : ಸತ್ಯ ಹರಿಶ್ಚಂದ್ರ
17) ದಶರಥನ ಮೂವರು ಪಟ್ಟ ಮಹಿಷಿಯರು 
ಯಾರು ? 
ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ
18) ದಶರಥ ಮಹಾರಜನ ತಂದೆ ಯಾರು ?
ಉತ್ತರ : ಅಜ ಮಹಾರಾಜ
19) ಕೌಶಲ್ಯೆಯ ತಂದೆ ಯಾರು ?
ಉತ್ತರ : ಭಾನುವಂತ
20) ಸುಮಿತ್ರೆಯ ತಂದೆ ಯಾರು ?
ಉತ್ತರ: ಶೂರರಾಜ
21) ಕೈಕೆಯ ತಂದೆ ಯಾರು?
ಉತ್ತರ : ಅಶ್ವಪತಿ ರಾಜ
22) ದಶರಥನು  ಪ್ರಾಣಿಯನ್ನು ಕೊಲ್ಲಲೆಂದು  ಹುಡಿದ್ದ ಬಾಣ ಯಾರಿಗೆ ನಾಟಿತು ?
ಉತ್ತರ : ಶ್ರವಣಕುಮಾರ
23) ದಶರಥನಿಗೆ ಪುತ್ರವಿರಹದಿಂದ ಸಾಯುವಂತೆ ಶಾಪ ನಿಡಿದ್ದು ಯಾರು ?
ಉತ್ತರ : ಶ್ರವಣಕುಮಾರನ ವೃದ್ದ ತಂದೆ ತಾಯಿ
24) ದಶರಥನು ಸಂತಾನದ ಅಪೆಕ್ಷಯಿಂದ ಮಾಡಿದ ಯಾಗ ಯಾವುದು ?
ಉತ್ತರ : ಪುತ್ರಕಾಮೇಷ್ಟಿ ಯಾಗ
25) ಪುತ್ರ ಕಾಮೇಷ್ಟಿ ಯಾಗವನ್ನು ಯಾರು ನೆರವೇರಿಸಿದರು?
ಉತ್ತರ : ಶೃಂಗಿ ಋಷಿಗಳು
26) ಪುತ್ರಕಾಮೇಷ್ಟಿ ಯಾಗದ ಕೊನೆಯಲ್ಲಿ ಸಶರೀರವಾಗಿ ದರ್ಶನ ಕೊಟ್ಟಿದ್ದು ಯಾರು? 
ಉತ್ತರ : ಅಗ್ನಿದೇವ
27) ರಾಮನು ಜನಿಸಿದ್ದು ಯಾವಾಗ ?
ಉತ್ತರ: ಚೈತ್ರಮಾಸದ 9ನೇ ದಿನ
28) ಶ್ರೀರಾಮಚಂದ್ರನ ನಕ್ಷತ್ರ ಯಾವುದು?
ಉತ್ತರ : ಪುನರ್ವಸು
29) ಲಕ್ಷ್ಮಣನು ಯಾವ ನಕ್ಷತ್ರದಲ್ಲಿ ಜನಿಸಿದನು? 
ಉತ್ತರ : ಆಶ್ಲೇಷ ( ಚೈತ್ರ ಶುದ್ಧ ದಶಮಿ)
30) ದಶರಥ ಮಹಾರಾಜನ ರಾಜಗುರು ಯಾರು ?
ಉತ್ತರ : ವಶಿಷ್ಠ ಮಹರ್ಷಿಗಳು
31) ದಶರಥ ಮಹಾರಾಜನ ರಾಜ ಮಂತ್ರಿ ಯಾರು ?
ಉತ್ತರ : ಸುಮಂತ
32) ವಿಶ್ವಾಮಿತ್ರರ ಯಜ್ಞಕ್ಕೆ ಉಪದ್ರವವನ್ನು ಕೊಡುತ್ತಿದ್ದ ರಕ್ಕಸರು ಯಾರು?
ಉತ್ತರ : ತಾಟಕಿ, ಸುಭಾಹು ಹಾಗೂ ಮಾರೀಚ
33) ವಿಶ್ವಾಮಿತ್ರರು ಶ್ರೀರಾಮನಿಗೆ ಉಪದೇಶಿಸಿದ ಎರಡು ವಿದ್ಯೆಗಳು ಯಾವುವು?
ಉತ್ತರ : ಬಲ ಹಾಗೂ ಅತಿಬಲಾ
34) ತಾಟಕಿಯನ್ನು ಕೊಂದಿದ್ದು ಯಾರು?
ಉತ್ತರ : ಶ್ರೀರಾಮ
35) ಸುಬಾಹುವನ್ನು ಕೊಂದಿದ್ದು ಯಾರು?
ಉತ್ತರ : ಲಕ್ಷ್ಮಣ
36) ಸುಮಿತ್ರೆಯ ಅವಳಿ ಮಕ್ಕಳು ಯಾರು?
ಉತ್ತರ : ಲಕ್ಷ್ಮಣ, ಶತ್ರುಘ್ನ
37) ದಶರಥನ ಮಕ್ಕಳಿಗೆ ಶಾಸ್ತ್ರ ವಿದ್ಯೆಯನ್ನು ಕಲಿಸಿದ ಗುರುಗಳು ಯಾರು ? 
ಉತ್ತರ : ಮಹರ್ಷಿ ವಸಿಷ್ಠರು
38) ಕೈಕೆಯಿ ಯಾರ ಮಗಳು?
ಉತ್ತರ : ಕೈಕಯ ರಾಜನ‌ ಮಗಳು
39) ಕೌಶಲ್ಯ ಯಾವ ದೇಶದವಳು ?
ಉತ್ತರ : ಕೋಸಲ ದೇಶ
40) ವಿದೇಹದ ರಾಜಧಾನಿ ಯಾವುದು? 
ಉತ್ತರ : ಮಿಥಿಲೆ
46) ಸೀತಾ ಸ್ವಯಂವರದಲ್ಲಿ ರಾಮನು ಮುರಿದದ್ದು ಯಾವ ಧನಸ್ಸು? 
ಉತ್ತರ : ಶಿವ ಧನಸ್ಸು
47) ಭರತನ ಹೆಂಡತಿ ಯಾರು?
ಉತ್ತರ : ಮಾಂಡವಿ
48) ಶತ್ರುಘ್ನನ ಹೆಂಡತಿ ಯಾರು?
ಉತ್ತರ : ಶೃತಕಿರ್ತಿ
49) ಮಾಂಡವಿ ಮತ್ತು ಶ್ರುತಕೀರ್ತಿ ಯಾರ ಮಕ್ಕಳು?
ಉತ್ತರ : ಕ್ಕುಷದ್ವಜನ ಮಕ್ಕಳು
50) ಪರಶುರಾಮರು ಯಾವ ವಂಶದವರು? 
ಉತ್ತರ : ಭೃಗು ವಂಶ
41) ಜನಕ ಮಹಾರಾಜನ ಪತ್ನಿ ಯಾರು ?
ಉತ್ತರ : ಸುನಯನಾ ದೇವಿ
42) ಜನಕ ಮಹಾರಾಜ ಆಳುತ್ತಿದ್ದ ದೇಶ ಯಾವುದು ? 
ಉತ್ತರ : ವಿದೇಹ
43) ವೈದೇಹಿ ಯಾರು ?
ಉತ್ತರ : ಸೀತಾಮಾತೆ 
44) ಜನಕ ಮಹಾರಾಜನ ಮತ್ತೊಬ್ಬಳ ಮಗಳ ಹೆಸರೇನು ?
ಉತ್ತರ : ಊರ್ಮಿಳಾ
45) ಸೀತೆಯು ಜನಕ ರಾಜನಿಗೆ ಎಲ್ಲಿ ಸಿಕ್ಕಿದ್ದು ?
ಉತ್ತರ : ಭೂಮಿಯಲ್ಲಿ
51)ಅಹಲ್ಯಗೆ ಕಲ್ಲಾಗುವಂತೆ ಶಾಪ ನೀಡಿದ್ದು ಯಾರು ?
ಉತ್ತರ : ಗೌತಮ ಮಹರ್ಷಿಗಳು
52) ಅಹಲ್ಯಯ ಶಾಪ ವಿಮೋಚನೆ ಯಾರಿಂದ ಆಯಿತು?
ಉತ್ತರ: ಶ್ರೀರಾಮನಿಂದ
53) ಅಹಲ್ಯ ಹಾಗೂ ಗೌತಮರ ಮಗನ ಹೆಸರೇನು?
ಉತ್ತರ : ಶತಾನಂದ
54) ಪರಶುರಾಮರು ಏಷ್ಟು ಬಾರಿ ಭುಪ್ರದಕ್ಷಿನೆ ಮಾಡಿ ರಕ್ಕಾಸಗುಣದ ಕ್ಷತ್ರಿಯರನ್ನು ಕೊಂದಿದ್ದರು?
ಉತ್ತರ : 21 ಬಾರಿ
55) ಚಿರಂಜೀವಿಗಳು ಎಷ್ಟು ಮಂದಿ? 
ಉತ್ತರ : 7 ಜನ 
56) ಅಯೋಧ್ಯ ಕಾಂಡ ರಾಮಾಯಣ ಎಷ್ಟನೇ ಭಾಗ?
ಉತ್ತರ : ಎರಡನೆಯ ಭಾಗ
57) ರಾಮಾಯಣದ ಮೊದಲ ಭಾಗದ ಹೆಸರೇನು ?
ಉತ್ತರ : ಬಾಲಕಾಂಡ
58) ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವ ಇಚ್ಛೆಯನ್ನು ಮೊದಲು ಹೇಳಿದ್ದು ಯಾರಿಗೆ?
ಉತ್ತರ : ರಾಜಗುರುಗಳಾದ ವಶಿಷ್ಠರಿಗೆ
59) ದೇವೇಂದ್ರನ ಜೊತೆ ಯುದ್ಧ ಮಾಡಿದ ರಾಕ್ಷಸ ಯಾರು ?
ಉತ್ತರ : ಶಂಬರಾಸುರ
60) ಶಂಬಕಾಸುರ ಹಾಗೂ ದೇವೇಂದ್ರನ ನಡುವೆ ಯುದ್ಧವಾದಾಗ ದೇವೇಂದ್ರನ ಪರವಾಗಿ ಯುದ್ದ ಮಾಡಿದ್ದು ಯಾರು?
ಉತ್ತರ : ದಶರಥ ಮಹಾರಾಜ
61) ದೇವೇಂದ್ರ ಹಾಗೂ ಶಂಬರಾಸುರನ ನಡುವಿನ ಯುದ್ಧದಲ್ಲಿ ಗೆದ್ದದ್ದು ಯಾರು ?
ಉತ್ತರ : ದೇವೇಂದ್ರ
62) ಯುದ್ಧದಲ್ಲಿ ಗೆದ್ದ ಖುಷಿಗೆ ಕೈಕೆಯಿಗೆ ದಶರಥನು ಎಸ್ಟು ವರಗಳನ್ನು ಕೊಟ್ಟಿದ್ದನು ?
ಉತ್ತರ: 2
63) ಸುಮಿತ್ರೆಯ ಮಗನಾದ್ದರಿಂದ ಲಕ್ಷ್ಮಣನಿಗೆ ಇದ್ದ ಮತ್ತೊಂದು ಹೆಸರೇನು?
 ಉತ್ತರ : ಸೌಮಿತ್ರಿ
64) ಅಯೋಧ್ಯೆ ಸರಹದ್ದನ್ನು ದಾಟಲು ರಾಮನಿಗಿದ್ದ ಕಾಲಾವಕಾಶ ಎಷ್ಟು? 
ಉತ್ತರ : ಅಂದಿನ ಸೂರ್ಯಾಸ್ತ
65) ಅಯೋಧ್ಯವನ್ನು ದಾಟಿದ ನಂತರ ಮೂವರು ತಲುಪಿದ್ದು ಎಲ್ಲಿ?
ಉತ್ತರ : ಶೃಂಗವೇರಪುರ
66) ಶೃಂಗವೆರಪುರ ಎಲ್ಲಿದೆ ?
ಉತ್ತರ: ಗಂಗಾನದಿಯ ತಟದಲ್ಲಿ
67) ನಿಷಾದದ ರಾಜನ ಹೆಸರೇನು ?
ಉತ್ತರ : ಗುಹ
68) ಗುಹನ ವೃತ್ತಿ ಏನು?
ಉತ್ತರ: ಅವನೊಬ್ಬ ಬೇಡ
69) ರಾಮನೊಂದಿಗೆ ಗುಹನ ಬೇಟಿ ಎಲ್ಲಿ ಆಯಿತು?
ಉತ್ತರ : ಗಂಗಾನದಿಯ ತಟದಲ್ಲಿ ಇಂಗುದಿವೃಕ್ಷದ ಕೆಳಗೆ ಕುಳಿತಿದ್ದಾಗ
70) ಗುಹನಲ್ಲಿ ರಾಮ ಕೇಳಿದ ಸಹಾಯವೇನು ?
ಉತ್ತರ : ಗಂಗೆಯನ್ನು ದಾಟಲು ದೋಣಿ ವ್ಯವಸ್ಥೆ ಮಾಡು ಎಂದು
76) ಬೃಹಸ್ಪತಿಯ ಮಗ ಯಾರು? 
ಉತ್ತರ : ಭಾರದ್ವಾಜ ಋಷಿಗಳು
77) ಭಾರದ್ವಾಜ ಋಷಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಗಂಗೆ ಹಾಗೂ ಯಮುನೆಯರ ಸಂಗಮದ ಬಳಿ
78) ಭಾರದ್ವಾಜರು ರಾಮನಿಗೆ ಎಲ್ಲಿ ತಂಗಲು ಹೇಳಿದರು? 
ಉತ್ತರ : ಚಿತ್ರಕೂಟ ಪರ್ವತದ ಬಳಿ
79) ದಶರಥನ ಅಂತ್ಯ ಹೇಗಾಯಿತು?
ಉತ್ತರ : ಪುತ್ರ ವಿರಹದಿಂದ
80) ದಶರಥನಿಗೆ ಪುತ್ರ ವಿರಹದಿಂದ ಸಾವು ಬರಲಿ ಎಂದು ಹಿಂದೆ ಶಪೀಸಿದ್ದು ಯಾರು?
ಉತ್ತರ : ಶ್ರವಣಕುಮಾರನ ವೃದ್ಧ ಮಾತಾಪಿತರು.
71) ದೋಣಿ ನಡೆಸುವ ಅಂಬಿಗನ ಹೆಸರೇನು ? 
ಉತ್ತರ : ಕೇವತ
72) ಕೇವತನು ರಾಮನನ್ನು ದೋಣಿ ಹತ್ತಿಸಿಕೊಳ್ಳಲು ನಿರಾಕರಿಸಿದ್ದು ಏಕೆ ?
ಉತ್ತರ : ರಾಮ ಕಾಲಿಟ್ಟ ಕೂಡಲೇ ಅವನ‌ಪಾದದೂಳಿಯಿಂದ ತನ್ನ ದೋಣಿಯೂ ಅಹಲ್ಯೆಯಂತೆ ಹೆಣ್ಣಾಗಿ ಬಿಟ್ಟರೆ ಭಯದಿಂದ
73) ಕೇವತನ ಭಯ ನಿಜವಾದುದೇ?
ಉತ್ತರ : ಇಲ್ಲ
74) ಕೇವತಾ ಭಯಗೊಂಡಂತೆ ನಟಿಸಿದ್ದು ಏಕೆ?
ಉತ್ತರ : ಭಕ್ತಿಯಿಂದ ಪ್ರಭು ರಾಮನ ಪಾದಗಳನ್ನು ತೊಳೆತಯವ ಉದ್ದೇಶದಿಂದ 
75) ದೋಣಿಯಲ್ಲಿ ಹತ್ತಿಸಿಕೊಳ್ಳುವ ಮೊದಲು ಕೇವತನು ಮಾಡಿದ್ದೇನು
ಉತ್ತರ : ಪಾದಗಳನ್ನು ಯೊಳೆದದ್ದು
81) ದಶರಥನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಯಾರು ?
ಉತ್ತರ : ಭಾರತ 
82) ದಶರಥನ ಅಂತ್ಯದ ನಂತರ ಯಾರಿಗೆ ಪಟ್ಟಾಭಿಷೇಕವಾಯಿತು?
ಉತ್ತರ : ಅಧಿಕೃತವಾಗಿ ಯಾರಿಗೂ ಪಟ್ಟಾಭಿಷೇಕ ವಾಗಲಿಲ್ಲ
83) ಭರತ ಶ್ರೀರಾಮನ ಯಾವ ಸಂಕೇತವನ್ನು ಇಟ್ಟುಕೊಂಡು ರಾಜ್ಯಭಾರ ಮಾಡಿದ?
ಉತ್ತರ : ರಾಮನ ಪಾದುಕೆಗಳು
84) ರಾಮನ ಪಾದುಕೆಗಳನ್ನು ತೆಗೆದುಕೊಂಡು ರಾಜ್ಯಭಾರ ಮಾಡು ಎಂದು ಭರತನಿಗೆ ಸೂಚಿಸಿದ್ದು ಯಾರು?
ಉತ್ತರ : ರಾಜಗುರು ವಶಿಷ್ಠರು
85 ) ಭರತನು ರಾಜ್ಯದ ಆಡಳಿತವನ್ನು ಎಲ್ಲಿದ್ದು ಕೊಂಡೆ ಮಾಡುತ್ತಿದ್ದ? 
ಉತ್ತರ: ನಂದಿಗ್ರಾಮ
101) ಪಂಚವಟಿಯು ಯಾವ ನದಿ ತಿರದಲ್ಲಿ ಇತ್ತು?
ಉತ್ತರ : ಗೋದಾವರಿ
102) ಸಂಪಾತಿ ಎಲ್ಲಿ ವಾಸಿಸುತ್ತಿತ್ತು?
ಉತ್ತರ: ದಕ್ಷಿಣದ ತುದಿಯಲ್ಲಿರುವ ಸರೋವರದ ಬಳಿ
103) ಜಟಾಯು ಶ್ರೀರಾಮನಿಗೆ ತಾನು ಯಾರು ಎಂದು ಪರಿಚಯಿಸಿ ಕೊಂಡಿತು?
ಉತ್ತರ : ದಶರಥನ ಸ್ನೇಹಿತ ಎಂದು
104) ಪುಲಸ್ತ್ಯರು ಯಾರ ಮಗ?
ಉತ್ತರ : ಬ್ರಹ್ಮದೇವರ ಮಾನಸಪುತ್ರರು
105) ಪುಲಸ್ತ್ಯರ ಮಗ ಯಾರು ?
ಉತ್ತರ :  ವಿಶ್ರವಸು
106) ವಿಶ್ರವಸುವಿನ ಪತ್ನಿ ಯಾರು?
ಉತ್ತರ : ಭಾರದ್ವಾಜ ಮಹರ್ಷಿಗಳ ಮಗಳಾದ ದೇವವರ್ಣಿನಿ
107) ವೀಶ್ರವಸುವಿನ ಮಗ ಯಾರು?
ಉತ್ತರ : ವೈಶ್ರವನ
108) ವೈಶ್ರವಣ ಯಾವ ಹೆಸರಿನಿಂದ ಪರಿಚಿತ?
ಉತ್ತರ : ಕುಭೇರ
109) ಕುಬೇರನ ಬಳಿಯಿದ್ದ ವಾಯುವೇಗದ ವಾಹನ ಯಾವುದು?
ಉತ್ತರ : ಪುಷ್ಪಕ ವಿಮಾನ
110) ಕುಬೇರನಿಗೆ ಬ್ರಹ್ಮನ ವರದಿಂದ ಯಾವ ದಿಕ್ಕಿನ ಅಧಿಪತ್ಯ ದೊರಕಿತು?
ಉತ್ತರ : ಉತ್ತರ ದಿಕ್ಕಿನ ಅಧಿಪತ್ಯ
111) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?
ಉತ್ತರ : ಕುಭೆರ 
112) ವಿಶ್ರವಸು ಹಾಗು ಕೈಕಸಿಯ ಮಗ ಯಾರು? 
ಉತ್ತರ : ರಾವಣ
113) ಕೈಕಸಿ ಯಾರ ಮಗಳು?
ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು
 114) ಸುಮಾಲಿಯ ಸೋದರರು ಎಷ್ಟು ಮಂದಿ?
ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 
115) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? 
ಉತ್ತರ: ಸುಖೇಶನೆಂಬ ರಾಕ್ಷಸ
116) ರಾವಣನ ಮೂಲ ಹೆಸರೇನು?
ಉತ್ತರ : ದಶಕಂಠ/ ದಶಾನನ
117) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? 
ಉತ್ತರ: ತನಗೆ ಸಾವು ಬರಬಾರದು ಎಂದು
118) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?
ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ
118) ರಾವಣ ಕೇಳಿದವರ ದೊರೆಯಿತೇ? 
ಉತ್ತರ : ಇಲ್ಲ
119) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? 
ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ
120) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?
ಉತ್ತರ : ಮನುಷ್ಯ
121) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? 
ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ
122) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? 
ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 
123) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?
ಉತ್ತರ : ಸರಸ್ವತಿ ದೇವಿ
124) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ
125) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?
ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ
126) ರಾವಣನಿಗೆ ಕುಬೇರನು ಏನಾಗಬೇಕು? 
ಉತ್ತರ : ಅಣ್ಣ
127) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ? 
ಉತ್ತರ : ಕುಬೇರನ ಮೇಲೆ
128) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ? 
ಉತ್ತರ : ಕೈಕಸಿ
129) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?
ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ
130) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು
ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ
131) ಮಂಡೋದರಿ ಯಾರ ಮಗಳು ? 
ಉತ್ತರ : ಮಯ ಎಂಬ ರಾಕ್ಷಸನ ಮಗಳು
132) ಮಂಡೋದರಿಯ ತಾಯಿ ಯಾರು?
ಉತ್ತರ : ಹೇಮಾ ಎಂಬ ಅಪ್ಸರೆ
133) ಕುಂಭಕರ್ಣನ ಹೆಂಡತಿ ಯಾರು?
ಉತ್ತರ : ವಿದ್ಯುಜ್ಜಿಹ್ವೆ
134) ವಿಭೀಷಣನ ಪತ್ನಿ ಯಾರು? 
ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ
135) ವಿಭೀಷಣನ ಮಾವ ಯಾರು ? 
ಉತ್ತರ : ಶೈಲೂಷ
136) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?
ಉತ್ತರ : ತಂದೆ ವಿಶ್ರವಸುವಿನ ಮಾತಿಗೆ
137) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?
ಉತ್ತರ : ಅಲ್ಕ ನಗರಿಯಲ್ಲಿ
138) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?
ಉತ್ತರ : ಮಂದಾಕಿನಿ
139) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ?
ಉತ್ತರ : ನಂದಿಕೇಶ್ವರ
140) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ?
ಉತ್ತರ : ಶಿವನಿಂದ
141) ಕುಬೇರನ ಮಗ ಯಾರು?
ಉತ್ತರ : ನಳಕೂಬರ
142) ಹಿಮ ಪರ್ವತದಲ್ಲಿ 
ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು?
ಉತ್ತರ : ವೇದವತಿ
143) ವೇದವತಿ ಯಾರ ಅವತಾರ ?
ಉತ್ತರ : ಲಕ್ಷ್ಮೀದೇವಿ
144) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ?
ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ
145) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ? 
ಉತ್ತರ : ರಾವಣ
151) ಶೂರ್ಪಣಕಿಯ ದೊಡ್ಡಮ್ಮನ‌ ಮಕ್ಕಳು ಯಾರು?
ಉತ್ತರ : ಖರ ದೂಷಣರೆಂಬ ರಾಕ್ಷಸರು 
152) ಖರ ದೂಷಣರ ಸಂಹರಿಸಿದ್ದು ಯಾರು ?
ಉತ್ತರ‌: ಶ್ರೀರಾಮ‌
153) ಖರ ದೂಷಣರು ರಾಮ ಲಕ್ಷ್ಮಣರ ಮೇಲೆ ಯುದ್ದಕ್ಕೆ ಬಂದಾಗ ಅವರ ಸಂತತಿ ಎಷ್ಟಿತ್ತು?
ಉತ್ತರ : 14,000
154) 14,000 ರಕ್ಕಸರನ್ನು ಸಂಹರಿಸಿದ್ದು ಯಾರು ? 
ಉತ್ತರ : ಶ್ರೀರಾಮ ಒಬ್ಬನೆ
155) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ? 
ಉತ್ತರ : ಅಕಂಪನ ಎಂಬ ರಾಕ್ಷಸ
146) ವೇದವತಿ ರಾವಣನಿಗೆ ಕೊಟ್ಟ ಶಾಪವೇನು?
ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು 
147) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ?
ಉತ್ತರ : ಸೀತೆಯಾಗಿ 
148) ಶೂರ್ಪನಕಿಯ ಪತಿ ಯಾರು?
ಉತ್ತರ : ಕಾಲಕೇಯನೆಂಬ ರಾಕ್ಷಸ‌
149) ಕಾಲಕೇಯನನ್ನು ಕೊಂದಿದ್ದು ಯಾರು ? 
ಉತ್ತರ : ರಾವಣ 
150) ರಾವಣ ಕಾಲಕೇಯನನ್ನು  ಕೊಂದಿದ್ದು ಏಕೆ?
ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ   ಪ್ರಯೋಗಿಸಿಬಿಟ್ಟಿದ್ದ
156) ಮಾರಿಚ ಯಾರು ?
ಉತ್ತರ : ರಾವಣನ ಸೋದರ ಮಾವ
157) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ?
ಉತ್ತರ : ಮಾಯಾಮೃಗದ ರೂಪ
158) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ?
ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು 
159) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ?
ಉತ್ತರ : ಹಾ ಲಕ್ಷ್ಮಣ ಹಾ ಸಿತಾ 
160) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ?
ಉತ್ತರ : ವಾನರ‌ ಸೈನ್ಯ
161) ಸೀತೆ ತನ್ನ ಆಭರಣಗಳ ಪುಟ್ಟ ಗಂಟನ್ನು ಎಲ್ಲಿ ಎಸೆದಳು?
ಉತ್ತರ : ಋಷ್ಯಮೂಕ ಪರ್ವತದಲ್ಲಿ ಇದ್ದ ವಾನರರ ಕಡೆಗೆ
162) ಯೋಜನಗಳಷ್ಟು ದೂರದವರೆಗೆ ಕೈಗಿಳಿದ್ದ ರಾಕ್ಷಸ ಯಾರು ?
ಉತ್ತರ: ಕಬಂಧ
೧೬೩) ಕಬಂಧನ ತಲೆಯು ಎಲ್ಲಿತ್ತು?
ಉತ್ತರ : ಹೊಟ್ಟೆಯಲ್ಲಿ 
೧೬೪) ಕಬಂಧನ ತಲೆಯು ಹೊಟ್ಟೆಯಲ್ಲಿ ಹೋಗಿ ಸಿಕ್ಕಿಕೊಂಡಿದ್ದಕ್ಕೆ ಕಾರಣವೇನ?
ಉತ್ತರ : ಇಂದ್ರನ ವಜ್ರಾಯುಧದಿಂದ ಹೊಡೆದ ಕಾರಣ
೧೬೫) ಕಬಂಧನನ್ನು ಸಂಹರಿಸಿದ್ದು ಯಾರು?
ಉತ್ತರ : ಶ್ರೀರಾಮ 
೧೬೬) ಪಂಪಾ ಸರೋವರದಲ್ಲಿ  ಆಶ್ರಮದಲ್ಲಿ ರಾಮನಿಗಾಗಿ ಕಾಯುತ್ತಿದ್ದ ವೃದ್ಧ ಭಕ್ತೆ ಯಾರು ?
ಉತ್ತರ : ಶಬರಿ
೧೬೭) ಶಬರಿ ಯಾವ ಆಶ್ರಮದಲ್ಲಿ ರಾಮನಿಗಾಗಿ ಎದಿರು ನೋಡುತ್ತಿದ್ದಳು ?
ಉತ್ತರ : ಮತಂಗ ಮುನಿಯ ಆಶ್ರಮದಲ್ಲಿ
೧೬೮) ಶಬರಿ ರಾಮನಿಗೆ ಏನನ್ನು ತಿನ್ನಲು ನೀಡಿದಳು?
ಉತ್ತರ : ಬಾರಿ ಅಥವಾ ಬೋರೆಹಣ್ಣು
೧೬೯) ಶಬರಿ ಆ ಹಣ್ಣನ್ನು ಕಚ್ಚಿ ತಿಂದು ರುಚಿ ನೋಡಿ ರಾಮನಿಗೆ ಕೊಟ್ಟಿದ್ದು ಏಕೆ ?
ಉತ್ತರ : ಸಿಹಿಯಾದ ಹಣ್ಣುಗಳನ್ನು ಮಾತ್ರವೇ ಅರ್ಪಿಸಬೇಕು ಎಂದು
೧೭೦) ಸೀತೆಯನ್ನು ಹುಡುಕಲು ಶಬರಿ ಹೇಳಿದ ಉಪಾಯವೇನು?
ಉತ್ತರ : ಸುಗ್ರೀವನನ್ನು  ಬೇಟಿಯಾಗುವ ಸಲಹೆ ನೀಡಿದಳು
 ೧೭೧) ಸುಗ್ರಿವ ಎಲ್ಲಿದ್ದ?
ಉತ್ತರ : ಋಷ್ಯಮೂಕ ಪರ್ವತದಲ್ಲಿ.
೧೭೨) ಸುಗ್ರೀವನ ಬಳಿ‌ ಇದ್ದ ರಾಮನ ಪರಮ ಭಕ್ತ ಯಾರು?
ಉತ್ತರ : ಹನುಮಂತ 
೧೭೩) ಹನುಮಂತನ ಇನ್ನಿತರ ಹೆಸರುಗಳೇನು ? 
ಉತ್ತರ : ರಾಮಬಂಟ, ಆಂಜನೆಯ, ಮಾರುತಿ, ವಾಯುಪುತ್ರ, ಅಂಜನಿಪುತ್ರ, ಹನುಮಾನ, ಪವನಪುತ್ರ, ಬಜರಂಗಿ, ಕೆಸರಿ ನಂದನ
೧೭೪) ರಾಮನ ದರ್ಶನ ಆದನಂತರ ಶಬರಿಯು ದೇಹತ್ಯಾಗ ಮಾಡಿದ್ದು ಹೇಗೆ? 
ಉತ್ತರ : ಅಗ್ನಿ ಪ್ರವೇಶದ ಮೂಲಕ
೧೭೫) ಕಿಸ್ಕಿಂಧಾ ಕಂಡದ ಹಿಂದಿನ ಬಾಗ ಯಾವುದು?
ಉತ್ತರ : ಅರಣ್ಯಕಾಂಡ 
೧೭೬) ಹನುಮಂತನ ತಂದೆ ಯಾರು?
ಉತ್ತರ : ಕೆಸರಿ
೧೭೭) ಆಂಜನೆಯ ಯಾರ ವರದಿಂದ ಜನ್ಮತಾಳಿದನು?
ಉತ್ತರ : ವಾಯುದೇವನ ವರದಿಂದ 
೧೭೮) ಹಸಿವೆಯಿಂದ ಹನುಮಂತ ತಿನ್ನಲು ಹೊದ ಹಣ್ಣು‌ ಯಾವುದು?
ಉತ್ತರ : ಕೆಂಪಗಿರುವ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೊಗಿದ್ದ
೧೭೯) ಹನುಮಂತನಿಗೆ ವಜ್ರಾಯುಧದಲ್ಲಿ ಪೆಟ್ಟು ಕೊಟ್ಟಿದ್ದು ಯಾರು?
ಉತ್ತರ: ಇಂದ್ರ
೧೮೦) ಹನು ಎಂದರೆ ಅರ್ಥ ಏನು?
ಉತ್ತರ : ದವಡೆ
೧೮೧) ರಾಮ ಲಕ್ಷ್ಮಣರು ಸುಗ್ರೀವನನ್ನು ಕಾಣಲು ಎಲ್ಲಿಗೆ ಬಂದರು?
ಉತ್ತರ : ಋಷ್ಯಮೂಕ ಪರ್ವತ
೧೮೨) ಸುಗ್ರೀವನ ಅಣ್ಣ ಯಾರು? 
ಉತ್ತರ : ವಾಲಿ
೧೮೩) ರಾಮಲಕ್ಷ್ಮಣರನ್ನು ಋಷ್ಯಮೂಕ ಪರ್ವತದಲ್ಲಿ ಬರ ಮಾಡಿಕೊಂಡಿದ್ದು ಯಾರು ?
ಉತ್ತರ: ಬ್ರಾಹ್ಮಣ ರೂಪದಲ್ಲಿದ್ದ ಹನುಮಂತ
೧೮೪) ವಾಲಿ-ಸುಗ್ರೀವರ ತಂದೆ ಯಾರು? 
ಉತ್ತರ: ವೃಕ್ಷ ಶಿರಸು
೧೮೫) ವಾಲಿಗೆ ಋಷ್ಯಮೂಕ ಪರ್ವತಕ್ಕೆ ಕಾಲಿಟ್ಟೊಡನೆ ಮೃತ್ಯು ಬರಲಿ ಎಂದು ಶಪಿಸಿದ್ದು ಯಾರ
ಉತ್ತರ : ಮಾತಂಗ ಮುನಿಗಳು
೧೮೬) ಸುಗ್ರೀವನ ಪತ್ನಿ ಯಾರು? 
ಉತ್ತರ: ರುಮೆ 
೧೮೭) ವಾಲಿಯ ಪತ್ನಿ ಯಾರು?
ಉತ್ತರ : ತಾರಾ
೧೮೮) ತಾರಾಳನ್ನು ಯಾರು?
ಉತ್ತರವ: ತಾರ
೧೮೯) ತಾರಾ ಹಾಗೂ ತಾರ, ಯಾರ ಮಕ್ಕಳು?
ಉತ್ತರ : ಸುಷೇಣನೆಂಬ ವಾನರನ ಮಕ್ಕಳು
೧೯೦) ಸುಗ್ರೀವನು ಸೀತೆಯನ್ನು ಗುರುತಿಸುವುದಕ್ಕಾಗಿ ಏನನ್ನು ರಾಮಚಂದ್ರನಿಗೆ ನೀಡಿದನು?
ಉತ್ತರ : ಆಭರಣದ ಪುಟ್ಟ ಗಂಟನ್ನು ನೀಡಿದ
೧೯೬) ಮಾಯಾವಿಯ ಕಳೆಬರವು ಎಲ್ಲಿತ್ತು?
ಉತ್ತರ: ಋಷ್ಯಮೂಕ ಪರ್ವತದ ಎತ್ತರದ ಒಂದು ಮರದ ಮೇಲೆ ಎಷ್ಟು
೧೯೭) ಮಾಯಾವಿಯ ಕಳೇಬರವನ್ನು ಕಾಲಿನಿಂದ ಒದ್ದು ಯೋಜನೆಗಳಷ್ಟು ದೂರ ಎಸೆದದ್ದು  ಯಾರು?
ಉತ್ತರ: ರಾಮ
೧೯೮) ವಾಲಿ-ಸುಗ್ರೀವರ ಯುದ್ಧದಲ್ಲಿ ಮೊದಲ ದಿನ ಗೆದ್ದದ್ದು ಯಾರು?
ಉತ್ತರ : ವಾಲಿ
೧೯೯) ರಾಮನಿಗೆ ವಾಲಿಯನ್ನು ಮೊದಲ ಯುದ್ಧದಲ್ಲಿ ಕೊಲ್ಲಲು ಏಕೆ ಸಾಧ್ಯವಾಗಲಿಲ್ಲ?
ಉತ್ತರ : ವಾಲಿ ಹಾಗೂ ಸುಗ್ರೀವರು ನೋಡಲು ಒಂದೇ ರೀತಿ ಇದ್ದರು ಎಂಬ ಕಾರಣಕ್ಕೆ!
೨೦೦) ಸುಗ್ರೀವನಿಗೆ ರಾಮನು ಯುದ್ಧದ ಸಮಯದಲ್ಲಿ ಏನನ್ನು ಧರಿಸಲು ಕೊಟ್ಟ ?
ಉತ್ತರ: ತನ್ನ ಕುರರ ಹಾರವನ್ನು ಧರಿಸಲು ಕೊಟ್ಟ
೧೯೧) ಲಕ್ಷ್ಮಣನು ಗುರುತಿಸಿದ ಸೀತೆಯ ಆಭರಣ ಯಾವುದು?
ಉತ್ತರ : ಸೀತಾಮಾತೆಯ ಕಾಲುಂಗುರದಿಂದ
೧೯೨) ಸುಗ್ರೀವನು ವಾಲಿಯನ್ನು ಯಾವ ಸ್ಥಳದಲ್ಲಿ ಯುದ್ಧ ಮಾಡು ಬಾ ಎಂದು ಕರೆದ ? 
ಉತ್ತರ : ಋಷಿ ಮುಖ ಪರ್ವತದ ದಟ್ಟ ಕಾನನದಲ್ಲಿ
೧೯೩) ಕಾಡಿನಲ್ಲಿ ಯುದ್ಧಮಾಡಲು ಕರೆದಿದ್ದು ಏಕೆ?
ಉತ್ತರ : ರಾಮನು ವನವಾಸದಲ್ಲಿ ಇರುವುದರಿಂದ ಅವನು ನಗರ ಪ್ರವೇಶ ಮಾಡುವಂತಿರಲಿಲ್ಲ ಹೀಗಾಗಿ ವಾಲಿಯನ್ನು ಕಾಡಿಗೆ ತರಬೇಕಿತ್ತು
೧೯೪) ವಾಲಿಯು ಯಾವ ರಾಕ್ಷಸ ನಂದಿಗೆ ಒಂದಿಡೀ ವರ್ಷ ಗುಹೆಯಲ್ಲಿ ಕಾದಾಡಿದ್ದ ?
ಉತ್ತರ: ಮಾಯಾವಿ
೧೯೫) ವಾಲಿ ಹಾಗೂ ಮಾಯಾವಿ ಯುದ್ದದ್ದಲ್ಲಿ ಗೆದ್ದದ್ದು ಯಾರು? 
ಉತ್ತರ  : ವಾಲಿ
೨೦೧) ರಾಮನ ಹಾರವನ್ನು ಸುಗ್ರೀವನು ಧರಿಸುವುದರಿಂದ ಆಗುತ್ತಿದ್ದ ಪ್ರಯೋಜನವೇನು?
ಉತ್ತರ: ಹಾರ ದರಿಸಿದವನು ಸುಗ್ರೀವನೆಂದೂ. ಹಾರವಿಲ್ಲದವನು ವಾಲಿ ಎಂದು ರಾಮನಿಗೆ ತಿಳಿಯುತ್ತಿತ್ತು.
೨೦೨) ವಾಲಿಯ ಮಗ ಯಾರು?
ಉತ್ತರ: ಅಂಗದ
೨೦೩? ಶ್ರವಣದಿಂದ ಕಾರ್ತಿಕ ಮಾಸದ ವರೆಗೂ ರಾಮಲಕ್ಷ್ಮಣರು ಯಾವ ಪರ್ವತದಲ್ಲಿ ವಾಸವಿದ್ದರು?
ಉತ್ತರ : ಮಾಲ್ಯವಂತ ಪರ್ವತದಲ್ಲಿ ( ಈಗಿನ ಆನೆಗುಂದಿ ಹತ್ತಿರ ಬರುತ್ತದೆ ಅಂದರೆ ಹಂಪಿಯ ಕ್ಷೇತ್ರ)
೨೦೪) ವಾಲಿ ಹತನಾದ ನಂತರ ಕಿಷ್ಕಿಂದೆಯ ರಾಜನಾಗಿದ್ದು ಯಾರು?
ಉತ್ತರ: ಸುಗ್ರೀವ
 ೨೦೫) ಅಂಗದ ನಿಗೆ ಯಾವ ಪಟ್ಟ ಸಿಕ್ಕಿತು?
ಉತ್ತರ: ಯುವರಾಜನ ಪಟ್ಟ
೨೧೧) ರಾಮನು ಹನುಮಂತನಿಗೆ, ಸೀತೆಗೆ ತಲುಪಿಸಲು ಕೊಟ್ಟ ವಸ್ತು ಯಾವುದು?
ಉತ್ತರ : ತನ್ನ ಉಂಗುರ
೨೧೨) ರಾಮನಿಗೆ ಯಾವ ವಾನರ ಮೇಲೆ ಅಪಾರವಾದ ನಂಬಿಕೆ ಇತ್ತು ?
ಉತ್ತರ : ಆಂಜನೆಯ 
೨೧೩) ಜಾಂಬವಂತ ಯಾರ ತಂಡದಲ್ಲಿ ಇದ್ದ?
ಉತ್ತರ : ಆಂಜನೆಯ
೨೧೪) ವಾಲಿಯ ಮಗ ಯಾವ ತಂಡದಲ್ಲಿದ್ದ?
ಉತ್ತರ : ಆಂಜನೆಯ
೨೧೫) ವಿಂದ್ಯ ಪರ್ವತದ ತಪ್ಪಲಿನ ಗುಹೆಯಲ್ಲಿದ್ದ ಅಪರೂಪದ ಸರೋವರ ಯಾರಿಗೆ ಸೇರಿತ್ತು?
ಉತ್ತರ : ಮಯನೆಂಬ ರಾಕ್ಷಕನಿಗೆ ಸೇರಿತ್ತು.
೨೦೬) ಸೀತೆಯನ್ನು ಹುಡುಕಲು ಎಷ್ಟು ದಿಕ್ಕುಗಳಿಗೆ ವಾನರರನ್ನು ಸುಗ್ರೀವನು ಕಳುಹಿಸಿದನು?
ಉತ್ತರ : ನಾಲ್ಕು ದಿಕ್ಕುಗಳಿಗೆ 
೨೦೭) ಪೂರ್ವದಿಕ್ಕಿಗೆ ಹೋದದ್ದು ಯಾರು?
ಉತ್ತರ :  ವಾನರರ ಮುಖ್ಯಸ್ಥ ವಿನತ
೨೦೮) ಪಶ್ಚಿಮ ದಿಕ್ಕಿಗೆ ಹೋದದ್ದು ಯಾರು?
ಉತ್ತರ : ತಾರಾಳ ತಂದೆ ಸುಷೇಣ
೨೦೯) ಉತ್ತರ ದಿಕ್ಕಿಗೆ ಹೋದದ್ದು ಯಾರು?
ಉತ್ತರ : ಶತಬಲಿ ಎಂಬ ವಾನರ ಮುಖ್ಯಸ್ಥ
೨೧೦) ದಕ್ಷಿಣ ದಿಕ್ಕೆಗೆ ಹೋದದ್ದು ಯಾರು?
ಉತ್ತರ : ಆಂಜನೆಯ
೨೧೬) ಮಯನು ಅತ್ಯಂತ ರಮಣೀಯ ಸರೋವರವನ್ನು ಹಾಗು ಉದ್ಯಾನವನ್ನು ಯಾರಿಗಾಗಿ ನಿರ್ಮಿಸಿದ್ದ?
ಉತ್ತರ: ಹೇಮಾ ಎಂಬ ಅಪ್ಸರೆ ಗಾಗಿ ( ಮಂಡೋದರಿಯ ತಾಯಿ)
೨೧೭) ಇದೀಗ ಮಯನ ಸರೋವರನ್ನು ನೋಡಿಕೊಳ್ಳುತ್ತದ್ದ ಯೋಗಿನ ಯಾರು?
ಉತ್ತರ : ಅಪ್ಸರೆ ಹೇಮಾಳ ಸಖಿಯಾದ ಸ್ವಯಂಪ್ರಭೆ
೨೧೮) ಮಾಹೇಂದ್ರ ಪರ್ವತದ ಗುಹೆಯಲ್ಲಿ ವಾನರರು ಸಂಧಿಸಿದ ವೃದ್ದ ಹದ್ದುಗಳ ರಾಜ ಯರು?
ಉತ್ತರ: ಸಂಪಾತಿ
೨೧೯) ಸಂಪಾತಿ ಯಾರ ಅಣ್ಣ ?
ಉತ್ತರ : ಜಟಾಯು
೨೨೦) ಜಟಾಯು ಹಾಗು ಸಂಪಾತಿಯು ಯಾರ ಮಕ್ಕಳು ?
ಉತ್ತರ : ಅರುಣನ ಮಕ್ಕಳು
೨೨೭) ಸುಂದರಕಾಂಡ ಅವಧಿ ಎಷ್ಟು?
ಉತ್ತರ: ಒಂದು ರಾತ್ರಿಯ ಕಥೆಯಾಗಿದೆ
೨೨೮) ಆಂಜನೇಯನಿಗೆ ಸಿದ್ದಸಿದ್ದ ಅಷ್ಟ ಮಹಾವಿದ್ಯೆಗಳು ಯಾವುವು?
ಉತ್ತರ: ಅನಿಮಾ, ಗರಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ಮತ್ತು ವಶತ್ವ
೨೨೯) ಮೈನಾಕನು ಯಾರ ಮಗ?
ಉತ್ತರ: ಹಿಮವಂತನ ಮಗ
೨೨೧) ಅರುಣ ಯಾರು?
ಉತ್ತರ : ಸೂರ್ಯನ ಸಾರಥಿ
೨೨೨) ವೃದ್ಧ ಸಂಪಾತಿಯ ಮಗ ಯಾರು?
ಉತ್ತರ: ಸುಪಾರ್ಶ್ವ
೨೨೩) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು?
ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ.
೨೨೪) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ? 
ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು.
೨೨೬) ಮಾಹೇಂದ್ರ ಪರ್ವತದಿಂದ ಲಂಕೆಗೆ ಎಷ್ಟು ದೂರವಿತ್ತು ? 
ಉತ್ತರ : 100 ಯೋಜನೆಗಳಷ್ಟು
೨೩೦) ಹಿಮವಂತನ ಮಗಳಾಗಿ ಜನಿಸಿದ್ದು ಯಾರು?
ಉತ್ತರ : ಪಾರ್ವತಿದೇವಿಯು ಹೈಮವತಿ ಎಂಬ ಹೆಸರಿನಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿದ್ದಳು 
೨೩೧) ಲಂಕೆಗೆ ಹಾರುವಾಗ ಸಾಗರದ ಮಧ್ಯೆ ಹನುಮಂತನಿಗೆ ಎದುರಾಗಿದ್ದು ಯಾರು?
ಉತ್ತರ : ಸಾಗರದೊಳಗೆ ಹುದುಗಿದ್ದ ಮೈನಾಕ ( ಪರ್ವತ)
೨೩೨) ಸರ್ಪಗಳ ತಾಯಿ ಯಾರು?
ಉತ್ತರ : ಸುರಸೆ
೨೩೩) ದೇವತೆಗಳು ರಾಮಭಕ್ತ ಹನುಮನನ್ನು ಪರೀಕ್ಷಿಸಲು ಕೇಳಿಕೊಂಡಿದ್ದು ಯಾರನ್ನು?
ಉತ್ತರ : ಸುರಸೆ
೨೩೪) ಸುರೇಸೆಯು ಹನುಮಂತನ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷಳಾದಳು?
ಉತ್ತರ : ರಾಕ್ಷಸಿಯ ರೂಪದಲ್ಲಿ
೨೩೫) ಸುರೆಸೆಯು ಹನುಮನಿಗೆ ಏನು ಹೇಳಿದಳು?
ಉತ್ತರ :ನನ್ನ ಬಾಯಿಯೊಳಗೆ ನೀನು ಬಂದು ಬಿಳಬೇಕು ಎಂದಳು.
೨೩೬) ಸುರಸೆಯಿಂದ ತಪ್ಪಿಸಿಕೊಳ್ಳಲು ಹನುಮ ಮಾಡಿದ ಉಪಾಯವೇನು?
ಉತ್ತರ : ನನ್ನ ಬಾಯಿಯೊಳಗೆ ನೀನು ಬಂದು ಬೀಳಬೇಕು ಎಂದಳು
೨೩೭) ರಾಹುವಿನ ತಾಯಿ ಯಾರು?
ಉತ್ತರ : ಸಿಂಹಿಕೆ
೨೩೮) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು?
ಉತ್ತರ ‌: ಸಿಂಹಕ್ಕೆಯನ್ನು
೨೩೯)ಸಿಂಹಿಕೆಯ ಕೆಲಸವೇನು?
ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!
೨೪೦) ನೆರಳನ್ನು ತಿಂದಾಗ ಏನಾಗುತ್ತದೆ?
ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ.
೨೪೧) ಸಿಂಹಿಕೆ ಹನುಮಾನ ನೆರಳನ್ನು ನುಂಗಿದಳೇ?
ಉತ್ತರ : ಹೌದು. ನೆರಳಿನ ಜೊತೆಗೆ ಹನುಮನು ಅವಳ ಬಾಯಿಗೆ ಬಿದ್ದ
೨೪೨) ಹನುಮನ ನುಂಗಿದ ಸಿಂಹಿಕೆಯ ಗತಿ ಏನಾಯಿತು?
ಉತ್ತರ : ಸಿಂಹಿಕೆಯ ಬಾಯಿಗೆ ಬಿದ್ದ ಹನುಮ ತೋಳ ಹೊಟ್ಟೆಯನ್ನು ಸೇರಿ ಬಲು ದೊಡ್ಡದಾಗಿ ಬೆಳೆದು ಹೊಟ್ಟೆಯನ್ನು ಸೀಳಿ ಹೊರಬಂದ
೨೪೩) ಲಂಕೆಗೆ ಬಂದ ಹನುಮ ತನ್ನ ಪಾದಗಳನ್ನು ಮೊದಲ ಬಾರಿಗೆ ಎಲ್ಲಿ ಉರಿದ?
ಉತ್ತರ : ತ್ರೀಕೂಟದ ಗಿರಿಶಿಖರದಲ್ಲಿ
೨೪೪) ಲಂಕೆಯ ಪುರ ದೇವತೆ ಯಾರು ? 
ಉತ್ತರ : ಲಂಕಿಣಿ
೨೪೫) ಹನುಮನನ್ನು ಕಂಡ ಲಂಕಿಣಿ ಯಾವ ಪ್ರಶ್ನೆ ಕೇಳಿದಳು?
ಉತ್ತರ: ಅಪ್ಪಣೆಯಿಲ್ಲದೆ ರಾತ್ರಿಯ ವೇಳೆ ಲಂಕೆಗೆ ನುಸುಳುತ್ತಿರುವ ನೀನು ಯಾರು ಎಂದಳು
೨೪೬) ಹನುಮಾನ್ ಲಂಕಿಣಿಯನ್ನು ಹೇಗೆ ಶಿಕ್ಷಿಸಿದ?
ಉತ್ತರ : ಅವಳನ್ನು ಸ್ಪರ್ಶಿಸಿದನಷ್ಟೇ ಅಷ್ಟಕ್ಕೇ ಲಂಕಿಣಿಯ ಬೆನ್ನು ಮೂಳೆ ಮುರಿದಂತಾಯಿತು.
೨೪೭) ಲಂಕಿಣಿಗೆ ಬ್ರಹ್ಮದೇವನು ಏನೆಂದು ಎಚ್ಚರಿಸಿದ್ದ?
ಉತ್ತರ: ಲಂಕೆಗೆ ವಾನರನೊಬ್ಬ ಕಾಲಿಟ್ಟ ಕ್ಷಣದಿಂದ ಲಂಕೆಯ ಅವನತಿ ಆರಂಭವಾಗುತ್ತದೆ ಎಂದು.
೨೪೮) ಲಂಕೆಯಲ್ಲಿ ಹರಿನಾಮ ಸ್ಮರಣೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರು?
ಉತ್ತರ : ವಿಭಿಷಣ
೨೪೯) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು?
ಉತ್ತರ : ಮಂಡೋದರಿ
೨೫೦) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು?
ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು.
೨೫೧) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು?
ಉತ್ತರ : ರಾವಣನ ಅಶೋಕವನ
೨೫೨) ದೇವಲೋಕದ ಅತ್ಯಂತ ಸುಂದರವಾದ ಯಾವುದು?
ಉತ್ತರ : ನಂದನವನ
೨೫೩) ನಂದನವನ ಯಾರಿಗೆ ಸೇರಿದ್ದು?
ಉತ್ತರ : ದೇವೇಂದ್ರನಿಗೆ 
೨೫೪) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು?
ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು 
೨೫೫) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು?
ಉತ್ತರ :ಬಿಳಿಯ ಬಣ್ಣದ ಹೂಗಳು  
೨೫೬) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು?
ಉತ್ತರ : ಬಿಳಿಯ ಬಣ್ಣದ ಹೂಗಳು 
೨೫೭) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ?
ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು.
೨೫೮) ಸೀತಾಮಾತೆ ಅಶೋಕವನದಲ್ಲಿ ಏನನ್ನು ಸೇವಿಸುತ್ತಿದ್ದಳು ?
ಉತ್ತರ : ಕೇವಲ ಹಾಲನ್ನವನ್ನು 
೨೫೯) ಹಾಲನ್ನವನ್ನು ಯಾರು ಕಳಿಸುತ್ತಿದ್ದರು?
ಉತ್ತರ‌: ಸ್ವತಃ ದೇವೆಂದ್ರ
೨೬೦) ಸೀತೆಯು ಹಾಲನ್ನವನ್ನು ಎಷ್ಟು ಭಾಗಮಾಡಿ ಸೇವಿಸುತ್ತಿದ್ದಳು?
ಉತ್ತರ : ರಾಮ ಹಾಗೂ ಲಕ್ಷ್ಮಣರಿಗೆ ಎರಡು ಭಾಗ ಮಾಡಿ, ಅದರಲ್ಲಿ ರಾಮನ ಪಾಲಿನ ಅರ್ಧ ಹಾಲನ್ನವನ್ನು ಮಾತ್ರ ಸೇವಿಸುತ್ತಿದ್ದಳು.
೨೬೧) ಸೀತೆಯ ಹಾಲನ್ನವನ್ನು ಭಾಗ ಮಾಡಿ  ಸೇವಿಸುವುದನ್ನು ಕಂಡ ಪಕ್ಷಿ ಯಾವುದು ?
ಉತ್ತರ: ಹದ್ದುಗಳ ರಾಜ ಸಂಪಾತಿಯ ಮಗ ಸುಪಾರ್ಶ್ವ
೨೬೨) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ?
ಉತ್ತರ: ಅಶೋಕವನದಲ್ಲಿ
೨೬೩) ಅಶೋಕವನ ಎಂದರೇನು?
ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ
೨೬೪) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು?
ಉತ್ತರ : ಶಿಂಶಪಾವೃಕ್ಷ
೨೬೫) ಸೀತಾಮಾತೇಯ ಸುತ್ತಲಿದ್ದ ರಾಕ್ಷಸಿಯರು ಯಾರು ಯಾರು?
ಉತ್ತರ : ತ್ರಿಜಟೆ,ಭೂರಿಜಟೆ, ಜಟೆ,ವಿಘಸೆ,ಅಯೋಮುಖಿ, ವಿಕಟೆ, ಚಂಡೊದರಿ,ವಿನತೆ, ಅಶ್ವಮುಖಿ.
೨೬೬) ರಕ್ಕಸಿಯರಲೆಲ್ಲಾ ಸಾಧು ಸ್ವಭಾವದ ರಕ್ಕಸಿ ಯಾರು?
ಉತ್ತರ : ತ್ರಿಜಟೆ ಎಂಬ ವೃದ್ದೆ.
೨೬೭) ಆಂಜನೇಯನು ಅಶೋಕ ವನವನ್ನು ಪ್ರವೇಶಿಸಿದ ಕೂಡಲೇ ಸೀತೆಯೊಂದಿಗೆ ಯಾಕೆ ಮಾತನಾಡಲಿಲ್ಲ?
ಉತ್ತರ : ಅವನಿಗೆ ಯಾರೋ ಬರುತ್ತಿರುವ ಸುಳಿವು ಸಿಕ್ಕಿತು.
೨೬೮) ಅಶೋಕವನಕ್ಕೆ ಆವೇಳೆ ಹೊತ್ತಿನಲ್ಲಿ ಪ್ರವೇಶಿಸಿದ್ದು ಯಾರು? ?
ಉತ್ತರ : ರಾವಣನು ಪತ್ನಿ ಸಮೇತ ಪ್ರವೇಶಿಸಿದ್ದ.
೨೬೯) ರಾವಣನನ್ನು ಕಂಡ ಆಂಜನೇಯ ಮಾಡಿದ್ದೇನು?
ಉತ್ತರ : ಅಶೋಕ ವೃಕ್ಷದ ಮೇಲೆ ಸದ್ದಿಲ್ಲದೇ ಕುಳಿತುಕೊಂಡ.
೨೭೦) ರಾವಣನು ಸಿತೆಯನ್ನು ಕಂಡು ಹೇಳಿದ್ದೆನು? 
ಉತ್ತರ : ಇನ್ನೊಂದು ತಿಂಗಳೊಳಗೆ ನನ್ನವಳಾಗದಿದ್ದರೆ ನಿನ್ನನ್ನು ಕೊಲ್ಲುವೆ ಎಂದ.
೨೭೬) ಅಚ್ಚರಿಯಿಂದ ಮರದ ಮೇಲೆ ನೋಡಿದ ಸೀತಾಮಾತೆಯ ಕಣ್ಣಿಗೆ ಕಂಡದ್ದು ಯಾರು?
ಉತ್ತರ : ಕೈಜೋಡಿಸಿ ಕುಳಿತಿದ್ದ ಗೇಣುದ್ದದ ಆಂಜನೇಯ
೨೭೭) ಸೀತಾಮಾತೆಯು ಆಂಜನೆಯನನ್ನು ಯಾರೆಂದು ತಿಳಿದಳು?
ಉತ್ತರ : ಮಾಯಾವಿ ರಾವಣನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ತಿಳಿದಳು
೨೭೮) ಹನುಮನು ತನ್ನೊಂದಿಗೆ ಸೀತಾಮತೆಯನ್ನು ಕರೆದೊಯ್ಯುವೆ ಎಂದಾಗ ಸೀತೆ ಏನು ಹೇಳಿದಳು ?
ಉತ್ತರ : ಶ್ರೀರಾಮನು ಲಂಕಾಧೀಶ ನನ್ನು ಸದೆಬಡಿದೇ ನನ್ನನ್ನು ಕೊಂಡೊಯ್ಯುವುದು ಧರ್ಮ ಎಂದಳು.
೨೭೯) ಸೀತಾಮಾತೆಗೆ ಹನುಮನು ಕೊಟ್ಟ ಆಭರಣ ಯಾವುದು?
ಉತ್ತರ : ಶ್ರೀರಾಮಚಂದ್ರನ ಮುದ್ರಾ ಉಂಗುರ
೨೮೦) ಸೀತಾಮಾತೆ ರಾಮಚಂದ್ರನಿಗೆ ಕೊಡು ಎಂದು ಹೇಳಿ ಕೊಟ್ಟ ಆಭರಣ ಯಾವುದು ?
ಉತ್ತರ : ತನ್ನ ನೆತ್ತಿಯ ಮೆಲಿದ್ದ ಚೂಡಾಮಣಿ.
೨೭೧) ರಾವಣನಿಗೆ ಸೀತೆಯ ಯಾವ ಉತ್ತರವನ್ನು ಕೊಟ್ಟಳು?
ಉತ್ತರ : ನನ್ನ ರಾಮಪ್ರಭು ಬಂದೇ ಬರುತ್ತಾನೆ. ನಿನ್ನನ್ನು ಕೊಂದು ನನ್ನನ್ನು ಕರೆದೊಯ್ಯುತ್ತಾನೆ ಎಂದಳು 
೨೭೨) ಕುಪಿತ ರಾವಣನು ನಿರ್ಗಮಿಸಿದ ನಂತರ ರಕ್ಕಸಿಯರೆಲ್ಲ ನಿದ್ರೆಗೆ ಶರಣಾದದ್ದು ಹೇಗೆ ?
ಉತ್ತರ: ನಿದ್ರಾದೇವಿಯ ಉಪಕಾರದಿಂದ ರಕ್ಕಸಿಯರಿಗೆಲ್ಲಾ ನಿದ್ರೆ ಆವರಿಸಿತು
೨೭೪) ಆಂಜನೆಯನು ಅಶೋಕವನಕ್ಕೆ ಬಂದಾಗ ಅವನ ಗಾತ್ರ ಎಷ್ಟಿತ್ತು?
ಉತ್ತರ : ಗೇಣುದ್ದ ಮಾತ್ರ 
೨೭೫) ಸೀತಾಮಾತೆಯ ಕಿವಿಗೆ ಆಂಜನೆಯನ ಯಾವ ನುಡಿಗಳು ಬಿದ್ದವು?
ಉತ್ತರ : ರಾಮನ ಬಗ್ಗೆ ಭಕ್ತಿಯಿಂದ ಯಾರೋ ಗುನುಗುತ್ತಿರುವುದು ಸೀತಾಮಾತೆಯ ಕಿವಿಗೆ ಬಿದ್ದವು.
೨೮೧) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು  ದ್ವಂಸ ಏಕೆ ಮಾಡಿದ ?
ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!
೨೮೨) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ?
ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ
೨೮೩) ಅಕ್ಷಕುಮಾರನ ಸ್ಥಿತಿ ಏನಾಯಿತು?
ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ 
೨೮೪) ರಾವಣನ ಮತ್ತೊಬ್ಬ ಮಗನ ಹೆಸರೇನು?
ಉತ್ತರ: ಇಂದ್ರಜಿತ್
೨೮೫) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು?
ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು
***

🙏 ಹರೇ ರಾಮ🙏
     ~~~~
ಅಕ್ಷರಮಾಲಾ ರಾಮಾಯಣ 
             ( ಪೂರ್ವಾರ್ಧ) 
➖➖➖➖➖➖➖➖ 
[ಅ] ಅಯೋಧ್ಯೆಯ ಅರಸನು ದಶರಥನು                         
[ಆ] ಆದರದಿಂದಗ್ನಿಯ ಸ್ತುತಿಸಿದನು |
[ಇ] ಇಹದಲಿ ಸುಖವನು ಗಳಿಸಲಿಕೆಂದು
[ಈ] ಈಪ್ಸೆಯನೆಲ್ಲವ ತೊರೆದಿಹನು |               
[ಉ] ಉದಕದಿ ಜಳಕವ ಮಾಡಿದನು                     
[ಊ] ಊಣಯವೆಲ್ಲವ ದೂಡಿದನು |              
[ಋ] ಋಷಿಗಳ ಧ್ಯಾನಿಸಿ ಸ್ತುತಿಸಿದನು                
[ೠ] ೠಕ್ಷಜ ಖಳರನು ತಿದ್ದಿದನು |                  
[ಎ] ಎಳನಗೆ ಬೀರುತ ನಮಿಸಿದನು ||                 
[ಏ] ಏಕೋಧ್ಯಾನದಿ ವ್ರತವನು ಗೈಯ್ಯುತ                        
[ಐ] ಐಚ್ಛಿಕ ವರಗಳ ಬೇಡಿದನು ||                      
[ಒ] ಒಗೆತನದಿಂದಲಿ ಕರೆಯಲು ಸತಿಯರು                        
[ಓ] ಓಲಗದೊಳಗಡೆ ಸೇರಿದರು ||                    
[ಔ] ಔರಸ ಕುವರರ ಪಡೆಯಲಿಕೆಂದು                      
[ಅಂ] ಅಂಗನೆ ತ್ರಯರು ತವಕಿಪರು ||                 
[ಅಃ] ಅಃ ಏನದು ಬಯಕೆಯು ಸತಿಯರಿಗೆ ||       
             
[ಕ] ಕರದಲಿ ಪಾಯಸ ಪಿಡಿದಿಹ ಅಗ್ನಿಯು               
[ಖ] ಖದ್ಯೋತದೊಲು ಹೊಳೆಯುತ ಬಂದಿಹನು || 
[ಗ] ಗದ್ದುಗೆ ಸನಿಹಕೆ ತಲಪುತಲವನು                         
[ಘ] ಘಳಿಲನೆ ಪಾಯಸ ನೀಡಿದನು ||                        
[ಙ] ಙಂಙಮ್ಮೆನೆ ಹುಗ್ಗಿಯ ಪರಿಮಳ     
                    
[ಚ] ಚಪ್ಪರಿಸಲೆಳಸಿದ ರಾಣಿಯರು ||                  
[ಛ] ಛದವನು ತೆರೆಯುತ ಹಿರಿಯರು ಇಬ್ಬರು               
[ಜ] ಜತನದಿ ಕುಳಿತರು ಸವಿಯಲಿಕೆ ||                   
[ಝ] ಝರಿಯೊಲು ಬಳುಕುತ ಸವತಿಯು ಬರಲು        
[ಞ] ಞಂಞಮ್ಮೆನ್ನದೆ ಹಿರಿಯರು ಪಾಲನು ನೀಡಿದರು | 

[ಟ] ಟಕ್ಕೆಯ ಹಾರಿಸಿ ಗೌರವ ಸಲ್ಲಿಸಿ                            
[ಠ] ಠಕ್ಕುಗೊಳ್ಳದೆ ಪಾಯಸವೀಂಟಿದರು ||                    
[ಡ] ಡಗೆಯನು ಮರೆಯುತ ಹಿಗ್ಗಿದರು ||                        
[ಢ] ಢಕ್ಕೆಯ ಬಾರಿಸಿ ಸಂತಸದಿಂದಲಿ
[ಣ] ಣಣಮಣ ಮಂತ್ರವ ಜಪಿಸಿದರು ||       
                 
[ತ] ತವಕದಿ ತನಯರ ಪಡೆಯಲಿಕೋಸುಗ              
[ಥ] ಥಟ್ಟನೆ ಗರ್ಭವ ಧರಿಸಿದರು ||                       
[ದ] ದಣಿವನು ಮರೆಯುತ ಗುರುಗಳ ನಮಿಸಲು 
[ಧ] ಧರೆಯೊಳು ತುಂಬಿತು ಬಲು ಸುಗ್ಗಿ ||                  
[ನ] ನವಮಾಸದಿ ನಳನಳಿಸಿದ ಗರ್ಭವು       
                  
[ಪ] ಪತಿಯಲಿ ಸಂತಸ ಉಕ್ಕಿಸಿತು ||[                    
[ಫ] ಫಲಿತವು ದೊರಕಿತು ಮಕ್ಕಳ ರೂಪದಿ 
[ಬ] ಬಣ್ಣಿಸಲಸದಳವೀ ನಾಲ್ವರನು ||                     
[ಭ] ಭಗವಂತ ರಾಮನು ಕೌಸಲ್ಯಾಸುತನು 
[ಮ] ಮಗನವ ಭರತನು ಕೇಕಯ ಸುತೆಗೆ || 

[ಯ] ಯಮಳರು ಲಕ್ಷ್ಮಣ ಶತ್ರುಘ್ನರೆನ್ನುವ 
[ರ] ರತ್ನದ್ವಯರೇ ಸುಮಿತ್ರಾ ಸುತರು ||                        
[ಲ] ಲಕ್ಷಣವಾಗಿ ವಿದ್ಯೆಯ ಕಲಿಯುತ                    
[ವ] ವರರಾದರು ಸೀತಾ ಮಾಂಡವಿಯೂರ್ಮಿಳೆ ಶ್ರುತಕೀರ್ತಿಯರಿಗೆ |
[ಶ] ಶಬರಿಯ ದರ್ಶನವಾಯಿತು ವನದೊಳು                     
[ಷ] ಷರತ್ತನು ಪಾಲಿಸೆ ವಿಪಿನವ ಹೊಕ್ಕಿರಲು || 
[ಸ] ಸತ್ಕಥೆ ಮುಂದಿದೆ ಸೀತಾರಾಮನ            
[ಹ] ಹರಿಯವತಾರದ ರಾಮಾಯಣವು || 
[ಳ] ಲವ ಕುಶ ಕುವರರು ಹಾಡಿದ ವೇದವಿದು || 
              
      🙏 ಶ್ರೀ ಸೀತಾರಾಮಚಂದ್ರಾರ್ಪಣಮಸ್ತು 🙏
ವಿ.ಸೂ:- ಇಲ್ಲಿಗೆ ಅಕ್ಷರಮಾಲಾ ರಾಮಾಯಣ ದ ಪೂರ್ವಾರ್ಧವು ಮುಕ್ತಾಯವಾಯಿತು.
✍🏼 ರಚನೆ :-
          ವಿ.ಬಿ.ಕುಳಮರ್ವ, ಕುಂಬ್ಳೆ 🙏
***

ramayana - 14000 years ago?



No comments:

Post a Comment