unique way to avoid dialysis
check from 3.21 miinutes
verify before administering
ಮೂತ್ರಪಿಂಡದಲ್ಲಿ ಕಲ್ಲುಗಳು (ಕಿಡ್ನಿ ಸ್ಟೋನ್) ಬರಲು ಕಾರಣಗಳು ಮತ್ತು ಅದಕ್ಕೆ ಆಯುರ್ವೇದದ ಪರಿಹಾರೋಪಾಯಗಳು.
ಮೂತ್ರಪಿಂಡಗಳು ಎರಡು ಹುರುಳಿ ಆಕಾರದ ಅಂಗಗಳಾಗಿವೆ, ಪ್ರತಿಯೊಂದೂ ನಮ್ಮ ಮುಷ್ಟಿಯ ಗಾತ್ರದಲ್ಲಿ ಇರುತ್ತವೆ. ಅವು ಪಕ್ಕೆಲುಬಿನ ಕೆಳಗೆ, ನಿಮ್ಮ ಬೆನ್ನುಮೂಳೆಯ ಏರಡೂ ಬದಿಯಲ್ಲಿವೆ.
ಆರೋಗ್ಯಕರ ಮೂತ್ರಪಿಂಡಗಳು ಪ್ರತಿ ನಿಮಿಷಕ್ಕೆ ಅರ್ಧ ಕಪ್ ರಕ್ತವನ್ನು ಫಿಲ್ಟರ್ ಮಾಡುತ್ತವೆ, ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ತೆಗೆದುಹಾಕುತ್ತವೆ. ಮೂತ್ರಪಿಂಡದಿಂದ ಮೂತ್ರಕೋಶಕ್ಕೆ ಎರಡು ತೆಳುವಾದ ಕೊಳವೆಗಳ ಮೂಲಕ ಮೂತ್ರವು ಹರಿಯುತ್ತದೆ ಮತ್ತು ನಿಮ್ಮ urinary bladder ನಲ್ಲಿ ಮೂತ್ರವು ಸಂಗ್ರಹವಾಗುತ್ತದೆ. ನಿಮ್ಮ ಮೂತ್ರಪಿಂಡಗಳು, ಮೂತ್ರನಾಳಗಳು ಮತ್ತು urinary bladder ನಮ್ಮ ಮೂತ್ರಜನಕಾಂಗದ ಭಾಗಗಳಾಗಿವೆ .
ಮೂತ್ರಪಿಂಡದ ಕಲ್ಲುಗಳಿಗೆ ಕಾರಣಗಳು
ಮೂತ್ರಪಿಂಡದ ಕಲ್ಲುಗಳಿಗೆ ಯಾವುದೇ ನಿರ್ದಿಷ್ಟ, ಒಂದೇ ಕಾರಣವಿಲ್ಲ, ಆದರೂ ಹಲವಾರು ಅಂಶಗಳು ಅದರ ಅಪಾಯವನ್ನು ಹೆಚ್ಚಿಸಬಹುದು.
ನಿಮ್ಮ ಮೂತ್ರದಲ್ಲಿ ಹೆಚ್ಚು ಸ್ಫಟಿಕ-ರೂಪಿಸುವ ಪದಾರ್ಥಗಳಾದ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲವನ್ನು ಹೊಂದಿರುವಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ - ನಿಮ್ಮ ಮೂತ್ರದಲ್ಲಿ ದ್ರವವು ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವಾಗ . ಈ ಸಮಯದಲ್ಲಿ, ನಿಮ್ಮ ಮೂತ್ರದಲ್ಲಿ ಹರಳುಗಳು ಒಟ್ಟಿಗೆ ಅಂಟಿಕೊಳ್ಳದಂತೆ ತಡೆಯುವ ವಸ್ತುಗಳು ಇಲ್ಲದಿರಬಹುದು, ಆಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳಲು ಸೂಕ್ತವಾದ ವಾತಾವರಣ ಸೃಷ್ಟಿ ಯಾಗುತ್ತದೆ.
ಅಪಾಯಕಾರಿ ಅಂಶಗಳು
ಮೂತ್ರಪಿಂಡದ ಕಲ್ಲುಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುವ ಅಂಶಗಳು:
ಕುಟುಂಬ ಅಥವಾ ವೈಯಕ್ತಿಕ ಇತಿಹಾಸ.
ನಿಮ್ಮ ಕುಟುಂಬದಲ್ಲಿ ಯಾರಾದರೂ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದರೆ, ನಿಮಗೂ ಆ ಸಮಸ್ಯೆ ಬರುವ ಸಾಧ್ಯತೆಯಿದೆ. ನೀವು ಈಗಾಗಲೇ ಒಂದು ಅಥವಾ ಹೆಚ್ಚಿನ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದರೆ, ನೀವು ಇನ್ನೊಂದನ್ನು ಹೊಂದುವ ಅಪಾಯವಿದೆ.
ನಿರ್ಜಲೀಕರಣ.
ಪ್ರತಿದಿನ ಸಾಕಷ್ಟು ನೀರು ಕುಡಿಯದಿರುವುದು ನಿಮ್ಮ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಬಿಸಿಲಿನ , ಶುಷ್ಕ ಹವಾಮಾನದಲ್ಲಿ ವಾಸಿಸುವ ಜನರು ಮತ್ತು ಹೆಚ್ಚು ಬೆವರುವವರು ಇತರರಿಗಿಂತ ಹೆಚ್ಚಿನ ಅಪಾಯವನ್ನು ಹೊಂದಿರಬಹುದು.
ಕೆಲವು ಆಹಾರಕ್ರಮಗಳು.
ಪ್ರೋಟೀನ್, ಸೋಡಿಯಂ (ಉಪ್ಪು) ಮತ್ತು ಸಕ್ಕರೆ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಕೆಲವು ರೀತಿಯ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು. ವಿಶೇಷವಾಗಿ ಹೆಚ್ಚಿನ ಸೋಡಿಯಂ ಆಹಾರದೊಂದಿಗೆ ಇದು ಹೆಚ್ಚು. ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ನಿಮ್ಮ ಮೂತ್ರಪಿಂಡಗಳು ಫಿಲ್ಟರ್ ಮಾಡಬೇಕಾದ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಬೊಜ್ಜು.
ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ), ದೊಡ್ಡ ಸೊಂಟದ ಗಾತ್ರ ಮತ್ತು ತೂಕ ಹೆಚ್ಚಾಗುವುದು ಮೂತ್ರಪಿಂಡದ ಕಲ್ಲುಗಳ ಅಪಾಯಕ್ಕೆ ಸಂಬಂಧಿಸಿದೆ.
ಜೀರ್ಣಕಾರಿ ಕಾಯಿಲೆಗಳು ಮತ್ತು ಶಸ್ತ್ರಚಿಕಿತ್ಸೆ. ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆ, ಉರಿಯೂತದ ಕರುಳಿನ ಕಾಯಿಲೆ ಅಥವಾ ದೀರ್ಘಕಾಲದ ಅತಿಸಾರವು ಜೀರ್ಣಕಾರಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದು, ಅದು ನಿಮ್ಮ ಕ್ಯಾಲ್ಸಿಯಂ ಮತ್ತು ನೀರನ್ನು ಹೀರಿಕೊಳ್ಳುವುದರ ಮೇಲೆ ಪರಿಣಾಮ ಬೀರುತ್ತದೆ, ನಿಮ್ಮ ಮೂತ್ರದಲ್ಲಿ ಕಲ್ಲು ರೂಪಿಸುವ ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.
ಇತರ ವೈದ್ಯಕೀಯ ಪರಿಸ್ಥಿತಿಗಳು
ಮೂತ್ರಪಿಂಡದ ಕೊಳವೆಯಾಕಾರದ ಆಸಿಡೋಸಿಸ್, ಸಿಸ್ಟಿನೂರಿಯಾ, ಹೈಪರ್‌ಪ್ಯಾರಥೈರಾಯ್ಡಿಸಮ್ ಮತ್ತು ಪುನರಾವರ್ತಿತ ಮೂತ್ರದ ಸೋಂಕುಗಳು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.
ವಿಟಮಿನ್ ಸಿ, ಆಹಾರ ಪೂರಕ, ವಿರೇಚಕಗಳು (ಅತಿಯಾಗಿ ಬಳಸಿದಾಗ), ಕ್ಯಾಲ್ಸಿಯಂ ಆಧಾರಿತ ಆಂಟಾಸಿಡ್ಗಳು ಮತ್ತು ಮೈಗ್ರೇನ್ ಅಥವಾ ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸುವ ಕೆಲವು ಔಷಧಿಗಳಿಂದ ನಿಮ್ಮ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.
ಮೂತ್ರಪಿಂಡದ ಕಲ್ಲುಗಳನ್ನು ನೈಸರ್ಗಿಕವಾಗಿ ತಡೆಯುವುದು ಹೇಗೆ
ನಿಮ್ಮ ಪ್ರಸ್ತುತ ಆಹಾರ ಮತ್ತು ಪೌಷ್ಠಿಕಾಂಶ ಯೋಜನೆಗೆ ಸಣ್ಣ ಹೊಂದಾಣಿಕೆಗಳನ್ನು ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಬಹುದು.
1. ಹೈಡ್ರೀಕರಿಸದಂತೆ ಇರಿ
ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಹೆಚ್ಚು ನೀರು ಕುಡಿಯುವುದು ಉತ್ತಮ ಮಾರ್ಗವಾಗಿದೆ. ನೀವು ಸಾಕಷ್ಟು ನೀರು ಕುಡಿಯದಿದ್ದರೆ, ನಿಮ್ಮ ಮೂತ್ರದ ಉತ್ಪತ್ತಿ ಕಡಿಮೆ ಇರುತ್ತದೆ. ಕಡಿಮೆ ಮೂತ್ರದ ಉತ್ಪಾದನೆ ಎಂದರೆ ನಿಮ್ಮ ಮೂತ್ರವು ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಮತ್ತು ಕಲ್ಲುಗಳಿಗೆ ಕಾರಣವಾಗುವ ಮೂತ್ರದ ಲವಣಗಳನ್ನು ಕರಗಿಸುವ ಸಾಧ್ಯತೆ ಕಡಿಮೆ.
2. ಹೆಚ್ಚು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಿ,
ಮೂತ್ರಪಿಂಡದ ಕಲ್ಲಿನ ಸಾಮಾನ್ಯ ವಿಧವೆಂದರೆ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲು, ಇದು ಕ್ಯಾಲ್ಸಿಯಂ ತಿನ್ನುವುದನ್ನು ತಪ್ಪಿಸಬೇಕು ಎಂದು ಅನೇಕ ಜನರು ನಂಬುವಂತೆ ಮಾಡುತ್ತದೆ. ಇದಕ್ಕೆ ವಿರುದ್ಧವಾದದ್ದನ್ನು ಮಾಡಬೇಕು. ಕಡಿಮೆ ಕ್ಯಾಲ್ಸಿಯಂ ಆಹಾರವು ನಿಮ್ಮ ಮೂತ್ರಪಿಂಡದ ಕಲ್ಲಿನ ಅಪಾಯ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ, ಇದರರ್ಥ ಕ್ಯಾಲ್ಸಿಯಂ ಪೂರಕಗಳನ್ನು ನೇರವಾಗಿ ತೆಗೆದುಕೊಳ್ಳಬೇಡಿ ಮತ್ತು ಕ್ಯಾಲ್ಸಿಯಂ ಭರಿತ ಆಹಾರಗಳ ಮೂಲಕ ಕ್ಯಾಲ್ಸಿಯಂ ತೆಗೆದುಕೊಳ್ಳಬೇಕು ಎಂದು.
3. ಕಡಿಮೆ ಸೋಡಿಯಂ ಸೇವಿಸಿ
ಹೆಚ್ಚಿನ ಉಪ್ಪು ಆಹಾರವು ನಿಮ್ಮ ಕ್ಯಾಲ್ಸಿಯಂ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಮೂತ್ರಜನಕಾಂಗ ಶಾಸ್ತ್ರ ಆರೈಕೆ ಪ್ರತಿಷ್ಠಾನದ ಪ್ರಕಾರ, ಮೂತ್ರದಲ್ಲಿ ಹೆಚ್ಚು ಉಪ್ಪು ಕ್ಯಾಲ್ಸಿಯಂ ಅನ್ನು ಮೂತ್ರದಿಂದ ರಕ್ತಕ್ಕೆ ಮರುಹೀರಿಕೊಳ್ಳದಂತೆ ತಡೆಯುತ್ತದೆ. ಇದು ಹೆಚ್ಚಿನ ಮೂತ್ರದ ಕ್ಯಾಲ್ಸಿಯಂಗೆ ಕಾರಣವಾಗುತ್ತದೆ, ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
4. ಕಡಿಮೆ ಆಕ್ಸಲೇಟ್ ಭರಿತ ಆಹಾರವನ್ನು ಸೇವಿಸಿ,
ಕೆಲವು ಮೂತ್ರಪಿಂಡದ ಕಲ್ಲುಗಳನ್ನು ಆಕ್ಸಲೇಟ್‌ನಿಂದ ತಯಾರಿಸಲಾಗುತ್ತದೆ, ಇದು ನೈಸರ್ಗಿಕ ಸಂಯುಕ್ತವಾಗಿದ್ದು, ಮೂತ್ರದಲ್ಲಿ ಕ್ಯಾಲ್ಸಿಯಂನೊಂದಿಗೆ ಬಂಧಿಸಿ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತದೆ. ಆಕ್ಸಲೇಟ್ ಭರಿತ ಆಹಾರವನ್ನು ಸೀಮಿತಗೊಳಿಸುವುದರಿಂದ ಕಲ್ಲುಗಳು ರೂಪುಗೊಳ್ಳುವುದನ್ನು ತಡೆಯಬಹುದು.
ಆಕ್ಸಲೇಟ್‌ಗಳು ಅಧಿಕವಾಗಿರುವ ಆಹಾರಗಳು:
ಸೊಪ್ಪು
ಚಾಕೊಲೇಟ್
ಸಿಹಿ ಆಲೂಗಡ್ಡೆ
ಕಾಫಿ
ಬೀಟ್ಗೆಡ್ಡೆಗಳು
ಕಡಲೆಕಾಯಿ
ವಿರೇಚಕ
ಸೋಯಾ ಉತ್ಪನ್ನಗಳು
ಗೋಧಿ ಹಿಟ್ಟು
5. ಕಡಿಮೆ ಪ್ರಾಣಿ ಪ್ರೋಟೀನ್ ಸೇವಿಸಿ(ಮಾಂಸಾಹಾರ)
ಪ್ರಾಣಿ ಪ್ರೋಟೀನ್ ಅಧಿಕವಾಗಿರುವ ಆಹಾರಗಳು ಆಮ್ಲೀಯವಾಗಿದ್ದು ಮೂತ್ರದ ಆಮ್ಲವನ್ನು ಹೆಚ್ಚಿಸಬಹುದು. ಅಧಿಕ ಮೂತ್ರ ಆಮ್ಲವು ಯೂರಿಕ್ ಆಮ್ಲ ಮತ್ತು ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
ನೀವು ಇವುಗಳನ್ನು ಮಿತಿಗೊಳಿಸಲು ಅಥವಾ ತಪ್ಪಿಸಲು ಪ್ರಯತ್ನಿಸಬೇಕು:
ಗೋಮಾಂಸ
ಕೋಳಿ
ಮೀನು
ಹಂದಿಮಾಂಸ
6. ವಿಟಮಿನ್ ಸಿ tablets ತೆಗೆದುಕೊಳ್ಳುವುದನ್ನು ತಪ್ಪಿಸಿ
ವಿಟಮಿನ್ ಸಿ (ಆಸ್ಕೋರ್ಬಿಕ್ ಆಮ್ಲ) ಪೂರಕವು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಪುರುಷರಲ್ಲಿ.
2013 ರ ಒಂದು ಅಧ್ಯಯನದ ಟ್ರಸ್ಟೆಡ್ ಮೂಲದ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಪೂರಕಗಳನ್ನು ತೆಗೆದುಕೊಂಡ ಪುರುಷರು ಮೂತ್ರಪಿಂಡದ ಕಲ್ಲು ರೂಪಿಸುವ ಅಪಾಯವನ್ನು ದ್ವಿಗುಣಗೊಳಿಸಿದ್ದಾರೆ. ಆದರೆ ಆಹಾರದಿಂದ ತೆಗೆದುಕೊಂಡ ವಿಟಮಿನ್ ಸಿ ಅದೇ ಅಪಾಯವನ್ನು ಹೊಂದಿದೆ ಎಂದು ಸಂಶೋಧಕರು ನಂಬುವುದಿಲ್ಲ.
7. ಗಿಡಮೂಲಿಕೆಗಳಿಂದ ಪರಿಹಾರವನ್ನು ಪಡೆಯಬಹುದು
ಆಯುರ್ವೇದವು ಸಾವಿರಾರು ವರ್ಷಗಳಿಂದ ಮನುಷ್ಯನ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ಹೊಂದಿಸಿದೆ, ಕೆಲವು ಗಿಡಮೂಲಿಕೆಗಳು ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡಲು ತಮ್ಮ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿವೆ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ ಅವುಗಳಲ್ಲಿ ಮುಖ್ಯವಾಗಿ ಪನಾರ್ನವ, ಗೋಖ್ರು ಮತ್ತು ತ್ರಿಫಲವನ್ನು ಹೆಸರಿಸಬಹುದು
ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಒಂದೊಂದಾಗಿ ಚರ್ಚಿಸೋಣ
ಪುನರ್ನವ
ಪುನರ್ನವ ನೆಫ್ರೊಪ್ರೊಟೆಕ್ಟಿವ್ ಆಗಿದೆ; ಇದು ರಕ್ತದಲ್ಲಿನ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ. ಇದರ ಜೊತೆಗೆ, ಅದರ ಲಿಥೊಟ್ರಿಪ್ಟಿಕ್ ಕ್ರಿಯೆಯಿಂದಾಗಿ, ಇದು ಮೂತ್ರಪಿಂಡದ ಕಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗೋಖ್ರು
ಇದು ಮೂತ್ರವರ್ಧಕ, ಲಿಥೊಟ್ರಿಪ್ಟಿಕ್, ಉರಿಯೂತದ ಮತ್ತು ನೋವು ನಿವಾರಕ ಕ್ರಿಯೆಯನ್ನು ಹೊಂದಿದೆ. ಇದು ಕಲ್ಲುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ಅವುಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಇದು ದ್ರವ ಮಿತಿಮೀರಿದ, ಡಿಸುರಿಯಾ, ಹೆಮಟುರಿಯಾ ಮತ್ತು ಶಾಖದ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ಮೂತ್ರಪಿಂಡಗಳಲ್ಲಿ ಕಲ್ಲು ಮರುಕಳಿಸುವುದನ್ನು ತಡೆಯುತ್ತದೆ.
ತ್ರಿಫಲಾ
ತ್ರಿಫಲವು ಪ್ರಸಿದ್ಧ ಆಯುರ್ವೇದ ರಾಸಾಯನ ಸೂತ್ರೀಕರಣವಾಗಿದ್ದು, ಇದನ್ನು ವಾಟಾ, ಪಿತ್ತ ಮತ್ತು ಕಫಗಳ ಸಮತೋಲನಕ್ಕೆ ಸೂಚಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಇದನ್ನು ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
ಈ ಮೂರೂ ಗಿಡಮೂಲಿಕೆಗಳು kidney care ಕ್ಯಾಪ್ಸುಲ್‌ಗಳಲ್ಲಿವೆ , kidney care capsules ಗಳು 100% ಸುರಕ್ಷಿತ ಮತ್ತು ನೈಸರ್ಗಿಕವಾಗಿದೆ, kidney care capsules ಗಳು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಲ್ಲುಗಳನ್ನು ಸಣ್ಣ ಭಾಗಗಳಾಗಿ ಒಡೆಯುತ್ತದೆ ಮತ್ತು ಮೂತ್ರದ ಮೂಲಕ ಸರಾಗವಾಗಿ ಮತ್ತು ಪರಿಣಾಮಕಾರಿಯಾಗಿ ಹೊರಹಾಕುತ್ತವೆ. ಈ ಕ್ಯಾಪ್ಸೂಲ್ ಗಳು ಮೂತ್ರಪಿಂಡದ ಕಾಯಿಲೆಗಳಿಂದ ನೋವುರಹಿತ ಮತ್ತು ಸುರಕ್ಷಿತ ರೀತಿಯಲ್ಲಿ ಪರಿಹಾರವನ್ನು ಖಾತ್ರಿಪಡಿಸುತ್ತದೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಲಕ್ಷಣಗಳಿಂದ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ ಮತ್ತು ನಿಯಮಿತ ಬಳಕೆಯ ಮೂಲಕ ದೀರ್ಘಕಾಲೀನ ಕಿಡ್ನಿ ಗಳ ಆರೋಗ್ಯ ಸುಧಾರಣೆಗಳನ್ನು ಸಹ ನೀಡುತ್ತವೆ.
ಈ ಔಷಧಿ ಆಯುರ್ವೇದ ದ ಅಂಗಡಿಗಳಲ್ಲಿ ದೊರೆಯುತ್ತದೆ
***
ಕಿಡ್ನಿಯಲ್ಲಿನ ಕಲ್ಲುಕರಗಿಸಲು ಬಾಳೆದಿಂಡಿನ ಪಲ್ಯ ತಿನ್ನಿ!!!
ಆಹಾರದಲ್ಲಿನ ಭಿನ್ನತೆಯಿಂದ ಇಂದು ಕಿಡ್ನಿಯಲ್ಲಿ ಕಲ್ಲುಗಳಾಗುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಈ ಸಮಸ್ಯೆಯಿಂದ ಸಾಕಷ್ಟು ನೋವನ್ನ ಅನುಭವಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳಿಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಮಾಡಿದ ಮನೆಮದ್ದುಗಳು ನಿರೀಕ್ಷಿತ ಫಲಿತಾಂಶ ನೀಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಬಾಳೆತಿಂಡಿನ ಪಲ್ಯ ಸೂಕ್ತ ಮನೆಮದ್ದು.
ಬಾಳೆತಿಂಡಿನ ಪಲ್ಯಕ್ಕೆ ಬೇಕಾದ ಪದಾರ್ಥಗಳು: ಬಾಳೆ ತಿಂಡು,ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು, ಸಾಸಿವೆ, ಕಡ್ಲೆಬೇಳೆ, ಉಪ್ಪು, ಹಸಿ ಕಾಯಿತುರಿ, ಎಣ್ಣೆ, ಅರಿಸಿಣಪುಡಿ. ಕೊತ್ತಂಬರಿ
ಬಾಳೆತಿಂಡಿನ ಪಲ್ಯ ಮಾಡುವ ವಿಧಾನ:ಮೊದಲಿಗೆ ಬಾಳೆದಿಂಡಿನ ತಿರುಳುಗಳನ್ನ ತೆಗೆದು ದಿಂಡನ್ನು ವೃತ್ತಾಕಾರಕ್ಕೆ ಬರುವಂತೆ ಕಟ್ ಮಾಡಿ ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಬಾಣಲೆಗೆ ಒಂದು ಟೇಬಲ್ ಸ್ಪೊನ್ ನಷ್ಟು ಎಣ್ಣೆ , ಒಂದು ಸ್ಪೂನ್ ಸಾಸಿವೆ, ಒಂದು ಬೌಲ್ ಕಡ್ಲೆಬೇಳೆ, ಕಟ್ ಮಾಡಿದ ಎರಡು ಮೆಣಸಿನಕಾಯಿ, ಕರಿಬೇವು , ಕಟ್ ಮಾಡಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಅದು ಕಂದು ಬಣ್ಣಕ್ಕೆ ಬಂದ ಮೇಲೆ ಕಟ್ ಮಾಡಿದ ಬಾಳೆದಿಂಡನ್ನು ಹಾಕಿ 15 ನಿಮಿಷ ಬೇಯಲು ಬಿಡಿ. ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು , 2 ಸ್ಪೂನ್ ಅರಿಸಿಣಪುಡಿ, ಕಾಯಿತುರಿ, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿದರೆ ಬಾಳೆದಿಂಡಿನ ಪಲ್ಯ ಸಿದ್ದ. ಹೀಗೆ ತಯಾರಿಸಿದ ಪಲ್ಯ ವನ್ನು ವಾರಕ್ಕೆ ಎರಡು ಬಾರಿ ತಿಂದರೆ ಕಿಡ್ನಿ ಯಲ್ಲಿನ ಕಲ್ಲುಗಳು ಕರಗಿ ಸಮಸ್ಯೆ ನಿವಾರಣೆ ಆಗುತ್ತದೆ.
***
ಮೂತ್ರಕೋಶದ ಕಲ್ಲೂ! ಕೆಸವೆ ದಂಟೂ!!
ಐದಾರು ವರ್ಷಗಳ ಹಿಂದಿನ ಮಾತು.ಆತ ನನ್ನ ನೆರೆಯೂರಿನವ, ತುಮಕೂರಿನ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತಿದ್ದನು. ಹೀಗೆ ಒಮ್ಮೆ ರಸ್ತೆಯಲ್ಲಿ ಸಿಕ್ಕು ನಮಸ್ಕಾರ ಹೇಳಿ ನೋವಿನಿಂದ ಬಳಲಿದವನಂತೆ ಕಂಡನು. ನಾನು ಅವನ ಬಳಲಿಕೆಗೆ ಕಾರಣ ಕೇಳಲು
' ಮೂತ್ರಕೋಶದಲ್ಲಿ ಕಲ್ಲಾಗಿದ್ದು ತುಂಬಾ ನೋಯುತ್ತಿದೆ ಸಾರ್' ಎಂದನು. ಡಾಕ್ಟ್ರ ಹತ್ತಿರ ಹೋಗಲಿಲ್ವೆ ಎಂದು ಕೇಳಿದ್ದಕ್ಕೆ ಹೋಗಿದ್ದೆ ಸಾರ್ ಅವರು ಆಪರೇಶನ್ ಮಾಡಬೇಕಿದೆ, ಹದಿನೈದು ಸಾವಿರ ದುಡ್ಡು ಹೊಂದಿಸಿಕೊಂಡು ನಾಡಿದ್ದು ಬರಲು ಹೇಳೀದ್ದಾರೆಂದನು.ಈಗ ಎಲ್ಲಿಗೆ ಹೊರಟಿದ್ದೀಯಾ? ಎಂದಿದ್ದಕ್ಕೆ 'ಹಣ ಹೊಂದಿಸಲು ಊರಿಗೆ ಹೊರಟಿದ್ದೀನಿ ಸಾರ್ ' ಎಂದನು.
ನಾನು 'ಸರಿ, ನಿನ್ನ ಊರಿಗೆ ಹೋಗುವ ಮುನ್ನ ನಮ್ಮ ಊರಿನ ಸಾರ್ವಜನಿಕ ನೀರಿನ ತೊಟ್ಟಿಯ ಬಳಿ ಹೋಗಿ ಅಲ್ಲಿ ಹೇರಳವಾಗಿ ಕೆಸವೆ ಬೆಳೆದಿದ್ದು ಒಂದು ಹೊರೆಯಷ್ಟು ಕೆಸವೆ ದಂಟನ್ನು ಕೊಯ್ದು ಮನೆಗೆ ಒಯ್ದು ಈ ಮದ್ಯಾಹ್ನದ ಮುದ್ದೆ ಊಟಕ್ಕೆ ಇದರಿಂದಲೇ ಚಟ್ನಿಮಾಡಿ ತಿನ್ನು, ಅನ್ನವನ್ನೂ ಅದರಲ್ಲೇ ತಿನ್ನು, ರಾತ್ರಿಯ ಊಟ, ನಾಳೆ ಬೆಳಿಗ್ಗೆಯ ತಿಂಡಿಗೆ ರೊಟ್ಟಿ ಮಾಡಿಸಿಕೊಂಡು ಇದೇ ಕೆಸವೆಯ ಚಟ್ನಿಯೊಂದಿಗೆ ತಿನ್ನು ಮತ್ತು ಆನಂತರದ ನೀನು ವಿಸರ್ಜಿಸುವ ಮೂತ್ರವನ್ನು ಸಂಗ್ರಹಿಸಿಕೊಂಡು ಪರಿಶೀಲಿಸಿ ನೋಡುತ್ತಿರು. ಇದನ್ನು ನೀನು ತುಮಕೂರಿಗೆ ವಾಪಾಸ್ಸಾಗುವ ಸೋಮವಾರದವರೆಗೂ ಮಾಡುತ್ತಿರು, ಆಮೇಲೆ ನಿನ್ನ ಆಪರೇಶನ್ ಅನ್ನು ತೀರ್ಮಾನಿಸುವೆಯಂತೆ' ಎಂದು ಹೇಳಿದೆನು.
ಅವನು ನಾನು ಹೇಳಿದಂತೆಯೇ ನಿಷ್ಟನಾಗಿ ಎಲ್ಲಾ ಮಾಡಿದ್ದಾನೆ, ಎರಡನೆಯ ದಿನಕ್ಕೆ ಅವನು ವಿಸರ್ಜಿಸಿದ ಮೂತ್ರದಲ್ಲಿ ಹೊರಬಂದಿದ್ದ ಕಲ್ಲಿನ ಹರಳುಗಳನ್ನು ಕಂಡು ಖುಶಿಗೊಂಡು ಮತ್ತು ನೋವಿನ ಬಾಧೆಯೂ ಕಡಿಮೆಯಾಗಿದ್ದನ್ನು ಫೋನ್ ಮಾಡಿ ತಿಳಿಸಿದನು. ನಾಳೆಯೂ ಊರಲ್ಲಿಯೇ ಇದ್ದು ಇದೇ ಆಹಾರವನ್ನು ಮುಂದುವರೆಸಲು ಸೂಚಿಸಿದೆ. ಹಾಗೆಯೇ ಮಾಡಿದ ಅವನು ಮಂಗಳವಾರ ಸೀದಾ ನರ್ಸಿಂಗ್ ಹೋಮಿಗೆ ಹೋಗಿ ಡಾಕ್ಟರರಿಗೆ ಪ್ಲಾಸ್ಟಿಕ್ ಕವರ್ ನಲ್ಲಿ ಸಂಗ್ರಹಿಸಿ ತಂದಿದ್ದ ಎರಡು ಮೂರು ಎಮ್ಎಮ್ ಗಾತ್ರದ ಹತ್ತಾರು ಹರಳುಗಳನ್ನು ತೋರಿಸಿದ್ದಾನೆ! ಪರಿಶೀಲಿಸಿದ ಡಾಕ್ಟರರು ಈಗ ನೋವಿದೆಯಾ ಎಂದು ಕೇಳಿದ್ಧಾರೆ. ಇವನು ಇಲ್ಲಾ ಸಾರ್ ಒಂದಿಷ್ಟೂ ನೋವಿಲ್ಲ ಎಂದು ಹೇಳಿ ತಾನು ಮಾಡಿಕೊಂಡು ಔಷಧೋಪಚಾರವನ್ನು ಹೇಳಿಕೊಂಡಿದ್ದಾನೆ. ಡಾಕ್ಟರರು ' ಹೋಗು ಹೋಗು, ಅಂತೂ ಹದಿನೈದು ಸಾವಿರ ಉಳಿಸಿಕೊಂಡು ಬಿಟ್ಟೆ ನೋಡು! ಆಪರೇಶನ್ನೂ ಬೇಡ, ಔಷಧಿಯೂ ಬೇಡ ಬಿಡು' ಎಂದು ಹೇಳಿ ಕಳುಹಿಸಿದ್ದಾರೆ.
ಅಲ್ಲಿಂದ ಹೊರಟವನು ನನ್ನಲ್ಲಿಗೆ ಬಂದು ಎಲ್ಲವನ್ನೂ ವಿವರಿಸಿ ಕೃತಜ್ಞತೆಗಳನ್ನು ಹೇಳಿದನು.
'ಯಾವಾಗಲೂ ಅತಿಯಾದ ಬಿಸಿಯಿರುವ ದೊಡ್ಡ ಒಲೆಯ ಮುಂದೆ ಅಡುಗೆ ಮಾಡುವ ಬಾಣಸಿಗರಿಗೆ ಅವರ ದೇಹದ ನೀರಿನಂಶ ಆವಿಯಾಗುತ್ತದೆ ಆಗ ಪದೇ ಪದೇ ನೀರು ಕುಡಿಯದಿದ್ದರೆ ದೇಹಕ್ಕೆ ನೀರಿನ ಕೊರತೆಯಾಗಿ ಮೂತ್ರಕೋಶದ ಹರಳಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ' ಆದ್ದರಿಂದ
'ಬೇರೆ ಯಾರಿಗಾದರೂ ಹೀಗಾದಾಗ ಇದೇ ಮದ್ದನ್ನು ಹೇಳಿಬಿಡು ಸಾಕು' ಎಂದು ಹೇಳಿದ್ದಕ್ಕೆ' ಖಂಡಿತಾ ಹೇಳ್ತೀನಿ ಸಾರ್' ಎನ್ನುತ್ತಾ ಖುಶಿಯಿಂದ ವಿರಮಿಸಿದನು.
ನಮ್ಮ ಲಿಂಗಾಯ್ತ ಸಮುದಾಯದಲ್ಲಿ ಮತ್ತು ಬೇರೆ ಕೆಲ ಸಮೂದಾಯಗಳಲ್ಲಿ ತಿಥಿಯ ಊಟಕ್ಕೆ ಕೆಸವೆಯ ದಂಟಿನ ಚಟ್ನಿಯನ್ನು ಕಡ್ಡಾಯವಾಗಿ ಮಾಡುವುದು ಒಂದು ಸಂಪ್ರದಾಯದ ಸಂಗತಿಯಾಗಿಬಿಟ್ಟಿದೆ! ಈ ಸಂಪ್ರದಾಯದ ಹಿಂದೆ ಶುದ್ಧ ವೈಜ್ಞಾನಿಕ ಕಾರಣವಿದೆ!!
ಗ್ರಹಿಸಿದವರು ನಿಮ್ಮ ಕಾಮೆಂಟಿವಲ್ಲಿ ವಿವರಿಸಿ.
# ಪ್ರಜ್ಞಾ
# ಸ್ವಚ್ಛ ಪರಿಸರ ಸ್ವಸ್ಥ ಬದುಕಿಗಾಗಿ ವೇದಿಕೆ
# ತುಮಕೂರು
******
verify before administering
ನಿಮ್ಮ ಮೂತ್ರಪಿಂಡವನ್ನು ನೀವೇ ಶುದ್ಧೀಕರಿಸಿಕೊಳ್ಳಿ, ರಕ್ಷಿಸಿ. ಅನೇಕ ವರ್ಷಗಳಿಂದ ನಮ್ಮ ಮೂತ್ರಪಿಂಡವು ನಮಗಾಗಿ, ನಮ್ಮ ದೇಹದಲ್ಲಿ ಸಂಗ್ರಹಿತವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ನಮ್ಮ ಆರೋಗ್ಯರಕ್ಷಣೆ ಮಾಡುತ್ತಿರುತ್ತದೆ. ಅಂತಹ ಅತಿ ಮುಖ್ಯ ಅಂಗ ಮೂತ್ರಪಿಂಡವನ್ನು ಅತೀ ಕಡಿಮೆ ವೆಚ್ಚದಲ್ಲಿ ನಮ್ಮಯ ಮನೆಗಳಲ್ಲೇ ಶುದ್ಧೀಕರಿಸುವ ಸರಳ ವಿಧಾನ ಹೀಗಿದೆ.
ಒಂದು ಹಸಿರಾದ, ಸ್ವಚ್ಛವಾಗಿ ತೊಳೆದ ತಾಜಾ ಕೊತ್ತಂಬರಿ ಕಟ್ಟನ್ನು ತೆಗೆದುಕೊಂಡು, ಅದನ್ನು ಚಿಕ್ಕ-ಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ತಪ್ಪಲೆಯಲ್ಲಿ ಹಾಕಿ ಶುದ್ಧ ನೀರಿನಲ್ಲಿ ಬಿಸಿಮಾಡಿ, ೧೦ ನಿಮಿಷ ಕುದಿಸಿ, ನಂತರ ಆರಿಸಿ. ಅದನ್ನು ಸೋಸಿ, ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ/ ಪಾತ್ರೆಯಲ್ಲಿ ಹಾಕಿ ಶೀತಕದಲ್ಲಿಡಿ.
ದಿನಂಪ್ರತಿ ಒಂದು ಲೋಟ ಈ ರೀತಿ ತಯಾರಿಸಿದ ಕೊತ್ತಂಬರಿ ಪೇಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ನಿಮ್ಮ ಮೂತ್ರ ವಿಸರ್ಜನೆಯ ವೇಳೆಗೆ, ನಿಮ್ಮ ದೇಹದಲ್ಲಿನ ಅನಪೇಕ್ಷಿತ ಲವಣಗಳು ಹಾಗೂ ಸಂಗ್ರಹಿತ ಅಶುದ್ಧಗಳು ಹೊರಹೋಗುವದರ ಅನುಭವ ಸ್ವತಃ ನಿಮಗೇ ಆಗುತ್ತದೆ.
ಕೊತ್ತಂಬರಿ ಎಲೆಗಳು(ಸೊಪ್ಪು) ಮೂತ್ರಪಿಂಡ ಶುದ್ಧೀಕರಣಕ್ಕೆ, ಹೇಳಿ ಮಾಡಿಸಿದಂತಹ, ಅತ್ಯಂತ ನೈಸರ್ಗಿಕ ಸಸ್ಯ.
ಈ ಸುಲಭ ವಿಧಾನವನ್ನು ಎಲ್ಲರೊಂದಿಗೆ ವಿನಿಮಯ ಮಾಡಿಕೊಳ್ಳಿ.
*****
ಮೂತ್ರಕೋಶದ ಕಲ್ಲೂ! ಕೆಸವೆ ದಂಟೂ!!
ಐದಾರು ವರ್ಷಗಳ ಹಿಂದಿನ ಮಾತು.ಆತ ನನ್ನ ನೆರೆಯೂರಿನವ, ತುಮಕೂರಿನ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತಿದ್ದನು. ಹೀಗೆ ಒಮ್ಮೆ ರಸ್ತೆಯಲ್ಲಿ ಸಿಕ್ಕು ನಮಸ್ಕಾರ ಹೇಳಿ ನೋವಿನಿಂದ ಬಳಲಿದವನಂತೆ ಕಂಡನು. ನಾನು ಅವನ ಬಳಲಿಕೆಗೆ ಕಾರಣ ಕೇಳಲು
' ಮೂತ್ರಕೋಶದಲ್ಲಿ ಕಲ್ಲಾಗಿದ್ದು ತುಂಬಾ ನೋಯುತ್ತಿದೆ ಸಾರ್' ಎಂದನು. ಡಾಕ್ಟ್ರ ಹತ್ತಿರ ಹೋಗಲಿಲ್ವೆ ಎಂದು ಕೇಳಿದ್ದಕ್ಕೆ ಹೋಗಿದ್ದೆ ಸಾರ್ ಅವರು ಆಪರೇಶನ್ ಮಾಡಬೇಕಿದೆ, ಹದಿನೈದು ಸಾವಿರ ದುಡ್ಡು ಹೊಂದಿಸಿಕೊಂಡು ನಾಡಿದ್ದು ಬರಲು ಹೇಳೀದ್ದಾರೆಂದನು.ಈಗ ಎಲ್ಲಿಗೆ ಹೊರಟಿದ್ದೀಯಾ? ಎಂದಿದ್ದಕ್ಕೆ 'ಹಣ ಹೊಂದಿಸಲು ಊರಿಗೆ ಹೊರಟಿದ್ದೀನಿ ಸಾರ್ ' ಎಂದನು.
ನಾನು 'ಸರಿ, ನಿನ್ನ ಊರಿಗೆ ಹೋಗುವ ಮುನ್ನ ನಮ್ಮ ಊರಿನ ಸಾರ್ವಜನಿಕ ನೀರಿನ ತೊಟ್ಟಿಯ ಬಳಿ ಹೋಗಿ ಅಲ್ಲಿ ಹೇರಳವಾಗಿ ಕೆಸವೆ ಬೆಳೆದಿದ್ದು ಒಂದು ಹೊರೆಯಷ್ಟು ಕೆಸವೆ ದಂಟನ್ನು ಕೊಯ್ದು ಮನೆಗೆ ಒಯ್ದು ಈ ಮದ್ಯಾಹ್ನದ ಮುದ್ದೆ ಊಟಕ್ಕೆ ಇದರಿಂದಲೇ ಚಟ್ನಿಮಾಡಿ ತಿನ್ನು, ಅನ್ನವನ್ನೂ ಅದರಲ್ಲೇ ತಿನ್ನು, ರಾತ್ರಿಯ ಊಟ, ನಾಳೆ ಬೆಳಿಗ್ಗೆಯ ತಿಂಡಿಗೆ ರೊಟ್ಟಿ ಮಾಡಿಸಿಕೊಂಡು ಇದೇ ಕೆಸವೆಯ ಚಟ್ನಿಯೊಂದಿಗೆ ತಿನ್ನು ಮತ್ತು ಆನಂತರದ ನೀನು ವಿಸರ್ಜಿಸುವ ಮೂತ್ರವನ್ನು ಸಂಗ್ರಹಿಸಿಕೊಂಡು ಪರಿಶೀಲಿಸಿ ನೋಡುತ್ತಿರು. ಇದನ್ನು ನೀನು ತುಮಕೂರಿಗೆ ವಾಪಾಸ್ಸಾಗುವ ಸೋಮವಾರದವರೆಗೂ ಮಾಡುತ್ತಿರು, ಆಮೇಲೆ ನಿನ್ನ ಆಪರೇಶನ್ ಅನ್ನು ತೀರ್ಮಾನಿಸುವೆಯಂತೆ' ಎಂದು ಹೇಳಿದೆನು.
ಅವನು ನಾನು ಹೇಳಿದಂತೆಯೇ ನಿಷ್ಟನಾಗಿ ಎಲ್ಲಾ ಮಾಡಿದ್ದಾನೆ, ಎರಡನೆಯ ದಿನಕ್ಕೆ ಅವನು ವಿಸರ್ಜಿಸಿದ ಮೂತ್ರದಲ್ಲಿ ಹೊರಬಂದಿದ್ದ ಕಲ್ಲಿನ ಹರಳುಗಳನ್ನು ಕಂಡು ಖುಶಿಗೊಂಡು ಮತ್ತು ನೋವಿನ ಬಾಧೆಯೂ ಕಡಿಮೆಯಾಗಿದ್ದನ್ನು ಫೋನ್ ಮಾಡಿ ತಿಳಿಸಿದನು. ನಾಳೆಯೂ ಊರಲ್ಲಿಯೇ ಇದ್ದು ಇದೇ ಆಹಾರವನ್ನು ಮುಂದುವರೆಸಲು ಸೂಚಿಸಿದೆ. ಹಾಗೆಯೇ ಮಾಡಿದ ಅವನು ಮಂಗಳವಾರ ಸೀದಾ ನರ್ಸಿಂಗ್ ಹೋಮಿಗೆ ಹೋಗಿ ಡಾಕ್ಟರರಿಗೆ ಪ್ಲಾಸ್ಟಿಕ್ ಕವರ್ ನಲ್ಲಿ ಸಂಗ್ರಹಿಸಿ ತಂದಿದ್ದ ಎರಡು ಮೂರು ಎಮ್ಎಮ್ ಗಾತ್ರದ ಹತ್ತಾರು ಹರಳುಗಳನ್ನು ತೋರಿಸಿದ್ದಾನೆ! ಪರಿಶೀಲಿಸಿದ ಡಾಕ್ಟರರು ಈಗ ನೋವಿದೆಯಾ ಎಂದು ಕೇಳಿದ್ಧಾರೆ. ಇವನು ಇಲ್ಲಾ ಸಾರ್ ಒಂದಿಷ್ಟೂ ನೋವಿಲ್ಲ ಎಂದು ಹೇಳಿ ತಾನು ಮಾಡಿಕೊಂಡು ಔಷಧೋಪಚಾರವನ್ನು ಹೇಳಿಕೊಂಡಿದ್ದಾನೆ. ಡಾಕ್ಟರರು ' ಹೋಗು ಹೋಗು, ಅಂತೂ ಹದಿನೈದು ಸಾವಿರ ಉಳಿಸಿಕೊಂಡು ಬಿಟ್ಟೆ ನೋಡು! ಆಪರೇಶನ್ನೂ ಬೇಡ, ಔಷಧಿಯೂ ಬೇಡ ಬಿಡು' ಎಂದು ಹೇಳಿ ಕಳುಹಿಸಿದ್ದಾರೆ.
ಅಲ್ಲಿಂದ ಹೊರಟವನು ನನ್ನಲ್ಲಿಗೆ ಬಂದು ಎಲ್ಲವನ್ನೂ ವಿವರಿಸಿ ಕೃತಜ್ಞತೆಗಳನ್ನು ಹೇಳಿದನು.
'ಯಾವಾಗಲೂ ಅತಿಯಾದ ಬಿಸಿಯಿರುವ ದೊಡ್ಡ ಒಲೆಯ ಮುಂದೆ ಅಡುಗೆ ಮಾಡುವ ಬಾಣಸಿಗರಿಗೆ ಅವರ ದೇಹದ ನೀರಿನಂಶ ಆವಿಯಾಗುತ್ತದೆ ಆಗ ಪದೇ ಪದೇ ನೀರು ಕುಡಿಯದಿದ್ದರೆ ದೇಹಕ್ಕೆ ನೀರಿನ ಕೊರತೆಯಾಗಿ ಮೂತ್ರಕೋಶದ ಹರಳಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ' ಆದ್ದರಿಂದ
'ಬೇರೆ ಯಾರಿಗಾದರೂ ಹೀಗಾದಾಗ ಇದೇ ಮದ್ದನ್ನು ಹೇಳಿಬಿಡು ಸಾಕು' ಎಂದು ಹೇಳಿದ್ದಕ್ಕೆ' ಖಂಡಿತಾ ಹೇಳ್ತೀನಿ ಸಾರ್' ಎನ್ನುತ್ತಾ ಖುಶಿಯಿಂದ ವಿರಮಿಸಿದನು.
ನಮ್ಮ ಲಿಂಗಾಯ್ತ ಸಮುದಾಯದಲ್ಲಿ ಮತ್ತು ಬೇರೆ ಕೆಲ ಸಮೂದಾಯಗಳಲ್ಲಿ ತಿಥಿಯ ಊಟಕ್ಕೆ ಕೆಸವೆಯ ದಂಟಿನ ಚಟ್ನಿಯನ್ನು ಕಡ್ಡಾಯವಾಗಿ ಮಾಡುವುದು ಒಂದು ಸಂಪ್ರದಾಯದ ಸಂಗತಿಯಾಗಿಬಿಟ್ಟಿದೆ! ಈ ಸಂಪ್ರದಾಯದ ಹಿಂದೆ ಶುದ್ಧ ವೈಜ್ಞಾನಿಕ ಕಾರಣವಿದೆ!!
ಗ್ರಹಿಸಿದವರು ನಿಮ್ಮ ಕಾಮೆಂಟಿವಲ್ಲಿ ವಿವರಿಸಿ.
# ಪ್ರಜ್ಞಾ
# ಸ್ವಚ್ಛ ಪರಿಸರ ಸ್ವಸ್ಥ ಬದುಕಿಗಾಗಿ ವೇದಿಕೆ
# ತುಮಕೂರು
***
ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸಿ; ವರ್ಷಕ್ಕೆ ಎರಡು ಬಾರಿಯಾದರು ಊಟದ ಜೊತೆಗೆ ಪಲ್ಯ ಮಾಡಿ ಬಡಿಸಿ
ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಒಂದು ಬಾಳೆಯ ಮರ ಮನೆಯ ಪಕ್ಕದಲ್ಲಿದ್ದರೆ ನಾನಾ ರೀತಿಯ ಉಪಯೋಗಗಳು ಇದೆ ಎನ್ನುವುದು ಹಿಂದಿನಿಂದಲೂ ಹಿರಿಯರು ಹೇಳಿಕೊಂಡು ಬಂದಿರುವ ಮಾತು . ಕೇವಲ ಬಾಳೆ ಹಣ್ಣು, ಬಾಳೆ ಎಲೆ ಅಷ್ಟಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಬದಲಿಗೆ, ಬಾಳೆ ಮರದ ದಂಟು ಅಥವಾ ದಿಂಡು ಕೂಡ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಬಾಳೆ ದಿಂಡು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕಾರಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಗಾಳಿ ಮಳೆಗೆ ಬಾಳೆ ಮರ ನೆಲಕ್ಕಚ್ಚುವುದು ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಎಲೆ ಮತ್ತು ಬಾಳೆ ಕಾಯಿಯನ್ನು ತುಂಡು ಮಾಡಿ ತೆಗೆದು ಅಡುಗೆ ಕೊಣೆಯಲ್ಲಿ ಇಡುವಂತೆ, ಬಾಳೆ ಮರದ ಮಧ್ಯಭಾಗವನ್ನು ತುಂಡು ಬಾಡಿ ಅಡುಗೆ ಮನೆಗೆ ತನ್ನಿ ಮತ್ತು ಅದನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಬಾಳೆ ಮರದ ಮೇಲೆ ಸೊನೆ ಇರುತ್ತದೆ ಅದನ್ನು ತಿನ್ನುವುದು ಹೇಗೆ ಎನ್ನುವುದು ಹಲವರಿಗೆ ಗೊಂದಲ ಇರಬಹುದು ಆದರೆ ಬಾಳೆ ಮರವನ್ನು ಮಧ್ಯಕ್ಕೆ ಕಡಿದು ಅದರ ಸುರುಳಿಗಳನ್ನು, ಒಳಗಿನ ಬಿಳಿ ಅಂಶ ಕಾಣುವವವರೆಗೆ ಬಿಡಿಸಬೇಕು. ಯಾವಾಗ ಬಿಳಿಯ ದಿಂಡು ಕಾಣುತ್ತದೆ, ಆಗ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಈ ರೀತಿಯ ಬಿಳಿ ಬಣ್ಣದ ಬಾಳೆ ದಿಂಡು ಆರೋಗ್ಯಕರವಾದ ಬಳಕೆಗೆ ಸಾಕ್ಷಿಯಾಗುತ್ತದೆ.
ಬಾಳೆ ದಿಂಡು ಮತ್ತು ಆರೋಗ್ಯ
ಬಾಳೆ ದಿಂಡಿನ ಪಲ್ಯ:
ಸಾಮಾನ್ಯವಾಗಿ ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಎರಡುಬಾರಿಯಾದರು ತಿನ್ನಲೇ ಬೇಕು ಎನ್ನುವ ಮಾತು ಇದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡುವ ಪಲ್ಯ. ಪಲ್ಯವನ್ನು ಮಾಡಿ ತಿನ್ನುವುದರಿಂದ ಹೊಟ್ಟೆ ಭಾಗಕ್ಕೆ ತುಂಬಾ ಒಳಿತು. ಉಗುರು ತಿನ್ನುವ ಅಭ್ಯಾಸ ಇರುವವರು ಇದನ್ನು ತಿನ್ನಲೇ ಬೇಕು ಮತ್ತು ಹೊಟ್ಟೆ ನೋವು, ಮಲಬದ್ಧತೆ, ಹೊಟ್ಟೆಯಲ್ಲಿನ ಕಲ್ಮಶ ಅಥವಾ ಹೊಟ್ಟೆಯಲ್ಲಿ ಕೂದಲು ಸೇರಿಕೊಂಡಿದ್ದರೆ ಇದು ಎಲ್ಲವನ್ನು ಶುದ್ಧ ಮಾಡುತ್ತದೆ. ಇನ್ನು ಬಾಳೆ ನಾರಿನಾಂಶವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಕೂಡ ಸಹಕಾರಿಯಾಗಿದೆ. ಆ ಮೂಲಕ ಹೊಟ್ಟೆ ಉಬ್ಬರಿಸುವುದು ಸೇರಿ ಇನ್ನಿತರ ಕಾಯಿಲೆಯಿಂದ ನಮ್ಮನ್ನು ರಕ್ಷಿಸಲು ಬಾಳೆ ದಿಂಡು ಸಹಕಾರಿಯಾಗಿದೆ.
ಬಾಳೆ ದಿಂಡಿನ ಜ್ಯೂಸ್:
ಕಲ್ಲನ್ನು ಕರಗಿಸುವ ಶಕ್ತಿ ಬಾಳೆ ದಿಂಡಿಗೆ ಇದೆ ಎನ್ನುವ ಮಾತು ಪುರಾತನವಾದದ್ದು, ಆದರೆ ಅದು ಇಂದು ಕೂಡ ನಮ್ಮ ನಡುವೆ ಉಳಿದುಕೊಂಡಿದೆ. ಇದಕ್ಕೆ ಕಾರಣ ಬಾಳೆ ದಿಂಡಿನಿಂದ ಮಾಡಿದ ಜ್ಯೂಸ್ ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆಯಾಗುತ್ತದೆ. ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗೆ ಬಾಳೆ ದಿಂಡಿನಲ್ಲಿರುವ ಪೊಟ್ಯಾಸಿಯಮ್ ಅಂಶ ರಾಮಬಾಣವಾಗಿದೆ. ಬಾಳೆ ದಿಂಡನ್ನು ಬಿಡಿಸಿ ರುಬ್ಬಿ ಅದರ ರಸವನ್ನು ತೆಗೆದು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಮಾಯವಾಗುತ್ತದೆ. ರಕ್ತಹೀನತೆಯನ್ನು ಕೂಡ ಇದು ದೂರ ಮಾಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ವಿಟಮಿನ್ ಬಿ 6 ಕೂಡ ಹೇರಳವಾಗಿದೆ. ಅಲ್ಲದೆ ಇದರಲ್ಲಿ ಫೈಬರ್ ಅಂಶವು ಕೂಡ ಇದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಕೊರೊನಾ ಎರಡನೇ ಅಲೆಯ ಈ ಕಾಲಘಟ್ಟದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕೆ ಬಾಳೆ ದಿಂಡು ಪುಷ್ಠಿ ನೀಡುತ್ತದೆ. ಕಾರಣ ಬಾಳೆ ದಿಂಡಿನಲ್ಲಿ ರೋಗನಿರೋಧಕ ಶಕ್ತಿ ಇದೆ. ಅಲ್ಲದೆ ಬಾಳೆ ದಿಂಡನ್ನು ಸೇವಿಸುವುದರಿಂದ ತೂಕವನ್ನು ಸಮತೋಲನಗೊಳಿಸಬಹುದು. ಇದು ಮೈಯಲ್ಲಿನ ಕೊಬ್ಬಿನಾಂಶವನ್ನು ದೂರ ಮಾಡಿ ಆರೋಗ್ಯಯುಕ್ತ ಜೀವನ ನಡೆಸಲು ಸಹಕಾರಿಯಾಗಿದೆ. 100 ಗ್ರಾಮ್ ಬಾಳೆ ದಿಂಡಿನಲ್ಲಿ 13 ಕ್ಯಾಲೋರಿ, 2 ಗ್ರಾಮಿನಷ್ಟು ಕಾರ್ಬೋಹೈಡ್ರೇಟ್ಸ್, ಒಂದು ಗ್ರಾಮ್ನಷ್ಟು ಡಯೇಟ್ರಿ ಫೈಬರ್ ಇರುತ್ತದೆ. ಇದು ಚರ್ಮ ಮತ್ತು ಕೂದಲಿಗೆ ಕೂಡ ಒಳ್ಳೆಯದು.
ಟಿವಿ 9 ಕನ್ನಡ .
******
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-272
••••••••••••••••
✍️: ಇಂದಿನ ವಿಷಯ:
ಹರೆಯದಲ್ಲಿ ಕಾಣುವ ಕಿಡ್ನಿ ವೈಫಲ್ಯಕ್ಕೆ ಅತೀ/ಶಕ್ತಿಯುತ ಆಹಾರ ಸೇವನೆಯೇ ಪ್ರಧಾನ ಕಾರಣ.!!!
•••••••••••••••••••••••••••••••••••••••
ಇಂದು ಹರೆಯದಲ್ಲೇ ಕಿಡ್ನಿ ವೈಫಲ್ಯಕ್ಕೆ ಒಳಗಾದ ಅನೇಕ ಮಕ್ಕಳನ್ನು ನೋಡುತ್ತಿದ್ದೇವೆ!!
ಸಾಮಾನ್ಯವಾಗಿ ಕಿಡ್ನಿ ವೈಫಲ್ಯಕ್ಕೆ ಮಧುಮೇಹ, ರಕ್ತದೊತ್ತಡವನ್ನು ಕಾರಣ ಎನ್ನುತ್ತಾರೆ.
ಆದರೆ, ಈ ಎರಡೂ ತೊಂದರೆಗಳಿರದ ಚಿಕ್ಕ ಮತ್ತು ಮಧ್ಯಮ ವಯಸ್ಸಿನಲ್ಲೇ ಕಿಡ್ನಿ ವೈಫಲ್ಯವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರನ್ನೂ ಮತ್ತು ಕಸಿ ಮಾಡಿಸಿಕೊಳ್ಳಲು ಸೂಕ್ತ ಮೂತ್ರಪಿಂಡಗಳನ್ನು ಹುಡುಕುತ್ತಿರುವವರನ್ನೂ ಸಾಮಾನ್ಯವಾಗಿ ಕಾಣುತ್ತಿದ್ದೇವೆ.
ಹಾಗೆಯೇ, ನಮ್ಮ ಕೇಂದ್ರದಲ್ಲಿ ನಾವು ಕಂಡಂತೆ ಇಂಥವರ ರೋಗದ ಇತಿಹಾಸವನ್ನು ನೋಡಿದರೆ ಅವರು ಈ ಕೆಳಗಿನ ಕಾರಣಗಳನ್ನು ಹೊಂದಿರುತ್ತಾರೆ👇
💢 ಶಾರೀರಿಕ ವ್ಯಾಯಾಮಕ್ಕಿಂತ ಹೆಚ್ಚಿನ ಆಹಾರ ಸೇವಿಸುತ್ತಾರೆ.
💢ಶಕ್ತಿಯುತ ಆಹಾರವನ್ನು ನಿತ್ಯವೂ ಅಥವಾ ಪದೇ ಪದೇ ಸೇವಿಸುತ್ತಾರೆ.
💢ಮನೆಯವರ ಒತ್ತಾಯಕ್ಕೆ ಹೆಚ್ಚಿನ ಆಹಾರವನ್ನು ಸೇವಿಸುತ್ತಾರೆ.
💢ಪದೇ ಪದೇ ಮಾಂಸಹಾರವನ್ನು ಸೇವಿಸುತ್ತಾರೆ.
💢ಪ್ರೀತಿಯ ಒತ್ತಾಯಕ್ಕೆ ಮಣಿದು ಅಥವಾ ತಟ್ಟೆಯಲ್ಲಿರುವುದನ್ನು ಖಾಲಿ ಮಾಡಲೇಬೇಕೆಂಬ ನಿಯಮಕ್ಕೆ ಬದ್ಧರಾಗಿ ಹೆಚ್ಚು ತಿನ್ನುತ್ತಿರುತ್ತಾರೆ.
💢ವಿವಿಧ ರೀತಿಯ ಪ್ರೈಡ್ ರೈಸ್ ಗಳನ್ನು ನಿತ್ಯವೂ ಅಥವಾ ಪದೇ ಪದೇ ಸೇವಿಸುತ್ತಾರೆ.
💢ನಿತ್ಯವೂ ಹೊಟೇಲ್, ಹಾಸ್ಟೆಲ್, ಪಿಜಿ ಗಳಲ್ಲಿ ಗಡುಸಾದ ಅಥವಾ ಅರೆಬೆಂದ ಆಹಾರಗಳನ್ನು ಸೇವಿಸುತ್ತಾರೆ.
💢ಮೈದಾ, ಎಣ್ಣೆಗಳಿಂದ ತಯಾರಿಸಿದ(ಬೇಕರಿ, ಪಿಜ್ಜಾ....) ಪದಾರ್ಥಗಳನ್ನು ಪದೇ ಪದೇ ಸೇವಿಸುತ್ತಾರೆ.
↕️
ನಮ್ಮ ದುರದೃಷ್ಟಕ್ಕೆ ಈ ಮೇಲಿನವುಗಳಲ್ಲಿ ಯಾವೊಂದು ಕಾರಣವನ್ನೂ ದುರಾಭ್ಯಾಸ ಅಥವಾ ದುಷ್ಟಚಟಗಳೆಂದು ನಾವುಗಳು ಗುರುತಿಸಿಲ್ಲ. ಇದೇ ಕಿಡ್ನಿ ವೈಫಲ್ಯದಂತಹ ಅನರ್ಥಕಾರಿ ರೋಗಗಳಿಗೆ ಕಾರಣ.
ಹರೆಯದಲ್ಲೇ ಆಗುವ ಈ ಅಪಾಯಕ್ಕೆ ಪೋಷಕರು ಕಣ್ಣೀರಿಡುವುದನ್ನು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಇನ್ನಾದರೂ ಈ ವಿಷಯದಲ್ಲಿ ಪೋಷಕರು ಎತ್ತೆಚ್ಚುಕೊಳ್ಳಬೇಕಾಗಿದೆ.
•••••••◆◆•••••••
ಇವುಗಳಿಂದ ಕಿಡ್ನಿವೈಫಲ್ಯ ಹೇಗೆ ಉಂಟಾಗುತ್ತದೆ ನೋಡೋಣ:
"ಈ ಮೇಲಿನ ಕಾರಣಗಳಿಂದ, ಶರೀರದಲ್ಲಿ ಕರಗದಿರುವ protein, fat ಮತ್ತು ಲವಣಾಂಶಗಳು ಹೆಚ್ಚುವುದರಿಂದ ಕಿಡ್ನಿ ವೈಫಲ್ಯ ಉಂಟಾಗುತ್ತದೆ."
ಮೇಲಿನ ಎಲ್ಲಾ ರೀತಿಯ ಆಹಾರಗಳು ಮತ್ತು ಅದನ್ನು ತಯಾರಿಸುವ ವಿಧಾನಗಳಿಂದ ಸುಲಭವಾಗಿ ಕರಗದ ಪ್ರೊಟೀನ್, ಕೊಬ್ಬಿನ ಕಣಗಳು ಶರೀರದಲ್ಲಿ ಉಳಿಯುತ್ತವೆ. ಇವು ಹೊರಹೋಗಲು ನಿತ್ಯವೂ ಎರಡು ಬಾರಿ ಪ್ರಾಕೃತವಾಗಿ ಮಲವಿಸರ್ಜನೆಯಾಗಬೇಕು. ಆದರೆ, ಇಂದಿನ ಜೀವನಶೈಲಿ ಬಹುಮಟ್ಟಿಗೆ ಮಲಬದ್ಧತೆಯನ್ನುಂಟುಮಾಡುತ್ತಿದೆ.
ಹಾಗಾಗಿ, ದೊಡ್ಡ ಗಾತ್ರದ ಈ ಕಣಗಳನ್ನು ನಮ್ಮ ಮೂತ್ರಪಿಂಡಗಳು ನಿರಂತರ ಸೋಸಿ ಹೊರಹಾಕುತ್ತವೆ.
ಆಗ ಕಿಡ್ನಿಯಲ್ಲಿನ ಕಾರ್ಯನಿರ್ವಾಹಕ ಪೊರೆಯಾದ glomerula ಗಳಲ್ಲಿ ಇರುವ ರಂಧ್ರಗಳಿಗಿಂತ ದೊಡ್ಡಗಾತ್ರದ ಕಣಗಳನ್ನು ನಿರಂತರ ಹೊರಹಾಕಲು ಪ್ರಯತ್ನಿಸಿ ಆ ರಂಧ್ರಗಳು ಶಾಶ್ವತವಾಗಿ ದೊಡ್ಡವಾಗುತ್ತವೆ ಅಥವಾ ಹರಿದುಹೋಗುತ್ತವೆ.
"ಇದನ್ನೇ, ಕಿಡ್ನಿ ಅಥವಾ ಮೂತ್ರಪಿಂಡದ ವೈಫಲ್ಯ ಎನ್ನುತ್ತೇವೆ."
••••••••••••••••••••••••••
⚠️ವಿಶೇಷ ಸೂಚನೆ:
ಆಯುರ್ವೇದದಲ್ಲಾಗಲೀ ಅಲೋಪಥಿಯಲ್ಲಾಗಲೀ ಮೂತ್ರಪಿಂಡಗಳನ್ನು ಮೊದಲಿನಂತೆ ಹಿಂದಿರುಗಿಸುವ ಯಾವುದೇ ಚಿಕಿತ್ಸೆ ಇರುವುದಿಲ್ಲ. (ಆರಂಭಿಕ ಹಂತದಲ್ಲೇ ಆಯುರ್ವೇದ ಪಥ್ಯ ಪಾಲನೆ ಮತ್ತು ಚಿಕಿತ್ಸೆಗಳಿಂದ ಗುಣಪಡಿಸಬಹುದು)
ಹಾಗಾಗಿ ಆತ್ಮೀಯರೇ,
"ಆಸ್ಪತ್ರೆ, ಔಷಧರಹಿತವಾಗಿ ಆಹಾರಪಾಲನೆಯಿಂದ ಮೂತ್ರಪಿಂಡಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೊಂದೇ ನಿಜವಾದ ಚಿಕಿತ್ಸೆ."
•••••••••••••
ಹಣವಂತರೆಂದೋ, ಮಕ್ಕಳಮೇಲಿನ ಪ್ರೀತಿಗೆ ಸಾಲಮಾಡಿಯೋ ಒಂದೊಮ್ಮೆ ಮೂತ್ರಪಿಂಡ ಕಸಿ ಮಾಡಿಸಿಕೊಂಡರೂ ಸಹ, ಆ ಮೂತ್ರಪಿಂಡದ ಆಯಸ್ಸು 3 ರಿಂದ 5 ವರ್ಷ ಮಾತ್ರ!! ಮತ್ತು ಆ ಸಮಯದಲ್ಲಿ ಸೇವಿಸುವ ಮಾತ್ರೆಗಳ ಖರ್ಚು ಮತ್ತು ಸುಖವಿಲ್ಲದ ಜೀವನ ಯಾವ ಶತ್ರುವಿಗೂ ಬೇಡ. ಮತ್ತೊಮ್ಮೆ ಕಿಡ್ನಿ ಹಾಕಿಸಿದರೆ ಅದರ ಆಯಸ್ಸು ಮೊದಲಿನದಕ್ಕಿಂತ ಕಡಿಮೆ.....!!!
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165
🙏ಧನ್ಯವಾದಗಳು🙏
••••••••••••••
29.09.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-273
••••••••••••••••
✍️: ಇಂದಿನ ವಿಷಯ:
ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳು
•••••••••••••••••••••••••••••••••••••••
★ಮೂತ್ರಸ್ಯ "ಕ್ಲೇದ" ವಾಹನಂ| ಸ್ವೇದಸ್ಯ "ಕ್ಲೇದ" ವಿಧ್ರುದಿಃ ||
° ಕ್ಲೇದ = ದ್ರವರೂಪದಲ್ಲಿರುವ ಮಲ (waste in the form of liquid)
° ಸಂಕ್ಲೇದ = ದೊಡ್ಡ ಗಾತ್ರದ ಕಣಗಳನ್ನು ಹೊಂದಿರುವ ದ್ರವರೂಪದಲ್ಲಿರುವ ಮಲ.
ದ್ರವ ರೂಪದ ಮಲವು ಮೂತ್ರದೊಂದಿಗೆ ಹರಿದು ಹೊರಹೋಗುತ್ತದೆ ಮತ್ತು ಬೆವರಿನೊಂದಿಗೆ ತೂರಿ ಹೊರಬರುತ್ತದೆ.
ಆಹಾರದಿಂದ ಬೇರ್ಪಟ್ಟ ಮಲವು ಸರಿಯಾಗಿ ವಿಭಜನೆಯಾಗದೇ ಇದ್ದಲ್ಲಿ ಮಲಬದ್ಧತೆ ಉಂಟಾಗಬಹುದು ಅಥವಾ ದುರ್ವಾಸನೆಯಿಂದ ಕೂಡಿದ ಮಲ ಪ್ರವೃತ್ತಿಯಾಗಬಹುದು.
ಅದೇರೀತಿ,
ದ್ರವರೂಪದ ಮಲವಾದ ಕ್ಲೇದದ ಬದಲು ಸರಿಯಾಗಿ ಉತ್ಪತ್ತಿಯಾಗದ ಮತ್ತು ದೊಡ್ಡ ಕಣಗಳುಳ್ಳ "ಸಂಕ್ಲೇದವು" ಮೂತ್ರದ ಅಥವಾ ಬೆವರಿನ ಮುಖಾಂತರ ಹೊರಹೋಗುತ್ತಿದ್ದರೆ ಈ ಕೆಳಗಿನ ಆರಂಭಿಕ ಲಕ್ಷಣಗಳು ಉಂಟಾಗುತ್ತವೆ.
(ಈ ಲಕ್ಷಣಗಳನ್ನು ಉಪೇಕ್ಷಿಸಿದರೆ ಮುಂದಿನ 5-10 ವರ್ಷಗಳಲ್ಲಿ ಮೂತ್ರಪಿಂಡಗಳಲ್ಲಿ ವಿಕೃತಿ ಕಾಣಲು ಆರಂಭಿಸುತ್ತದೆ.)
⤵️
● ದುರ್ವಾಸನೆಯುಕ್ತ ಬೆವರು.
● ಅತಿಯಾದ ತಲೆಯ ಹೊಟ್ಟು.
● ಕಂಕುಳುಗಳಲ್ಲಿ ಬೆವರು ಉಪ್ಪಿನಂತೆ ಹರಳುಗಟ್ಟುವುದು.
● ದ್ರವ ಜಿನುಗಿಸುವ ಚರ್ಮದ ಕಾಯಿಲೆಗಳು (ವಿಶೇಷವಾಗಿ ಪಾದ , ಕಾಲುಗಳಲ್ಲಿ).
● ವಿಪರೀತ ಚರ್ಮದ ಅಲರ್ಜಿ.
● ಶರೀರದಲ್ಲಿ ಬಿಲ್ಲೆಯಾಕಾರದಲ್ಲಿ ಕೂದಲು ಉದುರುವುದು.
⤵️
● ದುರ್ವಾಸನೆಯಿಂದ ಕೂಡಿದ ಮೂತ್ರ.
● ಸಿಹಿ ಅಥವಾ ಹುಳಿ ವಾಸನೆಯುಳ್ಳ ಮೂತ್ರ.
● ನಿರಂತರ ಗಡಸು ಹಳದಿ ವರ್ಣದ ಮೂತ್ರ.
● ಅತ್ಯಂತ ನೊರೆಯಿಂದ ಕೂಡಿದ ಮತ್ತು ಆ ನೊರೆ ಬೇಗ ಒಡೆಯದೆ ಪ್ರವಹಿಸುವ ಮೂತ್ರ.
● ಸೋಪಿನಂತೆ ಜಾರುವ ಮೂತ್ರ.
● ಮಧುಮೇಹ ಇಲ್ಲದಿದ್ದರೂ, ಬೇಸಿಗೆಯನ್ನೂ ಲೆಕ್ಕಿಸದೇ ಪದೇ ಪದೇ ಮೂತ್ರ ಪ್ರವೃತ್ತಿಯಾಗುವುದು.
● ದೂರ ಪ್ರಯಾಣದಲ್ಲಿ ಪಾದಗಳ ಬಿಗಿತ ಅಥವಾ ಸಣ್ಣದಾಗಿ ಊತ ಬರುವುದು.
● ಮಳೆ, ಚಳಿ ಎನ್ನದೇ ನಿರಂತರ ಬಾಯಾರಿಕೆಯಾಗುವುದು.
● ಪದೇ ಪದೇ ಮೂತ್ರನಾಳದ ಸೋಂಕು ಉಂಟಾಗುವುದು.
⤵️
● ಆಲಸ್ಯ , ಜಡತ್ವದಿಂದುರವುದು.
● ಆಳವಾದ ನಿದ್ದೆ ಬಾರದಿರುವುದು.
● ಹಸಿವಾಗದಿರುವುದು ಮತ್ತು ಹಸಿವಾದರೆ ತಡೆಯಲು ಸಾಧ್ಯವೇ ಇರದಂತೆ ನಿಶ್ಯಕ್ತಿ ಹೊಂದುವುದು.
● ಸ್ವರದ ಬಲ ಸ್ವಲ್ಪಮಟ್ಟಿಗೆ ಕುಗ್ಗುವುದು.
● ದೀರ್ಘ ಕಾಲದ ರಕ್ತ ಹೀನತೆ ಉಂಟಾಗುವುದು.
● ಬೆಳಗ್ಗೆ ಎದ್ದಾಗ ಕಣ್ಣಿನ ಸುತ್ತ ತೆಳುವಾದ ಊತವಿರುವುದು.
● ಮಾಂಸಖಂಡಗಳ ಬಲ ಸ್ವಲ್ಪಮಟ್ಟಿಗೆ ಕುಗ್ಗುವುದು ಅಥವಾ ಮೊದಲಿನ ಧೃಢತೆ ಇಲ್ಲದಿರುವುದು.
ಈ ಮೇಲಿನ ಲಕ್ಷಣಗಳನ್ನು ಓದಿ ಇಂದೇ ಕಿಡ್ನಿವೈಫಲ್ಯವಾಗಿದೆಯೆಂದು ಭಾವಿಸಿ ಗಾಬರಿಪಡುವುದು ನಿರರ್ಥಕ. ಇವೆಲ್ಲಾ ಆರಂಭಿಕ ಸೂಚನೆಗಳಷ್ಟೇ, ಕಾಲ ಗತಿಸಿದಂತೆ , ವಿಧಿ ಸೆಳೆದಂತೆ, ಕೊಂಚ ಆಹಾರ ಮತ್ತು ಜೀವನಶೈಲಿ , ಜೀವನ ಸ್ಥಳ ಬದಲಾವಣೆಯಾಗಿಬಿಟ್ಟರೆ ಈ ಎಲ್ಲಾ ಲಕ್ಷಣಗಳು ಮಾಯವಾಗುತ್ತವೆ.
(ಉದಾಹರಣೆಗೆ: ಈ ಲಕ್ಷಣಗಳಿರುವ ವ್ಯಕ್ತಿ ಯಾವುದೋ ಕಾರಣಕ್ಕೆ ಸಮುದ್ರದ ತೀರದ ಅಥವಾ ಹಿಮಾಲಯ ತಪ್ಪಲಿನ ನಗರ ಗ್ರಾಮಗಳಲ್ಲಿ ಜೀವನ ಮಾಡಬೇಕಾಗಿ ಬಂದರೆ ಅವನ ಆರೋಗ್ಯ ಸುಧಾರಿಸಿ ಕಿಡ್ನಿ ವೈಫಲ್ಯದಿಂದ ಪಾರಾಗಿಬಿಡುತ್ತಾನೆ).
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165
🙏ಧನ್ಯವಾದಗಳು🙏
************
30.09.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-274
••••••••••••••••
✍️: ಇಂದಿನ ವಿಷಯ:
ಮೂತ್ರಪಿಂಡ ವೈಫಲ್ಯಕ್ಕೆ ಸರಳ ಪರಿಹಾರಗಳು.
•••••••••••••••••••••••••••••••••••••••
ನಮಗೆಲ್ಲ ತಿಳಿದಿರುವಂತೆ ಮೂತ್ರಪಿಂಡಗಳು ಮೂತ್ರವನ್ನು ಉತ್ಪತ್ತಿ ಮಾಡುವುದಿಲ್ಲ ಕೇವಲ ಸೋಸುವಿಕೆ ಅದರ ಕಾರ್ಯ. ವಾಸ್ತವದಲ್ಲಿ ಮೂತ್ರ ಉತ್ಪತ್ತಿ ಆಗುವುದು ಯಕೃತ್ತಿನಲ್ಲಿ.
ಈಗ ನೀವೇ ಹೇಳಿ ಚಿಕಿತ್ಸೆ ಮಾಡಬೇಕಾಗಿರುವುದು ಯಕೃತ್ತಿಗೋ ⁉️ ಮೂತ್ರಪಿಂಡಗಳಿಗೋ⁉️
ಮೂತ್ರಪಿಂಡಗಳನ್ನು ಚಿಕಿತ್ಸೆ ಮಾಡಿ ಮೊದಲಿನಂತೆ ಸರಿಪಡಿಸುವುದು ದುಸ್ಥರವೇ ಸರಿ‼️
ಹಾಗಾಗಿ ನಮ್ಮ ವಿನಂತಿಯೆಂದರೆ ಅವುಗಳನ್ನು ಕೆಡಿಸಿಕೊಳ್ಳದಿರುವ ರೀತಿ ನಮ್ಮ ಜೀವನ ಇರಬೇಕು ಎಂಬುದಾಗಿದೆ.
ಮೂತ್ರೋತ್ಪತ್ತಿ ಸ್ಥಾನವಾದ ಯಕೃತ್ ಅನ್ನು ಆರೋಗ್ಯವಾಗಿಟ್ಟುಕೊಂಡರೆ ಈ ಶರೀರ ಇರುವವರೆಗೂ ಮೂತ್ರಪಿಂಡಗಳು ಸುಸ್ಥಿತಿಯಲ್ಲಿ ಇರುತ್ತವೆ.
ಏಕೆಂದರೆ, ಯಕೃತ್ ತನ್ನಲ್ಲಿರುವ enzyme ಗಳಿಂದ ಸಂಕ್ಲೇದವನ್ನು (ಇದರ ವಿವರಣೆಗಾಗಿ ನಿನ್ನೆಯ ಸಂಚಿಕೆಯನ್ನು ನೋಡಿ) ವಿಭಜಿಸಿ ದೊಡ್ಡ ಗಾತ್ರದ ಕಣಗಳನ್ನು ಸೂಕ್ಷ್ಮಕ್ಕೆ ಇಳಿಸುತ್ತದೆ.
ಇದಿಷ್ಟನ್ನು ಮಾಡಿದರೆ ಮೂತ್ರಪಿಂಡದ ಪೊರೆಗೆ ಯಾವುದೇ ಒತ್ತಡವಾಗಲೀ ಅಪಾಯವಾಗಲೀ ಆಗುವುದಿಲ್ಲ.
ಹಾಗೆಯೇ, ರಕ್ತನಾಳಗಳು ಗಡುಸಾಗುವುದರಿಂದಲೂ ಮತ್ತು ರಕ್ತೋತ್ಪತ್ತಿ ಕಡಿಮೆಯಾಗುವುದರಿಂದಲೂ ಮೂತ್ರಪಿಂಡಗಳು ವಿಫಲವಾಗುತ್ತವೆ. ಇದಕ್ಕೂ ಸಹ ಯಕೃತ್ ನ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದೇ ಸೂಕ್ತ ಮತ್ತು ಶಾಶ್ವತ ಪರಿಹಾರವಾಗಿದೆ.
ಒಟ್ಟಾರೆ ನಮ್ಮ ಆಹಾರ-ನಿದ್ರೆ-ಜೀವನ ಶೈಲಿ ಮತ್ತು ಅನುರಕ್ತ ಭಾವದ ಮನಸ್ಥಿತಿ ಇವುಗಳು ಯಕೃತ್ ಅನ್ನು ಅತ್ಯಂತ ಅರೋಗ್ಯಯುತವಾಗಿ ಸುಸ್ಥಿತಿಯಲ್ಲಿ ಮಗುವಿನಂತೆ ಸುಕೋಮಲವಾಗಿ ಇಟ್ಟುಬಿಡುತ್ತವೆ.
"ಅತ್ಯಂತ ಪ್ರಮುಖವಾಗಿ ಮನಸ್ಸಿನ ಕುವೃತ್ತಿಗಳು ಯಕೃತ್ತಿನ ವಿಕೃತಿಗೆ ಅತ್ಯಂತ ಸನಿಹದ ಕಾರಣಗಳಾಗಿವೆ 🎭"
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645
9606616165
🙏ಧನ್ಯವಾದಗಳು🙏
***********
01.10.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-275
••••••••••••••••
✍️: ಇಂದಿನ ವಿಷಯ:
ಸದೃಢ ಮೂತ್ರಪಿಂಡಗಳು ಬೇಕೇ ❓ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.
•••••••••••••••••••••••••••••••••••••••
ಹಿಂದಿನ ಸಂಚಿಕೆಯಲ್ಲಿ ನೋಡಿದಂತೆ ಪ್ರಾಕೃತ ಗುಣಾತ್ಮಕ ಮೂತ್ರೋತ್ಪತ್ತಿಯಾಗಲು ಯಕೃತ್ತಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳೇ ಕಾರಣ ಮತ್ತು ಅಲ್ಲಿಯೇ ಮೂತ್ರೋತ್ಪತ್ತಿ ಆಗುವುದು.
ಹಾಗಾಗಿ ಆರೋಗ್ಯವಂತ ಯಕೃತ್ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೂತ್ರಪಿಂಡಗಳ ಸಂರಕ್ಷಣೆಯನ್ನು ಮಾಡುತ್ತದೆ.
ಯಕೃತ್ ಈ ಕೆಳಗಿನ ಹಲವಾರು ಕಾರ್ಯಗಳನ್ನು ಮಾಡುತ್ತದೆ ⏬
★ಜೀರ್ಣಕ್ರಿಯೆ
★ಹಾರ್ಮೋನ್ ಉತ್ಪತ್ತಿ
★ರಕ್ತೋತ್ಪತ್ತಿ
★ರಕ್ತನಾಳಗಳ ಸಂರಕ್ಷಣೆ
★ಹೃದಯ ಸಂರಕ್ಷಕ ಹಾರ್ಮೋನ್ ಉತ್ಪತ್ತಿ
★ಮಾಂಸಖಂಡಗಳ ಆರೋಗ್ಯ ಕಾಪಾಡುವುದು
★ಮೂತ್ರೋತ್ಪತ್ತಿ.
ಹೀಗೆ, ಶರೀರದ ಎಲ್ಲ ಜೀವಕೋಶಗಳನ್ನು ಯಕೃತ್ ತಾಯಿಯಂತೆ ಸಂರಕ್ಷಿಸುತ್ತದೆ.
〰️〰️〰️〰️〰️〰️〰️〰️〰️〰️〰️
ಮೂತ್ರಪಿಂಡಗಳ ಆರೋಗ್ಯಕ್ಕಾಗಿ
ಮೂತ್ರೋತ್ಪತ್ತಿಯನ್ನು ಮಾಡುವ ಯಕೃತ್ತಿನ ಕೆಲಸಕ್ಕೆ ಸಹಾಯಕವಾಗುವ ಅಂಶಗಳನ್ನು ನೋಡೋಣ ಮತ್ತು ಸರ್ವದಾ ಪಾಲಿಸೋಣ.
★ಆಹಾರ
★ವಿಹಾರ
★ಜೀವನಶೈಲಿ
★ನಿದ್ರೆ
★ಅನುರಕ್ತಭಾವ
1️⃣ಆಹಾರ:
ಯಾವ ಆಹಾರವನ್ನು ಸೇವಿಸಿದರೆ ನಿಮಗೆ ಹೊಟ್ಟೆ ಭಾರವಾಗುವುದಿಲ್ಲವೋ ಮತ್ತು ಆಹಾರ ಸೇವಿಸಿ 90 ನಿಮಿಷಗಳಲ್ಲಿ ಜಠರದ ಭಾಗ ಹಗುರವಾಗುವುದೋ ಅದೇ ಯಕೃತ್ತಿನ ಆರೋಗ್ಯದ ಮೂಲ ಗುಟ್ಟು.
ಏಕೆಂದರೆ, ಜೀರ್ಣಗೊಂಡು ಪ್ರತ್ಯೇಕವಾಗದ ಆಹಾರದ ಕಣಗಳು ಉದರ ಭಾರವನ್ನು ಉಂಟುಮಾಡುತ್ತವೆ. ಜೀರ್ಣವಾಗದ ಈ ಆಹಾರದ ಕಣಗಳೇ ದೊಡ್ಡ ಕಣಗಳುಳ್ಳ ಮೂತ್ರವನ್ನು ಉತ್ಪತ್ತಿ ಮಾಡಿ ಮೂತ್ರಪಿಂಡಗಳನ್ನು ಹಾಳುಮಾಡುತ್ತವೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಬಾಯರಿಕೆಯಾಗದೇ ಅನಗತ್ಯವಾಗಿ ಮತ್ತು ಯಾವುದೋ ಪುಸ್ತಕ, ವಿಜ್ಞಾನ ಮತ್ತು ವ್ಯಕ್ತಿ ಹೇಳಿದರೆಂದು ಲೀಟರ್ ಗಳ ಲೆಕ್ಕದಲ್ಲಿ ಅತಿಯಾಗಿ ನೀರನ್ನು ಕುಡಿದರೆ ಯಕೃತಿನ ಮೂತ್ರೋತ್ಪತ್ತಿ ಮಾಡುವ ಭಾಗ (ಯಕೃತ್ತಿನಲ್ಲಿರುವ ಅಪಾನ ವಾಯುವಿನ ಸ್ಥಾನ) ದೂಷಣೆಗೊಳ್ಳುತ್ತದೆ.
2️⃣ವಿಹಾರ:
ದಿನನಿತ್ಯದ ಶಾರೀರಿಕ ಶ್ರಮವನ್ನೇ ವಿಹಾರವೆಂದು ಹೇಳುತ್ತೇವೆ. ಅತೀ ಕಡಿಮೆಯೆಂದರೂ ಹಣೆಯಲ್ಲಿ ಬೆವರು ಬರುವ ತನಕ ಶಾರೀರಿಕ ಕೆಲಸಗಳನ್ನು ನಿತ್ಯವೂ ಮೂರುಬಾರಿಯಾದರೂ ಮಾಡುತ್ತಿರಬೇಕು. ಹಾಗಾದಾಗ ಮಾತ್ರ ಚಯಾಪಚಯಕ್ರಿಯೆ ಸರಿಯಾಗಿ ನಡೆದು ಮಲಾಂಶವು ಜೀವಕೋಶಗಳಿಂದ ಹೊರಬರುತ್ತದೆ.
3️⃣ಜೀವನಶೈಲಿ:
ಶರೀರ-ಮನಸ್ಸುಗಳಿಗೆ ಒಗ್ಗುತ್ತದೆಯೋ ಅಥವಾ ಅಲರ್ಜಿಯನ್ನುಂಟು ಮಾಡುತ್ತದೆಯೋ ಎಂಬುದನ್ನು ತಿಳಿಯದೇ ತಿನ್ನುವ, ಕುಡಿಯುವ, ತೊಡುವ , ಕರ್ಮಗಳಿಂದ ಶರೀರದಲ್ಲಿ ಆಂತರಿಕ ವಿಷ ಹೆಚ್ಚುತ್ತದೆ. ಕಾಲಾಂತರದಲ್ಲಿ ಪರಿಣಾಮ ಬೀರುವ ಈ ವಿಷವು ಯಕೃತ್-ಮೂತ್ರಪಿಂಡಗಳನ್ನು ಹಾಳುಮಾಡುತ್ತದೆ.
4️⃣ನಿದ್ರೆ:
ಕಡ್ಡಾಯವಾಗಿ ರಾತ್ರಿ 9 ರಿಂದ 10 ರ ಒಳಗೆ ಆರಂಭವಾಗಿ ಬೆಳಗಿನ ಜಾವ 5 ರಿಂದ 6 ರ ವರೆಗಿನ ನಿದ್ರೆಯೇ ನಿಜವಾದ ಆರೋಗ್ಯವನ್ನು ತಂದುಕೊಡುವ ನಿದ್ರೆಯಾಗಿದೆ. ಅದರ ಹೊರತು 24 ಗಂಟೆಗಳಲ್ಲಿ ಯಾವುದೋ 8 ತಾಸು ನಿದ್ರೆ ಆರೋಗ್ಯವನ್ನು ತಂದುಕೊಡದು.
ಏಕೆಂದರೆ, ಈ ಶರೀರವು ಜಡವಸ್ತುವಲ್ಲ. ಅಂದರೆ, ಹೊರಪ್ರಕೃತಿಯಲ್ಲಿನ ಬದಲಾವಣೆಗಳೊಂದಿಗೆ ನಿರಂತರ ಸಂಬಂಧವನ್ನು ಹೊಂದಿರುತ್ತದೆ.
5️⃣ಅನುರಕ್ತಭಾವ:
ತಂದೆ-ತಾಯಿಗಳು ತಮ್ಮ ಮಗುವಿನೊಂದಿಗೆ ಹೊಂದಿರುವ ಭಾವವನ್ನು ಅನುರಕ್ತಭಾವ ಎಂದು ಹೇಳಬಹುದು.
ಈ ಭಾವದ ಸ್ವಲ್ಪ ಅಂಶವನ್ನಾದರೂ ಪ್ರಪಂಚದ ಜನರೊಂದಿಗೆ (ಸಹಜೀವಿಗಳೊಂದಿಗೆ), ಪ್ರಾಣಿ-ಪಕ್ಷಿಗಳೊಂದಿಗೆ, ಗಿಡ-ಮರಗಳೊಂದಿಗೆ ಹೊಂದಿದ್ದರೆ ನಮ್ಮ ಅಂತರಿಕ ಅವಯವಗಳ ನಡುವಿನ ಅನುರಕ್ತಭಾವ ವೃದ್ಧಿಯಾಗುತ್ತದೆ. ಆಗ, ಯಕೃತ್-ಮೂತ್ರಪಿಂಡಗಳ ನಡುವಿನ, ಯಕೃತ್-ರಕ್ತನಾಳಗಳ ನಡುವಿನ, ಯಕೃತ್-ಹೃದಯದ ನಡುವಿನ , ಯಕೃತ್-ಇತರ ಅವಯವಗಳ ನಡುವಿನ ಪರಸ್ಪರ ಭಾವನಾತ್ಮಕ ಹೊಂದಾಣಿಕೆ ಏರ್ಪಡುತ್ತದೆ.
👤🍃🍃👦👧
ಆಗ, ಸಹಜವಾಗಿ ಯಕೃತ್ ಯಾವ ರೀತಿಯ ಗುಣಾತ್ಮಕ ಮೂತ್ರವನ್ನು ಉತ್ಪತ್ತಿ ಮಾಡಬೇಕೆಂದು ಕಿಡ್ನಿ ಮೊದಲು ಮಾಡಿ ಇತರ ಅವಯವಗಳು ನಿರ್ಧರಿಸುತ್ತವೆ ಮತ್ತು ಸಹಕಾರ ನೀಡುತ್ತವೆ.
ಇದೇ, ನಿಜವಾದ ಆರೋಗ್ಯ
***
ಆಧುನಿಕ ಜೀವನ ಶೈಲಿ ಹಾಗೂ ಪ್ರತಿನಿತ್ಯ ಸೇವಿಸುವ ಆಹಾರದಿಂದಾಗಿ ಯುವ ಜನಾಂಗದವರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಕಿಡ್ನಿ ಸ್ಟೋನ್ ಎಂದರೆ ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆ ಆಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಳ್ಳುವುದಾಗಿದೆ.
ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಜೊತೆಗೆ ಕೆಲವು ಮನೆ ಮದ್ದನ್ನು ಅನುಸರಿಸಿ.
1.ತುಳಸಿ: ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕಗಳ ಗುಣಗಳು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು, ಈ ಆಮ್ಲದಿಂದಾಗಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.
2.ಕಲ್ಲಂಗಡಿ ಬೀಜ: ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕಲು ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಲೀಟರ್‍ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆಗಳ ಕಾಲ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯುವರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗಿ ನೋವಿನಿಂದಲೂ ಮುಕ್ತಿ ಪಡೆಯುತ್ತಿರಿ.
3.ಬಾಳೆ ದಿಂಡು ಜ್ಯೂಸ್: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಕುಡಿಯಿರಿ. ಹಾಗೂ ಇದರ ಜೊತೆಗೆ ದೇಹಕ್ಕೆ ನಿಯಮಿತಕ್ಕಿಂತಲೂ ಅಧಿಕವಾಗಿ ನೀರನ್ನು ಕುಡಿಯಿರಿ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
4.ಆ್ಯಪಲ್ ಸಿಡರ್ ವಿನೆಗರ್: ಒಂದು ಅಥವಾ ಎರಡು ಟೇಬಲ್ ಸ್ಪೂನ್‍ಗಳಷ್ಟು ಆ್ಯಪಲ್ ಸಿಡರ್ ವಿನೆಗರ್‍ಗೆ ಒಂದಿಷ್ಟು ನೀರನ್ನು ಬೆರೆಸಿ ಅದನ್ನು ಪ್ರತಿನಿತ್ಯ ಕುಡಿಯಿರಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಲು ಸಹಾಯವಾಗುತ್ತದೆ.
***
ಆಧುನಿಕ ಜೀವನ ಶೈಲಿ ಹಾಗೂ ಪ್ರತಿನಿತ್ಯ ಸೇವಿಸುವ ಆಹಾರದಿಂದಾಗಿ ಯುವ ಜನಾಂಗದವರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಕಿಡ್ನಿ ಸ್ಟೋನ್ ಎಂದರೆ ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆ ಆಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಳ್ಳುವುದಾಗಿದೆ.
ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಜೊತೆಗೆ ಕೆಲವು ಮನೆ ಮದ್ದನ್ನು ಅನುಸರಿಸಿ.
1.ತುಳಸಿ: ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕಗಳ ಗುಣಗಳು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು, ಈ ಆಮ್ಲದಿಂದಾಗಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.
2.ಕಲ್ಲಂಗಡಿ ಬೀಜ: ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕಲು ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಲೀಟರ್‍ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆಗಳ ಕಾಲ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯುವರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗಿ ನೋವಿನಿಂದಲೂ ಮುಕ್ತಿ ಪಡೆಯುತ್ತಿರಿ.
3.ಬಾಳೆ ದಿಂಡು ಜ್ಯೂಸ್: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಕುಡಿಯಿರಿ. ಹಾಗೂ ಇದರ ಜೊತೆಗೆ ದೇಹಕ್ಕೆ ನಿಯಮಿತಕ್ಕಿಂತಲೂ ಅಧಿಕವಾಗಿ ನೀರನ್ನು ಕುಡಿಯಿರಿ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
4.ಆ್ಯಪಲ್ ಸಿಡರ್ ವಿನೆಗರ್: ಒಂದು ಅಥವಾ ಎರಡು ಟೇಬಲ್ ಸ್ಪೂನ್‍ಗಳಷ್ಟು ಆ್ಯಪಲ್ ಸಿಡರ್ ವಿನೆಗರ್‍ಗೆ ಒಂದಿಷ್ಟು ನೀರನ್ನು ಬೆರೆಸಿ ಅದನ್ನು ಪ್ರತಿನಿತ್ಯ ಕುಡಿಯಿರಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಲು ಸಹಾಯವಾಗುತ್ತದೆ.
****
ಕಿಡ್ನಿ ಕಲ್ಲು, ಕಫ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಹುರುಳಿಕಾಳಿನಲ್ಲಿ ಅಡಗಿದೆ ಪರಿಹಾರ ಯಾವ ರೀತಿ ಬಳಸಬೇಕು ಗೊತ್ತಾ..!
ನಮ್ಮ ಮನೆಯಲ್ಲೇ ಇರುವ ಹುರುಳಿಕಾಳಿನಲ್ಲಿ ಹಲವಾರು ರೋಗಗಳಿಗೆ ಪರಿಹಾರವಿದೆ ಆದರೆ ಇದು ನಮಗೆ ಗೊತ್ತಿರುವುದಿಲ್ಲ ಆದರೆ ಮುಂದೆ ಓದಿ ನೀವು ತಪ್ಪದೆ ಹುರುಳಿಕಾಳನ್ನು ಬಳಕೆ ಮಾಡುತ್ತೀರಾ.
ನಿಮಗೆ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆ ಇದ್ದರೆ ನೀವು ತಪ್ಪದೆ ಪ್ರತಿ ನಿತ್ಯ ನೆನೆಸಿ ಬೇಯಿಸಿದ ಹುರುಳಿಕಾಳನ್ನು ಸೇವಿಸಿದರೆ ಕಲ್ಲುಗಳು ಬೇಗ ನಿವಾರಣೆಯಾಗುತ್ತವೆ ಮತ್ತು ನೆನೆಸಿದ ಹುರುಳಿಕಾಳನ್ನು ದಿನಕ್ಕೆ 2 ಬಾರಿ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದ ಕೊಬ್ಬಿನಂಶ ಕಡಿಮೆಯಾಗುತ್ತದೆ.
ಬಿಕ್ಕಳಿಕೆ ಹೆಚ್ಚಿದ್ದರೆ ಹುರುಳಿಕಾಳನ್ನು ಸುಡುವಾಗ ಬರುವ ಹೊಗೆಯನ್ನು ಬಾಯಿಂದ ತೆಗೆದು ಕೊಂಡರೆ ಬಿಕ್ಕಳಿಕೆ ಬೇಗ ನಿಲ್ಲುತ್ತದೆ.
ಕಫ ಹೆಚ್ಚಾಗಿ ಮೂಗು ಕಟ್ಟುವ ಸಮಯೇ ಮತ್ತು ಕೆಮ್ಮು ಇದ್ದರೆ ಹುರುಳಿ ಕಾಳಿನ ಸೂಪ್ ಸೇವಿಸಿ. ಇದರಿಂದ ಕಫ ಬೇಗ ಕರಗುತ್ತದೆ ಮತ್ತು ಕೆಮ್ಮು ಶಮನವಾಗುತ್ತದೆ.
ಹುರುಳಿಕಾಳನ್ನು ರಾತ್ರಿ ನೀರಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಬೇಯಿಸಿ ಅದಕ್ಕೆ ಸೈಂಧವ ಉಪ್ಪು, ಕರಿಮೆಣಸಿನ ಪುಡಿ, ಜೀರಿಗೆ ಸೇರಿಸಿ ತಿಂಡಿ ಸಮಯಕ್ಕೆ ಸೇವಿಸಿದರೆ ದೇಹದ ತೂಕ ಮತ್ತು ಬೊಜ್ಜು ಕರಗುತ್ತದೆ.ಹುರುಳಿಕಾಳನ್ನು ನೆನೆಸಿ ಪೇಸ್ಟ್ ಮಾಡಿ ನೋವು ಮತ್ತು ಊತ ಇರುವ ಸಂಧಿಗಳಿಗೆ ಲೇಪ ಮಾಡಿದರೆ ನೋವು ಮತ್ತು ಊತ ಬೇಗ ಕಡಿಮೆಯಾಗುತ್ತವೆ. ರಾತ್ರಿ ನೀರಿನಲ್ಲಿ ನೆನೆಸಿದ ಹುರುಳಿಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಬೇಯಿಸದೆ ಹಾಗೆ ಸೇವಿಸಿದರೆ ಮಲವಿಸರ್ಜನೆ ಸುಲಭವಾಗುತ್ತದೆ.
***
ಮೂತ್ರಪಿಂಡವು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದೆ, ಇದು ದೇಹದಲ್ಲಿ ಇರುವ ಕೊಳೆಯನ್ನು ಸ್ವಚ್ಛಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಕೊಳೆಯನ್ನೂ ಸಹ ಸ್ವಚ್ಛಗೊಳಿಸಲು ಇದು ಸಹಕರಿಸುತ್ತದೆ. ಹೀಗಿರುವಾಗ, ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಹಲವಾರು ಸಮಸ್ಯೆಗಳ ಅಪಾಯ ಎದುರಾಗುತ್ತದೆ. ಆದ್ದರಿಂದ ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಕಿಡ್ನಿ ಆರೋಗ್ಯವಾಗಿರಲು ನೀವು ಬಯಸುತ್ತಿದ್ದರೆ, ನಿಂಬೆಯನ್ನು ಸೇವಿಸಿ. ನಿಂಬೆಹಣ್ಣಿನ ಸೇವನೆಯಿಂದ ಕಿಡ್ನಿಯಲ್ಲಿರುವ ಕೊಳೆ ಶುದ್ಧವಾಗುತ್ತದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ನಿಂಬೆಯನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
1.ಪುದೀನಾ-ನಿಂಬೆ ಪಾನಕ
ಪುದೀನ ಮತ್ತು ನಿಂಬೆಯಿಂದ ತಯಾರಿಸಿದ ಪಾನೀಯಗಳನ್ನು ಸೇವಿಸುವುದರಿಂದ ನೀವು ಕಿಡ್ನಿಯನ್ನು ಆರೋಗ್ಯವಾಗಿಡಬಹುದು. ಈ ಪಾನೀಯವನ್ನು ತಯಾರಿಸಲು, ಒಂದು ಲೋಟ ನೀರು ತೆಗೆದುಕೊಳ್ಳಿ. ನಿಂಬೆ ರಸ, ಸ್ವಲ್ಪ ಪುದೀನ ಎಲೆಗಳು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪಾನೀಯವನ್ನು ಸೇವಿಸುವುದರಿಂದ ನಿಮ್ಮ ಮೂತ್ರಪಿಂಡವು ಆರೋಗ್ಯಕರವಾಗಿರುತ್ತದೆ.
2.ಮಸಾಲಾ ಲೆಮನ್ ಸೋಡಾ
ನೀವು ಸ್ವಲ್ಪ ಮಸಾಲೆ ತಿನ್ನಲು ಇಷ್ಟಪಡುತ್ತಿದ್ದರೆ, ಮಸಾಲಾ ನಿಂಬೆ ಸೋಡಾ ಪಾನೀಯವನ್ನು ಸೇವಿಸಿ. ಇದರಿಂದ ನಿಮ್ಮ ಕಿಡ್ನಿ ಆರೋಗ್ಯಕರವಾಗಿರುತ್ತದೆ. ಈ ಪಾನೀಯವನ್ನು ತಯಾರಿಸಲು, ಒಂದು ಗ್ಲಾಸ್ ತೆಗೆದುಕೊಳ್ಳಿ ಮತ್ತು ಅದರಲ್ಲಿ ನಿಂಬೆ ರಸ, ಜೀರಿಗೆ-ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ಸೋಡಾ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಸಿದ್ಧಪಡಿಸಿದ ಪಾನೀಯವನ್ನು ಕುಡಿಯಿರಿ. ಇದರಿಂದ ಕಿಡ್ನಿಯನ್ನು ಆರೋಗ್ಯವಾಗಿರುತ್ತದೆ.
3.ತೆಂಗಿನಕಾಯಿ ಪಾನಕ
ತೆಂಗಿನಕಾಯಿ ಪಾನಕ ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಪಾನೀಯವನ್ನು ತಯಾರಿಸಲು, ಒಂದು ಲೋಟದಲ್ಲಿ ತೆಂಗಿನ ನೀರನ್ನು ತೆಗೆದುಕೊಳ್ಳಿ. ಈ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
***
No comments:
Post a Comment