Ram Navami Celebrations start on Gudi padwa, the first day of Chaitra; and continue for 9 days. During this period, devotees do parayans of Ramayan, recite the Ramaraksha stotra, sing bhajans-kirtans in His praise and chant His name.Some people do fasting for 9 days as vrat,and some just do one day fasting on Navami day.For some people it is a big festival as Lord Rama was born on Navami day ; so they will prepare lot of dishes,sweets and desserts and serve .
***
***
" ಶ್ರೀರಾಮಚಂದ್ರ "
ಉತ್ತರ – ಸೂರ್ಯವಂಶ, ರಘುವಂಶ, ಇಷ್ವಾಕು ವಂಶ
2. ರಾಮಚಂದ್ರನ ತಾಯಿ ಯಾರು?
ಉತ್ತರ – ಕೌಸಲ್ಯೆ
3. ರಾಮಚಂದ್ರನಿಗೆ ಹೆಣ್ಣು ಕೊಟ್ಟ ಜನಕರಾಜನ ಹೆಸರೇನು?
ಉತ್ತರ – ಸೀರಧ್ವಜ
4. ಜನಕರಾಜನ ರಾಜ್ಯ ಯಾವುದು?
ಉತ್ತರ – ಮಿಥಿಲಾನಗರ / ವಿಧೇಹರಾಜ್ಯ
5. ರಾಮನ ರಾಜ್ಯ ಯಾವುದು?
ಉತ್ತರ – ಅಯೋಧ್ಯೆ
6. ಜನಕರಾಜನ ಸಹೋದರನ ಹೆಸರೇನು?
ಉತ್ತರ – ಕುಶಧ್ವಜ
7. ದಶರಥನ ಮಕ್ಕಳು ಮತ್ತು ಸೊಸೆಯರ ಹೆಸರೇನು?
ಉತ್ತರ – ರಾಮ – ಸೀತೆ, ಲಕ್ಷ್ಮಣ – ಊರ್ಮಿಳೆ
ಭರತ – ಮಾಂಡವಿ ಶತ್ರುಜ್ಞ – ಶ್ರುತಕೀರ್ತಿ
8. ದಶರಥನ ಮೂರು ಮುಖ್ಯ ಪತ್ನಿಯರು ಯಾರು?
ಉತ್ತರ – ಕೌಸಲ್ಯೆ, ಸುಮಿತ್ರ, ಕೈಕೇಯಿ
9. ದಶರಥನು ಯಾವ ಯಾಗ ಮಾಡಿದನು?
ಉತ್ತರ – ಪುತ್ರಕಾಮೇಷ್ಠಿ ಯಾಗ
10. ಆ ಯಾಗ ಯಾರು ಮಾಡಿಸಿದರು?
ಉತ್ತರ – ಋಷ್ಯಶೃಂಗ.
11. ದಶರಥನ ಪುತ್ರಕಾಮೇಷ್ಟಿ ಯಾಗ ಮಾಡಿಸಿದವರು ಅವನಿಗೆ ಏನಾಗಬೇಕು?
ಉತ್ತರ : ದಶರಥನ ಮಗಳು ಶಾಂತಾಳ ಪತಿ
12. ಅಲ್ಲಿ ಬಂದ ಪಾಯಸವನ್ನು ಯಾವ ಪ್ರಮಾಣದಲ್ಲಿ ಹಂಚಿದನು?
ಉತ್ತರ – ಕೌಸಲ್ಯೆಗೆ ಅರ್ಧಭಾಗ, ರಾಣಿ ಸುಮಿತ್ರಾ ಕಾಲುಭಾಗ ಸೇವಿಸಿ ಮತ್ತು ರಾಣಿ ಕೈಕೇಯಿ ಉಳಿದ ಕಾಲುಭಾಗದಲ್ಲಿ ಸ್ವಲ್ಪ ಸೇವಿಸಿ ಮತ್ತೊಮ್ಮೆ ಎರಡನೇ ಬಾರಿಗೆ ಪಾಯಸ ಸೇವಿಸಲು ಸುಮಿತ್ರಾಳಿಗೆ ಮಡಕೆಯನ್ನು ನೀಡಿದರು. ಈ ರೀತಿಯಲ್ಲಿ ಪಾಯಸವನ್ನು ಹಂಚಿಕೊಂಡಿದ್ದರಿಂದ, ಹೆಚ್ಚು ಭಾಗವನ್ನು ಸೇವಿಸಿದ ರಾಣಿ ಕೌಸಲ್ಯ ಶ್ರೀ ರಾಮನಿಗೆ ಜನ್ಮ ನೀಡಿದರು. ರಾಣಿ ಕೈಕೇಯಿ ಭರತನಿಗೆ ಜನ್ಮ ನೀಡಿದರು ಮತ್ತು ಎರಡು ಬಾರಿ ಪಾಯಸ ಸೇವಿಸಿದ ರಾಣಿ ಸುಮಿತ್ರಾ ಲಕ್ಷ್ಮಣ ಮತ್ತು ಶತ್ರುಘ್ನರಿಗೆ ಜನ್ಮ ನೀಡಿದರು.
13. ದಶರಥನ ಮಂತ್ರಿ ಯಾರು?
ಉತ್ತರ – ಸುಮಂತ
14. ದಶರಥನ ಕುಲ ಪುರೋಹಿತರಾರು?
ಉತ್ತರ – ವಸಿಷ್ಠರು
15. ಕೈಕೇಯಿ ದಶರಥನಿಗೆ ಯಾವ ವರ ಕೇಳಿದಳು ?
ಉತ್ತರ – ರಾಮನನ್ನು 14 ವರ್ಷ ವನವಾಸ ಕಳಿಸಿ ಭರತನಿಗೆ ಪಟ್ಟಾಭಿಷೇಕ ಮಾಡಬೇಕು
16 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?
ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ; ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು.
17. ರಾಮಚಂದ್ರನ ಜನ್ಮದಿನ, ನಕ್ಷತ್ರ ಯಾವುದು?
ಉತ್ತರ – ಚೈತ್ರ ಶುಕ್ಲ ನವಮಿ, ಪುನರ್ವಸು ನಕ್ಷತ್ರ , ಬುಧವಾರ
18. ಬಾಲಕಿ ರಾಮನನ್ನು ತನ್ನ ಜೊತೆ ಕಳಿಸೆಂದು ಕೇಳಿದ ಋಷಿಗಳು ಯಾರು?
ಉತ್ತರ – ವಿಶ್ವಾಮಿತ್ರ
19. ರಾಮಚಂದ್ರನು ಮೊದಲು ಕೊಂದಿದ್ದು ಯಾರನ್ನು?
ಉತ್ತರ – ತಾಟಕಿಯನ್ನು
20. ರಾಮನ ಬಾಣದ ಗುರಿಗೆ ನೂರಾರು ಮೈಲಿ ದಾಟಿ ಬಿದ್ದವನಾರು?
ಉತ್ತರ – ಮಾರೀಚ
21. ದಶರಥನು ಯಾರ ಅವತಾರ?
ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.
22. ಕೇಸರಿ ಮತ್ತು ಅಂಜನಿ ಯಾರ ಅವತಾರ?
ಉತ್ತರ : ಕೇಸರಿಯು ಮರುತ್ ದೇವತೆಯ ಅವತಾರ ಮತ್ತು ಅಂಜನಿಯು ಪುಂಜಕಸ್ಥಲೀ ಎಂಬ ಅಪ್ಸರೆಯ ಅವತಾರ.
23. ಯಾವ ಯಾವ ದೇವತೆಗಳು ಯಾವ ಯಾವ ವಾನರಾದಿ ರೂಪದಿ ಅವತರಿಸಿದರು?
ಉತ್ತರ : ಬೃಹಸ್ಪತಿ – ತಾರ, ಚಂದ್ರ – ಅಂಗದ; ಶಚೀದೇವಿ – ತಾರೆ
ಯಮ – ಜಾಂಬವಂತ ; ವರುಣ – ಸುಷೇಣ;
ಅಶ್ವಿನಿ ದೇವತೆಗಳು – ಮೈಂದ ವಿವಿಧ. ;
ಅಗ್ನಿ – ನೀಲ ; ವಾಲಿ – ಇಂದ್ರ; ಸುಗ್ರೀವ – ಸೂರ್ಯ
24. ಭರತ, ಲಕ್ಷ್ಮಣ, ಶತ್ರುಜ್ಞರ ಮೂಲ ರೂಪ ಯಾವುದು?
ಉತ್ತರ – ಭರತನು ಕಾಮನ ಅವತಾರ, ಲಕ್ಷ್ಮಣನು ಆದಿ ಶೇಷನ ಅವತಾರ, ಶತ್ರುಜ್ಞನು ಅನಿರುದ್ಧನ ಅವತಾರ.
25 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?
ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ; ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು
26. ರಾಮಚಂದ್ರಾದಿ ನಾಲ್ಕು ಪುತ್ರರಿಗೆ ನಾಮಕರಣ ಮಾಡಿಸಿದ ಪುರೋಹಿತರು ಯಾರು?
ಉತ್ತರ – ವಸಿಷ್ಠರು
27 ದಶರಥನ ಸಭೆಗೆ ಆಗಮಿಸಿ ಯಜ್ಞರಕ್ಷಣೆಗಾಗಿ ಮಕ್ಕಳನ್ನು ಕಳಿಸೆಂದವರಾರು?
ಉತ್ತರ : ವಿಶ್ವಾಮಿತ್ರರು
28. ದಶರಥನಿಗೆ ಎಷ್ಟು ವರ್ಷ ಕಾಲ ಗಂಡು ಮಕ್ಕಳಿರಲಿಲ್ಲ?
ಉತ್ತರ : 9000 ವರ್ಷಗಳ ಕಾಲ.
29. ವಿಶ್ವಾಮಿತ್ರರ ಇನ್ನೊಂದು ಹೆಸರೇನು?
ಉತ್ತರ : ಕೌಶಿಕ
30. ವಿಶ್ವಾಮಿತ್ರರು ರಾಮನಿಗೆ ಯಾವ ವಿದ್ಯೆಯನ್ನು ಹೇಳಿಕೊಟ್ಟರು?
ಉತ್ತರ : ಬಲಾ, ಅತಿಬಲಾ ಎಂಬ ವಿದ್ಯೆಯನ್ನು ಸಮರ್ಪಿಸಿದರು.
31 ವಿಶ್ವಾಮಿತ್ರರ ಜೊತೆ ಬಂದ ರಾಮಲಕ್ಷ್ಮಣರು ಎಲ್ಲಿ ಸಂಧ್ಯೋಪಾಸನೆ ಮಾಡಿದರು?
ಉತ್ತರ : ಅನಂಗಾಶ್ರಮದಲ್ಲಿ.
32. ಶಿವನು ಕಾಮನನ್ನು ದಹಿಸಿದ ಸ್ಥಳವಾವುದು?
ಉತ್ತರ ; ಅನಂಗಾಶ್ರಮ
33 ತಾಟಕೆಯ ಪತಿ ಯಾರು? ತಾಟಕಿಯ ಮಕ್ಕಳಾರು?
ಉತ್ತರ : ತಾಟಕೆಯ ಪತಿ ಸುಂದ. ಅವಳ ಮಕ್ಕಳು ಮಾರೀಚ ಮತ್ತು ಸುಬಾಹು.
34. ಮಾರೀಚನ ಸಂಹರಿಸಲು ರಾಮನು ಉಪಯೋಗಿಸಿದ ಬಾಣ ಯಾವುದು?
ಉತ್ತರ : ವಾಯುವ್ಯಾಸ್ತ್ರ.
35. ವಿಶ್ವಾಮಿತ್ರರ ತಂದೆ ಯಾರು?
ಉತ್ತರ : ಗಾಧಿ ಮಹಾರಾಜ (ಇಂದ್ರನೇ ಗಾಂಧಿ ರಾಜನಾಗಿ ಅವತರಿಸಿದ್ದು)
36. ಶಿಲಾಸ್ಪರ್ಶದಿಂದ ರಾಮ ಯಾರನ್ನು ಉದ್ಧರಿಸಿದ?
ಉತ್ತರ : ಅಹಲ್ಯಾ
37. ಶಿಲೆಯಾಗೆಂದು ಶಪಿಸಿದವರಾರು?
ಉತ್ತರ : ಶಪಿಸಿದವರು ಅಹಲ್ಯಾ ಪತಿಗಳಾದ ಗೌತಮರು.
38. ಜನಕರಾಜನ ಯಜ್ಞಶಾಲೆ ಯಾವ ನಗರಕ್ಕೆ ಬಂದನು?
ಉತ್ತರ : ಮಿಥಿಲಾನಗರಕ್ಕೆ ಬಂದನು.
39. ಜನಕರಾಜನಿಗೆ ಸೀತಾ ಪ್ರಕಟವಾಗಿದ್ದು ಹೇಗೆ?
ಉತ್ತರ : ಯಜ್ಞ ಮಾಡಲು ಭೂಮಿ ಅಗೆಯುತ್ತಿದ್ದಾಗ ಭೂಮಿಯಲ್ಲಿ ಪ್ರಾಪ್ತಳಾದಳು.
40. ಜನಕರಾಜನಿಗೆ ಶಿವಧನಸ್ಸು ನೀಡಿದವರಾರು?
ಉತ್ತರ : ಪಿನಾಕಪಾಣಿ ಶಿವ
41. ಸೀತಾ ಸ್ವಯಂವರಕ್ಕೆ ಜನಕರಾಜನ ಶರತ್ತು ಏನು?
ಉತ್ತರ : ಯಾರು ಶಿವಧನಸ್ಸು ಎತ್ತುವರೋ ಅವರಿಗೆ ಸೀತಾ ವಿವಾಹ ಎಂಬ ಶರತ್ತು.
42. ಸೀತಾ ಸ್ವಯಂವರ ನಂತರ ರಾಮನು ಕೊಂದಿದ್ದು ಯಾರನ್ನು?
ಉತ್ತರ : ಅತುಲ ಎಂಬ ದೈತ್ಯನನ್ನು.
43. ಕ್ಷತ್ರಿಯ ಕುಲ ಧ್ವಂಸಕ ಯಾರು ?
ಉತ್ತರ : ಪರಶುರಾಮ
44. ಅತುಲನು ಎಲ್ಲಿ ಅಡಗಿದ್ದ?
ಉತ್ತರ : ಪರಶುರಾಮನ ಉದರದಲ್ಲಿದ್ದ.
45. ಹರಿ ಮತ್ತು ಹರರ ಧನಸ್ಸು ಯಾವುದು?
ಉತ್ತರ : ಹರಿಯ ಧನಸ್ಸು ಶಾಂಙ್ಗ ಮತ್ತು ಹರನ ಧನಸ್ಸು ಪಿನಾಕ.
46. ಪರಮಾತ್ಮನ ಎರಡು ರೂಪಗಳು ಸೀತಾ ಸ್ವಯಂವರದಲ್ಲಿ ಕಂಡುಬಂದವು. ಅವು ಯಾವುದು?
ಉತ್ತರ : ರಾಮ ಮತ್ತು ಪರಶುರಾಮ.
47. ದಶರಥನ ಇಚ್ಛೆಯಂತೆ ರಾಮನ ಪಟ್ಟಾಭಿಷೇಕದ ಸಿದ್ಧತೆ ಮೊದಲು ಅಪ್ರಿಯವೆನಿಸಿದ್ದು ಯಾರಿಗೆ?
ಉತ್ತರ : ಮೊದಲು ಕ್ಷೋಭೆಗೊಳಗಾದವಳು ಮಂಥರೆ.
48. ರಾಮನ ಪಟ್ಟಾಭಿಷೇಕದ ವಾರ್ತೆಯಿಂದ ಖಿನ್ನಳಾದ ಮಂಥರೆ ಯಾರಿಗೆ ದುಷ್ಟ ಬುದ್ಧಿ ಪ್ರೇರೇಪಿಸಿದರು?
ಉತ್ತರ : ಮಂಥರೆ ಕೈಕೇಯಿಗೆ ದುಷ್ಟ ಬುದ್ಧಿ ಪ್ರಚೋದಿಸಿದಳು.
49. ಹಿಂದೆ ಕೈಕೇಯಿ ದಶರಥನಿಗೆ ಮಾಡಿದ್ದು ಸಹಾಯವೇನು?
ಉತ್ತರ : ಹಿಂದೆ ಶಂಬರಾಸುರನೊಂದಿಗೆ ಯುದ್ಧ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿದ್ದ ದಶರಥನ ರಥವನ್ನು ತಾನೇ ಓಡಿಸಿ, ರಥದ ಕೀಲು ಕಳಚಿದ್ದನ್ನು ಗಮನಿಸಿ, ತನ್ನ ಬೆರಳನ್ನೇ ಕೀಲಿನಂತಿರಿಸಿ, ರಥವನ್ನು ರಕ್ಷಿಸಿದ್ದಳು.
50. ರಾಮನಿಗೆ ವನವಾಸ ಹೋಗಬೇಕೆಂದು ವಿಷಯ ತಿಳಿಸಿದವರಾರು?
ಉತ್ತರ : ಸ್ವತಃ: ಕೈಕೇಯಿ
51. ರಾಮನೊಂದಿಗೆ ವನವಾಸಕ್ಕೆ ಹೊರಟವರಾರು?
ಉತ್ತರ : ಲಕ್ಷ್ಮಣ ಮತ್ತು ಸೀತಾ
52. ವನವಾಸ ಪೂರ್ವದಲ್ಲಿ ರಾಮನು ಯಾರಿಗೆ ಸಾವಿರ ಗೋವುಗಳ ದಾನ ನೀಡಿದ?
ಉತ್ತರ : ತ್ರಿಜಟನೆಂಬ ಬಡ ಬ್ರಾಹ್ಮಣನಿಗೆ.
53. ದಶರಥನು ಯಾರ ಅವತಾರ?
ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.
54. ಕೈಕೇಯಲ್ಲಿ ಯಾರ ಆವೇಶವಿತ್ತು?
ಉತ್ತರ : ಕೈಕೇಯಿಯಲ್ಲಿ ನಿಕೃತಿ ಎಂಬ ರಾಕ್ಷಸಿಯ ಆವೇಶವಿತ್ತು.
55. ವನವಾಸಕ್ಕೆ ಹೊರಟ ರಾಮನನ್ನು ಗಂಗಾತೀರದಲ್ಲಿ ಯಾರು ಪೂಜಿಸಿದರು?
ಉತ್ತರ : ಗಂಗಾತೀರದಲ್ಲಿ ನಿಷಾದರಾಜ ಗುಹ ಪೂಜಿಸಿದನು..
56. ಭಾರದ್ವಾಜ ಮುನಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಪ್ರಯಾಗ ಕ್ಷೇತ್ರದಲ್ಲಿತ್ತು.
57. ದಶರಥನು ಸತ್ತಾಗ ರಾಮ ವನವಾಸಕ್ಕೆ ಹೋಗಿ ಎಷ್ಟು ದಿನವಾಗಿತ್ತು?
ಉತ್ತರ : ಆರು ದಿನವಾಗಿತ್ತು.
58. ಭರತನು ರಾಮನನ್ನು ಎಲ್ಲಿ ಭೇಟಿಯಾದರು?
ಉತ್ತರ : ಚಿತ್ರಕೂಟದಲ್ಲಿ ಭೇಟಿಯಾದನು
59. ರಾಮನು ತಿರುಗಿ ಬರಲು ಒಪ್ಪದುದರಿಂದ ಭರತನು ರಾಮನಲ್ಲಿ ಏನನ್ನು ಕೇಳಿ ಪಡೆದನು?
ಉತ್ತರ – ರಾಮನ ಪಾದುಕೆಗಳನ್ನು ಪಡೆದನು.
60. ಭರತನು ಎಲ್ಲಿ ವಾಸಿಸತೊಡಗಿದನು ?
ಉತ್ತರ : ಅಯೋಧ್ಯೆಯ ಹೊರಗಿರುವ ನಂದಿ ಗ್ರಾಮದಲ್ಲಿ.
61. ಸೀತಾದೇವಿಯ ಕುಕ್ಕಿದ ಪ್ರಾಣಿ ಯಾವುದು?
ಉತ್ತರ : ಕಾಗೆ
62. ಕಾಗೆ ರೂಪದಿ ಬಂದವನಾರು? ಅವನಲ್ಲಿದ್ದ ಅಸುರನಾರು?
ಉತ್ತರ : ಕಾಗೆ ರೂಪದಿ ಬಂದವನು ಇಂದ್ರಪುತ್ರ ಜಯಂತ.
ಅವನಲ್ಲಿದ್ದ ಅಸುರ – ಕುರಂಗ.
63. ರಾಮ ಜಯಂತನಿಗೆ ನೀಡಿದ ಶಿಕ್ಷೆ ಏನು?
ಉತ್ತರ : ರಾಮನು ಪ್ರಯೋಗಿಸಿದ ಹುಲ್ಲು ಕಡ್ಡಿಯಿಂದ ಜಯಂತ ವಾಯಸದ ಕಣ್ಣಿನಲ್ಲಿದ್ದ ಕುರಂಗ ಸಂಹಾರ. ಆ ಅಸುರ ಶಿವವರದಿಂದ ಎಲ್ಲಾ ಕಾಗೆಗಳ ಕಣ್ಣಿನಲ್ಲಿ ಸೇರಿದ್ದ. ಶಿವನ ವಿಚಾರವೇನೆಂದರೆ ಎಲ್ಲಿಯವರೆಗೂ ಕಾಗೆಗಳಿಗೆ ಎರಡೂ ಕಣ್ಣು ಇರುವುದೋ ಅಲ್ಲಿಯವರೆಗೂ ಕುರಂಗನಿಗೆ ಸಾವಿಲ್ಲ. ರಾಮ ಕಾಗೆಗಳ ಒಂದು ಕಣ್ಣು ತೆಗೆದು ಕುರಂಗ ಸಂಹರಿಸಿದ.
64. ದಂಡಕಾರಣ್ಯದಲ್ಲಿ ರಾಮ ಯಾರನ್ನು ಕೊಂದನು?
ಉತ್ತರ : ರಾಮನು ಖರ ದೂಷಣರನ್ನು ಕೊಂದನು. ಅವರು ರಾವಣನ ಮಲ ಸಹೋದರರು.
65. ರಾವಣನು ಯಾರ ಮಗ?
ರಾವಣನು ವಿಶ್ರವಸ್ ಮುನಿ ಮತ್ತು ರಾಕ್ಷಸೀ ಕೈಕಸೀ ಮಗ. ಪುಲಸ್ತ್ಯನ ಮೊಮ್ಮಗ.
66. ದಶರಥನ ಮರಣವನ್ನಪ್ಪಿದಾಗ ಜೊತೆಗೆ ಯಾವ ಮಕ್ಕಳಿದ್ದರು?
ಉತ್ತರ : ಯಾವ ಮಕ್ಕಳೂ ಹತ್ತಿರವಿರಲಿಲ್ಲ. ರಾಮಲಕ್ಷ್ಮಣರು ಕಾಡಿಗೂ, ಭರತ ಶತ್ರುಘ್ನರು ತಮ್ಮ ಮಾವನ ಮನೆಗೂ ಹೋಗಿದ್ದರು.
67. ಮರಣವನ್ನಪ್ಪಿದ ದಶರಥನನ್ನು ಹೇಗೆ ಸಂರಕ್ಷಿಸಿದ್ದರು?
ಉತ್ತರ : ಎಣ್ಣೆಯ ಕೊಪ್ಪರಿಗೆ ನಲ್ಲಿಟ್ಟು ದೇಹವನ್ನು ರಕ್ಷಿಸಿದ್ದರು.
68. ದಶರಥನಿಗೆ ಶಾಪವನಿತ್ತವರಾರು?
ಉತ್ತರ : ವೃದ್ಧ ಕುರುಡ ದಂಪತಿಗಳು
69. ದಶರಥನ ಔರ್ಧ್ವ ದೈಹಿಕ ಕಾರ್ಯ ಯಾರು ಮಾಡಿದರು?
ಉತ್ತರ : ವಸಿಷ್ಠ ಮತ್ತು ಜಾಬಾಲಿ ಋಷಿಗಳ ಅಪ್ಪಣೆಯಂತೆ ಭಾರತ ಶತ್ರುಜ್ಞರು ಮಾಡಿದರು.
70. ರಾಮನಿಗೆ “ಧರ್ಮ ಅವಶ್ಯಕತೆ ಇಲ್ಲ. ಜಗತ್ತಿಗೇ ದೇವನಾದ ನೀನು ತಂದೆಯಾಜ್ಞೆ ಪಾಲಿಸಬೇಕಿಲ್ಲ” ಎಂದವರಾರು?
ಉತ್ತರ : ಜಾಬಾಲಿ ಋಷಿಗಳು
71. ವಿಶ್ರವಸ್ ಮುನಿಗಳ ಮಕ್ಕಳು ಯಾರ್ಯಾರು?
ಉತ್ತರ : ಮೊದಲ ಪತ್ನಿ ಇಲಾವಿದಳಲ್ಲಿ (ಇಲಾವಿದಳು ಭಾರದ್ವಾಜರ ಪುತ್ರಿ) ಕುಬೇರ ಜನಿಸಿದನು.
ಕೈಕಸಿಯಿಂದ ರಾವಣ, ಕುಂಭಕರ್ಣ, ವಿಭೀಷಣ ಮತ್ತು ಶೂರ್ಪಣಖಿ
ಇನ್ನೊಬ್ಬ ಪತ್ನಿಯಲ್ಲಿ ಖರ ದೂಷಣರು ಜನಿಸಿದರು
72. ಶರೀರ ತ್ಯಾಗ ಮಾಡಲು ಇಚ್ಛಿಸಿದವನಿಗೆ ರಾಮ ಯಾರಿಗೆ ಅಪ್ಪಣೆ ನೀಡಿದ?
ಉತ್ತರ : ಶರಭಂಗನಿಗೆ ಅಪ್ಪಣೆಯಿತ್ತ.
73. ತನ್ನ ವಿಶಾಲ ಬಾಹುಗಳಿಂದ ರಾಮ ಲಕ್ಷ್ಮಣರನ್ನು ಹೊತ್ತೊಯ್ದು ಯಾರನ್ನು ರಾಮ ಎರಡೂ ತೋಳುಗಳ ಕತ್ತರಿಸಿದನು.
ಉತ್ತರ : ವಿರಾಧನನ್ನು.
74. ಇಂದ್ರನು ರಾಮನಿಗೆ ಯಾರ ಮೂಲಕ ಶಾಂಘ ಧನಸ್ಸು ಕಳಿಸಿದನು.?
ಉತ್ತರ : ಕುಂಭಸಂಭವ ಅಗಸ್ತ್ಯರಿಂದ
75. ಶೂರ್ಪಣಖಿಯ ಪತಿಯನ್ನು ಕೊಂದವರಾರು?
ಉತ್ತರ : ಶೂರ್ಪನಖಿಯ ಪತಿ ವಿದ್ವಜ್ಜಿಹ್ವನನ್ನು ರಾವಣನೇ ಯುದ್ಧದಲ್ಲಿ ಶತ್ರುವೆಂದು ಭಾವಿಸಿ ಕೊಂದನು.
***
"ರಾಮ" ಎಂಬ ಎರಡಕ್ಷರದ ಪದದಲ್ಲಿದೆ ಮಾಧುರ್ಯತೆ. ರಾಮನಾಮಜಪದಿಂದ ಶರೀರ ಹಾಗೂ ಮನಸ್ಸಿಗೆ ಶಾಂತಿ,ನೆಮ್ಮದಿ ಹಾಗೂ ಆಧ್ಯಾತ್ಮಿಕ ಅನುಭವ ಸಿಗುತ್ತದೆ.ಸಾವಿರಾರು ಸಂತರು,ಮಹಾತ್ಮರು ರಾಮನಾಮದಿಂದ ಅಲೌಕಿಕ ಶಾಂತಿ ಹಾಗೂ ಮೋಕ್ಷತ್ವವನ್ನು ಪಡೆದಿದ್ದಾರೆ.ರಾಮನಾಮದ ಮಹಿಮೆ ರಾಮನಿಗಿಂತಲೂ ಹಿರಿದು.ಭವದ ಕತ್ತಲೆಯಿಂದ ಆನಂದದ ಬೆಳಕಿನತ್ತ ಕೊಂಡೊಯ್ಯುವ ದೀಪ ರಾಮನಾಮ.ಭವದುಃಖದ ಪರಿಹಾರಕ್ಕೆ ರಾಮನಾಮವೊಂದೇ ಸಾಕು.
ಸಮರ್ಥ ರಾಮದಾಸರು "ಶ್ರೀ ರಾಮ ಜಯರಾಮ ಜಯ ಜಯ ರಾಮ" ಎಂಬ ತ್ರಯೋದಶಾಕ್ಷರಿ ಮಂತ್ರವನ್ನು ೧೩ ಕೋಟಿ ಸಲ ಬರೆದು ಸಾಕ್ಷಾತ್ ಶ್ರೀರಾಮನ ದರ್ಶನ ಪಡೆದರು.
ಶ್ರೀರಾಮನನ್ನೇ ನೆನೆದು,ಪೂಜಿಸಿ ಶಬರಿ ಮುಮುಕ್ಷತ್ವವನ್ನು ಪಡೆದಳು.
ವಾನರರ ಸೇನೆ ರಾಮದರ್ಶನದಿಂದ ಪುನೀತವಾಯಿತು.
ಹೀಗೆ ಶರಣಾಗತರನ್ನು ರಕ್ಷಿಸುವ ಭಕ್ತವತ್ಸಲ ಶ್ರೀರಾಮ.ಆತನ ನಾಮಜಪದಿಂದ ಮಾತ್ರ ಕಲಿಯುಗದ ದುಃಖದುಮ್ಮಾನಗಳ ಪರಿಹಾರ.ರಾಮನಾಮ ಸಂಕೀರ್ತನೆಯಿಂದ ಈ ಭವಸಾಗರವನ್ನು ದಾಟಲು ಸುಲಭ ಸಾಧ್ಯ.
ರಾಮನಾಮದಲ್ಲಿದೆ ಅದ್ಭುತ ಶಕ್ತಿ,ಅಪಾರ ಮಹಿಮೆ.ಆ ಶಕ್ತಿ ಮಹಿಮೆಗಳ ದರ್ಶನ ಕೇವಲ ಶ್ರದ್ಧೆ,ವಿಶ್ವಾಸ ಹಾಗೂ ಭಕ್ತಿಗಳಿಂದ ಮಾತ್ರ ಸಾಧ್ಯ. "ಅಣೋರಣೀಯಾನ್ ಮಹತೋ ಗರೀಯಾನ್" ಅಣುವಿನಲ್ಲಿ ಅಣು,ಮಹತ್ತಿನಲ್ಲಿ ಹಿರಿದು ರಾಮನಾಮ.ಇದನ್ನರಿತ ವ್ಯಕ್ತಿಗೆ ಭವಸಾಗರದ ಅಳುಕಿಲ್ಲ,ದುಃಖ,ನೋವುಗಳಿಲ್ಲ.
"ಜಪಹಿಂ ನಾಮು ಜನ ಆರತ ಭಾರೀ | ಮಿಟಹಿಂ ಕುಸಂಕಟ ಹೋಹಿಂ ಸುಖಾರೀ |
ಪ್ರತಿದಿನ ಮನದಲ್ಲಿ ಎರಡು ನಿಮಿಷ ರಾಮನಾಮವನ್ನು ನೆನೆದರೆ ಸಾಕು, ಅದೇ ಶ್ರೀರಾಮನ ನಿತ್ಯಪೂಜೆ.ಶ್ರೀರಾಮನ ಸಂಕೀರ್ತನೆಯಿಂದ ಕೇವಲ ಮನಶ್ಶಾಂತಿಯಷ್ಟೇ ಅಲ್ಲ,ಕರ್ಮಶುದ್ಧಿ,ವಿಚಾರಶುದ್ಧಿಗಳು ಸಹ ಸಿಗುತ್ತವೆ.ಪ್ರಕೃತಿಯ ಆರಾಧನೆಯೂ ಕೂಡ.ರಾಮನಿಲ್ಲದೇ ಪ್ರಕೃತಿ,ಪ್ರಪಂಚ,ಚರಾಚರವಸ್ತುಗಳ್ಯಾವವೂ ಇರಲಾರವು.
"ಆಪನ್ನಃ ಸಂಸೃತಿಂ ಘೋರಾಂ ಯನ್ನಾಮ ವಿವಶೋ ಗೃಣನ್ | ತತಃ ಸದ್ಯೋ ವಿಮುಚ್ಯೇತ ಯದ್ವಿಭೇತಿ ಸ್ವಯಂ ಭಯಮ್ ||
(ಶ್ರೀ ಮದ್ಭಾಗವತ)
ಅಂದರೆ,ಘೋರ ಸಂಸಾರ ಬಂಧನದಲ್ಲಿ ನಿಲುಕಿರುವ ಮನುಷ್ಯ ರಾಮನಾಮವನ್ನು ಜಪಿಸಿದ ತಕ್ಷಣ ಎಲ್ಲಾ ಬಂಧನಗಳಿಂದ ವಿಮುಕ್ತನಾಗುತ್ತಾನೆ.ಶ್ರೀರಾಮನ ದಿವ್ಯಸ್ಥಾನವನ್ನು ಹೊಂದಲು ಅರ್ಹತೆಯನ್ನು ಗಳಿಸುತ್ತಾನೆ.ರಾಮನಾಮ ಸ್ವಯಂಜ್ಯೋತಿ,ಸ್ವಯಂ ಮಣಿ,ರಾಮನಾಮವನ್ನು ಜಪಿಸುವವನೆಂದೂ ಅಂಧಕಾರದಲ್ಲಿರಲಾರನೆಂದು ಶ್ರೀಮದ್ಭಾಗವತ ತಿಳಿಸುತ್ತದೆ.
"ನ ದೇಶನಿಯಮಸ್ತಸ್ಮಿನ್ ನ ಕಾಲನಿಯಮಸ್ತಥಾ | ನೋಚ್ಛಿಷ್ಟೇಪಿ ನಿಷೇಧೋಸ್ತಿ ಶ್ರೀಹರೇರ್ನಮ ಲುಬ್ಧಕ ||"
ರಾಮಮಂತ್ರವನ್ನು ಜಪಿಸಲು ದೇಶನಿಯಮವಿಲ್ಲ,ಕಾಲನಿಯಮವಿಲ್ಲ,ಯಾವುದೇ ಸ್ಥಳ ಹಾಗೂ ಸಮಯದಲ್ಲಿ ರಾಮಮಂತ್ರವನ್ನು ಜಪಿಸಬಹುದು.ಅಶುಚಿ,ಅಪವಿತ್ರವಾಗಿರುವಾಗಲೂ ಸಹ ಶ್ರೀರಾಮಮಂತ್ರವನ್ನು ಜಪಿಸಬಹುದು. ನಿರ್ದಿಷ್ಟ,ಕಠೋರ ನಿಯಮಗಳ್ಯಾವವೂ ರಾಮ ಜಪಕ್ಕಿಲ್ಲ.
“ರಾಮ” ಕೇವಲ ಎರಡಕ್ಷರದ ಪದವಲ್ಲ.ಅಲೌಕಿಕ ಸಂತೋಷ,ಶಾಂತಿ,ಜೀವನ ಹಾಗೂ ಧರ್ಮ ಇವು “ರಾಮ” ಶಬ್ದಕ್ಕಿರುವ ಅರ್ಥಗಳು. ”ಹಾಗಾಗಿ “ರಾಮ” ಎಂಬುದು ದಿವ್ಯಮಂತ್ರ.ವೇದಗಳ ಜ್ಞಾನವಿಲ್ಲದೆಯೂ ಮೋಕ್ಷವನ್ನು ತೋರಿಸುವ ಮಾರ್ಗ.ರಾಮನಾಮ ಜಪಿಸುವವನಿಗೆ ಸರ್ವದುಃಖಗಳಿಂದ ವಿಮೋಚನೆ.
ಹಿಂದಿನಕಾಲದಲ್ಲಿ ಪರಸ್ಪರರು ಭೇಟಿಯಾದಾಗ “ರಾಮ್ ರಾಮ್” ಎನ್ನುವ ಪದ್ಧತಿಯಿತ್ತು.”ರಾಮ” ಶಬ್ದವನ್ನು ಬಿಡಿಸಿದಾಗ ಮೂರು ಅಕ್ಷರಗಳು ಸಿಗುತ್ತವೆ.ರ್+ಆ+ಮ್.. “ರ” ವ್ಯಂಜನಗಳಲ್ಲಿ ಇಪ್ಪತ್ತೇಳನೆಯದು. “ಆ” ಸ್ವರಗಳಲ್ಲಿ ಎರಡನೆಯದು. “ಮ್” ವ್ಯಂಜನಗಳಲ್ಲಿ ಇಪ್ಪತ್ತೈದನೆಯದು. ಇಪ್ಪತ್ತೇಳು+ಎರಡು+ಇಪ್ಪತ್ತೈದು = ಐವತ್ತನಾಲ್ಕು. ”ರಾಮ್ ರಾಮ್” ಎಂದರೆ ಐವತ್ತನಾಲ್ಕು + ಐವತ್ತನಾಲ್ಕು = ನೂರಾಎಂಟು. ನೂರಾಎಂಟು ನಮಗೆ ಪವಿತ್ರ ಸಂಖ್ಯೆ.ಜಪಮಾಲೆಯಲ್ಲಿರುವ ಮಣಿಗಳ ಸಂಖ್ಯೆ.ಜಪಮಾಲೆಯನ್ನು ಹಿಡಿದು ನೂರಾಎಂಟು ಬಾರಿ ಜಪ ಮಾಡಬೇಕಿಂದಿಲ್ಲ.”ರಾಮ ರಾಮ” ಎಂದರೆ ಸಾಕು, ಒಂದು ಮಾಲೆ ಜಪವನ್ನು ಮಾಡಿದ ಫಲ ಸಿಗುತ್ತದೆ..!! “ರಾಮ” ಎಂಬುದು ರಘುಪತಿಯ ಉದಾರನಾಮ.ಅದು ಅತ್ಯಂತ ಪವಿತ್ರ ಹೆಸರು.ವೇದ-ಪುರಾಣಗಳ ಸಾರ.ಸಕಲ ಕಲ್ಯಾಣಗಳ ಭವನ.ಅಮಂಗಲಗಳ ಹರಣ.ಈ ರಾಮನಾಮವನ್ನು ಪಾರ್ವತಿ ಸಹಿತ ಪರಮೇಶ್ವರ ಸದಾ ಜಪಿಸುತ್ತಿರುತ್ತಾನೆ. “ರಾಮ”ವೆಂಬ ಪವಿತ್ರನಾಮ ಸದಾ ನಮ್ಮ ಮನದಲ್ಲಿರಲಿ.ಶ್ರೀರಾಮನ ಅನುಗ್ರಹ ಸದಾ ನಮಗಿರಲಿ.
ಹಾಗಾಗಿ ರಾಮನಾಮ ಭವದ ದಿವ್ಯಮಂತ್ರ.ಆತನ ಸ್ಮರಣೆಯೊಂದೇ ಮೋಕ್ಷಪ್ರದಾಯಕ.ಆತನನ್ನು ಸದಾ ಸ್ಮರಿಸಿ ರಾಮನ ದಿವ್ಯಕೃಪೆಗೆ ಪಾತ್ರರಾಗೋಣ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.
🚩🚩 ಹರೇ ರಾಮ 🚩🚩
ಶ್ರೀ ರಾಮ ಜಯರಾಮ ಜಯ ಜಯ ರಾಮ
***
ನಮ್ಮ ಹಿಂದೂ ಪಂಚಾಂಗ ಪ್ರಕಾರ ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರದಲ್ಲಿ ರಾಮಚಂದ್ರಪ್ರಭುವಿನ ಜನ್ಮವಾಯಿತು,
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ| ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ॥
ಇದು ಬಹು ಪ್ರಸಿದ್ಧವಾದ ಶ್ಲೋಕ.ಆದರೆ ಆ ಪದಪ್ರಯೋಗಗಳಿಗೆ ಇರುವ ಗೂಢಾರ್ಥ ವಿಶೇಷವಾಗಿದ್ದು ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು.
ರಾಮಾ:
ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ "ರಾಮಾ" ಎಂದು ಕರೆಯುತ್ತಿದ್ದನಂತೆ.ಆ ರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ.
ರಾಮಭದ್ರ
ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು "ರಾಮಭದ್ರ" ಎನ್ನುತ್ತಿದ್ದಳಂತೆ.ಅದು ವಾತ್ಸಲ್ಯಭರಿತವಾದ ಸಂಬೋಧನೆ.
ರಾಮಚಂದ್ರ
ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು.ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು.! ಆ ಕಾರಣದಿಂದ "ರಾಮಚಂದ್ರ" ಎಂಬ ಅನ್ವರ್ಥನಾಮ.
ವೇದಸೇ
ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು "ವೇಧಸೇ" ಎಂದು ಕರೆಯುತ್ತಿದ್ದರು.
ರಘುನಾಥ
ಆದರೆ ಅಯೋಧ್ಯೆಯ ಪುರಜನರೆಲ್ಲಾ ’ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ "ರಘುನಾಥ" ಎಂದು ಕರೆಯುತ್ತಿದ್ದರು.
ನಾಥ
ಇನ್ನು "ನಾಥ" ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ.ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು.!
ಸೀತಾಯ ಪತಯೇ
ಆದರೆ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ "ಸೀತಾಯ ಪತಯೇ" ಎನ್ನುತ್ತಿದ್ದರು.
***
ನಾಮರಾಮಾಯಣಂ
.
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಣ್ಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ ಇತಿ ನಾಮರಾಮಾಯಣಂ ಸಂಪೂರ್ಣಂ ॥
***
ಕಣ್ಣಾ ಮುಚ್ಚಾಲೆ ಹಾಡಿಗೆ ಒಳ ಅರ್ಥ.
"ಕಣ್ಣಾ ಮುಚ್ಚೇ....
ಕಾಡೇ ಗೂಡೇ....
ಉದ್ದಿನ ಮೂಟೆ....
ಉರುಳೇ ಹೋಯ್ತು....
ನಮ್ಮಯ ಹಕ್ಕಿ ...
ನಿಮ್ಮಯ ಹಕ್ಕಿ ....
ಬಿಟ್ಟೇ ಬಿಟ್ಟೆ ... "
ಇದೊಂದು ಮಕ್ಕಳ ಆಟ
ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಎನ್ನುವುದಕ್ಕೆ ಇದೊಂದು ನಿದರ್ಶನ.
"ಕಣ್ಣಾ ಮುಚ್ಚೆ " -
ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು....
"ಕಾಡೇ ಗೂಡೆ "-
ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು...
"ಉದ್ದಿನಮೂಟೆ" -
ಅಹಂಕಾರದಿ ಉದ್ದಿಟತನದಿ ನೆಂದ ಬೇಳೆಯಂತೆ ಉಬ್ಬಿಹೋಗಿದ್ದ ರಾವಣನನ್ನು ...
"ಉರುಳೇ ಹೋಯ್ತು" -
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ.... ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು....
"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ "....
ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ...
ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ
ಬಿಟ್ಟು ಕಳಿಸಿಕೊಡುತ್ತಿದ್ದೇವೆ, ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ...
ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು....*
ಹೀಗಿದೆ ನೋಡಿ ಅರ್ಥ ಈ "ಕಣ್ಣಾಮುಚ್ಚಾಲೆ" ಆಟಕ್ಕೆ....
'ಏಗ್ದಂಗೆಲ್ಲಾ ಐತೆ' ಕೃತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನ ವಿವರಿಸಿದ್ದಾರೆ.
***
ಶ್ರೀರಾಮನ ಎತ್ತರ ಎಷ್ಠಿರಬಹುದು...?
ಶ್ರೀರಾಮನ ಎತ್ತರ.9.7 ಅಡಿಗಳು.
ಶ್ರೀರಾಮನ ಭೌತಿಕ ನೋಟವನ್ನು ವಿವರಿಸುವಾಗ, ಹನುಮಂತನು ಸೀತೆಗೆ ರಾಮನು ನಾಲ್ಕು ಮೊಳ ಎತ್ತರ ಎಂದು ಹೇಳುತ್ತಾರೆ.
"ಅವನು ತನ್ನ ಕುತ್ತಿಗೆ ಮತ್ತು ಹೊಟ್ಟೆಯ ಚರ್ಮದಲ್ಲಿ ಮೂರು ಮಡಿಕೆಗಳನ್ನು ಹೊಂದಿದ್ದನು. ಮೂರು ಸ್ಥಳಗಳಲ್ಲಿ (ಅವನ ಅಡಿಭಾಗದ ಮಧ್ಯದಲ್ಲಿ, ಅವನ ಅಡಿಭಾಗದ ಮೇಲಿನ ಗೆರೆಗಳು ಮತ್ತು ಎದೆಭಾಗ) ಇತರ ದೇಹದ ನಾಲ್ಕು ಕಡೆಗಳಲ್ಲಿ ಕಡಿಮೆ ಗಾತ್ರದಲ್ಲಿದೆ (ಅಂದರೆ ಕುತ್ತಿಗೆ. , ಪೊರೆಯ ವೈರಿಲ್, ಬೆನ್ನು ಮತ್ತು ಶ್ಯಾಂಕ್ಸ್) ಅವನ ತಲೆಯ ಕೂದಲಿನಲ್ಲಿ ಮೂರು ಸುರುಳಿಗಳನ್ನು ಹೊಂದಿದೆ.ಅವನ ಹೆಬ್ಬೆರಳಿನ ಮೂಲದಲ್ಲಿ ನಾಲ್ಕು ಗೆರೆಗಳಿವೆ (ನಾಲ್ಕು ವೇದಗಳಲ್ಲಿ ಅವನ ಪ್ರಾವೀಣ್ಯತೆಯನ್ನು ಸೂಚಿಸುತ್ತದೆ) ಅವನ ಮೇಲೆ ನಾಲ್ಕು ಗೆರೆಗಳಿವೆ. ಹಣೆಯ (ದೀರ್ಘಾಯುಷ್ಯವನ್ನು ಸೂಚಿಸುತ್ತದೆ). ಅವನು ನಾಲ್ಕು ಮೊಳ ಎತ್ತರ (96 ಇಂಚು) ಹೊಂದಿದ್ದಾನೆ. ಅವನಿಗೆ ನಾಲ್ಕು ಜೋಡಿ ಅಂಗಗಳಿವೆ (ಅಂದರೆ ಕೆನ್ನೆಗಳು, ತೋಳುಗಳು, ಶ್ಯಾಂಕ್ಸ್ ಮತ್ತು ಮೊಣಕಾಲುಗಳು) ಸಮಾನವಾಗಿ ಹೊಂದಿಕೆಯಾಗುತ್ತದೆ."
ಮೂಲ: ವಾಲ್ಮೀಕಿ ರಾಮಾಯಣ 5.35.18
ಕಿಷ್ಕು ಅನ್ನು ಇಂಗ್ಲಿಷ್‌ನಲ್ಲಿ ಕ್ಯೂಬಿಟ್ಸ್ ಎಂದು ಅನುವಾದಿಸಲಾಗಿದೆ. ಡಿಆರ್ ಪಾಟೀಲ್ ಅವರು ವಾಯು ಪುರಾಣದ ಸಾಂಸ್ಕೃತಿಕ ಇತಿಹಾಸ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ, 1 ಕಿಷ್ಕು 42 ಅಂಗುಲಗಳಿಗೆ ಸಮ ಎಂದು ವಿವರಿಸಲಾಗಿದೆ. ಬ್ರಹ್ಮಾಂಡ ಪುರಾಣ ಕೂಡ ಇದನ್ನೇ ಹೇಳುತ್ತದೆ.
ಇಪ್ಪತ್ನಾಲ್ಕು ಅಂಗುಲಗಳು ಒಂದು ಹಸ್ತವನ್ನು ಸೂಚಿಸುತ್ತದೆ (ಮೊಳ-ಮೊಣಕೈ ಮತ್ತು ಮಧ್ಯದ ಬೆರಳಿನ ತುದಿಯ ನಡುವಿನ ಅಂತರ). ಎರಡು ರತ್ನಗಳು ಅಥವಾ ನಲವತ್ತೆರಡು ಅಂಗುಲಗಳು ಒಂದು ಕಿಷ್ಕು ಎಂದು ತಿಳಿಯಬೇಕು...
ಮೂಲ: ಬ್ರಹ್ಮಾಂಡ ಪುರಾಣ ಉಪಸಂಹಾರಪದ ಅಧ್ಯಾಯ 2
ಈಗ ಲೆಕ್ಕಾಚಾರವನ್ನು ಪ್ರಾರಂಭಿಸೋಣ.
2 ರತ್ನಗಳು ಅಥವಾ 42 ಅಂಗುಲಗಳು = 1 ಕಿಷ್ಕು
4 ಕಿಷ್ಕು = 168 ಅಂಗುಲಗಳು
1 ಅಂಗುಲಾ 1.76 ಸೆಂ.ಮೀ
168 x 1.76 = 295.68 ಸೆಂ
295.68 ಸೆಂ = 9.70 ಅಡಿ
ಆದ್ದರಿಂದ ಶ್ರೀರಾಮನು 9.7 ಅಡಿ ಎತ್ತರವಾಗಿದ್ದರು.
ಶ್ರೀ ರಾಮನು 96 ಇಂಚು ಎತ್ತರವಿದ್ದನು (ವಾಲ್ಮೀಕಿ ರಾಮಾಯಣದ ಪ್ರಕಾರ) ಇದು ಸರಿಸುಮಾರು 7 ರಿಂದ 8 ಅಡಿಗಳು. ಅವನು ಆಜಾನುಬಾನು
ಆಗಿನ ಕಾಲದ ಅಳತೆಗಳನ್ನು ಈಗಿನ ಕಾಲದೊಂದಿಗೆ ಹೋಲಿಸಲಾಗುವುದಿಲ್ಲ, ಏಕೆಂದರೆ ಜನರ ಎತ್ತರ ಮತ್ತು ದೇಹದ ಅಳತೆಗಳು ತುಂಬಾ ವಿಭಿನ್ನವಾಗಿವೆ.
ರಾಮನು ತ್ರೇತಾಯುಗದಲ್ಲಿ ಜನಿಸಿದನು. ಕೆಲವು ಮಾಹಿತಿಯ ಪ್ರಕಾರ ತ್ರೇತಾಯುಗದಲ್ಲಿ ವ್ಯಕ್ತಿಯ ಸರಾಸರಿ ಎತ್ತರ 14 ಮೊಳ (21 ಅಡಿ) ಇದಕ್ಕೆಸಮರ್ಪಕ ಪೌರಾಣಿಕ ಪುರಾವೆಗಳು ದೊರೆತಿಲ್ಲ ನಂಬುವುದು ಅಥವಾ ನಂಬದಿರುವುದು ನಿಮಗೆ ಬಿಟ್ಟದ್ದು..
ಒಂದು ಯುಗದಿಂದ ಇನ್ನೊಂದು ಯುಗಕ್ಕೆ ಧರ್ಮ, ಬುದ್ಧಿವಂತಿಕೆ, ಜ್ಞಾನ, ಬೌದ್ಧಿಕ ಸಾಮರ್ಥ್ಯ, ಜೀವಿತಾವಧಿ, ಭಾವನಾತ್ಮಕ ಮತ್ತು ದೈಹಿಕ ಶಕ್ತಿಯು ಕ್ರಮೇಣ ಬದಲಾಗುತ್ತಿರುತ್ತದೆ....
ಸತ್ಯಯುಗ:- ಪುಣ್ಯವು ಸರ್ವಶ್ರೇಷ್ಠವಾಗಿರುತ್ತದೆ. ಮಾನವನ ಎತ್ತರವು 21 ಮೊಳವಾಗಿತ್ತು. ಮಾನವನ ಸರಾಸರಿ ಜೀವಿತಾವಧಿ 100,000 ವರ್ಷಗಳು.
ತ್ರೇತಾ ಯುಗ: – 3 ತ್ರೈಮಾಸಿಕ ಪುಣ್ಯ ಮತ್ತು 1 ಕಾಲು ಪಾಪವಿತ್ತು. ಸಾಮಾನ್ಯ ಮಾನವನ⁵ ಎತ್ತರ 14 ಮೊಳ. ಮಾನವನ ಸರಾಸರಿ ಜೀವಿತಾವಧಿ 10,000 ವರ್ಷಗಳು.
ದ್ವಾಪರ ಯುಗ: - 1 ಅರ್ಧ ಪುಣ್ಯ ಮತ್ತು 1 ಅರ್ಧ ಪಾಪ ಇತ್ತು. ಸಾಮಾನ್ಯ ಮಾನವನ ಎತ್ತರ 7 ಮೊಳ. ಮಾನವನ ಸರಾಸರಿ ಜೀವಿತಾವಧಿ 1,000 ವರ್ಷಗಳು.
ಕಲಿಯುಗ:- 1 ತ್ರೈಮಾಸಿಕ ಪುಣ್ಯ ಮತ್ತು 3 ಕಾಲು ಪಾಪವಿದೆ. ಸಾಮಾನ್ಯ ಮಾನವನ ಎತ್ತರ 3.5 ಮೊಳ. ಮಾನವನ ಸರಾಸರಿ ಜೀವಿತಾವದಿ ಸುಮಾರು 100 ವರ್ಷಗಳು...
(ಸಂಗ್ರಹ)..
***
Gold, Silver, Copper, Zinc, Lead, Tin, Iron & Mercury..
The Bell is going to Shri Ram Temple in Ayodhya from Ramakrishna Nadar Vessels Shop in Eral, near Tuticorin,Tamil Nadu..
Listen to its Mangal Naada.. .. This Bell can be heard up to 15 Kms.
***
ಅಬ್ಬಾ 500 ವರ್ಷಗಳಲ್ಲಿ ಆಯೋಧ್ಯೆಗಾಗಿ ಇಷ್ಟೆಲ್ಲಾ ಹೋರಾಟ, ಯುದ್ಧ, ಸಾಧು ಸಂತರ ಘನಘೋರ ಯುದ್ಧಗಳು ನಡೆದಿವೆಯಾ? ರಾಮಮಂದಿರಕ್ಕಾಗಿ ನಡೆದ ಸಂಘರ್ಷದ ಇಂಚಿಂಚು ಇತಿಹಾಸದ ಮಾಹಿತಿ!!
ಆಯೋಧ್ಯೆ ಎಂದ ತಕ್ಷಣ ಹಿಂದುಗಳ ರೋಮ ರೋಮದಲ್ಲೂ ಉತ್ಸಾಹದ ಸಂಚಾರವಾಗುತ್ತದೆ. ಪ್ರಭು ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎನ್ನುವ ಸಂಕಲ್ಪ.
ಬನ್ನಿ ಆಯೋಧ್ಯೆಯ ಇತಿಹಾಸವನ್ನೊಮ್ಮೆ ನೋಡೋಣ!!!
ಬಾಬರ್ ಎಂಬ ವಿದೇಶಿ ಮುಸ್ಲಿಂ ಆಕ್ರಮಣಕಾರ ದೆಹಲಿಯ ಗದ್ದುಗೆಯ ಮೇಲೆ ಕೂತಿದ್ದನೋ ಆಗ ಆಯೋಧ್ಯೆಯ ರಾಮಮಂದಿರ ಶ್ಯಾಮಾನಂದಜೀ ಮಹಾರಾಜರ ಸುಪರ್ದಿಯಲ್ಲಿತ್ತು. ಖ್ವಾಜಾ ಅಬ್ಬಾಸ್ ಮೂಸಾ ಅಲಿ ಖಾನ್ ಎಂಬ ಮುಸಲ್ಮಾನನಿಗೆ ಶ್ಯಾಮಾನಂದಜೀಯವರ ಅದ್ಭುತವಾದ ವ್ಯಕ್ತಿತ್ವದಿಂದ ಅವರೆಡೆಗೆ ಆಕರ್ಷಿತನಾಗಿ ಅವರ ಅನುಯಾಯಿಯಾಗಿ ಬಿಡುತ್ತಾನೆ.
ಜಲ್ಲಾಲ್ ಶಾಹ್ ಎಂಬಾತನಿಗೆ ಈ ಸುದ್ದಿ ತಿಳಿದ ನಂತರ ಆತನೂ ಶ್ಯಾಮಾನಂದಜೀಯವರ ಅನುಯಾಯಿಯಾಗುತ್ತಾನೆ. ಆದರೆ ಇಸ್ಲಾಂ ಎಂಬ ಮತಾಂಧತೆ ತಲೆಗೆ ತುಂಬಿರುವ ಅವರು ಎಷ್ಟು ದಿನ ತಾನೆ ಆ ಮತಾಂಧತೆಯಿಂದ ದೂರವಿರಲು ಸಾಧ್ಯ ಹೇಳಿ?
ಭಾರತಕ್ಕೆ ತಾವು ಬಂದಿರುವುದು ಭಕ್ತರಾಗಲಿಕ್ಕಲ್ಲ ಈ ಭಾರತವನ್ನೇ ಇಸ್ಲಾಮೀಕರಣ ಮಾಡಲು ಎಂಬ ವಿಚಾರ ಥಟ್ಟನೆ ಹೊಳೆದ ಆ ಮತಾಂಧರು ಖ್ವಾಜಾ ಕಜ್ಜಲ್ ಅಬ್ಬಾಸ್ ಮೂಸಾ ಜೊತೆಗೆ ಸೇರಿ ಶ್ಯಾಮಾನಂದಜೀ ಯವರ ಬರ್ಬರವಾಗಿ ಹತ್ಯೆ ಮಾಡಲು ಸಂಚು ಹೂಡಿಬಿಡುತ್ತಾರೆ.
ಅಲ್ಲಿಯವರೆಗೂ ಆಯೋಧ್ಯೆ ಹಿಂದುಗಳ ಪುಣ್ಯಕ್ಷೇತ್ರವಾಗೇ ಇತ್ತು. ಈ ಮಧ್ಯೆ ಜಲ್ಲಾಲ್ ಶಾಹ್ ಹಾಗು ಖ್ವಾಜಾ ಬಾಬರ್ ಎಲ್ಲೇ ಮುಸಲ್ಮಾನರು ಸತ್ತರೂ ಅವರನ್ಮ ತಂದು ಆಯೋಧ್ಯೆಯಲ್ಲೇ ಅದೂ ಮೆಕ್ಕಾ ಮದೀನಾ ಕಡೆಗೆ ಮುಖ ಮಾಡಿ ಹೂಳಿ ಅಲ್ಲಿ ಕಬರಿಸ್ತಾನ್ ಸೃಷ್ಟಿಸಿಯೇ ಬಿಟ್ಟರು. ನಂತರ ಮೀರ್ ಬಾಕಿ ಗೆ ಅಲ್ಲಿದ್ದ ಮಂದಿರವನ್ನ ಧ್ವಂಸಗೊಳಿಸಲು ಆಜ್ಞೆಯಿತ್ತರು.
ಶ್ಯಾಮಾನಂದ ಮಹಾರಾಜರಿಗೆ ತನ್ನ ವಿರುದ್ಧ ಹಾಗು ಮಂದಿರದ ವಿರುದ್ಧ ತನ್ನ ಮುಸಲ್ಮಾನ ಭಕ್ತರೇ ನಡೆಸುತ್ತಿರುವ ಷಡ್ಯಂತ್ರದ ಸುಳಿವು ಸಿಕ್ಕ ತಕ್ಷಣ ಮನನೊಂದ ಅವರು ರಾಮಮಂದಿರದ ಒಳಗಿದ್ದ ಮೂರ್ತಿಗಳನ್ನ ಸರಯೂ ನದಿಯಲ್ಲಿ ಮುಳುಗಿಸಿ ಹಿಮಾಲಯಕ್ಕೆ ಹೊರಟು ಹೋಗುತ್ತಾರೆ. ಇನ್ನು ಮಂದಿರದ ಅರ್ಚಕರು ಗರ್ಭಗುಡಿಯನ್ನ ಬೇರಡೆಗೆ ಸ್ಥಳಾಂತರಿಸಿಬಿಟ್ಟರು.
ಇತ್ತ ಜಲ್ಲಾಲ್ ಶಾಹ್ ನ ಆಜ್ಞೆಯನ್ನ ಶಿರಸಾಪಾಲಿಸಿದ್ದ ಆತನ ಸೈನ್ಯ ರಾಮಮಂದಿರದ ನಾಲ್ವರೂ ಅರ್ಚಕರನ್ನ ತಲೆ ಕಡಿದು ಕೊಂದು ಹಾಕುತ್ತಾರೆ. ಆತ ತನ್ನ ಸೈನ್ಯಕ್ಕೆ ಮಂದಿರವನ್ನ ಧ್ವಂಸಗೊಳಿಸಿ ಅಲ್ಲಿ ಇಸ್ಲಾಮಿಕ್ ಮಸೀದಿಯನ್ನ ನಿರ್ಮಿಸೋಕೆ ಆಜ್ಞಾಪಿಸುತ್ತಾನೆ. ಆದರೆ ತಮ್ಮ ನಮಾಜ್ ನಡೆಯೋ ಸ್ಥಳದಲ್ಲಿ ಯಾವ ರೀತಿಯ ಪೂಜಾ ಕೈಂಕರ್ಯಗಳೂ ಮುಂದೆ ನಡೆಯಬಾರದ ರೀತಿಯಲ್ಲಿ ಮಸೀದಿಯ ನಿರ್ಮಾಣಕ್ಕೆ ತನ್ನ ಸೈನಿಕರಿಗೆ ಸೂಚಿಸಿಬಿಡುತ್ತಾನೆ.
ಜಲ್ಲಾಲ್ ಶಾಹ್ ಮಾಡಿದ ಈ ದ್ರೋಹ ಹಾಗು ಆತನ ಆಜ್ಞೆ ಆಗ ತಾನೆ ಬದರಿನಾಥ ಕ್ಷೇತ್ರ ದರ್ಶನಕ್ಕೆ ಹೋಗಿ ಆಯೋಧ್ಯೆಗೆ ವಾಪಸ್ಸಾಗಿದ್ದ ‘ಭಿತಿ ರಾಜಾ ಮಹತಬ್ ಸಿಂಗ್’ ರ ಕಿವಿಗೆ ಬೀಳುತ್ತೆ.
ಅಪಾಯವನ್ನರಿತ ರಾಜಾ ಮಹತಬ್ ಸಿಂಗ್ ತನ್ನ 1 ಲಕ್ಷ 80 ಸಾವಿರ ಸೈನಿಕರನ್ನ ರಾಮಭಕ್ತರ ಹಾಗು ಮಂದಿರವನ್ನ ರಕ್ಷಿಸಲು ಕಳಿಸುತ್ತಾನೆ. ಆದರೆ ಬಾಬರ್ ನ ಜಲ್ಲಾಲ್ ಶಾಹ್ ನೇತೃತ್ವದ ಸೈನ್ಯ ಮಹತಬ್ ಸಿಂಗ್ ಸೈನ್ಯಕ್ಕಿಂತಲೂ ನಾಲ್ಕು ಪಟ್ಟು ಅಂದರೆ ಸರಿಸುಮಾರು ನಾಲ್ಕೂವರೆ ಲಕ್ಷದಷ್ಟಿರುತ್ತದೆ.
ಆದರೆ ಒಬ್ಬೊಬ್ಬ ರಾಮಭಕ್ತನೂ ಧರ್ಮಸೈನಿಕನಾಗಿ ತಮ್ಮ ಕೊನೆಯ ಉಸಿರುರುವರೆಗೂ ತಾವು ರಾಮಮಂದಿರದ ರಕ್ಷಣೆಗೆ ಅಣಿಯಾಗಿ ನಿಂತುಬಿಟ್ಟಿರುತ್ತಾರೆ. ರಾಮಭಕ್ತರ ಹಾಗು ಬಾಬರ್ ಸೈನ್ಯದ ನಡುವೆ ಸರಿಸುಮಾರು 70 ದಿನಗಳ ಘನಘೋರ ಯುದ್ಧ ನಡೆಯುತ್ತದೆ. ಆದರೆ ಅಸಂಖ್ಯ ಸೈನ್ಯವನ್ನ ಹೊಂದಿದ್ದ ಬಾಬರ್ ಮೋಸದಿಂದ ರಾಜಾ ಮಹತಬ್ ಸಿಂಗರನ್ನ ಸೆರೆಹಿಡಿದು ಅವರ ಶಿರಚ್ಛೇದ ಮಾಡಿ ರಾಮಭಕ್ತರ ರಕ್ತದಿಂದ ಆಯೋಧ್ಯೆಯಲ್ಲಿ ಹೋಳಿ ಹಬ್ಬದ ರೀತಿಯಲ್ಲಿ ವಿಕೃತವಾಗಿ ಸಂಭ್ರಮಿಸಿ ವಿಜಯಮಾಲೆಯನ್ನ ತನ್ನದಾಗಿಸಿಕೊಳ್ಳುತ್ತಾನೆ.
ಮೀರ್ ಬಾಕಿ ಇಡೀ ಮಂದಿರವನ್ನ ತನ್ನ ದೊಡ್ಡ ದೊಡ್ಡ ತೋಪುಗಳಿಂದ ಉಡಾಯಿಸಿ ಧ್ವಂಸಗೊಳಿಸಿಯೇ ಬಿಟ್ಟ. ಮೀರ್ ಬಾಕಿ ಎಷ್ಟು ಕ್ರೂರನಾಗಿದ್ದನೆಂದರೆ ಮಂದಿರವನ್ನ ಧ್ವಂಸಗೊಳಿಸಿ ಅದೇ ಮಂದಿರದ ಅವಶೇಷಗಳಿಂದ ಇಸ್ಲಾಮಿಕ್ ಕಟ್ಟಡವೊಂದನ್ನ ಕಟ್ಟಲು ನೀರಲ್ಲ ಬದಲಾಗಿ ಹಿಂದುಗಳ ರಕ್ತದಿಂದ ನಿರ್ಮಿಸಿಬಿಟ್ಟಿದ್ದ.
ಭಾರತಕ್ಕೆ ಯಾತ್ರಿಕನಾಗಿ ಬಂದಿದ್ದ ಇತಿಹಾಸ ಕನ್ನಿಂಗಹ್ಯಾಮ್ ಈ ಘಟನೆಯನ್ನ ತಾನು ಬರೆದ ಪುಸ್ತಕದ ಮೂರನೇ ಪೇಜಿನ 66 ನೆಯ ಪಾಯಿಂಟ್ ನಲ್ಲಿ ಉಲ್ಲೇಖಿಸುತ್ತ ಬರೀತಾನೆ “1 ಲಕ್ಷ 74 ಸಾವಿರ ಜನ ಹಿಂದುಗಳ ಹೆಣವನ್ನ ಬಳಸಿಕಡು ಮೀರ್ ಬಾಕಿ ರಾಮಮಂದಿರವನ್ನ ನಾಲ್ಕೂ ಕಡೆಗಳಿಂದ 1528 ರಲ್ಲಿ ಧ್ವಂಸಗೊಳಿಸಿ ಅಲ್ಲಿ ಮಸೀದಿಯ ನಿರ್ಮಾಣ ಮಾಡುತ್ತಾನೆ”
ಇನ್ನೊಬ್ಬ ವಿದೇಶಿ ಇತಿಹಾಸಕಾರ ಹ್ಯಾಮಿಲ್ಟನ್ ತನ್ನ “ಬಾರಾಬಂಕಿ ಗೆಜೆಟಿಯರ್” ನಲ್ಲಿ ಈ ವಿಷಯದ ಕುರಿತು ಉಲ್ಲೇಖಿಸುತ್ತ ಲಕ್ಷಾಂತರ ಜನ ಹಿಂದುಗಳ ರಕ್ತವನ್ನ ಬಳಸಿ ಮಸೀದಿಯ ನಿರ್ಮಾಣ ಮಾಡಲಾಗಿತ್ತು ಎಂದು ಬರೆಯುತ್ತಾನೆ.
ಮಂದಿರ ಧ್ವಂಸವನ್ನ ತಡೆಯಲಿಕ್ಕಾಗಿ ಸೇನೆಯನ್ನ ತಯಾರು ಮಾಡಿದ್ದನೊಬ್ಬ ಯುವಕ!!
ಆಯೋಧ್ಯೆಯಿಂದ 6 ಮೈಲಿ ದೂರವಿರುವ ಪುಟ್ಟ ಹಳ್ಳಿ ಸನೇತು ನಿವಾಸಿಯಾದ ದೇವಿದೀನ್ ಪಾಂಡೆ ಮಂದಿರದ ಮೇಲಿನ ದಾಳಿಯನ್ನ ತಡೆಯಲು ಸೂರ್ಯವಂಶಿ ಕ್ಷತ್ರಿಯರನ್ನ “ನಾನು ಋಷಿ ಭಾರದ್ವಾಜರ ವಂಶಜ, ನಿಮ್ಮ ಪೂರ್ವಜರೂ ಶ್ರೀರಾಮನ ವಂಶಜರೇ” ಎಂದು ಆಯೋಧ್ಯೆಯ ಜನರಿಗೆ ರಣೋತ್ಸಾಹ ತುಂಬುತ್ತ ಹಿಂದೂ ಸೇನೆಯನ್ನ ಸಜ್ಜುಗೊಳಿಸಿದ್ದ.
ಬಾಬರ್ ನ ಸೇನೆ ಆಯೋಧ್ಯೆಯನ್ನ ಅಕ್ಷರಶಃ ಸ್ಮಶಾನವನ್ನಾಗಿಸಲು ಪಣತೊಟ್ಟು ನಿಂತಿದ್ದರು. ಇಂತಹ ಸಂದರ್ಭದಲ್ಲಿ ಹೇಡಿಗಳ ಹಾಗೆ ಮುಸಲ್ಮಾನರ ಕತ್ತಿಗೆ ಬಲಿಯಾಗೋದಕ್ಕಿಂತ ಯುದ್ಧಭೂಮಿಯಲ್ಲಿ ಶ್ರೀರಾಮನಿಗಾಗಿ ಸಾಯೋದೇ ಮೇಲು ಎಂದು ಎರಡೇ ದಿನಗಳಲ್ಲಿ 9 ಸಾವಿರ ರಣೋತ್ಸಾಹ ತುಂಬಿದ್ದ ಹಿಂದುಗಳು ದೇವೀದೀನ್ ಪಾಂಡೆ ನೇತೃತ್ವದಲ್ಲಿ ಮೊಘಲರ ಮೇಲೆ ಮುಗಿಬಿದ್ದಿದ್ದರು.
ಮೊಘಲರ ಜೊತೆ ಈ ಸೈನ್ಯ ಹೋರಾಡಿದ್ದು ಕೇವಲ ಐದೇ ದಿನಗಳಾದರೂ ಅಕ್ಷರಶಃ ಮೀರ್ ಬಾಕಿಯ ಸೈನ್ಯಕ್ಕೆ ದೊಡ್ಡ ಸವಾಲಾಗಿ ನಿಂತುಬಿಟ್ಟಿತ್ತು ದೇವೀದೀನ್ ಪಾಂಡೆಯ ಸೈನ್ಯ. ಆದರೆ ಬಲಾಢ್ಯ ಹಾಗು ಲೆಕ್ಕವಿರದಷ್ಟು ಲಕ್ಷಾಂತರ ಸೈನಿಕರಿದ್ದ ಮೀರ್ ಬಾಕಿ ಸೈನ್ಯ ಐದು ದಿನಗಳ ಯುದ್ಧದ ನಂತರ ದೇವಿದೀನ್ ಪಾಂಡೆ ರನ್ನ ಸೆರೆಹಿಡಿದು ಅವರ ಶಿರಚ್ಛೇದನ ಮಾಡಿಯೇ ಬಿಟ್ಟರು.
ಇದೇ ಸಮಯಕ್ಕೆ ಕಾದು ಕುಳಿತಿದ್ದ ಮೀರ್ ಬಾಕಿ ದೇಹದಿಂದ ಶಿರ ಬೇರೆಯಾಗಿದ್ದರೂ ಬಿಡದೆ ದೇವಿದೀನ್ ಪಾಂಡೆಯವರನ್ನ ತೋಪಿಗೆ ಕಟ್ಟಿ ಉಡಾಯಿಸಿಬಿಟ್ಟಿದ್ದ.
ಇದರ ನಂತರ ನಡೆದ ಯುದ್ಧದಲ್ಲೂ 90 ಸಾವಿರ ಹಿಂದುಗಳು ರಕ್ತ ಆಯೋಧ್ಯೆಲ್ಲಿ ಹರಿದಿತ್ತು. ಆ ವೀರ ದೇವಿದೀನ್ ಪಾಂಡೆಯ ವಂಶಜರು ಈಗಲೂ ‘ಸನೇತು’ ಹಳ್ಳಿಯಲ್ಲಿದ್ದಾರೆ.
ದೇವಿದೀನ್ ಪಾಂಡೆಯನ್ನೇನೋ ಮೀರ್ ಬಾಕಿ ಕೊಂದು ಬಿಟ್ಟಿದ್ದ ಆದರೆ ದೇವಿದೀನ್ ಪಾಂಡೆರವರ ವೀರಮರಣವಾದ ಹದಿನಾಲ್ಕನೆಯ ದಿನಕ್ಕೇ “ಹನ್ಸವೀರ್ ರಣವಿಜಯ್ ಸಿಂಗ್” ತನ್ನ. 24 ಸಾವಿರ ಸೈನಿಕರ ಜೊತೆ ಸೇರಿ ಬಲಾಢ್ಯ ಸೈನ್ಯವಾಗಿದ್ದ ಮೀರ್ ಬಾಕಿಯ ಸೇನೆಯ ಮೇಲೆ ಮುಗಿಬಿದ್ದ. ಮೀರ್ ಬಾಕಿ ಈ 24 ಸಾವಿರ ಸೈನ್ಯದ ವಿರುದ್ಧ ಹೋರಾಡಲು ಹತ್ತು ದಿನಗಳ ಕಾಲ ತಿಣುಕಾಡಬೇಕಾಯಿತು.
ರಣವಿಜಯ್ ಸಿಂಗ್ ಹಾಗು ಮೀರ್ ಬಾಕಿ ನ ಸೇನೆಯ ನಡುವೆ 10 ದಿನಗಳ ಕಾಲ ನಡೆದ ಯುದ್ಧದ ನಂತರ ರಣವಿಜಯ್ ಸಿಂಗ್ ಕೂಡ ಯುದ್ಧಭೂಮಿಯಲ್ಲಿ ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿಬಿಡುತ್ತಾನೆ. ಮತ್ತೆ 24 ಸಾವಿರ ಹಿಂದೂ ಸೈನಿಕರ ರಕ್ತದೋಕುಳಿ ಆಯೋಧ್ಯೆಯಲ್ಲಾಗಿ ಬಿಡುತ್ತೆ.
ತಡೀರಿ…. ಇಷ್ಟಕ್ಕೆ ಯುದ್ಧ ಮುಕ್ತಾಯವಾಗಲಿಲ್ಲ, ಧರ್ಮಕ್ಕಾಗಿ ಪ್ರಾಣತೆತ್ತ ರಣವಿಜಯ್ ಸಿಂಗ್ ಧರ್ಮ ಪತ್ನಿಯಾದ “ರಾಣಿ ಜಯರಾಜಕುಮಾರಿ” ಧರ್ಮರಕ್ಷಣೆಗಾಗಿ, ರಾಮಮಂದಿರಕ್ಕಾಗಿ ಹಾಗು ತನ್ನ ಪತಿಯ ಸಾವಿನ ಪ್ರತೀಕಾರಕ್ಕೆ ತನ್ನಲ್ಲಿದ್ದ ಮೂರು ಸಾವಿರ ಮಹಿಳಾ ಸೇನೆಯ ಜೊತೆ ಮೀರ್ ಬಾಕಿಯ ವಿರುದ್ಧ ಸೆಟೆದು ನಿಂತು ಬಿಟ್ಟಳು. ಆಕೆಯ ಈ ದಿಟ್ಟ ಧರ್ಮ ರಕ್ಷಣೆಯ ಹೋರಾಟ ಹುಮಾಯುನ್ ಮೊಘಲ್ ಸಾಮ್ರಾಟನಾಗುವವರೆಗೆ ಅಂದರೆ 1530 ರವರೆಗೆ ನಡೆದಿತ್ತು.
ರಾಣಿ ಜಯರಾಜಕುಮಾರಿಯ ಗುರುಗಳಾದ ಸ್ವಾಮಿ ಮಹೇಶ್ವರಾನಂದಜೀ ರಾಮಭಕ್ತರನ್ನ ರಾಣಿಯ ಅಧೀನದಲ್ಲೇ ಸೇನೆಯ ತರಬೇತಿ ಹಾಗು ಮಾರ್ಗದರ್ಶನ ನೀಡುತ್ತ ಅದರ ಜೊತೆ ಜೊತೆಗೆ 24 ಸಾವಿರ ಸಾಧು ಸಂತರ ಪಡೆಯನ್ನೂ ತಯಾರು ಮಾಡಿಬಿಟ್ಟಿದ್ದರು.
ರಾಣಿ ಜಯರಾಜಕುಮಾರಿ ಹಾಗು ಹುಮಾಯುನ್ ನ ಸೈನ್ಯಗಳ ನಡುವೆ ಬರೋಬ್ಬರಿ ಹತ್ತು ಯುದ್ಧಗಳೇ ನಡೆದು ಹೋದವು. ಹತ್ತೂ ಯುದ್ಧಗಳಲ್ಲಿ ಮೊಘಲ್ ಸೇನೆ ತತ್ತರಿಸಿ ಹತ್ತನೆಯ ಯುದ್ಧದಲ್ಲಿ ತಾಳಲಾರದ ಹೊಡೆತ ತಿಂದ ಮೊಘಲ್ ಸೇನೆ ಆಯೋಧ್ಯೆಯನ್ನ ಬಿಡಬೇಕಾಯಿತು. ಸತತ ಪ್ರಯತ್ನಗಳ ನಂತರ ಆಯೋಧ್ಯೆ ಮತ್ತೆ ರಾಣಿ ಜಯರಾಜಕುಮಾರಿ ನೇತೃತ್ವದಲ್ಲಿ ಹಿಂದುಗಳ ಪಾಲಾಗಿತ್ತು.
ಆದರೆ ಹಿಂದೂ ಸಮಾಜಕ್ಕೆ ಈ ಖುಷಿ ಬಹಳ ದಿನ ಉಳಿಯಲಿಲ್ಲ. ಒಬ್ಬ ಹೆಣ್ಣಿನಿಂದ ಸೋಲುಂಡ ಹುಮಾಯುನ್ ಆಕ್ರೋಶಭರಿತನಾಗಿ ತನ್ನೆಲ್ಲಾ ಸೈನ್ಯವನ್ನ ಆಯೋಧ್ಯೆಗೆ ಕಳಿಸಿ ಸಾರ್ವಜನಿಕವಾಗಿ ಮಹೇಶ್ವರಾನಂದ ಸ್ವಾಮೀಜೀ ಹಾಗು ರಾಣಿ ಜಯರಾಜಕುಮಾರಿಯನ್ನ ತಲೆ ಕಡಿದು ಬಿಸಾಡಿಬಿಡುತ್ತಾನೆ.
ಇದರ ಜೊತೆಗೆ ಆಯೋಧ್ಯೆಯಲ್ಲಿ ಮತ್ತೆ 24 ಸಾವಿರ ಸಾಧು ಸಂತರ ಹಾಗು 3 ಸಾವಿರ ವೀರಾಂಗಿಣಿ ಮಹಿಳಾ ಸೇನೆಯ ಹತ್ಯೆಯಾಗಿ ಆಯೋಧ್ಯೆಯಲ್ಲಿ ಮತ್ತೆ ರಕ್ತದೋಕುಳಿ ಆಡಿ ಬಿಟ್ಟಿದ್ದರು ಕ್ರೂರ ಮುಸಲ್ಮಾನರು.
ಈ ಹಿಂದೂ ನರಸಂಹಾರದ ನಂತರ ಸಿಡಿದೆದ್ದವರು ಬಲರಾಮಾಚಾರಿ ಸ್ವಾಮೀಜಿಗಳು. ಅವರು ಹಳ್ಳಿ ಹಳ್ಳಿಗಳ ಭೇಟಿ ನೀಡಿ ಹಿಂದೂ ಯುವಕರನ್ನ, ಸಾಧು ಸಂತರನ್ನ ಒಗ್ಗೂಡಿಸಿ ಇಪ್ಪತ್ತು ಬಾರಿ ಅಯೋಧ್ಯೆಯಲ್ಲಿದ್ದ ಮೊಘಲ ಸೈನಿಕರ ಮೇಲೆ ದಾಳಿ ನಡೆಸುತ್ತಾರೆ.
ಈ ಇಪ್ಪತ್ತು ಬಾರಿ ನಡೆದ ದಾಳಿಗಳಲ್ಲಿ 15 ಬಾರಿ ಅಯೋಧ್ಯೆಯನ್ನ ತಮ್ಮ ವಶಕ್ಕೆ ಪಡೆದರೂ ಹಿಂದೂ ಯುದ್ಧನೀತಿಯ ಪ್ರಕಾರ ರಾತ್ರಿ ಯುದ್ಧ ಮಾಡಬಾರದು ಎಂಬ ಮೌಲ್ಯಕ್ಕೆ ಕಟ್ಟುಬಿದ್ದು ಮತ್ತೆ ಅಯೋಧ್ಯೆ ಮೊಘಲರ ಕೈಗೇ ಜಾರುವಂತಾಗಿತ್ತು. ಈ ರೀತಿಯದ್ದೇ ಪ್ರಯತ್ನಗಳು ಹುಮಾಯುನ್ ನ ಮಗ ಅಕ್ಬರ್ 1556 ರಲ್ಲಿ ಪಟ್ಟಕ್ಕೆ ಬರುವವರೆಗೆ ನಡೆದಿತ್ತು.
ಜೀವ ಕೊಡಲು ಸಿದ್ಧ ಆದರೆ ಹಿಂದುತ್ವವನ್ನ ಮಾತ್ರ ಬಿಡಲ್ಲ ಎಂಬ ಹಿಂದೂ ಸಾಧು ಸಂತರ ಹಾಗು ಹಿಂದೂ ಸಮಾಜದ ತೀವ್ರ ಪ್ರತಿರೋಧದಿಂದ ದಿನ ಕಳೆದಂತೆ ಮೊಘಲ್ ಸೈನ್ಯ ಕಳೆಗುಂದುತ್ತ ತನ್ನ ಸೈನಿಕರನ್ನ ಕಳೆದುಕೊಳ್ಳುತ್ತ ನಿಶ್ಯಕ್ತವಾಗುತ್ತ ಹೊರಟಿತ್ತು. ಇದನ್ನರಿತ ಅಕ್ಬರ್ ಇಸ್ಲಾಮಿನಲ್ಲಿರುವ ಅಲ್-ತಕಿಯಾ ಹಿಂದುಗಳ ಮೇಲೆ ಪ್ರಯೋಗ ಮಾಡಲು ಮುಂದಾದ.
ತಕಿಯಾ ಎಂದರೆ ಯಾವ ಅನ್ಯಮತೀಯ ಜನ ಇಸ್ಲಾಮಿಗೆ ಮತಾಂತರವಾಗಲು ಒಪ್ಪುವುದಿಲ್ಲವೋ ಅವರ ಜೊತೆ ಮೊದಲು ಗಾಢವಾದ ಸ್ನೇಹ ಮಾಡಿಕೊಳ್ಳುವುದು, ಅವರ ನಂಬಿಕೆ ಗಳಿಸಿಕೊಳ್ಳೋದು, ಅವರು ಹೇಳಿದಂತೆಯೇ ಕೇಳಿದವರ ಹಾಗೆ ನಟನೆ ಮಾಡಿ ಕೊನೆಗೊಂದು ದಿನ ಅವರನ್ನ ತಮ್ಮ ಜಾಲಕ್ಕೆ ಬೀಳಿಸಿ ಇಸ್ಲಾಮಿಗೆ ಮತಾಂತರ ಮಾಡಿಬಿಡೋದನ್ನೇ ಅಲ್-ತಕಿಯಾ ಅಂತ ಕರೆಯೋದು.
ಇದೇ ಅಲ್ ತಕಿಯಾ ನೀತಿಯನ್ನ ಅಕ್ಬರ್ ಹಿಂದುಗಳ ಮೇಲೆ ಪ್ರಯೋಗಿಸಿ ತಾನು ಹಿಂದುಗಳ ವಿರೋಧಿ ಅಲ್ಲ ಎಂಬುದನ್ನ ಹಿಂದುಗಳಿಗೆ ಮನವರಿಕೆ ಮಾಡಿಕೊಡಲು ಆತ ಮೂರು ಇಂಚಿನ ಚಿಕ್ಕ ಮಂದಿರವೊಂದನ್ನ ಕಟ್ಟಿಸಿಕೊಟ್ಟ (ಅಕ್ಬರ್ ಸೆಕ್ಯೂಲರ್ ರಾಜನಾಗಿದ್ದ ಅಂತ ಇಂದಿನ ನ್ಯೂ’ಸೂಳೆ’ಯರು, ತಥಾಕಥಿತ ಬುದ್ಧಿಜೀವಿಗಳು, ಸೆಕ್ಯೂಲರ್ ಗಳು ಬೊಗಳಲು ಕಾರಣವೇ ಅಕ್ಬರ್ ನ ಆ ಮೂರಿಂಚಿನ ದೇವಸ್ಥಾನ)
ಸತತವಾಗಿ ಸಂಘರ್ಷ, ಯುದ್ಧಗಳಿಂದ ಬಲರಾಮಾಚಾರಿ ಸ್ವಾಮೀಜಿಗಳ ಆರೋಗ್ಯ ಕ್ಷೀಣಿಸಿತ್ತು. ಪ್ರಯಾಗದ ಕುಂಭಮೇಳದಂತಹ ಪುಣ್ಯದಿನದಂದೇ ಸ್ವಾಮೀಜಿಗಳು ದೇಹತ್ಯಾಗ ಮಾಡಿ ಬಿಟ್ಟರು.
ಇತ್ತ ಅಕ್ಬರ್ ನಡೆಸಿದ್ದ ಅಲ್-ತಕಿಯಾ ಗೆ ಮರುಳಾದ ಹಿಂದುಗಳು ಮುಸಲ್ಮಾನರ, ಮೊಘಲರ ವಿರುದ್ಧ ಮೃದು ಧೋರಣೆ ತಾಳಲು ಆರಂಭಿಸಿದರು. ಅಕ್ಬರ್ ನ ಕುಟಿಲನೀತಿ ಕೆಲಸ ಮಾಡಿತ್ತು. ಸತತವಾಗಿ ಹಿಂದುಗಳ ವಿರೋಧದಿಂದ ಮೊಘಲರು ಅದಾಗಲೇ ಲಕ್ಷಾಂತರ ಸೈನಿಕರನ್ನ ಕಳೆದುಕೊಂಡಿತ್ತು. ಇದನ್ನ ತಪ್ಪಿಸಲು ಅಕ್ಬರ್ ಯಶಸ್ವಿಯಾಗಿದ್ದ.
ಮುಂದೆ ಶಾಹ್ ಜಹಾನ್ 1628 ರಲ್ಲೂ ಅಕ್ಬರ್ ನ ಈ ಅಲ್-ತಕಿಯಾ ವನ್ನೇ ಮುಂದುವರೆಸಿದ. ಆದರೆ ಈತನ ಮಗನಿದ್ದನಲ್ಲ ಔರಂಗಜೇಬ, ಆತ ಮಾತ್ರ ಕಾಫೀರ(ಮುಸಲ್ಮಾನರಲ್ಲದ ಧರ್ಮದವರು)ರೆಂದರೆ ಉರಿದುಬೀಳುತ್ತಿದ್ದ.
ಈ ಭಾರತದಲ್ಲಿ ಒಬ್ಬ ಕಾಫೀರರನ್ನೂ ಉಳಿಸಬಾರದು ಕೊಚ್ಚಿ ಹಾಕಬೇಕು, ಭಾರತವನ್ನ ಸಂಪೂರ್ಣವಾಗಿ ಇಸ್ಲಾಮೀಕರಣ ಮಾಡಬೇಕು ಅನ್ನುವಂತಿದ್ದ ಆ ಮತಾಂಧ ತನ್ನ ತಾತ ಅಕ್ಬರ್ ಕಟ್ಟಿಸಿದ್ದ ಮಂದಿರದ ಮೇಲೆಯೇ ಸುಮಾರು ಹತ್ತು ಬಾರಿ ದಾಳಿ ನಡೆಸಿ ಧ್ವಂಸಗೊಳಿಸಿದ್ದ.
ಈ ಸಂದರ್ಭದಲ್ಲಿ ಅಯೋಧ್ಯೆಯನ್ನ ಈ ಜಿಹಾದಿ ಔರಂಗಜೇಬನಿಂದ ರಕ್ಷಿಸಲು “ಸಮರ್ಥ ಗುರು ಶ್ರೀ ರಾಮದಾಸ ಮಹಾರಾಜ”ರ ಅನುಯಾಯಿಯಾಗಿದ್ದ “ವೈಷ್ಣವದಾಸ”ರು ಸುತ್ತ ಮುತ್ತಲಿನ ಹಳ್ಳಿಗಳಲ್ಲಿನ ಸೂರ್ಯವಂಶ ಕ್ಷತ್ರಿಯರನ್ನ ಒಗ್ಗೂಡಿಸಿ ಔರಂಗಜೇಬನ ವಿರುದ್ಧ ಸರಿಸುಮಾರು 30 ಬಾರಿ ಹೋರಾಡಿದ್ದರು.
ಆ ಸೂರ್ಯವಂಶೀಯ ಕ್ಷತ್ರಿಯರಲ್ಲಿ ಪ್ರಮುಖರಾಗಿದ್ದವರು ಸರಾಯ್ ನ ಠಾಕೂರ್ ಸರ್ದಾರ್ ಗಜರಾಜ ಸಿಂಗ್, ರಾಜೆಪುರದ ಕುವಾರ್ ಗೋಪಾಲ್ ಸಿಂಗ್, ಸಿಸಿಂದಾ ದಿಂದ ಜಗದಂಬಾ ಸಿಂಗ್. ಮೊಘಲರ ಸೈನ್ಯಕ್ಕೆ ಹೋಲಿಸಿದರೆ ತೃಣದಷ್ಟಿದ್ದೇವೆ ಅಂತ ಗೊತ್ತಿದ್ದರೂ ಮೊಘಲರ ಎದೆಯ ಮೇಲೆ ಭಗವಾ ಧ್ವಜ ನೆಡಲು ಈ ಯುವಕರು ನಿಂತಿದ್ದರು. ಆದರೆ ಮೊಘಲರ ಬೃಹತ್ ಸೈನ್ಯದೆದುರು ಈ ಯುವಕರು ಧರ್ಮಕ್ಕಾಗಿ ಪ್ರಾಣತೆತ್ತರು.
ಇಂತಹ ಸಾವಿರಾರು ಜನ ಧರ್ಮ ಯೋಧರು ರಾಮಲಲ್ಲಾ ಹಾಗು ಆಯೋಧ್ಯೆಯನ್ನ ತುರ್ಕರಿಂದ ರಕ್ಷಿಸಲು ತಮ್ಮ ಜೀವವನ್ನೇ ಭಾರತಮಾತೆಗೆ ಅರ್ಪಿಸಿದ್ದರು. ಅಂಥವರಲ್ಲಿ ಒಬ್ಬರಾಗಿದ್ದ ಠಾಕೂರ್ ಗಜರಾಜ್ ಸಿಂಗರ ಪೀಳಿಗೆ ಈಗಲೂ ಸರಾಯ್ ಕ್ಷೇತ್ರದಲ್ಲಿದ್ದಾರೆ. ಆಯೋಧ್ಯೆ ಇರುವ ಈಗಿನ ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿ ಸೂರ್ಯವಂಶೀಯ ಕ್ಷತ್ರೀಯರೇ ಬಹುಸಂಖ್ಯಾತರಿದ್ದಾರೆ. ಅಂಥವರಲ್ಲಿ ಕೆಲವರು ಈಗಲೂ ತಲೆಯ ಮೇಲೆ ಪಗಡಿ ಹಾಗು ಕಾಲಲ್ಲಿ ಚಪ್ಪಲಿಯನ್ನ ಈಗಲೂ ಹಾಕುವುದಿಲ್ಲ.
ಅದಕ್ಕೆ ಕಾರಣವೇನು ಗೊತ್ತಾ?
ಅಂದು ರಾಮನಿಗಾಗಿ ಹಾಗು ಆಯೋಧ್ಯೆಯನ್ನ ಮೊಗಲರಿಂದ ರಕ್ಷಿಸಲು ಪಣತೊಟ್ಟು ನಿಂತಿದ್ದ ಸೂರ್ಯವಂಶ ಕ್ಷತ್ರೀಯರು ಆಯೋಧ್ಯೆಯನ್ನ ಮತ್ತೆ ಹಳೇ ಗತವೈಭವಕ್ಕೆ ಮರಳಿ ತರುವವರೆಗೆ ತಲೆ ಮೇಲೆ ಪಗಡಿ ಹಾಗು ಕಾಲಿಗೆ ಚಪ್ಪಲಿ ಹಾಕಲ್ಲ ಎಂಬ ಶಪಥವನ್ನ ಮಾಡಿದ್ದರಂತೆ. ಅದೇ ಪರಂಪರೆಯನ್ನ ಈಗಲೂ ಅಲ್ಲಿನ ಸೂರ್ಯವಂಶೀಯ ಕ್ಷತ್ರಿಯರು ಭವ್ಯ ರಾಮಮಂದಿರ ನಿರ್ಮಾಣವಾಗುವವರೆಗೆ ಅದನ್ನೇ ಪಾಲಿಸುತ್ತಿದ್ದಾರೆ.
ಇರಲಿ, ಔರಂಗಜೇಬನ ಇತಿಹಾಸಕ್ಕೆ ಮರಳೋಣ, 1640 ರಲ್ಲಿ ಮಂದಿರಗಳ ಧ್ವಂಸ ಕಾರ್ಯದ ಜವಾಬ್ದಾರಿಯನ್ನ ಔರಂಗಜೇಬ ಜಾನಬಾಜ್ ಖಾನ್ ನಿಗೆ ನೀಡಿಬಿಟ್ಟ.
ಚಿಮ್ತಾಧಾರಿ ಸಾಧುಗಳು ಹಾಗು ಬಾಬಾ ವೈಷ್ಣವ ದಾಸರ ಪುಟ್ಟ ಹಿಂದೂ ಪಡೆ ಜಾನಬಾಜ್ ಖಾನ್ ನ ದೊಡ್ಡ ಸೈನ್ಯವನ್ನ ಎದುರಿಸಿ 7 ದಿನಗಳ ಕಾಲ ಹೋರಾಟ ನಡೆಸಿದ ಜಾನಬಾಜ್ ಖಾನ್ ನ್ನ ಊರ್ವಶಿ ಕುಂಡ ಎಂಬ ಸ್ಥಳದಲ್ಲಿ ಸೋಲಿಸುವಲ್ಲಿ ಯಶಸ್ವಿಯಾದರು.
ಈ ಚಿಮ್ತಾಧಾರಿ ಸಾಧುಗಳ ಸಾಮಾನ್ಯ ಸಾಧುಗಳು ಸಮಾನ್ಯರಾಗಿರಲಿಲ್ಲ, ಅವರಿಗೆ ಮಾರ್ಶಿಯಲ್ ಆರ್ಟ್ಸ್ ನ ಎಲ್ಲ ಯುದ್ಧ ಕಲೆಗಳೂ ಕರತಲಾಮಲಕವಾಗಿದ್ದವು. ಅದರಿಂದಲೇ ಅವರು ಮೊಘಲ್ ಸೈನ್ಯವನ್ನ ಬಗ್ಗುಬಡಿದಿದ್ದರು. ಜಾನಬಾಜ್ ಖಾನ್ ಯಕಶ್ಚಿತ್ ಸಾಧುಗಳ ಕೈಯಲ್ಲಿ ಸೋತ ಎಂಬ ಸುದ್ದಿ ಔರಂಗಜೇಬನಿಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗಲಿಲ್ಲ.
ಬಾಬಾ ವೈಷ್ಣವದಾಸರು ಅಂದು ಗುರು ಗೋವಿಂದ ಸಿಂಗರಿಗೆ ಪತ್ರ ಬರೆದು ಮೊಘಲ್ ಸೇನೆಯ ವಿರುದ್ಧ ಸಹಾಯಹಸ್ತ ಚಾಚಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗುರು ಗೋವಿಂದ ಸಿಂಗರು ತಕ್ಷಣ ತಮ್ಮ ಸೈನ್ಯದ ಜೊತೆ ಆಯೋಧ್ಯೆಗೆ ಹೊರಟು ಬ್ರಹ್ಮಕುಂಡ ಎಂವ ಸ್ಥಳದಲ್ಲಿ ತಂಗಿದ್ದರು.(ಇಂದು ಆ ಪ್ರದೇಶದಲ್ಲಿ ಗುರು ಗೋವಿಂದ ಸಿಂಗರ ಭೇಟಿಯ ನೆನಪಿಗಾಗಿ ಅಂದು ಕಟ್ಟಿಸಿದ್ದ ಗುರುದ್ವಾರವನ್ನ ನಾವು ಈಗಲೂ ಕಾಣಬಹುದು)
ಬಾಬಾ ವೈಷ್ಣವ ದಾಸರು, ಚಿಮ್ತಾಧಾರಿ ಸಾಧುಗಳು ಹಾಗು ಗುರುಗೋವಿಂಷ ಸಿಂಗರ ಸೇನೆ ಮೊಘಲರ ವಿರುದ್ಧ ಅನೇಕ ಯುದ್ಧಗಳನ್ನ ಮಾಡಿ ಸಯ್ಯದ್ ಹಸನ್ ಎಂಬ ಔರಂಗಜೇಬನ ಆಪ್ತನೊಬ್ಬನನ್ನ ಕೊಂದು ಹಾಕಿದರು. ಈ ಸುದ್ದಿ ಔರಂಗಜೇಬನಿಗೆ ಬರಸಿಡಿಲಂತೆ ಬಂದೆರಗಿತ್ತು.
ಹಿಂದುಗಳ ಆ ರೌದ್ರಾವತಾರ ಹೇಗಿತ್ತೆಂದರೆ ಮುಂದಿನ ನಾಲ್ಕು ವರ್ಷಗಳ ಕಾಲ ಮೊಘಲರು ಯುದ್ಧ ಮಾಡುವ ಸ್ಥಿತಿಯಲ್ಲಿಯೇ ಇರದ ಹಾಗಾಗಿತ್ತು.
ಆದರೆ 1664 ರಲ್ಲಿ ಮೋಸದಿಂದ ಮೊಘಲ್ ಸೈನ್ಯ ಏಕಾಏಕಿ ದಾಳಿ ನಡೆಸಿ ಸುಮಾರು 10 ಸಾವಿರ ಹಿಂದುಗಳನ್ನ ಕೊಂದು ಹಾಕಿತ್ತು. ಆ ಹಿಂದುಗಳ ಶವಗಳನ್ನ “ಕಂದರ್ಪ್ ಕೂಪ” ಎಂಬ ಸ್ಥಳದಲ್ಲಿ ತಂದು ಗುಡ್ಡೆ ಹಾಕಲಾಗಿತ್ತು. ಇಂದಿಗೂ ಆ ಜಾಗ ಮಂದಿರದ ಪೂರ್ವ ಭಾಗದಲ್ಲಿದ್ದು ಅದನ್ನ ಗಾಜ್-ಶಹೀದಾ ಎಂದು ಕರೆಯುತ್ತಾರೆ ಅಲ್ಲಿನ ಜನ.
ಮುಂದೆ 1763 ರಲ್ಲಿ ನವಾಬ ಶಹಾದತ್ ಅಲಿ ಅಮೇಥಿಯ ರಾಜ ಗುರುದತ್ತ ಸಿಂಗ್ ಹಾಗು ಪೀಪರಪುರದ ರಾಜಕುಮಾರ್ ಸಿಂಗ್ ರ ಮೇಲೆ ಯುದ್ಧ ನಡೆಸಿ ಅಪಾರ ಪ್ರಮಾಣದಲ್ಲಿ ಹಿಂದುಗಳ ನರಸಂಹಾರ ನಡೆಸಿದ. ಎಲ್ಲೇ ಹಿಂದುಗಳ ಹತ್ಯೆ ಮಾಡಿದರೂ ಆ ಹೆಣಗಳನ್ನೆಲ್ಲಾ ತಂದು ಆಯೋಧ್ಯೆಯಲ್ಲೇ ಹೂಳಲಾಗುತ್ತಿತ್ತು.
ಹಿಂದುಗಳನ್ನ ಹೀಗೇ ಬಿಟ್ಟರೆ ನಮಗೆ ಉಳಿಗಾಲವಿಲ್ಲ, ಹೇಗಾದರೂ ಮಾಡಿ ಇವರನ್ನ ಶಾಂತಗೊಳಿಸಲೇ ಬೇಕು ಹಾಗಾಗಿ ಆಯೋಧ್ಯೆ ಇವರಿಗೆ ಬಿಟ್ಟುಕೊಟ್ಟಂತೆ ನಟಿಸಬೇಕು ಅಂತ ಹಿಂದುಗಳಿಗೆ ತಮ್ಮ ನಮಾಜಿ ಮುಸ್ಲಿಮರ ಜೊತೆ ಜೊತೆಗೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟ ಆದರೆ ಅಧಿಕೃತವಾಗಿ ಆತ ಆಯೋಧ್ಯೆಯನ್ಮ ಹಿಂದುಗಳಿಗೆ ಬಿಟ್ಟುಕೊಟ್ಟಿರಲಿಲ್ಲ ಎಂದು ‘ಲಕ್ನೋ ಗೆಜೆಟಿಯರ್’ ನಲ್ಲಿ ಬ್ರಿಟಿಷ್ ಅಧಿಕಾರಿ ಕರ್ನಲ್ ಹಂಟ್ ಬರೀತಾನೆ.
ಅದರಲ್ಲಿನ 62 ನೆಯ ಪುಟದಲ್ಲಿ ಆತ ಮತ್ತೆ ಆಯೋಧ್ಯೆಯ ಬಗ್ಗೆ ಉಲ್ಲೇಖಿಸುತ್ತ ‘ಮಕರಾಹಿ’ಯ ರಾಜ ಹಿಂದುಗಳನ್ನ ಒಗ್ಗೂಡಿಸಿ ನಸೀರುದ್ದಿನ್ ಹೈದರ್ ನ ಮೇಲೆ 3 ಬಾರಿ ಯುದ್ಧ ನಡೆಸಿ ಸಾಕಷ್ಟು ಹೊಡೆತ ನೀಡಿ ಆತನ ಸೈನ್ಯವನ್ನ ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದ್ದ.
ಮೂರನೆಯ ಯುದ್ಧ ಮಾತ್ರ ಘನಘೋರ ಯುದ್ಧವಾಗಿತ್ತು. ಆ ಯುದ್ಧದ ಎಂಟನೆಯ ದಿನದಂದು ಭೀಥಿ, ಹಂಸವರ್, ಮಕರಾಹಿ, ಖಜುರಾತ್, ದೀಯಾರಾ ಹಾಗು ಅಮೇಥಿಯ ಹಿಂದು ರಾಜರುಗಳೆಲ್ಲಾ ನಸೀರುದ್ದಿನ್ ಹೈದರ್ ನ ಬೃಹತ್ ಸೇನೆಯೆದುರು ಸೋಲುವ ಸ್ಥಿತಿಗೆ ತಲುಪಿಬಿಟ್ಟಿದ್ದರು.
ಆದರೆ ಮುಂದೆ ನಡೆದದ್ದೇ ರೋಚಕ ಹಾಗು ಆಶ್ಚರ್ಯಚಕಿತಗೊಳಿಸುವ ವಿಚಾರವಾಗಿತ್ತು. ಸೋಲುವ ಸ್ಥಿತಿಯಲ್ಲಿದ್ದ ಹಿಂದು ರಾಜರುಗಳ ಪರವಾಗಿ ಚಿಮ್ತಾಧಾರಿ ಸಾಧುಗಳು ಮತ್ತೆ ಎಂಟ್ರಿ ಕೊಟ್ಟಿದ್ದರು. ಇಡೀ ಯುದ್ಧದ ಸ್ಥಿತಿಯನ್ನೇ ಚಿಮ್ತಾಧಾರಿ ಸಾಧುಗಳು ಉಲ್ಟಾಪಲ್ಟಾ ಮಾಡಿಬಿಟ್ಟಿದ್ದರು. ಇದರಿಂದ ಪುಟಿದೆದ್ದ ಹಿಂದು ರಾಜರುಗಳು ರಾಯಲ್ ಮೊಘಲ್ ಆರ್ಮಿ ಎಂದೇ ಕರೆಸಿಕೊಳ್ಳುತ್ತಿದ್ದ ಮೊಘಲರ ಸೇನೆಯ ಒಬ್ಬೊಬ್ಬ ಸೈನಿಕನನ್ನೂ ದಯಡ ದಾಕ್ಷಿಣ್ಯ ಅನ್ನೋದನ್ನೂ ನೋಡದೆ ಕೊಂದು ಆಯೋಧ್ಯೆಯನ್ನ ಮರಳಿ ಹಿಂದುಗಳಿಗೆ ವಾಪಸ್ ಬರುವಂತೆ ಮಾಡಿದ್ದರು ಎಂಬುದನ್ನ ಕರ್ನಲ್ ಹಂಟ್ ಲಕ್ನೋ ಗೆಜೆಟಿಯರ್ ನಲ್ಲಿ ಬರೆದಿದ್ದಾನೆ.
ವಾಜಿದ್ ಅಲಿ ಶಾಹ್ ನ ಆಡಳಿತದ ಸಂದರ್ಭದಲ್ಲೂ ಹಿಂದುಗಳು ಆಯೋಧ್ಯೆಯನ್ನ ತಮ್ಮ ವಶಕ್ಕೆ ಪಡೆಯಲು ಹೋರಾಟ ನಡೆಸಿದ್ದರು ಎಂಬುದನ್ನ ‘ಫೈಜಾಬಾದ್ ಗೆಜೆಟಿಯರ್’ ನಲ್ಲಿ ಇತಿಹಾಸಕಾರ ಕನ್ನಿಂಗಹ್ಯಾಮ್ ಉಲ್ಲೇಖಿಸಿದ್ದಾನೆ.
ಆತ ಹಿಂದುಗಳ ನಡೆಸಿದ ಯುದ್ಧದ ಬಗ್ಗೆ ಬರೆಯೋದು ಹೀಗೆ “ಆ ಯುದ್ಧ ಮಾತ್ರ ನಿಜಕ್ಕೂ ಭಯಾನಕವಾಗಿದ್ದು ಆ ಯುದ್ಧ ನಡೆದದ್ದು ನಾಲ್ಕು ದಿನಗಳ ಕಾಲವಷ್ಟೇ. ಆಯೋಧ್ಯೆ ಹಿಂದುಗಳ ವಶವಾಗಿತ್ತು. ಹಿಂದುಗಳು ಮುಸ್ಲಿಂ ಹೆಣ್ಣುಮಕ್ಕಳನ್ನ ಹಾಗು ಮಕ್ಕಳನ್ನ ಬದುಕಿಕೊಳ್ಳಲು ಬಿಟ್ಟು ಬಿಟ್ಟಿದ್ದರು” ಎಂದು.
ಅಂದು ಆಯೋಧ್ಯೆ ವಶಪಡಿಸಿಕೊಂಡಿದ್ದ ಹಿಂದುಗಳು ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಮಾಡಿದ್ದರು. ಆದರೆ ಅದನ್ನ ಔರಂಗಜೇಬ ಒಡೆದುಹಾಕಿದ್ದ. ಮಾರ್ಚ್ 18, 1858 ರಂದು ಶಾಹ್ ಜಫರ್ ಆಡಳಿತದಲ್ಲಿ ಬಾಬಾ ರಾಮಚರಣದಾಸ್ ರನ್ನ ಬ್ರಿಟಿಷರು ಗಲ್ಲಿಗೇರಿಸುತ್ತಾರೆ.
ಕೊನೆಯ ಬಲಿದಾನ ಆಯೋಧ್ಯೆಗಾಗಿ, ಶ್ರೀರಾಮನಿಗಾಗಿ ನಡೆದದ್ದು ಡಿಸೆಂಬರ್ 6, 1992 ರಲ್ಲಿ ಧರ್ಮಪ್ರೇಮಿ ರಾಮಭಕ್ತರು ನೀಡಿದ್ದು ಹಾಗು ಉಳಿದ ಮುಂದಿಮ ಇತಿಹಾಸ ತಮಗೆಲ್ಲಾ ತಿಳಿದಿರುವಂಥದ್ದೇ.
“ರಾಮಮಂದಿರ ಹಾಗು ಆಯೋಧ್ಯೆಯಲ್ಲಿ ನಡೆದ ಐನೂರು ವರ್ಷಗಳ ನಿರಂತರ ಸಂಘರ್ಷವನ್ನ ಹಿಂದುಗಳು ನಡೆಸಿಕೊಂಡು ಬಂದಿದ್ದರು” ಅಂತ ಮಾತ್ರ ಕೇಳಿದ್ದವರಿಗೆ ಈ ಎಳೆಎಳೆಯಾದ ಇತಿಹಾಸ.
(ಸದ್ವಿಚಾರ ಸಂಗ್ರಹ)
***
ರಾಮಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಘಟಾನವಳಿಗಳು ಕೋರ್ಟ್ ಆದೇಶದಂತೆ ನೆಡೆದಿವೆ... ಈ ಭಕ್ತರ ಗಲಾಟೆಗಳು... ಪ್ರಾಣಹಾನಿ... ಬಿಜೆಪಿ ರಾಮಮಂದಿರ ಹೆಸರು ಹೇಳಿಕೊಂಡು ಅಧಿಕಾರಕ್ಕೆರಿದ್ದನ್ನು ಹೊರತುಪಡಿಸಿ. ಆದರೂ ಈ ಭಕ್ತರ ಈ ಕೂಗಾಟ ಹಾರಾಟ ಏಕೆ...?.
ಅಯೋಧ್ಯೆ ಬಾಬ್ರಿ-ರಾಮಂದಿರ ವಿವಾದ 1528 ರಿಂದ 2018 ರವರೆಗೆ
ಸಂದೇಶ ಇ-ಮ್ಯಾಗಝಿನ್: ಇವತ್ತು ಡಿಸೆಂಬರ್ 6 ಅಯೋಧ್ಯೆಯಲ್ಲಿ ಮೊಘಲ್ ಕಾಲದ ಅರಸ ಬಾಬರ್ ನಿರ್ಮಿಸಿದ್ದ ಬಾಬರಿ ಮಸೀದಿ ಸಂಕೀರ್ಣವನ್ನು ಹಿಂದುತ್ವದ ಕರಸೇವಕರು ಧ್ವಂಸ ಗೊಳಿಸಿದ ದಿನ. ಆಗ ಭುಗಿಲೆದ್ದ ಹಿಂಸಾಚಾರದಲ್ಲಿ ಸಾವಿರಾರು ಮಂದಿ ತಮ್ಮ ಪ್ರಾಣವನ್ನು ಕಳೆದು ಕೊಂಡಿದ್ದರು. ಅಲ್ಲಿಂದ ಇಲ್ಲಿಯ ತನಕ ಈ ವಿವಾದ ಹಲವು ರಾಜಕೀಯ ಹೈ ಡ್ರಾಮಾಗಳಿಗೆ ಕಾರಣವಾಗಿದೆ. ಭಾರತೀಯ ಜನತಾ ಪಕ್ಷ ಇದೇ ವಿಷಯವನ್ನು ರಾಜಕೀಯ ಪ್ರಣಾಳಿಕೆಯಾಗಿ ಅಧಿಕಾರಕ್ಕೆ ಬಂದು ಇದೀಗ ಅತೀ ಬಲಿಷ್ಟ ಪಕ್ಷವಾಗಿ ಮಾರ್ಪಾಡಾಗಿದೆ. ಮತ್ತೆ ಈ ವಿವಾದಕ್ಕೆ ಸಂಬಂಧಿಸಿ ದೇಶದಲ್ಲಿ ಅದೆಷ್ಟೋ ಗಲಭೆಗಳು ದ್ವೇಷ ಭಾಷಣಗಳು ದೇಶದ ಜನರು ನೋಡಿದ್ದಾರೆ ಆಲಿಸಿದ್ದಾರೆ. ಇದೀಗ 2019 ರ ಚುನಾವಣೆಯೂ ಇದೇ ಅಯೋಧ್ಯಾ ವಿವಾದದ ವಿಚಾರದ ಮೇಲೆ ನಡೆಯುತ್ತೆ ಅನ್ನೋ ಲಕ್ಷಣ ಇದೀಗಾಗಲೇ ಗೋಚರಿಸಿದೆ. ಈ ವಿವಾದ ಇಲ್ಲಿಯ ವರೆಗೆ ನಡೆದು ಬಂದ ಹಾದಿಯನ್ನು ನಾವೊಮ್ಮೆ ತಿರುಗಿ ನೋಡೋಣ.
1528: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮೊಘಲ್ ಅರಸ ಬಾಬರ್ ಒಂದು ಮಸೀದಿ ನಿರ್ಮಾಣ ಮಾಡಿದ. ಅದಕ್ಕೆ ಬಾಬರ್ ಮಸ್ಜಿದ್ ಎಂದು ಹೆಸರಿಡಲಾಯಿತು.
1853: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇರುವ ಜಾಗ ಹಿಂದೂಗಳ ದೇವರಾದ ರಾಮನ ಜನ್ಮಸ್ಥಳ ಎಂದು ಪ್ರಥಮ ಬಾರಿಗೆ ಹಿಂದೂಗಳು ಆರೋಪಿಸಿದರು. ಈ ವಿಷಯದಲ್ಲಿ ಮೊದಲ ಬಾರಿಗೆ ಹಿಂದೂ ಮುಸ್ಲಿಮ್ ಗಲಭೆ ನಡೆಯಿತು.
1859: ಘಟನೆ ಗಂಭೀರ ಸ್ವರೂಪ ತಾಳಿದಾಗ ಆಗಿನ ಬ್ರಿಟೀಷ್ ಸರಕಾರ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಹಾಗೂ ಮುಸ್ಲಿಮರಿಗೆ ನಮಾಝ್ ಮಾಡಲು ಅವಕಾಶ ಕಲ್ಪಿಸಿತು.
1885: ಮಹಂತ ರಘುಬರ್ ದಾಸ್ ಎಂಬವರು ಫೈಝಾಬಾದ್ ನ್ಯಾಯಾಲಯದಲ್ಲಿ ಮಸೀದಿಯ ಪಕ್ಕದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ಕೋರಿ ಮೊಕದ್ದಮೆ ಹೂಡಿದರು. ಈ ಮೂಲಕ ಬಾಬರಿ ಮಸೀದಿ-ರಾಮ ಜನ್ಮ ಭೂಮಿ ಪ್ರಕರಣ ಪ್ರಥಮ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿತು.
1949 ಡಿಸೆಂಬರ್ 23 : ಸುಮಾರು 50 ಹಿಂದೂ ಕಾರ್ಯಕರ್ತರು ಬಾಬರಿ ಮಸೀದಿಗೆ ಪ್ರವೇಶಿಸಿ ಮಸೀದಿಯ ಒಳಭಾಗದಲ್ಲಿ ರಾಮನ ಮೂರ್ತಿಯನ್ನು ಪ್ರತಿಷ್ಟಾಪಿಸಿದರು. ಇದರ ನಂತರ ಹಿಂದೂಗಳು ಮಸೀದಿಯ ಒಳಭಾಗದಲ್ಲಿ ನಿರಂತರವಾಗಿ ಪೂಜೆ ಮಾಡಲು ಪ್ರಾರಂಭಿಸಿದರು. ಮುಸಲ್ಮಾನರು ಮಸೀದಿಯಲ್ಲಿ ನಮಾಝ್ ನಿರ್ವಹಿಸುವುದನ್ನು ನಿಲ್ಲಿಸಿದರು.
17 ಡಿಸೆಂಬರ್1959: ವಿವಾದಿತ ಸ್ಥಳವನ್ನು ನಮಗೆ ಹಸ್ತಾಂತರಿಸಬೇಕು ಎಂದು ನಿರ್ಮೋಹಿ ಅಖಾಡದವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು.
1961: ಇದೀಗ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್ ಕೂಡ ಮಸೀದಿಯ ಮಾಲಿಕತ್ವವನ್ನು ನಮಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಸಲ್ಲಿಸಿತು. ಮಸೀದಿಗೆ ಬೀಗ ಜಡಿಯಲು ನ್ಯಾಯಾಲಯ ಆದೇಶ ನೀಡಿತು.
1984: ವಿಶ್ವ ಹಿಂದೂ ಪರಿಷತ್ ಬಾಬ್ರಿ ಮಸೀದಿಯ ಬೀಗ ಒಡೆದು, ರಾಮನ ಜನ್ಮ ಸ್ಥಳವನ್ನು ಸ್ವತಂತ್ರ ಗೊಳಿಸಲು ಹಾಗೂ ಅಲ್ಲೊಂದು ವಿಶಾಲ ರಾಮಮಂದಿರ ನಿರ್ಮಿಸುವ ಅಭಿಯಾನ ಪ್ರಾರಂಭಿಸಿತು.
1 ಫೆಬ್ರವರಿ 1986: ಫೈಜಾಬಾದ್ ನ್ಯಾಯಾಲಯ ವಿವಾದಿತ ಸಂಕೀರ್ಣದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಮತ್ತೆ ಅನುಮತಿ ನೀಡಿತು. ಆ ಕಾರಣದಿಂದಾಗಿ ಮತ್ತೆ ಬಾಬ್ರಿ ಮಸೀದಿಯ ಬೀಗ ತೆರೆಯಲಾಯಿತು. ಇದರಿಂದಾಗಿ ಕುಪಿತರಾದ ಮುಸ್ಲಿಮರು ಬಾಬ್ರಿ ಮಸ್ಜಿದ್ ಆಕ್ಷನ್ ಕಮಿಟಿಯನ್ನು ಸ್ಥಾಪಿಸಿದರು.
1989: ಭಾರತೀಯ ಜನತಾ ಪಕ್ಷ ಎಂಬ ಹೊಸ ಪಕ್ಷ ಅಯೋಧೆಯ್ಯ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್‌ಗೆ ಬೆಂಬಲವಾಗಿ ನಿಂತಿತು. ಇದರಿಂದಾಗಿ ಬಾಬ್ರಿ-ರಾಮ ಜನ್ಮ ಭೂಮಿ ವಿವಾದ ಹೊಸ ರಾಜಕೀಯ ತಿರುವು ಪಡೆಯಿತು. ಇದೇ ವರ್ಷ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರು ಬಾಬರಿ ಮಸೀದಿ ಕಟ್ಟಡದ ಪಕ್ಕದಲ್ಲೇ ಮಂದಿರಕ್ಕೆ ಶಿಲಾನ್ಯಾಸ ಮಾಡಲು ಅವಕಾಶ ಕಲ್ಪಿಸಿದರು.
1990: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಲಾಲ್ ಕೃಷ್ಣ ಅಡ್ವಾನಿಯವರು ಗುಜರಾತಿನ ಸೋಮನಾಥದಿಂದ ಅಯೋಧ್ಯೆಯ ವರೆಗೆ ರಥ ಯಾತ್ರೆ ಪ್ರಾರಂಭಿಸಿದರು. ಇದರಿಂದಾಗಿ ದೇಶಾದ್ಯಂತ ಅಲ್ಲಲ್ಲಿ ಕೋಮು ಗಲಭೆ ಪ್ರಾರಂಭವಾಯಿತು. ಬಿಹಾದ ಸಮಸ್ತೀಪುರ್ ಎಂಬಲ್ಲಿಗೆ ಅಡ್ವಾನಿಯವರ ರಥ ಯಾತ್ರೆ ತಲುಪಿದಾಗ ಆಗಿನ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರು ಅಡ್ವಾನಿಯವರನ್ನು ಬಂಧಿಸಿದರು. ಇದರಿಂದ ಕುಪಿತವಾದ ಬಿಜೆಪಿ ಆಗಿನ ವಿ.ಪಿ.ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆಯಿತು.
1991: ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಸರಕಾರ ಅಯೋಧ್ಯೆ ಬಾಬರಿ ಮಸೀದಿ ಅಕ್ಕ -ಪಕ್ಕದ ಸುಮಾರು 2.77 ಎಕರೆ ಭೂಮಿಯನ್ನು ಸರ್ಕಾರದ ಅಧಿಕಾರಕ್ಕೆ ಪಡೆದು, ತಾತ್ಕಾಲಿಕವಾಗಿ ಇದು ಸರಕಾರಕ್ಕೆ ಸೇರಿದ ಭೂಮಿ ಎಂದು ಘೋಷಿಸಿತು.
6 ಡಿಸೆಂಬರ್ 1992: ಸಾವಿರಾರು ಹಿಂದುತ್ವದ ಕರಸೇವಕರು ಅಯೋಧ್ಯೆಗೆ ತಲುಪಿ ಪೊಲೀಸ್ ಬಲವನ್ನು ಲೆಕ್ಕಿಸದೆ ಪುರಾತನ ಕಾಲದ ಬಾಬ್ರಿ ಮಸೀದಿ ಸಂಕೀರ್ಣದ ಗುಮ್ಮಟವನ್ನು ಪಿಕ್ಕಾಸು, ಹಾರೆ, ಗುದ್ದಲಿ, ಈಟಿಯ ಸಹಾಯದಿಂದ ಉರುಳಿಸಿದರು. ಸ್ಥಳದಲ್ಲಿ ತಾತ್ಕಾಲಿಕವಾಗಿ ಒಂದು ಡೇರೆಯ ರೂಪದ ರಾಮಮಂದಿರವನ್ನು ನಿರ್ಮಿಸಲಾಯಿತು. ಪರಿಣಾಮವಾಗಿ ಬಾಂಬೆ ಸೇರಿದಂತೆ ದೇಶಾದ್ಯಂತ ಭಾರೀ ಕೋಮು ಗಲಭೆಗಳು ಭುಗಿಲೆದ್ದಿತು. ಗಲಭೆಯಲ್ಲಿ ಸಾವಿರಾರು ಮಂದಿರ ಹತರಾದರು. ಸುಮಾರು ಒಂದು ವಾರಗಳ ಕಾಲ ಇಡೀ ದೇಶವೇ ನಿಷ್ಕ್ರಿಯ ಸ್ಥಿತಿಗೆ ತಲುಪಿತು. ಜನರು ಆಹಾರವಿಲ್ಲದೆ ಪರಿತಪಿಸುವಂತಾಯಿತು.
16 ಡಿಸೆಂಬರ್ 1992: ಮಸೀದಿಯನ್ನು ಧ್ವಂಸ ಗೊಳಿಸಿದವರ ವಿರುದ್ಧ ತನಿಖೆಗೆ ನ್ಯಾಯ ಮೂರ್ತಿ ಲಿಬರ್ಹಾನ್ ನೇತೃತ್ವದ ಆಯೋಗವೊಂದನ್ನು ಸರಕಾರ ರಚನೆ ಮಾಡಿತು.
2002: ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ಕಚೇರಿಯಲ್ಲಿ ಅಯೋಧ್ಯೆ ವಿಭಾಗ ಎಂಬ ಕಚೇರಿಯನ್ನು ಪ್ರಾರಂಭಿಸಿದರು. ಇಲ್ಲಿ ಅಯೋಧ್ಯೆಯ ವಿವಾದದ ಕುರಿತು ಹಿಂದೂ -ಮುಸ್ಲಿಮ್ ಮುಖಂಡರ ಸಭೆ ನಡೆಸಲಾಗುತ್ತಿತ್ತು. ಇದೇ ವರ್ಷ ಏಪ್ರಿಲ್ ನಲ್ಲಿ ಅಲಹಾಬಾದ್ ಹೈಕೋರ್ಟಿನ ತ್ರಿಸದಸ್ಯ ಪೀಠವು ಅಯೋಧ್ಯೆಯ ವಿವಾದಿತ ಜಾಗದ ಮಾಲೀಕತ್ವದ ವಿಚಾರದಲ್ಲಿ ವಿಚಾರಣೆ ಪ್ರಾರಂಭಿಸಿತು.
2003: ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಅಯೋಧ್ಯೆಯಲ್ಲಿ ಜಾಗದ ಉತ್ಖನನ ಪ್ರಾರಂಭಿಸಿತು. ಇಲ್ಲಿ ಉತ್ಖನನ ನಡೆಸಿದಾಗ ಈ ಹಿಂದೆ ಈ ಜಾಗದಲ್ಲಿ ಮಂದಿರ ಇದ್ದುದ್ದಕ್ಕೆ ಪುರಾವೆ ಸಿಕ್ಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಹೇಳಿತು. ಇದನ್ನು ಮುಸ್ಲಿಮ್ ಪಕ್ಷವು ಒಪ್ಪಲಿಲ್ಲ. ಇದೇ ವರ್ಷ ನ್ಯಾಯಾಲಯವು ಮಸೀದಿಯ ಕಟ್ಟಡವನ್ನು ಧ್ವಂಸ ಮಾಡಿ ಕಾನೂನು ಕೈಗೆತ್ತಲು ಕರಸೇವಕರನ್ನು ಪ್ರೋತ್ಸಾಹಿಸಿದ ವ್ಯಕ್ತಿಗಳ ವಿಚಾರಣೆಗೆ ಅನುಮತಿ ನೀಡಿತು.
2009: ಈ ಕಾಲದಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ಆಡಳಿತ ನಡೆಸುತ್ತಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಲಿಬರ್ಹಾನ್ ಆಯೋಗವು ನಿರಂತರ 17 ವರ್ಷದ ತನಿಖೆಯ ನಂತರ ವರದಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹಸ್ತಾಂತರಿಸಿತು.
2010: ಅಲಹಾಬಾದ್ ಹೈಕೋರ್ಟ್ ವಿವಾದಿತ ಭೂಮಿಯ ಬಗ್ಗೆ ತೀರ್ಪು ನೀಡುವುದನ್ನು ತಡೆಯಬೇಕು ಎಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿಸಲ್ಲಿಸಲಾಯಿತು. ಆದರೆ ಸುಪ್ರಿಂ ಕೋರ್ಟ್ ತೀರ್ಪು ತಡೆಹಿಡಿಯಲು ನಿರಾಕರಿಸಿತು. ಇದೇ ವರ್ಷ ಸೆಪ್ಟಂಬರ್ ಮೂವತ್ತರಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿತು., ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ವಿವಾದಿತ ಸ್ಥಳವನ್ನು ಮೂರು ಭಾಗವಾಗಿ ವಿಭಜಿಸಲಾಯಿತು. ಅದರಲ್ಲಿ ಒಂದು ಭಾಗ ರಾಮ ಮಂದಿರಕ್ಕೆ, ಇನ್ನೊಂದು ಭಾಗ ಸುನ್ನಿ ವಕ್ಫ್ ಬೋರ್ಡ್ ಅಧೀನಕ್ಕೆ, ಇನ್ನೊಂದು ಭಾಗ ನಿರ್ಮೋಹಿ ಅಖಾಡಾಕ್ಕೆ ಎಂದು ಹೇಳಿತು.
2011: ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದು ಗೊಳಿಸಬೇಕು ಎಂದು ಇದೀಗಾಗಲೇ ಮೂರೂ ಪಕ್ಷಗಳು ಸುಪ್ರಿಂ ಮೆಟ್ಟಿಲೇರಿತ್ತು. ಇದಲ್ಲದೆ ಇನ್ನೂ ಹಲವು ಅರ್ಜಿಗಳು ತೀರ್ಪು ರದ್ದು ಪಡಿಸುವಂತೆ ಆಗ್ರಹಿಸಿ ಸುಪ್ರಿಂ ಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. 2011ರ ಮೇ ತಿಂಗಳಲ್ಲಿ ಸುಪ್ರಿಂ ಕೋರ್ಟ್ ಅಲಹಾಬಾದ್ ಹೈ ಕೋರ್ಟ್ ತೀರ್ಪನ್ನು ರದ್ದು ಗೊಳಿಸಿತು.
2014: ಇತರ ಹಲವು ಪ್ರಣಾಳಿಕೆಗಳ ಜೊತೆಗೆ ನಾವು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವೆವು ಎಂಬುದನ್ನೂ ಸೇರಿಸಿ ಬಿಜೆಪಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲೋಕ ಸಭಾ ಚುನಾವಣೆಯನ್ನು ಎದುರಿಸಿತು. ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಪಡೆಯಿತು.
2016: ಬಾಬರಿ ಮಸೀದಿ ಪ್ರಕರಣದ ಅತ್ಯಂತ ಹಳೆಯ ಕಕ್ಷಿದಾರ ಹಾಶಿ ಅನ್ಸಾರಿ ಈ ವರ್ಷ ನಿಧನರಾದರು. ಇದೀಗ ಹಾಶಿಂ ಅನ್ಸಾರಿಯವರ ಮಗ ಇಕ್ಬಾಲ್ ಅನ್ಸಾರಿ ತಂದೆಯ ಸ್ಥಾನದಲ್ಲಿ ನಿಂತಿದ್ದಾರೆ.
2017: ಹಿಂದು ಹಾಗೂ ಮುಸ್ಲಿಮರ ನಡುವೆ ಸಹಮತಿ ಕಂಡುಕೊಂಡು ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಬಹುದಾ ಎಂದು ಸುಪ್ರಿಂ ಸಲಹೆ ನೀಡಿತು. ಅದಕ್ಕಾಗಿ ಪ್ರಯತ್ನ ಸಾಗಿತ್ತಾದರೂ ಅದು ವಿಫಲವಾಯಿತು. ಇದೇ ವರ್ಷ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಲಾಲ್ ಕೃಷ್ಣ ಅಡ್ವಾನಿ, ಮುರಳೀ ಮನೋಹರ ಜೋಷಿ, ಉಮಾ ಭಾರತಿ ಮತ್ತು ಆರೆಸ್ಸೆಸ್ ನ ಕೆಲವು ನಾಯಕರ ವಿರುದ್ಧ ಅಪರಾಧ ಪ್ರಕರಣ ನಡೆಸಲು ಸುಪ್ರಿಂ ಕೋರ್ಟ್ ಆದೇಶಿಸಿತು.
2018: ಸುಪ್ರಿಂ ಕೋರ್ಟಿನ ತ್ರಿಸದಸ್ಯ ಪೀಠದಲ್ಲಿ ನಮಾಝ್ ನಿರ್ವಹಿಸಲು ಮಸೀದಿ ಅಗತ್ಯವೇ ಎಂಬ ವಿಚಾರಣೆ ಬಂತು. ಇದರ ವಿಚಾರಣೆಯಲ್ಲಿ ನಮಾಝ್ ನಿರ್ವಹಿಸಲು ಮಸೀದಿ ಅಗತ್ಯವಿಲ್ಲ ಎಂದು ಸುಪ್ರಿಂ ತೀರ್ಪು ನೀಡಿತು. ಇದೇ ವರ್ಷ ವಿವಾದಿತ ಜಾಗದ ಮಾಲಕತ್ವದ ಬಗ್ಗೆ ಸುಪ್ರಿಂ ವಿಚಾರಣೆ ನಡೆಸಲು ಪ್ರಾರಂಭಿಸಿತು. ಅಕ್ಟೋಬರ್ ನಲ್ಲಿ ವಿಚಾರಣೆ ಕೈಗೆತ್ತಿಕೊಂಡಿತ್ತಾದರೂ ಆನಂತರ ಅದನ್ನು 2019 ರ ಜನವರಿ ತಿಂಗಳಿಗೆ ಮುಂದೂಡಲಾಯಿತು. ಇದೇ ವರ್ಷ ನವಂಬರ್ 26ರಂದು ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್, ಬಿಜೆಪಿ ಹಾಗೂ ಶಿವಸೇನೆಯ ನೇತೃತ್ವದಲ್ಲಿ ರಾಮಮಂದಿರ ನಿರ್ಮಿಸಲು ಜನಾಗ್ರಹ ಸಭೆ ಧರ್ಮ ಸಂಸತ್ ನಡೆಸಲಾಯಿತು. ಆ ನಂತರ ಇದೀಗ ದೇಶಾದ್ಯಂತ ಅಲ್ಲಲ್ಲಿ ಧರ್ಮ ಸಂಸತ್ ಜನಾಗ್ರಹ ಸಭೆ ನಡೆಸಲಾಗುತ್ತಿದೆ. ಬಿಜೆಪಿ ಸರಕಾರ ರಾಮಮಂದಿರ ನಿರ್ಮಿಸಲು ಸುಗ್ರೀವಾಜ್ಞೆ ಜಾರಿ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.
***
ರಾಮ ಮಂದಿರಕ್ಕೆ ಸಂಬಂಧಿಸಿದ ಈ 10 ಪ್ರಶ್ನೆಗಳು ನಿಮ್ಮಲ್ಲೂ ಇರಬಹುದು! ಅದಕ್ಕೆ ಉತ್ತರ ಇಲ್ಲಿದೆ ನೋಡಿ
https://dhunt.in/RtBew - By News18 ಕನ್ನಡ via Dailyhunt
ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ದೇವಾಲಯದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರವು ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವನ್ನು ಪ್ರಕಟಿಸಿದೆ. ಶ್ರೀರಾಮನ ಪ್ರತಿಮೆ ಸ್ಥಾಪನೆಗೆ ಸಮಯವನ್ನು ಅಂತಿಮಗೊಳಿಸಿದ್ದು, ಜನವರಿ 22, 2024 ರಂದು ಅಭಿಜಿತ್ ಲಗ್ನ, ಮೃಗಶಿರ ನಕ್ಷತ್ರದಲ್ಲಿ 12:20 ಕ್ಕೆ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ನಡೆಯುತ್ತದೆ.
ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಭಕ್ತರಲ್ಲಿ ಅಪಾರ ಉತ್ಸಾಹ ಕಂಡು ಬರುತ್ತಿದೆ. ಹೀಗಿರುವಾಗ ಭಕ್ತರ ಮನದಲ್ಲಿ ಹಲವು ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ನಿಮಲ್ಲೂ ರಾಮಮಂದಿರಕ್ಕೆ ಸಂಬಂಧಸಿದಂತೆ ಈ 10 ಪ್ರಶ್ನೆಗಳು ಇರಬಹುದು. ಇದಕ್ಕೆ ಉತ್ತರ ಮುಂದೆ ನೋಡಿ..
1) ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ಹೇಗೆ ನಡೆಯುತ್ತೆ?
ಪ್ರಸ್ತುತ, ರಾಮದೇವರ ಮೂರು ಪ್ರತಿಮೆಗಳನ್ನು ತಯಾರಿಸಲಾಗುತ್ತಿದೆ. ಪ್ರತಿಮೆಯ ಆಯ್ಕೆಯ ನಂತರ ಅದನ್ನು ಜನವರಿ ಎರಡನೇ ವಾರದಲ್ಲಿ ಸರಯೂಗೆ ಕೊಂಡೊಯ್ಯಲಾಗುತ್ತದೆ. ಮಹಾಮಸ್ತಕಾಭಿಷೇಕದ ನಂತರ ಮೆರವಣಿಗೆಯಲ್ಲಿ ಅಯೋಧ್ಯೆಯ ದೇವಸ್ಥಾನಗಳಿಗೆ ಕೊಂಡೊಯ್ಯಲಾಗುವುದು. ಇಲ್ಲಿಂದ ರಾಮಮಂದಿರದ ಎರಡನೇ ದ್ವಾರದ ಮೂಲಕ ವಿಗ್ರಹವನ್ನು ಗರ್ಭಗುಡಿಗೆ ತರಲಾಗುವುದು. ಮಹಾಮಸ್ತಕಾಭಿಷೇಕದವರೆಗೂ ರಾಮನ ಮೂರ್ತಿಯ ಕಣ್ಣುಗಳನ್ನು ಮುಚ್ಚಿರಲಾಗುತ್ತೆ. ಮಂತ್ರಘೋಷಗಳ ಮೂಲಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ವಿಧಿವಿಧಾನ ಜನವರಿ 22ರಂದು ನಡೆಯಲಿದೆ.
2) ಈಗಾಗಲೇ ವಿಗ್ರಹವಿದ್ದರೂ, ಮತ್ತೊಂದು ವಿಗ್ರಹ ಯಾಕೆ?
ಅಯೋಧ್ಯೆಯಲ್ಲಿ ಈಗಾಗಲೇ ರಾಮನ ಶಿಶು ವಿಗ್ರಹವಿದೆ.ದರ್ಶನಕ್ಕೆ ಬರುವ ಭಕ್ತರು 25ರಿಂದ 30 ಅಡಿ ದೂರದಿಂದಲೇ ದರ್ಶನ ಪಡೆಯಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಪ್ರತಿಮೆಯ ಅಗತ್ಯವಿತ್ತು. ಪುರಾತನ ಮೂರ್ತಿಯನ್ನೂ ಗರ್ಭಗುಡಿಯಲ್ಲಿ ಇಡಲಾಗುವುದು. ಇನ್ನು ಹೊಸ ವಿಗ್ರಹವು ಅಚಲವಾಗಿರುತ್ತದೆ ಮತ್ತು ಯಾವಾಗಲೂ ಗರ್ಭಗುಡಿಯಲ್ಲಿ ಉಳಿಯುತ್ತದೆ. ಮೆರವಣಿಗೆಯಲ್ಲಿ ಹೊರತರಬಹುದಾದ ಮತ್ತೊಂದು ಉತ್ಸವ ಮೂರ್ತಿ ಇರುತ್ತದೆ.
3) ಈ ಮೂರು ವಿಗ್ರಹಗಳನ್ನು ಯಾವುದರಿಂದ ತಯಾರಿಸಲಾಗಿದೆ?
ತಯಾರಾಗುತ್ತಿರುವ ಮೂರು ವಿಗ್ರಹಗಳು ವಿಭಿನ್ನ ಕಲ್ಲುಗಳು ಅಥವಾ ಲೋಹಗಳಿಂದ ಮಾಡಲ್ಪಟ್ಟಿದೆ. ಇದಕ್ಕಾಗಿ ದಕ್ಷಿಣ ಭಾರತ, ಜೈಪುರ, ಕರ್ನಾಟಕದಿಂದ ಕಲ್ಲುಗಳನ್ನು ತರಿಸಲಾಗಿದೆ. ಇವುಗಳನ್ನು ಬೇರೆ ಬೇರೆ ಶಿಲ್ಪಿಗಳಿಗೆ ನೀಡಲಾಗಿದೆ. ಈ ಮೂರ್ತಿಗಳ ನಿರ್ಮಾಣ ರಹಸ್ಯವಾಗಿ ನಡೆಯುತ್ತಿದೆ. ಈ ದೇವಾಲಯವು ಸಾವಿರಾರು ವರ್ಷಗಳವರೆಗೆ ಇರುತ್ತದೆ. ಆದ್ದರಿಂದ ಇಡೀ ದೇವಾಲಯವನ್ನು ವಿಶೇಷ ಕಲ್ಲುಗಳಿಂದ ನಿರ್ಮಿಸಲಾಗಿದೆ.
4) ದೇವಸ್ಥಾನ ಎಷ್ಟು ದೊಡ್ಡದು?
ರಾಮಮಂದಿರದ ಒಟ್ಟು ವಿಸ್ತೀರ್ಣ 2.7 ಎಕರೆ ಮತ್ತು ದೇವಾಲಯವನ್ನು 57000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಶಿಖರ ಸೇರಿದಂತೆ ದೇವಾಲಯದ ಎತ್ತರ 161 ಅಡಿ ಇರಲಿದೆ. ಈ ದೇವಾಲಯವು ಮೂರು ಮಹಡಿಗಳನ್ನು ಹೊಂದಿದೆ. ಪ್ರತಿ ಅಂತಸ್ತಿನ ಎತ್ತರ 20 ಅಡಿ.
5)ಎಷ್ಟು ಜನರು ಕೆಲ ಮಾಡುತ್ತಿದ್ದಾರೆ?
5 ಆಗಸ್ಟ್ 2020 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು . ಈ ಕೆಲಸದಲ್ಲಿ 3500 ನೌಕರರು ಹಗಲಿರುಳು ದುಡಿಯುತ್ತಿದ್ದಾರೆ. 31 ಡಿಸೆಂಬರ್ 2023 ರೊಳಗೆ ನಿರ್ಮಾಣವನ್ನು ಪೂರ್ಣಗೊಳಿಸಲು ಗಡುವು ಮುಕ್ತಾಯಗೊಳ್ಳುತ್ತಿದೆ. ಸದ್ಯ ನೆಲ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ. ಶ್ರೀರಾಮನ ಸಂಪೂರ್ಣ ಕಥೆಯನ್ನು ನೆಲ ಮಹಡಿಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ.
6) ಎಷ್ಟು ವರ್ಷದವರೆಗೂ ಗಟ್ಟಿಯಾಗುರತ್ತೆ ಈ ದೇಗುಲ?
ದೇವಸ್ಥಾನ ನಿರ್ಮಾಣದಲ್ಲಿ ಮಣ್ಣು ಪರೀಕ್ಷೆ ನಡೆಸಿ ತಜ್ಞರ ಸಲಹೆ ಮೇರೆಗೆ 15 ಮೀಟರ್ ಆಳಕ್ಕೆ ಮಣ್ಣು ತೆಗೆದು ಬೇರೆ ಮಣ್ಣು ತುಂಬಿಸಲು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಸಂಭವಿಸಿದ ಭೂಕಂಪಕ್ಕಿಂತ 50 ಪಟ್ಟು ಹೆಚ್ಚು ಪ್ರಬಲವಾದ ಭೂಕಂಪ ಸಂಭವಿಸಿದರೂ ಯಾವುದೇ ಅಪಾಯವಿಲ್ಲ. 1000 ವರ್ಷ ಆದರೂ ಈ ದೇವಸ್ಥಾ ಗಟ್ಟಿಯಾಗಿರುತ್ತೆ.
7) ರಾಮ ಹೊರುತುಪಡಿಸಿ, ಇನ್ಯಾವ ದೇವರ ವಿಗ್ರಹಗಳಿರುತ್ತೆ?
ರಾಮಮಂದಿರ ನಿರ್ಮಾಣಕ್ಕೆ ದೇಶದ 5 ಲಕ್ಷ ಹಳ್ಳಿಗಳಿಂದ ತಂದ ಇಟ್ಟಿಗೆಗಳನ್ನು ಮಾತ್ರ ಬಳಸಲಾಗಿದೆ. ಆದ್ದರಿಂದಲೇ ಪ್ರತಿಯೊಂದು ರಾಜ್ಯವೂ ಒಂದಲ್ಲ ಒಂದು ರೂಪದಲ್ಲಿ ಈ ದೇವಾಲಯದಲ್ಲಿದೆ. ಇದಲ್ಲದೆ, ಪಾರ್ಕೋಟಾದ ಹೊರಭಾಗದಲ್ಲಿ ಇದೇ ಪ್ರದೇಶದಲ್ಲಿ ಇನ್ನೂ 7 ದೇವಾಲಯಗಳನ್ನು ನಿರ್ಮಿಸಲು ಹೊರಟಿದೆ. ಇದರಲ್ಲಿ ಮಹರ್ಷಿ ವಾಲ್ಮೀಕಿ, ವಶಿಷ್ಠ, ನಿಷಾದ್ ಮಹಾರಾಜ್, ಶಬರಿಮಾತೆ, ಅಹಲ್ಯಾ ಮುಂತಾದ ಏಳು ದೇವಾಲಯಗಳು ಸೇರಲಿವೆ.
8. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪಾತ್ರವೇನು?
ದೇವಾಲಯದ ನಿರ್ಮಾಣದ ನಂತರ, ಸಂಪೂರ್ಣ ಆಡಳಿತದ ಕೆಲಸವನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಡಲಿದೆ. ನಿರ್ಮಾಣದ ನಂತರ ಟ್ರಸ್ಟ್ ಎಲ್ಲಾ ಆಡಳಿತಾತ್ಮಕ ಕೆಲಸಗಳನ್ನು ಸಹ ಮಾಡಬೇಕಾಗುತ್ತದೆ. ಜನಸಂದಣಿ ನಿಯಂತ್ರಣ, ಭಕ್ತರಿಗೆ ಸೌಲಭ್ಯಗಳು, ಹಣ ನಿರ್ವಹಣೆ, ಈ ಎಲ್ಲ ಕೆಲಸಗಳನ್ನು ಟ್ರಸ್ಟ್‌ನಿಂದಲೇ ಮಾಡಬೇಕಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ.
9.ಭದ್ರತೆಯ ವಿಷಯದಲ್ಲಿ ಯಾವ ವ್ಯವಸ್ಥೆ ಇರುತ್ತದೆ?
ರಾಮ ಮಂದಿರದ ಭದ್ರತೆ ಎರಡು ಹಂತಗಳಲ್ಲಿ ಇರಲಿದೆ. ಮೊದಲ ಹಂತದಲ್ಲಿ ದೇವಾಲಯದ ಪ್ರದೇಶದಲ್ಲಿ ಭದ್ರತೆ. ಈ ಸಂಪೂರ್ಣ ಜವಾಬ್ದಾರಿ ಟ್ರಸ್ಟ್‌ನದ್ದಾಗಿದೆ. ಟ್ರಸ್ಟ್ ಸ್ವತಃ ಈ ಭದ್ರತೆಗೆ ವ್ಯವಸ್ಥೆ ಮಾಡುತ್ತದೆ. ಆದರೆ ಸಂಪೂರ್ಣ ಭದ್ರತೆಯನ್ನು ಉತ್ತರ ಪ್ರದೇಶ ಸರ್ಕಾರ ನೋಡಿಕೊಳ್ಳುತ್ತದೆ. ವಿಐಪಿಗಳ ರಕ್ಷಣೆಗೆ ಎಸ್ ಪಿಜಿ ಕಮಾಂಡೋಗಳಿದ್ದಾರಂತೆ.
10. ಜನವರಿ 22 ರಂದು ಸಾರ್ವಜನಿಕರಿಗೂ ದರ್ಶನ ಇದ್ಯಾ?
ಇಲ್ಲ, ಜನವರಿ 22 ರಂದು, ರಾಮ ಮಂದಿರದ ಪ್ರತಿಷ್ಠಾಪನೆಯ ದಿನ. ಅಯೋಧ್ಯೆಗೆ ಯಾವುದೇ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ದೇವಸ್ಥಾನದಲ್ಲಿ ದರ್ಶನ ಇರುವುದಿಲ್ಲ. ಎರಡು ದಿನ ಮುಂಚಿತವಾಗಿ ಅಂದರೆ ಜನವರಿ 20 ರಿಂದ ಸಾಮಾನ್ಯ ಸಂದರ್ಶಕರಿಗೆ ದೇವಾಲಯವನ್ನು ಮುಚ್ಚಲಾಗುವುದು. ಜನವರಿ 23ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇದೆ.
***
ಥಾಯ್ಲೆಂಡ್ ಬಗ್ಗೆ ನಿಮಗೆಷ್ಟು ತಿಳಿದಿದೆ!
ಇತ್ತೀಚಿನ ವರೆಗೂ 'ರಾಮರಾಜ್ಯ' ವೇ ಉಳಿದಿರುವ ಏಕೈಕ ರಾಷ್ಟ್ರವಾಗಿ ಉಳಿದಿರುವ ದೇಶ ಥಾಯ್ಲೆಂಡ್
ಈ ವಿಷಯ ಬಹಳ ಮಂದಿಗೆ ತಿಳಿದಿರಲಾರದು.
ಶ್ರೀರಾಮನ ಪುತ್ರನಾದ ಕುಶನ ವಂಶಸ್ಥನಾದ
' ಭೂಮಿಬಲ ಅತುಲ್ಯ ತೇಜ' ಎನ್ನುವ ರಾಜ ಥಾಯ್ಲೆಂಡ್ ನಲ್ಲಿ ರಾಜ್ಯಭಾರ ನಡೆಸಿದ್ದಾನೆ!!
ಶ್ರೀರಾಮನ ಕಾಲದಲ್ಲಿ ರಾಜ್ಯ ವಿಭಜನೆ ನಡೆದು ಪಶ್ಚಿಮದಲ್ಲಿ ಇನ್ನೊಬ್ಬ ಮಗನಾದ ಲವನಿಗೆ 'ಲವಪುರ' (ಇಂದಿನ ಲಾಹೋರ್), ಪೂರ್ವದಲ್ಲಿ ಕುಶ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡರು. ಹೀಗೆ ಥಾಯ್ಲೆಂಡ್ ನ ರಾಜರೆಲ್ಲಾ ಕುಶನ ವಂಶಸ್ಥರೇ ಆಗಿದ್ದಾರೆ.
ನಾಗವಂಶದ ಕನ್ಯೆಯನ್ನು ವಿವಾಹವಾದ ಕುಶನ ವಂಶವೇ ಇಂದಿನ ರಾಜವಂಶ ಕೂಡ. ಈ ವಂಶವನ್ನು 'ಚಕ್ರಿ' ವಂಶವೆಂದು ಕರೆದರು. ಚಕ್ರಿ ಎಂದರೆ ಚಕ್ರಪಾಣಿಯಾದ ವಿಷ್ಣುವೆಂದೇ ಅರ್ಥ. ಶ್ರೀರಾಮನೂ ವಿಷ್ಣುವಿನ ಅವತಾರವೇ ತಾನೇ. ಹೀಗಾಗಿ ಆ ರಾಜರುಗಳೆಲ್ಲಾ ತಮ್ಮ ಹೆಸರಿನ ಕೊನೆಗೆ 'ರಾಮ' ಎನ್ನುವ ಬಿರುದನ್ನು ಸೇರಿಸಿಕೊಂಡರು. ಆ ರಾಜ ಎಷ್ಟನೆಯವನು ಎಂದು ಗುರುತಿಸಲು ರಾಮನ ಮುಂದೆ ಸಂಖ್ಯೆಯನ್ನೂ ಸೇರಿಸುವ ಪರಿಪಾಠವಾಯಿತು. ಈಗಿರುವ ರಾಜ 9ನೆಯ ರಾಮ. 'ರಾಮಾ ದಿ ನೈನ್ತ್' ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ಈ ರಾಜನ ಹೆಸರೇ 'ಭೂಮಿಬಲ ಅತುಲ್ಯ ತೇಜ'.
ಥಾಯ್ಲೆಂಡ್ ನ ರಾಜಧಾನಿಯನ್ನು ಎಲ್ಲರೂ ಬ್ಯಾಂಕಾಕ್ ಎಂದು ಕರೆಯುತ್ತೇವಲ್ಲವೇ. ಆದರೆ ಅಲ್ಲಿನ ಸರ್ಕಾರದ ದಾಖಲೆಗಳಲ್ಲಿ ಅದು 'ಅಯೂಥಿಯ'. ಅಯೋಧ್ಯೆಯ ಅಪಭ್ರಂಶ. ಪ್ರಪಂಚದಲ್ಲಿನ ಎಲ್ಲಾ ದೇಶಗಳ ರಾಜಧಾನಿಗಳ ಹೆಸರಿಗಿಂತ ಈ ರಾಜಧಾನಿಯ
ಪೂರ್ಣ ಹೆಸರು ಬಹಳ ಉದ್ದವಾದದ್ದು. ಅಷ್ಟೇ ಅಲ್ಲ ಈ ಹೆಸರು ಸಂಸ್ಕೃತದ್ದು. ನೋಡಿ ಹೀಗಿದೆ:
"ಕೃಂಗದೇವ ಮಹಾನಗರ ಅಮರರತ್ನ ಕೋಸಿಂದ್ರ ಮಹಿಂದ್ರಾಯುಧ್ಯಾ ಮಹಾತಿಲಕ ಭವ ನವರತ್ನ ರಜಧಾನಿಪುರಿ ರಮ್ಯ ಉತ್ತಮ ರಾಜ ನಿವೇಶನ ಅಮರವಿಮಾನ ಅವತಾರ ಸ್ಥಿತ ಶಕ್ರದತ್ತಿಯ ವಿಷ್ಣುಕರ್ಮ ಪ್ರಸಿದ್ಧಿ" !!!!
ಥಾಯ್ ಭಾಷೆಯಲ್ಲಿ ಬರೆಯಲು 163 ಅಕ್ಷರಗಳನ್ನು ಬಳಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಅವರು ಈ ಹೆಸರನ್ನು ಸುಮ್ಮನೆ ಹೇಳದೇ ಹಾಡಿನ ರೂಪದಲ್ಲಿ ಹೇಳುವುದು. ಕೆಲವರು ಸಂಕ್ಷಿಪ್ತವಾಗಿ 'ಮಹಿಂದ್ರಾಯುಧ್ಯಾ' ಎನ್ನುತ್ತಾರೆ. ಇಂದ್ರ ನಿರ್ಮಿಸಿದ ಅಯೋಧ್ಯ ಎಂದರ್ಥ. ಥಾಯ್ಲೆಂಡ್ ನ ರಾಜರೆಲ್ಲರೂ ಈ ಅಯೋಧ್ಯೆಯಲ್ಲೇ ವಾಸ ಮಾಡುತ್ತಾರೆ.
ಥಾಯ್ಲೆಂಡ್ ನಲ್ಲಿ 1932 ರಲ್ಲೇ ಪ್ರಜಾಪ್ರಭುತ್ವ ಸರಕಾರ ಬಂದಿತ್ತು. ಅಲ್ಲಿನ ಪ್ರಜೆಗಳು ಬೌದ್ಧ ಧರ್ಮ ವನ್ನು ಅನುಸರಿಸಿದರೂ ಅಲ್ಲಿನ ರಾಮರಾಜ್ಯ ವನ್ನೇ ಗೌರವಿಸುತ್ತಾರೆ. ಅಲ್ಲಿನ ರಾಜವಂಶದವರನ್ನು ಟೀಕಿಸುವುದಾಗಲೀ, ವಿವಾದಕ್ಕೆ ಎಳೆಯುವುದಾಗಲೀ ಇಂತಹ ಮರ್ಯಾದೆಗೆ ಕುಂದು ತರುವ ಕೆಲಸಗಳನ್ನು ಎಂದೂ ಮಾಡುವುದಿಲ್ಲ. ಅಲ್ಲಿನ ರಾಜವಂಶವೆಂದರೆ ಅವರೆಲ್ಲರಿಗೂ ಪೂಜನೀಯ. ರಾಜವಂಶದವರೆದುರು ಸೆಟೆದು ನಿಂತು ಮಾತಾಡುವುದಾಗಲೀ ಅವರಿಗೆ ದಿಟ್ಟತನದ ಉತ್ತರ ಕೊಡುವುದಾಗಲೀ ಅವರಿಗೆ ಸಲ್ಲದು. ಮುಂದಕ್ಕೆ ಬಾಗಿ ನಿಂತು ಮಾತಾಡುವುದು ಅಲ್ಲಿನ ರಾಜಮರ್ಯಾದೆ.
ಈಗಿರುವ ರಾಜನಿಗೆ ಮೂವರು ಹೆಣ್ಣುಮಕ್ಕಳು. ಅವರಲ್ಲಿ ಕಡೆಯ ರಾಜಕುಮಾರಿಗೆ ಹಿಂದೂಧರ್ಮಶಾಸ್ತ್ರದ ಬಗ್ಗೆ ಪರಿಜ್ಞಾನವಿದೆ.
ಥಾಯ್ಲೆಂಡ್ ನ ರಾಷ್ಟ್ರೀಯ ಧರ್ಮಗ್ರಂಥ ರಾಮಾಯಣ. ಥಾಯ್ ಭಾಷೆಯಲ್ಲಿ ಅದನ್ನು
'ರಾಮ್ ಕಿಯೆನ್' ಎಂದು ಕರೆಯುತ್ತಾರೆ. ನಮ್ಮ ವಾಲ್ಮೀಕಿ ರಾಮಾಯಣದಲ್ಲಿಬರುವ ಎಷ್ಟೋ ಸನ್ನಿವೇಶ ಗಳು ಅದರಲ್ಲಿವೆ.
1767ರಲ್ಲಿ ಒಮ್ಮೆ ಈ ಧರ್ಮ ಗ್ರಂಥದ ಮೂಲಪ್ರತಿ ಅದು ಹೇಗೋ ನಾಶವಾಗಿ ಹೋಯಿತಂತೆ. ಆಗಿನ ರಾಜನಾಗಿದ್ದ ಒಂದನೆಯ ರಾಮ (1736-1809) ತನ್ನ ನೆನಪಿನಿಂದ ಪುನಃ ಅದನ್ನು ಪೂರ್ಣವಾಗಿ ರಚಿಸಿದನಂತೆ. ಯಾವ ದೇಶದ ಸರ್ಕಾರ ಯಾವುದೇ ಜಾತ್ಯಾತೀತ ಧ್ಯೇಯಗಳನ್ನು ತಂದರೂ ಥಾಯ್ಲೆಂಡ್ ಮಾತ್ರ ರಾಮಯಣವನ್ನೇ ತಮ್ಮ ಧರ್ಮಗ್ರಂಥವನ್ನಾಗಿ ಘೋಷಿಸಿ ಅದನ್ನು ನಡೆಸಿಕೊಂಡು ಬರುತ್ತಿರುವುದು ಮೆಚ್ಚಬೇಕಾದ ವಿಷಯ.
ಥಾಯ್ಲೆಂಡ್ ನಲ್ಲಿ 'ರಾಮ್ ಕಿಯೆನ್' (ರಾಮಾಯಣ) ವನ್ನು ಅನುಸರಿಸಿ ಅನೇಕ ನಾಟಕಗಳು, ತೊಗಲುಬೊಂಬೆ ಆಟಗಳು ಇವೆ. ಆ ನಾಟಕಗಳಲ್ಲಿ ಬರುವ ಹೆಸರುಗಳನ್ನು ನೋಡಿ:
1. ರಾಮ್ (ಶ್ರೀರಾಮ)
2. ಲಕ್ (ಲಕ್ಷ್ಮಣ)
3. ಪಾಲಿ (ವಾಲಿ)
4. ಸುಕ್ರೀಪ್ (ಸುಗ್ರೀವ)
5. ಓನ್ಕೋಟ್ (ಅಂಗದ)
6. ಖೋಂಪೂನ್ (ಜಾಂಬವಂತ)
7. ಬಿಪೇಕ್ (ವಿಭೀಷಣ)
8. ತೋತಸ್ ಕನ್ (ದಶಕಂಠನಾದ ರಾವಣ )
9. ಸದಾಯು (ಜಟಾಯು )
10. ಸುಪನ್ ಮಚ್ಛಾ (ಶೂರ್ಪನಖ)
11. ಮಾರಿತ್ (ಮಾರೀಚ )
12. ಇಂದ್ರಚಿತ್ ( ಇಂದ್ರಜಿತ್, ಮೇಘನಾದ )
ಥಾಯ್ಲೆಂಡ್ ನಲ್ಲಿನ ಹಿಂದೂ ದೇವತೆಗಳು:
ಥಾಯ್ಲೆಂಡ್ ನಲ್ಲಿ ಬೌದ್ಧ ಧರ್ಮದ ಅನುಯಾಯಿಗಳೇ ಹೆಚ್ಚು. ಹಿಂದೂಗಳು ಅಲ್ಪಸಂಖ್ಯಾತರು. ಆದರೆ ಇಲ್ಲಿ ಬೌದ್ಧರೂ ಕೂಡ ಹಿಂದೂದೇವತೆಗಳನ್ನು ಪೂಜಿಸುತ್ತಾರೆ. ದೇವತೆಗಳ ಹೆಸರುಗಳು ಥಾಯ್ ಭಾಷೆಯಲ್ಲಿ:
1.ಈಸುಅನ್ ( ಈಶ್ವರ)
2.ನಾರಾಯ (ನಾರಾಯಣ, ವಿಷ್ಣು)
3. ಫ್ರಾಮ (ಬ್ರಹ್ಮ)
4. ಇನ್ ( ಇಂದ್ರ)
5. ಆಥಿತ್ (ಆದಿತ್ಯ, ಸೂರ್ಯ ದೇವ)
6. ಪಾಯ್ (ವಾಯು)
ಥಾಯ್ಲೆಂಡ್ ನ ರಾಷ್ಟ್ರೀಯ ಪಕ್ಷಿ : ಗರುತ್ಮಂತ ( ಗರುಡ).
ಹಿಂದಿನ ಗರುಡಪಕ್ಷಿ ಬಹಳ ದೊಡ್ಡದಾಗಿರುತ್ತಿತ್ತಂತೆ. ಆದರೆ ಈಗ ಈ ಜಾತಿ ಲಭ್ಯವಿಲ್ಲವೆಂದು ಹೇಳುತ್ತಾರೆ.
ಇಂಗ್ಲೀಷ್ ನಲ್ಲಿ ಇದನ್ನು 'The Brahmany Kite' -.ಬ್ರಾಹ್ಮಣ ಪಕ್ಷಿ, ಎಂದು ಕರೆಯುವುದು ಸೋಜಿಗವಲ್ಲವೇ!!! ಇದರ Scientific ಹೆಸರು 'Haliastur Indus. ಫ್ರೆ಼ಂಚ್ ಪಕ್ಷಿಶಾಸ್ತ್ರಜ್ಞ ಜಾಕ್ಸ್ ಬ್ರೈಸನ್ ಇದನ್ನು ಗುರುತಿಸಿ ಇದಕ್ಕೆ Falco Indus ಎಂದು ಹೆಸರಿಸಿದ. ಈತ ನಮ್ಮ ಪಾಂಡಿಚೆರಿ ಸಮೀಪದ ಒಂದು ಬೆಟ್ಟದಲ್ಲಿ ಇದನ್ನು ಮೊದಲು ನೋಡಿದ್ದಾಗಿ ಉಲ್ಲೇಖಿಸಿದ್ದಾನೆ. ಇದರಿಂದ ಇಂತಹ ದೊಡ್ಡ ಗರುಡ ಪಕ್ಷಿ ಕಲ್ಪನೆಯದಲ್ಲ ಎನ್ನಿಸುತ್ತದೆ.
ನಮ್ಮ ಪುರಾಣಗಳಲ್ಲಿ ಈ ಪಕ್ಷಿಯನ್ನು ವಿಷ್ಣುವಿನ ವಾಹನವೆಂದೇ ಕರೆದರಷ್ಟೆ. ಥಾಯ್ಲೆಂಡ್ ಪ್ರಜೆಗಳೂ ಅದು ತಮ್ಮ ರಾಜನಾದ ರಾಮನ ಮೂಲ ಅವತಾರ ವಾದ ವಿಷ್ಣುವಿನ ವಾಹನವಾದ್ದರಿಂದ ಗರುಡ ಪಕ್ಷಿಯನ್ನು ಬಹಳ ಗೌರವದಿಂದ ಕಾಣುತ್ತಾರೆ. ಅಲ್ಲದೆ ಅದನ್ನೇ ಅವರು ತಮ್ಮ ರಾಷ್ಟ್ರೀಯ ಪಕ್ಷಿಯನ್ನಾಗಿ ಮಾಡಿಕೊಂಡಿದ್ದಾರೆ. ಅದರ ದೊಡ್ಡ ವಿಗ್ರಹವೊಂದನ್ನು ಅವರ ಪಾರ್ಲಿಮೆಂಟ್ ಮುಂದೆ ನಿಲ್ಲಿಸಿದ್ದಾರೆ.
ಥಾಯ್ಲೆಂಡ್ ವಿಮಾನನಿಲ್ದಾಣದ ಹೆಸರು 'ಸುವರ್ಣ ಭೂಮಿ ಏರ್ ಪೋರ್ಟ್' ಎಂದಿದೆ. ನಮ್ಮಲ್ಲಿ ಸಂಸ್ಕೃತದ ಹೆಸರುಗಳನ್ನು ವಿಮಾನನಿಲ್ದಾಣಗಳಿಗಿಡುವ ಸಂಸ್ಕೃತಿ ಜಾತ್ಯಾತೀತತೆಯ ಕಾರಣದಿಂದ ಬರಲೇ ಇಲ್ಲ.
' ಸುವರ್ಣ ಭೂಮಿ' ವಿಮಾನನಿಲ್ದಾಣ 563,000 square meters ನಷ್ಟು ವಿಶಾಲವಾಗಿದ್ದು ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿದೆ. ಏರ್ ಪೋರ್ಟ್ ಎದುರಿಗೆ 'ಕ್ಷೀರಸಾಗರ ಮಥನ' ದ ದೊಡ್ಡ ಪ್ರತಿಕೃತಿಯಿದ್ದು ಅದರಲ್ಲಿ ದೇವತೆಗಳೂ ರಾಕ್ಷಸರೂ ಮಾಡಿದ ಸಮುದ್ರ ಮಥನವನ್ನು ಬಿಂಬಿಸಲಾಗಿದೆ.
ಇಷ್ಟೆಲ್ಲಾ ಇರುವ ಆ ಪುಟ್ಟ ರಾಷ್ಟ್ರ ಥಾಯ್ಲೆಂಡ್ ನಲ್ಲೇ ನಮ್ಮ ಹಿಂದೂ ಸಂಸ್ಕೃತಿ ನಮ್ಮಲ್ಲಿಗಿಂತ ಹೆಚ್ಚು ಜೀವಂತವಾಗಿದೆ.
***
No comments:
Post a Comment