(vaishAka amAvAsya) is shanishchara jayanthi
Shanaishchara Jayanti
article by Narahari Sumadhwa
Shanaischara (Saturn)
Kakshya – 25th
EkaadashIsamaM kiMchit
paapatraaNaM na vidyatE |
vyaajEnaapi kRutaa raajan
na darshayati bhaaskariM |
एकादशीसमं किंचित् पापत्राणं न विद्यते ।
व्याजेनापि कृता राजन् न दर्शयति भास्करिं ।
(As both Yama and Shanaishchara both are sons of Surya – they both are termed as “Bhaskari” – if one does Ekadashi, there will not be any fear of Yama or Shani)
shanE dinamaNE sUnOhyanEkaguNasanmaNE |
ariShTaM hara mE bhIShTaM
kuru maa kuru saMkaTaM |
(SrI vaadiraaja TIrtha shrI Shani stOtraM )
शने दिनमणे सूनोह्यनेकगुणसन्मणे ।
अरिष्टं हर मे भीष्टं कुरु मा कुरु संकटं ।
(श्री वादिराजतीर्थ विरचित श्री शनिस्तोत्रं )
ಕೋಣಪ: ಪಿಂಗಳೋ ಬಬೈ ಕೃಷ್ಣೋ ರೌದ್ರಂ ತೋಕೋ ಯಮ: ಸೌರೀ ಶನೈಶ್ಚರೋ ಮಂದ: ಪಿಪ್ಪಲಾದೇನ ಸಂಸ್ತುಥ:
ನಮಸ್ತೇ ಕೋಣ ಸಂಸ್ಥಾಯ ಪಿಂಗಳಾಯ ನಮೋಸ್ತುತೇ ನಮಸ್ತೇ ರೌದ್ರಸಂಜ್ಞಾಯ
ನಮಸ್ತೇ ಅಂತಕಾಯಚ
ನಮಸ್ತೇ ಯಮ ಸಂಜ್ಞಾಯ ನಮಸ್ತೇ ಶೌರಯೇ ವಿಭೋ ಶನೈಶ್ಚರ ನಮಸ್ತೇಸ್ತು ಮಂದ ಸಂಜ್ಞಾಯತೇ
ನಮ: ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಮೇ ||
ಶ್ರೀದಶರಥ ಮಹಾರಾಜ ವಿರಚಿತ
ಶನೈಶ್ಚರಸ್ತೋತ್ರಂ ಸಂಪೂರ್ಣಂ|)
कोणप: पिंगळो बबै कृष्णो रौद्रं तोको यम: सौरी शनैश्चरो मंद: पिप्पलादेन संस्तुथ: नमस्ते कोण
संस्थाय पिंगळाय नमोस्तुते
नमस्ते रौद्रसंज्ञाय नमस्ते अंतकायच नमस्ते यम संज्ञाय नमस्ते शौरये विभो शनैश्चर नमस्तेस्तु मंद संज्ञायते नम: प्रसादं कुरु देवेश दीनस्य प्रणतस्य मे ॥
।श्रीदशरथ महाराज विरचित शनैश्चरस्तोत्रं संपूर्णं।
“Shanishchara Jayanti” is believed to be the day when Shani, one of the Navagrahas (planets) made its appearance on Earth.
Shanaishchara has the capacity to create influence on the horoscope and in their life .
Shanaischara’s birth day is Vaishaka Krishna Amavasye
He was born as the son of Surya and Chayadevi.
Surya’s wife SanGya (संज्ञ्यादेवि ) is the daughter of Vishwakarma. Surya got Yama, Yamuna and Shraddadeva (Vaivaswatha Manu) from SanGyadevi.
After giving birth to three children, when she could not sustain the extreme heat of Surya, she left him, leaving her shadow (Chayaa) and went to her father.
SanGyadevi asked Chayadevi to stay as the wife of Surya and told her not to reveal about SanGyadevi’s leaving him. Chayadevi had told SanGyadevi that if Surya comes to know about the same, she would tell and leave him. Her father sent her back saying that it is not proper to come without the permission of husband. But she didn’t returned to Surya, instead went to forest and was wandering in the disguise of an horse.
So, Chayadevi stayed there in the disguise of SanGyadevi as the wife of Surya, who was unnoticed of the fact that SanGyadevi has left. He got 3 children in Chayadevi. Shani is the first son of Chayadevi and Surya.
Shanaishchara is slow in his move :
As per Narasimha Purana -
As the days passed, Chayadevi started neglecting the children of SanGyadevi and was taking care more on her own children. That is she showed her Step mother attitude on the children of SanGyadevi. This made Yama angry and he complained to his father. Initially Surya didn’t bother about that. After many complaints, Surya questioned his wife as to why she was showing partiality to her own children. This made Chayadevi leave Surya. Now Surya realized that his wife SanGyadevi was not there with him. He got angry and cursed his son Shani born from Chayadevi to be handicapped. Shani is said to have less power to his legs because of the curse by his own father and as such he is very slow in movement.
Then Surya went in search of his wife, and found that his wife had become an horse. He too took the disguise of an horse and went to his wife SanGyadevi and asked her to come back. Surya and SanGyadevi (both in the disguise of horse) got two sons called as Ashwini Devate.
As such, Surya has eight children – three from SanGyadevi, three from Chayadevi and two from SanGyadevi again (during horse disguise).
As per Brahma Vaivarta Purana - Once when Ganapathi was born, all gods had come to see the child as it was very handsome and was attracting. Even Shani had come to see the child, but he was hesitating, as he had a curse from his wife (Shani’s wife) that if he sees the child directly, the child’s head would fall.
But Parvati insisted Shani to come and see the child. As soon as Shani saw the child, as his drusti was fierce, and as per curse of his wife, the head of Ganapathi fell. Now, Parvathi got angry at Shani, she cursed him to be handicapped and as such, Shani is handicapped.
Subsequently Vishnu brought the head of an elephant to the body of Ganapathi and joined. As such, Ganapathi is said to have elephant’s face (As he was doing the smarana of Vishwambara roopa of Srihari – Vishwambhara roopa is the Srihari’s central face).
Graharaajo bhava shanE
madhvarENa haripriya: |
shaapOmOGastatO mEdya
kinchit KanJO bhaviShyasi |
(Brahma Vaivarta purana)
(The difference in Puranaas
may be due to Kalpa bedha)
When Parvati cursed Shani, Surya angry was upset and was about to curse her, but by that time, Parvati blessed the child that he shall not become fully handicapped, instead he shall be a cripple or lameman (one who moves slowly).
On this day we must do the daana of sesamam (eLLu), gingelly oil, deepadaana, which makes Shani happy.
SaaDE saatee -
The graha SHANAISCHARA (Saturn), also known as “Manda” (slow), is generally known to affect one adversely on occasions when he occupies certain positions in one’s horoscope like Saade Saati (7 1/2 years) Ashtama Shani (Saturn in 8th house – 2 1/2 years) etc.
Shani’s Vehicle - Crow
Shani’s day – Saturday
He is called as “Bhaskari” – as he is suryaputra (Surya has other name Bhaskara)
Shani is one among the Navagrahaas.
He is called as Shanaischara – as he is a slow mover from one raashi to the other when compared to other planets.
He is called as “TaraNi nandana – as he is the son of Suryaputra
He is called as “Chayaputra” – as he is the son of Chaya (shadow wife of Sun)
Shani prarthane –
krUraavalOkanavashaad bhuvanaM klEshayati yO graha: ruShTha: |
tuShThO dhanakanakasuKaM dadaati sOTismaan shanaiSchara: paatu||
kONaM nIlaaMjanapraKyaM maMdachEShThaaprasaariNaM |
Caayaa maartaaMDa saMbhUtaM namasyaami shanaishcharaM ||
nIlaaMjanasamaabhaasaM
raviputraM yamaagrajaM |
CaayaamaartaaMDasaMbhUtaM taM namaami shanaishcharaM |
क्रूरावलोकनवशाद् भुवनं क्लेशयति यो ग्रह: रुष्ठ: ।
तुष्ठो धनकनकसुखं ददाति सोटिस्मान् शनैश्चर: पातु॥
कोणं नीलांजनप्रख्यं मंदचेष्ठाप्रसारिणं ।
छाया मार्तांडसंभूतं नमस्यामि शनैश्चरं ॥
नीलांजनसमाभासं रविपुत्रं यमाग्रजं ।
छायामार्तांडसंभूतं तं नमामि शनैश्चरं ।
Source – Harikathamrutasara, Krishnamruta maharnava,
Chaitradimasa kartavya,
Pravachanas, etc
Collection by Narahari Sumadhwa
*****
ಶನೈಶ್ಚರ ಜಯಂತಿ : Shanaischara Jayanti
Shani is in the 25th KAKSHYA
Shanaishchara stotra
”ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|
ಛಾಯಾಮರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||”
ಶನಿಯು ಸೂರ್ಯ ದೇವರು ಹಾಗು ಸೂರ್ಯನ ಹೆಂಡತಿ ಛಾಯಾದೇವಿಯ ಪುತ್ರ. ಛಾಯಾ ನೆರಳಿನ ದೇವತೆ . ಹೀಗಾಗಿ ‘ಛಾಯಾಪುತ್ರ’ ಎಂದೂ ಕರೆಯಲಾಗುತ್ತದೆ.ಸೂರ್ಯನ ತಾಪಕರವಾದ ತೇಜಸ್ಸನ್ನು ತಾಳಲಾರದೆ ಸಂಜ್ಞಾದೇವಿಯು ಸೂರ್ಯನನ್ನು ಬಿಟ್ಟು ತವರುಮನೆಗೆ ಹೋಗಲು ನಿರ್ಧರಿಸಿದಳು. ಆಗ , ತನ್ನಂತೆ ಇರುವ ಸ್ತ್ರೀಯನ್ನು (ಛಾಯಾದೇವಿಯನ್ನು) ನಿರ್ಮಿಸಿ , ತಾನು ಹೊರಟು ಹೋದುದು ಸೂರ್ಯನಿಗೆ ತಿಳಿಯದಂತೆ (ತನ್ನಂತೆಯೇ) ವರ್ತಿಸಬೇಕೆಂದು ಛಾಯಾದೇವಿಗೆ ಹೇಳಿ ಹೊರಟುಹೋದಳು. ಆ ಕಾಲದಲ್ಲಿ ಸೂರ್ಯನಿಂದ ಆಕೆಯಲ್ಲಿ ಜನಿಸಿದವನು ಶನೈಶ್ಚರ.
Shani’s father – Surya (Sun)
Shani’s mother – Chaya (shadow wife of Sun)
Shani’s Vehicle – Crow
Shani’s attributes – Immense power
Shani’s day – Saturday
Shani is one among the Navagrahaas.
Meaning of Shani – Slow Mover
ಶನಿಯು ಕುಂಟನಾದದ್ದು – ಪಾರ್ವತಿಯ ಪುತ್ರನಾದ ಗಣೇಶನನ್ನು ನೋಡಲು ಎಲ್ಲಾ ದೇವತೆಗಳ ಜೊತೆಗೆ ಶನಿಯೂ ಬಂದನು. ಅವನ ದೃಷ್ಟಿಯು ಅತಿಕ್ರೂರವಾದ್ದರಿಂದ ಮಗುವನ್ನು ನೋಡದೆ ಸುಮ್ಮನಿದ್ದನು. ಪಾರ್ವತಿಯ ಅನುಜ್ಞೆಯಂತೆ ಎಡಗಣ್ಣಿನ ತುದಿಯಿಂದ ಮಗುವನ್ನು ನೋಡಿದ ಕೂಡಲೇ ಮಗುವಿನ ತಲೆಯು ನೆಲಕ್ಕುರುಳಿತು. ಇದರಿಂದ ಕೋಪಗೊಂಡ ಪಾರ್ವತಿಯು ನನ್ನ ಪುತ್ರನ ಅಂಗವು ಹೀನವಾದಂತೆ ನೀನೂ ಅಂಗಹೀನನಾಗು ಎಂದು ಶಪಿಸಿದಳು. ಆದ್ದರಿಂದಲೇ ಶನಿಯು ಕುಂಟನಾದದ್ದು. ಆದ್ದರಿಂದ ಶನಿಯ ನಡೆ ಬಹಳ ನಿಧಾನ.
***
ಶನೈಶ್ಚರ ಜಯಂತಿ
ವೈಶಾಖ ಅಮಾವಾಸ್ಯೆ ಶನಿ ಹುಟ್ಟಿದ ದಿನ. ಸೂರ್ಯನ ಪುತ್ರನಾಗಿ ಛಾಯಾದೇವಿಯಲ್ಲಿ ಜನಿಸಿದ ಶನಿಗೆ ಯಮಧರ್ಮ ಹಿರಿಯ ಸಹೋದರ.
ಶನಿಯ ಸಹೋದರಿ ತಪತಿ.
ಸೂರ್ಯನ ಮಕ್ಕಳು ಶನಿ ಮತ್ತು ಯಮ ಇಬ್ಬರೂ ನ್ಯಾಯ ದೇವತೆಗಳೇ! ಜೀವನದ ಆಗು ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ, ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಅವರ ಪುಣ್ಯ ಪಾಪಗಳ ಫಲಿತಾಂಶವನ್ನೂ ಶಿಕ್ಷೆಯನ್ನೂ ನೀಡುತ್ತಾನೆ.
ದಶರಥನು ಶನೈಶ್ಚರ ತೃಪ್ತಿಗಾಗಿ ಸ್ತೋತ್ರ ಮಾಡಿ ಪ್ರಾರ್ಥಿಸಿದ್ದಾನೆ.
ಶನಿಯು ನರಸಿಂಹ ಸ್ತೋತ್ರ ರಚಿಸಿದ್ದಾನೆ.
ಶನಿಯನ್ನು ಕಾಟ ಕೊಡುವ ಗ್ರಹ ಎಂದು ನಿಂದಿಸುತ್ತಾರೆ. ಆದರೆ ಪ್ರಾತಃ ಸ್ಮರಣೀಯ ದೇವೇಂದ್ರತೀರ್ಥರು ಶನಿ ತನ್ನ ಕರ್ತವ್ಯ ನಿರ್ವಾಹಕ. ಅವರವರ ಗ್ರಹಗತಿಗಳ ಅನುಸಾರ ಶಿಕ್ಷೆ ಕೊಡುತ್ತಾನೆ. ಶನಿಯು ಉಚ್ಛ ಸ್ಥಾನದಲ್ಲಿರಲು ಉನ್ನತಿಯೂ ಆಗುತ್ತದೆ ಎನ್ನುತ್ತಿದ್ದರು.
ನವಗ್ರಹಗಳಲ್ಲಿ ಒಂದಾದ ಶನೈಶ್ಚರನು ಸಕಲ ಸನ್ಮಂಗಳ ಮಾಡಲಿ.
ಶನೈಶ್ಚರ ಅಂತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ .
***
ಸೂರ್ಯಪುತ್ರ ಯಮ ಹಾಗು ಯಮುನೆಯ ತಮ್ಮ ದೊಡ್ಡ ದೇವತೆ, ನವಗ್ರಹಗಳಲ್ಲಿ ಒಂದು ಗ್ರಹ ನಿಯಾಮಕ, ನಮ್ಮ ಶನೈಶ್ಚರ.
ನಮ್ಮ ದೃಷ್ಟಿ ಅಲ್ಲಿ ಶನೈಶ್ಚರ "ಆ ಶನಿ ಯಾ" ಎಂದೇ ಇದೆ. ಆದರೆ ಆ ದೇವತೆಯ ಮಹತ್ವ ನಮ್ಮ ಮೇಲಿನ ಕರುಣೆ ತುಂಬ ಅಗಾಧ. ಪಂಚಾಶತ್ ಕೋಟಿ ಯೋಜನ ವಿಸ್ತೀರ್ಣವಾದ ಸಮಗ್ರವಾದ ಪೃಥಿವೀ ತತ್ತ್ವಕ್ಕೆ ಅಭಿಮಾನಿ ದೇವತೆ ಧರಾ ದೇವಿ ಹೇಗೋ ಹಾಗೆ ಅವಾಂತರ ದೇವತೆ ಶನೈಶ್ಚರ. ಇದು ಮಹಿಮೆ.
ಈ ಪೃಥ್ವಿಯಲ್ಲಿ ನಮಗೆ ನಿಃಶುಲ್ಕವಾಗಿ ಇರಲು ಅನುವು ಮಾಡಿಕೊಟ್ಟಿದ್ದು ಶನೈಶ್ಚರ. ನಮ್ಮನ್ನು ಧಾರಣೆ ಮಾಡಿದ್ದು ಶನೈಶ್ಚರ. ದವಸ ಧಾನ್ಯಗಳನ್ನೊದಗಿಸಿದ್ದು ಶನೈಶ್ಚರನೆ. ಇದು ಕೇವಲ ಆ ದೇವತೆಯ ಮಹಾಕರುಣೆ.
ಜೊತೆಗೆ ನಮ್ಮ ದೇಹವನ್ನು ಧಾರಣೆ ಮಾಡುವ ದೇಹದಲ್ಲಿ ಘಟ್ಟಿತನ ಇರುವ ಯಾವ ಪದಾರ್ಥಗಳಿವೆ ಆ ಎಲ್ಲ ಪದಾರ್ಥಗಳು ಪೃಥಿವ್ಯಾತ್ಮಕವಾಗಿರುವಂತಹದ್ದೇ. ಆ ಸಮಗ್ರ ಪೃಥ್ವೀ ತತ್ವಕ್ಕೆ ಅಭಿಮಾನಿ ದೇವತೆ ಕರುಣಾಳು ಶನೈಶ್ಚರ.
ಸಕಲ ಅನಿಷ್ಟಗಳನ್ನು ಪರಿಹರಿಸುವ ದೇವತೆಗಳಲ್ಲಿ ಸರ್ವೋತ್ಕೃಷ್ಟ ದೇವತೆ ನರಸಿಂಹದೇವರು. ಆ ನರಸಿಂಹದೇವರ ಮಹಾ ಭಕ್ತರು ಶನಿದೇವರು. ಆ ನರಸಿಂಹ ದೇವರ ಉಪಾಸನೆಯಿಂದಲೇ ಪೂಜಿಸಿದ ನಮ್ಮೆಲ್ಲರ ಅನಿಷ್ಟಗಳನ್ನು ದೂರ ಮಾಡುತ್ತಾರೆ ಶನಿದೇವರು.
"ಶನಿಕಾಟ" ಎಂದೇ ಪ್ರಸಿದ್ದಿಪಡೆದವರು ಶನಿದೇವರು ಎಂದು ಕೇಳುತ್ತಾ ಇರುತ್ತೇವೆ. "ನಮಗೆ ಕಾಟ ಕೊಡುವದು ತಮ್ಮ ವಿಕೃತಸ್ವಭಾವದಿಂದ ಅಲ್ಲವೇ ಅಲ್ಲ. ಕೇವಲ ಕರುಣೆಯಿಂದ. ಅದೂ ನಮ್ಮ ಪ್ರಾಬ್ಧಾನುಸಾರ. ಪ್ರಾರಬ್ಧವನ್ನು ಅನುಸರಿಸಿದರೂ, ಅದಕ್ಕೆ ಅನುಗುಣವಾಗಿ ಕೊಡುವದಿಲ್ಲ. ತುಂಬಾ ಕಡಿಮೆ ಮಾಡಿಯೇ ಕೊಡುತ್ತಾರೆ" ಇದೇ ಅವರ ಕರುಣೆಯನ್ನು ಸೂಚಿಸುತ್ತದೆ.
ಕಾಟವಂತೂ ಕೊಟ್ಟೇ ಕೊಡುತ್ತಾರೆ ಎಂದಮೇಲೆ ಇದರಲ್ಲಿ ಕರುಣೆ ಏನು ಬಂತು ಎಂದು ಪ್ರಶ್ನೆ ಬಂದರೆ ... "ಸುಖದಲ್ಲಿ ಇರುವಾಗ ದೇವರನ್ನು ದೇವತೆಗಳನ್ನು ಗುರುಗಳನ್ನು ನೆನೆಯಲೇ ಬಾರದು" ಎಂಬ ಅವಿಹಿತ ವಿಧಿಯನ್ನು ರೂಢಿಸಿಕೊಂಡ ನಾವು, ಸುಖದ ಪ್ರವಾಹವನ್ನೇ ಹರಿಸಿದ ಗುರು ದೇವತಾ ದೇವರುಗಖನ್ನು ಮರೆತು ಹಾಳಾಗಬಾರದು ಎಂಬ ಏಕೈಕ ಕಳಕಳಿಯಿಂದ ಕಷ್ಟಗಳನ್ನು ಕೊಟ್ಟು ಸಾಧನೆಯನ್ನು ಮಾಡಿಸುತ್ತಾರೆ. ಇದು ಕರುಣೆಯಲ್ಲದೆ ಮತ್ತೇನು. .
ತುಲಾರಾಶಿಗೆ ಅಧಿಪನಾದ ಶನೈಶ್ಚರ ತುಲಾರಾಶಿ ಇರುವವರಿಗಂತೂ ಪರಮಾಪ್ತ ದೇವತೆ. ಮಹಾ ಅನುಗ್ರಹಕಾರಿ. ತನ್ನ ಸಮಯ "ಸಾಡೇಸಾತ್" ಏಳುವರೆ ವರ್ಷಗಳ ಅವಧಿಯಲ್ಲಿ ಅನೇಕ ಉತ್ಕೃಷ್ಟತೆಗಳನ್ನು ತಂದೊದಗಿಸುವ ಮಹಾಕರುಣಿ. ಅಂತಹ ಶನಿದೇವರು ಇಂದು ಕೇವಲ ನಮ್ಮೆಲ್ಲರಿಗೆ ಹರಿಸುವದಕ್ಕಾಗಿಯೇ ಜನಿಸಿಬಂದಿದಾರೆ. ಆ ದೇವತೆಯನ್ನು ನೆನೆಯೋಣ. ಕೋಟಿ ಕೋಟಿ ಪ್ರಣಾಮಗಳನ್ನು ಸಲ್ಲಿಸೋಣ. ಎಲ್ಲ ಯೋಗ್ಯಸುಖಗಳನ್ನಿ ಒದಗಿಸಿ ಸಾಧನೆ ಮಾಡಿಸು ಎಂದು ಪರಿಪರಿಯಾಗಿ ಬೇಡಿಕೊಳ್ಳೋಣ.
( Gopal Das Lekhana Sangraha)
"ಶನೈಃ ಶನೈಃ ಚರತಿ ಇತಿ ಶನೈಶ್ಚರಃ" ಎಂಬ ವಿಗ್ರಹವಾಕ್ಯಾನುಸಾರ ಯಾರು ಮಂದಗತಿಯಲ್ಲಿ ಚಲಿಸುವರೋ ಅವರು "ಶನೈಶ್ಚರ".
ಸೌರಮಂಡಲದಲ್ಲಿರುವ ಎಲ್ಲ ಗ್ರಹಗಳೂ ತಮ್ಮ ಸುತ್ತ ಸುತ್ತುವುದರ ಹಾಗೂ ಸೂರ್ಯನ ಸುತ್ತ ಸುತ್ತುವುದರ ಜೊತೆಗೆ ದ್ವಾದಶ ರಾಶಿಗಳಂತೇ ಇರುವ ನಕ್ಷತ್ರ ಪುಂಜಗಳನ್ನೂ ಹಾದುಹೋಗುತ್ತವೆ. ಈ ನಕ್ಷತ್ರಪುಂಜಗಳೂ ಕೂಡ ಸೂರ್ಯವೆಂಬ ಮಹಾನಕ್ಷತ್ರದ ಗುರುತ್ವ ಆಕರ್ಷಣೆಗೆ ಒಳಪಟ್ಟು ಆ ಸೂರ್ಯನ ಸುತ್ತ ತಮ್ಮ ವೇಗಾನುಸಾರ ಸುತ್ತುತ್ತಿರುತ್ತವೆ.
ನಮ್ಮ ಜ್ಯೋತಿಷ್ಯ ಶಾಸ್ತ್ರದ ಮೂಲ ತತ್ವಗಳಿಗನುಸಾರ, ಗ್ರಹಗಳು ಸೂರ್ಯನ ಜ್ಯೋತಿಯಿಂದಲೂ ಹಾಗೆಯೇ ದ್ವಾದಶರಾಶಿಗಳಲ್ಲಿರುವ ನಕ್ಷತ್ರಪುಂಜಗಳ ಜ್ಯೋತಿಗಳಿಂದಲೂ ಪ್ರತಿಫಲನಗೊಂಡ ಕಿರಣಗಳನ್ನು ನಮ್ಮ ಮೇಲೆ ಸೂಸುತ್ತವೆ. ಗ್ರಹಗಳು ಎಂದಮೇಲೆ ಅವುಗಳಲ್ಲಿ ರಾಸಾಯನಿಕ ವಸ್ತುಗಳು ಇರುವುದು ಸಾಮಾನ್ಯವೇ. ಈ ರಾಸಾಯನಿಕ ವಸ್ತುಗಳೂ ಕೂಡ ಪ್ರತಿಫಲಿತ ಜ್ಯೋತಿಗಳಲ್ಲಿ ಸೇರಿಕೊಂಡು ಬೇರೇ ಬೇರೇ ಗ್ರಹಗಳಲ್ಲಿ ವಾಸಿಸುವ ಜೀವಿಗಳ ಮೇಲೆ ಪರಿಣಾಮವನ್ನು ಬೀರುತ್ತವೆ.
ಸೂರ್ಯನ ಸುತ್ತ ಸುತ್ತಲು ಶನೈಶ್ಚರ ಗ್ರಹಕ್ಕೆ ಬೇಕಾಗುವ ಕಾಲಾವಧಿ 10759 (29.45 ವರ್ಷಗಳು) ದಿನಗಳು....!!! ಹಾಗಾಗಿ ಪ್ರತಿಯೊಂದು ರಾಶಿನಕ್ಷತ್ರಪುಂಜಗಳ ಮೂಲಕ ಹಾದು ಹೋಗಲು ಈ ಗ್ರಹಕ್ಕೆ ಅನೇಕ ವರ್ಷಗಳು ಬೇಕಾಗುತ್ತವೆ. ಹಾಗೆ ಪರಿಭ್ರಮಣ ಮಾಡುವಾಗ ಶನೈಶ್ಚರ ಗ್ರಹದಲ್ಲಿರುವ ಮೂಲವಸ್ತುಗಳ ಪ್ರಭಾವವು ಭೂಮಿಯಲ್ಲಿರುವ ಜೀವಿಗಳ ಮೇಲಾಗುವುದು ಸರ್ವೆಸಾಮಾನ್ಯ.
ಮನುಷ್ಯನು ಏನೇ ಕಷ್ಟಪಟ್ಟು ಯೋಗ, ಜಿಮ್ ಮುಂತಾದ ದೈಹಿಕ, ಮಾನಸಿಕ ಚಟುವಟಿಕೆಗಳನ್ನು ಮಾಡಿದರೂ ಪ್ರಕೃತಿಯ ತತ್ವಗಳ ಚೌಕಟ್ಟಿನಲ್ಲೇ ಇರುತ್ತಾನೆ. ಗ್ರಹಗಳ ಮೂಲವಸ್ತುಗಳು ಅವುಗಳು ಸೂಸುವ ಜ್ಯೋತಿಯ ಮೂಲಕ ಭೂಮಿಯ ಪ್ರಕೃತಿಯಲ್ಲಿ ಮಿಶ್ರಣಗೊಂಡು ಜೀವಿಗಳ ದೇಹವನ್ನು ಉಸಿರಾಟದ ಮೂಲಕ ಸೇರುತ್ತವೆ. ಆಗ ಜೀವಿಯ ಮಸ್ತಿಷ್ಕದ ಮೇಲೆ ರಾಸಾಯನಿಕ ಮೂಲವಸ್ತುಗಳ ಪರಿಣಾಮವುಂಟಾಗಿ ಜೀವಿಯ ವರ್ತನೆಯು ಬದಲಾಗುತ್ತದೆ.
ಹೀಗೇ ವರ್ತನೆಯ ಪರಿವರ್ತನೆಯೇ ಗ್ರಹದ ಪ್ರಭಾವ ಎಂದು ಸಿದ್ಧವಾಗುತ್ತದೆ. ಇದನ್ನು ನಿಯಂತ್ರಿಸಲು ಜೀವಿಯ ಮಾನಸಿಕ ಸಾಮರ್ಥ್ಯದ ಅವಶ್ಯಕತೆ ಇರುತ್ತದೆ. ಇಂತಹ ಮಾನಸಿಕ ಸಾಮರ್ಥ್ಯವು ಕೇವಲ ದೇವಸ್ಥಾನದಲ್ಲಿ ಮಾತ್ರ ದೊರೆಯುತ್ತದೆ. ಹೇಗೆಂದರೆ ದೇವಾಲಯಗಳಲ್ಲಿ ಉಪಯೋಗಿಸಲಾಗುವ ಅಗರಬತ್ತಿ, ಧೂಪ, ದೀಪ ಮುಂತಾದ ಪದಾರ್ಥಗಳಲ್ಲಿ ಇರುವ ಮೂಲವಸ್ತುಗಳು.
ಭಗವಂತನು ಮಹಾ ಕರುಣಾಮಯ. ತಾನೇ ಎಲ್ಲವನ್ನು ನಮಗೋಸ್ಕರ ಸೃಜಿಸಿದ್ದಾನೆ. ಈ ರೀತಿ ಪ್ರತಿಯೊಂದು ಜೀವಿಯು ಯೋಚಿಸಿ ನಡೆದರೆ ಯಾವ ಗ್ರಹದ ಬಾಧೆಯೂ ನಮ್ಮನ್ನು ಏನೂ ಮಾಡಲಾಗದು ಎಂದು ಈ ಅಲ್ಪಜ್ಞನ ಅಭಿಪ್ರಾಯ...
ಜನಕ ತನ್ನಾತ್ಮಜಗೆ ವರ ಭೂ-|
ಷಣ ದುಕೂಲವ ತೊಡಿಸಿ ತಾ ವಂ-|
ದನೆಯ ಕೈಕೊಳುತವನ ಹರಸುತ ಹರುಷಪಡುವಂತೆ ||
ವನರುಹೇಕ್ಷಣ ಪೂಜ್ಯ ಪೂಜಕ |
ನೆನಿಸಿ ಪೂಜಾಸಾಧನ ಪದಾ-|
ರ್ಥನು ತನಗೆ ತಾನಾಗಿ ಫಲಗಳನೀವ ಭಜಕರಿಗೆ ||
(ಶ್ರೀಮಜ್ಜಗನ್ನಾಥದಾಸವರ್ಯವಿರಚಿತ ಶ್ರೀಮದ್ಧರಿಕಥಾಮೃತಸರದ ಮೂರನೇ ಸಂಧಿಯ 10 ನೇ ನುಡಿ)
|| nAham kartA hariH kartA ||
|| Srikrishnarpanamastu ||
by prasadacharya
****
ಶನಿದೇವರ ಜಯಂತಿ. ವೈಶಾಖ ಕೃ. ಅಮಾವಾಸ್ಯೆ.
ಲೇ. ಮಧುಸೂದನ ಕಲಿಭಟ್. ಧಾರವಾಡ.
ಶನಿ ಎಂದಾಕ್ಷಣ ಜೀವರುಗಳಿಗೆ ಒಂದು ರೀತಿಯ ಭಯವಿದೆ. ಅದು ಜೀವರ ಮನಸ್ಸಿನ ಮೇಲಿನ ಪರಿಣಾಮ. ಆದರೆ ಒಂದು ದೃಷ್ಟಿಯಿಂದ ಹೇಳುವದಾದರೆ, ಶನಿ ಮಹಾರಾಜನು. ನಮಗೆ ದೇವರ ಕಡೆಗೆ ಮನಸ್ಸು ಹರಿಯಲೆಂದು ಕೆಲವು ಕಷ್ಟ ತಂದು ಪರಿಕ ಮಾಡುವನು. ನಾವು ಪರಮಾತ್ಮನನ್ನು ನೆನೆದಂತೆ ಕ್ರಮೇಣ ನಮಗೆ ಒಳ್ಳೆಯದನ್ನೇ ಮಾಡುವನು. ಶನೇಶ್ವರನ ಜಯಂತಿ ಕಾರಣ ಶನಿಯ ಜನನ ಹೇಗೆ ಆಯಿತು, ಅವನ ಮಹಿಮೆ ಏನೂ ಎಂಬುದನ್ನು ತಿಳಿಯೋಣ.
ದೇವತೆಗಳ ಶಿಲ್ಪಿ ತ್ವಷ್ಟ್ರು ತನ್ನ ಮಗಳು ಸಜ್ಞಾ ದೇವಿಯನ್ನು ಸೂರ್ಯನಿಗೆ ಕೊಟ್ಟು ಮದುವೆ ಮಾಡಿದನು. ಆಗ ಸೂರ್ಯ ಈಗಿನಂತೆ ಗೋಲಾಕರ ಇರಲಿಲ್ಲ. ಸ್ವಲ್ಪ ವಕ್ರ ದೇಹ ಇತ್ತು. ಅವನಿಗೆ ಶಾಖಾ ತೇಜಸ್ಸು ಉಷ್ಣ ಜಾಸ್ತಿ. ಅದನ್ನು ತಡೆದುಕೊಳ್ಳಲು ಆಗಲಿಲ್ಲ.ಹಾಗು ಹೀಗೂ ಸೂರ್ಯನ ಶಾಖಾ ತಡೆದುಕೊಂಡು ಎರಡೂ ಗಂಡು ಒಬ್ಬ ಹೆಣ್ಣು ಮಗುವನ್ನು ಪಡೆಯುವಳು. ಅವರೇ ಶ್ರಾದ್ಧ ದೇವ ವಿವಸ್ವಾನ್ ಹೆಸರಿನ ಸೂರ್ಯನಿಂದ ಆದಿತ್ಯನಿಂದ ಹುಟ್ಟಿದ್ದರಿಂದ ವೈವಸ್ವತ ಎಂದು ಹೆಸರು. ಇವನೇ ಈಗ ನಡೆದ ಮನ್ವಂತರದ ರಾಜ ವೈವಸ್ವತ .ಎರಡನೆಯವರೇ ಯಮ ಮತ್ತು ಯಮುನೆ ಅವಳಿ ಜವಳಿ ಮಕ್ಕಳು. ಗಂಡನ ತೇಜಸ್ಸು ಶಾಖ ತಡೆಯಲಾರದೇ ಅವಳು ಒಂದು ಯೋಜನೆ ಮಾಡಿದಳು. ತನ್ನಂತೆ ಇರುವ ಒಬ್ಬ ಸ್ತ್ರೀ ರೂಪವನ್ನು ಸೃಷ್ಟಿಸಿ ಜೀವಕಳೆ ತುಂಬಿದಳು. ಅವಳಿಗೆ ಛಾಯಾ ಎಂದು ಕರೆದಳು. ಅವಳಿಗೆ ನೀನು ಸೂರ್ಯನಿಗೆ ನನ್ನಂತೆ ಇದ್ದು ಅವನಿಗೆ ಸುಖ ಕೊಡು.ನಾನು ಊರಿಗೆ ಹೋಗುತ್ತಿರುವೆ ಎಂದು ಹೇಳಬೇಡ. ನನ್ನಂತೆಯೇ ನಟಿಸು ಎಂದು ಹೇಳಿದಳು. ಆಗ ಛಾಯೆಯೂ ನೀನು ನನ್ನನ್ನು ಹುಟ್ಟಿಸಿದೆ ಎಂದು ನಾನು ನಿನಗೆ ಗೌರವ ಕೊಡುವೆ. ಒಂದಿಲ್ಲ ಇನ್ನೊಂದು ದಿನ ಈ ವಿಷಯ ಸೂರ್ಯನಿಗೆ ತಿಳಿಯಲೇ ಬೇಕು. ಅವನು ನನ್ನ ಜಡೆ ಹಿಡಿದು ಕೇಳುವ ವರೆಗೆ ಸುಮ್ಮನಿರುವೆ. ಆಮೇಲೆ ಸತ್ಯ ಸಂಗತಿ ಹೇಳುವೆ ಎಂದಳು.ಎರಡನೇ ರೂಪ ಸೂರ್ಯನ ಶಾಖಕ್ಕೆ ಕಪ್ಪಾಗಿ ಛಾಯಾ ಎಂದು ಕರೆಸಿಕೊಂಡಲು. ಅಂದರೆ ನೆರಳು. ಯಾವಾಗಲೂ ಸೂರ್ಯನ ಹಿಂದೆಯೇ ಇದ್ದಳು. ಇದರಿಂದಾಗಿ ಸೂರ್ಯದೇವನು ಛಾಯೆಯ ಮೇಲೆ ಮೋಹಗೊಂಡುಇಬ್ಬರೂ ಗಂಡು ಮಕ್ಕಳನ್ನು ಪಡೆದನು. ಅವರೇ ಶನಿದೇವ ಮತ್ತು ಸಾವರ್ಣಿ ಎಂಟನೇಯ ಮನು.
ಒಂದು ದಿನ ಯಮದೇವ ಈ ತಾಯಿಯು ಇಬ್ಬರೂ ತಮ್ಮಂದಿರನ್ನೇ ಚನ್ನಾಗಿ ನೋಡುತ್ತಿದ್ದಾಳೆ ನಮ್ಮನ್ನು ನೋಡುತ್ತಿಲ್ಲ ಎಂದು ಅವಳ ಮೇಲೆ ಸಿಟ್ಟಿಗೆದ್ದನು. ಅವಳು ನಿನ್ನ ಕಾಲು ಬಿದ್ದು ಹೊಗಲಿ ಎಂದು ಶಪಿಸಿದಳು. ತಂದೆಯ ಬಳಿ ಹೋಗಿ ತಕರಾರು ಮಾಡಿದನು. ಆಮೇಲೆ ಸೂರ್ಯ ಛಾಯೆಯನ್ನು ವಿಚಾರಿಸಿ ಸಿಟ್ಟಿಗೆದ್ದನು. ಆಗ ಅವಳು ನಿಜ ಸಂಗತಿ ಹೇಳಿದಳು.ಸೂರ್ಯನ ಶಾಪದಿಂದ ಮನುಷ್ಯಳಾಗಿ ಅವತಾರಿಸಿದಳು. ಶ್ರೀ ಹರಿಯ ಮೋಹಿನಿ ರೂಪ ದರ್ಶನ ಆದಾಗ ನಿನಗೆ ಶಾಪ ಮುಕ್ತಿ ಎಂದು ಹೇಳಿದನು. ಆಗ ಛಾಯೆಯೂ ನಾರದರ ಆದೇಶದ ಮೇರೆಗೆ ಕೃಷ್ಣ ತಟಕ್ಕೆ ಬಂದು ತಪಸ್ಸು ಮಾಡಿದಳು. ವಿಷ್ಣು ತಪಸ್ಸಿಗೆ ಒಲಿದು ಮೋಹಿನಿರೂಪ ತೋರಿಸಿ ಶಾಪ ಮುಕ್ತ ಮಾಡಿದನು ಅದೇ ಕ್ಷೇತ್ರ ಇಂದಿಗೂ ಛಾಯಾ ಭಗವತಿ ಎಂದು ಪ್ರಸಿದ್ಧ ಆಗಿದೆ.
ಇತ್ತ ವಿಶ್ವಕರ್ಮ ಮಗಳು ಬಂದ ವಿಷ ತಿಳಿದು ಅವಳನ್ನು ಸಂಭಾಳಿಸಿ ಗಂಡನ ಮನೆಗೆ ಕಳಿಸಿದನು. ಆದರೆ ಸಜ್ಞೆ ಉತ್ತರ ಕೂರು ವರ್ಷ ದೇಶದಲ್ಲಿ ಕುದುರೆ ಯಾಗಿ ಮೆಯುತ್ತ ಇದ್ದಳು. ಅಳಿಯನು ಮನೆಗೆ ಬಂದಾಗ ಅವನಿಗೆ ಶಾಖ ಕಡಿಮೆ ಮಾಡಲು ಅವನ ದೇಹವನ್ನು ತಿದ್ದಿ ಗೋಲಾಕಾರ ಮಾಡಿದನು. ಉಳಿದ ಒಂದು ತುಂಡನ್ನೇ ಸುದರ್ಶನ ಚಕ್ರ ಮಾಡಿ ವಿಷ್ಣುವಿಗೆ ಕೊಟ್ಟನು. ಸೂರ್ಯನಿಗೆ ಹೆಂಡತಿ ಕುದುರೆಯಾಗಿ ಇರುವಳು ಎಂದು ತಿಳಿಸಿದನು. ಸೂರ್ಯನು ಗಂಡು ಕುದುರೆಯಾಗಿ ಹೋಗಿ ಹೆಣ್ಣು ಕುದುರೆಯ ಸಂಗಡ ಸಮಾಗಮ ಮಾಡಿ ದನು. ಆಗ ಸಜ್ಞೆ ವೀರ್ಯವನ್ನು ಗಂಡು ಕುದುರೆಯದ ಸೂರ್ಯನ ಮೂಗಿನ ಮೇಲೆ ಉಗುಳಿದಳು. ಆಗ ಕುದುರೆ ರೂಪದ ಸೂರ್ಯನ ಮೂಗಿಂದ ಹುಟ್ಟಿದವರೇ ಅಶ್ವಿನಿ ದೇವತೆಗಳು. ದೇವತೆಗಳ ವೈದ್ಯರು.
ಸಾಗಣೆಗೆ ಮಾಡಿದ ತಪ್ಪು ತಿಳಿದು ಸ್ವಲ್ಪ ಕೋಪ ಬಂದು ಅವಳಿಗೆ ಎಕ್ಕೆ ಗಿಡವಾಗು ಎಂದು ಶಾಪಕೊಟ್ಟನು. ಅದರಲ್ಲಿ ಸೂರ್ಯನ ಅಂಶ ಇರುವದರಿಂದ, ರಥಸಪ್ತಮಿ ದಿನ ಆ ಗಿಡದ ಎಲೆ ಇತ್ತು ಸ್ನಾನ ಮಾಡುತ್ತೇವೆ. ಇದೇ ಅರ್ಕಪತ್ರ ಸ್ನಾನ ಎನಿಸಿದೆ.
ಶನಿಯು ತನ್ನ ಮಗನೆಂದು ನೋಡಲೆಂದು ಸೂರ್ಯನು ಹೋದನು. ಆದರೆ ಮಗೂ ಶನಿಯು ವಕ್ರದೃಷ್ಟಿ ಬೀರಿದನು. ಅದರಿಂದ ಸೂರ್ಯನಿಗೆ ಕೆಲವು ಆತಂಕ, ಕಷ್ಟಗಳನ್ನು ಅನುಭವಿಸಬೇಕಾಯಿತು. ಆಗ ಸೂರ್ಯದೇವನು ಶನಿಗೆ ನಾನು ನಿನ್ನ ತಂದೆ ನಿನ್ನನ್ನು ಪ್ರೀತಿಯಿಂದ ಸಹಜವಾಗಿ ನೋಡಲು ಬಂದರೆ ನೀನು ಹೀಗೇಕೆ ನೋಡಿದೆ, ಎಂದು ಪ್ರತಿಯಾಗಿ ಶನಿಗೆ ನಿನ್ನ ಕಾಲು ಊನ ವಾಗಲಿ ಎಂದು ಶಪಿಸಿದನು. ಇದರಿಂದಾಗಿ ಶನಿದೇವನ ಚಾಲನೆ ಕಡಿಮೆ ಯಾಗಿ ಅವನು ಮಂದ ಗ್ರಹ ಎನಿಸಿಕೊಂಡನು. ಎಲ್ಲ ಗ್ರಹಗಳು ರಾಶಿ ಚಕ್ರ ತಿರುಗಲು ಒಂದು ವರ್ಷದಿಂದ ಒಂದು ವರೇ ವರ್ಷ ತೆಗೆದುಕೊಂಡರೆ ಶನಿದೇವಗೆ 12 ರಾಶಿ ಸುತ್ತಲೂ ಮೂವತ್ತು ವರ್ಷ ಬೇಕು.
ಶನಿಯ ದೃಷ್ಟಿ ಸರಳ ವಿದ್ದರೆ ಏನೂ ಬಾಧೆ ಇಲ್ಲ. ಆದರೆ ವಕ್ರ ಆಗಿರಬಾರದು.ಹಿಂದಕ್ಕೆ ಅವನ ದೃಷ್ಟಿ ಪಾಂಡವರ ಮೇಲೆ ಬೀಳಲು ಅವರು ವನವಾಸ ಅನುಭವಿಸಬೇಕಾಯಿತು. ಶ್ರೀ ರಾಮ ಅರಣ್ಯಕ್ಕೆ ಹೋಗಬೇಕಾಯಿತು. ನವಗ್ರಹಗಳನ್ನು ಮೆಟ್ಟಲು ಮಾಡಿಕೊಂಡ ರಾವಣನಿಗೆ ಶನಿದೇವನ ವಕ್ರ ದೃಷ್ಟಿ ತಾಗಲು ರಾಜ್ಯವನ್ನು ಕಳೆದುಕೊಂಡು ರಾಮನಿಂದ ಹತನಾಗ ಬೇಕಾಯಿತು. ನಳ ಮಹಾರಾಜ ಜೂಜಿನಲ್ಲಿ ಸೋತು ಕಣ್ಣು ತಪ್ಪಿಸಿಕೊಂಡು ಇರಬೇಕಾಯಿತು., ಹರಿಶ್ಚಂದ್ರ ರಾಜನಿಗೂ ಸ್ಮಶಾನ ಕಾಯುವ ಪ್ರಸಂಗ ಬಂದಿತು. ಇವರೆಲ್ಲ ಕಷ್ಟ ಪಟ್ಟರೂ ನಂತರ ಸುಖ ಅನುಭವಿಸಿದರು. ಶನಿದೇವ ಎಲ್ಲರಿಗೂ ಒಳ್ಳೆಯದನ್ನೇ ಮಾಡಿದನು. ನರಸಿಂಹ ಅವತಾರವದಾಗ ನರಸಿಂಹ ದೇವರನ್ನು ಹೊಗಳಿ ಸ್ತುತಿಸಿದನು. ಅದಕ್ಕೆ ಸಂತೋಷಗೊಂಡ ನರಸಿಂಹ ಶನಿದೇವನಿಂದ ವಚನ ತೆಗೆದುಕೊಳ್ಳುತ್ತಾನೆ. ಏನೆಂದರೆ ಯಾರು ಶನಿವಾರ ದಿನ ನರಸಿಂಹದೇವರನ್ನು ಸ್ಮರಿಸುವರೋ ಅವರಿಗೆ ನೀನು ಯಾವದೇ ರೀತಿಯಲ್ಲಿ ತ್ರಾಸ ಕೊಡಬಾರದು. ಎಂದು ಅದಕ್ಕೆ ಶನಿದೇವ ಒಪ್ಪಿದ್ದಾನೆ. ಅದರಂತೆ ಶನಿವಾರ ಯಾರು ಆಂಜನೇಯನ ಗುಡಿಗೆ ಹೋಗುವರೋ ಅವರಿಗೆ ಶನಿದೇವ ಕಷ್ಟ ಕೊಡುವದಿಲ್ಲ.ಹೀಗೆ ಪರಮಾತ್ಮನ ಸ್ಮರಣೆ ಬರುವಂತೆ ಎಲ್ಲರನ್ನೂ ಅವರವರ ಜಾತಕ ಪ್ರಕಾರ ಕಫುವನು,ಹೊರತು ಕೆಟ್ಟ ಉದ್ದೇಶದಿಂದ ಅಲ್ಲ ಎಂದು ನಾವು ಮನದಲ್ಲಿ ಇಟ್ಟುಕೊಳ್ಳಬೇಕು. ಇಂಥ ಶನಿ ಮಹಾರಾಜನ ಜನ್ಮ ದಿನ ಎನಿಸಿದ ವೈಶಾಖ ಅಮಾವಾಸ್ಯೆ ದಿನ ಅವನ ಅಂತರ್ಯಾಮಿ ಭಾ. ಮು. ಅಂ ನರಸಿಂಹದೇವರನ್ನು ನೆನೆಯೋಣ ಎಂದು ಪ್ರಾರ್ಥಿಸುವೆ.
****
ಹನುಮ - ಶನಿ - ಎಳ್ಳೆಣ್ಣೆ
ಶ್ರೀಶನಿಸ್ತೋತ್ರಮ್
ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ | ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ ||
ಇತಿ ಶ್ರೀವಾದಿರಾಜತೀರ್ಥಶ್ರೀಚರಣವಿರಚಿತಂ ಶ್ರೀಶನಿಸ್ತೋತ್ರಮ್
ರಾವಣನು ತನ್ನ ಮಗನಾದ ಮೇಘನಾದನ ಜನ್ಮ ಕುಂಡಲಿಯಲ್ಲಿ ಯಾವುದೇ ಗ್ರಹಗಳು ಇರಬಾರದೆಂಬುದಾಗಿ ಬಯಸುತ್ತಾನೆ.
ಇದಕ್ಕಾಗಿ ಎಲ್ಲಾ ಗ್ರಹಗಳನ್ನು ಆತ ಅಡಗಿಸುತ್ತಾನೆ. ಮತ್ತು ಖೈದಿಗಳನ್ನಾಗಿ, ಮಾಡಿಕೊಳ್ಳುತ್ತಾನೆ.
ಕಿಟಕಿಯೇ ಇಲ್ಲದ ಕೋಣೆಯಲ್ಲಿ, ಶನಿಯನ್ನು ಬಂಧಿಸುತ್ತಾನೆ.
ಇದರಿಂದ ಯಾರ ಮುಖವನ್ನೂ ಶನಿಗೆ ನೋಡಲು ಸಾಧ್ಯವಾಗುವುದಿಲ್ಲ.
ಹಲವಾರು ವರ್ಷಗಳ ಬಳಿಕ ಹನುಮನು ಲಂಕೆಗೆ ಸೀತೆಯನ್ನು ಅರಸಿಕೊಂಡು ಬರುತ್ತಾನೆ.
ಇಡಿಯ ಲಂಕೆಯನ್ನೆ, ಹನುಮನು ಸುಟ್ಟಾಗ ಶನಿ ಮತ್ತು ಇತರ ಗ್ರಹಗಳು ಬಂಧನದಿಂದ ವಿಮುಕ್ತಿಯನ್ನು ಪಡೆದುಕೊಳ್ಳುತ್ತಾರೆ.
ಆಶೋಕ ವನದಲ್ಲಿ ಸೀತೆ ಇರುವಳೆಂದು ಅರಿತು ಹನುಮನು ಸೀತಾ ಮಾತೆಗೆ, ತೊಂದರೆಯಾಗದಂತೆ "ಆಶೋಕ ವನದ ಬೆಂಕಿ ಹಾರಿ ಹೋಗಲಿ" ಎಂದು ರಾಮನನ್ನು ಬೇಡಿಕೊಳ್ಳುವ ಸಮಯದಲ್ಲಿ ಹನುಮಂತನಿಗೆ ಸವಾಲು ಎಸೆದ ಶನಿದೇವ : "ಈ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ನಾನೇ.ಆದರೆ ನೀನು ಸಹ ಪ್ರಬಲನೆಂದು ಕೇಳ್ಪಟ್ಟೆ. ನಿನ್ನ ಪರಾಕ್ರಮ ಎಷ್ಟು ಎಂದು ನನಗೆ ತಿಳಿಯಬೇಕಿದೆ, ಬಾ ಕಣ್ತೆರೆದು ನೋಡು, ನನ್ನೊಂದಿಗೆ ಯುದ್ಧ ಮಾಡು" - ಎಂದು ಸವಾಲೆಸೆದನು.
ತಪ್ಪಸ್ಸಿನಲ್ಲಿ, ಮಗ್ನನಾಗಿದ್ದ ಹನುಮಂತ ಶನಿದೇವರ ಸವಾಲಿಗೆ, ವಿಚಲಿತನಾಗದೆ ಕಣ್ಣುಗಳನ್ನು ತೆರೆದು ಉತ್ತರಿಸಿದ. “ಈಗ ನಾನು ನನ್ನ ಇಷ್ಟ ದೇವರನ್ನು ಪ್ರಾರ್ಥಿಸುತ್ತ ಇದ್ದೇನೆ.ಈ ಸಮಯದಲ್ಲಿ ನನ್ನನ್ನು ಚಂಚಲಗೊಳಿಸಬೇಡ.ನನ್ನನ್ನು ಒಂಟಿಯಾಗಿ, ಪ್ರಾರ್ಥಿಸಲು ಬಿಡು” ಎಂದು ಹೇಳಿದ.
ಆದರೆ ಅದಕ್ಕೆ ಮಣಿಯದ ಶನಿದೇವ ಮತ್ತೆ ಮತ್ತೆ ಯುದ್ಧಕ್ಕೆ ಬರುವಂತೆ ಪ್ರೇರೇಪಿಸಿದ ಆಗ ತಾಳ್ಮೆ ಕಳೆದುಕೊಂಡ ಹನುಮಂತ ಸಿಟ್ಟಿಗೆದ್ದು, ತನ್ನ ಬಾಲದಿಂದ ಶನಿದೇವರ ಶರೀರವನ್ನು ಸುತ್ತುವರಿದು ನಿಧಾನವಾಗಿ, ಒತ್ತಡ ಹೆಚ್ಚಿಸಲು ಶುರುವಿಟ್ಟ ಸಿಟ್ಟಿಗೆದ್ದ ಹನುಮಂತನಿಂದ ತಪ್ಪಿಸಿಕೊಳ್ಳಲು ಶನಿದೇವ ಎಷ್ಟು ಪ್ರಯತ್ನಿಸಿದರೂ ಬಾಲದ ಒತ್ತಡ ಹೆಚ್ಚುತ್ತಲೇ ಹೋಗುತ್ತಿತ್ತು.
ತನ್ನ ಬಾಲದಿಂದಲೇ ಶನಿದೇವನನ್ನು ಒಂದು ಬಾರಿ ಎತ್ತಿ ಅಲುಗಾಡಿಸಿದ.
ಇದರಿಂದ ನೋವನ್ನು ತಡೆದುಕೊಳ್ಳಲಾಗದೆ ಶನಿದೇವ ಸೋಲನ್ನು ಒಪ್ಪಿಕೊಂಡು, ಅವಮಾನಿತನಾಗಿ ಹನುಮಂತನ ಬಳಿ ದಯಾ ಭಿಕ್ಷೆ ಯಾಚಿಸಲು ಮುಂದಾದ . “ದಯವಿಟ್ಟು ನನ್ನನ್ನು ಬಿಡುಗಡೆ ಮಾಡು. ನಾನು ಎಂದಿಗೂ ಈ ತಪ್ಪನ್ನು ಮತ್ತೆ, ಮಾಡಲಾರೆ ಎಂದು ಅಂಗಲಾಚಿದ”
ಅದಕ್ಕೆ ಹನುಮಂತ “ಇನ್ನೂ ಮುಂದೆ ನೀನು ಎಂದಿಗೂ ರಾಮನ ಭಕ್ತರಿಗೆ ತೊಂದರೆ ಮಾಡಲಾರೆ ಎಂದು ಭರವಸೆ ಕೊಟ್ಟರೆ ಮಾತ್ರ ಬಿಡುಗಡೆ ಮಾಡುವೆ” ಎಂದ. ನೋವು ತಾಳಲಾರದೆ ಶನಿದೇವ ಹೀಗೆ ಉತ್ತರಿಸಿದ “ಹಾಗೆ ಆಗಲಿ ಇನ್ನು ಮುಂದೆ ನಾನು ನಿನ್ನ ಹಾಗೂ ರಾಮನ ಭಕ್ತರಿಗೆ ತೊಂದರೆ ನೀಡಲಾರೆ ಎಂದು ಭರವಸೆ ಕೊಡುತ್ತಾನೆ”
ಅಂದು ಲಂಕೆಯಲ್ಲಿ ರಾವಣನ ಬಿಗಿ ಮುಷ್ಟಿಯಲ್ಲಿದ್ದ ಶನಿದೇವನನ್ನು ಹನುಮಂತ ರಕ್ಷಿಸಿದ.ಈ ಉಪಕಾರವನ್ನು ತೀರಿಸಲು ಹನುಮಂತನ ಭಕ್ತರಿಗೆ ತೊಂದರೆ ನೀಡದಿರುವಂತೆ, ಶನಿದೇವರು ಒಪ್ಪಿಕೊಂಡ.ಆದ್ದರಿಂದ ಶನಿದೇವರ ಪ್ರಭಾವ ಇರುವವರು ಹನುಮಂತನನ್ನು ಆರಾಧಿಸಿದರೆ,ಪ್ರಾರ್ಥಿಸಿದರೆ ತೊಂದರೆಗಳಿಂದ ಹೊರ ಬರಲು ಸಾಧ್ಯ ಎಂದು ಪುರಾಣದಲ್ಲಿ ತಿಳಿಸಿದೆ.
ಶನಿದೇವರ ಮಾತಿಗೆ ಒಪ್ಪಿ ಹನುಮಂತ ಶನಿದೇವನನ್ನು ಬಂಧನದಿಂದ ಮುಕ್ತಿ ಮಾಡಿದ ಬಳಿಕ ಶನಿದೇವ ತನ್ನ ಶರೀರದ ನೋವನ್ನು ಕಡಿಮೆ ಗೊಳಿಸಲು ಹನುಮಂತನನ್ನು ಈ ರೀತಿಯಾಗಿ ಬೇಡಿದ “ಈ ನೋವನ್ನು ಶಮನಗೊಳಿಸಲು ನನಗೆ ಯಾವುದಾದರೂ ಒಂದು ಔಷಧಿಯನ್ನು ನೀಡುವೆಯಾ” ಎಂದು ಕೇಳುತ್ತಾನೆ.
ಇದಕ್ಕೆ ಒಪ್ಪಿದ ಹನುಮಂತ ಒಂದು ಎಣ್ಣೆಯನ್ನು ನೀಡುತ್ತಾನೆ.ಈ ಎಣ್ಣೆಯನ್ನು ಹಚ್ಚಿದ ಬಳಿಕ ಶನಿದೇವನಿಗೆ ನೋವು ಕಡಿಮೆಯಾಯಿತು.ಶನಿದೇವನು ನೋವು ಕಡಿಮೆ ಮಾಡಿದ ಈ ಎಣ್ಣೆಯನ್ನು ಅಂದಿನಿಂದ ಶನಿದೇವರಿಗೆ ಈ ಎಣ್ಣೆಯನ್ನು ಅರ್ಪಿಸುವುದು ಸಂಪ್ರದಾಯವಾಗಿ ಪ್ರಾರಂಭವಾಯಿತು. ಅದೇ ಎಳ್ಳಿನ ಎಣ್ಣೆ.ಅದರಲ್ಲೂ ಕಪ್ಪು ಎಳ್ಳಿನ ಎಣ್ಣೆ ಇನ್ನೂ ಶ್ರೇಷ್ಠ.ಇದು ದೇಹದ ಎಲ್ಲಾ ನೋವುಗಳನ್ನು ಕಡಿಮೆ ಮಾಡುವ ಸಂಕೇತವಾಗಿದೆ.
ಅನೇಕ ತೊಂದರೆಗಳಿಗೆ,, ಕಾರಣನಾಗುವ ಶನಿದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸುವ ಮೂಲಕ ಶನಿದೇವ ತನ್ನ ನೋವನ್ನು ಕಡಿಮೆ ಮಾಡುತ್ತಾನೆ.
ಎಳ್ಳೆಣ್ಣೆ ಅರ್ಪಿಸಿದ ಭಕ್ತರ ತೊಂದರೆಗಳನ್ನು ಕಡಿಮೆ ಮಾಡುತ್ತಾನೆ,
ಎಂದು ನಂಬಲಾಗಿದೆ.
ಧರ್ಮ ಗ್ರಂಥಗಳ ಪ್ರಕಾರ ಶನಿದೇವರಿಗೆ ಅರ್ಪಿಸಲು ಎಳ್ಳೆಣ್ಣೆ ಸೂಕ್ತವಾಗಿದೆ.ಇದನ್ನು ಅರ್ಪಿಸಲು ಶನಿದೇವರ ದಿನವಾದ ಶನಿವಾರವೇ ಪ್ರಧಾನ ದಿನವಾಗಿದ್ದು ಶನಿದೇವರ ಪ್ರಭಾವದಿಂದ ಹೊರಬರಲು ಹನುಮಂತನನ್ನು ಆರಾಧಿಸುವುದು ಇನ್ನೊಂದು ವಿಧವಾಗಿದೆ.
*********
"ಕಾಗೆ ಪಕ್ಷಿಯ ಕಥೆ ತಿಳಿದುಕೊಳ್ಳಿ"
ಈ ಪಕ್ಷಿಯ ಹೆಸರು ಕಾಗೆ ಇದನ್ನು ಕಂಡರೆ ಕೆಲವರಿಗೆ ಭಯ,ಇದನ್ನು ಕೆಲವರು ಅಪಶಕುನ ಎಂತಲೂ ಬಾವಿಸಿದ್ದಾರೆ.ಕಾಗೆ ಮನೆಯೊಳಗೆ ಬರಬಾರದು,ನಮ್ಮನ್ನು ಮುಟ್ಟಿದರೂ ನಾವು ಸ್ನಾನ ಮಾಡಿ ಸ್ವಾಮಿ ದೇವಾಸ್ಥಾನಕ್ಕೆ ಹೋಗಿ ಬರುತ್ತೇವೆ.
ದೇವಲೋಕದಲ್ಲಿ ಕಾಕಾಸುರನೆಂಬ ರಾಕ್ಷಸ ಎಲ್ಲರನ್ನೂ ಬೆದರಿಸುತ್ತ,ತೊಂದರೆ ಕೊಡುತ್ತ ಅಟ್ಟಹಾಸ ಮೆರೆಯುತ್ತರುತ್ತಾನೆ,
ಒಮ್ಮೆ ಜಗನ್ಮಾತೆಯಾದ ಲಕ್ಷ್ಮಿಯು ಸ್ನಾನ ಮಾಡುತ್ತಿರುವಾಗ ಈ ಕಾಕಾಸುರ ಕದ್ದು ನೋಡುತ್ತಾನೆ,ಲಕ್ಷ್ಮಿ ತಾಯಿ ಚೀರಿಕೊಳ್ಳುತ್ತಾಳೆ ಲೋಕ ಪರ್ಯಟನೆಗೆ ಹೋಗಿದ್ದ ನಾರಾಯಣ ಎನಾಯಿತು ಎಂದು ಓಡಿ ಬರುತ್ತಾನೆ,ಅವಾಗ ಲಕ್ಷ್ಮಿಯು ನನಗೆ ಅಪಮಾನವಾಯಿತೆಂದು ಹೇಳುತ್ತಾರೆ.
ನಾರಾಯಣ ಕಾಕಾಸುರನನ್ನು ಬೆನ್ನಟ್ಟಿ ಹೋಗುತ್ತಾನೆ ಕಾಕಾಸುರನು ಈಶ್ವರನ ಮೊರೆ ಹೋಗುತ್ತಾನೆ ದೇವ ನನ್ನನ್ನು ಕಾಪಾಡು ನನ್ನಿಂದ ತಪ್ಪಾಗಿದೆ ಎನ್ನುತ್ತಾನೆ ಆಗ ಈಶ್ವರನು ನನ್ನಿಂದ ಸಾಧ್ಯವಿಲ್ಲ ನಾರಾಯಣ ಸಾಮಾನ್ಯದವನಲ್ಲ ನಿನ್ನನ್ನು ಅವನು ಬಿಡುವುದಿಲ್ಲ,ನಿನ್ನ ರಕ್ಷಣೆ ಶನೈಶ್ಚರನಿಂದ ಮಾತ್ರ ಸಾಧ್ಯ ನೀನು ಕೂಡಲೆ ಶನೈಶ್ಚರನ ಪಾದಕ್ಕೆ ಶರಣಾಗು ಎನ್ನುತ್ತಾನೆ.
ಆಗ ಕಾಕಾಸುರನು ಶನೈಶ್ಚರನ ಪಾದಕ್ಕೆ ಬೀಳುತ್ತಾನೆ ನನ್ನನ್ನು ಕಾಪಾಡು ದೇವ ನನ್ನಿಂದ ತಪ್ಪಾಗಿದೆ ಎಂದಾಗ ನಾರಾಯಣನು ಅಲ್ಲಿಗೆ ಬರುತ್ತಾನೆ ಶನೈಶ್ಚರ ಅವನನ್ನು ಕಳಿಸಿಕೊಡು ಎನ್ನುತ್ತಾನೆ,ಆಗ ಶನೈಶ್ಚರನು ನಾರಾಯಣ ಶಾಂತನಾಗು ನೀನೇ ಈ ತರ ಕೋಪ ಮಾಡಿಕೊಂಡರೆ ಜಗತ್ತು ಉಳಿಯುವುದಿಲ್ಲ ಎನ್ನುತ್ತ,ಕಾಕಾಸುರನಿಗೆ ನಿನ್ನ ಒಂದು ಕಣ್ಣನ್ನು ಕಿತ್ತು ನಾರಾಯಣನ ಪಾದಕ್ಕಿಡು ಎಂದಾಗ ಕಾಕಾಸುರ ತನ್ನ ಒಂದು ಕಣ್ಣು ಕಿತ್ತು ನಾರಾಯಣನ ಪಾದಕ್ಕಿಡುತ್ತಾನೆ,ಈಗಲೂ ಕಾಗೆಗೆ ಒಂದೆ ಕಣ್ಣು .
ಆಗ ನಾರಾಯಣನು ನಿನ್ನನ್ನು ಬಿಡುವುದಿಲ್ಲ ಸಮಯ ನೋಡಿ ನಿನ್ನನ್ನು ಕೊಂದೇ ಕೊಲ್ಲುತ್ತೇನೆ ಎಂದು ಹೇಳಿ ಹೋಗುತ್ತಾನೆ.
ಕಾಕಾಸುರ ಶನೈಶ್ಚರ ಸ್ವಾಮಿಗೆ ನಿನ್ನನ್ನು ಬಿಟ್ಟು ಹೋಗುವುದಿಲ್ಲ ನಿನ್ನ ವಾಹನ ವಾಗಿರುತ್ತೇನೆ ಪರಮಾತ್ಮ ನಿನ್ನ ವಾಹನದ ವಾಗಿ ನನ್ನನ್ನು ಸ್ವೀಕರಿಸು ಎಂದಾಗ ಸ್ವಾಮಿಯು ಆಗಲಿ ಎಂದು ಹೇಳುತ್ತಾರೆ.ಕಾಕಾಸುರ ನು ಪಕ್ಷಿಯಾಗ ಭಗವಂತನ ವಾಹನವಾಗುತ್ತಾನೆ.
*********
ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ
ಎಲ್ಲರ ರಾಶಿಗೆ ಪ್ರವೇಶ ಪಡೆದು
ಕಷ್ಟ ಸುಖಗಳನ್ನು ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.?
ಪೌರಾಣಿಕ ಕಥೆ
🔸ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ. ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ. * ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ. ಈತನಿಗೆ ಸಿಗಲೇಬಾರದು ಎಂದು ಕೊಂಡು ಅಲ್ಲಿಂದ ಓಡತೊಡಗಿದ.
🔸ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು. ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.
🔸ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ. ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು. ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.
🔸ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನೂ ತಿಂದುಬಿಟ್ಟಿತು. ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು. ಎತ್ತಹೋಗುವುದೆಂದು ತಿಳಿಯದೆ "ಹಸುವಿನ ಸಗಣಿಯ ರೂಪದಲ್ಲಿ ಆಚೆ ಬಂದ". ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.
🔸ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.
🔸ಆದ್ದರಿಂದ ಎಲ್ಲಾ ಶುಭ ಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಥಮ ಪೂಜೆ ಗಣಪನಿಗೇ ಸಲ್ಲಿಸುತ್ತಾರೆ. ಇದು ಸಗಣಿಯ ಮಹತ್ವ ತಿಳಿಸುವ ಒಂದು ಪೌರಾಣಿಕ ಕಥೆ.
********
*ಶ್ರೀಶನೈಶ್ಚರ ಜಯಂತಿ - ಶ್ರೀಶನಿ ಮಂತ್ರ ಜಪ
ಸಂಕಲ್ಪ..*
ಶ್ರೀಗುರುಭ್ಯೋನಮಃ | ಪರಮಗುರುಭ್ಯೋ ನಮಃ | ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ದ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||
ಘಂಟಾವಾದನಮ್
ಆಗಮಾರ್ಥಂತು ದೇವಾನಾಂ ಗಮನಾರ್ಥಂ ತು ರಕ್ಷಸಾಂ |
ಕುರು ಘಂಟಾರವಂ ತತ್ರ ದೇವತಾವ್ಹಾನ ಲಾಂಛನಮ್ ||
ಆಚಮನಮ್
ಕೇಶವಾಯ ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ | ಗೋವಿಂದಾಯ ನಮಃ || ವಿಷ್ಣುವೇ ನಮಃ | ಮಧುಸೂದನಾಯ ನಮಃ | ತ್ರಿವಿಕ್ರಮಾಯ ನಮಃ | ವಾಮನಾಯ ನಮಃ | ಶ್ರೀಧರಾಯ ನಮಃ | ಹೃಷಿಕೇಶಾಯ ನಮಃ | ಪದ್ಮನಾಭಾಯ ನಮಃ | ದಾಮೋದರಾಯ ನಮಃ | ಸಂಕರ್ಷಣಾಯ ನಮಃ | ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ | ಅನಿರುದ್ಧಾಯ ನಮಃ | ಪುರುಷೋತ್ತಮಾಯ ನಮಃ | ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ | ಅಚ್ಯುತಾಯ ನಮಃ | ಜನಾರ್ಧನಾಯ ನಮಃ | ಉಪೇಂದ್ರಾಯ ನಮಃ | ಹರಯೇ ನಮಃ | ಶ್ರೀಕೃಷ್ಣಾಯ | (ಪ್ರಾಣಾನಾಯಮ್ಯ)
ಶ್ರೀಗೋವಿಂದ ಗೋವಿಂದ ಶುಭೇ ಶೋಭನೇ ಮುಹೂರ್ತೇ ಶ್ರೀಮದ್ಭಗವತೋ ಮಹಾಪುರುಷಸ್ಯ ಶ್ರೀವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯಬ್ರಹ್ಮಣಃ ದ್ವತೀಯಪರಾರ್ಧೇ ಶ್ರೀಶ್ವೇತವರಾಹ ಕಲ್ಪೇ ವೈವಸ್ವತ ಮನ್ವಂತರೆ ಅಷ್ಟಾವಿಂಶತಿತಮೆ ಕಲಿಯುಗೆ ಪ್ರಥಮಚರಣೆ ಜಂಬೂದ್ವೀಪೆ ಭರತವರ್ಷೆ ಭರತಖಂಡೆ ದಂಡಕಾರಣ್ಯೆ ದೇಶೇ ಗೋದಾವರ್ಯಾ ದಕ್ಷಿಣೆತೀರೆ
ಶಾಲಿವಾಹನ ಶಕೆ ಬೌಧ್ಧಾವತಾರೆ ಶ್ರೀರಾಮ ಕ್ಷೇತ್ರೆ ಅಸ್ಮಿನ್ ವರ್ತಮಾನೆ ಚಾಂದ್ರಮಾನೇನ ಶ್ರೀಪ್ಲವನಾಮ ಸಂವತ್ಸರಸ್ಯ ಉತ್ತರಾಯಣೆ ವಸಂತ ಋತೌ ವೈಶಾಖಮಾಸೆ ಕೃಷ್ಣಪಕ್ಷೆ ಅಮಾವಸ್ಯಾಂ ತಿಥೌ ಬೃಹಸ್ಪತ್ಯ ಗುರುವಾಸರೆ ರೋಹಿಣಿ ನಕ್ಷತ್ರೆ ಧೃತಿನಾಮ ಯೋಗೆ ನಾಗವಾನ್ ಕರಣೆ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ
ಶುಭ ತಿಥೌ ಮಮ(ಹೆಸರು ಹೇಳಿಕೊಳ್ಳಿ) - ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುಃ ಆರೋಗ್ಯ ಐಶ್ವರ್ಯ ಅಭಿವೃಧ್ಯರ್ಥಂ ಧರ್ಮ ಅರ್ಥ ಕಾಮ ಮೋಕ್ಷಾದಿ ಚತುರ್ವಿಧ ಪುರುಷಾರ್ಥ ಸಿಧ್ಯರ್ಥಂ ಸ್ತೀ ಪುತ್ರ ಪೌತ್ರ ಪಶು ಧನ ವಿದ್ಯಾ ಜಯ ಕೀರ್ತಿ ಅಭೀಷ್ಟ ಸಿಧ್ಯರ್ಥಂ
ಸಕಲ ಕಾರ್ಯೇಷು ನಿರ್ವಿಘ್ನತಾ ಸಿದ್ಧಿದ್ವಾರಾ
ಆದಿತ್ಯಾದಿ ನವಗ್ರಹ ಅನುಕೂಲತಾ ಸಿಧ್ಯರ್ಥಂ ಚ ಶ್ರೀವಿಷ್ಣು ಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ ಅಮಾಯಾಂ ಶ್ರೀಶನೈಶ್ಚರ ಜಯಂತಿನಾಮಕ ಪರ್ವಕಾಲೆ
ಅದ್ಯದಿನ ವಿಷೇಶತಃ ಜರಾವ್ಯಾಧಿರುಗ್ಭಯ ನಿವಾರಣಾರ್ಥಂ ವ್ಯಾಧಿರೂಪೇಣ ಭೂಲೋಕವ್ಯಾಪ್ತ ಕೊರೊನಾ ನಾಮಕ ಮಹಾ ಉತ್ಪಾತ ಶಮನಾರ್ಥಂ ಯಥಾಶಕ್ತಿ ಶ್ರೀಶನೈಶ್ಚರ ಜಪಮಹಂ ಕರಿಷ್ಯೆ (ಕಾರಯಿಷ್ಯೆ).
ಶ್ರೀಗಣಪತಿ ಪ್ರಾರ್ಥನಾ ಮಂತ್ರಮ್
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿವಿಘ್ನಂ ಕುರ್ಮೇದೇವ ಸರ್ವಕಾರ್ಯೇಷು ಸರ್ವದಾ |
ಶ್ರೀಶನೈಶ್ಚರ ಧ್ಯಾನ-ಆವಾಹನಮ್
ಭಗವನ್ ಶ್ರೀಶನೈಶ್ಚರ ರವಿನಂದನ ಕಾಶ್ಯಪಗೋತ್ರ ಸೌರಾಷ್ಟ್ರ ದೇಶೇಶ್ವರ ಕಜ್ಜಲ ನೀಲಾಂಗಕಾಂತೆ ಚತುರ್ಭುಜ ಚಾಪತುಣೀರ ಕೃಪಾಣಭಯಾಂಕಿತ ನೀಲಾಂಬರ ಮಾಲ್ಯಾನುಲೇಪನ ನೀಲರತ್ನಭೂಷಣಾಲಂಕೃತ ಸಮಸ್ತಭುವನ ಭೂಷಣಮರ್ಷಣ ಮೂರ್ತೇ ನಮಸ್ತೆ |
ಸನ್ನದ್ಧ ಪೀತ ಧ್ವಜಪತಾಕಾದಿ ಶೋಭಿತೇನ ನೀಲಗೃದ್ರ ರಥವಾಹನೇನ ಮೇರುಪ್ರದಕ್ಷಣೇ ಕುರ್ವನ್ ಪ್ರಜಾಪತಿಯಾಮಾಭ್ಯಾಂ ಸಹ ಅತ್ರ ಆಗಚ್ಛ | ಪ್ರಸೀದ ಪ್ರಸೀದ |
ಜಪ ಮಂತ್ರಮ್
ಜಪಸಂಖ್ಯಾ, 23000, ಇದರಲ್ಲಿ ಇಂದು ಸಾಧ್ಯವಿದ್ದಷ್ಟು ಜಪ ಮಾಡಬೇಕು
ಜಪ ಮಂತ್ರ-
ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಮ್|
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||
ದೀಪ ಹಚ್ಚುವಾಗ ಹೇಳುವ ಮಂತ್ರ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ|
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತುತೇ||
ಜಪ ಪೂರ್ಣವಾದ ಮೇಲೆ ಹೇಳಿಕೊಳ್ಳುವ ಮಂತ್ರಗಳು
ಶನೈಶ್ಚರ ಸ್ತೋತ್ರಮ್:
ಶ್ರೀಗಣೇಶಾಯನಮಃ | ಅಸ್ಯಶ್ರೀಶನೈಶ್ಚರ ಸ್ತೋತ್ರಸ್ಯ |
ದಶರಥ ಋಷಿಃ | ಶನೈಶ್ಚರೋ ದೇವತಾ |
ತ್ರಿಷ್ಟುಪ್ ಛಂದಃ | ಶನೈಶ್ಚರ ಪ್ರೀತ್ಯಥ್ರ್ಯೇ ಜಪೇ ವಿನಿಯೋಗಃ |
ದಶರಥ ಉವಾಚ |
ಕೋಣೋಂತಕೋ ರೌದ್ರ ಯಮೋsಥ ಬಭ್ರುಃ
ಕೃಷ್ಣಃ ಶನಿಃ ಪಿಂಗಲ ಮಂದ ಸೌರಿಃ |
ನಿತ್ಯಂ ಸ್ಮೃತೋ ಯೋ ಹರತೇ ಚ ಪೀಡಾಂ
ತಸ್ಮೈ ನಮಃ ಶ್ರೀರವಿನಂದನಾಯ | 1 |
ಸುರಾಸುರಾಃ ಕಿಂಪುರುಷೋರಗೇಂದ್ರಾ
ಗಂಧರ್ವವಿದ್ಯಾಧರಪನ್ನಗಾಶ್ಚ |
ಪೀಡ್ಯಂತಿ ಸರ್ವೇ ವಿಷಮ ಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ | 2 |
ನರಾನರೇಂದ್ರಾಃ ಪಶವೋ ಮೃಗೇಂದ್ರಾ
ವನ್ಯಾಶ್ಚ ಯೇ ಕೀಟಪತಂಗಬೃಂಗಾಃ |
ಪೀಡ್ಯಂತಿ ಸರ್ವೇ ವಿಷಮ ಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ | 3 |
ದೇಶಾಶ್ಚ ದುರ್ಗಾಣಿವನಾನಿ ಯತ್ರ ಸೇನಾ
ನಿವೇಶಾಃ ಪುರಪತ್ತನಾನಿ |
ಪೀಡ್ಯಂತಿ ಸರ್ವೇ ವಿಷಮ ಸ್ಥಿತೇನ
ತಸ್ಮೈ ನಮಃ ಶ್ರೀರವಿನಂದನಾಯ | 4 |
ತಿಲೈರ್ಯವೈರ್ಮಾಷಗುಡಾನ್ನ ದಾನೈರ್ಲೋಹೇನ
ನೀಲಾಂಬರ ದಾನೇನ ತೋವಾ |
ಪ್ರೀಣಾತಿಮಂತ್ರೈರ್ನಿಜವಾಸರೇಚ
ತಸ್ಮೈ ನಮಃ ಶ್ರೀರವಿನಂದನಾಯ | 5 |
ಪ್ರಯಾಗಕೂಲೇ ಯಮುನಾತಟೇ ಚ
ಸರಸ್ವತೀ ಪುಣ್ಯಜಲೇ ಗುಹಾಯಾಮ್ |
ಯೋಯೋಗಿನಾಂ ಧ್ಯಾನಗತಾsಪಿ ಸೂಕ್ಷ್ಮ
ಸ್ತಸ್ಮೈ ನಮಃ ಶ್ರೀರವಿನಂದನಾಯ | 6 |
ಅನ್ಯಪ್ರದೇಶಾತ್ ಸ್ವಗೃಹಂ ಪ್ರವಿಷ್ಟ
ಸ್ತದೀಯವಾರೇ ಸ ನರಃ ಸುಖೀಸ್ಯಾತ್ |
ಗೃಹಾದ್ಗತೋ ಯೋ ನ ಪುನಃಪ್ರಯಾತಿ
ತಸ್ಮೈ ನಮಃ ಶ್ರೀರವಿನಂದನಾಯ | 7 |
ಸ್ರಷ್ಟಾ ಸ್ವಯಂ ಭೂರ್ಭುವನತ್ರಯಸ್ಯ
ತ್ರಾತಾಹರೀಶೋ ಹರತೇ ಪಿನಾಕೀ |
ಏಕಾಸ್ತ್ರಿಧಾ ಋಗ್ಯಜುಃಸಾಮ ಮೂರ್ತಿ
ತಸ್ಮೈ ನಮಃ ಶ್ರೀರವಿನಂದನಾಯ | 8 |
ಶನ್ಯಷ್ಟಕಂ ಯಃ ಪರಯತಃ ಪ್ರಭಾತೇ
ನಿತ್ಯಂ ಸುಪುತ್ರೈಃ ಪಶು ಬಾಂಧವೈಶ್ಚ |
ಪಠೇತುಸೌಖ್ಯಂ ಭುವಿ ಭೋಗಯುಕ್ತಃ
ಪ್ರಾಪ್ನೋತಿ ನಿರ್ವಾಣ ಪದಂ ತದಂತೇ | 9 |
|| ಪಿಪ್ಪಲಾದ ಉವಾಚ ||
ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಸ್ತುತೇ |
ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಸ್ತುತೇ ||
ನಮಸ್ತೇ ರೌದ್ರದೇಹಾಯ ನಮಸ್ತೇ ಚ ಅಂತಕಾಯ ಚ |
ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ ||
ನಮಸ್ತೇ ಮಂದ ಸಂಜ್ಞಾಯ ಶನೈಶ್ಚರ ನಮೋಸ್ತುತೇ |
ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ ||
ಕೋಣಸ್ಥಃಪಿಂಗಲೋಬಭ್ರುಃ ಕೃಷ್ಣೋ ರೌದ್ರೋsಂತಕೋ ಯಮಃ |
ಸೌರಿಃಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ |
ಏತಾನಿ ದಶನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |
ಶನೈಶ್ಚರ ಕೃತಾ ಪೀಡಾ ನ ಕದಾಚಿತ್ ಭವಿಷ್ಯತಿ || 11 ||
ಇತಿ ಬ್ರಹ್ಮಾಂಡ ಪುರಾಣೇ ಶನೈಶ್ಚರ ಸ್ತೋತ್ರಂ ಸಂಪೂರ್ಣಂ ||
*****
ಶ್ರೀಶನೈಶ್ಚರ ವಜ್ರಪಂಜರ ಕವಚ-
ಶ್ರೀಗಣೇಶಾಯನಮಃ |
ಅಸ್ಯ ಶ್ರೀಶನೈಶ್ಚರ ಕವಚ ಸ್ತೋತ್ರಮಂತ್ರಸ್ಯ ಕಶ್ಯಪ ಋಷಿಃ
ಅನುಷ್ಟುಪ್ ಛಂದಃ ಶನೈಶ್ಚರೋ ದೇವತಾ ಶೀಂಶಕ್ತಿಃ ಶೂಂಕೀಲಕಂ
ಶನೈಶ್ಚರ ಪ್ರೀತ್ಯರ್ಥೇ ಜಪೇ ವಿನಿಯೋಗಃ ||
ನೀಲಾಂಬರೋ ನೀಲವಪುಃ ಕಿರೀಟಿ
ಗೃಧೃಸ್ಥಿತಸ್ತ್ರಾಸಕರೋ ಧನುಷ್ಮಾನ್ ||1||
ಬ್ರಹ್ಮ ಉವಾಚ-
ಶೃಣುಧ್ವಮೃಷಯಃ ಸರ್ವೇ ಶನಿ ಪೀಡಾಹರಂ ಮಹತ್ |
ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ ||2||
ಕವಚಂ ದೇವತಾವಾಸಂ ವಜ್ರಪಂಜರ ಸಂಜ್ಞಕಮ್ |
ಶನೈಶ್ಚರ ಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ ||3||
ಓಂ ಶ್ರೀಶನೈಶ್ಚರಃಪಾತು ಭಾಲಂ ಮೇ ಸೂರ್ಯನಂದನಃ |
ನೇತ್ರೇ ಛಾಯಾತ್ಮಜಃಪಾತು ಕರ್ಣೌಯಮಾನುಜಃ ||4||
ನಾಸೌ ವೈವಸ್ವತಃಪಾತು ಮುಖಂ ಮೇ ಭಾಸ್ಕರಃಸದಾ |
ಸ್ನಿಗ್ಧ ಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ ||5||
ಸ್ಕಂದೌಪಾತು ಶನೈಶ್ಚೈವ ಕರೌ ಪಾತು ಶುಭಪ್ರದಃ |
ವಕ್ಷಃಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ ||6||
ನಾಭಿಂ ಗ್ರಹಪತಿಃಪಾತು ಮಂದಃಪಾತು ಕಟಿಂತಥಾ |
ಊರೂ ಮಮಾಂತಕಃ ಪಾತು ಯಮೋ ಜಾನುಯುಗ್ಮ ತಥಾ ||7||
ಪಾದೌ ಮಂದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ |
ಅಂಗೋಪ ಅಂಗಾನಿ ಸರ್ವಾಣಿ ರಕ್ಷೇತ್ ಮೇ ಸೂರ್ಯನಂದನಃ ||8||
ಇತ್ಯೇತದ್ ಕವಚಂ ದಿವ್ಯಂ ಪಠೇತ್ ಸೂರ್ಯಸುತಸ್ಯ ಯಃ |
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ ||9||
ವ್ಯಯಜನ್ಮ ದ್ವಿತೀಯಸ್ತೋ ಮೃತ್ಯುಸ್ಥಾನಗತೋಪಿ ವಾ |
ಕಲತ್ರಸ್ಥೋ ಗತೋವಾಪಿ ಸುಪ್ರೀತಸ್ತು ಸದಾಶನಿ ||10||
ಅಷ್ಟಮಸ್ತೇ ಸೂರ್ಯಸುತೇ ವ್ಯಯೇ ಜನ್ಮ ದ್ವಿತೀಯಗೇ |
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ ||11||
ಇತ್ಯೇತ್ ಕವಚಂ ದಿವ್ಯಂ ಸೌರೇರ್ಯಃನಿರ್ಮಿತಂ ಪುರಾ |
ದ್ವಾದಶಾಷ್ಟಮ ಜನ್ಮಸ್ಥ ದೋಷಾನ್ ನಾಶಯತೇ ಸದಾ |
ಜನ್ಮಲಗ್ನ ಸ್ಥಿತಾನ್ ದೋಷಾನ್ ನಾಶಯತೇ ಪ್ರಭುಃ ||12||
ಇತಿ ಶ್ರೀಶನೈಶ್ಚರ ಕವಚಂ ಸಂಪೂರ್ಣಮ್ ||
****
ಶ್ರೀ ಮಾರ್ಕಂಡೇಯಕೃತ ಮೃತ್ಯುಂಜಯ ಸ್ತ್ರೋತಂ:
ಓಂಅಸ್ಯಶ್ರೀ ಮೃತ್ಯುಂಜಯ ಸ್ತೋತ್ರ ಮಂತ್ರಸ್ಯ
ಮಾರ್ಕಂಡೇಯ ಋಷಿಃ ಅನುಷ್ಟುಪ್ ಛಂದಃ
ಶ್ರೀರುದ್ರೋದೇವತಾ ಗೌರೀ ಶಕ್ತಿಃ
ಮಮ ಆರೋಗ್ಯ ವೃಧ್ಯರ್ಥಂ ಅಪಮೃತ್ಯು
ಪರಿಹಾರಾರ್ಥಂ ಚ ಜಪೇ ವಿನಿಯೋಗಃ |
ರತ್ನಸಾನುಶರಾಸನಂ ರಜತಾದಿಶೃಂಗನಿಕೇತನಂ
ಶಿಂಜಿನೀಕೃತಪನ್ನಗೇಶ್ವರ ಮಚ್ಯುತಾನಲಸಾಯಕಮ |
ಕ್ಷಿಪ್ರದಗ್ಧಪುರತ್ರಯಂ ತ್ರಿದಶಾಲಯೈರಭಿ ವಂದಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮ |
ಪಂಚಪಾದಪ ಪುಷ್ಪಗಂಧಿ ಪದಾಂಬುಜದ್ವಯ ಶೋಭಿತಂ
ಭಾಲಲೋಚನಜಾತಪಾವಕ ದಗ್ಧಮನ್ಮಥವಿಗ್ರಹಮ್ |
ಭಸ್ಮದಾದಿಗ್ಧ ಕಲೇವರಂ ಭವನಾಶಿನಂ ಭವಮವ್ಯಯಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮ |
ಮತ್ತವಾರಣಮುಖ್ಯಚರ್ಮ ಕೃತೋತರೀಯ ಮನೋಹರಂ
ಪಂಕಜಾಸನ ಪದ್ಮಲೋಚನ ಪೂಜಿತಾಂಘ್ರಿ ಸರೋರುಹಮ್ |
ದೇವಸಿದ್ಧತರಂಗಿಣೀಕರ ಸಿಕ್ತಶೀತಲ ಜಟಾಧರಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮ |
ಶರಣಾಗತಿ ಮಂತ್ರಮ್
ನ ಜಾನಾಮಿ ಯೋಗಂ ಜಪಂ ನೈವ ಪೂಜಾಂ
ನತೋಹಂ ಸದಾ ಸರ್ವದಾ ದೇವ ತುಭ್ಯಂ|
ಜರಾಜನ್ಮ ದುಃಖೌಘ ತಾತಪ್ಯಮಾನಂ ಪ್ರಭೋ
ಪಾಹಿ ಪಾಪಾತ್ ನಮಾಮೀಶ ಶಂಭೋ||
ದಾನಮ್ - ವಾಯನದಾನ-
ಸಾಮಾನ್ಯವಾಗಿ ನಾಲ್ಕುಜನರಿಗೆ ಊಟಕ್ಕೆ ಆಗುವಷ್ಟು ಅಕ್ಕಿ, ಹಿಟ್ಟು, ತರಕಾರಿ, ಬೇಳೆ, ಬೆಲ್ಲ, ಇತ್ಯಾದಿ ಸಮಗ್ರ ಆಹಾರ ಪದಾರ್ಥಗಳು,
ಕಪ್ಪು ವಸ್ತ್ರ, ಎಳ್ಳು, ಕಬ್ಬಿಣ ಅಥವಾ ಸ್ಟೀಲ್ ಪಾತ್ರೆ, ಎಣ್ಣೆ ಪದಾರ್ಥಗಳು, ಕುಂಬಳಕಾಯಿ, ನೀರಲಹಣ್ಣು, ಕಪ್ಪುದ್ರಾಕ್ಷಿ ಅಥವಾ ದಾಳಿಂಬೆ ಹಣ್ಣುಗಳು ತಾಂಬೂಲ ದಕ್ಷಿಣಾ ಸಹಿತ ಯಥಾ ಶಕ್ತಿ ದಾನ.
ಸಮಾಪನೆ
ಅನೇನ ಮಯಾ ಕೃತ ತ್ರಯೋವಿಂಶತಿಶತಸಹಸ್ರ ಶ್ರೀಶನೈಶ್ಚರ ಜಪ ಅನುಷ್ಠಾನೇನ ಕುಲದೇವತಾ ಶ್ರೀಲಕ್ಷ್ಮಿವೇಂಕಟೇಶ ಪ್ರೀಯತಾಂ ಪ್ರೀತೋಭವತು.
ಶ್ರೀಕೃಷ್ಣಾರ್ಪಣಮಸ್ತು
****
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ತರಣಿನಂದನ ಶನೈಶ್ಚರ ನಿನ್ನ ಪಾದಾಬ್ಜ
ಕೆರಗಿ ಬಿನ್ನೈಪೆ ಬಹುಜನ್ಮ / ಬಹುಜನ್ಮಕೃತಪಾಪ-
ಪರಿಹಾರಮಾಡಿ *ಸುಖವೀಯೋ//
ಛಾಯಾತನುಜ ಮನಃಕಾಯಕ್ಲೇಶಗಳಿಂದ
ಆಯಾಸ ಪಡುವಂಥ ಸಮಯದಿ / ಸಮಯದಲಿ ಲಕ್ಷ್ಮೀನಾ-
ರಾಯಣನ ಸ್ಮರಣೆ ಕರುಣಿಸೋ //
ಶನಿದೇವರು ಎಲ್ಲರೂ ಕಷ್ಟಗಳನ್ನು ನೀಡುತ್ತಾರೆ ಎನ್ನುವ ಭ್ರಮೆ ತುಂಬಾ ಜನರಿಗೆ ಇರ್ತದೆ. ಆದರೆ ಶನಿದೇವರು ಅಥವಾ ಇತರ ಗ್ರಹಗಳು ನಮ್ಮ ಕರ್ಮಾನುಸಾರವಾಗಿ ಮಾತ್ರವೇ ಫಲ ನೀಡುವವು.. ಹೀಗಾಗಿ ಗ್ರಹಗಳ, ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಹರಿಯ ಪ್ರಾರ್ಥನೆ ಎಲ್ಲ ಗ್ರಹದೋಷಗಳನ್ನು ಪರಿಹಾರ ಮಾಡ್ತವೆ ಅನ್ನುವುದರನ್ನು ಅರಿತು, ಸದಾ ಭಕ್ತಿಯಿಂದ ಗ್ರಹಗಳ ಸ್ತೋತ್ರವನ್ನು ಮಾಡಬೇಕು..
ಛಾಯಾದೇವಿಯರ, ಸೂರ್ಯದೇವರ ಪುತ್ರನಾದ ಶನೈಶ್ಚರನ ಜಯಂತಿ ಇಂದು. ಮೇಲಿನ ಶ್ರೀ ಮಾನವಿ ಪ್ರಭುಗಳ ತತ್ವಸುವ್ವಾಲಿಯಲ್ಲಿ ತಿಳಿಸಿದಂತೆ, ಹೇ ಛಾಯಾ ಮಾರ್ತಾಂಡ ಸಂಭೂತನಾದ ಶನಿದೇವನೇ! ಕಷ್ಟಗಳು ಬಂದಾಗ ಅವುಗಳನ್ನು ಗೆಲ್ಲುವ ಮನೋಧೈರ್ಯವನ್ನು, ಅಂಥಾ ಕಷ್ಟದ ಸಮಯದಲ್ಲಿ ಸಹಾ ಪರಮಾತ್ಮನ ಧ್ಯಾನವನ್ನು ತಪ್ಪಿಸದೆ ಮಾಡಿಸುವಂಥಲೂ ಸದಾ ನೀ ಮಾಡು ಎಂದು ಶನೈಶ್ಚರನ ಅಂತರ್ಗತ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡೋಣ, ಶನಿದೇವರ ಕಾರುಣ್ಯ ಸದಾ ನಮ್ಮ ಎಲ್ಲರಮೇಲಿರುವಂತೆ....
ಹಾಗೆಯೇ... ಇಂದು ನವಗ್ರಹಗಳ ಸ್ತೋತ್ರ, ಶನೈಶ್ಚರನ ಸ್ತುತಿ, ಹಾಗೂ ರಾಜರ ಗ್ರಹ ಸ್ತೋತ್ರ ಪಠಣೆ ಮಾಡೋಣ...
ಪಾರಾಯಣಕ್ಕೆ ಅನುಕೂಲವಾಗುವಂತೆ ಶ್ರೀ ರಾಜರ ನವಗ್ರಹಸ್ತೋತ್ರ
👇🏽👇🏽👇🏽👇🏽👇🏽👇🏽👇🏽👇🏽
ಶ್ರೀ ವಾದಿರಾಜತೀರ್ಥಪೂಜ್ಯಪಾದ ವಿರಚಿತಮ್ ಶ್ರೀನವಗ್ರಹಸ್ತೋತ್ರಮ್
ಭಾಸ್ವಾನ್ ಮೇ ಭಾಸಯೇತ್ ತತ್ತ್ವಂ ಚಂದ್ರಶ್ಚಾಹ್ಲಾದಕೃದ್ಭವೇತ್ | ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ || ೧ ||
ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ | ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇಽರ್ಪಯೇತ್ || ೨ ||
ರಾಹುರ್ಮೇ ರಹಯೇದ್ರೋಗಂ ಗ್ರಹಾಃ ಸಂತು ಕರಗ್ರಹಾಃ | ನವಂ ನವಂ ಮಮೈಶ್ವರ್ಯಂ ದಿಶಂತ್ವೇತೇ ನವಗ್ರಹಾಃ || ೩ ||
ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ | ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ || ೪ ||
ಹರೇರನುಗ್ರಹಾರ್ಥಾಯ ಶತೄಣಾಂ ನಿಗ್ರಹಾಯ ಚ | ವಾದಿರಾಜಯತಿಪ್ರೋಕ್ತಂ ಗ್ರಹಸ್ತೋತ್ರಂ ಸದಾ ಪಠೇತ್ || ೫ || ||
ಇತಿ ಶ್ರೀವಾದಿರಾಜತೀರ್ಥಪೂಜ್ಯಪಾದವಿರಚಿತಂ ನವಗ್ರಹಸ್ತೋತ್ರಮ್ ಸಂಪೂರ್ಣಂ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಭೈಷ್ಮೀ ಸತ್ಯಾ ಸಮೇತ ಶ್ರೀ ಕೃಷ್ಣಾರ್ಪಣಮಸ್ತು 🙏🏽
ನಾದನೀರಾಜನದಿಂ ದಾಸಸುರಭಿ 🙏🏽
***
ಶನಿಯ ಕಥೆ:-
ಕಲಿಯುಗದಲ್ಲಿ ಮನುಷ್ಯ ತನ್ನ ಜೀವನ್ಮುಕ್ತಿಗಾಗಿ ಶುದ್ಧವಾದ ಮನಸ್ಸಿನಿಂದ ಭಗವಂತನ ಕಥೆಗಳನ್ನು ಶ್ರವಣ ಮಾಡುವುದು, ಕೀರ್ತನೆ ಭಜನೆ ಮಾಡುವುದರಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಸಕಲ ದೋಷ ನಿವಾರಣೆಗಾಗಿ, ಶನಿಮಹಾತ್ಮೆ ಕಥೆಯನ್ನು ಕೇಳುವುದು, ಹೇಳುವುದು ಸರಳ ಪರಿಹಾರವಾಗಿದೆ.
ಸೃಷ್ಟಿಯ ಆದಿಯಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾದ ಕಶ್ಯಪ ಮಹರ್ಷಿಗಳಿಗೆ ದಿತಿ ಮತ್ತು ಅದಿತಿ ಎಂಬ ಇಬ್ಬರು ಪತ್ನಿಯರು. 'ದಿತಿ' ಯ ಗರ್ಭದಲ್ಲಿಹಲವಾರು ರಾಕ್ಷಸರು ದೈತ್ಯರು ಜನಿಸಿದರು. ಅದಿತಿಯ ಗರ್ಭದಲ್ಲಿ ಇಂದ್ರ, ಚಂದ್ರ, ಸೇರಿದಂತೆ 33 ಕೋಟಿ ದೇವತೆಗಳು ಜನಿಸಿ ತಾಯಿ ಯಾದಳು. ಲೋಕಪಾಲಕನಾದ ಸೂರ್ಯನು, ಕಶ್ಯಪ- ಅದಿತಿಯರಿಗೆ ಜನಿಸಿದ ಮಗ. ಮುಂದೆ ಸೂರ್ಯನು ವಿಶ್ವಕರ್ಮನ ಮಗಳಾದ ಸಂಧ್ಯಾ ದೇವಿಯನ್ನು ವಿವಾಹವಾಗುತ್ತಾನೆ. ಇವರಿಬ್ಬರಿಗೆ ಮೂರು ಮಕ್ಕಳು. ಮೊದಲನೆಯ ಮಗು ವೈವಸತ್ವ ಮನುವಾದರೆ, ಎರಡನೆಯ ಮಗು ಯಮ ದೇವ ಮತ್ತು ಮೂರನೆಯ ಮಗುವೇ ಯಮುನಾ ದೇವಿ.
ಸೂರ್ಯನ ತಾಪವನ್ನು ತಡೆದುಕೊಳ್ಳಲು ಸಂಧ್ಯಾ ದೇವಿಗೆ ಸಾಧ್ಯವಾಗದೇ, ಇದರಿಂದ ತಪ್ಪಿಸಿಕೊಳ್ಳಲು ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ. ತಪ್ಪಸ್ಸಿಗೆ ಹೋಗುವ ಮುನ್ನ ತನ್ನ ಮಕ್ಕಳ ಪಾಲನೆ ಮಾಡಲು ತನ್ನ ನೆರಳು ಛಾಯಾ ದೇವಿಯನ್ನು ಸೃಷ್ಟಿ ಮಾಡುತ್ತಾಳೆ. ಸೂರ್ಯ ದೇವನಿಗೆ ಸಂಧ್ಯಾ ದೇವಿಯ ರೂಪದಲ್ಲಿ ಇರುವುದು ಛಾಯಾ ಎಂದು ತಿಳಿಯುವುದಿಲ್ಲ. ಹಾಗಾಗಿ ಆವರಿಬ್ಬರಿಗು ಕೂಡ ಮಗುವೊಂದು ಜನಿಸುತ್ತದೆ. ಅವರೇ ಭಗವಂತ ಶನಿದೇವ.
ಯುವಕನಾದ ಮೇಲೆ ಶನಿಯು ಚಿತ್ರರತನ ಮಗಳಾದ 'ದಾಮಿನಿ' ಎಂಬ ಕನ್ಯೆಯ ಜೊತೆ ಮದುವೆ ಯಾಯಿತು. ದಾಮಿನಿ ದೈವ ಭಕ್ತೆ, ಸೌಂದರ್ಯವತಿ ಹಾಗೂ ಜಾಣೆ. ದಾಮಿನಿ ಸೇರಿದಂತೆ ಶನಿದೇವನಿಗೆ ಎಂಟು ಜನ ಪತ್ನಿಯರು ಇದ್ದರು. ಒಮ್ಮೆ ದಾಮಿನಿಗೆ ಪತಿ ಶನಿಯಿಂದ ಮಗುವನ್ನು ಪಡೆಯ ಬೇಕೆಂದು ಆಸೆಯಾಯಿತು ಆಗ ಶನಿಯ ಬಳಿ ಬರುತ್ತಾಳೆ ಆ ಸಮಯದಲ್ಲಿ ಶನಿ ಈಶ್ವರನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಿದ್ದನು. ಏನೇ ಆದರೂ ಅವನು ತಪಸ್ಸಿನಿಂದ ಈಚೆ ಬರಲಿಲ್ಲ. ದಾಮಿನಿ ಪ್ರಯತ್ನಗಳೆಲ್ಲವೂ ವಿಫಲವಾದವು. ಸಿಟ್ಟಿನಿಂದ ಅವಳು, ನಾನು ಬಂದರೂ ಮಾತಾಡದೆ, ಸುಮ್ಮನಿದ್ದ ನೀವು ಯಾರ ಮುಂದೆ ನಿಂತಾಗ ನಿಮ್ಮ ಮುಖವನ್ನು ಅವರು ನೋಡಿದರೆ, ಇಲ್ಲ ಸಲ್ಲದ ಅಪರಾಧಕ್ಕೆ ಸಿಲುಕಿಕೊಳ್ಳಲಿ. ನನ್ನ ಆಸೆಯನ್ನು ಪೂರೈಸದ ನಿಮ್ಮ ದೃಷ್ಟಿ ಯಾರ ಮೇಲೆ ಬಿದ್ದರೂ ಅವರು ಸಂಕಷ್ಟಗಳಿಗೆ ಒಳಗಾಗಲಿ ಎಂದು ಪತಿ ಶನಿಯನ್ನು ಶಪಿಸಿದಳು. ಶನಿದೇವ ಒಳ್ಳೆಯವನೇ ಆಗಿದ್ದನು. ಆದರೆ ಪತ್ನಿಯ ಶಾಪದಿಂದಾಗಿ ಶಿಕ್ಷೆಯನ್ನು ಅನುಭವಿಸಬೇಕಾಯಿತು. ತಪಸ್ಸು ಮುಗಿಸಿ ಪತ್ನಿಯ ಮುಂದೆ ನಿಂತು ಕ್ಷಮೆ ಯಾಚಿಸಿದನು ಆದರೆ ಕೊಟ್ಟ ಶಾಪವನ್ನು ವಾಪಸ್ಸು ತೆಗೆದುಕೊಳ್ಳಲು ಆಗಲಿಲ್ಲ. ಅಂದಿನಿಂದ ಶನಿದೇವನು ತನ್ನ ಭಕ್ತರಿಗೆ ತನ್ನಿಂದ ಯಾವುದೇ ತೊಂದರೆ ಆಗಬಾರದೆಂದು ಅವನು ತಲೆ ಎತ್ತದೆ ತಲೆ ಬಗ್ಗಿಸಿ ನಡೆಯುತ್ತಾನೆ.
ಒಂದು ಕಥೆ:- ಒಂದು ಊರಲ್ಲಿ ಒಬ್ಬ ಬ್ರಾಹ್ಮಣ ಅವನ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದ. ಊರ ದೇವಾಲಯದ ಪೂಜೆ ಹಾಗೂ ವಿಶೇಷ ದಿನಗಳಲ್ಲಿ, ಪೂಜೆ ವ್ರತ ಕಥೆಗಳು ಇದ್ದಲ್ಲಿ ಮಾಡಿ ಬರುವ ಆದಾಯದಿಂದ ಅವನ ಜೀವನ ಸಾಗುತ್ತಿತ್ತು. ಇತ್ತೀಚಿಗೆ ಕೆಲ ದಿನ ಗಳಿಂದ ರಾತ್ರಿ ಮಲಗಿದಾಗ ಕನಸಿನಲ್ಲಿ ನೀಲಿ ಬಟ್ಟೆ ಧರಿಸಿದ ವ್ಯಕ್ತಿ ಎದುರಿಗೆ ನಿಂತು "ನಾನು ನಿನ್ನನ್ನು ನೋಡುತ್ತೇನೆ, ನಾನು ನಿನ್ನನ್ನು ನೋಡುತ್ತೇನೆ" ಎಂದ ಹಾಗೆ ಆಗುತ್ತಿತ್ತು. ಇದನ್ನು ಪತ್ನಿಗೆ ಹೇಳಿದನು.ಅವಳು ಹೇಳಿದಳು ನೀಲಿ ವಸ್ತ್ರ ಹಾಕಿ ಬಂದವನು ಶನಿಯಾಗಿದ್ದಾನೆ. ಶನಿ ನಿಮ್ಮ ಮೇಲೆ ದೃಷ್ಟಿ ಬೀರಿ ನಿಮಗೆ ತೊಂದರೆ ಕೊಡುತ್ತಾನೆ.
ಇದಕ್ಕೆ ಉಪಾಯ ಎಂದರೆ, ಶನಿ ಕನಸಿನಲ್ಲಿ ಕೇಳಿದಾಗ ನೀವು ಹೇಳಬೇಕು ನಿನ್ನ ದೃಷ್ಟಿ ಬೀರು, ಆದರೆ ಒಂದುವರೆ ಗಂಟೆಗಳಕ್ಕಿಂತ ಒಂದು ನಿಮಿಷವು ಹೆಚ್ಚಿಗೆ ದೃಷ್ಟಿ ಬೀರಬಾರದು ಎಂದು ಹೇಳಬೇಕು. ಈ ರೀತಿ ಹೇಳಿಕೊಟ್ಟ ಮೇಲೆ ಅಂದು ರಾತ್ರಿ ಮಲಗಿದಾಗ ಮತ್ತೆ ಬ್ರಾಹ್ಮಣನ ಕನಸಿನಲ್ಲಿ ಶನಿ ಬಂದನು. ಯಾಕೆ ಬಂದೆ ಹೇಳು ಎಂದು ಕೇಳಿದ ಬ್ರಾಹ್ಮಣನಿಗೆ ಶನಿಯು ನಾನು ಏಳುವರೇ ವರ್ಷ ಕಾಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದನು. ಬ್ರಾಹ್ಮಣ ಅದು ಸಾಧ್ಯವಿಲ್ಲ ಏಳುವರೆ ವರ್ಷ ಜಾಸ್ತಿ ಆಗುತ್ತದೆ ಎಂದನು. ಆಗ ಶನಿ ಹಾಗಾದರೆ ಐದು ವರ್ಷಗಳು ಎಂದನು, ಅದು ಸಾಧ್ಯವಿಲ್ಲ, ಎರಡುವರೆ ವರ್ಷ, ಇದೂ ಜಾಸ್ತಿಯಾಯ್ತು , ಆಗ ಶನಿಯು ಒಂದುವರೆ ಗಂಟೆಗಳ ಸ್ಥಿತಿಯನ್ನು ಎದುರಿಸಲೇಬೇಕು ಎಂದನು ಕೂಡಲೇ ಬ್ರಾಹ್ಮಣ ಒಪ್ಪಿದನು.
ಮರುದಿನ ಬೆಳಿಗ್ಗೆ ಎದ್ದು ಬ್ರಾಹ್ಮಣ ಪತ್ನಿಗೆ ಹೇಳಿದ, ಶನಿ ತನ್ನ ದೃಷ್ಟಿದೋಷವನ್ನು ಒಂದುವರೆ ಗಂಟೆ ಕಾಲ ನನ್ನ ಮೇಲೆ ಬೀರಿದ್ದಾನೆ. ನಾನು ಕಾಡಿಗೆ ಹೋಗಿ ಪೂಜೆ, ಧ್ಯಾನ ಮಾಡುತ್ತೇನೆ. ಎರಡು ಬಂಗಾರದ ನಾಣ್ಯಗಳನ್ನು ಕೊಡು. ಕಾಡಿನಲ್ಲಿ ತ್ರೈಮಾಸಿಕ ಪೂಜೆ ಮುಗಿದ ಮೇಲೆ ಹಿಂತಿರುತ್ತೇನೆ ಅಲ್ಲಿಯವರೆಗೂ ಮನೆ ಹಾಗೂ ಮಕ್ಕಳ ಕಡೆ ನಿಗಾ ವಹಿಸು ಎಂದು ಹೇಳಿ ಕಾಡಿಗೆ ಹೊರಟನು.
ಅವನು ಅಂದುಕೊಂಡಂತೆ ಧ್ಯಾನಕ್ಕೆ ಕುಳಿತನು. ಒಂದು ಪ್ರಹರ ಮುಗಿಯಿತು. ಹೇಗೂ ಇನ್ನು ಕಾಲು ಪ್ರಹರ ಮಾತ್ರ ಉಳಿದಿದೆ ಮನೆಗೆ ಹೋಗುವಾಗ ಅದು ದಾರಿಯಲ್ಲಿಯೇ ಮುಗಿಯುತ್ತದೆ ಎಂದು ಧ್ಯಾನದಿಂದ ಎದ್ದು ಮನೆ ಕಡೆ ಹೊರಟನು. ಅದಕ್ಕಾಗಿ ಕಾಯುತ್ತಿದ್ದ ಶನಿ ಬ್ರಾಹ್ಮಣ ಬರುವ ಮಾರ್ಗದಲ್ಲಿ ಕಲ್ಲಂಗಡಿ ಹಣ್ಣುಗಳ ತೋಟ ಮಾಡಿದನು. ಹಣ್ಣುಗಳನ್ನು ಕಂಡ ಬ್ರಾಹ್ಮಣ ಸುತ್ತಮುತ್ತ ನೋಡುತ್ತಾ ಕೂಗಿದನು ಯಾರು ಇರಲಿಲ್ಲ ಒಂದು ಚಿನ್ನದ ನಾಣ್ಯವನ್ನು ಇಟ್ಟು ಎರಡು ಕಲ್ಲಂಗಡಿ ಹಣ್ಣುಗಳನ್ನು ಚೀಲದಲ್ಲಿ ತುಂಬಿಕೊಂಡು ಮನೆ ಕಡೆ ಹೊರಟನು.
ಶನಿಯು ರಾಜನ ಇಬ್ಬರು ಸೈನಿಕರಾಗಿ ಬ್ರಾಹ್ಮಣನ ಹೋಗುವ ಮಾರ್ಗದಲ್ಲಿ ನಿಂತು ಚೀಲದಲ್ಲಿ ಇರುವುದು ಏನು ಎಂದು ಕೇಳಿದರು ಬ್ರಾಹ್ಮಣ ಹೇಳಿದಾಗ ಅದನ್ನು ಪರೀಕ್ಷಿಸಿದರು. ಆದರೆ ಆ ಚೀಲದಲ್ಲಿ
ಹಣ್ಣುಗಳ ಬದಲು ರಾಜನ ಇಬ್ಬರು ಗಂಡು ಮಕ್ಕಳ ತಲೆಗಳನ್ನು ನೋಡಿ ಬ್ರಾಹ್ಮಣನನ್ನು ರಾಜ್ಯಸಭೆಗೆ ಎಳೆದು ತಂದರು. ಸೈನಿಕರು ಎಲ್ಲವನ್ನು ರಾಜನಿಗೆ ಹೇಳಿದರು. ತನ್ನ ಮಕ್ಕಳ ತಲೆಗಳನ್ನು ನೋಡಿದ ರಾಜನು ದುಃಖದಿಂದ, ಕೋಪದಿಂದ ಬ್ರಾಹ್ಮಣನನ್ನು ಗಲ್ಲಿಗೇರಿಸಲು ಹೇಳಿದನು. ಬ್ರಾಹ್ಮಣ ನಿಗೆ ತಿಳಿಯಿತು ಇದು ಶನಿಯ ಪ್ರಭಾವವೆಂದು,
ಅವನು ಕೊನೆಯದಾಗಿ ರಾಜನಲ್ಲಿ ಬೇಡಿಕೊಂಡನು ನಾನು ಸಾಯುವ ಮೊದಲು ಶಿವನ ಪೂಜೆಯನ್ನು ಮಾಡಬೇಕು ಎಂದನು. ರಾಜ ಅನುಮತಿ ಕೊಟ್ಟನು, ಬ್ರಾಹ್ಮಣನು ಅಷ್ಟು ಸಮಯ ಪೂಜೆ ಧ್ಯಾನ ಕಳೆದುದರಿಂದ ಅವನ ಶನಿ ದೋಷವೆಲ್ಲವೂ ನಿವಾರಣೆಯಾಯಿತು.ಆ ಹೊತ್ತಿಗೆ ರಾಜನ ಮಕ್ಕಳಿಬ್ಬರು ಭೇಟಿ ಮುಗಿಸಿ ಅರಮನೆಗೆ ಬಂದರು. ರಾಜನಂತೂ ಅತ್ಯಾಶ್ಚರ್ಯಗೊಂಡನು. ಬ್ರಾಹ್ಮಣ ನಿಗೆ ನೀನು ಏನು ಚಮತ್ಕಾರ ಮಾಡಿದೆ, ರಾಜನು ಕೇಳಿದನು ಬ್ರಾಹ್ಮಣ ಹೇಳಿದ, ಏನು ಮಾಡಿಲ್ಲ. ಶನಿಯ ಪ್ರಭಾವದಿಂದ ಆರೋಪಕ್ಕೆ ಗುರಿಯಾಗಿದ್ದೆ. ಶನಿಯ ದೆಸೆ ಮುಗಿಯಿತು. ಈಗ ನಾನು ಮುಕ್ತನಾದೆ ಎಂದನು.
ರಾಜನು ಶನಿಯ ದೋಷಕ್ಕೆ ಏನು ಮಾಡಬೇಕು ಎಂದು ಕೇಳಿದನು. ಬ್ರಾಹ್ಮಣ ಹೇಳಿದ, ಕರಿ ಆನೆಯನ್ನು ದಾನ ಕೊಡಬೇಕು, ಕಪ್ಪು ಕುದುರೆ ಯನ್ನು ಶೆಟ್ಟಿಗೆ ಕೊಡಬೇಕು. ಕಪ್ಪುನಾಯಿಗೆ ಎಳ್ಳು, ಹಾಕಿ ಮಾಡಿದ ರೊಟ್ಟಿಯನ್ನು ಕೊಡಬೇಕು. ಅರಳಿ ಮರಕ್ಕೆ ನೀರು ಹಾಕಿ, ಪೂಜಿಸಿ ಪ್ರದಕ್ಷಿಣೆ ನಮಸ್ಕಾರ ಮಾಡಬೇಕು. ಪ್ರದೋಷ ಕಾಲದಲ್ಲಿ, ಕೈ ಕಾಲು ತೊಳೆದುಕೊಂಡು ದೇವರಿಗೆ ದೀಪ ಹಚ್ಚಿ, ಎಳ್ಳೆಣ್ಣೆ ಅಥವಾ ದೀಪ ಹಚ್ಚುವ ಎಣ್ಣೆ ಒಂದು ಅಗಲವಾದ ಚಿಕ್ಕ ಬಟ್ಟಲಲ್ಲಿ ತೆಗೆದು ಕೊಂಡು ಅದಕ್ಕೆ ನಾಲ್ಕಾರು ಕಾಳು ಎಳ್ಳು ಹಾಕಿ ಅಥವಾ (ಸಣ್ಣ ಸಣ್ಣ ಕರಿ ಬಟ್ಟೆ ತುಂಡುಗಳಲ್ಲಿ ಅರ್ಧ ಚಮಚ ಎಳ್ಳು ಹಾಕಿ ಏಳು ಅಥವಾ ಒಂಬತ್ತು ಚಿಕ್ಕ ಚಿಕ್ಕ ಗಂಟು ಕಟ್ಟಿ ಎಳ್ಳೆಣ್ಣೆಯಲ್ಲಿ ಮುಳುಗಿಸಿ ದೇವಸ್ಥಾನದಲ್ಲಿ ದೀಪ ಹಚ್ಚಬೇಕು) ಎಣ್ಣೆ ಒಳಗೆ ಮುಖ ನೋಡಿ, ಈ ಸ್ತೋತ್ರ ಹೇಳಿ, (ಕೆಳಗೆ ಇದೆ) ದೇವರಿಗೆ ನಮಸ್ಕರಿಸಿ ಶನಿ ಅಥವಾ ಆಂಜನೇಯ ದೇವಸ್ಥಾನಗಳಲ್ಲಿ. ದೀಪ ಹಚ್ಚಬೇಕು. ನವಗ್ರಹ ದೇವಸ್ಥಾನಗಳಿಗೆ ಹೋದಾಗ, ನೇರ ದೃಷ್ಟಿಯಿಂದ ನವಗ್ರಹಗಳನ್ನು ನೋಡದೆ ಸ್ವಲ್ಪ ಬದಿಯಲ್ಲಿ ನಿಂತು, ಬೇಡಿಕೊಂಡು ಪ್ರದಕ್ಷಿಣೆ ಬಂದು, ನವಗ್ರಹಗಳಿಗೆ ಬೆನ್ನು ತೋರಿಸದಂತೆ ಈಚೆಗೆ ಬರಬೇಕು. ನವಗ್ರಹ ಪೂಜೆ ಮಾಡಿಸಿ ದಾನ ದಕ್ಷಿಣೆ ಕೊಡಬೇಕು. ಎಲ್ಲವನ್ನು ಕೇಳಿದ ರಾಜನು ಬ್ರಾಹ್ಮಣನಲ್ಲಿ ಕ್ಷಮೆ ಬೇಡಿ, ಫಲ ತಾಂಬೂಲದೊಂದಿಗೆ ಚಿನ್ನದ ನಾಣ್ಯ ತುಂಬಿದ ತೈಲಿಯನ್ನು ಕೊಟ್ಟು ನಮಸ್ಕರಿಸಿದನು.
ಮನೆಗೆ ಬಂದ ಮೇಲೆ ಹೆಂಡತಿಗೆ ನಡೆದ ಸಮಾಚಾರವನ್ನೆಲ್ಲ ಹೇಳಿದನು ಹಾಗೂ ಬ್ರಾಹ್ಮಣನ ಪತ್ನಿ ಚೀಲದಲ್ಲಿ ಏನು ಇದೆ ಎಂದು ಕೇಳಿದಾಗ ಕಲ್ಲಂಗಡಿ ಹಣ್ಣು ಎಂದನು. ಅವಳು ಅದನ್ನು ತೆಗೆದು ನೋಡಿದಾಗ ಕಲ್ಲಂಗಡಿ ಹಣ್ಣಿನ ಬದಲಾಗಿ ಚಿನ್ನದ ನಾಣ್ಯಗಳು ಆಗಿತ್ತು. ಇದು ಹೇಗೆ ಆಯಿತು ಎಂದು ಕೇಳಿದಳು. ಶನಿ ದೆಸೆಯಿಂದ ಕಲ್ಲಂಗಡಿ ಹಣ್ಣುಗಳು ರಾಜನ ಮಕ್ಕಳ ತಲೆಯಾಗಿದ್ದು, ಶನಿದೆಸೆ ಹೋದಮೇಲೆ ಅದು ಚಿನ್ನದ ನಾಣ್ಯವಾಯಿತು ಎಂದನು. ಬ್ರಾಹ್ಮಣನು ಕೈಕಾಲು ತೊಳೆದು ಬಂದು ದೇವರಿಗೆ ತುಪ್ಪದ ದೀಪ ಹಚ್ಚಿ ಗ್ರಹಚಾರ ಕಳೆದ ಸಂತೋಷದಿಂದ ದೇವರಿಗೆ ಭಕ್ತಿ ಪೂರ್ವಕ ನಮಸ್ಕರಿಸಿ, ಶನಿದೇವ ಯಾರಿಗೂ ಇಂತಹ ಸ್ಥಿತಿಯನ್ನು ಎಂದಿಗೂ ಕೊಡಬೇಡ ಎಲ್ಲರ ಮೇಲು ನಿನ್ನ ಕರುಣೆ ಇರಲಿ ಎಂದು ಪ್ರಾರ್ಥಿಸಿಕೊಂಡನು.
"ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ"!
***
*****
" ಶ್ರೀ ಶನೈಶ್ಚರ ಜಯಂತೀ / ಶ್ರೀ ಶನಿ ಮಹಾತ್ಮನ ಜನುಮದಿನ "
ನೀಲಾಂಜನ ಸಮಾಭಾಸಂ
ರವಿಪುತ್ರಂ ಯಮಾಗ್ರಜಂ ।
ಛಾಯಾ ಮಾರ್ತಾಂಡ ಸಂಭೂತಂ
ತಂ ನಮಾಮಿ ಶನೈಶ್ಚರಂ ।।
" ದಿನಾಂಕ : 10.06.2021 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ಅಮಾವಾಸ್ಯೆ - ಶ್ರೀ ಶನಿ ಮಹಾತ್ಮನ ಅವತಾರದ ಶುಭದಿನ "
" ಶ್ರೀ ಶನೈಶ್ಚರ ಸ್ತುತಿ "
" ರಚನೆ "
ಶ್ರೀ ಕವಿಸಾರ್ವಭೌಮ ಕನಕದಾಸರು
ರಾಗ : ಹಂಸಾನಂದೀ ತಾಳ : ಆದಿ
ಶನ್ಯಂತರ್ಗತ ಶ್ರೀನಿವಾಸ ।
ನಿನ್ನ ಶರಣು ಹೊಕ್ಕೆನೊ -
ಕಾಯೋ ಶ್ರೀಶಾ ।। ಪಲ್ಲವಿ ।।
ಯನ್ನ ಜನ್ಮಾಂತರದ ಪಾಪವ ।
ಚನ್ನವಾಗಿಯೆ ತೊಡದು ತವ ಪಾದ ।
ಘನ್ನ ಜ್ಞಾನ ಚಿರಾಯು ಸಂಪದ ।
ಪುಣ್ಯ ಆರೋಗ್ಯಾದಿ ಸಿರಿಯಿತ್ತು ।। ಅ ಪ ।।
ನೀಲಾಂಜನ ಸಮವರ್ಣ ।
ಶೀಲ ರವಿಯ ಪುತ್ರನು ತಾರನಣ್ಣ ।
ಬಾಲೆ ಛಾಯೆಗೆ ಮಾರ್ತಾಂಡನಲಿ ।
ನೀಲನಾಗಿ ಪುಟ್ಟಿದ ಕೃತ ।।
ಜಾಲಕಾಲ ತ್ರಿಂಶತಿಕೊಮ್ಮೆ ದ್ವಾದಶ ।
ಮೂಲರಾಶಿಗೆ ಲೀಲೆಯಿಂಬಹ ।
ಲೋಲಲಾಣ್ಯ ವೃಷಾದ್ರಿಗೊಡೆಯನೆ -
ಮೇಣ್ ಮೇಣ್ ಸುಖವೇಯೋ ದಣಿಸದೆ ।। 1 ।।
ದ್ವಾದಶಾಷ್ಟಮ ಜನ್ಮ ಸ್ಥಳದಿ । ವೇದ ।
ವೇದ್ಯನೆ ಕಡೇ ದ್ವಿತಿಯದಲಿ ।
ಹೋದ ಕಾಲದಿ ಪಾಪಿ ನರಗೆ ವ್ಯಾಧಿ ।
ಹಾದಿ ನಡಗೆ ಧನ ನಾಶ । ಕಾದ ಬಾ ।।
ರದ ಜನರೊಳ್ ಕಲಹವೊ ।
ಬೆದರಿ ಸತಿ ಸುತ ಮೊಳಗೆ ಇವಗೆ ।
ಬೋಧಿಸುವ ಆಂಜನೇಯ ಶಿಲೆಪತಿ ।
ಬಾಧೆಯ ವತ್ತಾದರಿಯದೆ ।। 2 ।।
ಮಂದನೆಂದರೆ ನೀನೆ ದೇವಾ ।
ಇಂದುಪುರ ಮಂಗಳ ಬುಧ ಜೀವಾ ।
ಅಂದದ ಕವಿ ರಾಹು ಕೇತು ಮಂದಿ ।
ಮೊಂದಿಯಯೆಂಬುವ ಛಾಯಾಗ್ರಹರು ।।
ಇಂದ್ರ ಮುಂತಾದ ಖಳಾರಿಗುಪಮ ।
ಇಂದಿರಾಪತ್ತಿಲಾಕಗ ಯಂದು ಯೆಂದಿಗೂ ।
ನಂಬಿದೆ ಪದ ಛಂದದಲಿ ಕಾಯೋ ।
ಆದಿಕೇಶವ ಅಹಿಶಿಲಾಪತಿ ।। 3 ।।
ಶ್ರೀ ರಾಘವೇಂದ್ರ ತೀರ್ಥರು " ಪ್ರಮೇಯ ಸಂಗ್ರಹ " ದಲ್ಲಿ....
ತಥಾ ಅಗ್ನಿಸ್ತ್ರೀ ಮಂತ್ರಾಭಿಮಾನಿನೀ ಸ್ವಾಹಾದೇವೀ ಪರ್ಜನ್ಯಾತ್ ದ್ವಿಗುಣಾಧಮಾ । ತತಃ ಉದಕಾಭಿಮಾನೀ ಬುಧಃ, ನಾಮಾಭಿಮಾನಿನೀ ಉಷಾದೇವೀ, ಚ ದ್ವೇ ಅಪ್ಯಗ್ನಿಸ್ತ್ರೀಯೌ ಅವರೇ । ಭೂಮ್ಯಭಿಮಾನೀ ಶನೈಶ್ಚರಃ ಉಷಾಯಾ: ಸಕಾಶಾನ್ನೀಚ: । ತತಃ ಪುಷ್ಕರದೇವತಾ ಶನೈಶ್ಚರಾದವರಾ ।।
ಅನಂತರ ಕೆಲವರು ಅನುಕ್ತರಾದ ದೇವತೆಗಳು ಶ್ರೀಪರ್ಜನ್ಯನಗಿಂತ ಅವರರು.
ಹಾಗೆಯೇ ಶ್ರೀ ಅಗ್ನಿದೇವರ ಪತ್ನಿಯೂ - ಮಂತ್ರಾಭಿಮಾನಿಯೂ ಆದ ಶ್ರೀ ಸ್ವಾಹಾದೇವಿಯು ಪರ್ಜನ್ಯನಿಗಿಂತ 2 ಗುಣ ಅಧಮಳು.
ಅನಂತರ ಉದಕಾಭಿಮಾನಿಯಾದ ಬುಧನೂ - ನಾಮಾಭಿಮಾನಿನಿಯಾದ ಶ್ರೀ ಉಷಾದೇವಿಯೂ - ಇಬ್ಬರು ಶ್ರೀ ಅಗ್ನಿದೇವರ ಪತ್ನಿಯರೂ [ ಶ್ರೀ ಸ್ವಾಹಾ - ಶ್ರೀ ಸ್ವಧಾ ] ಅಧಮರು.
ಭೂಮಿಗೆ ಅಧಿಪತಿಯಾದ ಶ್ರೀ ಶನಿ ಮಹಾತ್ಮನು ಶ್ರೀ ಉಷಾದೇವಿಗಿಂತ ಕೆಳಗಿನ ಸಾಲಿನಲ್ಲಿದ್ದಾರೆ.
ಶ್ರೀ ಪುಷ್ಕರ ದೇವತೆಗಳು ಶ್ರೀ ಶನಿ ಮಹಾತ್ಮನಿಂತ ಕೆಳಗಿನವರು.
ಕಕ್ಷೆ : 25
ಗುಣ : ಶ್ರೀ ಉಷಾದೇವಿಗಿಂತ ಕಿಂಚಿತ್ ನ್ಯೂನ
ಸಾಧನೆ : 6 ಬ್ರಹ್ಮ ಕಲ್ಪ
" ಶ್ರೀ ಬೃಹಸ್ಪತಿ ಅಂಶ ಸಂಭೂತರಾದ ಶ್ರೀ ಜಗನ್ನಾಥದಾಸರ ಕಣ್ಣಲ್ಲಿ ಶ್ರೀ ಶನಿ ಮಹಾತ್ಮ "
[ " ತತ್ತ್ವಸುವ್ವಾಲಿ " ಯಿಂದ ಉಧೃತ ]
ತರಣಿ ನಂದನ ಶನೈಶ್ಚರ -
ನಿನ್ನ । ಪಾದಾಬ್ಜ ।
ಕೆರಗಿ ಬಿನ್ನೈಪೆ ಬಹು ಜನ್ಮ ।
ಬಹು ಜನ್ಮ ಕೃತ ಪಾಪ ।
ಪರಿಹಾರ ಮಾಡಿ -
ಸುಖವೀಯೋ ।। 1 ।।
ಗ್ರಹಗಳ ಪೈಕಿ ಬಹು ಮಂದಗತಿಯುಳ್ಳವರು ಶ್ರೀ ಶನಿ ಮಹಾತ್ಮ.
ಆದ್ದರಿಂದ ಶ್ರೀ ಶನೈಶ್ಚರನೆಂಬ ನಾಮ.
[ ಶನೈ: = ಮೆಲ್ಲಗೆ; ಚರತಿ = ಸಂಚರಿಸುವವರು ]
ಸೃಷ್ಟಿಯ ಆರಂಭದಲ್ಲಿಯೇ ತಮ್ಮ ತಮ್ಮ ಪದವಿಗಳನ್ನು ಹೊಂದಿದವರು ತತ್ತ್ವಾಭಿಮಾನಿ ದೇವತೆಗಳು.
ಶ್ರೀ ಬ್ರಹ್ಮದೇವನ ಪರನಾಮಕ [ ದ್ವಿಪರಾರ್ಧಗಳಿಂದ ಆಗುವ ೧೦೦ ವರ್ಷ ] ಆಯುಷ್ಯದ ಮಧ್ಯದಲ್ಲಿ ಕರ್ಮದಿಂದ ದೇವತ್ವವನ್ನು [ ದೇವ ಪದವನ್ನು ] ಹೊಂದುವವರು - ಕರ್ಮಜ ದೇವತೆಗಳು.
ಉದಾಹರಣೆಗೆ....
ಬಲಿ ಚಕ್ರವರ್ತಿಯು ಮುಂದಿನ ಸಾವರ್ಣಿ ಮನ್ವಂತರದಲ್ಲಿ ಶ್ರೀ ಇಂದ್ರದೇವರ ಪದವಿಗೆ ಬರುತ್ತಾನೆ.
ಇದು ತನ್ನ ಸಾಧನಾ ಸಾಮರ್ಥ್ಯದಿಂದ - ತಜ್ಜನ್ಯ ಶ್ರೀ ಹರಿ ಪ್ರಸಾದದಿಂದ, ಬಲಿಯು ತತ್ತ್ವಾಭಿಮಾನಿಯಾದ ಶ್ರೀ ಇಂದ್ರದೇವ [ ಶ್ರೀ ಪುರಂದರ ] ರಂತೆ ತತ್ತ್ವಾಭಿಮಾನಿಯಲ್ಲ.
ಹೀಗೆ ಕರ್ಮಜ ದೇವತೆಯಲ್ಲದಿದ್ದರೂ - ಶ್ರೀ ಶನಿ ಮಹಾತ್ಮನು ದೇಹಾಭಿಮಾನಿಯೆಂದು ಹೇಳಲ್ಪಡುತ್ತಾರೆ.
ಏಕೆಂದರೆ...
ಶ್ರೀ ಪುಷ್ಕರ [ ಕರ್ಮಾಭಿಮಾನಿ ] ಪರ್ಯಂತರಾದ ದೇವತೆಗಳು - ಮೂಲ ತತ್ತ್ವದಿಂದ ಬೇರ್ಪಡಿಸಲಾದ ಅನ್ಯತ್ರವಿರುವ ಆ ತತ್ತ್ವಗಳ ಅಂಶ [ ಕಲಾ ] ಗಳಿಗೆ ಅಭಿಮಾನಿಗಳು ಮಾತ್ರ - ವ್ಯಾಪ್ತವಾದ ತತ್ತ್ವಗಳಿಗಲ್ಲ.
ಈ ವಿವಕ್ಷೆಯಿಂದ ಶ್ರೀ ಶನಿ ಮಹಾತ್ಮನನ್ನು ತತ್ತ್ವಾಭಿಮಾನಿಗಳೆಂದು ಕೆಲವು ಸಂದರ್ಭಗಳಲ್ಲಿ ಹೇಳಲಾಗುತ್ತದೆ.
ಪೃಥ್ವೀ ತತ್ತ್ವಕ್ಕೆ ಶ್ರೀ ಧರಾದೇವಿಯು ಅಭಿಮಾನಿಯು.
ಮನುಷ್ಯ ದೇಹವು ಪಾರ್ಥಿವಾಂಶ ಅಧಿಕವಾಗುಳ್ಳದ್ದು.
ದೇಹಗತ ಪೃಥ್ವಿಯ ಕಲೆಗಳಿಗೆ ಶ್ರೀ ಶನಿ ಮಹಾತ್ಮನು ಅಭಿಮಾನಿಯು.
ಈ ಕಾರಣದಿಂದ ಶ್ರೀ ಶನಿ ಮಹಾತ್ಮನು ದೇಹಾಭಿಮಾನಿಯೆಂದು ಹೇಳಲ್ಪಡುತ್ತಾರೆ.
ದೇಹವನ್ನಾಶ್ರಯಿಸಿರುವ ಪಾಪಗಳ ಪರಿಹಾರಕ್ಕಾಗಿ ಶ್ರೀ ಶನಿದೇವರ ಅನುಗ್ರಹವನ್ನು ಕೋರುವುದು ಯುಕ್ತವೇ ಆಗಿದೆ.
ಶ್ರೀ ಪುಷ್ಕರನಿಂತ ಶ್ರೀ ಶನಿ ಮಹಾತ್ಮನು ಕಿಂಚಿದುತ್ತಮರು.
ಛಾಯಾ ತನುಜ ಮನಃಕಾಯಕ್ಲೇಶಗಳಿಂದ ।
ಆಯಾಸ ಪಡುವಂಥ ಸಮಯದಲಿ । ಸ ।
ಮಯದಲಿ ಲಕ್ಷ್ಮೀ ನಾ ।
ರಾಯಣನ ಸ್ಮರಣೆ ಕರುಣಿಸೋ ।। 2 ।।
ಶ್ರೀ ವಿವಸ್ವಾನ್ ಎಂಬುದೂ ಶ್ರೀ ಸೂರ್ಯದೇವರ ನಾಮ - ಅವರಿಗೆ ಶ್ರೀ ಸಂಜ್ಞಾದೇವಿ ಹಾಗೂ ಶ್ರೀ ಛಾಯಾದೇವಿ ಎಂಬುವರು ಇಬ್ಬರು ಪತ್ನಿಯರು - ಈ ಶ್ರೀ ಛಾಯಾದೇವಿಯರ ಪುತ್ರರೇ ಶ್ರೀ ಶನಿದೇವರು.
ಶ್ರೀ ಸೂರ್ಯದೇವರ ತಾಪಕರವಾದ ತೇಜಸ್ಸನ್ನು ತಾಳಲಾರದೆ ಶ್ರೀ ಸಂಜ್ಞಾದೇವಿಯು ಶ್ರೀ ಸೂರ್ಯದೇವರನ್ನು ಬಿಟ್ಟು ತವರು ಮನೆಗೆ ಹೋಗಲು ನಿರ್ಧರಿಸಿಳು.
ಆಗ ತನ್ನಂತೆ ಇರುವ - ಸ್ತ್ರೀಯನ್ನು [ ಶ್ರೀ ಛಾಯಾದೇವಿಯನ್ನು ] ನಿರ್ಮಿಸಿ - ತಾನು ಹೊರಟು ಹೋದುದು - ಶ್ರೀ ಸೂರ್ಯದೇವರಿಗೆ ತಿಳಿಯದಂತೆ [ ತನ್ನಂತೆಯೆ ] ವರ್ತಿಸಬೇಕೆಂದು ಶ್ರೀ ಛಾಯಾದೇವಿಗೆ ಹೇಳಿ ಹೊರಟು ಹೋದಳು.
ಆ ಕಾಲದಲ್ಲಿ ಶ್ರೀ ಸೂರ್ಯದೇವರಿಂದ ಶ್ರೀ ಛಾಯಾದೇವಿಯರಲ್ಲಿ ಜನಿಸಿದವರು ಶ್ರೀ ಶನಿದೇವರು.
ಇದನೆ ಬೇಡುವೆನು । ಪದೋ ।
ಪದಿ ಪುಷ್ಕರನ ಗುರುವೆ ।
ಹೃದಯ ವದನದಲಿ ಹರಿಮೂರ್ತಿ ।
ಹರಿಮೂರ್ತಿ ಕೀರ್ತನೆಗ _
ಳೊದಗಲೆನಗೆಂದು ಬಿನ್ನೈಪೆ ।। 3 ।।
ತಾರತಮ್ಯದಲ್ಲಿ ಶ್ರೀ ಶನಿದೇವರು - ಶ್ರೀ ಪುಷ್ಕರನ ಮೇಲಿನ ಕಕ್ಷೆಯಲ್ಲಿದ್ದಾರೆ.
ಸ್ವೋತ್ತಮರಾದ್ದರಿಂದ ಶ್ರೀ ಪುಷ್ಕರನಿಗೆ ಶ್ರೀ ಶನಿದೇವರು ಗುರುವು.
ಶ್ರೀ ಪುಷ್ಕರನು ಕರ್ಮ [ ಕಲಾ } ಅಭಿಮಾನಿಯು.
ಜಾತಿ - ಗುಣ - ಕ್ರಿಯೆಗಳೆಂಬ ಸಜಾತೀಯ ಸಮುದಾಯದಿಂದ ಬಿನ್ನಪಡಿಸಲಾದ ಏಕ ದೇಶಗಳಿಗೆ ಅಭಿಮಾನಿಗಳು - ಶ್ರೀ ಪರ್ಜನ್ಯ ಮೊದಲಾದವರು.
ಕ್ರಿಯಾ ಸ್ವರೂಪದ ಮೂಲತತ್ತ್ವಕ್ಕೆ [ ಕರ್ಮಕ್ಕೆ ] ಕ್ರಿಯೇಶನಾದ ಶ್ರೀ ಗರುಡದೇವರು ಅಭಿಮಾನಿ.
ಶ್ರೀ ಪುಷ್ಕರನಿಗೂ ಗುರುವಾದ ಶ್ರೀ ಶನಿದೇವರನ್ನು " ಶ್ರೀ ಹರಿ ಮೂರ್ತಿಗಳ ದರ್ಶನ - ಶ್ರೀ ಹರಿ ಸ್ಮರಣೆ ಮುಂತಾದ ಕರ್ಮ ವಿಷಯವಾಗಿ ಪ್ರಾರ್ಥಿಸುವುದು ಉಪಪನ್ನವಾಗುತ್ತದೆ.
ಅಹಿಕಪಾರತ್ರಕದಿ ನೃಹರಿ ದಾಸರ । ನವ ।
ಗ್ರಹ ದೇವತೆಗಳು ದಣಿಸೋರೆ ।
ದಣಿಸೋರೆ ಇವರನ್ನು ।
ಅಹಿತರೆಂದೆನುತ ಕೆಡಬೇಡಿ ।। 4 ।।
ಶ್ರೀ ನೃಸಿಂಹದೇವರು ಶ್ರೀ ಜಗನ್ನಾಥದಾಸರ ಉಪಾಸ್ಯ ದೇವತೆ [ ಶ್ರೀ ಜಗನ್ನಾಥ ವಿಠ್ಠಲಾSಭಿನ್ನ ಶ್ರೀ ನರಹರಿಯು ].
ಶ್ರೀ ಹರಿ ಭಕ್ತರನ್ನು ಯಾವ ಗ್ರಹಗಳೇ ಆಗಲಿ ಎಂದೂ ಕಾಡುವುದಿಲ್ಲ - ಕಾಡುವರೆಂದು ತಿಳಿಯುವವರು ತಾವೇ ಕೆಡುತ್ತಾರೆ.
ಶ್ರೀ ಶನಿದೇವರಿಂದ ಬಹು ವಿಪತ್ತುಗಳು ಬರುವುದೆಂದು ಅನೇಕರು ಭಾವಿಸುತ್ತಾರೆ.
ಈ ಭಾವನೆಯನ್ನು ಪರಿತ್ಯಜಿಸಬೇಕೆಂದು ಶ್ರೀದಾಸಾರ್ಯರು ಎಚ್ಚರಿಸುತ್ತಾರೆ - " ಇದೇನು ಶನಿ ಕಾಟವೋ " ಯೆಂಬ ಉದ್ಗಾರವು ಅಜ್ಞಾನಿಗಳಿಗೆ ಮಾತ್ರ ಶೋಭಿಸಬಹುದು.
ಶ್ರೀ ಹರಿಕಥಾಮೃತಸಾರ " ದಲ್ಲಿ....
ಹರಿ ಗುರುಗಳನರ್ಚಿಸದ । ಪಾಪಾ ।
ತ್ಮರನು ಶಿಕ್ಷಿಸಲೋಸುಗ । ಶನೈ ।
ಶ್ಚರನೆನಿಸಿ ದುಷ್ಪಲಗಳೀವೆ ।।
ಯೆಂದಿದ್ದಾರೆ.
ಜೀವರು - ತಮ್ಮ ದುಷ್ಕರ್ಮಗಳ ಫಲವನ್ನು ಭೋಗಿಸುವ ಕಾಲ ಬಂದಾಗ - ಫಲದಾತನಾದ ಶ್ರೀ ಹರಿಯು - ಗ್ರಹಗತಿಗಳನ್ನು ನಿಮಿತ್ತ ಮಾಡಿ ಭೋಗವನ್ನೀಯುವನು.
ಜಗನ್ನಾಥ ವಿಠ್ಠಲನ ಬದಿಗರಿವರಹುದೆಂದು ।
ಹಗಲಿರುಳು ಬಿಡದೆ ನುತಿಸುವ ।
ನುತಿಸುವ ಮಹಾತ್ಮರಿಗೆ ।
ಸುಗತಿಗಳನಿತ್ತು ಸಲಹೋರು ।।
ನಿತ್ಯವೂ ನವ ಗ್ರಹಗಳ ಸ್ತೋತ್ರವನ್ನು ಕೀರ್ತನೆ ಮಾಡುವುದರಿಂದ - ಗ್ರಹಾಂತರ್ಗತನಾದ ಶ್ರೀ ಶಿಂಶುಮಾರ ರೂಪಿ ಶ್ರೀ ಹರಿ ಪರಮಾತ್ಮನ ಪ್ರಸನ್ನತೆ ಉಂಟಾಗುತ್ತದೆ.
ಇದರ ಫಲವೇನೆಂದರೆ....
ತಮಗೆ ಬರುವ ದುಷ್ಕರ್ಮ ಫಲ ಭೋಗಗಳನ್ನು ತಪ್ಪಿಸಿಕೊಂಡು ಅಥವಾ ಬಹು ಮಟ್ಟಿಗೆ ಕಡಿಮೆ ಮಾಡಿಕೊಂಡು - ತಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಯಥಾಯೋಗ್ಯ ಜ್ಞಾನ ಭಕ್ತಿಗಳನ್ನು ಸಂಪಾದಿಸುವ ಶಕ್ತರಾಗುವರೆಂದು ಸಜ್ಜನರಿಗೆ ಆಶ್ವಾಸನೆಯನ್ನು ನೀಡುತ್ತಾರೆ.
ಅಂತೆಯೇ, ಪ್ರಾತಃ ಕಾಲದ ಸ್ತೋತ್ರದಲ್ಲಿ ಪ್ರಾಚೀನ ಜ್ಞಾನಿಗಳು ನವಗ್ರಹ ಸ್ತುತಿಗಳನ್ನು ಸಂಗ್ರಹಿಸಿ ಸೇರಿಸಿರುವರು.
ಇಲ್ಲಿ " ಗ್ರಹ ಸ್ತೋತ್ರ " ವೆಂದು ಹೆಸರಿಟ್ಟು - ಏಳೇ ಗ್ರಹಗಳ ಸ್ತುತಿ ಮಾತ್ರ " ತತ್ತ್ವಸುವ್ವಾಲಿ " ಯಲ್ಲಿ ಮಾಡಿದ್ದು ಕಾಣುತ್ತದೆ.
ರಾಹು - ಕೇತುಗಳು ಛಾಯಾ ಗ್ರಹಗಳಾಗಿರುವುದರಿಂದ - ಅವರು ತಾವೆಲ್ಲಿ, ಯಾರ ಜೊತೆಯಲ್ಲಿ ಇರುತ್ತಾರೋ - ಆ ಗ್ರಹಗಳ ಬಲಾಬಲಗಳನ್ನನುಸರಿಸಿ ಫಲಾಫಲಗಳನ್ನು ಕೊಡುವರೆಂದು ಜ್ಯೋತಿಷ್ಯರ ಅಭಿಪ್ರಾಯವಿರುವುದರಿಂದ ಪ್ರತ್ಯೇಕವಾಗಿ ಶ್ರೀ ಜಗನ್ನಾಥದಾಸರು ಸ್ತುತಿಗಳನ್ನು ರಚಿಸಿಲ್ಲವೆನ್ನಬೇಕೋ ಅಥವಾ ನಮಗೆ ಶ್ರೀ ರಾಹುಕೇತು - ಎರಡು ಗ್ರಹಗಳ ಸಿಕ್ಕಿಲ್ಲವೋ ತಿಳಿಯದಾಗಿದೆ.
" ಶ್ರೀ ಪ್ರಸನ್ನ ಶ್ರೀನಿವಾಸ ದಾಸರ ಕಣ್ಣಲ್ಲಿ ಶ್ರೀ ಶನಿ ಮಹಾತ್ಮ "
ಪಾಹಿ ಶ್ರೀ ನರಸಿಂಹ ಪ್ರಿಯ -
ಶನೈಶ್ಚರನೆ ನಮೋ ಸಂತತ ।
ಪಾಹಿ ನಮೋ ಗ್ರಹರಾಜಶೌರಿ -
ಮಹೇಶ್ವರನೇ ಕೃಪಾಕರ ।। ಪಲ್ಲವಿ ।।
ಪೃಥ್ವೀ ತತ್ತ್ವಾಭಿಮಾನಿಯೇ ನಮೋ -
ಕರ್ಮಪನು ಎಂಬ ಪುಷ್ಕರನು ।
ಮತ್ತು ಅಜಾನಜರು ಋಷಿ -
ಗಂಧರ್ವ ಮಹಾ ಸಮುದಾಯಕೆ ।।
ಮೇದಿನಿ ರಾಜರು ಮನುಷ್ಯರೂ -
ಸರ್ವರಿಗೂ ಗುರು ಈಶ್ವರ ।
ನೀ ದಯದಿ ಹರಿದಾಸರನ್ನ -
ಸಲಹುತಿಯೋ ಶರಣೆಂಬೆ ।। ಚರಣ ।।
ಸೂರ್ಯ ಛಾಯಾ ಸೂನು -
ಕಾಲ ರೂಪಿ ಮಹಾ ಗ್ರಹ ನಮೋ ।
ಕಾಯೋ ಜಟಿಲನೇ ವಜ್ರ ರೋಮನೆ -
ದಾನವರಿಗೆ ಭಯಂಕರ ।।
ತ್ರಯಂಬಕ ನಾರದರಿಗುಪದೇಶ -
ಕೊಂಡಾಡಿದ ನಿನ್ನನ್ನು ।
ಖ್ಯಾತ ರಘುವಂಶೋತ್ಥ ಅತಿ । ವಿ ।
ಖ್ಯಾತ ದಶರಥ ಕೀರ್ತಿತ ।। ಚರಣ ।।
ಜ್ಞಾನ ಚಕ್ಷುರ್ನಮಸ್ತೇಸ್ತು -
ಕಶ್ಯಪಾತ್ಮಜ ಸೂನವೇ ।
ತುಷ್ಟೋದದಾಸಿ ವೈರಾಜ್ಯ೦ -
ರುಷ್ಟೋ ಹರಸಿ ತಕ್ಷಣಾತ್ ।।
ನಿನ್ನನ್ನು ದಶರಥನು ಸ್ತುತಿಸಿ -
ನಮಿಸೆ ವರಗಳನಿತ್ತು ನೀ ।
ಕ್ಷೋಣಿ ಜನ ಸಂರಕ್ಷಣೆಗೆ ಬಗೆ -
ಪಾದ್ಮ ಉಕ್ತದಿ ಅರುಹಿದಿ ।। ಚರಣ ।।
ಗಂಗಾ ಮಹಿಮ ರಕ್ಷೋ ಭುವನ -
ಪ್ರಸ್ಥಾನೋಕ್ತವು ತ್ವತ್ ಕೃತ ।
ತುಂಗ ಮಹಿಮ ಶ್ರೀ ಲಕ್ಷ್ಮೀ -
ಭೂಮಾ ನಾರಸಿಂಹನ ಸ್ತೋತ್ರವು ।।
ರಾಘವ ಕೃತ ತ್ವತ್ ಕೃತ ಈ -
ನುಡಿಗಳ್ ಪಠಿಸಿ ಕೇಳ್ವರ್ಗೆ ।
ಶೋಕನೀಗಿ ಇಷ್ಟ ಲಭಿಸುವುದು -
ನೃಹರಿ ಪ್ರಿಯ ನೀ ಒದುಗುವಿ ।। ಚರಣ ।।
ವರಹುಹಾಸನನ ತಾತ -
ಪ್ರಸನ್ನ ಶ್ರೀನಿವಾಸ ನೃಕೇಸರಿ ।
ಘನ್ನ ದಯದಿ ಪ್ರಸನ್ನನಾಗಿ -
ಒಲಿಯೆ ಸಾಧನವಾಗುವ ।।
ಜ್ಞಾನ ಭಕ್ತಿ ವೈರಾಗ್ಯ ಸಂಪತ್ -
ಆಯುರಾರೋಗ್ಯ ಇತ್ತು ನೀ ।
ಎನ್ನ ತಪ್ಪುಗಳ ಮನ್ನಿಸಿ -
ಎನ್ನ ಪಾಹಿ ಸತತ ಶನೈಶ್ಚರ ।। ಚರಣ ।।
****
॥ ಶ್ರೀ ಶನಿ ಸ್ತೋತ್ರಂ (ದಶರಥ ಕೃತಂ) ॥
ನಮಃ ಕೃಷ್ಣಾಯ ನೀಲಾಯ
ಶಿಖಿಖಂಡನಿಭಾಯ ಚ ।
ನಮೋ ನೀಲಮಧೂಕಾಯ
ನೀಲೋತ್ಪಲನಿಭಾಯ ಚ ।। 1 ।।
ನಮೋ ನಿರ್ಮಾಂಸ ದೇಹಾಯ
ದೀರ್ಘಶ್ರುತಿಜಟಾಯ ಚ ।
ನಮೋ ವಿಶಾಲನೇತ್ರಾಯ
ಶುಷ್ಕೋದರ ಭಯಾನಕ ।। 2 ।।
ನಮಃ ಪೌರುಷಗಾತ್ರಾಯ
ಸ್ಥೂಲರೋಮಾಯ ತೇ ನಮಃ ।
ನಮೋ ನಿತ್ಯಂ ಕ್ಷುಧಾರ್ತಾಯ
ನಿತ್ಯತೃಪ್ತಾಯ ತೇ ನಮಃ ।। 3 ।।
ನಮೋ ಘೋರಾಯ ರೌದ್ರಾಯ
ಭೀಷಣಾಯ ಕರಾಳಿನೇ ।
ನಮೋ ದೀರ್ಘಾಯ ಶುಷ್ಕಾಯ
ಕಾಲದಂಷ್ಟ್ರ ನಮೋಽಸ್ತು ತೇ ।। 4 ।।
ನಮಸ್ತೇ ಘೋರರೂಪಾಯ
ದುರ್ನಿರೀಕ್ಷ್ಯಾಯ ತೇ ನಮಃ ।
ನಮಸ್ತೇ ಸರ್ವಭಕ್ಷಾಯ
ವಲೀಮುಖ ನಮೋಽಸ್ತು ತೇ ।। 5 ।।
ಸೂರ್ಯಪುತ್ತ್ರ ನಮಸ್ತೇಽಸ್ತು
ಭಾಸ್ವರೋಭಯದಾಯಿನೇ ।
ಅಧೋದೃಷ್ಟೇ ನಮಸ್ತೇಽಸ್ತು
ಸಂವರ್ತಕ ನಮೋಽಸ್ತು ತೇ ।। 6 ।।
ನಮೋ ಮಂದಗತೇ ತುಭ್ಯಂ
ನಿಷ್ಪ್ರಭಾಯ ನಮೋನಮಃ ।
ತಪಸಾ ಜ್ಞಾನದೇಹಾಯ
ನಿತ್ಯಯೋಗರತಾಯ ಚ ।। 7 ।।
ಜ್ಞಾನಚಕ್ಷುರ್ನಮಸ್ತೇಽಸ್ತು
ಕಾಶ್ಯಪಾತ್ಮಜಸೂನವೇ ।
ತುಷ್ಟೋ ದದಾಸಿ ರಾಜ್ಯಂ ತ್ವಂ
ಕ್ರುದ್ಧೋ ಹರಸಿ ತತ್ ಕ್ಷಣಾತ್ ।। 8 ।।
ದೇವಾಸುರಮನುಷ್ಯಾಶ್ಚ
ಸಿದ್ಧ ವಿದ್ಯಾಧರೋರಗಾಃ ।
ತ್ವಯಾವಲೋಕಿತಾಸ್ಸೌರೇ
ದೈನ್ಯಮಾಶುವ್ರಜಂತಿತೇ ।। 9 ।।
ಬ್ರಹ್ಮಾ ಶಕ್ರೋಯಮಶ್ಚೈವ
ಮುನಯಃ ಸಪ್ತತಾರಕಾಃ ।
ರಾಜ್ಯಭ್ರಷ್ಟಾಃ ಪತಂತೀಹ ತವ
ದೃಷ್ಟ್ಯಾಽವಲೋಕಿತಃ ।। 10 ।।
ತ್ವಯಾಽವಲೋಕಿತಾಸ್ತೇಽಪಿ
ನಾಶಂ ಯಾಂತಿ ಸಮೂಲತಃ ।
ಪ್ರಸಾದಂ ಕುರು ಮೇ ಸೌರೇ
ಪ್ರಣತ್ವಾಹಿತ್ವಮರ್ಥಿತಃ ।। 11 ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
#ಅಷ್ಟೋತ್ತರಶತನಾಮಾವಳಿ
ll ಶ್ರೀ ಶನೈಶ್ಚರಷ್ಟೋತ್ತರ ಶತನಾಮಾವಳಿ ll
ಓಂ ಶನೈಶ್ಚರಾಯ ನಮಃ
ಓಂ ಶುಭಕರಾಯ ನಮಃ
ಓಂ ಶಾಂತಸ್ವರೂಪಾಯ ನಮಃ
ಓಂ ಶಾಂತಿದಾತಾಯ ನಮಃ
ಓಂ ಶ್ವೇತಸ್ವರ್ಗಾಯ ನಮಃ
ಓಂ ಶತ್ರುಮಥನಾಯ ನಮಃ
ಓಂ ಶೋಧಗರಾಯ ನಮಃ
ಓಂ ಶಕ್ರಪೂಜ್ಯಾಯ ನಮಃ
ಓಂ ಶರಸ್ಥಾಯ ನಮಃ
ಓಂ ಶಾಪವರ್ಜಿತಾಯ ನಮಃ 10
ಓಂ ಶಕ್ತಿಪೂಜ್ಯಾಯ ನಮಃ
ಓಂ ಶರಣಾಗತಪಾಲಕಾಯ ನಮಃ
ಓಂ ಶಾಶ್ವತೈಶ್ವರ್ಯವಿಭವಾಯ ನಮಃ
ಓಂ ಶರಚ್ಚನ್ದ್ರನಿಭಾಯ ನಮಃ
ಓಂ ಶಾಸ್ತ್ರೇ ನಮಃ
ಓಂ ಶಾಂತಗ್ರಹಾಯ ನಮಃ
ಓಂ ಶಂಖಧರಪ್ರಿಯಾಯ ನಮಃ
ಓಂ ಶತ್ರುನಿಷೂದನಾಯ ನಮಃ
ಓಂ ಶಾಪಾನುಗ್ರಾಹಕಾಯ ನಮಃ
ಓಂ ಶರಣ್ಯಾಯ ನಮಃ 20
ಓಂ ಶಬ್ದಾದಿಗಾಯ ನಮಃ
ಓಂ ಶರಾಸನವಿಶಾರದಾಯ ನಮಃ
ಓಂ ಶರೀರಯೋಗಿನೇ ನಮಃ
ಓಂ ಶಾನ್ತಾರಯೇ ನಮಃ
ಓಂ ಶಕ್ತ್ರೇ ನಮಃ
ಓಂ ಶ್ರಮಗತಾಯ ನಮಃ
ಓಂ ಶುಭಾಯ ನಮಃ
ಓಂ ಶುಕ್ರಪೂಜ್ಯಾಯ ನಮಃ
ಓಂ ಶುಕ್ರಪ್ರಿಯಾಯ ನಮಃ
ಓಂ ಶುಕ್ರಭಕ್ಷಣತತ್ಪರಾಯ ನಮಃ 30
ಓಂ ಶುದ್ಧಿಕಾರಕಾಯ ನಮಃ
ಓಂ ಶಸ್ತ್ರವಿದ್ಯಾವಿಶಾರದಾಯ ನಮಃ
ಓಂ ಶುದ್ಧಬುದ್ಧಾಯ ನಮಃ
ಓಂ ಶತ್ರುಪ್ರತಾಪನಿಧನಾಯ ನಮಃ
ಓಂ ಶ್ವೇತಭಾಷಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶಕ್ತಿಹಸ್ತಾಯ ನಮಃ
ಓಂ ಶೌರಯೇ ನಮಃ
ಓಂ ಶಕ್ತಿಪೂಜಾಪರಾಯಣಾಯ ನಮಃ 40
ಓಂ ಶಶಾಂಕಮೌಲಯೇ ನಮಃ
ಓಂ ಶಾನ್ತಾತ್ಮನೇ ನಮಃ
ಓಂ ಶಕ್ತಿಮಾರ್ಗಪರಾಯಣಾಯ ನಮಃ
ಓಂ ಶಬ್ದಪತಯೇ ನಮಃ
ಓಂ ಶಾನ್ತಾಯ ನಮಃ
ಓಂ ಶಕ್ತಯೇ ನಮಃ
ಓಂ ಶರ್ಮಣೇ ನಮಃ
ಓಂ ಶರೀರತ್ರಯನಾಯಕಾಯ ನಮಃ
ಓಂ ಶರೀರಪರಾಕ್ರಮಾಯ ನಮಃ
ಓಂ ಶತ್ರುಘ್ನಾಯ ನಮಃ 50
ಓಂ ಶಾಂತನೇತ್ರಾಯ ನಮಃ
ಓಂ ಶಾಮ್ಭವಾಯ ನಮಃ
ಓಂ ಶಮಾಯ ನಮಃ
ಓಂ ಶತಾನನ್ದಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಶಾನ್ತಿದಾಯ ನಮಃ
ಓಂ ಶುಭಾನನಾಯ ನಮಃ
ಓಂ ಶುಭಂಕರಾಯ ನಮಃ
ಓಂ ಶುದ್ಧಜ್ಞಾನಿನೇ ನಮಃ
ಓಂ ಶುಭಾತ್ಮನೇ ನಮಃ 60
ಓಂ ಶುದ್ಧಾತ್ಮನೇ ನಮಃ
ಓಂ ಶೂನ್ಯಾತ್ಮನೇ ನಮಃ
ಓಂ ಶೂನ್ಯಭಾವನಾಯ ನಮಃ
ಓಂ ಶಂಭುನಾಥೇಶ್ವರಾಯ ನಮಃ
ಓಂ ಶೂಲಿನೇ ನಮಃ
ಓಂ ಶ್ರುತಿಗಮ್ಯಾಯ ನಮಃ
ಓಂ ಶ್ರುತಿಭಿಃಸ್ತುತವೈಭವಾಯ ನಮಃ
ಓಂ ಶ್ರುತಿಜಾಲಪ್ರಬೋಧಾಯ ನಮಃ
ಓಂ ಶೋಣಕ್ಷೋಣೀಧರಾಯ ನಮಃ
ಓಂ ಶುದ್ಧಹೃದಯಾಯ ನಮಃ 70
ಓಂ ಶೂರಸೇನಾಯ ನಮಃ
ಓಂ ಶುಭದಕ್ಷಾಯ ನಮಃ
ಓಂ ಶಮನಕ್ಷಮಾಯ ನಮಃ
ಓಂ ಶರ್ವಾಯ ನಮಃ
ಓಂ ಶಾನ್ತಚಿನ್ತಾಯ ನಮಃ
ಓಂ ಶರಜನ್ಮನೇ ನಮಃ
ಓಂ ಶತಯಾಗಾಯ ನಮಃ
ಓಂ ಶತಾನನ್ದಾಯ ನಮಃ
ಓಂ ಶತ್ರುನಿವಾರನಾಯ ನಮಃ
ಓಂ ಶೂಲಪಾಣಯೇ ನಮಃ 80
ಓಂ ಶಾನ್ತಪ್ರಿಯಾಯ ನಮಃ
ಓಂ ಶಬ್ದಬ್ರಹ್ಮಣೇ ನಮಃ
ಓಂ ಶಮಪ್ರಾಪ್ಯಾಯ ನಮಃ
ಓಂ ಶರ್ಮದಾಯ ನಮಃ
ಓಂ ಶತಕ್ರತವೇ ನಮಃ
ಓಂ ಶೂರಾಯ ನಮಃ
ಓಂ ಶುಭಾಕಾರಾಯ ನಮಃ
ಓಂ ಶುಭ್ರಮೂರ್ತಯೇ ನಮಃ
ಓಂ ಶುಚಿಸ್ಮಿತಾಯ ನಮಃ
ಓಂ ಶಂಗಾಯ ನಮಃ 90
ಓಂ ಶುದ್ಧಸ್ಫಟಿಕಸಂಕಾಶಾಯ ನಮಃ
ಓಂ ಶ್ರುತಿಪ್ರಸ್ತುತವೈಭವಾಯ ನಮಃ
ಓಂ ಶುಷ್ಕ್ಯಾಯ ನಮಃ
ಓಂ ಶಾಕ್ತದರ್ಶನವಿಶ್ರುತಾಯ ನಮಃ
ಓಂ ಶಬ್ದಾಕರ್ಷಣರೂಪಿಣೆ ನಮಃ
ಓಂ ಶರೀರಾಕರ್ಷ ಣಾಯ ನಮಃ
ಓಂ ಶತಘ್ನಿನೇ ನಮಃ
ಓಂ ಶೃಂಗಾರರೂಪಾಯ ನಮಃ
ಓಂ ಶೋಭನಾಯ ನಮಃ
ಓಂ ಶ್ಮಶಾನಭಾಜೇ ನಮಃ 100
ಓಂ ಶುಭಾಕ್ಷಾಯ ನಮಃ
ಓಂ ಶಂಭುಪ್ರಿಯಾಯ ನಮಃ
ಓಂ ಶೂನ್ಯವಾಸಾಯ ನಮಃ
ಓಂ ಶೋಕದುಃಖಹರಾಯ ನಮಃ
ಓಂ ಶಾಪಮೋಚನಾಯ ನಮಃ
ಓಂ ಶರಣಾರ್ತಿಹರಾಯ ನಮಃ
ಓಂ ಶಮ್ಬರಾರಾತಯೇ ನಮಃ
ಓಂ ಶಮಧುರಾಯ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಶನೈಶ್ಚರಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
***
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹದ ಮಹತ್ವ !
ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಶನಿ ಗ್ರಹವು ಪಾಪ ಗ್ರಹವಾಗಿರುವುದರಿಂದ ಲೌಕಿಕ ದೃಷ್ಟಿಯಲ್ಲಿ ಇತರ ಗ್ರಹಗಳ ತುಲನೆಯಲ್ಲಿ ಈ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಶನಿ ಗ್ರಹಕ್ಕೆ ಮಕರ ಮತ್ತು ಕುಂಭ ಇವು ರಾಶಿಗಳು. ತುಲಾ ರಾಶಿಯಲ್ಲಿ ಶನಿಯು ಉಚ್ಚ ಸ್ಥಾನದಲ್ಲಿರುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಗಳಿಗೆ ಉಚ್ಚ ಮತ್ತು ನೀಚ ರಾಶಿಗಳನ್ನು ನಿರ್ಧರಿಸಲಾಗಿದೆ. ‘ಒಂದು ಗ್ರಹವು ಉಚ್ಚ ರಾಶಿಯಲ್ಲಿರುವಾಗ, ಅದು ಯಾವ ವಿಷಯಗಳಿಗೆ ಕಾರಣೀಭೂತವಾಗಿರುತ್ತದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನಗಳ ಸ್ವಾಮಿತ್ವವಿದೆಯೋ, ಆ ವಿಷಯಗಳ ಬಗ್ಗೆ ಶುಭಫಲವನ್ನು ನೀಡುತ್ತದೆ’ ಎಂಬ ನಿಯಮವಿದೆ. ಶನಿ ಗ್ರಹವು ವಾಯುತತ್ತ್ವದ್ದಾಗಿದ್ದು ಮಾನವನನ್ನು ಆಸಕ್ತಿಯಿಂದ ವಿರಕ್ತೆಯೆಡೆಗೆ ಕೊಂಡುಯ್ಯುತ್ತದೆ.
ವೈಶಾಖ ಅಮಾವಾಸ್ಯೆಯಂದು ಇರುವ ಶನೈಶ್ಚರ ಜಯಂತಿಯ ಪ್ರಯುಕ್ತ…
ವೈಶಾಖ ಅಮಾವಾಸ್ಯೆಯಂದು ಶನೈಶ್ಚರ ಜಯಂತಿಯಿದೆ. ಇದರ ಪ್ರಯುಕ್ತ ಶನಿದೇವತೆಯ ವೈಶಿಷ್ಟ್ಯಗಳು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಧನೆಯಲ್ಲಿ ಶನಿ ಗ್ರಹದ ಮಹತ್ವ, ಏಳುವರೆ ಶನಿ ಮತ್ತು ಅದರ ಪರಿಹಾರೋಪಾಯ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ…
೧. ಶನಿದೇವತೆಯ ವೈಶಿಷ್ಟ್ಯಗಳು
೧ ಅ. ಸ್ಥಾನ
೧ ಅ ೧. ಜನ್ಮಸ್ಥಾನ : ಭಾರತದ ಸೌರಾಷ್ಟ್ರದಲ್ಲಿ ವೈಶಾಖ ಅಮಾವಾಸ್ಯೆಯಂದು ಮಧ್ಯಾಹ್ನದ ಸಮಯದಲ್ಲಿ ಶನಿದೇವರ ಜನನವಾಯಿತು, ಆದುದರಿಂದ ಈ ದಿನವನ್ನು ಶನೈಶ್ಚರ ಜಯಂತಿಯೆಂದು ಆಚರಿಸಲಾಗುತ್ತದೆ.
೧ ಅ ೨. ಕಾರ್ಯಕ್ಷೇತ್ರ : ಮಹಾರಾಷ್ಟ್ರದಲ್ಲಿರುವ ಶನಿ ಶಿಂಗ್ನಾಪುರದಲ್ಲಿ ಶನಿದೇವರ ದೊಡ್ಡ ಕಪ್ಪು ಶಿಲೆಯಿದ್ದು ಅಲ್ಲಿ ಶನಿದೇವತೆಯ ಶಕ್ತಿಯು ಕಾರ್ಯರತವಾಗಿದೆ. ಶನೈಶ್ಚರ ಜಯಂತಿಯಂದು ಇಲ್ಲಿ ಜಾತ್ರೆಯಾಗುತ್ತದೆ ಮತ್ತು ಶನಿದೇವರ ಉತ್ಸವವನ್ನು ಆಚರಿಸಲಾಗುತ್ತದೆ.
೨. ಜ್ಯೋತಿಷ್ಯದ ಪ್ರಕಾರ ಶನಿ ಗ್ರಹದ ಮಹತ್ವ
ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ದೇವತೆಗಳ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ಶನಿ ಗ್ರಹವು ಪಾಪ ಗ್ರಹವಾಗಿರುವುದರಿಂದ ಲೌಕಿಕ ದೃಷ್ಟಿಯಲ್ಲಿ ಇತರ ಗ್ರಹಗಳ ತುಲನೆಯಲ್ಲಿ ಈ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಶನಿ ಗ್ರಹಕ್ಕೆ ಮಕರ ಮತ್ತು ಕುಂಭ ಇವು ರಾಶಿಗಳು. ತುಲಾ ರಾಶಿಯಲ್ಲಿ ಶನಿಯು ಉಚ್ಚ ಸ್ಥಾನದಲ್ಲಿರುತ್ತದೆ. ಜ್ಯೋತಿಷ್ಯದಲ್ಲಿ ಗ್ರಹಗಳಿಗೆ ಉಚ್ಚ ಮತ್ತು ನೀಚ ರಾಶಿಗಳನ್ನು ನಿರ್ಧರಿಸಲಾಗಿದೆ. ‘ಒಂದು ಗ್ರಹವು ಉಚ್ಚ ರಾಶಿಯಲ್ಲಿರುವಾಗ, ಅದು ಯಾವ ವಿಷಯಗಳಿಗೆ ಕಾರಣೀಭೂತವಾಗಿರುತ್ತದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನಗಳ ಸ್ವಾಮಿತ್ವವಿದೆಯೋ, ಆ ವಿಷಯಗಳ ಬಗ್ಗೆ ಶುಭಫಲವನ್ನು ನೀಡುತ್ತದೆ’ ಎಂಬ ನಿಯಮವಿದೆ. ಶನಿ ಗ್ರಹವು ವಾಯುತತ್ತ್ವದ್ದಾಗಿದ್ದು ಮಾನವನನ್ನು ಆಸಕ್ತಿಯಿಂದ ವಿರಕ್ತೆಯೆಡೆಗೆ ಕೊಂಡುಯ್ಯುತ್ತದೆ. ಮನುಷ್ಯನನ್ನು, ಜೀವನದಲ್ಲಿ ಬರುವಂತಹ ಮಾನ, ಅಪಮಾನ ನತ್ತು ಅವಹೇಳನೆಯಿಂದ ಪರಮಾರ್ಥದ ದಿಕ್ಕಿನಲ್ಲಿ ಹೊರಳಿಸುತ್ತದೆ ಈ ಶನಿ ಗ್ರಹ. ಪೂರ್ವಪುಣ್ಯವನ್ನು ತೋರಿಸುವ ಈ ಗ್ರಹವು ಮೋಕ್ಷದ ದಾರಿದೀಪವಾಗಿದೆ.
೩. ಮನುಷ್ಯನ ಗುಣ-ದೋಷಗಳ ಸಂದರ್ಭದಲ್ಲಿ ಶನಿಯ ಮಹತ್ವ
ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಪ್ರತಿಯೊಂದು ಗ್ರಹದ ಶುಭ (ಗುಣ) ಮತ್ತು ಅಶುಭ (ದೋಷ) ಹೀಗೆ ಎರಡು ಮಗ್ಗಲುಗಳಿರುತ್ತವೆ. ಯಾವುದೇ ಗ್ರಹವು ಕೇವಲ ಅಶುಭವೇ ಅಥವಾ ಕೇವಲ ಶುಭವೇ ಇರುತ್ತದೆ ಎಂದಿಲ್ಲ. ಈ ನಿಮಯಕ್ಕನುಸಾರ ಶನಿ ಗ್ರಹಕ್ಕೂ ಎರಡು ಮಗ್ಗಲುಗಳಿವೆ; ಆದರೆ ಶನಿ ಗ್ರಹದ ಬಗ್ಗೆ ಕೇವಲ ಒಂದೇ ಕಡೆಯ ವಿಚಾರ ಮಾಡಲಾಗುತ್ತದೆ; ಆದ್ದರಿಂದ ಜನರ ಮನಸ್ಸಿನಲ್ಲಿ ಶನಿ ಗ್ರಹದ ಬಗ್ಗೆ ಭಯವು ನಿರ್ಮಾಣವಾಗುತ್ತದೆ. ಶನಿ ಗ್ರಹವು ಗರ್ವ, ಅಹಂಕಾರ, ಪೂರ್ವಗ್ರಹ ಇವುಗಳನ್ನು ದೂರ ಮಾಡಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತದೆ ಹಾಗೂ ಅಂತರಂಗದಲ್ಲಿನ ಉಚ್ಚ ಗುಣಗಳ ಪರಿಚಯ ಮಾಡಿಸಿಕೊಡುತ್ತದೆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದಾನೆ. ಯಾರು ಶಿಸ್ತುಬದ್ಧ, ವಿನಯಶೀಲ ಹಾಗೂ ವಿನಮ್ರರಾಗಿರುವರೋ, ಅವರನ್ನು ಶನಿಯು ಉಚ್ಚ ಪದವಿಗೆ ಕರೆದೊಯ್ಯುತ್ತಾನೆ ಹಾಗೂ ಯಾರು ಅಹಂಕಾರಿ, ಗರ್ವಿಷ್ಠ ಹಾಗೂ ಸ್ವಾರ್ಥಿಗಳಾಗಿರುತ್ತಾರೆಯೋ, ಅವರಿಗೆ ಶನಿಯು ತೊಂದರೆ ನೀಡುತ್ತಾನೆ. ಇಂತಹ ಕೆಟ್ಟ ಕಾಲದಲ್ಲಿಯೇ ಮನುಷ್ಯನ ಯೋಗ್ಯ ಪರೀಕ್ಷೆಯಾಗುತ್ತದೆ. ಈ ಕಾಲದಲ್ಲಿ ವ್ಯಕ್ತಿಗೆ ಸ್ವಕೀಯ-ಪರಕೀಯರು ಯಾರೆಂದು ಅರಿವಾಗುತ್ತದೆ. ತಮ್ಮ ಗುಣ-ದೋಷಗಳು ಗಮನಕ್ಕೆ ಬರುತ್ತವೆ. ಗರ್ವಹರಣವಾಗುತ್ತದೆ, ಅಹಂಕಾರ ಸೋರಿ ಹೋಗುತ್ತದೆ. ಮನುಷ್ಯತ್ವದ ಅರಿವಾಗುತ್ತದೆ. ಓರ್ವ ಮನುಷ್ಯನಾಗಿ ಹೇಗೆ ಜೀವಿಸಬೇಕೆಂಬುದರ ಜ್ಞಾನವಾಗುತ್ತದೆ. ಅವಿಚಾರಿಗಳು ಮಾಡಿದ ಕರ್ಮಗಳ ಫಲ ಏಳೂವರೆ ಶನಿದಶೆಯ ಸಮಯದಲ್ಲಿ ಸಿಗುವುದು ಕಾಣಿಸುತ್ತದೆ.
೪. ಶನೈಶ್ಚರ ಜಯಂತಿಯಂದು ಮಾಡಬೇಕಾದ ಸಾಧನೆ
ಶನಿಯು ಪ್ರತಿಯೊಬ್ಬ ಮನುಷ್ಯನ ರಾಶಿಯಲ್ಲಿ ಪ್ರವೇಶಿಸಿ ಏಳೂವರೆ ವರ್ಷಗಳ ಕಾಲ ಅಲ್ಲಿರುತ್ತಾನೆ. ಆದುದರಿಂದ ಮನುಷ್ಯನಿಗೆ ಏಳೂವರೆ ವರ್ಷಗಳ ಕಾಲ ಶನಿಪೀಡೆಯನ್ನು ಭೋಗಿಸಬೇಕಾಗುತ್ತದೆ. ಈಗ ಶನಿಯು ‘ಮಕರ’ ರಾಶಿಯಲ್ಲಿದ್ದು ಧನು, ಮಕರ ಮತ್ತು ಕುಂಭ ರಾಶಿಯಲ್ಲಿರುವವರಿಗೆ ಏಳೂವರೆ ಶನಿದಶೆಯು ನಡೆಯುತ್ತಿದೆ. ಜಾತಕದಲ್ಲಿ ೧, ೨, ೪, ೫, ೭, ೮, ೯ ಮತ್ತು ೧೨ ನೇ ಸ್ಥಾನದಲ್ಲಿರುವ ಶನಿಯು ಪೀಡಾಕಾರಕನಾಗಿರುತ್ತಾನೆ. ಶನಿಪೀಡೆಯ ಪರಿಹಾರಕ್ಕಾಗಿ ಶನಿಜಯಂತಿಯಂದು ಜಪ, ದಾನ ಮತ್ತು ಪೂಜೆಯನ್ನು ಮಾಡಿ ಪುಣ್ಯ ಸಂಪಾದಿಸಬಹುದು ಮತ್ತು ಇದರಿಂದ ಪೀಡೆಯ ಪರಿಹಾರವೂ ಆಗುತ್ತದೆ. ಶನಿಯು ದಾಸ್ಯವೃತ್ತಿಯ ಗ್ರಹವಾಗಿರುವುದರಿಂದ ಏಳೂವರೆ ಶನಿದಶೆಯ ಸಮಯದಲ್ಲಿ ದಾಸ್ಯಭಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು.
೪ ಅ. ಶನಿಯ ಪೀಡಾಪರಿಹಾರಕ ದಾನಗಳು : ಬಂಗಾರ, ಕಬ್ಬಿಣ, ನೀಲಮಣಿ, ಉದ್ದು, ಎಮ್ಮೆ, ಎಣ್ಣೆ, ಕಪ್ಪು ಕಂಬಳಿ, ಕಪ್ಪು ಅಥವಾ ನೀಲಿ ಹೂವುಗಳು.
೪ ಆ. ಜಪಸಂಖ್ಯೆ : ೨೩ ಸಾವಿರ
೪ ಇ. ಪೂಜೆಗಾಗಿ ಶನಿಯ ಕಬ್ಬಿಣದ ಪ್ರತಿಮೆಯನ್ನು ಉಪಯೋಗಿಸಬೇಕು.
೪ ಈ. ಶನಿಯ ಪುರಾಣ (ಪೌರಾಣಿಕ) ಮಂತ್ರ
ನೀಲಾಞ್ಜನಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |
ಛಾಯಾಮಾರ್ತಣ್ಡಸಮ್ಭೂತಂ ತಂ ನಮಾಮಿ ಶನೈಶ್ಚರಮ್ ||
– ನವಗ್ರಹಸ್ತೋತ್ರ, ಶ್ಲೋಕ ೭
ಅರ್ಥ : ಶನಿದೇವನು ನೀಲಿ ಕಾಡಿಗೆಯಂತೆ ಭಾಸವಾಗುತ್ತಾನೆ. ಅವನು ಭಗವಾನ ಸೂರ್ಯನಾರಾಯಣನ ಪುತ್ರನಿದ್ದು ಸಾಕ್ಷಾತ್ ಯಮ ದೇವನ ಹಿರಿಯ ಸಹೋದರನಾಗಿದ್ದಾನೆ. ದೇವಿ ಛಾಯಾ ಹಾಗೂ ಭಗವಾನ ಸೂರ್ಯರಿಂದ ಉತ್ಪನ್ನ ಶನಿದೇವನಿಗೆ ನಾನು ನಮಸ್ಕರಿಸುತ್ತೇನೆ.
೪ ಉ. ಶನಿಯ ಕಬ್ಬಿಣದ ಪ್ರತಿಮೆಯ ಪೂಜೆ ಹಾಗೂ ದಾನ ಇವುಗಳ ಸಂಕಲ್ಪ : ‘ಮಮ ಜನ್ಮರಾಶೇಃ ಸಕಾಶಾತ್ ಅನಿಷ್ಟಸ್ಥಾನಸ್ಥಿತಶನೇಃ ಪೀಡಾಪರಿಹಾರಾರ್ಥಮ್ ಏಕಾದಶಸ್ಥಾನವತ್ ಶುಭಫಲಪ್ರಾಪ್ತ್ಯರ್ಥಂ ಲೋಹಪ್ರತಿಮಾಯಾಂ ಶನೈಶ್‌ಚರಪೂಜನಂ ತತ್ಪ್ರೀತಿಕರಂ (ಈ ವಸ್ತುವನ್ನು) (ಟಿಪ್ಪಣಿ) ದಾನಂ ಚ ಕರಿಷ್ಯೇ|
ಅರ್ಥ : ನನ್ನ ಜಾತಕದಲ್ಲಿ ಅನಿಷ್ಟ ಸ್ಥಾನದಲ್ಲಿರುವ ಶನಿಯ ಪೀಡೆಯು ದೂರವಾಗಬೇಕು ಹಾಗೂ ಅವನು ಹನ್ನೊಂದನೇ ಸ್ಥಾನದಲ್ಲಿರುವಂತೆ ಶುಭ ಫಲವನ್ನು ನೀಡುವವನಾಗಬೇಕು, ಇದಕ್ಕಾಗಿ ಕಬ್ಬಿಣದ ಶನಿಯ ಮೂರ್ತಿಯ ಪೂಜೆ ಹಾಗೂ ಶನಿದೇವರು ಪ್ರಸನ್ನನಾಗಬೇಕೆಂದು, ‘ಈ ವಸ್ತು’ವಿನ ದಾನ ಮಾಡುತ್ತೇನೆ.
ಟಿಪ್ಪಣಿ – ‘ಈ ವಸ್ತು’, ಈ ಸ್ಥಾನದಲ್ಲಿ ಯಾವ ವಸ್ತುವಿನ ದಾನ ಮಾಡುವುದಿದೆಯೋ, ಆ ವಸ್ತುವಿನ ಹೆಸರು ತೆಗೆದುಕೊಳ್ಳಬೇಕು.
ಧ್ಯಾನ
ಅಹೋ ಸೌರಾಷ್ಟ್ರಸಞ್ಜಾತ ಛಾಯಾಪುತ್ರ ಚತುರ್ಭುಜ |
ಕೃಷ್ಣವರ್ಣಾರ್ಕಗೋತ್ರೀಯ ಬಾಣಹಸ್ತ ಧನುರ್ಧರ ||
ತ್ರಿಶೂಲಿಶ್ಚ ಸಮಾಗಚ್ಛ ವರದೋ ಗೃಧ್ರವಾಹನ |
ಪ್ರಜಾಪತೇ ತು ಸಂಪೂಜ್ಯಃ ಸರೋಜೇ ಪಶ್ಚಿಮೇ ದಲೇ ||
ಅರ್ಥ : ಶನಿದೇವನು ಸೌರಾಷ್ಟ್ರದೇಶದಲ್ಲಿ ಅವತಾರ ಪಡೆದನು. ಅವನು ಸೂರ್ಯ ಹಾಗೂ ಛಾಯಾದೇವಿ ಇವರ ಪುತ್ರನಾಗಿರುವನು. ಅವನಿಗೆ ನಾಲ್ಕು ಕೈಗಳಿವೆ. ಅವನ ಬಣ್ಣ ಕಪ್ಪು ಇದೆ. ಅವನ ಒಂದು ಕೈಯಲ್ಲಿ ಧನುಷ್ಯ, ಒಂದು ಕೈಯಲ್ಲಿ ಬಾಣ ಹಾಗೂ ಒಂದು ಕೈಯಲ್ಲಿ ತ್ರಿಶೂಲವಿದೆ. ನಾಲ್ಕನೆ ಕೈ ಆಶೀರ್ವಾದ ನೀಡುವ ಕೈಯಾಗಿದೆ. ‘ರಣಹದ್ದು’ ಅವನ ವಾಹನವಾಗಿದೆ. ಅವನು ಎಲ್ಲ ಪ್ರಜೆಗಳ ಪಾಲನಕರ್ತಾ ಇರುವನು. ನವಗ್ರಹಗಳ ಕಮಲದಲ್ಲಿ ಅವನ ಸ್ಥಾಪನೆಯನ್ನು ಹಿಂದಿನ ಪಕಳೆಯ ಸ್ಥಳದಲ್ಲಿ ಮಾಡಲಾಗುತ್ತದೆ. ಇಂತಹ ಶನಿದೇವನ ಆರಾಧನೆಯನ್ನು ಮಾಡಬೇಕು.
೪ ಊ. ದಾನದ ಶ್ಲೋಕ
ಶನೈಶ್ಚರಪ್ರೀತಿಕರಂ ದಾನಂ ಪೀಡಾನಿವಾರಕಮ್ |
ಸರ್ವಾಪತ್ತಿವಿನಾಶಾಯ ದ್ವಿಜಾಗ್ರ್ಯಾಯ ದದಾಮ್ಯಹಮ್ ||
ಅರ್ಥ : ಶನಿದೇವನಿಗೆ ಪ್ರಿಯವಾದಂತಹ ದಾನವನ್ನು ಮಾಡಿದಾಗ ತೊಂದರೆಗಳ ಹಾಗೂ ಎಲ್ಲ ಸಂಕಟಗಳ ನಿವಾರಣೆಯಾಗುತ್ತದೆ. ಇಂತಹ ದಾನವನ್ನು ನಾನು ಶ್ರೇಷ್ಠನಾದಂತಹ ಬ್ರಾಹ್ಮಣನಿಗೆ ನೀಡುತ್ತಿದ್ದೇನೆ.
೫. ಏಳೂವರೆ ಶನಿ ಇರುವವರು ಮಾಡಬೇಕಾದ ಪರಿಹಾರೋಪಾಯ
ಅ. ಪ್ರತಿದಿನ ಶನಿಸ್ತೋತ್ರವನ್ನು ಪಠಿಸಿ
ಆ. ಶನಿ ಪ್ರೀತ್ಯರ್ಥ ಜಪ, ದಾನ ಮತ್ತು ಪೂಜೆಯನ್ನು ತಪ್ಪದೆ ಮಾಡಿ
ಇ. ಪೀಡೆಯ ಪರಿಹಾರಕ್ಕಾಗಿ ಶನಿವಾರದಂದು ಅಭ್ಯಂಗ ಸ್ನಾನ್ನ ಮಾಡಿ
ಈ. ಶನಿವಾರದಂದು ಶನಿಯ ದರ್ಶನ ಪಡೆದು ಉದ್ದು ಮತ್ತು ಉಪ್ಪನ್ನು ಶನಿಗೆ ಅರ್ಪಿಸಿ. ಎಣ್ಣೆಯ ಅಭಿಷೇಕವನ್ನು ಮಾಡಿ. ಕಪ್ಪು ಹೂವುಗಳನ್ನು ಅರ್ಪಿಸುವುದರಿಂದ ಪೀಡೆಯನ್ನು ಬಗೆಹರಿಸಬಹುದು. ಕಪ್ಪು ಹೂವುಗಳು ಸಿಗದಿದ್ದಲ್ಲಿ ನೀಲಿ ಬಣ್ಣದ (ಗೋಕರ್ಣ, ಕೃಷ್ಣಕಮಲ, ಆಸ್ಟರ್) ಇತ್ಯಾದಿ ಹೂವುಗಳನ್ನು ಅರ್ಪಿಸಬಹುದು.
ಉ. ಸಾಧ್ಯವಿದ್ದಲ್ಲಿ ಶನಿವಾರದಂದು ಸಂಜೆಯ ತನಕ ನಿರಾಹಾರವಾಗಿರಬೇಕು. ಇಲ್ಲದಿದ್ದರೆ ಒಪ್ಪೊತ್ತಿನ ಊಟ ಮಾಡಬಹುದು.
ಊ. ನೀಲಮಣಿಯ ಉಂಗುರವನ್ನು ಧರಿಸಬಹುದು.
(ಆಧಾರ: ದಾತೆ ಪಂಚಾಂಗ)
ಶನಿ ಸ್ತೋತ್ರ
ಕೋಣಸ್ಥ: ಪಿಙ್ಗಲೋ ಬಭ್ರು: ಕೃಷ್ಣೋ ರೌದ್ರೋಽನ್ತಕೋ ಯಮಃ ।
ಸೌರಿಃ ಶನೈಶ್‍ಚರೋ ಮನ್ದಃ ಪಿಪ್ಪಲಾದೇನ ಸಂಸ್ತುತಃ ॥
ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯ: ಪಠೇತ್ ।
ಶನೈಶ್‍ವರಕೃತಾ ಪೀಡಾ ನ ಕದಾಚಿತ್ ಭವಿಷ್ಯತಿ ॥
ಪಿಪ್ಪಲಾದ ಉವಾಚ । ನಮಸ್ತೇ ಕೋಣಸಂಸ್ಥಾಯ ಪಿಙ್ಗಲಾಯ ನಮೋಽಸ್ತುತೇ ।
ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತುತೇ ॥ ೧ ॥
ನಮಸ್ತೇ ರೌದ್ರದೇಹಾಯ ನಮಸ್ತೇ ಚಾನ್ತಕಾಯ ಚ ।
ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ ॥ ೨ ॥
ನಮಸ್ತೇ ಮನ್ದಸಂಜ್ಞಾಯ ಶನೈಶ್‍ಚರ ನಮೋಽಸ್ತುತೇ ।
ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ ॥ ೩ ॥
ಅರ್ಥ : ಪಿಪ್ಪಲಾದ ಎಂಬ ಹೆಸರಿನ ಋಷಿಗಳು ‘ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ’ ಈ ಹತ್ತು ಹೆಸರುಗಳಿಂದ ಶನಿದೇವನ ಸ್ತುತಿಯನ್ನು ಮಾಡಿದ್ದಾರೆ. ಈ ಹತ್ತು ಹೆಸರುಗಳನ್ನು ಬೆಳಗ್ಗೆ ಎದ್ದ ನಂತರ ಯಾರು ಹೇಳುವರೋ ಅವರಿಗೆ ಎಂದೂ ಶನಿಗ್ರಹದ ತೊಂದರೆಯಾಗಲಾರದು. ಪಿಪ್ಪಲಾದಋಷಿಗಳು ಹೇಳುತ್ತಾರೆ, ‘ಹೇ ಕೋನದಲ್ಲಿ ನಿಲ್ಲುವ ಕೋಣಸ್ಥನೇ, ಹೇ ಪಿಂಗಲ, ಹೇ ಬಭ್ರು, ಹೇ ಕೃಷ್ಣಾ, ಹೇ ರೌದ್ರ ದೇಹನೇ, ಹೇ ಅಂತಕನೇ, ಹೇ ಯಮ, ಹೇ ಸೌರೀ, ಹೇ ವಿಭೋ, ಹೇ ಮಂದ, ಹೇ ಶನಿದೇವ ನಾನು ನಿಮಗೆ ನಮಸ್ಕಾರ ಮಾಡುತ್ತೇನೆ. ನಾನು ದೀನನಾಗಿ ನಿಮಗೆ ಶರಣಾಗಿದ್ದೇನೆ. ನೀವು ನನ್ನ ಮೇಲೆ ಪ್ರಸನ್ನರಾಗಿ’.
ಈ ಸ್ತೋತ್ರವನ್ನು ನಿತ್ಯ ಪ್ರಾತಃಕಾಲದಲ್ಲಿ ಪಠಿಸಬೇಕು.
– ಸೌ. ಪ್ರಜಕ್ತಾ ಜೋಶಿ, ಜ್ಯೋತಿಷ ಫಲಿತ ವಿಶಾರದೆ, ಸನಾತನ ಆಶ್ರಮ, ಗೋವಾ.
***
ಶನಿ ಕೆಟ್ಟವನೇ ?
ಅವನೊಬ್ಬ ಪರಮಾತ್ಮನ ಆಜ್ಞಾ ಪಾಲಕ. ಪರಮಾತ್ಮನ ನಿಯೋಜನೆಯಂತೆ ಅವರವರ ಕರ್ಮಾನುಸಾರ ಅವರವರ ಗ್ರಹಗತಿಗಳ ಅನುಸಾರ ಫಲ ನೀಡುವವನು.
ಆದರೆ ಕೆಲವರು ದುಷ್ಟರು ಅವನನ್ನು ದೂರುವುದುಂಟು. ಪ್ರಾತ: ಸ್ಮರಣೀಯ ಶ್ರೀ ದೇವೇಂದ್ರ ತೀರ್ಥರು ಇದನ್ನೇ ಹೇಳುತ್ತಿದ್ದುದು. ಶನಿದೇವ ತನಗೆ ನಿಯೋಜಿಸಲ್ಪಟ್ಟ ಕೆಲಸವನ್ನು ಪರಮಾತ್ಮನ ಆಜ್ಞೆಯಂತೆ ಯೋಚಿಸುತ್ತಾನೆ. ಶನಿಯನ್ನು ದೂರಬಾರದು.
ಅದೇ ರೀತಿ ಕೆಲವರು ಕೆಲವರನ್ನು ಅವನೊಬ್ಬ ಶನಿಯಿದ್ದ ಹಾಗೆ ಎಂದು ಹೇಳುತ್ತಾರೆ. ಆದರೆ ಆ ಶನಿ ತನ್ನ ಕಾರ್ಯವನ್ನು ಯಶಸ್ವಿಯಾಗಿ ಯಾರ ಮುಲಾಜಿಲ್ಲದೆ ಹಾರಿ ಪ್ರೀತಿಗಾಗಿ ಮಾಡಿರುತ್ತಾನೆ. ಅದು ಕೆಲವರಿಗೆ ತಡೆದುಕೊಳಲಾಗುವುದಿಲ್ವ.
ಶನಿಯನ್ನು ನಿಂದಿಸುವವರಿಗೆ ತಮ್ಮ ನಾಲಿಗೆ ಶುದ್ಧವಿರುವುದಿಲ್ಲ.
ಕೈಲಾಗದವ ಮೈಪರಚಿಕೊಂಡಂತೆ ತನ್ನ ಬೇಳೆ ಬೇಯಲಿಲ್ಲವೆಂದು ಶನಿಯನ್ನು ಇನ್ನೊಬ್ಬರಿಗೆ ಹೋಲಿಸಿ ಖುಷಿ ಪಡುವ ಮಂದಿಗೆ ಶನಿದೇವನ ಅನುಗ್ರಹವಾಗಲಿ
-by ನರಹರಿ ಸುಮಧ್ವ
**
No comments:
Post a Comment