SEARCH HERE

Thursday 8 April 2021

ಶ್ರೀ ಬ್ರಹ್ಮಚೈತನ್ಯ ಮಹಾರಾಜ sri brahmachaitanya maharaja






ಶ್ರೀರಾಮ ಸಮರ್ಥ - ಶ್ರೀ ಬ್ರಹ್ಮಚೈತನ್ಯ ಮಹಾರಾಜ ಚರಿತ್ರೆ 

ಅಧ್ಯಾಯ-೧ ಕುಲವೃತ್ತಾಂತ  ಹಾಗೂ ಬಾಲ್ಯ  ಶ್ರೀಮಹಾರಾಜರ ತಂದೆ-ತಾಯಿ

ರಾವಜಿಯವರು ಪ್ರಪಂಚದಲ್ಲಿ ವಿಶೇಷ ಲಕ್ಷಹಾಕದೇ ಇದ್ದದ್ದರಿಂದ ಕೊಡ -ತಗೊಳ್ಳವ ಬಹಳಷ್ಟು ವ್ಯವಹಾರವನ್ನು ಮಾತೋಶ್ರೀ   ಗೀತಾಬಾಯಿಯವರೇ ಮಾಡಬೇಕಾಗುತ್ತಿತ್ತು. ಆದರೆ ಜನರಿಗೆ ಕೊಡುವ ವಿಷಯದಲ್ಲಿ ಅವರು ಅತ್ತೆಗಿಂತಲೂ ಮುಂದಾಗಿದ್ದರು. ಊರಲ್ಲಿ ಯಾರಿಗಾದರೂ ಕಾಯಿಲೆಯಾದರೆ ಗೀತಾಬಾಯಿಯವರು ತಾವು ಸ್ವತಃ ಹೋಗಿ ಅವರ ಔಷಧೋಪಚಾರದ ವ್ಯವಸ್ಥೆ ಮಾಡುತ್ತಿದ್ದರು. ಊರ ಜನರಿಗೆ ಅವರ ಬಗ್ಗೆ ಪ್ರೇಮ ಹಾಗೂ ಶ್ರದ್ಧೆ ಎಷ್ಟಿತ್ತೆಂದರೆ ಕಾಯಿಲೆಯಾದ ಮನುಷ್ಯನಿಗಾಗಿ ಅವರು ಮಾಡಿದ ಅಡುಗೆಯನ್ನು ಬೇಡಿ ತೆಗೆದುಕೊಂಡು ಹೋಗುತ್ತಿದ್ದರು. ಮಾತೋಶ್ರೀ ಗೀತಾಬಾಯಿಯವರು ತಮ್ಮ ಮನೆಯ ಅಷ್ಟು ದೊಡ್ಡ ವ್ಯಾಪವನ್ನು ನಿರ್ವಹಿಸುತ್ತ ಬಡಕುಟುಂಬಿಯರ ಬಾಣಂತಿತನವನ್ನೂ ಮಾಡುತ್ತಿದ್ದರು. ಅವರಿಗಾಗಿ ಔಷಧ, ಹಾಲು, ಮೊಸರು, ತುಪ್ಪ, ಬೆಣ್ಣೆ ಹಾಗೂ ವಸ್ತ್ರ ಮುಂತಾದವುಗಳನ್ನು ಪೂರೈಸುತ್ತಿದ್ದರು. ಹೆಣ್ಣುಮಕ್ಕಳು ಅವರಿಗೆ “ಗೀತಾಬಾಯಿಯವರೇ, ನೀವು ನಮಗಾಗಿ ಎಷ್ಟೊಂದು ಮಾಡುತ್ತೀರಿ ! ನಿಮಗೆ ನಾವು ಏನಾದರೂ ಕೊಡಬೇಕೆಂದು ಅನಿಸುತ್ತದೆ “ಅನ್ನಲು, ಅದಕ್ಕೆ ಗೀತಾಬಾಯಿಯವರು “ನನಗೇನು ಕಡಿಮೆ ಇರುತ್ತದೆ ? ನೀವು ಪ್ರತಿದಿವಸ ರಾಮನಾಮದ ಒಂದು ಸಾವಿರ ಜಪಮಾಡುವ ನಿಯಮ ಮಾಡಿರಿ. ಅದರಿಂದ ನನಗೆ ಎಲ್ಲವೂ ಮುಟ್ಟಿದಂತಾಗುತ್ತದೆ !” ಅನ್ನುತ್ತಿದ್ದರು.   

ಗೋಂದಾವಲೆಯ ಹತ್ತಿರ ಸಂಭಾಜಿ ಎಂಬ ಸತ್ಪುರುಷರಿರುತ್ತಿದ್ದರು. ಆ ಮಹಾತ್ಮರು ಹನ್ನೆರಡುವರ್ಷ ಮೌನಧಾರಣೆ ಮಾಡಿದ್ದರು. ರಾವಜಿ ಹಾಗೂ ಗೀತಾಬಾಯಿಯವರು ಅವರ ದರ್ಶನಕ್ಕೆ ಹೋದಾಗ ಆ ಸತ್ಪುರುಷರು ಅವರಿಬ್ಬರಿಗೂ ಒಂದು ಶ್ರೀಫಲವನ್ನು ಪ್ರಸಾದ ರೂಪದಲ್ಲಿ ಕೊಟ್ಟರು ಹಾಗೂ ಅತ್ಯಂತ ಪ್ರಸನ್ನತೆಯಿಂದ “ಭಗವಂತನು ನಿಮ್ಮ ಕಲ್ಯಾಣ ಮಾಡುತ್ತಾನೆ. ನೀವಿಬ್ಬರೂ ಅವನ ನಾಮಸ್ಮರಣೆ ಮಾಡಿರಿ !” ಅಂದರು.  

ಕೆಲವು ದಿನಗಳ ನಂತರ ಮಾತಾ ಗೀತಾಬಾಯಿಯವರು ಗರ್ಭವತಿಯಾದರು. ಮಹತ್ವದ ವಿಷಯವೆಂದರೆ ದಿನಗಳೆದಂತೆ ಗೀತಾಬಾಯಿಯವರ ವೃತ್ತಿಯಲ್ಲಿ ಸಹಜವಾಗಿ ಕಂಡುಬರುವ ವ್ಯತ್ಯಾಸವುಂಟಾಗತೊಡಗಿತು. ಗೀತಾಬಾಯಿಯವರ ತವರುಮನೆಯಲ್ಲಿ ರಾಮೋಪಾಸನೆ ನಡೆಯುತ್ತಿದ್ದು ಅವರೆಲ್ಲರಿಗೂ ಶ್ರೀಸಮರ್ಥರ ಮೇಲೆ ನಿಷ್ಠೆಯಿತ್ತು. ಮಾತಾ ಗೀತಾಬಾಯಿಯವರು ಬಾಲ್ಯದಿಂದಲೂ ದಾಸಬೋಧ ಓದುತ್ತಿದ್ದರು ಹಾಗೂ ರಾಮನಾಮ ಜಪ ಮಾಡುತ್ತಿದ್ದರು. ಅವರು ಶ್ರೀಸಮರ್ಥರನ್ನು ಗುರುಗಳೆಂದು ಭಾವಿಸಿದ್ದರು. ಅವರಿಗೆ ಬಯಕೆಗಳುಂಟಾದಂತೆ ಅವರಲ್ಲಿ ಕಂಡುಬಂದ ಮೊದಲನೇ ವಿಶೇಷ ಲಕ್ಷಣವೆಂದರೆ ಅವರು ಅಖಂಡ ‘ರಾಮನಾಮಸ್ಮರಣೆ ‘ ಮಾಡತೊಡಗಿದರು. ಹೋಗುವಾಗ, ಬರುವಾಗ, ತಿನ್ನುವಾಗ, ಉಣ್ಣುವಾಗ  ನಿತ್ಯದ ಎಲ್ಲ ವ್ಯವಹಾರದಲ್ಲಿಯೂ ಅವರು ಅಖಂಡ ಶ್ರೀರಾಮ ಶ್ರೀರಾಮ ಎಂದು ಅನ್ನತೊಡಗಿದರು. ದಾಸಬೋಧ ಶ್ರವಣ ಮಾಡಬೇಕೆಂಬ ಉತ್ಕಟ ಇಚ್ಛೆ ಉಂಟಾಯಿತು. ಪಂತರು ಅವರ ಇಚ್ಛೆಯಂತೆ ಮ್ಹಾಸುರ್ಣೇಕರ ಎಂಬ ಶಾಸ್ತ್ರಿಗಳಿಂದ ವಿಠ್ಠಲಮಂದಿರದಲ್ಲಿ ದಾಸಬೋಧದ ಪಾರಾಯಣ ಹಾಗೂ ಪ್ರವಚನ ಮಾಡಿಸಿದರು. ಮಾತಾ ಗೀತಾಬಾಯಿಯವರು ಒಮ್ಮೆ ಶ್ರೀಸಮರ್ಥರ ದರ್ಶನವನ್ನೂ ಮಾಡಿಕೊಂಡು ಬಂದರು. ಎಷ್ಟೋವೇಳೆ ಅವರಿಗೆ ಕುಳಿತಲ್ಲಿಯೇ ತಂದ್ರಿಹತ್ತಿದಂತಾಗಿ ಕಿವಿಯಲ್ಲಿ ಯಾರೋ “ರಾಮನಾಮ” ಹೇಳುತ್ತಿರುವದು ಸ್ಪಷ್ಟವಾಗಿ ಕೇಳುತ್ತಿತ್ತು. ಅವರ ಮನಸ್ಸು ಯಾವಾಗಲೂ ‘ಪ್ರಸನ್ನ’ ಆಗಿರುತ್ತಿತ್ತು. ಹಾಗೂ ಮುಖದ ಮೇಲೆ ವಿಲಕ್ಷಣ ತೇಜಸ್ಸು ಕಾಣತೊಡಗಿತು.  “ತಾವು ರಾಮನಾಮಸ್ಮರಣೆ ಮಾಡುತ್ತಿರುವದರಿಂದ ಶ್ರೀಮಾರುತಿರಾಯನು ತಮ್ಮೊಡನಿದ್ದು ತಮ್ಮ ಸಂರಕ್ಷಣೆ ಮಾಡುತ್ತಿರುವನೆಂಬ ಭಾವನೆಯುಂಟಾಗಿ ಅವರು ಮಾರುತಿರಾಯನ ಧ್ಯಾನ ಮಾಡತೊಡಗಿದರು.” 

ಮುಂದೆ ಪಂತರು ಸರ್ವರ ಸಮ್ಮತಿಯಂತೆ ಗೋಂದಾವಲೆಯಲ್ಲಿಯೆ ಬಾಣಂತಿತನ ಮಾಡುವದನ್ನು ನಿಶ್ಚಯಿಸಿ ಮಾತಾ ಗೀತಾಬಾಯಿಯವರ ತಂದೆ-ತಾಯಿಗಳನ್ನು ಅಲ್ಲಿಗೆ ಕರೆಯಿಸಿಕೊಂಡರು. ಅವರಿಗೆ ಎಂಟು ತಿಂಗಳು ತುಂಬುವ ಸುಮಾರಿಗೆ ಒಂದು ದಿವಸ ಸಾಯಂಕಾಲ ”ಒಬ್ಬ ತೇಜಸ್ವಿ ಬೈರಾಗಿಯು ಪಂತರ ಮನೆಗೆ ರಾತ್ರಿ ಉಳಿದುಕೊಳ್ಳಲು ಬಂದರು. ಮಾತಾ ಗೀತಾಬಾಯಿಯವರು ಅವರಿಗೆ ನಮಸ್ಕರಿಸಲು,ಅವರು ಮಾತಾ ಅವರ ಕಡೆಗೆ ನೋಡಿ ಆನಂದಾಶ್ರುಗಳನ್ನು ಸುರಿಸುತ್ತ “ನನ್ನ ಮುದ್ದು ಮಗುವೇ !  ನೀನು ಇಲ್ಲರುವೆಯಾ ! ನಿನ್ನ ದರ್ಶನದಿಂದ  ನಾನು ಧನ್ಯನಾದೆನು ! ನಾನೀಗ ತಿರುಗಿ ಹೋಗುತ್ತೇನೆ !” ಎಂದು ಹೇಳಿ ರಾಮೇಶ್ವರಕ್ಕೆ ಹೋರಟ ಆ ಬೈರಾಗಿಯು ತಿರುಗಿ ಸ್ವಸ್ಥಾನಕ್ಕೆ ಹೋರಟು ಹೋದರು.  
ಜಾನಕೀ ಜೀವನ ಸ್ಮರಣ ಜಯಜಯ ರಾಮ

*****


!! ಬ್ರಹ್ಮಚೈತನ್ಯ ನಾ ನಿನ್ನ ನಂಬಿದೆ
ಭಕ್ತ ಜನಮಾನ್ಯನಾ ನಿನ್ನ ನಂಬಿದೆ  !!

!! ಗೋಂದಾವಲಿ ಪುರವಾಸನೇ  !
ತಂದೆ ಶ್ರೀ ರಾಮಚಂದ್ರನ ದಾಸನೇ !
ಶ್ರೀ ಗಂಧ ತುಳಸಿಯಾ ಧಾರನೇ  !
ಅಂಧಕಾರಕ್ಕೆ ಜ್ಯೋತಿ ಸ್ವರೂಪನೇ  !!

!! ಕಾಮಾದಿ ಅರಿಗಳ ನಾಶನೆ  !
ಭಕ್ತ ಪ್ರೇಮಾಂತರಂಗನೇ ಈಶನೆ  !
ಶ್ರೀ ರಾಮ ನಾಮದ ಬೋಧನೆ  !
ಭೂಮಿಮೇಲ್ಲೆಲ್ಲಾ ಮಾಡಿದೆ ಸಾಧನೆ  !!

!! ತೇರಾ ಕೋಟಿ ಜಪಸಾಧಕ. !
ಧೀರ ಗಂಭೀರ ಭಕ್ತರ ಪಾಲಕ. !
ಕ್ಷೀರಾಬ್ಧಿ ಶಯನನ ಸೇವಕ  !
ಪಾರು ಮಾಡಯ್ಯ ಈ ಭವ ಕಂಟಕ. !!

!! ಬ್ರಹ್ಮಾನಂದಾರ್ಚಿತ ದೇವನೇ  !
ಬ್ರಹ್ಮಚೈತನ್ಯ ರಾವುಜಿ ಪುತ್ರನೇ  !
ನಮ್ಮ ತಾಳ್ಯದ ಹನುಮನ ರೂಪನೆ  !
ಪ್ರೇಮ ಜ್ಯೋತಿ ಪ್ರದೀಪನೆ ವಂದನೆ  !!

!! ಬ್ರಹ್ಮಚೈತನ್ಯ ನಾ ನಿನ್ನ ನಂಬಿದೆ  !
ಭಕ್ತ ಜನಮಾನ್ಯನಾ ನಿನ್ನ ನಂಬಿದೆ  !
ಭಕ್ತ ಜನಮಾನ್ಯನಾ ನಿನ್ನ ನಂಬಿದೆ  !
ಭಕ್ತ ಜನಮಾನ್ಯನಾ ನಿನ್ನ ನಂಬಿದೆ  !!
*****

ಶ್ರೀ ಮಹಾರಾಜರ ಅಭಂಗಾತ್ಮಕ ಚರಿತ್ರೆ 

ವಕ್ರತುಂಡ ಮಹಾಕಾಯನೆ !
ಕೋಟಿ ಸೂರ್ಯ ಸಮಪ್ರಭನೆ !! ೧!!

ಸದ್ಗುರು ಚರಿತೆಯನ್ನು ಹಾಡುವೆ !
ಕೃಪೆಯೊಂದಿರಲಿ ಎಂದು ಬೇಡುವೆ !! ೨ !!

ಶಾರದೆ ನಿನ್ನನ್ನು ವಿನಯದಿ ನಮಿಸುವೆ !
ನೀನೇ ಎನಗೆ ಮತಿಯನು ಕೊಡುವೆ !! ೩!!

ಸದ್ಗುರು ಪಾದಕೆ ಎರಗುತಾ ಬೇಡುವೆ ! 
ಕೃಪೆಯೊಂದಿರಲಿ ಚರಿತೆಯ ಹಾಡುವೆ !! ೪!!

ಮಹಾರಾಷ್ಟ್ರ ದೇಶದಲ್ಲಿ  !
ಸಾಧು-ಸಂತರ ಭೂಮಿಯಲ್ಲಿ !!೫!!

ಗೋಂದಾವಲೆ ಎಂಬ ಗ್ರಾಮ !
ಸತ್ವಶೀಲ ಮನುಜರ ಧಾಮ !!೬!!

ಅಲ್ಲಿ ವಾಸಿಪ ಲಿಂಗೋಪಂತರು !
ನಿಷ್ಠಾವಂತ ಕುಲಕರ್ಣ್ಯವರು !!೭!!

ಶುಕ್ಲ ಏಕಾದಶಿಗೆ ಅವರು !
ಪಂಢರಪುರಕ್ಕೆ ಹೋಗುವರು !!೮!!

ಮುಪ್ಪಿನ ವಯದಲಿ ವಾರಿತಪ್ಪಲು !
ವಿಠ್ಠಲ ಬಂದನು ಅಲ್ಲೇ ಇರಲು !!೯!!

ಇವರಿಗೆ ರಾವಜಿ ಎಂಬ ಮಗನು !
ನಾಮಸ್ಮರಣೆಯಲ್ಲಿ ನಿರತನು !!೧೦!!

ಇವರ ಹೆಂಡತಿ ಗೀತಾಬಾಯಿ !
ಊರಿಗೆಲ್ಲಾ ಅವಳೆ ತಾಯಿ !!೧೧!!

ಇಂಥಾ ತಾಯೀ ಉದರದಿಂದ !
ನಾಮಯೋಗಿ ಹುಟ್ಟಿ ಬಂದ !!೧೨!!

ಇವರ ಬಾಲಲೀಲೆ ನೋಡಿ !
ಊರಿಗೆಲ್ಲಾ ಆಯ್ತು ಮೋಡಿ !!೧೩!!

ಲೌಕಿಕ ವಿದ್ಯೆ ಕಲಿಯಲಿಲ್ಲ !
ವಿಷಯ ಸುಖದ ಆಶೆಯಿಲ್ಲ !!೧೪!!

ಸದ್ಗುರು ಶೋಧಕೆ ಹೊರಟು ನಿಂತರು !
ಕೊಲ್ಹಾಪುರಕೆ ಬಂದು ಬಿಟ್ಟರು !!೧೫!!

ಕರೆದುಕೊಂಡು ಹೋಗಿ ತಂದೆ !
ಮದುವೆ ಮಾಡಿಬಿಟ್ಟರು ಮುಂದೆ !!೧೬!!

ಆದರು ಗಣಪತಿ ಶೀಘ್ರದಲ್ಲಿ !
ಬಿಟ್ಟೇ ಬಿಟ್ಟನು ಗೋಂದಾವಲಿ !!೧೭!!

ಸದ್ಗುರು ಶೋಧಕ್ಕಾಗಿ ಅವನು !
ತಿರುಗಿದನೆಲ್ಲಾ ದೇಶವನ್ನು !!೧೮!!

ಏಹಳೆಗಾಂವ ಎಂಬೊ ಅಲ್ಲಿ !
ಸದ್ಗುರುಗಳು ದೊರೆತರಲ್ಲಿ !!೧೯!!

ಅವರ ಸೇವೆಯಿಂದ ಗಣಪತಿ !
ಹೊಂದಿದನಲ್ಲಿ ಜ್ಞಾನ ಪ್ರಾಪ್ತಿ !!೨೦!!

ನಾನಾ ರೀತಿ ಕ್ಲೇಷ ಕೊಟ್ಟು !
ದೇಹಭಾವ ಹಾಕಿದರು ಸುಟ್ಟು !!೨೧!!

ಬ್ರಹ್ಮಚೈತನ್ಯೆಂಬೋ ಹೆಸರು !
ಇಟ್ಟು ಕಳಿಸಿಕೊಟ್ಟರು ಅವರು !!೨೨!!

ಬ್ರಹ್ಮ ಜ್ಞಾನ ಪಡೆದ ಅವರು !
ತೀರ್ಥಾಟನೆಗೆ ಹೊರಟು ನಿಂತರು !!೨೩!!

ನಿಮಿಷ್ಯಾರಣ್ಯದಲ್ಲಿ ನಿಂತು !
ಪೇಶ್ವೆಗೆ ಹೇಳಿದ್ರು ಶಾಂತಿ ಮಾತು !!೨೪!!

ರಾಮಶಾಸ್ತ್ರಿ ಶಿಷ್ಯ ಆದನು !
ಕಾಶೀವರೆಗೆ ಜೊತೆಗೆ ಬಂದನು !!೨೫!!

ಕಾಶೀ ಕ್ಷೇತ್ರದಲ್ಲಿ ಅವರು !
ಪ್ರೇತವನ್ನು ಬದುಕಿಸಿ ಕೊಟ್ಟರು !!೨೬!!

ಮಥುರಾ ಬೃಂದಾವನ ತಿರುಗಿ !
ಬಂದರು ಅವರು ಇಂದೂರಿಗೆ !!೨೭!!

ಜೀಜೀಬಾಯಿ ಖಾರ ತಿನಿಸಿ !
ಶಿಷ್ಯಳಾದಳು  ಬೆಂಕಿ ಉಣಿಸಿ !!೨೮!!

ಗೋಂದಾವಲೆಗೆ ಬಂದು ಅವರು !
ಮಾರುತಿ ಗುಡಿಯಲ್ಲಿ ಠಾಣಾ ಹೊಡೆದರು !!೨೯!!
ತಂದೆ ತಾಯೀ ನೋಡಿ ನಮಿಸಿ !
ನಡೆದರು ಅವರು ದಕ್ಷಿಣ ದಿಶಿ !!೩೦!!

ರೆಡ್ಡಿ ಎಂಬೊ ರೋಗಿಯನವರು !
ರಾಮೇಶ್ವರಕೆ ಹೊತ್ತು ಒಯ್ದರು !!೩೧!!

ತಿರುಪತಿ ಕಾಂಚಿ ರಾಮೇಶ್ವರ !
ತಿರುಗಿ ಬಂದರು ಸದ್ಗುರು ಹತ್ತಿರ !!೩೨!!

ಅವರ ಆಶೀರ್ವಾದ ಪಡೆದು !
ತಿರುಗಿ ಬಂದರು ಊರಿಗೆ ನಡೆದು !!೩೩!!


......ಮುಂದುವರಿಯುವುದು
*****


3 brahma chaitanya
ಶ್ರೀರಾಮ ಸಮರ್ಥ || 


||ಶ್ರೀಬ್ರಹ್ಮಚೈತನ್ಯ ಮಹಾರಾಜರ ಚರಿತ್ರೆ|| 


********** 


ವಿಷಯ ಪ್ರವೇಶ 
(೧) ಬ್ರಹ್ಮವಿದ್ಯೆ :- ಮನುಷ್ಯ ಜೀವನಕ್ಕೆ ಯೋಗ್ಯತಿರುವು ಕೊಟ್ಟು ಮನುಷ್ಯನನ್ನು ನಿಜವಾದ ಅರ್ಥದಲ್ಲಿ ಮನುಷ್ಯನನ್ನಾಗಿ ಮಾಡುವ ಕೆಲಸವನ್ನು ಸಂಸ್ಕೃತಿಯು ಮಾಡುತ್ತದೆ. ಆದ್ದರಿಂದ ಮನುಷ್ಯಜೀವನಕ್ಕೆ ಸರಿಯಾದ ಅರ್ಥ ಹಚ್ಚುವದಕ್ಕಾಗಿ ಸಂಸ್ಕೃತಿಯ ವಿಚಾರ ಮಾಡಬೇಕಾಗುತ್ತದೆ. “ಪ್ರತಿಯೊಂದು ಸಂಸ್ಕೃತಿಗೆ ಅಂತರಂಗ ಹಾಗೂ ಬಹಿರಂಗ ಎಂಬ ಎರಡು ಅಂಗಗಳಿರುತ್ತವೆ.” ‘ಪಾತ್ರೆ, ಆಭರಣ, ಪೋಷಾಕು, ಹಬ್ಬ-ಹುಣ್ಣಿಮೆ, ಉತ್ಸವ, ರೀತಿ-ನಡತೆ, ಶಿಷ್ಟಾಚಾರ ಮುಂತಾದವುಗಳು ಸೇರಿ ಬಹಿರಂಗ ಸಿದ್ಧವಾಗುತ್ತದೆ.’  ‘ಭಾಷೆ, ಕಲೆ, ಕಾವ್ಯ, ನಾಟ್ಯ, ಕಾನೂನು, ಧರ್ಮ, ನೀತಿ, ವಿಜ್ಞಾನ, ತತ್ವಜ್ಞಾನ, ಹಾಗೂ ರಾಜನೀತಿ ಇವುಗಳ ಮೂಲಕ ವ್ಯಕ್ತವಾಗುವಮೂಲ್ಯಗಳು ಸೇರಿ ಅಂತರಂಗವಾಗುತ್ತದೆ.’  


ಏಕೆಂದರೆ ಮನುಷ್ಯನ ವ್ಯಕ್ತಿತ್ವದ ವಿಕಾಸ ಹಗೂ ಅವನ ಜೀವನದ ಸಾಫಲ್ಯ ಅಂತರಂಗವನ್ನು ಅವಲಂಬಿಸಿರುತ್ತದೆ. ಎರಡೂ ಅಂಗಗಳು ಒಂದನ್ನೊಂದು ಅವಲಂಬಸಿರುವದರಿಂದ ಅವುಗಳನ್ನು ಬೇರೆ ಮಾಡಲು ಬರುವದಿಲ್ಲ. ಅಂತರಂಗದಲ್ಲಿ ಯಾವ ಮೌಲ್ಯಗಳಿಗೆ ಮಹತ್ವ ಕೊಡಲಾಗುತ್ತದೆಯೋ ಅದಕ್ಕನುಸಾರ ಸಂಸ್ಕೃತಿಯು ಪ್ರತ್ಯಕ್ಷ ಆಕಾರಗೊಳ್ಳುತ್ತದೆ ಹಾಗೂ ಅದರಂತೆ ಅದರ ವಿಶಿಷ್ಟ ಜೀವನ ಪದ್ಧತಿ ನಿರ್ಮಾಣವಾಗುತ್ತದೆ. ಕಳೆದ ಐದುಸಾವಿರ ವರುಷಗಳಲ್ಲಿ ಜಗತ್ತಿನ ಅನೇಕಸಂಸ್ಕೃತಿಗಳು ಪ್ರತ್ಯಕ್ಷವಾಗಿ ಅವತರಿಸಿರುತ್ತವೆ.ಭಾರತೀಯ ಸಂಸ್ಕೃತಿಯು ಅವೆಲ್ಲವುಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಮಹಾನ್ ಸಂಸ್ಕೃತಿ ಆಗಿದ್ದು ಇನ್ನೂ ಜೀವಂತವಾಗಿರುತ್ತದೆ. ಅದರ ಅಂತರಂಗದಲ್ಲಿ ಬ್ರಹ್ಮವಿದ್ಯೆಗೆ ಸರ್ವಶ್ರೇಷ್ಠ ಸ್ಥಾನ ಕೊಡಲಾಗಿದೆ. ಅದರ ಜೀವನದಲ್ಲಿ ಇಂದಿನವರೆಗೆ ಅನೇಕ ಏರುಪೇರುಗಳು ನಿರ್ಮಾಣವಾದವು. ಆದರೆ ಯಾವ ಯಾವ ಸಮಯಕ್ಕೆ ಅದರಲ್ಲಿ ದೊಡ್ಡ ವ್ಯಾಪಕಸ್ವರೂಪದ ಕ್ರಾಂತಿಗಳಾದವೋ ಆಯಾ ಸಮಯದಲ್ಲಿ ಬ್ರಹ್ಮವಿದ್ಯೆ ಅಥವಾ ಆಧ್ಯಾತ್ಮ ವಿಚಾರವೇ ಅದರ ತಳಹದಿಯಾಗಿತ್ತೆಂದು ಇತಿಹಾಸ ಹೇಳುತ್ತದೆ.

*****

*





No comments:

Post a Comment