SEARCH HERE

Thursday 8 April 2021

ಋಗ್ವೇದ rigveda rugveda




A mantra in the Rigveda reads:
   taranir vishvadarshato jyotishkridasi surya
   vishvamaa bhaasi rochanam ||4||
(RV, Mandala 1, A.9, Su.50.4)
The gist is:"O Suryadeva, you traverse in the great path which others cannot. You are visible to all beings. You create brightness....". The controversial line is in the commentary on the Rigveda by Saayanacharya. It reads:
    yojanaanaam sahasre dve dve shate dve cha yojane|
    ekena nimishaardhena kramamaana namostu ta iti|
This means: "Prostrations to you (Sun-god) who travels 2202 yojanas in half-nimisha".
    Some modern enthusiast interprets and calculates the 'velocity of light' as follows: 1 yojana=9 miles 110 yards, half-nimisha=1/8.75 second. Therefore,
Velocity of light = Distance travelled/Time taken
                        = 2202 X (9m 110y)/(1/8.75)
                        = 1,85,016,169 miles/second
Lo and behold, this is close to the modern value of the velocity of light!
We have to take note of the following:
1. In the RV mantra there is no mention of 'yojana'  and 'nimisha' at all!
2. Saayana mentions the distance traversed by the SUN and not by the LIGHT!
3. Taking a 'yojana' as 9 miles 110 yards and a 'nimisha' as 1/8.75 second is intentionally manipulative to yield a value close to the modern one!
4. Bhaskaracharya (b.1114 CE) gives the semi-diameter (radius) of the earth as 800 yojanas. If his value is taken as correct and equating it with the modern approximate value of 4000 miles, we get a yojana=5 miles.
5. 'yojana' is taken differently by different authors during different times!

       You may read all these details and also other references to 'scientific' facts in the Vedic lore  and about 'Vedic Mathematics' in the Kannada book:
  'Vedic Mathematics mattu Vedagalalli Vijnana', published by   the renowned Navakarnataka Publications Ltd, Bengaluru-560 001 . Visit www.navakarnataka.com.
******


ಸಂಚಿಕೆ 463🕉
🔯 ಋಗ್ವೇದ: 1-38-7🔯

ॐ ಸತ್ಯಂ ತ್ವೇಷಾ ಅಮವಂತೋ ಧನ್ವನ್ ಚಿತ್ ಆ ರುದ್ರಿಯಾಸ: ಮಿಹಂ ಕೃಣ್ವನ್ತ್ಯವಾತಾಮ್: ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ಈ ರುದ್ರರು ಜ್ಯೋತಿರ್ಮಯರು ಹಾಗೂ ಸುದೃಡರು ಎಂಬುದು ಸತ್ಯ; ಬರಡು ಭೂಮಿಯಲೂ ಮಳೆಗರೆಯುವರು ಗಾಳಿಯ ಸಹಾಯವಿರದೆ."

ಮರುತರು ಮಳೆಯನ್ನು ದೂರ ತಳ್ಳುವ ಗಾಳಿಯನ್ನು ತಪ್ಪಿಸುತ್ತಾರೆ - ಎಂಬುದು ಬಾಹ್ಯಾರ್ಥ. 
ರಸಹೀನ ಮತ್ತು ಜಡ ಶರೀರದಲ್ಲಿ ಜೀವವನ್ನು ಉರ್ಜಿತಗೊಳಿಸುವ ಶಕ್ತಿಗಳನ್ನು 'ಮಳೆ' ಪ್ರತಿನಿಧಿಸುತ್ತದೆ. ಆ ರಸಹೀನ ವಸ್ತುಗಳನ್ನು 'ಮರುಭೂಮಿ'ಯಿಂದ ಸಂಕೇತಿಸಲಾಗಿದೆ. 
****


ಸಂಚಿಕೆ 465🕉
🔯 ಋಗ್ವೇದ: 1-38-9🔯

ॐ ದಿವಾ ಚಿತ್ ತಮ: ಕೃಣ್ವಂತಿ ಪರ್ಜನ್ಯೇನ ಉದವಾಹೇನ ಯತ್ ಪೃಥಿವೀಂ ವ್ಯುಂದಂತಿ: ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ಹಗಲಿನಲ್ಲೂ ಕತ್ತಲೆ ಕವಿಸಬಲ್ಲರು ಅವರು; ಮಳೆ-ಗರ್ಭಿತ ಮೋಡಗಳ ಮೂಲಕ; ಇವು ಪ್ರವಾಹದಿಂದ ಆವರಿಸುವವು ಭೂಮಿಯನು."
****


೧೧. ಉತ ತ್ವಂ ಸಖ್ಯೇ ಸ್ಥಿರಪೀತಮಾಹುಃ ನೈನಂ ಹಿನ್ವನ್ತ್ಯಪಿ ವಾಜಿನೇಷು |
ಅಧೇನ್ವಾ ಚರತಿ ಮಾಯಯೈಷ ವಾಚಂ ಶುಶ್ರುವಾಮ ಫಲಾಮಪುಷ್ಪಾಮ್ ||
(ಋಗ್ವೇದಸಂಹಿತಾ ಮಂಡಲ ೧೦, ಸೂಕ್ತ ೭೧, ಮಂತ್ರ ೫)

ವಾಕ್ ತತ್ತ್ವವನ್ನು ಸಾಕ್ಷಾತ್ಕರಿಸಬಲ್ಲವನನ್ನು ತಿಳಿದವರು ವಿದ್ವಾಂಸರ ಸಮೂಹದಲ್ಲಿ, ವಿಶೇಷಜ್ಞಾನಿಯೆಂದು ಹೇಳುವರು. ಇಂತಹ ಪುರುಷನನ್ನು ವಾಗ್ವ್ಯವಹಾರಗಳಲ್ಲಿ ಯಾರೂ ಪ್ರತಿಭಟಿಸುವುದಿಲ್ಲ ಹಾಗೂ ಅಲಕ್ಷಿಸುವುದಿಲ್ಲ. ಆದರೆ, ಜ್ಞಾನರಹಿತ ಪುರುಷನಾದರೋ ರಸಹೀನನಾಗಿ, ಫಲವಿಲ್ಲದುದೂ ಪುಷ್ಪರಹಿತವೂ ಆದ ವಾಕ್ಕನ್ನು / ವೇದಮಂತ್ರವನ್ನು / ಮಾತನ್ನು ಅರ್ಥಜ್ಞಾನವಿಲ್ಲದೆ ಕೇವಲ ಕಿವಿಯಿಂದ ಮಾತ್ರ ಕೇಳಿ ಅಜ್ಞಾನಯುಕ್ತನಾಗಿ ಸಂಚರಿಸುತ್ತಾನೆ.
******

 ಋಗ್ವೇದ: 1-44-3🔯:*

ॐ ಅದ್ಯಾ ದೂತಂ ವೃಣೀಮಹೇ ವಸುಮ್ ಅಗ್ನಿಂ ಪುರುಪ್ರಿಯಮ್ ಧೂಮಕೇತುಂ ಭಾಋಜೀಕಂ ವ್ಯುಷ್ಟಿಷು ಯಜ್ಞಾನಾಮ್ ಅಧ್ವರಶ್ರಿಯಮ್ ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ನಿಧಿಯೂ, ಬಹುಜನಪ್ರಿಯನೂ, ದೂತನೂ ಆದ ಅಗ್ನಿಯನ್ನು ಪ್ರಾರ್ಥಿಸುವೆವು ನಾವು ಇಂದು; ಅವನು ಧೂಮಕೇತು; ನೇರ-ಕಾಂತಿ ಉಳ್ಳವನು; ಉಷೋದಯದಲ್ಲಿನ ಯಜ್ಞದ ವೈಭವ ಅವನಾಗಿಹನು."

ಧೂಮಕೇತು:  ಸಾಮಾನ್ಯವಾಗಿ ಇದನ್ನು ಧೂಮ-ಪತಾಕೆಯುಳ್ಳವನು ಎಂದು ಅರ್ಥೈಸುವುದಾಗಿರುತ್ತದೆ. ಇದು ಭೌತಿಕ ಅಗ್ನಿಯ ಉರಿಯಿಂದುಂಟಾಗುವ ಹೊಗೆಯನ್ನು ಹೇಳುತ್ತದೆ. 
ಮೂಲಾರ್ಥವನ್ನು ನೋಡಿದರೆ, ಧೂಮವು ಕ್ಷಿಪ್ರಗತಿಯನ್ನು ಸೂಚಿಸುತ್ತದೆ. ಕೇತುವೆಂದರೆ, ಅಂತರ್ಜ್ಞಾನ ಅಥವಾ ಅಂತರ್ ಪ್ರಕಾಶದ ಕಿರಣ ಎಂದಾಗುತ್ತದೆ. 
********


ಸಂಚಿಕೆ 519🕉
🔯 ಋಗ್ವೇದ: 1-44-2🔯

ॐ ಜುಷ್ಟೋ ಹಿ ದೂತೋ ಅಸಿ ಹವ್ಯವಾಹನೋ ಅಗ್ನೇ ರಥೀ: ಅಧ್ವರಾಣಾಮ್ ಸಜೂ: ಅಶ್ವಿಭ್ಯಾಮ್ ಉಷಸಾ ಸುವೀರ್ಯಮ್ ಅಸ್ಮೇ ದೇಹಿ ಶ್ರವೋ ಬೃಹತ್: ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ಓ ಆರಾಧ್ಯ ಅಗ್ನಿಯೇ, ನೀನು ದೇವದೂತನೆಂಬುದು ಖಚಿತ; ನಮ್ಮ ಹವಿಸ್ಸುಗಳನ್ನು ಸ್ವೀಕರಿಸುವವನೆ, ಯಜ್ಞ ಪಯಣದಲ್ಲಿ ರಥಿಕನಾಗಿರುವ ನೀನು, ಅಶ್ವಿನ ದೇವತೆಗಳು ಹಾಗೂ ಉಷದೇವಿಯರೊಡನೆ ಸ್ಥಾಪಿಸು ನಮ್ಮೊಳು ಸುವೀರ್ಯಭರಿತ ಬೃಹತ್ ಪ್ರೇರಣೆಯನು."
********


ಸಂಚಿಕೆ 485🕉
🔯 ಋಗ್ವೇದ: 1-40-4🔯

ॐ ಯೋ ವಾಘತೇ ದದಾತಿ ಸೂನರಂ ವಸು ಸ ಧತ್ತೇ ಅಕ್ಷಿತಿ ಶ್ರವ ತಸ್ಮಾ ಇಳಾಂ ಸುಮೀರಾಮ್ ಆ ಯಜಾಮಹೇ ಸುಪ್ರತೂರ್ತಿಮ್ ಅನೇಹಸಮ್: ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ದೇವತೆಗಳಿಗೆ ಐಶ್ವರ್ಯಗಳನ್ನು ಅರ್ಪಿಸುತ ಮಂತ್ರ ಪಠಿಸುವ ಅಭೀಪ್ಸು, ಹೊಂದುವನು ಅಕ್ಷಯ ಅಭೀಪ್ಸೆ; ಅವನಿಗಾಗಿ ಆವಾಹಿಸುವೆವು ಇಳಾ ದೇವಿಯನು ಹವಿಸ್ಸನ್ನರ್ಪಿಸುತ:  ಅವಳು ಅದಮ್ಯಳು, ವೀರ-ಬಲದವಳು ಹಾಗೂ ಶೀಘ್ರ ಕಾರ್ಯೋನ್ಮುಖಿ."
*****

ಸಂಚಿಕೆ 498🕉
🔯 ಋಗ್ವೇದ: 1-41-9🔯

ॐ ಚತುರ: ಚಿದ್ ದದಮಾನಾದ್ ಬಿಭೀಯಾದಾ ನಿಧಾತೋ: ನ ದುರುಕ್ತಾಯ ಸ್ಪೃಹಯೇತ್: ॐ||

ಮಂತ್ರದ ಸಂಕ್ಷಿಪ್ತ ವಿವರಣೆ:-

"ಎಲ್ಲರೂ ಸಲಹುವವನಿಂದ ಅನುಗ್ರಹೀತವಾಗಿವೆ ನಾಲ್ಕು ಶಕ್ತಿಗಳು; ಮನೋ ಹೋರಾಟಕ್ಕೆ ಆಸ್ಪದ ಇಲ್ಲ; ಪ್ರತ್ಯುತ್ತರದಲಿ ಬೈಗುಳನು ಬಳಸದಂತಾಗಲಿ ನಾವು."

ಸರ್ವಶ್ರೇಷ್ಠನಾದ ಭಗವಂತನು ತನ್ನ ಭಕ್ತನನ್ನು ಸದಾ ಕಾಪಾಡುತ್ತಾನೆ ಮತ್ತು ಅವನಿಗೆ ನಾಲ್ಕು ದೇವತೆಗಳನ್ನು, ಶಕ್ತಿಗಳನ್ನು ನೀಡುತ್ತಾನೆ.
ಆದುದರಿಂದ, ಭಕ್ತನು ದೂಷಣೆಗಳಿಗೆ ಅಥವಾ ರಿಪುಗೈದ ಕೇಡುಗಳಿಗೆ, ದುರುಕ್ತಿಗಳಿಂದ ಪ್ರತಿಕ್ರಿಯಿಸಬೇಕಿಲ್ಲ.
ಮಿತ್ರ, ವರುಣ, ಭಗ ಮತ್ತು ಆರ್ಯಮಾ ಇವರೇ ಇಲ್ಲಿ ಹೇಳಿದ ನಾಲ್ಕು ಶಕ್ತಿಗಳು.
********

ಸಂಚಿಕೆ 499🕉
🔯 ಋಗ್ವೇದ: 1-42-1🔯

ॐ ಸಂ ಪೂಷನ್ ಅಧ್ವನ: ತಿರ ವಿ ಅಂಹೋ ವಿಮುಚೋ ನಪಾತ್ ಸಕ್ಷ್ವಾ ದೇವ ಪ್ರ ಣ: ಪುರ: ॐ|| 


ಮಂತ್ರದ ಸಂಕ್ಷಿಪ್ತ ವಿವರಣೆ:-


"ಓ ಪೂಷಣ, ಸಾಗಿಸು ನಮ್ಮನು ಸುರಕ್ಷಿತ ಪಥದೊಳು; ನಿವಾರಿಸು ಪಥದೊಳಿರುವ ದುಷ್ಟ-ಶಕ್ತಿಗಳನು; ಓ ಇಂದ್ರ, ನಮಗೆ ನಿಕಟವಾಗಿರು; ನಮಗಿಂತ ಮುಂದೆ ಇರು." 

********


ಸಂಚಿಕೆ 500🕉

🔯 ಋಗ್ವೇದ: 1-42-2🔯

ॐ ಯೋ: ನ: ಪೂಷನ್ ಅಘೋ ವೃಕೋ ದು:ಶೇವ ಆದಿಧೇಶತಿ ಅಪ ಸ್ಮತಂ ಪಥೋ ಜಹಿ: ॐ|| 


ಮಂತ್ರದ ಸಂಕ್ಷಿಪ್ತ ವಿವರಣೆ:-


"ನಮ್ಮನು ಕೈವಶಮಾಡಿಕೊಂಡು ಆಳಬಯಸುವವರನು, ನಮಗೂ ಆಪತ್ತು ತರುವ ದುಷ್ಟರನು ಹಾಗೂ ವೃತ್ರ-ರಾಕ್ಷಸರನು, ಪಥದಿಂದ ದೂರ ಓಡಿಸುವನು ಪೂಷಣ." 


ಅಂತರ್ಯಾತ್ರೆಯಲ್ಲಿ, ತೋಳದ ಸಂಕೇತದಿಂದ ನಿರೂಪಿಸಲ್ಪಟ್ಟು ವೃತ್ರನಿಂದ, ದಾನವರಿಂದ ಅನೇಕ ಅಡ್ಡಿಗಳು ಉಂಟಾಗುತ್ತವೆ. 

ಪೂಷಣ ಆ ರಿಪುಗಳನ್ನು ಸುಲಭವಾಗಿ ನಿವಾರಿಸಬಲ್ಲ.
ಆದುದರಿಂದ ಈ ಪ್ರಾರ್ಥನೆ. 

ಪೂಷಣ, ಆದಿತ್ಯರಲ್ಲಿ ಒಬ್ಬ. 

ಅವನು ಪೃಥ್ವಿ ಮತ್ತು ಯಜಮಾನ ಈರ್ವರನ್ನೂ ಪೋಷಣೆ ಮಾಡುತ್ತಾನೆ. 
ಈ ಎಲ್ಲ ದೇವತೆಗಳ ನಿವಾಸ ಸ್ಥಾನವು ಊರ್ಧ್ವಲೋಕದಲ್ಲಿ ಇರುವುದಾದರೂ, ಅವರು ಮುಖ್ಯವಾಗಿ ನೆಲೆಸಿರುವ ಸ್ಥಾನ ಅಥವಾ ಕಾರ್ಯಕ್ಷೇತ್ರಗಳು ಬೇರೆ ಬೇರೆಯಾಗಿವೆ. 

ಹೀಗೆ ದೈವೀ ಮಾನಸದ ಅಧಿಪತಿಯಾದ ಇಂದ್ರನ ಸ್ಥಾನ ಸ್ವರ್. 

ಅಗ್ನಿಯು ಪೃಥ್ವಿಯ ಮೇಲೆ ಸ್ಥಿತನಾಗಿರುತ್ತಾನೆ. 
ಮರುದ್ಗಣಗಳು ಅಂತರಿಕ್ಷಕ್ಕೆ ಸೇರಿದವರು. 
ಪೂಷಣ ಮೂರನೆಯ ಸ್ತರಕ್ಕೆ ಸೇರಿದವನಾದರೂ, ಅವನು ಪೃಥ್ವಿಯ ಅಧಿಪತಿಯಾಗಿರುವ ಕಾರಣ, ಪೃಥ್ವಿಯೇ ಅವನ ಸ್ಥಾನವೆಂದು ಪರಿಗಣಿಸಲಾಗಿದೆ. 
ಪೃಥ್ವಿಯನ್ನು ಅವನೇ ಆಧರಿಸಿ ಹಿಡಿದಿದ್ದಾನಲ್ಲದೆ, ಅದನ್ನು ಪೋಷಿಸುತ್ತಾನೆ. 

********

ಆಧಾರ— ಋ.ಸಂ.೧೦.೧೩೦.೩
ಶ್ರೀಮದ್ವಾರುಣಪುರಾಣಮ್ ― ವೇದೋಕ್ತಸೃಷ್ಟಿಃ

ತನುತ ಉತ್ಕೃಣತ್ತ್ಯೇಷಃ ಸೃಷ್ಟಿಜಾಲಂ ಪ್ರಜಾಪತಿಃ |
ತೇನೇ ನಾಕೇऽಪಿ ಸರ್ವತ್ರ ಮಯೂಖಾಸ್ತತ್ರ ಶೋಭಿತಾಃ || ೪೩ ||

ಇಂತಹ ಸೃಷ್ಟಿಜಾಲವನ್ನು ಸೃಷ್ಟಿಕರ್ತನಾದ ಪ್ರಜಾಪತಿಯು ಸ್ವರ್ಗಾದಿ ಸಕಲಲೋಕಗಳಲ್ಲೂ ಸಂಕೀರ್ಣವಾಗಿ ವಿಸ್ತರಿಸಿದನು. ಹೀಗೆ ಸಕಲಲೋಕಗಳಲ್ಲೂ ಭಗವಂತನ ಶಕ್ತಿಯ ಕಿರಣಗಳು ನಾನಾದೈವೀರೂಪದಲ್ಲಿ ಸುಶೋಭಿತವಾಗಿವೆ.

(ಆಧಾರ— ಋ.ಸಂ. ೧೦.೧೩೦.೨— “ ಪುಮಾನ್ ಏನಂ ತನುತ ಉತ್ ಕೃಣತ್ತಿ ಪುಮಾನ್ ವಿ ತತ್ನೇ ಅಧಿ ನಾಕೇ ಅಸ್ಮಿನ್ ಇಮೇ ಮಯೂಖಾ ಉಪ ಸೇದುಃ ಊ ಸದಃ ಸಾಮಾನಿ ಚಕ್ರುಃ ತಸರಾಣಿ ಓತವೇ ”)

ದೇವಾಸ್ತತ್ರ ಸಮಾಸೀನಾ ಸೃಷ್ಟಿಜಾಲೇ ಸುರಕ್ಷಯೇ |
ಸಾಮಮನ್ತ್ರಾಣಿ ಜಾಲಸ್ಯ ತಸರಾಂಶ್ಚಕ್ರುರೋತವೇ || ೪೪ ||

ಆ ಸೃಷ್ಟಿಜಾಲದಲ್ಲಿ ದೇವತೆಗಳು ಸುರಕ್ಷಣೆಗಾಗಿ ಆಯಾ ಸ್ಥಾನಗಳಲ್ಲಿ ಆಸೀನರಾದವರಾಗಿರುವರು. ಸೃಷ್ಟಿಯಜ್ಞವೆಂಬ ಬಟ್ಟೆಯ ನೇಯ್ಗೆಗಾಗಿ ಹಾಗೂ ಅದರ ರಕ್ಷಣೆಗಾಗಿ (ಅವತು— ರಕ್ಷಿಸಲಿ; ಓತವೇ— ರಕ್ಷಣೆಗಾಗಿ; ಅವ ರಕ್ಷಣೇ ಧಾತುಃ) ಸಾಮಮಂತ್ರಗಳು ಗ್ರಂಥಿ (ಗಂಟು)ಗಳನ್ನುಂಟುಮಾಡುವುವು (ತಸರಾಣಿ— ಗಂಟುಗಳು).

ಕಿಮಾಸೀತ್ ಪ್ರಮಾಣಂ ನಿದಾನಂ ಕಿಮಾಸೀತ್
ಸುಮೂರ್ತಿಶ್ಚ ಕಾऽऽಸೀತ್ ತಥಾಜ್ಯಂ ಕಿಮಾಸೀತ್ |
ಪರಿಧಿಃ ಕ ಆಸೀಚ್ಛನ್ದಃ ಕಿಮಾಸೀತ್
ದೇವಾ ಯದಾ ದೇವಮಯಜನ್ತ ವಿಶ್ವೇ || ೪೫ ||

ಸಕಲ ದೇವತೆಗಳು ಆ ಪರಮಪುರುಷನಾದ ದೇವದೇವನನ್ನು ಕುರಿತು ಯಜ್ಞಮಾಡಿದಾಗ, ಆ ಯಜ್ಞಕ್ಕೆ ಪ್ರಮಾಣವೇನಿತ್ತು? ಕಾರಣ / ಮೂಲ ಯಾವುದಿತ್ತು? ದೇವತಾಪ್ರತಿಮೆ / ಆಕಾರ / ರೂಪ ಯಾವುದಾಗಿತ್ತು? ಆಹುತಿ / ಆಜ್ಯ ಯಾವುದಾಗಿತ್ತು? ಆ ಯಜ್ಞವನ್ನು ಆವರಿಸಿದ ರಕ್ಷಾಪರಿಧಿ ಯಾವುದು? ಛಂದಸ್ಸುಗಳು ಯಾವುವು ಆಗಿದ್ದವು?

(ಆಧಾರ— ಋ.ಸಂ.೧೦.೧೩೦.೩— “ಕಾಸೀತ್ ಪ್ರಮಾ ಪ್ರತಿಮಾ ಕಿಂ ನಿದಾನಮ್, ಆಜ್ಯಂ ಕಿಮ್ ಆಸೀತ್ ಪರಿಧಿಃ ಕ ಆಸೀತ್ | ಛನ್ದಃ ಕಿಮಾಸೀತ್ ಪ್ರಉಗಮ್ ಕಿಮುಕ್ಥಂ, ಯದ್ದೇವಾ ದೇವಮ್ ಅಯಜನ್ತ ವಿಶ್ವೇ ||”)

*****
ಸಂಚಿಕೆ 518🕉
🔯 ಋಗ್ವೇದ: 1-44-1🔯

ॐ ಅಗ್ನೇ ವಿವಸ್ವತ್ ಉಷಸ: ಚಿತ್ರಂ ರಾಧೋ ಅಮರ್ತ್ಯ ಆ ದಾಶುಷೇ ಜಾತವೇದೋ ವಹಾ ತ್ವ-ಮದ್ವಾ ದೇವಾಂ ಉಷರ್ಬುಧ: ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ಓ ಅಮರ ಅಗ್ನಿಯೇ ಜಾತವೇದನೇ ದಾತನಿಗೆ ತಂದುಕೊಡು; ಉಷಳಿಂದ ವೈವಿದ್ಯಮಯ ಹಾಗೂ ಜ್ಯೋತಿರ್ಮಯ ಸಂಪತ್ತನ್ನು; ಉಷೋದಯದಲಿ ಜಾಗೃತರಾದ ದೇವತೆಗಳನ್ನು ಕರೆದು ತಾ ಇಂದು." 

ಉಷಾದೇವಿ ಆಧ್ಯಾತ್ಮಿಕ ಉಷೋದಯ. 
ಮುಂಜಾವಿನಲ್ಲಿ ಕಾಣುವ ಉಷ:ಕಿರಣಗಳು ಸೂರ್ಯನ ಆಗಮನವನ್ನು ಸೂಚಿಸುವಂತೆ, ಸಾಧಕರ ಅಂತರ್ಯಜ್ಞದಲ್ಲಿ ಸತ್ಯಪ್ರಕಾಶದ ಉದಯವನ್ನು ಉಷಾದೇವಿ ಅಂತರಂಗದಲ್ಲಿ ಕಾಣಿಸುಕೊಳ್ಳುವುದು ಸೂಚಿಸುತ್ತದೆ. 
ಉದಯಕಾಲದಲ್ಲಿ ದೇವತೆಗಳನ್ನು ಕರೆತಂದು ಸಾಧಕನಲ್ಲಿ ಪ್ರಕಟಗೊಳಿಸುವುದು ಅಗ್ನಿಯ ಕಾಯಕ. 
ಅಂತರಂಗದಲ್ಲಿ ಅಗ್ನಿಯ ಜನನವಾದ ನಂತರವೇ ಇತರ ದೇವತೆಗಳು ಸಾಧಕರಲ್ಲಿ ಜಾಗೃತರಾಗುತ್ತಾರೆ. 

ಜಾತವೇದ:  ಜನ್ಮತಾಳಿದ ಪ್ರತಿಯೊಂದನ್ನು ತಿಳಿದಿರುವವನು. ಅಗ್ನಿಯು ಹೃದಯದಲ್ಲಿ ಇರುವುದರಿಂದ, ಎಲ್ಲ ಜೀವಿಗಳ, ಹಿಂದಿನ ಎಲ್ಲ ಜನ್ಮಗಳ ಇತಿಹಾಸವನ್ನು ಬಲ್ಲವನಾಗಿದ್ದಾನೆ. 
ಹಾಗಾಗಿ ಅವನು ಪ್ರತಿಯೊಂದು ಜೀವಿಯನ್ನೂ ನಿರಂತರವಾಗಿ ಸರಿಯಾದ ಹಾದಿಯಲ್ಲಿ ಮುನ್ನಡೆಸುತ್ತಾನೆ. 
********


ಸಂಚಿಕೆ 521🕉
🔯 ಋಗ್ವೇದ: 1-44-4🔯:*

ॐ ಶ್ರೇಷ್ಠಂ ಯವಿಷ್ಠಮ್ ಅತಿಥಿಂ ಸ್ವಾಹುತಂ ಜುಷ್ಟಂ ಜನಾಯ ದಾಶುಷೇ ದೇವಾಂ ಅಚ್ಛಾ ಯಾತವೇ ಜಾತವೇದಸಮ್ ಅಗ್ನಿಮೀಳೇ ವ್ಯುಷ್ಟಿಷು ॐ|| 

ಮಂತ್ರದ ಸಂಕ್ಷಿಪ್ತ ವಿವರಣೆ:-

"ನಮ್ಮ ಸಮ್ಮುಖಕೆ ದೇವತೆಗಳನು ಕರೆತರಲು ಉಷೋದಯದಲಿ, ಪ್ರಾರ್ಥಿಸುವೆ ಜಾತವೇದಸ ಅಗ್ನಿಯನು; ಅವನು ಉತ್ಕೃಷ್ಟನು, ತಾರುಣ್ಯಪೂರ್ಣನು, ಅತಿಥಿಯು, ಹವಿಸ್ಸುಗಳಿಂದ ಸುಭೋಜಿತ, ದಾರಾಳ, ಯಜ್ಞಕರ್ತನಿಗೆ ಆತ್ಮೀಯನು."

ಸಂಗ್ರಹ:-

ಪಂ. ವಿಜಯೇಂದ್ರ ರಾಮನಾಥ ಭಟ್. 
ಶಿವಮೊಗ್ಗ.  Shivamogga. 
*******


ಜಗತ್ತಿನ ಮೊದಲ ಡಾಕ್ಟರ್ ಸೂರ್ಯ ! ಪ್ರಸ್ಕಣ್ವಮಹರ್ಷಿ ಋಗ್ವೇದ ಕಾಲದ ಒಬ್ಬ ಋಷಿಯಾಗಿದ್ದ.
ಜಗತ್ತಿನ ಮೊದಲ ಡಾಕ್ಟರ್ ಸೂರ್ಯ !

ಪ್ರಸ್ಕಣ್ವಮಹರ್ಷಿ ಋಗ್ವೇದ ಕಾಲದ ಒಬ್ಬ ಋಷಿಯಾಗಿದ್ದ. 

ಅನೇಕ ಸೂಕ್ತಗಳ ದೃಷ್ಟಾರನಾಗಿ ಕಾಣಿಸಿಕೊಳ್ಳುವ ಈತ ಕಣ್ವ ಮಹರ್ಷಿಯ ವಂಶದವನು. 

ಕಣ್ವನ ಮಗ ಎನ್ನುವುದಾಗಿಯೂ ಋಗ್ವೇದದ ಒಂದನೇ ಮಂಡಲದ ನಲವತ್ತನಾಲ್ಕನೇ ಸೂಕ್ತದಲ್ಲಿ ಹೇಳಲಾಗಿದೆ. 

ಕಣ್ವ ಋಷಿಯು ಋಗ್ವೇದದ ೯೭ ಋಕ್ಕುಗಳಿಗೆ ಋಷಿಯಾಗಿ ಸಿಗುತ್ತಾನೆ. ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಪ್ರಸಿದ್ಧ ಋಷಿಗಳಲ್ಲಿ ಈತ ಒಬ್ಬ.

 ಋಗ್ವೇದದ ಎಂಟನೇ ಮಂಡಲದಲ್ಲಿರುವ ಎಲ್ಲಾ ಸೂಕ್ತಗಳಿಗೆ ಈತ ಮತ್ತು ಈತನ ವಂಶೀಯರೇ ಋಷಿಗಳಾಗಿದ್ದಾರೆ. 

ಈ ಕಣ್ವನ ಮಗ ಪ್ರಸ್ಕಣ್ವ ವಿಶೇಷವಾಗಿ ಕಾಣಿಸಿಕೊಳ್ಳುತ್ತಾನೆ. 

ಅದಕ್ಕೆ ಕಾರಣವಿದೆ ಆತ ಸೂರ್ಯನ ಕುರಿತಾಗಿ ಎಲ್ಲಾ ಕಡೆಯೂ ಪ್ರಾರ್ಥಿಸಿ ಆತನ ಶಕ್ತಿಯನ್ನು ಹೊಗಳುತ್ತಾನೆ. 

ಪ್ರಸ್ಕಣ್ವ ವ್ಯಾಧಿಗಳಿಂದ ಬಳಲುತ್ತಿದ್ದ ಎನ್ನುವುದು ಆತನ ಅನೇಕ ಋಕ್ಕುಗಳಿಂದ ತಿಳಿದು ಬರುತ್ತದೆ. 

ಉದ್ಯನ್ನದ್ಯ ಮಿತ್ರಮಹ ಆರೋಹನ್ನುತ್ತರಾಂ ದಿವಂ |
ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ || 

ಹೇ ಸೂರ್ಯದೇವ, ನೀನು ಈ ಜಗತ್ತಿನ ಅನುಕೂಲವಾಗಿರತಕ್ಕ ತೇಜಸ್ಸಿನಿಂದ ಕೂಡಿದ್ದಿಯೇ. 

ಸಕಲ ಚರಾಚರ ಜೀವ ಜುಅಂತುಗಳಿಗೂ ಎಲ್ಲವಕ್ಕೂ ಪ್ರೇರಕನಾಗಿ ಚೈತನ್ಯವನ್ನು ತುಂಬುವವನಾಗಿದ್ದಿಯೇ, 

ಈಗ ಉದಯಿಸಿ ಅತ್ಯಂತ ಎತ್ತರದಲ್ಲಿರುವ ಅಂತರಿಕ್ಷವನ್ನು ಹತ್ತುತ್ತಾ ನನ್ನ ಹೃದಯಸಂಬಂಧೀ ರೋಗ(ಹೃದಯದಲ್ಲಿನ ಆಂತರಿಕವಾದ ರೋಗ) ಮತ್ತು ನನ್ನ ಕಾಮಾಲೆ ಅಥವಾ ಹಳದಿ ಬಣ್ಣದ ಚರ್ಮವ್ಯಾದಿಯನ್ನು ಗುಣಪಡಿಸು ಎನ್ನುವುದು ಪ್ರಸ್ಕಣ್ವ ಋಷಿಯ ನಿವೇದನೆ. 

ಅಂದರೆ ಆತ ಈ ಎರಡು ವಿಧದ ರೋಗದಿಂದ ಪೀಡಿತನಾಗಿ ಅದನ್ನು ಗುಣಪಡಿಸುವಂತೆ ಬೇಡಿಕೊಳ್ಳುತ್ತಾನೆ.

ಈ ಋಕ್ಕನ್ನು ರೋಗದ ಶಾಂತಿಗಾಗಿ ಅಂದರೆ ರೋಗ ಉಲ್ಬಣಿಸದಂತೆ ಪಠಿಸಬೇಕಂತೆ.

 ಉದ್ಯನ್ನದ್ಯ ಎನ್ನುವ ಈ ಋಕ್ಕು ಪ್ರಸ್ಕಣ್ವನ ಚರ್ಮ ಸಂಬಂಧೀ ರೋಗವನ್ನು ನಿವಾರಿಸುವ ಕುರಿತು ಆತ ಸೂರ್ಯನಲ್ಲಿ ಬೇಡಿಕೊಳ್ಳುವ ಕುರಿತು ಅದನ್ನೇ "ಉದ್ಯನ್ನದ್ಯ ಮಿತ್ರಮಹ"

 ಅಂದರೆ ಈಗತಾನೇ ಉದಯಿಸುತ್ತಿರುವ ಸೂರ್ಯನು ಆರೋಹನ್ ಉತ್ತರಾಂ ದಿವಂ ಅಂದರೆ ಆಮೇಲೆ ಅತ್ಯಂತ ಎತ್ತರಕ್ಕೆ ಏರಿ ಹೋಗುತ್ತಾನೆ. ಎಂದು

 "ಮಿತ್ರಮಹ" ಎನ್ನುವುದು ಸೂರ್ಯನಿಗೆ. ಅಂದರೆ ಅನುಕೂಲವಾದ ಮತ್ತು ಅತ್ಯವಶ್ಯವಾದ ಕಾಂತಿಯಿಂದ ಕೂಡಿರುವವನು ಎನ್ನುವುದನ್ನು ಸೂಚಿಸುತ್ತದೆ. 

"ಹೃದ್ರೋಗಂ" ಎನ್ನುವುದು ಹೃದಯದ ಸಂಬಂಧವಾದ ರೋಗವನ್ನು ಕುರಿತಾಗಿ ಹೇಳಲಾಗಿದೆ. 

"ಹರಿಮಾಣಂ" ಎನ್ನುವುದು ಬಾಹ್ಯ ಶರೀರದ ಚರ್ಮವು ಹಳದೀ ಬಣ್ಣಕ್ಕೆ ತಿರುಗಿ ಉಂಟಾಗುವ ಚರ್ಮವ್ಯಾದಿ ಅಥವಾ ತೊನ್ನು ಎನ್ನುವ ಕಾಯಿಲೆಯನ್ನು ಸೂಚಿಸುತ್ತದೆ. 

ಹೀಗೇ ಸೂರ್ಯನನ್ನು ಕುರಿತಾಗಿ ಇಲ್ಲಿ ಪ್ರಾರ್ಥನೆ ಇದ್ದರೆ ಮುಂದಿನ ಋಕ್ಕನ್ನು ಗಮನಿಸಿದರೆ ಅಲ್ಲಿ :

ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಸಿ |
ಅಥೋ ಹಾರಿದ್ರವೇಷು ಮೇ ಹರಿಮಾಣಂ ನಿ ದಧ್ಮಸಿ ||

ಈ ಋಕ್ಕಿನಲ್ಲಿ ಪರಿಹಾರವನ್ನೂ ಸೂಚಿಸಿದ್ದಾನೆ.

 ನನಗೆ ಈ ಹಳದಿ ಬಣ್ಣದ ದೇಹ ಬೇಡ ಇದು ನನಗೆ ಅನವಶ್ಯಕ ಇದ್ರ ಅವಶ್ಯಕತೆ ಇರುವುದು ಗಿಳಿಗಳಿಗೆ. 

ಅವುಗಿಳಿಗೆ ಹಸಿರು ಬಣ್ಣ್ದ ಜೊತೆಗೆ ಹಳದಿಯೂ ಇದೆ,

 ಅದಿಲ್ಲವಾದರೆ "ಹಾರಿದ್ರವೇಷು" ಅಂದರೆ ಹರಿತಾಳ ವೃಕ್ಷ ಅಥವಾ ಯಾವುದೋ ಒಂದು ಹಳದಿ ಬಣ್ಣದ ಎಲೆ ಹೊಂದಿರುವ ಮರದಲ್ಲಿ ಇಡು ಇದನ್ನು ತೊಲಗಿಸು ಎನ್ನುತ್ತಾನೆ.

 ಹೀಗೆ ಇಟ್ಟಲ್ಲಿ ನನ್ನ ರೋಗ ಸುಲಭವಾಗಿ ಗುಣವಾಗುತ್ತದೆ ಎನ್ನುತ್ತಾನೆ. 

ಹೀಗೆ ಮುಂದಿನ ಋಕ್ಕಿನಲ್ಲಿಯೂ ಅದಿತಿಯ ಸುತನಾದ ಆದಿತ್ಯನೇ ನನ್ನಲ್ಲಿ ರೋಗವನ್ನು ಸ್ವಸಾಮರ್ಥ್ಯದಿಂದ ಗುಣ ಪಡಿಸಿಕೊಳ್ಳುವ ಸಾಮರ್ಥ್ಯವಿಲ್ಲ ನೀನೇ ಗುಣಪಡಿಸು ಎಂದು ಬೇಡಿಕೊಳ್ಳುತ್ತಾನೆ. 

"ಪ್ರಿಯಮೇಧವತ್ ಅತ್ರಿವತ್ ಜಾತವೇದಃ ........... " ಎನ್ನುವ ಋಕ್ಕಿನಲ್ಲಿ

 ಅತ್ರಿ, ಪ್ರಿಯಮೇಧ ಮತ್ತು ವಿರೂಪ ಮತ್ತು ಆಂಗೀರಸರನ್ನು ನೀನು ಹೇಗೆ ಯಜ್ಞಗಳಲ್ಲಿ ಬಂದು ಉಪಕರಿಸಿದ್ದೆಯೋ ಹಾಗೆ ನನ್ನ ರೋಗವನ್ನೂ ನೀನು ಗುಣಪಡಿಸಿ ಉಪಕರಿಸು.

 ಇಲ್ಲಿ ಬಂದಿರುವ ಋಷಿಗಳ ವಿವರಣೆ ಅನವಶ್ಯಕವಾದುದರಿಂದ ಬರೆಯುತ್ತಿಲ್ಲ. 

ಸುಶಂಶೋ ಬೋಧಿಗೃಣ್ವತೇ ಯವಿಷ್ಠ್ಯ ಮಧುಜಿಹ್ವಃ ಸ್ವಾಹುತಃ |
ಪ್ರಸ್ಕಣ್ವಸ್ಯ ಪ್ರತಿರನ್ನಾಯುರ್ಜೀವಸೇ ನಮಸ್ಯಾ ದೈವ್ಯಂ ಜನಂ ||

ಹೇ ಅಗ್ನಿದೇವನೇ ನಿನಗೆ ಎಲ್ಲಾ ಕಡೆಯೂ ಹೋಮ ಮಾಡುವುದರಿಂದ ನಿನ್ನ ಜ್ವಾಲೆಯು ಅತ್ಯಂತ ಆಕರ್ಷಕವಾಗಿ ಮೇಲಕ್ಕೆದ್ದು ಎಲ್ಲರಿಗೂ ಸಂತೋಷವನ್ನು ಉಂಟುಮಾಡುತ್ತಿರುವೆ. 

ನಿನ್ನನ್ನು ಸ್ತೋತ್ರಮಾಡುವ ಯಜಮಾನನಿಗಾಗಿ ನಾವು ನಿನ್ನನ್ನು ಹೊಗಳುತ್ತೇವೆ. 

ಈಗ ನೀನು ಪ್ರಸ್ಕಣ್ವನ ಜೀವನವನ್ನು ವೃದ್ಧಿಸಿ ಅವನ ಆಯುಷ್ಯವನ್ನು ವರ್ಧಿಸು.

 ದೇವಸಂಬಂಧಿಯಾದ ಮನುಷ್ಯನನ್ನು ನೀನು ರಕ್ಷಿಸು ಎನ್ನುವುದಾಗಿ ಈ ಋಕ್ಕು ಹೇಳುತ್ತದೆ. 

ಅಂದರೆ ಇಲ್ಲಿ ಸೂರ್ಯ ಎಲ್ಲವಕ್ಕೂ ಕೇಂದ್ರನೆನಿಸಿಕೊಂಡಿದ್ದಾನೆ. ಪ್ರತಿಯೊಂದು ವಸ್ತು ವಿಷಯಕ್ಕೂ ಚೇತನಾ ಸ್ವರೂಪಿ ಸೂರ್ಯನೇ ಅಂದರೆ ಅದು ಅತಿಶಯವೆನ್ನಿಸದು. 

ಇಲ್ಲಿ ಇನ್ನೊಂದು ಗಮನಿಸಬೇಕಾದ್ದು ಹೃದಯ ಸಂಬಂಧೀ ರೋಗ ಮತ್ತು ಚರ್ಮ ಸಂಬಂಧೀ ರೋಗವನ್ನುಇ ಸೂರ್ಯ ಗುಣಪಡಿಸಬಲ್ಲ ಎನ್ನುತ್ತದೆ. 

ಹೌದು ಸಾಮಾನ್ಯವಾಗಿ ವೈದ್ಯಲೋಕದಲ್ಲಿಯೂ ಹೃದಯ ಸಂಬಂಧೀ ಕಾಯಿಲೆಗೆ ಸೂರ್ಯನ ಬಿಸಿಲಿನಲ್ಲಿ ನಡೆದಾಡಲು ಹೇಳುವುದು ಕೇಳಿದ್ದೇನೆ. 

ಚರ್ಮ ವ್ಯಾಧಿಗೂ ಅಷ್ಟೇ ವಿಟಮಿನ್ ಗಳ ಕೊರತೆಯನ್ನು ನೀಗಿಸಲೂ ಸಹ ಸೂರ್ಯನ ಬಿಸಿಲು ಅಥವಾ ಕಿರಣ ಅತ್ಯವಶ್ಯ ಎಂದು ಕೇಳಿದ್ದೇನೆ. 

ಇವತ್ತಿಗೂ ನಮ್ಮ ಮನಸ್ಸನ್ನು ಶಾಂತ ಗೊಳಿಸಲು ಉದ್ವೇಗದ ಜೀವನದಿಂದ ಸ್ವಲ್ಪ ವಿಶ್ರಾಂತಿಪಡೆಯಲು ಸಂಜೆಯ ಸೂರ್ಯಾಸ್ತದ ಮತ್ತು ಬೆಳಗಿನ ಸೂರ್ಯೋದಯದ ಬಿಸಿಲನ್ನು ಆಸ್ವಾದಿಸಿದಾಗ ಮನಸ್ಸು ಹಗುರವಾಗಿರುವುದು ನಮಗೆ ಗೊತ್ತಾಗುತ್ತದೆ.

 ಹಾಗಾದರೆ ಪ್ರಾಚೀನ ವಿಶ್ವದಲ್ಲಿ ವೈದ್ಯಕೀಯ ಜಗತ್ತಿಗೆ ಕೊಟ್ತ ಕೊಡುಗೆ ಸೂರ್ಯನ ತಾಪದಿಂದಲೂ ಅನೇಕ ವಿಧವಾದ ರೋಗಗಳು ಗುಣವಾಗುತ್ತವೆ ಎನ್ನುವುದು.

 ಹೌದು ನಮಗೆ ಇದು ಹೆಮ್ಮೆ ಎನ್ನಿಸುತ್ತದೆ ನಾವು ಭಾರತೀಯರು ಎನ್ನಲು. ಅಗಾಧ ಶಕ್ತಿಯನ್ನು ಉಚಿತವಾಗಿ ನಾವು ಪಡೆಯುತ್ತಿದ್ದೇವೆ. ಇದೇ ಸೂರ್ಯ ನಮ್ಮಿಂದ ಕಣ್ಮರೆಯಾಗಿ ಗಂಟೆಗಟ್ಟಲೆ ಸಿಗದಿದ್ದರೆ ! ಭಯಾನಕ !

#ಶಿಲೆಗಳಲ್ಲಡಗಿದ_ಸತ್ಯ ದಲ್ಲಿನ ಸಂಗ್ರಹ
https://www.mymandir.com/p/cHNK2
******
c
‘ಓ! ದೇವರೇ!! ನೀನು ಸೂರ್ಯನನ್ನು ಸೃಷ್ಟಿಸಿರುವೆ. ಅನಂತವಾದ ಶಕ್ತಿ ನಿನಗಿದೆ. ನೀನು ಸೂರ್ಯನಿಗಿಂತಲೂ ಮಿಗಿಲಾದ ಶಕ್ತಿಯುಳ್ಳವನು’. (ಋಗ್ವೇದ 1.6.5, ಋಗ್ವೇದ 8.12.30)
ಹಿರಣ್ಯಪಾಣಿಃ ಸವಿತಾ ವಿಚಷ್ರಣಿರುಭೆ ದಯಾವಾಪೃಥವೀ ಅಂತರೀಯತೆ| ಅಪಾಮೀವಾಂ ಬಾಧತೆ ವೇತಿ ಸೂರ್ಯಮಭಿ ಕೃಷ್ಣೆನ ರಜಸಾ ದಯಾಮೃಣೋತಿ || (ಋಗ್ವೇದ 1.35.9)
ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ ಆದರೆ ಅವನು ಭೂಮಿ ಮತ್ತು ಇತರ ಗ್ರಹಗಳನ್ನು ತನ್ನ ಶಕ್ತಿಯಿಂದ ಒಂದಕ್ಕೊಂದು ತಾಗದೇ, ತನ್ನ ಸುತ್ತಲೂ ತಿರುಗುವಂತೆ ಮಾಡಿದ್ದಾನೆ. (ಋಗ್ವೇದ 1.164.130)
ಸೂರ್ಯನು ತನ್ನ ಕಕ್ಷೆಯಲ್ಲೇ ತಾನು ತಿರುಗುತ್ತಾನೆ. ಹಾಗೂ ಅವನ ಗುರುತ್ವಾಕರ್ಷಣೆಯಿಂದ ಇತರ ಗ್ರಹಗಳು ಅವನ ಸುತ್ತ ಸುತ್ತುತ್ತಿವೆ ಕಾರಣ ಸೂರ್ಯನು ಇವುಗಳಿಗಿಂತ ದೊಡ್ಡವನು.
ಅತ್ರಾಹ ಗೋರಮನ್ವತ ನಾಮ ತ್ವಷ್ಟುರಪೀಚ್ಯಮ್ |
ಇಥ್ತಾ ಚಂದ್ರಮಸೋ ಗೃಹೆ|| (ಋಗ್ವೇದ 1.84.15)
ಚಲಿಸುತ್ತಿರುವ ಚಂದ್ರ ಯಾವಾಗಲೂ ಸೂರ್ಯನಿಂದ ಬೆಳಕನ್ನು ಪಡೆಯುತ್ತಾನೆ. The moving moon always receives a ray of light from sun.
ಸೋಮೋ ವಧೂಯುರಭವದಶ್ವಿನಾಸ್ತಾಮುಭಾ ವರಾ|
ಸೂರ್ಯಂ ಯತ್ಪಾತ್ಯೆ ಶಂಸಂತೀಂ ಮನಸಾ ಸವಿತಾದದಾತ್ || (ಋಗ್ವೇದ 10.85.9)
ಚಂದ್ರನು ಮದುವೆಯಾಗಲು ಇಚ್ಛಿಸಿದನು. ಅವನ ಮದುವೆಗೆ ದಿನ ಮತ್ತು ರಾತ್ರಿಗಳು ಬಂದವು. ಸೂರ್ಯನು ತನ್ನ ಮಗಳಾದ ರಶ್ಮಿಯನ್ನು ಚಂದ್ರನಿಗೆ ಉಡುಗೊರೆಯಾಗಿ ನೀಡಿದನು.
ಯತ್ತಾ್ವ ಸೂರ್ಯ ಸ್ವರ್ಭಾನುಸ್ತಮಸಾವಿದ್ಯದಾಸುರಃ |
ಅಕ್ಷೆತ್ರವಿದಯಥಾ ಮುಗ್ಧೇ ಭುವನಾನ್ಯದೀಧಯುಃ || (ಋಗ್ವೇದ 5.40.5)
ಓ! ಸೂರ್ಯ!! ನೀನು ಯಾರಿಗೆ ನಿನ್ನ ರಶ್ಮಿಗಳನ್ನು ನೀಡಿದ್ದೆಯೋ ಅವನೇ ನಿನ್ನನ್ನು ಅಡ್ಡಗಟ್ಟುವನು. ನಂತರ ಭೂಮಿಯಲ್ಲಿ ಕತ್ತಲು ಆವರಿಸುವುದು?.
“O Sun! When you are blocked by the one whom you gifted your own light (moon), and then earth gets scared by sudden darkness.” “Vedic commentary and Introduction to Vedas” [1876] I.I.Sc. [ Indian Institute Of Science ]
ಇದು ವೇದದ ಕೆಲವೇ ಕೆಲವು ಉದಾಹರಣೆಗಳು. ಇದರ ಕುರಿತು ಇನ್ನೂ ಹೆಚ್ಚು ಹೆಚ್ಚು ಸಂಶೋಧನೆಯಾಗಬೇಕಾಗಿದೆ. ಹೆಚ್ಚು-ಹೆಚ್ಚು ಜನರು ಇದರ ಬಗ್ಗೆ ಗಮನ ಹರಿಸಿದಾಗ ಇದನ್ನು ಬಹಳ ಬೇಗ ಸಾಧಿಸಬಹುದು ಹಾಗೂ ನಮ್ಮ ಪೂರ್ವಿಕರ ಸಾಧನೆಯ ಬಗ್ಗೆ ಪ್ರಪಂಚದೆದುರು ಹೆಮ್ಮೆಯಿಂದ ಹೇಳಬಹುದು. ಇದಕ್ಕೆ ಮೊದಲು ವೇದಗಳ ಬಗ್ಗೆ ನಮ್ಮಲ್ಲಿರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಬೇಕು. ಆಗ ಮಾತ್ರ ಇವೆಲ್ಲ ಸಾಧ್ಯವಾಗುವುದು.
‘ಅಗ್ನಿ ನೀರಿನಿಂದ ಉದಯಿಸುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ’ ಎನ್ನುತ್ತದೆ ಋಗ್ವೇದ. ಈ ವಿಷಯದ ಆಳದಲ್ಲಿ ವೈಜ್ಞಾನಿಕತೆ ಅಡಗಿದೆ. ನೀರು ಜಲಜನಕ ಮತ್ತು ಆಮ್ಲಜನಕದ ಮಿಶ್ರಣ. ಜಲಜನಕ ಶೀಘ್ರವಾಗಿ ದಹಿಸುವ ಅನಿಲವಾಗಿದ್ದು, ಆಮ್ಲಜನಕ ದಹನಕ್ಕೆ ಸಹಕಾರಿ.
ಅಗ್ನಿಯು ಜೀವರು ಮತ್ತು ದೇವರ ನಡುವಣ ಕೊಂಡಿ. ದೇವರ ಸಂತೃಪ್ತಿಗೆ ಮಾಡುವ ಯಜ್ಞ- ಹವನಗಳ ಮುಖವು ಅಗ್ನಿಕುಂಡ. ಸಾಧನಾಪಥದ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನದ ಅರಿವು, ದೈಹಿಕ ಮತ್ತು ಮಾನಸಿಕ ಶಕ್ತಿ, ಆಹಾರ, ನೆಲ ಮತ್ತು ಜಲಗಳಿಗಿಂತ ‘ಅಗ್ನಿತತ್ತ್ವ’ ಹೇಗೆ ಶ್ರೇಷ್ಠವಾದುದು ಎನ್ನುವುದನ್ನು ಚಿಂತಿಸೋಣ. ಸೂಕ್ಷ್ಮ ತತ್ತ್ವಗಳು ಸ್ಥೂಲ ತತ್ತ್ವಗಳಿಗಿಂತ ಹೆಚ್ಚು ವ್ಯಾಪಿಸಬಲ್ಲವಾದವು. ಅಗ್ನಿತತ್ತ್ವ ಸೃಷ್ಟಿಕಾರಕ, ಸ್ಥಿತಿಕಾರಕ ಮತ್ತು ಲಯಕಾರಕ ಪರಮಾತ್ಮನ ಗುಣಗಳನ್ನು ಹೊಂದಿದೆ. ಸೂರ್ಯ ನಮಗೆ ಬೆಳಕು ಮತ್ತು ಶಾಖ ನೀಡುವವನಾಗಿದ್ದಾನೆ. ಶಾಖ ಹೆಚ್ಚಾದಾಗ ಮಳೆ ಬರುತ್ತದೆ. ನೀರು ಆವಿಯಾಗಿ, ಆಕಾಶದಲ್ಲಿ ಮೋಡವಾಗಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಘರ್ಷಣೆಯ ಮೂಲಕ ನೀರೇ ಆಗುವುದು! ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಬಿಡುಗಡೆ ಮಾಡುವ ಸಮುದ್ರದ ಉಪ್ಪುನೀರು ಈ ಪ್ರಕೃತಿ ಚಕ್ರದಲ್ಲಿ ಸಿಹಿನೀರೇ ಆಗುವುದು.
ಪ್ರತಿಯೊಂದಕ್ಕೂ ಅಗ್ನಿ ಬೇಕು. ದೇವಮುಖವು ಅಗ್ನಿಯೇ ಆಗಿದೆ. ಹವಿಸ್ಸುಗಳನ್ನು ಅರ್ಪಿಸುವುದು ಅಗ್ನಿಮುಖದಿಂದಲೇ!
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ | ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ || (ಯಜು.40.16.)
ಸತ್ಯಪಥದಿಂದ ಮುಂದೆ ಸಾಗಿಸು. ಕರುಣೆ ಇರಲಿ. ನ್ಯಾಯಮಾರ್ಗದಿಂದ ಸಂಪತ್ತು ಬರಲಿ. ರಜಸ್, ತಮೋಗುಣವನ್ನು ನೀಡದೇ ಸತ್ವಗುಣವನ್ನು ಕರುಣಿಸು. ಬಾಳ ಬೆಳಗುವ ಜ್ಯೋತಿಯನ್ನು ನೀಡು ಪ್ರಭುವೆ’. Vedic commentary and Introduction to Vedas]
ಸೂರ್ಯ ಮತ್ತು ಅಗ್ನಿಯನ್ನು ಸಮಾನವಾಗಿ ನೋಡುವರು. ಆದರೆ ವೈಜ್ಞಾನಿಕವಾಗಿ ಸೂರ್ಯನ ಕಿರಣಗಳನ್ನು ಎರಡು ಮರದ ತುಂಡಿನಿಂದ ಮಂಥಿಸಿದರೆ ಇಲ್ಲವೇ ಭೂತಗನ್ನಡಿಯಲ್ಲಿ ಕೇಂದ್ರೀಕರಿಸಿದರೆ ಅಗ್ನಿಯ ಉತ್ಪಾದನೆ ಆಗುವುದು. ಆ ಅಗ್ನಿಯನ್ನು ಉಪಯೋಗಿಸಿ ಯಜ್ಞವನ್ನು ಮಾಡುವರು. ಆದರೆ ಭೂಲೋಕದ ವ್ಯವಹಾರದಲ್ಲಿ ಅಗ್ನಿಯನ್ನು ಹಲವಾರು ಹೆಸರುಗಳಿಂದ ಗುರುತಿಸುವರು. ಆಹವನೀಯ, ಗಾರ್ಹಪತ್ಯ ಮುಂತಾದವನ್ನು ಪವಿತ್ರಾಗ್ನಿ ಎಂದು ಕರೆಯುವರು.
(ಲೇಖಕರು ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು; ಯಕ್ಷಗಾನ ಅರ್ಥಧಾರಿ)
******

ಇದೊಂದು ಋಗ್ವೇದದ ಸೂಕ್ತ ಇದನ್ನು ನಾಲ್ಕು ರೀತಿಯ ಅರ್ಥಗಳಿಂದ ಹೇಗೆ ತಿಳಿಯಬಹುದೆಂದು ತೋರಿಸಿಕೊಟ್ಟಿದ್ದಾರೆ.
चक्वारी श्रुन्गा त्रायो अस्य पादाह् ! द्वे शीर्षे सप्तहस्तासो अस्य !!
त्रिधा बद्धो वृषभो रोरयीती ! महादेवो मर्त्यानि आविवेश !!

ಛಕ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ: ! ದ್ವೇ ಶೀರ್ಷೆ ಸಪ್ತ ಹಸ್ತಾಸೋ ಅಸ್ಯ !! 

ತ್ರಿಧಾ ಬದ್ಧೋ ವೃಷಭೋ ರೋರಯೀತಿ ! ಮಹಾದೇವೋ ಮರ್ತ್ಯಾನಿ ಆವಿವೇಶ !!

ಇದು ಅರ್ಥವಾಗಬೇಕಾದರೆ 
ತುರೀಯಮ್ ವಾಚೋ ಮನುಷ್ಯಾ ವದಂತಿ. = ನಾಲ್ಕುಬಗೆಯ ಮಾತುಗಳಿವೆ , ನಾಲ್ಕನೆಯ ಮಾತನ್ನ ಮನುಷ್ಯ ಮಾತಾಡುತ್ತಾನೆ. ಹೀಗೆ ಯಾವ ಯಾವುದೊ ಭಾಷೆಯಲ್ಲಿ ವೇದ ಹೇಳುತ್ತೆ. ಇದರ ಅರ್ಥವನ್ನು ತಿಳಿದಾಗ ವೇದಕ್ಕೆ ಹೇಗೆ ಅರ್ಥವನ್ನು ಹಚ್ಚಬೇಕು ಎಂದು ಗೊತ್ತಾಗುತ್ತದೆ.
ಛಕ್ವಾರಿ ಶೃಂಗ :- ಸಮಾಜಕ್ಕೆ ನಾಲ್ಕು ಕೋಡುಗಳು ಅಂದರೆ . ಪ್ರಾಚೀನರು ಸಮಾಜವನ್ನು 4 ವಿಧದಿಂದ ಅದರ ಸ್ಬಭಾವವನ್ನು ವಿಭಾಗ ಮಾಡಿದ್ದಾರೆ. ಸಮಾಜವನ್ನು ನಿಯಂತ್ರಣ ಮಾಡುವ ರಾಜನೀತಿಯನ್ನೂ 4 ವಿಧದಿಂದ ವಿಭಾಗ ಮಾಡಿದ್ದಾರೆ. ಸಮಾಜದ ವಿಭಾಗ : ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. 4 ಬಗೆಯ ಮನೋವೃತ್ತಿಗಳು : ಮೈತ್ರಿ, ಕರುಣಾ, ಮುದಿತತಾ, ಉಪೇಕ್ಷಾ. ಸಜ್ಜನರ ಸ್ನೇಹಮಾಡು , ದುರ್ಜನರ ಒಡನಾಟ ಬಿಡು, ಜಗಳವಾಡುವವರಿಂದ ತಪ್ಪಿಸಿಕೋ. ಸಂತೋಷದಿಂದಿರುವವರನ್ನು ನೋಡಿ ಸಂತೋಷಪಡು. 4 ರಾಜ ನೀತಿಗಳು , ಸಾಮ, ದಾನ, ಭೇದ , ದಂಡ. ಒಳ್ಳೆಯವರ ಜೊತೆ ಶಾಂತಿಯಿಂದ, ಅಗತ್ಯ ವಿರುವವರಿಗೆ ದಾನ ಮಾಡುವುದು, ಇಬ್ಬರು ಬಲಿಷ್ಠರಿದ್ದಾಗ ಅವರಲ್ಲಿ ಬೇಧತಂದು ಅವರವರಲ್ಲೇ ಜಗಳ ತಂದು ತಾನು ಬಲಾಢ್ಯನಾಗುವುದು. ಇದಾವುದಕ್ಕೂ ಬಗ್ಗದಿದ್ದಾಗ ಶಿಕ್ಷೆ, ಸಮಾಜ ಸಾಧನೆಯಿಂದ ಪಡೆಯುವ ಪುರುಷಾರ್ಥಗಳು 4 ಅವು , ಧರ್ಮ , ಅರ್ಥ, ಕಾಮ, ಮೋಕ್ಷ. ಇದೆ ನಾಲ್ಕು ಕೋಡುಗಳು. “ಚತ್ವಾರಿ ಶೃಂಗ”
3. ದ್ವೇ ಶೀರ್ಷೇ :- ಎರಡು ವಿದ್ಯೆ ಪರವಿದ್ಯೆ , ಅಪರ ವಿದ್ಯೆ ಅಪರವಿದ್ಯೆ ಅನ್ನುವುದು . ಮುಖ್ಯವಾದ ಅರ್ಥ. ಅಮುಖ್ಯವಾದ ಅರ್ಥ, ಎಂದು ಎರಡುಬಗೆ. . ತೆಂಗಿನಕಾಯಿ ಶಬ್ದಕ್ಕೆ, ತೆಂಗಿನಕಾಯಿ ಜರಟೆ ಅಮುಖ್ಯವಾದದದ್ದು. ಅದರ ತಿರಳು ಮುಖ್ಯವಾದ ಅರ್ಥ. ರೂಡಿಯಿಂದ ಬೇರೆ ಅರ್ಥ, ಮೂಲದಿಂದ ಬೇರೆ ಅರ್ಥ. ಮೂಲವಾದ ಅರ್ಥಬೇರೆ , ರೂಡಿಯಿಂದ ಬಳಸುವ ಪದದ ಅರ್ಥ ಬೇರೆ.
ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ.

ಚತ್ವಾರಿ ಶೃಂಗೋ : ನಮ್ಮ ಮನೆಯ ಗೂಳಿಗೆ ನಾಲಕ್ಕು ಕೋಡುಗಳು. ತ್ರಯೋ ಅಸ್ಯ ಪಾದಾಹ :ಆದರೆ ಮೂರೇ ಕಾಲು. ದ್ವೇ ಶೀರ್ಷೆ= ಎರಡು ತಲೆ , ಸಪ್ತ ಹಸ್ತಾಸೋ ಅಸ್ಯ. = ಏಳು ಕೈಗಳು
ನಾಲ್ಕು ಕೊಡು, ಎರಡು ತಲೆ, ಮೂರು ಕಾಲು, ಏಳು ಕೈಗಳು ಇರುವ ಇದು ಗೋವು ( ಎತ್ತು) ಇದನ್ನೇ ಅಸುರರು ಅಪಹರಿಸಿದ್ದು. ಅದು ಎಲ್ಲಿಯೂ ಓಡಿಹೋಗಬಾರದು ಅಂತ. ತ್ರಯೋ ಬದ್ಧಹಃ = ಅದನ್ನು ಮೂರು ಹಗ್ಗಗಳಿಂದ ಕಟ್ಟಿಹಾಕಿದ್ದೇನೆ. ವೃಷಭೋ ರೋರಯೀತಿ = ಒಂದೇ ಸಮನೆ ಕೂಗಿಕೊಳ್ಳುತ್ತಿದೆ. ಮಹಾದೇವೋನ್ ಮರ್ತ್ಯಾನ್ ಆವಿವೇಶ : = ಮಹಾದೇವ ಮನುಷ್ಯರಮೇಲೆ ಸವಾರಿ ಮಾಡುತ್ತಿದ್ದಾನೆ ಎಂದು ಕೂಗುತ್ತಿದೆ. 
ಇದು ಒಂದು ತರಹದ ಸಂದಿಗ್ಧವಾದ ಭಾಷೆ. ಈ ಮಂತ್ರ ಬರಿಯ ಸಂಖ್ಯೆ ಗಳನ್ನ ಹೇಳುವುದರಿಂದ ನಮ್ಮ ನಮ್ಮ ಬದುಕಿನ ಹಿನ್ನೆಲೆಯಲ್ಲಿ ಬೇರೆ ಬೇರೆ ಅರ್ಥಗಳನ್ನು ಮಾಡುವ ಸಾಧ್ಯತೆ ಇರುವುದರಿಂದ ಈ ಮಂತ್ರ ಅನೇಕ ವಿಧವಾದ ಅರ್ಥಗಳಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಮಂತ್ರವನ್ನು ಸಾಮಾನ್ಯವಾಗಿ ಯಜ್ಞದಲ್ಲಿ, ಹೋಮದಲ್ಲಿ, ಅಗ್ನಿ ಪ್ರತಿಷ್ಠಾಪನೆ ಮಾಡುವಾಗ ಅಗ್ನಿ ಸ್ತುತಿಯಾಗಿ ಇದನ್ನು ಹೇಳಿ ಅಗ್ನಿಸ್ಥಾಪನೆ ಮಾಡುತ್ತಾರೆ. ಇದನ್ನು ಮಹಾಭಾಷ್ಯ ಬರೆದ ,ಪಾಣೀಯ ಸೂತ್ರಗಳಿಗೆ ಮೊದಲು ಭಾಷ್ಯ ಬರೆದ ಪತಂಜಲಿ ಬರೆದದ್ದು. ಆಧ್ಯಾತ್ಮಿಕರು ಇದನ್ನು ಪರಬ್ರಹ್ಮನ ಪರವಾಗಿ ಅರ್ಥಮಾಡುತ್ತಾರೆ. ಸಮಾಜ ಶಾಸ್ತಜ್ಞನು ಸಮಾಜದ ದೃಷ್ಟಿಯಿಂದ ಅರ್ಥ ಮಾಡಬಹುದು, ಹೀಗೆ ಬೇರೆ ಬೇರೆ ನೆಲೆಯಲ್ಲಿ ಬೇರೆ ಬೇರೆ ರೀತಿಯಿಂದ ಅರ್ಥಮಾಡಬಹುದು. ಇದನ್ನು ನಾಲ್ಕು ರೀತಿಯಿಂದ ಅರ್ಥೈಸಬಹುದು. ಒಂದು ಸಮಾಜ ಪುರುಷನನ್ನು ಹೇಗೆ ಚಿತ್ರಿಸುತ್ತದೆ ಅಂತ , ಎರಡನೆಯದು ಯಾಜ್ಞಿಕರಿಗೆ ಅಗ್ನಿಯ ವಿವರಣೆ ಹೇಗೆ ಬಂದಿದೆ ಅಂತ. ಮೂರನೆಯದು ಪತಂಜಲಿಯು ಶಬ್ದಪರವಾಗಿ ವಿವರಣೆ ಹೇಗೆ ನೀಡಿದೇ ಅಂತ. ನಾಲ್ಕನೆಯದು ಆಧ್ಯಾತ್ಮಿಕರು ಹೇಗೆ ವಿವರಿಸುತ್ತಾರೆ ಎಂದು.
I. ಸಮಾಜದ ದೃಷ್ಟಿಯಿಂದ ಇದನ್ನು ಹೇಗೆ ವಿವರಿಸಬಹುದು :- ಸಮಾಜ ಪುರುಷ ಅನ್ನುವುದು ಪುರುಷ ಸೂಕ್ತದಲ್ಲಿ ಬರುವಂತದ್ದು. 
2. ತ್ರಯೋ ಅಸ್ಯ ಪಾದಾ: :- 3 ಕಾಲಗಳು . ಭೂತ, ಭವಿಷ್ಯತ್, ವರ್ತಮಾನ. 3 ಸ್ವಭಾವದ ಜನಗಳು ಸಾತ್ವಿಕರು, ರಾಜಸರು, ಥಾಮಸರು. ರಾಜಕೀಯವಾಗಿ 3 ತರಹದವರು, ಮಿತ್ರರು, ಶತ್ರುಗಳು, ತಟಸ್ತರು (ಉದಾಸೀನರು) . ಹೀಗೆ ಮೂರು ತರಹದ ನೆಲೆಯಲ್ಲಿ ಸಮಾಜ ಬೆಳೆಯುತ್ತದೆ.
3. ದ್ವೇ ಶೀರ್ಷೇ :- ಬದುಕಿನ ಎರಡು ತಲೆಗಳು , ಇಹ, ಪರ. -- ಪುಣ್ಯ, ಪಾಪ. --- ಒಳಿತು, ಕೆಡಕು. ಧರ್ಮ, ಅಧರ್ಮ. ಹೀಗೆ ಸಮಾಜದಲ್ಲಿ ಬದುಕಿನ ತಲೆಗಳು.
4. ಸಪ್ತ ಹಸ್ತಾಸೋ ಅಸ್ಯ :- ಈ ಸಮಾಜಕ್ಕೆ 7 ಕೈಗಳು. ಏಳರಿಂದ ಪಡೆಯುವುದು, (ಪಂಚ ಜ್ಞಾನೇಂದ್ರಿಯಗಳು , ಮನಸ್ಸು, ಬುದ್ದಿ )
5. ತ್ರಿಧಾ ಬದ್ಧಾಹ :- ಮನುಷ್ಯನನ್ನು ಮೂರು ವಿಧದಿಂದ ಕಟ್ಟಿ ಹಾಕಿದೆ ಸತ್ವ ಗುಣ, ರಜೋಗುಣ, ತಮೋಗುಣ. (ಸ್ವರ್ಗ, ನರಕ, ಭೂಮಿ. ) ಹೀಗೆ ಸಮಾಜ ಪುರುಷ ಸ್ವರ್ಗ, ನರಕ, ಭೂಮಿಗಳಿಂದ. ಪುಣ್ಯ ಪಾಪಗಳಿಂದ, ಭದ್ಧನಾಗಿ ಏಳು ಇಂದ್ರಿಯಗಳ ಮೂಲಕ ಸಮಾಜದ ವಿಷಯಗಳ ಗ್ರಹಣಗಳ ಮೂಲಕ , ಅವನ ವ್ಯವಸ್ಥೆಗಾಗಿ ನಾಲ್ಕು ವರ್ಣಗಳ ವ್ಯವಸ್ಥೆಯಿಂದ , ಸಾಮ ,ದಾನ ,ಬೇಧ, ದಂಡಗಳು , ಈ ರೀತಿಯಿಂದ ಸಮಾಜ ನಡೆಯುತ್ತಿದೆ. ಅಂತ ಸಮಾಜ ಪುರುಷ ನಮಗೆ ಎಚ್ಚರ ಕೊಡುತ್ತಾನೆ
6. ಮಹೋದೇವಾಹ ಮರ್ತ್ಯಾನ್ ಆವಿವೇಶ :- ಮಹಾದೇವನು ಸಾಯುವವರ ಒಳಗೆ ಕೂತಿದ್ದಾನೆ. ಅಂದರೆ ಸಾಯುವವರ ಒಳಗೆ ಒಬ್ಬ ಸಾಯದವ ಕೂತಿದ್ದಾನೆ . ಸಮಷ್ಟಿಯಾಗಿ ಹೇಳುವುದಾದರೆ , ಈ ಹುಟ್ಟು ಸಾವುಗಳಿಗೆ ಒಳಗಾಗಿರತಕ್ಕಂತ , ಕ್ಷಣಿಕವಾದ ಬದುಕಿನ ಹಿಂದೆ ಒಂದು ಶಾಶ್ವತವಾದ ಸತ್ಯ ಇದೆ ಎಂದು ಅರ್ಥಮಾಡಿಕೊ ಅಂತ ಸಮಾಜ ಪುರುಷ ಹೇಳುತ್ತಾನೆ. ಹೀಗೆ ಸಮಾಜದ ದೃಷ್ಟಿಯಿಂದ ವಿವರಣೆ ನೀಡುತ್ತದೆ.
II. ಇದನ್ನು ಶಬ್ದ ಪರವಾಗಿ ಹೇಗೆ ಹೇಳಬಹುದು :- ಶಬ್ದ ಪ್ರಪಂಚ ಈ ಶ್ಲೋಕದ ಅರ್ಥ ಎಂದು ಪತಂಜಲಿ ಹೇಳುತ್ತಾನೆ. ಪತಂಜಲಿ ಹೇಳಿದ ಅರ್ಥ ಹೇಳುವುದು ಕಷ್ಟ. ಕೇವಲ ಸಂಸ್ಕೃತಕ್ಕೆ ಸಂಬಂಧಪಟ್ಟ ಕೆಲವು ವಿವರಣೆ ಇದೆ. ಇದನ್ನು ಸರಳೀಕರಿಸಿ ಹೇಳುವ ಪ್ರಯತ್ನ ಎಂದಿದ್ದಾರೆ
1. ಛಕ್ವಾರಿ ಶೃಂಗ :- ಶಬ್ದಕ್ಕೆ ನಾಲ್ಕು ಕೋಡುಗಳು ಶಬ್ದ ಕೇಳಬೇಕಾದರೆ ಅದು ನಾಲ್ಕು ಹಂತಗಳಲ್ಲಿ ಸೃಷ್ಟಿಯಾಗಬೇಕು . ಪರಾ , ಪಶ್ಯಂತಿ, ಮಧ್ಯಮ, ವೈಖರಿ ಅಂತ ಕರೆದರು. ನಾಭಿಯಿಂದ ಬರುವ ಮೊದಲ ಕಂಪನಕ್ಕೆ ಪರಾ ಎಂದು. ಕಂಪನ ಹೃದಯಕ್ಕೆ ಬಂದಾಗ ಪಶ್ಯಂತಿ, ಕಂಠಕ್ಕೆ ಬಂದಾಗ ಮಧ್ಯಮ , ಬಾಯಿಂದ ಹೊರಗೆ ಬಂದಾಗ ವೈಖರಿ ಎಂದರು. ಇದನ್ನೇ ಮನುಷ್ಯರು ನಾಲ್ಕನೇ ಮಾತಾಡುತ್ತಾರೆ ಅನ್ನುವುದು.
2. ತ್ರಯೋ ಅಸ್ಯ ಪಾದಾ: :- ಮೂರು ವಚನಗಳು ಪ್ರಥಮ ಪುರುಷ,(ನಾನು ಹೋದೆ ) ಮಧ್ಯಮ ಪುರುಷ ( ನೀನು ಹೋಗುತ್ತಿ), ಉತ್ತಮ ಪುರುಷ (ಅವನು ಅಥವಾ ಅವಳು). ಅಥವಾ ಸಂಸ್ಕೃತದಲ್ಲಿ ಏಕ ವಚನ, ದ್ವಿವಚನ, ಬಹುವಚನ . 
4. ಸಪ್ತ ಹಸ್ತಾಸೋ ಅಸ್ಯ :- ಪ್ರತಿಯೊಂದು ಶಬ್ದಕ್ಕೂ 7 ವಿಭಕ್ತಿಗಳಿವೆ . ಕಾಲಗಳಿರುವುದು ಧಾತುವಿನಲ್ಲಿ, ಶಬ್ದಗಳ ,ಇತರ ನಾಮಪದಗಳ ವಿಭಕ್ತಿಯಲ್ಲಿ. ನಾನು, ನನ್ನನ್ನು, ನನ್ನಿಂದ, ನನಗೋಸ್ಕರ, ನನ್ನ ದೆಸೆಯಿಂದ, ನನ್ನಲ್ಲಿ. ಈ ಏಳು ವಿಭಕ್ತಿಗಳ ಭಾಷೆಯೇ ವಿಭಕ್ತಿಗಳು.
5. ತ್ರಿಧಾ ಬದ್ಧಾಹ :- ಭಾಷೆಯು ಭೂತ, ಭವಿಷ್ಯತ್, ವರ್ತಮಾನದ ಕಾಲಗಳಲ್ಲಿ ಬದ್ಧವಾಗಿದೆ.
6. ಮಹೋದೇವಾಹ ಮರ್ತ್ಯಾನ್ ಆವಿವೇಶ :- ನೀನು ಭಾಷೆಯನ್ನ ಯಾವುದೋ ಲೌಕಿಕ ಅರ್ಥಕ್ಕೆ ಬಳಸಿ ದುರುಪಯೋಗ ಪಡಿಸಬೇಡ . ಶಾಶ್ವತವಾದ ಸತ್ಯ ಈ ನಶ್ವರವಾದ ಪ್ರಪಂಚದಲ್ಲಿ ನಿಂತಿದೆ ಎಂದು ತಿಳಿಸುವುದಕ್ಕೋಸ್ಕರವೇ ಈ ಗೂಳಿ ನಿನ್ನನ್ನು ಕರಿಯುತ್ತಿದೆ.
III. ಇದನ್ನು ಅಗ್ನಿ ಪ್ರತಿಷ್ಠೆ ಮಾಡುವಾಗ ಈ ಮಂತ್ರಕ್ಕೆ ಯಾವ ಅರ್ಥ ಬರುತ್ತದೆ.
1. ಛಕ್ವಾರಿ ಶೃಂಗ :- ಇದು ಪೂರ್ಣ ಅಗ್ನಿಗೂ ಅನ್ವಯ ವಾಗುವಂತಾದ್ದು. ಅಗ್ನಿಯನ್ನು ಆರಾಧನೆ ಮಾಡುವಾಗ ನಾಲ್ಕು ವೇದಗಳ ಮಂತ್ರದಿಂದಲೇ ಆರಾಧನೆ ಮಾಡುತ್ತಿದ್ದರು. ಅದೇ ನಾಲ್ಕು ಕೋಡುಗಳು .
2. ತ್ರಯೋ ಅಸ್ಯ ಪಾದಾ: :-ಮೂರು ನಿಟ್ಟಿನಲ್ಲಿ ಅಗ್ನಿಯ ಆರಾಧನೆ ಮಾಡುತ್ತಿದ್ದರು . ಮೂರು ವಿಧಾನಗಳು. 
3. ದ್ವೇ ಶೀರ್ಷೇ :- ಅಗ್ನಿಯನ್ನು ಸ್ವರ್ಗ, ಮತ್ತು ಭೂಮಿಯ ಮಾಧ್ಯಮ ಎಂದು ಕರೆಯುತ್ತಿದ್ದರು. ಸಾಧಕರನ್ನು ಒಯ್ಯತಕ್ಕಂಥ ಮಾಧ್ಯಮ ಅವನು. ನಮ್ಮೊಳಗೂ ಇದ್ದಾನೆ, ಅಗ್ನಿಕುಂಡದಲ್ಲೂ ಇದ್ದಾನೆ, ಇಹ ಹಾಗು ಪರ , ಧರ್ಮಾಧರ್ಮಗಳ ಎರಡು ಶೀರ್ಷ.
4. ಸಪ್ತ ಹಸ್ತಾಸೋ ಅಸ್ಯ :- ಅಗ್ನಿಗೆ ಏಳು ಬಣ್ಣಗಳು. ಕಾಳಿ, ಕರಾಳಿ , ಮನೋಜವಃ, ಸುಲೋಹಿತ, ಸುಧೂಮ್ರ ವರ್ಣ. ಸ್ಪುಲಿಂಗಿಣಿ , ವಿಶ್ವರುಚಿ. ಇವೆ ಏಳು ಕೈಗಳು.
5. ತ್ರಿಧಾ ಬದ್ಧಾಹ :- ಮೂರು ಅಗ್ನಿಗಳು ಗಾರ್ಹ್ಯಪತ್ಯಾಗ್ನಿ , ಆಹವನೀಯಾಗ್ನಿ, ದಕ್ಷಿಣಾಗ್ನಿ ಅಥವಾ ಅನ್ಯಾಹಾರ್ಯಪಚನಾಗ್ನಿ.
ಗಾರ್ಹ್ಯಪತ್ಯಾಗ್ನಿ :- ಮದುವೆಯಾದಾಗ ನಿತ್ಯ ಜೀವನದಲ್ಲಿ ಉಪಾಸನೆ ಮಾಡುವುದಕ್ಕಾಗಿ ಮದುವೆಯ ದಿವಸ ಅವನು ಪ್ರತಿಷ್ಠೆ ಮಾಡಿದ ಅಗ್ನಿ. ಈ ಅಗ್ನಿಯು ಅವನ ಮನೆಯಲ್ಲಿ ಅವನ ಕಡೆ ಉಸಿರಿನವರೆಗೂ ಉರಿಯುತ್ತಿತ್ತು. ಕಡೆಗೆ ಅಂತ್ಯಕ್ರಿಯೆಯನ್ನು ಈ ಅಗ್ನಿಯಿಂದಲೇ ಮಾಡುತ್ತಿದ್ದರು. ಅದಕ್ಕೆ ಶವವನ್ನು ಸುಡುವುದು. ಆದರೆ ಸನ್ಯಾಸಿಗಳನ್ನು ಸುಡುವುದಿಲ್ಲ ಅವರಿಗೆ ಬೃಂದಾವನ ಮಾಡುತ್ತಾರೆ, ಕಾರಣ ಅವರಿಗೆ ಗಾರ್ಹ್ಯಪತ್ಯಾಗ್ನಿ ಇರುವುದಿಲ್ಲ. ಅವರು ಅಗ್ನಿಯನ್ನು ಬಿಟ್ಟು ಸನ್ಯಾಸ ತೆಗೆದೊಕೊಂಡವರು. (ಆತ್ಮಾರೋಪ ಮಾಡಿಕೊಂಡವರು),
ಆಹವನೀಯಾಗ್ನಿ :- ಮನೆಯಲ್ಲಿ ಯಜ್ಞ, ಯಾಗಗಳನ್ನು ಮಾಡಿದಾಗ ಈ ಅಗ್ನಿಯಲ್ಲಿ ಹೋಮದ ಹವನಕ್ಕೋಸ್ಕರ ಅಗ್ನಿಕುಂಡದಲ್ಲಿ ಅರಳಿ ಮಥನಮಾಡಿ , ಅಗ್ನಿ ಪ್ರತಿಷ್ಠೆ ಮಾಡುತ್ತಿದ್ದರು. ಇದಕ್ಕೆ ನಿತ್ಯ ಪೂಜೆ ಮಾಡುವ ಮಂತ್ರಗಳೇ. (अग्नीना अग्नी समिह्यते कविर गर्हपति युवा हव्यवार जुह्वस्यह ) ನಿನ್ನ ಮನೆಯಲ್ಲಿ ನೀನು ಗೃಹಸ್ಥ ಧರ್ಮ ಪಾಲನೆ ಮಾಡಿದ ಅಗ್ನಿಯಿಂದ ಆಹವನಾಗ್ನಿಯನ್ನು ಹೊತ್ತಿಸು.
ದಕ್ಷಿಣಾಗ್ನಿ ಅಥವಾ ಅನ್ಯಾಹಾರ್ಯಪಚನಾಗ್ನಿ. ಕೆಂಪು ದಿಕ್ಕಿನ ಅಗ್ನಿ. ಮನೆಯಲ್ಲಿ ಪಿತೃಕಾರ್ಯಗಳಿಗೆ ಪಿಂಡವನ್ನು ಬೇಯಿಸಲು ಉಪಯೋಗಿಸುತ್ತಿದ್ದ ಅಗ್ನಿ. ಇದೆ ತ್ರಿಧಾ ಬಂದನ.
6. ಮಹೋದೇವಾಹ ಮರ್ತ್ಯಾನ್ ಆವಿವೇಶ : ಒಂದು ಮಹಾ ತತ್ವ ಸಾಯುತ್ತಿರುವ ಈ ಪ್ರಪಂಚದೊಳಗೆ , ಶಾಶ್ವತವಾದ ಒಂದು ಸತ್ಯ ಕೂತಿದೆ.
4ನೆಯ ಅರ್ಥ. ಪರಶಕ್ತಿಯನ್ನು ತಿಳಿಸುವುದು.
1. ಛಕ್ವಾರಿ ಶೃಂಗ :- ಪರಶಕ್ತಿಯನ್ನು ಪರಿಚಯಿಸುವಂಥಾದ್ದೇ ಕೋಡುಗಳು, ಅದು ನಾಲ್ಕು ವೇದಗಳು. ವೇದಗಳು ಅಂದರೆ ಪ್ರತ್ಯಕ್ಷಕ್ಕೆ ಕಾಣದ್ದನ್ನ ಅನುಭವದಿಂದ ಕಂಡು ಹೇಳುವುದು ವೇದ. ಮತ್ತೊಂದು ರೀತಿಯಿಂದ ಪರಶಕ್ತಿಯನ್ನು ಪರಿಚಯಿಸಿಕೊಳ್ಳುವುದು . ನಮಗೆ ಜಗತ್ತು ಹುಟ್ಟಿದೆ ಎಂದು ಗೊತ್ತಿದೆ, ಸಾಯುತ್ತದೆ ಎನ್ನುವುದೂ ಗೊತ್ತಿದೆ. ಹುಟ್ಟಿ ಸಾಯುವ ಮಧ್ಯ ಬದುಕಿದೆ ಅನ್ನುವುದೂ ಗೊತ್ತಿದೆ. ಮನುಷ್ಯನಿಗೂ ಹುಟ್ಟಿದೆ, ಸಾವಿದೆ, ಬದುಕಿದೆ ಅದನ್ನು ನಿಯಂತ್ರಿಸುವ ಶಕ್ತಿಯಿದೆ. ಇದನ್ನೇ ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ. ಮುಂದೆ ಏನಾಗುತ್ತದೆ ಅನ್ನುವುದು ನಮಗೆ ತಿಳಿದಿಲ್ಲ ಅದೇ ದೇವರು.
2. ತ್ರಯೋ ಅಸ್ಯ ಪಾದಾ: ವ್ಯಾಹೃತಿಯ ಭೂಹು, ಭುವಹಃ, ಸ್ವಹಃ, (ಮೂರು ಲೋಕಗಳು) ಗಾಯತ್ರಿಯ ಮೂರು ಪಾದಗಳು, ಪುರುಷ ಸೂಕ್ತದ ಮೂರು ವರ್ಗಗಳು, ಮೂರು ವೇದಗಳು, ಮೂರು ಲೋಕಗಳಿಗೆ ಆರಾಧನೆಗೆ ಪ್ರತೀಕವಾಗಿರುವ ಅಗ್ನಿ, ವಾಯು, ಆದಿತ್ಯ. ಎಚ್ಚರ , ಕನಸು, ನಿದ್ರೆ, ವಿಶ್ವ , ತೈಜಸ , ಪ್ರಾಜ್ಞ. ಇವೆಲ್ಲ ಮೂರು ಪಾದಗಳು.
3. ದ್ವೇ ಶೀರ್ಷೇ :- ಭಗವಂತನು ಪ್ರಪಂಚದಲ್ಲಿ ಅಭಿವ್ಯಕ್ತವಾದಾಗ ಎರಡು ವಿಧಧ ಮುಖಗಳನ್ನು ತೋರಿಸಿದ್ದಾನೆ . ಚರ , ಆಚರ , ಚೇತನ, ಅಚೇತನ, ವ್ಯಕ್ತ ಅವ್ಯಕ್ತ.
4. ಸಪ್ತ ಹಸ್ತಾಸೋ ಅಸ್ಯ :-ಏಳು ಕೈಗಳು ಅಂದರೆ ಏಳು ಲೋಕಗಳು, ಭೂಹು, ಭುವಹ, ಸುವಹಃ , ಮಹಃ, ಜನಹಃ, ತಪಹಃ , ಸತ್ಯಂ. ಇದನ್ನೇ ಮನುಷ್ಯನಲ್ಲಿ ತೆಗೆದುಕೊಂಡರೆ ಏಳು ಇಂದ್ರಿಯಗಳು, ಸಪ್ತ ಧಾತುಗಳು, ಅವನನ್ನು ತಿಳಿಯಲು ಸಪ್ತ ವಿದ್ಯೆಗಳು ಅವುಗಳು ನಾಲ್ಕುವೇದಗಳು, ರಾಮಾಯಣ, ಮಹಾಭಾರತ, ಪುರಾಣಗಳು. (ಮಾತೃಕೆಗಳು)
5. ತ್ರಿಧಾ ಬದ್ಧಾಹ :-ವಾಮನನು ಮೂರು ಹೆಜ್ಜೆ ಇಟ್ಟ ಅಂದರೆ ಮೂರುಕಡೆ ಬಂಧಿಸಲಾಗಿದೆ ಮೂರು ಲೋಕಗಳಲ್ಲಿ ತುಂಬಿರುವವ, ಮೂರು ಕಾಲಗಳಲ್ಲಿ ಇರುವವ. ಮೂರು ವೇದದಲ್ಲಿ ತುಂಬಿರುವವ. ಅಂತ ವೃಷಭ ಅಂದರೆ ಬಯಸಿದಂತ ಬಯಕೆಗಳನ್ನ ಈಡೇರಿಸುವ ಶಕ್ತಿ. ಅವನು
6. ಮಹೋದೇವಾಹ ಮರ್ತ್ಯಾನ್ ಆವಿವೇಶ :ಕೂಗುತ್ತಾಇದ್ದಾನಂತೆ ನಶ್ವರವಾದ ಪ್ರಪಂಚದೊಳಗೆ ಶಾಶ್ವತವಾದ ಸತ್ಯ ಇದೆ ಅಂತ , ನಮ್ಮೊಳಗೆ ಭಗವಂತ ಕೂಗುತ್ತಾ ಇದ್ದಾನೆ , ಅದು ನಿನಗೆ ಯಾಕೆ ಕೇಳಿಸುತ್ತಾಇಲ್ಲ ಅಂತ.
ಋಗ್ವೇದ ನೀಡಿರುವ ದರ್ಶನವೇನು ?
(ಮುಂದುವರೆದುದು)

ಋಗ್ವೇದದಲ್ಲಿ ಜಗತ್ ಸೃಷ್ಟಿಯ ಉದ್ದೇಶ, ಅದಕ್ಕೆ ಬಳಸಿದ ಪರಿಕರಗಳ ಬಗ್ಗೆ ಹಲವಾರು ಸೂಕ್ತಗಳಲ್ಲಿ ಪ್ರಸ್ತಾಪಿಸಿಲಾಗಿದೆ. ಅವುಗಳಲ್ಲಿ ಕಂಡುಬರುವ ಮೂಲಭೂತ ಚಿಂತನಕ್ರಮವು ತುಂಬ ಆಸಕ್ತಿದಾಯಕವಾಗಿದೆ. ಅವೆಲ್ಲವೂ ಹೆಚ್ಚಿನಂಶ ಪ್ರಶ್ನೆಗಳ ರೂಪದಲ್ಲೇ ಇರುವುದರಿಂದ, ಚಿಂತಿಸುವ ಯಾರಿಗೂ ಅವು ಚಿರಂತನ ಪ್ರಶ್ನೆಗಳಾಗಿ ಮಾರ್ಪಡುವಂತಿವೆ.

ಜಗತ್ತನ್ನು ಪರಮಾತ್ಮ ಸೃಷ್ಟಿಸಿದ ಎಂಬ ವಾದಕ್ಕೆ ತಕರಾರು ಇರದು ಎಂದು ಭಾವಿಸಿದರೆ, ಆ ಭಗವಂತನು ಇದ್ದುದಾದರೂ ಎಲ್ಲಿ, ಕಾಲ ಯಾವುದು, ಎಷ್ಟು ಸಮಯ ಸಂದಿತು ಎಂಬೆಲ್ಲ ಪ್ರಶ್ನೆಗಳೂ ಉದ್ಭವವಾಗದೇ ಇರದು. ಕಾಲ ಎಷ್ಟಾಯಿತು ಎಂಬಲ್ಲಿ, ಅದರ ಮಾಪನಕ್ಕೆ ಯಾವ ವ್ಯವಸ್ಥೆಯಿತ್ತು, ಆತ ಇದ್ದುದನ್ನು ತಿಳಿದವರು ಯಾರು, ಹೇಗೆ ಎಂಬುದೂ ಮುಖ್ಯವಾಗುತ್ತದೆಯಲ್ಲವೆ.

ಎಂದರೆ ಇಂದ್ರಿಯ ಗ್ರಾಹ್ಯವಾದ ಸತ್ಯವಷ್ಟನ್ನೇ ವಿಮರ್ಶಿಸುತ್ತ ಸಾಗುವುದು ರೂಢಿಗತ ಸಂಪ್ರದಾಯ. ಅದಲ್ಲದೆ ಇಂದ್ರಿಯಾತೀತ ವಿಷಯಗಳ ಬಗ್ಗೆ ಗಮನ ಸೆಳೆಯುವಂಥ ವಿವೇಚನೆಗಳನ್ನು, ವೇದಗಳಲ್ಲಿ, ಉಪನಿಷತ್ತುಗಳಲ್ಲಿ ಕಾಣಬಹುದು. ಉದಾಹರಣೆಗೆ ಕಿಂ ಸ್ವಿತ್ ಆಸೀತ್, ಅಧಿಷ್ಠಾನಂ, ಆರಂಭಣಂ ಕಥಮ್, ಕಥಾಸೀತ್ – ಅದು ಎಲ್ಲಿತ್ತು, ಆರಂಭ ಎಲ್ಲಿಂದಾಯಿತು, ಅದರ ಆಧಾರಸ್ಥಾನ ಯಾವುದು, ಭೂಮಿಯನ್ನು ಹೇಗೆ ಸೃಷ್ಟಿಸಿದ, ದ್ಯುಲೋಕಗಳು ಹೇಗೆ ಬಂದವು ಎಂಬ ಪ್ರಶ್ನೆಗಳಿವೆ.

ಅದಕ್ಕೆ ಉತ್ತರವಾಗಿ ಮುಂದಿನ ಸಾಲುಗಳಲ್ಲಿ – ವಿಶ್ವಚಕ್ಷುವಾದವನು, ವಿಶ್ವಬಾಹುವಾದ ಆತನಿಗೆ ಕೈಕಾಲುಗಳಂತೂ ಇದ್ದವಷ್ಟೆ. ಹೀಗಾಗಿ ಆತನು ಯಾರ ಸಹಾಯವನ್ನೂ ಅಪೇಕ್ಷಿಸಿದೆ ಪಾದಗಳಿಂದ ಭೂಮಿಯನ್ನೂ, ತೋಳುಗಳಿಂದ ದ್ಯುಲೋಕಗಳನ್ನೂ ಸೃಷ್ಟಿಸಿದನು ಎಂಬ ಉತ್ತರವಿದೆ. ಅದೇ ರೀತಿ ಕಾಡು ಇರುತ್ತದೆಯೆಂದರೆ ಮರ ಇರಬೇಕಲ್ಲವೆ, ಅಲ್ಲಿ ಮರ ಯಾವುದು, ಕಾಡು ಯಾವುದು ಎಂದು ವಿವೇಚಿಸಿದರೆ – ದ್ಯಾವಾ ಪೃಥಿವಿಗಳಿಂದ ನಿರ್ಮಿತವಾದ ಕಿಂ ಸ್ವಿತ್ ವನಂ, ಕ ಉ ಸ ವೃಕ್ಷ ಆಸ – ಇದನ್ನು ಬುದ್ಧಿವಂತರಾದ ನೀವೇ ಪ್ರಶ್ನಿಸಿಕೊಂಡು, ಮನಸ್ಸಿಗೆ ಸಮ್ಮತವಾಯಿತೆಂದರೆ, ಆ ಭಗವಂತನ ಅಸ್ತಿತ್ವವನ್ನು ತಿಳಿದು ಒಪ್ಪಿರಿ, ವಿಮರ್ಶಿಸಿಕೊಂಡು ಮನವರಿಕೆ ಮಾಡಿಕೊಳ್ಳಿ ಎಂದು ಹೇಳಿರುವಲ್ಲಿ, ಆಯ್ಕೆಯನ್ನು ನಮಗೇ ಬಿಡಲಾಗಿರುವ ಸೌಜನ್ಯವನ್ನು ಗಮನಿಸದೇ ಇರಲಾಗುತ್ತದೆಯೇ.

ಇದನ್ನು ತೈತ್ತರೀಯ ಉಪನಿಷತ್ತಿನಲ್ಲಿ ಬ್ರಹ್ಮ ವನಂ, ಬ್ರಹ್ಮ ಸ ವೃಕ್ಷ ಆಸೀತ್, ಯತೋ ದ್ಯಾವಾ-ಪೃಥಿವೀ ನಿಷ್ಟತಕ್ಷುಃ ಎಂದು ಹೇಳಲಾಗಿದೆ. ಇಷ್ಟಾಗಿಯೂ ಆ ಪರಬ್ರಹ್ಮವನ್ನು ತತ್ತ್ವ ಎಂದೋ, ಪರಬ್ರಹ್ಮ ವಸ್ತು ಎಂದು ನಿರ್ದೇಶಿಸಲಾಗಿದೆಯೇ ವಿನಾ, ಅದಕ್ಕೊಂದು ಭೌತರೂಪ, ಗುಣ-ಲಕ್ಷಣಗಳಿಂದ ತೋರದಿರುವುದು ಕೂಡ ಮಹಚ್ಚಿಂತನೆಯ ವ್ಯಾಪ್ತಿಯಲ್ಲೇ ಬರುವಂಥದು.

ಆಕಾರವಿಲ್ಲದ, ಮತ-ಪಂಥಗಳಿಗೆ ಸೇರದ, ಲಿಂಗಭಾವವಿಲ್ಲದ ಅದು ಮೂಲವಸ್ತುವಷ್ಟೇ ವಿನಾ, ಅದು ನಾವು ತಿಳಿದಿರುವ, ನಂಬಿರುವ ಯಾವ ದೈವಸ್ವರೂಪದಲ್ಲೂ ಸೇರಿಕೊಂಡಿದೆ. ಹಾಗಾಗಿ ಅದಕ್ಕೆ ಮೇಲೆ ಹೇಳಿದ ಎಲ್ಲ ಗುಣ-ಧರ್ಮಗಳೂ ಪ್ರಾಪ್ತವಾಗಿವೆ ಎನ್ನುವುದು ಕೂಡ ವೈಶಾಲ್ಯತೆಯನ್ನೇ ತೋರುತ್ತದೆ. ಹೀಗಾಗಿ ಸಂಕುಚಿತತೆಗೆ, ಸ್ವಾರ್ಥ ಚಿಂತನೆಗೆ ಎಲ್ಲೂ ಅವಕಾಶವಿಲ್ಲದಿರಲು ಸಾಧ್ಯವಾಗಿದೆ.

ಋಗ್ವೇದ ನೀಡಿರುವ ದರ್ಶನವೇನು ?
(ಮುಂದುವರೆದುದು)

ದೇವರನ್ನು ಕುರಿತ ಚಿಂತನೆಯ ಆರಂಭಕ್ಕೆ ಹೋಗುತ್ತಿದ್ದೇವೆ ಎಂದು ಭಾವಿಸಿಕೊಂಡು, ಅದನ್ನು ಕೇವಲ ಐತಿಹಾಸಿಕ, ಕಾಲಮಾನದ ದೃಷ್ಟಿಯಿಂದಲೇ ವಿವೇಚಿಸಿರುವುದು ಉಂಟು. ಪ್ರಕೃತಿಯ ಶಕ್ತಿಗಳನ್ನೇ ಮನುಷ್ಯನು ಆರಾಧಿಸಲು ತೊಡಗಿದ್ದರಿಂದ ಅಂಥ ಶಕ್ತಿಗಳನ್ನೇ ದೇವರೆಂದು ಭಾವಿಸಿದ ಎಂಬ ವಾದದಿಂದ ಅದು ಆರಂಭವಾಗುವುದುಂಟು. ಅದಕ್ಕೆ ಪೂರಕವಾಗಿ ಅವರು ಹೆಸರಿಸುವ ಗಾಳಿ, ಬೆಳಕು, ಮಳೆ, ಮಿಂಚು, ಕತ್ತಲು, ಬೆಂಕಿ ಮುಂತಾದವುಗಳಿಗೆ ವಾಯು, ಉಷಸ್, ಪರ್ಜನ್ಯ, ವಿದ್ಯುತ್, ರಾತ್ರಿ, ಅಗ್ನಿ ಎಂದು ಪರ್ಯಾಯವಾಗಿ ಹೆಸರಿಸಲಾಗಿದೆ ಎಂದೂ ಹೇಳುವುದಿದೆ.
ಇದು ಎಲ್ಲ ಮತಧರ್ಮಗಳಿಗೆ ಹೊಂದಬಹುದಾದ ಸಂಗತಿ ಇರಬಹುದು. ಈ ಶಕ್ತಿಗಳ ಹಿಂದೆ ಇರಬಹುದಾದ ಮತ್ತೊಂದು ದೊಡ್ಡ ನಿಯಂತ್ರಕ ಶಕ್ತಿಯತ್ತ ಚಿಂತನೆ ಸಾಗಿದಾಗ ಮೂಡಿಬಂದ ಕಾರಣಕರ್ತನ ಬಗ್ಗೆ ಉಂಟಾದ ಬೆರಗುಗಳಲ್ಲಿ ಋತ ಮತ್ತು ಸತ್ಯಗಳೆಂಬ ಎರಡು ದೊಡ್ಡ ತತ್ತ್ವಗಳು ಮೂಡಿಬಂದವು. ಅಂಥ ವಿಶ್ವಶಿಲ್ಪಿಯನ್ನು ಸ್ತುತಿಸಿರುವ, ವೇದಾಂತದಲ್ಲಿ ಕಂಡುಬರುವ ಬ್ರಹ್ಮದ ಏಕತ್ವವನ್ನು ಸಾರುವ ದೊಡ್ಡ ಚಿಂತನೆಯೇ ವೇದಸಂಗ್ರಹ. ಹಾಗಾಗಿಯೇ ಅದು ಮೌಲಿಕವೆನಿಸುತ್ತದೆ.
ಋಗ್ವೇದದಲ್ಲಿ ಪ್ರಸ್ತಾಪಿತವಾಗಿರುವ ಅನೃತದಿಂದ ಋತಕ್ಕೆ ಸಾಗುವ ಯಾನಕ್ಕೆ ದಿಕ್ಕು ಅಮೃತಲೋಕವೆಂದು ಹೇಳಲಾಗಿದೆ. "ಮೃತ" - "ಅಮೃತ" ಎಂಬಲ್ಲಿ ಕಾಣಬರುವ ವೈರುಧ್ಯವನ್ನಿಷ್ಟು ಚಿಂತಿಸಿದರೆ ಅದರ ವಿಶಾಲತೆ ಗೋಚರವಾಗುತ್ತದೆ. ಈ ಮೂಲಕ ಒದಗಿಬಂದ ಆಧ್ಯಾತ್ಮಿಕ ಆಯಾಮ ಮಾನವ ಜೀವನದ ಘನತೆಯನ್ನು ಹೆಚ್ಚಿಸಿತು. ಗೊತ್ತಿರದ ಶಕ್ತಿಯೆದುರು ನಮ್ಮ ಕಾರ್ಯಸಾಮರ್ಥ್ಯ, ಆತ್ಮವಿಶ್ವಾಸವನ್ನು ಹೊಗಳುತ್ತಲೇ, ಮಾನವನ ನಿಕೃಷ್ಟತೆಯನ್ನು ತೋರುತ್ತವೆ. ಪುರುಷಾರ್ಥ ಸಾಧನೆಗೆ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ಹಲವು ತತ್ತ್ವಗಳು, ಆಚರಣೆಗಳು, ವಿಧಿ-ನಿಷೇಧಗಳ ಮೂಲಕ ನಿರ್ದೇಶಿಸುತ್ತಿವೆ.
ಭಗವತ್ಕೃಪೆಯಿಲ್ಲದ, ಭಗವಂತನ ಅಧೀನವಲ್ಲದ ಯಾವುದೂ ಸಫಲವಾಗಲಾರದು ಎಂದು ಋಗ್ವೇದವು ಪ್ರತಿಪಾದಿಸುತ್ತದೆ. ಅಂಥ ದೇವತೆಗಳಾದರೋ ಸಮಾನ ಶಕ್ತಿಯುಳ್ಳವರು, ಸಮಾನ ಅನುಗ್ರಹಕಾರಕರು ಎಂದೆಲ್ಲ ಹೇಳಲಾಗಿದೆ. ಎಲ್ಲ ದೇವತೆಗಳೂ ಒಂದೇ ದೇವನ ವಿವಿಧ ರೂಪಗಳೆನ್ನುವುದನ್ನು ಒಪ್ಪಲಾಗಿದೆಯಷ್ಟೆ. ವ್ಯಾವಹಾರಿಕವಾಗಿ ಇದರಿಂದ ಉದ್ಭವಿಸಿರುವ ತೊಡಕುಗಳು, ಮತಧರ್ಮಗಳ ನಡುವೆ ಕಲಹವನ್ನು ತಂದಿಟ್ಟಿರುವುದುಂಟು.
ಇದು ಸೆಮೆಟಿಕ್ ಮತಗಳಲ್ಲಿ ಕಾಣದಿರಲು ಕಾರಣವೆಂದರೆ ಅಲ್ಲಿನ ಏಕದೇವತೋಪಾಸನೆ. ಏಕ ದೇವತೆಯೆಂದರೆ, ತಾನು ನಂಬಿದ ಆತನೊಬ್ಬನನ್ನು ಉಳಿದು, ಇತರರು ಪ್ರತಿಸ್ಪರ್ಧಿಗಳು ಎಂಬ ಭಾವದಿಂದ ಸ್ವಾಭಾವಿಕವಾಗಿ ಅಸೂಯೆ ಏರ್ಪಡುತ್ತದೆ. ಅದು ಇತರ ಪರಿಣಾಮಗಳಿಗೆ ಗುರಿಮಾಡುತ್ತದೆ.
ಅದೇ ರೀತಿ ದೇವನೊಬ್ಬ ನಾಮ ಹಲವು ಎಂಬ ಭಾವಗಳು ಅನ್ಯ ಮತಗಳಲ್ಲೂ ಇರುವಂತಿದ್ದರೆ ತೊಂದರೆ ಇರುತ್ತಿರಲಿಲ್ಲ. ಹಾಗಿಲ್ಲದಿರುವುದೇ ಇಂದು ಕಾಣುವ ಅನೇಕ ವಿತಂಡವಾದಗಳ ಮೂಲವಾಗಿದೆ, ಸಮಸ್ಯೆಗಳಿಗೆ ಕಾರಣವಾಗಿದೆ.
ಅದಂತಿರಲಿ. ದೇವತೆಗಳಲ್ಲಿ ಇಷ್ಟೊಂದು ವೈವಿಧ್ಯವನ್ನು ತೋರಿದ್ದರಿಂದ ಉಂಟಾದ ಪ್ರಯೋಜನವೇನೆಂದು ವಿಚಾರಿಸಿದರೆ, ಇಂದ್ರನು ಶಕ್ತಿ, ಅಧಿಕಾರ, ಹೋರಾಟದ ಗುಣಗಳನ್ನು ಪ್ರತಿನಿಧಿಸಿದರೆ, ರುದ್ರನು ಕೋಪ, ಭಯಕಾರಕತೆಗಳಿಗೆ, ಸಮಗ್ರ ರಕ್ಷಣೆಗೆ ವಿಷ್ಣುವನ್ನು, ಬೆಳಕಿನ ದ್ಯೋತಕವಾಗಿ ಸೂರ್ಯನನ್ನು ಸ್ತುತಿಸಲಾಗಿದೆಯಷ್ಟೆ.
ಮನುಷ್ಯನಾದವನು ಚಿಂತಿಸಬಲ್ಲ ಎಲ್ಲ ಸಾಧ್ಯತೆಗಳನ್ನೂ ದೇವತೆಗಳ ಪ್ರತಿರೂಪದಲ್ಲಿ ನಿರೂಪಿಸಲಾಗಿದೆಯೆಂದು ಭಾವಿಸಿದರೆ, ಆಗ ಅವುಗಳ ಹಿಂದಿನ ಭಾವನಾತ್ಮತೆಯ ಪ್ರಯೋಜನ ಅರ್ಥವಾದೀತು. ಹಾಗಿಲ್ಲದೆ, ಎಲ್ಲವೂ ಒಂದೇ, ಓರ್ವನೇ ಎಂದಿದ್ದರೆ ಆ ಶಕ್ತಿಗೆ ಶರಣಾಗತಿಯ ಹೊರತಾಗಿ ಮತ್ತಾವ ಭಾವಗಳೂ ಮೂಡಲು ಸಾಧ್ಯವಾಗುತ್ತಿರಲಿಲ್ಲ.
ಚಿಕ್ಕದಾಗಿ ಉದಾಹರಿಸಬಹುದಾದರೆ, ಆತ ಸರ್ವಜ್ಞ ಎನ್ನುವಾಗ, ತಿಳುವಳಿಕೆ, ಜ್ಞಾನಗಳ ಎಲ್ಲ ಆಯಾಮಗಳನ್ನೂ ನೋಡಬೇಕಾದೀತು. ದೋಷರಹಿತ, ಸರ್ವಕಾರಣ, ವಿಶ್ವರೂಪಿ, ಶಿಷ್ಟರಕ್ಷಕ-ದುಷ್ಟಶಿಕ್ಷಕನೆಂಬ ಹಲವಾರು ಪದಪುಂಜಗಳಲ್ಲಿ ತೋರುವಂತೆ, ಅದು ಮನುಷ್ಯನ ಆಯಾಮವನ್ನು ಮೀರಿ ನಿಂತಿರುವುದರಿಂದಲೇ ಅದು ಆದರ್ಶವಾಗಬಲ್ಲದೆಂಬ ಕಾಣ್ಕೆಯಿದೆ.
ಅಂಥದೊಂದು ಗುರಿಯನ್ನಿಟ್ಟುಕೊಂಡವರಿಗೆ, ಅದರ ಸಮೀಪವಾದರೂ ತಲುಪುವ ಹಂಬಲ ಮೂಡುತ್ತದೆ. ಇದು ಉದ್ದೇಶವೆಂದು ಭಾವಿಸಿದರೂ ಸಾಕು, ಸಾಧನೆಗೆ ಹತ್ತಿರವಾಗಲು ನೆರವಾಗುತ್ತದೆ.
(ಮುಂದುವರೆಯುವುದು)
******

No comments:

Post a Comment