SEARCH HERE

Tuesday, 1 January 2019

ತೊಗರಿಬೇಳೆ ದಾನ ಮತ್ತು ಫಲ togaribele daana phala toordaal

at your belief
ತೊಗರಿಬೇಳೆ ದಾನ ಮತ್ತು ಫಲ ವಿಶೇಷತೆಗಳು..
ತೊಗರಿಬೇಳೆಗೆ ದೇವತೆ - "ಶ್ರೀ ವರಲಕ್ಷ್ಮೀ ದೇವಿ" ಪ್ರತಿದಿವಸ ತೊಗರಿ ಬೇಳೆಯನ್ನು ಯಾರು ತಿನ್ನುತ್ತಾರೆಯೋ ಅವರಿಗೆ ಸದಾ ಧೈರ್ಯವಿರುತ್ತದೆ..
ಈ ಕಾರಣಕ್ಕೆ ಅಡಿಗೆಯಲ್ಲಿ ಹುಳಿ, ಸಾಂಬಾರ್ ಮಾಡುವಾಗ ಪ್ರತೀಸಾರಿ "ತೊಗರಿಬೇಳೆ " ಯನ್ನು ಉಪಯೋಗಿಸುತ್ತೇವೆ.. ತೊಗರಿಬೇಳೆ ದಾನ ಮಾಡಿದರೆ ಏನು ಫಲ.

೧. 100% ಕುಜದೋಷ ನಿವಾರಣೆಯಾಗುತ್ತದೆ ..
(ಸರಿಯಾಗಿ ತಿಳಿದು ಸಂಕಲ್ಪ ಸಮೇತ ಮಾಡಬೇಕು)

೨. ಸತಿ - ಪತಿಯರಲ್ಲಿ ಕಲಹ ನಿವಾರಣೆಯಾಗುತ್ತದೆ ..

೩. ದೇಹದಲ್ಲಿರುವ ಫ್ಯಾಟ್ನೆಸ್ ಹೊರಟು ಹೋಗುತ್ತದೆ..

೪. ವಂಶಪಾರಂಪರ್ಯವಾಗಿ ಬಂದಿರುವ ನಾಗದೋಷಗಳು ಬಹಳ ಬೇಗ ನಿವಾರಣೆಯಾಗುತ್ತದೆ ..

೫. ದಪ್ಪ ಇರುವವರು ಶ್ರೀ ಅಗ್ನಿಸ್ತೋತ್ರ ಹೇಳಿ ತೊಗರಿಬೇಳೆಯನ್ನು ದಾನ ಮಾಡುತ್ತಾ ಬಂದರೆ ಬಹಳ ಬೇಗ ಸಣ್ಣಗಾಗುತ್ತಾರೆ..

೬. ರಜಸ್ವಲೆ ದೋಷ ಇರುವವರು ಮಂಗಳವಾರದ ದಿನ ಸುಮಂಗಲಿಯರಿಗೆ ತೊಗರಿಬೇಳೆ ಅಥವಾ ತೊಗರೀಬೇಳೆಯಿಂದ ಮಾಡಿದ ಒಬ್ಬಟ್ಟು ದಾನ ಮಾಡುತ್ತಾ ಬಂದರೆ ನಿಮ್ಮ ರಜಸ್ವಲೆ ದೋಷ ಬೇಗ ಸರಿ ಹೋಗುತ್ತದೆ..
(ಸರಿಯಾಗಿ ತಿಳಿದು ಮಾಡಿ)

೭. ಅಧಿಕ ರಕ್ತದ ಒತ್ತಡ ಇರುವವರು ೯ ಮಂಗಳವಾರ ತೊಗರಿಬೇಳೆ ದಾನವನ್ನು ಮಾಡುತ್ತಾ ಬಂದರೆ ಆರೋಗ್ಯವಾಗಿ ಧೃಡಕಾಯ ಶರೀರವನ್ನು ಪಡೆಯುತ್ತಾರೆ..

೮. ದೇಹದಲ್ಲಿ ಶಸ್ತ್ರಕ್ರಿಯೆ ಮಾಡಿ, ಗಾಯವು ಒಣಗದೇ ಇದ್ದರೆ ಅಂಥವರು ಮೃತ್ತಿಕೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಿ, ತೊಗರಿಬೇಳೆ ದಾನ ಮಾಡುತ್ತಾ ಬಂದರೆ, ಗಾಯಗಳು ಬಹಳ ಬೇಗ ಒಣಗಿ ದೇಹವು ಆರೋಗ್ಯದಿಂದಿರುತ್ತದೆ..

೧೦. ಅವಿವಾಹಿತರು ಪ್ರತೀ ಮಂಗಳವಾರ ಬೇಳೆಯ ಒಬ್ಬಟ್ಟನ್ನು ಮನೆಯ ದೇವರಿಗೆ ಪೂಜಿಸಿ ನೈವೇದ್ಯ ಮಾಡಿ, ಸುಮಂಗಲಿಯರಿಗೆ ತಾಂಬೂಲದೊಡನೆ ದಾನ ಮಾಡುತ್ತಾ ಬಂದರೆ ಬಹಳ ಬೇಗ ಅವಿವಾಹಿತರಿಗೆ ದೋಷಗಳೆಲ್ಲಾ ನಿವಾರಣೆಯಾಗಿ ವಿವಾಹವಾಗುತ್ತದೆ..
(ಪೂರ್ಣವಾಗಿ ತಿಳಿದು ಜಾತಕದಿಂದ ನಿರ್ಧರಿಸಿ ಮಾಡಿ)

೧೧. ನಿಮ್ಮ ಜೀವನದಲ್ಲಿ ಕೋಪ ಹಠ ಹೆಚ್ಚಾಗಿ ಇದ್ದರೆ ಅಂಥವರು ಮಂಗಳವಾರ ತೊಗರಿಬೇಳೆಯಿಂದ ಮಾಡಿದ ಪದಾರ್ಥ ತಿನ್ನುತ್ತಾ ಬಂದರೆ ಕೋಪ, ಹಠ ಬರುವುದಿಲ್ಲ..

೧೨. ಯಾರಿಗೆ ಮೈ ಕೈ ನೋವು, ಸಂಧಿವಾತ, ಮೊಣಕಾಲುಗಳಲ್ಲಿ ತುಂಬಾ ನೋವು ಬರುತ್ತಿದ್ದರೆ ಅಂಥವರು ಬೇಳೆ ಒಬ್ಬಟ್ಟು ದಾನ ಮಾಡುತ್ತಾ ಬಂದರೆ ಬಹಳ ಬೇಗ ರೋಗ ನಿವಾರಣೆಯಾಗುತ್ತದೆ ..
ರೋಗ ಸಂಕಲ್ಪ ಹೇಳಿ ಪೂಜೆ ಮಾಡಿ ದಾನ ಮಾಡಬೇಕು.
ದಾನ ಮಾಡಿದ ದಿನ ರೋಗಿಗಳು ಒಬ್ಬಟ್ಟು ತಿನ್ನಬಾರದು.
*****

No comments:

Post a Comment