ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಗಳಿಂದ ತೆಗೆದುಕೊಳ್ಳಬಾರದು ಒಂದೇ ಕೈಯಿಂದ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ .ಏಕೆ? ಇದಕ್ಕೆ ಯಾವುದಾದರೂ ಪ್ರಮಾಣ ಉಂಟಾ?
ಉತ್ತರ ||
ನೀರಾಜನ ಕಾಲದಲ್ಲಿ ದೇವರ ಮುಖದರ್ಶನ ಕೋಟಿ ಬ್ರಹ್ಮ ಹತ್ಯೆಗಳನ್ನು ಕೋಟಿ ಅಗಮ್ಯಾಗಮನ ದೋಷಗಳನ್ನು ನಾಶಮಾಡುತ್ತದೆ.
ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||
ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.
ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು.
ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು.
ಅಲ್ಲಿಗೆ ನಮ್ಮ ದೇಹ ಶುದ್ಧ.
ಈ ಅನುಸಂಧಾನ ಮುಖ್ಯ.
|| ಕೃಷ್ಣಾರ್ಪಣಮಸ್ತು ||
*****
No comments:
Post a Comment