ತಿಥಿ ಅಂದರೆ ಏನು ? ರವಿ ಚಂದ್ರರೇ ಎಲ್ಲ ಗ್ರಹಗಳಿಗಿಂತಲೂ ಮುಖ್ಯವಾದ ಗ್ರಹಗಳು. ಚಂದ್ರನು ಒಂದು ತಿಂಗಳಿಗೆ ಒಂದು ರಾಶಿ ಚಕ್ರವನ್ನು ಸಂಚರಿಸುತ್ತಾನೆ. ಈ 12 ರಾಶಿಗಳ ಸಂಚಾರ ಕಾಲದಲ್ಲಿ ತಿಂಗಳಿಗೆ ಒಮ್ಮೆ ಸೂರ್ಯನನ್ನು ಕಲಿಯುತ್ತಾನೆ. ಆ ದಿನ ಆತನ ಪ್ರಕಾಶವು ಭೂಮಿಯ ಮೇಲೆ ಇರುವುದಿಲ್ಲ. ಆ ದಿನಕ್ಕೆ ಅಮಾವಾಸ್ಸೆವೆಂದು, ನಂತರ ಕ್ರಮವಾಗಿ ಸೂರ್ಯನನ್ನು ಬಿಟ್ಟು ಮುಂದಕ್ಕೆ ಹೋಗುವನು. ಸೂರ್ಯ ಚಂದ್ರ ಇಬ್ಬರ ಚಲನದಿಂದ ಅವರ ಮದ್ಯೆ ಕಿರಣಗಳು ಒಂದೊಕ್ಕೊಂದು ಕಲಿಯುವುದರಿಂದ ಪ್ರತಿ ದಿನ ಒಂದೊಂದು ರೂಪದಂತೆ 30 ಆಕಾರಗಳು ಆಗುವುದರಿಂದ 30 ತಿಥಿಗಳೆಂದು ಏರ್ಪಡಿಸಿದರು. ಈ ತಿಥಿಗಳಲ್ಲಿ ಚಂದ್ರನು ವೃದ್ಧಿ ಹೊಂದುತ್ತಾ ಹೋಗುವ ಕಾರಣ ಅದಕ್ಕೆ ಶುಕ್ಲ ಪಕ್ಷವೆಂತಲೂ,, 15 ತಿಥಿಗಳಲ್ಲಿ ಚಂದ್ರನು ಕ್ಷೀಣವಾಗುತ್ತಾ ಹೋಗುವ ಕಾರಣ ಕೃಷ್ಣ ಪಕ್ಷವೆಂತಲೂ ಹೆಸರನ್ನಿಟ್ಟರು.
ಇಂಥಿಂಥ ತಿಥಿಗಳಲ್ಲೇ ಶುಭಕಾರ್ಯಗಳನ್ನು ಮಾಡಬೇಕೆಂದು ಏಕೆ ಹೇಳಿದರು?
ರವಿ ಚಂದ್ರರ ಕಿರಣಗಳು ಸೇರಿ ಒಂದೊಂದು ರೂಪ ಆಕಾರವಾಗುತ್ತದೆ , ಯಾವ ತಿಥಿಯಲ್ಲಿ ಯಾವ ಯಾವ ದೇವತೆಗಳ ಪ್ರೀತಿಕರವಾದ ಚಿನ್ಹೆಗಳಿರುತ್ತವೆಯೋ ಆಯಾ ದೇವತೆಗಳು ಆಯಾ ತಿಥಿಗಳಿಗೆ ಅಧಿಪತಿಗಳಾಗುವರು. ಶುಭ ದೇವತೆಗಳು ಅಧಿಪತಿಯಾದ ತಿಥಿಗಳಲ್ಲಿ ಶುಭಕಾರ್ಯಗಳನ್ನು ಮಾಡಬಹುದೆಂತಲೂ, ಪಾಪಾದೇವತೆಗಳ ಅಧಿಪತಿಗಳಾದ ತಿಥಿಗಳಲ್ಲಿ ಶುಭಕಾರ್ಯಗಳನ್ನು ಮಾಡಬಾರದು.
ಶುಕ್ಲ ಪಕ್ಷ, ಕೃಷ್ಣ ಪಕ್ಷ ಎರಡರಲ್ಲಿಯೂ
ಪ್ರತಿಪತ್ - ಅಗ್ನಿ ದೇವತಾ ಪ್ರೀತಿಕರ ಚಿನ್ಹೆ
ಬಿದಿಗೆಯಲ್ಲಿ - ಬ್ರಹ್ಮ
ತದಿಗೆ - ಹರಿ
ಚೌತಿ -ಯಮ
ಪಂಚಮಿ - ಶಶಾಂಕ
ಷಷ್ಠಿ -ಷಡಾಸನ ದೇವತಾ
ಸಪ್ತಮಿ - ಇಂದ್ರ ದೇವತಾ
ಅಷ್ಟಮಿ -ವಸು
ನವಮಿ - ದುರ್ಗಾದೇವತಾ
ದಶಮಿ - ಧರ್ಮದೇವತಾ
ಏಕಾದಶಿ - ಈಶ
ದ್ವಾದಶಿ - ಹರಿ
ತ್ರಯೋದಶಿ - ಮನ್ಮತ
ಚತುರ್ದಶಿ - ಕಲಿಪುರುಷ
ಪೌರ್ಣಮಿ - ಚಂದ್ರ
ಅಮಾವಾಸ್ಸೆ - ಪಿತೃದೇವತಾ ಪ್ರೀತಿಕರ ಚಿನ್ಹೆಗಳಿರುವುದರಿಂದ ಆಯಾ ತಿಥಿಗಳಿಗೆ ಆಯಾ ದೇವತೆಗಳು ಅಧಿಪತಿಗಳಾದರು. ಯಾವ ತಿಥಿಗಳಿಗೆ ಶುಭ ದೇವತೆಗಳು ಅಧಿಪತಿಗಳಾಗಿರುವರೋ ಆಯಾ ತಿಥಿಗಳಲ್ಲಿ ಶುಭ ಕಾರ್ಯ ಮಾಡಬೇಕು.
*****
No comments:
Post a Comment