SEARCH HERE

Wednesday, 14 April 2021

ಶ್ರೀ ಕೃಷ್ಣ ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ

ಗುಜರಾತ್‌ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥಸ್ನಾನವಾಗಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೊದಲ ಜ್ಯೋತಿರ್ಲಿಂಗವೇ ಸೋಮನಾಥ ಮಂದಿರ. ಈ ಸೋಮನಾಥ ಮಂದಿರವು ಬರೀ ಶಿವನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ಶ್ರೀ ಕೃಷ್ಣ ನಿಗೂ ಸಂಬಂಧಿಸಿದೆ. ಅದು ಹೇಗೆ ಅನ್ನೋದನ್ನು ತಿಳಿಯೋಣ.

ಬಾಲ್ಕಾ ತೀರ್ಥ
ಸೋಮನಾಥ ಮಂದಿರದಿಂದ ಸುಮಾರು 4 ಕಿ.ಮೀ ದೂರದಲ್ಲಿ ಬಾಲ್ಕಾ ತೀರ್ಥವಿದೆ. ಶ್ರೀಕಷ್ಣ ತನ್ನ ಶರೀರ ತ್ಯಜಿಸಿ ತನ್ನ ಲೋಕಕ್ಕೆ ಹೋಗಿದ್ದು ಇದೇ ಸ್ಥಳದಿಂದ ಎನ್ನಲಾಗುತ್ತದೆ. ಇಲ್ಲಿಂದಲೇ ಶ್ರೀಕಷ್ಣನ ಸಹೋದರ ಬಲರಾಮ ತನ್ನ ಶೇಷನಾಗ ರೂಪದಲ್ಲಿ ಗೋಲೋಕ್‌ಧಾಮ್‌ಗೆ ತೆರಳಿದ್ದರು ಎನ್ನಲಾಗುತ್ತದೆ.

ಗಾಂಧಾರಿ ಶಾಪ
ಕುರುಕ್ಷೇತ್ರ ಯುದ್ಧದಲ್ಲಿ ಗಾಂಧಾರಿಯ 100 ಮಕ್ಕಳು ಸಾವನ್ನಪ್ಪುತ್ತಾರೆ. ಇದರಿಂದ ದುಃಖಿತಳಾದ ಗಾಂಧಾರಿ 36 ವರ್ಷದಲ್ಲಿ ಇಡೀ ಯಧುವಂಶ ನಾಶವಾಗುವಂತೆ ಶಪಿಸುತ್ತಾಳೆ. ಅದರಂತೆಯೇ 36 ವರ್ಷಗಳ ನಂತರ ಯಧುವಂಶಿಗಳು ಅಹಂಕಾರದಿಂದ ಒಬ್ಬರ ಮೇಲೊಬ್ಬರು ಮುಗಿಬಿದ್ದರು. ಪೂರ್ಣ ಯಧುವಂಶ ನಾಶವಾಯಿತು.

ಕೃಷ್ಣ ಕಾಲಿಗೆ ತಗುಲಿದ ಬಾಣ
ನಂತರ ಶ್ರೀಕೃಷ್ಣನು ಬಾಲ್ಕಾದಲ್ಲಿ ಒಂದು ಆಲದ ಮರದ ಅಡಿಯಲ್ಲಿ ವಿಶ್ರಮಿಸುತ್ತಾ ಮಲಗಿರುತ್ತಾನೆ. ಆಗ ಭೇಟೆಗಾರನೊಬ್ಬ ಕೃಷ್ಣನ ಕಾಲನ್ನು ಜಿಂಕೆಯ ಕಣ್ಣೆಂದು ತಿಳಿದು ಬಾಣ ಬಿಡುತ್ತಾನೆ. ಬಾಣ ಕೃಷ್ಣನ ಕಾಲಿಗೆ ತಾಗುತ್ತದೆ. ಭೇಟೆಗಾರ ತನ್ನ ತಪ್ಪಿಗೆ ಕ್ಷಮೆ ಕೋರುತ್ತಾನೆ.

ಶರೀರವನ್ನು ತ್ಯಜಿಸಿದ ಕೃಷ್ಣ
ಆಗ ಕೃಷ್ಣ ಭೇಟೆಗಾರರನ್ನು ಸಮಾಧಾನಿಸಿ ಹಿಂದಿನ ಜನ್ಮದಲ್ಲಿ ನೀನು ವಾಲಿಯಾಗಿದ್ದೆ ನಿನ್ನನ್ನು ನಾನು ಮೋಸದಿಂದ ಕೊಂದಿದ್ದೆ. ಈ ಜನ್ಮದಲ್ಲಿ ನಿನ್ನ ಕೈಯಿಂದ ಸಾವನ್ನಪ್ಪುವಂತಾಗಿದೆ ಎಂದು ಹೇಳಿ ಈ ಭೂಮಿಯಲ್ಲಿ ತನ್ನ ಶರೀರವನ್ನು ತ್ಯಜಿಸಿ ಗೋಲೋಕ್‌ಧಾಮ್‌ಗೆ ತೆರಳುತ್ತಾನೆ.

ತ್ರಿವೇಣಿ ಘಾಟ್
ಬಾಲ್ಕಾ ತೀರ್ಥದ ಸಮೀಪದಲ್ಲಿ ಹಿರಣ, ಕಪಿಲ, ಸರಸ್ವತಿ ನದಿ ಸಂಗಮವಿದೆ. ಇದನ್ನು ತ್ರಿವೇಣಿ ಘಾಟ್ ಎನ್ನಲಾಗುತ್ತದೆ. ಇಲ್ಲೇ ಶ್ರೀಕೃಷ್ಣನ ಅಂತಿ ಸಂಸ್ಕಾರ ನಡೆದಿದ್ದು ಎನ್ನಲಾಗುತ್ತದೆ. ಗೋಲೋಕ್‌ಧಾಮ್ ಎನ್ನಲಾಗುತ್ತದೆ. ಬಾಲ್ಕಾದಲ್ಲಿ ಶ್ರೀಕಷ್ಣನ ಕಾಲಿಗೆ ಬಾಣ ತಗುಲಿದ ಸ್ವರೂಪದ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಸ್ವರೂಪದ ದರ್ಶಣ ಮಾಡಲು ಸಾವಿರಾರು ಭಕ್ತರು ಸೋಮನಾಥದಿಂದ ಇಲ್ಲಿಗೆ ಬರುತ್ತಾರೆ.
*****

No comments:

Post a Comment