SEARCH HERE

Thursday 8 April 2021

ನಿಮಿಷ nimishah second ಅನಿಮಿಷ: अनिमिष: animishah

ಶ್ರೀ ವಿಷ್ಣುಸಹಸ್ರ ನಾಮ श्री विष्णुसहस्र नाम VishNu sahasra nAma|| ಚಿಂತನೆ ॐ भावनम् नामन् ನಾಮ-214 and 215
******
ನಿಮಿಷ: = ಕಣ್ಣು ಮುಚ್ಚುವುದು, ಕಣ್ಣು ಮುಚ್ಚಿ ತೆರೆಯುವಷ್ಟು ಕಾಲ, ಕಣ್ಣು ರಪ್ಪೆಯಾಡುವುದು, ಕಣ್ಣು ಮಿಟುಕಿಸುವುದು, ಕ್ಷಣಕಾಲ, ಕಣ್ಮುಚ್ಚಿ ನಿದ್ರಿಸುವವ, ಇತ್ಯಾದಿ.,

ನಿಮಿ + ಷ = ನಿಮಿಷ:.

ನಿಮಿ = ಕಣ್ಣು ಪಿಳುಕಿಸುವುದು, ಕಣ್ಣಿನ ರಪ್ಪೆ ಬಡಿಯುವುದು, ಸೂರ್ಯವಂಶದ ಇಕ್ಷ್ವಾಕು ಮಹಾರಾಜನ ಒಬ್ಬ ಮಗ, ದತ್ತಾತ್ರೇಯನ ಪುತ್ರ, ಇತ್ಯಾದಿ.,

ಷ = ಸ್ವರ್ಗ, ದೇಶ, ಗರ್ಭ, ಮೋಕ್ಷ, ಶ್ರೇಷ್ಠ, ಕೇಶ, ಪ್ರಳಯ, ಇತ್ಯಾದಿ.,

ಸತ್ಪುರುಷರ ವಿರೋಧಿಗಳ ವಿಷಯದಲ್ಲಿ ಭಗವಂತ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತಾನೆ, ಅಂದರೆ ಕಟಾಕ್ಷವೀಕ್ಷಣದಿಂದ ಅವರನ್ನು ಅನುಗ್ರಹಿಸದೇ ಇರುತ್ತಾನೆ. ಆದುದರಿಂದ ಅವನಿಗೆ "ನಿಮಿಷ:" ಎಂದು ಹೆಸರು.

ಯೋಗನಿದ್ರಾರತನಾದ ಭಗವಂತನ ಕಣ್ಣುಗಳು ಮುಚ್ಚಿಕೊಂಡು ಇರುವುದಾದ್ದರಿಂದ ಅವನಿಗೆ "ನಿಮಿಷ:" ಎಂದು ಹೆಸರು.

ಮನಸ್ಸಿನ ಅಂತರ್ಮುಖತೆಯನ್ನು ಕಣ್ಣು ಮುಚ್ಚಿಕೊಂಡಿರುವಿಕೆಯು ಸೂಚಿಸುತ್ತದೆ.‌ಯಾರಾದರೂ ಗಾಢವಾಗಿ ವಿಚಾರ ಮಾಡುವಾಗ, ಸ್ಮರಿಸುವಾಗ ಅಥವಾ ಧ್ಯಾನಿಸುವಾಗ ಕಣ್ಣು ಮುಚ್ಚಿಕೊಳ್ಳುವುದು ಸಾಮಾನ್ಯ. ಗಾಢ ಧ್ಯಾನದಲ್ಲಿ ಮಗ್ನನಾಗಿ ಅಂತ:ಕರಣವು ವಿಷಯಗಳಿಂದ ಹಿಂದೆ ಸರಿದಾಗ ಒಳಗೆ, ಹೊರಗೆ ಎಲ್ಲೆಲ್ಲೂ ಆ ದಿವ್ಯತೆಯೇ ತುಂಬಿಕೊಂಡಿರುವುದು ಅನುಭವಕ್ಕೆ ಬರುತ್ತದೆ. ಪರಮಾತ್ಮಾನುಭವದಲ್ಲಿ ನಿಂತಾಗ ಪ್ರಪಂಚದ ಅಸ್ತಿತ್ವವು ಮಾಯವಾಗಿ ಬಿಡುತ್ತದೆ ಎಂಬುದನ್ನು ತೋರಿಸಲು ಭಗವಂತನಿಗೆ "ನಿಮಿಷ:" ಎಂದು ಹೆಸರು.

ಕಾಲಸ್ವರೂಪನು;
ಕಣ್ಣು ಮುಚ್ಚಿಯೂ ಸಮಸ್ತವನ್ನೂ ನೋಡುತ್ತಿರುವ ಮಹಾಸಾಕ್ಷಿ;
ಧ್ಯಾನಯೋಗದಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡಿರುವವನು;
ಯೋಗನಿದ್ರಾರತನಾಗಿ ಕಣ್ಣುಗಳನ್ನು ಮುಚ್ಚಿಕೊಂಡಿರುವವನು;
ಕಾಲನಿಯಾಮಕನು;
ದೈತ್ಯರೊಡನೆ ವಿಶೇಷವಾಗಿ ಸ್ಪರ್ಧಿಸುವವನು;
ನಿಮಿಷನು;
ಕಣ್ಣುರೆಪ್ಪೆಗಳನ್ನು ಮುಚ್ಚಿಕೊಂಡಿರುವವನು;
ಪ್ರಳಯಕಾಲದ ಯೋಗನಿದ್ರೆಯನ್ನು ಮಾಡುವವನು;
ಆದುದರಿಂದ ಭಗವಂತನಿಗೆ "ನಿಮಿಷ:" ಎಂದು ಹೆಸರು.

'ನಿಮಿ' ಎಂಬ ರಾಜನಿಗೆ "ಷಂ" ಎಂದರೆ "ಬಲ"ವು ಯಾವನಿಂದ ಪ್ರಾಪ್ತವಾಯಿತೋ ಅವನಿಗೆ " ನಿಮಿಷ:" ಎಂದು ಹೆಸರು.

"ವಿರೋಧಿನ: ಸತಾಂ ಯೋಸೌ ನೇಕ್ಷತೇ ನಿಮಿಷಶ್ಚ ಸ:||".

nimishah = Shutting the eye, Twingling, Twinkling of the eye, Moment, Blink of an eye, In a moment, etc.,

In a state intense contemplation, when the ವintellect is turned away from the objects-of-experiences, the bosom experiences the One Divine " Subject" both within and without. The Lord is described here as "with eyes closed" (nimishah), only to indicate that HE is ever rooted in Himself; from Him viewed, there exists nothing other than Himself to constitute the worlds off objects.

BhagavAn of closed eyes is seeing all because HE is everywhere, in everyone of us, all the time, and is watching all that happens everywhere even without eyes. So HE is called "nimishah".

******
ಅನಿಮಿಷ:  अनिमिष:  animishah ॐ श्री ಅನಿಮಿಷಾಯ ನಮ: अनिमिषाय नम: animishAya namah
 *******

ಅನಿಮಿಷ: = ದೇವತೆ, ಮೀನು, ಕಣ್ಣಿನ ರೆಪ್ಪೆಯು ಚಲಿಸದಿರುವ, ನೇತ್ರಸ್ಪಂದನವಿಲ್ಲದ, ಕಣ್ಣು ಪಿಳುಕಿಸದ, ಜಾಗರೂಕ, ತೆರೆದ, ಭಗವಂತ, ಇತ್ಯಾದಿ.,

ಅ + ನಿಮಿಷ = ಅನಿಮಿಷ:.
ಅ = "ಅಲ್ಲ", "ಇಲ್ಲ", "ಬೇಡ" ಎಂಬ ಅರ್ಥಗಳಿಗೆ ನಾಮ, ವಿಶೇಷಣ, ಧಾತುಗಳ ಹಿಂದೆ ಹಚ್ಚುವ ಅವ್ಯಯ.
ನಿಮಿಷ: = ಕಣ್ಣು ಮುಚ್ಚುವುದು, ಕಣ್ಣು ಮುಚ್ಚಿ ತೆರೆಯುವಷ್ಟು ಕಾಲ,  ಕಣ್ಣುರಪ್ಪೆಯಾಡುವುದು, ಕಣ್ಣು ಮಿಟುಕಿಸುವುದು, ಕ್ಷಣಕಾಲ, ಕಣ್ಮುಚ್ಚಿ ನಿದ್ರಿಸುವವ, ಇತ್ಯಾದಿ.,

ಭಗವಂತನು ಮತ್ಸ್ಯರೂಪದಿಂದ ಅಥವಾ ಆತ್ಮರೂಪದಿಂದ ಯಾವಾಗಲೂ ಜಾಗ್ರತನಾಗಿರುತ್ತಾನೆ. ಆದುದರಿಂದ ಅವನಿಗೆ "ಅನಿಮಿಷ:" ಎಂದು ಕರೆಯುತ್ತಾರೆ.

ಭಗವಂತನು ಸತ್ಪುರುಷರ ವಿಷಯದಲ್ಲಿ ಯಾವಾಗಲೂ ಕಣ್ಣುಗಳನ್ನು ತೆರೆದುಕೊಂಡೇ ಇರುವವನು. ಆದುದರಿಂದ ಅವನಿಗೆ "ಅನಿಮಿಷ:" ಎಂದು ಹೆಸರು.

ಮನಸ್ಸು-ಬುದ್ಧಿ ಮಾಡುವ ಕಾರ್ಯವನ್ನು ಹಾಗೂ ಅವುಗಳು ಮಲಗಿರುವುದನ್ನು ಸದಾ ನೋಡುತ್ತಿರುವ ಶುದ್ಧ ಪ್ರಜ್ಞೆಗೆ ನಿದ್ರೆ ಎಂಬುದಿಲ್ಲ. ಹೀಗೆ ಶುದ್ಧ ಚೈತನ್ಯವು ಸದಾಕಾಲವು ಎಲ್ಲವನ್ನೂ ಬೆಳಗುತ್ತಿರುತ್ತದೆ. ಆದುದರಿಂದ ಭಗವಂತ "ಅನಿಮಿಷ:" ಎಂದು ಕರೆಯಲ್ಪಡುತ್ತಾನೆ.

ಹಿಂದಿನ "ನಿಮಿಷ:" ಎನ್ನುವ ನಾಮದ ತದ್ವಿರುದ್ಧ ನಾಮ "ಅನಿಮಿಷ:" ಅಂದರೆ ಭಗವಂತ ಎಂದೂ ನಿದ್ರಿಸುವುದಿಲ್ಲ ಅಂದರೆ ನಮ್ಮಂತೆ ನಿದ್ರಿಸುವುದಿಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗನಿದ್ರೆ.‌ ಆದುದರಿಂದ ಭಗವಂತನಿಗೆ "ಅನಿಮಿಷ:" ಎಂದು ಹೆಸರು.

ನಿತ್ಯಪ್ರಬುದ್ಧಸ್ವರೂಪನು;
ಕಣ್ಣುರಪ್ಪೆಗಳನ್ನು ಮುಚ್ಚದೇ ಇರುವವನು;
ಮತ್ಸ್ಯಮೂರ್ತಿಯು;
ಯಾವಾಗಲೂ ಎಚ್ಚೆತ್ತಿರುವ ಸ್ವರೂಪವುಳ್ಳವನು;
ದಿವ್ಯವಾದ ಮೀನಿನ ಶರೀರವುಳ್ಳವನು;
ಮತ್ಸ್ಯನಾಗಿ ಅವತರಿಸಿದವನು;
ವಾಯುಭಕ್ತರೊಡನೆ ಸೇರಿರುವವನು;
ದಯಾಪರನಾಗಿ ಯಾವಾಗಲೂ ಮುಕ್ತರನ್ನು ನೋಡುತ್ತಲೇ ಇರುವವನು;
ಸತ್ಪುರುಷರ ರಕ್ಷಣೆಯಲ್ಲಿ ಸದಾಕಾಲ ಜಾಗೃತನಾಗಿರುವವನು;
ಆದುದರಿಂದ ಭಗವಂತನಿಗೆ "ಅನಿಮಿಷ:" ಎಂದು ಹೆಸರು.

"ಸದ್ರಕ್ಷಣೇ ಜಾಗರೂಕ: ಸ್ಮೃತೋ ಹ್ಯನಿಮಿಷಶ್ಚ ಸ:||".

animishah = Not Winking, Looking Steadily, Vigilant, Open, God, Fish, etc.,

a + nimishah = animishah.
a = A Prefix "UN", "NON" added to a word to give the meaning of "NO", "NOT" etc.,
nimishah = Shutting the eye, Twinkling, Twinkling of the eye, Moment, Blink of an eye, In a Moment, etc.,

This name refers to BhagavAn's matsya incarnation. (Fish do not have eylids, and so never close their eyes.) In HIS celestial Fish incarnation, HE never closes eyes and is ever watchful of HIS devotees. So HE is called "animishah".

One Who remains unwinking. Whenever we wink both the eyelids close together an what we are seeing is at least technically veiled from the seer in the eye. BhagavAn is indicated here by the term "Unwinking" in the sense that BhagavAn is Ever-Knowing. So HE is called "animishah".
*******

No comments:

Post a Comment