ಆಷಾಢ ಮಾಸ ದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು
ಪ್ರಥಮಾ/ಶಯನೀ ಏಕಾದಶಿ;
ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)
ಗುರು ಪೂರ್ಣಿಮ / ವ್ಯಾಸ ಪೂರ್ಣಿಮ (ಹುಣ್ಣಿಮೆ)
ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ
ಭೀಮನ ಅಮವಾಸ್ಯೆ
ಶುಕ್ರವಾರ ಲಕ್ಷ್ಮೀ ಪೂಜೆ
***
ಆಷಾಢಮಾಸದಲ್ಲಿ ಕಡಲೆಬೇಳೆ ನಿಷಿದ್ಧ. ಜೇಷ್ಠ ಪೂರ್ಣಿಮಾದಿಂದ ಆಷಾಢ ಪೂರ್ಣಿಮಾದವರೆಗೆ ಆಷಾಢಮಾಸ. ಇನ್ನೇನು ಟೀಕಾಚಾರ್ಯರ ಪುಣ್ಯದಿನ ಹತ್ತಿರವಿರುವದರಿಂದ ಅವತ್ತಿನಿಂದಲೇ ಕಡಲೆಯು ಗ್ರಹ್ಯವೆಂದು ಸಂಪ್ರದಾಯ. - ಶ್ರೀ ದೇವೇಂದ್ರ ತೀರ್ಥರ ನುಡಿಮುತ್ತುಗಳು
***
ಆಷಾಢ ಮಾಸ ಶುಭವೋ ? ಅಶುಭವೋ ? - ಆಷಾಢ ಮಾಸ ಅಶುಭ ಎಂದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ.
ಬಹುತೇಕ ಹಿಂದೂಗಳಲ್ಲಿ ಆಷಾಢ ಮಾಸ ಅಶುಭ ಮಾಸ ಎಂಬ ಕಲ್ಪನೆ ಬೇರೂರಿ ಬಿಟ್ಟಿದೆ. ಈ ಮಾಸದಲ್ಲಿ ಯಾವುದೇ ಶುಭಕರ ಕೆಲಸಗಳನ್ನು ಮಾಡಿದರೂ ಅವು ಫಲ ನೀಡುವುದಿಲ್ಲ ಹೀಗಾಗಿ ಈ ಮಾಸದಲ್ಲಿ ಶುಭ ಕಾರ್ಯಗಳಿಗೆ ಮನ್ನಣೆ ಇಲ್ಲ. ಆದರೆ ಒಂದು ಮಾತು ಆಷಾಢ ಮಾಸ ಅಶುಭ ಮಾಸ ಎಂದು ಯಾವ ಶಾಸ್ತ್ರಗಳಲ್ಲೂ ಉಲ್ಲೇಖಿಸಿಲ್ಲ.
ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇಧವಾಗುವುದು. ಇದಕ್ಕೆ ಮುಖ್ಯವಾಗಿ ಕಾರಣ ನೂರಾರು. ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರವಾಗಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಟಿತವಾಗುತ್ತಿದ್ದವು. ಹಾಗೂ ರೈತರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು. ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.
ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುವುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.
❇ ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ.
❇ ಪ್ರಥಮ ಏಕಾದಶಿ ವ್ರತ ಬರುವುದು ಆಷಾಢದಲ್ಲಿ.
❇ ಪ್ರಥಮ ಏಕಾದಶಿ ವ್ರತ ಬರುವುದು ಆಷಾಢದಲ್ಲಿ.
❇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಇದೇ ಮಾಸದಲ್ಲಿ.
❇ ಮಹಾ ಪತಿವ್ರತೆ ಅನುಸೂಯಾ ದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದು ಇದೇ ಆಷಾಢದಲ್ಲಿ ಮಾಸದಲ್ಲಿ.
❇ ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು.
❇ ಮಹಾ ಪತಿವ್ರತೆ ಅನುಸೂಯಾ ದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದು ಇದೇ ಆಷಾಢದಲ್ಲಿ ಮಾಸದಲ್ಲಿ.
❇ ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು.
❇ ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ ಎಂಬ ಉಲ್ಲೇಖವಿದೆ.
❇ ಇಂದ್ರನು ಗೌತಮರಿಂದ ಸಹಸ್ರಾಕ್ಷನಾಗು ಎಂಬ ಶಾಪ ಪಡೆದ ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದಿರುವುದಾಗಿ ಪುರಾಣಗಳು ಹೇಳುತ್ತವೆ.
❇ ಸುಮಂಗಲಿಯರು ದೀರ್ಘ ಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
❇ ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
❇ ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ.
❇ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಬರುವುದು ಈ ಆಷಾಢ ಮಾಸದಲ್ಲೇ.
❇ ಇಂದ್ರನು ಗೌತಮರಿಂದ ಸಹಸ್ರಾಕ್ಷನಾಗು ಎಂಬ ಶಾಪ ಪಡೆದ ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದಿರುವುದಾಗಿ ಪುರಾಣಗಳು ಹೇಳುತ್ತವೆ.
❇ ಸುಮಂಗಲಿಯರು ದೀರ್ಘ ಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
❇ ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
❇ ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ.
❇ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಬರುವುದು ಈ ಆಷಾಢ ಮಾಸದಲ್ಲೇ.
ಶುಭವಾಗಲಿ🙏🌹
********
ಈ ಮಾಸದ ಪ್ರಮುಖ ಹಬ್ಬಗಳು
ಪ್ರಥಮಾ/ಶಯನೀ ಏಕಾದಶಿ;
ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)
ಗುರು ಪೂರ್ಣಿಮ / ವ್ಯಾಸ ಪೂರ್ಣಿಮ (ಹುಣ್ಣಿಮೆ)
ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ
ಭೀಮನ ಅಮವಾಸ್ಯೆ
ಶುಕ್ರವಾರ ಲಕ್ಷ್ಮೀ ಪೂಜೆ
***
ಹಿಂದೂ ಜ್ಯೋತಿಷ್ಯದ ಪ್ರಕಾರ ಇದು ಅಶುಭ ಮಾಸ. ಹೀಗಾಗಿ, ಆಷಾಢ ಮಾಸ ಪ್ರಾರಂಭವಾದ ಬಳಿಕ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇಧವಾಗುತ್ತದೆ. ಈ ವರ್ಷ ಜುಲೈ 3 ರಿಂದ ಆಷಾಢ ಮಾಸ ಆರಂಭವಾಗುತ್ತದೆ.
ಇನ್ನೇನು ಕೆಲ ದಿನಗಳಲ್ಲಿ ನಮ್ಮ ಬದುಕಿಗೆ ಕಾಲಿಡಲಿದೆ. ಈ ಮಾಸ ಆರಂಭವಾದರೆ ಸಾಕು ಯಾರೂ ಒಳ್ಳೆಯ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ.
ಈ ಅವಧಿಯಲ್ಲಿ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ಹಿಂದೂ ಜ್ಯೋತಿಷ್ಯದ ಪ್ರಕಾರ ಇದು ಅಶುಭ ಮಾಸ. ಹೀಗಾಗಿ, ಆಷಾಢ ಮಾಸ ಪ್ರಾರಂಭವಾದ ಬಳಿಕ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇಧವಾಗುತ್ತದೆ. ಇದಕ್ಕೆ ನೂರಾರು ಕಾರಣಗಳು ಇವೆ. ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.
ದಂಪತಿ ಬೇರೆ ಬೇರೆಯಾಗಿರುತ್ತಾರೆ
ಇದು ಆಷಾಢ ಮಾಸದ ನಿಜವಾದ ಮಹತ್ವಗಳನ್ನು ಹೇಳುತ್ತದೆ. ಆದರೆ, ಇದರ ಹಿಂದಿನ ಸಿದ್ಧಾಂತ ಬೇರೆ ಇದೆ. ಈ ಅವಧಿಯಲ್ಲಿ ಹೆಣ್ಣು ಗರ್ಭ ತಾಳಿದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬೇಸಿಗೆ ಗಾಲದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ. ಬೇಸಿಗೆ ಅವಧಿಯಲ್ಲಿ ಆಕೆಗೆ ಹೆಚ್ಚು ತೊಂದರೆಯಾಗಬಹುದು. ಇದರಿಂದ ಜನರು ಇದನ್ನು ಸಹ ನಂಬಲು ಆರಂಭಿಸಿದರು.
ಅತ್ತೆ ಸೊಸೆ ಬೇರೆ ಬೇರೆ ಇರುತ್ತಾರೆ
ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಇದಕ್ಕೆ ಸರಿಯಾದ ಕಾರಣ ಇಲ್ಲವಾದರೂ, ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.
ಮೆಹಂದಿ
ಹುಡುಗಿಯರು ತಮ್ಮ ಅಂಗೈ ಹಾಗೂ ಪಾದಗಳಿಗೆ ಮೆಹಂದಿ ಹಾಕಿಕೊಳ್ಳುತ್ತಾರೆ. ಸುಂದರ ಡಿಸೈನರ್ ಮೆಹಂದಿಗಳು ಮಹಿಳೆಯರನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಕಾಲದಲ್ಲಿ ಬದಲಾವಣೆಯಿಂದ ಚರ್ಮದ ಮೇಲೆ ಪರಿಣಾಮಗಳುಂಟಾಗಿ ಚರ್ಮ ಕಾಯಿಲೆಗೆ ಕಾರಣಗಳಾಗಬಹುದು. ಈ ಹಿನ್ನೆಲೆ ಪಾದ, ಅಂಗೈಗಳಿಗೆ ಮೆಹಂದಿ ಹಾಕಿಕೊಂಡರೆ ಆ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.
ಪೂಜೆಗಳು ಹಾಗೂ ವ್ರತಗಳು
ಇದು ಆಷಾಢ ಮಾಸದ ಮತ್ತೊಂದು ಮಹತ್ವ. ಈ ಅವಧಿಯಲ್ಲಿ ರಥ ಯಾತ್ರೆ, ಚಾರ್ತುಮಾಸ ಯಾತ್ರೆ, ಪಾಲ್ಕಿ ಯಾತ್ರೆ ಮುಂತಾದ ಪೂಜೆ ಹಾಗೂ ವ್ರತಗಳು ಆಷಾಢ ಮಾಸದಲ್ಲಿ ಜನಪ್ರಿಯವಾಗಿದೆ. ಭಕ್ತರು ಈ ಪೂಜೆ, ವ್ರತವನ್ನು ಭಕ್ತಿ, ಸಮರ್ಪಣೆಯೊಂದಿಗೆ ಆಚರಿಸುತ್ತಾರೆ.
ಮಳೆಗಾಲದ ಆರಂಭ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಈ ಪೂಜೆ, ವ್ರತಗಳನ್ನು ಮಾಡಬಹುದು. ಈ ತಿಂಗಳ ಆಚರಣೆಗಳ ಮೇಲೆ ನೀವು ಗಮನಹರಿಸಿದರೆ, ಎಲ್ಲಾ ಆಚರಣೆಗಳು ಒಂದು ವಿಷಯದ ಕಡೆಗೆ ಸೂಚಿಸುತ್ತಿವೆ ಮತ್ತು ಅದು ಮಳೆಗಾಲದ ಆರಂಭವಾಗಿದೆ ಎಂಬ ಅಂಶವನ್ನು ನೀವು ತಿಳಿದುಕೊಳ್ಳುತ್ತೀರಿ.
ಆಷಾಢ ಮಾಸದ ಮಹತ್ವ
* ಈ ಮಾಸದಲ್ಲೇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು
* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.
* ಅನುಸೂಯದೇವಿ ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು.
* ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ
* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ.
* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಮೈಸೂರು ಪ್ರಾಂತ್ಯಗಳಲ್ಲಿ ಈ ಆಚರಣೆ ನಡೆಯುತ್ತದೆ.
ಈ ಮಾಸದಲ್ಲೇ ಇದೆಲ್ಲಾ ಆರಂಭವಾಗಿದ್ದು..
* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು
* ಇಂದ್ರನು ಗೌತಮರಿಂದ ಶಾಪ ಪಡೆದ. ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.
* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.
ಆರ್ಥಿಕ ತೊಂದರೆ ಉಂಟಾಗುವುದು
ಆಷಾಢ ಮಾಸದಲ್ಲಿ ಗಾಳಿ ಹೆಚ್ಚು ಜೋರಾಗಿ ಬೀಸುತ್ತಿರುತ್ತದೆ. ಈ ಹಿನ್ನೆಲೆ, ಆ ವೇಳೆ ಬೆಳೆ ಕಟಾವು ಇರುವುದಿಲ್ಲ. ಈ ಹಿನ್ನೆಲೆ ಹಣದ ಕೊರತೆ ಇರುತ್ತದೆ. ಇನ್ನು, ಮೊದಲೆಲ್ಲ ಮದುವೆಗಳನ್ನು ತೆರೆದ ಜಾಗಗಳಲ್ಲಿ ಅಥವಾ ಮೈದಾನಗಳಲ್ಲಿ ಮಾಡಲಾಗುತ್ತಿತ್ತು. ಹೀಗಾಗಿ ಜೋರಾಗಿ ಬೀಸುವ ಗಾಳಿ ಹಾಗೂ ಹಣದ ಕೊರತೆಯಿಂದ ಮದುವೆ ಮುಂತಾದ ಶುಭ ಕಾರ್ಯಗಳನ್ನು ನಡೆಸುವುದು ಸವಾಲಿನಂತೆ ಎಂದು ಭಾವಿಸುತ್ತಾರೆ.
ಚಾತುರ್ಮಾಸ ಪ್ರಾರಂಭ
ಆಷಾಢ ಮಾಸವನ್ನು ತೆಲುಗು ಭಾಷೆಯಲ್ಲಿ ತೊಲಿ ಏಕಾದಶಿ ಎಂದು ಕರೆಯುತ್ತಾರೆ. ಈ ಪವಿತ್ರ ದಿನವು ಹಿಂದೂ ಸ್ಥಿತಿಕರ್ತ ದೇವರು ವಿಷ್ಣುವಿನ ಅನುಯಾಯಿಗಳಾದ ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಇವರ ಪೂಜೆ ಮಾಡಲಾಗುತ್ತದೆ. ಇಡೀ ರಾತ್ರಿಯನ್ನು ಪ್ರಾರ್ಥನೆ, ಭಜನೆಗಳಲ್ಲಿ ಕಳೆಯುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ದ ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರು ಆಹಾರಪದಾರ್ಥವನ್ನು ಬಿಡುವ ಬಗ್ಗೆ ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ. ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆಗೆ ಈದಿನ ಮಲಗಿ ನಿದ್ದೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ. ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಈ ಹೊತ್ತಿಗೆ ಮಳೆಗಾಲ ಇರುತ್ತದೆ. ಹೀಗಾಗಿ, ಶಯನಿ ಏಕಾದಶಿಯು ಚಾತುರ್ಮಾಸದ ಆರಂಭ. ಭಕ್ತರು ವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ ವ್ರತವನ್ನು ಆಚರಿಸಲು ಈ ದಿನ ಆರಂಭಿಸುತ್ತರೆ. ಈ ದಿನ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ ಕೆಲವು ಅಹಾರಪದಾರ್ಥಗಳನ್ನು ಸೇವಿಸುವದಿಲ್ಲ.
ಮಳೆಗಾಲದ ಆರಂಭ
ಆಷಾಢದ ಆರಂಭವು ಪರಿಸರದಲ್ಲಿ ಅತಿಯಾದ ಗಾಳಿ ಮತ್ತು ಮಳೆಯನ್ನು ಸೂಚಿಸುತ್ತದೆ. ಭೂ ತಾಯಿಯು ಸಮೃದ್ಧವಾದ ಮಳೆಯಲ್ಲಿ ತೋಯ್ದು ಶುದ್ಧವಾಗುವಳು. ಅಂತೆಯೇ ಎಲ್ಲೆಲ್ಲೂ ಹಸಿರು ಗಿಡಗಳ ಮೂಲಕ ಕಂಗೊಳಿಸುವಳು. ಈ ಸಂದರ್ಭದಲ್ಲಿ ಶುಭ ಕಾರ್ಯಗಳನ್ನು ಕೈಗೊಳ್ಳುವುದು ಅಥವಾ ಆಚರಿಸುವ ಕೆಲಸ ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುವುದು. ಕಾರ್ಯಕ್ರಮದ ತಯಾರಿ, ಕಾರ್ಯಕ್ರಮಕ್ಕೆ ಹಾಜರಿ, ಅಗತ್ಯ ಅವಲತ್ತುಗಳ ಪೂರೈಕೆ ಮಾಡಲು ಕಷ್ಟವಾಗುವುದು. ಹಾಗಾಗಿ ಈ ತಿಂಗಳನ್ನು ಕೆಲವು ಸಂಗತಿಗಳಿಗೆ ನಿಬರ್ಂಧ ವಿಧಿಸುವ ಮಾಸ ಎನ್ನುತ್ತಾರೆ. ಅಂತೆಯೇ ಮನೆಯಿಂದ ಆಚೆ ಬರಲು ಸಾಧ್ಯವಾಗದಂತಹ ಮಳೆ ಬರುವುದರಿಂದ ಆದಷ್ಟು ದೇವರ ಜಪ-ತಪಗಳನ್ನು ಮಾಡುವುದರ ಮೂಲಕ ದೇವತೆಗಳ ಕೃಪೆಗೆ ಪಾಲುದಾರರಾಗಬಹುದು ಎಂದು ಹೇಳಲಾಗುವುದು. ಹಾಗಾಗಿಯೇ ಈ ಮಾಸವನ್ನು ದೇವತೆಗಳಿಗಾಗಿ ಮೀಸಲಿಡಲಾಗಿದೆ.
ಪೂಜೆಗಳು ಮತ್ತು ವ್ರತ ಆಚರಣೆ
ವರ್ಷ ಪೂರ್ತಿ ನಮ್ಮ ಜೀವನದ ಬಗ್ಗೆ ಸಾಕಷ್ಟು ಕನಸು ಹಾಗೂ ಅದರ ಗುಂಗಿನಲ್ಲಿಯೇ ಇರುತ್ತೇವೆ. ವರ್ಷದ ಒಂದು ಸಮಯವಾದರೂ ನಮ್ಮ ಒಳಿತಿಗಾಗಿ ಇರುವ ದೇವತೆಗಳ ಆರಾಧನೆ ಮಾಡಬೇಕು. ಒಂದು ತಿಂಗಳನ್ನು ದೇವರಿಗಾಗಿ ಮೀಸಲಾಗಿಟ್ಟರೆ, ಎಲ್ಲರೂ ತಮ್ಮ ಸ್ವಾರ್ಥಗಳನ್ನು ತೊರೆದು, ದೇವರ ನಾಮವನ್ನು ಸ್ಮರಿಸುತ್ತಾ ಪೂಜೆ, ವ್ರತ ಹಾಗೂ ಹವನಗಳನ್ನು ಕೈಗೊಳ್ಳುತ್ತಾರೆ. ಇದರಿಂದ ದೇವಾನು ದೇವತೆಗಳು ಸಂತೃಪ್ತರಾಗುತ್ತಾರೆ. ಮನುಕುಲಕ್ಕೂ ಕಲ್ಯಾಣವಾಗುವುದು. ಹೊಸ ಹೊಸ ಬದಲಾವಣೆಗಳಿಂದ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವರು ಎಂದು ಹೇಳಲಾಗುವುದು. ಹಾಗಾಗಿಯೇ ಆಷಾಢ ಮಾಸದಲ್ಲಿ ರಥಯಾತ್ರೆ, ಚತುರ್ಮಾಸ, ವ್ರತ ಆಚರಣೆ, ಜಪ-ತಪ ಹೀಗೆ ಮೊದಲಾದ ದೇವರ ಕೆಲಸವನ್ನು ಮಾಡುವುದರ ಮೂಲಕ ಆಷಾಢವನ್ನು ಭಕ್ತಿಗೆ ಹಾಗೂ ಸಮರ್ಪಣೆಗೆ ಮೀಸಲಿಡಲಾಗಿದೆ.
ಮೆಹೆಂದಿ
ಹುಡುಗಿಯರು ಮತ್ತು ಮಹಿಳೆಯರು ತಮ್ಮ ಅಂಗೈ ಮತ್ತು ಕಾಲುಗಳಿಗೆ ಮೆಹಂದಿ ಹಚ್ಚುತ್ತಾರೆ. ಸುಂದರ ಡಿಸೈನರ್ ಮೆಹಂದಿಗಳು ಮಹಿಳೆಯರನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಆಷಾಢ ಮಾಸದಲ್ಲಿ ಇದನ್ನು ಹಚ್ಚಿಕೊಳ್ಳುವ ರೂಢಿ ಅಥವಾ ಪದ್ಧತಿಯಿದೆ. ಏಕೆಂದರೆ ವಾತಾವರಣದ ಬದಲಾವಣೆಯಿಂದ ಮಹಿಳೆಯರ ಸೂಕ್ಷ್ಮ ಚರ್ಮಗಳ ಮೇಲೆ ಪರಿಣಾಮ ಉಂಟಾಗುವುದು. ಮದರಂಗಿ ಹಚ್ಚುವುದರಿಂದ ಚರ್ಮದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೊತೆಗೆ ಅಲ್ಲದೆ ಇದರಲ್ಲಿ ತಂಪಾದ ಅನುಭವ ಹಾಘೂ ಚರ್ಮದ ಆರೋಗ್ಯ ಕಾಪಾಡುವ ಶಕ್ತಿ ಇರುವುದರಿಂದ ಇದನ್ನು ಹಚ್ಚಿಕೊಳ್ಳುವ ನಿಯಮವನ್ನು ಹೊಂದಿದೆ. ಆದ್ದರಿಂದ ಆಷಾಢ ಮಾಸದಲ್ಲಿ ಇದನ್ನು ಹಚ್ಚಿಕೊಳ್ಳುವ ರೂಢಿ ಇಟ್ಟುಕೊಂಡರೆ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.
****
ಆಷಾಢಮಾಸದ ಮಹತ್ವ🌷
ಆಷಾಢಮಾಸಕ್ಕೆ ವಾಮನರೂಪಿ ಪರಮಾತ್ಮನು ನಿಯಾಮಕ ವಾಮನ ಎಂದರೆ ಸುಂದರ ಎಂದರ್ಥ .
ಆಷಾಢಮಾಸದಲ್ಲಿ ಒಂದು ಮಾಸಪೂರ್ತಿಯಾಗಿ ನದ್ಯಾದಿಗಳಲ್ಲಿ ತಣ್ಣೀರಿನಲ್ಲಿ ಸ್ನಾನಮಾಡಬೇಕು . ಇದರಿಂದ ಉತ್ತಮಲೋಕ ಪ್ರಾಪ್ತಿಯಾಗುತ್ತದೆ .
ಸೂರ್ಯಪುತ್ರಿಯಾದ ತಾಪಿ (ತಪತಿ) ನದಿಯಲ್ಲಿ ಸ್ನಾನಮಾಡಿದರೆ ಮಹಾಪಾತಕಗಳು ನಷ್ಟವಾಗುವುವು ಈ ಮಾಸದಲ್ಲಿ ಮಾಡಿದ ಮಹಾಪಾಪಗಳಿಗೆ ತಾಪವನ್ನು ನೀಡುವುದರಿಂದಲೇ ತಾಪಿ ಎನಿಸಿದೆ .
ಸರ್ವಪಾಪಹರಂ ಸ್ನಾನಂ ತತ್ರ ತತ್ರ ಪ್ರಕಿರ್ತಿತಂ ||
ಆಷಾಢಮಾಸದಲ್ಲಿ ಕಂಠ ಸ್ನಾನವನ್ನು ಮಾಡಿದರೂ ಅರ್ಧ ಫಲವಿದೆ .
ಸ್ನಾನಾರ್ಧಫಲಂ ಕಂಠಸ್ನಾನಂ ಸದ್ಧಿಃ ನಿಗದ್ಯತೆ |
ಪಾದಸ್ಯ ಪಾದಫಲದಂ ಪಾದಾರ್ಧಸ್ಯಾಭಿಷೇಚನಂ ||
🌻 ತೀರ್ಥಪ್ರಬಂಧ 🌻
ತಪತೀ ನದಿ -
ವಿಂಧ್ಯಪರ್ವತದಲ್ಲಿ ಹುಟ್ಟುವ ತಪತೀ ನದಿಯು ಮಧ್ಯಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಪ್ರಮುಖ ನದಿಗಳಲ್ಲಿ ಒಂದು.. ಈ ನದಿಯು ಸೂರತ್ ನಗರದ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ನದಿಗೆ ತಾಪಿ, ತಾಪಾ, ತಪತೀ, ಎಂಬ 3 ಮೂರು ಹೆಸರುಗಳಿವೆ. ಸೂರ್ಯನ ಪುತ್ರಿಯರಾದ ಯಮುನಾ ಮತ್ತು ತಪತಿಯರಲ್ಲಿ ಒಮ್ಮೆ ವಿವಾದವುಂಟಾದಾಗ ಒಬ್ಬರು ಇನ್ನೊಬ್ಬರನ್ನು ಜಲರೂಪವಾಗಲೆಂದು ಶಪಿಸಿದರು. ಆಗ ಸೂರ್ಯದೇವನು ಯಮುನಾ ನದಿಯ ನೀರು ಗಂಗಾಜಲದಂತೆ, ತಪತಿಯ ನೀರು ನರ್ಮದಾ ನದಿಯ ನೀರಿನಂತೆ ಪವಿತ್ರವಾಗಲೆಂದು ವರ ನೀಡಿದನೆಂದು ಪುರಾಣಗಳಲ್ಲಿ ವರ್ಣಿತವಾಗಿದೆ.
ಕಥಂ ತಾಪಾಭಿಧಾತೇಽಂಬ ತಾಪಘ್ನ್ಯಾ ಇತಿ ಸಂಶಯಃ |
ಅಘತಾಪ ಪ್ರದಾಯಿನ್ಯಾಸ್ತವ ಸಂದರ್ಶನಾದ್ಗತಃ ||೮೬||
ಅಮ್ಮಾ, ತಪತೀ ನದಿಯೇ ನಿನ್ನ ಸ್ನಾನ ಮತ್ತು ಪಾನಗಳಿಂದ ತಾಪಗಳ ನಿವಾರಣೆಯಾಗುವುದರಿಂದ ನಿನಗೆ ತಾಪವೆಂಬ ಹೆಸರು ಯುಕ್ತವಲ್ಲ ಎಂಬ ಸಂಶಯವು ನಿನ್ನ ದರ್ಶನದಿಂದ ದೂರವಾಯಿತು. ಏಕೆಂದರೆ ನೀನು ತಾಪಗಳಿಗೆ ಮತ್ತು ಪಾಪಿಗಳಿಗೆ ತಾಪಪ್ರದಳಾಗಿರುವಿ. ಸ್ನಾನಾದಿಗಳಿಂದ ಭಕ್ತರ ಸಂತಾಪವನ್ನು ನಿವಾರಿಸಿದರೂ ಪಾಪಿಗಳಿಗೆ ಸಂತಾಪವನ್ನು ಕೊಡುವುದರಿಂದ ತಾಪಾ ಎಂಬ ಹೆಸರು ಯುಕ್ತವಾಗಿದೆ.
ತಪತೀನದಿಯು ದರ್ಶನದಿಂದ ಸಕಲ ಪಾಪಗಳೂ ಪರಿಹಾರವಾಗುವುವು ಎಂಬುದು ಶ್ಲೋಕದ ಭಾವಾರ್ಥ..
🙏ಪ್ರೀತೋಽಸ್ತು ಕೃಷ್ಣಃಪ್ರಭುಃ🙏
ತಾಪಿ ನದಿಯ ಬಗ್ಗೆ ಮಾಹಿತಿಯನ್ನು
ಪಾಂಚಜನ್ಯ ಅವರ ತೀರ್ಥಪ್ರಭಂದ ಲೇಖನ ಮಾಲಿಕೆಯಿಂದ ಸಂಗ್ರಹಿಸಿದ್ದೇನೆ ಅವರಿಗೆ ಧನ್ಯವಾದಗಳು
***********
🌷ಆಷಾಢಮಾಸದ ಧರ್ಮಗಳು🌷
ಆಷಾಢಮಾಸ ಪೂರ್ತಿಯಾಗಿ ಒಂದು ಹೊತ್ತು ಊಟ (ಏಕಭುಕ್ತ)ವನ್ನು ಮಾಡಿದರೆ ಮಹಾಫಲವಿದೆ ಸ್ವರ್ಗದಿoದ ಎಂದು ಚ್ಯುತನಾಗುವುದಿಲ್ಲ ಆಯಾಚಿತವ್ರತದಿಂದ ಕಳೆದರೆ ಕಾಲುಭಾಗ ಪುಣ್ಯವಿದೆ . ಕೇವಲ ಹಣ್ಣು ಹಂಪಲುಗಳನ್ನು ತಿಂದು ತಿಂಗಳನ್ನು ಕಳೆಯುವವನಿಗೆ ಇಂದ್ರಲೋಕವು ಲಭಿಸುವುದು .
ಹಾಲಿನಿಂದ ಈ ತಿಂಗಳು ಪೂರ್ತಿ ಭಗವಂತನಿಗೆ ಸ್ನಾನ ಮಾಡಿಸುವವರಿಗೆ ಚಿರಕಾಲ ಸ್ವರ್ಗವಾಸಪ್ರಾಪ್ತಿ . ನೆಲ್ಲಿ ಎಳ್ಳು ಇವುಗಳಿಂದ ಪ್ರಾತಃಸ್ನಾನವನ್ನು ಮಾಡುವವನು ಸ್ವರ್ಗದಲ್ಲಿ ರಮಿಸುವನು .
ತೈಲಾಭ್ಯಂಗಂ ಪರಿತ್ಯಾಜ್ಯಂ ರೂಪವಾನ್ ಜಾಯತೇ ಭುವಿ ||
ಆಷಾಢಮಾಸದಲ್ಲಿ ತೈಲಭ್ಯಂಗವನ್ನು ತ್ಯಜಿಸಿದರೆ ಮುಂದಿನ ಜನ್ಮದಲ್ಲಿ ಮಹಾಸುಂದರನಾಗಿ ಜನಿಸುವನು .
ಈ ತಿಂಗಳು ಪರಾನ್ನವನ್ನು ವರ್ಜಿಸಿದರೆ ಶ್ರೇಷ್ಠ .ನೆಲದ ಮೇಲೆ ಮಲಗುವವರಿಗೆ ಇಂದ್ರಲೋಕ ಪ್ರಾಪ್ತವಾಗುವುದು. ಆಷಾಢದಲ್ಲಿ ಅಕ್ಕಿದಾನದಿಂದ ಇಂದ್ರಲೋಕದಲ್ಲಿ ತುಪ್ಪದ ಕಾಲುವೆಗೆ ಅಧಿಪತಿಯಾಗುವನು.
ಗೋಧಿಯ ದಾನದಿದ ಒಂದು ಕಲ್ಪ ಸ್ವರ್ಗದಲ್ಲಿರುವನು ಅನ್ನದಾನವು ತೃಪ್ತಿಯನ್ನು ಕೊಡುವುದಾಗಿದೆ .
ಅನ್ನಾತ್ ಪರತರಂ ದಾನಂ ನ ಭೂತಂ ನ ಭವಿಷ್ಯತಿ ||
ಯಾವ ವಸ್ತುವೇ ಆಗಲಿ ದಾನ ಮಾಡದೆ ನಮಗೆ ಈ ಲೋಕದಲ್ಲಿ ಏನು ಸಿಗಲಾರದು .
ಉಪಾನದ್ಯುಗಲಂ ಛತ್ರo ಲವಣಾಮಲಕಾನಿಚ |
ಆಷಾಢೇ ವಾಮನ ಪ್ರೀತ್ತ್ಯೈ ದಾತವ್ಯಾನಿ ತು ಭಕ್ತಿತಃ ||
ವಾಮನರೂಪಿ ಪರಮಾತ್ಮನ ಪ್ರೀತಿಗಾಗಿ ಆಷಾಢಮಾಸದಲ್ಲಿ ಛತ್ರಿ ,ಚಪ್ಪಲಿ ,ಪಾನಕ ,ಕೊಸಂಬರಿ,
ನೆಲ್ಲಿಕಾಯಿ ,ಲವಣ(ಉಪ್ಪು ) ಇವುಗಳನ್ನು ದಾನ ಮಾಡಬೇಕು .
( ಸೂಚನೆ - ಇಲ್ಲಿ ತಿಳಿಸಿರುವ ವ್ರತಗಳು ಐಚ್ಛಿಕ ಆಚರಿಸಿದರೆ ಪುಣ್ಯಪ್ರಾಪ್ತಿ ಆಚರಿಸದಿದ್ದರೆ ದೋಷವಿಲ್ಲ )
|| ಶ್ರೀಕೃಷ್ಣಾರ್ಪಣಮಸ್ತು ||
( ಆಷಾಡಮಾಸದ ಮಹತ್ವ ಲೇಖನವನ್ನು PDF ಮಾಡಿದ್ದೇವೆ )
✍️ಫಣೀಂದ್ರ ಕೌಲಗಿ
ಶ್ರೀಐತರೇಯ....
|| ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್ ||
***
ಆಷಾಢಮಾಸ ಆರಂಭ
ಆಷಾಢಮಾಸ ಅಶುಭಮಾಸ ಎಂಬುದು ಜನರ ನಂಬಿಕೆ. ಆದರೆ ಈ ಮಾಸದಲ್ಲಿ ಕೆಲ ಕಾರಣಗಳಿಂದ ಶುಭಕಾರ್ಯ ಮಾಡಬಾರದು ಅಷ್ಟೇ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯೂ ಉಂಟು. ಅದನ್ನು ತಿಳಿಯೋಣ. ಆದರೆ ಈ ಮಾಸ ಅಶುಭವಲ್ಲ ಎಂಬುದನ್ನು ನೆನಪಿಡಿ.
ಅಶ್ವಿನ್ಯಾದಿ ನಕ್ಷತ್ರಗಳ ಪೈಕಿ, ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುಷ್ಯ, ಮಘ, ಉತ್ತರ ಫಲ್ಗುಣಿ, ಚಿತ್ತಾ, ವಿಶಾಖ, ಜ್ಯೇಷ್ಠ, ಪೂರ್ವಾಷಾಢ, ಶ್ರವಣ, ಪೂರ್ವಭಾದ್ರಪದ, ಈ 12 ನಕ್ಷತ್ರಗಳಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಂದು ಚಂದ್ರ ಗ್ರಹದ ಜತೆ ಒಂದೊಂದು ನಕ್ಷತ್ರ ಮಿಳಿತಗೊಳ್ಳುತ್ತವೆ. ಹಾಗಾಗಿ ಆ ತಿಂಗಳನ್ನು ನಕ್ಷತ್ರದ ಹೆಸರಲ್ಲಿ ಕರೆಯಲಾಗುತ್ತದೆ.
ಅಶ್ವಿನಿ ನಕ್ಷತ್ರದ ಜತೆ ಚಂದ್ರನಿದ್ದಾಗ ಆಶ್ವಯುಜ ಮಾಸ, ಕೃತ್ತಿಕಾ ಜತೆಯಿದ್ದಾಗ ಕಾರ್ತೀಕ ಮಾಸ, ಮೃಗಶಿರದ ಜತೆಯಿದ್ದಾಗ ಮಾರ್ಗಶಿರ ಮಾಸ, ಪುಷ್ಯದ ಜತೆಗಿದ್ದಾಗ ಪುಷ್ಯ ಮಾಸ, ಮಘ(ಮುಖೆ) ಜತೆಗಿದ್ದಾಗ ಮಾಘಮಾಸ, ಉತ್ತರಫಲ್ಗುನಿ ಜತೆಗಿದ್ದಾಗ ಫಾಲ್ಗುಣ ಮಾಸ, ಚಿತ್ತಾ ನಕ್ಷತ್ರದೊಂದಿಗಿದ್ದಾಗ ಚೈತ್ರಮಾಸ, ವಿಶಾಖದೊಂದಿಗಿದ್ದಾಗ ಚೈತ್ರಮಾಸ, ಜ್ಯೇಷ್ಠದೊಂದಿಗಿದ್ದಾಗ ಜ್ಯೇಷ್ಠ ಮಾಸ, ಪೂರ್ವಾಷಾಢದೊಂದಿಗೆ ಇದ್ದಾಗ ಆಷಾಢ ಮಾಸ, ಶ್ರವಣದೊಂದಿಗೆ ಇದ್ದಾಗ ಶ್ರಾವಣ ಮಾಸ, ಉತ್ತರ ಭಾದ್ರಪದದೊಂದಿಗೆ ಇದ್ದಾಗ ಭಾದ್ರಪದ ಮಾಸ ಎಂದು ಕರೆಯಲಾಗುತ್ತದೆ.
ಈ ತಿಂಗಳ ಹುಣ್ಣಿಮೆಯಂದು ಚಂದ್ರ ಗ್ರಹದ ಜತೆ ಪೂರ್ವಾಷಾಢ ನಕ್ಷತ್ರ ಮಿಳಿತಗೊಳ್ಳುತ್ತದೆ. ಹಾಗಾಗಿ ಈ ಮಾಸವನ್ನು ಆಷಾಢ ಮಾಸ ಎಂದು ಕರೆಯಲಾಗುತ್ತದೆ. ಸಹಜವಾಗಿ ಈ ತಿಂಗಳು ಅಶುಭ ಎಂಬ ಮಾತು ವಾಡಿಕೆಯಲ್ಲಿದೆ. ಆದರೆ ಇದು ಅಶುಭ ಮಾಸ ಎಂಬುದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ.
ಈ ತಿಂಗಳಲ್ಲಿ ಮಾಡುವ ಶುಭಕರ ಕೆಲಸಗಳು ಫಲ ನೀಡುವುದಿಲ್ಲ ಎಂಬ ಮಾತು ಜನ ಜನಿತವಾಗಿದೆ. ಆದರೆ ಈ ತಿಂಗಳಲ್ಲಿ ಶುಭಕಾರ್ಯ ಮಾಡದಿರಲು ಸಾಮಾಜಿಕ ಕಳಕಳಿಯಿಂದ ಕೂಡಿದ ವೈಜ್ಞಾನಿಕ ಕಾರಣವಿದೆಯೇ ಹೊರತು ಧಾರ್ಮಿಕ ಕಾರಣವಿಲ್ಲ.
ಆಷಾಢ ಮಾಸದಲ್ಲಿ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಖರೀದಿ, ಜಮೀನು ಖರೀದಿ, ಹೊಸದಾಗಿ ವ್ಯಾಪಾರ ಆರಂಭಿಸುವುದು ಮತ್ತಿತರ ಶುಭಕಾರ್ಯಗಳನ್ನು ಮಾಡುವಂತಿಲ್ಲ. ಇದಕ್ಕೆ ಮೂಲ ಕಾರಣ ದೇಶದ ಬೆನ್ನೆಲುಬಾದ ಕೃಷಿ ಚಟುವಟಿಕೆ ಹಾಗೂ ಜೋರು ಮಳೆ.
ಮುಂಗಾರು ಮಳೆ ಆರಂಭಗೊಂಡ ನಂತರ ಗ್ರೀಷ್ಮ ಋತುವಿನಲ್ಲಿ ಅಬ್ಬರಿಸಲು ಆರಂಭಿಸುತ್ತದೆ. ಗುಡುಗು, ಮಿಂಚು, ಸಿಡಿಲು, ಬಿರುಗಾಳಿಯ ಆರ್ಭಟವೇ ಹೆಚ್ಚು.
ಶತಮಾನಗಳ ಹಿಂದೆ ಆಷಾಢ ಮಾಸದಲ್ಲಿ ಸುರಿಯುತ್ತಿದ್ದ ಜೋರು ಮಳೆಯಿಂದ ಜನ ಈಚೆ ಬರಲು ಸಾಧ್ಯವಾಗುತ್ತಿರಲಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಬಹಳ ದುಸ್ತರವಾಗುತ್ತಿತ್ತು.
ಜತೆಗೆ ಈ ತಿಂಗಳಲ್ಲಿ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕೆಲಸದ ಜತೆ, ಕೃಷಿ ಚಟುವಟಿಕೆ ನಡೆಯುತ್ತದೆ. ಎಲ್ಲರು ಸಾಮಾನ್ಯವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಇಷ್ಟ ಮಿತ್ರರು, ಬಂಧುಗಳು ಶುಭಕಾರ್ಯದಲ್ಲಿ ಸೇರಲಾಗುತ್ತಿರಲಿಲ್ಲ. ಹಾಗಾಗಿ ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲ. ಈ ಕಾರಣಗಳಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಇದರ ಹೊರತಾಗಿ ಯಾವುದೇ ಧಾರ್ಮಿಕ ಕಾರಣವಿಲ್ಲ.
ಮತ್ತೊಂದು ಮಾತಿದೆ. ಹೊಸದಾಗಿ ಮದುವೆಯಾದ ಸೊಸೆ ಆಷಾಢಮಾಸದಲ್ಲಿ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸಿಸಬಾರದು. ಇದು ಅಮಂಗಲ ಎಂಬ ಪ್ರತೀತಿ. ಆದರೆ ಇದು ಶುದ್ಧ ಸುಳ್ಳು.
ಈ ತಿಂಗಳಲ್ಲಿ ಕೃಷಿ ಚಟುವಟಿಕೆಗೆ ಆದ್ಯತೆ. ಕೆಲಸ ಮಾಡಬೇಕಾದ ಹುಡುಗ, ಮನೆಗೆ ಹೊಸದಾಗಿ ಬಂದ ಹೆಂಡತಿಯ ಮುಖ ಸೌಂದರ್ಯ ನೋಡುತ್ತಾ, ಸೀರೆ ಸೆರಗು (ಈ ತಿಂಗಳಲ್ಲಿ ಮಳೆಯಿಂದ ಚಳಿ ಹೆಚ್ಚಾಗುವ ಕಾರಣ ಪರಸ್ಪರ ಆಕರ್ಷಣೆ) ಹಿಡಿದುಕೊಂಡು ಓಡಾಡಿದರೆ ಕೆಲಸ ಮಾಡಲಾಗುವುದಿಲ್ಲ. ಕೃಷಿ ಚಟುವಟಿಕೆ ಕುಂಟಿತಗೊಳ್ಳುತ್ತದೆ. ಅಲ್ಲದೇ ನವ ದಂಪತಿ ಒಟ್ಟಾಗಿದ್ದರೆ, ಈ ತಿಂಗಳಲ್ಲಿ ನವವಧು ಗರ್ಭಧರಿಸಿದರೆ ಚೈತ್ರ ಮಾಸದಲ್ಲಿ ಮಗು ಜನನವಾಗುತ್ತದೆ. ವೈಖಾಖ ಮಾಸದಲ್ಲಿ ಬಿಸಿಲ ಬೇಗೆ ಹೆಚ್ಚಾಗುವುದರಿಂದ ಮಗುವಿಗೆ ತ್ರಾಸವಾಗುತ್ತದೆ. ಈ ಎಲ್ಲ ಕಾರಣಗಳಿಂದ ಆಷಾಢಮಾಸದಲ್ಲಿ ನೆಂಟರಿಷ್ಟರು ಸೇರಿ ಆಚರಿಸುವ ಕಾರ್ಯಕ್ರಮಗಳಿಗೆ ಬಿಡುವು ನೀಡಲಾಗಿದೆ. ಬದಲಿಗೆ ಕೃಷಿ ಚಟುವಟಿಕೆಗೆ ಆದ್ಯತೆ ನೀಡಲಾಗಿದೆ.
ಈ ಮಾಸದಲ್ಲಿಯೇ ಪರಶಿವನು ತನ್ನ ಸತಿ ಪಾರ್ವತಿದೇವಿಗೆ ಗುಹೆಯಲ್ಲಿ ರಾಮಮಂತ್ರದ ಮಹಿಮೆ ಬೋಧಿಸಿದ. ಅನುಸೂಯಾ ದೇವಿ ಈ ತಿಂಗಳಲ್ಲಿ ಬರುವ ನಾಲ್ಕು ಸೋಮವಾರಗಳಂದು ರುದ್ರದೇವರ ಪೂಜೆ ಮಾಡಿದಳು. ವಿಶೇಷವಾಗಿ ಈ ತಿಂಗಳ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.
ಹುಣ್ಣಿಮೆಯಂದು ಗುರುಪೂರ್ಣಿಮೆ, ಮಠಗಳಲ್ಲಿ ಯತಿಗಳು ಚಾತುರ್ಮಾಸ್ಯ ಆರಂಭಿಸುತ್ತಾರೆ. ಸುಮಂಗಲಿಯರು ದೀರ್ಘ ಸೌಮಾಂಗಲ್ಯ ಪಾಪ್ತಿಗಾಗಿ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ವ್ರತ ಆಚರಿಸುತ್ತಾರೆ.
ಹಾಗಾಗಿ ಈ ಆಷಾಢಮಾಸವನ್ನು ನಿಷಿದ್ಧ ಮಾಸವೆಂದು ತಿರಸ್ಕರಿಸದೆ, ಆತ್ಮೋನ್ನತಿಗೆ ಮುಂದಾಗಬಹುದು. ವೈಜ್ಞಾನಿಕ ಕಾರಣಗಳಿಂದ ನಿಷಿದ್ಧವೇ ಹೊರತು ಧಾರ್ಮಿಕವಾಗಿ ನಿಷಿದ್ಧವಲ್ಲ.
ಎಲ್ಲರಿಗೂ ಆಷಾಢಮಾಸಾಧಿಪತಿ ಶ್ರೀವಾಮನ ದೇವರು ಎಲ್ಲರಿಗೂ ಒಳಿತನ್ನುಂಟು ಮಾಡಲಿ.
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
****
No comments:
Post a Comment