SEARCH HERE

Friday 1 February 2019

ಶನಿವಾರ ಆಂಜನೇಯ ದರ್ಶನ why pray maruti on saturday


ಶನಿವಾರ ನಾವೇಕೆ  ಆಂಜನೇಯನನ್ನು ಆರಾಧಿಸಬೇಕು.? - ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು.

ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ?

ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ.

ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡನು. ಹೀಗೆ ಇದ್ದಾಗ ರಾವಣನ ಪತ್ನಿ ಮಂಡೋದರೆ ರಾವಣನ ಮಗನಾದ ಮೇಘನಾದನಿಗೆ ಜನ್ಮ ನೀಡುವ ಕಾಲ ಬಂದಿತು. ಆಗ ಮಹಾ ಜ್ಯೋತಿಷ್ಯಜ್ಞನಾದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮಕುಂಡಲಿಯ 11ನೇ ಮನೆಯಲ್ಲಿ ಹೋಗಿ ನೆಲೆಸುವಂತೆ ಆದೇಶ ನೀಡಿದನು. ಇದರಿಂದ ತನ್ನ ಮಗ ಅಮರನಾಗುತ್ತಾನೆ ಎಂಬ ಆಸೆ ರಾವಣನದಾಗಿತ್ತು.

ಆದರೆ ಇದು ದೇವತೆಗಳಲ್ಲಿ ಭಯವನ್ನುಂಟು ಮಾಡಿತು. ಆಗ ಇದನ್ನು ಅರಿತು ಮಗು ಜನಿಸುವಾಗ ಶನಿ ಉಚ್ಛ ಸ್ಥಾನದಲ್ಲಿ ಕೂರುವ ಬದಲು ಮೇಘನಾದನ ಕುಂಡಲಿಯಲ್ಲಿ ನೀಚ ಸ್ಥಾನನಾಗಿ ಕುಳಿತು, 12ನೆಯ ಮನೆಯವರೆಗು ಕಾಲು ಚಾಚಿ ಬಿಟ್ಟನು.

ಇದು ರಾವಣನಿಗೆ ತಿಳಿಯಲು ಹೆಚ್ಚು ಸಮಯವಾಗಲಿಲ್ಲ, ಏಕೆಂದರೆ ಶನಿಯ ಈ ನಡೆ ತನ್ನ ಮಗನ ಸಾವಿಗೆ ಕಾರಣನಾಗುತ್ತೆ ಎಂದು ಆತ ಗ್ರಹಿಸಿದನು. ಈ ಕಾರಣವಾಗಿ ಶನಿಯನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಇದರಿಂದ ಶನಿಯ ಮುಖವನ್ನು ಯಾರೂ ನೋಡುವುದಿಲ್ಲ ಎಂಬುದು ಆತನ ಅನಿಸಿಕೆಯಾಗಿತ್ತು.ಆರ್೧೨೯ ಆದರೆ ಸೀತೆಯನ್ನು ಹುಡುಕುಲು ಬಂದ ಆಂಜನೇಯನು ಆ ಕತ್ತಲ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು. ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂಬ ಅಳುಕು ಹನುಮಂತನಿಗೂ ಸಹ ಕಾಡಿತು. ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿ, ಎಲ್ಲರನ್ನು ಹನುಮಂತ ಬಿಡುಗಡೆಗೊಳಿಸಿದ. ಇದನ್ನು ಶನಿ ಕೇಳಿದಾಗ, ನಿನ್ನನ್ನು ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದ.

ಇದರಿಂದ ಶನಿಯು ಆತನಿಗೆ ಅಭಯವನ್ನು ನೀಡಿದ. ನಾನು ನಿನಗೆ ಸಹಾಯ ಮಾಡುವೆ ಎಂದು, ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ, ನೀನು ಮನೆ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗುವೆ ಎಂದು ಶನಿ ಹೇಳಿದನು. ಹಾಗಾದರೆ ಬಾ ನಾನು ನಿನ್ನನ್ನು ಬಿಡಿಸುವೆ ನನಗೆ ಮನೆ,ಮಠ, ಹೆಂಡತಿ ಮತ್ತು ಮಕ್ಕಳು ಯಾರೂ ಇಲ್ಲ. ನನಗೆ ರಾಮನ ಅಡಿದಾವರೆ ಮತ್ತು ಆತನ ನಾಮ ಬಿಟ್ಟರೆ ಬೇರೆ ಸಂಪತ್ತಿಲ್ಲ ಎಂದು ಶನಿಯನ್ನು ಬಂಧ ಮುಕ್ತಗೊಳಿಸಿದನು.

ಹೀಗೆ ಶನಿ ಕೃತಜ್ಞತಾಪೂರ್ವಕವಾಗಿ ಹನುಮಂತನನ್ನು ಯಾರೂ ಪೂಜಿಸುವರೋ, ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತುಕೊಟ್ಟನು. ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾದಹನವನ್ನು ಸರಿಯಾಗಿ ಮಾಡಲಾಗಲಿಲ್ಲವಂತೆ, ಆಗ ಹನುಮಂತನ ಸಹಾಯಕ್ಕೆ ಬಂದ ಶನಿ ಲಂಕೆಯನ್ನು ನೋಡಿದ್ದರಿಂದ ಸ್ವರ್ಣಲಂಕ, ಭಸ್ಮವಾಗಿ ಕಪ್ಪು ಲಂಕಾವಾಯಿತಂತೆ.

ಮತ್ತೊಂದು ರೋಚಕ ಕತೆ ಶನಿ ಮತ್ತು ಆಂಜನೇಯನ ನಡುವೆ ನಡೆಯಿತು. ರಾಮಾಯಣ ಯುದ್ಧ ಮುಗಿದು, ಹನುಮಂತನು ಒಮ್ಮೆ ಗುಹೆಯಲ್ಲಿ ರಾಮಧ್ಯಾನ ಮಾಡುತ್ತ ಕುಳಿತಿದ್ದನು. ಆಗ ಶನಿ ಇದೇ ಸಮಯವೆಂದು ಆಂಜನೇಯನ ಹೆಗಲೇರಿದನು. ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಿತು ಎಂದು ಆಂಜನೇಯನಿಗೆ ಸಿಟ್ಟು ಬಂದಿತು. ಆದರು ಅದನ್ನು ನಿಗ್ರಹಿಸಿಕೊಂಡು, ಆಂಜನೇಯ ಹೀಗೆ ಹೇಳಿದ: "ಹೇ ಶನಿದೇವ, ನಿಮ್ಮ ತಂದೆಯಾದ ಸೂರ್ಯ ದೇವನು ನನಗೆ ಅನೇಕ ವರ ನೀಡಿದ್ದಾನೆ. ಆತ ನನ್ನ ಗುರು, ಗುರುವಿನ ಮಗನನ್ನು ಶಿಕ್ಷಿಸುವ ಕೆಲಸ ನನಗೆ ನೀಡಬೇಡ. ಇಳಿದು ಹೋಗಿಬಿಡು" ಎಂದು ಹೇಳಿದನು.

ಅದಕ್ಕೆ ಶನಿಯು" ಆಂಜನೇಯ, ಇದು ನನ್ನ ಸರದಿ, ಅದರ ಪ್ರಕಾರ ನಾನು ನಿನ್ನ ಹೆಗಲೇರಬೇಕು, ಇದು ವಿಧಿ ನಿಯಮ" ಎಂದನು. ಮಾತಿಗೆ ಮಾತು ಬೆಳೆಯಿತು, ಶನಿ ಸೋಲಲಿಲ.

ಆಗ ಆಂಜನೇಯನು ಉಗ್ರ ಸ್ವರೂಪವನ್ನು ತಾಳಿ ತನ್ನ ದೇಹವನ್ನು ಬೆಳೆಸಿದನು. ಇದರಿಂದ ಹೆಗಲ ಮೇಲಿದ್ದ ಶನಿ ಗುಹೆಯ ಛಾವಣಿ ಮತ್ತು ಆಂಜನೇಯನ ದೇಹದ ನಡುವೆ ಸಿಲುಕಿ ಅಪ್ಪಚ್ಚಿಯಾಗಿ ಹೋದನು. ಆ ನೋವನ್ನು ತಾಳಲಾರದೆ ಶನಿ ಸೋತು ಆಂಜನೇಯನನ್ನು ಅಂಗಲಾಚಿದನು.ಆರ್೧೨೯ ಆಗ ಆಂಜನೇಯನು "ರಾಮ ನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ನೀಡಿದರೆ ಮಾತ್ರ ನಿನ್ನನ್ನು ಬಿಡುತ್ತೇನೆ" ಎಂದನು. ಇದಕ್ಕೆ ಶನಿಯು ಸಹ ಅಸ್ತು ಎಂದನು.

ಎಷ್ಟಾದರು ಆಂಜನೇಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಅಲ್ಲವೇ, ಹೀಗೆ ಹನುಮಂತನನ್ನು ನಾವು ಶನಿವಾರದಂದು ಪೂಜಿಸಲು ಆರಂಭಿದೆವು. ಇನ್ನೂ ಒಂದು ವಿಚಾರ ಏನಪ್ಪಾ ಎಂದರೆ ಆಂಜನೇಯ ಸಹ ಹುಟ್ಟಿದ್ದು, ಶನಿವಾರವಂತೇ

ಜೈ ಶ್ರೀ ರಾಮ
ಜೈ ವೀರಾಂಜನೆಯ

*********

No comments:

Post a Comment