SEARCH HERE

Tuesday, 1 January 2019

bheeshmashtami ಭೀಷ್ಮಾಷ್ಟಮೀ magha shukla ashtami


Bhishma Ashtami is the death Anniversary of  Bishma, who was one of the most famous epic in Mahabharata. Bhishma Ashtami is the eighth day of Shukl Paksh on Magh Month according to Hindu Calender.Bhishma the most respected character from Mahabharat who is respected for his honesty, sincerity and determination. Bhishma was known for his loyalty and devotion to his father Pitamah Bhshma and was blessed with boon to choose the time of his death by his own. According to Mahabharata, Bhishma laid himself on the bed of arrows on Magh Shukla Ashtami day. Being injured in Mahabharta Battle he didn’t left his body due to boon and choose Magh Shukla Ashtami to give up his body. This was the time when Surya started moving in Uttarayana.

Bheeshma Ashtami is considered as one of the auspicious day, People take bath in the Holly River early in the Morning and observe fast for the whole day. This day has much importance for particular community of peoples. In Bengal special Pooja is conducted on this Day. In the Honour of Bhishma devotees make religious offering of Ganga Water. Sesame seeds and Boiled rice is offered. It is believed that by doing this all the sin are removed out from your Life. Devotees make Arghyam in the evening and do Sankalp.

Bhishma Ashtami Date: magha shuddha ashtami

Bhishma Ashtami Puja Muhurat: Whole Day is auspicious.

Bhishma Ashtami Puja/Poojan Samagri/Kit/Material (Arghya Samagri)

Aasana made by Kusha
Ganga Jal/Holy Water
Janeu/Sacred Thread

 Bhishma Ashtami Puja/Pooja/Pujan Vidhi

Perform the sandhya and all other routine rituals.
Sit down facing the East direction on Aasana.
Wear Janeu/Sacred Thread.
Recite the sankalpa “Bhishmashtami punyakale Bhishma Tarpanam karishye”.
Having Yajnopavita in Nivita mode,offer arghyam by both hands in pure water.
During Arghyam chant Bhishma Ashtami Mantra.

 Bhishma Ashtami Mantra

Bhishmah santanavo virah satyavsdi jitendriyah l
   Abhiradbhiravapnotu putrapautrocitam kriyam ll

   Bhishmaya namah idam arghyam l
   Vaiyaghrapada gotraya sankritya pravaraya ca l
   Aputraya dadamyarghyam salilam bhIshma varmaNe ll

   Bhishmaya namah idam arghyam l
    Gangaputraya santaya santanoh atmajaya ca l
    Aputraya dadamyarghyam salilam bhishma varmane ll

   Bhishmaya namah idamarghyam l
   Anena arghyapradanena bhsshmah prIyatam ll

Bhishma Ashtami Traditions

This day People do Ekodishta Shradhha for Bhishma. This Shradhha is for those who have lost their father. However it is also believed that this Shradhha rituals can be performed by all irrespective of their father being alive or dead.


Bhishma Ashtami is celebrated with extreme fervor in Vishnu temples and ISKCON Temples.  People do Bhima Ashtami puja in five days beginning from Bhishma Ashtami to Bhishma Dwadasi are known as Bhishma Panchaka vrata.

Rituals during Bhishma Ashtami

On the day of Bhishma Ashtami, people observe ‘Ekodishta Shraddha’ in the honour of Bhishma Pitamah. It is mentioned in the Hindu scriptures that this ‘shraddha’ can only be performed by those whose fathers are not alive. However some communities do not follow this and believe that any individual can perform the ‘shraddha’ irrespective of their father being dead or alive.

Devotees perform ‘tarpan’ on this day on the river banks. This ritual is dedicated to their ancestors and Bhishma Pitamah. This tarpan ritual is meant for the peace of King Bhishma’s soul.


Bhishma Ashtami Snan is an important ritual during this day. Taking a bath in the holy rivers is believed to be highly meritorious. While taking bath, there is a tradition of offering boiled rice and sesame seeds in the Ganga River. It is a belief that by performing this act all the sins will be removed from one’s life and the person will be freed from the cycle of birth and death. After taking bath, most of the devotees observe a strict fast on this day. This fast is undertaken to pay tribute to King Bhishma. In the evening, the observer of this vrat takes a sankalp and performs an ‘Arghyam’. During the Arghyam, the devotees chant the ‘Bhishma Ashtami Mantra’.

What is the steps one need to follow while performing ‘Bhishma Ashtami pujan’?

People observe the ritual of ‘Ekodishta Shraddha’ in the honor of Bhishma. According to the belief, only those devotees whose fathers are not alive anymore can perform this ritual. Some communities, however, do not follow this and believe that anyone can perform the ‘pooja’.

People visit the nearby river banks and do ‘Tarpan’ ritual in order to bring peace to Bhishma Pitamah’s soul. They also honor their ancestors through the same.

People take holy dip in the Ganga River and offer boiled rice and sesame seeds in order to come out of the cycle of life and death and purify their souls.

Devotees observe fast during the day and perform, ‘Arghyam’ and chant ‘Bhishma Ashtami mantra’ to seek the deity’s blessings.

What is the importance of celebrating Bhishma Ashtami?


The day of Bhishma Ashtami is considered as most significant day for the people who want to get rid of Putradosh. Couples that are praying for son are blessed with blessings of Bhishma Pitamaha of having male child. Observing fast on this auspicious day is beneficial for the couples. People perform Tarpan and Fast on this day in the regards of Bhishma Pitamaha. All this is considered as the activity to offer peace to the soul of Bhishma Pitamaha. It is believed that one who keeps fast on this day is blessed with the son who has powers of Pitamaha and he is capable to work like him. Bhishma Ashtami is widely celebrated in the temples of Lord Vishnu. This is celebrated for five days from Bhishma Ashtami to Bhishma Dwadasi. This period of five days is known as Bhishma Panchaka vrata.
********
ಭೀಷ್ಮಾಷ್ಟಮಿ
Bheeshmashtami 

ಭೀಷ್ಮರು ವಸಿಷ್ಠರ ಕಾಮಧೇನುವನ್ನು ಕದ್ದದ್ದಕ್ಕೆ ಶಾಪಗ್ರಸ್ತರಾಗಿ ಮಾನವ ಜನ್ಮ ಹೊಂದಬೇಕಾಯಿತು.  ಅವರ ಪತ್ನಿಯೂ ಅಂಬೆಯಾಗಿ ಜನಿಸಿದ, ಭೀಷ್ಮರಿಂದ ತಿರಸ್ಕೃತರಾಗಿ ಮತ್ತೆ ಅವರ ವಿರೋಧಿಸಿ ಹಿಡಿಂಬೆಯಾಗಿ ಜನಿಸಿ ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನ ಮುಂದೆ ನಿಂತಾಗ ಹತ್ತೂ ದಿನ ಭಾರೀ ಹೋರಾಟ ನಡೆಸಿ ಪಾಂಡವರನ್ನು ತಲ್ಲಣಗೊಳಿಸಿದ್ದ ಅವರು ಶಸ್ತ್ರ ತ್ಯಾಗಮಾಡಿ ಅರ್ಜುನ ಬಾಣದಿಂದ ಏಟು ತಿಂದು ಉತ್ತರಾಯಣಕ್ಕಾಗಿ ಕಾದಿದ್ದು ಮಾಘ ಶುಕ್ಲ ಅಷ್ಟಮೀ ದಿನದಂದು ದೇಹತ್ಯಾಗ ಮಾಡಿದರು. 


This is the day on which Bheeshma did the dehatyaaga after being in the Shara panjara for 56 days.
Bhishma Ashtami  –  It is observed on Magha Shuddha Ashtami, a day prior to Madhwa Navami.   It is dedicated to ‘Bhishma Pitaamaha, the great  pitaamaha.
 It is believed that Bhishma,  who was waiting for the arrival of Uttarayana, departed from his soul on this day.  Bhishma who sacrificed his marriage to please his father had got a boon to select his choice of death time, which he reserved for this day – Magha Shudda Ashtami
Tarpanadhikarigalu to use ellu.  Pleased with the tarpana, it is said that Bheeshmaru will bless with putrasantanaadi phala.
Bheeshmacharyaru was brahmachari, throughout his life.  He sacrificed his marriage for the wishes of his father.  He was rightly called as “pitamaha”.  As he was the pitamaha for all of us, it is with great respect that one has to give tarpana.   On this day, even Jeevanpitru also has to give Jalatarpana to Bheeshmacharyaru.  Tarpanadhikarigalu to use ellu.  Pleased with the tarpana, it is said that Bheeshmaru will bless with putrasantanaadi phala.

Bheeshma tarpana sankalpa : 

Achamana, praaNaanaayamya, ………………………..  ……………………samvatsare, uttarayaNe, shishira rutou, maagha maase, shukla pakshE, ashTamyaam shubatithou, …………vasare, ………… nakshatre, ….. yoge, Gangaputraya Bheeshmantargatha Bharatiramana mukyapranantargata, lakshmi narasimha/Srinivasa  (our respective kuladevata) preranaya tathaa preetyartham, Gangaputraya Bheeshmaya tarpanaM tathaa argyam karishyaami.

ಆಚಮನ; ಪ್ರಾಣಾನಾಯಮ್ಯ, …    ಸಂವತ್ಸರೇ, ಉತ್ತರಾಯಣೇ, ಶಿಶಿರ ಋತು, ಮಾಘ ಮಾಸೇ, ಶುಕ್ಲ ಪಕ್ಷೇ, ಅಷ್ಟಮ್ಯಾಂ,. … ನಕ್ಷತ್ರ,. … ಯೋಗ, ….ಕರಣೇ, … ವಾಸರೇ, ಗಂಗಾಪುತ್ರಾಯ, ಭೀಷ್ಮಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಲಕ್ಷ್ಮೀ ನರಸಿಂಹ/ವೆಂಕಟೇಶ (ಕುಲದೇವತಾ) ಪ್ರೇರಣಯಾ,   ಲಕ್ಷ್ಮೀ ನರಸಿಂಹ ಪ್ರೀತ್ಯರ್ಥಂ, ಗಂಗಾಪುತ್ರಾಯ ಭೀಷ್ಮಾಯ ತರ್ಪಣಂ ಕರಿಷ್ಯೇ.

ತರ್ಪಣವನ್ನು ತರ್ಪಣಾಧಿಕಾರಿಗಳು ಮತ್ತು ಅಲ್ಲದವರೂ ಇಬ್ಬರೂ ದಕ್ಷಿಣಾಭಿಮುಖವಾಗಿ ಕೊಡಬೇಕು.   ತರ್ಪಣಾಧಿಕಾರಿಗಳು ಎಳ್ಳಿಂದ ಅಪಸವ್ಯದಿಂದ ಕೊಡಬೇಕು   ಬೇರೆಯವರು ಸವ್ಯದಿಂದ ನೀರಿನಿಂದ ಕೊಡಬೇಕು. ಎಳ್ಳಿನಿಂದ ತರ್ಪಣ ಕೊಟ್ಟವರು ರಾತ್ರಿ ಫಲಾಹಾರ ಮಾಡಬಹುದು. ರಾತ್ರಿ ಭೋಜನವಿಲ್ಲ.  

We have to give Tarpana to Bheeshmaru :

ಗಂಗಾಪುತ್ರಾಯ ಭೀಷ್ಮಾಯ ಆಜನ್ಮಬ್ರಹ್ಮಚಾರಿಣೇ |
ಅಪುತ್ರಾಯ ಜಲಂ ದದ್ಯಾಂ ನಮೋ ಭೀಷ್ಮಾಯ ವರ್ಮಣೇ |
ಭೀಷ್ಮ: ಶಾಂತನವೋ ವೀರ: ಸತ್ಯವಾದೀ ಜಿತೇಂದ್ರಿಯ: |
ಆಭೀರದ್ಭಿರವಾಪ್ನೋತು ಪುತ್ರಪೌತ್ರೋಚಿತಾಂ ಕ್ರಿಯಾಮ್ |
ವೈಯಾಘ್ರಪಾದಗೋತ್ರಾಯ ಸಾಂಕೃತ್ಯಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಿಣೇ |

गंगापुत्राय भीष्माय आजन्मब्रह्मचारिणे ।
अपुत्राय जलं दद्यां नमो भीष्माय वर्मणे ।
भीष्म: शांतनवो वीर: सत्यवादी जितेंद्रिय: ।
आभीरद्भिरवाप्नोतु पुत्रपौत्रोचितां क्रियाम् ।
वैयाघ्रपादगोत्राय सांकृत्यप्रवराय च ।
अपुत्राय ददाम्येतज्जलं भीष्माय वर्मिणे ।

gangaaputraaya bhIShmaaya AjanmabrahmachaariNE |
aputraaya jalaM dadyaam namO bhIShmaaya varmaNE |
bhIShma: shaaMtanavO vIra: satyavaadI jitEndriya: |
AbhIradbhiravaapnOtu putrapoutrOchitaaM kriyaam |
vaiyaaGrapaadagOtraaya saankRutyapravaraaya cha |
aputraaya dadaamyEtajjalam bhIShmaaya varmiNE |

 Bheeshma argya Mantra :

 ವಸೂನಾಮವತಾರಾಯ ಶಂತನೋರಾತ್ಮಜಾಯ ಚ | ಅರ್ಘ್ಯಂದದಾಮಿ ಭೀಷ್ಮಾಯ ಅಬಾಲಬ್ರಹ್ಮಚಾರಿಣೇ |

वसूनामवताराय शंतनोरात्मजाय च ।
अर्घ्यं ददामि भीष्माय अबालब्रह्मचारिणे ।
vasUnaamavataaraaya shantanOraatmajaaya cha |
arGyaM dadaami bhIShmaaya abaala brahmachaariNE |

(whatsapp)
***


information from wikipedia--> 

Bhishma Ashtami (Bhishmashtami) is a Hindu festival dedicated to Bhishma of the great Indian epic Mahabharata. It is believed that Bhishma, also known as 'Ganga Putr Bhism' or 'Bhishma Pitamaha', departed from his body on this chosen day. This occurred during the propitious 'Uttarayan period'; that is, the daytime of devas. Bhishma Ashtami is observed during the month of Magha in the Hindu calendar. It corresponds to the months of January–February.[1]

The anniversary of Bhishma Pitamah's death is observed during Magha Shukla Ashtami[clarification needed]. The day is known as Bhishma Ashtami and indisputably the death anniversary of Bhishma Pitamah. According to the legend associated with the day, Bhishma waited for 58 days before leaving his body. Bhishma Pitamah left his body on the auspicious day of Uttarayana, i.e. on the day when the Lord Surya started moving towards Northward after completing six month period of Dakshiyana.[4]

This is the day Bhishma decided to leave his body. The day Bhishma left his body known as Bhishma Ashtami (Magha Shukla Ashtami). He has special boon of death as per his will (Ichha Mrityu) from his father. Hence, despite lying on a bed of arrows he continued in that position and then left his body on Sankranti. Hindus believe that the one who dies during Uttarayana goes to heaven.[5]
********

People observe the ritual of ‘Ekodishta Shraddha’ in the honor of Bhishma. According to the belief, only those devotees whose fathers are not alive anymore can perform this ritual. However, some communities do not follow this and believe that anyone can perform the ‘pooja’.
People visit the nearby river banks and do the ‘Tarpan’ ritual in order to bring peace to Bhishma Pitamah’s soul. They also honor their ancestors through the same ritual.
People take holy dips in the Ganga river and offer boiled rice and sesame seeds in order to come out of the cycle of life and death and purify their souls.
Devotees observe fast during the day and perform ‘Arghyam’ and chant ‘Bhishma Ashtami mantra’ to seek the deity’s blessings.[6]
********

Bheeshmashtami vruta is performed by brahmins of north India. (specially in Bengal)

********

Bheeshmashtamai ಭೀಷ್ಮಾಷ್ಟಮಿ - from narahari sumadhwa

ಭೀಷ್ಮರು “ದ್ಯು” ನಾಮಕ ವಸು.   ಗಂಗಾಪುತ್ರ, ದೇವವ್ರತ ಅವನ ನಾಮಧೇಯಗಳು.

ದ್ಯು ನಾಮಕ ವಸುವು -  ವಸಿಷ್ಠರ ಕಾಮಧೇನುವನ್ನು ಕದ್ದದ್ದಕ್ಕೆ ಶಾಪಗ್ರಸ್ತರಾಗಿ ಮಾನವ ಜನ್ಮ ಹೊಂದಬೇಕಾಯಿತು.  ಅವರ ಪತ್ನಿಯೂ ಅಂಬೆಯಾಗಿ ಜನಿಸಿದ, ಭೀಷ್ಮರಿಂದ ತಿರಸ್ಕೃತರಾಗಿ ಮತ್ತೆ ಅವರ ವಿರೋಧಿಸಿ ಹಿಡಿಂಬೆಯಾಗಿ ಜನಿಸಿ ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನ ಮುಂದೆ ನಿಂತಾಗ ಹತ್ತೂ ದಿನ ಭಾರೀ ಹೋರಾಟ ನಡೆಸಿ ಪಾಂಡವರನ್ನು ತಲ್ಲಣಗೊಳಿಸಿದ್ದ ಅವರು ಶಸ್ತ್ರ ತ್ಯಾಗಮಾಡಿ ಅರ್ಜುನ ಬಾಣದಿಂದ ಏಟು ತಿಂದು ಉತ್ತರಾಯಣಕ್ಕಾಗಿ ಕಾದಿದ್ದು ಮಾಘ ಶುಕ್ಲ ಅಷ್ಟಮೀ ದಿನದಂದು ದೇಹತ್ಯಾಗ ಮಾಡಿದರು.

This is the day on which Bheeshma did the dehatyaaga after being in the Shara panjara for 56 days.
Bhishma Ashtami  –  It is observed on Magha Shuddha Ashtami, a day prior to Madhwa Navami.   It is dedicated to ‘Bhishma Pitaamaha, the great  pitaamaha.
 It is believed that Bhishma,  who was waiting for the arrival of Uttarayana, departed from his soul on this day.  Bhishma who sacrificed his marriage to please his father had got a boon to select his choice of death time, which he reserved for this day – Magha Shudda Ashtami
Tarpanadhikarigalu to use ellu.  Pleased with the tarpana, it is said that Bheeshmaru will bless with putrasantanaadi phala.
Bheeshmacharyaru was brahmachari, throughout his life.  He sacrificed his marriage for the wishes of his father.  He was rightly called as “pitamaha”.  As he was the pitamaha for all of us, it is with great respect that one has to give tarpana.   On this day, even Jeevanpitru also has to give Jalatarpana to Bheeshmacharyaru.  Tarpanadhikarigalu to use ellu.  Pleased with the tarpana, it is said that Bheeshmaru will bless with putrasantanaadi phala.

ಆಚಮನ; ಪ್ರಾಣಾನಾಯಮ್ಯ, …    ಸಂವತ್ಸರೇ, ಉತ್ತರಾಯಣೇ, ಶಿಶಿರ ಋತು, ಮಾಘ ಮಾಸೇ, ಶುಕ್ಲ ಪಕ್ಷೇ, ಅಷ್ಟಮ್ಯಾಂ,. … ನಕ್ಷತ್ರ,. … ಯೋಗ, ….ಕರಣೇ, … ವಾಸರೇ, ಗಂಗಾಪುತ್ರಾಯ, ಭೀಷ್ಮಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಲಕ್ಷ್ಮೀ ನರಸಿಂಹ/ವೆಂಕಟೇಶ (ಕುಲದೇವತಾ) ಪ್ರೇರಣಯಾ,   ಲಕ್ಷ್ಮೀ ನರಸಿಂಹ ಪ್ರೀತ್ಯರ್ಥಂ, ಗಂಗಾಪುತ್ರಾಯ ಭೀಷ್ಮಾಯ ತರ್ಪಣಂ ಕರಿಷ್ಯೇ.

ತರ್ಪಣವನ್ನು ತರ್ಪಣಾಧಿಕಾರಿಗಳು ಮತ್ತು ಅಲ್ಲದವರೂ ಇಬ್ಬರೂ ದಕ್ಷಿಣಾಭಿಮುಖವಾಗಿ ಕೊಡಬೇಕು.   ತರ್ಪಣಾಧಿಕಾರಿಗಳು ಎಳ್ಳಿಂದ ಅಪಸವ್ಯದಿಂದ ಕೊಡಬೇಕು   ಬೇರೆಯವರು ಸವ್ಯದಿಂದ ನೀರಿನಿಂದ ಕೊಡಬೇಕು. ಎಳ್ಳಿನಿಂದ ತರ್ಪಣ ಕೊಟ್ಟವರು ರಾತ್ರಿ ಫಲಾಹಾರ ಮಾಡಬಹುದು. ರಾತ್ರಿ ಭೋಜನವಿಲ್ಲ.  

We have to give Tarpana to Bheeshmaru  :

ಗಂಗಾಪುತ್ರಾಯ ಭೀಷ್ಮಾಯ ಆಜನ್ಮಬ್ರಹ್ಮಚಾರಿಣೇ |
ಅಪುತ್ರಾಯ ಜಲಂ ದದ್ಯಾಂ ನಮೋ ಭೀಷ್ಮಾಯ ವರ್ಮಣೇ |
ಭೀಷ್ಮ: ಶಾಂತನವೋ ವೀರ: ಸತ್ಯವಾದೀ ಜಿತೇಂದ್ರಿಯ: |
ಆಭೀರದ್ಭಿರವಾಪ್ನೋತು ಪುತ್ರಪೌತ್ರೋಚಿತಾಂ ಕ್ರಿಯಾಮ್ |
ವೈಯಾಘ್ರಪಾದಗೋತ್ರಾಯ ಸಾಂಕೃತ್ಯಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಿಣೇ |

by NARAHARI SUMADHWA
***



ಮರೆಯದೆ ಅರ್ಘ್ಯವ ಕೊಡಿ.ಪುಣ್ಯವ ಡೆಪಾಸಿಟ್ ಮಾಡಿ. ನಮ್ಮ ಕಷ್ಟ ಕಾಲಕ್ಕೆ ಭಗವಂತ ವಿತ್ ಡ್ರಾ ಮಾಡಲು ಅವಕಾಶ ಕೊಡುತ್ತಾನೆ. 

ಭೀಷ್ಮರು 56 ದಿನ ಶರಪಂಜರ ದಲಿದ್ದು  ದೇಹತ್ಯಾಗ ಮಾಡಿದ ದಿವಸ. ಬಹು ಸ್ವಾರ್ಥಿಯಾದ ಅಂಧ ಧೃತರಾಷ್ಟ್ರನ ಪುತ್ರ ಧಾರ್ಥರಾಸ್ಟ್ರ ಅಂದರೆ ದುರ್ಯೋಧನನ ಮನೆಯ ಭೋಜನ ಮಾಡಿದ ಕಾರಣ ಭೀಷ್ಮರ ದೇಹದ ರಕ್ತವೆಲ್ಲ ಮೈಲಿಗೆ ಆಗಿತ್ತು. ಅದೆಲ್ಲ ಹೋಗಬೇಕು , ಶುದ್ಧನಾಗಬೇಕು ಎಂಬ ಕಾರಣದಿಂದ ತಾನೆ ನಿರ್ಮಿಸಿಕೊಂಡ ಚೂಪಾದ ಬಾಣಗಳ  ಮುಳ್ಳಿನ ಹಾಸಿಗೆ ಮೇಲೆ ಮಲಗಿ ಒಂದು ಬಿಂದು ಮಾತ್ರ ರಕ್ತವಿಲ್ಲದೆ ಎಲ್ಲ ಹರಿದು ಹೋಗಿ ಶುದ್ದರಾದರು. 525 ವರ್ಷಗಳ ಕಾಲ ಶತ್ರ , ಶಾಸ್ತ್ರ ಪರಶುರಾಮ ದೇವರಿಂದ ವಿದ್ಯ ಕಲಿತವರು. ಆಜನ್ಮ ಬ್ರಹ್ಮಚಾರಿ ಗಳು. ಭಗವಾನ್ ಶ್ರೀಕೃಷ್ಣ ದೇವರು ಪಾಂಡವರ ನೆಪ ಮಾಡಿಕೊಂಡು ಭೀಶ್ಮರಿಂದ ವಿಶ್ವಕ್ಕೆ ಉಪದೇಶ ಮಾಡಿಸಿದರು. ಅದುವೇ ಅನುಶಾಸನ ಪರ್ವ. ಅದರಿಂದ ಹೊರ ಹೊಮ್ಮಿದ ಮುತ್ತು ರತ್ನಗಳೆ ಶ್ರೀ ವಿಷ್ಣು ಸಹಸ್ರನಾಮ. 

ಭೀಷ್ಮಾಷ್ಟಮೀ ತಂದೆಗಾಗಿ ಐಹಿಕ ಸುಖವನ್ನೆಲ್ಲಾ ತ್ಯಜಿಸಿ ಸನ್ಯಾಸಿಯ ಹಾಗೆ ಬದುಕಿದ ಬ್ರಹ್ಮಚಾರಿ ಭೀಷ್ಮಾಚಾರ್ಯರು ತಂದೆಯಿಂದ ಇಚ್ಛಾಮರಣದ ವರವನ್ನು ಪಡೆದರು. ಮಹಾಭಾರತದ ಯುದ್ಧದಲ್ಲಿ ಒಂಭತ್ತು ದಿವಸ ವೀರಾವೇಶ ದಿಂದ ಹೋರಾಡಿ ಶ್ರೀಕೃಷ್ಣನು ಸುದರ್ಶನ ಚಕ್ರವನ್ನು ಹಿಡಿಯುವಂತೆ ಮಾಡಿ, ಶಿಖಂಡಿಯ ನೆವದಿಂದ ಶಸ್ತ್ರ ತ್ಯಾಗ ಮಾಡುತ್ತಾನೆ. ನಂತರ ಮಹಾಭಾರತ ಯುದ್ಧವು ಪರಿಪೂರ್ಣ ಗೊಳ್ಳುವ ತನಕ ಶರಶಯ್ಯೆ ಯಲ್ಲಿ ಮಲಗಿದ್ದು ಉತ್ತರಾಯಣ ಪುಣ್ಯಕಾಲದ ನಿರೀಕ್ಷೆಯಲ್ಲಿರುತ್ತಾನೆ. ನಂತರ ತನ್ನ ಇಚ್ಛೆಯಂತೆ “ಮಾಘಶುದ್ಧಾಷ್ಟಮೀ” ದಿನದಂದು ಪ್ರಾಣವನ್ನು ತೊರೆದು ಪರಲೋಕಯಾತ್ರೆ ಯನ್ನು ಕೈಗೊಳ್ಳುತ್ತಾರೆ. 

ಭೀಷ್ಮಾಷ್ಟಮಿಯ ಬಗ್ಗೆ ಒಂದು ಜಿಜ್ಞಾಸೆ ಮೂಡುತ್ತದೆ. ಅದೇನೆಂದರೆ, ಪ್ರಚಲಿತ ವಿರುವ ಸಾಧಾರಣ ನಂಬಿಕೆಯ ಪ್ರಕಾರ ಭೀಷ್ಮಾಚಾರ್ಯರು ತಮ್ಮ ಇಹಲೋಕ ಪ್ರಯಾಣವನ್ನು ಕೊನೆಗೊಳಿಸಿಕೊಳ್ಳಲು ಉತ್ತರಾಯಣ ಪುಣ್ಯಕಾಲದ ನಿರೀಕ್ಷೆ ಯಲ್ಲಿದ್ದರು. ಹಾಗಿರುವಾಗ ಅವರೇಕೆ ಅಷ್ಟಮಿಯವರೆಗೂ ಕಾದರು, ಎಂದು ಪಂಡಿತೋತ್ತಮರು ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಿವರಣೆಗಳನ್ನು ನೀಡುತ್ತಾರೆ. ಮೊದಲನೆಯದಾಗಿ ಯುಗ ಯುಗಗಳ ಪರಿವರ್ತನೆಯ ಕಾರಣ ಉತ್ತರಾಯಣ ಪುಣ್ಯಕಾಲದ ಆರಂಭದಲ್ಲಿ ವ್ಯತ್ಯಯಗಳಿರುವುದು. ಆದ್ದರಿಂದ, ಭೀಷ್ಮರು ಅಂದು ದೇಹ ತ್ಯಾಗ ಮಾಡಿದ ದಿನ. ಅಷ್ಟಮಿ ತಿಥಿಯಾಗಿದ್ದು ಉತ್ತರಾಯಣ ಪುಣ್ಯಕಾಲವು ಆಗಿತ್ತು ಎಂದು ಮತ್ತೊಂದು ವಿವರಣೆಯ ಪ್ರಕಾರ ತೈತ್ತರೀಯೋಪನಿಷತ್ತಿನಲ್ಲಿ ಹೇಳಿರುವಂತೆ ಮನುಷ್ಯನ ಶರೀರದಲ್ಲಿ ಉತ್ತರ ಮತ್ತು ದಕ್ಷಿಣ ಎಂಬ ನಾಡಿಗಳಿವೆ, ಈ ಸಂದರ್ಭ ದಲ್ಲಿ ಭೀಷ್ಮರು ಕಾಯುತ್ತಿದ್ದುದು ಉತ್ತರಾಯಣ ಪುಣ್ಯಕಾಲವಷ್ಟೇ ಅಲ್ಲದೇ, ಉತ್ತಾರ ನಾಡಿಯಲ್ಲಿ ಪ್ರಾಣ ಪ್ರವಹಿಸಲಾ ರಂಭವಾಗು ವುದನ್ನು ನಿರೀಕ್ಷಿಸುತ್ತಿದ್ದರು. ಅಂದು ಶಿಶಿರ ಋತು ಮಾಘ ಶುದ್ಧ ಅಷ್ಟಮಿ ಯಾಗಿದ್ದುದ್ದ ರಿಂದಲೂ, ಉತ್ತರಾಯಣ ಕಾಲವಾದ್ದ ರಿಂದಲೂ, ಅಂದು ಭೀಷ್ಮರು ದೇಹ ತ್ಯಾಗ ಮಾಡಿದರು. ಆದ್ದರಿಂದ ಮಾಘಶುದ್ಧಾಷ್ಟಮಿ ಯಂದು ಭೀಷ್ಮನಿಗೆ ತರ್ಪಣವನ್ನು ಕೊಡುವ ಮೂಲಕ“ಭೀಷ್ಮಾಷ್ಟಮಿ”ಯನ್ನು ಆಚರಿಸಲಾಗುತ್ತದೆ. 

ಬ್ರಹ್ಮಚಾರಿಗಳಾದಿಯಾಗಿ ಪ್ರತಿಯೊಬ್ಬರೂ ಭೀಷ್ಮತರ್ಪಣ ವನ್ನು ಕೊಡುವುದು ವಿಹಿತ ವೆಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಅಕ್ಷತೆ ಸಹಿತವಾಗಿ ತರ್ಪಣ ವನ್ನು ಕೊಡುವುದು ಅತ್ಯವಶ್ಯಕ. “ಜೀವತ್ಪಿತಾಪಿ ಕುರ್ವೀತ ತರ್ಪಣಂ ಯಮಭೀಷ್ಮಯೋಃ” ಎಂಬ ಪಾದ್ಮವಚನದಂತೆ ತಂದೆತಾಯಿ ಯರು ಇದ್ದವರೂ ಕೂಡ ಭೀಷ್ಮತರ್ಪಣ ವನ್ನು ಕೊಡಬೇಕು. 

ಸಂಕಲ್ಪ: ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇತೀರೇ ಶಾಲಿವಾಹನ ಶಕೇ ಬೌಧ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ಚಾಂದ್ರ ಮಾನೇನ  (ಸಂವತ್ಸರದ ಹೆಸರನ್ನು ಹೇಳಿಕೊಳ್ಳ ಬೇಕು) ನಾಮ ಸಂವತ್ಸರೇ ಉತ್ತರಾಯಣೇ ಶಿಶಿರ ಋತೌ (ಋತುವಿನ ಹೆಸರು)ಮಾಘ ಮಾಸ್ಯೇ ಶುಕ್ಲ ಪಕ್ಷೇ ಅಷ್ಟಮ್ಯಾಂ ಶುಭತಿಥೌ ವಾಸರಃ ವಾಸರಸ್ತು ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶ್ರೀಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಸವಿತೃನಾಮಕ ಶ್ರೀಲಕ್ಷ್ಮೀನಾರಾಯಣಪ್ರೇರಣಯಾ ಶ್ರೀಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಭೀಷ್ಮಾಷ್ಟಮೀ ನಿಮಿತ್ತಮರುಣೋದಯೇ ಭೀಷ್ಮಾರ್ಘ್ಯಂ ಭೀಷ್ಮತರ್ಪಣಂ ಚ ಅಹಂ ದದಾಮಿ|| 

ಭೀಷ್ಮ ಅರ್ಘ್ಯ ಮಂತ್ರ: ವಸೂನಾಮವತಾರಾಯ ಶಂತನೋರಾತ್ಮಜಾಯ ಚ | ಅರ್ಘ್ಯಂ ದದಾಮಿ ಭೀಷ್ಮಾಯ ಆಬಾಲಬ್ರಹ್ಮ ಚಾರಿಣೇ || ಗಂಗಾಪುತ್ರಾಯ ಭೀಷ್ಮಾಯ ಇದಮಸ್ತು ತಿಲೋದಕಮ್ | 

ತರ್ಪಣ ಮಂತ್ರ: ಗಂಗಾಪುತ್ರಾಯ ಭೀಷ್ಮಾಯ ಆಜನ್ಮಬ್ರಹ್ಮಚಾರಿಣೇ | ಅಪುತ್ರಾಯ ಜಲಂ ದದ್ಯಾಂ ನಮೋ ಭೀಷ್ಮಾಯ ವರ್ಮಣೇ | ಭೀಷ್ಮ: ಶಾಂತನವೋ ವೀರ: ಸತ್ಯವಾದೀ ಜಿತೇಂದ್ರಿಯ: | ಆಭೀರದ್ಭಿರವಾಪ್ನೋತು ಪುತ್ರಪೌತ್ರೋಚಿತಾಂ ಕ್ರಿಯಾಮ್ | ವೈಯಾಘ್ರಪಾದ ಗೋತ್ರಾಯ ಸಾಂಕೃತ್ಯ ಪ್ರವರಾಯ ಚ | ಅಪುತ್ರಾಯ ದದಾಮ್ಯೇತ ಜ್ಜಲಂ ಭೀಷ್ಮಾಯ ವರ್ಮಿಣೇ | ಜೀವತ್ಪಿತೃಕರು ಇದೇ ಮಂತ್ರ ದಿಂದ ಅಕ್ಷತೋದಕವನ್ನು ದೇವತೀರ್ಥದಿಂದ ಪೂರ್ವಾಭಿ ಮುಖವಾಗಿ ಕೊಡಬೇಕು. ಆ ಸಂದರ್ಭದಲ್ಲಿ ಯಜ್ಞೋಪ ವೀತವನ್ನು ಎಡಗೈಯ ಹೆಬ್ಬೆರಳಿಗೆ ಸಿಕ್ಕಿಸಿಕೊಳ್ಳಬೇಕು. 

ವಿಶೇಷ ಸೂಚನೆ : ತಿಲತರ್ಪಣವನ್ನು ಕೊಡಲು ಅಧಿಕಾರವಿರುವವರು ಭೀಷ್ಮ ನಿಗೆ ತರ್ಪಣವನ್ನು ಕೊಡುವಾಗ ಜನಿವಾರವನ್ನು ಅಪಸವ್ಯ ಮಾಡಿಕೊಳ್ಳಬೇಕು. ಅನೇನ ಭೀಷ್ಮತರ್ಪಣೇನ ಶ್ರೀಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಸವಿತೃನಾಮಕ ಶ್ರೀಲಕ್ಷ್ಮೀ ನಾರಾಯಣಃ ಸುಪ್ರೀತೋ ವರದೋ ಭವತು|| ಮಧ್ಯೇ ಮಧ್ಯೇ ಮಂತ್ರ ತಂತ್ರ ಸ್ವರವರ್ಣ ಲೋಪದೋಶ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಪಠನಂ ಅಹಂ ಕರಿಷ್ಯೇ || ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತಗೋವಿಂದೇಭ್ಯೋನಮಃ || ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತಗೋವಿಂದೇಭ್ಯೋನಮಃ || ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋನಮಃ ||

***
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

" ಶ್ರೀ ಭೀಷ್ಮಾಷ್ಟಮೀ - 1 "

" ದಿನಾಂಕ : 19.02.2021 ಶುಕ್ರವಾರ ಶ್ರೀ ಭೀಷ್ಮಾಚಾರ್ಯರು ನಿರ್ಯಾಣ ಹೊಂದಿದ ದಿನ " .

" ಈ ವಿಷಯವು ಶ್ರೀಮನ್ಮಹಾಭಾರತದ ಅನುಶಾಸನಿಕ ಪರ್ವದಿಂದ ಉಧೃತವಾಗಿದೆ "

ಆಚಾರ್ಯ ನಾಗರಾಜು ಹಾವೇರಿ.....

ತಾತನಿಂದ ಅನುಗ್ರಹಿತನಾದ ।
ತಾತನನ್ನು ಕೊಂದು -
ವಿಜಯವನ್ನು ಸಾಧಿಸಿ ।
ತಾತನ ತಾತ ವೆಂಕಟನಾಥನ -
ಪ್ರೀತಿ ಗಳಿಸಿದ ನರನವತಾರನು
ಮಹಾಭಾರತ ಯುದ್ಧದಿ ।।

ಸರ್ವ ಶಾಸ್ತ್ರಮಯೀ ಗೀತಾ
ಸರ್ವದೇವ ಮಯೋ ಹರಿಃ ।
ಸರ್ವ ತೀರ್ಥಮಯೀ ಗಂಗಾ
ಸರ್ವ ವೇದ ಮಯೋ ಮನು: ।।

ಆಕಾಶದಿಂದುರುಳವ ಕೊಳ್ಳಿಗಳಂತೆ ಹಾರುವ ಶರಜಾಲದಿಂದಲೂ - ಮಿಂಚಿನಂತೆ ಪೊಳೆವ ಧನಸ್ಸುಗಳಿಂದಲೂ - ರಥ ನೇಮಿಗಳ ಗರ್ಜನದಿಂದಲೂ - ರಣರಂಗವು ತುಂಬಿ ಮಳೆಗರೆವ ಆಕಾಶದಂತಾಯಿತು.

ಸಂರಂಭದಿಂದ ಕಡಿದಾಡುವ ಜ್ಞಾತಿಗಳ ಪರಸ್ಪರ ಹಿಂಸೆಯು ಅತಿ ದಾರುಣವಾಯಿತು.

ನೋಡುತ್ತಾ ನಿಂತ ರಾಜ್ಯರು ಬೆರಗಾದರು. ಧನುಗಳು ಸರ್ಪವಾಗಿ - ಸಿಂಹ ಗರ್ಜನವು ಘೋಷವಾಗಿ - ಖಡ್ಗಗಳು ಕಚ್ಛಪಗಳಾಗಿ - ಸೈನಿಕರು ಅಲೆಗಳಾಗಿ - ಕೃ ಪಾಂಡವ ಸೇನೆಗಳು ಗಾಳಿಗೆ ತೂಗುವ ಸಮುದ್ರಗಳಂತೆ ಕಂಗೊಳಿಸಿದವು.

ಸೈನ್ಯವು ನಡೆದಂತೆ ಮೇಲಿದ್ದ ಧೂಳಿಯು ಮುಚ್ಚಿ ಸೂರ್ಯನು ಕಾಣದಂತಾಯಿತು.


ಮಹಾಭಾರತ ಯುದ್ಧವು - ಹೇಮಂತ ಋತು ಮಾರ್ಗಶಿರ ಮಾಸ ಶುಕ್ಲ ಪಕ್ಷ ತ್ರಯೋದಶೀ ಯುದ್ಧವು ಆರಂಭವಾಯಿತು.

ಶಾಂತನವನು ಧನಂಜಯನನ್ನೂ - ಸಾತ್ಯಕಿಯು ಕೃತವರ್ಮನನ್ನೂ - ಅಭಿಮನ್ಯುವು ಬೃಹದ್ಬಲನನ್ನೂ [ ಕೋಶಲರಾಜ ] - ದುರ್ಯೋಧನನು ಭೀಮಸೇನನನ್ನೂ - ನಕುಲನು ವಿಕರ್ಣನನ್ನೂ - ಸಹದೇವನು ದುಶ್ಶಾಸನನನ್ನೂ - ಧರ್ಮರಾಜ ಶಲ್ಯನನ್ನೂ - ದ್ರುಪದರಾಜ ದ್ರೋಣನನ್ನೂ - ಶಂಖನು [ ಉತ್ತರೆಯ ಅಣ್ಣ ] ಭೂರಿಯನ್ನೂ - ದುರ್ಮುಖಾದಿ ಕೌರವ ಪುತ್ರರು ದ್ರೌಪದೇಯರನ್ನೂ - ದುಷ್ಟಕೇತುವು ಬಾಹ್ಲೀಕನನ್ನೂ - ಘಟೋತ್ಕಚನು ಅಲಂಬುಷನನ್ನೂ - ಶಿಖಂಡಿಯು ಅಶ್ವತ್ಥಾಮನನ್ನೂ - ಭಗದತ್ತನು ವಿರಾಟನನ್ನೂ - ಕೇಕಯನಾದ ಬೃಹತ್ಕ್ಷತ್ರನು ಕೃಪನನ್ನೂ - ಚೇಕಿತಾನನು ಸುಶರ್ಮನನ್ನೂ ಎದುರಿಸಿ ಕಾದ ತೊಡಗಿದರು - ಸಮರವು ಘೋರವಾಯಿತು.

ಶಕುನಿಯು ಧರ್ಮಜ ತನೂಜನಾದ ಪ್ರತಿವಿಂಧ್ಯನನ್ನೂ - ಮದ ಗಜವನ್ನು ಸಿಂಹದಂತೆ ಮುತ್ತಿದನು.

ಸುದಕ್ಷಣನು [ ಕಾಂಬೋಜರಾಜ } ಸಹದೇವನ ಸುತನಾದ ಶ್ರುತ ಕರ್ಮನನ್ನೂ - ಇರಾವಂತನು ಶ್ರುತಾಯುವನ್ನೂ - ಕುಂತೀಭೋಜನು ಆವಂತ್ಯರಾದ ವಿಂದಾನುವಿಂದ್ಯರನ್ನು - ಮುತ್ತಿ ಕಾದಿದರು.

ಬಾಣಗಳ ಸುರಿ ಮಳೆಯಾಯಿತು - ಬಿಲ್ಲುಗಳು ಮುರಿಯಲ್ಪಡಲು - ಬೇರೆ ಬಿಲ್ಲುಗಳನ್ನು ಪಿಡಿದೆ ಪ್ರತಿ ವೀರರನ್ನೂ - ಬಾಣ ವರ್ಷವ ಪೀಡಿಸುವ ವೀರರ ರಣ ವಿಹಾರದಿಂದ - ರಣರಂಗವು ಭೀಭತ್ಸವಾಯಿತು.

ಗದ - ಶಕ್ತಿ - ಮುಸಲ - ಪರಿಘ - ಪ್ರಾಸ - ಖಡ್ಗಾದಿ ವಿವಿಧಾಯುಧಗಳ ಝಣ ಝಣತ್ಕಾರದೊಡನೆ ಶಿರಗಳು ಉರುಳಿದವು.

ರಕ್ತಗಳ ಕಾಲುವೆ ಹರಿದು ಸಮಂತ ಪಂಚಕದ ಮಡುವುಗಳು ನೆತ್ತರು ಕೆರೆಗಳಾದವು.

ಸಿಂಹನಾದಗಳೊಡನೆ ಆರ್ತರವಗಳು - ಭೇರೀ ದುಂದುಭಿಧ್ವಾನಗಳೊಡನೆ ಗೃಧ್ರಜಂಬುಕಾದಿಗಳ ವಿಚಿತ್ರ ಚೀತ್ಕಾರಗಳು ಎಲ್ಲೆಡೆ ಹರಡಿದವು.

ಉತ್ತರನು ನಿನ್ನ ಮಗನಾದ ವೀರಬಾಹುವಿನೊಡನೆ ಕಾದು ಅವನನ್ನು ಸೋಲಿಸಿದನು.

ದುಷ್ಟಕೇತುವು ಉಲೂಕನನ್ನೂ ಬಾಣ ವರ್ಷಗಳಲ್ಲಿ ಮುಳುಗಿಸಿದನು.

ಪ್ರಾರಂಭದಲ್ಲಿ ಮಧುರ ದರ್ಶನವಾಗಿದ್ದ ಯುದ್ಧವು ಬರುಬರುತ್ತಾ ಭಯಂಕರವಾಯಿತು.

ದಂತಿಯೂಥಗಳು ನಡೆಯುವ ಬೆಟ್ಟಗಳಂತೆ ಮೇಲೇರಿ ಬಂದಾಗ - ಸಾವಿರಾರು ಭಟರು ಅವುಗಳ ಕಾಲಿಗೆ ಸಿಕ್ಕಿ ನುಚ್ಚು ನೂರಾದವು.

ಆಶ್ವಿಕರು ಎಲ್ಲಿ ನೋಡಿದರೂ ಕಾಣಸಿಗುತ್ತಾ - ರಥಿಕರೊಡನೆ ಮತ್ತು ಪತ್ತಿಗಳೊಡನೆ ಕಾದಾಡಿದರು.

ತಂದೆ - ಮಗ, ಅಣ್ಣ - ತಮ್ಮ - ಮಾವ - ಅಳಿಯ - ಭಾವ - ಮೈದುನ ಎಂಬ ಭಾವನೆಯನ್ನು ದೂರ ಮಾಡಿ - ಮಿತ್ರರೆಂದು ಮೆತ್ತಗಾಗದೆ - ಕಾದುವ ಶೂರರು ಆವೇಶ ಬಂದವರಂತೆ ಕಡಿದಾಡಿ ಕೊಂದು ಸತ್ತರು.

ರಥದ ನೊಗೆಗೆ ತಾಗಿಸಿ - ನೊಗೆಯನ್ನೇರಿ ಬಂದು ಪರ ರಥಿಕರನ್ನು ಕಡಿದು ಬಿಸುಟುವ ಸಾಹಸಿಗರು - ಕುದುರೆಗಳ ಸವಾರರನ್ನು ಬಗಲಿಗೆ ಬಂದಾಗ ಚೆಂಡಾಡಿ ಉರುಳಿಸುವ ರಥಿಕವರರು - ಆನೆಗಳ ಸೊಂಡಿಲವನ್ನು - ಕಾಲುಗಳನ್ನು ಕಡಿದು ಕೆಡಹುವ ಕಾಲ್ಭಟರು - ಅವರನ್ನು ಆನೆಗಳ ಕಾಲುಗಳಿಂದ ತುಳಿಸುವ ಗಜವಾಹನರು - ರಣ ರಂಗವನ್ನು ತುಂಬಿ ವಿಹರಿಸಿದರು.
***
" ಶ್ರೀ ಭೀಷ್ಮಾಷ್ಟಮೀ - 2 " 
" ಶ್ರೀ ಭೀಷ್ಮಾಚಾರ್ಯರ  - ಅಭಿಮನ್ಯುವಿನ ಪರಾಕ್ರಮ "
ಶ್ರೀ ಭೀಷ್ಮಾಚಾರ್ಯರ ಕನಕ ರಥವು [ ಬಂಗಾರದ ರಥ ] - ಪಂಚ ತಾರೆಗಳಿಂದಲೂ, ತಾಲ ವೃಕ್ಷದಿಂದಲೂ ಒಪ್ಪುವ ಶೋಭಿಸುತ್ತಾ ಎಲ್ಲ ಕಡೆಯೂ ತಾನಾಗಿ ಕಾಣ ಬರುತ್ತಿತ್ತು. 
ಅವರ ರಥ ಮಾರ್ಗವು ಮೃತಭಟಾಕ್ರಾತವಾಯಿತು. 
ಅವರ ವೀರ ವಿಹಾರವು ಅತುಲವಾಯಿತು. 
ಅವರ ಧಾಟಿಯನ್ನು ತಡೆಯುವ ವೀರರಿಲ್ಲವೆಂದೆನಿಸಿತು. 
ಮಧ್ಯಾಹ್ನವಾಗುತ್ತಿರಲು ಶ್ರೀ ಭೀಷ್ಮಾಚಾರ್ಯರ ಪ್ರತಾಪವು ದುಸ್ಸಹವಾಯಿತು. 
ದುರ್ಮುಖ - ಕೃತವರ್ಮ - ಕೃಪ - ಶಲ್ಯ - ವಿವಂಶತಿಗಳು ಅವರ ಬೆಂಬಲವಾಗಿ ನಿಂತು - ಶತ್ರು ಭಟರನ್ನು ವಾರಿಸಿದರು. 
ಶ್ರೀ ಭೀಷ್ಮಾಚಾರ್ಯರು ಮರಣ ತಾಂಡವನ್ನು ಮಾಡ ತೊಡಗಿದರು.  
ಮಾರಿಗೌತಣವಿತ್ತಂತೆ - ಯಮರಾಜನನ್ನು ಕರೆಯಿಸಿದಂತೆ - ಭಯಂಕರ ಸಂಹಾರ ಕಾರ್ಯವನ್ನು ಮಾಡುತ್ತಾ ಮುಂದೆ ಸಾಗುವ ಶ್ರೀ ಭೀಷ್ಮಾಚಾರ್ಯರನ್ನು ಅಭಿಮನ್ಯುವು ತಡೆದು ನಿಲ್ಲಿಸಿ ಆರ್ಭಟಿಸಿದನು. 
ಕನಕ ಚಿತ್ರಿತವಾದ ಕರ್ಣಿಕಾರ ಧ್ವಜವು ತಾಲ ಧ್ವಜವನ್ನು ಅಪವಾರಿಸಿ ನಿಲ್ಲಿಸಿತು. 
ಅಭಿಮನ್ಯುವು ಒಂದು ಬಾಣದಿಂದ ಕೃಪನನ್ನೂ - ಒಂದರಿಂದ ಕೃತವರ್ಮನನ್ನೂ - ಐದರಿಂದ ಶಲ್ಯನನ್ನೂ ಹೊಡೆದನು. 
ಒಂದು ಭಲ್ಲದಿಂದ ದುರ್ಮುಖನ ಸಾರಥಿಯನ್ನು ಕೆಡಹಿದನು. 
ಒಂದರಿಂದ ಕೃಪನ ಬಿಲ್ಲನ್ನು ಮುರಿದನು. 
ಅಭಿಮನ್ಯುವಿನ ಶರಲಾಘವವನ್ನು ಕಂಡು ದೇವತೆಗಳು ಕೂಡಾ ಮೆಚ್ಚಿದರು. 
ಶ್ರೀ ಭೀಷ್ಮಾದಿ ವೀರರು ಅಭಿಮನ್ಯುವಿನ ರಣ ಕೌಶಲವನ್ನು ಕಂಡು ಎರಡನೇ ಧನಂಜಯನೇ ಬಂದನೆಂದು ತಿಳಿದರು. 
ಅಲಾತ ಚಕ್ರದಂತೆ ಮೆರೆಯುವ ಅಭಿಮನ್ಯುವಿನ ಧನಸ್ಸಿನಿಂದ ಹೊರಹೊಮ್ಮುವ ಶರ ಜ್ವಾಲೆಗಳಿಂದ ದಿಕ್ಕುಗಳು ಉರಿದಂತೆ ತೋರಿದವು. 
ಶ್ರೀ ಭೀಷ್ಮರು 9 ಬಾಣಗಳಿಂದ ಅಭಿಮನ್ಯುವಿನನ್ನು ತಾಡಿಸಿ - 3 ಬಾಣಗಳಿಂದ ಅವನ ಧ್ವಜವನ್ನು ಕೆಡಹಿ - 3 ಬಾಣಗಳಿಂದ ಅವನ ಸಾರಥಿಯನ್ನು ಪೀಡಿಸಿದನು. 
ಕೃಪ - ಕೃತವರ್ಮ - ಶಲ್ಯರೂ ಅಭಿಮನ್ಯುವನ್ನು ಮುತ್ತಿ ಬಾಣಗಳಿಂದ ಹೊಡೆದರು. 
ಇಂತು ಪಂಚ ರಥಿಕರು ಮುತ್ತಲು ಹೆದರದೆ ಸೌಭದ್ರನು ಶರ ವರ್ಷದಿಂದ ನಾಲ್ವರನ್ನೂ ದೂರ ಸರಿಸಿ - ಶ್ರೀ ಭೀಷ್ಮರೊಡನೆ ಕಾದಾಲಾರಂಭಿಸಿದನು. 
9 ಬಾಣಗಳಿಂದ ಶ್ರೀ ಭೀಷ್ಮರ ತಾಲ ಧ್ವಜವನ್ನು ನೆಲಕ್ಕುರುಳಿಸಿದ ಅಭಿಮನ್ಯುವಿನ ಪರಾಕ್ರಮವನ್ನು ಶ್ರೀ ಭೀಮಸೇನದೇವರು ಮೆಚ್ಚಿ ಸಿಂಹ ನಾದವನ್ನು ಮಾಡಿದರು. 
ಶ್ರೀ ಭೀಷ್ಮರು ಕುಪಿತರಾಗಿ ಮಹಾಸ್ತ್ರಗಳನ್ನು ಸೃಜಿಸಿ ಶರಜಾಲದಿಂದ ಅಭಿಮನ್ಯುವಿನನ್ನು ಮುಚ್ಚಿದರು. 
ಆಗ ಅಭಿಮನ್ಯುವನ್ನು ರಕ್ಷಿಸಲು ವಿರಾಟ - ಉತ್ತರ - ದ್ಯುಷ್ಟದ್ಯುಮ್ನ - ಶ್ರೀ ಭೀಮಸೇನದೇವರು - ಕೈಕಯ - ಸಾತ್ಯಕಿ - ದ್ರುಪದ ಮೊದಲಾದ ೧೦ ಜನ ಮಹಾರಥರು ಒಮ್ಮಿಗೇ ಬಂದು ಶ್ರೀ ಭೀಷ್ಮರೊಡನೆ ಹೋರಾಡಿದರು. 
ಶ್ರೀ ಭೀಷ್ಮರು ಶ್ರೀ ಭೀಮಸೇನದೇವರ ಬಂಗಾರದ ಸಿಂಹ ಧ್ವಜವನ್ನುರುಳಿಸಿ ಗರ್ಜಿಸಿದರು. 
ಶ್ರೀ ಭೀಮಸೇನದೇವರು ವಿಜ್ರುಂಭಿಸಿ 3 ಬಾಣಗಳಿಂದ ತಾತನನ್ನೂ - ಒಂದರಿಂದ ಕೃಪನನ್ನೂ - 8 ಬಾಣಗಳಿಂದ ಕೃತವರ್ಮನನ್ನು ಹೊಡೆದರು. 
ಉತ್ತರ ಕುಮಾರನು ಅದನ್ನು ಕಂಡು ವಿಜ್ರುಂಭಿಸಿ ಮದಗಜಾರೂಢನಾಗಿ ಮದ್ರರಾಜನನ್ನು ಮುತ್ತಿದನು. 
ಶಲ್ಯನು ಮೇಲೇರಿ ಬರುವ ಮದ್ದಾನೆಯನ್ನು ತಿವಿಯಲು - ಅದು ಘೀಳಿಡುತ್ತಾ ಅವನ ರಥವನ್ನು ಮುಂಗಾಲಿನಿಂದ ತುಳಿದೇರಿ - ಅವನ ಕುದುರೆಗಳನ್ನು ಸವರಿ ಸಂಹರಿಸಿತು. 
ಶಲ್ಯನು ಸಿಟ್ಟಿನಿಂದ ಶಕ್ತಿಯನ್ನು ಪ್ರಯೋಗಿಸಿ ಉತ್ತರ ಕುಮಾರನನ್ನು ಸಂಹರಿಸಿ ಮತ್ತು ಆನೆಯ ಸೊಂಡಿಲನ್ನು ಕಡೆದನು - ಅದು ಘೋರಾಕಾರವಾಗಿ ಚೀರಿ ಕೆಳಗುರುಳಿತು. 
ಶಲ್ಯನು ಕೃತವರ್ಮನ ಅರ್ಥವನ್ನೇರಿ ನಿಂತನು.
***
" ಶ್ರೀ ಭೀಷ್ಮಾಷ್ಟಮೀ - 3 " 
ಉತ್ತರನ ಮೃತಿಯನ್ನು ಕಂಡು ಅವನ ಸೋದರನಾದ ಶ್ವೇತನು ಕುಪಿತನಾಗಿ ಸಪ್ತ ಮಹಾರಥರ ಧನಸ್ಸುಗಳನ್ನು ಒಂದೇ ಸಲ ಮುರಿದನು. 
ಬೇರೆ ಧನಸ್ಸುಗಳನ್ನು ಅವರಿಡಿದಾಗ ಅವುಗಳನ್ನೂ ತುಂಡರಿಸಿ ಅವರು ಬಿಟ್ಟ ೭ ಶಕ್ತಿಗಳನ್ನು ಕೆಡಹಿ - ಕುದುರೆಗಳನ್ನು ಕೊಂಡು - ಧ್ವಜಗಳನ್ನು ಉರುಳಿಸಿ - ಸಾರಥಿಗಳನ್ನು ಪೀಡಿಸಿ - ಶ್ವೇತನು ಮಹಾ ವೇಗದಿಂದ ಶಲ್ಯನನ್ನು ಸಮೀಪಿಸಿದನು. 
ತಮನನ್ನು ಕೊಂದನೆಂಬ ಸೇಡಿನಿಂದ ಶ್ವೇತನು ಶಲ್ಯನನ್ನು ಬಾಣ ವರ್ಷದಲ್ಲಿ ಮುಣುಗಿಸುತ್ತಿರಲು - ದುರ್ಯೋಧನ - ಶ್ರೀ ಭೀಷ್ಮ ಪ್ರಮುಖರು ಶಲ್ಯನನ್ನು ಮೃತ್ಯು ಮುಖದಿಂದ ತಪ್ಪಿಸಲು ಧಾವಿಸಿದರು. 
ಶ್ರೀ ಭೀಷ್ಮರ ಶರ ವರ್ಷದಲ್ಲಿ ದ್ರುಪದಾದಿ ಪಾಂಡವ ವೀರರು ಮುಳುಗಿ ದಿಗ್ಭ್ರಾಂತರಾದರು. 
ಶ್ರೀ ಭೀಷ್ಮ - ಶ್ರೀ ಭೀಮಸೇನರ ವಿಜ್ರಂಭಣೆಗೆ ತಾಳಲಾರದೆ ಕುರು ಪಾಂಡವ ಸೇನೆಗಳು ಚೆಲ್ಲಾಚದರಾದವು. 
" ಶ್ರೀ ಭೀಷ್ಮ ಸಂದರ್ಶನ "
ಸಂಜಯ ಧೃತರಾಷ್ಟ್ರನಿಗೆ ನಿರೂಪಿಸಿದನು... 
ರಾಜನ್ ! ದ್ರೋಣ ಭೀಷ್ಮರಿಂದ ಹತವಾದ ಸೈನ್ಯವನ್ನೂ - ಅಸ್ತಂಗತನಾಗುವ ಸೂರ್ಯನನ್ನೂ ಕಂಡು - ಧರ್ಮರಾಜನು ಸೇನಾವಹಾರವನ್ನು ಮಾಡಿ ಶಿಬಿರವನ್ನು ಸೇರಿದನು. 
ಧರ್ಮರಾಜನು ಈ ಯುದ್ಧವನ್ನು ನೋಡಿ ಶ್ರೀ ಕೃಷ್ಣ ಪರಮಾತ್ಮನಲ್ಲಿ... 
ಕೇಶವ ! 
ಭೀಷ್ಮನು ನಮ್ಮ ಸೇನೆಯನ್ನು ಹೊಕ್ಕು ನಾಶ ಮಾಡಿದುದನ್ನು ನೋಡಿದೆಯಲ್ಲವೇ? - ಭೀಷ್ಮನನ್ನು ಕಣ್ಣೆತ್ತಿ ನೋಡುವುದಕ್ಕೂ ನಮ್ಮ ಕೈಲಾಗಲಿಲ್ಲ. 
ದಂಡಪಾಣಿ ಯಮ - ವಜ್ರಪಾಣಿ ದೇವೇಂದ್ರ - ಪಾಶಪಾಣಿ ವರುಣ - ಗದಾಪಾಣಿ ಕುಬೇರ - ಎಲ್ಲರೂ ಒಟ್ಟುಗೂಡಿ ಬಂದರೂ ಗೆಲ್ಲಲಹುದಾಗಲೀ - ಧನುರ್ಬಾಣ ಧಾರಿಯಾದ ಭೀಷ್ಮನಲ್ಲ !    
ಶ್ರೀ ಕೃಷ್ಣಾ ! ನೀನೆ ನಮ್ಮನ್ನು ಅನುಗ್ರಹಿಸು - ಈಗ ನಮಗೆ ಹಿತವಾವುದೋ ನೀನೆ ಉಪದೇಶಿಸು ? ಯೆಂದು ಪ್ರಾರ್ಥಿಸಿದನು. 
ಜಗದೊಡೆಯನೂ - ಸರ್ವೋತ್ತಮನೂ ಆದ   ಶ್ರೀ ಕೃಷ್ಣ ಪರಮಾತ್ಮನು...           
ಮಹಾರಾಜ ! ಹೆದರುವ ಅಗತ್ಯವಿಲ್ಲ. 
ನಿನ್ನ ಸಹೋದರರು ಶತ್ರುಂಜಯರಾಗಿರುವರು - ಭೀಮಾರ್ಜುನರು ವಾಯ್ವಿಂದ್ರ ಸಮ ತೇಜರು. 
ನಕುಲ ಸಹದೇವರು ಬಲು ಶೂರರು - ಮಿಕ್ಕ ವೀರರೂ ಸಾಮಾನ್ಯರಲ್ಲ. 
ನಿನ್ನ ಹಿತವನ್ನು ಸಾಧಿಸಲು ನಾನೂ ನಡುಕಟ್ಟಿ ನಿಂತಿರುವೆನು. 
ಈಗ ನನಗಾಜ್ಞಾಪಿಸು ! ಒಂದು ಕ್ಷಣದಲ್ಲಿ ಭೀಷ್ಮನನ್ನು ಅರ್ಜುನನು ಸಂಹರಿಸಲಾರನೆಂದರೆ - ನಾನೇ ಕೊಂದು ಸ್ವರ್ಗವನ್ನು ಸೇರಿಸುವೆನು. 
ಮಹೇಂದ್ರನಂತೆ ವಿಕ್ರಮಿಸಿ - ನಿನ್ನ ಶತ್ರುಗಳನ್ನೆಲ್ಲ ಒಂದೇ ಕ್ಷಣದಲ್ಲಿ ನಾಶ ಮಾಡುವೆನು ಕೇಳು. 
 ಧರ್ಮರಾಜ !
ನಿನ್ನ ಶತ್ರುಗಳು ಯನ್ನ ಶತ್ರುಗಳು. 
ನಿಮ್ಮ ಮಿತ್ರರೇ ನನ್ನ ಮಿತ್ರರು. 
ನಿನ್ನ ಒಬ್ಬ ತಮ್ಮನು ನನ್ನ ಅತ್ಯಂತ ಭಕ್ತನು [ ಶ್ರೀ ಭೀಮಸೇನದೇವರು ]
ಮತ್ತೋರ್ವನು ನನ್ನ ಮಿತ್ರನೂ - ಬಂಧುವೂ ಆಗಿರುವನು [ ಅರ್ಜುನ ]
ನಿಮಗಾಗಿ ನನ್ನ ಶರೀರವನ್ನೂ ನಾನು ಲೆಕ್ಕಿಸೆನು !
ಉಪಪ್ಲಾವ್ಯದಲ್ಲಿ ಆಡಿದ ಮಾತಿನಂತೆ ನಡೆಯುತ್ತಿರುವವನೆಂದರೆ ಭೀಮನೊಬ್ಬನೇ. 
ಅರ್ಜುನನೇಕೋ ಮೃದು ಯುದ್ಧವನ್ನು ಮಾಡುತ್ತಿರುವನು. 
ಬೇಕೆಂದರೆ ಪುರಂದರನನ್ನೂ ಜಯಿಸಬಲ್ಲ ಪಾರ್ಥನಿಗೆ ಭೀಷ್ಮನು ಅಜೇಯನಲ್ಲ !
ಎಂಬ ಶ್ರೀ ಕೃಷ್ಣ ಪರಮಾತ್ಮನ ಮಾತನ್ನಾಲಿಸಿದ ಧರ್ಮರಾಜ... 
ಕೃಷ್ಣಾ !
ನಿಜ ನೀ ನುಡಿಯುವುದು - ನನ್ನ ಹಿತನಕರನಾಗಿ ನೀನಿರುವಾಗ ಸುರಾಸುರ ಜಯವೆನಗೆ ಅಸದಳವಲ್ಲ - ಆದರೆ ನಿನ್ನ ಕೈಯಲ್ಲಿ ಆಯುಧ ಹಿಡಿಸಿ ನಿನ್ನ ಮಾತನ್ನು ಸುಳ್ಳಾಗಿಸುವಂತಾ ಹೇಡಿಗಳಲ್ಲ ನಾವು. 
ನಿನ್ನ ದಯವಿರಲಿ ಸಾಕು. 
ಹಿಂದೆ ನೋಡಿದಾಗ ಪಿತಾಮಹನು.... 
" ಮತ್ತೆ ಬಂದು ಕಾಣು - ನನ್ನನ್ನು ಜಯಿಸುವ ಉಪಾಯವನ್ನು ಸೂಚಿಸುವೆ "
ಯೆಂದಿದ್ದನು - ಈಗ ಆ ಕಾಲವು ಬಂದಿದೆ - ದೇವವ್ರತನನ್ನು ಕಾಣಲು ಹೋಗುವೆನು - ಆತನು ನಮಗೆ ಜಯೋಪಾಯವನ್ನು ಹೇಳಿ ಕೊಡುವನು - ಬಾಲಕರಿದ್ದಾಗ ಬೆಳೆಸಿ - ತಂದೆಯಿಲ್ಲದ ಕಂದರೆಂದು ಸಲಹಿದ ಪಿತಾಮಹನನ್ನು ಆತನ ಅನುಜ್ಞೆ ಪಡೆಯದೆ ರಣದಲ್ಲೇ ಆಗಲಿ ಕೆಡಹಿದೆನೆಂದರೆ ಅದಕ್ಕಿಂತ ಪಾಪವಿಲ್ಲ ಎಂದು ಮೇಲಕ್ಕೆದ್ದು ನಿರಾಯುಧನಾಗಿ ಭೀಷ್ಮ ಶಿಬಿರದ ಕಡೆಗೆ ನಡೆದನು - ಶ್ರೀ ಕೃಷ್ಣ ಭೀಮಾದಿಗಳು ಆತನ ಹಿಂದೆ ನಡೆದರು. 
ಪಾಂಡವರು ತಾತನಿಗೆ ಪಾದ ಮುಟ್ಟಿ ನಮಸ್ಕರಿಸಿ ನಿಂತರು. 
ಆ ಮಹಾ ವೀರನು ಅವರನ್ನೂ - ಕರೆತಂದ ಗೋವಿಂದನನ್ನೂ ಕಂಡು ಆನಂದತುಂದಿಲ ಹೃದಯಾರವಿಂದನಾದನು. 
ಭೀಷ್ಮರು... 
ಶ್ರೀ ಕೃಷ್ಣಾ !
ನಿನಗೆ ಸ್ವಾಗತ. 
ಧರ್ಮ - ಭೀಮ - ಅರ್ಜುನ - ನಕುಲ ಸಹದೇವರೇ ನಿಮಗೆ ಸ್ವಾಗತ !
ಯಾಕೆ ಬಂದಿರುವಿರಿ ?
ಏನಾಗಬೇಕಾಗಿದೆ ನನ್ನಿಂದ ಹೇಳಿ  - ಮಾಡಿಕೊಡುವೆನು 
ಆ ಕಾರ್ಯವನ್ನು ?
ಎಂದನು. ಆಗ ಧರ್ಮರಾಜನು ಪ್ರೀತಿಯಿಂದ ಕಂಬನಿಗರೆದು.... 
ತಾತ !
ನಮ್ಮ ಜಯವನ್ನು ನೀನು ನಿತ್ಯವೂ ಪ್ರಾರ್ಥಿಸುತ್ತಿರುವೆ !
ಆದರೆ ನಿನ್ನನ್ನು ಜಯಿಸದೆ ನಮಗೆ ಜಯವಿಲ್ಲ !
ನೀನೋ ಸಮರದಲ್ಲಿ ಅಪರ ಯಮನಂತೆ ಕಾಣುತ್ತಿರುವೆ !
ನಿನ್ನ ಧನುರ್ಯುಕ್ತ ಬಾಣವು ಒಂದೂ ವ್ಯರ್ಥವಾಗಿಲ್ಲ !
ನಮ್ಮ ಸೇನೆಯ ಅರ್ಧ ಭಾಗ ನಿನ್ನ ಬಾಣಾಗ್ನಿಗೆ ತುತ್ತಾಗಿದೆ. 
ಇಂತಿರಲು ಸುರಾಸುರ ದುರ್ಜಯನಾದ ನಿನ್ನನ್ನು ಗೆಲ್ಲುವ ಉಪಾಯವನ್ನು ನೀನಾಗಿ ನಮಗೆ ತಿಳಿಸಿ ಕೊಡು !
ಕ್ರೂರ ಕ್ಷತ್ರಿಯ ಧರ್ಮದ ನಿಷ್ಠುರ ವಚನಗಳನ್ನು ಕ್ಷಮಿಸು !
ಯೆಂದು ಧರ್ಮರಾಜನು ಪ್ರಾರ್ಥಿಸಿದನು. 
ಅದಕ್ಕೆ ಶ್ರೀ ಭೀಷ್ಮಾಚಾರ್ಯರು.... 
ಅಹುದು ಪಾಂಡವ !
ನನ್ನ ಜೀವ ಇರುವವರೆಗೂ ನಿನಗೆ ಜಯವಿಲ್ಲ !
ನನ್ನ ಕೈಲಿ ಧನುರ್ಬಾಣಗಳು ಇರುವ ವರೆಗೂ ನನ್ನನ್ನು ಯಾರೂ ಜಯಿಸಲಾರರು. 
ಇಂದು ನಿನಗೆ ಅನುಜ್ಞೆ ಕೊಟ್ಟಿರುವೆನು - ನೀವು ನನ್ನನ್ನು ಯಥೇಚ್ಛವಾಗಿ ಹೊಡೆದು ಕೆಡಹಬಹುದು. 
ನಾನು ನ್ಯಸ್ತ ಶಸ್ತ್ರನಾಗುವಂತೆ ಮಾಡಲು ಒಂದೇ ಉಪಾಯವಿದೆ. 
ಶಿಖಂಡಿಯನ್ನು ಮುಂದೂಡಿ - ಸ್ತ್ರೀ ಪೂರ್ವನಾದ ಅವನನ್ನು ನೋಡಿ ನಾನು ಸುಮ್ಮನಿರುವಾಗ - ಅರ್ಜುನನು ನಿಶಿತ ಬಾಣಗಳಿಂದ ಹೊಡೆದು ನನ್ನನ್ನು ಕೆಡಹಲಿ. 
ನಾನು ನಿರಾಯುಧನೊಡನೆ - ಪತಿತನೊಡನೆ - ಸ್ತ್ರೀ ಪೂರ್ವಾನೊಡನೆ - ಸ್ತ್ರೀ ಸಮ ನಾಮನೊಡನೆ - ಶರಣಾಗತನೊಡನೆ ಕಾದೆನು ತಿಳಿ !
 ಏಕ ಪುತ್ರನನ್ನು ನಾನು ಕೊಲ್ಲದಿರುವೆನು !
ಅಮಂಗಳ ಧ್ವಜನೊಡನೆ ನಾನು ಕಾದಾಡೆನು. 
ಸುಮ್ಮನಿದ್ದಾಗಲೂ ನನ್ನನ್ನು ಶ್ರೀ ಕೃಷ್ಣ ಭೀಮಾರ್ಜುನರ ಹೊರತಿನ್ನಾವ  ವೀರರೂ ಹೊಡೆದು ಕೆಡಹಲಾರರು. 
ಹೋಗಿನ್ನು - ನಿನಗೆ ರಣದಲ್ಲಿ ವಿಜಯವಾಗಲಿ !!
ಆ ಮಾತನ್ನಾಲಿಸಿ ಪಾಂಡವರು ಆತನಿಗೆ ನಮಿಸಿ - ತಮ್ಮ ಶಿಬಿರವನ್ನು ಸೇರಿದರು. 
ಆಗ ಅರ್ಜುನನು ಶ್ರೀ ಕೃಷ್ಣನಿಗೆ ಇಂತೆಂದನು.... 
ಶ್ರೀ ಕೃಷ್ಣಾ !
ಎಂಥಾ ಅಕಾರ್ಯವನ್ನು ಮಾಡಬೇಕಾಯಿತು. 
ಬಾಲ್ಯದಲ್ಲಿ ಯಾರ ತೊಡಯ ಮೇಲೆ ಮಲಗಿದೆವೋ - ಧೂಳಿದೂಸರ ಗಾತ್ರದಿಂದ ಯಾವ ಪವಿತ್ರನನ್ನು ಮೇಲಿನ ಮಾಡಿದೆವೋ - ಯಾವ ಪಿತಾಮಹನನ್ನು ಪ್ರೀತಿಯಿಂದ " ಅಪ್ಪ "  - " ಅಪ್ಪ " ಯೆಂದು ಮುದ್ದಾಗಿ ಕೂಗಿ ಆನಂದಿಸಿದೆವೋ - " ಅಪ್ಪನಲ್ಲವೋ ನಿಮ್ಮಪ್ಪನ ಅಪ್ಪನು ನಾನೆಂದು " ನಮ್ಮನ್ನು ಲಾಲಿಸಿದವನಾವ ಮಹಾನುಭಾವನೋ - ಅಂಥಹಾ ತಾತಪಾದನನ್ನು ಇಂದು ಹಾಳು ರಾಜ್ಯಕ್ಕಾಗಿ ಕೊಳ್ಳಬೇಕಾಯಿತಲ್ಲ !
ಅದೂ ಆ ಪಾಪ ಕಾರ್ಯ ನನ್ನ ಕೈಯಿಂದ ನಡೆಯಬೇಕಾಯಿತಲ್ಲ ! 
ಹೇ ಕೃಷ್ಣಾ !
ಜಯವಾಗಲಿ - ಅಪಜಯವೇ ಆಗಲಿ ನಾನಂತೂ ಆ ಮಹಾತ್ಮನನ್ನು ಹೊಡೆಯಲಾರೆನು - ಯೆಂದನು. 
ಶ್ರೀ ಕೃಷ್ಣ ಪರಮಾತ್ಮನು.... 
ಅರ್ಜುನ !
ನಿನ್ನ ಮಾತು ಸರಿಯಲ್ಲ - ಭೀಷ್ಮನನ್ನು ವಧಿಸುವ ಪ್ರತಿಜ್ಞೆಯನ್ನು ಮಾಡಿ - ಈಗ ಹಿಂಜರಿಯುವುದು ನಿನ್ನಂಥಹ ವೀರನಿಗೆ ಉಚಿತವಲ್ಲ. 
ಯುದ್ಧ ದುರ್ಮದನಾದ ಭೀಷ್ಮನನ್ನು ಕೊಂದು ಕೀರ್ತಿಯನ್ನು ಗಳಿಸು !
ಅವನನ್ನು ಕೊಲ್ಲದೇ ಜಯವಿಲ್ಲ - ನಿನ್ನ ಹೊರತು ಅವನನ್ನು ಕೊಲ್ಲುವವರಿಲ್ಲ !
ಇದು ವಿಧಿ ವಿಹಿತವೆಂದು ತಿಳಿ !
ಹಿಂದೆ ಬೃಹಸ್ಪತಿಯು ಇಂದ್ರನಿಗೆ ಯುದ್ಧ ಧರ್ಮಗಳನ್ನು ನಿರೂಪಿಸುತ್ತಾ... 
ಹಿರಿಯನಾದರೂ - ವೃದ್ಧನಾದರೂ ಗುಣವಂತನಾದರೂ ಆತ ತಾಯಿಯನ್ನಾದರೂ ಬಿಡದೆ ಕೊಲ್ಲಬೇಕು !
ತನ್ನ ಕೊಲ್ಲ ಬರುವವನನ್ನು ಕೊಂದ ಕ್ಷಾತ್ರ ಧರ್ಮ ರಥನಿಗೆ ಪಾಪವಿಲ್ಲ - ಕ್ಷತ್ರಿಯನು ದುಷ್ಟರನ್ನು ಕೊಲ್ಲಬೇಕು - ಶಿಷ್ಟರನ್ನು ರಕ್ಷಿಸಬೇಕು. 
ದೇವತೆಗಳನ್ನು ಯಜ್ಞದಿಂದ ತೃಪ್ತಿ ಪಡಿಸಬೇಕೆಂದನು. 
ಅರ್ಜುನನು - ಶಿಖಂಡಿಯು ಭೀಷ್ಮನ ನಿಧನ ಕಾರಣನೆಂಬರು - ಅವನು ಹೊಡೆದು ಕೆಡಹಲಿ ತಾತನನ್ನು - ನಾನೂ ಹಿಂದೆ ನಿಂತು ಕಾದಿ ಹೊಡೆದು ಕೆಡಹುವೆನು ಎಂದನು. 
ಅಂತೆಯೇ ನಿಶ್ಚಯಿಸಿ - ಪಾಂಡವರು ಮರುದಿನದ ಯುದ್ಧಕ್ಕೆ ಸನ್ನಾಹ ನಡೆಸಿದರು. 
ಶ್ರೀ ಭೀಷ್ಮಾಚಾರ್ಯರು ಹೇಳಿದಂತೆ ಯುದ್ಧ ನಡೆದು - ಅದಕ್ಕೆ ಸರಿಯಾಗಿ 10 ನೇ ದಿನ ಹೇಮಂತ ಋತು ಮಾರ್ಗಶಿರ ಮಾಸ ಕೃಷ್ಣ ಪಕ್ಷ ಅಷ್ಟಮೀ ಶ್ರೀ ಭೀಷ್ಮಾಚಾರ್ಯರು ಶಸ್ತ್ರ ಸಂನ್ಯಾಸ ಮಾಡಿದರು.
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****

ಮಾಘ ಶುಕ್ಲ ಅಷ್ಟಮಿ - ಭೀಷ್ಮಾಷ್ಟಮಿ 

ಭೀಷ್ಮರ ಚರಿತ್ರೆ  

ಲೇಖನ. ಮಧುಸೂದನ ಕಲಿಭಟ್ ಬೆಂಗಳೂರು

ವಿಕಾರಿ ಪುಷ್ಯ ಕೃ. ಏಕಾದಶಿ 21.1.2020.

ಒಂದಾನೊಂದು ಕೆಲದಲ್ಲಿ ಬ್ರಹ್ಮದೇವನು ಪೂರ್ವ ಸಮುದ್ರ ತೀರದಲ್ಲಿ ಧ್ಯಾನದಲ್ಲಿ ಕುಳಿತಿದ್ದನು.   ಅದು ಗಂಗಾ ನದಿ ಸಮುದ್ರ ಸೇರುವ ಗಂಗಾ ಸಾಗರ ಕ್ಷೇತ್ರ ವಾಗಿತ್ತು.  ಅಂದು ಹುಣ್ಣಿಮೆ, ಸಮುದ್ರ ರಾಜ ವರುಣ ತನ್ನ ಪತ್ನಿ ಹರಿದು ಬರುವದನ್ನು ನೋಡಿ ಸಂತೋಷv ಉಕ್ಕಿ ಹರಿಸುತ್ತಿದ್ದ.  ಆಗ ಒಂದು ಹನಿ ನೀರು ಬ್ರಹ್ಮನ  ಮೈಮೇಲೆ ಬಿದ್ದು ಅವನ ಧ್ಯಾನ ಭಂಗ ಆಯಿತು.  ಬ್ರಹ್ಮ ದೇವ ವರುಣನಿಗೆ ನೀನು ಎರಡು  ಜನ್ಮ ಮನುಷ್ಯ ಯೋನಿಯಲ್ಲಿ ಜನಿಸು ಎಂದು ಶಾಪ ಕೊಟ್ಟನು.  ಮೊದಲು ಮಹಾಭಿಷಕ್ ಎಂಬ ರಾಜ, ನಂತರ ಇನ್ನೊಂದು.  ವರುಣ ಉಕ್ಕಿ ಬಂದಾಗ ಬ್ರಹ್ಮ ಶಾಂತ ತನು  ಎಂದುಹೇಳಿದ  ಕಾರಣ ವರುಣ ಪ್ರತೀಪ ರಾಜನ ಮಗ ಶಂತನು ಆದನು.   ಒಂದು ಜನ್ಮ ನಂತರ ದೇವಲೋಕದಲ್ಲಿ ಸಭೆ ನಡೆದಾಗ ಗಂಗಾ ದೇವಿಯ ಸೆರಗು ಜಾರಿತು.  ಎಲ್ಲ ದೇವತೆಗಳು ತಲೆ ಕೆಳಗೆ ಹಾಕಿದರು.  ವರುಣ ಮಾತ್ರ ತನ್ನ ಮಡದಿಯನ್ನು ನೋಡುತ್ತಲೇ ಇದ್ದನು.  ಆಗ ಬ್ರಹ್ಮನು ವರುಣನಿಗೆ ಈಗಲೇ ಮಾನವ ಲೋಕಕ್ಕೆ ಹೋಗೆಂದು ನುಡಿದನು.  ಗಂಗೆ ಮಾತ್ರ ದೇವತಾ ರೂಪದಿಂದ ತನ್ನ  ಪತಿಯ ಬಲಿ ಬರಲು ನಿರ್ಧಾರ ಮಾಡಿದಳು.  

ಅಷ್ಟ ವಸುಗಳಲ್ಲಿ ಕೊನೆಯವನು ದ್ಯು  ನಾಮಕ ವಸು . ಅವನ ಹೆಂಡತಿ ವರಾಂಗಿ.  ಕುರಂಗ ಎಂಬ ರಾಜನ ರಾಣಿಯ ಹೆಸರು ವರಾಂಗಿ.  ರಾಣಿಯು ವಸುವಿನ ಪತ್ನಿಗೆ ನಂದಿನಿ ಹಸುವಿನ ಹಾಲು ತಂದು ಕೊಡಲು ವಸುವಿಗೆ ಕೇಳೆಂದು ಹೇಳಿದಳು.  ಅದರಿಂದ 10000 ವರ್ಷ ಯೌವನ ಇರುವದೆಂದು ಪ್ರೋತ್ಸಾಹಿಸಿದಳು. ಪತ್ನಿಯ ಮಾತಿಗೆ ಒಪ್ಪಿ ದ್ಯು ವಸುವು  ನಂದಿನಿಯನ್ನು ತರಲು ತನ್ನ ಅಣ್ಣಂದಿರ ಸಹಾಯ ಕೇಳಿದನು.  ಎಂಟೂ ಜನರು ಕೂಡಿಕೊಂಡು ವಸಿಷ್ಠ ಋಷಿ ಆಶ್ರಮಕ್ಕೆ ಬಂದು ಹಸುವಿನ ಕಳುವಿಗೆ ಪ್ರಯತ್ನಿಸಿದರು.  ಇದನ್ನು ನೋಡಿ ವಸಿಷ್ಠರು ಕೋಪದಿಂದ ಏಳು ಜನ ವಸುಗಳಿಗೆ ಮಾನವರಾಗಿ ಹುಟ್ಟಿರೆಂದು ಶಾಪ ಕೊಟ್ಟರು.  ದ್ಯು  ನಿಗೆ ಹೆಂಡತಿಯ ಮಾತು ಕೇಳಿದ್ದಕ್ಕೆ ಮನುಷ್ಯನಾದಾಗ ಮದುವೆ  ಆಗುವದೇ ಬೇಡ ಎಂದು ಹೇಳಿದರು.  ಉಳಿದ ವಸುಗಳು ಗಂಗೆಯಲ್ಲಿ ಬೇಡಿಕೊಂಡು ತಾವೆಲ್ಲರೂ ಅವಳ ಮಕ್ಕಳಾಗಿ ಜನಿಸುವೆವು. ನೀನು ನಮ್ಮನ್ನು ಜನಿಸಿದ ತಕ್ಷಣ ನಡಿಗೆ ಹಾಕಿ ಸಾಯಿಸಬೇಕೆಂದು ಕೇಳಿ ಕೊಂಡರು.  ಗಂಗೆ ಒಪ್ಪಿದಳು ಆದರೆ ವರ ಬೇಡಿದಳು.  ಏನೆಂದರೆ ತನಗೆ ಶಿಶು ಹತ್ಯ  ಪಾಪ ಬರಬಾರದು ಎಂದು ಕೇಳಿದಳು.  ಅದಕ್ಕೆ ವಸುಗಳು ಆಗಲಿ ಎಂದು ತಮ್ಮ ಏಳು ಜನರ ಬುದ್ಧಿ ಜ್ಞಾನ ಆಯುಷ್ಯವನ್ನು ದ್ಯು  ನಿಗೆ ಕೊಡುತ್ತೇವೆ  ಅವನು ಪ್ರಸಿದ್ಧ ನಾಗಿ ಬಾಳಲಿ ಎಂದು  ಹರಿಸಿದರು.

*****

ಭೀಷ್ಮರ ಚರಿತ್ರೆ         ಭಾಗ 2

ಇತ್ತ ಗಂಗೆ ಪ್ರತೀಪ ರಾಜನಲ್ಲಿ ಸುಂದರ ಸ್ತ್ರೀ ರೂಪ ಧರಿಸಿ ಆತನ ಬಾಳ ತೊಡೆಯ ಮೇಲೆ ಕುಳಿತಳು.  ಬಲತೊಡೆಯ ಮೇಲೆ ಕುಳಿತದ್ದರಿಂದ ಅವಳು ರಾಜನಿಗೆ ಸೊಸೆ, ಮಗಳ ಸಮಾನಳಾದಳು.  ಅವಳುರಾಜನಿಗೆ ಕರಾರು ಹಾಕಿದಳು.  ನಿನ್ನ ಮಗ ಶಂತನು ನನ್ನ ಗಂಡನಾಗಬೇಕು, ನಾನು ಮಾಡುವ ಯಾವದೇ ಕೆಲಸಕ್ಕೆ ಹೀಗೇಕೆ ಮಾಡುವಿ ಎಂದು  ಕೇಳಬಾರದು, ನಾನು ಯಾರೆಂದು ಕೇಳಬಾರದು.  ಈ ಮಾತುಗಳನ್ನು ಮೀರಿದರೆ ನಾನು ಹೋಗುವೆನು.  ಎಂದು ಹೇಳಿ ರಾಜನನ್ನು ಒಪ್ಪಿಸಿ ಶಂತನುವನ್ನು ವಿವಾಹವಾದಳು.  ಒಂದಾದ ಮೇಲೆ ಒಂದರಂತೆ ಏಳು ಮಕ್ಕಳನ್ನುಹುಟ್ಟಿದ ತಕ್ಷಣ ನದಿಗೆ  ಎಸೆದಳು.  ಶಂತನುವಿಗೆ ಇದನ್ನು ನೋಡಿ ಮನಸ್ಸಿಗೆ ಖೇದ ಆಯಿತು. ಕೊನೆಗೆ ಎಂಟನೇಯ ಶಿಶುವನ್ನು 

ಎಸೆಯುವದರಲ್ಲಿ  ಹೇ  ಚಂಡಾಲಿ ನೀನುಯಾರು ಎಂದು ಕೇಳಿದನು.  ಗಂಗೆ ಮಗುವನ್ನು ಅವನ ಕೈಯಲ್ಲಿ ಹಾಕಿ ತಾನು ಗಂಗೆ ನಿನ್ನ ಪತ್ನಿಯೆಂದು ಹೇಳಿದಳು. ಮಗುವಿಗೆ 300ವರ್ಷ ಪರಶುರಾಮರಲ್ಲಿ ಅಸ್ತ್ರ ಮತ್ತು ಶಸ್ತ್ರ ವಿದ್ಯಾಭ್ಯಾಸ ಮಾಡಿಸಿ ಕಳಿಸಿದಳು .  ಮಗನಿಗೆ ದೇವವೃತ ಎಂದು ನಾಮಕರಣ ಮಾಡಿದ್ದಳು.  ದೇವವೃತನಿಗೆ ಇನ್ನು ಕಲಿಯಬೇಕು ಎಂಬ ಆಶೆ.  ಮತ್ತೆ ಪರಶುರಾಮರಲ್ಲಿ ಹೋಗಿ 200 ವರ್ಷ ಶಾಸ್ತ್ರ ಅಭ್ಯಾಸ ಮಾಡಿ ಮರಳಿ ತಂದೆ ಹತ್ತಿರ ಬಂದನು. 


ವಸಿಷ್ಠ ಋಷಿ ಗಳು ವಸುಗಳಿಗೆ ಶಾಪ ಕೊಡುವಾಗ ಅವರಲ್ಲಿ ಅಗ್ನಿ ಯೂ ಒಬ್ಬ ವಸುವಾಗಿದ್ದನು.  ತಾರತಮ್ಯ ಪ್ರಕಾರ ಅಗ್ನಿ ವಸಿಷ್ಠರಿಗಿಂತ ಮೇಲಿನ ಕಕ್ಷೆ.  ಕೆಳಗಿನ  ಕಕ್ಷೆಯ ಋಷಿಗಳಿಂದ ಶಾಪ ಹೇಗೆ ಎಂಬ ಪ್ರಶ್ನೆ.  ವಸಿಷ್ಟರಲ್ಲಿ  ಬ್ರಹ್ಮ ದೇವರ ಆವೇಶ ಇದ್ದಿದ್ದರಿಂದ ಅಗ್ನಿ ಶಾಪ ವನ್ನೂ ಸ್ವೀಕರಿಸಿದನು.  ಋಷಿ ಗಳು ದ್ಯು  ನಿಗೆ ಏಳು ಜನರ ಗರ್ಭ ವಾಸ, ಏಳುಜನರ ಮರಣ ಕಾಲದ ದುಃಖ ಆಗಲೆಂದು ನುಡಿದರು.  


ತಂದೆಯ ಬಳಿ ಬಂದ ದೇವವೃತನು ತಂದೆಗೆ ದಾಶರಾಜನ ಪುತ್ರಿ ಸತ್ಯವತಿಯ ಮೇಲೆ ಮನಸು ಆಗಿದೆ ಎಂದು ತಿಳಿದು ಕೊಂಡನು.  ದಾಶರಾಜ ಬಳಿಬಂದು ಅವನ ಪುತ್ರಿಯನ್ನು ತನ್ನ ತಂದೆಗೆ ಮದುವೆ ಮಾಡಿಕೊಡಬೇಕೆಂದು ವಿನಂತಿ ಮಾಡಿದನು.  ಆಗ ದಾಶ ರಾಜ ಒಂದು ಕರಾರು ಮಾಡಿದನು.  ಮಗಳ ಹೊಟ್ಟೆಯಿಂದ ಹುಟ್ಟುವ ಮಕ್ಕಳಿಗೆ ರಾಜ್ಯ ಸಿಂಹಾಸನ ಕೊಡುವದಾದರೆ ಮಾತ್ರ ಮಗಳನ್ನು ಕೊಡುವೆನೆಂದನು.  ಇದಕ್ಕೆ ದೇವವೃತನು  ತಾನು  ಆಜನ್ಮ ಬ್ರಹ್ಮಚಾರಿ ಯಾಗಿ ಇರುವೆನೆಂದು,ತಂದೆಗಾಗಿ ಘೋರ ಪ್ರತಿಜ್ಞೆ ಮಾಡಿದನು.  ದೇವತೆಗಳು ಈ ಪ್ರತಿಜ್ಞೆ ಕೇಳಿ ಅವನಿಗೆ ಭೀಷ್ಮ ಎಂದು ಕರೆದರು.   ಶಂತನು ರಾಜನು ಮಗನ ತ್ಯಾಗಕ್ಕೆ ಮೆಚ್ಚಿ ಇಚ್ಚಾಮರಣಿ  ಯಾಗೆಂದು ಹರಿಸಿದನು.  ಸತ್ಯವತಿಯಲ್ಲಿ ಚಿತ್ರವೀರ್ಯ, ವಿಚಿತ್ರವೀರ್ಯ  ಇಬ್ಬರು ಮಕ್ಕಳು.  ಆದರೆ ಆವರು ಮಕ್ಕಳಿಲ್ಲದೆ ಮರಣಹೊಂದಿದರು.   ಆಗ ಸತ್ಯವತಿಯು ವೇದವ್ಯಾಸ ರನ್ನು ನೆನೆದು ನಿಯೋಗ ಪದ್ಧತಿ ಪ್ರಕಾರ ಸೊಸೆಯರಲ್ಲಿ ಮತ್ತು ದಾಸಿಯಲ್ಲಿ, ಕ್ರಮವಾಗಿ ಹುಟ್ಟು ಕುರುಡ ಧೃತರಾಷ್ಟ್ರ, ಪಾಂಡು, ಮತ್ತು ವಿದುರ  ಹುಟ್ಟುವರು.

******


ದೇವವೃತನು  ತಮ್ಮ ವಿಚಿತ್ರವೀರ್ಯನಿಗೆ ವಿವಾಹ ಮಾಡಲೆಂದು ಕನ್ಯೆ ಹುಡುಕುತ್ತಲಿದ್ದನು.  ಇನ್ನೊಬ್ಬ ತಮ್ಮ ಚಿತ್ರಾಂಗದ ಒಂದು ದಿನ ಚಿತ್ರಾಂಗದನೆಂಬ ಗಂಧರ್ವ ನಿಂದ ಯುದ್ಧದಲ್ಲಿ ಹತನಾದನು.  ಚಿತ್ರಾಂಗದನಿಗೆ ಚಿತ್ರವೀರ್ಯ  ಎಂದು ಹೆಸರಿದೆ.  ಹೀಗಿರಲಾಗಿ ಕಾಶಿ ರಾಜ ತನ್ನ ಮೂವರು ಹೆಣ್ಣು ಮಕ್ಕಳನ್ನು  ಸಾಲ್ವ ದೇಶದ ರಾಜ ಬ್ರಹ್ಮದತ್ತ ನಿಗೆ ಕೊಟ್ಟು ವಿವಾಹ ಮಾಡುವ ಸಮಯದಲ್ಲಿ ಭೀಷ್ಮರು ಕನ್ಯೆಯರನ್ನು ಅಪಹರಿಸಿ ರಥದಲ್ಲಿ ಕೂಡಿಸಿ ಕೊಂಡು  ಬಂದರು.  ರಾಜರೆಲ್ಲರೂ ಬೆನ್ನಟ್ಟಿದರೂ   ಅವರನ್ನು ಸೋಲಿಸಿ ಕರೆತಂದರು.  ಕನ್ಯೆಯರ ಹೆಸರು ಕ್ರಮವಾಗಿ ಅಂಬೆ, ಅಂಬಿಕೆ, ಅಂಬಾಲಿಕೆ  ಎಂದು ಇತ್ತು. ಅವರು ಎಲ್ಲಿಗೆ ಕರೆದೊಯ್ಯುತ್ತಿರುವೆ ಎಂದು ಕೇಳಿದಾಗ ತಮ್ಮನಿಗೆ ಮದುವೆ ಮಾಡಲು ಎಂದು ಹೇಳಿದರು.  ಅಂಬೆ ಮಾತ್ರ ಒಪ್ಪಲಿಲ್ಲ.  ನಿನ್ನನ್ನೇ ಮದುವೆ ಆಗುವೆ ಎಂದು ಹಠ ಹಿಡಿದಳು.  ಅದು ಶಕ್ಯವಿಲ್ಲ, ನಾನು ಬ್ರಹ್ಮಚಾರಿ  ಎಂದು ಹೇಳಿದರು.  ಅಂಬೆ ಬ್ರಹ್ಮದತ್ತನ ಹತ್ತಿರ ವಿವಾಹ ಆಗಲು ಕೇಳಿಕೊಂಡಳು. ಅವನು ಒಪ್ಪಲಿಲ್ಲ.  ಮತ್ತೆ ಭೀಷ್ಮರಲ್ಲಿ ಬಂದಳು.  ಅವರೂ ನಿರಾಕರಿಸಿದರು.  ಹೀಗೆ ಅವಳು ಇಬ್ಬರ ನಡುವೆ ಓಡಾಡಿ ಆರು ವರ್ಷ ಕಳೆದಳು.  ಹೇಗಾದರೂ ಮಾಡಿ ಭೀಷ್ಮರನ್ನೇ ವರಿಸಬೇಕೆಂದು ಪಣ ತೊಟ್ಟಳು.  ಇತ್ತ ಭೀಷ್ಮರು ತಮ್ಮ ವಿಚಿತ್ರವೀರ್ಯನ ವಿವಾಹ ಮಾಡಿದರು.  ಆದರೆ ಅವನಿಗೆ ಸಂತಾನ ಆಗಲಿಲ್ಲ. 

          ಅಂಬೆ ಗುರುಗಳಿಂದ ಭೀಶ್ಮನಿಗೆ ಹೇಳಿಸಿ ವಿವಾಹ ಆಗೋಣ ಎಂದು ಪರುಶರಾಮರಲ್ಲಿಗೆ ಹೋಗಿ ತನ್ನ ಕಥೆ ಹೇಳಿ ವಿನಂತಿಸಿಕೊಂಡಳು. ಅವರು  ಭೀಷ್ಮರಿಗೆ ತಿಳಿಹೇಳಿದರು.  ಅದು ಫಲಿಸಲಿಲ್ಲ.  ಗುರುವಿನ ಸಂಗಡ ಯುದ್ಧ ವಾಯಿತು.  ಅದರಲ್ಲಿ ಭಾರ್ಗವರ ಕಪಟನಾಟಕದಿಂದ ಶಿಷ್ಯನಿಗೇ  ಜಯವಾಯಿತು.  ಅಂಬೆ ನಿರಾಶಳಾಗಿ ಮದುವೆ ವಿಚಾರ ಬಿಟ್ಟು ಭೀಷ್ಮರನ್ನು ಸಂಹಾರ ಮಾಡುವ ಯೋಜನೆ ಮಾಡಿದಳು.  ಅಂಬೆ ಪೂರ್ವ ಜನ್ಮದಲ್ಲಿ ದ್ಯು ನಾಮಕ ವಸುವಿನ ಮಡದಿ ವರಾಂಗಿ ಆಗಿದ್ದಳು.  ನಂದಿನಿ ಹಸುವಿನ ಕಳ್ಳತನಕ್ಕೆ ಗಂಡನ ಮನಸ್ಸು ಓಲಸಿದ್ದರಿಂದ, ಅವಳಿಗೇ ವಿವಾಹ ಆಗುವದು ಬೇಡ ವೆಂಬ ಶಾಪ ವಸಿಷ್ಠ ಋಷಿಗಳು  ಕೊಟ್ಟಿದ್ದರು.  ಅಂಬೆ ಶಿವನನ್ನು ಕುರಿತ ತಪಸ್ಸು ಮಾಡಿದಳು.  ಶಿವನು ಒಂದು ಹಾರ ವನ್ನು ಕೊಟ್ಟು ಇದನ್ನು ಯಾರ ಕೊರಳಿಗೆ ಹಾಕು ವಿಯೋ ಅವರಿಂದ ಭೀಷ್ಮ ಸಾಯು ವನು. 

ಎಂದು ರುದ್ರ ದೇವ ಅಂಬೆಯನ್ನು  ಹರಿಸಿ ಕಳಿಸಿದನು.


ನಂತರ ಅಂಬೆಯು  ದ್ರುಪದ  ರಾಜನ ಹತ್ತಿರ ಬಂದು ಮಾಲೆ ಹಾಕಿ ಕೊಳ್ಳಲು ಕೇಳಿದಳು.  ಭೀಷ್ಮರ  ಶೌರ್ಯ  ತಿಳಿದು  ಅವನೂ ನಿರಾಕರಿಸಿದನು. ಮಾಲೆ ಬಾಡದೆ  ಹಾಗೆ ಇತ್ತು. ರುದ್ರ ದೇವ ಕೊಟ್ಟಾಗ  ಅಂಬೆ ಕೊರಳಲ್ಲಿ  ಧರಿಸಿದಳು.  ಕೊನೆಗೆ ಆ ಹಾರವನ್ನು ರಾಜನ ಮನೆಯ  ಬಾಗಿಲ  ಬಳಿ ಇಟ್ಟು  ಹೋಗಿ ದೇಹ ತ್ಯಾಗ  ಮಾಡಿದಳು. ದ್ರುಪದನು  ನೋಡಿ ಹಾರವನ್ನು ದೇವರ ಮನೆಯಲ್ಲಿ  ಇಟ್ಟನು. ಅದೇ ಹಾರವನ್ನು ಮುಂದೆ ದ್ರೌಪದಿಯು ಅರ್ಜುನಗೆ  ಹಾಕಿದಳು.  ಕಾರಣ ಅರ್ಜುನ  ಭೀಷ್ಮರನ್ನು  ಗೆದ್ದನು.  

ಸ್ವಲ್ಪ ಕಾಲದ ನಂತರ ದ್ರುಪದ ರಾಜನಿಗೆ ಗಂಡು ಮಗು ಆಗಬೇಕು  ಎಂಬ ಆಸೆ  ಆಗಿ ರುದ್ರ ದೇವರ ಕುರಿತು ತಪಸ್ಸು ಮಾಡುವನು. ಅದರ ಫಲವಾಗಿ ರುದ್ರ ದೇವರು  ರಾಜನಿಗೆ  " ರಾಜಾ ನಿನಗೆ  ಹೆಣ್ಣು ಮಗು ಆಗಿ ಅದೇ ನಂತರ ಗಂಡು  ಆಗುವದೆಂದು ಹರಸಿದರು. ದ್ರುಪದನಿಗೆ ಕಾಲಾನಂತರ  ಹೆಣ್ಣು ಮಗು ಆಯಿತು. ಆದರೆ ರಾಜ ರಾಣಿ ಗುಟ್ಟು ಒಡೆಯದೇ  ಗಂಡು ಮಗು ಎಂದು ಪ್ರಚಾರ ಮಾಡಿದರು. ಪುರುಷ ಅಲಂಕಾರ ವನ್ನು ಮಗುವಿಗೆ  ಮಾಡಿದರು. ಶಿಖಂಡಿ ಎಂದು ನಾಮಕರಣ ಮಾಡಿದರು. ಎಲ್ಲಾ ತರಹದ ವಿದ್ಯೆ  ಕಲಿಸಿದನು. ದಶಾ ರ್ಣ  ದೇಶದ ರಾಜಕುಮಾರಿ  ಜೊತೆಗೆ ವಿವಾಹ ಮಾಡಿದನು. ಮಗನು ಇಂದಿಲ್ಲ ನಾಳೆ ಪುರುಷ ನಾಗುವ ಎಂದು ನಂಬಿಕೆ ಇತ್ತು. ಬೀಗನಾದ ರಾಜಮಗಳಿಗೆ ಮೋಸ ಆಯಿತು ಎಂದು ಯುದ್ಧಕ್ಕೆ  ಬಂದನು.  ದ್ರುಪದ ನಿಮಗೆ  ಗೊತ್ತು ಆಗಿಲ್ಲ,  ನನ್ನ ಮಗ ಗಂಡಸೇ ಎಂದು ವಾದಿಸಿದ. ಇತ್ತ  ಶಿಖಂಡಿ ಅಡವಿಗೆ  ಹೋಗಿ ಅಲ್ಲಿ ತುಂಬುರು  ಎಂಬ ಗಂಧರ್ವಗೆ ತನ್ನ ಕಥೆ ಹೇಳಿದನು. ಆತನು ಕರುಣೆ ತೋರಿಸಿ ತನ್ನ ಪುರುಷ ದೇಹವನ್ನು ಒಂದು ದಿನದ ಮಟ್ಟಿಗೆ ಕೊಟ್ಟನು.  ದಶಾರ್ಣ  ರಾಜನಿಗೆ  ಸಂತೋಷವಾಯಿತು. ಮತ್ತೆ ಶಿಖಂಡಿ  ಗಂಧರ್ವನಲ್ಲಿ ಬಂದು ಪುರುಷ ದೇಹ ಕೊಡಲು  ಹೋದನು. ಅಲ್ಲಿ ಆದದ್ದೇ ಬೇರೆ. ಕುಬೇರ ಗಂಧರ್ವರ ರಾಜ. ಅವನು ತುಂಬುರ ನಿಗೆ ಕರೆದಾಗ ಅಡಗಿ ಕುಳಿತ. ಇದು ಕುಬೇರನಿಗೆ ತಿಳಿದು ನಿನಗೆ  ಸ್ತ್ರೀ ದೇಹವು  ಶಿ ಖಂಡಿ ಸಾಯುವ ವರೆಗೆ ಇರಲಿ ಎಂದು ಶಾಪಿಸಿದನು.  ಹೀಗಾಗಿ ಶಿಖಂಡಿ ಹೆಣ್ಣು ಹೋಗಿ ಗಂಡಾದನು.

*******


ಮಹಾಭಾರತ ಯುದ್ಧ ನಡೆದಾಗ  ಒಂಬತ್ತು ದಿನವಾದರೂ ಭೀಷ್ಮ ಸೋಲಲಿಲ್ಲ.  ಸಾವಿರಾರು ಸೈನಿಕರು ಸಾಯುತ್ತಿದ್ದಾರೆ.  ಪಾಂಡವರು ಶ್ರೀ ಕೃಷ್ಣನ ಅನುಮತಿ ಯಂತೆ ಭೀಷ್ಮ ರಲ್ಲಿಗೆ ಹೋಗಿ ನಮಸ್ಕಾರ ಮಾಡಿ ತಮಗೆ ಜಯವಾಗಲಿ ಎಂದು ಹರಿಸಿದ ನೀವು ಸೋಲುವ ಅಥವಾ ಮರಣಿಸುವದು ಹೇಗೆ ಎಂದು ಕೇಳಿದರು.  ಅದಕ್ಕೆ ಸಂತೋಷದಿಂದ ಭೀಷ್ಮ ಶಿಖಂಡಿ ಎದುರು ಬಂದರೆಶಸ್ತ್ರ  ತ್ಯಾಗಮಾಡುವೆ  ಎಂದು ತಿಳಿಸಿದರು ಅಲ್ಲದೆ ಪಾಂಡವರಿಗೆ ಜಯಶೀಲ ರಾಗಿರೆಂದು ಆಶೀರ್ವಾದ ಮಾಡಿದರು.  

ಮರುದಿನ ಹತ್ತನೇಯ ದಿನ ಶಿಖಂಡಿಯನ್ನು ಮುಂದೆ ಮಾಡಿ ರಕ್ಷಣೆಗೆ ಹಿಂದೆ ಅರ್ಜುನ ನಿಂತನು.  ಶಿಖಂಡಿ ಬಾಣ  ಬಿಟ್ಟರೂ  ಭೀಷ್ಮ ತಿರುಗಿ ಬಾಣ ಬಿಡಲಿಲ್ಲ.  ಆದರೂ 25000 ಸೈನಿಕರನ್ನು ಕೊಂದರು.  ಶಿಖಂಡಿ ನಿಮಿತ್ತ ಮಾತ್ರ ಅರ್ಜುನನ ಬಾಣ ತಗುಲಿ ಶಶ್ತ್ರ  ತ್ಯಾಗ ಮಾಡಿ ಬಾಣಗಳ ಮೇಲೆ ಮಲಗಿದರು.  ಗಂಗೆ ಋಷಿಗಳನ್ನು ಕಳಿಸಿ ಈಗ ದಕ್ಷಿಣಾಯಣ ಎಂದು ತಿಳಿಸಿ ಉತ್ತರಾಯಣ ದಲ್ಲಿ ಪ್ರಾಣ ಬಿಡಲು ಹೇಳಿದರು  ಎಲ್ಲರೂ ಬಂದರು.  ಭೀಷ್ಮರು ನೀರು ಬೇಡಿದರು, ತಕ್ಷಣ ಅರ್ಜುನ ಪರ್ಜನ್ಯ ಅಸ್ತ್ರ ಪ್ರಯೋಗಿಸಿ ಭೀಷ್ಮರ ಬಾಯಲ್ಲಿ ನೀರು ಬೀಳುವಂತೆ ಮಾಡಿ ಅವರ ಪ್ರೀತಿಗೆ ಪಾತ್ರನಾದನು.

****

ಭೀಷ್ಮ ಅಷ್ಟಮಿ : 

🌺🌺🌺🌺🌺🌺🌺

ಭೀಷ್ಮ ಪಿತಾಮಹ ನೀಡಿದ ಪ್ರಮುಖವಾದ  "9" ನೀತಿಬೋಧೆಗಳು

🌺🌺🌺🌺🌺🌺🌺 


 ಸಾವಿರ ಹಸುಗಳಿದ್ದರೂ ಅವುಗಳ ನಡುವೆ ಕರು ತನ್ನ ತಾಯಿಯನ್ನು ಗುರುತಿಸುವಂತೆ ಅವರವರ ಕರ್ಮ ಅವರನ್ನು ಬೆಂಬಿಡದೆ ಹಿಡಿಯುತ್ತದೆ; ಬಟ್ಟೆ ಒಗೆದರೆ ಕೊಳೆ ಹೋಗುವಂತೆ, ಸತ್ಕರ್ಮಗಳಿಂದ ಪಾಪ ತೊಳೆದು  ಇಷ್ಟಾರ್ಥಗಳು ಸಿದ್ಧಿಸುತ್ತವೆ.


1. ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು ಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ ವಾಗಿರುವುದರಿಂದ ಸಂಬಂಧಗಳಿಗೆ ಅಂಟಿಕೊಳ್ಳಬಾರದು.


2. ಸುಖವಾದ ಮೇಲೆ ದುಃಖವೂ, ದುಃಖವಾದ ಮೇಲೆ ಸುಖವೂ ಚಕ್ರದಂತೆ ಸುತ್ತುತ್ತಿರುತ್ತವೆ. ಇಷ್ಟುದಿನವೂ ಸುಖವಿತ್ತು; ಈಗ ದುಃಖ ಬಂದಿದೆ, ಮುಂದೆ ಮತ್ತೆ ಸುಖ ಬರುತ್ತದೆ. ದುಃಖವೂ ನಿತ್ಯವಲ್ಲ, ಸುಖವೂ ನಿತ್ಯವಲ್ಲ.


3.ಸಂತೋಷಕ್ಕೆ ಸ್ನೇಹಿತರಾಗಲಿ, ದುಃಖಕ್ಕೆ ಶತ್ರುಗಳಾಗಲಿ, ಪ್ರಯೋಜನಗಳಿಗೆ ಬುದ್ಧಿಯಾಗಲಿ, ಸುಖಕ್ಕೆ ಹಣವಾಗಲಿ, ಹಣಕ್ಕೆ ಬುದ್ಧಿಯಾಗಲಿ ಕಾರಣವೆಂದೂ ಹೇಳುವಹಾಗಿಲ್ಲ. ಏಕೆಂದರೆ, ಜಾಣನಾಗಲಿ ದಡ್ಡನಾಗಲಿ, ಶೂರನಾಗಲಿ ಭೀರುವಾಗಲಿ,

ಮಂಕನಾಗಲಿ ಕವಿಯಾಗಲಿ, ಬಲಿಷ್ಠನಾಗಲಿ ಕೈಲಾಗದವನಾಗಲಿ, ಸುಖ ಬರುವವರಿಗೆ ಬಂದೇಬರುತ್ತದೆ.


4. ಪರಮ ಮೂಢನಿಗೆ, ಕಂಬಳಿ ಕವಚಿಕೊಂಡರೆ ಕಣ್ಣು ಕಾಣಿಸದಂತೆ, ಯಾವ ದುಃಖವೂ ಇಲ್ಲ; ಸುಖದುಃಖಗಳನ್ನು ಮೀರಿದ ಜ್ಞಾನಿಗಳಿಗೂ ದುಃಖವಿಲ್ಲ; ಜಂಜಡವೆಲ್ಲ ಇವೆರಡರ ನಡುವೆ ಇರುವವರಿಗೆ ಮಾತ್ರ.


5. ಸುಖವೋ ದುಃಖವೋ, ಇಷ್ಟವೋ ಅನಿಷ್ಟವೋ, ಬಂದಬಂದದ್ದನ್ನು ಎದೆಗುಂದದೆ ಅನುಭವಿಸಬೇಕು. ಆಮೆಯು ತನ್ನ ಅಂಗಗಳನ್ನೆಲ್ಲ ಒಳಗೆ ಎಳೆದುಕೊಳ್ಳುವಂತೆ ಕಾಮಕ್ರೋಧಗಳನ್ನು ಒಳಕ್ಕೆ ಅಡಗಿಸಿಕೊಂಡು ಶಾಂತನಾದರೆ ಆತ್ಮ ಸಂಪತ್ತು ದೊರೆಯುತ್ತದೆ, ಬೆಳಕು ಕಾಣುತ್ತದೆ. ಅದಕ್ಕೆ ಆಶೆಯನ್ನು ಬಿಡಬೇಕು; ಅದು ಮಂದಬುದ್ಧಿಗಳಿಗೆ ಸಾಧ್ಯವಿಲ್ಲ; ಆಶೆ ಎಂಬುದು ಮುಪ್ಪಿನಲ್ಲಿಯೂ ಮುದಿಯಾಗುವುದಿಲ್ಲ; ಬಂದರೆ ವಾಸಿಯಾಗದೆ ಪ್ರಾಣವನ್ನು ತೆಗೆಯುವ ರೋಗದಂತೆ, ಅದು ಕೊನೆಯವರೆಗೂ ಹೋಗುವುದಿಲ್ಲ.


6. ಒಳ್ಳೆಯದೆಂದು ತಿಳಿದಿರುವುದನ್ನು ಕೂಡಲೇ ಮಾಡಿಬಿಡಬೇಕು; ಇಲ್ಲದಿದ್ದರೆ ಮೃತ್ಯು ಅಡ್ಡ ಬಂದೀತು. ನಾಳೆ ಮಾಡುವುದನ್ನು ಇಂದೇ ಮಾಡಬೇಕು; ಮಧ್ಯಾಹ್ನ ಮಾಡುವುದನ್ನು ಬೆಳಗ್ಗೆಯೇ ಮಾಡಬೇಕು. ಇದನ್ನು ಮಾಡಿದನೇ ಬಿಟ್ಟನೇ ಎಂದು ಮೃತ್ಯುವು ನೋಡುವುದಿಲ್ಲ. ಅದಕ್ಕೆ ಅದು ಬೇಕಾಗಿಯೂ ಇರುವುದಿಲ್ಲ. ಆದ್ದರಿಂದ ಸದಾ ಧರ್ಮಶೀಲರಾಗಿರಬೇಕು.


7. ತ್ಯಾಗವಿಲ್ಲದೆ ಇಹಸುಖವಿಲ್ಲ, ತ್ಯಾಗವಿಲ್ಲದೆ ಪರವಿಲ್ಲ; ತ್ಯಾಗವಿಲ್ಲದೆ ನೆಮ್ಮದಿಯ ನಿದ್ರೆಯೂ ಬರುವುದಿಲ್ಲ; ಎಲ್ಲವನ್ನೂ ತ್ಯಜಿಸಿದವನಿಗೆ ಮಾತ್ರ ಸೌಖ್ಯ! ಭಾಗ್ಯವಂತನಿಗೆ ಮೃತ್ಯುವಿನ ಕೈಗೆ ಸಿಕ್ಕಿದವನ ಹಾಗೆ ಸದಾ ಕಳವಳವಿದ್ದೇ ಇರುತ್ತದೆ. ಹಣ ಕೈಗೆ ಸೇರಿತೆಂದರೆ ಕ್ರೋಧ ಲೋಭಗಳು ಅವನನ್ನು ಮೆಟ್ಟಿಕೊಳ್ಳ್ಳುತ್ತವೆ; ಬುದ್ಧಿ ಕೆಟ್ಟುಹೋಗುತ್ತದೆ; ಅಡ್ಡನೋಟ, ಸಿಡುಕುಮೋರೆ, ಹುಬ್ಬುಗಂಟು, ಕಚ್ಚುತುಟಿ, ಕಟು ಭಾಷಣಗಳು ಬರುತ್ತವೆ; ತಾನೇ ರೂಪವಂತ, ಧನವಂತ, ಕುಲವಂತ, ಸಿದ್ಧಪುರುಷ, ತಾನು ಮನುಷ್ಯಮಾತ್ರದವನಲ್ಲ ಎಂಬ ಮದವೇರುತ್ತದೆ. ವಿಷಯಸುಖಗಳಲ್ಲಿ ಹಣವೆಲ್ಲ ವೆಚ್ಚವಾಗಿ ಹೋದರೆ, ಮತ್ತೊಬ್ಬರ ಸ್ವತ್ತಿಗೆ ಕೈಹಾಕುತ್ತಾನೆ; ಶಿಕ್ಷೆಗೆ ಗುರಿಯಾಗುತ್ತಾನೆ.


8. ಒಂದು ವಿಧದಲ್ಲಿ ನೋಡಿದರೆ ಏನೂ ಇಲ್ಲದಿರುವುದು ರಾಜ್ಯ ಸಂಪತ್ತಿಗಿಂತ ಮೇಲು. ಈ ಸುಖದುಃಖಗಳನ್ನೂ ಗಮನಿಸುತ್ತ, ನಿತ್ಯಾನಿತ್ಯವಿಚಾರ ಮಾಡಬೇಕು. ಸುಖ ಬಂದರೆ ಹಿಗ್ಗಬಾರದು; ದುಃಖ ಬಂದರೆ ಕುಗ್ಗಬಾರದು.


9. ಕರ್ಮವು ಮನುಷ್ಯನನ್ನು ಅವನ ನೆರಳಿನಂತೆ ಎಡೆಬಿಡದೆ ಅನುಸರಿಸುತ್ತ, ಎದ್ದರೆ ಏಳುತ್ತ, ಕೂತರೆ ಕೂರುತ್ತ, ಓಡಿದರೆ ಓಡುತ್ತ, ಮಲಗಿದರೆ ಮಲಗುತ್ತ ಇರುತ್ತದೆ. ಅದರ ಕಾಲ ಬಂದಾಗ, ಯಾರ ಪ್ರೇರಣೆಯೂ ಇಲ್ಲದೆ, ಮರಗಳು ಹೂವು ಹಣ್ಣುಗಳನ್ನು ಬಿಡುವಂತೆ ಫಲ ಕೊಡುತ್ತದೆ.


||ಕೃಷ್ಣಾರ್ಪಣಮಸ್ತು||

***

ಭೀಷ್ಮನಿಲ್ಲದ ಮಹಾಭಾರತವಿಲ್ಲ. 


ತ್ಯಾಗ, ಶೌರ್ಯದ ಪ್ರತೀಕ. 

ಕೆಲವು ವಿಷಯಗಳನ್ನು ಭೀಷ್ಮರ ಪ್ರತಿ ಇತಿಹಾಸ ಮರೆಯಲಾಗದು. 

ಮೂಲದಲ್ಲಿ ಆತ ದ್ಯು ನಾಮಕ ವಸು.

ದೊಡ್ಡ ಯೋಗ್ಯತೆ.  

ಪತ್ನಿ ವರಾಂಗಿಯ ಮಾತು ಕೇಳಿದ. 

ನಂದಿನಿ ಗೋ ಅಪಹರಣಕ್ಕೆ  ಕೈ ಹಾಕಿದ. ವಶಿಷ್ಠರ ಶಾಪಕ್ಕೆ ಗುರಿಯಾದ. 

ಮಾನವಜನ್ಮ ಪಡೆದ.

ಪ್ರಸಿದ್ಧ ಕುರುವಂಶ.

ಗಂಗೆಯ ಮಗ. ಶಂತನುವಿನ ಸುತ. ದೇವವೃತ ನಾಮ

ದೇವಲೋಕದಲ್ಲಿ ವಿದ್ಯಾಭ್ಯಾಸ. ಪರಶುರಾಮ ದೇವರು, ಬ್ರಹಸ್ಪತಿ ಆಚಾರ್ಯರು ವರ ಗುರುಗಳು. 

ಶಸ್ತ್ರ, ಶಾಸ್ತ್ರ ಸಕಲ ವಿದ್ಯೆ ಪ್ರವೀಣ.

ಬಾಣಗಳ ಬಿಟ್ಟ. ತಡೆಗೋಡೆ ಇಟ್ಟ. 

ಹರಿವ ಗಂಗೆ ಕಟ್ಟಿ ಬಿಟ್ಟ. 

ತಂದೆ ಶಂತನು ನೋಡಿ ಬೆರಗಾದ. 

ಮಗನ ಶೌರ್ಯಕ್ಕೆ ಸಂತುಷ್ಟ.

ತಂದೆಗಾಗಿ ಮಾಡಿದ ತ್ಯಾಗ ಅನನ್ಯ. 

ತಂದೆ ಬಯಸಿದ ಕನ್ಯೆ ತಂದ.     

ತಂದೆಗೇ ಮದುವೆ ಮಾಡಿಸಿದ. 

ತಂದೆಗಾಗಿ ತಾನು ಮದುವೆ ಆಗದೇ ಉಳಿದ. 

ಆಜನ್ಮ ಬ್ರಹ್ಮಚಾರಿ ಎಂದ. 

ಭೀಷಣ ಪ್ರತಿಜ್ಞೆ ಮಾಡಿದ.  

ಈತ ಅಪರೂಪದ ಮಗನಾದ. 

ದೇವವೃತ ಭೀಷ್ಮ ನಾದ.

ಐತಿಹಾಸಿಕ ಘಟನೆಯಾದ. 

ಜಗ ಕಂಡ ದಾಖಲೆ ಯಾದ.

ಕಾಶಿ ರಾಜ್ಯ. ಮಹರಾಜನ ಪುತ್ರಿಯರ ಸ್ವಯಂವರ. ವೀರಾಧಿವೀರರು ಬಯಸಿ ಬಂದಿದ್ದರು.

ಭೀಷ್ಮ ಒಬ್ಬನೇ.  ಭರದಿ ಬಂದ. ಆಹ್ವಾನಿಸಿದ. 

ಜಗದ ವೀರರ ಸಾಲುಸಾಲಾಗಿ ಸೋಲಿಸಿದ. ಕನ್ಯೆಯರ ಕರೆತಂದ. ಸೋದರನಿಗೆ ಮದುವೆ ಮಾಡಿಸಿದ. ಇದು ಭೀಷ್ಮರ ಪರಾಕ್ರಮ.

ಭೀಷ್ಮನಿದ್ದಾನೆ !. ಹಸ್ತಿನಾಪುರದತ್ತ ಕಣ್ಣು ಹಾಕಬಾರದು. ಇದು ಶತ್ರುರಾಜರ ಭಯ.

ಇಂಥ ಸಾಮರ್ಥ್ಯ ಭೀಷ್ಮರದು.

ಮತ್ತೆ ಪಾಂಡವರ ವೈಭವದ ರಾಜಸೂಯ ಯಾಗದ ಪ್ರಸಂಗ. 

ಅಗ್ರಪೂಜೆ ಯಾರಿಗೆ? 

ಎಂಬುದು ಜಗದ ಪ್ರಶ್ನೆ.   

ಕೃಷ್ಣನನ್ನು ಕಂಡರಾಗದವರು ಬಹಳಿದ್ದರು ಆ ಸಭೆಯಲ್ಲಿ. ಭೀಷ್ಮನಾದರೋ ಕೃಷ್ಣನಲ್ಲಿ ಜಗದೊಡೆಯನನ್ನು ಕಂಡವ. 

ಆತ ಪುರುಷೋತ್ತಮ ಎಂದು ಬಲ್ಲವ. ಯಾರನ್ನೂ ಲೆಕ್ಕಿಸಲಿಲ್ಲ. 

ಶ್ರೀಕೃಷ್ಣ  ಅದ್ವಿತೀಯ. ಸರ್ವಶಕ್ತ ಸರ್ವೋತ್ತಮ ಆತನ ಹೊರತಾಗಿ ಅನ್ಯರಾರು ತಾನೇ ಅಗ್ರಪೂಜೆಗೆ ಅರ್ಹರು? ಎಂದು ಘೋಷಿಸಿದ ಭೀಷ್ಮ. 

ಧರ್ಮರಾಜನಿಂದ ಕೃಷ್ಣನಿಗೇ ಪೂಜೆ ಮಾಡಿಸಿಸಿದ.  

ಕೃಷ್ಣನ ಸರ್ವೋತ್ತಮತೆ ಸಾರಿದ. 

ಜೊತೆ ಜೊತೆಗೆ 'ವಾಸುದೆವನ ಭಕ್ತ ಭೀಷ್ಮ' ಎಂಬುದು  ಜಗಜ್ಜಾಹೀರಾಯಿತು.

ಭೀಷ್ಮರ ಬಲ, ಪರಾಕ್ರಮ ಅನನ್ಯ. 

ಕುರು ಪಾಂಡವ ಯುದ್ಧ. ಕೌರವರ ಸೇನಾಪತಿ ಯಾರು? 

ಮತ್ತೊಂದು ಮಾತಿಲ್ಲ. ದ್ರೋಣರು ಹೇಳಿದರು. ಕೌರವರು ತಲೆದೂಗಿದರು. ಭೀಷ್ಮ ಒಮ್ಮತದ ಆಯ್ಕೆ. ಇದು ಭೀಷಣ ಭೀಷ್ಮ ಬಲ. ಹದಿನೆಂಟು ದಿನದ ಯುದ್ಧ.

ಹತ್ತು ದಿನದ ಸಿಂಹಪಾಲು ಭೀಷ್ಮರದು.

ಅರ್ಧಕ್ಕೂ ಹೆಚ್ಚು ಸೈನ್ಯ, ಅತಿರಥ ಮಹಾರಥರು ಯುದ್ಧದಲ್ಲಿ ಹತರಾದದ್ದು ವಯೋವೃದ್ಧ ಭೀಷ್ಮರಿಂದಲೇನೇ. 

ತಾತನ ಶೌರ್ಯಕ್ಕೆ ಮೊಮ್ಮಕ್ಕಳು ಯುವಕರು ನಾಚಿನೀರಾದರು.

ಅದು ಕುರುಕ್ಷೇತ್ರ. ಅದು ಮಹಾಭಾರತ ಯುದ್ಧ.  ಅಂದು ಭೀಷ್ಮನ ಪರಾಕ್ರಮ ಶಿಖರಕ್ಕೇರಿತು. 

ಮಹಾ ಸೇನಾನಿ, ಕೌರವರ ಸೇನಾಧಿಪತಿ ಆತ.  ಯಾರಿಗೂ ತಡೆಯಲಾಗಲಿಲ್ಲ, ಹಿಡಿದಿಡಲಾಗಲಿಲ್ಲ ತಾತನನ್ನು. 

ಅರ್ಜುನನ  ನೆಪದಿಂದ ಕೃಷ್ಣನನ್ನೂ ಪೀಡಿಸಿದ ಭೀಷ್ಮ. 

ತಾತನ ಬಾಣಗಳು ತಾಕಿದವು. 

ಮಾಂಸ ರಕ್ತದ ಮಾನುಷ ದೇಹವಲ್ಲ ಕೃಷ್ಣನದು. ಆದರೂ ನೆತ್ತರು ಬಸಿಯಿತು ಆತನ  ಹಣೆಯಿಂದ. 

ಅಪ್ರಾಕೃತ ಪುರಷನಾತ!                     

ಕೋಪವಿಲ್ಲದ ಕೃಷ್ಣ ಕೋಪಿಷ್ಠನಾದ. 

ಹುಬ್ಬು ಗಂಟಿಕ್ಕಿದ. ಸುದರ್ಶನ ಚಕ್ರ ಧರಿಸಿದ.  

'ಪಾರ್ಥ ನಿನ್ನ ಕೈಯಲ್ಲಿ ಆಗುವದಲ್ಲ. 

ನಾನೇ ಈ ಭೀಷ್ಮನನ್ನು ಮುಗಿಸುತ್ತೇನೆ' ಎಂದ.

ರಥದಿಂದ ಕೆಳಕ್ಕೆ ಹಾರಿದ.  

ಭೀಷ್ಮನತ್ತ ಧಾವಿಸಿದ. 

ಅರ್ಜುನ ಬೇಡವೆಂದ. ಪಾದಕ್ಕೆ ಬಿದ್ದ. 

ಕಾಲು ಹಿಡಿದ.  ತಡೆದ. 

'ಶಸ್ತ್ರ ಹಿಡಿಯುವದಿಲ್ಲ ನಿನ್ನ ಪ್ರತಿಜ್ಞೆ'  

ನೆನಪು ಮಾಡಿದ.

ಊಹುಂ, ಯಾವದೂ ನಡಲಿಲ್ಲ, ನಾಟಲಿಲ್ಲ ಯದುಪತಿಗೆ.

ಹಾರಿ ಬೀಳುತ್ತಿರುವ ಹೂಮಾಲೆ,

ಜಾರುವ ಉತ್ತರೀಯವನ್ನೂ ಗಮನಿಸದೆ, ಭೀಷ್ಮನತ್ತ ಧಾವಿಸಿದ ಜಗದೊಡೆಯ.

ಏನಾಗುತ್ತಿದೆ? ಏನಾಗುತ್ತದೆ? 

ಆತಂಕ. ಕೌತುಕ.

ಆಗಸದಲ್ಲಿ ನೆರೆದ ದಿವಿಜರಿಗೂ ದಿಗ್ಭ್ರಮೆ.

ಎಲ್ಲವನ್ನೂ ಪಿತಾಮಹ ಭೀಷ್ಮ ಕಂಡ. ಕೃಷ್ಣನನ್ನೂ, ಮೃತ್ಯುರೂಪಿ ಚಕ್ರವನ್ಮೂ ನೋಡಿದ. 

ಆನಂದ ಭರಿತನಾದ. ಭಕ್ತಿಭರಿತನಾದ. 

ಭಾವ ಪೂರಿತನಾದ.  ಕೃತಾರ್ಥನಾದ. ರಥದಿಂದ ಇಳಿದ. ಮುಂದೆ ಬಂದ. ಧರಣಿಗೊರಗಿದ.  ಶಿರಸಾಷ್ಟಾಂಗ ನಮಸ್ಕರಿಸಿದ.

'ಧನ್ಯನಾದೆ ಸ್ವಾಮಿ. ನಿನ್ನ ಕೈಯಲ್ಲಿ ನನ್ನ ಮೃತ್ಯು ದಂಡ! ನಿನ್ನ ಕೈಯಲ್ಲಿ ಶಸ್ತ್ರ ಹಿಡಿಸುವನೆಂದಿದ್ದೆ.  ನಡೆಸಿ ಕೊಟ್ಟೆ.

ಮತ್ತಾರಿಗುಂಟು ಈ ಭಾಗ್ಯ, ಸೌಭಾಗ್ಯ' ಎಂದ. ತಲೆಬಾಗಿದ ಪಿತಾಮಹ.

ಮರುಕ್ಷಣ

ಕೋಪ ಮಾಯ. ಮತ್ತೆ ಮುಗಳ್ ನಗೆ ಪ್ರತ್ಯಕ್ಷ. ಕೃಪಾ ದೃಷ್ಟಿ. ಕರುಣಾರಸ ಧಾರೆ. ಕೃಷ್ಣನ ಮುದ್ದುಮುಖದ ಮೇಲೆ.

ಮರಳಿ ತನ್ನ ರಥಕ್ಕೆ ತೆರಳಿದ ಪಾರ್ಥಸಾರಥಿ.

ಈತ ಏಕೆ ಹೋದ, ಏಕೆ ಬಂದ ತಿಳಿಯಲಿಲ್ಲ 

ಬೆಚ್ಚಿ ಬೆರಗಾದ ಪಾರ್ಥಗೆ.  

ಭೀಷ್ಮ ಭಕ್ತಿ ವಾತ್ಸಲ್ಯ ತೋರಿದ. 

ಕೃಷ್ಣ ಭಕ್ತ ವಾತ್ಸಲ್ಯ ಮೆರೆದ. ತಾನು ಭಕ್ತ ಪರಾಧೀನನೆಂದ.

ಪ್ರತಿಜ್ಞೆಗಿಂತ ತನ್ನ ಭಕ್ತ ಹೆಚ್ಚೆಂದ.

ಮತ್ತೆ ತ್ಯಾಗಿ ಯೋಗಿ ಭೀಷ್ಮ. 

'ಪಿತಾಮಹ, ನಿನ್ನ ಮರಣ ಹೇಗೆ?' ಪಾಂಡವರ ಪ್ರಶ್ನೆ ಅಜೇಯ ಸ್ವೆಚ್ಛಾಮರಣಿ ತಾತನಿಗೆ. 

'ನನ್ನ ಮರಣ ಹೀಗೆ ಹೀಗೆ --'. ತಾತನ ಉತ್ತರ ಪ್ರೀತಿಯ ಮೊಮ್ಮಕ್ಕಳಿಗೆ.

ಹಾಗೇ ಮಾಡಿದರು.  

ಶಿಖಂಡಿಯ ಮುಂದಿಟ್ಟಕೊಂಡರು.

ತಾತನ ಶರಶಯ್ಯೆ ಮೇಲೆ ಮಲಗಿಸಿದ ಅರ್ಜುನ. 

ಭೀಷ್ಮ ಪರ್ವಕ್ಕೆ ಮಂಗಳ. 

ಅಪಾರ ಜ್ಞಾನ ನಿಧಿ ಭೀಷ್ಮ. 

ಮೂರುನೂರು ವರ್ಷ ಅಧ್ಯಯನ ಪರಶುರಾಮ ದೇವರಲ್ಲಿ. 

ತಲೆತುಂಬ ಶಾಸ್ತ್ರ ವಿದ್ಯೆ, ಶಸ್ತ್ರಕಲೆ ತುಂಬಿತ್ತು.  ಅದಕ್ಕಾಗಿ ಅಂಥ ಗುರು  ಇಂಥ ಶಿಷ್ಯ.

ಈ ಎಲ್ಲ ಬಲ್ಲ ಸರ್ವಜ್ಞ ಶ್ರೀಕೃಷ್ಣ. ಪಿತಾಮಹನ ಜ್ಞಾನ ವ್ಯರ್ಥ ಹೋಗ ಬಾರದು. 

ಗಂಗೆಯ ಮಗನಿಂದ ಜ್ಞಾನಗಂಗೆ ಹರಿಯ ಬೇಕು. ಹಿಡಿದಿಟ್ಟುಕೊಳ್ಳ ಬೇಕು. 

ಜಗಕೆ ಉಪಯೋಗವಾಗಬೇಕು. 

ಇದು ಸರ್ವಜ್ಞನ ಬಯಕೆ.

ಪಾಂಡವರ ಕರೆತಂದ ತಾತನ ಬಳಿ. ಧರ್ಮರಾಜನ ಸಂಶಯ ಪರಿಹಾರದ ನೆಪ.    ಭೀಷ್ಮ ಪಿತಾಮಹರಿಂದ ಮಹದ್ ಉಪದೇಶ ಧಾರೆ. 

ಕೃಷ್ಣ ಒಳಗೆ.  ಭೀಷ್ಮ ಹೊರಗೆ.

ಕೃಷ್ಣನ ಜ್ಞಾನ   ಭೀಷ್ಮನ ಮಾತು.

ದಿವ್ಯ ಜ್ಞಾನ.   ದಿವ್ಯ ಉಪದೇಶ.

ದಿವ್ಯತರ    'ವಿಷ್ಣು ಸಹಸ್ರನಾಮ'. 

ಸಾಸಿರನಾಮ ಪರಿಹರಿಸದ ಸಮಸ್ಯಯೇ ಇಲ್ಲ. ರಾಮಬಾಣ. ಕಷ್ಟವಾಗಲಿ ದುಃಖವಾಗಲಿ ತಾಪತ್ರಯಗಳಾಗಿರಲಿ ಲೌಕಿಕವಾಗಲಿ, ಅಧ್ಯಾತ್ಮಿಕ ವಾಗಲಿ, ಅಪಾಯ ಯಾವದೇ ಇರಲಿ. 

ಉಪಾಯ ಒಂದೇ - 

ಅದು ವಿಷ್ಣುಸಹಸ್ರನಾಮ.

ಇದು ಕೃಷ್ಣನ ಅಂತರಂಗ.  

ಭೀಷ್ಮನ ಮುಖವಾಣಿ.

ಸರ್ವ ಸಂಕಷ್ಟಗಳಿಗೆ ಪರಿಹಾರರೂಪವಾದ ವಿಷ್ಣುಸಹಸ್ರನಾಮ ಮಂತ್ರ ಕೊಟ್ಟ

ಭೀಷ್ಮಾಚಾರ್ಯರ ಪುಣ್ಯದಿನ. ಪರ್ವಕಾಲ. ಜಗತ್ತಿಗೇ ಉಪಕರಿಸಿದ್ದಾರೆ. ಜಗತ್ತಿಗೇ ಪಿತಾಮಹ.

ಉಪಕಾರ ಸ್ಮರಿಸಿ ಎಲ್ಲರೂ ತರ್ಪಣ ಕೊಡುವ ಪುಣ್ಯ ತಿಥಿ - ಭೀಷ್ಮಾಷ್ಟಮಿ.

ಭೀಷ್ಮರ ಸ್ಮರಿಸೋಣ. ತರ್ಪಿಸೋಣ.

ಸಾಸಿರನಾಮ ಪಠಿಸೋಣ.

ಅದರ ಒಡೆಯ  ಶ್ರೀ ಕೃಷ್ಣನಿಗೆ 

ಶಿರಬಾಗಿ ನಮಿಸೋಣ.

ಡಾ ವಿಜಯೇಂದ್ರ ದೇಸಾಯ

        ಶ್ರೀ ಕೃಷ್ಣಾರ್ಪಣಮಸ್ತು

*****

No comments:

Post a Comment