ಹಣೆಯ ಮೇಲೆ ಇರುವ ಉದ್ದಾನೆಯದು ಅಂಗಾರ, ಗುಂಡಗೆ ಇರುವುದು ಅಕ್ಷಂತಿ
ಭೋಜನ ಸಮಯದಲ್ಲಿ ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?
ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*
ಇದು ಯಾವಾಗನಿಂತ ಬಂದ ಪದ್ಧತಿ?
|| ವಿಷ್ಣೋರಂಗಾರಶೇಷೇಣ ಯೋsಂಗಾನಿ ಪರಿಮಾರ್ಜಯೇತ್|*
*ದುರಿತಾನಿ ವಿನಷ್ಯಂತಿ ವ್ಯಾಧಯೋ ಯಾಂತಿ ಖಂಡಶಃ ||
ಎಂಬ ಉಕ್ತಿಯಂತೆ ಭಗವಂತನಿಗೆ ಮಾಡಿದ ಧೂಪಾರತಿಯ ಅಂಗಾರವನ್ನು ಹಚ್ಚಿಕೊಳ್ಳುವದರಿಂದ ನಮ್ಮ ಸಮಸ್ತ ದುರಿತಗಳು , ವ್ಯಾಧಿಗಳು , ಎಷ್ಟೋ ಕಡಿಮೆ ಆಗುತ್ತವೆ
ಅಕ್ಷತೆ ಊಟವಾಗಿದೆಯೆಂಬ ಸಂಕೇತ ಎಂದು ರಾಘವೇಂದ್ರ ವಿಜಯದಲ್ಲಿ ಉಲ್ಲೇಖವಿದೆ: ನನಗೆ ತಿಳಿದ ಮಟ್ಟಿಗೆ. . ಪರಮಾತ್ಮನಿಗೆ ಮಾಡಿದ ಧೂಪಾರತಿಯ ಶೇಷವನ್ನು ದೇಹಕ್ಕೆ ಹಚ್ಚಿಕಳ್ಳುವುದರಿಂದ ಪಾಪಗಳ ವಿನಾಶವಾಗುತ್ತದೆ... ಹಾಗೂ...ಹಣೆಯಮೇಲೆ ಗದಾ ರೂಪದಲ್ಲಿ ಹಚ್ಚಿಕಳ್ಳುವುದರಿಂದ ಯಮ ಭಟರು ಸಹಾ ಸಮೀಪ ಬರಲು ಅಂಜುತ್ತಾರೆ ಅಂತ..
ಇನ್ನೂ
ಹಾಗಾಗಿ ಏಕಾದಶಿಯ ದಿವಸ ಕೇವಲ ಅಂಗಾರ ಧಾರಣೆ
ಅದು ಗುರ್ತು.. ಮಾತ್ರ. ಆದರೇ ಇದು ಅನಾದಿಕಾಲದಿಂದ ಬಂದ ಪದ್ಧತಿ..
ಶ್ರೀ ವೆಂಕಟೇಶ್ವರ ಕಲ್ಯಾಣದಲ್ಲಿ ವೆಂಕಪ್ಪ ಈ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಭೇಟೆಗೆ ಹೋದರು ಅಂತ ಕೇಳ್ತೇವೆ
|| ರಾ ರಕ್ಷಾಣೋ ಅಗ್ನೆ ತವ ರಕ್ಷಣೇಭಿಃ || ಎಂಬ ವೇದದ ಉಕ್ತಿಯಂತೆ ಭಗವಂತನಿಗೆ ಅರ್ಪಿಸಿದ ಅಂಗಾರವನ್ನು ನಮ್ಮ ದೇಹದಲ್ಲಿ ಹಚ್ಚಿಕೊಳ್ಳುವದರಿಂದ ಸಮಸ್ತ ಭಯಗಳಿಂದಲೂ ರಕ್ಷಣೆ ದೊರಕುತ್ತದೆ , ಗದಾರೂಪದಲ್ಲಿರೋ ಅಂಗಾರ ಅಕ್ಷತೆಯನ್ನು ನೋಡಿದ ಯಮಭಟರು ನಮ್ಮ ಸಮೀಪ ಬರಲೂ ಸಹ ಅಂಜುತ್ತಾರೆ , ಆದರೆ ಯಾವನ ಹಣೆಯಲ್ಲಿ ಅಂಗಾರ ಅಕ್ಷತೆ ಇಲ್ಲವೋ ಅಂತಹವನ ಹಣೆ ಸ್ಮಶಾನ ದರ್ಶನಕ್ಕೆ ಸಮನಾದುದರಿಂದ ಅಂತಹವನ ಬರಿ ಹಣೆಯನ್ನು ನೋಡಿದಾಕ್ಷಣವೇ ಸಚೇಲ ಸ್ನಾನ ಮಾಡಬೇಕು ಅಂತ ಶಾಸ್ತ್ರದಲ್ಲಿ ತಿಳಿಸಲಾಗಿದೆ
ಅಂಗಾರ ಅಕ್ಷಂತೆ...ಹಚ್ಚಿದರೆ ಊಟಾಯ್ತು ಅಂದುಕೊಳ್ತಾರೆ...ಅದು ಹಾಗಲ್ಲ....
ಅಂ+ ಗಾರ = ಅಂಗಾರ ,
*ಅಂ ಅನಂತಾಯ ನಮಃ ಎಂಬ ಉಕ್ತಿಯಂತೆ ಅನಂತ ಶಬ್ದವಾಚ್ಯನಾದ ಭಗವಂತನಿಗೆ ಅರ್ಪಿಸಿದ 'ಗಾರ ' ಧೂಪಾರತಿಯ ಶೇಷ ಇದನ್ನು ಊರ್ಧ್ವಮುಖವಾಗಿ ಹಚ್ಚಿಕೊಳ್ಳುವದರಿಂದ , ನಮ್ಮ ನಾಭಿಪ್ರದೇಶದಿಂದ ಹೊರಟ ಸುಶುಮ್ನಾ ನಾಡಿ ಬ್ರಹ್ಮ ರಂಧ್ರದವರೆಗೂ ಬಂದು ಸೇರುತ್ತದೆ ಅದು ಊರ್ಧ್ವಮುಖವಾಗಿಯೇ ಚಲನೆ ಆಗ್ತಾಯಿರಬೇಕು ಅಂದರೆ ನಮ್ಮ ಪ್ರಾಣ ಬ್ರಹ್ಮರಂಧ್ರದ ಮೂಲಕ ಹೋಗಲು ಸಾಧ್ಯ , ಭಗವಂತನಿಗೆ ಅರ್ಪಿಸಿದ ಈ ಶೇಷವನ್ನು ಊರ್ಧ್ವಮುಖವಾಗಿ ಹೊಟ್ಟೆಮೇಲೆ ಮೂರು ಕಡೆ ಎದೆಯ ಮೇಲೆ ಎರಡು ಕಡೆ , ಕುತ್ತಿಗೆ , ಹಾಗೂ ಹಣೆಯಿಂದ ಬ್ರಹ್ಮರಂಧ್ರ ಇರುವ ಸ್ಥಳದವರೆಗೂ ಹಚ್ಚಿಕೊಳ್ಳುವದರಿಂದ ಆ ಸುಷುಮ್ನಾ ನಾಡಿಯ ಚಲನೆಯು ಸರಿಯಾದ ಕ್ರಮದಲ್ಲಿ ಇರತ್ತೆ .
ಅಕ್ಷತೆಯನ್ನು ಭ್ರೂಮಧ್ಯದಲ್ಲಿ ಹಚ್ಚಿಕೊಳ್ಳುವದರಿಂದ ಅಲ್ಲಿ ನಮ್ಮ ಧೀಶಕ್ತಿಯು ಕೇಂದ್ರೀಕರಣಗೊಂಡು ಮೇಧಾ ಶಕ್ತಿಯು ವೃದ್ಧಿ ಆಗುತ್ತದೆ . ಈ ಕಾರಣದಿಂದ ಅಂಗಾರ ಅಕ್ಷತೆ ಹಚ್ಚಿಕೊಳ್ಳುವ ಸತ್ಸಂಪ್ರದಾಯ ಇದೆ
ಮಧ್ವವಿಜಯದ 10ನೇಸರ್ಗ
ದ 17ನೇ ಶ್ಲೋಕಕ್ಕೆ ಮಧ್ವವಿಜಯದ ವ್ಯಾಖ್ಯಾನ ಭಾವಪ್ರಕಶಿಕದ ಈ ರೀತಿ ವ್ಯಾಖ್ಯಾನ ಇದೆ .
ಶ್ರೀಮದಾಚಾರ್ಯರು ಗಂಗಾನದಿಯನ್ನು ದಾಟಿಬರುವುದನ್ನು ನೋಡಿ ತುರುಷ್ಕ ರಾಜ ಶ್ರೀಮದಾಚಾರ್ಯ ಜೋತೆ ಸಂಭಾಷಣೆ ಮಾಡುವಾಗ ಅವರ ಹಣೆಯಲ್ಲಿರುವ ಅಂಗಾರ ಅಕ್ಷತೆಗಳನ್ನು ನೋಡಿ ತಮ್ಮ ಹಣೆಯಲ್ಲಿ ಇರುವುದೇನು. ಎಂದು ಕೇಳಲು ಶ್ರೀಮದಾಚಾರ್ಯರು ನೀವು ಕೈಯಲ್ಲಿ ಗದೆ ಹಿಡಿದರೆ ನಾವು ಅದನ್ನು ಹಣೆಯಲ್ಲಿ ಧರಿಸಿರುವೇವು ಎಂದು ಉತ್ತರಿಸಿದರು .
|| ಕಿo ಲಲಾಟೇ ಇತಿ ಪೃಷ್ಟೋ ರಾಜ್ಞಾಕರೇಣ ಗದಾo ಭವo* ತೋ ಭಿಭ್ರoತಿ ವಯಂ ಲಲಾಟೇ ಇತ್ಯೂಚೇ ಇತ್ಯಾದ್ಯಶಬ್ದಾರ್ಥಃ ||
ಶಸ್ತ್ರಪಾಣಿಗಳು ಕೈಯಲ್ಲಿ ಗದೆ ಹಿಡಿದರೆ ಶಾಸ್ತ್ರಪಾಣಿಗಳು ಹಣೆಯಲ್ಲಿ ಗದೆ (ಅಂಗಾರ ಅಕ್ಷತೆ) ಧರಿಸಬೇಕು ಎಂಬುದು ಇಲ್ಲಿಯ ಮರ್ಮ
ಅಂಗಾರ ಅಕ್ಷತೆಗಳ ಧಾರಣೆಗೆ ಒಂದು ಅಪೂರ್ವ ಆಧಾರವಾಗಿದೆ ಎಂಬುದನ್ನು ಗಮಿನಿಸಬೇಕು.
by - ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ.
🌺ನಮೋ ಹಿಂದೂ ಸನಾತನ ಧರ್ಮ
*****
ಮಧ್ವ ಚಾರ್ಯರ ಅನುಯಾಯಿಗಳಲ್ಲಿ ದೇವರ ಪೂಜೆಯಾದ ಮೇಲೆ, ಊಟ ಮಾಡುವುದಕ್ಕೆ ಮುಂಚೆ, ಗಂಡಸರು ಹಣೆಯ ಮೇಲೆ “ಅಕ್ಷತೆ” ಮತ್ತು “ಅಂಗಾರ”ವನ್ನು ಹಚ್ಚಿ ಕೊಳ್ಳುವ ಸಂಪ್ರದಾಯವಿದೆ. ಆಕ್ಷತೆಯೆಂದರೆ ಹಣೆಯ ಮಧ್ಯದಲ್ಲಿ ಗುಂಡಗೆ ಕಂದು ಬಣ್ಣದ ಒದ್ದೆ ಮಿಶ್ರಣ(paste),ಅಂಗಾರವಂದರೆ ದೇವರಿಗೆ ದೂಪಾರತಿ ಮಾಡಿದ ಕೆಂಡವನ್ನು ನೀರಿನಲ್ಲಿ ಹಾಕಿ ಇಜ್ಜಲು ಮಾಡಿಕೊಂಡು ಅದರಿಂದ ಅಕ್ಷತೆ ಮೇಲೆ ಸಣ್ಣ ಗೆರೆ ಎಳೆಯುವುದು.
ಸ್ಮೃತಿ ಮುಕ್ತಾವಳಿಯಲ್ಲಿ ಅಂಗಾರದ ಮಹತ್ವವನ್ನು ಹೀಗೆ ಹೇಳಿದೆ.
ಶಂಕೋಧಕ,ನೈವೇದ್ಯ,ನಿರ್ಮಾಲ್ಯ,(ಗಂಧ,ತುಳಸಿ,ಹೂವು) ಆರತಿ, ಮತ್ತು ದೂಪ ಶೇಷ ಇವುಗಳು ಬ್ರಹ್ಮ ಹತ್ಯ ಧೋಷವನ್ನು ನಿವಾರಿಸುತ್ತದೆ.
ಪದ್ಮ ಪುರಾಣವು ಅಂಗಾರ ದರಿಸಿದವನಿಗೆ ಭೂಮಿ,ಆಕಾಶ ಮತ್ತು ಅಂತರಿಕ್ಷದಲ್ಲಿ ಯಾವ ಭಯವು ಇರುವುದಿಲ್ಲ ಎಂದು ಹೇಳುತ್ತದೆ..
ಅಂಗಾರ ದರಿಸಿದವನಿಗೆ ಹರಿಯು ಐಶ್ವರ್ಯವನ್ನು ಕೊಟ್ಟು ಸಕಲ ಕಷ್ಟಗಳಿಂದಲೂ ಕಾಪಾಡುತ್ತಾನೆ.
ದೇವರಿಗೆ ದೀಪ,ನೀರಾಂಜನ,ಹಚ್ಚಿದವರಿಗೆ ಮತ್ತು ಅಂಗಾರ ಧಾರಣೆ ಮಾಡಿದವನಿಗೆ ಭೂತ ಮತ್ತು ಕಳ್ಳರ ಭಯವಿರುವುದಿಲ್ಲ.
ಅಂಗಾರದ ತಯಾರಿಕೆ
ಕೆಂಡದಮೇಲೆ ದಶಾಂಗವನ್ನು ಹಾಕಿ ಅದನ್ನು ದೇವರಿಗೆ ಮಂಗಳಾರತಿ ಮಾಡಿದ ನಂತರ ನೀರಿನಲ್ಲಿ ಹಾಕಿ ಆರಿಸಿ ಅದನ್ನು
ಹಾಕಿ ಆರಿಸಿ ಅದನ್ನು ಅಂಗಾರವಾಗಿ ಉಪಯೋಗಿಸಿ ಬೇಕು.
ಗೋಪಿಚಂದನ ಹಚ್ಚಿ ಕೊಳ್ಳುವ ಜಾಗದಲ್ಲಿ ಅಂಗಾರವನ್ನು ಹಚ್ಚಿ ಕೊಳ್ಳಬೇಕು.
ಏಕಾದಶಿ ದಿನವೂ ಸೇರಿ ಎಲ್ಲಾದಿನವೂ ಅಗಾರವನ್ನು ಹಚ್ಚಿಕೊಳ್ಳ ಬೇಕು. ಅಸೌಚದ ದಿನದಲ್ಲೂ
ಅಂಗಾರವನ್ನು ಹಚ್ಚಿ ಕೊಳ್ಳಬೇಕು.
ಅಕ್ಷತೆ
ನಮ್ಮ ಶಾಸ್ತ್ರ ಮತ್ತು ಪುರಾಣಗಳಲ್ಲಿ ಯಾವ ಉಲ್ಲೇಖವು ಇಲ್ಲ. ಆದರೆ ಸಂಪ್ರದಾಯ ದಲ್ಲಿ ಅಕ್ಷತೆ ಧಾರಣೆ ಇದೆ.
ಅರಸಿನ ಮತ್ತು ಸುಟ್ಟ ಬಾಳೆಹಣ್ಣಿನ ಸಿಪ್ಪೆಯಪುಡಿಯನ್ನು ಚೆನ್ನಾಗಿ ಮಿಶ್ರ ಮಾಡಬೇಕು.
ಅಕ್ಷತೆಯನ್ನು ಹಣೆಯ ಮಧ್ಯಬಾಗದಲ್ಲಿ ಹಚ್ಚಿ ಕೊಳ್ಳಬೇಕು. ಏಕಾದಶೀ ಮತ್ತು ಅಶೌಚ ದಿನಗಳಲ್ಲಿ ಅಕ್ಷತೆಯನ್ನು ಹಚ್ಚಿ ಕೊಳ್ಳಬಾರದು.
*****
No comments:
Post a Comment