SEARCH HERE

Wednesday, 24 March 2021

ಯಶಸ್ಸು ಸಮೃದ್ಧಿ ಏಳಿಗೆಗಾಗಿ ಪರಿಹಾರ yashassu achievement parihara

ನಿಮ್ಮ ನಂಬಿಕೆಗೆ ಬಿಟ್ಟಿದ್ದು - this is collected article and not my advice

ನಿಮ್ಮ ಮಗಳಿಗಾಗಿ ಮದುವೆಯಾಗಿ ತನ್ನ ಗಂಡನ ಮನೆಗೆ ಹೊರಟಿರುವ ಮಗಳಿಗಾಗಿ ಹೀಗೆ ಮಾಡಿ: 
ಒಂದು ದೊಡ್ಡ ಲೋಟ ಅಥವಾ ಜಗ್ನಲ್ಲಿ ತುಂಬಾ ನೀರು ತುಂಬಿಸಿ ಇದರಲ್ಲಿ ಕೊಂಚ ಅರಿಶಿನ ಪುಡಿ ಬೆರೆಸಿ. ಈ ನೀರನ್ನು ನಿಮ್ಮ ಮಗಳ ಸುತ್ತ ಏಳು ಸುತ್ತು ಸುತ್ತಿ ನಿವಾಳಿಸಿ ಈ ನೀರನ್ನು ದೂರ ಎಸೆದು ಬಿಡಿ. ಇದರಿಂದ ಆಕೆಯ ವೈವಾಹಿಕ ಜೀವನದಲ್ಲಿ ಮುಂದೆ ಎದುರಾಗುವ ಎಲ್ಲಾ ಕಂಟಕಗಳು ಇಲ್ಲವಾಗುತ್ತವೆ ಹಾಗೂ ಆಕೆಯ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

ಪರೀಕ್ಷೆ ಎದುರಿಸುವ ಸಮಯದಲ್ಲಿ
ನಿಮ್ಮ ಮನೆಯಲ್ಲಿ ಯಾರೇ ಆಗಲಿ ಪರೀಕ್ಷೆಯನ್ನು ಅಥವಾ ಸಂದರ್ಶನವನ್ನು ಎದುರಿಸಲು ಹೊರಟಾಗ, ಅತನ/ಆಕೆಯ ಮೇಲೆ ಕೆಲವು ಹಸಿರು ಬೇಳೆಯ ಕಾಳುಗಳನ್ನು ಎರಚಿ. ಆತ/ಆಕೆ ಮನೆಯಿಂದ ಹೊರಹೋದ ಬಳಿಕ ಈ ಕಾಳುಗಳನ್ನು ಒಂದೂ ಬಿಡದಂತೆ ಗುಡಿಸಿ ಮನೆಯಿಂದ ಹೊರಗೆಸೆದು ಬಿಡಿ. ಇದರಿಂದ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಯಾವುದೇ ತೊಡಕು ಉಂಟಾಗದೇ ಯಶಸ್ಸು ಪ್ರಾಪ್ತವಾಗುತ್ತದೆ.

ಉತ್ತಮ ಆರೋಗ್ಯಕ್ಕಾಗಿ
ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ತೀವ್ರತರದ ಕಾಯಿಲೆಯಿದ್ದು ಚಿಕಿತ್ಸೆ ಪಡೆಯುತ್ತಿದ್ದರೆ ಚಂದನದ ಕೊರಡನ್ನು ಕಲ್ಲಿನ ಮೇಲೆ ನಯವಾಗಿ ತಿಕ್ಕಿ ಲೇಪನವನ್ನು ತಯಾರಿಸಿ. ಈ ಲೇಪನವನ್ನು ರೋಗ ಪೀಡಿತ ವ್ಯಕ್ತಿಯ ಹಣೆಯ ಮೇಲೆ ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಹಚ್ಚಿ. ಈ ಲೇಪನ ಒಣಗಿ ಪಕಳೆಯಂತೆ ಏಳುವವರೆಗೂ ನಿವಾರಿಸದಿರಲು ರೋಗಿಗೆ ತಿಳಿಸಿ. ಇದರಿಂದ ರೋಗಿ ಶೀಘ್ರವಾಗಿ ಗುಣಮುಖರಾಗುತ್ತಾರೆ.

ತೊಡಕುಗಳನ್ನು ತೊಡೆಯಲು
ಕೆಲವೊಮ್ಮೆ ಮುಟ್ಟಿದ್ದೆಲ್ಲಾ ಮಣ್ಣು ಎಂಬ ಸ್ಥಿತಿ ಎದುರಾಗಿರುತ್ತದೆ. ಇದರ ಪರಿಹಾರಕ್ಕಾಗಿ ಮನೆಯಲ್ಲಿರುವ ಗಣೇಶನ ವಿಗ್ರಹದ ಮುಂದೆ ಪ್ರತಿದಿನ ಹಣತೆ ಅಥವಾ ಅಗರಬತ್ತಿಯನ್ನು ಹಚ್ಚಿ. ಇದರೊಂದಿಗೆ ಗಣೇಶನ ಸೊಂಡಿಲನ್ನು ಮುಟ್ಟಿ ಕಂಟಕಗಳನ್ನು ನಿವಾರಿಸಲು ಪ್ರಾರ್ಥಿಸಿ. ವಿಘ್ನನಿವಾರಕನಾದ ಗಣೇಶ ತೊಡಕುಗಳನ್ನು ಖಂಡಿತಾ ನಿವಾರಿಸುತ್ತಾನೆ.

ಹೊಸ ಮನೆಯಲ್ಲಿ ಸಮೃದ್ಧಿ ಮೂಡಲು
ಹೊಸ ಮನೆಯಲ್ಲಿ ಸದಾ ಶಾಂತಿ, ಸಮೃದ್ದಿ ತುಂಬಿರಲು ನಿಮ್ಮ ಮನೆಯ ಪಶ್ಚಿಮ ಭಾಗದಲ್ಲಿ ಏಳು ತುಂಡು ಇಡಿಯ ಅರಿಶಿನದ ಕೊಂಬುಗಳನ್ನು ಇರಿಸಿ. ಒಂದು ಬಟ್ಟೆಯಲ್ಲಿ ಕಟ್ಟಿ ಕಣ್ಣಿಗೆ ಕಾಣದ ಸ್ಥಳದಲ್ಲಿ ಶಾಶ್ವತವಾಗಿ ಕಟ್ಟಿ ಇಟ್ಟರೂ ಸರಿ. ಇದರಿಂದ ಮನೆಯಲ್ಲಿ ಸದಾ ಸಂತಸ, ಶಾಂತಿ ನೆಮ್ಮದಿ ತುಂಬಿರುತ್ತದೆ.


ಕುಟುಂಬದಲ್ಲಿ ಸಂತೋಷ ತುಂಬಿರಲು
ಮನೆಯ ಸದಸ್ಯರಲ್ಲಿ ಸಾಮರಸ್ಯ ಹಾಗೂ ಸಂತೋಷ ತುಂಬಿರಲು ಈ ವಿಧಾನ ಅನುಸರಿಸಿ. ಇದು ಕೊಂಚ ಕ್ಲಿಷ್ಟಕರವಾಗಿದೆ. ಆದರೂ ಮನೆಯವರ ಸಾಮರಸ್ಯಕ್ಕಾಗಿ ಅಗತ್ಯವಾಗಿದೆ. ಒಂದು ದಿನ ಭಾನುವಾರ ಮಧ್ಯಮಗಾತ್ರದ ಮಣ್ಣಿನ ಮಡಕೆಯೊಂದನ್ನು ನಡುಮನೆಯ ಮಧ್ಯೆ ಇರಿಸಿ ಇದರಲ್ಲಿ ಕೊಂಚ ಕೆಂಪಗೆ ಬಿಸಿಮಾಡಿರುವ ಕಲ್ಲಿದ್ದಲನ್ನು ಇರಿಸಿ. ಇದರಲ್ಲಿ ಪಾರಿವಾಳದ ಉಚ್ಛಿಷ್ಟಗಳನ್ನು ಹಾಕಿ ಹೊಗೆ ಬರುವಂತೆ ಮಾಡಿ.

ಈಗ ಮನೆಯ ಹಿರಿಯರಲ್ಲಿ ಒಬ್ಬರು ಈ ಮಡಕೆಯನ್ನು ಮನೆಯ ಎಲ್ಲಾ ಕೋಣೆಗಳಿಗೆ ಕೊಂಡು ಹೋಗಿ ಹೊಗೆ ಆವರಿಸುವಂತೆ ಮಾಡಲಿ. ಮನೆಯ ಅಂಗಳ, ಶೌಚಾಲಯ, ಹಿತ್ತಲು, ಒಟ್ಟಾರೆ ಜನರು ಹೋಗಬಹುದಾದ ಎಲ್ಲಾ ಸ್ಥಳಗಳಲ್ಲಿ ಈ ಹೊಗೆಯನ್ನು ಆವರಿಸುವಂತೆ ಮಾಡಿ. ಹೊಗೆ ಕಿಟಕಿಯಿಂದ ಹೊರಹೋಗುವ ಜೊತೆಗೇ ವೈಮನಸ್ಯಗಳನ್ನೂ ಕೊಂಡುಹೋಗುತ್ತದೆ ಹಾಗೂ ಮನೆಯವರ ನಡುವೆ ಸಾಮರಸ್ಯ ಮೂಡಲು ಸಾಧ್ಯವಾಗುತ್ತದೆ.

ಹೊಸ ಉದ್ಯೋಗ ಪಡೆಯಲು
ನಿರುದ್ಯೋಗಿಗಳು ಶೀಘ್ರವೇ ಕೆಲಸ ಸಿಗಲು ಹೀಗೆ ಮಾಡಿ: ಒಂದು ಹುಣ್ಣಿಮೆಯ ರಾತ್ರಿ ಎಲ್ಲಾ ದೇವರ ಪಟದ ಎದುರಿಗೂ ಒಂದೊಂದು ಹಣತೆ ಹಚ್ಚಿ ಅಗರಬತ್ತಿಗಳನ್ನು ಉರಿಸಿ ಪ್ರಾರ್ಥಿಸಿ. ಶೀಘ್ರವೇ ಶುಭಸುದ್ದಿ ಸಿಗುತ್ತದೆ.

ವಾಣಿಜ್ಯ ವಹಿವಾಟು ಉತ್ತಮಗೊಳ್ಳಲು
ನಿಮ್ಮ ವ್ಯಾಪಾರದಲ್ಲಿ ವೃದ್ಧಿ ಇಲ್ಲದಿದ್ದರೆ ಹೀಗೆ ಮಾಡಿ. ಒಂದು ಭಾನುವಾರದಂದು (ರಜೆ ಇರುವ ದಿನ) ಐದು ಲಿಂಬೆ ಹಣ್ಣುಗಳನ್ನು ಕತ್ತರಿಸಿ ಇದರ ಜೊತೆಗೆ ಕೆಲವು ಕಾಳುಮೆಣಸು ಮತ್ತು ಹಳದಿ ಸಾಸಿವೆ ಕಾಳುಗಳನ್ನು ಇರಿಸಿ. ಮರುದಿನ ಅಂಗಡಿ ತೆರೆದ ಬಳಿಕ ಈ ವಸ್ತುಗಳನ್ನು ಮೊತ್ತ ಮೊದಲು ಸಂಗ್ರಹಿಸಿ ಯಾರಿಗೂ ತಿಳಿಸದೇ ದೂರದ ಅಜ್ಞಾತ ಸ್ಥಳದಲ್ಲಿ ಹೂತು ಹಾಕಿ, ತಿರುಗಿ ನೋಡದೇ ವಾಪಸ್ಸಾಗಿ. ಇದರಿಂದ ವ್ಯಾಪಾರ ಉತ್ತಮಗೊಳ್ಳುತ್ತದೆ.

ಕಾಯಿಲೆಗಳಿಂದ ಪಾರಾಗಲು
ಒಂದು ವೇಳೆ ನಿಮ್ಮ ಹತ್ತಿರದವರಲ್ಲಿ ಯಾರಿಗಾದರು ಸೋಂಕುಕಾರಕ ರೋಗ ತಗುಲಿದ್ದರೆ ಹೀಗೆ ಮಾಡಿ: ಒಂದ್ ಚಿಕ್ಕ ಮಣ್ಣಿನ ಮಡಕೆಯಲ್ಲಿ ಒಂದು ಮೊಟ್ಟೆ, ಒಂದು ಲಾಡು, ಎರಡು ನಾಣ್ಯಗಳು, ಕೊಂಚ ಕುಂಕುಮ ಹಾಕಿ ಈ ಮಡಕೆಯನ್ನು ರೋಗಿಯ ತಲೆಯ ಮೇಲೆ ಸುತ್ತಿ ನಿವಾಳಿಸಿ. ಈ ಮಡಕೆಯನ್ನು ಬಳಿಕ ಯಾರೂ ಬಾರದ ಸ್ಥಳದಲ್ಲಿ ವಿಸರ್ಜಿಸಿ.

ತಪ್ಪು ತಿಳಿವಳಿಕೆಗಳನ್ನು ಸರಿಪಡಿಸಲು
ಕೆಲವೊಮ್ಮೆ ಒಂದೇ ವಿಷಯವನ್ನು ಇಬ್ಬರೂ ತಪ್ಪಾಗಿ ಗ್ರಹಿಸಿ ಮನಸ್ತಾಪ ಉಂಟಾಗಿದ್ದರೆ ಈಗೆ ಮಾಡಿ. ಏಳು ಗೋಮತಿ ಚಕ್ರ, ಏಳು ಚಿಕ್ಕ ತೆಂಗಿನ ಕಾಯಿ, ಏಳು ಮೋತಿ ಶಂಖ ಮತ್ತು ಹಳದಿ ಬಟ್ಟೆ. ಇಷ್ಟನ್ನೂ ಮನೆಯ ಎಲ್ಲಾ ಸದಸ್ಯರ ಸುತ್ತು ಸುತ್ತಿಸಿ ನಿವಾಳಿಸಿ ನಿಮ್ಮ ಮನೆಯ ಯಾವುದೇ ಪುಣ್ಯಕಾರ್ಯದ ಪವಿತ್ರ ಅಗ್ನಿಯಲ್ಲಿ ದಹಿಸಿ (ಹವನ ಅಥವಾ ಹೋಲಿಯ ಅಗ್ನಿ). ಇದರಿಂದ ಮನಸ್ತಾಪ ದೂರವಾಗುತ್ತದೆ.
*****

No comments:

Post a Comment