SEARCH HERE

Wednesday, 24 March 2021

ತ್ಯಾಗರಾಜರು tyagarajaru 1847 pushya krishna panchami


ಸಂತ ತ್ಯಾಗರಾಜರು - ಪುಷ್ಯ ಬಹುಳ ಪಂಚಮಿ ದಿನ ಬಂತೆಂದರೆ ಅದು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೊಂದು ಮಹತ್ವದ ದಿನ.   ಅದು ಸಂತ ತ್ಯಾಗರಾಜರ ಆರಾಧನೆಯನ್ನು ಎಲ್ಲೆಡೆ ಆಚರಿಸುವ ದಿನ. 

ಶ್ರೀ ತ್ಯಾಗರಾಜರು ಕರ್ನಾಟಕ ಸಂಗೀತ ಪದ್ಧತಿಯ ಪ್ರಮುಖ ರಚನಕಾರರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳು  ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಪ್ರಖ್ಯಾತರು. ಶ್ರೀರಾಮನ ಪರಮ ಭಕ್ತರಾದ ತ್ಯಾಗರಾಜರಿಗೆ, ಶ್ರೀರಾಮಚಂದ್ರ ಪ್ರಭುವನ್ನು ಎಷ್ಟು ಬಣ್ಣಿಸಿದರೂ ಸಾಲದು ಎಂದು ಹೇಳುವುದಕ್ಕಿಂತ, ಬಹುಶಃ ಶ್ರೀರಾಮಚಂದ್ರ ಪ್ರಭುವಿಗೇ ಅವರಿಂದ ಎಷ್ಟು ವಿಧದಲ್ಲಿ ಹಾಡಿಸಿಕೊಂಡರೂ ಮತ್ತಷ್ಟು ಬೇಕಿನಿಸುತ್ತಿತ್ತೇನೋ ಎಂಬ ಭಾವ ಅವರ ಸಂಗೀತ ಕೃತಿಗಳ ಗಾನವನ್ನು ಆಲಿಸುವ ಶ್ರೋತೃವಿನ ಅಂತರಾಳಕ್ಕೆ ಅನಿಸುತ್ತದೆ.

ಮೇ 4, 1767 (ಕೆಲವು ಚರಿತ್ರಜ್ಞರ ಪ್ರಕಾರ 1759) ರಲ್ಲಿ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮಮ್ ಮತ್ತು ಸೀತಮ್ಮನವರ ಪುತ್ರರಾಗಿ ತ್ಯಾಗರಾಜರು ಜನಿಸಿದರು. ಇವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನದಲ್ಲಿ ಕವಿ-ನ್ಸಂಗೀತಗಾರರಾಗಿದ್ದರು. ತ್ಯಾಗರಾಜರ ಮೊದಲ ಪತ್ನಿ ಪಾರ್ವತಮ್ಮ.  ಇವರ ನಿಧನದ ನಂತರ ಕಮಲಾಂಬಾರನ್ನು ಮದುವೆಯಾದರು.

ತ್ಯಾಗರಾಜರು ಸಂಗೀತದ ಮೊದಲ ಶಿಕ್ಷಣವನ್ನು ಶ್ರೀ ಸೊಂಟಿ ವೆಂಕಟರಮಣಯ್ಯನವರಿಂದ ಪಡೆದರು. ದೇವರನ್ನು ಅನುಭವಿಸುವ ದಾರಿಯಾಗಿ ಸಂಗೀತವನ್ನು ಕಂಡ ತ್ಯಾಗರಾಜರು ರಾಗ-ಮತ್ತು ತಾಳ-ಬದ್ಧ ಸಂಗೀತಕ್ಕಿಂತ ಭಾವಪೂರ್ಣ ಸಂಗೀತಕಕ್ಕೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು. 13ನೆಯ ವಯಸ್ಸಿನಲ್ಲಿಯೇ ತಮ್ಮ ಕೃತಿಗಳಲ್ಲಿ ಒಂದಾದ 'ನಮೋ ನಮೋ ರಾಘವ' ಕೃತಿಯನ್ನು ರಚಿಸಿದರು. ಇವರ  'ಎಂದರೋ ಮಹಾನುಭಾವುಲು' ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರು. ಅವರು ಶ್ರೀನಾರದರಿಂದ ತಮ್ಮ ಸಂಗೀತದ ಪಾಂಡಿತ್ಯಕ್ಕಾಗಿ ಆಶೀರ್ವಾದವನ್ನು ಪಡೆದ ಭಾವಪರವಶ ಸಂದರ್ಭದಲ್ಲಿ ಶ್ರೀನಾರದಮುನಿ ಕೃತಿಯನ್ನು ಹಾಡಿದರು ಎಂಬ ನಂಬಿಕೆಯಿದೆ.

ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳುನೂರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಕರ್ನಾಟಕ ಸಂಗೀತದ ಮಹಾಪುರುಷರೆಂದು ಪರಿಗಣಿತರಾಗಿದ್ದಾರೆ.

ತ್ಯಾಗರಾಜರು ತಮ್ಮ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು ತ್ಯಾಗರಾಜರೇ. ಘನರಾಗಗಳಾದ ನಾಟ, ಗೌಳ, ಆರಭಿ, ವರಾಳಿ ಮತ್ತು ಶ್ರೀ ರಾಗಗಳಲ್ಲಿ ಇವರು ರಚಿಸಿರುವ ವಿಶೇಷ ಕೃತಿಸಮೂಹವು ಘನರಾಗ ಪಂಚರತ್ನ ಎಂದು ಪ್ರಸಿದ್ಧಿಪಡೆದಿದೆ.  ಹೀಗೆಯೇ ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಮತ್ತು ಶ್ರೀರಂಗಂನ ರಂಗನಾಥನಮೇಲೆ ಇವರು ರಚಿಸಿರುವ ಐದೈದು ಕೃತಿಗಳ ಗುಂಪುಗಳು, ತಿರುವೊಟ್ರಿಯೂರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನಕೃತಿಗಳೆಂದೇ ಪ್ರಸಿದ್ಧವಾಗಿವೆ.

ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಲೇ ಸಾಗಿದ್ದರೆಂದು ತಿಳಿದುಬರುತ್ತದೆ. ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ಅವರು ತಮ್ಮ ಜೀವನದ ಕಡೆಯ ಹತ್ತು ದಿನಗಳಲ್ಲಿ ರಚಿಸಿದರೆಂದು ಅಭಿಪ್ರಾಯ ಪಡಲಾಗಿದೆ.

ತ್ಯಾಗರಾಜರು ಚಿಕ್ಕಂದಿನಲ್ಲಿ, ತಮ್ಮ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳಿಂದ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಇವರ ಹಲವು ಕೃತಿಗಳು ಪುರಂದರದಾಸರ ಕೆಲವು ಪದಗಳಲ್ಲಿ ಇರುವ ಭಾವನೆಯನ್ನೇ ವ್ಯಕ್ತ ಪಡಿಸುವುದು ಗಮನಾರ್ಹ. ಉದಾಹರಣೆಗೆ ರೇವಗುಪ್ತಿ ರಾಗದ 'ಗ್ರಹಬಲಮೇಮಿ' ಎಂಬ ಕೃತಿ ಪುರಂದರರ 'ಸಕಲ ಗ್ರಹಬಲನೀನೆ' ಎಂಬ ರಚನೆಯನ್ನು ಹೋಲುತ್ತಿದ್ದರೆ, ಜಿಂಗಲ ರಾಗದ 'ಅನಾಥುಡನು ಗಾನು' ಎಂಬ ರಚನೆ ಪುರಂದರ ದಾಸರ 'ನಿನ್ನಂಥ ತಾಯಿ ಎನಗುಂಟು ನಿನಗಿಲ್ಲ' ಎಂಬ ಉಗಾಭೋಗದ ಭಾವನೆಯನ್ನೇ ಹೇಳುತ್ತದೆ. ತ್ಯಾಗರಾಜರು ತಮ್ಮ ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ, ಪುರಂದರದಾಸರನ್ನು ಸ್ಮರಿಸಿದ್ದಾರೆ.

ತ್ಯಾಗರಾಜರ ಭಕ್ತಿ ಶ್ರೇಷ್ಠತೆಯು  ನಾದೋಪಾಸನೆಯ ಹಾದಿಯಲ್ಲಿ ಹರಿದು ಅವರನ್ನು ಮುಕ್ತಿ ಪದವಿಗೇರಿಸಿತು. ನಾದೋಪಾಸನೆಯಿಂದಲೂ ಮುಕ್ತಿಯನ್ನು ಗಳಿಸಬಹುದೆಂಬ ನಿಶ್ಚಲವಾದ ನಂಬಿಕೆಯನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪರಮೇಶ್ವರನನ್ನು ನಾದಶರೀರಿಯೆಂದು ವರ್ಣಿಸಿದ್ದಾರೆ (ನಾದ ತನುಮನಿಶಂ-ಚಿತ್ತ ರಂಜನಿ). ನಾದವಿದ್ಯೆ ಹರಿಹರಬ್ರಹ್ಮಾದಿಗಳಿಗೂ ಮಾನ್ಯವಾದದ್ದು ಎಂಬುದಾಗಿ ಕೀರ್ತಿಸಿದ್ದಾರೆ (ನಾದೋಪಾಸಚೇ-ಬೇಗಡ). ನಾದದಲ್ಲಿ ಲೀನವಾಗುವುದೇ ಬ್ರಹ್ಮಾನಂದ ಎಂದು ಕೀರ್ತಿಸಿದ್ದಾರೆ. (ನಾದಲೋಲುಡೈ-ಕಲ್ಯಾಣ ವಸಂತ). ಸಂಗೀತ ಜ್ಞಾನದಿಂದ ಇಹಪರಗಳೆರಡನ್ನೂ ಸಾಧಿಸಬಹುದೆಂದು ಸಾರಿದ್ದಾರೆ (ಸಂಗೀತಶಾಸ್ತ್ರ ಜ್ಞಾನಮು-ಮುಖಾರಿ). ಸಂಗೀತವಿಲ್ಲದೆ ಮೋಕ್ಷವಿಲ್ಲ ಎಂದು ಕೊರಳೆತ್ತಿ ಘೋಷಿಸಿದ್ದಾರೆ (ಮೋಕ್ಷಮು ಗಲದಾ-ಸಾರಮತಿ).

ತ್ಯಾಗರಾಜರ ಆಡುಭಾಷೆ ತೆಲುಗು. ಅವರ ರಚನೆಗಳಲ್ಲಿ ಬಹುಭಾಗ ತೆಲುಗು ಭಾಷೆಯವು. ಸಂಸ್ಕೃತ ಭಾಷೆಯಲ್ಲಿಯೂ ಅವರದು ಪ್ರಗಲ್ಭವಾದ ಪಾಂಡಿತ್ಯ. ಸಂಸ್ಕೃತದಲ್ಲಿ ರಚಿತವಾಗಿರುವ ಅವರ ಕೃತಿಗಳೂ ಗಣನೀಯ. ಜಗದಾನಂದಕಾರಕ (ನಾಟ), ಸಾಮಜವರಗಮನ (ಹಿಂದೋಳ), ಸುಜನ ಜೀವನ (ಖಮಾಚ್), ಈಶ ಪಾಹಿ ಮಾಂ (ಕಲ್ಯಾಣಿ), ಕ್ಷೀರಸಾಗರ ವಿಹಾರ (ಆನಂದ ಭೈರವಿ), ನಾದತನುಮನಿಶಂ (ಚಿತ್ತರಂಜನಿ), ನಿರವದಿs ಸುಖದ (ರವಿಚಂದ್ರಿಕಾ), ದೇವಾದಿ ದೇವ (ಸಿಂಧುರಾಮಕ್ರಿಯ), ದೇಹಿ ತವಪದಭಕ್ತಿಂ (ಶಹನ), ಗಿರಿರಾಜಸುತಾತನಯ (ಬಂಗಾಳ), ಪಾಹಿ ರಾಮದೂತ (ವಸಂತವರಾಳಿ) ಇವೇ ಮೊದಲಾದವು ಅವರ ಪ್ರಸಿದ್ಧವಾದ ಸಂಸ್ಕೃತ ರಚನೆಗಳಲ್ಲಿ ಕೆಲವು.

ತ್ಯಾಗರಾಜರು ಶ್ರೀರಾಮನ ದರ್ಶನವನ್ನು ಪಡೆದು ಕೃತಕೃತ್ಯರಾದವರೆಂಬುದು ಅವರದೇ ಆದ ಗಿರಿಪೈನೆಲಕೇನ-ಶಹನ, ಭವನುತ-ಮೋಹನ, ಪರಮಾತ್ಮುಡು-ವಾಗದಿsಶ್ವರಿ, ಪರಿತಾಪಮು-ಮನೋಹರಿ, ಕನುಗೊಂಟನಿ-ಬಿಲಹರಿ ಮುಂತಾದ ಕೆಲವು ರಚನೆಗಳಿಂದ ತಿಳಿದುಬರುತ್ತದೆ. ತಮ್ಮ ನಿರ್ಯಾಣ ಸಮಯ ಸಮೀಪಿಸುತ್ತಿರುವದನ್ನರಿತ ತ್ಯಾಗರಾಜರು ನಾದಬ್ರಹ್ಮಾನಂದರೆಂಬ ಆಶ್ರಮನಾಮದಿಂದ ಸನ್ಯಾಸದೀಕ್ಷೆಯನ್ನು ಸ್ವೀಕರಿಸಿ, ಪರಾಭವ ಸಂವತ್ಸರ ಪುಷ್ಯ ಬಹುಳ ಪಂಚಮಿ (6-1-1847)ಯಂದು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿ ವಿಶ್ವಾತ್ಮನಲ್ಲಿ ಲೀನವಾದರು.

ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಕಾಣಿಕೆಯ ನೆನಪಾಗಿ ಪ್ರತಿ ವರ್ಷ ತಿರುವಯ್ಯಾರಿನಲ್ಲಿ ಪುಷ್ಯ ಬಹುಳ ಪಂಚಮಿಯಂದು (ಜನವರಿ ಅಥವ ಫೆಬ್ರವರಿ ತಿಂಗಳುಗಳ ಸಮಯ) "ತ್ಯಾಗರಾಜ ಆರಾಧನೆ" ಉತ್ಸವ ನಡೆಯುತ್ತದೆ.  ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧವಾಗಿ ಹಲವಾರು ದಿನಗಳ ಸಂಗೀತ ಕಚೇರಿಗಳು ನಡೆಯುತ್ತವಾದರೂ ತ್ಯಾಗರಾಜರ ಆರಾಧನೆಯದಿನ ಅಸಂಖ್ಯಾತ ಸಂಗೀತಗಾರರು ಒಟ್ಟಾಗಿ ಸೇರಿ ನಡೆಸುವ ಗೋಷ್ಠಿಗಾನದಲ್ಲಿ ಮೂಡಿಬರುವ ಪಂಚರತ್ನಕೃತಿಗಳನ್ನು ಕೇಳುವುದು ಮೈಜುಮ್ಮೆನಿಸುವಂತಹ ಅನುಭವವನ್ನು ನೀಡುವಂತದ್ದು. ಪ್ರಸಕ್ತ ವರ್ಷದಲ್ಲಿ  ಈ ಗಾಯನ ಇಂದು ನಡೆಯುತ್ತಿದೆ.   ನಮ್ಮ ಶ್ರೀರಂಗಪಟ್ಟಣದಲ್ಲಿ ನಡೆಯುವ ತ್ಯಾಗರಾಜ ಆರಾಧನೆಯೂ ಪ್ರಸಿದ್ಧಿ ಪಡೆದಿದೆ.  ಇದಲ್ಲದೆ ಭಾರತದಲ್ಲಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ತ್ಯಾಗರಾಜರ ಸ್ಮರಣೆಯ ಕಾರ್ಯಕ್ರಮಗಳು ನಡೆಯುತ್ತವೆ.  ಅವರ ಗಾನಲಹರಿಯಂತೂ ದಕ್ಷಿಣ ಭಾರತೀಯ ಪರಂಪರೆಯ ತನು ಮನಗಳಲ್ಲಿ ಚಿರಸ್ಥಾಯಿ.  ಈ ಅಮರ ತಪಸ್ವಿ ತ್ಯಾಗರಾಜರಿಗೆ ನಮ್ಮ ಪಾದಾಭಿವಂದನೆಗಳು.

ಕಾಕರ್ಲಾನ್ವಯಭೂಷಣಂ ಕವಿವರಂ ಕಾಮಾರಿ ಸೇವಾರತಂ |
ಸಾಕೇತಾದಿsಪ ಪಾದ ಪಂಕಜಯುಗಭೃಂಗಂ ಜಗದ್ವಂದಿತಂ ||
ನಾದೋಪಾಸನ ಲಬ್ಧ ಶಾಶ್ವತ ಪದಂ ಪಂಚಾಪಗ ಕ್ಷೇತ್ರಿಣಂ |
ವೇದಾಂತಾಮೃತವರ್ಷಿಣಂ ನರವರುಂ ಶ್ರೀತ್ಯಾಗರಾಜಂ ಭಜೇ ||
*****
ಶ್ರೀ ತ್ಯಾಗರಾಜರು (೧೭೬೭? - ೧೮೪೭) - ಶ್ರೀ ತ್ಯಾಗರಾಜರು (ತೆಲುಗು:త్యాగరాజు) ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯ ರಚನಕಾರರಲ್ಲಿ ಒಬ್ಬರು. ಮುತ್ತುಸ್ವಾಮಿ ದೀಕ್ಷಿತ ಮತ್ತು ಶ್ಯಾಮಾ ಶಾಸ್ತ್ರಿ ಇವರ ಜೊತೆಯಲ್ಲಿ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಅವರು ಶ್ರೀರಾಮನ ಪರಮ ಭಕ್ತರಾಗಿದ್ದರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವ-ದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳುನೂರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಕರ್ನಾಟಕ ಸಂಗೀತದ ಮೂಲಪುರುಷರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ.

ಜೀವನ ಸಂಪಾದಿಸಿ

ಮೇ ೪, ೧೭೬೭ (ಕೆಲವು ಚರಿತ್ರಜ್ಞರ ಪ್ರಕಾರ ೧೭೫೯) ರಲ್ಲಿ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮಮ್ ಮತ್ತು ಸೀತಮ್ಮನವರ ಪುತ್ರರಾಗಿ ತ್ಯಾಗರಾಜರು ಜನಿಸಿದರು. ಇವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನದಲ್ಲಿ ಕವಿ-ಸಂಗೀತಗಾರರಾಗಿದ್ದರು. ತ್ಯಾಗರಾಜರ ಮೊದಲ ಪತ್ನಿ ಪಾರ್ವತಮ್ಮ - ಇವರ ನಿಧನದ ನಂತರ ಕಮಲಾಂಬಾರನ್ನು ಮದುವೆಯಾದರು.

ಸಂಗೀತ ಸಂಪಾದಿಸಿ

ತ್ಯಾಗರಾಜರು ಸಂಗೀತದ ಮೊದಲ ಶಿಕ್ಷಣವನ್ನು ಶ್ರೀ ಸೊಂಟಿ ವೆಂಕಟರಮಣಯ್ಯನವರಿಂದ ಪಡೆದರು. ದೇವರನ್ನು ಅನುಭವಿಸುವ ದಾರಿಯಾಗಿ ಸಂಗೀತವನ್ನು ಕಂಡ ತ್ಯಾಗರಾಜರು ಭಾವ ಪೂರ್ಣ ಸಂಗೀತಕ್ಕೆ ರಾಗ- ಮತ್ತು ತಾಳ-ಬದ್ಧ ಸಂಗೀತಕ್ಕಿ೦ತ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದವರು. ೧೩ ನೇಯ ವಯಸ್ಸಿನಲ್ಲಿಯೇ ತಮ್ಮ ಕೃತಿಗಳಲ್ಲಿ ಒಂದಾದ "ನಮೋ ನಮೋ ರಾಘವ" ವನ್ನು ರಚಿಸಿದರು. ಇವರ "ಎಂದರೋ ಮಹಾನುಭಾವುಲು" ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರು. ಅವರು ಶ್ರೀ ನಾರದರಿಂದ ತಮ್ಮ ಸಂಗೀತದ ಪಾಂಡಿತ್ಯಕ್ಕಾಗಿ ಆಶೀರ್ವಾದವನ್ನು ಪಡೆದ ಸಂದರ್ಭದಲ್ಲಿ ಶ್ರೀ ನಾರದ ಮುನಿ ಕೃತಿಯನ್ನು ಹಾಡಿದರು ಎಂಬ ನಂಬಿಕೆ.

ಪುರಂದರದಾಸರ ಪ್ರಭಾವ ಸಂಪಾದಿಸಿ

ತ್ಯಾಗರಾಜರು ಚಿಕ್ಕಂದಿನಲ್ಲಿ, ಅವರ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳಿಂದ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಇವರ ಹಲವು ಕೃತಿಗಳು ಪುರಂದರದಾಸರ ಕೆಲವು ಪದಗಳಲ್ಲಿ ಇರುವ ಭಾವನೆಯನ್ನೇ ವ್ಯಕ್ತ ಪಡಿಸುವುದು ಗಮನಾರ್ಹ. ಉದಾಹರಣೆಗೆ ರೇವಗುಪ್ತಿ ರಾಗದ ಗ್ರಹಬಲಮೇಮಿ ಎಂಬ ಕೃತಿ ಪುರಂದರರ ಸಕಲ ಗ್ರಹಬಲನೀನೆ ಎಂಬ ರಚನೆಯನ್ನು ಹೋಲುತ್ತಿದ್ದರೆ, ಜಿಂಗಲ ರಾಗದ ಅನಾಥುಡನು ಗಾನು ಎಂಬ ರಚನೆ ಪುರಂದರ ದಾಸರ ನಿನ್ನಂಥ ತಾಯಿ ಎನಗುಂಟು ನಿನಗಿಲ್ಲ ಎಂಬ ಉಗಾಭೋಗದ ಭಾವನೆಯನ್ನೇ ಹೇಳುತ್ತದೆ. ತ್ಯಾಗರಾಜರು ಅವರ ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ, ಪುರಂದರದಾಸರನ್ನು ಸ್ಮರಿಸಿದ್ದಾರೆ.

ಪಂಚರತ್ನ ಕೃತಿಗಳು ಸಂಪಾದಿಸಿ

ತ್ಯಾಗರಾಜರು ಅವರ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು ತ್ಯಾಗರಾಜರೇ. ಘನರಾಗಗಳಾದ ನಾಟ,ಗೌಳ,ಆರಭಿ,ವರಾಳಿ ಮತ್ತು ಶ್ರೀ ರಾಗಗಳಲ್ಲಿ ಇವರು ರಚಿಸಿರುವ ವಿಶೇಷ ಕೃತಿಸಮೂಹಕ್ಕೆ ಘನರಾಗ ಪಂಚರತ್ನ ಎಂದು ಕರೆಯಲಾಗುತ್ತೆ. ಹೀಗೇ ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಮತ್ತು ಶ್ರೀರಂಗಂ ನ ರಂಗನಾಥನಮೇಲೆ ಇವರು ರಚಿಸಿರುವ ಐದೈದು ಕೃತಿಗಳ ಗುಂಪುಗಳು, ತಿರುವೊಟ್ರಿಯೂರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನ ಕೃತಿಗಳೆಂದೇ ಪ್ರಸಿದ್ಧವಾಗಿವೆ.

ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಿದ್ದರೆಂದು ತಿಳಿದುಬಂದಿದೆ. ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ಅವರು ತಮ್ಮ ಜೀವನದ ಕಡೆಯ ಹತ್ತು ದಿನಗಳಲ್ಲಿ ರಚಿಸಿದರೆಂದು ಅಭಿಪ್ರಾಯ ಪಡಲಾಗಿದೆ.

ತ್ಯಾಗರಾಜ ಆರಾಧನೆ ಸಂಪಾದಿಸಿ

ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಕಾಣಿಕೆಯ ನೆನಪಾಗಿ ಪ್ರತಿ ವರ್ಷ ತಿರುವಯ್ಯಾರಿನಲ್ಲಿ ಪುಷ್ಯ ಬಹುಳ ಪಂಚಮಿಯಂದು (ಜನವರಿ ಅಥವಾ ಫೆಬ್ರವರಿ ತಿ೦ಗಳುಗಳ ಸಮಯ) "ತ್ಯಾಗರಾಜ ಆರಾಧನೆ" ಉತ್ಸವ ನಡೆಯುತ್ತದೆ. ಅನೇಕ ಮುಖ್ಯ ಸಂಗೀತಗಾರರ ಕಛೇರಿಗಳು ಈ ಸಮಯದಲ್ಲಿ ನಡೆಯುವುದುಂಟು. ವರ್ಷದ ಬೇರೆಬೇರೆ ಸಮಯಗಳಲ್ಲಿ ಅಮೆರಿಕದಲ್ಲೂ ವಿವಿಧೆಡೆಗಳಲ್ಲಿ ತ್ಯಾಗರಾಜ ಆರಾಧನೆ ನಡೆಯುತ್ತದೆ!

ನಿಧನ ಸಂಪಾದಿಸಿ


ತ್ಯಾಗರಾಜರು ಜನವರಿ ೬, ೧೮೪೭ ರಂದು ನಿಧನರಾದರು.
*****
2021 Feb 3
ದುರಿತ ವ್ರಾತಮುಲೆಲ್ಲನು
ಬರಿಮಾರ್ಚೆಡಿ
ಹರಿಗುಣಮುಲು ಪಾಡುಚುನೆಪುಡುನ್
ಪರವಶುಡೈ ವೆಲಯು
ಪುರಂ -
ದರದಾಸುನಿ
ಮಹಿಮಮುಲನು
ದಲಚೆದನ್ ಮದಿಲೋನ್
ಶ್ರೀ ತ್ಯಾಗರಾಜರ ಉಕ್ತಿ- ಭಕ್ತಿ

ಶ್ರೀಮತ್ಪುರಂದರದಾಸಾರ್ಯರ ಕೃತಿಗಳು ಅವರ ತಾಯಿಯಿಂದಲೆ ಶ್ರವಣ ಮಾಡಿ ದಾಸಾರ್ಯರ ಹಾದಿಯಲ್ಲೆ ನಡೆದು ಕರ್ನಾಟಕ ಸಂಗೀತಕ್ಕೆ ದೊಡ್ಡ ಮಣಿ ಹಾಕಿದ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ..

ಇಂಥಾ ವಾಗ್ಗೇಯಕಾರರನ್ನು ನೆನೆಯುವ ಕರ್ತವ್ಯವೂ ನಮ್ಮದು.. 🙏🏽
****

ತ್ಯಾಗಬ್ರಹ್ಮ ಸಂತ ಶ್ರೀ ತ್ಯಾಗರಾಜರು. 
ಪುಷ್ಯ ಬಹುಳ ಪಂಚಮಿ ದಿನ ಬಂತೆಂದರೆ ಅದು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೊಂದು ಮಹತ್ವದ ದಿನ. ಅದು ಸಂತ ತ್ಯಾಗರಾಜರ ಆರಾಧನೆಯನ್ನು ಎಲ್ಲೆಡೆ ಆಚರಿಸುವ ದಿನ.
ಶ್ರೀ ತ್ಯಾಗರಾಜರು ಕರ್ನಾಟಕ ಸಂಗೀತ ಪದ್ಧತಿಯ ಪ್ರಮುಖ ರಚನಕಾರರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳು ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಪ್ರಖ್ಯಾತರು
ಜನಿಸಿದ್ದು 1767ರ ಮೇ 4ರಂದು, ಕಾವೇರಿ ನದಿ ತೀರದ ತಿರುವರೂರ್‌ನಲ್ಲಿ. ಇದು ತಂಜಾವೂರಿಗೆ ಸಮೀಪದಲ್ಲಿದೆ. ತ್ಯಾಗರಾಜರು ರಾಮನ ಭಕ್ತರು. ಅವರು ತಮ್ಮ ಮಾತೃಭಾಷೆಯಾದ ತೆಲುಗಿನಲ್ಲಿ ಮತ್ತು ಸಂಸ್ಕೃತದಲ್ಲಿ ಕೀರ್ತನೆಗಳನ್ನು ರಚಿಸಿದರು. ಸಂಗೀತವು ಭಕ್ತಿಯ ಹಾದಿ ಎಂದು ಅವರು ಹೇಳಿದರು.ತ್ಯಾಗರಾಜರ ಭಕ್ತಿ ಶ್ರೇಷ್ಠತೆಯು ನಾದೋಪಾಸನೆಯ ಹಾದಿಯಲ್ಲಿ ಹರಿದು ಅವರನ್ನು ಮುಕ್ತಿ ಪದವಿಗೇರಿಸಿತು. ನಾದೋಪಾಸನೆಯಿಂದಲೂ ಮುಕ್ತಿಯನ್ನು ಗಳಿಸಬಹುದೆಂಬ ನಿಶ್ಚಲವಾದ ನಂಬಿಕೆಯನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ವ್ಯಕ್ತಪಡಿಸಿದ್ದಾರೆ.
ತ್ಯಾಗರಾಜರು ಪೂಜಿಸುತ್ತಿದ್ದ ರಾಮನ ಮೂರ್ತಿಯನ್ನು ಸಹೋದರ ಒಂದು ದಿನ ನದಿಗೆ ಎಸೆದ. ದುಃಖತಪ್ತರಾದ ತ್ಯಾಗರಾಜರು ನದಿಯ ದಂಡೆ ಬಳಿ ಓಡಿಹೋಗಿ, ಮರಳಿ ಬರುವಂತೆ ರಾಮನನ್ನು ಕೀರ್ತನೆಗಳ ಮೂಲಕ ಕರೆದರು. ಆಗ ಆ ಮೂರ್ತಿ ಪುನಃ ಮೇಲೆ ಬಂತು!
1847ರ ಜನವರಿ 6ರಂದು ತ್ಯಾಗರಾಜರು ಇಹಲೋಕ ತ್ಯಜಿಸಿದರು. ಪ್ರತಿ ವರ್ಷ ತ್ಯಾಗರಾಜರ ಆರಾಧನಾ ಮಹೋತ್ಸವದ ದಿನ ಅವರ ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ, ತಿರುವೈಯಾರಿನಲ್ಲಿರುವ ಅವರ ಸಮಾಧಿ ಬಳಿ ಸೇರುತ್ತಾರೆ.ವಿಶ್ವದ ಎಲ್ಲಾ ಕರ್ನಾಟಕ ಸಂಗೀತ ವಿದ್ವಾಂಸರು ಈ ಪ್ರದೇಶಕ್ಕೆ ಆಗಮಿಸಿ, ಶ್ರೀರಾಮನ ಭಕ್ತ ಶ್ರೇಷ್ಠರೊಬ್ಬರು ಬರೆದು ಹಾಡಿರುವ ಪಂಚ ರತ್ನ ಕೀರ್ತನೆಯನ್ನು ಹಾಡುತ್ತಾರೆ. ಐದು ದಿನಗಳ ಈ ಸಂಗೀತ ಉತ್ಸವವು ತಮಿಳುನಾಡಿನಲ್ಲಿ ಅತ್ಯಂತ ಆಕರ್ಷಣೆಯಾಗಿದೆ.
ತ್ಯಾಗಬ್ರಹ್ಮ ಎಂದು ಗೌರವಯುತವಾಗಿ ಕರೆಯಲ್ಪಡುವ ತ್ಯಾಗರಾಜರು, ತಮ್ಮ ಶಿಷ್ಯರೊಂದಿಗೆ ಇದೇ ಪ್ರದೇಶದಲ್ಲಿ ಸುಮಾರು 24,000 ಶ್ರೀರಾಮನ ಕೃತಿಗಳನ್ನು ರಚಿಸಿ ಹಾಡಿದ್ದರು. ಈ ಮೂಲಕ ಶ್ರೀರಾಮನ ಆಶೀರ್ವಾದದೊಂದಿಗೆ ಮನಃಶಾಂತಿಯನ್ನು ಪಡೆದುಕೊಂಡಿದ್ದರು.

ಶ್ರೀರಾಮ ಜಯರಾಮ ಜಯಜಯ ರಾಮ
****



No comments:

Post a Comment