narasimha jayanthi (vaishAka shuddha chaturdashI)....
Narsimha Jayanti is another important festival among the Hindus and is celebrated on Vaisakh Chaturdashi (14th day) of the Shukla Paksh. Narsimha is the fourth incarnation of it Lord Vishnu where he appeared as a man-lion that is the face was like a lion and the trunk was like a man. He had killed demon Hiranyakashipu on this day. All Lord Vishnu devotees also observe fast on this day.
It is known that Narsimha appeared during the sunset on Chaturdashi and that is why the puja is performed during those hours. The purpose of Narasimha Jayanti is to remove adharm and to follow the path of dharam. Dharam is to perform correct deeds and not harm anyone.
Rituals of the day
Special puja is performed on this day with idol or picture of Lord Narsimha and Goddess Laxmi.
Devotee should wake up early during the Brahma muhurat and take a bath. He or she should wear new and fresh clothes.
Devotees should perform puja and offer gram dal and jaggery to the deity. The puja ceremony should be done with friends and relatives offering items like flowers, sweets, kumkum, kesar and coconut.
Fast on this day starts with sunrise and continues until the next day’s sunrise. One can have one in the day that should be without any kind of cereals or grains.
Narsimha mantra should be recited with rudraksha mala to please and the God and attain a more meaningful life.
It is good to donate clothes, precious metals, and sesame seeds on this day to the poor.
***********
Vaishakha Shukla Chaturdashi is celebrated as Narasimha Jayanti. Lord Narasimha was the 4th incarnation of Lord Vishnu. On Narasimha Jayanti day Lord Vishnu appeared in the form of Narasimha, a half lion and half man, to kill Demon Hiranyakashipu.
The combination of Vaishakha Shukla Chaturdashi with Swati Nakshatra and weekday Saturday is considered highly auspicious to observe Narasimha Jayanti Vratam.
The rules and guidelines to observe Narasimha Jayanti fasting are similar to those of Ekadashi fasting. Devotees eat only single meal one day before Narasimha Jayanti. All type of grains and cereals are prohibited during Narasimha Jayanti fasting. Parana, which means breaking the fast, is done next day at an appropriate time.
On Narasimha Jayanti day devotees take Sankalpa during Madhyanha (Hindu afternoon period) and perform Lord Narasimha Puja during Sandhyakala before sunset. It is believed that Lord Narasimha was appeared during sunset while Chaturdashi was prevailing. It is advised to keep night vigil and perform Visarjan Puja next day morning. The fast should be broken on next day after performing Visarjan Puja and giving Dana to Brahmin.
Narasimha Jayanti fast is broken next day after sunrise when Chaturdashi Tithi is over. If Chaturdashi Tithi gets over before sunrise then fast is broken any time after sunrise after finishing Jayanti rituals. If Chaturdashi gets over very late i.e. if Chaturdashi prevails beyond three-fourth of Dinamana then fast can be broken in first half of Dinamana. Dinamana is time window between sunrise and sunset.
The Appearance of Lord Narasimha
Hiranyakashipu, the king of the demons, wanted to become immortal. He undertook severe penances at Mandarachala to please Lord Brahma. When Lord Brahma appeared in front of him, he asked for immortality. But even Brahma was not immortal. How could he grant immortality to someone? So Brahma agreed to give him any benediction other than immortality. So the demon asked Brahma that he should not be killed by human being or animal or demigod or any other entity, living or non-living. He also prayed that he should not be killed at any place, neither in the daytime nor at Narasimha Jayantinight, by any kind of weapons. He further requested to award him supremacy over the entire universe and perfection in mystic powers. After receiving the benedictions from Lord Brahma, Hiranyakashipu terrorized the entire universe. He conquered the ten directions and brought every one under his control.
When Hiranyakashipu went to Mandarachala to execute severe austerities, his wife, Kayadhu, was pregnant. The demigods headed by Indra attacked the demons and arrested Kayadhu. They wanted to kill the child as soon as it took birth. Narada Maharishi stopped Indra and revealed that the child would be a great devotee of Lord Hari. He took Kayadhu to his hermitage and gave her instructions on spiritual knowledge. The child in the womb of Kayadhu attentively listened to the instructions of Narada Maharishi and became a great devotee of Lord Vishnu.
Hiranyakashipu entrusted his son Prahlada to Chanda and Amarka, the two sons of Shukracharya, for education. They tried to teach him politics, economics and other material activities; but Prahlada did not care for such instructions. He was always meditating on the Supreme Lord. When Hiranyakashipu came to know about this, he was extremely angry and chastised the teachers for teaching the child about vishnu-bhakti. But when it was proved that they were innocent, he decided to kill the child.The order carriers of the demoniac king tried to kill the child by striking him with deadly weapons, putting him under the feet of elephants, subjecting him to hellish conditions, throwing him from the peak of a mountain. But they could not kill him.
Hiranyakashipu became more and more agitated. He challeged Prahlada, “Where is your God?” and Prahlada replied that God resided everywhere. Pointing to one of the pillars in the palace Narasimha JayantiHiranyakashipu asked: “Is your God within this pillar?” and the child answered “Yes. He is.” At once he forcefully stuck the pillar and shattered it into pieces. The Lord instantly appeared from inside the pillar as Narasimha, and killed Hiranyakashipu with His nails. He was neither in the form of a human nor an animal. He used His nails as weapon and killed the demon at twilight (neither day nor night) sitting in the threshold of the palace (neither inside nor outside) by keeping him on His own lap. Thus the Supreme Lord killed the demon without violating any of the benedictions awarded by Lord Brahma. He appeared out of the pillar to substantiate the statement made by Prahlada. Thus he came to be known as bhakta-vatsala.
Worship Of Lord Narasimha
Lord Narasimha is worshipped on the day of Narasimha Jayanti. A person should wake up early in Brahmi Muhurta and take a bath. He /she should then wear clean (washed) clothes and should offer prayers to Lord Narasimha. An idol of Goddess Lakshmi should be placed with Lord Narasimha. Both should be worshipped with devotion and dedication. The following items should be used in the prayer : fruits, flowers, five sweets, Kumkum, Turmeric, Sandalwood,Kesar, Coconut, Rice,Bilwapatram,Hibiscus Flower, Ganga jal etc. For Naivedyam,Rice & Channadal Payasam or Athirasa,Mango Chitranna,Jaggery Panakam,Kosambaris,Palyas,Rasam,etc.,
To impress Lord Narasimha, a person should sit in isolation and should recite Narasimha mantra with a Rudraksha mala. A person who keeps a fast should donate sesame seeds, gold, clothes etc. on this day. A person who keeps a fast on this day is relieved of all problems. Lord Narasimha blesses his devotees and all his wishes come true.
Narasimha Mantra
ॐ उग्रं वीरं महाविष्णुं ज्वलन्तं सर्वतोमुखम् I
नृसिंहं भीषणं भद्रं मृत्यु मृत्युं नमाम्यहम् II
ॐ नृम नृम नृम नर सिंहाय नमः ।
Reciting these mantras, a person is relieved from all problems and is blessed by Lord Narasimha.
************
ವೈಶಾಖ ಮಾಸದ ಹಾಗೂ ಅಕ್ಷಯತೃತೀಯಾ ಶ್ರೀ ಕ್ಷೇತ್ರ ತೊರವಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಗೆ ಮನ್ಯೂಸೂಕ್ತಪುನ:ಚ್ಚರಣ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ ಗೆ ಮಾಹಾನೈವೇದ್ಯ ಮಾಹಾಮಂಗಳಾರತಿ
***********
read more in kannada
click
ನರಸಿಂಹ ನೃಸಿಂಹ ಕ್ಷೇತ್ರ ದರ್ಶನ
********
ನರಸಿಂಹ ಜಯಂತಿಯ ಹಾರ್ಥಿಕ ಶುಭಾಶಯಗಳು 💐💐
ಕಾರುಣ್ಯಮೂರ್ತಿ ನರಸಿಂಹ ದೇವರ ನೆನೆಯದ ಜನ್ಮವೇ ವ್ಯರ್ಥ
ವೈಶಾಖ ಮಾಸದಲ್ಲಿ ಅಕ್ಷಯ ತೃತೀಯದ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀ ನರಸಿಂಹ ದೇವರ ಅವತಾರವು ನಾಲ್ಕನೆಯದು. ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು.
ನೃಸಿಂಹಾತಾರದಲ್ಲಿ ಉಳಿದ ಎಲ್ಲಾ ಅವತಾರಗಳಂತೆ ದುಷ್ಟ ಶಿಕ್ಷಣ ಶಿಷ್ಟ ಪರಿಪಾಲನಗಳ ಜೊತೆಗೆ ಭಗವಂತನು ಅಸಾಧಾರಣವಾದ ತನ್ನ ನೈಜ ವಿಭೂತಿಯನ್ನು ಭಗವತ್ ತತ್ತ್ವವನ್ನೂ ಸ್ಪಷ್ಟವಾಗಿ
ಪ್ರಕಟಪಡಿಸಿದ್ದಾನೆ.
ಹಿರಣ್ಯಕಶಿಪು ಸಾಮಾನ್ಯ ವ್ಯಕ್ತಿಯಲ್ಲ ; ವೈಕುಂಠವಾಸಿಯೇ ಆಗಿದ್ದು ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಿ ಕಠಿಣ ತಪಸ್ಸಿನಿಂದ ಬ್ರಹ್ಮನಿಂದ ವರಪಡೆದು, ಮೂರು ಲೋಕಗಳನ್ನು ಗೆದ್ದ ಜಗತ್ ವಿಜೇತ. ಜನರು ಹೇಳುವ ದೇವರು ಎಂಬುದು ಇರುವುದಾದರೆ ಅದು ನಾನೇ ಅಲ್ಲದೇ ಬೇರೆ ಯಾರೂ ಇಲ್ಲ ಎಂಬ ದುರಾಗ್ರಹಿ. ಇಂಥಹವನಿಗೆ ಮಗ ಭಕ್ತಪ್ರಹ್ಲಾದ ಮಾತಿನಲ್ಲಿ ನಂಬಿಕೆ ಬರಲಿಲ್ಲ, ಅವನಿಗೆ ಬೇಕು ಪ್ರತ್ಯಕ್ಷ ಪ್ರತೀತಿ. ನಿನ್ನ ವಿಷ್ಣುವು ಎಲ್ಲಾ ಕಡೆ ಇರುವುದಾದರೇ ಈ ಕಂಬದಲ್ಲಿದ್ದಾನೋ? ಆಗ ನಿರ್ಭಯನಾದ ಶ್ರದ್ಧಾವಂತನಾದ ಪ್ರಹ್ಲಾದನು ಕೊಟ್ಟ ಉತ್ತರವೂ ಅಷ್ಟೇ ಸ್ಪಷ್ಟ ಹಾಗೂ ನಿಸ್ಸಂದಿಗ್ದವಾಗಿತ್ತು. ಎಲ್ಲೆಲ್ಲೂ ಇರುವವನು ಈ ಕಂಬದಲ್ಲಿ ಮಾತ್ರ ಏಕಿಲ್ಲ ಕಂಬದಲ್ಲಿ ಇಲ್ಲ ಎಂದರೆ ಭಗವಂತನ ಸರ್ವವ್ಯಾಪಕತ್ವಕ್ಕೆ ಅಡ್ಡಿ ಬರುವುದಿಲ್ಲವೇ? ಕಂಬದಲ್ಲೂ ಬಿಂಬದಲ್ಲೂ ಎಲ್ಲೆಡೆಯೂ ಇದ್ದಾನೆ, ಎಂದಾಗ ಹಿರಣ್ಯಕಶಿಪು ಕಂಬವನ್ನು ಝಾಡಿಸಿದಾಗ ಆ ಜಡ ಕಂಬದಲ್ಲಿ ಚಿನ್ಮಯನಾದ ನರಸಿಂಹ ರೂಪದಿಂದ ಭಗವಂತನು ಪ್ರಕಟಗೊಂಡು ದೈತ್ಯ ಹಿರಣ್ಯಕಶಿಪುವನ್ನು ಸಂಹಾರಗೈಯುತ್ತಾನೆ.
ನರಸಿಂಹನ ಮೂರ್ತಿಯಲ್ಲಿ ಮನುಷ್ಯದೇಹ ಮತ್ತು ಸಿಂಹದ ಮುಖವನ್ನು ನೋಡುತ್ತೇವೆ. ಜೀವವಿಕಾಸವಾದ ಅನುಗುಣವಾಗಿ ದಶಾವತಾರಗಳಿಗೆ ವ್ಯಾಖ್ಯಾನ ಮಾಡುತ್ತಾ, ಕೇವಲ ಜಲಚರ ಪ್ರಾಣಿಯಾಗಿ ಮೀನು-ಮತ್ಸ್ಯಾವತಾರದಿಂದ ವಿಕಾಶದೆಶೆ ಪ್ರಾರಂಭ. ಜಲಸ್ಥಳಗಳೆರಡರಲ್ಲೂ ಸಂಚರಿಸುತ್ತಾ ಮುಂದಿನ ಘಟ್ಟ ಆಮೆ ಕೂರ್ಮಾವತಾರದ ಭಾವನೆಗೆ ಕಾರಣವಾಯ್ತು. ಅದಕ್ಕಿಂತಲೂ ಹೆಚ್ಚು ವಿಕಾಸವುಳ್ಳದಾಗಿರುವ ಘೋರ ಪರಾಕ್ರಮವುಳ್ಳ ಹಂದಿ ವರಾಹವತಾರವು ಅನಂತರ ಬರುವುದು. ಸಿಂಹಮುಖ ನರದೇಹದ ನರಸಿಂಹ ಅವತಾರದ ನಂತರ ಕೇವಲ ಮನುಷ್ಯ ರೂಪದ ವಾಮನಾವತಾರವು ಅದಕ್ಕಿಂತಲೂ ಹೆಚ್ಚಿನ ವಿಕಾಸವನ್ನು ತೋರಿಸುತ್ತದೆ. ಹೀಗೆಯೇ ಉತ್ತರೋತ್ತರ ವಿಕಾಸವಾಗಿ ಪರಶುರಾಮ, ಶ್ರೀರಾಮ, ಶ್ರೀಕೃಷ್ಣ ಮತ್ತು ಕೊನೆಗೆ ವಿಕಾಸದ ಚರಮ ಸೀಮೆಯಾದ ಬುದ್ಧನ ಅವತಾರ.
ಹಿರಣ್ಯಕಶಿಪು ಬ್ರಹ್ಮನ ಬಳಿ ಕೇಳಿದ ವರದಲ್ಲೇ ಅಡಕವಾಗಿದೆ ಬ್ರಹ್ಮದೇವಾ! ನನಗೆ ಕೆಳಗಾಗಲಿ ಮೇಲಾಗಲಿ ಸಾವು ಬರಬಾರದು, ಹಗಲಾಗಲೀ ರಾತ್ರಿಯಾಗಲೀ ನಾನು ಸಾಯಬಾರದು, ಮನುಷ್ಯರಿಂದಾಗಲೀ ಪಶುಗಳಿಂದಾಗಲಿ ಮೃತ್ಯು ಬರಬಾರದು, ಅಸ್ತ್ರದಿಂದಾಗಲೀ ಶಸ್ತ್ರದಿಂದಾಗಲಿ ನಾನು ಅಜೇಯನಾಗಿರಬೇಕು, ಮನೆಯ ಒಳಗಾಗಲೀ ಹೊರಗಾಗಲಿ ಸಾವು ಬರಕೂಡದು, ಹೆಚ್ಚೇಕೆ ಬ್ರಹ್ಮಾ, ನೀನು ಸೃಷ್ಟಿಸಿದ ಯಾವುದರಿಂದಲೂ ನನಗೆ ಮರಣ ಬರಬಾರದು. ಅದರಂತೆ ಈ ವರದಿಂದಾಗಿ ಭಗವಂತನು ಮನುಷ್ಯನೂ ಅಲ್ಲ-ಪಶುವೂ ಅಲ್ಲದ ನರಸಿಂಹನಾದ ಕೆಳಗೂ ಅಲ್ಲ ಮೇಲೂ ಅಲ್ಲದೇ ತೊಡೆಯ ಮೇಲೆ ಒಳಗೂ ಅಲ್ಲ-ಹೊರಗೂ ಅಲ್ಲದ ಹೊಸ್ತಿಲಲ್ಲಿ, ರಾತ್ರಿಯೂ ಅಲ್ಲ- ಹಗಲೂ ಅಲ್ಲ ಸಂಧ್ಯಾಕಾಲದಲ್ಲಿ, ಶಸ್ತ್ರವೂ ಅಲ್ಲ ಅಸ್ತ್ರವೂ ಅಲ್ಲದ ನಖ (ಉಗುರು)ಗಳಿಂದ ಬ್ರಹ್ಮನನ್ನೇ ಸೃಷ್ಠಿಸಿದ ಭಗವಂತನು ಸ್ವ ಇಚ್ಚೆಯಿಂದ ಸಂಹರಿಸುತ್ತಾನೆ.
ಸಿಂಹವು ಸಾಕ್ಷಾತ್ ಪರಾಕ್ರಮ, ತೇಜದ ಸಾಕಾರ ರೂಪ- ಎಲೆಲ್ಲಿ ಭವ್ಯತೆ ದಿವ್ಯತೆ- ಔನ್ನತ್ಯವಿದೆಯೋ ಅಲೆಲ್ಲಾ ತನ್ನ ಅಸ್ತಿತ್ವವಿದೆ ಎಂದು ಭಗವದ್ಗೀತೆಯ ವಿಭೂತಿಯೋಗದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಿದ್ದಾನೆ. ಹಿರಣ್ಯಕಶಿಪು ಎಷ್ಟೇ ಬುದ್ಧಿವಂತಿಕೆಯಿಂದ ಮರಣಬಾರದ ತರಹ ವರ ಪಡೆದಿದ್ದರೂ ಅದೆಲ್ಲವನ್ನೂ ವ್ಯರ್ಥಮಾಡಲು ಪರಮಾತ್ಮನು ಗೈದ ತಂತ್ರ ಎಂಥಹ ಅದ್ಭುತವಾದುದು. 'ದೇವರ ಬಳಿ ನಮ್ಮಗಳ ಯಾವ ಬುದ್ಧಿವಂತಿಕೆಯೂ ನಡೆಯಲಾರದು. ಆ ಬುದ್ಧಿಯನ್ನು ಕೊಡುವವನೇ ಭಗವಂತನು ಅದಕ್ಕಾಗಿಯೇ ಅವನಿಗೆ ಸರ್ವತಂತ್ರ ಸ್ವತಂತ್ರ' ಎಂದು ಹೇಳುವುದು.
ಅಂತರಂಗವನ್ನು ಅಸುರಿಶಕ್ತಿಗಳು ಆಕ್ರಮಣಮಾಡಿದಾಗ ಅದು ಹಿರಣ್ಯಕಶಿಪುವಿನ ಸಭಾಸ್ತಂಭವಾಗುತ್ತದೆ. ಪ್ರಹ್ಲಾದರೂಪಿಯಾದ ಪರಿಶುದ್ಧಾತ್ಮನ ಪರಾಭಕ್ತ್ತಿಯ ಪ್ರಭಾವದಿಂದ ಪರಮಾತ್ಮ ಶ್ರೀನರಸಿಂಹನು ಪ್ರಣವ ಗರ್ಜನೆಯನ್ನು ಮಾಡುತ್ತಾ ಆ ಸ್ತಂಭವನ್ನು ಭೇಧಿಸಿಕೊಂಡು ದೈತ್ಯಭೀಕರವಾದ ರೂಪದಿಂದ ಆವಿರ್ಭವಿಸುತ್ತಾನೆ ಅಂತರಂಗದ ಮನೆಯ ಒಳ ಹೊರಗಿನ ಮಧ್ಯಸ್ಥಾನವಾದ ಹೊಸ್ತಲಿನಲ್ಲಿ ಕುಳಿತು, ಲಯವಿಕ್ಷೇಪಗಳ ಸಂಧಿಕಾಲದ ಸಂಧ್ಯಾಸಮಯದಲ್ಲಿ ಅವಿದ್ಯಾರೂಪಿಯಾದ ಅಸುರರಾಜನ ಎದೆಯನ್ನು ಸೀಳಿ ಅವನ ಸಿಂಹಾಸನವನ್ನು ಏರಿ ಕುಳಿತುಕೊಳ್ಳುತ್ತಾನೆ. ವಾಸ್ತವವಾಗಿ ಅದು ಭಗವದ್ಧ್ಯಾನ ಸಿಂಹಾಸನವೇ ಅಸುರ ಆಕ್ರಮಣದಿಂದ ಅದನ್ನು ಮುಕ್ತಗೊಳಿಸಿಲು ಅಂತರಂಗದ ಸ್ವಾಮಿಯ ಪೂಜೆಗೆ ಪ್ರಶಸ್ತವಾದ ಕಾಲವು ಸಂಧ್ಯಾಕಾಲವೇ.
ಶ್ರೀ ನರಸಿಂಹ ಸ್ವಾಮಿಯ ಶಿರೋ ಕಂಠದ ಮೇಲಿರುವ ಭಾಗವು ರುದ್ರ ದೇವರ ಜಾಗ ‘‘ಆಶೀರ್ಷಂ ರುದ್ರಮೀಶಾನಂ’’ ರುದ್ರ ರೂಪಿಯಾದ ಆ ದೇವನಿಗೆ ಪ್ರದೋಷಕಾಲದಲ್ಲಿ ಪೂಜೆ ಮಾಡುವುದು ಒಳ್ಳೆಯದು .
**************
🌷ಶ್ರೀನರಸಿಂಹ ಚಿಂತನ🌷 by ಫಣೀಂದ್ರಾಚಾರ್ಯ
|| ಭಾಗ-1 ||
ದಿನನಿತ್ಯದ ಚಟುವಟಿಕೆಗಳಲ್ಲಿ ನರಸಿಂಹ ಪ್ರಜ್ಞೆ
ಭಗವಂತ ನಮ್ಮ ಉಸಿರು ಅಂದಮೇಲೆ ಬದುಕಿನ ಕ್ಷಣಕ್ಷಣವನ್ನೂ ಅವನ ನೆನಪಿನಲ್ಲಿ ಕಳೆಯಬೇಕು .ಹೆಜ್ಜೆ ಹೆಜ್ಜೆಗೂ ನಮ್ಮ ಬದುಕಿನಲ್ಲಿ ಭಗವಂತನ ಪಾತ್ರವನ್ನು ಗುರುತಿಸುತ್ತಿರಬೇಕು .ನಮಗೆ ಬೇಕಾದದ್ದೆಲ್ಲವನ್ನೂ ನೀಡಿದ್ದಾನೆ ಎಂಬುದಕ್ಕಾಗಿ ಮಾತ್ರ ನಾವು ದೇವರನ್ನು ನೆನೆಯುವುದಲ್ಲ ನಮಗೆ ಬೇಡವೆನಿಸಿದ , ಸಾಧನೆಗೆ ತೊಡಕಾಗಿರುವ ಪಾಪಗಳನ್ನು -ದುರಿತಗಳನ್ನೂ ಪರಿಹರಿಸುವುದು ಭಗವಂತನ ಮಹದುಪಕಾರ .ಆ ನಿಟ್ಟಿನಲ್ಲಿ ಸಂಹಾರದ ದೇವತೆ ,ಕ್ರೋಧದ ದೇವತೆ ಎಂದೆಲ್ಲಾ ಪ್ರಸಿದ್ಧರಾದ ಶ್ರೀನರಸಿಂಹದೇವರನ್ನು
ನಮ್ಮ ಬದುಕಿನ ಯಾವ ಯಾವ ಸಂದರ್ಭಗಳಲ್ಲಿ ಸ್ಮರಿಸಬೇಕು ಎಂಬುದನ್ನು ಯಥಾಮತಿ ತಿಳಿಯುವ ಅಲ್ಪ ಪ್ರ!ಯತ್ನ ಮಾಡೋಣ .
🌷ಕ್ಷಕಾರವನ್ನು ಉಚ್ಚರಿಸುವಾಗ 🌷
ನೃಸಿಂಹಃ ಕ್ಷಸ್ಸದೇವತಾ (ತಂತ್ರಸಾರ ಸಂಗ್ರಹ 2-3 ) ಎಂದು ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿರುವಂತೆ ಕ್ಷವರ್ಣದಿಂದ ಪ್ರತಿಪಾದ್ಯನಾದವನು ನರಸಿಂಹ . ಕಕಾರ ಷಕಾರಗಳು ಸೇರಿ ರೂಪಗೊಂಡ ಕ್ಷಕಾರದಿಂದ ನರನ ಮುಂಡ ಸಿಂಹದ ರುಂಡ ಸೇರಿ ರೂಪುಗೊಂಡ ನರಸಿಂಹದೇವರ ವಿಚಿತ್ರರೂಪ ಸಂಕೆತಿಸಲ್ಪಡುತ್ತದೆ.. ಅಲ್ಲದ ಕ ಎಂದರೆ ಸುಖ . ಕ್ಷಕಾರಃ ಪ್ರಾಣ ಆತ್ಮಾ ಎಂದು ಐತರೇಯೋಪನಿಷತ್ತು ಸಾರುತ್ತಿರುವಂತೆ. ಷಕಾರ ವೆಂದರೆ ಫ್ರೇರಕತ್ವ ಹಾಗೂ ದೇಶಕ್ಕೆ ಕಾಲಕ್ಕೆ ಗುಣಕ್ಕೆ ಸಂಭಂಧಿಸುವ. ಮೂರು ಬಗೆಯ ವ್ಯಾಪ್ತಿಗಳು . ಆದುದರಿಂದ ಕ್ಷಕಾರಘಟಿತವಾದ ಅಕ್ಷರ ಕ್ಷಮೆ. ಮೊದಲಾದ ಯಾವುದೇ ಶಬ್ದಗಳನ್ನುಉಚ್ಚರಿಸುವಾಗ ಅಥವಾ.ಕೇಳುವಾಗ ಈ ಗುಣಗಳಿಂದ ಕೊಡಿದ ನರಸಿಂಹ ದೇವರನ್ನು ನೆನಪಿಸಿಕೊಳ್ಳಬೇಕು .
**********
🌷ಆರಣ್ಯ ಇತ್ಯಾದಿ ದುರ್ಗಮ ಸ್ಥಳಗಳಲ್ಲಿ🌷
ದುರ್ಗೇಷ್ವಟ ವ್ಯಾಜಿಮುಖಾದಿಷು ಪ್ರಭುಃ ಪಾಯಾನೃಸಿಂಹೋ ಅಸುರಯೂಥಪಾರಿಃ ||
ಎಂದು ನಾರಾಯಣವರ್ಮ ಸಾರುತ್ತಿರುವಂತೆ ದುರ್ಗಮಗಳಾದ ಅರಣ್ಯ ರಣಾಂಗಣಗಳಲ್ಲಿ ನಮ್ಮನ್ನು ರಕ್ಷಿಸುತ್ತಿರುವವನು ನರಸಿಂಹ ಹಾಗಾಗಿ ಅಂತಹ ದುರ್ಗಮಸ್ಥಳಗಳಲ್ಲಿ ನಾವು ಸುರಕ್ಷಿತರಾಗಿದ್ದೇವೆ ಎಂದರೆ ಅದು ನರಸಿಂಹರೂಪಿ ಪರಮಾತ್ಮನಿಂದಲೇ ಎಂಬ ನೆನಪು ಅತ್ಯಾವಶ್ಯಕ .
*********
🌷ಪೊದೆ ರಂಧ್ರಾದಿಗಳಲ್ಲಿ ರಕ್ಷಣೆ 🌷
ಮೊಲ ಮೊದಲಾದ ಪ್ರಾಣಿಗಳು ತಮಗೆ ಭಯವಾದಾಗ ರಕ್ಷಣೆಗಾಗಿ ಗಿಡಬಳ್ಳಿಗಳ ಪೊದೆಯನ್ನೋ , ನೆಲದಲ್ಲಿರುವ ರಂಧ್ರಗಳನ್ನೋ ಹೊಕ್ಕು ಆಶ್ರಯ ಪಡೆಯುವುದನ್ನು ನಾವೆಲ್ಲ ಕಂಡಿದ್ದೇವೆ ಯಾತಕ್ಕಾಗಿ ? ಎದಿರಿಗಿರುವ ವ್ಯಕ್ತಿಗಳಿಂದ ಅದೃಶ್ಯರಾಗಿರಬೇಕೆಂದು ಎಂದು ಒಂದು ಕಾರಣವಾಗಿರಬಹುದು . ಅದರೊಂದಿಗೆ ಆ ಪೊದೆ - ರಂಧ್ರಾದಿಗಳಲ್ಲಿ ಯಾರು ರಕ್ಷಿಸುತ್ತಿರುವರೆಂಬ. ಸುಪ್ತಪ್ರಜ್ಞೆ ಅವುಗಳಿಗಿರಬಹುದು . ಆದು ನರಸಿಂಹ ನೆಂಬುದು ಅವುಗಳಿಗೆ. ತಿಳಿಯದಿರಬಹುದು .ಆದರೆ ಅಲ್ಲಿ ಯಾರಿಂದಲೋ ರಕ್ಷಣೆ ಸಿಗುತ್ತಿದೆ ಎಂಬ ಭಾವನೆಯೂ ಅವುಗಳಿಗಿದೆ . ಛಾಂದೋಗ್ಯಭಾಷ್ಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ಇದನ್ನು ಸ್ಪಷ್ಟಪಡಿಸಿರುವರು .
ಕಕ್ಷಶ್ವಭ್ರೇ ನೃಸಿಂಹಸ್ಯ ಸದಾsವಸ್ಥಿತಿಕಾರಣಾತ್ |
ದ್ರವಂತಿ ಕಕ್ಷಶ್ವಭ್ರಾಭ್ಯಾಂ ತದಜ್ಞಾನೇsಪಿ ರಕ್ಷಣಾತ್ |
ಮೃಗಾ ಭೀತಾ ಯತಾಸ್ತೇಷಾಂ ನೃಸಿಂಹಃ ಸ್ವಾಶ್ರಯಃ ಸದಾ ||
ವನ್ಯಮೃಗಗಳಿಗೆ ಆಶ್ರಯನಾದ ನರಸಿಂಹನು ಯಾವಾಗಲೂ ಆರಣ್ಯ ಗುಹೆಗಳಲ್ಲಿರುವನು .ಆದುದರಿಂದಲೇ ಮನುಷ್ಯರನ್ನು ನೋಡಿ ಹೆದರಿಧ ಮೃಗಗಳು ಆರಣ್ಯ ಗುಹೆಗಳ ಕಡೆಗೆ ಅಲ್ಲೀ ನರಸಿಂಹನಿರುವನೆಂಬ ಜ್ಞಾನವಿಲ್ಲದಿದ್ದರೂ ರಕ್ಷಣೆಗಾಗಿ ಓಡುತ್ತದೆ ಅರಣ್ಯ ಗುಹೆಗಳಲ್ಲಿರುವ ಮೃಗಗಳಿಗೆ ನರಸಿಂಹನೇ ಅವುಗಳಿಗೆ ರಕ್ಷಕನು ಹೊರತು ಅರಣ್ಯ ಗುಹೆಗಳಲ್ಲ .
ಹಾಗಾಗಿ ಮೃಗಗಳು ,ಹಾವುಗಳು ಕ್ರಿಮಿಕೀಟಗಳು ತಮ್ಮ ರಕ್ಷಣೆಗಾಗಿ ಪೊದೆ-ರಂಧ್ರಾದಿಗಳನ್ನು ಆಶ್ರಯಿಸುವಾಗ ಅಲ್ಲೆಲ್ಲಾ ಅವುಗಳ ರಕ್ಷಕನಾದ ನರಸಿಂಹರೂಪಿಪರಮಾತ್ಮನನ್ನು ನಾವು ಸ್ಮರಿಸಬೇಕು .
*********
ನರಸಿಂಹ ದೇವರು ಸರ್ವದಾ ನಮ್ಮ ಹೃದಯದಲ್ಲಿ ನಲಿದಾಡುತ್ತಿರಲು ಪ್ರಾರ್ಥನೆ
ಸರ್ವಗಶ್ಚೈವ ಸರ್ವಾತ್ಮ ಸರ್ವಾವಸ್ಥಾಸು ಚಾಚ್ಯುತ |
ರಮಸ್ವ ಪುಂಡರಿಕಾಕ್ಷ ನೃಸಿಂಹ ಹೃದಯೇ ಮಮ ||
ನಿದ್ದೆಯೇ ಮುಂತಾದ ಎಲ್ಲ ಅವಸ್ಥೆಗಳಲ್ಲಿ ಯಾವುದೇ ಚ್ಯುತಿಗೆ ಒಳಗಾಗದೆ ಎಲ್ಲರ ಸ್ವಾಮಿಯಾಗಿ ಅಂತರ್ಯಾಮಿಯಾಗಿ ಎಲ್ಲರಲ್ಲೂ ಎಲ್ಲೆಡೆಯೂ ಇರುವ ತಾವರೆಯಂತೆ ಅರಳಿದ ಕಣ್ಣುಳ್ಳ ನರಸಿಂಹನೇ ನನ್ನ ಹೃದಯದಲ್ಲಿ ಎಲ್ಲ ಅವಸ್ಥೆಗಳಲ್ಲಿ ಕ್ರೀಠಿಸುತ್ತಿರು .
ಹೇ ನರಸಿಂಹ !ನೀನು ದುರಿತನಿಯಾಮಕನಾಗಿ ಎಲ್ಲೆಡೆ ಇರುವವನು .
ಎಲ್ಲರಿಗೂ ಅಂತರ್ಯಾಮಿಯಾಗಿ ದುರಿತ ಕಾರ್ಯವನ್ನು ನಿಯಮಿಸುತ್ತಿರುವವನು .
ಹೇ ಅಚ್ಯುತ ನೀನು ದುರಿತಬಾಧಿತರ ಯಾವುದೇ ಅವಸ್ಥೆಯಿಂದ ಪ್ರಭಾವಿತನಾಗದವನು .
ತಾವರೆಯಂತೆ ಅರಳುಗಣ್ಣಿನವನೇ ನನ್ನ ಹೃದಯಮಂದಿರದಲ್ಲಿ ಕ್ರಿಡಿಸುತ್ತಿರು ; ನಿನ್ನ ಈ ಬಗೆಯ ವ್ಯಕ್ತಿತ್ವದ ಬಗ್ಗೆ ನಾನು ಸದಾ ಎಚ್ಚೆತ್ತಿರುವಂತೆ ಅನುಗ್ರಹಿಸು .
ಕೃಷ್ಣಾಮೃತಮಹಾರ್ಣವದಲ್ಲಿ (185)ಜಗದ್ಗುರು ಶ್ರೀಮಧ್ವಾಚಾರ್ಯರು ಸಾಧಕರಿಗೆ ಸದಾ ನರಸಿಂಹದೇವರನ್ನು ಸ್ಮರಿಸುತ್ತಿರಲು ಉಪದೇಶಿಸಿದ ಶ್ಲೋಕ ಇದು .
ನಾವು ನರಸಿಂಹ ದೇವರಲ್ಲಿ ಈಪ್ರಾರ್ಥನೆಯನ್ನು ಕ್ಷಣಕ್ಷಣಕ್ಕೆ ಪ್ರಾರ್ಥಿಸೋಣ .
***********
ನರಹರಿಯ ಸಂಸ್ಮರಣೆಯೇ ಶ್ರೇಷ್ಠ ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತಂ ತು ತಸ್ಯೋಕ್ತಂ ಹರಿಸಂಸ್ಮರಣಂ ಪರಮ್ |
ಎಂದು ಸಕಲಪಾಪಗಳಿಗೆ ಶ್ರೇಷ್ಠ ಪ್ರಾಯಶ್ಚಿತ್ತವಾಗಿ ವಿಧಿಸಲ್ಪಟ್ಟಿರುವ ಹರಿಸಂಸ್ಮರಣೆ ಎಂದರೆ ನರಹರಿಯ ಸಂಸ್ಮರಣೆ ಎಂದರ್ಥ .
ಹರಿ ಎಂಬ ನಾಮ ಭಗವಂತನ ಮೂಲರೂಪಕ್ಕೂ ಸಂಭಂಧಿಸುವಂತಹದ್ದು ಯಮ ಮತ್ತು ಮೂರ್ತಿದೇವಿಯಲ್ಲಿ ಅವತರಿಸಿರುವ ನಾಲ್ಕು ಭಗವದ್ರೂಪಗಳಲ್ಲಿ ಹರಿ ಎಂಬ ಹೆಸರಿನ ಒಂದು ಭಗವದ್ರೂಪವಿದೆ ಗಜೇಂಧ್ರನಿಗೆ ಬಿಡುಗಡೆನೀಡಿದ ತಾಪಸನಾಮಕ ಭಗವದ್ರೂಪಕ್ಕೂ ಹರಿ ಎಂಬ ಹೆಸರಿದೆ
ಭಗವಂತನ ನರಸಿಂಹ ರೂಪಕ್ಕೂ ಹರಿ ಎಂಬ ಹೆಸರಿದೆ ಸಂಸ್ಕೃತದಲ್ಲಿ ಹರಿ ಎಂದರೆ ಸಿಂಹ ನರಸಿಂಹಾವತಾರದಲ್ಲಿ ಭಗವಂತನ ಮುಖ ಸಿಂಹದಂತೆ ಇರುವುದರಿಂದ ನರಹರಿ ಎಂದೇ ವ್ಯವಹರಿಸಲಾಗುವುದು .
ಆದರೆ ನರಸಿಂಹನನ್ನು ನರಹರಿ ಎಂದು ಕರೆಯುವುದರಲ್ಲಿ ಮತ್ತೊಂದು ವಿಶೇಷವಿದೆ ದುರಿತನಿವೃತ್ತಿಗೆ ಉಪಾಸ್ಯನಾದವನು ನರಸಿಂಹರೂಪಿ ಪರಮಾತ್ಮ ಅವನು ತನ್ನ ಉಪಾಸನೆಯಿಂದ ಭಕ್ತರ ದುರಿತಗಳನ್ನು ಪರಿಹರಿಸುವನೆಂಬ ಅಭಿಪ್ರಾಯದಲ್ಲಿ (ಹರತಿ ಅತಿಶಯೇನ ಭಕ್ತಾನಾಂ ದುರಿತರಾಶಿಂ ಪರಿಹರತೀತಿ ಹರಿಃ ) ಅವನು ಹರಿ ಎನಿಸುವನು .
ಆದುದರಿಂದ ದುರಿತಪರಿಹಾರಕ್ಕೆ ಪ್ರಾಯಶ್ಚಿತ್ತವಾಗಿ ವಿಶೇಷವಾಗಿ ನರಹರಿ ಭಗವದ್ರೂಪದ ಸ್ಮರಣೆಯನ್ನು ಮಾಡಬೇಕು .
( ಹಿರಿಯವಿಧ್ವಾಂಸರಾದ ಶ್ರೀಸಗ್ರಿ ರಾಘವೇಂದ್ರ ಉಪಾಧ್ಯಾಯ ಆಚಾರ್ಯರ ನರಸಿಂಹ ಯಜ್ಞ ತ್ರಯಂಬಕಂ ಯಜಾಮಹೆ ಪುಸ್ತಕಗಳಿಂದ ಕೆಲವು ಚಿಂತನಗಳನ್ನು ಸಂಗ್ರಹಿಸಿದ್ದೇನೆ ಆಚಾರ್ಯರಿಗೆ ಅನಂತಧನ್ಯವಾದಗಳು 🙏 )
|| ಶ್ರೀಕೃಷ್ಣಾರ್ಪಣಮಸ್ತು ||
****
🌷ಶ್ರೀನರಸಿಂಹ ಚಿಂತನ 🌷
|| ಭಾಗ-2 ||
ಧ್ಯಾಯೇನ್ನೃಸಿಂಹಮುರುವೃತ್ತರವಿತ್ರಿನೇತ್ರಂ
ಜಾನುಪ್ರಸಕ್ತಕರಯುಗ್ಮಮಥಾಪರಾಭ್ಯಾಮ್ |
ಚಕ್ರಂದರಂ ಚ ದಧತಂ ಪ್ರಿಯಾಯ ಸಮೇತಮ್
ತಿಗ್ಮಾಂಶೂಕೋಟ್ಯಧೀಕತೇಜಸಮಗ್ರಶಕ್ತಿಮ್ ||
ಸೂರ್ಯನಂತೆ ಪ್ರಕಾಶಮಾನವಾದ ವಿಶಾಲವಾದ ವೃತ್ತಾಕಾರದ ಮೂರು ಕಣ್ಣುಗಳು .ಎರಡು ಕೈಗಳು ತೊಡೆಯ ಮೇಲೆ ಮತ್ತೆರಡರಲ್ಲಿ ಒಂದು ಕೈಯಲ್ಲಿ ಚಕ್ರ ಮತ್ತೊಂದು ಕೈಯಲ್ಲಿ ಶಂಖ ಪತ್ನಿ ಸಮೇತನಾಗಿದ್ದಾನೆ .ಕೋಟಿ ಸೂರ್ಯರಿಗಿಂತ ಮಿಗಿಲಾದ ತೇಜಸ್ಸು ಅಮಿತಶಕ್ತಿ ಇಂತಹ ನರಸಿಂಹನನ್ನು ಧ್ಯಾನಿಸಬೇಕು .
-ತಂತ್ರಸಾರ ಸಂಗ್ರಹ
ವಿರುದ್ಧಧರ್ಮಧರ್ಮೀತ್ವಂ ಸರ್ವಾಂತರ್ಯಾಮಿತಾಂ ತಥಾ |
ನರಸಿಹೋದ್ಭುತಸ್ತಂಭಸಂಭೂತಃ ಸ್ಪಷ್ಟಯತ್ಯಮ್ ||
ಶ್ರುತಿಗಳು ಪರಮಾತ್ಮನಲ್ಲಿ ಅಣುತ್ವ ಮಹತ್ವ ಮುಂತಾದ ವಿರುದ್ಧ ಧರ್ಮಗಳಿವೆ ಬೇರೆ ಸ್ಥಳಗಳಲ್ಲಿ ಈ ಧರ್ಮಗಳಿಗೆ ಒಂದೆಡೆ ಸಮಾವೇಶವಿರಲು ಸಾಧ್ಯವಿಲ್ಲ ಆದರೆ ಇದು ಪರಮಾತ್ಮನಲ್ಲಿ ಸಾಧ್ಯ ಎನ್ನುತ್ತಿವೆ ಹಾಗೂ ಚರಾಚರಾತ್ಮಕವಾದ ಜಗತ್ತಿನ ಎಲ್ಲ ವಸ್ತುಗಳ ಒಳಗೂ ನಿಯಾಮಕನಾಗಿರುವನೆಂದು ಶ್ರುತಿಗಳು ಸಾರುತ್ತಿವೆ .ಇದನ್ನು ಸ್ಪಷ್ಟಪಡಿಸಲೆಂದೇ ನರತ್ವ-ಸಿಂಹತ್ವ ವಿರುದ್ಧ ಧರ್ಮವುಳ್ಳವನಾಗಿ ಕಂಬದಿಂದ ಪ್ರಕಟನಾದ .
ತೀರ್ಥಪ್ರಭಂಧ (ಪೂರ್ವಪ್ರಭಂಧ -6)
ತ್ರೈವಿಷ್ಟಪೊರುಭಯಹಾರಿ ನೃಸಿಂಹರೂಪಂ
ಕೃತ್ವಾ ಭ್ರಮದ್ ಭ್ರುಕುಟಿದಂಷ್ಟ್ರಕರಾಳವಕ್ರಮ್ |
ದೈತ್ಯೇಂದ್ರಮಾಶು ಗದಯಾಭಿಪತಂತಮಾರಾ
ದೂರೌ ನಿಪಾತ್ಯ ವಿದುದಾರ ನಖೈಃ ಸ್ಫುರಂತಮ್ ||
ದೇವತೆಗಳ ಭಯಪರಿಹಾರಕ್ಕೆ ಶ್ರೀಹರಿ ಚಲಿಸುವ ಹುಬ್ಬುಗಳ ಕೋರೆಹಲ್ಲುಗಳ ಭಯಾನಕ ಮುಖದ ಶ್ರೀನರಸಿಂಹರೂಪವನ್ನು ಧರಿಸಿದ. ಗದೆಯನ್ನು ಹಿಡಿದು ತನ್ನನ್ನು ಇದಿರಿಸಿಲು ಬಂದ ಹಿರಣ್ಯಕಶಿಪುವನ್ನು ಕ್ಷಣದಲ್ಲಿ ಹಿಡಿದು ತೊಡೆಯ ಮೇಲೆ ಹಾಕಿಕೊಂಡು ಉಗುರುಗಳಿಂದ ಬಗೆದ .
-ಶ್ರೀಮದ್ ಭಾಗವತಪುರಾಣ 7-2-14
ಸತ್ಯಂ ವಿಧಾತುಂ ನಿಜಭೃತ್ಯಭಾಷಿತಂ
ವ್ಯಾಪ್ತಿಂ ಚ ಭೂತೇಷ್ವಖಿಲೇಷುಚಾತ್ಮನಃ |
ಅಧೃಷ್ಯತಾತ್ಯದ್ಭುತರೂಪಮುದ್ವಹನ್
ಸ್ತಂಭೇ ಸಭಾಯಾಂ ನ ಮೃಗಂ ನ ಮಾನುಷಮ್ ||
ತನ್ನ ಭೃತ್ಯನಾಡಿದ ಮಾತನ್ನು ಸತ್ಯವಾಗಿಸಲು ಎಲ್ಲ ಚರಾಚರ ಪ್ರಪಂಚದಲ್ಲಿ ತಾನು ವ್ಯಾಪಿಸಿರುವನೆಂದು ಸತ್ಯವಾಗಿಸಲು ಶ್ರೀಹರಿ ಅತ್ಯಂತ ಅಧ್ಬುತವಾದ ಮೃಗವೂ ಅಲ್ಲದ ಮನುಷ್ಯನೂ ಅಲ್ಲದ ರೂಪವನ್ನು ಧರಿಸಿ ಸಭಾ ಮಂಟಪದ ಕಂಬದಲ್ಲಿ ಕಾಣಿಸಿಕೊಂಡ .
ಶ್ರೀಮದ್ಭಾಗವತ ಪುರಾಣ 7 -8-18
ಓಂ ನಮೋ ಭಗವತೆ ತುಭ್ಯಂ ಪುರುಷಾಯ ಮಹಾತ್ಮನೇ |
ಹರಯೇದ್ಭುತ ಸಿಂಹಾಯ ಬ್ರಹ್ಮಣೇ ಪರಮಾತ್ಮನೇ ||
ಹೇ ಅದ್ಭುತನೆ ಗುಣಪೂರ್ಣ ಷಡ್ಗುಣಶಾಲಿ ಮಹಾತ್ಮ ಹರಿಯ ಅವತಾರ ಪರಬ್ರಹ್ಮ ಪರಮಾತ್ಮನಾದ ಅದ್ಭುತ ನರಸಿಂಹನಾದ ನಿನಗೆ ನಮಸ್ಕಾರ .
-ಶ್ರೀಮದ್ಭಾಗವತ 7-10-11
ಯಥಾನರಸಿಂಹಾಕೃತಿರಾವಿರಾಸೀತ್
ಸ್ತಂಭಾತ್ ತಥಾ ನಿತ್ಯತನುತ್ವತೋ ವಿಭುಃ |
ಆವಿರ್ಭವೇದ್ ಯೋಷಿತಿ ನೋ ಮಲೋತ್ಥಃ
ತಥಾಪಿ ಮೋಹಾಯ ನಿದರ್ಶಯೇತ್ ತಥಾ ||
ಶುಕ್ರಶೋಣಿತಗಳ ಸಂಭಂಧದಿಂದ ಪರಮಾತ್ಮನು ಹುಟ್ಟುವುದಿಲ್ಲ ಜ್ಞಾನಾನಂದಾತ್ಮಕದೇಹ ಅವನದು ನಿತ್ಯನಾದ ಅವನಿಗೆ ಉತ್ಪತ್ತಿಯೇ ಇಲ್ಲ ಆದ್ದರಿಂದ ನರಸಿಂಹರೂಪನಾಗಿ ಕಂಬದಿಂದ ಆವಿರ್ಭವಿಸಿದ .
-ಮಹಾಭಾರತ ತಾತ್ಪರ್ಯನಿರ್ಣಯ 10-43
ಅಭಿಷ್ಟುತಸ್ತೈರ್ಹರಿರುಗ್ರವೀರ್ಯೋ
ನೃಸಿಂಹರೂಪೇಣ ಸ ಆವಿರಾಸಿತ್ |
ಹತ್ವಾಹಿರಣ್ಯಂ ಚ ಸುತಾಯ ತಸ್ಯ
ದತ್ವಾ ಭಯಂ ದೇವಾಗಣಾನತೋಷಯೇತ್ ||
ದೇವತೆಗಳಿಂದ ಸ್ತುತಿಸಲ್ಪಟ್ಟ ಉಗ್ರಪರಾಕ್ರಮಿ ಶ್ರೀಹರಿ ನರಸಿಂಹ ರೂಪದಿಂದ ಪ್ರಾದುರ್ಭೂತನಾದ ಹಿರಣ್ಯಕಶಿಪುವನ್ನು ಸಂಹರಿಸಿ ಅವನ ಮಗ ಪ್ರಹ್ಲಾದನಿಗೆ ಅಭಯನೀಡಿ ದೇವಸಮೂಹಗಳನ್ನು ಸಂತೋಷಪಡಿಸಿದ .
-ಶ್ರೀಮಹಾಭಾರತ ತಾತ್ಪರ್ಯನಿರ್ಣಯ 3-43
ರುಕ್ಮೀಣೀಶವಿಜಯ ಮಹಾಕಾವ್ಯದಲ್ಲಿ ನೃಸಿಂಹಾವತಾರ ವರ್ಣನೆ
ಅರಿಹಿರಣ್ಯಕಸಂಕ್ಷಯಕಾರಕಂ |
ನರಮೃಗಾಧಿಪಮದ್ಭುತಚೇಷ್ಟಿತಮ್ ||
ಅಘಕೃದಿಂದ್ರಕೃತಾರ್ಚನತೋಷಿತಂ |
ಭಜ ಮನೋಽಜಮನೋಹರವಿಕ್ರಮಮ್ ||
ಶತ್ರುವಾದ ಹಿರಣ್ಯಕಶಿಪುವಿಗೆ ಅಳಿವನ್ನುಂಟುಮಾಡಿದ, ಅದ್ಭುತಕಾರ್ಯದ, ವೃತ್ರಹತ್ಯಾರೂಪವಾದ ಪಾಪವೆಸಗಿದ ಇಂದ್ರನಿಂದ ಪೂಜಿತನಾದ, ಬ್ರಹ್ಮದೇವರಿಗೆ ಮನೋಹರವಾದ ಪ್ರತಾಪದಿಂದ ಕೂಡಿದ, ನರಸಿಂಹರೂಪದ ಶ್ರೀಹರಿಯನ್ನು ಎಲೈ ಮನಸ್ಸೇ ! ಭಜಿಸು .
ನರಸಿಂಹ ಏಷ ವಿದದಾರ ದಾರುಣಂ
ಪ್ರತಿಘೋದಯೇ ನಖರಚಕ್ರತೇಜಸಾ |
ಸ್ವರಿಪುಂ ಕ್ಷಣೇನ ಸರಸಃ ಸ್ಫುರತ್ತನುಂ ಪೃಥುಸತ್ತ್ವಮಿಷ್ಟಜನಭೀತಿಭಂಜನಃ ||
ಭಕ್ತಜನರ ಭಯವನ್ನು ಪರಿಹರಿಸುವ ಈ ನಾರಾಯಣನು ನರಸಿಂಹನಾಗಿ ಕೋಪ ಉದಿಸಲು ತನ್ನ ನಖಚಕ್ರದ ತೇಜಸ್ಸಿನಿಂದಲೇ ಹೋಳೆಯುವ ಶರೀರದವನೂ ತುಂಬಾ ಬಲಶಲಿಯೂ ಆಗಿದ್ದ ತನ್ನ ಶತ್ರುವಾದ ಹಿರಣ್ಯಕಶಿಪುವನ್ನು ಸೀಳಿಹಾಕಿದನು .
-ಸುಮಧ್ವವಿಜಯ 8.-16
ಪ್ರಹ್ಲಾದವರದನಾದ ನರಸಿಂಹ ದೇವರನ್ನು ಸ್ತುತಿಸುತ್ತ ಚತುರ್ಮುಖ ಬ್ರಹ್ಮದೇವರು ಕೋನೆಗೆ ಹೀಗೊಂದು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ .
ಏತದ್ ವಪುಸ್ತೇ ಧ್ಯಾಯತಃ ಪ್ರಯತಾತ್ಮನಃ |
ಸರ್ವತೋಗೋಪ್ತೃ ಸಂತ್ರಾಸಾನ್ಮೃತ್ಯೋರಪಿ ಜಿಘಾಂಸತಃ |
ಭಗವಂತನೇ ನಿನ್ನ ಈ ನರಸಿಂಹ ರೂಪ ಮನೋನಿಗ್ರಹಪೂರ್ವಕವಾಗಿ ಧ್ಯಾನಿಸುವವರ ಪಾಲಿಗೆ ಎಲ್ಲ ಬಗೆಯ. ಭಯದಿಂದಲೂ ರಕ್ಷಣೆ ನಿಡುವಂತದ್ದು ಮೃತ್ಯುದೇವತೆಯಿಂದಲೂ ಸರ್ವತೋಮುಖವಾದ ಸಂರಕ್ಷಣೆಯನ್ನು ಅನುಗ್ರಹಿಸುವಂತಾಗಲಿ ಶ್ರೀನರಸಿಂಹ ದೇವರಲ್ಲಿ ಚತುರ್ಮುಖ ಬ್ರಹ್ಮದೇವರು ಪ್ರಾರ್ಥಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
**********
|| ಶ್ರೀ ವಿಠ್ಠಲ ಪ್ರಸೀದತು ||
ಶ್ರೀನಾರಸಿಂಹ ವಫುವೇ ನಮಃ i
“ವಿಷ್ಣು”ಸಹಸ್ರನಾಮದಲ್ಲಿ ಶ್ರೀಹರಿಯನ್ನು ಶ್ರೀನಾರಸಿಂಹ ರೂಪದಿಂದ ಚಿಂತಿಸುತ್ತಾರೆ ಜ್ಞಾನಿಗಳು
ಇದು ೨೧ನೇ ನಾಮ.
ಭಕ್ತ ಪ್ರಹ್ಲಾದನಿಗಾಗಿ ತಳೆದ ರೂಪ ಎಂದು ಚಿಂತಿಸಿದರೆ , ಭಗವಂತನನ್ನು
ಬಹಳ ಕಡಿಮೆ ತಿಳಿದಂತಾಗುತ್ತದೆ .
ವಿಷ್ಣು ಸಹಸ್ರನಾಮದ ರೀತಿ ತೆಗೆದುಕೊಂಡರೆ ,ಅನಾದಿ ಕಾಲದ ರೂಪವನ್ನು ಹಿರಣ್ಯ ಕಷಿಪು ವಧೆ ಸಂದರ್ಭದಲ್ಲಿ ಪ್ರಕಟ ಪಡಿಸಿದ .
ಇಂದುಶ್ರೀನರಸಿಂಹ ಜಯಂತಿ ಸಂದರ್ಭದಲ್ಲಿ ಭಕ್ತ ಪ್ರಿಯ ಶ್ರೀ ನಾರಸಿಂಹನ ಕುರಿತು ಕಿಂಚಿತ್ ಚಿಂತನೆ .
ಕೆಲವು ಪ್ರಾಚೀನ ಸಂಹಿತೆಗಳು ಈ ನಾರಸಿಂಹ ನಾಮಕ್ಕೆ “ ಮನುಷ್ಯನ ದೇಹ ಸಿಂಹದ ತಲೆಯನ್ನೊಳಗೊಂಡ
ಶರೀರವನ್ನು ಧರಿಸಿರುವವನು “ ಎಂದು
ಅರ್ಥವಾದರೂ “ ಸಂಹಾರ ಕಾಲದಲ್ಲಿ
ಸಮುದ್ರದ ಮಧ್ಯದಲ್ಲಿದ್ದು ನೀರನೆಲ್ಲ ಭಸ್ಮ ಮಾಡುವ ನರಸಿಂಹ ರೂಪದವನು ಎಂದು ಪ್ರಾಚೀನ ಸಂಹಿತೆಗಳು ಹೇಳುತ್ತದೆ .
ಶ್ರೀ ಹರಿಯ ನಾಮದಲ್ಲೇ ತಾನು ಭಕ್ತ
ಪರಾಧೀನ ಎಂದು ಸಿಂಹದಂತೆ ತಲೆಯನ್ನೊಳಗೊಂಡಿದ್ದರೂ. ಭಕ್ತರೇ ಅವನ ಪ್ರತಿಮೆಯಂತಿರುವರು ಆದ್ದರಿಂದ ನಾರಸಿಂಹ ಅವನು .
ಪ್ರಹ್ಲಾದನಿಗಾಗಿ ಕಂಭದಿಂದ ಪ್ರಕಟಗೊಂಡ .
ಶ್ರೀಮಧ್ಭಾಗವತ ಶ್ರೀ ನಾರಸಿಂಹ ಸ್ಥoಭದಿಂದ ಆವಿರ್ಭವಿಸಿದ್ದನ್ನು ಮುಕ್ತವಾಗಿ ವರ್ಣಿಸುತ್ತದೆ .”ನೇತ್ರ ತ್ರಯವು ಕಾದ ಬಂಗಾರದಂತೆ ಹೊಳೆಯುತ್ತಿತ್ತು ,ಜಟಾ ಕೇಸರ ದಿಂದ
ಆವೃತ್ತವಾಗಿ ಮುಖ ಭಯಂಕರವಾಗಿತ್ತು . ಕೋರೆಗಳನ್ನು ಮಸೆದು , ಗುಹೆಯಂತೆ ಬಾಯಿಯನ್ನು ತೆರೆದು ದಿಕ್ಕು ದಿಕ್ಕಿನಲ್ಲಿ ವ್ಯಾಪಿಸಿನಿಂತ. ಉನ್ನತ ವಕ್ಷಸ್ಥಳದ ಮೇಲೆ ಕೇಸರಗಳು ಹಾರಾಡುತ್ತಿದ್ದವು
ಶರೀರ ರೋಮಗಳು ಸೆಟೆದು ನಿಂತಿದ್ದವು ,ಸಹಸ್ರ ಬಾಹುವಾದ ಸ್ವಾಮಿಯ ಕೈಗಳಲ್ಲಿರುವ ನಖಗಳೇ ಆಯುಧಗಳಾಗಿದ್ದವು . ಮಿಕ್ಕ ಕೈಗಳಲ್ಲಿ ವಿವಿಧ ಆಯುಧಗಳು ರಾರಾಜಿಸುತ್ತಿದ್ದವು . ಇಂಥ ನಾರಸಿಂಹನ ದರ್ಶನದಿಂದ , ದೈತ್ಯರು ದಾನವರು ದಿಕ್ಕು ತೋಚದೆ ಓಡಿಹೋದರು .
ಹಿರಣ್ಯ ಕಷಿಪುಗೆ ,ತನ್ನ ಮಗನನ್ನು ಕೊಲ್ಲಲು ಹೋಗುವ ತನನ್ನು ವಧೆ ಮಾಡಲು ಈ ರೂಪದಿಂದ ಬಂದಿರುವನೆಂದು ಅರ್ಥವಾದರೂ
ಗಧೆಯನ್ನು ಹಿಡಿದು , ಸಿಂಹವನ್ನು ಎದುರಿಸುವ ಆನೆಯಂತೆ ನೃಸಿಂಹನನ್ನು ಎದುರಿಸಿದನು “ ಎನ್ನುತ್ತದೆ .
ಆದರೆ ಅದೇ ಶ್ರೀಮಧ್ಭಾಗವತ , “ನೃಸಿಂಹನಮುಂದೆ ,ಅಗ್ನಿಜ್ವಾಲೆಯಲ್ಲಿ ಬೀಳುವ ಪತಂಗದಂತೆ ನಷ್ಟವಾದನು”
ಎನ್ನುತ್ತದೆ. ಮತ್ತೊಂದು ಉಪಮೆ ಎಂದರೆ “ಹೆಬ್ಬಾವು ಇಲಿಯನ್ನಂತೆ ಅನಾಯಾಸವಾಗಿ ಹಿಡಿದನು “ ಎನ್ನುತ್ತದೆ. ಹಿರಣ್ಯಕನ ಹೊಟ್ಟೆಯನ್ನು ಸೀಳಿ ಕರುಳನ್ನು ತೆಗೆದು ಮಾಲೆಯಾಗಿ ಹಾಕಿಕೊಂಡನು . ದೇವತೆಗಳು ನಡುಗಿದರು ,ದಿಕ್ಪಾಲರು ಓಡಿಹೋದರು ಸಿಂಹಾಸನದಲ್ಲಿ ಕುಳಿತ ಶ್ರೀ ನರಸಿಂಹನಿಗೆ ದೇವತೆಗಳು ವಂದಿಸಿದರು ಪುಷ್ಪವೃಷ್ಟಿ ಆಯಿತು , ಹಿರಣ್ಯ ಕಷಿಪು ವಧೆಗೆ
ದೇವಲೋಕವೇ ಸಂತಸಗೊಂಡಿತು .
ಬ್ರಹ್ಮ ದೇವರು, ರುದ್ರದೇವರು ಇಂದ್ರ ಋಷಿಪುಂಗವರುಗಳು ದೈತ್ಯನಿಂದ ರಕ್ಷಿಸಿದ್ದನ್ನು ವಿಧವಿಧವಾಗಿ ಸ್ತೋತ್ರಮಾಡಿದರು .
ಅವರಲ್ಲದೆ ಪಿತೃದೇವತೆಗಳು , ಸಿದ್ದರು
ವಿದ್ಯಾಧರರು, ನಾಗರು , ಮನುಗಳು
ಪ್ರಜಾಪತಿಗಳು ಗಂಧರ್ವರು ಚಾರಣರು , ಯಕ್ಷರು , ಕಿಂಪುರುಷರು
ಕಿನ್ನರರು , ವಿಷ್ಣುಪಾರ್ಷದರು ಪ್ರತ್ಯೇಕ , ಪ್ರತ್ಯೇಕವಾಗಿ ಸ್ತೋತ್ರಮಾಡಿದ್ದನ್ನು ಭಾಗವತ ವಿವರಿಸಿ
ಹರಿಸರ್ವೋತ್ತಮತ್ವನ್ನು ಎತ್ತಿಹಿಡಿದಿದೆ .
ಕೋಪವೇ ಸಾಕಾರಗೊಂಡಂತೆ ಇರುವ ಶ್ರೀನರಹರಿಯನ್ನು ದೇವತೆಗಳು
ಸಮೀಪಿಸಲಾರದೆ ನಿಂತಿದ್ದರು . ದೇವತೆಗಳು ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿದರು ಕೋಪ ಶಮನ ಮಾಡಲು, ಅವಳು ದೂರ ಸರಿದು ನಿಂತಂತೆ ನಟಿಸಿದಳು .
ಆಗ ಶ್ರೀಹರಿಯ ಸಂಕಲ್ಪಾನುಸಾರ
ಬ್ರಹ್ಮದೇವರು ಪ್ರಹ್ಲಾದನನ್ನು ಶ್ರೀ ನೃಸಿಂಹನನ್ನು ಶಾಂತಮಾಡಲು ಕಳುಹಿದ . ಶ್ರೀ ನರಹರಿ ಪ್ರಹ್ಲಾದನ
ತಲೆಯಮೇಲೆ ಕೈಇಟ್ಟು ಆಶೀರ್ವದಿಸಿದ.
ಪ್ರಹ್ಲಾದ ತುಂಬು ವಿನಯದಿಂದ “
ಬ್ರಹ್ಮಾದಿಗಳು ಇಂದಿನವರೆವಿಗೂ ಅನಂತ ಗುಣವರ್ಣನೆಗಳನ್ನು ಮುಗಿಸಲಾರದೆ ಇರುವಾಗ , ಉಗ್ರ ದೈತ್ಯ ಕುಲದಲ್ಲಿ ಹುಟ್ಟಿದ ನನ್ನಂತಹ
ಪಾಮರನಿಂದ ಸ್ತುತಿಸಿಕೊಳ್ಳಬೇಕೆಂಬ
ಸ್ವಾಮಿಯನ್ನು ವರ್ಣಿಸಲು ನಾನು ಹೇಗೆ ಶಕ್ತ.
ಪ್ರಹ್ಲಾದನ ಭಕ್ತಿ ನಿವೇದನೆ ಬರೆಯಲು
ಪಾಮರಳಾದ ನಾನೂ ಕೂಡ ಸಮರ್ಥಳಲ್ಲ ಆದರೂ ಸಕಲ ಜೀವ ರಾಶಿಗಳ ಪರವಾಗಿ ಪ್ರಹ್ಲಾದ ಪ್ರಾರ್ಥಿಸಿಕೊಂಡ ಶ್ರೀಮದ್ ಭಾಗವತದ ಕೆಲವು ಮಾತುಗಳು .
ಪ್ರಹ್ಲಾದ ಕೇಳುತ್ತಾನೆ “ ಸ್ವಾಮಿ ನೀನು
ಧನ ,ಕುಲ ,ರೂಪ ತಪಸ್ಸು ವೇದಾಧ್ಯಯನ , ಕಾಂತಿ ,ಸಹನಾ ಬಲ , ಪರಾಕ್ರಮ , ಬುದ್ದಿ ಗುಣಗಳಿಗೆ ಒಲೆಯುವವನಲ್ಲ ಇದನ್ನು ಗಜರಾಜನ ದೃಷ್ಟಾಂತದಲ್ಲೇ ತೋರಿಸಿದ್ದಿ , ವೇಧಾಧ್ಯಯನ ಮಾಡಿದ ಬ್ರಾಹ್ಮಣನಲ್ಲಿ ಭಕ್ತಿ ಎಂಬ ಗುಣವಿಲ್ಲದಿದ್ದರೆ , ಭಕ್ತಿಯಿಂದ ಹರಿಯಲ್ಲಿ ತನ್ನ ತನು ಮನ ಧನ ಭವನ ಬಂಧು ಜನರೇ ಮೊದಲಾದ
ಎಲ್ಲವನ್ನು ಸರ್ವ ಸಮರ್ಪಣ ಮಾಡಿದ
ಚಂಡಾಲನೇ ಲೇಸು .
ನಿನ್ನ ರುಚಿರಾವತಾರಗಳೆಲ್ಲ ನಿನಗೆ ಲೀಲಾವಿಲಾಸವು , ಸರ್ಪ ಚೇಳು ಸತ್ತರೆ ಅಹಿಂಸಾವಾದಿಗಳಾದ ಸಾಧುಗಳು ಸಂತಸ ಪಡುವರು ಅಂದಮೇಲೆ ಲೋಕಕಂಟಕನಾದ
ಅಸುರನ ಸಾವಿನಿಂದ ಸಂತಸ ಪಡದೇ ಇರುವರೇ , ಪ್ರಸನ್ನ ಸುಂದರ ನಾಗು ,ಇಲ್ಲಿ ನೆರದಿರುವವರೆಲ್ಲ ನಿನ್ನ
ಧಿವ್ಯ ಮಂಗಳ ರೂಪವನ್ನು ನೆನೆಯುತ್ತಾ ತಮ್ಮ ಮನೆಗೆ ಹೋಗಲಿ”
ಹೀಗೆ ಬಹು ಧೀರ್ಘ ಸ್ತೋತ್ರದಿಂದ
ಸ್ವಾಮಿಯನ್ನು ಪ್ರಸನ್ನ ಗೊಳಿಸಿದನು .
ಶ್ರೀನರಸಿಂಹನು ಪ್ರಹ್ಲಾದ ನಿನಗೆ ಮಂಗಳವಾಗಲಿ , ನಿನಗೆ ಬೇಕಾದ ವರವನ್ನು ಕೇಳು ಎಂದಾಗ , ಪ್ರಹ್ಲಾದ
ಸ್ವಾಮಿ ವರಗಳು ಭಕ್ತಿ ವಿಜ್ಞ ಕಾರಣಗಳು , ಸುಮ್ಮನೆ ಕಾಮಿತವನ್ನು ಬೇಡುವವನು ಭಕ್ತನಾಗುವುದಿಲ್ಲ ವರ್ತಕನಾಗುತ್ತಾನೆ , ಆದರೆ ಹೃದಯದಲ್ಲಿ ಹುಟ್ಟುವ ಕಾಮ ಬೀಜ ನಷ್ಟವಾಗಲಿ ಎಂದುಬೇಡಿದ ಪ್ರಹ್ಲಾದ.
ಆದರೂ ನೀನು ವರದರಾಜ ನಿನ್ನಲ್ಲಿ ಬೇಡುವುದಿಷ್ಟೇ ನನ್ನ ತಂದೆಯನ್ನು ವೈರಿಯೆಂದು ನೋಡದೆ ಉದ್ಧರಿಸು” .
ಅದಕ್ಕೆ ನರಸಿಂಹನ ಅಭಯ “ ನಿನ್ನಂತ ಸುಪುತ್ರ ಜನಿಸಿದ್ದರಿಂದ ಇಪ್ಪತ್ತೊಂದು ತಲೆಮಾರಿನ ಪಿತೃಗಳೆಲ್ಲ ಉದ್ದಾರವಾಗಿರುವವರು.
ನನ್ನ ಭಕ್ತರು ಶಾಂತರು ಅವರು ಯಾವಪ್ರದೇಶಕ್ಕೆ ಕಾಲಿಟ್ಟರು ಅದು ಪವಿತ್ರವೆನಿಸುವುದು ತಂದೆಯ ಪ್ರೇತಕಾರ್ಯಮಾಡು ಪ್ರಾಪ್ತವಾದ ರಾಜ್ಯವಾಳು , ನನ್ನಲ್ಲಿ ಮನಸ್ಸಿಟ್ಟು ಕರ್ಮಗಳನ್ನು ನನ್ನ ಪೂಜೆ ಎಂದು ತಿಳಿ “ ಎಂದು ಹೇಳಿದ ಪರಮ ಪುಣ್ಯದಿನ ಇಂದು.
ಮುಂದೆ ಬ್ರಹ್ಮದೇವರು ಬಂದು ದೇವತೆಗಳ ಪರವಾಗಿ ವಂದಿಸುತ್ತಾರೆ
“ ನಾನು ಸೃಜಿಸಿದ ಪ್ರಾಣಿಗಳಿಂದ ಸಾವು ಬೇಡವೆಂದ ದುಷ್ಟನನ್ನು ನೀನು
ವಧಿಸಿದೆ , ಈ ನಿನ್ನ ರೂಪ ಆಪದ್ರಕ್ಷಕವು , ಮೃತ್ಯು ನಿವಾರಕವೂ ಆಗಿರಲಿ “ ಎಂದರು.
ಭಗವಂತ “ ಬ್ರಹ್ಮ ಇನ್ನುಮೇಲೆ ಇಂತ ವರವನ್ನು ಕ್ರೂರರಾದ ದೈತ್ಯರಿಗೆ ಕೊಡಬೇಡ , ಹಾವಿಗೆ ಹಾಲೆರೆದಂತೆ”
ಎಂದನು.
ನಂತರ ಅಂತರ್ಹಿತನಾದ ಭಗವಂತ.
ಅನಾದಿ ಕಾಲದಿಂದ ಇದ್ದ ನಾರಸಿಂಹ
ರೂಪ ಭಕ್ತನ ಭಕ್ತಿಗೆ ಮೆಚ್ಚಿ ಪ್ರಕಟವಾದ
ದಿನ ಇಂದು.ಪವಿತ್ರವಾದ “ನರಸಿಂಹ
ಜಯಂತಿ”
ನಮ್ಮ ಪ್ರಾರ್ಥನೆ ಪ್ರಹ್ಲಾದ ವರದನಲ್ಲಿ
“ಲೋಕವನ್ನು ಅಂಜಿಸುತ್ತಿರುವ ಈ ಮಹಾಮಾರಿಯಿಂದ ರಕ್ಷಿಸು “ ಎಂದು
||ನಾಹಂ ಕರ್ತಾಹರಿಃ ಕರ್ತಾ||
|| ಶ್ರೀ ಕೃಷ್ಣಾರ್ಪಣಮಸ್ತು ||
***************
ಗ್ರಂಥಾರಂಭೇ ದ್ವಿವಿಧಾಹಿ ದೇವತಾ ನಮನಾದಿ ಮಂಗಳಕ್ರಿಯಾರ್ಹಾ | ಅಧಿಕಾರಿಕೀ ಅಭೀಷ್ಟಾಚೇತಿ ||
ಗ್ರಂಥಾರಂಭದಲ್ಲಿ ಅಧಿಕಾರಿಕೀ ಮತ್ತು ಅಭೀಷ್ಟಾ ಎಂಬ ಎರಡು ವಿಧವಾದ ದೇವತೆಯನ್ನು ವಂದಿಸುವ ಸಂಪ್ರದಾಯವಿದೆ .
ಅಧಿಕಾರಿಕೀ ಅಂದ್ರ ಗ್ರಂಥದಲ್ಲಿ ಅಧಿಕೃತವಾಗಿ ಹೇಳಲ್ಪಡುವ ದೇವತೆ , ಅಭೀಷ್ಟ ಅಂದ್ರ ತಮಗೆ ಪರಮ ಪ್ರೇಮಾಸ್ಪದವಾದ ದೇವತೆ . ಎಂದು ಶ್ರೀಮದ್ಭಾಗವತದಲ್ಲಿ ಹೇಳಿದಂತೆ ಈ ಹರಿಕಥಾಮೃತಸಾರ ಎನ್ನುವ ಶಾಸ್ತ್ರದಲ್ಲಿ ಎರಡು ವಿಧವಾದ ರೀತಿಗಳಲ್ಲಿಯೂ ನರಸಿಂಹನು ದೇವತೆಯಾಗಿದ್ದಾನೆ .
ನಾರಸಿಂಹನು ಅನಿಷ್ಟಪರಿಹಾರಕನಾದ ಕಾರಣ , ಹಾಗೂ ಸಕಲ ಪ್ರಾಣಿಸಮೂಹದ ಸ್ವರೂಪದೇಹಸ್ಥ ಪಂಚಾತ್ಮಕ ಬಿಂಬರೂಪನಾದುದರಿಂದಲೂ , ಅವನು ಖಡ್ಗಪ್ರಹಾರದಿಂದ ಸರ್ವಜೀವಿಗಳ ಲಿಂಗಶರೀರವನ್ನು ಕತ್ತರಿಸುವವನಾದ್ದರಿಂದಲೂ , ಪಾಪವೆಂಬ ಕತ್ತಲೆಗೆ ಸೂರ್ಯನಾಗಿರುವದರಿಂದಲೂ ನೃಸಿಂಹನೇ ಈ ಗ್ರಂಥದಲ್ಲಿ ಪ್ರತಿಪಾದಿಸಲ್ಪಟ್ಟಿದ್ದಾನೆ .
ಸರ್ವಜೀವಸ್ವರೂಪೇಚ ನಾರಸಿಂಹೋಂತರಾತ್ಮವಾನ್ | ಮಧ್ಯಂ ನಾರಾಯಣಃ ಪ್ರೋಕ್ತೋವಾಸುದೇವಸ್ತುಪುಚ್ಛಗಃ |ವಾಮೇ ಸಂಕರ್ಷಣಃಪ್ರೋಕ್ತೋ ಪ್ರದ್ಯುಮ್ನೋ ದಕ್ಷಿಣೇ ತಥಾ | ಅನಿರುದ್ಧಃ ಶಿರಶ್ಚೈವ ತಥೈಕೋಪಿ ಹಿ ಪಂಚಧಾ | ಯತಃ ಪಂಚಾತ್ಮಕೋದೇವೋ ಹ್ಯತಃ ಸರ್ವತ್ರ ವರ್ತತೇ|| -(ತಂತ್ರಸಾರ)
ಸರ್ವಜೀವರ ಸ್ವರೂಪದೇಹದಲ್ಲಿ ನರಸಿಂಹನು ಅಂತರಾತ್ಮನು , ಮಧ್ಯದಲ್ಲಿ ಶ್ರೀನಾರಾಯಣನು , ವಾಸುದೇವನು ಪುಚ್ಛಗತರೂಪನು , ಎಡದಲ್ಲಿ ಸಂಕರ್ಷಣನು ಬಲಭಾಗದಲ್ಲಿ ಪ್ರದ್ಯುಮ್ನನು , ಅನಿರುದ್ಧನು ಶಿರಸ್ಸಿನಲ್ಲಿ . ಹೀಗೆ ಒಬ್ಬನೇ ಆದ ಪರಮಾತ್ಮನು ಪಂಚರೂಪನಾದುದರಿಂದ ಈ ರೂಪಗಳಿಂದ ಸರ್ವರ ಶರೀರಗಳಲ್ಲಿಯೂ ಇರುತ್ತಾನೆ . ವಿರಜಾಸ್ನಾನದಿಂದ ತೋಯಲ್ಪಟ್ಟು ದ್ವಿಗುಣವಾಗಿ ಬೆಳೆದು ನಿಂತಿರುವ ಸತ್ವಗುಣಯುಕ್ತವಾದ ಲಿಂಗಶರೀರವನ್ನು ಕಂಡು ಭಗವಾನ್ ಸರ್ವೇಶನೂ ಅಂತರಾತ್ಮನೂ ಆದ ಶ್ರೀಮನೃಸಿಂಹನು ತನ್ನ ಖಡ್ಗದಿಂದ ಕತ್ತರಿಸಿ ಲೀಂಗದೇಹದ ಭಂಗವನ್ನು ಮಾಡುತ್ತಾನೆ . ಎಂದು ತಂತ್ರಸಾರ ದಲ್ಲಿ ಹೇಳಲಾಗಿದೆ .
ಮಾಯಾವಾದಖಂಡನದ ಶ್ರೀಮಜ್ಜಯತೀರ್ಥರ ಟೀಕಾಮಂಗಲ ಪದ್ಯದಲ್ಲಿ ನರಸಿಂಹೋಖಿಲಾಜ್ಞಾನ ಮತಧ್ವಾಂತ ದಿವಾಕರಃ ಜಯತ್ಯಮಿತ ಸಜ್ಞಾನ ಸುಖಶಕ್ತಿಪಯೋನಿಧಿಃ - ಅಸಹ್ಯವಾದ ಪ್ರಬಲವಾದ ವಿಘ್ನಗಳೆಂಬ ತಿಮಿರಗಳನ್ನು ಕಳೆಯುವವನೆಂದೂ , ಅಖಿಲವಾದ ಅಜ್ಞಾನಮತವೆಂಬ ಕತ್ತಲೆಗೆ ಸೂರ್ಯನಾದವನು , ಸಮೀಚೀನವಾದ ಜ್ಞಾನವನ್ನು ಕರುಣಿಸುವವನಾದ ನೃಸಿಂಹನು ಜ್ಞಾನನಂದಾದಿಗಳ ನಿಧಿಯಾಗಿರುವನು ಎಂದು ವರ್ಣಿಸಲಪ್ಪಟ್ಟಿದ್ದಾನೆ.
ಅಂತಸ್ಥಿತನಾಗಿ ರಮಣವನ್ನು ಮಾಡುವ ಅಂತರಾತ್ಮನು ಪುತ್ರನಿಗಿಂತಲೂ ಪ್ರಿಯತರನು , ವಿತ್ತಕ್ಕಿಂತಲೂ ಅಧಿಕ ಪ್ರಿಯನು , ಉಳಿದೆಲ್ಲಕ್ಕಿಂತಲೂ ಪ್ರಿಯತಮನು ಎಂದು ವೇದದಲ್ಲಿ ಹೇಳಿರುವದರಿಂದ ಶ್ರೀನೃಸಿಂಹನೇ ಪ್ರಿಯತಮನಾಗಿರುವದರಿಂದ ಪರಮ ಅಭೀಷ್ಟ ನೆಂದು ಸಿದ್ಧವಾಗುವದರಿಂದ ಶ್ರೀಮಾನವೀಪ್ರಭುಗಳು ಶ್ರೀನೃಸಿಂಹನನ್ನೇ ಮಂಗಳಪ್ರಾಪ್ತಿಗಾಗಿ ಪ್ರಾರ್ಥಿಸಿದ್ದಾರೆ 🙏🏽🙇♂🙏🏽
***************
ನೃಸಿಂಹ ಅವತಾರದ ಮುಖ್ಯ ಉದ್ದೇಶ
ಸತ್ಯಂ ವಿಧಾತುಂ ನಿಜಬೃತ್ಯಭಾಷಿತಂ
ಸತ್ಯಂವಿಧಾತುಂ ನಿಜಭೃತ್ಯ ಭಾಷಿತಂ
ಎನ್ನುವ ಈ ಭಾಗವತಸಪ್ತಮ ಸ್ಕಂಧದ ಮಾತಿಗೆ ಶ್ರೀಸತ್ಯಧರ್ಮತೀರ್ಥರು ಅನೇಕವಿಧವಾಗಿ ವ್ಯಾಖ್ಯಾನಮಾಡಿದ್ದಾರೆ.
ಈಗಾಗಲೇ ಅನೇಕಬಾರಿ ಅವುಗಳನ್ನು ಆಚಾರ್ಯ ಕಟ್ಟಿಯವರು, ಫಣೀಂದ್ರ ಅಚಾರ ಹೇಳಿದ್ದರೂ ಅವು ನಿತ್ಯ ನೂತನ
ಅವರು ಹಿಂದೆ ಹೇಳಿದ್ದನ್ನೇ ರಿಪ್ರಡ್ಯೂಸ ಮಾಡುತ್ತೇನೆ.
ನಿಜಭೃತ್ಯ ಎಂದರೆ ಏಕಾಂತಭಕ್ತನಾದ ಪ್ರಹ್ಲಾದ. ಇವನು "ಭಗವಂತನು ಎಲ್ಲೆಲ್ಲೂ ಇದ್ದಾನೆ" ಎಂದು ಹೇಳಿದ ಈ ಮಾತನ್ನು ಸತ್ಯವಾಗಿಸಲು ಕಂಬದಲ್ಲಿ ಶ್ರೀಹರಿಯು ಪ್ರಕಟನಾದ .
ನಿಜಭೃತ್ಯ ಎಂದರೆ ದ್ವಾರಪಾಲಕರಾದ ಜಯ --ವಿಜಯರು ಅವರಿಗೆ ಸನಕಾದಿಗಳ ಶಾಪದ ಸಮಯದಲ್ಲಿ ಭಗವಂತನು ಮೂರು ಜನ್ಮದಲ್ಲಿಯೂ ನಾನೇ ನಿಮ್ಮನ್ನು ವಧಿಸುತ್ತೇನೆ ಎಂದು ವರಕೊಟ್ಟಿದ್ದ .ಅದನ್ನು ಸತ್ಯವಾಗಿಸಲು ಕಂಬದಿಂದ ಬಂದ.
ನಿಜಭೃತ್ಯ ಎಂದರೆ ಸನಕಾದಿಗಳು .ಅವರು ಕೊಟ್ಟ ಶಾಪ ಮೂರುಜನ್ಮಗಳ ಬಳಿಕ ವೈಕುಂಠಕ್ಕೆ ತೆರಳಿರಿ ಎಂದು ಆ ನಿಜಭೃತ್ಯರಾದ ಸನಕಾದಿಗಳ ಶಾಪಕ್ಕೆ ಬೆಲೆಕೊಟ್ಟು ಕಂಬದಿಂದ ಪ್ರಕಟನಾದ
ನಿಜಭೃತ್ಯ ಎಂದರೆ ಚತುರ್ಮುಖ ಬ್ರಹ್ಮ ಅವನು ಹಿರಣ್ಯಕಶಿಪುವಿಗೆ ನಿನ್ನ ವರ ಸತ್ಯವಾಗಲಿ ಎಂದಿದ್ದ ಆ ಚತುರ್ಮುಖ ಬ್ರಹ್ಮನ ಮಾತನ್ನು. ಸತ್ಯವಾಗಿಸಲು
ನರಸಿಂಹನಾಗಿ ಬಂದ.
ನಿಜ ಎಂದರೆ ತಾನು ಭೃತ್ಯ ಎಂದರೆ ಭೃತ್ಯರ ವಿಷಯದಲ್ಲಿ ಕೊಟ್ಟಿರುವ ಮಾತು ನ ಮೇ ಭಕ್ತಃ ಪ್ರಣಶ್ಯತಿ ಎಂದು ತನ್ನ ಭಕ್ತರಿಗೆ ನಾಶವಿಲ್ಲವೆಂಬ ತನ್ನ ಭಕ್ತರ ಮಾತನ್ನು ಸತ್ಯವಾಗಿಸಲು ನರಸಿಂಹನಾಗಿ ಬಂದ
ನಿಜಭೃತ್ಯ ಎಂದರೆ ತನ್ನ ಭೃತ್ಯರಿಗೆ ಭಗವಂತನೇ ಕೊಟ್ಟಮಾತು ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರ ಸಾಗರಾತ್ ತನ್ನ ಭಕ್ತರ ಸಂಸಾರ ಸಮುದ್ರದಿಂದ ನಾನೇ ಪಾರು ಮಾಡುತ್ತೇನೆ ಎಂದು ಅದನ್ನು ಸತ್ಯವಾಗಿಸಲು ನರಸಿಂಹನಾಗಿ ಬಂದ.
ನಿಜಭೃತ್ಯ ಎಂದರೆ ಹರಿಭಕ್ತರು ಆ ಹರಿಭಕ್ತರು ಮಾಂ ರಕ್ಷತು ವಿಭುರ್ನಿತ್ಯಂ ನಮ್ಮನ್ನು ನಿರಂತರ ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ .ಅವರ ಪ್ರಾರ್ಥನೆಯನ್ನು ಸತ್ಯವಾಗಿಸಲು ನರಸಿಂಹನಾಗಿ ಬಂದ
ನಿಜಭೃತ್ಯರು ಎಂದರೆ ಶ್ರೀಮದಾಚಾರ್ಯರು ಇವರೇ ನಿಜವಾದ ಭೃತ್ಯರು ಇವರು ಪ್ರಾದುರ್ಭವೋ ಹರೇರ್ಜನಿಃ
ಭಗವಂತನ ಹುಟ್ಟು. ಎಂದರೆ ಪ್ರಾದುರ್ಭಾವ ಶ್ರೀಹರಿಗೆ ತಂದೆ ತಾಯಿಗಳಿಲ್ಲ. ಬಂಧು ಬಾಂಧವರಿಲ್ಲ ಜಡವಾದ ದೇಹದಿಂದ ಹುಟ್ಟಿಲ್ಲ ಎಂದು ತಿಳಿಸಿದ್ದಾರೆ . ಈ ಶ್ರೀಮದಾಚಾರ್ಯರ ವಚನವನ್ನು ಸತ್ಯವಾಗಿಸಲು ನರಹರಿಯು ಕಂಬದಿಂದ ಬಂದ.
ಹಾಗೆಯೇ ಜಗನ್ನಾಥದಾಸರೂ ನಿಜ ಭೃತ್ಯರೇ.
*ಅವರು ಹರಿಕಥಾಮೃತಸಾರದಲ್ಲಿ ಹೇಳುವ ಮಾತುಗಳೆಲ್ಲ ಸತ್ಯ, ಸತ್ಯವನ್ನೇ ಹರಿಕಥಾಮೃತಸಾರದಲ್ಲಿ ಹೇಳುತ್ತಾರೆ. ಹರಿ ಕಥಾಮೃತಸಾರದಲ್ಲಿ ಹೇಳಿದ್ದೆಲ್ಲ ಸತ್ಯ ಎಂಬ ಅನುಸಂಧಾನ ಅದನ್ನು ಓದವ / ತಿಳಿದುಕೊಳ್ಳುವ ಜನರಿಗೆ ಸದಾ ಇರಲಿ, ಬರಲಿ ಎಂಬ ವಿಚಾರವೂ ದಾಸಾರ್ಯರನ್ನು "ನರಸಿಂಹದೇವರನ್ನೇ" ಪ್ರಾರ್ಥಿಸಲು ಪ್ರೇರೇಪಿಸಿರಬಹುದೇ.................ಜನಿ
***********
ಉಗ್ರಂ ವೀರಂ ಮಹಾವಿಷ್ಣುಂ | ಜ್ವಲಂತಂ ಸರ್ವತೋಮುಖಂ | ನೃಸಿಂಹ ಭೀಷಣಂ ಭದ್ರಂ | ಮೃತ್ಯುಮೃತ್ಯು ನಮಾಮ್ಯಹಂ ||
ಸಂಕ್ಷಿಪ್ತ ವಿವರಣೆ :-
ಉಗ್ರಂ :- ವಿಶಾಲವಾದ ಬಟ್ಟಲ ಕಣ್ಣುಳ್ಳವನೇ ,ಶತ್ರುನಿಗ್ರಹಕ್ಕೆ ಪಣತೊಟ್ಟಿರುವವನೇ ಭಯಂಕರ ಗರ್ಜನೆಯಿಂದ ಲೋಕವನ್ನೆಲ್ಲ ತಲ್ಲಣಗೊಳಿಸುತ್ತಿರುವ ಉಗ್ರ {ರೂಪಿ ವಿಷ್ಣುವಿಗೆ } ನರಸಿಂಹನಿಗೆ ನಮಸ್ಕಾರಗಳು
ವೀರಂ :- ಯಾರಿಂದಲೂ ಕೊಲ್ಲಲಾಗದ ದಿತಿಯ ಪುತ್ರ ಹಿರಣ್ಯಕಶಿಪು , ಹಾಗೂ ಅವನ ದೊಡ್ಡ ಸೈನ್ಯವನ್ನು ತನ್ನ ಹರಿತಾದ ಉಗುರುಗಳಿಂದಲೇ ಛಿದ್ರ ಛಿದ್ರ ಮಾಡಿದ ವೀರ ನರಸಿಂಹನಿಗೆ ನಮಸ್ಕಾರಗಳು
ಮಹಾವಿಷ್ಣುಂ :- ಯಾರ ಪಾದಗಳು ಪಾತಾಳವನ್ನು ಹಣೆಯು {ಶಿರವು} ದೇವಲೋಕ ವನ್ನು ಸ್ಪರ್ಶಿಸಿ ಭುಜಗಳು ಎಲ್ಲ ದಿಕ್ಕು ಹರಡಿವೆಯೋ ಅಂತಹ ಮಹಾವಿಷ್ಣುವಿಗೆ ನಮಸ್ಕಾರಗಳು
ಜ್ವಲಂತಂ :- ಯಾರ ತೇಜಸ್ಸಿನಿಂದ ಸೂರ್ಯ ಚಂದ್ರ ತಾರೆ, ಹಾಗೂ ಅಗ್ನಿ ತುಂಬ ಹೊಳೆಯುತ್ತಿದ್ದಾರೋ ಅಂತಹ ತೇಜಃಪುಂಜನಾದ ಸ್ವಾಮಿಗೆ ನಮಸ್ಕಾರಗಳು
ಸರ್ವತೋ ಮುಖಂ :- ಎಲ್ಲವನ್ನೂ ಎಲ್ಲ ಸಮಯದಲ್ಲೂ ಇಂದ್ರಿಯಗಳಸಹಾಯವಿಲ್ಲದೆತಿಳಿದುಕೊಳ್ಳಬಲ್ಲ ಸರ್ವತೋಮುಖನಾದ ಆದಿ ಪುರುಷನಿಗೆ ನಮಸ್ಕಾರಗಳು
ನೃಸಿಂಹ :- ಅರ್ಧಮಾನವ ಅರ್ದ ಸಿಂಹ ರೂಪವಿರುವ ಯಾವ ದೇವನ ರೂಪವು ಕೇಶಃಪುಂಜವಾಗಿದ್ದು ತೀಕ್ಷಣದಂಷ್ಟ್ರಗಳನ್ನು ಹೊಂದಿರುವ ನರಸಿಂಹಸ್ವಾಮಿಗೆ ನಮಸ್ಕಾರಗಳು.
ಭೀಷಣಂ :- ಯನ್ನಾಮ ಸ್ಮರಣಾತ್ ಭೀತಾಃ ಭೂತ ಬೇತಾಳ ರಾಕ್ಷಸಾಃ | ರೋಗಾಧ್ಯಕ್ಷ ಪ್ರಣಶ್ಯಂತಿ ಭೀಷಣಂ ತಂ ನಮಾಮ್ಯಹಂ || ಪ್ರಾಚೀನ ಪಾಪ ಕರ್ಮಗಳ ಫಲವನ್ನು ಅನುಭವಿಸುವಂತೆ ಮಾಡಲು ಭೂತ ಪ್ರೇತ ಪಿಶಾಚಾದಿ ದುಷ್ಟ ಶಕ್ತಿಗಳ ಪ್ರಭಾವ ,ಜ್ವರಾದಿ ರೋಗರುಜಿಗಳು ಜೀವರನ್ನು ಹಿರಣ್ಯಕಶಿಪುವಿನಂತೆ ಪೀಡಿಸುತ್ತವೆ.ಅವನ (ನೃಸಿಂಹ ) ನಾಮಸ್ಮರಣೆ ಮಾಡಿ, ಭಕ್ತಿಯಿಂದ ಮೊರೆಹೊಕ್ಕರೆ ಈ ದುಷ್ಟ ಶಕ್ತಿಗಳಿಗೆ "ಭೀಷಣ" ನಾಗಿ ಅವುಗಳನ್ನು ಹೊಡೆದೋಡಿಸುತ್ತಾನೆ.
ಭದ್ರಂ ಸರ್ವೋಪ್ರಿಯಂ ಸಮಾಶ್ರಿತ್ಯ ಸಕಲಂ ಭದ್ರಮಶ್ನುತೆ | ಶ್ರೀಯಾ ಚ ಭದ್ರಾಯ ಜುಷ್ಟಃ ಯಸ್ತುಂ ಭದ್ರಂ ನಮಾಮ್ಯಹಂ || ಅವನು {ನರಸಿಂಹ } ಉಗ್ರನೂ ವೀರನೂ, ಕೋಪದಿಂದ ಜ್ಚಲಿಸುವವನೂ ಸರ್ವತೋಮುಖನೂ ,ಭಯಂಕರನೂ ಹೌದು ಆದರೂ ಅವನು ಮಂಗಳಕರ! ಇದಕ್ಕೆ ಕಾರಣ ಜಗಜ್ಜನನಿಯೂ ಕರುಣಾಮಯಿಯೂ,ಕ್ಷಮಾಗುಣ ಸಂಪನ್ನಳೂ ಆದ ಭದ್ರೆಯು {ಮಹಾಲಕ್ಷ್ಮೀಯು} ಅವನ ಹೃದಯ ಕಮಲದಲ್ಲಿ ಸದಾ ಸ್ಥಾಪಿತಳಾಗಿರುವುದು.ಹೀಗೆ ಸದಾ "ಭದ್ರೆ" ಸಾಂಗತ್ಯದಲ್ಲಿರುವ ಅವನು ನಮಗೆ "ಭದ್ರನಾಗಿದ್ದಾನೆ" ಇದನ್ನೇ ಶಿವನು ಪಾರ್ವತಿಗೆ ಹೀಗೆ ಹೇಳುತ್ತಾನೆ ಯಾವ ದೇವನನ್ನು ಆಶ್ರಯಿಸಿ ಚೇತನರೆಲ್ಲರೂ ಎಲ್ಲ ವಿಧವಾದ ಮಂಗಳವನ್ನು ಪಡೆಯುತ್ತಾರೋ ಅಂತಹ ಭದ್ರಾ ಎಂಬ ಹೆಸರುಳ್ಳ ಶ್ರೀದೇವಿಯನ್ನು ಒಡಗೂಂಡಿರುವ "ಭದ್ರ" ನಿಗೆ ನಮಸ್ಕರಿಸುತ್ತೇನೆ ವಿವಾಹಾದಿ ಮಂಗಳಕರವಾದ, ಹಾಗೂ ಸಂತಾನ ಸೌಭಾಗ್ಯಾದಿ ಯೋಗ್ಯ ಫಲಗಳನ್ನು ಕೊಡಲು ಮಾಲೋಲ ಹಾಗೂ ಪಾವನ ನರಸಿಂಹರಿದ್ದಾರೆ.
ಮೃತ್ಯುಮೃತ್ಯುಂ ನಮಾಮ್ಯಹಂ: ಸಾಕ್ಷತ್ ಸ್ವಕಾಲೇ ಸಂಪ್ರಾಪ್ತೆ ಮೃತ್ಯುಂ ಶತ್ರುಗಣಾನಪಿ | ಭಕ್ತನಾಂ ನಾಶಯೇದ್ಯಸ್ತಂ ಮೃತ್ಯುಂ ನಮಾಮ್ಯಹಂ || ಅಂತರಿಕವಾಗಿ ಅರಿಷಡ್ವರ್ಗಗಳಿಂದ ಹಾಗೂ ಬಾಹ್ಯವಾಗಿ ದುಷ್ಟಶಕ್ತಿಗಳಿಂದ ಮೃತ್ಯು ಜೀವಿಗಳನ್ನು ಸುತ್ತುವರೆದಿರುತ್ತದೆ.ನರಸಿಂಹ ದೇವನು ಸಕಾಲದಲ್ಲಿ ಬಂದು ಶತ್ರುಗಳಿಂದ ಒದಗಿ ಬರುವ ಮೃತ್ಯುವಿಗೆ ತನ್ನ ಭಕ್ತರನ್ನು ಕಾಪಡುತ್ತಾನೆ.ಅಂತಹ ದೇವಿನಿಗೆ ನಾನು ನಮಸ್ಕರಿಸುತ್ತೇನೆ, ಎಂದು ತನ್ನ ಸತಿಗೆ ಶಂಕರನು ಹೇಳುತ್ತಾನೆ.
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
************
ಭಕ್ತ ಪ್ರಹ್ಲಾದ
ಹಿರಣ್ಯಕಶ್ಯಪೂಗೆ ದೊರೆತ ವರ
ಹಿರಣ್ಯಕಶ್ಯಪೂ ಎಂಬ ರಾಜನಿಗೆ ಪ್ರಹ್ಲಾದನೆಂಬ ಮಗನಿದ್ದನು. ಹಿರಣ್ಯಕಶ್ಯಪೂವು ಘೋರ ತಪಸ್ಸನ್ನು ಆಚರಿಸಿ ದೇವರನ್ನು ಪ್ರಸನ್ನಗೊಳಿಸಿ ’ತನ್ನ ಮರಣವು ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಬರಕೂಡದು, ಹಗಲು ಅಥವಾ ರಾತ್ರಿ ಬರಬಾರದು, ಮನೆಯಲ್ಲಿ ಅಥವಾ ಮನೆಯ ಹೊರಗೆ ಬರಬಾರದು.’ ಎಂದು ವರ ಪಡೆದುಕೊಂಡಿದ್ದನು. ಈ ವರದಿಂದ ಅವನಿಗೆ ತನ್ನನ್ನು ಯಾರೂ ಕೊಲ್ಲಲಾರರು ಎಂದು ಅನಿಸಿತು. ಇದರಿಂದ ರಾಜನಿಗೆ ಅಹಂಕಾರ ಬಂದಿತು. ಅವನಿಗೆ ‘ದೇವರಿಗಿಂತ ತಾನೇ ದೊಡ್ಡವನು’, ಎಂದು ಅನಿಸತೊಡಗಿತು. ಯಾರಾದರೂ ದೇವರ, ಅದರಲ್ಲಿಯೂ ವಿಷ್ಣುವಿನ ಹೆಸರುಹೇಳಿದರೆ ಅವನಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ.
ಪ್ರಹ್ಲಾದನ ದೇವ ಭಕ್ತಿ
ಹಿರಣ್ಯಕಶ್ಯಪೂವಿನ ಮಗನಾದ ಪ್ರಹ್ಲಾದನು ಮಾತ್ರ ಸತತವಾಗಿ ದೇವರ ನಾಮಸ್ಮರಣೆಯನ್ನು ಮಾಡುತ್ತಿದ್ದನು. ‘ನಾರಾಯಣ ನಾರಾಯಣ’ ಹೀಗೆ ಜಪ ಮಾಡುತ್ತಲೇ ಅವನು ದೈನಂದಿನ ಕೆಲಸಗಳನ್ನು ಮಾಡುತ್ತಿದ್ದನು. ತಂದೆಗೆ ದೇವರ ನಾಮಸ್ಮರಣೆ ಮಾಡುವುದು ಇಷ್ಟವಾಗುವುದಿಲ್ಲವೆಂದು ಪ್ರಹ್ಲಾದನು ತಂದೆಯ ಎದುರು ಬರುತ್ತಿರಲಿಲ್ಲ. ಆದರೂ ಯಾವಾಗಲೊಮ್ಮೆ ಪ್ರಹ್ಲಾದನಿಗೆ ರಾಜನ ಭೇಟಿಯಾಗುತ್ತಿತ್ತು. ಪ್ರಹ್ಲಾದನ ನಾಮಸ್ಮರಣೆಯನ್ನು ಕೇಳಿ ರಾಜನು ಸಿಟ್ಟಿನಿಂದ ಕೆಂಡಮಂಡಲವಾಗುತ್ತಿದ್ದನು ಹಾಗೂ ಮಗನಿಗೆ ಸಾಕಷ್ಟು ದೊಡ್ಡ ಶಿಕ್ಷೆಯನ್ನು ವಿಧಿಸುವಂತೆ ಸೇವಕರಿಗೆ ಆಜ್ಞೆ ಮಾಡುತ್ತಿದ್ದನು.
ಪ್ರಹ್ಲಾದನ ಭಕ್ತಿಯ ಪರೀಕ್ಷೆ
ಒಂದು ದಿನ ನಾಮಜಪದಲ್ಲಿ ತಲ್ಲೀನನಾಗಿದ್ದ ಪ್ರಹ್ಲಾದನಿಗೆ ಹಿರಣ್ಯಕಶ್ಯಪೂಬರುತ್ತಿರುವುದು ತಿಳಿಯಲೇ ಇಲ್ಲ. ರಾಜನು ನಾಮಜಪ ಕೇಳುತ್ತಿದ್ದಂತೆಯೇ ಸೇವಕರಿಗೆ ’ಬೆಟ್ಟದ ಎತ್ತರದ ಭಾಗದಿಂದ ಆಳವಾದ ಕಂದಕದಲ್ಲಿ ಪ್ರಹ್ಲಾದನನ್ನುನೂಕಿ ಹಾಗೂ ಹೀಗೆ ಮಾಡಿದ ನಂತರ ಬಂದು ನನಗೆ ತಿಳಿಸಿ’ ಎಂದುಆಜ್ಞೆ ಮಾಡಿದನು. ಸೇವಕರು ಹಾಗೆ ಮಾಡಿದರು ಹಾಗೂ ರಾಜನಿಗೆ ಈ ಬಗ್ಗೆ ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿಯೇ ಅರಮನೆಯ ಮಹಡಿಯಲ್ಲಿ ನಿಂತ ರಾಜನಿಗೆ ದೂರದಿಂದಲೇ ಪ್ರಹ್ಲಾದನು ಅರಮನೆಯತ್ತ ಬರುತ್ತಿರುವುದು ಕಾಣಿಸಿತು. ಜೀವಂತವಾಗಿರುವ ಪ್ರಹ್ಲಾದನನ್ನು ಕಂಡು ರಾಜನು ಸೇವಕರ ಮೇಲೆ ಕುಪಿತಗೊಂಡನು. ನಡೆದ ವಿಷಯವನ್ನು ತಿಳಿಯಲು ಮಗನನ್ನೇ ವಿಚಾರಿಸಬೇಕು ಎಂದು ‘ಪ್ರಹ್ಲಾದನು ಅರಮನೆಯಲ್ಲಿ ಪ್ರವೆಶಿದ ಕೂಡಲೇ ನನ್ನ ಎದುರಿನಲ್ಲಿ ನಿಲ್ಲಿಸಿ', ಎಂದುರಾಜನು ಸೇವಕರಿಗೆ ಆಜ್ಞೆ ಮಾಡಿದನು. ಅರಮನೆಗೆಬಂದನಂತರ ಪ್ರಹ್ಲಾದನು ರಾಜನೆದುರು ವಿನಮ್ರವಾಗ ನಿಂತನು. ರಾಜನು ಅವನಿಗೆ ಕೇಳಿದನು. ‘ಸೇವಕರು ನಿನಗೆ ಬೆಟ್ಟದ ಮೇಲಿನ ತುದಿಯಿಂದ ನೂಕಿ ಹಾಕಿದರೋ, ಇಲ್ಲವೋ?' ಗುಡುಗಿದನು. ‘ಹೌದು, ನೂಕಿದರು’ ಎಂದು ಪ್ರಹ್ಲಾದ ಉತ್ತರಿಸಿದನು. ರಾಜನು ಪುನಃ ಕೇಳಿದನು, ‘ಹಾಗಾದರೆ ನೀನು ಇಲ್ಲಿ ಹೇಗೆ ಬಂದಿರುವಿ?’ ಆಗ ಪ್ರಹ್ಲಾದನು ನಗುತ್ತ ಹೇಳಿದನು, ‘ನಾನು ಒಂದು ಮರದ ಮೇಲೆ ನಿಧಾನವಾಗಿ ಬಿದ್ದೆ. ಮರದ ಮೇಲಿಂದ ಕೆಳಗೆ ಇಳಿದೆ. ಅಲ್ಲಿಂದಲೇ ಒಂದು ಎತ್ತಿನಗಾಡಿ ಹೊರಟಿತ್ತು. ಅದರಲ್ಲಿ ಕುಳಿತು ದಾರಿಯವರೆಗೆ ತಲುಪಿದೆ. ಏಕೋ, ಏನೋ; ಸತತ ನನ್ನ ಜೊತೆ ಯಾರೋ ಇದ್ದಾರೆಎಂದು ಅನ್ನಿಸುತ್ತಿತ್ತು; ಆದುದರಿಂದ ನಾನು ಇಲ್ಲಿ ಬೇಗ ತಲುಪಿದೆ.' ಇದನ್ನು ಕೇಳಿ ನಿರಾಶನಾದ ರಾಜನು ಪ್ರಹ್ಲಾದನಿಗೆ ಹೋಗಲು ತಿಳಿಸಿದನು.
ಪ್ರಹ್ಲಾದನಿಗೆ ಮತ್ತೊಮ್ಮೆ ಶಿಕ್ಷೆ
ಕೆಲದಿನಗಳು ಉರುಳಿದವು. ರಾಜನ ವಿಶಿಷ್ಟ ಜನರಿಗಾಗಿ ಭೋಜನ ಸಿದ್ಧಪಡಿಸುವಲ್ಲಿ ಪ್ರಹ್ಲಾದನು ಏನೋ ಕೆಲಸಕ್ಕೆಂದು ಹೋಗಿರುವಾಗ ಅದೇ ಸಮಯಕ್ಕೆ ಅಲ್ಲಿ ಬಂದ ರಾಜನ ಗಮನವು ಪ್ರಹ್ಲಾದನ ಮೇಲೆ ಬಿತ್ತು. ಪ್ರಹ್ಲಾದನು ‘ನಾರಾಯಣ ನಾರಾಯಣ’ ಎಂದು ನಾಮಜಪ ಮಾಡುತ್ತ ಹೊರಟಿದ್ದನು. ಪುನಃ ರಾಜನು ಕೋಪಗೊಂಡನು. ಹತ್ತಿರದಲ್ಲೇ ಇರುವ ದೊಡ್ಡ ಬಾಣಲೆಯಕಾಯ್ದ ಎಣ್ಣೆಯಲ್ಲಿ ಪ್ರಹ್ಲಾದನನ್ನುಹಾಕಿ' ಎಂದು ಅವನು ಸೇವಕರಿಗೆ ಆಜ್ಞೆ ಮಾಡಿದನು. ಸೇವಕರು ಗಾಬರಿಗೊಂಡರು; ಏಕೆಂದರೆ ಪ್ರಹ್ಲಾದನನ್ನು ಎಣ್ಣೆಯಲ್ಲಿ ಹಾಕುವಾಗ ಕಾಯ್ದ ಎಣ್ಣೆಯು ತಮ್ಮಮೈಮೇಲೆ ಸಿಡಿದು ಬಿದ್ದು ನಾವು ಸುಟ್ಟುಕೊಳ್ಳಬಹುದೆಂದು ಅವರಿಗೆ ಹೆದರಿಕೆ ಆಯಿತು; ಆದರೆ ಏನು ಮಾಡುವುದು? ರಾಜಾಜ್ಞೆಯನ್ನು ಪಾಲಿಸಲೇ ಬೇಕು; ಆದುದರಿಂದ ಅವರು ಪ್ರಹ್ಲಾದನನ್ನು ಕಾಯ್ದ ಎಣ್ಣೆಯಲ್ಲಿ ಹಾಕಿದರು. ‘ಈಗ ಇವನಿಗೆ ಯಾರು ಕಾಪಾಡುವರು’, ಎಂಬುದನ್ನು ನೋಡಲು ರಾಜನು ಅಲ್ಲೇ ಉಪಸ್ಥಿತನಿದ್ದನು. ನಾಲ್ಕೂ ಬದಿಯಿಂದ ಕಾಯ್ದ ಎಣ್ಣೆಯು ಸಿಡಿಯಿತು. ಸೇವಕರು ಸುತ್ತು ಗಾಯಗಳಿಂದ ನೋವು ತಡೆಯಲಾರದೇ ಒದ್ದಾಡುತಿದ್ದರು.; ಆದರೆ ಪ್ರಹ್ಲಾದ ಮಾತ್ರ ಶಾಂತವಾಗಿ ನಿಂತಿದ್ದನು. ರಾಜನು ಬೆರಗಾಗಿನಿಂತನು. ನೋಡುತ್ತಾ ಬಾಣಲೆಯಲ್ಲಿ ಕಮಲಗಳು ಕಾಣಹತ್ತಿದವು. ಅದರ ಮೇಲೆ ಪ್ರಹ್ಲಾದನು ಶಾಂತವಾಗಿನಿಂತಿದ್ದನು. ಪುನಃ ಕೋಪಗೊಂಡ ರಾಜನುತನ್ನ ಪರಿವಾರ ಸಮೇತವಾಗಿ ಹೊರಟುಹೋದನು.
ಪ್ರಹ್ಲಾದನ ಭಕ್ತಿಗೆ ವಿಷ್ಣು ನರಸಿಂಹ ಅವತಾರ ತಾಳುವುದು
ರಾಜನು ಪ್ರಹ್ಲಾದನ ಮೇಲೆ ಕಣ್ಣಿಟ್ಟಿದ್ದನು. ಕೊನೆಗೆ ಒಂದು ದಿನ ರಾಜನು ಪ್ರಹ್ಲಾದನಿಗೆ ಕೇಳಿದನು, ‘ಹೇಳು, ಎಲ್ಲಿದ್ದಾನೆ ನಿನ್ನ ದೇವರು? ಆಗ ಪ್ರಹ್ಲಾದನು ‘ಎಲ್ಲೆಡೆ’ ಎಂದುಹೇಳಿದನು. ರಾಜನು ಹತ್ತಿರದಲ್ಲೇ ಇದ್ದ ಕಂಬವನ್ನು ಒದ್ದು ‘ಈ ಕಂಬದಲ್ಲಿಯೂ ಇದ್ದಾನೆಯೇ? ಇದ್ದಾರೆ ತೋರಿಸಿ ನಿನ್ನ ದೇವರನ್ನು!’ ಎಂದು ಗುಡುಗಿದನು.ಅಷ್ಟರಲ್ಲಿಯೆ ಗರ್ಜಿಸುತ್ತ ನರಸಿಂಹನು ಕಂಬದೊಳಗಿಂದ ಪ್ರಕಟನಾದನು. ಹಿರಣ್ಯಕಶ್ಯಪೂ ಪಡೆದ ವರಗಳ ನಿಯಮಗಳನ್ನು ಪಾಲಿಸಲುಮನುಷ್ಯನ ಶರೀರ ಹಾಗೂ ಸಿಂಹದ ಮುಖ (ತಲೆ) ಇದ್ದ ನರಸಿಂಹ(ಅಂದರೆ ಮನುಷ್ಯ ಅಥವಾ ಪ್ರಾಣಿಯಲ್ಲ), ಹೊಸ್ತಿಲಿನ ಮೇಲೆ (ಅಂದರೆ ಮನೆಯಲ್ಲಿ ಅಥವಾ ಮನೆಯ ಹೊರಗೆ ಅಲ್ಲ), ಮುಸ್ಸಂಜೆಯ ಸಮಯದಲ್ಲಿ(ಅಂದರೆ ಹಗಲು ಅಥವಾ ರಾತ್ರಿಯಲ್ಲ)ಹಿರಣ್ಯಕಶ್ಯಪೂವಿನ ಹೊಟ್ಟೆಯನ್ನು ಉಗುರುಗಳಿಂದ (ಶಸ್ತ್ರ ಅಥವಾ ಅಸ್ತ್ರದಿಂದ ಮರಣ ಬರುವಂತಿಲ್ಲ) ಸೀಳಿಅವನನ್ನು ನಾಶಗೊಳಿಸಿದನು.
ಪ್ರಹ್ಲಾದನ ನಾಮಸಾಧನೆಯಿಂದ ನಾರಾಯಣನು ಪ್ರತಿಯೊಂದು ಸಂಕಟ ಸಮಯಲ್ಲಿ ಪ್ರಹ್ಲಾದನ ರಕ್ಷಣೆ ಮಾಡಿದನು. ನಾವೂ ನಾಮಸ್ಮರಣೆ ಮಾಡಿದರೆ ನಾವು ಸಂಕಟದಲ್ಲಿದ್ದಾಗ ದೇವರು ನಮಗಾಗಿಯೂ ಧಾವಿಸಿ ಬರುವನು.
********************
ಹರಿವರ್ಷ ಖಂಡದಲ್ಲಿ ನರಸಿಂಹರೂಪಿ ಶ್ರೀಹರಿಯನ್ನು ಶ್ರೀಪ್ರಹ್ಲಾದರಾಜರು ಇಂದಿಗೂ ಸ್ತೋತ್ರಮಾಡುತ್ತಿದ್ದಾರೆ . ಭಗವಂತನು ನಮ್ಮ ಮನಸ್ಸಲ್ಲಿ ನೆಲೆಗೊಳ್ಳಬೇಕೆಂದರೆ ನಿರ್ವ್ಯಾಜಭಕ್ತಿಯನ್ನು ಅಳವಡಿಸಿಕೊಳ್ಳೋಣ . ಭಕ್ತಿಯು ಇತ್ತೂ ಅಂದ್ರ ಇನ್ನುಳೊದ ಎಲ್ಲ ಸದ್ಗುಣಗಳೂ ಸಂಗಮವಾಗುತ್ತವೆ . ಆವಾಗ ಆವಾಗ ದೇವತೆಗಳು ವಿಶೇಷ ಸನ್ನಿಧಾನದಿಂದ ಆಗಮಿಸುತ್ತಾರೆ .
ಯಸ್ಯಾಸ್ತಿ ಭಕ್ತಿರ್ಭಗವತ್ಕಿಂಚನಾ ಸರ್ವೈರ್ಗುಣೈಸ್ತತ್ರ ಸಮಾಸತೇ ಸುರಾಃ|-(ಶ್ರೀಮದ್ಭಾಗವತಮ್)
ದೀಪವಿಲ್ಲದ ಮನೆಗೆ ಕಳ್ಳರು ನುಗ್ಗುತ್ತಾರೆ . ದೀಪ ಉರಿಯುತ್ತಿದ್ದರೆ ಜನರು ಎಚ್ಚತ್ತಿದ್ದಾರೆಂದು ಒಳ ಬರಲು ಅಂಜುತ್ತಾರೆ . ಅದರಂತೆ ಅಜ್ಞಾನವೆಂಬ ಕತ್ತಲು ತುಂಬಿದ ಮನವೆಂಬ ಮನೆಯೊಳಗೆ ಅಸತ್ಕರ್ಮಗಳೆಂಬ ಅಸುರರು ಧೈರ್ಯವಾಗಿ ಪ್ರವೇಶಿಸುತ್ತಾರೆ . ನಮ್ಮಲ್ಲಿರುವ ಸದ್ಗುಣಗಳೆಂಬ ಸಂಪತ್ತನ್ನು ದೋಚುತ್ತಾರೆ . ಮನಸ್ಸು ದುರ್ಗುಣಗಳ ಅಡಗುದಾಣವಾಗುತ್ತದೆ . ಆದರೆ ಮನೆಯಲ್ಲಿ ದೀಪ ಉರಿಯುತ್ತಿದ್ದರೆ ಹೇಗೆ ಕಳ್ಳರ ಭಯವಿರುವದಿಲ್ಲವೋ ಅದರಂತೆಯೇ ಮನವೆಂಬ ಮನೆಯಲ್ಲಿ ಭಕ್ತಿ ಎಂಬ ನಂದಾದೀಪ ಉರಿಯುತ್ತಿದ್ದರೆ ಅಸುರರ ಭಯವಿಲ್ಲ . ಸದ್ಗುಣಗಳ ಪ್ರತೀಕರಾದ ದೇವತೆಗಳು ಆಗಮಿಸುತ್ತಾರೆ . ಆದ್ದರಿಂದ ನಮ್ಮ ಹೃದಯದೇಗುಲದಲ್ಲಿ ನಿರಂತರವೂ ಭಕ್ತಿ ಎಂಬ ನಂದಾದೀಪವನ್ನು ಉರಿಸುತ್ತಿರೋಣ .
ಭಗವಂತನು ಜೀವಿಗಳಿಗೆ ಆತ್ಮನೆನಿಸಿದ್ದಾನೆ . ಹರಿರ್ಹಿ ಸಾಕ್ಷಾದ್ಭಗವಾನ್ ಶರೀರಣಾಮಾತ್ಮಾ-(ಶ್ರೀಮದ್ಭಾಗವತಮ್)
ಭಗವಂತನು ಎಲ್ಲ ಜೀವಿಗಳ ಆತ್ಮ , ಅಂದರೆ ನಾವೆಲ್ಲರೂ ಭಗವಂತರೇನು ? ಎಂದರೆ ಅದಕ್ಕಾಗಿ ಅದೇ ಭಾಗವತಕಾರರು ಝುಷಣಾಮಿವ ತೋಯಮೀಪ್ಸಿತಃ ಎಂದಿದ್ದಾರೆ . ನೀರಿಲ್ಲದೇ ಮೀನುಗಳು ಬದುಕವದಿಲ್ಲ , ಅದರಂತೆಯೇ ಭಗವಂತನಿಲ್ಲದ ಜೀವರಿಗೆ ಅಸ್ತಿತ್ವವಿಲ್ಲ. ಪ್ರತಿಯೊಂದಕ್ಕೂ ಭಗವಂತನ ಆಸರೆ ಬೇಕೇಬೇಕು ಎಂಬ ಅರ್ಥದಲ್ಲಿ ಶರೀರಣಾಮಾತ್ಮಾ ಎಂದಿದ್ದಾರೆ .
ಇಂತಹ ನೃಸಿಂಹರೂಪಿ ಭಗವಂತನನ್ನು ಶ್ರೀಪ್ರಹ್ಲಾದರಾಜರು ಇಂದಿಗೂ ಸಮಸ್ತ ಸದ್ಬಕ್ತರಿಗೋಸ್ಕರ ಹರಿವರ್ಷ ಎಂಬ ಖಂಡದಲ್ಲಿ ಪ್ರತಿನಿತ್ಯವೂ -
ಓಂ ನಮೋ ಭಗವತೇ ನೃಸಿಂಹಾಯ ನಮಸ್ತೇಜಸ್ತೇಜಸೇ ಆವಿರಾವಿರ್ಭವ ವಜ್ರನಖ ವಜ್ರದಂಷ್ಟ್ರ ಕರ್ಮಾಶಯಾನ್ ರಂಧಯ ರಂಧಯ ತಮೋ ಗ್ರಸ ಗ್ರಸ ಓಂ ಸ್ವಾಹಾ ಅಭಯಮಭಯಮಾತ್ಮನಿ ಭೂಯಿಷ್ಠಾ ಓಂ ಕ್ಷ್ರೌಮ್ ||
ವಜ್ರದಂತಹ ಕೋರೆದಾಡಿಗಳುಳ್ಳ ವಜ್ರನಖದ ನರಸಿಂಹನೇ ! ಸಹಸ್ರ ಸೂರ್ಯರ ತೇಜಸ್ಸನ್ನೂ ಮೀರಿರುವವನೇ ! ಪ್ರತಿದಿನವೂ ವ್ಯಕ್ತನಾಗು , ಕರ್ಮದ ಗಂಟನ್ನು ಅಂತಃಕರಣವನ್ನು ಸುಟ್ಟುಬಿಡು ! ಅಜ್ಞಾನವನ್ನು ಕಬಳಿಸು , ಅಭಯಪ್ರದನಾದ ಪರಮಾತ್ಮನೇ ನಿನಗೆ ಸದಾ ನನ್ನ ನಮನಗಳಿರಲಿ !. 🙏🏽🙇♂🙏🏽
ಶ್ರೀಪ್ರಹ್ಲಾದರಾಜರು ನಮಗೋಸ್ಕರ ಪ್ರತಿನಿತ್ಯ ಇಂತಹ ಅದ್ಭುತವಾದ ಸ್ತೋತ್ರದಿಂದ ಶ್ರೀನೃಸಿಂಹದೇವರನ್ನು ಸ್ತುತಿಸುತ್ತಿದ್ದಾರೆ ಅಂದಮೇಲೆ ಅವರ ದಾಸಾನುದಾಸರಾದ ನಾವು ನಿಜವಾಗಿಯೂ ಅವರ ಭಕ್ತರು ಎನಿಸಿಕೊಳ್ಳಬೇಕಾದರೆ ಶ್ರೀನೃಸಿಂಹಜಯಂತಿಯ ದಿನವಾದ ಇಂದು ನಾವೆಲ್ಲರೂ ಒಂದು ಧೃಢವಾದ ಪ್ರತಿಜ್ಞೆಯನ್ನು ಮಾಡೋಣ , ಪುರುಷರು ನಾಳೆಯಿಂದ ಮನ್ಯುಸೂಕ್ತಪುರಶ್ಚರಣವನ್ನು ಒಂದು ಬಾರಿಯಾದರೂ ಪ್ರತಿನಿತ್ಯ ಏಕನಿಷ್ಠಯಿಂದ ಮಾಡುವದು , ಹಾಗೂ ಸ್ತ್ರೀಯರು ಶ್ರೀನೃಸಿಂಹ ಸುಳಾದಿಯನ್ನು ಪ್ರತಿನಿತ್ಯ ಒಂದು ಬಾರಿಯಾದರೂ ಏಕನಿಷ್ಠೆಯಿಂದ ಹೇಳುವದು . ಈ ಸಂಕಲ್ಪವನ್ನು ಇಂದೇ ಈ ಕ್ಷಣದಲ್ಲೇ ನಾವೆಲ್ಲರೂ ಕೈಕೊಂಡು ನಾಳೆಯಿಂದ ಈ ಪಾರಾಯಣವನ್ನು ಭಕ್ತಿಯಿಂದ ಮಾಡುತ್ತಾ ನಾವೆಲ್ಲರೂ ನಿಜವಾದ ಅರ್ಥದಲ್ಲಿ ಶ್ರೀಪ್ರಹ್ಲಾದರಾಜಗುರ್ವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನೃಸಿಂಹನ ದಾಸರ ದಾಸರ ದಾಸಾನುದಾಸರ ನಿಜದಾಸರಾಗಲು ಪ್ರಾಮಾಣಿಕ ಪ್ರಯತ್ನವನ್ನು ಮಾಡೋಣ ಎಂದು ವಿನಂತಿಸಿಕೊಳ್ಳುತ್ತಾ . ಸಮಸ್ತ ಸದ್ಭಕ್ತರಿಗೂ ಶ್ರೀನೃಸಿಂಹಜಯಂತಿಯ ಹಾರ್ದಿಕ ಶುಭಕಾಮನೆಗಳೊಂದಿಗೆ ಶುಭರಾತ್ರಿ 🙏🏽🙇♂ ಹರೇ ಶ್ರೀನಿವಾಸಾ 🙇♂🙏🏽
****************
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ದೇವತಾ ಕಾರ್ಯ ಸಿಧ್ಯರ್ಥಂ, ಸಭಾ ಸ್ಥಂಭ ಸಮುದ್ಭವಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ |

ಅಂತ್ರಮಾಲಧರಂ ಶಂಖ ಚಕ್ರಾಬ್ಜಾಯುಧ ಧಾರಿಣಂ |

ಸ್ಮರಣಾತ್ ಸರ್ವ ಪಾಪಘ್ನಂ ಖದ್ರೂಜ ವಿಷನಾಶನಂ |

ಸಿಂಹನಾದೇನಾಹತ ದಿಗ್ಧಂತಿ ಭಯನಾಶನಂ |

ಪ್ರಹ್ಲಾದ ವರದಮ್ ಶ್ರೀಶಂ ದೈತ್ಯೇಶ್ವರ ವಿಧಾರಿಣಾಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ||
ಕೄರಗ್ರಹ ಪೀಡಿತಾನಾಂ ಭಕ್ತಾನಾಂ ಅಭಯಪ್ರದಂ |

ವೇದ ವೇದಾಂತ ಯಜ್ಞೇಶಂ ಬ್ರಹ್ಮ ರುದ್ರಾದಿ ವಂದಿತಂ |

ಯ ಇದಮ್ ಪಠತೇ ನಿತ್ಯಂ ಋಣಮೋಚನ ಸಂಜ್ಞಿಕಂ |
ಆನೃಣಿಂ ಜಾಯತೇ ಸತ್ಯೊ ಧನಂ ಶೀಘ್ರಮವಾಪ್ನುಯಾತ್ ||
**************
ಶ್ರೀ ನರಸಿಂಹ ಸ್ತೋತ್ರ ಸಂಗ್ರಹ
ಮಾತಾ ನರಸಿಂಹಶ್ಚ ಪಿತಾ ನರಸಿಂಹ:
ಭ್ರಾತಾ ನರಸಿಂಹಶ್ಚ ಸಖಾ ನರಸಿಂಹ:
ವಿದ್ಯಾ ನರಸಿಂಹಶ್ಚ ದ್ರವಿಣಂ ನರಸಿಂಹ:
ಸ್ವಾಮಿ ನರಸಿಂಹ ಸಕಲಂ ನರಸಿಂಹ:
--
|| ಶ್ರೀ ನೃಸಿಂಹ ಸ್ತುತಿ : ವರಾಹ ಪುರಾಣ ||
ನೃಸಿಂಹ ರೂಪೀ ಚ ಬಭೂವ ಯೋಸೌ
ಯುಗೇ ಯುಗೇ ಯೋಗಿವರೋsಥ ಭೀಮಃ ।
ಕರಾಲವಕ್ತ್ರಃ ಕನಕಾಗ್ರವರ್ಚಾ
ವರಾಷಯೋsಸ್ಮಾನ ಸುರಾಂತಕೋsವ್ಯಾತ್ ।।
---
॥ ಶ್ರೀ ನೃಸಿಂಹನಖಸ್ತುತಿಃ ॥
ಪಾಂತ್ವಸ್ಮಾನ್ ಪುರುಹೂತ ವೈರಿ ಬಲವನ್ ಮಾತಂಗ ಮಾದ್ಯದ್ಘಟಾ ।
ಕುಂಭೋಚ್ಚಾದ್ರಿವಿಪಾಟನಾಽಧಿಕಪಟು ಪ್ರತ್ಯೇಕ ವಜ್ರಾಯಿತಾಃ ।
ಶ್ರೀಮತ್ಕಂಠೀರವಾಸ್ಯಪ್ರತತಸುನಖರಾ ದಾರಿತಾರಾಽತಿದೂರ ।
ಪ್ರದ್ಧ್ವಸ್ತ ಧ್ವಾಂತ ಶಾಂತ ಪ್ರವಿತತ ಮನಸಾ ಭಾವಿತಾ ಭೂರಿಭಾಗೈಃ ॥ 1॥
ಲಕ್ಷ್ಮೀಕಾಂತಸಮಂತತೋಽಪಿಕಲಯನ್ ನೈವೇಶಿತುಃ ತೇ ಸಮಮ್ ।
ಪಶ್ಯಾಮ್ಯುತ್ತಮವಸ್ತು ದೂರತರತೋ ಪಾಸ್ತಂ ರಸೋ ಯೋಽಷ್ಟಮಃ ।
ಯದ್ರೋಶೋತ್ಕರ ದಕ್ಷನೇತ್ರಕುಟಿಲಃ ಪ್ರಾಂತೋತ್ಥಿತಾಽಗ್ನಿ ಸ್ಫುರತ್ ।
ಖದ್ಯೋತೋಪಮವಿಸ್ಫುಲಿಂಗ ಭಸಿತಾ ಬ್ರಹ್ಮೇಶಶಕ್ರೋತ್ಕರಾಃ ॥ 2॥
ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತಂ
ಶ್ರೀ ನೃಸಿಂಹನಖಸ್ತುತಿಃ ಸಂಪೂರ್ಣಮ್
॥ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ॥
-----
|| ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ ||
ಸುಲಭೋ ಭಕ್ತಿ ಯುಕ್ತಾನಾಂ ದುರ್ದರ್ಶೋ ದುಷ್ಟ ಚೇತಸಾಂ
ಅನನ್ಯ ಗತಿಕಾನಾಮ್ ಚ ಪ್ರಭುಃ ಭಕ್ತೈಕ ವತ್ಸಲಃ
ಪ್ರಣಮ್ಯ ಸಾಷ್ಟಂಗ ಮಶೇಷ ಲೋಕ ಕಿರೀಟ ನೀರಾಜಿತ ಪಾದಪದ್ಮಂ
|| ಶ್ರೀ ಶನಿರುವಾಚ ||
ಯತ್ಪಾದ ಪಂಕಜ ರಜಃ ಪರಮಾದರೇಣ
ಸಂಸೇವಿತಂ ಸಕಲ ಕಲ್ಮಷರಾಶಿನಾಶಮ್
ಕಲ್ಯಾಣ ಕಾರಕ ಮಶೇಷ ನಿಜಾನುಗಾನಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೧||
ಸರ್ವತ್ರ ಚಂಚಲತಯಾ ಸ್ಥಿತಯಾಹಿ ಲಕ್ಷ್ಮ್ಯಾ
ಬ್ರಹ್ಮಾಧಿ ವಂದ್ಯ ಪದಯಾ ಸ್ಥಿರಯಾನ್ಯ ಸೇವಿ
ಪಾದಾರವಿಂದ ಯುಗಳಂ ಪರಮಾದರೇಣ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೨||
ಯದ್ರೂಪಮಾಗಮ ಶಿರಃ ಪ್ರತಿಪಾದ್ಯ ಮಾದ್ಯ
ಆಧ್ಯಾತ್ಮಿಕಾದಿ ಪರಿತಾಪಹರಂ ವಿಚಿಂತ್ಯಂ
ಯೋಗೀಶ್ವರೈ ರಪಗತಾಖಿಲ ದೋಷ ಸಂಘೈಃ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೩||
ಪ್ರಹ್ಲಾದ ಭಕ್ತವಚಸಾ ಹರಿರಾವಿರಾಸ
ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ
ಊರ್ವೋರ್ನಿದಾಯ ತದುರೋ ನಖರೈರ್ದದಾರ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೪||
ಯೋ ನೈಜ ಭಕ್ತಮ್ ಅನಲಾಂಬುಧಿ ಭೂಧರೋಗ್ರ
ಶೃಂಗಪ್ರಪಾತ ವಿಷದಂತಿ ಸರೀಸೃಪೇಭ್ಯಃ
ಸರ್ವಾತ್ಮಕಃ ಪರಮಕಾರುನಿಕೋ ರರಕ್ಷ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೫||
ಯನ್ನಿರ್ವಿಕಾರ ಪರರೂಪ ವಿಚಿಂತನೇನ
ಯೋಗೀಶ್ವರಾ ವಿಷಯವೀತ ಸಮಸ್ತರಾಗಾಃ
ವಿಶ್ರಾಂತಿ ಮಾಪುರವಿನಾಶವತೀಂ ಪರಾಖ್ಯಾಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೬||
ಯದ್ರೂಪ ಮುಗ್ರ ಪರಿಮರ್ದನ ಭಾವಶಾಲಿ
ಸಂಚಿಂತನೇನ ಸಕಲಾಘ ವಿನಾಶಕಾರಿ
ಭೂತ ಜ್ವರ ಗ್ರಹ ಸಮುದ್ಭವ ಭೀತಿನಾಶಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೭||
ಯಸ್ಯೋತ್ತಮಂ ಯಶ ಉಮಾಪತಿ ಪದ್ಮಜನ್ಮ
ಶಕ್ರಾದಿ ದೈವತ ಸಭಾಸು ಸಮಸ್ತಗೀತಂ
ಶಕ್ತೈವ ಸರ್ವ ಶಮಲ ಪ್ರಶಮೈಕ ದಕ್ಷಂ
ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ ||೮||
ಇತ್ಥಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ
ಉವಾಚ ಬ್ರಹ್ಮ ವೃಂದಸ್ಥಂ ಶನಿಂ ಚ ಭಕ್ತವತ್ಸಲಃ ||೯||
|| ಶ್ರೀ ನೃಸಿಂಹ ಉವಾಚ ||
ಪ್ರಸನ್ನೋಹಂ ಶನೇತುಭ್ಯಂ ವರಂ ವರಯ ಶೋಭನಂ
ಯಂ ವಾಂಚಸಿ ತಮೇವತ್ವಂ ಸರ್ವಲೋಕ ಹಿತಾವಹಂ
|| ಶ್ರೀ ಶನಿರುವಾಚ ||
ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ
ಮದ್ವಾಸರ ಸ್ತವ ಪ್ರೀತಿಕರಃ ಸ್ಯಾತ್ ದೇವತಾಪತೇ
ಮತ್ಕೃತಂ ತ್ವತ್ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ
ಸರ್ವಾನ್ ಕಾಮಾನ್ ಪುರಯೇಥಾಃ ಸ್ತೇಷಾಂ ತ್ವಂ ಲೋಕಭಾವನ
|| ಶ್ರೀ ನೃಸಿಂಹ ಉವಾಚ ||
ತಥೈವಾಸ್ತು ಶನೇಹಂ ವೈರಕ್ಷೋಭುವನ ಸಂಸ್ಥಿತಃ
ಭಕ್ತಾ ಕಾಮಾನ್ ಪುರಯಿಷ್ಯೇ ತ್ವಂ ಮಮೈಕಂ ವಚಃ ಶೃಣು
ತ್ವತ್ಕೃತಂ ಮತ್ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ
ದ್ವಾದಶಾಷ್ಠಮ ಜನ್ಮಸ್ಥಾತ್ ತ್ವದ್ಬಯಂ ಮಾಸ್ತುತಸ್ಯ ವೈ
ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ
ತತಃ ಪರಮ ಸಂತೋಷ್ಟೋ ಜಯೇತಿ ಮುನಯೋ ವದನ್
|| ಶ್ರೀ ಕೃಷ್ಣ ಉವಾಚ ||
ಇತ್ಥಂ ಶನೈಶ್ಚರಸ್ಯಾಥ ನೃಸಿಂಹ ದೇವ
ಸಂವಾದಮೇತತ್ ಸ್ತವನಂ ಚ ಮಾನವಃ
ಶೃಣೋತಿ ಯಃ ಶ್ರಾವಯತೇ ಚ ಭಕ್ತ್ಯಾ
ಸರ್ವಾಣ್ಯಾಭಿಷ್ಟಾನಿ ಚ ವಿಂದತೇ ಧ್ರುವಂ
ಇತಿ ಶ್ರೀ ಭವಿಷ್ಯೋತ್ತರ ಪುರಾಣೇ ರಕ್ಷೋಭುವನ ಮಹಾತ್ಮ್ಯೇ ಶ್ರೀ ಶನೈಶ್ಚರಕೃತ ಶ್ರೀ ನೃಸಿಂಹ ಸ್ತುತಿಃ ಸಂಪುರ್ಣಂ
ಶ್ರೀ ಶನೈಶ್ವರಾಂತರ್ಗತ | ಶ್ರೀ ಮುಖ್ಯಪ್ರಾಣಾಂತರ್ಗತ
ಶ್ರೀಲಕ್ಷ್ಮೀನರಸಿಂಹ ಪ್ರಿಯತಾಂ
|| ಶ್ರೀ ಕೃಷ್ಣಾರ್ಪಣಮಸ್ತು ||
----
|| ಪ್ರಹ್ಲಾದರಾಜ ವಿರಚಿತ ನೃಸಿಂಹಕವಚಮ್ ||
ನೃಸಿಂಹ-ಕವಚಮ್ ವಕ್ಷ್ಯೆ ಪ್ರಹ್ಲಾದೇನೊದಿತಮ್ ಪುರಾ |
ಸರ್ವರಕ್ಷಕರಮ್ ಪುಣ್ಯಮ್‍ಸರ್ವೋಪದ್ರವನಾಶನಮ್ || 1 ||
ಸರ್ವಸಂಪತ್‍ಕರಮ್‍ಚೈವ ಸ್ವರ್ಗಮೋಕ್ಷಪ್ರದಾಯಕಮ್ |
ಧ್ಯಾತ್ವಾನೃಸಿಂಹಮ್‍ದೇವೇಶಮ್‍ಹೇಮಸಿಂಹಾಸನಸ್ಥಿತಮ್ || 2 ||
ವಿವೃತಾಸ್ಯಮ್ ತ್ರಿನಯನಮ್‍ಶರದೇಂದು ಸಮಪ್ರಭಮ್ |
ಲಕ್ಷ್ಮ್ಯಾಲಿಂಗಿತವಾಮಾಂಗಮ್ ವಿಭೂತಿಭಿರ್‍ಉಪಾಶ್ರಿತಮ್ ||3 ||
ಚತುರ್ಭುಜಮ್ ಕೋಮಲಾಂಗಮ್ ಸ್ವರ್ಣಕುಂಡಲ ಶೋಭಿತಮ್ |
ಸರೋಜ ಶೋಭಿತೋರಸ್ಕಮ್ ರತ್ನಕೇಯೂರ ಮುದ್ರಿತಮ್ || 4 ||
ತಪ್ತಕಾಂಚನಸಂಕಾಶಮ್ ಪೀತ ನಿರ್ಮಲ ವಾಸಸಮ್ |
ಇಂದ್ರಾದಿಸುರಮೌಲಿಸ್ಥಹ ಸ್ಫುರನ್ ಮಾಣಿಕ್ಯ-ದೀಪ್ತಿಭಿಹಿ || 5 ||
ವಿರಾಜಿತ ಪಾದದ್ವಂದ್ವಮ್ ಶಂಖಚಕ್ರಾದಿ ಹೇತಿಭಿ: |
ಗರುತ್ಮತಾ ಚ ವಿನಯಾತ್ ಸ್ತೂಯಮಾನಮ್ ಮುದಾನ್ವಿತಮ್ || 6 ||
ಸ್ವಹ್ರಿತ್ ಕಮಲಸಮ್ವಾಸಮ್ ಕ್ರಿತ್ವಾ ತು ಕವಚಮ್ ಪಥೇತ್ |
ಓಮ್ ನೃಸಿಂಹೋ ಮೇ ಶಿರಪಾತು ಲೊಕರಕ್ಷಾರ್ಥ-ಸಮ್ಭವಾ: || 7 ||
ಸರ್ವಗೋಪಿ ಸ್ತಮ್ಭವಾಸ: ಫಲಮ್ ಮೇ ರಕ್ಷತು ಧ್ವನಿಮ್ ||
ನೃಸಿಂಹೊ ಮೇ ದ್ರಿಶೌ ಪಾತು ಸೋಮ ಸೂರ್ಯಾಗ್ನಿ ಲೋಚನ: || 8 ||
ಸ್ಮಿತಮ್ ಮೇ ಪಾತು ನೃಹರಿ: ಮುನಿವರ್ಯಸ್ತುತಿಪ್ರಿಯ: |
ನಾಸಮ್ ಮೇ ಸಿಂಹನಾಶಸ್ತು ಮುಖಮ್ ಲಕ್ಷ್ಮೀಮುಖಪ್ರಿಯ: || 9 ||
ಸರ್ವವಿದ್ಯಾಧಿಪ: ಪಾತು ನೃಸಿಂಹೋರಸನಮ್ ಮಮ |
ವಕ್ತ್ರಮ್ ಪಾತ್ವೇಂದು ವದನಮ್ ಸದಾ ಪ್ರಹ್ಲಾದ ವಂದಿತ: || 11 ||
ನೃಸಿಂಹ: ಪಾತು ಮೇ ಕಂಥಮ್ ಸ್ಕಂಧೌ ಭೂಭ್ರಿದನಂತಕ್ರಿತ್ |
ದಿವ್ಯಾಸ್ತ್ರಶೋಭಿತಭುಜೊ ನೃಸಿಮ್ಹ: ಪಾತು ಮೆ ಭುಜೌ || 12 ||
ಕರೌ ಮೇ ದೇವ-ವರದೋ ನೃಸಿಮ್ಹ: ಪಾತು ಸರ್ವತ: |
ಹೃದಯಮ್ ಯೋಗಿಸಾಧ್ಯಶ್ಚ ನಿವಾಸಮ್ ಪಾತು ಮೇ ಹರಿ: || 13 ||
ಮಧ್ಯಮ್ ಪಾತು ಹಿರಣ್ಯಾಕ್ಷ ವಕ್ಷಹ್ಕುಕ್ಷಿವಿದಾರಣ: |
ನಾಭಿಮ್ ಮೇ ಪಾತು ನೃಹರಿ: ಸ್ವನಾಭಿಬ್ರಹ್ಮಸಂಸ್ತುತ: || 14 ||
ಬ್ರಹ್ಮಾಂಡಕೋತಯ: ಕತ್ಯಾಮ್ ಯಸ್ಯಾಸೌ ಪಾತು ಮೇ ಕತಿಮ್ |
ಗುಹ್ಯಮ್ ಮೇ ಪಾತು ಗುಹ್ಯಾನಾಮ್ ಮಂತ್ರಾನಾಮ್ ಗುಹ್ಯರೂಪದ್ರಿಕ್ ||15 ||
ಊರೂ ಮನೊಭವ: ಪಾತು ಜಾನುನೀ ನರರೂಪದ್ರಿಕ್ |
ಜಂಘೇ ಪಾತು ಧರಾಭರ ಹರ್ತಾ ಯೊಸೌ ನೃಕೇಶರೀ || 16 ||
ಸುರರಾಜ್ಯಪ್ರದ: ಪಾತು ಪಾದೌ ಮೇ ನೃಹರೀಶ್ವರ: |
ಸಹಸ್ರಶೀರ್ಶಾ ಪುರುಶ: ಪಾತು ಮೇ ಸರ್ವಶಸ್ತನುಮ್ || 17 ||
ಮಹೋಗ್ರ: ಪೂರ್ವತ: ಪಾತು ಮಹಾವಿರಾಗ್ರಜೋಗ್ನಿತ: |
ಮಹಾವಿಷ್ಣುರ್ದಕ್ಷಿಣೆತು ಮಹಾಜ್ವಲಸ್ತು ನೈಋತ: || 18 ||
ಪಶ್ಚಿಮೇ ಪಾತು ಸರ್ವೇಶೋ ದಿಶಿ ಮೇ ಸರ್ವತೋ ಮುಖ: |
ನೃಸಿಂಹ ಪಾತು ವಾಯವ್ಯಾಮ್ ಸೌಮ್ಯಾಮ್ ಭೂಶನವಿಗ್ರಹ || 19 ||
ಈಶಾನ್ಯಮ್ ಪಾತು ಭಧ್ರೋ ಮೇ ಸರ್ವಮಂಗಲದಾಯಕ: |
ಸಮ್ಸಾರಭಯತ: ಪಾತು ಮೃತ್ಯೋರ್ ಮೃತ್ಯುರ್ ನೃಕೇಸರೀ || 20 ||
ಇದಮ್ ನೃಸಿಂಹಕವಚಮ್ ಪ್ರಹ್ಲಾದಮುಖಮಂದಿತಮ್ |
ಭಕ್ತಿಮಾನ್ ಯ: ಪಥೇನ್ ನಿತ್ಯಮ್ ಸರ್ವಪಾಪೈಹಿ ಪ್ರಮುಚ್ಯತೆ || 21 ||
ಪುತ್ರವಾನ್ ಧನವಾನ್ ಲೋಕೇದೀರ್ಘಾಯುರುಪಜಾಯತೆ |
ಯಮ್ ಯಮ್ ಕಾಮಯತೇ ಕಾಮಮ್‍ತಮ್ ತಮ್ ಪ್ರಾಪ್ನೋತ್ಯಸಂಶಯಮ್ ||22||
ಸರ್ವತ್ರ ಜಯಮ್ ಆಪ್ನೋತಿ ಸರ್ವತ್ರ ವಿಜಯೀ ಭವೇತ್ |
ಭೂಮ್ಯಂತರೀಕ್ಷ ದಿವ್ಯಾನಾಮ್ ಗ್ರಹಾನಾಮ್ ವಿನಿವಾರನಮ್ || 23 ||
ವೃಶ್ಚಿಕೊರಗ ಸಮ್ಭೂತ ವಿಶ್ಯಾಪಹರಣಮ್ ಪರಮ್ |
ಬ್ರಹ್ಮರಾಕ್ಶಸ ಯಕ್ಷಾನಾಮ್ ದೂರೋತ್ಸಾರನಕಾರನಮ್ || 24 ||
ಭೂರ್ಜೆ ವಾ ತಾಲಪತ್ರೇ ವಾ ಕವಚಮ್ ಲಿಖಿತಮ್ ಶುಭಮ್ |
ಕರಮೂಲೇ ಧೃತಮ್ ಯೇನ ಸಿಧ್ಯೇಯು: ಕರ್ಮಸಿದ್ಧಯ: | 25 ||
ದೇವಾಸುರ ಮನುಷ್ಯೇಶು ಸ್ವಮ್ ಸ್ವಮ್ ಏವ ಜಯಮ್ ಲಭೇತ್ ||
ಏಕ ಸಂಧ್ಯಮ್ ತ್ರಿಸಂಧ್ಯಮ್ ವಾ ಯ: ಪಥೇನ್ ನಿಯತೋ ನರ: |26||
ಸರ್ವಮಂಗಲ ಮಾಂಗಲ್ಯಮ್ ಭುಕ್ತಿಮ್ ಮುಕ್ತಿಮ್ ಚ ವಿಂದತಿ ||
ದ್ವಾತ್ರಿಂಶತಿ ಸಹಸ್ರಾಣಿ ಪಥೇತ್ ಶುದ್ಧಾತ್ಮನಾಮ್ ನೃಣಾಮ್ | 27 ||
ಕವಚಸ್ಯಾಸ್ಯ ಮಂತ್ರಸ್ಯ ಮಂತ್ರಸಿದ್ಧಿ: ಪ್ರಜಾಯತೇ ||
ಅನೇನ ಮಂತ್ರರಾಜೇನ ಕೃತ್ವಾ ಭಸ್ಮಾಭಿಮಂತ್ರಣಮ್ | 28 ||
ತಿಲಕಮ್ ವಿನ್ಯಸೇದ್ ಯಸ್ತು ತಸ್ಯ ಗ್ರಹಭಯಮ್ ಹರೇತ್ |
ತ್ರಿವಾರಮ್ ಜಪಮಾನಸ್ತು ದತ್ತಮ್ ವಾರ್ಯಾಭಿಮಂತ್ರ್ಯಚ ||29||
ಪ್ರಶಯೇದ್ ಯೋ ನರೋ ಮಂತ್ರಮ್ ನೃಸಿಂಹಧ್ಯಾನಮ್ ಆಚರೇತ್ |
ತಸ್ಯ ರೋಗಾ: ಪ್ರಣಷ್ಯಂತಿ ಯೇಚಸ್ಯು: ಕುಕ್ಷಿಸಮ್ಭವಾ: || 30 ||
ಗರ್ಜಂತಮ್ ಗಾರ್ಜಯಂತಮ್ ನಿಜಭುಜಪತಲಮ್ ಸ್ಫೋತಯಂತಮ್ ಹತಂತಮ್
ರೂಪ್ಯಂತಮ್ ತಾಪಯಂತಮ್ ದಿವಿಭುವಿ ದಿತಿಜಮ್ ಕ್ಷೆಪಯಂತಮ್ ಕ್ಷಿಪಂತಮ್ ||31||
ಕ್ರಂದಂತಮ್ ರೋಷಯಂತಮ್ ದಿಶಿದಿಶಿ ಸತತಮ್ ಸಂಹರಂತಮ್ ಭರಂತಮ್ |
ವೀಕ್ಷಂತಮ್ ಪೂರ್ಣಯಂತಮ್ ಕರನಿಕರಶತೈರ್ದಿವ್ಯಸಿಂಹಮ್ ನಮಾಮಿ ||32 ||
||ಇತಿ ಪ್ರಹ್ಲಾದರಾಜವಿರಚಿತ ನೃಸಿಂಹಸ್ತೋತ್ರಮ್ ||
---
|| ವಿಜಯೀಂದ್ರತೀರ್ಥ ವಿರಚಿತಾ ಶ್ರೀ ನೃಸಿಂಹಾಷ್ಟ ||
ಭೋಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ
ಡಿಂ ಡಿಂ ಡಿಂ ಡಿಂ ಡಿಡಿಂಬಂ ದಹಮಪಿದಹಮೈರ್ಝಂಪರ್ಝಂಪರು ಝಂಪೈಃ
ತುಲ್ಯಾಸ್ತುಲ್ಯಾಸ್ತು ತುಲಾಃ ಧುಮಧುಮಧುಮಕೈಃ ಕುಂಕುಮಾಂಕೈಃ ಕುಮಾಂಕೈಃ
ಏತತ್ತೇ ಪೂರ್ಣಯುಕ್ತಂ ಅಹರಹಕರಹಃ ಪಾತು ಮಾಂ ನಾರಸಿಂಹಃ ||೧||
ಭೂಭೃಧ್ಭೂಭೃಧ್ಬುಜಂಗಂ ಖಖಚಖಚಖಚಿತ್ಖರ್ಜದುರ್ಜರ್ಜಯಂತಮ್
ಭೂಭಾಗಂ ಭೋಗಭಾಗಂ ಗಗಗಗಗಗನಂ ಗರ್ದಮೃತ್ಯೂಗ್ರಗಂಡಂ
ಸ್ವಚ್ಛಂ ಪುಚ್ಛಂ ಸ್ವಗಚ್ಛಂ ಸ್ವಜನಜನನುತಃ ಪಾತು ಮಾಂ ನಾರಸಿಂಹಃ ||೨||
ಏನಾಭ್ರಂ ಗರ್ಜಮಾನಂ ಲಘುಲಘುಮಕರೋ ಬಾಲಚಂದ್ರಾರ್ಕದಂಷ್ಟ್ರೋ
ಹೇಮಾಂಭೋಜಂ ಸರೋಜಂ ಜಟಜಟಜಟಿಲೋ ಜಾಡ್ಯಮಾನಸ್ತುಭೀತಿಃ
ದಂತಾನಾಂ ಬಾಧಮಾನಂ ಖಗಟಖಗಟವೋ ಭೋಜಜಾನುಃ ಸುರೇಂದ್ರೋ
ನಿಷ್ಪ್ರತ್ಯೂಹಂ ಸ ರಾಜಾ ಗಹಗಹಗಹತಃ ಪಾತು ಮಾಂ ನಾರಸಿಂಹಃ ||೩||
ಶಂಖಂ ಚಕ್ರಂ ಚ ಚಾಪಂ ಪರಶುಮಶಮಿಷಂ ಶೂಲಪಾಶಾಂಕುಶಾಸ್ತ್ರಂ
ಬಿಭ್ರಂತಂ ವಜ್ರಖೇಟಂ ಹಲಮುಸಲಗದಾಕುಂತಮತ್ಯುಗ್ರದಂಷ್ಟ್ರಂ
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರಭೂಷಂ
ವಂದೇ ಪ್ರತ್ಯೇಕರೂಪಂ ಪರಪದನಿವಸಃ ಪಾತು ಮಾಂ ನಾರಸಿಂಹಃ ||೪||
ಪಾದದ್ವಂದ್ವಂ ಧರಿತ್ರೀಕಟಿವಿಪುಲತರೋ ಮೇರುಮಧ್ಯೂಡ್ವಮೂರುಂ
ನಾಭಿಬ್ರಂಹಾಡಸಿಂಧುಃ ಹೃದಯಮಪಿ ಭವೋ ಭೂತವಿದ್ವತ್ಸಮೇತಃ
ದುಶ್ಚಕ್ರಾಂಕಂ ಸ್ವಬಾಹುಂ ಕುಲಿಶನಖಮುಖಂ ಚಂದ್ರಸೂರ್ಯಾಗ್ನಿನೇತ್ರಂ
ವಕ್ತ್ರಂ ವಹ್ನಿಃ ಸುವಿದ್ಯುತ್ಸುರಗನವಿಜಯಃ ಪಾತು ಮಾಂ ನಾರಸಿಂಹಃ ||೫||
ನಾಸಾಗ್ರಂ ಪೀನಗಂಡಂ ಪರಬಲಮಥನಂ ಬದ್ಧಕೇಯೂರಹಾರಂ
ರೌದ್ರಂ ದಂಷ್ಟ್ರಾಕರಾಲಂ ಅಮಿತಗುಣಗಣಂ ಕೋಟಿಸೂರ್ಯಾಗ್ನಿನೇತ್ರಮ್
ಗಾಂಭೀರ್ಯಂ ಪಿಂಗಲಾಕ್ಷಂ ಭ್ರುಕುಟಿತವಿಮುಖಂ ಷೋಡಶಾರ್ಧಾರ್ಧಬಾಹುಂ
ವಂದೇ ಭೀಮಾಟ್ಟಹಾಸಂ ತ್ರಿಭುವನವಿಜಯಃ ಪಾತು ಮಾಂ ನಾರಸಿಂಹಃ ||೬||
ಕೇ ಕೇ ನೃಸಿಂಹಾಷ್ಟಕೇ ನರವರಸದೃಶಂ ದೇವಭೀತಂ ಗೃಹೀತ್ವಾ ದೇವಂದ್ಯೋ ವಿಪ್ರದಂದಂ ಪ್ರತಿವಚನಪಯಾಯಾಮ್ಯನಪ್ರತ್ಯಷೀಃ
ಶಾಪಂ ಚಾಪಂ ಖಡ್ಗಂ ಪ್ರಹಸಿತವದನಂ ಚಕ್ರಚಕೀಚಕೇನ
ಓಮಿತ್ಯೇ ದೈತ್ಯನಾದಂ ಪ್ರಕಚವಿವಿದುಷಾ ಪಾತು ಮಾಂ ನಾರಸಿಂಹಃ ||೭||
ಝಂ ಝಂ ಝಂ ಝಂ ಝಂಕಾರಂ ಝಷ ಝಷ ಝಷಿತಂ ಜಾನುದೇಶಂ ಝಕಾರಂ
ಹುಂ ಹುಂ ಹುಂ ಹುಂ ಹುಕಾರಂ ಹರಿತಕಹಹಸಾ ಯಂದಿಶೇ ವಂ ವಕಾರಮ್
ವಂ ವಂ ವಂ ವಂ ವಕಾರಂ ವಹನದಲಿತತಂ ವಾಮಪಕ್ಷಂ ಸುಪಕ್ಷಂ
ಲಂ ಲಂ ಲಂ ಲಂ ಲಕಾರಂ ಲಘುವಣವಿಜಯಃ ಪಾತು ಮಾ ನಾರಸಿಂಹಃ ||೮||
ಭೂತಪ್ರೇತಪಿಶಾಚಯಕ್ಷಗಣಶಃ ದೇಶಾಂತರೋಚ್ಚಾಟನಾ-
ಚೋರವ್ಯಾಧಿಮಹಾಜ್ವರಂ ಭಯಹರಂ ಶತ್ರುಕ್ಷಯಂ ನಿಶ್ಚಯಮ್
ಸಂಧ್ಯಾಕಾಲಜಪಂತಮಷ್ಟಕಮಿದಂ ಸದ್ಭಕ್ತಿಪೂರ್ವಾಧಿಭಿಃ
ಪ್ರಹ್ಲಾದೇವ ವರೋ ವರಸ್ತು ಜಯಿತಾ ಸತ್ಪೂಜಿತಾಂ ಭೂತಯೇ
ಇತಿ ಶ್ರೀಮತ್ ವಿಜಯೀಂದ್ರತೀರ್ಥ ಪೂಜ್ಯ ಚರಣ ವಿರಚಿತಾ ಶ್ರೀ ನೃಸಿಂಹಾಷ್ಟಕ ಸಂಪೂರ್ಣಂ
-----
|| ಋಣ ವಿಮೋಚನ ಶ್ರೀ ನೃಸಿಂಹ ಸ್ತೋತ್ರಮ್ ||
ದೇವತಾ ಕಾರ್ಯ ಸಿಧ್ಯರ್ಥಂ ಸಭಾಸ್ಥಂಭ ಸಮುಧ್ಭವಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||

ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧ ಧಾರಿಣಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||
ಸ್ಮರಣಾತ್ ಸರ್ವಪಾಪಘ್ನಮ್ ಕದ್ರೂಜವಿಷನಾಶನಮ್
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||
ಸಿಂಹನಾದೇನ ಮಹತಾ ದಿಗ್ದನ್ತಿ ಭಯನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||
ಪ್ರಹ್ಲಾದ ವರದಂ ಶ್ರೀಶಂ ದೈತ್ಯೇಶ್ವರವಿದಾರಿಣಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||
ಕ್ರೂರಗ್ರಹೈ: ಪೀಡಿತಾನಾಮ್ ಭಕ್ತಾನಾಮ್ ಅಭಯಪ್ರದಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||
ವೇದವೇದಾಂತ ಯಜ್ಞೆಶಮ್ ಬ್ರಹ್ಮರುದ್ರಾದಿವಂದಿತಮ್ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ ||
ಯ ಇದಂ ಪಠತೇ ನಿತ್ಯಂ ಋಣಮೋಚನ ಸಂಜ್ಞಿತಮ್ |
ಅನೃಣೀ ಜಾಯತೇ ಸದ್ಯೊಧನಂ ಶೀಘ್ರಮವಾಪ್ನುಯತ್ ||
ಇತಿ ಶ್ರೀ ನೃಸಿಂಹಪುರಾಣೋಕ್ತಮ್
ಋಣಮೋಚನಸ್ತೊತ್ರಮ್ ಸಂಪೂರ್ಣಮ್
----
॥ ನಾರಾಯಣ ಪಂಡಿತಾಚಾರ್ಯ ವಿರಚಿತ ನರಸಿಂಹಸ್ತೋತ್ರ ॥
ಉದಯರವಿ ಸಹಸ್ರದ್ಯೋತಿತಂ ರೂಕ್ಷವೀಕ್ಷಂ ಪ್ರಳಯ ಜಲಧಿನಾದಂ ಕಲ್ಪಕೃದ್ವಹ್ನಿ ವಕ್ತ್ರಮ್ ।
ಸುರಪತಿರಿಪು ವಕ್ಷಶ್ಛೇದ ರಕ್ತೋಕ್ಷಿತಾಂಗಂ ಪ್ರಣತಭಯಹರಂ ತಂ ನಾರಸಿಂಹಂ ನಮಾಮಿ ॥
ಪ್ರಳಯರವಿ ಕರಾಳಾಕಾರ ರುಕ್ಚಕ್ರವಾಲಂ ವಿರಳಯ ದುರುರೋಚೀ ರೋಚಿತಾಶಾಂತರಾಲ ।
ಪ್ರತಿಭಯತಮ ಕೋಪಾತ್ತ್ಯುತ್ಕಟೋಚ್ಚಾಟ್ಟಹಾಸಿನ್ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 1॥
ಸರಸ ರಭಸಪಾದಾ ಪಾತಭಾರಾಭಿರಾವ ಪ್ರಚಕಿತಚಲ ಸಪ್ತದ್ವಂದ್ವ ಲೋಕಸ್ತುತಸ್ತ್ತ್ವಮ್ ।
ರಿಪುರುಧಿರ ನಿಷೇಕೇಣೈವ ಶೋಣಾಂಘ್ರಿಶಾಲಿನ್ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 2॥
ತವ ಘನಘನಘೋಷೋ ಘೋರಮಾಘ್ರಾಯ ಜಂಘಾ ಪರಿಘ ಮಲಘು ಮೂರು ವ್ಯಾಜತೇಜೋ ಗಿರಿಂಚ ।
ಘನವಿಘಟತಮಾಗಾದ್ದೈತ್ಯ ಜಂಘಾಲಸಂಘೋ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 3॥
ಕಟಕಿ ಕಟಕರಾಜದ್ಧಾಟ್ಟ ಕಾಗ್ರ್ಯಸ್ಥಲಾಭಾ ಪ್ರಕಟ ಪಟ ತಟಿತ್ತೇ ಸತ್ಕಟಿಸ್ಥಾತಿಪಟ್ವೀ ।
ಕಟುಕ ಕಟುಕ ದುಷ್ಟಾಟೋಪ ದೃಷ್ಟಿಪ್ರಮುಷ್ಟೌ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 4॥
ಪ್ರಖರ ನಖರ ವಜ್ರೋತ್ಖಾತ ರೋಕ್ಷಾರಿವಕ್ಷಃ ಶಿಖರಿ ಶಿಖರ ರಕ್ತ್ಯರಾಕ್ತಸಂದೋಹ ದೇಹ ।
ಸುವಲಿಭ ಶುಭ ಕುಕ್ಷೇ ಭದ್ರ ಗಂಭೀರನಾಭೇ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 5॥
ಸ್ಫುರಯತಿ ತವ ಸಾಕ್ಷಾತ್ಸೈವ ನಕ್ಷತ್ರಮಾಲಾ ಕ್ಷಪಿತ ದಿತಿಜ ವಕ್ಷೋ ವ್ಯಾಪ್ತನಕ್ಷತ್ರಮಾರ್ಗಮ್ ।
ಅರಿದರಧರ ಜಾನ್ವಾಸಕ್ತ ಹಸ್ತದ್ವಯಾಹೋ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 6॥
ಕಟುವಿಕಟ ಸಟೌಘೋದ್ಘಟ್ಟನಾದ್ಭ್ರಷ್ಟಭೂಯೋ ಘನಪಟಲ ವಿಶಾಲಾಕಾಶ ಲಬ್ಧಾವಕಾಶಮ್ ।
ಕರಪರಿಘ ವಿಮರ್ದ ಪ್ರೋದ್ಯಮಂ ಧ್ಯಾಯತಸ್ತೇ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 7॥
ಹಠಲುಠ ದಲ ಘಿಷ್ಟೋತ್ಕಂಠದಷ್ಟೋಷ್ಠ ವಿದ್ಯುತ್ ಸಟಶಠ ಕಠಿನೋರಃ ಪೀಠಭಿತ್ಸುಷ್ಠುನಿಷ್ಠಾಮ್ ।
ಪಠತಿನುತವ ಕಂಠಾಧಿಷ್ಠ ಘೋರಾಂತ್ರಮಾಲಾ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 8॥
ಹೃತ ಬಹುಮಿಹಿ ರಾಭಾಸಹ್ಯಸಂಹಾರರಂಹೋ ಹುತವಹ ಬಹುಹೇತಿ ಹ್ರೇಪಿಕಾನಂತ ಹೇತಿ ।
ಅಹಿತ ವಿಹಿತ ಮೋಹಂ ಸಂವಹನ್ ಸೈಂಹಮಾಸ್ಯಮ್ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 9॥
ಗುರುಗುರುಗಿರಿರಾಜತ್ಕಂದರಾಂತರ್ಗತೇವ ದಿನಮಣಿ ಮಣಿಶೃಂಗೇ ವಂತವಹ್ನಿಪ್ರದೀಪ್ತೇ ।
ದಧದತಿ ಕಟುದಂಷ್ಪ್ರೇ ಭೀಷಣೋಜ್ಜಿಹ್ವ ವಕ್ತ್ರೇ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 10॥
ಅಧರಿತ ವಿಬುಧಾಬ್ಧಿ ಧ್ಯಾನಧೈರ್ಯಂ ವಿದೀಧ್ಯ ದ್ವಿವಿಧ ವಿಬುಧಧೀ ಶ್ರದ್ಧಾಪಿತೇಂದ್ರಾರಿನಾಶಮ್ ।
ವಿದಧದತಿ ಕಟಾಹೋದ್ಘಟ್ಟನೇದ್ಧಾಟ್ಟಹಾಸಂ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 11॥
ತ್ರಿಭುವನ ತೃಣಮಾತ್ರ ತ್ರಾಣ ತೃಷ್ಣಂತು ನೇತ್ರ ತ್ರಯಮತಿ ಲಘಿತಾರ್ಚಿರ್ವಿಷ್ಟ ಪಾವಿಷ್ಟಪಾದಮ್ ।
ನವತರ ರವಿ ತಾಮ್ರಂ ಧಾರಯನ್ ರೂಕ್ಷವೀಕ್ಷಂ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 12॥
ಭ್ರಮದ ಭಿಭವ ಭೂಭೃದ್ಭೂರಿಭೂಭಾರಸದ್ಭಿದ್ ಭಿದನಭಿನವ ವಿದಭ್ರೂ ವಿಭ್ರ ಮಾದಭ್ರ ಶುಭ್ರ ।
ಋಭುಭವ ಭಯ ಭೇತ್ತರ್ಭಾಸಿ ಭೋ ಭೋ ವಿಭಾಭಿರ್ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 13॥
ಶ್ರವಣ ಖಚಿತ ಚಂಚತ್ಕುಂಡ ಲೋಚ್ಚಂಡಗಂಡ ಭ್ರುಕುಟಿ ಕಟುಲಲಾಟ ಶ್ರೇಷ್ಠನಾಸಾರುಣೋಷ್ಠ ।
ವರದ ಸುರದ ರಾಜತ್ಕೇಸರೋತ್ಸಾರಿ ತಾರೇ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 14॥
ಪ್ರವಿಕಚ ಕಚರಾಜದ್ರತ್ನ ಕೋಟೀರಶಾಲಿನ್ ಗಲಗತ ಗಲದುಸ್ರೋದಾರ ರತ್ನಾಂಗದಾಢ್ಯ ।
ಕನಕ ಕಟಕ ಕಾಂಚೀ ಶಿಂಜಿನೀ ಮುದ್ರಿಕಾವನ್ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 15॥
ಅರಿದರಮಸಿ ಖೇಟೌ ಬಾಣಚಾಪೇ ಗದಾಂ ಸನ್ಮುಸಲಮಪಿ ದಧಾನಃ ಪಾಶವರ್ಯಾಂಕುಶೌ ಚ ।
ಕರಯುಗಲ ಧೃತಾಂತ್ರಸ್ರಗ್ವಿಭಿನ್ನಾರಿವಕ್ಷೋ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 16॥
ಚಟ ಚಟ ಚಟ ದೂರಂ ಮೋಹಯ ಭ್ರಾಮಯಾರಿನ್ ಕಡಿ ಕಡಿ ಕಡಿ ಕಾಯಂ ಜ್ವಾರಯ ಸ್ಫೋಟಯಸ್ವ ।
ಜಹಿ ಜಹಿ ಜಹಿ ವೇಗಂ ಶಾತ್ರವಂ ಸಾನುಬಂಧಂ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 17॥
ವಿಧಿಭವ ವಿಬುಧೇಶ ಭ್ರಾಮಕಾಗ್ನಿ ಸ್ಫುಲಿಂಗ ಪ್ರಸವಿ ವಿಕಟ ದಂಷ್ಪ್ರೋಜ್ಜಿಹ್ವವಕ್ತ್ರ ತ್ರಿನೇತ್ರ ।
ಕಲ ಕಲ ಕಲಕಾಮಂ ಪಾಹಿಮಾಂ ತೇಸುಭಕ್ತಂ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 18॥
ಕುರು ಕುರು ಕರುಣಾಂ ತಾಂ ಸಾಂಕುರಾಂ ದೈತ್ಯಪೂತೇ ದಿಶ ದಿಶ ವಿಶದಾಂಮೇ ಶಾಶ್ವತೀಂ ದೇವದೃಷ್ಟಿಮ್ ।
ಜಯ ಜಯ ಜಯ ಮುರ್ತೇಽನಾರ್ತ ಜೇತವ್ಯ ಪಕ್ಷಂ ದಹ ದಹ ನರಸಿಂಹಾಸಹ್ಯವೀರ್ಯಾಹಿತಂಮೇ ॥ 19॥
ಸ್ತುತಿರಿಹಮಹಿತಘ್ನೀ ಸೇವಿತಾನಾರಸಿಂಹೀ ತನುರಿವಪರಿಶಾಂತಾ ಮಾಲಿನೀ ಸಾಽಭಿತೋಽಲಮ್
ತದಖಿಲ ಗುರುಮಾಗ್ರ್ಯ ಶ್ರೀಧರೂಪಾಲಸದ್ಭಿಃ ಸುನಿಯ ಮನಯ ಕೃತ್ಯೈಃ ಸದ್ಗುಣೈರ್ನಿತ್ಯಯುಕ್ತಾಃ ॥ 20॥
ಲಿಕುಚ ತಿಲಕಸೂನುಃ ಸದ್ಧಿತಾರ್ಥಾನುಸಾರೀ ನರಹರಿ ನುತಿಮೇತಾಂ ಶತ್ರುಸಂಹಾರ ಹೇತುಮ್ ।
ಅಕೃತ ಸಕಲ ಪಾಪಧ್ವಂಸಿನೀಂ ಯಃ ಪಠೇತ್ತಾಂ ವ್ರಜತಿ ನೃಹರಿಲೋಕಂ ಕಾಮಲೋಭಾದ್ಯಸಕ್ತಃ ॥ 21॥
ಇತಿ ಕವಿಕುಲತಿಲಕ ಶ್ರೀ ತ್ರಿವಿಕ್ರಮಪಂಡಿತಾಚಾರ್ಯಸುತ
ನಾರಾಯಣಪಂಡಿತಾಚಾರ್ಯ ವಿರಚಿತಮ್ ಶ್ರೀ ನರಸಿಂಹ ಸ್ತುತಿಃ ಸಂಪೂರ್ಣಮ್
॥ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು ॥
----
॥ ನೃಸಿಂಹಕವಚಂ ಬ್ರಹ್ಮಸಂಹಿತಾಯಾಮ್ ॥
ನಾರದ ಉವಾಚ
ಇಂದ್ರಾದಿದೇವ ವೃಂದೇಶ ತಾತೇಶ್ವರ ಜಗತ್ಪತೇ ।
ಮಹಾವಿಷ್ಣೋರ್ನೃಸಿಂಹಸ್ಯ ಕವಚಂ ಬ್ರುಹಿ ಮೇ ಪ್ರಭೋ ಯಸ್ಯ ಪ್ರಪಠನಾದ್ ವಿದ್ವಾನ್ ತ್ರೈಲೋಕ್ಯವಿಜಯೀ ಭವೇತ್ ॥ 1॥
ಬ್ರಹ್ಮೋವಾಚ
ಶೃಣು ನಾರದ ವಕ್ಷ್ಯಾಮಿ ಪುತ್ರಶ್ರೇಷ್ಠ ತಪೋಘನ(ತಪೋಧನ) ।
ಕವಚಂ ನರಸಿಂಹಸ್ಯ ತ್ರೈಲೋಕ್ಯವಿಜಯಾಭಿಧಮ್ ॥ 2॥
ಯಸ್ಯ ಪ್ರಪಠನಾದ್ ವಾಗ್ಮೀ ತ್ರೈಲೋಕ್ಯವಿಜಯೀ ಭವೇತ್ ।
ಸ್ರಷ್ಠಾಽಹಂ ಜಗತಾಂ ವತ್ಸ ಪಠನಾದ್ಧಾರಣಾದ್ ಯತಃ ॥ 3॥
ಲಕ್ಷ್ಮೀರ್ಜಗತ್ತ್ರಯಮ್ ಪಾತಿ ಸಂಹರ್ತಾ ಚ ಮಹೇಶ್ವರಃ ।
ಪಠನಾದ್ಧಾರಣಾದ್ದೇವಾ ಬಭುವುಶ್ಚ ದಿಗೀಶ್ವರಾಃ ॥ 4॥
ಬ್ರಹ್ಮ ಮಂತ್ರಮಯಂ ವಕ್ಷ್ಯೇ ಭೂತಾದಿವಿನಿವಾರಕಮ್ ।
ಯಸ್ಯ ಪ್ರಸಾದಾದ್ದುರ್ವಾಸಾಸ್ತ್ರೈಲೋಕ್ಯವಿಜಯೀ ಮುನಿಃ ।
ಪಠನಾದ್ ಧಾರಣಾದ್ ಯಸ್ಯ ಶಾಸ್ತಾ ಚ ಕ್ರೋಧಭೈರವಃ ॥ 5॥
ತ್ರೈಲೋಕ್ಯವಿಜಯಸ್ಯಾಸ್ಯ ಕವಚಸ್ಯ ಪ್ರಜಾಪತಿಃ ।
ಋಷಿಶ್ಛಂದಶ್ಚ ಗಾಯತ್ರೀ ನೃಸಿಂಹ ದೇವತಾ ವಿಭುಃ ।
ಚತುರ್ವರ್ಗೇ ಚ ಶಾಂತೌ ಚ ವಿನಿಯೋಗಃ ಪ್ರಕೀರ್ತ್ತಿತಃ ॥ 6॥
ಕ್ಷ್ರೌಂ ಬಿಜಂ ಮೇ ಶಿರಃ ಪಾತು ಚಂದ್ರವರ್ಣೋ ಮಹಾಮನುಃ ।
ಉಗ್ರವೀರಂ ಮಹಾವಿಷ್ಣುಂ ಜ್ವಲಂತಃ ಸರ್ವತೋಮುಖಮ್ ।
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಂ ನಮಾಮ್ಯಹಮ್ ॥ 7॥
ದ್ವಾತ್ರಿಂಶಾದಕ್ಷರೋ ಮಂತ್ರಃ ಮಂತ್ರರಾಜಃ ಸುರದ್ರುಮಃ ।
ಕಂಠಂ ಪಾತು ಧ್ರುವಮ್ ಕ್ಷ್ರೌಂ ಹೃದ್ಭಗವತೇ ಚಕ್ಷುಷೀ ಮಮ ॥ 8॥
ನರಸಿಂಹಾಯ ಚ ಜ್ವಾಲಾಮಾಲಿನೇ ಪಾತು ಮಸ್ತಕಮ್ ।
ದೀಪ್ತದಂಷ್ಟ್ರಾಯ ಚ ತಥಾಗ್ನಿನೇತ್ರಾಯ ಚ ನಾಸಿಕಾಮ್ ॥ 9॥
ಸರ್ವರಕ್ಷೋಘ್ನಾಯ ದೇವಾಯ ಸರ್ವಭೂತವಿನಾಶಾಯ ಚ ।
ಸರ್ವಜ್ವರವಿನಾಶಾಯ ದಹ ದಹ ಪಚ ದ್ವಯಮ್ ॥ 10॥
ರಕ್ಷ ರಕ್ಷ ಸರ್ವಮಂತ್ರಮ್ ಸ್ವಾನಪಾಯಾದ್ಗೂಹ್ಯಂಮಃಹಾ ಪಾತ ಮುಖಂ ಮಮ ।
ತಾರಾದಿ ರಾಮಚಂದ್ರಾಯ ಮಮ ॥ 11॥
ಕ್ಲೀಂ ಪಾಯಾತ್ಪಾಣಿಯುಗ್ಮಂಶ್ಚ ತಕ್ರಮ್ ನಮಃ ಪದಮ್ ತತಃ ।
ನರಾಯಣಾಽಪ್ರಸವಮ್ ಚ ಆಂ ಹ್ರೀಂ ಕ್ರೌಂ ಕ್ಷ್ರೌಂ ಚಂ ಹುಂ ಫಟ್ ॥ 12॥
ಷಡಕ್ಷರಃ ಕಟಿಂ ಪಾತು ಓಂ ನಮೋ ಭಗವತೇ ಪದಮ್ ।
ವಾಸುದೇವಾಯ ಚ ಪೃಷ್ಠಂ ಕ್ಲೀಂ ಕೃಷ್ಣಾಯ ಉರುದ್ವಯಮ್ ॥ 13॥
ಕ್ಲೀಂ ಕೃಷ್ಣಾಯ ಸದಾ ಪಾತು ಜಾನುನೀ ಚ ಮನೂತ್ತಮಃ ।
ಕ್ಲೀಂ ಗ್ಲೌಂ ಕ್ಲೀಂ ಶ್ಯಾಮಲಾಂಗಾಯ ನಮಃ ಪಾಯಾತ್ಪದದ್ವಯಮ್ ॥ 14॥
ಕ್ಷ್ರೌಂ ನರಸಿಂಹಾಯ ಕ್ಷ್ರೌಂಶ್ಚ ಸರ್ವಾಂಗಂ ಮೇ ಸದಾಽವತು ॥ 15॥
ಇತಿ ತೇ ಕಥಿತಂ ವತ್ಸ ಸರ್ವಮಂತ್ರೌಘ ವಿಗ್ರಹಮ್ ।
ತವಸ್ನೇಹಾನ್ಮಯಾ ಖ್ಯಾತಂ ಪ್ರವಕ್ತವ್ಯಂ ನ ಕಸ್ಯಚಿತ್ ॥ 16॥
ಗುರುಪೂಜಾ ವಿಧಾಯಾಥ ಗೃಹಣೀಯಾತ್ ಕವಚಂ ತತಃ ।
ಸರ್ವಪುಣ್ಯಯುತೋ ಭೂತ್ವಾ ಸರ್ವಸಿದ್ಧಿಯುತೋ ಭವೇತ್ ॥ 17॥
ಶತಮಷ್ಟೋತ್ತರಂ ಚೈವ ಪುರಶ್ಚರ್ಯಾವಿಧಿ ಸ್ಮೃತಃ ।
ಹವನಾದೀನ್ ದಶಾಂಶೇನ ಕೃತ್ವಾ ಸಾಧಕಸತ್ತಮಃ ॥ 18॥
ತತಸ್ತು ಸಿದ್ಧ ಕವಚಃ ಪುಣ್ಯಾತ್ಮಾ ಮದನೋಪಮಃ ।
ಸ್ಪರ್ದ್ಧಾಮುದ್ಧಯ ಭವನೇ ಲಕ್ಷ್ಮೀರ್ವಾಣೀ ವಸೇತ್ ತತಃ ॥ 19॥
ಪುಷ್ಪಾಂಜಲ್ಯಾಷ್ಟಕಮ್ ದತ್ವಾಮೂಲೇ ನೈವ ಪಠೇತ್ ಸಕೃತ್ ।
ಅಪಿ ವರ್ಷಸಹಸ್ರಾಣಾಮ್ ಪೂಜಾಯಾಃ ಫಲಮಾಪ್ನುಯಾತ್ ॥ 20॥
ಭೂರ್ಜೇ ವಿಲಿಖ್ಯ ಗುಟಿಕಾಮ್ ಸ್ವರ್ಣಸ್ಥಾಮ್ ಧಾರಯೇತ್ ಯದಿ ।
ಕಂಠೇ ವಾ ದಕ್ಷಿಣೇ ಬಾಹೌ ನರಸಿಂಹೋ ಭವೇತ್ ಸ್ವಯಮ್ ॥ 21॥
ಯೋಷಿದ್ವಾಮಭುಜೇ ಚೈವ ಪುರುಷೋ ದಕ್ಷಿಣೇ ಕರೇ ।
ವಿಭೃಯಾತ್ ಕವಚಂ ಪುಣ್ಯಮ್ ಸರ್ವಸಿದ್ಧಿಯುತೋ ಭವೇತ್ ॥ 22॥
ಕಾಕಬಂಧ್ಯಾ ಚ ಯಾ ನಾರೀ ಮೃತವತ್ಸಾ ಚ ಯಾ ಭವೇತ್ ।
ಜನ್ಮಬಂಧ್ಯಾ ನಷ್ಟಪುತ್ರಾ ಬಹುಪುತ್ರವತೀ ಭವೇತ್ ॥ 23॥
ಕವಚಸ್ಯ ಪ್ರಸಾದೇನ ಜೀವನ್ಮುಕ್ತೋ ಭವೇನ್ನರಃ ।
ತ್ರೈಲೋಕ್ಯ ಕ್ಷೋಭಯತ್ಯೇವ ತ್ರೈಲೋಕ್ಯಂ ವಿಜಯೀ ಭವೇತ್ ॥ 24॥
ಭೂತಪ್ರೇತಪಿಶಾಚಾಶ್ಚ ರಾಕ್ಷಸಾ ದಾನವಶ್ಚ ಯೇ ।
ತಂ ದೃಷ್ಟ್ವಾ ಪ್ರಪಲಾಯಂತೇ ದೇಶಾದ್ದೇಶಾಂತರಂ ಧ್ರುವಮ್ ॥ 25॥
ಯಸ್ಮಿನ್ ಗೇಹೇ ಚ ಕವಚಂ ಗ್ರಾಮೇ ವಾ ಯದಿ ತಿಷ್ಠತಿ ।
ತಂ ದೇಶಂತು ಪರಿತ್ಯಜ ಪ್ರಯಾಂತಿ ಚಾತಿ ದೂರತಃ ॥ 26॥
॥ ಇತಿಶ್ರೀಬ್ರಹ್ಮಸಂಹಿತಾಯಾಂ ಸಪ್ತದಶಾಧ್ಯಾಯೇ ತ್ರೈಲೋಕ್ಯವಿಜಯಂ ನಾಮ
ಶ್ರೀಶ್ರೀನೃಸಿಂಹಕವಚಂ ಸಂಪೂರ್ಣಮ್ ॥
----
॥ ನೃಸಿಂಹಸ್ತೋತ್ರಮ್ ಗರುಡಪುರಾಣಾನ್ರ್ಗತಮ್ ॥
ಸೂತ ಉವಾಚ ।
ನಾರಸಿಂಹಸ್ತುತಿಂ ವಕ್ಷ್ಯೇ ಶಿವೋಕ್ತಂ ಶೌನಕಾಧುನಾ
ಪೂರ್ವಂ ಮಾತೃಗಣಾಃ ಸರ್ವೇ ಶಂಕರಂ ವಾಕ್ಯಮಬ್ರುವನ್ ॥ 1॥
ಭಗವನ್ಭಕ್ಷಯಿಷ್ಯಾಮಃ ಸದೇವಾಸುರಮಾನುಷಮ್
ತ್ವತ್ಪ್ರಸಾದಾಜ್ಜಗತ್ಸರ್ವಂ ತದನುಜ್ಞಾತುಮರ್ಹಸಿ ॥ 2॥
ಶಂಕರೌವಾಚ ।
ಭವತೀಭಿಃ ಪ್ರಜಾಃ ಸರ್ವಾ ರಕ್ಷಣೀಯಾ ನ ಸಂಶಯಃ
ತಸ್ಮಾಡ್ವೋರತರಪ್ರಾಯಂ ಮನಃ ಶೀಘ್ರಂ ನಿವರ್ತ್ಯತಾಮ್ ॥ 3॥
ಇತ್ಯೇವಂ ಶಂಕರೇಣೋಕ್ತಮನಾದೃತ್ಯ ತು ತದ್ವಚಃ ।
ಭಕ್ಷಯಾಮಾಸುರವ್ಯಗ್ರಾಸ್ತ್ರೈಲೋಕ್ಯಂ ಸಚರಾಚರಮ್ ॥ 4॥
ತ್ರೈಲೋಕ್ಯೇ ಭಕ್ಷ್ಯಮಾಣೇ ತು ತದಾ ಮಾತೃಗಣೇನ ವೈ ।
ನೃಸಿಂಹರೂಪಿಣಂ ದೇವಂ ಪ್ರದಧ್ಯೌ ಭಗವಾಂಛಿವಃ ॥ 5॥
ಅನಾದಿನಿಧನಂ ದೇವಂ ಸರ್ವಭೂತಭವೋದ್ಭವಮ್ ।
ವಿದ್ಯುಜ್ಜಿಹ್ವಂ ಮಹಾದಂಷ್ಟ್ರಂ ಸ್ಫುರತ್ಕೇಸರಮಾಲಿನಮ್ ॥ 6॥
ರತ್ನಾಂಗದಂ ಸಮುಕುಟಂ ಹೇಮಕೇಸರಭೂಷಿತಮ್ ।ಖೋಣಿಸೂತ್ರೇಣ ಮಹತಾ ಕಾಂಚನೇನ ವಿರಾಜಿತಮ್ ॥ 7॥
ನೀಲೋತ್ಪಲದಲಶ್ಯಾಮಂ ರತ್ನನೂಪುರಭೂಷಿತಮ್ ತೇಜಸಾಕ್ರಾಂತಸಕಲಬ್ರಹ್ಮಾಂಡೋದರಮಂಡಪಮ್ ॥ 8॥
ಆವರ್ತಸದೃಶಾಕಾರೈಃ ಸಂಯುಕ್ತಂ ದೇಹರೋಮಭಿಃ
ಸರ್ವಪುಷ್ಪೈರ್ಯೋಜಿತಾಂಚ ಧಾರಯಂಶ್ಚ ಮಹಾಸ್ತ್ರಜಮ್ ॥ 9॥
ಸ ಧ್ಯಾತಮಾತ್ರೋ ಭಗವಾನ್ಪ್ರದದೌ ತಸ್ಯ ದರ್ಶನಮ್ ।
ಯಾದೃಶೇನ ರೂಪೇಣ ಧ್ಯಾತೋ ರುದ್ರೈಸ್ತು ಭಕ್ತಿತಃ ॥ 10 ॥
ತಾದೃಶೇನೈವ ರೂಪೇಣ ದುರ್ನಿರೀಕ್ಷ್ಯೇಣ ದೈವತೈಃ ।
ಪ್ರಣಿಪತ್ಯ ತು ದೇವೇಶಂ ತದಾ ತುಷ್ಟಾವ ಶಂಕರಃ ॥ 11॥
ಶಂಕರ ಉವಾಚ ।
ನಮಸ್ತೇಽಸ್ತ ಜಗನ್ನಾಥ ನರಸಿಂಹವಪುರ್ಧರ ।
ದೈತ್ಯೇಶ್ವರೇಂದ್ರಸಂಹಾರಿನಖಶುಕ್ತಿವಿರಾಜಿತ ॥ 12॥
ನಖಮಂಡಲಸಭಿನ್ನಹೇಮಪಿಂಗಲವಿಗ್ರಹ ।
ನಮೋಽಸ್ತು ಪದ್ಮನಾಭಾಯ ಶೋಭನಾಯ ಜಗದ್ಗುರೋ ।
ಕಲ್ಪಾಂತಾಂಭೋದನಿರ್ಘೋಷ ಸೂರ್ಯಕೋಟಿಸಮಪ್ರಭ ॥ 13॥
ಸಹಸ್ರಯಮಸಂತ್ರಾಸ ಸಹಸ್ರೇಂದ್ರಪರಾಕ್ರಮ ।
ಹಸಸ್ತ್ರಧನದಸ್ಫೀತ ಸಹಸ್ರಚರಣಾತ್ಮಕ ॥ 14॥
ಸಹಸ್ರಚಂದಪ್ರತಿಮ ! ಸಹಸ್ರಾಂಶುಹರಿಕ್ರಮ ।
ಸಹಸ್ರರುದ್ರತೇಜಸ್ಕ ಸಹಸ್ರಬ್ರಹ್ಮಸಂಸ್ತುತ ॥ 15॥
ಸಹಸ್ರರುದ್ರಸಂಜಪ್ತ ಸಹಸ್ರಾಕ್ಷನಿರೀಕ್ಷಣ ।
ಸಹಸ್ರಜನ್ಮಮಥನ ಸಹಸ್ರಬಂಧನಮೋಚನ ॥ 16॥
ಸಹಸ್ರವಾಯುವೇಗಾಕ್ಷ ಸಹಸ್ರಾಜ್ಞಕೃಪಾಕರ ।
ಸ್ತುತ್ವೈವಂ ದೇವದೇವೇಶಂ ನೃಸಿಂಹವಪುಷಂ ಹರಿಮ್ ।
ವಿಜ್ಞಾಪಯಾಮಾಸ ಪುನರ್ವಿನಯಾವನತಃ ಶಿವಃ ॥ 17॥
ಅಂಧಕಸ್ಯ ವಿನಾಶಾಯ ಯಾ ಸೃಷ್ಟಾ ಮಾತರೋ ಮಯಾ ।
ಅನಾದೃತ್ಯ ತು ಮದ್ವಾಕ್ಯಂ ಭಕ್ಷ್ಯಂತ್ವದ್ಭುತಾಃ ಪ್ರಜಾಃ ॥ 18॥
ಸೃಷ್ಟ್ವಾ ತಾಶ್ಚ ನ ಶಕ್ತೋಽಹಂ ಸಂಹರ್ತುಮಪರಾಜಿತಃ ।
ಪೂರ್ವಂ ಕೃತ್ವಾ ಕಥಂ ತಾಸಾಂ ವಿನಾಶಮಭಿರೋಚಯೇ ॥ 19॥
ಏವಮುಕ್ತಃ ಸ ರುದ್ರೇಣ ನರಸಿಹವಪುರ್ಹರಿಃ ।
ಸಹಸ್ರಹೇವೀರ್ಜಿಹ್ವಾಗ್ರಾತ್ತದಾ ವಾಗೀಶ್ವರೋ ಹರಿಃ ॥ 20॥
ತಥಾ ಸುರಗಣಾನ್ಸರ್ವಾನ್ರೌದ್ರಾನ್ಮಾತೃಗಣಾನ್ವಿಭುಃ ।
ಸಂಹೃತ್ಯ ಜಗತಃ ಶರ್ಮ ಕೃತ್ವಾ ಚಾಂತರ್ದಧೇ ಹರಿಃ ॥ 21॥
ನಾರಸಿಂಹಮಿದಂ ಸ್ತೋತ್ರಂ ಯಃ ಪಠೇನ್ನಿಯತೇಂದ್ರಿಯಃ ।
ಮನೋರಥಪ್ರದಸ್ತಸ್ಯ ರುದ್ರಸ್ಯೇವ ನ ಸಂಶಯಃ ॥ 22॥
ಧ್ಯಾಯೇನ್ನೃಸಿಂಹಂ ತರುಣಾರ್ಕನೇತ್ರಂ ಸಿದಾಂಬುಜಾತಂ ಜ್ವಲಿತಾಗ್ನಿವತ್ಕ್ರಮ್ ।
ಅನಾದಿಮಧ್ಯಾಂತಮಜ ಪುರಾಣಂ ಪರಾಪರೇಶಂ ಜಗತಾಂ ನಿಧಾನಮ್ ॥ 23॥
ಜಪೇದಿದಂ ಸಂತತದುಃಖಜಾಲಂ ಜಹಾತಿ ನೀಹಾರಮಿವಾಂಶುಮಾಲೀ ।
ಸಮಾತೃವರ್ಗಸ್ಯ ಕರೋತಿ ಮೂರ್ತಿಂ ಯದಾ ತದಾ ತಿಷ್ಠತಿ ತತ್ಸಮೀಪೇ ॥ 24॥
ದೇವೇಶ್ವರಸ್ಯಾಪಿ ನೃಸಿಂಹಮೂರ್ತೇಃ ಪೂಜಾಂ ವಿಧಾತುಂ ತ್ರಿಪುರಾಂತಕಾರೀ ।
ಪ್ರಸಾದ್ಯ ತಂ ದೇವವರಂ ಸ ಲಬ್ಧ್ವಾ ಅವ್ಯಾಜ್ಜಗನ್ಮಾತೃಗಣೇಭ್ಯ ಏವ ಚ ॥ 25॥
ಇತಿ ಶ್ರೀಗಾರುಡೇ ಮಹಾಪುರಾಣೇ ಪೂರ್ವಖಂಡೇ ಪ್ರಥಮಾಂಶಾಖ್ಯೇ ಆಚಾರಕಾಂಡೇ ನೃಸಿಂಹಸ್ತೋತ್ರಂ ನಾಮೈಕತ್ರಿಂಶದುತ್ತರದ್ವಿಶತತಮೋಽಧ
---
ಶ್ರೀ ಸುಮತೀಂದ್ರತೀರ್ಥರು
ಹೇಮಪ್ರಸಾದಮಧ್ಯೆ ಮಣಿಗಣಖಚಿತೇ ಶ್ರೀಮಹೀಭ್ಯಾಂ ಮಿಲಿತ್ವಾ
ತಿಷ್ಠ೦ತಂ ಸ್ವರ್ಣಕಾಯಂ ಬಹುಗುಣಲಸಿತಂ ಬ್ರಹ್ಮರುದ್ರಾದಿ ವಂದ್ಯಮ್ ।
ನಿರ್ಧೂತಾಶೇಷಹೇಯಮ್ ಶುಭತಮಮತಿಭಿಸ್ಸೇವ್ಯಮಾನ೦
ವಂದೇ ಶ್ರೀ ನಾರಸಿಂಹಂ ರುಚಿತಮಹೃದಯಂ ಘೋರದಾರಿದ್ರ್ಯಶಾಂತೈ ।।
---
" ಶ್ರೀಮಜ್ಜಯತೀರ್ಥರು - ಮಾಯಾವಾದ ಖಂಡನ ಟೀಕೆ "
ನರಸಿಂಹಮಸಹ್ಯೋರು ಪ್ರತ್ಯೂಹ ತಿಮಿರಾಪಹಮ್ ।ಪ್ರಣಿಪತ್ಯ ವ್ಯಾಕರಿಷ್ಯೇ ಮಯಾವಾದಸ್ಯ ಖಂಡನಮ್ ।।
---
ಶ್ರೀ ವಿಜಯಧ್ವಜತೀರ್ಥರು - ದಶಾವತಾರ ಗಾಧೆ "
ನಿಶಿತಪ್ರಾಗ್ರ್ಯನಖೇನ ಜಿತ ಸುರಾರಿಂ ನರಸಿಂಹಮ್ ।
ಕಮಲಾಕಂತಮಖಂಡಿತ ವಿಭಾವಾಬ್ಧಿಂ ಹರಿಮೀಡೇ ।।
---
|| ಶ್ರೀ ವಾದಿರಾಜ ಗುರುಸಾರ್ವಭೌಮರು - ತೀರ್ಥಪ್ರಬಂಧ ಅಹೋಬ ಕ್ಷೇತ್ರ ||
ಅಹೋಬಲನೃಸಿಂಹಸ್ಯ ಮಹೋಬಲಮುಪಾಶ್ರಿತಾ: |
ಅಸತ್ತಮಿಸ್ರಸಂಮಿಶ್ರಾಂ ಗಣಯಾಮೋ ನ ಸಂಸ್ಕೃತಿಂ ||
ಯಸ್ತಂಭೇ ಪ್ರಕಟೀಬಭೂವ ಸ ಮಯಿ ಸ್ತಂಭಾಯಿತೇsಪಿ ಸ್ಫುಟೀ-
ಭೂಯಾದ್ಯೋ ಭವನಾಶಿನೀತಟಗತಶ್ಛಿಂದ್ಯಾತ್ ಸ ಮೇsಮುಂ ಭವಂ |
ಯೋsಪಾದ್ಭಾಲಕಮಪ್ಯಸೌ ನರಹರಿರ್ಮಾಂ ಬಾಲಿಶಂ ಪಾತು ಯೋ ರಕ್ಷೋsಶಿಕ್ಷದಸೌ ಪ್ರಭು: ಖಲಕುಲಂ ಶಿಕ್ಷೇದರೂಕ್ಷಪ್ರಿಯ: ||
ವಿರುದ್ಧಧರ್ಮಧರ್ಮಿತ್ವಂ ಸರ್ವಾಂತರ್ಯಾಮಿತಾಂ ತಥಾ |
ನರಸಿಂಹೋsದ್ಭುತಸ್ತಂಭಸಂಭೂತ: ಸ್ಪಷ್ಟಯತ್ಯಯಂ ||
ವಿದಾರಿತರಿಪೂದರಪ್ರಕಟಿತಾಂತ್ರಮಾಲಾಧರಂ
ತದಾತ್ಮಜಮುದಾವಹಪ್ರಿಯತರೋಗ್ರಲೀಲಾಕರಂ ||
ಉದಾರರವಪೂರಿತಾಂಬುಜಭವಾಂಡಭಾಂಡಾಂತರಂಸದಾ ನರಹರಿಂ ಶ್ರಯೇ ನಖರನವ್ಯವಜ್ರಾಂಕುರಂ ||
ಉದ್ಯನ್ಮಧ್ವಮತಾಯುಧೇನ ಪರಿತ: ಸಂಸಾರಸಂಜ್ಞೇ ವನೇ ಮಾದ್ಯನ್ಮಾಯಿಮತಂಗಮರ್ದನವಿಧೌ ಸೋsಹಂ ಸಹಾಯಸ್ತ್ವಿತಿ |
ಹರ್ಯಕ್ಷಸ್ಯ ಸದೃಕ್ಷತಾಂ ವಹತಿ ಯಸ್ತಸ್ಯ ದ್ವಿತೀಯೋsಪ್ಯಹಂ ಸಾಜಾತ್ಯೇನ ಸದಾ ಮಾನವತುಲಾಂ ಪಾಯನ್ನೃಸಿಂಹ: ಪ್ರಭು: ||
ನೃಸಿಂಹವಿಲಸತ್ಪಾದಕುಶೇಶಯಕೃತೋತ್ಸವೇ |
ಭವನಾಶಿನಿ ಮಚ್ಚೀರ್ಣಪಾಪಾನಾಂ ಭವ ನಾಶಿನೀ ||
ನಿವೃತ್ತಿಸಂಗಮೋ ಭಾತಿ ಯತ್ರ ಮತ್ರ್ಯಮುಪಾಶ್ರಿತಾ: |
ನಿವರ್ತಂತೇsಖಿಲಾ ದೋಷಾ: ಸಂಯುನಕ್ತಿ ಶುಭಾವಲೀಂ ||
---
|| ಶ್ರೀ ವಿಜಯೀಂದ್ರತೀರ್ಥರು - ಭೇದವಿದ್ಯಾವಿಲಾಸ ||
ಕಲ್ಯಾಣ ಗುಣ ಪೂರ್ಣಾಯ ವಲ್ಲಭಯ ಶ್ರೀಯಸ್ಸದಾ ।
ಶ್ರೀಮಧ್ವದೇಶಿಕೇಷ್ಟಾಯ ಶ್ರೀ ನೃಸಿಂಹಾಯ ತೇ ನಮಃ ।।
---
ಶ್ರೀ ರಾಘವೇಂದ್ರತೀರ್ಥರು - ದಶಾವತಾರ ಸ್ತುತಿ
ತಾವಕಂ ನರಹರೇsತಿವಿರುದ್ಧಂ ವೇಷಧಾರಣಮಿದಂ ತನುತೇ ನಃ ।
ಅತ್ಯಸಂಘಟಿತಕರ್ಮ ಚ ಕೃತ್ವಾ ಪಾಲಯೇ ಪ್ರಣತಮಿತ್ಯುಪದೇಶಮ್ ।।
ದಾರಿತೋದರ ಹಿರಣ್ಯಕಷತ್ರೋರಾಂತ್ರಮಾಲ್ಯ ಕಲಿತಂ ತವ ರೂಪಮ್ ।
ನಾರಸಿಂಹ ಕಲಯೇ ನನು ಭೂತಂ ಶಾರದಂ ಜಲಧರಂ ಸಹ ಶಂಪಮ್ ।।
---
ಶ್ರೀ ವ್ಯಾಸತತ್ತ್ವಜ್ಞತೀರ್ಥರು
ಚರಣಸ್ಮರಣಾತ್ಸರ್ವ ದುರಿತಸ್ಯ ವಿದಾರಣಂ ।
ಶರಣಂ ನೃಹರಿ೦ ವಂದೇ ಕರುಣಾ ವರುಣಾಲಯಮ್ ।।
---
ಶ್ರೀ ಭಾಷ್ಯದೀಪಿಕಾಚಾರ್ಯರು
ಆಮ್ರಸ್ತಂಭಾತ್ ಸಮಾಗತ್ಯ ತಾಮ್ರತುಂಡಂ ನಿಹತ್ಯಹಃ ।
ನಮ್ರಂ ನೌಮಿ ಜಗನ್ನಾಥಂ ಕಮ್ರೋsಪಾತ್ತಂ ನೃಕೇಸರೀ ।।
---
ಶ್ರೀ ಸತ್ಯಧರ್ಮತೀರ್ಥರು ವಿರಚಿತ ಲಕ್ಷ್ಮಿ ನರಸಿಂಹ ಸ್ತೋತ್ರ
ಸತ್ಯಜ್ಞಾನ ಸುಖ ಸ್ವರೂಪಮಮಲಂ ಕ್ಷೀರಾಬ್ಧಿ ಮಧ್ಯಸ್ಥಲಂ
ಯೋಗಾರೂಢಮತಿ ಪ್ರಸನ್ನ ವದನಂ ಭೂಷಾ ಸಹಸ್ರೋಜ್ವಲಮ್ ।
ತ್ರ್ಯಕ್ಷಂ ಚಕ್ರಪಿನಾಕಸಾಭಯವಾರಾನ್ ಭಿಭ್ರಾಣಮರ್ಕಚ್ಛವಿ೦
ಛತ್ರೀಭೂತ ಫಣೀಂದ್ರಮಿಂದುಧವಲಂ ಲಕ್ಷ್ಮೀ ನೃಸಿಂಹಂ ಭಜೇ ।।
ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಚಾರ್ಯ ಇಭರಾಮಪುರ
*************
Runa Vimochana Sri Nrusimha Stothram....
(ಶ್ರೀ ವಾದಿರಾಜತೀರ್ಥಕೃತ ಶ್ರೀ ನರಸಿಂಹಪುರಾಣೋಕ್ತ ಋಣಮೋಚನಸ್ತೋತ್ರಮ್)
> ಋಣ ವಿಮೋಚನ ಶ್ರೀ ನೃಸಿಂಹ ಸ್ತೋತ್ರಮ್
ದೇವತಾ ಕಾರ್ಯ ಸಿಧ್ಯರ್ಥಂ ಸಭಾಸ್ಥಂಭ ಸಮುಧ್ಭವಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ - ೧
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ - ೨
ಆಂತ್ರಮಾಲಾಧರಂ ಶಂಖಚಕ್ರಾಬ್ಜಾಯುಧ ಧಾರಿಣಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ -೩
ಸ್ಮರಣಾತ್ ಸರ್ವಪಾಪಘ್ನಮ್ ಕದ್ರೂಜವಿಷನಾಶನಮ್
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ- ೪
ಸಿಂಹನಾದೇನ ಮಹತಾ ದಿಗ್ದನ್ತಿ ಭಯನಾಶನಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ- ೫
ಪ್ರಹ್ಲಾದ ವರದಂ ಶ್ರೀಶಂ ದೈತ್ಯೇಶ್ವರವಿದಾರಿಣಮ್
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ- ೬
ಕ್ರೂರಗ್ರಹೈ: ಪೀಡಿತಾನಾಮ್ ಭಕ್ತಾನಾಮ್ ಅಭಯಪ್ರದಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ- ೭
ವೇದವೇದಾಂತ ಯಜ್ಞೆಶಮ್ ಬ್ರಹ್ಮರುದ್ರಾದಿವಂದಿತಮ್
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ- ೮
ಯ ಇದಂ ಪಠತೇ ನಿತ್ಯಂ ಋಣಮೋಚನ ಸಂಜ್ಞಿತಮ್
ಅನೃಣೀ ಜಾಯತೇ ಸದ್ಯೊಧನಂ ಶೀಘ್ರಮವಾಪ್ನುಯತ್ - ೯
ಇತಿ ಶ್ರೀ ನೃಸಿಂಹಪುರಾಣೋಕ್ತಮ್
ಋಣಮೋಚನಸ್ತೊತ್ರಮ್ ಸಂಪೂರ್ಣಮ್
ಶ್ರೀಕೃಷ್ಣಾರ್ಪಣಮಸ್ತು
> Runa Vimochana Sri Nrusimha Stothram
Devata karya sidhyartham sabhasthambha samudbhavam!
Sri Nrusimham mahaveeram namami runa mukthaye!!
Lakshmyaalingitha vamangam bhakthanaam varadayakam!

Aantramaladharam, sankhachakrabjaaayudha dhaarinam!
Sri Nrusimham mahaveeram namami runamukthaye!!
Smaranath sarvapapagnam khadruja vishanasanam!

Simhanadena mahatha digdhanthi bhayanasanam!

Prahlada varadam Srisam daithyeswaravidharanam!

Krooragrahaih peedithanam bhakthanamabhaya pradham!

Vedavedanthayajnesam BrahmaRudradhivandhitham!

Ya idham patathe nithyam runamochana samjnitham
Anruni jaayathe sadhyo, dhanam seegramavapnuyath;
Sri Krishnaarpanamasthu
In the legend of Narasimha Avathara, Hiranyakasipa (father of Prahlada) is depicted as personification of obsessive human ego.
He was ignorant of the supremacy and omnipresence of Lord Vishnu (Hari Sarvottama) and ultimately gets perished at the hands of the Supreme God in the form of Narasimha.
> Kaama (lust, craze, desire),
> Krodha (anger, hatred),
> Lobha (greed, miserliness, narrow minded),
> Moha (delusory emotional attachment),
> Mada or Ahankara (pride, stubborn mindedness),
> Matsarya (envy, jealousy, show or vanity, and pride)
are the six internal enemies of mankind known as Ari-shadvargas (Negative passions). Ari means enemy.
They are responsible for all kinds of difficult experiences in our lives.
These negative characters prevent mankind from realizing the ultimate reality.
When these negative passions overrule, egoism gets manifested which is the biggest enemy of humans.
A man with egoism becomes self-centred and ignorant of his surroundings.
In Bhagawadgita, Chapter # 2 (sloka 62 & 63) Lord Sri Krishna says that..
Dhyayato vishayan pumsah sangah teshu upa jayate I
Sangat sanjayate kamah kamat krodhah abhijayate II (sloka # 62)
ध्यायतो विषयान पुंसः तेषु उप जायते ।
संगत संजायते कामः क्रोधः अभिजायते ।। श्लोक ६२
Krodhat bhavati sammohah sammohat smriti vibhramah I
Smriti bhramshat buddhi nashah buddhinasat pranashyati II(sloka # 63)
क्रोधात् भवति संमोहः संमोहात् स्मृति विभ्रमः ।
स्मृति भ्रंषात बुद्धि नाशः बुद्धिनाशत प्रणश्यति ।। श्लोक ६३
Meaning.....
when a man thinks of objects, attachment for them arises,
from attachment desire is born,
from desire arises anger,
from anger comes delusion,
from delusion loss of memory,
from loss of memory the destruction of discrimination and
from destruction of discrimination man perishes;
Remedy (antidote) being, total surrender to Lord Narasimha (Vishnu) who helps one to overcome the weakness of ignorance and also protects his devotees from internal as well as external enemies.
Until and unless one tries to overcome/keep control on negative passions one will not understand the Tattva - Hari Sarvottama - Vaayu Jeevottama;
Lord Narasimha not only bestows health, education, wealth, prosperity etc., but also relieves his devotees from all types of debts (Runas) and protects them from internal as well as external enemies and also helps to overcome the weakness of ignorance.
Hari Sarvottama-Vaayu Jeevottama
Sri GuruRaajo Vijayate
🙏🙏🙏
************
ಉಗ್ರಂ ವೀರಂ ಮಹಾವಿಷ್ಣುಂ
ಜ್ವಲಂತಂ ಸರ್ವತೋಮುಖಂ
ನೃಸಿಂಹಂ ಭೀಷಣಂ ಭದ್ರಂ
ಮೃತ್ಯುಂ ಮೃತ್ಯುಂ ನಮಾಮ್ಯಹಂ||
ಹಿರಣ್ಯಕಶಿಪುವಿನ ಪುತ್ರನಾದ ಪ್ರಹ್ಲಾದನಿಗೂ ನಡೆಯುವ ಸಂಭಾಷಣೆ.
"ನಿನ್ನ ಹರಿ ಎಲ್ಲಿರುವನು?"
"ನನ್ನ ಹರಿ ಎಲ್ಲೆಲ್ಲಿಯೂ ಇರುವನು. ನಿನ್ನಲ್ಲಿಯೂ ನನ್ನಲ್ಲಿಯೂ"
"ಈ ಕಂಬದಲ್ಲಿರುವನೇ?"
"ಕಂಬದಲ್ಲಿ, ಕಂಬದ ಕಣದಲ್ಲಿಯೂ"
ಕಶ್ಯಪ ಪುತ್ರ ಹಿರಣ್ಯಕಶಿಪು ಪ್ರಹ್ಲಾದನಲ್ಲಿ ಹರಿಯ ಬಗ್ಗೆ ವಿಚಾರಿಸುವಾಗ ಪುಟ್ಟ ಹುಡುಗ ಪ್ರಹ್ಲಾದ ಹೇಳುವ ಮಾತಿದು. ನೃಸಿಂಹಾವತಾರ ಇಲ್ಲಿಯೇ ಸಂಭವಿಸುವುದು.
ದೇವರನ್ನು ವೇದಗಳು ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವೇಶ್ವರ ಎಂದು ಸಾರುತ್ತವೆ. ಎಲ್ಲಾ ಕಾಲಕ್ಕೂ ಎಲ್ಲೆಲ್ಲಿಯೂ ಇರುವ ಮಹತ್ ತತ್ವ ಭಗವಂತ. ಅವನ ಇರುವಿಕೆ ಪರಿಪೂರ್ಣ. ಸರ್ವಕಾಲಕ್ಕೂ ಎಲ್ಲೆಡೆ ಇರಬಹುದಾದ ಭಗವಂತನ ನಿದರ್ಶನ ರೂಪವನ್ನು ತೋರುವುದು ಈ ನಾರಸಿಂಹನ ರೂಪ.
"ಹಿರಣ್ಯಕಶಿಪು" ಮಹರ್ಷಿ ಕಶ್ಯಪರ ಪುತ್ರನೇ ಆದರೂ ತನ್ನ ಮನಸ್ಸೇಂದ್ರಿಯಗಳನ್ನು ಭಗವಂತನಲ್ಲಿ ನಿಲ್ಲಿಸದೆ ಅಹಂಕಾರದಿಂದ ತಾನೇ ಸರ್ವಶಕ್ತ ಎನ್ನುವಂತೆ ವರ್ತಿಸುತ್ತಾನೆ. ತನ್ನೊಳಗಿನ ದೈವತ್ವವನ್ನು ಅರಿಯದೆ ಕಾಮ ಕ್ರೋಧಾದಿಗಳನ್ನು ಬೆಳೆಸಿಕೊಂಡು ದೈತ್ಯನಾಗುತ್ತಾನೆ. ಆ ದೈತ್ಯತ್ವವನ್ನು ಸಂಹರಿಸಲು ಮಹಾವಿಷ್ಣುವಿನ ಅವತಾರವಾಗಬೇಕಾಗುತ್ತದೆ.
ಪ್ರಹ್ಲಾದ ದೈತ್ಯಪುತ್ರನಾದರೂ ಸಹ ತನ್ನೊಳಗೆ ಸದಾ ಹರಿಭಕ್ತಿ, ವೈರಾಗ್ಯವೆನ್ನುವ ಸಾತ್ವಿಕ ಮನೋಗುಣವನ್ನು
ನಿಷ್ಕಾಮ ವ್ರತವನ್ನು ಬೆಳೆಸಿಕೊಂಡು ಬರುತ್ತಾನೆ ಸಾಕ್ಷಾತ್ ಶ್ರೀ ಹರಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
ಇದು ನಾರಸಿಂಹ ತತ್ವದ ಮತ್ತೊಂದು ಸಂದೇಶ, ಮನುಷ್ಯನ ಹುಟ್ಟಿಗಿಂತಲೂ ಆತನ ಸಂಸ್ಕಾರ, ಸದ್ವಿಚಾರಗಳು, ನಿಷ್ಕಾಮ ವ್ರತ ಆತನನ್ನು ಭಗವಂತನಿಗೆ ಬಹಳ ಹತ್ತಿರದವನನ್ನಾಗಿ ಮಾಡುತ್ತದೆ.
ಭಗವಂತನ ಅನುಗ್ರಹ,ಪ್ರೀತಿಗೋಸ್ಕರ ಮಾಡುವ ವ್ರತ ನಿಷ್ಕಾಮ ವ್ರತ. ಇಲ್ಲಿ ವ್ರತ ಮಾಡುವವರು ಭಗವಂತನ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪ್ರಹಲ್ಲಾದನ ವ್ರತ. ತನ್ನ ಮುಂದೆ ಪ್ರತ್ಯಕ್ಷನಾದ ಭಗವಂತ ನಿನಗೇನೂ ಬೇಕು ಎಂದು ಕೇಳಿದಾಗ ಆ ಪುಟ್ಟ ಬಾಲಕ 'ನಾನು ನಿನ್ನನ್ನು ಭಕ್ತಿ ಮಾಡಿದ್ದು ನಿನ್ನಿಂದ ಪ್ರತಿಫಲಪಡೆಯುವುದಕ್ಕಾಗಿ ಅಲ್ಲ, ನನ್ನ ಭಕ್ತಿ ವ್ಯಾಪಾರವಲ್ಲ ಎನ್ನುತ್ತಾನೆ'!..
ಸೃಷ್ಟಿ-ಸ್ಥಿತಿ-ಸಂಹಾರ ಭಗವಂತನ ನಿಷ್ಕಾಮ ವ್ರತ. ರಾಮಾಯಣದಲ್ಲಿ ಶ್ರೀರಾಮಚಂದ್ರ ಹೇಳುವಂತೆ "ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ'.
ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್
ಅಂದರೆ ' ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ (ನಿತ್ಯ ನಿಷ್ಕಾಮ ಕರ್ಮ) ಜನರ, ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರ ಯೋಗ-ಕ್ಷೇಮದ ಹೊಣೆ ನನ್ನದು'..
***************
ಶ್ರೀಮದ್ ಭಾಗವತದಲ್ಲಿ ವರ್ಣಿಸಿದಂತೆ ಶ್ರೀನರಸಿಂಹ ರೂಪದ ವೈಭವ
ಶ್ರೀಮದ್ಭಾಗವತಸ್ಕಂಧದಲ್ಲಿ ಶ್ರೀನರಸಿಂಹ ದೇವರ ಅತ್ಯದ್ಭುತ ರೂಪವನ್ನು ವರ್ಣಿಸಲಾಗಿದ್ದು ಶ್ರೀನರಸಿಂಹ ರೂಪದ ವರ್ಣನೆಯ ವೈಭವ ಹೀಗಿದೆ -
ಪ್ರತಪ್ತಚಾಮಿಕರಚಂಡಲೋಚನಮ್
ಪುಟಕ್ಕಿಟ್ಟ ಚಿನ್ನದಂತೆ ಕೆಂಪು ಹಳದಿ ಮಿಶ್ರಿತವಾದ ಭೀಕರವಾದಕಣ್ಣುಗಳು.
ಸ್ಫುರತ್ಸಟಾಕೇಸರಜೃಂಭಿತಾನನಮ್|
ತೆರೆಯಲ್ಪಟ್ಟ ಮುಖದ ಮೇಲೆ ಕೆದರಿ ಅತ್ತ ಇತ್ತ ಹಾರಾಡುತ್ತಿದ್ದ ಹೊಳಗಯುತ್ತಿದ್ದ ಕೇಸರಗಳು
ಕರಾಲದಂಷ್ಟ್ರಂ |
ಭಯಂಕರವಾದ ಕೋರೆದಾಡೆಗಳು
ಕರವಾಲಾಚಂಚಲಕ್ಷುರಂತಜಿಹ್ವಂ |
ಕತ್ತಿಯನ್ನು ಝಳಪಿಸುತ್ತ ಚೂರಿಯ ಅಲಗಿನಂತೆ ತೀಕ್ಷ್ಣವಾದ ನಾಲಗೆ
ಭ್ರುಕುಟೀಮುಖೋಜ್ವಲಮ್ |
ಹುಬ್ಬುಗಂಟಿಕ್ಕಿದ ಮುಖ ಭಯಂಕರವಾಗಿತ್ತು
ಸ್ತಭ್ಧೋರ್ಧ್ವಕರ್ಣಂ |
ಅಲ್ಲಡದೆ ನೇರವಾಗಿ ಮೇಲಕ್ಕೆ ನಿಮಿರಿ ನಿಂತ ಕಿವಿಗಳು ಸ್ತಬ್ಧವಾಗಿದ್ದುವು .
ಗಿರಿಕಂದರಾದ್ಭುತವ್ಯಾತ್ತಾಸ್ಯನಾಸಂ |
ಪರ್ವತಗಳ ಗುಹೆಯಂತೆ ತೆರೆಯಲ್ಪಟ್ಟ ಬಾಯಿ ಹಾಗೂ ಮೂಗಿನ ಹೊರಳೆಗಳು .
ಹನುಭೇಧಭೀಷಣಮ್ |
ಭೀಷಣತೆಗೆ ಮೆರಗು ನೀಡುತ್ತಿದ್ದ ಮುದುಡಿದ ಕೆನ್ನೆಗಳು .
ದಿವಿಸ್ಪ್ರಶತ್ಕಾಯಂ |
ಗಗನಚುಂಬಿಯಾದ ( ಮುಗಿಲೆತ್ತರಕ್ಕೆ ಚಾಚಿದ ) ಉನ್ನತ್ತ ಶರೀರ
ಅದೀರ್ಘಪೀವರಗ್ರಂವೋರುವಕ್ಷಸ್ತಲಂ |
ಹೆಚ್ಚು ದೀರ್ಘವಲ್ಲದ ಹಾಗೂ ಪುಷ್ಟವಾದ ಕತ್ತು
ವಿಸ್ತಾರವಾದ ಎದೆ .
ಅಲ್ಪಮಧ್ಯಮಮ್ |
ತೇಳುವಾದ ನಡು ದೇಹ
ಚಂದ್ರಾಂಶುಗೌರೈಶ್ಚಃರಿತಂ ತನೂರುಹೈ |
ಚಂದ್ರ ಕಿರಣದಂತೆ ( ಚಂದ್ರನ ಬೆಳದಿಂಗಳಿನಂತೆ ) ಹೊಳೆಯುತ್ತಿದ್ದ ರೋಮರಾಶಿಯ ಹೊಳಪು .
ವಿಶ್ವಗ್ಭುಜಾನೀಕಶತಂ |
ಬಾಹುಗಳಲ್ಲಿ ಆಯುಧಗಳಾಗಿ ವೀರಾಜಿಸುತ್ತಿದ್ದ ನೂರಾರುಭುಜಗಳು ಎಲ್ಲ ದಿಕ್ಕುಗಳಿಗೆ ಹರಡಿದ್ದವು
ನಖಾಯುಧಮ್ |
ಬಾಹುಗಳಲ್ಲಿ ಆಯುಧಗಳಾಗಿ ವೀರಾಜಿಸುತ್ತಿದ್ದ ಉಗುರುಗಳು .
-ಶ್ರೀಮದ್ ಭಾಗವತಪುರಾಣ 7-8-20,21 22

ಹೀಗೆ ಶ್ರೀನರಸಿಂಹದೇವರ ಪರಮಾದ್ಭುತ ರೂಪ ವೈಭವವನ್ನು ಶ್ರೀಮದ್ ಭಾಗವತ ಸಪ್ತಮಸ್ಕಂಧದಲ್ಲಿ ವರ್ಣಿಸಿದ್ದಾರೆ
ಜ್ವರಸಮರಭಯೇ ಚಿಂತಯೇದುಗ್ರಸಿಂಹಮ್ 🙏

ನರಸಿಂಹ ಜಯಂತಿ ಪೂಜಾ ವಿಧಿಗಳು
ಭಕ್ತರು ಬೆಳಿಗ್ಗೆ ಬೇಗ ಎದ್ದು ಪುಣ್ಯ ಸ್ನಾನ ಮಾಡುತ್ತಾರೆ.
ಹಿಂದಿನ ದಿನ ನರಸಿಂಹ ಜಯಂತಿಯ ಭಕ್ತರು ಒಂದು ಹೊತ್ತಿನ ಊಟವನ್ನು ಮಾತ್ರ ಸೇವಿಸುತ್ತಾರೆ.
ಭಕ್ತರು ರಾತ್ರಿಯಲ್ಲಿ ಜಾಗರಣೆ ಮಾಡುತ್ತಾರೆ ಮತ್ತು ಮರುದಿನ ಬೆಳಿಗ್ಗೆ ವಿಸರ್ಜನ ಪೂಜೆಯನ್ನು ಮಾಡುತ್ತಾರೆ.
ಚತುರ್ದಶಿ ತಿಥಿ ಮುಗಿದ ಮರುದಿನ ಸೂರ್ಯೋದಯದ ನಂತರ ಉಪವಾಸ ಮುರಿಯಲಾಗುತ್ತದೆ.
ಚತುರ್ದಶಿ ತಿಥಿ ಮುಗಿದರೆ ಸೂರ್ಯೋದಯದ ನಂತರ ಯಾವಾಗ ಬೇಕಾದರೂ ಜಯಂತಿ ಆಚರಣೆ ಮಾಡಿ ಉಪವಾಸ ಮುರಿಯಬಹುದು.
ನಂತರ ಅವರು ಎಳ್ಳು ಅಥವಾ ಸಾಸಿವೆ ಎಣ್ಣೆಯಿಂದ ದೀಪಗಳನ್ನು ಬೆಳಗಿಸಿ ಶುಭ್ರವಾದ ಬಟ್ಟೆಗಳನ್ನು ಧರಿಸುತ್ತಾರೆ.ಜನರು ಮಾಡಿದ ಯಾವುದೇ ಪಾಪಗಳಿಗೆ ಕ್ಷಮೆ ಕೋರಿ ಉಪವಾಸವನ್ನು ಆಚರಿಸುತ್ತಾರೆ.
ಉಪವಾಸ ಮಾಡಲು ಸಾಧ್ಯವಾಗದ ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ.
ನಂತರ ಭಕ್ತರು ದಾನ ಮಾಡುವ ಮೂಲಕ ಉಪವಾಸವನ್ನು ಮುರಿದು ಸಾತ್ವಿಕ ಆಹಾರ ಸೇವಿಸಿ ಪಾರಣ ಮಾಡುತ್ತಾರೆ.
***

ಶ್ರೀ ನರಸಿಂಹ ಕ್ಷೇತ್ರಗಳ ಪರಿಚಯ 👇👇
1) • ಯಾವ ನರಸಿಂಹ ಕ್ಷೇತ್ರವು ಸಂಪೂರ್ಣವಾಗಿ ಮರದಿಂದ ನಿರ್ಮಾಣವಾಗಿದೆ?
ಉತ್ತರ. - ಸಂಪ್ಯಾಡಿ (ಸುಬ್ರಮಣ್ಯ)
ಏಳುನೂರು ವರ್ಷಗಳ ಹಳೆಯದು. ದೇಗುಲವು ಸಂಪೂರ್ಣ ಮರದಿಂದ ನಿರ್ಮಾಣವಾಗಿದೆ.
2) • ಪ್ರಹ್ಲಾದರಾಜರಿಂದ ಪ್ರತಿಷ್ಠಾಪಿತ ನರಸಿಂಹದೇವರ ಮೂರ್ತಿ ಎಲ್ಲಿದೆ?
ಉತ್ತರ. - ತೊಣ್ಣೂರು ಮೇಲುಕೋಟೆಯ ಬಳಿ ಇಲ್ಲಿನ ದಂಡ ಸ್ಪರ್ಶ ಬಹಳ ವಿಶೇಷ
3)• ದೂರ್ವಾಸರಿಂದ ಪ್ರತಿಷ್ಠಿತ ನರಸಿಂಹದೇವರ ಕ್ಷೇತ್ರ ಯಾವುದು?
ಉತ್ತರ.
- ದೇವರಾಯನದುರ್ಗದ ಭೋಗಾನರಸಿಂಹ
4) • ಅರ್ಜುನನ ಕೆತ್ತನೆಯಿಂದ ರೂಪುಗೊಂಡ ವಿಶಿಷ್ಠವಾದ ನರಸಿಂಹ ದೇವರ ಮೂರ್ತಿ ಎಲ್ಲಿದೆ?
(ಮದ್ದೂರು ಅಲ್ಲ)
ಉತ್ತರ. ಅರ್ಜುನ ಮಾತ್ರ ಶ್ರೀ ಕೃಷ್ಣನ ಸಹಾಯದಿಂದ ನರಸಿಂಹೆ ದೇವರ ದರ್ಶನ ಮಾಡಿರುತ್ತಾನೆ ಆದರೆ ಉಳಿದ ಪಾಂಡವರು ಅದನ್ನು ಕೇಳಿದಾಗ ಅರ್ಜುನ ತನ್ನ ಬಾಣದಿಂದ ಗುಹೆಯೊಳಗೆ ಕೆತ್ತಿ ತೋರುತ್ತಾನೆ ಇದೊಂದು ಬಹು ರೋಚಕ ಸುರಂಗ ಗುಹಾಂತರ ದೇಗುಲ ಡೆಂಕಣಿಕೋಟ ಹೊಸೂರು
5) • ಯಾವ ನರಸಿಂಹ ಕ್ಷೇತ್ರದಲ್ಲಿ ಜಲಪಾತ, ಸಮುದ್ರ, ನದಿ, ಗುಹೆ ಎಲ್ಲವೂ ಇದೆ?
ಉತ್ತರ. -ಹೊನ್ನಾವರ ದ ಬಳಿ ಅಪ್ಸರಕೊಂಡ ಬಹು ಸುಂದರವಾದ ಪ್ರದೇಶ.
6) • ಇಲ್ಲಿನ ನರಸಿಂಹದೇವರ ಮೂರ್ತಿಯು ಮನುಷ್ಯರಂತೆ ಮೆತ್ತಗಿನ ದೇಹ ಹೊಂದಿದೆ, ಯಾವುದಾ ಕ್ಷೇತ್ರ?
ಉತ್ತರ. - ವಾರಂಗಲ್
7)• ಯಾವ ನರಸಿಂಹದೇವರ ಕ್ಷೇತ್ರ ನಾಲ್ಕೂ ಯುಗಗಳಲ್ಲಿದ್ದು ನಾಲ್ಕು ಹೆಸರಿಂದ ಪ್ರಸಿದ್ದಿಗೊಂಡಿದೆ?
ಉತ್ತರ. - ದೇವರಾಯನದುರ್ಗ
8) • ಮುಕ್ತಿ ನರಸಿಂಹ ದೇವರ ವಿಗ್ರಹ ಎಲ್ಲಿದೆ?
ಉತ್ತರ - ಹಂಪೆಯ ವಿರೂಪಾಕ್ಷ ದೇವಾಲಯದ ಒಳಾಂಗಣದಲ್ಲಿರುವ ಪುಟ್ಟ ವಿಶೇಷ ಭಂಗಿಯ ನರಸಿಂಹ
9) • ನಾಲ್ಕನೇ ಶತಮಾನದ ನರಸಿಂಹದೇವರ ಕ್ಷೇತ್ರ ಎಲ್ಲಿದೆ?
ಉತ್ತರ - ಸಾಲಿಗ್ರಾಮ
10)• ಯಾವ ನರಸಿಂಹದೇವರ ವಿಗ್ರಹದ ಬೆನ್ನಿನ ಮೇಲೆ ಆನೆ ಹಾಗೂ ಸಿಂಹದ ಕೆತ್ತನೆ ಇದೆ?
ಉತ್ತರ. - ಶ್ರೀರಂಗಪಟ್ಟಣದ ಮುಂಭಾಗದ ದೇವಸ್ಥಾನ ಗಜಕೇಸರಿ ನರಸಿಂಹ ಕೃಷ್ಣರಾಜ ಒಡೆಯರ್ ಪ್ರತಿಷ್ಠಾಪನೆ ಮಾಡಿದ್ದು...👍🙏🙏🙏
******
" ಶ್ರೀ ನೃಸಿಂಹ - 1 "
" ದಿನಾಂಕ : 25.05.2021 - ಮಂಗಳವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ಚತುರ್ದಶೀ - " ಶ್ರೀ ನೃಸಿಂಹ ಜಯಂತೀ - ಶ್ರೀ ನೃಸಿಂಹದೇವರ ಪ್ರಾದುರ್ಭಾವ " ವಾದ ಪರಮ ಪವಿತ್ರವಾದ ಶುಭಾಧಿನ "
" ಶ್ರೀ ಗುರುಸಾರ್ವಭೌಮರ ಕಣ್ಣಲ್ಲಿ ಶ್ರೀ ನೃಸಿಂಹದೇವರು "
ಶ್ರೀ ನೃಸಿಂಹದೇವರ ಅವತಾರಕ್ಕೆ ಕಾರಣೀಭೂತರಾಗಿ - ಶ್ರೀ ನೃಸಿಂಹನ ಅಮೃತ ಮಾಯವಾದ ಹಸ್ತವನ್ನು ತಮ್ಮ ತಲೆಯ ಮೇಲೆ ಇರಿಸಿಕೊಂಡು ಕಣ್ಣಾರೆ ಕಂಡವರು ಮತ್ತು ಶ್ರೀ ನೃಸಿಂಹ ದೇವರ ತೊಡೆಯ ಮೇಲೆ ಕುಳಿತ ಭಾಗ್ಯ ಶಾಲಿಗಳು ಶ್ರೀ ಪ್ರಹ್ಲಾದರಾಜರು.
ಅಂಥಾ ಶ್ರೀ ಪ್ರಹ್ಲಾದರಾಜಾವತಾರಿಗಳೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.
ತಾವಕಂ ನರಹರೇsತಿ ವಿರುದ್ಧಂ
ವೇಷ ಧಾರಣಮಿದಂ ತನುತೇ ನಃ ।
ಅತ್ಯ ಸಂಘಟಿತ ಕರ್ಮ ಚ ಕೃತ್ವಾ
ಪಾಲಯೇ ಪ್ರಣತಮಿತ್ಯುಪದೇಶಮ್ ।।
ದೇವಾ!
ಭಕ್ತರನ್ನು ರಕ್ಷಿಸುವಾಗ ಸೌಮ್ಯ ರೂಪವನ್ನೂ - ಶತ್ರು ಸಂಹಾರ ಕಾಲದಲ್ಲಿ ಉಗ್ರ ರೂಪವನ್ನೂ ನೀನು ಧರಿಸಿರುವುದು ಕಂಡು ಬಂದಿದೆ.
ಆದರೆ ಈಗ ನೀನು ಉಗ್ರವಾದ ಶ್ರೀ ನೃಕಂಠೀರವ ರೂಪದಿಂದ ನನ್ನನ್ನು ( ಪ್ರಹ್ಲಾದ ರೂಪಿಯಾದ ನನ್ನನ್ನು ) ರಕ್ಷಣೆ ಮಾಡಲು ಬಂದಿರುವುದನ್ನು ನೋಡಿದರೆ ಭಕ್ತ ಜನರಿಗಾಗಿ ಹಿಂದೆಂದೂ ಮಾಡದ ಅತ್ಯಂತ ದುರ್ಘಟ ಕಾರ್ಯವನ್ನಾದರೂ ಮಾಡಿ ನಾನು ಭಕ್ತರನ್ನು ರಕ್ಷಿಸುತ್ತೇನೆಂದು ಅಭಯವೀಯುವಂತೆ ತೋರುತ್ತದೆ.
ದಾರಿತೋದರ ಹಿರಣ್ಯಕ ಶತ್ರೋ
ರಾಂತ್ರ ಮಾಲ್ಯಕಲಿತಂ ತವ ರೂಪಮ್ ।
ನಾರಸಿಂಹ ಕಲಯೇsನನುಭೂತಂ
ಶಾರದಂ ಜಲಧರಂ ಸಹಶಂಪಮ್ ।।
ಶ್ರೀ ಮೂಲರಾಮಾಭಿನ್ನ ನೃಸಿಂಹದೇವಾ!
ಹಿರಣ್ಯ ಕಶಿಪುವಿನ ಉದರವನ್ನು ಸೀಳಿ ಕರುಳ ಮಾಲೆಯನ್ನು ಧರಿಸಿರುವ ನಿನ್ನ ರೂಪವು ಶರತ್ಕಾಲೀನವಾದ ಮಿಂಚಿನಿಂದೊಡಗೂಡಿದ ಮೇಘದಂತೆ ರಾರಾಜಿಸುತ್ತಿದೆ.
ವಿವರಣೆ :
ಶರತ್ಕಾಲದ ಮೇಘದಲ್ಲಿ ಮಿಂಚಿನ ಸಂಬಂಧವಿಲ್ಲ.
ಆದರೂ ಇಲ್ಲಿ ಅನನುಭೂತವಾದ ಶರತ್ಕಾಲೀನ ಮಿಂಚಿನಿಂದ ಯುಕ್ತವಾದ ಮೇಘದಂತೆ ನಿನ್ನ ರೂಪ ಕಂಗೊಳಿಸುತ್ತಿದೆ ಎಂದು ಶ್ರೀ ನೃಸಿಂಹದೇವರನ್ನು ಶ್ರೀ ಗುರುಸಾರ್ವಭೌಮರು ಅಭೂತೋಪಮಾಲಂಕಾರದಿಂದ ವರ್ಣಿಸಿದ್ದಾರೆ.
" ಶ್ರೀ ವೇದವ್ಯಾಸರ ಕಣ್ಣಲ್ಲಿ ಶ್ರೀ ಪ್ರಹ್ಲಾದರಾಜರು "
( ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು )
" ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ...
ಭವಂತಿ ಪುರುಷಾಲೋಕೇ
ಮದ್ಭಾಕ್ತಾಸ್ತಾಮನುವ್ರತಾಃ ।
ಭವಾನ್ಮೇ ಖಲು ಭಕ್ತಾನಾಂ
ಸರ್ವೇಷಾಂ ಪ್ರತಿರೂಪಧೃಕ್ ।। ( 7/11/22 )
ಹೇ ಪ್ರಹ್ಲಾದ!
ಲೋಕದಲ್ಲಿ ಯಾರು ನನ್ನ ಭಕ್ತರೋ ಅವರೆಲ್ಲರೂ ನಿನ್ನನ್ನು ಅನುಸರಿಸಬೇಕು.
ಎಲ್ಲರಿಗೂ ನೀನು ಆದರ್ಶ ಪ್ರಾಯನಾಗಿರುವಿ.
ಋತೇ ತು ತಾತ್ವಿಕಾನ್ ದೆವಾನ್
ನಾರದಾದಿ೦ ಸ್ತಥೈವ ಚ ।
ಪ್ರಹ್ಲಾದಾದುತ್ತಮಃ ಕೋನು
ವಿಷ್ಣುಭಕ್ತೌ ಜಗತ್ತ್ರಯೇ ।। ಇತಿ ಸ್ಕಾಂದೇ ।।
ಬ್ರಹ್ಮಾದಿ ತಾತ್ವಿಕ ದೇವತೆಗಳಿಗಿಂತಲೂ - ನಾರದಾದಿ ಮುನಿಗಳಿಗಿಂತಲೂ ಬೇರೇ ವಿಷ್ಣು ಭಕ್ತಿಯಲ್ಲಿ ಪ್ರಹ್ಲಾದನನ್ನು ಮೀರಿಸಿದವರು ಮೂರು ಲೋಕದಲ್ಲಿ ಯಾರಿದ್ದಾರೆ? ( ಯಾರೂ ಇಲ್ಲ ).
ಇದು ಶ್ರೀ ಶ್ರೀ ನೃಸಿಂಹದೇವರ ವಚನ!
ಶ್ರೀ ನೃಸಿಂಹನು ಪ್ರಹ್ಲಾದರಿಗೆ ಕೊಟ್ಟ ವಚನ.
" ಶ್ರೀಮದಾನಂದತೀರ್ಥ - ಶ್ರೀ ನಾರಸಿಂಹನ ಬಾಂಧವ್ಯ "
ಶ್ರೀ ಆನಂದತೀರ್ಥರೆಂಬ ಶ್ರೀ ನಾರಸಿಂಹನು ಮಾಯಾವಾದಿಗಳೆಂಬ ದೈತ್ಯರನ್ನು ಯುಕ್ತಿಗಳೆಂಬ ನಖಗಳಿಂದ ಸೀಳಿ ಎದುರಾಳಿಗಳಿಲ್ಲದೆ ಶೋಭಿಸುತ್ತಿದ್ದಾರೆ.
ಆನಂದತೀರ್ಥ ಪುಂಸಿಂಹಃ
ಮಾಯಾವಾದಿದಿತೇಃ ಸುತಾನ್ ।
ವಿದಾರ್ಯಯುಕ್ತಿನಖರೈಃ
ಅಪ್ರತಿಷೋsಭಿಭಾಸತೇ ।।
ಶ್ರೀ ಸರ್ವಜ್ಞಾಚಾರ್ಯರೆಂಬ ಶ್ರೀ ನಾರಸಿಂಹನು ಮಾಯಾವಾದಿಗಳೆಂಬ ದಾನವರೆಡೆಗೆ ಬರುತ್ತಿದ್ದಾರೆ.
ಆದ್ದರಿಂದ ಅವರು ತಕ್ಷಣವೇ ಪಲಾಯನ ಮಾಡುವುದು ಹಾಗೂ ಗುಹೆಗಳಲ್ಲಿ ಬಚ್ಚಿಟ್ಟುಕೊಳ್ಳುವುದು ಒಳ್ಳೆಯದು.
ನೃಹರಿಃ ಸಕಲಜ್ಞನಾಮಕಃ
ಸಮುಪೈತಿ ಹಿ ಮಾಯಿದಾನವಾನ್ ।
ಪ್ರಪಲಾಯನಮತ್ರ ತತ್ ಕ್ಷಮಂ
ತ್ವರಯಾ ವಸತಿಃ ಗುಹಾಸು ಚ ।।
ತನ್ನ ಹುಂಕಾರ ಮಾತ್ರದಿಂದ ಕತ್ತಲಂತಿರುವ ಅಜ್ಞಾನದ ಬಾಗಿಲನ್ನು ಮುರಿದು ಹಾಕುವ ಶ್ರೀಮದಾಚಾರ್ಯರ ಅಭೀಷ್ಟ ದೇವತೆ ಶ್ರೀ ನೃಸಿಂಹನು ಸರ್ವೋತ್ತಮನಾಗಿದ್ದಾನೆ.
" ತತ್ತ್ವೋದ್ಯೋತ " ದಲ್ಲಿ...
ಜಯತ್ಯಾನಂದತೀರ್ಥೇಷ್ಟ
ದೇವತಾ ನೃಕೇಸರೀ ।
ವಿಪಾಟಿತಾಜ್ಞಾನ ತಮಃ
ಕಪಾಟಾತ್ಯುರುಹುಂಕೃತಃ ।।
ಜಗತ್ತೆಲ್ಲವೂ ಅಜ್ಞಾನ ಕಲ್ಪಿತವಾಗಿದೆ ಎಂದು ವಾದಿಸುವ ಮಾಯಾವಾದವೆಂಬ ಕತ್ತಲೆಗೆ ಸೂರ್ಯನಂತಿರುವ - ಯಥಾರ್ಥ ಜ್ಞಾನ, ದುಃಖ ಸಂಬಂಧವಿಲ್ಲದ ಸುಖ - ಎದುರಾಳಿ ಇಲ್ಲದ ಶಕ್ತಿ ಇವುಗಳ ಅಮಿತ ಸಾಗರವಾದ " ಶ್ರೀ ನೃಸಿಂಹ " ನು ಉತ್ಕೃಷ್ಟನಾಗಿದ್ದಾನೆ.
" ಮಾಯಾವಾದ ಖಂಡನ " ದಲ್ಲಿ...
ನರಸಿಂಹೋsಖಿಲಾ ಜ್ಞಾನ
ಮತಧ್ವಾಂತ ದಿವಾಕರಃ ।
ಜಯತ್ಯಮಿತ ಸುಜ್ಞಾನ
ಸುಖಶಕ್ತಿ ಪಯೋನಿಧಿಃ ।।
" ಭಕ್ತರ ಸ್ನೇಹಿತ ಶ್ರೀ ನೃಸಿಂಹ "
ಉಗ್ರವಾದ ಸಿಂಹವು ತನ್ನ ಮಕ್ಕಳಲ್ಲಿ ಸದಾ ಕಾಲದಲ್ಲಿ ಸ್ನೇಹಮಯಿಯಾಗಿರುವಂತೆ ಶ್ರೀ ನೃಸಿಂಹ ರೂಪಿ ಶ್ರೀ ಹರಿಯೂ ತನ್ನ ಮಕ್ಕಳೇ ಆದ ಭಕ್ತರಲ್ಲಿ ಸ್ನೇಹಮಯಿಯಾಗಿ ಇರುತ್ತಾನೆಯೇ ಹೊರತು ಭಕ್ತರಿಗೆ ಉಗ್ರನಲ್ಲ!!
ಉಗ್ರೋsಪಿ ಅನುಗ್ರಏವಾಯಂ
ಸ್ವಪೋತಾನಾಂ ನೃಕೇಸರೀ ।
ಕೇಸರೀವ ಸ್ವಪೋತಾನಾಂ
ಅನ್ಯೇಷಾಮುಗ್ರವಿಗ್ರಹಃ ।।
" ಶ್ರೀ ವೀಣಾ ವೇಂಕಟನಾಥಾಚಾರ್ಯರ ಪುತ್ರರ - ಶ್ರೀ ರಾಯರ ವಿದ್ಯಾ ಶಿಷ್ಯರೂ ಆದ ಶ್ರೀ ವೀಣಾ ಲಕ್ಷ್ಮೀನಾರಾಯಣಾಚಾರ್ಯರ ಮಾತಲ್ಲಿ " ....
ಯಃ ಸ್ತಂಭಾದಾವಿರಾಸೀನ್ಮೃಗರಿಪು-
ವದನಃ ಪ್ರಾರ್ಥಿತಃ ಸರ್ವದೇವೈ-
ದೇವಾರಿಂ ಭೂಸುರಾರಿಂ ಸ್ವಸುತಮಪಿ
ಭಟೈರ್ಘಾತಯಂತಂ ಹರೀಷ್ಟಮ್ ।
ಹತ್ವಾ ಪ್ರಹ್ಲಾದ ತಾತಂ ಪ್ರವಿತತ
ನಖರೈರ್ಭಾಗ್ಯತೋ ಭಾಗ್ಯದೇವಾ
ಹರ್ಷಂ ಕುರ್ವನ್ ನಿಜಾನಾಂ ಸಮವತು
ಸತತಂ ಮಾಂ ಪ್ರಪನ್ನಂ ಸ ಈಶಃ ।।
" ಶ್ರೀ ನಾರದಾಂಶ ಪುರಂದರದಾಸರು... "
ರಾಗ : ಪೂರ್ವೀ ತಾಳ : ಆದಿ
ದಾನವನ ಕೊಂದದ್ದಲ್ಲ ಕಾಣಿರೋ ।
ನಾನಾ ವಿನೋದಿ ನಮ್ಮ -
ತೊರೆವೆಯ ನಾರಸಿಂಹ ।। ಪಲ್ಲವಿ ।।
ಅಚ್ಛ ಪ್ರಹ್ಲಾದನೆಂಬ -
ರತ್ನವಿದ್ದ ಒಡಲೊಳು ।
ಬಿಚ್ಚಿ ಬಗಿದು ನೋಡಿದ -
ನಿನ್ನೆಷ್ಟು ಇದ್ದಾವೆಂದು ।। ಚರಣ ।।
ನಂಟುತನ ಬೆಳೆಯಬೇಕೆಂದು -
ಕರುಳ ಕೊರಳೊಳು ।
ಗಂಟು ಹಾಕಿಕೊಂಡನೆಷ್ಟು -
ಸ್ನೇಹ ಸಂಬಂಧದಿಂದ ।। ಚರಣ ।।
ಸಿರಿ ಮುದ್ದು ನರಸಿಂಹ -
ಪ್ರಹ್ಲಾದ ಪಾಲಕ ।
ಉರಿ ಮೋರೆ ದೈವ -
ನಮ್ಮ ಪುರಂದರವಿಠ್ಠಲ ।। ಚರಣ ।।
" ಶ್ರೀ ಭೃಗು ಮಹರ್ಷಿಗಳ ಅವತಾರರಾದ ಶ್ರೀ ವಿಜಯರಾಯರ ನುಡಿಮುತ್ತುಗಳಲ್ಲಿ.... "
ರಾಗ : ನಾಟಿ ತಾಳ : ಝಂಪೆ
ನರಸಿಂಹ ವಜ್ರಸಿಂಹ ।
ಸರಿಸಿಜನಾಭಾ ರಕ್ಷಣ ।
ಶರಧಿ ನಿವಾಸಾ ।। ಪಲ್ಲವಿ ।।
ಹಿರಣ್ಯ ಕಶಿಪು ತಾ -
ಪ್ರಹ್ಲಾದನ ಬಾಧಿಸಲು ।
ಪಿರಿಯ ದೈವವೆ ಮೊರೆಯೋಗಲು ।
ಹಿರಿದಾಗಿ ಕೇಳಿ ಹಿತದಲಿ -
ಬಂದು ಬೊಬ್ಬಿಡಲು ।
ಹಿರಣ್ಯಗರ್ಭಾದಿಗಳು -
ಹಿರಿದು ಚಿಂತಿಸಲೂ ।। ಚರಣ ।।
ಭುಗಿಲೆನೆ ದಿಕ್ಕಿನಲ್ಲಿ -
ಪ್ರತಿ ಶಬ್ದ ಪುಟ್ಟುತಿರೆ ।
ಪಗಲಿರಳು ಒಂದೆಂದರು ಸಕಲರೂ ।
ಝಗಝಗಿಪ ಬೆಳಗು -
ಕವಿದದು ಮೂರು ಲೋಕಕ್ಕೆ ।
ಉಗುರು ಕೊನೆ ಪೊಗಳಿ -
ವೇದಗಳು ಬೆರಗಾಗೆ ।। ಚರಣ ।।
ರಕ್ಕಸ ನೋಡಲು । ಬಗೆ ।
ದು ಕರಳು ಕೊರಳಿಗೆ ಮಾಲೆ ।
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ।।
ಕಕ್ಕಸದ ದೈವ -
ಅನಂತ ಪದುಮನಾಭ ।
ಮುಕ್ತಿದಾಯಕ -
ವಿಜಯವಿಠ್ಠಲ ಮಹದಾ ।। ಚರಣ ।।
ಶ್ರೀ ರಾಮ ನರಹರಿ ಕೃಷ್ಣ ವೇದಾವ್ಯಾಸ ನಾರಾಯಣರ ನಿತ್ಯ ಸನ್ನಿಧಾನಯುಕ್ತರೂ - ಶ್ರೀ ವಾಯುದೇವರ ನಿತ್ಯಾವೇಶಯುಕ್ತರೂ - ಶ್ರೀ ನೃಸಿಂಹದೇವರ ಅವತಾರಕ್ಕೆ ಕಾರಣೀಭೂತರಾದ ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು - ಭಕ್ತರ ಮನೋಭೀಷ್ಟಷ್ಟಗಳನ್ನು ಪೂರೈಸಿ ಸಾದಾ ಕಾಲ ರಕ್ಷಿಸಲೆಂದು ಪ್ರಾರ್ಥಿಸುತ್ತಾ........
BY ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ನೃಸಿಂಹ - 2 "
" ಶ್ರೀ ನರಸಿಂಹ ಪಾಲಯಮಾಂ "
ನರಶ್ಚ ಸಿಂಹಶ್ಚ ನರಸಿಂಹೌ ।
ನರಸಿಂಹಯೋರಿದಂ
ನಾರಸಿಂಹಮ್ ।
ನಾರಸಿಂಹಂ ವಪು:
ಯಸ್ಯಸಃ ನಾರಸಿಂಹವಪು: ।।
ಭಕ್ತರ ಅನುಗ್ರಹಕ್ಕಾಗಿ ಮನುಷ್ಯ ದೇಹ - ಸಿಂಹದ ತಲೆಯನ್ನುಳ್ಳ ಶರೀರವನ್ನು ಧರಿಸಿರುವನು!!"
***
" ಶ್ರೀ ನೃಸಿಂಹ - 3 "
" ಶ್ರೀ ನೃಸಿಂಹ ಪ್ರಾದುರ್ಭಾವ "
ಉಚ್ಛೈರಾರುಹ್ಯ ನೀಚೈಃ ಪತತಿ ನಿಜ -
ಜನ ದ್ರೋಹಕೃತ್ ಸತ್ಯಮಿತ್ಥಮ್ ।
ವಸ್ತು ವ್ಯಾಹರ್ತುಕಾಮಃ ಕಿಲ ದನುಜ
ಕುಲಂ ಪಾಣಿಜ ಪೋತಮಭ್ರೇ ।।
ಉತ್ಕ್ಷಿಪ್ಯಾಧಃ ಕ್ಷಿಪನ್ನೇ ಪದ ಭಜನ
ಪರಂ ರಕ್ಷಿತೈವಂ ಸದೇತಿ ।
ಪ್ರಹ್ಲಾದೇ ದತ್ತ ದೃಷ್ಟಿಃ ನತ ಜನ-
ಮಜಹನ್ ಪೌರುಷಃ ಪಾತುಸಿಂಹಃ ।।
ಕಲ್ಯಾಣ ಗುಣ ಪೂರ್ಣಾಯ
ವಲ್ಲಭಯ ಶ್ರೀಯಸ್ಸದಾ ।
ಶ್ರೀಮಧ್ವದೇಶಿಕೇಷ್ಟಾಯ
ಶ್ರೀ ನೃಸಿಂಹಾಯ ತೇ ನಮಃ ।।
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧೀಶ್ವರರಾದ ಶ್ರೀ ರಾಮಚಂದ್ರತೀರ್ಥರ ಪಟ್ಟದ ಶಿಷ್ಯರೂ - ಮಹಾ ಸಂಸ್ಥಾನಾಧಿಪತಿಗಳೂ -96 ನೇ ಋಜು ಪದಸ್ಥ ಶ್ರೀ ಅವ್ಯಕ್ತಾಂಶರೂ ಆದ.....
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿಬುಧೇಂದ್ರತೀರ್ಥರಿಗೆ ಸ್ವಪ್ನ ಸೂಚನೆಯಂತೆ ಕೃಷ್ಣಾ ನದಿಯ ಪ್ರವಾಹದಲ್ಲಿ ಒಲಿದು ದೊರಕಿದ - ಶ್ರೀ ವಿಬುಧೇಂದ್ರತೀರ್ಥರಿಂದ ಪೂಜಿತನಾದ - ಷೋಡಶ ಬಾಹುಗಳಿಂದ ವಿರಾಜಿಸುವ - ಹಿರಣ್ಯಕಶಿಪುವಿನ ಅಹಂಕಾರವನ್ನು ಮುರಿದು ಅವನನ್ನು ಸಂಹರಿಸಿ ಜಗತ್ತಿಗೆ ಕಲ್ಯಾಣವನ್ನುಂಟು ಮಾಡಿದ - ತನ್ನ ಉಪಾಸಕರಾದ ಯತಿಗಳನ್ನು ದುರ್ವಾದಿಗಳೆಂಬ ಗಜಗಳನ್ನು ಸೀಳಿ ಹಾಕುವುದರಲ್ಲಿ ದಕ್ಷರನ್ನಾಗಿ ಮಾಡುವ - ಶ್ರೀ ವಿಜಯೀಂದ್ರತೀರ್ಥರೆಂಬ ಸಂಯಮೀಂದ್ರರಿಗೆ ವಾಂಛಿತಪ್ರದನಾದವನೂ ಮತ್ತು ಅವರ ಮನೋಭೀಷ್ಟಗಳನ್ನು ಪೂರೈಸಿದವರು ಶ್ರೀ ನೃಸಿಂಹದೇವರು!
ಶ್ರೀ ವಿಬುಧೇಂದ್ರತೀರ್ಥರಿಗೆ ಶ್ರೀ ನರಸಿಂಹದೇವರು ಸ್ವಪ್ನದಲ್ಲಿ ದರ್ಶನವಿತ್ತು ಕೃಷ್ಣಾ ನದಿಯ ಪ್ರವಾಹದಲ್ಲಿ ನಾನು ನೆಲೆಸಿದ್ದೇನೆ.
ನೀನು ನನ್ನನ್ನು ಹೊರ ತೆಗೆದು ಪೂಜಿಸು ಎಂದು ಆಜ್ಞಾಪಿಸಿದನು.
ಅದರಂತೆ ಶ್ರೀ ವಿಬುಧೇಂದ್ರತೀರ್ಥರು ಈ ಶ್ರೀ ಷೋಡಶ ಬಾಹು ನೃಸಿಂಹ ದೇವರನ್ನು ಕೃಷ್ಣಾ ನದಿಯ ಪ್ರವಾಹದಲ್ಲಿ ಹುಡುಕಿ ಪಡೆದು ಪೂಜಿಸಿ ಜಗತ್ರಯದಲ್ಲೂ ಖ್ಯಾತರಾದರು.
ಈ ವಿಷಯವನ್ನು......
ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರಾದ ಶ್ರೀ ವಾದೀಂದ್ರತೀರ್ಥರು........
"ಶ್ರೀ ರಾಘವೇಂದ್ರಮಠಗಟಾರ್ಚಾಗತಿ ಕ್ರಮ ಗ್ರಂಥ " ದಲ್ಲಿ.........
ನದ್ಯಾಂ ಮಹೋಪಲೇ ಲಬ್ಧಾ
ಸ್ವಪ್ನಾಭಿಜ್ಞಾನ ಪೂರ್ವಕಂ ।
ತಸ್ಯಾಹ್ಯಷ್ಟ ( ದ್ವ್ಯಷ್ಟ ) ಭೂಜಾ-
ಮೂರ್ತಿಃ ವಿಬುಧೇಂದ್ರಯತೀಶಿತುಃ ।।
ಎಂದು
ಸ್ಪಷ್ಟ ಪಡಿಸಿದ್ದಾರೆ.
ಶ್ರೀ ವಿಬುಧೇಂದ್ರತೀರ್ಥರೇ ಮುಂದೆ ಶ್ರೀ ವಿಜಯೀಂದ್ರತೀರ್ಥರಾಗಿ ಅವತರಿಸಿ ಈ ಪ್ರತಿಮೆಯ ಉಪಾಸನೆಯಿಂದ ಸಕಲ ದುರ್ವಾದಿಗಳನ್ನೂ ಜಯಿಸಿ - ದ್ವೈತ ಸಿದ್ಧಾಂತ ಸ್ಥಾಪನೆ ಮಾಡಿ - 104 ಅನಿತರ ಸಾಧಾರಣ ಗ್ರಂಥಗಳನ್ನು ರಚಿಸಿ ಜಗದ್ವಿಖ್ಯಾತರಾಗಿದ್ದಾರೆ.
ಪರಪೂಜ್ಯರು ತಮ್ಮ ಎಲ್ಲಾ ಗ್ರಂಥಗಳಲ್ಲೂ ಶ್ರೀ ನೃಸಿಂಹದೇವರ ಕುರಿತು ಮಂಗಳಾಚರಣೆಯನ್ನು ವಿಶೇಷವಾಗಿ ಮಾಡಿದ್ದರೆ.
ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ಶ್ರೀ ಷೋಡಶ ಬಾಹು ನರಸಿಂಹದೇವರನ್ನು ಶ್ರೀ ನೃಸಿಂಹ ಜಯಂತಿಯಂದು ವಿಶೇಷ ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ತಮ್ಮ ಮನೋಭೀಷ್ಟಗಳನ್ನು ಪಡೆಯುವುದರೊಂದಿಗೆ ಶ್ರೀ ನೃಸಿಂಹನ ಪರಮಾನುಗ್ರಹದಿಂದ ಭಕ್ತರ ಮನೋಭೀಷ್ಟಗಳನ್ನು ಪೂರೈಸುತ್ತಿದ್ದಾರೆ.
" ಶ್ರೀ ನೃಸಿಂಹ ಜಯಂತೀ ವೈಶಿಷ್ಟ್ಯ "
ರಾಗ : ಭೈರವಿ ತಾಳ : ಆದಿ
ಸಿಂಹ ರೂಪನಾದ ಶ್ರೀ ಹರಿ
ಹೇ ನಾಮಗಿರೀಶನೇ ।। ಪಲ್ಲವಿ ।।
ಒಮ್ಮನದಿಂದ -
ನಿನ್ನನು ಭಜಿಸಲು ।
ಸಮ್ಮತದಿಂದಲಿ -
ಕಾಯುವೆನೆಂದ ಹರಿ ।। ಆ. ಪ ।।
ತರಳನು ಕರಿಯೇ -
ಸ್ತಂಭವು ಬಿರಿಯೇ ।
ತುಂಬಾ ಉಗ್ರವನು -
ತೋರಿದನು ।
ಕರುಳನು ಬಗೆದು -
ಕೊರಳೊಳಗಿಟ್ಟು ।
ತರಳನ ಸಲುಹಿದ -
ಶ್ರೀ ನೃಸಿಂಹನೇ ।। ಚರಣ ।।
ಭಕ್ತರೆಲ್ಲ ಕೂಡಿ -
ಬಹು ದೂರ ಓಡಿ ।
ಪರಮ ಶಾಂತವನು -
ಬೇಡಿದನು ।
ಕರೆದು ತನ್ನ ತೊಡೆ-
ಯೊಳು ಕುಳಿಸಿದ ।
ಪರಮ ಹರುಷವನು
ಹೊಂದಿದ ಶ್ರೀ ಹರಿ ।। ಚರಣ ।।
ಜಯ ಜಯ ಜಯವೆಂದು-
ಹೂವನು ತಂದು ।
ಹರಿ ಹರಿ ಹರಿಯೆಂದು =
ಸುರರೆಲ್ಲ ಸುರಿಸೆ ।
ಭಯ ನಿವಾರಣ -
ಭಾಗ್ಯ ಸ್ವರೂಪನೇ ।
ಪರಮ ಪುರುಷ ಶ್ರೀ-
ಪುರಂದರವಿಠಲನೇ ।। ಚರಣ ।।
ದೈತ್ಯ ಸಾಮ್ರಾಟನಾದ ಹಿರಣ್ಯಕಶಿಪುವಿನ ಸಭಾಂಗಣದಲ್ಲಿ ಸ್ತಂಭದಿಂದ ವಿಜೃ೦ಭಿಸಿ - ಶ್ರೀ ಚತುರ್ಮುಖ ಬ್ರಹ್ಮದೇವರ ಅಜೇಯ - ಅವಧ್ಯತ್ವಾದಿ ವರದಿಂದ ದರ್ಪಿತನಾಗಿ ಹಿರಣ್ಯಕಶಿಪುವನ್ನು ಶೀಘ್ರವಾಗಿ ಸಂಹರಿಸಿ - ಬ್ರಹ್ಮ - ರುದ್ರ - ಇಂದ್ರರಿಂದ ಸರ್ವೋತ್ತಮನೂ - ದುಷ್ಟ ಶಿಕ್ಷಕನೂ - ಅಚಿಂತ್ಯಾದ್ಭುತ ಶಕ್ತಿ ಸಂಪನ್ನನ್ನೂ - ಲೋಕ ಕಲ್ಯಾಣ ಕಾರಕನೂ - ಪರಬ್ರಹ್ಮನೆಂದು ಸ್ತುತಿ ಪೂರ್ವಕ ನಮಸ್ಕೃತನಾದ ಮಹನೀಯನೂ - ಭಕ್ತಾಗ್ರಣಿಯಾದ ಶ್ರೀ ಪ್ರಹ್ಲಾದರಾಜರ ಪ್ರಾರ್ಥನೆಗೆ ಓಗೊಟ್ಟು ಅವರನ್ನು ಸಂರಕ್ಷಣೆ ಮಾಡಿದ ದೇವ ದೇವೋತ್ತಮನಾದ ಶ್ರೀ ಹರಿಯು ಶ್ರೀ ನೃಸಿಂಹನ ರೂಪದಲ್ಲಿ ಪ್ರಾದುರ್ಭವಿಸಿದ ಪರಮ ಪವಿತ್ರವಾದ ಶುಭ ದಿನ!!
" ಕೈವಲ್ಯದಾಯಕ ಶ್ರೀ ನಾರಸಿಂಹ "
ಶ್ರೀರಮಣಿ ಕರ ಕಮಲ ಪೂಜಿತ ।
ಚಾರು ಚರಣ ಸರೋಜ ಬ್ರಹ್ಮ । ಸ ।
ಮೀರ ವಾಣಿ ಫಣೀಂದ್ರ ವೀಂದ್ರ -
ಭವೇಂದ್ರ ಮುಖವಿನುತ ।।
ನೀರಜ ಭವಾಂಡೋದಯ ಸ್ಥಿತಿ ।
ಕಾರಣನೆ ಕೈವಲ್ಯದಾಯಕ ।
ನರಸಿಂಹನೇ ನಮಿಪೆ -
ಕರುಣಿಪುದೆಮಗೆ ಮಂಗಳವ ।।
ಶ್ರೀ ರಮಣಿಯಾದ ಮಹಾಲಕ್ಷ್ಮೀದೇವಿಯ ಕರ ಕಮಲಗಳಿಂದ ಪೂಜಿತವಾದ - ಮನೋಹರವಾದ ಚರಣ ಕಮಲಗಳುಳ್ಳ - ಬ್ರಹ್ಮ - ವಾಯು - ಸರಸ್ವತೀ - ಭಾರತೀ - ನಾಗರಾಜನಾದ ಶೇಷ - ಪಕ್ಷಿರಾಜನಾದ ಗರುಡ - ಶಿವ ಮತ್ತು ಇಂದ್ರ ಮೊದಲಾದ ದೇವತೆಗಳಿಂದ ವಿಶೇಷವಾಗಿ ಸ್ತುತಿಸಲ್ಪಡುವ - ಬ್ರಹ್ಮಾಂಡದ ಸೃಷ್ಟಿ - ಸ್ಥಿತಿ - ಲಯಗಳಿಗೆ ಕಾರಣನಾದ - ಮೋಕ್ಷ ನೀಡುವಂಥಹಾ ನಿನಗೆ ನಮಸ್ಕರಿಸುವೇಣು.
ನಮಗೆ ಮಂಗಳವ ಕರುಣಿಸು!!
" ಶ್ರೀಮದಾಚಾರ್ಯರು "...
ಸೃಷ್ಠಿಃ ಸ್ಥಿತಿಃ ಸಂಹೃತಿಶ್ಚ -
ನಿಯಮೋsಜ್ಞಾನ ಬೋಧನೇ ।
ಬಂಧೋಃ ಮೋಕ್ಷಃ ಸುಖಂ -
ದುಃಖಮಾವೃತಿರ್ಜೋತಿರೇವ ಚ ।।
" ಬ್ರಹ್ಮ ಸಂಹಿತಾ " ....
ವಿರಜಾ ಸ್ನಾನತೋ ಲಿಂಗಂ
ಸಿಕ್ತಂ ದ್ವಿಗುಣತೋಚ್ಛ್ರಿತಮ್ ।
ತಂ ದೃಷ್ಟ್ವಾ ದೇವದೇವೋsಸೌ
ಲಿಂಗಂ ಸತ್ವ ಗುಣಾನ್ವಿತಮ್ ।।
ವಿದಾರಯತಿ ಸರ್ವೇಶೋ
ಸ್ವಕಡ್ಗೇನಾಂತರಾತ್ಮವಾನ್ ।
ನೃಸಿಂಹ ರೂಪೀ ಭಗವಾನ್
ಕ್ರೀಡತೇ ಭಗವಾನ್ ಹರಿಃ ।।
ಆನಂದೋದ್ರೇಕ ಕಾರ್ಯಾತ್ವಾ-
ನ್ನಾರಸಿಂಹೋ ಹ್ಯಭೀಷ್ಟದಃ ।
ತಸ್ಮಾದಭೀಷ್ಟ ನಾಮಾಸೌ
ಸರ್ವಸ್ಮಾತ್ ಪ್ರೇರ್ಯ ಈರಿತಃ ।।
" ಶ್ರೀಮದ್ಭಾಗವತಮ್ "......
ಮುಕ್ತಿರ್ಹಿತ್ವಾsನ್ಯಥಾರೂಪಂ
ಸ್ವರೂಪೇಣ ವ್ಯವಸ್ಥಿತಿಃ ।।
BY ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ನೃಸಿಂಹ - 3/1 "
" ಶ್ರೀ ಶಂಖುಕರ್ಣರ ಸೃಷ್ಠಿ "
ನಿತ್ಯ ವಿಯೋಗಿನೀ; ಅಪ್ರಾಕೃತಳೂ; ಶ್ರೀಮನ್ನಾರಾಯಣನ ಸೇವೆಯಲ್ಲಿ ನಿರತಳೂ ಆಗಿದ್ದ ಶ್ರೀಮಹಾಲಕ್ಷ್ಮೀದೇವಿಯ ಸಂಕಲ್ಪದಂತೆ - ಶಂಖುವಿನಂತೆ ನಿರ್ಮಲನಾಗಿದ್ದ ಮುಗ್ಧ ಬಾಲಕನೊಬ್ಬನು ಅವಳ ಕಿವಿಯಿಂದ ಹುಟ್ಟಿದನು.
ಶ್ರೀ ಮಹಾಲಕ್ಷ್ಮೀದೇವಿಯ ಆಜ್ಞೆಯಂತೆ ಭಗವಂತನ ಸೇವೆಗೆ ಹೂವುಗಳನ್ನು ತಂದೊಪ್ಪಿಸುವ ಕಾರ್ಯವನ್ನು ಈ ಬಾಲಕನು ಭಕ್ತಿ ಶ್ರದ್ಧೆಗಳಲಿಂದ ಮಾಡುತ್ತಾ ಪರಮಾತ್ಮನ ಅನುಗ್ರಹಕ್ಕೆ ಪಾತ್ರನಾಗಿದ್ದನು.
ಮುಂದೆ ಶ್ರೀ ಲಕ್ಷ್ಮೀ ನಾರಾಯಣರ ಆಜ್ಞೆಯಂತೆ ಶಂಖುಕರ್ಣ ಸತ್ಯ ಲೋಕಾಧಿಪತಿಗಳಾದ ಶ್ರೀ ಚತುರ್ಮುಖ ಬ್ರಹ್ಮದೇವರ ಸನ್ನಿಧಾನಕ್ಕೆ ಬಂದು ತಮ್ಮ ಸೇವಾ ಕೈಂಕರ್ಯವನ್ನು ಮುಂದುವರೆಸಿದರು.
ಶ್ರೀ ಶಂಖುಕರ್ಣರೇ!
ಶ್ರೀ ಹರಿಯ ಸಂಕಲ್ಪದಂತೆ ಶ್ರೀ ಬ್ರಹ್ಮದೇವರ ಶಾಪ ( ವರ ) ದಿಂದ ದೈತ್ಯ ಸಾಮ್ರಾಟ್ ಹಿರಣ್ಯಕಶಿಪುವಿನ ಮಗನಾಗಿ ಅವತರಿಸಿ ಶ್ರೀ ವಾಯುದೇವರ ನಿತ್ಯಾವೇಶಯುಕ್ತರಾಗಿ - ಶ್ರೀ ಶ್ರೀನಿವಾಸನ ನಿತ್ಯ ಸನ್ನಿಧಾನಯುಕ್ತದಿಂದ " ಪ್ರಹ್ಲಾದ " ನೆಂದು ಖ್ಯಾತಿ ಹೊಂದಿ - ಪರಮ ಅದ್ಭುತವಾದ ಎಂದೂ ಯಾರೂ ಕಂಡೂ ಕಾಣದರಿಯದಂಥಾ ಲೋಕ ಮೋಹಕನಾದ - ಜ್ಞಾನಾನಂದಮಯನಾದ - ಸಕಲ ಶಬ್ದವಾಚ್ಯನಾದ - ಪರಮ ಪುರುಷೋತ್ತಮನಾದ - ದಿವ್ಯ ಭವ್ಯ ಮಂಗಲ ರೂಪನಾದ ಶ್ರೀ ನೃಸಿಂಹದೇವರ ಅವತಾರಕ್ಕೆ ಕಾರಣೀಭೂತರಾಗಿ ಭಾಗವತೋತ್ತಮರೆಂದು ಪ್ರಸಿದ್ಧಿ ಪಡೆದರು.
" ಶ್ರೀ ಪ್ರಹ್ಲಾದರಾಜರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಪ್ರಹ್ಲಾದರಾಜರು
ತಂದೆ : ಹಿರಣ್ಯಕಶಿಪು
ತಾಯಿ : ಕಯಾಧು
ಕಾಲ : ಕೃತಯುಗ
ಸ್ವರೂಪೋದ್ಧಾರಕ ಗುರುಗಳು : ಶ್ರೀ ನಾರದ ಮಹರ್ಷಿಗಳು
ಕಕ್ಷೆ :
ಶ್ರೀ ಪ್ರಹ್ಲಾದರಾಜರು 14ನೇ ಕಕ್ಷೆಗೆ ಸೇರಿದ ಶ್ರೀ ನಾರದ ಮಹರ್ಷಿಯ ಶಿಷ್ಯರಾದ್ದದಿಂದ 15ನೇ ಕಕ್ಷೆಯಲ್ಲಿ ಬರುವ ಅಷ್ಟ ವಸುಗಳಲ್ಲಿ " ಅಗ್ನಿ " - ದಕ್ಷ ಪ್ರಜೇಶ್ವರನ ಪತ್ನಿಯಾದ ಪ್ರಸೂತಿಯು - ಭೃಗು ಮಹರ್ಷಿಯು - ಈ ಮೂರು ಮಂದಿಯೂ ಸಮಾನರು.
ಶ್ರೀ ನಾರದ ಮಹರ್ಷಿಗಳಗಿಂತ ಸ್ವಲ್ಪ ಅಧಮರೂ ಹಾಗೂ ವರ್ಣನಿಗಿಂತ 1/4 ಗುಣ ಅಧಮರು.
ಅನಂತರ ಕರ್ಮಜ ದೇವತೆಗಳು ಮಧ್ಯದಲ್ಲಿ ಪರಿಣಿತರಾದ ಪ್ರಹ್ಲಾದರಾಜರು ಭೃಗುವಿಗಿಂತ ಸ್ವಲ್ಪ ಅಧಮರು!!
" ಹರಿಕಥಾಮೃತಸಾರದ ಅವೆಶಾವತಾರ ಸಂಧಿ " ಯಲ್ಲಿ....
ಜನಪ ಕರ್ಮಜರೊಳಗೆ ನಾರದ ।
ಮುನಿ ಅನುಗ್ರಹ ಬಲದಿ । ಪ್ರಹ್ಲಾ ।
ದನಲ ಭೃಗು ದಕ್ಷ ಪತ್ನಿಗೆ -
ಸಮನೆನಿಸಿಕೊಂಬ ।।
ಮನು ವಿವಸ್ವಾನ್ಗಾಧಿಜೇರ್ವರು ।
ಅನಳಗಿಂದಲಿ ಕಿಂಚಿತಾಧಮ ।
ಎಣೆ ಎನಿಸುವರು ಸಪ್ತ -
ಋಷಿಗಳಿಗೆಲ್ಲ ಕಾಲದಲಿ ।। 22 ।।
ಶ್ರೀ ರಾಘವೇಂದ್ರತೀರ್ಥರು " ಪ್ರಮೇಯ ಸಂಗ್ರಹ " ದಲ್ಲಿ.....
ಕರ್ಮಜ ದೇವತೆಗಳು ಮಧ್ಯದಲ್ಲಿ ಪರಿಣಿತರಾದ ಪ್ರಹ್ಲಾದರಾಜರು ಭೃಗುವಿಗಿಂತ ಸ್ವಲ್ಪ ಅಧಮರು ಮತ್ತು ಸಪ್ತ ಋಷಿಗಳಿಗಿಂತ ಮೇಲಿನ ಕಕ್ಷೆಯಲ್ಲಿ ವಿರಾಜಮಾನರಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ!!
ಅಂದರೆ....
ಶ್ರೀ ಪ್ರಹ್ಲಾದರಾಜರು ಶ್ರೀಮನ್ನಾರಾಯಣನ ಸದ್ವಂಶದಲ್ಲಿ ಅವತರಿಸಿದ ಮಹಾನುಭಾವರು.
ಶ್ರೀ ಪ್ರಹ್ಲಾದರಾಜರೇ ಮುಂದೆ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ ಮತ್ತು ಶ್ರೀ ರಾಘವೇಂದ್ರತೀರ್ಥರಾಗಿ ಅವತರಿಸಿ ಧರೆಗಿಳಿದು ಬಂದ ಕಲ್ಪವೃಕ್ಷ!!
ಶ್ರೀ ಪ್ರಹ್ಲಾದರಾಜರು ತಾಯಿಯ ಗರ್ಭದಲ್ಲಿರುವಾಗ ಅವರನ್ನು ಸಂಹಾರ ಮಾಡಲು ಇಂದ್ರದೇವರು ಬಂದಾಗ - ಶ್ರೀ ನಾರದರಿಂದ ಸಂರಕ್ಷಿತರಾಗಿ ಶ್ರೀ ನಾರದರಿಂದಲೇ ಉಪದೇಶ ಪಡೆದ ಭಾಗವತರು!!
ತಮ್ಮಂದಿದು :
ಶ್ರೀ ಸಹ್ಲಾದರಾಜರು, ಶ್ರೀ ಕಲ್ಹಾದರಾಜರು ಮತ್ತು ಶ್ರೀ ಅಹ್ಲಾದರಾಜರು ಈ ವಿಷಯವನ್ನು ಶ್ರೀ ಗುರು ಜಗನ್ನಾಥದಾಸರು...
ಪ್ರಹ್ಲಾದ ಮುಖ್ಯಪ್ರಾಣಾವೇಶದಿಂದ ಸೋದರ ಜೀವಾಂಶ ಅಪಾನವಿಷ್ಠ । ಸಹ್ಲಾದ ನಾಮಕ ಮಿತ್ರಾಹ್ವಯ ಸೂರ್ಯನಾದ । ಕಲ್ಹಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನ । ಯುಗ । ನುಹ್ಲಾದ ನಾಮಕ ಸಂಭೂತನಾದ ಆದಿ ಗಣಪ ಸಮಾನಾವೇಶದಿಂದ । ಅಹ್ಲಾದನಾದ ಆದರಿವರು ದೈತ್ಯ ಪುತ್ರರೆನಿಸಿ ಮೇದಿನೀ ಸುರರ ಉದ್ಧರಿಸಲೊಸುಗ... ।।
" ಶ್ರೀ ವಾಯುದೇವರ ನಿತ್ಯಾವೇಶಯುಕ್ತರು "
ವಾಯುನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮ ಕೋನುಃ
ವಿಷ್ಣುಭಕ್ತೌ ಜಗತ್ತ್ರಯೇ ।।
ಕೃಷ್ಣ ಗ್ರಹ ಗ್ರಹೀತಾತ್ಮಾ.....
ಪ್ರಹ್ಲಾದೋ ನಿತ್ಯ ಭಕ್ತಿಮಾನ್ -
ಯೆಂಬ ಶ್ರೀಮದಾಚಾರ್ಯರ ನಿರ್ಣಯೋಕ್ತಿಗಳಿಂದಲೂ...
ಬ್ರಹ್ಮಣ್ಯಃ ಶೀಲ ಸಂಪನ್ನಃ
ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತ ಕಾಮೋರಹಿತಾ-
ಸುರೋsಸುರಃ ।।
ಮಹದರ್ಭಕಃ ಮಹದುಪಾಸಕಃ
ನಿರ್ವೈರಾಯ ಪ್ರಿಯಸುಹೃತ್ತಮಃ ।
ಮಾನಸ್ತಂಭವಿವರ್ಜಿತಃ
ಯಥಾ ಭಗವತೀಶ್ವರೇ ।।
ಇತ್ಯಾದಿ ಶ್ರೀಮದ್ಭಾಗವತ ಗ್ರಂಥಸ್ಥ ಶ್ರೀಮದ್ವೇದವ್ಯಾಸರ ವಿಶೇಷಣಗಳಿಂದ ಭೂಷಿತರಾದ ಶ್ರೀ ಪ್ರಹ್ಲಾದರಾಜರು ಭಾಗವತೋತ್ತಮರು!
ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ -
ಎಂದರೆ.....
" ವಾಯೂನಾ ಚ ಸಮಾವಿಷ್ಟತ್ವಾತ್
ಪ್ರಹ್ಲಾದೋ ನಿತ್ಯ ಭಕ್ತಿಮಾನ್ " -
" ನಿತ್ಯ "
ಪದಕ್ಕೆ ಅರ್ಥವೇನೆಂದರೆ...
ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ ಹಾಗೂ ಶ್ರೀ ರಾಘವೇಂದ್ರರು. ಇವರಲ್ಲೂ ಸಹ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ
" ಶ್ರೀ ನೃಸಿಂಹದೇವರ ಪ್ರಾದುರ್ಭಾವ "
ಸತ್ಯಂ ವಿಧಾತುಂ
ನಿಜ ಭೃತ್ಯ ಭಾಷಿತಂ
ವ್ಯಾಪ್ತಿಂ ಚ ಭೂತೇಷ್ವ-
ಖಿಲೇಷು ಚಾತ್ಮನಃ ।
ಅದೃಶ್ಯತಾದ್ಭುತ -
ರೂಪಮುದ್ವಹಂ
ಸ್ತಂಭೇ ಸಭಾಯ ನ -
ಮೃಗಂ ನ ಮಾನುಷಮ್ ।।
ಆ ಸ್ತಂಭದಿಂದ ಅತ್ಯದ್ಭುತವಾದ - ಲೋಕ ವಿಲಕ್ಷಣವಾದ - ಯಾರೂ ಎಂದೂ ಕಂಡೂ ಕಾಣದರಿಯದಂಥ - ಲೋಕ ಮೋಹಕನಾದ ಪ್ರಳಯ ಸಮಯ ಪರ್ಜನ್ಯ ಗರ್ಜಾಭೀಲವಾದ - ಭೀಷಣ ಘೋಷಣವು ಹೊರಹೊಮ್ಮಿ ಬ್ರಹ್ಮಾಂಡ ಕಟಾಹವೇ ಒಡೆದು ಚೂರಾಯಿತೋ ಎನ್ನುವಂತೆಯಾಗಲು ಬ್ರಹ್ಲಾದಿಗಳೆಲ್ಲರೂ ಪ್ರಳಯ ಕಾಲವೇ ಸಮೀಪಿಸಿತೆಂದು ದಿಗ್ಭ್ರಾಂತರಾದರು!!
ಅದನ್ನು ಕೇಳಿ ಪುತ್ರ ವಧಾತುರನಾಗಿ ಹೋಗುತ್ತಿರುವ ದೈತ್ಯರಾಜನು ಭಯ ಚಲಿತನಾಗಿ ಸಭೆಯಲ್ಲೆಲ್ಲಾ ಕಾಣ್ಣಾಯಿಸಿ ಏನೂ ಕಾಣದೇ ನಿಂತು ಬಿಟ್ಟನು.
ಅವನ ಪರಿವಾರದ ದನುಜ ನಾಯಕರು ಎದೆ ಒಡೆದು ಓಡ ತೊಡಗಿದರು.
ಆಗ.......
ಶ್ರೀ ನೃಸಿಂಹನು ತನ್ನ ಭೃತ್ಯನಾದ ಪ್ರಹ್ಲಾದನ ಸತ್ಯ ವಚನವನ್ನು ನಡೆಸಿ ಕೊಡಲು ಆ ಸ್ತಂಭದಿಂದ ಮೃಗವಲ್ಲದ - ನರನಲ್ಲದ ಹಾಗೂ ಮೃಗವೂ ಆದ - ನರನೂ ಆದ ಅತ್ಯದ್ಭುತ ರೂಪದಿಂದ ಪ್ರಾದುರ್ಭಾವವಾದನು.
ನನ್ನನು ( ಶ್ರೀ ಹರಿಯನ್ನು ) ಅನನ್ಯಭಾವದಿ ಭಜಿಸುವ ಭಕ್ತರ ಯೋಗ ಕ್ಷೇಮವನ್ನು ನಾನು ವಹಿಸುವೆನು ಹಾಗೂ ನನ್ನ ಭಕ್ತನು ಎಂದಿಗೂ ನಾಶ ಹೊಂದುವುದಿಲ್ಲ ಎಂಬ ಮಾತನ್ನೂ; ಬ್ರಹ್ಮನು ಸೃಜಿಸಿದ ಜೀವರಿಂದ ಸಾವು ಬೇಡವೆಂದ ಹಿರಣ್ಯಕನ ಮಾತನ್ನೂ - ಮೂರು ಜನ್ಮಗಳಲ್ಲಿ ದೈತ್ಯರಾಗಿ ಶ್ರೀ ಹರಿಯಿಂದ ಸಂಹೃತರಾಗಿ ತಿರುಗಿ ಬನ್ನಿ ಎಂದು ನುಡಿದ ಸನಕಾದಿ ವಚನವನ್ನೂ - ಶ್ರೀ ಹರಿಯದ್ದು ಶುಕ್ಲ ರಕ್ತ ಪ್ರಭಾವ ಪಾಕೃತ ದೇಹವಲ್ಲ!
ಅವನು ಆನಂದಮಯನೂ ಎಂಬ ಭಕ್ತರ ಮಾತನ್ನು ಸತ್ಯವಾಗಿಸಲು ಸ್ತಂಭದಿಂದಾವಿರ್ಭವಿಸಿದನು!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ನೃಸಿಂಹ - 4 "
" ಶ್ರೀ ನೃಸಿಂಹದೇವರ ದಿವ್ಯ ಮಂಗಳಕರವಾದ ರೂಪದ ವರ್ಣನೆ "
ಶ್ರೀ ಹರಿಯ ನೇತ್ರತ್ರಯವು ಕಾದ ಬಂಗಾರದಂತೆ ಪಿಂಗಳ ವರ್ಣದಿಂದ ಹೊಳೆಯುತ್ತಿತ್ತು.
ಜಟಾಕೇಸರಜಾಲದಿಂದಾವೃತವಾಗಿ ಮುಖವು ಭಯಂಕರವಾಗಿತ್ತು!
ಕೋರೆಗಳನ್ನು ಮಸೆದು - ಕರವಾಲ ಚಂಚಲವಾದ ನಾಲಿಗೆಯಿಂದ ತುಟಿಯನ್ನು ಸವರಿ ಸವರಿ ಹುಬ್ಬನ್ನು ಗಂಟಿಕ್ಕಿ - ಕಿವಿಗಳೆಬ್ಬಿಸಿ - ಗುಹೆಯಂತೆ ಗಂಭೀರವಾದ ಬಾಯಿಯನ್ನು ತೆರೆದು ವಿದೀರ್ಣ ಕಪೋಲ ವಿಶಾಲವಾದ ನೃಸಿಂಹನು ದಿಕ್ಕು ದಿಕ್ಕುಗಳಲ್ಲಿ ವ್ಯಾಪಿಸಿ ನಿಂತನು!
ಉನ್ನತ ವಿಸ್ತಾರವಾದ ವಕ್ಷಸ್ಥಳವನ್ನಾಕ್ರಮಿಸಿ ಚಂದ್ರಾರುಣ ಕೇಸರಗಳು ಹಾರಾಡುತ್ತಿದ್ದವು!
ಶರೀರ ರೋಮಗಳು ಸಟೆದು ನಿಂತಿದ್ದವು!
ಸಹಸ್ರ ಬಾಹುವಾದ ಸ್ವಾಮಿಯ ಕೈಗಳೆರಡೂ ನಖಮಾತ್ರಾಯುಧಗಳಾಗಿ - ಮಿಗಿಲಾದ ಕೈಗಳಲ್ಲಿ ವಿವಿಧಾಯುಧಗಳು ವಿರಾಜಿಸುತ್ತಿದ್ದವು!
ಆ ಚಕ್ರಾದಿ ಹರಿ ಪ್ರಹರಣ ದರ್ಶನ ಮಾತ್ರದಿಂದ ದೈತ್ಯರೆಲ್ಲರೂ ದಿಕ್ಕುತೋಚದೇ ಓಡಿ ಹೋದರು.
ದುರ್ಧಷನು - ದುರಾಸದನಾದ ಶ್ರೀ ನೃಹರಿಯನ್ನು ಹಿರಣ್ಯಕನು ನೋಡಿ ಓಹೋ!
ಪುತ್ರ ವಧೆಯನ್ನು ಮಾಡಲು ಪೋಗುವ ನನಗೆ ನಿಸರ್ಗ ಶತ್ರುವಾದ ಹರಿಯು ಪುತ್ರ ಪಕ್ಷಪಾತಿಯಾಗಿ ಈ ರೂಪದಲ್ಲಿ ಬಂದಿರುವಂತೆ ತೋರುತ್ತದೆ.
ಇವನಿಂದ ಸಾಯುವನೋ ಏನೋ ಎಂದಾಲೋಚಿಸಿ ಸುಮ್ಮನಿರದೆ ಗದೆಯನ್ನು ಪಿಡಿದು ಸಿಂಹವನ್ನು ಕೆರಳಿಸುವ ಆನೆಯಂತೆ ನೃಸಿಂಹನನ್ನೆದುರಿಸಿದನು!
ಶ್ರೀ ನೃಸಿಂಹ ಮಹಾಗ್ನಿ ಜ್ವಾಲೆಗಳಲ್ಲಿ ಹಾರಿ ಬೀಳುವ ಪತಂಗದಂತೆ ಹಿರಣ್ಯಕನು ನಷ್ಟನಾದನೆಂದರೆ ಆಶ್ಚರ್ಯವೇನಿದೆ.
ಬಲ ಜ್ಞಾನಾನಂದಮೂರ್ತಿಯಾದ ಶ್ರೀ ನೃಸಿಂಹನು ಪ್ರಳಯ ಕಾಲೀನವಾದ ತಮಸ್ಸನ್ನೇ ನುಂಗಿದ ಮಹಾ ಪರಾಕ್ರಮಿ ಅಲ್ಲವೇ?
ಶ್ರೀ ಹರಿಯ ಅವತಾರಗಳ ಬಗ್ಗೆ ಒಂದು ಮಾತನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು.
ದಶಾವತಾರಗಳ ಮೊದಲ ಐದು ಅವತಾರಗಳು ವಿಶೇಷತಃ ಸಂಬಂಧ ಪಟ್ಟವರಿಗಷ್ಟೇ ಕಂಡ ದಿವ್ಯ ದರ್ಶನಗಳು.
ಕೊನೆಯ ಐದು ಅವತಾರಗಳು ಈ ಭೂಮಿಯಲ್ಲಿ ಕಾಣಿಸಿಕೊಂಡ ಅವತಾರಗಳು!!
ಆಗ ಶ್ರೀ ನೃಸಿಂಹನು ಬ್ರಹ್ಮ ವರವನ್ನು ನೆನೆದು ಸಾಯಂಕಾಲ ಆಗುವುದನ್ನು ಕಾಡು ಕೊಂಡು ಮನೆಯ ದ್ವಾರ ದೇಶದ ಹೊಸ್ತಿಳನಲ್ಲಿ ಕೂತು - ತೊಡೆಯ ಮೇಲಿಟ್ಟು ಗರುಡನು ಮಹಾ ಸರ್ಪವನ್ನು ಸೀಳುವಂತೆ ಲೀಲಾಜಾಲವಾಗಿ ಹಿರಣ್ಯಕನ ಉದರ ಬಗೆದು ಕೊಂದನು.
ಶ್ರೀ ವಿಜಯರಾಯರು....
ವೈರಿಯ ಪಿಡಿದು ಊರುಗಳಲಿಟ್ಟು । ಝೋರ ನಖದಿಂದ ಚೀರುತಾ ಹಾರುತ್ತಾ । ದಾರುಣ ಕರುಳ ಹಾರ ಕೊರಳಲ್ಲಿ । ಚರುವಾಗಿರಲು ಮಾ ರಮಣ । ಸಾರಿದ ಭಕ್ತಗೆ ಕಾರುಣ್ಯ ಮಾಡಿದಾ । ತಾರೇಶ ನಂದದಿ ತೋರುತಿರೆ । ಸುರವಾಯ ನೆರೆದು ಅಪಾರ ತುತಿಸಿ । ಪೂ । ಧಾರೆ ಹರುಷ ವಿಸ್ತಾರೆರಿಯೆ ।।
ಶ್ರೀ ಗೋಪಾಲದಾಸರು....
ಬಿರಿಬಿರಿನೆ ಕಣ್ಣು ಬಿಡುವುತ್ತ ಹುಂಕರಿಸಿ ಪಲ್ಕರಿ । ಕಿರಿದು ಜಿಹ್ವೆ ಚಾಚುತ್ತ ರೋಷದಲಿ ಬಹು । ತರಣಿ ಅಸ್ತಂಗತ ಸಮಯವನ್ನು ನೋಡಿ ಆ । ದುರುಳನಾ ಸಂಹರಿಸಲಿ । ಮರಳಿ ಮರಳಿ ಮತ್ತೆ ಪಿಡಿದವನ ಬಡಿವುತ್ತ । ಸರಸ ಲೀಲೆಯೋ ಯಂಬ ತೆರನಂತೆ । ತೋರಿ ಮುಂದರಿಸಿ ತೊಡೆಯ ಮೇಲೆ ಇರಿಸಿ । ಆ ಖಳನ ಸಂಹರಿಸಿದನು ಕ್ಷಣದಲಿ ।।
ತುಟಿಯನ್ನು ಚಾಚಿದ ನಾಲಿಗೆಯಿಂದ ನೆಕ್ಕುತ್ತಾ - ಕಣ್ಣುಗಳಿಂದ ಕಿಡಿಗಳನ್ನು ಕಾರುತ್ತಾ ಭಯಂಕರನಾದ ಶ್ರೀ ನೃಸಿಂಹದೇವನು ರಕ್ತಸಿಕ್ತವಾದ ವದನದಿಂದಲೂ - ಕರುಳ ಮಾಲೆಗಳಿಂದಲೂ ಆನೆಯನ್ನು ಕೊಂದ ಸಿಂಹದಂತೆ ಪ್ರಕಾಶಿಸಿದನು.
ನಖದಿಂದ ಹಿರಣ್ಯಕನ ಎದೆಯನ್ನು ಬಗೆದು ಸೂಸಿಬಂದ ರಕ್ತ ಪ್ರವಾಹದಲ್ಲಿ ಬಿಳಿಯ ಕೇಸರಗಳು ಕೆಂಪಾಗಲು - ಬಿಡದೇ ಹೊಟ್ಟೆಯನ್ನು ಸೀಳಿ ಕರಳ ಮಾಲೆಯನ್ನೆತ್ತಿ ಕೊರಳಿಗೆ ಹಾಕಿಕೊಂಡು ದನುಜನ ದೇಹವನ್ನು ಕೆಳಗೆ ಕೆಡಹಿದನು.
ತನ್ನ ವಿವಿಧಾಯುಧಗಳಿಂದ ಉದ್ಧೃತರಾಗಿ ಬಂದ ದಿತಿಜ ಸೇನಾಧಿಪತಿಗಳನ್ನು ಬಡೆದು ಸಿಂಹಾಸನವನ್ನಲಂಕರಿಸಿ ಘುಡಿ ಘುಡಿಸುತ್ತಾ ಕೂತನು.
ಅವನ ಜಟಾ ಕೇಸರಿಗಳಿಗೆ ತಗುಲಿ ಮೇಘಗಳು - ನಕ್ಷತ್ರಗಳು ಉದುರಿ ಚೆಲ್ಲಾಪಿಲ್ಲಿಯಾದವು.
ಅವನ ಘರ್ಜನೆಯಿಂದ ದಿಗ್ಗಜಗಳು ಭೀತಿಗೊಂಡು ಭೂಭಾರವಹನ ಕರ್ಮವನ್ನು ಬಿಟ್ಟು ಹೋದವು.
ಅವನ ಪಾದದಡಿಯಲ್ಲಿದ್ದ ಭೂತಲವು ಕಂಪಿಸಿತು.
ಅವನು ನಡೆದ ವೇಗದಿಂದ ಬೆಟ್ಟಗಳು ಉದುರಿ ಚೂರಾದವು.
ಅವನ ತೇಜದಿಂದ ಮಿಕ್ಕೆಲ್ಲಾ ತೇಜಗಳು ಬಿಳುಚು ಹರಿದವು!
ಕೆಡಿಸದೆ ತಾನಿತ್ತವರ ಸತ್ಯವೆಂದೆನಿಸಿ । ವಡಲ ಸೀಳುವನ ತನ್ನ ನಖ ಶಸ್ತ್ರಗಳಿಂದ । ಜಡಿದು ಕರಳುಗಳನ್ನು ತೆಗೆದು ಕೊರಳೊಳು ಧರಿಸಿ । ಕುಡಿದಂತೆ ರಕ್ತವನೆಲ್ಲಾವ । ಸಡಗರದಿ ಮೊಗವೆಲ್ಲಾ ಪೂಸಿಕೊಂಡು ಜನಕೆ । ಕಡೆ ಮೊದಲಿಲ್ಲದಂತೆ ಆರ್ಭಟ ತೋರೆ । ಹಿಡಿಯಲೊಬ್ಬರಿಗೆ ಅರಸ ಆಶಕ್ಯಾಗೆ । ಮೃಡ ಮುಖೈಸುರರು ಯಲ್ಲಾ ।।
ಈ ಉಗ್ರ ರೂಪವನ್ನು ಕಂಡು ಬ್ರಹ್ಮಾದಿ ದೇವತೆಗಳೆಲ್ಲರೂ ಸ್ತೋತ್ರ ಮಾಡಿದರು.
ಬ್ರಹ್ಮಾದಿಗಳು ಸ್ತೋತ್ರ ಮಾಡಿದಾಗ್ಯೂ ಶ್ರೀ ನೃಸಿಂಹನ ಕೋಪ ಶಾಂತವಾಗಲಿಲ್ಲ.
ಆಗ ಶ್ರೀ ಬ್ರಹ್ಮದೇವರು ಶ್ರೀ ಮಹಾಲಕ್ಷ್ಮೀದೇವಿಯರಲ್ಲಿ ಶ್ರೀ ನೃಸಿಂಹನನ್ನು ಶಾಂತಗೊಳಿಸಲು ಪ್ರಾರ್ಥಿಸಿದರು.
ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀದೇವಿಯರೂ ಕೂಡಾ ಶ್ರೀ ನೃಸಿಂಹ ರೂಪವನ್ನು ಕಂಡು ಪರಮವತ್ಸಲನಾದ ಪರಮಾತ್ಮನ ಮನವನ್ನರಿತವಳಾದುದರಿಂದ ದೂರ ಸರಿದು ನಿಂತಳು.
ಆಗ ಶ್ರೀ ಬ್ರಹ್ಮದೇವರು...
ಶ್ರೀ ಹರಿಯ ಸಂಕಲ್ಪಾನುಸಾರ ಬಾಲಕನೂ - ವಿನಯಾದಿ ಗುಣ ಸಂಪನ್ನನ್ನೂ ಆದ ಪ್ರಹ್ಲಾದನನ್ನು ಕರೆದು....
ಕರುಣಾಮಯನಾದ ಶ್ರೀ ನೃಸಿಂಹನನ್ನು ಶಾಂತ ಮಾಡೆಂದು ಹೇಳಿ ಕಳುಹಿಸಿದನು.
ತನ್ನ ತಂದೆಯಲ್ಲಿ ಕುಪಿತನಾದ - ಲೋಕ ವಂದ್ಯನಾದ ಶ್ರೀ ಬ್ರಹ್ಮದೇವರ ಆಜ್ಞಾ ಭಾರವನ್ನು ಪೊತ್ತು ಬಾಗಿದ ಶಿರದಿಂದ ವಂದಿಸಿ ಕೈ ಜೋಡಿಸಿ ಶ್ರೀ ನೃಸಿಂಹ ಸ್ತುತಿಯನ್ನು ಮಾಡಿದನು.
ಶ್ರೀ ವಿಜಯರಾಯರು...
ನೃಕೇಸರಿಯಾಗಿ ಭಕ್ತಗೆ ಬಂದ । ದುರಿತವ ಕಳೆದು ಸುಖವನೀವಾ । ಅಕಳಂಕ ಮಹಿಮ ಲಕುಮಿಪತಿ । ತಾರಕ ಮಂತ್ರಾಧೀಶ । ಸಕಲ ಲೋಕ ಪಾಲಕ ಪ್ರಲ್ಹಾದಂಗೆ । ಸಖನಾಗಿಯಿಪ್ಪ ಸಕಲ ಕಾಲದಿ । ಶಕಟ ಭಂಜನ ವಿಜಯವಿಠ್ಠಲ । ಮುಕುತಿ ಯೀವ ಭಕುತರಿಗೆ ।।
ಶ್ರೀ ಗೋಪಾಲದಾಸರು...
ಪರಿಪರಿಯಿಂದ ಸಿರಿದೇವಿಗೆ ಮೊರೆಯಿಡಲು । ವರ ನುಡಿದಳದಕೆ ಹೇ ಪರಿವಾರವೇ ಕೇಳಿ । ಕರುಣಾಕರನು ಆತ ಆರಗೋಸುಗ ಹೀಗೆ । ಅವ । ತರಿಸಿ ಯಿಪ್ಪಾ ನೋಡಿ । ಹರುಷದಿಂದಲಿ ಆ ತರಳನ ಕರದೊಯ್ದು । ಯೆರಗಿಸಿ ಸಾಷ್ಟಾಂಗ ನಮೋ ನಮೋ ಎಂದೆನಲು । ಕರುವಿಗೆ ಆವು ಮೆಚ್ಚಿಕೆ ಪಟ್ಟುವಂತೆ ನ್ಯಾವರಿಸಿದ ಪ್ರಹ್ಲಾದನಾ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ನೃಸಿಂಹ - 5 "
ಶ್ರೀ ನಾರದ ಮಹರ್ಷಿಗಳು..
ಸ್ವಪಾದಮೂಲೇ ಪತಿತಂ ತಮರ್ಭಕಂ
ವಿಲೋಕ್ಯದೇವಃ ಕೃಪಯಾ ಪರಿಪ್ಲುತಃ ।
ಉತ್ಥಾಪ್ಯ ತಚ್ಛೇರ್ಷ್ಣ್ಯದಧಾತ್ಕರಾಂಬುಜಂ
ಕಾಲಾಹಿನಿರ್ಧಿಷ್ಟಧಿಯಾಂ ಕೃತಾಭಯಮ್ ।।
ಶ್ರೀ ಪ್ರಹ್ಲಾದರಾಜರು...
ಬ್ರಹ್ಮಾದಯಃ ಸುರಗಣಾ ಮುನಯೋsಥ ಸಿದ್ಧಾಃ
ಸತ್ವೈಕತಾನ ಮತಯೋ ವಚಸಾಂ ಪ್ರವಾಹೈಃ ।
ನಾಂತಂ ಪರಸ್ಯ ಪರತೋsಪ್ಯಧುನಾಪಿ ಯಾಂತಿ
ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ ।।
ಮನ್ಯೇ ಧನಾಭಿಜನರೂಪಂ ತಪಃ ಶ್ರುತೌಜ
ಸ್ತೇಜಃ ಪ್ರಭಾವ ಬಲ ಪೌರುಷ ಬುದ್ಧಿ ಯೋಗಾಃ ।
ನಾರಾಧನಾಯ ಹಿ ಭವಂತಿ ಪರಸ್ಯ ಪುಂಸೋ
ಭಕ್ತ್ಯಾ ತುತೋಷ ಭಗವಾನ್ ನನು ಯೂಥಪಾಯ ।।
ಪಾದ ಮೂಲದಿ ಬಾಗಿನಿಂತ ಪ್ರಹ್ಲಾದನನ್ನು ಕರುಣಾ ರಸವು ಉಕ್ಕಿ ಬರುವ ಕಣ್ಣಿನ ಕುಡಿ ನೋಟದಿಂದ ಅನುಗ್ರಹಿಸಿ ಶ್ರೀ ನೃಸಿಂಹದೇವರು....
ಅವನನ್ನು ಮೇಲಕ್ಕೆತ್ತಿ ತಲೆಯ ಮೇಲೆ ತನ್ನ ಅಮೃತಮಾಯವಾದ ಹಸ್ತವನ್ನಿಟ್ಟು ಅನುಗ್ರಹಿಸಿದನು.
ಸ ತತ್ಕರ ಸ್ಪರ್ಶಧುತಾಖಿಲಾಶುಭಃ
ಸಪದ್ಯಭಿವ್ಯಕ್ತಪರಾತ್ಮ ದರ್ಶನಃ ।
ತತ್ಪಾದಪದ್ಮಂ ಹೃದಿ ನಿರ್ವೃತೋ ದಧೌ
ಹೃಷ್ಯತ್ತನುಃ ಕ್ಲಿನ್ನ ಹೃದಶ್ರುಲೋಚನಃ ।
ಅಸ್ತೌಷೀದ್ಧರಿಮೇಕಾಗ್ರ ಮನಸಾ ಸುಸಮಾಹಿತಃ
ಪ್ರೇಮ ಗದ್ಗದಯಾ ವಾಚಾ ತನ್ನ್ಯಸ್ತ ಹೃದಯೇಕ್ಷಣಃ ।।
ಎಂದು ಕಣ್ಣಲ್ಲಿ ಆನಂದ ಭಾಷ್ಪ ಸುರಿಯುತ್ತಿದೆ.
ಆ ಅಚಿಂತ್ಯಾದ್ಭುತ ಶ್ರೀ ನೃಸಿಂಹ ರೂಪವನ್ನು ಕಂಡು ಮಾತು ಬಾರದೇ ಕಂಠ ಗದ್ಗದವಾಗಿದೆ.
ಪ್ರಹ್ಲಾದನು ಮುಂದೆ ಬಂದು ಶ್ರೀ ನೃಸಿಂಹನನ್ನು ತನ್ನ ತೊದಲು ನುಡಿಯಿಂದ ಪ್ರಾರ್ಥಿಸಿಕೊಂಡ!!
ಶ್ರೀ ಜಗನ್ನಾಥದಾಸರು.....
ಬಿಗಿದ ಕಂಠದಿಂ ದೃಗ್ಬಾಷ್ಪಗಳಿಂ ।
ನಗೆಮೊಗದಿಂ ರೋಮಗಳುಗಿದು ।
ಮಿಗೆ ಸಂತೋಷದಿ ನೆಗೆದಾಡುತ ನಾ ।।
ಲ್ಮೊಗನಯ್ಯನ ಪದಪೊಗಳಿ ಹಿಗ್ಗುವುದೇ ।
ಫಲವಿದು ಬಾಳ್ದುದಕೆ ।।
ನನಗೇನು ಹೆದರಿಕೆ ಆಗಲಿಲ್ಲ.
ನನಗೆ ಹೆಮ್ಮೆ ಎನಿಸುತ್ತದೆ.
ನನ್ನಂಥ ಅಲ್ಪಜ್ಞ -ಪುಟ್ಟ ಹುಡುಗನೆಲ್ಲಿ? ನೀನೆಲ್ಲಿ?
ನನ್ನನು ಪರೀಕ್ಷೆ ಒಡ್ಡಿದಾಗ ನೀನು ಕಾಣಿಸಿಕೊಂಡೆಯಲ್ಲ ?
ಈ ಪುಟ್ಟ ಬಾಲಕನಿಗೆ ಒಲಿದು ಬಂದೆಯಲ್ಲ?
ಇದೇನು ಸಣ್ಣ ಸಂಗತಿಯೇನು.
ಇದು ನನ್ನ ದೊಡ್ಡ ಭಾಗ್ಯ?
ಯೆಂದು ಸ್ತೋತ್ರ ಮಾಡಿದರು.
ವಿಪ್ರಾದ್ವಿಷದ್ಗುಣಯುತಾದರವಿಂದನಾಭ
ಪಾದಾರವಿಂದ ವಿಮುಖಾತ್ ಶ್ವಪಚಂ ವರಿಷ್ಠಮ್ ।
ಮನ್ಯೇ ತದರ್ಪಿತ ಮನೋ ವಚನಾತ್ಮ ಗೇಹ
ಪ್ರಾಣಃ ಪುನಾತಿ ಸಕಲಂ ನ ತು ಭೂರಿಮಾನಃ ।।
ಪ್ರಹ್ಲಾದ ನುಡಿದ ಮಾತು ಬಹಳ ಮಹತ್ವದ್ದು.
ಒಬ್ಬ ಬ್ರಾಹ್ಮಣನಿರಬಹುದು.
ದೊಡ್ಡ ವಿದ್ವಾಂಸನಿರಬಹುದು.
ತುಂಬಾ ಆಚಾರವಂತನಿರಬಹುದು.
ಆದರೆ ದೇವರಲ್ಲಿ ಭಕ್ತಿಯಿಲ್ಲ!
ಆತ ದೇವರ ಬಗ್ಗೆ ಮಾತನಾಡುವುದು ಉಳಿದವರನ್ನು ಮೋಸಗೊಳಿಸಲಿಕ್ಕೆ ಮತ್ತು ಶುಷ್ಕ ಪಾಂಡಿತ್ಯ ಪ್ರದರ್ಶನಕ್ಕೆ!!
ಇನ್ನೊಬ್ಬ ಹೊಲೆಯನಿರಬಹುದು.
ಯಾವ ವಿದ್ಯೆಯೂ ಇಲ್ಲ.
ನಾಯಿಯ ಮಾಂಸ ತಿನ್ನುವ ಹೀನ ಬಾಳು.
ಸಮಾಜದಿಂದ ಬಹೀಷ್ಕೃತವಾದ ಬದುಕು.
ಆದರೆ ಆತ ಭಗವಂತನ ಭಕ್ತನಾಗಿದ್ದರೇ ಬರಿಯ ಶಾಸ್ತ್ರ ಪಂಡಿತನಾದ ಬ್ರಾಹ್ಮಣನಗಿಂತ ಆತನೇ ಮೇಲು.
ಆತ ತನ್ನ ಬದುಕನ್ನೇ ಭಗವಂತನಿಗೆ ಅರ್ಪಿಸಿದ್ದಾನೆ.
ಮನಸ್ಸು ಭಗವಂತನನ್ನೇ ನೆನೆಯುತ್ತಿದೆ.
ಪವಿತ್ರವಾದ ಭಗವಂತನನ್ನು ಹೃದಯದಲ್ಲಿ ಹೊತ್ತ ಚಂಡಾಲನಾದರೂ ಆತ ಪವಿತ್ರ.
ನಾನು ಬ್ರಾಹ್ಮಣ - ದೊಡ್ದ ವಿದ್ವಾಂಸ ಎಂಬ ಹುಮ್ಮು ಯಾರಿಗಿದೆಯೋ ಆ ಅಹಂಕಾರವೇ ಮೈಲಿಗೆ ಮತ್ತು ಹೊಲೆತನ.
ಏನೂ ಅರಿಯದೆ ಹಸುಳೆ ನಾನು.
ನನ್ನ ಕರೆಗೂ ಭಗವಂತ ಒಲಿದು ಬಂದ ಎಂದಾಗ ಪ್ರಹ್ಲಾದರಾಜರ ಬಾಯಿಯಿಂದ ಬಂದ ಮಾತುಗಳಿವು.
ಮೇಲು - ಕೀಳು ವ್ಯವಸ್ಥೆಗೆ ಸಮಾಜದ ಮಾನದಂಡ ಬೇರೆ. ಭಗವಂತನ ಮಾನದಂಡ ಬೇರೆ.
ನಾವು ಹೊರಗಿನ ಥಳಕಿಗೆ - ಪ್ರದರ್ಶನಕ್ಕೆ ಬೆಲೆ ಕೊಟ್ಟರೆ - ಭಗವಂತ ಒಳಗಿನ ಮೌಲ್ಯಗಳಿಗೆ ಮಾತ್ರ ಬೆಲೆ ಕೊಡುತ್ತಾನೆ.
ಇಂತೂ ಜಯ ವಿಜಯರು ಶಾಪದಿಂದ ಹಿರಣ್ಯಾಕ್ಷ - ಹಿರಣ್ಯಕಶಿಪುವುರಾಗಿ ದಿತಿ ಪುತ್ರರಾದರು.
ಹೃದಯದಲ್ಲಿ ಸ್ವಾಮಿಯ ವೈರವೇ ಅವರ ಮರಣಕ್ಕೆ ಕಾರಣವಾಯಿತು.
ಇವರನ್ನು ಶ್ರೀ ಹರಿಯು ಶ್ರೀ ವರಾಹ ಮತ್ತು ಶ್ರೀ ನೃಸಿಂಹ ರೂಪದಿಂದ ಸಂಹರಿಸಿದನು!!
" ಶ್ರೀ ನೃಸಿಂಹ ದೇವರ ಆದೇಶ "
" ಶ್ರೀಮದ್ಭಾಗವತ "...
ಭವಂತಿ ಪುರುಷಾ ಲೇಕೇ
ಮದ್ಭಕ್ತಾಸ್ತಾಮನುವ್ರತಾಃ ।
ಭವಾನ್ಮೇ ಖಲು ಭಕ್ತಾನಾಂ
ಸರ್ವೇಷಾಂ ಪ್ರತಿರೂಪಧ್ರುಕ್ ।।
ಹೇ ಪ್ರಹ್ಲಾದಾ! ಲೋಕದಲ್ಲಿ ಯಾರು ನನ್ನ ಭಕ್ತರೋ - ಅವರೆಲ್ಲರೂ ನಿನ್ನನ್ನು ಅನುಸರಿಸಬೇಕು.
ಎಲ್ಲರಿಗೂ ನೀನು ಆದರ್ಶಪ್ರಾಯನಾಗಿರುವಿ!!
" ಸ್ಕಾಂದ ಪುರಾಣದ ವಚನ " ದಂತೆ...
ಋತೇ ತು ತಾತ್ವಿಕಾನ್ ದೇವಾನ್
ನಾರದಾದೀಂ ಸ್ತಥೈವ ಚ ।
ಪ್ರಹ್ಲಾದಾದುತ್ತಮಃ ಕೋನು
ವಿಷ್ಣುಭಕ್ತೌ ಜಗತ್ತ್ರಯೇ ।।
ಬ್ರಹ್ಮಾದಿ ತಾತ್ವಿಕ ದೇವತೆಗಳಿಗಿಂತಲೂ - ನಾರದಾದಿ ಮುನಿಗಳಿಗಿಂತಲೂ ಬೇರೇ ವಿಷ್ಣು ಭಕ್ತಿಯಲ್ಲಿ ಪ್ರಹ್ಲಾದನನ್ನು ಮೀರಿಸಿದವರು ಮೂರು ಲೋಕದಲ್ಲಿ ಯಾರಿದ್ದಾರೆ?
ಪ್ರಹ್ಲಾದಂ ಸಕಲಾಪತ್ತು ಯಥಾ
ರಕ್ಷಿತವಾನ್ ಹರಿಃ ।
ತಥಾ ರಕ್ಷತಿ ಯಸ್ತಸ್ಯ
ಶೃಣೋತಿ ಚರಿತಂ ಸದಾ ।।
ಪ್ರಹ್ಲಾದನನ್ನು ರಕ್ಷಿಸಿದಂತೆ - ಪ್ರಹ್ಲಾದ ಚರಿತ್ರೆ ಕೇಳಿದವರನ್ನೂ ಶ್ರೀ ನೃಸಿಂಹನು ಸದಾ ಕಾಲ ರಕ್ಷಿಸುತ್ತಾನೆ.
" ಶ್ರೀ ನೃಸಿಂಹ ಪ್ರಾದುರ್ಭಾವ ಶ್ರವಣ ಫಲ "
" ಶ್ರೀಮದ್ಭಾಗವತ ವಚನ " ದಂತೆ......
ಏತದ್ಯ ಆದ್ಯ ಪುರುಷಸ್ಯ
ಮೃಗೇಂದ್ರ ಲೀಲಾಂ
ದೈತ್ಯೇಂದ್ರಯೂಥಪವಧಂ
ಪ್ರಯತಃ ಪಠೇತ ।
ದೈತ್ಯಾತ್ಮಜಸ್ಯ ಚ
ಸತಾಂ ಪ್ರವರಸ್ಯ ಪುಣ್ಯಂ
ಶ್ರುತ್ವಾsನುಭಾವಮಕುತೋ-
ಭಯ ಮೇತಿ ಲೋಕಮ್ ।।
ಯಾವ ಭಕ್ತನು ಆದಿ ಪುರುಷನಾದ ಶ್ರೀ ಹರಿಯ ಸಿಂಹದ ಕ್ರೀಡೆಯನ್ನು ಪ್ರತಿಪಾದಿಸುವ - ಹಿರಣ್ಯಕಶಿಪುವೆಂಬ ಆನೆಯ ವಧೆಯನ್ನು ಪ್ರಾತಿಪಾದಿಸುವ - ಸಜ್ಜನ ಶ್ರೇಷ್ಠರಾದ ಶ್ರೀ ಪ್ರಹ್ಲಾದರಾಜರ ಪವಿತ್ರವಾದ ಮಹಿಮೆಯನ್ನು ನಿರೂಪಿಸುವ ಆಖ್ಯಾನವನ್ನು ಭಕ್ತಿಯುಕ್ತನಾಗಿ ಕೇಳಿ - ಪಠಣ ಮಾಡುವನೋ ಅವನು ಯಾವ ಭಯವೂ ಇಲ್ಲದೇ ವೈಕುಂಠ ಲೋಕ ಹೊಂದಿ ಮುಕ್ತನಾಗುತ್ತಾನೆ!!
ಶ್ರೀ ಆನಂದ ವಿಠ್ಠಲರು....
ರಾಗ : ಮೋಹನ ತಾಳ : ಆದಿ
ಉರಕುಂದಿ ಪುರವಾಸ ಕರ್ತ ।
ನರಹರಿ ಕಳೆ ಭವ ಕ್ಲೇಶ ।
ಸರಸಿಜ ಭವನುತ ಸರಸಿಜ ಪೀಠದಿ ।
ತ್ವರಿತದಿ ಕಾಣಿಸೊ ಜಿತ ಕರುಣದಲಿ ।। ಪಲ್ಲವಿ ।।
ಕುಂದಣ ಮೈಯವನಿತ್ತ । ವರ ।
ದಿಂದಲಿ ಖಳ ಮೆರೆದಿದ್ದ ।
ಕಂದನ ಮಾತಿಗೆ ಸ್ತಂಭವ ಸೀಳಿ ।
ಕುಂಭಿಣಿಯೊಳು ಪ್ರಜ್ವಲಿಸುತ ಬಂದೆ ।। ಚರಣ ।।
ಪರಮ ದಯಾಕರನೆಂದು ಬಂದು ।
ಸೇರಿದೆ ನಿನ್ನಡಿಗಿಂದು ।
ವಾರಿಧಿ ವಾಸನೆ ಭವ ವಾರಿಧಿಯೊಳು ।
ಜಾರದೆ ಯೆನ್ನನು ದಡ ಸೇರಿಸು ಯಿಂದು ।। ಚರಣ ।।
ಸಂತೋಷತೀರ್ಥರ ಮತದ ಸುಧೆ ।
ಸಂತೋಷದಿಂದಲಿ ಉಣಿಸಿ ।
ಸಂತರ ಸಂಗವ ಸಂತತ ಪಿಡಿಸು ।
ಕಂತುಪಿತ ಸಿರಿ ಆನಂದವಿಠಲರೇಯ ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*****
2021 ರ ಮೇ 25 ರಂದು ಮಂಗಳವಾರ ಶ್ರೀ ನರಸಿಂಹ ಜಯಂತಿ ಹಬ್ಬವನ್ನು ಆಚರಿಸಲಾಗುತ್ತದೆ.
ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ತಿಂಗಳ ಶುಕ್ಲ ಪಕ್ಷದ ಚತುರ್ದಶಿ ದಿನಾಂಕದಂದು ಆಚರಿಸಲಾಗುತ್ತದೆ. ಈ ಬಾರಿ, ಈ ಶುಭ ದಿನಾಂಕ ಮಂಗಳವಾರ ಮೇ 25 ರಂದು ಮಂಗಳವಾರ ಬಂದಿದೆ.
ಭಕ್ತ ಪ್ರಹ್ಲಾದನನ್ನು ರಾಕ್ಷಸ ರಾಜ ಹಿರಣ್ಯ ಕಶ್ಯಪುವಿನಿಂದ ರಕ್ಷಿಸಲು ವಿಷ್ಣು ಈ ಅವತಾರವನ್ನು ತೆಗೆದುಕೊಂಡನು. ದೇವರ ಈ ಅವತಾರವು ಅರ್ಧ ಗಂಡು ಮತ್ತು ಅರ್ಧ ಸಿಂಹ ಆದ್ದರಿಂದ ಇದನ್ನು ನರಸಿಂಹ ಅವತಾರ ಎಂದು ಕರೆಯಲಾಗುತ್ತದೆ. ನರಸಿಂಹನು ವಿಷ್ಣುವಿನ ನಾಲ್ಕನೇ ಅವತಾರ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಈ ದಿನ ಅವರನ್ನು ಪೂಜಿಸುವುದರಿಂದ ಹೆಚ್ಚಿನ ನೋವುಗಳು ದೂರವಾಗುತ್ತವೆ ಮತ್ತು ನಮ್ಮ ರಕ್ಷಣೆಗಾಗಿ ದೇವರು ಸ್ವತಃ ಬರುತ್ತಾನೆ. ಈ ದಿನದ ಮಹತ್ವ, ಪೂಜಾ ವಿಧಾನ, ಶುಭ ಸಮಯ ಮತ್ತು ವ್ರತದ ಕಥೆಯ ಬಗ್ಗೆ ತಿಳಿದುಕೊಳ್ಳೋಣ..
ನರಸಿಂಹ ಜಯಂತಿಯ ದಿನದಂದು ಉಪವಾಸವನ್ನು ಆಚರಿಸುವ ಮೂಲಕ, ಭಕ್ತನ ಎಲ್ಲಾ ನೋವುಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಆ ವ್ಯಕ್ತಿಯು ವಿಷ್ಣುವಿನ ಆಶೀರ್ವಾದವನ್ನು ಮತ್ತು ಅದೃಷ್ಟವನ್ನು ಪಡೆಯುತ್ತಾನೆ. ಈ ಉಪವಾಸವನ್ನು ಆಚರಿಸುವ ಮೂಲಕ, ವಿಷ್ಣುವಿನ ಆಶೀರ್ವಾದದಿಂದ ಒಬ್ಬನು ಎಲ್ಲಾ ರೀತಿಯ ಪಾಪಗಳಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾನೆ ಮತ್ತು ಜೀವನವು ಆನಂದಮಯವಾಗುತ್ತದೆ. ನರಸಿಂಹ ಭಗವಂತನನ್ನು ಇಡೀ ದೇಶದಲ್ಲಿ ಪೂಜಿಸಲಾಗುತ್ತದೆಯಾದರೂ, ದಕ್ಷಿಣ ಭಾರತದಲ್ಲಿ, ನರಸಿಂಹನನ್ನು ವೈಷ್ಣವ ಪಂಥದ ಜನರು ಬಿಕ್ಕಟ್ಟಿನ ಸಮಯದಲ್ಲಿ ರಕ್ಷಣೆಯ ದೇವರು ಎಂದು ಪೂಜಿಸುತ್ತಾರೆ. ಅವರನ್ನು ಪೂಜಿಸುವ ಮೂಲಕ, ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ ಮತ್ತು ಸಾವಿನ ನಂತರ, ಆ ವ್ಯಕ್ತಿಯು ವೈಕುಂಠ ಧಾಮವನ್ನು ಪಡೆಯುತ್ತಾರೆ.
ನರಸಿಂಹ ಜಯಂತಿ ಪೂಜೆ ವಿಧಾನ
1. ಸೂರ್ಯೋದಯಕ್ಕೆ ಮೊದಲು ಪವಿತ್ರ ನದಿಯಲ್ಲಿ ಅಥವಾ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ಮತ್ತು ಸ್ವಚ್ಛವಾದ ಉಡುಪನ್ನು ಧರಿಸಿ.
2. ನರಸಿಂಹ ಜಯಂತಿಯ ದಿನದಂದು, ಲಕ್ಷ್ಮಿ ದೇವಿಯ ಮತ್ತು ನರಸಿಂಹ ದೇವಿಯ ವಿಗ್ರಹಗಳಿಗೆ ವಿಶೇಷ ಪ್ರಾರ್ಥನೆ (ಪೂಜೆ) ಅರ್ಪಿಸುತ್ತಾರೆ.
3. ಪೂಜೆಯು ಮುಗಿದ ನಂತರ ದೇವತೆಗಳಿಗೆ ತೆಂಗಿನಕಾಯಿಯನ್ನು, ಸಿಹಿತಿಂಡಿಗಳನ್ನು, ಹಣ್ಣುಗಳನ್ನು, ಕೇಸರಿಯನ್ನು, ಹೂವುಗಳನ್ನು ಮತ್ತು ಕುಂಕುಮವನ್ನು ಅರ್ಪಿಸಿ.
4. ನರಸಿಂಹ ಜಯಂತಿಯ ಸೂರ್ಯೋದಯದಿಂದ ಉಪವಾಸ ವ್ರತವನ್ನು ಪ್ರಾರಂಭ ಮಾಡಬೇಕು ಮತ್ತು ಮರುದಿನ ಸೂರ್ಯೋದಯದಲ್ಲಿ ಉಪವಾಸ ವ್ರತವನ್ನು ಕೊನೆಗೊಳಿಸಬೇಕು.
5. ಉಪವಾಸದ ಸಮಯದಲ್ಲಿ ಯಾವುದೇ ಏಕದಳ ಅಥವಾ ಧಾನ್ಯವನ್ನು ಸೇವಿಸುವುದನ್ನು ತಪ್ಪಿಸಿ.
6. ದೇವತೆಗಳನ್ನು ಮೆಚ್ಚಿಸಲು ಪವಿತ್ರ ಮಂತ್ರಗಳನ್ನು ಪಠಿಸಿ.
ನರಸಿಂಹ ಜಯಂತಿ 2021 ಶುಭ ಮುಹೂರ್ತ
-2021-
ನರಸಿಂಹ ಜಯಂತಿ ದಿನ: 2021 ರ ಮೇ 25 ರಂದು ಮಂಗಳವಾರ
ನರಸಿಂಹ ಜಯಂತಿ ಸಾಯಂಕಾಲ ಪೂಜೆ ಸಮಯ: 2021 ರ ಮೇ 25 ರಂದು ಮಂಗಳವಾರ ಸಂಜೆ 4:26 ರಿಂದ ಸಂಜೆ 7:11 ರವರೆಗೆ
ನರಸಿಂಹ ಜಯಂತಿ ಮಧ್ಯಾಹ್ನ ಸಂಕಲ್ಪ ಸಮಯ: 2021 ರ ಮೇ 25 ರಂದು ಮಂಗಳವಾರ ಬೆಳಗ್ಗೆ 10:56 ರಿಂದ ಮಧ್ಯಾಹ್ನ 1:41 ರವರೆಗೆ
ಚತುರ್ದಶಿ ತಿಥಿ ಪ್ರಾರಂಭ: 2021 ರ ಮೇ 25 ರಂದು ಮಂಗಳವಾರ ಬೆಳಗ್ಗೆ 12:11 ಕ್ಕೆ
ಚತುರ್ದಶಿ ತಿಥಿ ಮುಕ್ತಾಯ: 2021 ರ ಮೇ 25 ರಂದು ಮಂಗಳವಾರ ರಾತ್ರಿ 8:29 ಕ್ಕೆ
ನರಸಿಂಹ ಜಯಂತಿ ಉಪವಾಸ ನಿಯಮಗಳು
ನರಸಿಂಹ ಜಯಂತಿಯ ಉಪವಾಸದ ನಿಯಮಗಳ ಪ್ರಕಾರ, ನರಸಿಂಹ ಜಯಂತಿಯ ಒಂದು ದಿನ ಮೊದಲು ಭಕ್ತರು ಒಂದೇ ಊಟವನ್ನು ಮಾಡಬೇಕು. ನರಸಿಂಹ ಜಯಂತಿ ಉಪವಾಸದ ಸಮಯದಲ್ಲಿ ಎಲ್ಲಾ ರೀತಿಯ ಧಾನ್ಯಗಳನ್ನು ಸೇವಿಸುವುದನ್ನು ಮತ್ತು ಧಾನ್ಯಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಭಕ್ತರು ರಾತ್ರಿಯ ಜಾಗರಣೆ ಮತ್ತು ಮರುದಿನ ಬೆಳಿಗ್ಗೆ ವಿಸರ್ಜನಾ ಪೂಜೆ ಮಾಡಬೇಕು. ವಿಸರ್ಜನೆ ಪೂಜೆ ನಡೆಸಿದ ಬ್ರಾಹ್ಮಣರಿಗೆ ದಾನ ಕೊಟ್ಟ ನಂತರ ಮರುದಿನ ಉಪವಾಸ ಮುರಿಯಲಾಗುತ್ತದೆ.
ನರಸಿಂಹ ಜಯಂತಿ ವ್ರತ ಕಥೆ
ಪ್ರಾಚೀನ ಕಾಲದಲ್ಲಿ, ಅಸುರರಾಜ ಹಿರಣ್ಯಕಶ್ಯಪು ತನ್ನನ್ನು ದೇವರು ಎಂದು ಭಾವಿಸಿ ತನ್ನನ್ನು ಆರಾಧಿಸುವಂತೆ ತನ್ನ ಪ್ರಜೆಗಳಿಗೆ ಹಿಂಸೆ ನೀಡುತ್ತಿದ್ದನು, ಆದರೆ ಅವನ ಮಗ ಪ್ರಹ್ಲಾದನು ಸ್ವತಃ ವಿಷ್ಣುವಿನ ಮಹಾನ್ ಭಕ್ತ. ಈ ಬಗ್ಗೆ ಹಿರಣ್ಯ ಕಶ್ಯಪುವಿಗೆ ತಿಳಿದಾಗ, ಅವನು ತನ್ನ ಮಗುವನ್ನು ಅನೇಕ ಬಾರಿ ಹಿಂಸಿಸಿದನು ಆದರೆ ಅವನು ವಿಷ್ಣುವನ್ನು ಪೂಜಿಸುವುದನ್ನು ನಿಲ್ಲಿಸಲಿಲ್ಲ. ಮನುಷ್ಯನಿಂದ ಅಥವಾ ಪ್ರಾಣಿಯಿಂದ, ಮನೆಯೊಳಗೆ ಅಥವಾ ಮನೆಯ ಹೊರಗೆ, ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ, ಶಸ್ತ್ರಾಸ್ತ್ರದಿಂದ ಅಥವಾ ಆಯುಧದಿಂದ, ಆಕಾಶದಲ್ಲಿ ಅಥವಾ ಭೂಮಿಯಲ್ಲಿ ತನ್ನನ್ನು ಯಾರಿಂದಲೂ ಕೊಲ್ಲಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ಹಿರಣ್ಯ ಕಶ್ಯಪು ವರವನ್ನು ಪಡೆದುಕೊಂಡಿದ್ದನು.
ಈ ವರವನ್ನು ಪಡೆದ ನಂತರ ಹಿರಣ್ಯಕಶ್ಯಪು ತುಂಬಾ ಸೊಕ್ಕಿನವನಾಗಿದ್ದನು. ಅವನು ತನ್ನ ಮಗನ ಪ್ರಾಣವನ್ನು ತೆಗೆದುಕೊಳ್ಳಲು ಹಲವು ಬಾರಿ ಪ್ರಯತ್ನಿಸಿದನು, ಆದರೆ ಪ್ರಹ್ಲಾದನ ಕೂದಲನ್ನು ಕೂಡ ಅವನಿಂದ ಕೀಳಲಾಗಲಿಲ್ಲ. ಒಂದು ದಿನ ದೇವರು ಎಲ್ಲೆಡೆ ಇದ್ದಾನೆ ಎಂದು ಪ್ರಹ್ಲಾದ ಹೇಳಿದಾಗ, ಈ ಸ್ತಂಭದಲ್ಲಿ ನಿಮ್ಮ ದೇವರನ್ನು ಕಾಣಬಹುದೇ ಎಂದು ಹಿರಣ್ಯಕಶ್ಯಪು ಮಗನಿಗೆ ಸವಾಲು ಹಾಕುತ್ತಾನೆ. ಇದನ್ನು ಹೇಳಿದ ನಂತರ ಕಂಬಕ್ಕೆ ಹೊಡೆದನು. ಆಗ ವಿಷ್ಣು ಸ್ತಂಭದಿಂದ ನರಸಿಂಹ ಅವತಾರ ರೂಪದಲ್ಲಿ ಕಾಣಿಸಿಕೊಂಡನು. ನರಸಿಂಹನು ಹಿರಣ್ಯ ಕಶ್ಯಪನನ್ನು ಅರಮನೆಯ ಬಾಗಿಲಿಗೆ ಕರೆದೊಯ್ದು, ತೊಡೆಯ ಮೇಲೆ ಮಲಗಿಸಿಕೊಂಡು ತನ್ನ ಉಗುರುಗಳಿಂದ ಆತನ ಎದೆಯನ್ನು ಬಗೆದು ತನ್ನ ಭಕ್ತನನ್ನು ರಕ್ಷಿಸಿದನು. ಆ ದಿನ ವೈಶಾಖ ತಿಂಗಳ ಶುಕ್ಲ ಪಕ್ಷದ ಚತುರ್ದಶಿ ದಿನವಾಗಿತ್ತು. ಪ್ರತಿ ವರ್ಷ ಆ ದಿನದಿಂದ ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.
****
ನರಸಿಂಹಾವತಾರ ಒಂದು ಚಿಂತನೆ.
by ✍️....ಶ್ರೀಸುಗುಣವಿಠಲ.
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ|{ ಈಶೋಪನಿ ಷತ್}
ಎಂಬ ಈಶೋಪನಿಷತ್ ನ ವಾಣಿಯಂತೇ.ಭಗವಂತನಾದ ಶ್ರೀಹರಿ ಅಣುರೇಣುತೃಣಕಾಷ್ಟ ಪರಿಪೂರ್ಣನಾಗಿ ಚೇತನಾಚೇತನಗಳಲ್ಲಿ ಎಲ್ಲಾದರಲ್ಲಿ ಅಂತರ್ಯಾಮಿಯಾಗಿದ್ದು ಓತಪ್ರೋತವಾಗಿ ವ್ಯಾಪ್ತನಾಗಿದ್ದಾನೆ.ಇಡೀ ಬ್ರಹ್ಮಾಂಡದ ಒಳಹೊರಗೂ ಅನಂತರೂಪದಿಂದಲೂ ಏಕರೂಪದಿಂದಲೂ ವಿಶಿಷ್ಟವಾಗಿ ವ್ಯಾಪ್ತನಾಗಿದ್ದಾನೆ ..ಎಂಬುದು ಶ್ರುತಿ ಸ್ಮೃತಿಗಳ ಮಾತು.
ಅಲ್ಲದೇ ..
ಗುಣಾಃ ಶ್ರುತಾಃ ಸುವಿರುದ್ದಾಶ್ಚ ದೇ ವೇ... ಅಂದರೆ ಪರಸ್ಪರ ವಿರುದ್ಧಗುಣಗಳೂ ಒಂದೆಡೆ ಪರಮಾತ್ಮನಲ್ಲಿರಲು ಸಾಧ್ಯ! ಇದು ಅವನ ಅಚಿಂತ್ಯಾಧ್ಭುತ ಶಕ್ತಿಯ ವಿಶಿಷ್ಠ ಸಾಮರ್ಥ್ಯ! .ಭಗವಂತನ ಈ ಗುಣತತ್ವದ ಪ್ರಾಧುರ್ಭಾವವನ್ನು ಭಗವಂತ ತನ್ನ ನರಸಿಂಹಾವತಾರದ ಮೂಲಕ ನಮಗೆ ಗ್ರಹಿಸುವಂತೆ ಅನುಗ್ರಹಿಸಿದ್ದಾನೆ.
ಸಜ್ಜನಜ್ಞಾನಿಗಳಾದ ಸನಕಾದಿಗಳ ಶಾಪವನ್ನು ಅನುಮೋದಿಸಿದ ಭಗವಂತ ಅಹಂಕಾರದೋಷಕ್ಕೊಳಗಾದ ತನ್ನ ಭಕ್ತರಾದ ಜಯ-ವಿಜಯರ ಶಾಪವಿಮೋಚನೆ.. ದುಷ್ಟಸಂಹಾರ, ಶಿಷ್ಟರ ರಕ್ಷಣೆ ,ಭಗವತೋತ್ತಮರಾದ ಶ್ರೀಪ್ರಹ್ಲಾದರಾಜರ ಕೀರ್ತಿ ತನ್ಮೂಲಕ ಲೋಕದಲ್ಲಿ ನವವಿಧ ಭಕ್ತಿ, ವೈರಾಗ್ಯ ಜ್ಞಾನದ..ಉಧ್ಗೋಷಣೆ ಈ ಅವತಾರದಲ್ಲಿ ಗ್ರಹಿಸುವ ಭಗವತ್ ತತ್ವಗಳಾಗಿವೆ.
ಹರಿಸರ್ವೋತ್ತಮತ್ವದ ಹರಿನಾಮಸ್ಮರಣೆಯಾರಾಧಕನಾದ ಬಾಲ ಪ್ರಹ್ಲಾದನು ಒಂದೆಡೆ ಆದರೇ..ಏಕಸ್ವಾಮಿತ್ವದ ಅಹಂಕಾರದ ಸ್ವಸ್ವಾತಂತ್ರ್ಯಯದ/ಸ್ವಹಂಕಾರದ ಪ್ರತಿನಿಧಿಯಾಗಿ ತಂದೆ ಹಿರಣ್ಯಕಷಿಪು..ಕಂಡುಬರುತ್ತಾನೆ.ಎರಡಕ್ಕೂ ಸಂಘರ್ಷವಾದಾಗ..ಉಳಿಯುವುದು..ಹೊಳೆಯುವುದು..ಯಾವುದು..? ಹಾಗೇ ಅಳಿಯುವುದು ಯಾವುದು..? ಎಂಬ ಎರಡು ಪ್ರಶ್ನೆಗಳಿಗೆ ಉತ್ತರವೇ... ಭಾಗವತದ ಸಪ್ತಮಸ್ಕಂದದಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟ. ಈ ಅಧ್ಭುತವಾದ ಅವತಾರದ ಕಥಾನಕವಾಗಿದೆ..ವೈಶಾಖ ಶುದ್ಧಚತುರ್ದಶಿ ಸಾಯಂಕಾಲದಲ್ಲಿ ಅಧ್ಭುತವಾಗಿ ಪ್ರಕಟವಾದ ನರನೂ ಅಲ್ಲದ ಪ್ರಾಣಿಯೂ ಅಲ್ಲದ ಹಗಲೂ ಅಲ್ಲದ, ಇರುಳೂ ಅಲ್ಲದ, ಯಾವ ಶಸ್ತ್ರವೂ ಇಲ್ಲದೇ, ದೈತ್ಯನಾದ ಹಿರಣ್ಯಕಷಿಪು ತಾನು ಪಡೆದ ವರದ ಅಭಿಮತಂತೆ.
“ನಾನು ಕಂಬದಲ್ಲೂ ಇದ್ದೇನೆ ಡಿಂಬದಲ್ಲೂ ಇದ್ದೇನೆ ಬ್ರಹ್ಮಾಂಡದಲ್ಲೂ ಇದ್ದೇನೆ..ಎಂಬುದನ್ನು ತೋರಿಸಲೋ ಎಂಬಂತೆ ಭೃತ್ಯನ ಮಾತನ್ನು ಸತ್ಯವಾಗಿಸಲೋಸುಗ.ಅಧ್ಭುತವಾಗಿ ಪ್ರಕಟಗೊಂಡ ರೂಪವೇ *ನರಸಿಂಹಾವತಾರ.ಈ ಅವತಾರಕಾಲದಲ್ಲಿ ಮಹಾಲಕ್ಷ್ಮೀಯೆ ಪತ್ನಿಯಾಗಿದ್ದೂ ಅವಳ ಪ್ರಾರ್ಥನೆಗೂ ಶಾಂತನಾಗದ ನರಹರಿಯು ಬಾಲ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನಿಗೆ ಕೀರ್ತಿನೀಡಿದ ಭಗವಂತನ ಕಾರುಣ್ಯ ದೊಡ್ಡದು.
ವಾಸನಾತ್ ವಾಸುದೇವೋಸಿ ವಾಸಿತಂ ತೇ ಜಗತ್ರಯಮ್ |
ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೇ|| ಎಂಬಂತೇ..
ಅದ್ವೀತೀಯನಾದ ಭಗವಂತ ಎಲ್ಲರೊಳು ತಾನಿದ್ದು ,ತನ್ನೊಳಗೆ ಎಲ್ಲರನ್ನೂ ಧರಿಸಿ, ಅಖಿಲ ಬ್ರಹ್ಮಾಂಡಕ್ಕೆ ವ್ಯಾಪ್ತ, ಸರ್ವಾಧಾರ ,ಸರ್ವಾಶ್ರಯನಾಗಿದ್ದಾನೆ..ಎಂಬ ತತ್ವವನ್ನು ಶ್ರೀವಾದಿರಾಜರು ತಮ್ಮ “ತೀರ್ಥಪ್ರಭಂಧ” ದಲ್ಲಿ ಅರುಹಿದ್ದಾರೆ.
~ವ್ಯಾಸ &ದಾಸ ಸಾಹಿತ್ಯ ದಲ್ಲಿ ಈ ಅವತಾರದ ವರ್ಣಣೆಗಳು ಅಗಣಿತವೇ ಸರೀ..!!.ಆದರೂ ಕೆಲವನ್ನು ನೋಡುವುದಾದರೇ
ಸುಮಧ್ವವಿಜಯ ಮಹಾಕಾವ್ಯ ..ವು ಭಯಹರಿಪ, ಜ್ಞರಹರ ನಾರಸಿಂಹ ನ ವರ್ಣನೆ ..
ಮಹಾಭಾರತ ತಾತ್ಪರ್ಯ ನಿರ್ಣಯ, ರುಕ್ಷ್ಮೀಣೀಶವಿಜಯ*ಭಾಗವತ ಸಪ್ತಮ ಸ್ಕಂದ...ಹೀಗೆ ಹತ್ತು ಹಲವಾರು.
ಇನ್ನುಯತಿವರೇಣ್ಯರು..ಆಚಾರ್ಯ ಮಧ್ವರು, ಶ್ರೀಪಾದರಾಜರ .”ಶ್ರೀ ಲಕ್ಷ್ಮೀನರಸಿಂಹ ಪ್ರಾಧುರ್ಭಾವ ದಂಡಕ” ..
ವಾದಿರಾಜರ ..ದಶಾವತಾರ ಸ್ತುತೀ..”ದಂಭೋಲಿತೀಕ್ಷ್ಣನಖ ಸಂಭೇದಿತೇಂದ್ರಿರಿಪುಕುಂಬೀಂದ್ರ ಪಾಹಿಕೃಪಯಾ....||೮||
ಶ್ರೀವ್ಯಾಸರಾಜರು..ಹೀಗೆ ಇವರುಗಳ ಸಾಕಷ್ಟು ಕೃತಿಗಳಲ್ಲಿ ನರಸಿಂಹ ದೇವರನ್ನು ಅಧ್ಭುತವಾಗಿ ಚಿತ್ರಿಸಿದ್ದಾರೆ.
ಇನ್ನೂ ಮುಂದುವರೆದೂ
ದಾಸರ ದೃಷ್ಠಿಯಲ್ಲಿ ನೋಡುವುದಾದರೇ..ಸಾಮಾನ್ಯವಾಗಿ ಎಲ್ಲಾ ದಾಸವರೇಣ್ಯರೂ ಮನದುಂಬಿ ..ಮೈದುಂಬಿ ರಂಗುರಂಗಾಗಿ ರಂಜಿಸಿ ನರಸಿಂಹದೇವರನ್ನು ಕೊಂಡಾಡಿದ್ದಾರೆ.
ಶ್ರೀಪುರಂದರದಾಸರು...”ಸಿಂಹರೂಪನಾದ ಶ್ರೀಹರೀ.....ಎಂದಿದ್ದಾರೆ.
ಕನಕದಾಸರು.."ಖಡುಕೋಪದಿಂ ಖಳನು ಖಡ್ಗವನೆ ಪಿಡಿದು ಎಲ್ಲಿಹನು ನಿನ್ನೊಡೆಯಾ..ಎಂದು ನುಡಿಯೇ..ಧೃಢಭಕುತಿಯಿಂ ಶಿಶುವು..ನಿನ್ನನು ಭಜಿಸೇ ಸ್ತಂಭದಿಂದೊಡೆದೆಯೋ ನರಹರಿಯೇ..."ಎಂದಿದ್ದಾರೆ..
ವಿಜಯದಾಸರು ತಮ್ಮ ಪಂಚರತ್ನಸುಳಾದಿಗಳಲ್ಲಿ “ನರಸಿಂಹನಿಗಾಗೇ ಒಂದು ಸುಳಾದಿ” ಅಧ್ಭುತವಾಗಿ ರಚಿಸಿದ್ಧಾರೆ..
ಜಗನ್ನಾಥದಾಸರು.
ಹರಿಕಥಾಮೃತಸಾರದ ಆದಿಯಲ್ಲೇ
*ಕೈವಲ್ಯದಾಯಕ ನಾರಸಿಂಹನೇ ಕರುಣಿಪುದೆಮಗೆ ಮಂಗಲವ...ಎಂದು ಮೊರೆಹೊಕ್ಕಿದ್ದಾರೆ.ಹಾಗೂ...".ಸೋಲ್ಲು ಲಾಲಿಸಿ ಕಂಭದಲಿ ಬಂದ ಭಕುತಗೆ..(ಹರಿಕಥಾಮೃತಸಾರ೩-೩೨) .ಎಂದೂ ಚಿತ್ರಿಸಿದ್ದಾರೆ.
ಅನುಸಂಧಾನ&ಚಿಂತನ:👇
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯ ಸ್ಥಿತ|....(ಗೀತಾ೧೦-೨೨) ಎಂಬ ಗೀತಾವಾಣಿಯಂತೆ ಸಕಲರಲ್ಲಿ ಭಗವಂತನ ವ್ಯಾಪ್ತಿತ್ವವನ್ನರಿತೂ ಕಾಯಾವಾಚಾ ಮನಸಾ ಯಾರಿಗೂ ನೋವನ್ನು ಕೊಡದೆ ನಿರಂಹಕಾರದಿಂದ ನಮ್ಮ ವರ್ತನೆಗಳು ಇರಬೇಕೂ .ಎಂಬುದನ್ನು ಈಮೇಲಿನ ಸನಕಾದಿಗಳನ್ನು ಅವಮಾನಿಸಿ ಭಗವಂತನ ಆನುಗ್ರಹ ಸೇವೆಯಿಂದ ವಿಮುಖರಾದ ಭಗವಂತನ ಮನೆಯ ದ್ವಾರಪಾಲಕರಾಗಿದ್ದರೂ ಅವರನ್ನು ಶಿಕ್ಷಿಸಿದ ಭಗವಂತನ ನಿರ್ದಷ್ಟತ್ವವನ್ನು ಕಾಣಬೇಕೂ .ಹಾಗೇ ಅವರ ಭಕ್ತಿಗೆ ತೋರಿದ ಕಾರುಣ್ಯವನ್ನು ಗ್ರಹಿಸಬೇಕು.
~ಎರಡನೇದಾಗಿ ..ಬಾಲ ಪ್ರಹ್ಲಾದನಂತೇ ಕೌಮಾರದಿಂದಲೇ ನವವಿಧ ಭಕ್ತಿಗಳನ್ನು ಬೆಳೆಸಿಕೊಂಡು ಸಾಧನೆಗೆ ತೋಡಗಬೇಕೂ.
ಯಾವಾಗ ಈ ದೇಹ ಬಿದ್ದುಹೋಗುವುದೋ ಗೊತ್ತಿಲ್ಲಾ..
”ನೀರಮೇಲಿನ ಗುಳ್ಳೆ ನಿಜವಲ್ಲಾ ಹರಿಯೇ..” ಎಂಬ ದಾಸವಾಣಿಯಂತೆ.. ಭಗವಂತನೊಬ್ಬನೇ ನಮಗೆ ಆಶ್ರಯ, ನಂಬಿಕೆ, ಆಧಾರ..ಎಲ್ಲವೂ ಎಂಬುದನ್ನು ಪ್ರಹ್ಲಾದನಂತೆ ಧೃಢವಿಶ್ವಾಸ ಹೊಂದಬೇಕು. ಆಗ ಜೀವನದಲ್ಲಿ ಏನೇ ಪ್ರಹ್ಲಾದನಿಗೆ ಬಂದಂತೆ ಪ್ರಾಣಾಂತಿಕ ಭವರೋಗಗಳು ಬಂದರೂ..
“ಎಳ್ಳುಕೊನೆಯ ಮುಳ್ಳು ಮೊನೆ ಪೊಳ್ಳು ಬಿಡದೇ....ಹೊರಗೆ ಒಳಗೆ ಎಲ್ಲಾ ಠಾವಿನಲ್ಲಿ ಲಕುಮಿ ನಲ್ಲನಿದ್ದು ನಮ್ಮನ್ನು ರಕ್ಷಣೆಮಾಡುತ್ತಾನೆ.ದೈತ್ಯಬಾಲಕರೆಲ್ಲರೂ ಭಕ್ತಪ್ರಹ್ಲಾದನ ಸಜ್ಜನ ಸಹವಾಸದಿಂದ ವಿಷ್ಣುಭಕ್ತರಾದಂತೆ ಸದಾ ಸಜ್ಜನ ಸಹವಾಸವು ನಮಗೆ ಶ್ರೇಯೋಮಾರ್ಗವು.ಉಗ್ರವಾದ ನರಸಿಂಹರೂಪಕ್ಕೆ ಭಯಪಡದ ಭಕ್ತಜ್ಞಾನಿ ಪ್ರಹ್ಲಾದನು ಹೇಳುವಂತೆ ಈ ಸಂಸಾರದ ಭವ ಸಾಗರದ ಸುಳಿಗೆ ಭಯ ಎನ್ನುತ್ತಾನೆ..ಇದು ಭಾಗವತದ ಮಾತು.! ಇನ್ನು ಸದಾ ಈ ಸುಳಿಯಲ್ಲಿ ಸಿಲುಕಿರುವ ನಮ್ಮಗಳ ಪಾಡೇನೂ..? ಯೋಚಿಸಿದರೇ ಭಯವಾಗುತ್ತದೆ.ಪ್ರಯುಕ್ತ ನಯವಾದ ಭಕ್ತರಿಗೆ ನರನೂ ದುಷ್ಟದೈತ್ಯಾವೇಶದವರಿಗೇ ಸಿಂಹಸ್ವಪ್ನನೂ ಆದ “ನರಸಿಂಹನ” ನನ್ನು ಧೃಢವಾಗಿ ನವವಿಧಭಕ್ತಿ ಆಚರಿಸಿ ನರಸಿಂಹದೇವರ ಕೃಪೆಗೆ ಪಾತ್ರರಾಗೋಣ.ಈ ನಮ್ಮ ಪುಣ್ಯಭೂಮಿ ಭರತಖಂಡದಲ್ಲಿ..ಅಹೋಬಿಲ, ತೊರವಿ, ನೀರಾ, ಮುತ್ತಗಿ, ಪೆನ್ನೋಬಲ, ಮಂಗಳಗಿರಿ, ಕೊಪ್ಪರ, ...ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ನರಸಿಂಹದೇವರ ಸನ್ನಿಧಾನವಿದ್ದೂ ಸಾಧ್ಯವಾದಷ್ಟೂ ಅವುಗಳ ದರ್ಶನ ಸೇವಾದಿಗಳನ್ನು ಮಾಡಿ ನರಸಿಂಹದೇವರ ಕೃಪೆಗೆ ಪಾತ್ರರಾಗೋಣ ಎಂಬ ಯಥಾಮತಿ ಚಿಂತನದೋಂದಿಗೆ ಶ್ರೀಸುಗುಣವಿಠಲಾರ್ಪಣಮಸ್ತು.
end
***
ಭಕ್ತ ಪ್ರಹ್ಲಾದನಿಗೆ ಒಲಿದ ಸ್ತಂಭಾರ್ಭಕ ನರಸಿಂಹ
ನರಸಿಂಹಾವತಾರವನ್ನು ಭಾಗವತ, ಹರಿವಂಶ ಮುಂತಾದ ಕಡೆ ವೇದವ್ಯಾಸರು ಚಿತ್ರಿಸಿದ್ದಾರೆ. ಪುಟ್ಟ ಭಕುತ ಬಾಲಕ ಕರೆದಾಗ ತಾನು ಸರ್ವವ್ಯಾಪಿ ಎಂಬುದನ್ನು ಸಿದ್ಧಪಡಿಸಿದ ರೂಪ.
ಒಮ್ಮೆ ಜಯ ವಿಜಯರೆಂಬ ವಿಷ್ಣು ಪಾರ್ಶ್ವಧರು ಸನಕಸನಂದನರನ್ನು ವೈಕುಂಠದ್ವಾರದಲ್ಲಿ ತಡೆದಾಗ ಶಪ್ತರಾಗಿ ಹಿರಣ್ಯಾಕ್ಷ ಹಿರಣ್ಯಕಶಿಪುವಾಗಿ ಕೃತಯುಗದಲ್ಲಿ ಅವತರಿಸಿರುತ್ತಾರೆ. ಹಿರಣ್ಯಾಕ್ಷನನ್ನು ಶ್ರೀಹರಿ ಕ್ರೋಢರೂಪದಲ್ಲಿ ಸಂಹರಿಸಿದಾಗ ಕ್ರುದ್ಧನಾದ ಹಿರಣ್ಯಕಶಿಪು ಘೋರ ತಪಸ್ಸು ಮಾಡಿ ಬ್ರಹ್ಮನ ಒಲಿಸಿಕೊಂಡು ಸಾವೇ ಬರದಂತೆ ವರವನ್ನು ಕೇಳಲು, ಅಂತಹ ವರ ಕೊಡಲಾಗುವುದಿಲ್ಲ ಎಂದಾಗ ತನ್ನ ಬುದ್ಧಿ ಉಪಯೋಗಿಸಿ ವಿಚಿತ್ರ ವರವನ್ನು ಕೋರುತ್ತಾನೆ.
ಅವನು ಕೋರಿದ ವರ ಹೀಗಿತ್ತು - "ಹಗಲಾಗಲಿ, ರಾತ್ರಿಯಾಗಲಿ, ಮನೆಯ ಒಳಗಾಗಲಿ, ಹೊರಗಾಗಲಿ, ಭುಮಿಯಲ್ಲಾಗಲೀ ಅಂತರಿಕ್ಷದಲ್ಲಾಗಲಿ, ಮನುಷ್ಯರಾಗಲಿ, ರಾಕ್ಷಸರಾಗಲಿ, ಪ್ರಾಣಿಗಳಾಗಲಿ, ನೀನು ಸೃಷ್ಟಿಸಿದ ಯಾವುದೇ ಜೀವಿಯಿಂದಾಗಲೀ, ಯಾವುದೇ ಆಯುಧದಿಂದಾಗಲಿ ಸಾವು ಬರಬಾರದು". ಬ್ರಹ್ಮ ದೇವರು ತಥಾಸ್ತು ಎಂದರು. ಬ್ರಹ್ಮನಿಗೆ ಗೊತ್ತು ಈ ಎಲ್ಲಾ ವರಗಳನ್ನೂ ಮೀರಿ ದುಷ್ಟ ಸಂಹಾರ ಮಾಡುವವ ಶ್ರೀಹರಿ ಎಂದು.
ವರಬಲದಿಂದ ಕೊಬ್ಬಿದ ಹಿರಣ್ಯಕಶಿಪು ಎಲ್ಲಾ ದೇವತೆಗಳನ್ನೂ ಅವರ ಅಧಿಕಾರರಹಿತರನ್ನಾಗಿಸಿ, ಇವನ ಸೇವಕರಂತೆ ಮಾಡಿಕೊಂಡ. ಇಂದ್ರನೂ ಸ್ಥಾನಭ್ರಷ್ಟನಾದ. ಯಾರೂ ಯಜ್ಞ ಹವನಾದಿಗಳನ್ನು ಮಾಡುವಂತಿಲ್ಲ, ಇವನನ್ನೇ ಪೂಜಿಸಬೇಕು. ಹೋಮದ ಹವಿಸ್ಸೂ ಇವನಿಗೆ.
ಇಂತಹ ದುಷ್ಟನ ಮಗನಾಗಿ ಜನಿಸಿದವನೇ ಪ್ರಹ್ಲಾದ. ಮಗನಿಗೆ ವಿದ್ಯೆ ಹೇಳಿಕೊಡಲು ದೈತ್ಯಗುರು ಶುಕ್ರಾಚಾರ್ಯರ ಮಕ್ಕಳಾದ ಷಂಡಾಮರ್ಕರನ್ನು ನೇಮಿಸಿದ್ದ. ಎಲ್ಲಿಯೂ ಯಾರೂ ಹರಿಸ್ಮರಣೆ ಮಾಡುವಂತಿರಲಿಲ್ಲ. ಆದರೆ ಬಾಲಕ ಪ್ರಹ್ಲಾದನಿಗೆ ತನ್ನ ತಾಯಿಯ ಗರ್ಭದಲ್ಲಿದ್ದಾಗ ನಾರದರು ಕಯಾದುವಿಗೆ ಮಾಡಿದ್ದ ಉಪದೇಶ ಮನ ತುಂಬಿತ್ತು. ಗುರುಗಳು ಹಿರಣ್ಯಕಶಿಪುವೇ ನಮ: ಎಂದರೆ ಪ್ರಹ್ಲಾದ ನಾರಾಯಣಾಯ ನಮಃ ಎನ್ನುತ್ತಿದ್ದ. ಒಮ್ಮೆ ಹಿರಣ್ಯಕಶಿಪು ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ "ಮಗುವೇ ಏನು ಕಲಿತಿರುವೆ ಹೇಳು" ಎಂದಾಗ, ಬಾಲಕ ತಂದೆಗೆ ಹೇಳುತ್ತಾನೆ "ತಪಸ್ಸು ಮಾಡಿ ಶ್ರೀಹರಿಯನ್ನು ಆಶ್ರಯಿಸಬೇಕೆಂದು ತಿಳಿದಿರುವೆ" ಎನ್ನುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪು ಯಾರೋ ಇವನ ತಲೆ ಕೆಡಿಸಿದ್ದಾರೆ, ಇವನಿಗೆ ಸರಿಯಾಗಿ ಹೇಳಿಕೊಡಿ ಎಂದು ಷಂಡಾಮರ್ಕರಿಗೆ ಹೇಳಿ ಕಳಿಸುತ್ತಾನೆ.
ಸ್ವಲ್ಪ ದಿನಗಳ ನಂತರ ಮತ್ತೊಮ್ಮೆ ತಂದೆಯ ಬಳಿ ಬಂದ ಪ್ರಹ್ಲಾದ ಹಿಂದಿನಂತೆಯೇ ಹರಿಯೇ ಸರ್ವೋತ್ತಮ ಎಂದಾಗ ಕೋಪಗೊಂಡು ಅವನನ್ನು ಕೊಲ್ಲಲು ಸಾಕಷ್ಟು ರೀತಿಯಲ್ಲಿ ಹವಣಿಸಿದರೂ ಸಾಧ್ಯವಾಗದಿದ್ದಾಗ ಆ ನಿನ್ನ ಹರಿ ಎಲ್ಲಿರುವನು ಎನ್ನಲು ಸರ್ವತ್ರ ವ್ಯಾಪ್ತನೆನ್ನುತ್ತಾನೆ ಪ್ರಹ್ಲಾದ. ಆಗ ಒಂದು ಕಂಬವನ್ನು ತೋರಿಸಿ ಈ ಕಂಬದಲ್ಲಿದ್ದಾನಾ ಎನ್ನಲೂ ಇದ್ದಾನೆ ಎನ್ನುತ್ತಾನೆ. ಕೋಪದಿಂದ ತನ್ನ ಮುಷ್ಟಿಯಿಂದ ಕಂಬಕ್ಕೆ ಹೊಡೆಯಲು ಬಂದ ರೂಪವೇ ನರಸಿಂಹಾವತಾರ. ಅವನಿಗೆ ಕಂಬವೇ ತಾಯಿ ತಂದೆ. ಶ್ರೀಹರಿ ಜಗತ್ತಿಗೇ ತಂದೆ ಅವನಿಗೆ ಯಾರೂ ತಂದೆ ತಾಯಿ ಇಲ್ಲ ಎನ್ನುವುದು ಕಂಬದಿಂದ ಪ್ರಾದುರ್ಭಾವವಾಗಿದ್ದರಿಂದ ತಿಳಿಯುತ್ತದೆ. ಅದಕ್ಕೆ ದಾಸರು ಅವನನ್ನು "ಸ್ತಂಭಾರ್ಭಕ' - ಕಂಬದ ಮಗ ಎಂದರು.
ಹಿಂದೆಂದೂ ಕಾಣದ ಆ ರೂಪವನ್ನು ನೋಡಿ ಆಶ್ಚರ್ಯವಾಯಿತು. ತನ್ನ ಗದೆಯಿಂದ ಅವನ ಜೊತೆಗೆ ಯುದ್ಧಕ್ಕೆ ಬರುತ್ತಾನೆ. ಶ್ರೀ ನರಸಿಂಹ ಅವನ ಜೊತೆ ಮುಸ್ಸಂಜೆಯವರೆಗೂ ಹಾವು ಇಲಿಯನ್ನು ಆಟವಾಡಿಸಿ ಕೊಲ್ಲುವಂತೆ ಆಟವಾಡುತ್ತಾ ಅವನನ್ನು ತನ್ನ ತೊಡೆಯ ಮೇಲೆ ಮಲಗಿಸಿ ಉಗುರುಗಳಿಂದಲೇ ಸಂಹರಿಸುತ್ತಾನೆ.
ಇಲ್ಲಿ ಹಿರಣ್ಯಕಶಿಪುವನ್ನು ಸಂಹರಿಸುವಾಗ ಅವನು ಬ್ರಹ್ಮನಿಂದ ಪಡೆದ ವರಕ್ಕೆಲ್ಲೂ ಭಂಗ ಬರದಂತೆ ಕೊಲ್ಲುತ್ತಾನೆ.
ಹಗಲು ರಾತ್ರಿ ಸಾವು ಬರಬಾದೆಂದಿದ್ದ - ಮುಸ್ಸಂಜೆ ಕೊಂದ. ಯಾವುದೇ ಆಯುಧಗಳಿಂದ ಸಾವು ಬರಬಾರದೆಂದಿದ್ದ - ಉಗುರು ಯಾವುದೇ ಆಯುಧವಲ್ಲ. ಬ್ರಹ್ಮಸೃಷ್ಟಿಯ ಯಾವ ಜೀವಿಯಿಂದಲೂ ಸಾವು ಬರಬಾರದೆಂದಿದ್ದ - ನರಸಿಂಹ ಬ್ರಹ್ಮನನ್ನೇ ಸೃಷ್ಟಿ ಮಾಡುವವ. ಯಾವುದೇ ಪ್ರಾಣಿ ಮನುಷ್ಯರಿಂದಲೂ ಸಾವು ಬರಬಾರದೆಂದಿದ್ದ - ನರಸಿಂಹ ಮನುಷ್ಯನೂ ಅಲ್ಲ ಪ್ರಾಣಿಯೂ ಅಲ್ಲ, ಅರ್ಧ ಪ್ರಾಣಿ ಅರ್ಧ ಮನುಷ್ಯ. ಮನೆಯ ಹೊರಗೂ ಅಲ್ಲ ಮನೆಯ ಒಳಗೂ ಅಲ್ಲ ಹೊಸ್ತಿಲ ಮೇಲೆ ಕೊಂದ. ಭೂಮಿಯೂ ಅಲ್ಲ ಆಕಾಶವೂ ಅಲ್ಲ ತನ್ನ ತೊಡೆಯ ಮೇಲೆ ಕೊಂದ. ಹೀಗೆ ಬ್ರಹ್ಮನಿಗೂ ಪರಬ್ರಹ್ಮ ತಾನೆಂದು ನರಸಿಂಹಾವತಾರ ಮೂಲಕ ತಿಳಿಸಿದ್ದ ಅವತಾರ ನರಸಿಂಹಾವತಾರ.
ಸತ್ಯಂ ವಿಧಾತುಂ ನಿಜಭೃತ್ಯಭಾಷಿತಂ ಇದು ಭಾಗವತದಲ್ಲಿ ಲಭ್ಯವಿರುವ ಶ್ಲೋಕ. ಇದರ ವ್ಯಾಖ್ಯಾನವನ್ನು ಶ್ರೀ ಸತ್ಯಧರ್ಮತೀರ್ಥರು ಅದ್ಭತವಾಗಿ ವಿವರಿಸಿದ್ದಾರೆ. ಅದು ಇಂತಿದೆ : -
ಅ. ನಿಜಭಕ್ತನಾದ ಪ್ರಹ್ಲಾದನು ಶ್ರೀಹರಿಯು ಸರ್ವವ್ಯಾಪಿ ಎಂದಿದ್ದ. ಅದನ್ನು ನಿಜ ಮಾಡಲು ಕಂಬದಲ್ಲಿ ಬಂದ.
ಆ. ಬ್ರಹ್ಮ ದೇವರು ನೀಡಿದ್ದ ವರವನ್ನೂ ನಿಜ ಮಾಡಿದನು. ಅವನು ಕೇಳಿದ ಎಲ್ಲಾ ವರಗಳನ್ನೂ ಮೀರಿ ಕೊಲ್ಲುವ ಶಕ್ತಿ ತನಗಿದ್ದರೂ ತನ್ನ ಭೃತ್ಯ ಬ್ರಹ್ಮ ನೀಡಿದ ವರವನ್ನು ನಿಜ ಮಾಡಿ ಕೊಂದ.
ಇ. ತನ್ನ ಭೃತ್ಯರಾದ ಜಯ ವಿಜಯರಿಗೆ ಕೊಟ್ಟ ಆಶ್ವಾಸನೆಯಂತೆ ಅವರಿಬ್ಬರನ್ನೂ ವಿಷ್ಣುವೇ ಕೊಂದ.
ಈ. ತನ್ನ ಭೃತ್ಯರಾದ ಸನಕ ಸನಂದನರ ಮಾತು ಸುಳ್ಳಾಗದಂತೆ ತಾನೇ ಕೊಂದ.
ಉ. ಹಿರಣ್ಯಕಶಿಪು ತನಗೆ ಯಾವುದೇ ಬ್ರಹ್ಮನಿಂದ ಸೃಷ್ಟಿಯಾದ ಪ್ರಾಣಿಗಳಿಂದ ಸಾವು ಬರದಂತೆ ಕೋರಿದ್ದ. ಅದರಂತೆ ನರಸಿಂಹನಾಗಿ ತನಗೆ ತಾನೇ ಸೃಷ್ಟಿ ಮಾಡಿಕೊಂಡ ಕಂಬದಲ್ಲಿ.
ಊ. ದೇವತೆಗಳು ಹಿರಣ್ಯಕಶಿಪುವಿನ ಉನಟಳ ತಡೆಯಲಾರದೆ ಮೊರೆ ಹೊಕ್ಕಾಗ ನೀಡಿದ ಆಶ್ವಾಸನೆಯಂತೆ ವೇದಗಳು, ಬ್ರಾಹ್ಮಣರ ಮೇಲೆ ಆಕ್ರಮಣವಾದ ಕೂಡಲೇ ಅವತರಿಸಿದ.
ಹೀಗೆ ಪರಮಾತ್ಮ ಭಕ್ತಪರಾಧೀನ ಮತ್ತು ಭಾಗವತದ ಮಾತನ್ನು ಉಲ್ಲೇಖಿಸಿದ್ದಾರೆ.
ನಂದೇನದೋ ಸ್ವಾಮಿ ಸಕಲವೂ ನಿನ್ನದೇ🙏🙏
***
Toravi Lakshmi Nrusimha abhisheka February 2021
Ahobila Temple
Zarani Nrusimha in Bidar
No comments:
Post a Comment