SEARCH HERE

Friday, 1 February 2019

ಎಂತಹ ಎಣ್ಣೆಯ ದೀಪ ಯಾವ ದೋಷ ಪರಿಹಾರ which oil deepa for dosha parihara



ದೀಪ ಜ್ಞಾನ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ. ಒಂದು ದೀಪವನ್ನು ಉರಿಸುವುದರಿಂದ ಒಬ್ಬ ವ್ಯಕ್ತಿಯ ಜಾತಕದಲ್ಲಿರುವ ದೋಷಗಳ ನಿವಾರಣೆಯಾಗುತ್ತವೆ. ದೀಪಕ್ಕೆ ಹಾಕುವ ಎಣ್ಣೆಯು ಕೂಡ  ಎಂದೂ ಬತ್ತದ ಪ್ರೀತಿಯ  ಸಂಕೇತವಾಗಿದ್ದು, ಬತ್ತಿಯೂ ಕೆಲಸದ ಸಂಕೇತವಾಗಿದೆ.

ವಿವಿಧ ಎಣ್ಣೆಯನ್ನು ಹಾಕಿ ದೀಪ ಹಚ್ಚುವುದರಿಂದ ಜಾತಕದಲ್ಲಿರುವ ಗ್ರಹ ದೋಷಗಳು ನಿವಾರಣೆಯಾಗುತ್ತವೆ.

ರವಿ ದೋಷಕ್ಕೆ….

ರವಿ ದೋಷ ಇದ್ದರೆ ಪ್ರತಿ ಭಾನುವಾರ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವನಿಗೆ ತುಪ್ಪದ ದೀಪ ಹಚ್ಚಬೇಕು. ಇದರಿಂದ ಜೀವನದಲ್ಲಿ  ಯಶಸ್ಸು ಸಿಗುವುದು.

ಚಂದ್ರ  ದೋಷಕ್ಕೆ…

ಚಂದ್ರ ಗ್ರಹ ದೋಷವಿದ್ದರೆ ಪ್ರತಿ  ಸೋಮವಾರ ರಾತ್ರಿ ಸಮಯದಲ್ಲಿ 6 ರಿಂದ 7 ಗಂಟೆಯ ಒಳಗೆ ತುಳಸಿ ಗಿಡದ ಸಮೀಪ ಕಡಲೇಕಾಯಿ ಎಣ್ಣೆಯ ದೀಪ ಹಚ್ಚಬೇಕು. ಕಟಕ ರಾಶಿಯವರು ಚಂದ್ರನಿಗೆ ದೀಪ ಹಚ್ಚಿ ಪೂಜಿಸಿದರೆ ಪ್ರತಿ ಕ್ಷಣವೂ ಅವರ ಜೀವನವು ಅನಂದಮಯವಾಗಿರುತ್ತದೆ.

ಕುಜ ದೋಷಕ್ಕೆ…

ಕುಜ ದೋಷ ಇದ್ದರೆ ಪ್ರತಿ ಮಂಗಳವಾರ ಮಧ್ಯಾಹ್ನ ಮೂರ ರಿಂದ  ನಾಲ್ಕು ಗಂಟೆಯ ಸಮಯದೊಳಗೆ ಕುಜ ಗ್ರಹದ ವಿಗ್ರಹಕ್ಕೆ ತುಪ್ಪದ ದೀಪ ಹಚ್ಚಬೇಕು. ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ, ಕಾಳ ಸರ್ಪ ದೋಷಗಳು ನಿವಾರಣೆಯಾಗುವುದು.

ಬುಧ ದೋಷಕ್ಕೆ….

ಬುಧ ದೋಷಕ್ಕೆ ಬುಧವಾರ ಮಧ್ಯಾಹ್ನ 12 ರಿಂದ 1:30 ರ ಒಳಗೆ  ಬುಧ ಗ್ರಹದ ಸಮೀಪ ದೀಪ ಬೆಳಗಿಸಬೇಕು. ಮಿಥುನ ಮತ್ತು ಕನ್ಯಾ ರಾಶಿಯವರು ಬುಧವಾರ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು. ಜೊತೆಗೆ ಅವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಗಳಿಸುವರು .

ಗುರು ದೋಷಕ್ಕೆ…

ಗುರು ಗ್ರಹದ ದೋಷ ಇದ್ದರೆ ಪ್ರತಿ ಗುರುವಾರ ಮಧ್ಯಾಹ್ನ 1:30 ರಿಂದ 3 ಗಂಟೆಯ ಒಳಗೆ ಗುರು ಗ್ರಹದ ಸಮೀಪ  ದೀಪ ಹಚ್ಚಬೇಕು. ಧನಸ್ಸು ಮತ್ತು ಮೀನ ರಾಶಿಯವರು ಗುರುವಾರದ ದಿನ ಬೇವಿನ ಎಣ್ಣೆಯ ದೀಪವನ್ನು ಹಚ್ಚಿದರೆ ವಿದ್ಯಾ ಪ್ರಾಪ್ತಿ ಯಾಗುವುದು.

ಶುಕ್ರ ದೋಷಕ್ಕೆ….

ಶುಕ್ರ ದೋಷ ನಿವಾರಣೆಗೆ ಪ್ರತಿ ಶುಕ್ರವಾರ ಬೆಳಗ್ಗೆ 10:30 ರಿಂದ 12 ಗಂಟೆಯ ಒಳಗೆ ದೇವಿ ದೇವಾಲಯದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚಬೇಕು. ವೃಷಭ ಮತ್ತು ತುಲಾ ರಾಶಿಯವರು ಶುಕ್ರವಾರದ ದಿನ ಕೊಬ್ಬರಿ ಎಣ್ಣೆಯ ಅಥವಾ ತುಪ್ಪದ ದೀಪ ಹಚ್ಚಬೇಕು ಆಗ ಅವರು ಉತ್ತಮ ಆರೋಗ್ಯ ಪಡೆಯಬಹುದು.

ಶನಿ ದೋಷಕ್ಕೆ…

ಶನಿ ದೋಷ ಇದ್ದರೆ, ಸಾಡೇಸಾತಿ ಶನಿ ಇದ್ದರೆ ಮತ್ತು ಪಂಚಮ ಶನಿ ಇದ್ದರೆ ಶನಿ ದೇವಾಲಯದಲ್ಲಿ ಎಳ್ಳೆಣ್ಣೆ ದೀಪವನ್ನು ಬೆಳಗ್ಗೆ 9 ರಿಂದ 10:30 ರ ಒಳಗೆ ದೀಪವನ್ನು ಹಚ್ಚಬೇಕು.

ಮಕರ ಮತ್ತು ಕುಂಭ ರಾಶಿಯವರು ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿದರೆ ಮನಸ್ಸಿಗೆ ಶಾಂತಿ ಮತ್ತು ಧನ ಪ್ರಾಪ್ತಿಯಾಗುವುದು.

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಹಾಗು ಅದರ ಮಹತ್ವವನ್ನು ತಿಳಿಯೋಣ

ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ.

ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು,ನಿರುತ್ಸಾಹ, ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತುದೋಷಕ್ಕೆ, ಅಪಮೃತ್ಯು, ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ ತೊಂದರೆ ಯಾಗುತ್ತಿದ್ದರೆ, ಶತೃಗಳ ಕಾಟ ಹೆಚ್ಚಿದ್ದರೆ, ಮದುವೆ ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ಅನುಭವಿಸುತಿದ್ದರೆ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.

* ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು.* ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗೆ 11.00ರಿಂದ 12.30 ವರೆಗೆ ಹಚ್ಚಬಹುದು.

,* ನಿಂಬೆದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ.
* ನಿಂಬೆಹಣ್ಣಿನ ದೀಪವನ್ನು ಹಚ್ಚಿಸಿ ನಂತರ ದೇವಿಗೆ ಅಷ್ಟೋತ್ತರ ಮತ್ತು ಪೂಜೆಯನ್ನು ಮಾಡಿಸಬೇಕು.

* ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆರ್ಶಿವಾದವನ್ನು ತೆಗೆದುಕೊಳ್ಳಬೇಕು.

,*ಯಾರಿಗೆ ಸಮಸ್ಸೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರುಬೇಕಾದರು ದೀಪವನ್ನು ಹಚ್ಚಬಹುದು ಆದರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.

ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕು ಆರೋಗ್ಯ ಸರಿಇಲ್ಲದಿದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು.

ಮಕ್ಕಳ ಹುಟ್ಟುಹಬ್ಬ, ಮದುವೆಯಾದದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.

ಒಂದು ದೀಪ ಹಚ್ಚುವುದರಿಂದ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು.

********

No comments:

Post a Comment