verify before administering
ಮೂತ್ರ ಉರಿ ಸಮಸ್ಯೆ ನಿವಾರಣೆಗೆ ಮನೆಮದ್ದು
ಮೂತ್ರ ಉರಿ ಸಮಸ್ಯೆ ನಿವಾರಣೆಗೆ ಮನೆಮದ್ದು
Dr.Sri
ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುವುದು. ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ ಕಂಡು ಬರುವುದು. ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಕುಡಿದು ಈ ಸಮಸ್ಯೆಗೆ ಗುಡ್‌ಬೈ ಹೇಳಿ.
🍎🍐🍊🍋🍏🍅🍑🥭
ಯುಟಿಐ(Urinary Tract Infection) ಅಂದರೆ ಮೂತ್ರ ಉರಿ ಸಮಸ್ಯೆ ಬಂದರೆ ಅಸಾಧ್ಯವಾದ ನೋವು ಕಂಡು ಬರುವುದು. ಈ ಮೂತ್ರ ಉರಿಗೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಗರ್ಭಕೋಶ, ಕಿಡ್ನಿಗೆ ಕೂಡ ತೊಂದರೆ ಉಂಟಾಗುವುದು.
ಯುಟಿಐ ಉಂಟಾದಾಗ ಮೂತ್ರ ಮಾಡುವಾಗ ತುಂಬಾ ಉರಿ ಉಂಟಾಗಿ ಮೂತ್ರ ಸರಿಯಾಗಿ ಹೀಗುವುದಿಲ್ಲ, ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ಕೆಟ್ಟ ವಾಸನೆ ಬೀರುವುದು.
ಈ ಸಮಸ್ಯೆಗೆ ಅತ್ಯುತ್ತಮವಾದ ಪರಿಹಾರವೆಂದರೆ ಎಂದು ದಾಳಿಂಬೆ ಜ್ಯೂಸ್.
ಮೂತ್ರ ಉರಿ ಕಂಡು ಬಂದರೆ ಸಾಕಷ್ಟು ನೀರು ಕುಡಿಯಬೇಕು. ನೀರು ಜಾಸ್ತಿ ತೆಗೆದುಕೊಳ್ಳುವುದರಿಂದ ದೇಹದಲ್ಲಿರುವ ಮೂತ್ರ ಸೋಂಕಿಗೆ ಕಾರಣವಾದ ಬ್ಯಾಕ್ಟಿರಿಯಾವನ್ನು ಹೊರ ಹಾಕುವುದು ಹಾಗೂ ಕಿಡ್ನಿಯನ್ನು ಸಂರಕ್ಷಣೆ ಮಾಡುವುದು.
ಉರಿಮೂತ್ರ ಸಮಸ್ಯೆ ಬಂದಾಗ ದಾಳಿಂಬೆ ಜ್ಯೂಸ್ ಕುಡಿಯಿರಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಉರಿಮೂತ್ರ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಇನ್ನು ದಾಳಿಂಬೆ ಜ್ಯೂಸ್ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ಮ್ಯಾಗ್‌ಜಿನ್‌ವೊಂದರಲ್ಲಿ ಪ್ರಕಟವಾದ UCLA ವರದಿ ಹೇಳಿದೆ.
ದಾಳಿಂಬೆಯಲ್ಲಿ ವಿಟಮಿನ್ ಸಿ
ಇದ್ದು ಇದು ಮೂತ್ರ ಉರಿ ಕಡಿಮೆ ಮಾಡಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.
ದಾಳಿಂಬೆಯನ್ನು ಜ್ಯೂಸ್ ಮಾಡಿ ತಿನ್ನಬಹುದು, ಹಾಗೆ ತಿನ್ನುವುದಾದರೆ ಒಂದು ಬೌಲ್‌ನಷ್ಟು ದಾಳಿಂಬೆ ತಿನ್ನಿ.
ಮೂತ್ರ ಉರಿ ಕಡಿಮೆ ಮಾಡುವ ಇತರ ಆಹಾರಗಳು
ಕ್ರ್ಯಾನ್ ಬೆರ್ರಿ ಜ್ಯೂಸ್ ವಿಟಮಿನ್ ಸಿ ಆಹಾರಗಳು (ಕಿತ್ತಳೆ, ದ್ರಾಕ್ಷಿ, ಕಿವಿ ಹಣ್ಣು)
********
No comments:
Post a Comment