SEARCH HERE

Friday 1 February 2019

ಆಮೆಯ ಉಂಗುರ tortoise ring


ಶಾಸ್ತ್ರದ ಪ್ರಕಾರ ಆಮೆಯ ಉಂಗುರ ಯಾಕೆ ಧರಿಸುತ್ತಾರೆ .?

2500 ವರ್ಷಗಳ ಹಿಂದೆಯ ಬೆರಳಿನ ಉಂಗುರಗಳ ಧಾರಣೆ ಇತ್ತು ಅಂತ ಇತಿಹಾಸ ಸ್ಪಷ್ಟನೆ ನೀಡಿದೆ,

ಇತಿಹಾಸದ ಪ್ರಕಾರ ಈಜಿಪ್ಟ್ ಹಳೆಯ ನಾಗರಿಕರು ಮೊದಲು ವಿವಿಧ ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಿದ್ದರು ಎಂದು ತಿಳಿದು ಬಂದಿದೆ,

 ಸಧ್ಯ ಈಗಿನ ಜನರು ಸಾಮಾನ್ಯವಾಗಿ ಹಲವು ಆಕೃತಿಯ ಉಂಗುರವನ್ನ ತೊಟ್ಟಿರುತ್ತಾರೆ, ಬೇರೆ ಆಭರಣಗಳ ತರ ಉಂಗುರಕ್ಕೆ ಲಿಂಗ ಬೇಧವಿಲ್ಲ.

ಹಲವು ಬಗೆಯ ಉಂಗುರಗಳ ಧಾರಣೆ ನಾವು ನೋಡಿರುತ್ತವೆ ಕೆಲವರು ವಜ್ರದ ಉಂಗುರ ಕೆಲವರು ಬೆಳ್ಳಿ ಹಾಗು ಚಿನ್ನದ ಉಂಗುರ ಇನ್ನು ಕೆಲವರು ಅರಳುಗಳನ್ನೂ ಬಳಸಿ ಉಂಗುರಗಳನ್ನು ಮಾಡಿಸಿ ಕೊಂಡಿರುತ್ತಾರೆ.

 ಇಂತಹ ಉಂಗುರಗಳ ಆಯ್ಕೆ ಅವರ ರಾಶಿ ಪ್ರಕಾರ ಮಾಡಿ ಕೊಂಡಿರುತ್ತಾರೆ, ಅದರಿಂದ ಅವರಿಗೆ ಶುಭ ಸಂಭವಿಸುತ್ತದೆ ಅನ್ನುವುದು ಗೊತ್ತಿರುವ ವಿಷಯ

ಆದರೆ ಸಧ್ಯ ಆಮೆ ಉಂಗುರ ಒಂದು ತುಂಬಾ ಪ್ರಚಲಿತದಲ್ಲಿದೆ ಆಮೆ ಉಂಗುರ ಧರಿಸಿದರೆ ಏನು ಲಾಭ ಅಂತ ಇಂದು ನಿಮಗೆ ನಾವು ತಿಳಿಸುತ್ತೇವೆ.

ಆಮೆ ಆಕಾರದ ಉಂಗುರಯಾವುದೇ ಹೊಸ ಫ್ಯಾಶನ್ ಅಲ್ಲ ಅದಕ್ಕೂ ಕಾರಣ ವಿದೆ ಆಮೆ ಉಂಗುರ ಧರಿಸುವುದರಿಂದ ನಿಮ್ಮ ವಾಸ್ತು ದೋಷ ನಿವಾರಣೆ ಯಾಗುತ್ತದೆ,

ಮನುಷ್ಯನ ಜೀವನದ ಹಲವಾರು ದೋಷ ನಿವಾರಣೆಗೂ ಸಹಕಾರಿ, ಎಲ್ಲಕಿಂತ ಉಪಯೋಗವೆಂದರೆ ಆತ್ಮ ವಿಶ್ವಾಸ ಹೆಚ್ಚುತ್ತದೆ ಹಾಗೆ ಶಾಸ್ತ್ರದ ಪ್ರಕಾರ ಆಮೆ ನೀರಲ್ಲಿ ವಾಸಮಾಡುತ್ತದೆ,

ಅಮ್ಮೆ ಪರಮೇಶ್ವರ ವಿಷ್ಣುವಿನ ಅವತಾರ ಸಮುದ್ರ ಮಂಥನ ಮಾಡುವಾಗ ಆಮೆ ಉದ್ಭವವಾಯಿತು ಎಂದು ಹೇಳುತ್ತಾರೆ ಈ ಕಾರಣ ದಿಂದ ವಾಸ್ತು ಶಾಸ್ತ್ರದಲ್ಲಿ ಆಮೆಗೆ ಬಹಳಷ್ಟು ಮಹತ್ವ ವಿದೆ ಯಾಕೆಂದರೆ ಆಮೆಗೆ ಶ್ರೀ ಮಹಾ ಲಕ್ಷ್ಮಿಯ ಕೃಪೆ ಇದೆ ಇದರಿಂದ ಧನಲಕ್ಷ್ಮೀ ಪ್ರಾಪ್ತಿಯಾಗುತ್ತಾಳೆ.

ಅಷ್ಟೇ ಅಲ್ಲದೆ ಧೈರ್ಯ ಮತ್ತು ಶಾಂತಿಗು ಸಮೃದ್ಧಿಗೂ ಪ್ರತೀಕವಾಗಿದೆ ಈ ಉಂಗುರವನ್ನ ನೀವು ಬೆಳ್ಳಿ ಬಳಸಿ ತಯಾರಿಸಿ ಕೊಳ್ಳಬಹುದು,

 ಆದರೆ ಉಂಗುರ ಧರಿಸುವಾಗ ಆಮೆಯ ತಲೆ ಧರಿಸುವವರ ಕಡೆ ತಿರುಗಿರ ಬೇಕು. ಇಲ್ಲವಾದರೆ ದುಡ್ಡು ಬರುವ ಬದಲು ಹೋಗುವುದು ಪಕ್ಕ.

ಸರ್ವಜನ ಸುಖಿನೋಭವಂತು

*******

No comments:

Post a Comment