SEARCH HERE

Friday 1 February 2019

ವೈಶ್ವದೇವ vaishwa deva


ಪ್ರತಿದಿನ ಊಟಕ್ಕೂ ಮುಂಚೆ. ಗೃಹಸ್ಥರು ಈ "ವೈಶ್ವದೇವ"ಯಜ್ನವನ್ನು ಮಾಡುತ್ತಾರೆ. ಅಂದರೆ, ಅಗ್ನಿಗೆ,  ಮಾಡಿದ ಅಡಿಗೆಯ ಸ್ವಲ್ಪ ಭಾಗವನ್ನು ಅರ್ಪಿಸುವುದು..
ಈ ಯಜ್ಞದ ಅವಶ್ಯಕತೆ ಏನು?ಅನ್ನೋದು ಭಾಳ ದಿನದಿಂದ ನನ್ನ ಕಾಡಿತ್ತು. ಆ ನಂತರ ನಮ್ಮ ತಂದೆಯವರು ಹೇಳಿದ ಪ್ರಮಾಣವಾಕ್ಯಗಳಿಂದ ಸ್ಫುಟವಾಯಿತು..
ಅದೇನೆಂದರೆ, ನಾವು ಸಸ್ಯಾಹಾರಿಗಳೂ, ಸಸ್ಯಗಳನ್ನು ಕೊಂದು ಆ ಪಾಪದಿಂದ ಲೆಪಿತರಾಗಿರುತ್ತೇವೆ..
ಅದನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಯೇ, ಆ ಭಾಗವನ್ನು ಅಗ್ನಿಗೆ ಅರ್ಪಿಸುವುದು..

ಅಂದ ಮೇಲೆ, ಒಂದಂತೂ ಸ್ಪಷ್ಟವಾಯಿತು.. ಕೇವಲ ಪ್ರಾಣಿವಧೆಯೊಂದೆ ಹಿಂಸೆಯಲ್ಲ.. ಸಸ್ಯಹಿಮ್ಸೆಯೂ ಹಿಂಸೆಯೇ..ಆ ಪಾಪದ ಪ್ರಯಶ್ಚಿತ್ತವೆ "ವೈಶ್ವದೇವ."

"ಮಣಿಕ":-  ಅಗ್ನಿಹೋತ್ರ ಮಾಡುವಾಗ ಬಳಿಯಲ್ಲಿ ಇಟ್ಟಿರುವ ಒಂದು ಶೇಷಪಾತ್ರೆ.

"ವೈಶ್ವದೇವ":-   ಆಹಾರ ಸಮರ್ಪಣೆ, ಸೇವನೆ ಎಂದರ್ಥ.
ಯಾವುದೇ ವ್ಯಕ್ತಿಯು ತಾನು ಆಹಾರವನ್ನು ಸೇವಿಸುವುದಕ್ಕೆ ಮೊದಲು ಎಲ್ಲ ದೇವತೆಗಳಿಗೂ, ಪ್ರಾಣಿಗಳಿಗೂ, ಅತಿಥಿಗಳಿಗೂ ಸಾಂಕೇತಿಕವಾಗಿ ಆಹಾರವನ್ನು ಸಮರ್ಪಿಸಿ, ಅನಂತರವೇ ಅಂದರೆ ಅವರೆಲ್ಲರೂ ತೃಪ್ತರಾಗಿದ್ದಾರೆ ಎಂದು ತಿಳಿದಬಳಿಕ ತಾನು ಆಹಾರವನ್ನು ಸೇವಸಬೇಕು.‌
ಪ್ರತಿಯೊಬ್ಬನ ಹೊಟ್ಟೆಯಲ್ಲೂ 'ವೈಶ್ವಾನರ' ಎಂಬ ಅಗ್ನಿಯಿರುತ್ತಾನೆ.
ಅವನಿಗೆ ಅನ್ನವೆಂಬ ಹವಿಸ್ಸನ್ನು ಸಮರ್ಪಿಸಬೇಕು.
ಇದಕ್ಕೆ 'ಪ್ರಾಣಾಗ್ನಿಹೋತ್ರ'ವೆಂದು ಕರೆಯುತ್ತಾರೆ.

*******


ವೈಶ್ವದೇವ ಮಹತ್ವ

ಖಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ತಾಭಿಃ ಸ್ವರ್ಗಂ ನ ವಿಂದತಿ ||

ಜೀವನೋಪಯುಕ್ತವಾಗಿ ಆಹಾರವನ್ನು ಸಿದ್ಧಪಡಿಸಿಕೊಳ್ಳುವಾಗ ಹಿಂಸಾರೂಪವಾದ ಐದು ದೋಷಗಳು ತಪ್ಪದೇ ಬರುವವು. ಅವನ್ನು ಸೂನಾ ಎಂಬುದಾಗಿ ಶಾಸ್ತ್ರದಲ್ಲಿ ಕರೆದಿರುವರು.ಅವು  ಯಾವುವೆಂದರೆ :- 
ಖಂಡನೀ = ಭತ್ತದ ಧಾನ್ಯವನ್ನು ಸಂಗ್ರಹಿಸುವಾಗ ಪೈರನ್ನು ಕುಯ್ಯಿವುದರಿಂದ ಸಸ್ಯ ಪ್ರಾಣಿ ಹಿಂಸೆ

೨ ಪೇಷಣೀ = ಧಾನ್ಯವನ್ನು ಬಡಿದು , ಕುಟ್ಟಿ ಬೀಸುವಾಗ ಸಂಭವಿಸಬಹುದಾದ ಪ್ರಾಣಿಹಿಂಸೆ

೩  ಚುಲ್ಲೀ = ಒಲೆಯೊಳಗೆ ಬೆಂಕಿ ಹಾಕಿ ಉರಿಸುವಾಗ ಸಂಭವಿಸುವ ಪ್ರಾಣಿಹಿಂಸೆ

೪ ಉದಕುಂಭೀ = ನೀರನ್ನು ತರುವಾಗ ,ಕಾಯಿಸುವಾಗ ಸಂಭವಿಸುವ ಪ್ರಾಣಿಹಿಂಸೆ


೫ ಮಾರ್ಜನೀ = ಒಲೆ ಮುಂತಾದುವನ್ನು ಗುಡಿಸಿಸಾರಿಸುವಾಗ ಸಂಭವಿಸುವ ಪ್ರಾಣಿಹಿಂಸೆ.  ಇವೆ ಪಂಚಸೂನಾ = ಐದು ಪಾಪಗಳು ಇವು ಸದ್ಗತಿಗೆ ಪ್ರತಿಬಂಧಕವು . ಇವು ವೈಶ್ವದೇವ ಮಾಡುವುದರಿಂದ ಪರಿಹಾರವಾಗುತ್ತವೆ. ಆದ ಕಾರಣ ವೈಶ್ವದೇವ ಮಾಡಿ ಈ ಪಾಪಗಳನ್ನು ಪರಿಹರಿಸಿಕೊಂಡು ಉಳಿದ ಅನ್ನವನ್ನು ಭುಂಜಿಸುವುದು ಶ್ರೇಷ್ಠ
*********

cವೈಶ್ವದೇವ/ಅಗ್ನಿಕಾರ್ಯ ಮಾಡುವವರಿಗೆ ಈ ಚಿತ್ರಪಟ ಅಗ್ನಿಯ ಧ್ಯಾನಶ್ಲೋಕ ಹೇಳುವಾಗ ತುಂಬಾ ಉಪಯೋಗಕ್ಕೆ  ಬರುತ್ತದೆ



agnihotra more here  WHAT IS AGNIHOTRA



No comments:

Post a Comment