SEARCH HERE

Tuesday 30 March 2021

ಅಗ್ನಿಹೋತ್ರ ಏನು ಏಕೆ ಹೇಗೆ what is agnihotra




ಅಗ್ನಿಹೋತ್ರ
ಅಗ್ನಿಹೋತ್ರದ ಮಹತ್ವ ಅಪಾರ... ನಿತ್ಯವೂ ತಪ್ಪದೇ ಮಾಡಿ ! 

ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ. ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ.
ಅಗ್ನಿಹೋತ್ರದ ಮಹತ್ವ
ಪಂಚಮಹಾಯಜ್ಞಗಳಲ್ಲಿ ಸುಲಭವಾಗಿ ಮತ್ತು ಎಲ್ಲರೂ ಮಾಡಬಹುದಾದ ಯಜ್ಞವೆಂದರೆ ಅಗ್ನಿಹೋತ್ರ ! ವೇದ ಮತ್ತು ವೈದಿಕ ಸಂಸ್ಕೃತಿಯಷ್ಟೇ ಅಗ್ನಿಹೋತ್ರದ ಇತಿಹಾಸವೂ ಪ್ರಾಚೀನವಾಗಿದೆ. ಅನಾದಿಕಾಲದಿಂದಲೂ ಅಗ್ನಿಹೋತ್ರವು ಮನುಷ್ಯನ ದೈನಂದಿನ ದಿನಚರಿಯಲ್ಲಿ ಸಂಧ್ಯೆಯ ರೂಪದಲ್ಲಿ ಹಾಸು ಹೊಕ್ಕಾಗಿದೆ. ಶಾಸ್ತ್ರಗಳಿಗೆ ವಿರುದ್ಧವಾದ ಮನುಷ್ಯನ ಕರ್ಮಗಳಿಂದ ಪ್ರಕೃತಿಯಲ್ಲಿ ಆಗುವ ಮಾಲಿನ್ಯವನ್ನು ಶಮನಗೊಳಿಸುವ ಉಪಕರಣವೆಂದರೆ ಅಗ್ನಿಹೋತ್ರ. ದೇವಯಜ್ಞ ಅಥವಾ ಅಗ್ನಿಹೋತ್ರವನ್ನು ಮಾಡುವುದರಿಂದ ವಾಯು, ಮಳೆ ಮತ್ತು ಜಲ ಇವುಗಳ ಶುದ್ಧಿಯಾಗುತ್ತದೆ, ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುತ್ತದೆ.
ಅಗ್ನಿಹೋತ್ರ ಹೋಮ ಸಾಮಗ್ರಿಗಳು
ಹವನಪಾತ್ರ : ಅಗ್ನಿಹೋತ್ರಕ್ಕಾಗಿ ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆ
ಗೋವಂಶದ ಬೆರಣಿ : ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ತಯಾರಿಸಲು ದೇಶಿ ಗೋವುಗಳ ಸೆಗಣಿಯ ಬೆರಣಿ
ಅಕ್ಕಿ (ಅಕ್ಷತೆ) : ಪಾಲಿಶ್ ಮಾಡದ ಅಖಂಡ ಅಕ್ಕಿಯನ್ನೇ ಉಪಯೋಗಿಸಬೇಕು
ಆಕಳ ತುಪ್ಪ : ದೇಶಿ ಆಕಳಿನ ತುಪ್ಪವನ್ನು ಬಳಸಿ
ಶುದ್ಧ ಕರ್ಪೂರ : ಇದನ್ನು ಅಗ್ನಿ ಪ್ರಜ್ವಲಿಸಲು ಅಥವಾ ಆಹುತಿ ಎಂದು ಅರ್ಪಿಸಲು
ಇತರ ಸಾಮಗ್ರಿಗಳು : ಬೆಂಕಿ ಪೊಟ್ಟಣ, ತಾಮ್ರದ ತಟ್ಟೆ, ಚಮಚ, ಕೈಬೀಸಣಿಗೆ, ವಿಭೂತಿ ಸಂಗ್ರಹಿಸಿಡಲು ಗಾಜಿನ ಅಥವಾ ಮಣ್ಣಿನ ಪಾತ್ರೆ
ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಮಾಡಬೇಕು
ಸೃಷ್ಟಿಯಲ್ಲಿರುವ ಪ್ರತಿಯೊಂದು ವಿಷಯವು ಸ್ಥಳ, ಕಾಲ ಮತ್ತು ಸಮಯಕ್ಕೆ ಬದ್ಧವಾಗಿರುತ್ತದೆ. ಕಾಲಕ್ಕನುಸಾರ ಪ್ರತಿಯೊಂದು ವಿಷಯದ ಸ್ಥಳ ಮತ್ತು ಅದಕ್ಕನುಸಾರ ಆ ಕೃತಿ ಘಟಿಸಲು ಬೇಕಾಗುವ ಸಮಯವು ಈಶ್ವರನ ಯೋಜನೆಯೇ ಆಗಿರುತ್ತವೆ. ಆದ್ದರಿಂದ ಯಾವುದಾದರೊಂದು ಕೃತಿಯನ್ನು ಕಾಲಕ್ಕನುಸಾರ (ಮುಹೂರ್ತಕ್ಕನುಸಾರ) ಮಾಡಿದರೆ ವ್ಯಕ್ತಿಗೆ ಅಪೇಕ್ಷಿತ ಲಾಭ ಸಿಗುತ್ತದೆ. ಆದುದರಿಂದ ಸೂರ್ಯೋದಯದ ಸಮಯದಲ್ಲಿ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡುವುದಕ್ಕೆ ಮಹತ್ವವಿದೆ. – ಸೌ. ಪ್ರಿಯಾಂಕಾ ಗಾಡ್ಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ನಿಮ್ಮ ಊರಿನ ಸೂರ್ಯೋದಯ ಹಾಗೂ ಸೂರ್ಯಾಸ್ತದ ನಿಖರವಾದ ಸಮಯವನ್ನು ತಿಳಿದುಕೊಳ್ಳಲು ಸನಾತನ ಪಂಚಾಂಗ ಆ್ಯಪ ಉಪಯೋಗಿಸಿ!
ಅಗ್ನಿಹೋತ್ರದ ಪ್ರತ್ಯಕ್ಷ  ಕೃತಿಯನ್ನು ಮಾಡುವ ವಿಧಾನ
ಅ. ಯೋಗ್ಯ ದಿಕ್ಕು : ಅಗ್ನಿಹೋತ್ರ ಮಾಡುವಾಗ ಪೂರ್ವದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಆ. ಅಗ್ನಿಹೋತ್ರಕ್ಕಾಗಿ ಅಗ್ನಿಯನ್ನು ಪ್ರಜ್ವಲಿಸುವ ಕೃತಿ : ಹವನಪಾತ್ರೆಯಲ್ಲಿ ಎಲ್ಲಕ್ಕಿಂತ ಕೆಳಗೆ ಸಣ್ಣ ಆಕಾರದ ಒಂದು ಬೆರಣಿಯ ಚಪ್ಪಟೆ ತುಂಡನ್ನು ಇಡಬೇಕು. ಅದರ ಮೇಲೆ ತುಪ್ಪವನ್ನು ಹಚ್ಚಿದ ಬೆರಣಿಗಳ ತುಂಡುಗಳನ್ನು (ಬೆರಣಿಯ ನೇರ ಮತ್ತು ಅಡ್ಡ ತುಂಡುಗಳ ೨–೩ ಪದರು) ಇಡಬೇಕು. ಎರಡು ಬೆರಣಿಗಳ ನಡುವೆ ಗಾಳಿ ಓಡಾಡುವ ಹಾಗೆ ಟೊಳ್ಳಿರಬೇಕು. ನಂತರ ಬೆರಣಿಯ ಒಂದು ತುಂಡಿಗೆ ಆಕಳ ತುಪ್ಪವನ್ನು ಹಚ್ಚಿ ಪ್ರಜ್ವಲಿಸಬೇಕು ಮತ್ತು ಆ ತುಂಡನ್ನು ಹವನಪಾತ್ರೆಯಲ್ಲಿಡಬೇಕು. ಸ್ವಲ್ಪ ಸಮಯದಲ್ಲಿ ಬೆರಣಿಗಳ ಎಲ್ಲ ತುಂಡುಗಳು ಪ್ರಜ್ವಲಿಸುವವು. ಅಗ್ನಿಯನ್ನು ಪ್ರಜ್ವಲಿಸಲು ಗಾಳಿ ಹಾಕಲು ಕೈಬೀಸಣಿಗೆಯನ್ನು ಉಪಯೋಗಿಸಬೇಕು; ಬಾಯಿಯಿಂದ ಊದಿ ಅಗ್ನಿಯನ್ನು ಪ್ರಜ್ವಲಿಸಬಾರದು, ಏಕೆಂದರೆ ಹೀಗೆ ಮಾಡುವುದರಿಂದ ಬಾಯಿಯಲ್ಲಿನ ರೋಗಜಂತುಗಳು ಅಗ್ನಿಯಲ್ಲಿ ಹೋಗುತ್ತವೆ. ಅಗ್ನಿಯನ್ನು ಪ್ರಜ್ವಲಿಸಲು ಸೀಮೆಎಣ್ಣೆಯಂತಹ ಜ್ವಲನಶೀಲ ಪದಾರ್ಥಗಳನ್ನು ಉಪಯೋಗಿಸಬಾರದು. ಅಗ್ನಿಯನ್ನು ಧೂಮರಹಿತವಾಗಿ ಪ್ರಜ್ವಲಿಸಬೇಕು, ಅಂದರೆ ಅದರಿಂದ ಹೊಗೆ ಬರಬಾರದು.

ಹವನ ಸಾಮಗ್ರಿಗಳನ್ನು ಅಗ್ನಿಗೆ ಅರ್ಪಿಸುವುದು
ಎರಡು ಚಿಟಿಕೆ ಅಕ್ಕಿಯನ್ನು ಅಂಗೈಯಲ್ಲಿ ಅಥವಾ ಒಂದು ತಾಮ್ರದ ತಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಅದರ ಮೇಲೆ ಕೆಲವು ಹನಿ ಆಕಳ ತುಪ್ಪವನ್ನು ಹಾಕಬೇಕು. ಸೂರ್ಯೋದಯಕ್ಕೆ (ಹಾಗೂ ಸೂರ್ಯಾಸ್ತದ) ಸರಿಯಾದ ಸಮಯದಲ್ಲಿ ಕೆಳಗೆ ನೀಡಿರುವ ಮಂತ್ರಗಳ ಪೈಕಿ ಮೊದಲನೆಯ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯ ಮಧ್ಯಮೆ (ಮಧ್ಯದ ಬೆರಳು), ಅನಾಮಿಕೆ (ಕಿರುಬೆರಳಿನ ಹತ್ತಿರದ ಬೆರಳು) ಮತ್ತು ಹೆಬ್ಬೆರಳಿನ ಚಿಟಿಕೆಯಲ್ಲಿ (ಈ ಸಮಯದಲ್ಲಿ ಹೆಬ್ಬೆರಳನ್ನು ಮೇಲ್ಮುಖವಾಗಿ ಅಂದರೆ ಆಕಾಶದತ್ತ ಮಾಡಿಡಬೇಕು) ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ತೆಗೆದುಕೊಂಡು ಅಗ್ನಿಯಲ್ಲಿ ಹಾಕಬೇಕು. (ಬೆರಳುಗಳ ಚಿಟಿಕೆಯಲ್ಲಿ ಹಿಡಿಸುವಷ್ಟು ಅಕ್ಕಿ ಸಾಕಾಗುತ್ತದೆ.) (ಚಿತ್ರ ನೋಡಿ)  ಆಮೇಲೆ ಎರಡನೇ ಸಾಲನ್ನು ಒಮ್ಮೆ ಹೇಳಬೇಕು ಮತ್ತು ಸ್ವಾಹಾ ಶಬ್ದವನ್ನು ಹೇಳಿದ ನಂತರ ಬಲಗೈಯಿಂದ ಮೇಲಿನ ಅಕ್ಕಿ–ತುಪ್ಪದ ಮಿಶ್ರಣವನ್ನು ಅಗ್ನಿಯಲ್ಲಿ ಹಾಕಬೇಕು.

ಅಗ್ನಿಹೋತ್ರ ಮಂತ್ರ
ಅ. ಸೂರ್ಯೋದಯದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ ।।

ಆ. ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕಾದ ಮಂತ್ರ

ಅಗ್ನಯೇ ಸ್ವಾಹಾ, ಅಗ್ನಯ ಇದಂ ನ ಮಮ । ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ ।।

ಅಗ್ನಿಹೋತ್ರ ಮಾಡುವಾಗ ಇದನ್ನು ಪಾಲಿಸಿ
ಮಂತ್ರಗಳ ಉಚ್ಚಾರವನ್ನು ಹೇಗೆ ಮಾಡಬೇಕು ?
ಮಂತ್ರಗಳ ಉಚ್ಚಾರವು ಅಗ್ನಿಹೋತ್ರದ ಸ್ಥಳದಲ್ಲಿ ಝೇಂಕರಿಸುವಂತಹ ನಾದಮಯ ರೀತಿಯಲ್ಲಿ, ಹೆಚ್ಚು ಗಡಿಬಡಿಯಿಂದಲೂ ಅಲ್ಲ (ವೇಗವಲ್ಲದ) ಮತ್ತು ಹೆಚ್ಚು ನಿಧಾನವಾಗಿಯೂ ಅಲ್ಲ, ಹೀಗೆ ಸ್ಪಷ್ಟ ಮತ್ತು ಗಟ್ಟಿಧ್ವನಿಯಲ್ಲಿ ಹೇಳಬೇಕು.

ಮಂತ್ರವನ್ನು ಹೇಳುವಾಗ ಭಾವ ಹೇಗಿರಬೇಕು ?
ಮಂತ್ರದಲ್ಲಿನ ಸೂರ್ಯ, ಅಗ್ನಿ, ಪ್ರಜಾಪತಿ ಈ ಶಬ್ದಗಳು ಈಶ್ವರ ವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ. ಇಡೀ ಸೃಷ್ಟಿಯನ್ನು ನಿರ್ಮಿಸುವ, ಅದನ್ನು ಧಾರಣೆ ಮಾಡುವ ಮತ್ತು ಅದರ ಪೋಷಣೆ ಮಾಡುವ ಪರಮಾತ್ಮನ ಶಕ್ತಿಯ ಕುರಿತು ಶರಣಾಗತಭಾವವನ್ನು ಈ ಮಂತ್ರದಲ್ಲಿ ಹೇಳಲಾಗಿದೆ; ಆದುದರಿಂದ ಈ ಮಂತ್ರಗಳನ್ನು ಶರಣಾಗತಭಾವದಿಂದ ಹೇಳಬೇಕು.

ಮಂತ್ರವನ್ನು ಯಾರು ಹೇಳಬೇಕು ?
ಮನೆಯಲ್ಲಿ ಒಬ್ಬರು ಅಗ್ನಿಹೋತ್ರವನ್ನು ಮಾಡುವಾಗ, ಮನೆಯಲ್ಲಿರುವ ಇತರ ಸದಸ್ಯರು ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದು, ಆಹುತಿ ನೀಡುವ ವ್ಯಕ್ತಿಯೊಂದಿಗೆ ಅಗ್ನಿಹೋತ್ರದ ಮಂತ್ರವನ್ನು ಹೇಳಬಹುದು. – ಡಾ. ಶ್ರೀಕಾಂತ ಶ್ರೀಗಜಾನನಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

ಅಗ್ನಿಹೋತ್ರವಾದ ನಂತರ ಇದನ್ನು ಮಾಡಿ
ಧ್ಯಾನ ಧಾರಣೆ
ಅಗ್ನಿಹೋತ್ರವಾದ ನಂತರ ವಾತಾವರಣದ ಶುದ್ಧಿಯಾಗುವುದರಿಂದ ಇತರ ಸಮಯಕ್ಕೆ ಹೋಲಿಸಿದರೆ ಮನಸ್ಸು ಏಕಾಗ್ರವಾಗಲು ಹೆಚ್ಚಿನ ಸಮಯ ತಗುಲುವುದಿಲ್ಲಿ. ಆದುದರಿಂದ ಪ್ರತಿಯೊಂದು ಅಗ್ನಿಹೋತ್ರದ ನಂತರ ಸಾಧ್ಯವಿದ್ದಷ್ಟು ಹೆಚ್ಚು ಸಮಯವನ್ನು ಧ್ಯಾನಕ್ಕಾಗಿ ಇಡಬೇಕು. ಕನಿಷ್ಠ ಅಗ್ನಿಯು ಶಾಂತವಾಗುವ ವರೆಗಾದರೂ ಧ್ಯಾನವನ್ನು ಮಾಡಬೇಕು. ಅದರಲ್ಲೂ ಮನೆ ಮಂದಿಯೆಲ್ಲ ಸೇರಿ ಕುಳಿತು ಇಷ್ಟ ದೇವತೆಯ ನಾಮ ಜಪಿಸಿದರೆ ಎಲ್ಲರಿಗೂ ಅದರ ಲಾಭವಾಗುತ್ತದೆ. ಯಾವ ನಾಮ ಜಪಿಸಬೇಕು ಎಂದು ತಿಳಿದಿಲ್ಲವೇ? ಇಲ್ಲಿ ಕ್ಲಿಕ್ ಮಾಡಿ, ತಿಳಿದುಕೊಳ್ಳಿ !

ವಿಭೂತಿ (ಭಸ್ಮ) ತೆಗೆದಿಡಬೇಕು
ಮುಂದಿನ ಅಗ್ನಿಹೋತ್ರವನ್ನು ಮಾಡುವುದಕ್ಕಿಂತ ಸ್ವಲ್ಪ ಮೊದಲು ಹವನಪಾತ್ರೆಯಲ್ಲಿನ ವಿಭೂತಿ (ಭಸ್ಮ)ಯನ್ನು ತೆಗೆದು ಗಾಜಿನ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಡಬೇಕು.

ಅಗ್ನಿಹೋತ್ರದ ವಿಭೂತಿಯ ಅನೇಕ ಉಪಯೋಗಗಳು
೧. ವಿಭೂತಿಯನ್ನು ಮನೆಯಲ್ಲಿ ಊದುವುದರಿಂದ ವಾಸ್ತು ಶುದ್ಧಿಯಾಗುತ್ತದೆ ೨. ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯ ವಿಕಾರಗಳಲ್ಲಿ ಸುಧಾರಣೆಯಾಗಲು ಸಹಾಯವಾಗುತ್ತದೆ ೩. ಪ್ರಾಣಶಕ್ತಿ ಕಡಿಮೆಯಾಗಿದೆ ಎನಿಸಿದಾಗ ಚಿಟಿಕೆ ವಿಭುತಿಯನ್ನು ಸೇವಿಸುವುದರಿಂದ ಪ್ರಾಣಶಕ್ತಿಯಲ್ಲಿ ಹೆಚ್ಚಳವಾಗುತ್ತದೆ ೪. ಚಿಟಿಕೆ ವಿಭೂತಿಯನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ತೀರ್ಥ ಪ್ರಾಶನದ ಲಾಭವಾಗುತ್ತದೆ ೫. ಹೋಟೆಲ ಅಥವಾ ಹೊರಗಿನ ಊಟ-ತಿಂಡಿಯನ್ನು ಸೇವಿಸುವ ಮೊದಲು ಅದರ ಮೇಲೆ ಚಿಟಿಕೆ ವಿಭೂತಿಯನ್ನು ಸಿಂಪಡಿಸಿದರೆ ಅದರಲ್ಲಿರಬಹುದಾದ ನಕಾರಾತ್ಕಕ ಶಕ್ತಿ ನಾಶವಾಗುತ್ತದೆ ೬. ಕೈದೋಟದಲ್ಲಿರುವ ಗಿಡ-ಮರಗಳಿಗೆ ಈ ವಿಭೂತಿಯನ್ನು ಗೊಬ್ಬರವೆಂದೂ ಉಪಯೋಗಿಸಬಹುದು

ಅಗ್ನಿಹೋತ್ರದ ಅನೇಕ ಲಾಭಗಳು
೧. ಚೈತನ್ಯದಾಯಕ ಮತ್ತು ಔಷಧಿ ವಾತಾವರಣ ನಿರ್ಮಾಣವಾಗುತ್ತದೆ
೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ
೩. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ
೪. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುತ್ತದೆ
೫. ರೋಗಜಂತುಗಳ ಪ್ರತಿರೋಧ
-source: sanatana samsthe
***

ಅಗ್ನಿಹೋತ್ರ : ಏನು, ಏಕೆ, ಹೇಗೆ?

ಅಗ್ನಿಹೋತ್ರ : ಪರಿಸರವನ್ನು ಶುದ್ಧಗೊಳಿಸಿಕೊಳ್ಳಲು ಸುವರ್ಣಮಾರ್ಗ

ನಮ್ಮ ಸನಾತನ ಸಂಸ್ಕೃತಿಯ ಅಡಿಪಾಯವಿರುವುದು ಯಜ್ಞ, ಯಾಗಗಳಲ್ಲಿ. ಯಜ್ಞ ಯಾಗಗಳೆಂದರೆ ಕೇವಲ ಒಂದು ಹೋಮವನ್ನು ಆಚರಿಸುವುದು, ಮನಸ್ಸಿನ ಕಾಂಕ್ಷೆಗಳನ್ನು ದೇವರಮುಂದಿಟ್ಟು ಅದನ್ನು ಫಲಿಸಿಕೊಳ್ಳುವುದು ಎಂಬಷ್ಟು ಸುಲಭವಾಗಿ ವ್ಯಾಖ್ಯಾನಿಸುವ ಸಂಗತೆಯಲ್ಲ. ಅದರಲ್ಲಿ ಅಡಕವಾದದ್ದು ಮುಖ್ಯವಾಗಿ ತ್ಯಾಗ ಮನೋಭಾವ. ನನ್ನದಲ್ಲ, ಇದು ಸಂಪೂರ್ಣವಾಗಿ ನಿನಗೆ ಅರ್ಪಿತ ಎಂಬ ಭಾವನೆಯಿಂದ ನಡೆದ ಅನೇಕಾನೇಕ ಹೋಮಗಳ ಫಲವೇ ನಮ್ಮೆಲ್ಲರ ಅಸ್ತಿತ್ವ, ಈ ಪುಣ್ಯ ಭೂಮಿಯಲ್ಲಿ ಜನನ ಎಂಬ ಮಾತು ಆಗಿಂದ್ದಾಗ್ಗೆ ಕೇಳಿಬರುತ್ತದೆ. ದಿನಗಟ್ಟಲೆ ನಡೆಯುವ ಹೋಮಗಳನ್ನು ಹೆಸರಿಸಬಹುದಾದರೂ ಹೋಮಗಳೆಲ್ಲವೂ ಹಿಂದೂಗಳ ಒಂದು ವರ್ಗಕ್ಕಷ್ಟೇ ಸೇಮಿತ ಎಂದು ಅವನ್ನು ಅನುಸರಿಸಲು ಕಟ್ಟುಪಾಡುಗಳಿವೆಯೆಂದು ಕೆಲವರು ಅನಾಸಕ್ತಿ ತೋರಬಹುದು. ಆದರೆ ನಮ್ಮಲ್ಲೊಂದು ಹೋಮವಿದೆ. ಈ ಹೋಮ ಮಾಡಲು ಸಮಯವೂ ತಗಲುಗುದಿಲ್ಲ. ಯಾರಾದರೂ ಮಾಡಬಹುದು. ಹಾಗೂ ಅಂತಹ ಹೋಮದಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು ಎಂದು ಸಾಕಷ್ಟು  ಚರ್ಚೆ, ಪರೀಕ್ಷೆಗಳ ನಂತರ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಿದ್ದಾರೆ. ೬೪ ವಿದ್ಯೆಗಳಲ್ಲಿ ಒಂದದ ಈ ಹೋಮದ ಹೆಸರೇ ಅಗಿಹೋತ್ರ.

ನಮ್ಮ ವೈದಿಕ ಪರಂಪರೆಯಲ್ಲಿ ಋಷಿಮುನಿಗಳು ಅನುಸರಿಸುತ್ತಿದ್ದ, ಪ್ರತಿಯೊಬ್ಬರೂ ನಡೆಸಬಹುದಾದುದು ಅದರಿಂದಾಗುವ ಸತ್ಪರಿಣಾಮಗಳು ಹೆಚ್ಚು ಎಂದು ಹೇಳಲ್ಪಡುತ್ತಿದ್ದುದು ಈ ಅಗ್ನಿಹೋತ್ರದ ಬಗ್ಗೆಯೇ. ಮುಂಚೆಲ್ಲ ಹಲವಾರು ಜನರು ನಡೆಸುತ್ತಿದ್ದ ಅಗ್ನಿಹೋತ್ರಕ್ಕೆ ಕ್ರಮೇಣ ಜನರ ಭಾಗಗೊಳ್ಳುವಿಕೆ ಇಳಿಮುಖವಾಗಿತ್ತು. ಅಗ್ನಿಹೋತ್ರವು ಚರ್ಚೆಗೆ ಗ್ರಾಸವಾದದ್ದು ಭೋಪಾಲ್ ಅನಿಲ ದುರಂತದ ನಂತರ. ಡಿಸೆಂಬರ್ ೧೯೮೪ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‍ನಿಂದ ಹೊರಬಂದ ಮಿಥೈಲ್ ಐಸೊಸಯನೈಡ್  ಸುಖನಿದ್ರೆಯಲ್ಲಿದ್ದ ಭೋಪಾಲದ ಜನರನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದಿತು. ಮಡಿದವರು, ಅಂಗಾಗಗಳು ಊನವಾದವರು, ನಾನಾ ರೋಗಗಳಿಗೆ ತುತ್ತಾದವರು ಅಸಂಖ್ಯ. ಆದ್ದರಿಂದಲೇ ಈ ಅನಿಲ ದುರಂತವನ್ನು ಮನುಕುಲದ ಮೇಲೆ ನಡೆದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ ವಿಚಿತ್ರವೆಂದರೆ ಈ ದುರ್ಘಟನೆ ನಡೆದಾಗ್ಯೂ, ಕಾರ್ಖಾನೆಯ ಒಂದು ಮೈಲಿ ದೂರದಲ್ಲಿದ್ದ ಎರಡು ಮನೆಗಳನ್ನು ಕಿಂಚಿತ್ತೂ ಹಾಳುಗೆಡವಲು ಆಗಲೇ ಇಲ್ಲ. ಅದಕ್ಕೆ ಕಾರಣವು ದಿನನಿತ್ಯ ಆ ಮನೆಗಳಲ್ಲಿ ನಡೆಯುತ್ತಿದ್ದ ಅಗ್ನಿಹೋತ್ರ ಹೋಮ ಎಂಬ ಮಾತು ಪ್ರಚಲಿತವಾಗತೊಡಗಿತು. ಆ ಮನೆಯಲ್ಲಿ ವಾಸಿಸುವವರು ವಿಜ್ಞಾನಿಗಳಿಗೆ ಸವಾಲೆಸೆದಿದ್ದರು.

೧೯೮೬ರಲ್ಲಿ ಅಂದಿನ ಯುಎಸ್‍ಎಸ್‍ಆರ್ ನ ಚರ್ನೋಬಿಲ್ (Chernobyl) ಎಂಬಲ್ಲಿ ಪರಮಾಣು ವಿಸ್ಫೋಟದ ನಂತರದ ವಿಕಿರಣದಿಂದ ಯೂರೋಪ್ ಖಂಡದ ದೇಶಗಳಲ್ಲಿಯೂ ದುಷ್ಪರಿಣಾಮಗಳು ಕಂಡುಬಂತು. ಇತ್ತೀಚೆಗಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನುಸಾರ ಈ ವಿಕಿರಣದಿಂದ ಸುಮಾರು ೬೦,೦೦೦ ಜನರು ಕ್ಯಾನ್ಸರ್  ಖಾಯಿಲೆಯಿಂದ ಬಳಲಿ ಸತ್ತಿದ್ದಾರೆ. ಚರ್ನೋಬಿಲ್ ನ ೩೦ಕಿಮಿ ಸುತ್ತಲಿನ ಜಾಗವನ್ನು ಈಗ ವಾಸಿಸಲು ಯೋಗ್ಯವಲ್ಲವೆಂದು ಅಲ್ಲಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.ಚರ್ನೋಬಿಲ್ ದುರಂತದ ನಂತರ ಆಸ್ಟ್ರಿಯಾ ಸರ್ಕಾರವು ಅಲ್ಲಿನ ರೈತರುಗಳಿಗೆ ತಮ್ಮ ಹಸುಗಳ ಹಾಲನ್ನು ವಿಕಿರಣಶೀಲಕ್ಕಾಗಿ ಪರೀಕ್ಷಿಸಬೇಕೆಂದು ಆದೇಶಿಸಿತ್ತು. ಎಲ್ಲರೂ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಕರಿನ್ ಹರ್ಷಲ್ ಎಂಬ ರೈತರ ಆವರಣದಲ್ಲಿ ಬೆಳೆದ ಹುಲ್ಲು, ಆ ಹುಲ್ಲನ್ನು ಸೇವಿಸಿದ್ದ ಹಸುಗಳ ಹಾಲಲ್ಲಿ ವಿಕಿರಣಶೀಲದ ಅಂಶಗಳು ತೋರಿಬರಲಿಲ್ಲ. ಉಳೆದಲ್ಲ ಹಾಲಿನ ಮಾದರಿಗಳು(ಗೋವುಗಳು ವಿಕಿರಣ ಭರಿತ ಲಭ್ಯ ಹುಲ್ಲನ್ನು ಸೇವಿಸಿದ್ದರಿಂದ) ವಿಕಿರಣಶೀಲವಾಗಿತ್ತು.

ಭೋಪಾಲದ ಅನಿಲ ದುರಂತದಿಂದ ಯಾವುದೇ ದುಷ್ಪರಿಣಾಮ ಕಾಣದ ಆ ಎರಡು ಮನೆಗಳು ಹಾಗೂ ಆಸ್ಟ್ರಿಯಾದ ಕರಿನ್ ಹರ್ಷಲ್‍ರ ಹಸುಸಾಕಣೆ ಪ್ರದೇಶಗಳಲ್ಲಿ ಸಾಮ್ಯವಿದ್ದುದು ಅಗ್ನಿಹೋತ್ರದ ಪದ್ಧತಿ ನಡೆಸುತ್ತಿದ್ದುದು. ಹಾಗಾದರೆ ಈ ಅಗ್ನಿಹೋತ್ರವೆಂದರೇನು? ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಅಗ್ನಿಹೋತ್ರದ ಮೂಲ ತತ್ತ್ವವಾಗಿರುತ್ತದೆ. ಸೂರ್ಯ ಉದಯವಾಗುವ ಸಮಯಕ್ಕೆ, ಸೂರ್ಯ ಮುಳುಗುವ ಸಮಯಕ್ಕೆ ನಮ್ಮ ದೇಹದಲ್ಲಿ, ಪ್ರಾಣಿ,ವೃಕ್ಷಗಳಲ್ಲಿ ಹೊಸ ಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟುತ್ತವೆ ಎಂದು ಜೀವವಿಜ್ಞಾನಿಗಳು ನಿರೂಪಿಸಿದ್ದಾರೆ. ಅದೇ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ಶಕ್ತಿಯಿರುತ್ತದೆಂಬುದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಬ್ರಾಹ್ಮಿ (ಸೂರ್ಯೋದಯ),ಗೋಧೂಳಿ (ಸೂರ್ಯಾಸ್ತ) ಸಮಯಗಳಲ್ಲಿ ಕೆಲ ಮಂತ್ರಗಳನ್ನು ಪಠಿಸಿ, ಅಗ್ನಿಗೆ ಆಹುತಿ ನೀಡಬೇಕು, ಅದರಿಂದ ಧನಾತ್ಮಕ ತರಂಗಗಳು ಸೃಷ್ಟಿಗೊಂಡು, ಮನುಷ್ಯನ ಮನಸ್ಸುಗಳು ಧನಾತ್ಮಕ ಚಿಂತನೆ ನಡೆಸುತ್ತವೆ ಎಂಬುದು ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಜರು ಅರಿತುಕೊಂಡು, ಅವರಿಗೆ ಸತ್ಯದ ಸಾಕ್ಷಾತ್ಕಾರವೂ ಆಗಿತ್ತು. "Heal the atmosphere and the atmosphere will heal you" (ವಾತಾವರಣವನ್ನು ಶುದ್ಧಗೊಳಿಸಿದರೆ, ವಾತಾವರಣವು ನಿಮ್ಮನ್ನು ಗುಣಪಡಿಸುತ್ತದೆ) ಎಂಬ ಮೂಲ ತತ್ತ್ವವನ್ನು ವೇದಗಳಲ್ಲಿ ಹೇಳಲಾಗಿದೆ ಎಂಬುದನ್ನು ಭಾರತದ ವಸಂತ ಪರಾಂಜಪೆಯವರು ದೇಶವಿದೇಶಗಳಲ್ಲಿ ತಮಗೆ ಲಭಿಸಿದ್ದ ಜ್ಞಾನವನ್ನು ಹರಡಲು ಮೂಂದಾದರು. ಅವರ ಅನುಯಾಯಿಗಳು ವಿಶ್ವದೆಲ್ಲೆಡೆ ಈಗ ಅಗ್ನಿಹೋತ್ರವನ್ನು ನಿತ್ಯ ಯಜ್ಞವಾಗಿ ನಿರ್ವಹಿಸುತ್ತಿದ್ದಾರೆ. ಹಸುವಿನ ಸಗಣಿಯಿಂದ ಮಾಡಿದ ಬೆರಣಿ, ತುಪ್ಪ, ಅಕ್ಕಿಯನ್ನು ಸೂರ್ಯೋದಯ, ಸೂರ್ಯಾಸ್ತವಾಗುವ ಸಮಯಕ್ಕೆ ಸರಿಯಾಗಿ ತಾಮ್ರ/ಚಿನ್ನದ ಕುಂಡದಲ್ಲಿ ತಯಾರಿಸಿದ ಅಗ್ನಿಗೆ ಆಹುತಿ ನೀಡಬೇಕು. ಜೊತೆಗೆ ಈ ಆಹುತಿಗೆ ಸರಿಯಾಗಿ ಕೆಲ ಮಂತ್ರ ಪಠನವನ್ನೂ ಮಾಡಬೇಕು. ಅಗ್ನಿಹೋತ್ರವನ್ನು ಮಾಡಿದಾಗ, ಅದರಿಂದ ಬರುವ ಹೊಗೆ, ವಿಕಿರಣ ಹೊರಚೆಲ್ಲುವ ವಸ್ತುವನ್ನು ಆಕರ್ಷಿಸಿ ಅದರ ಮೂಲ ಪ್ರವೃತ್ತಿಯಾದ ವಿಕಿರಣಶೀಲತೆಯನ್ನು ತಟಸ್ಥಗೊಳಿಸುತ್ತದೆ ಎಂಬುದು ಅಗ್ನಿಹೋತ್ರಕ್ಕೆ ಇರುವ ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆ. (ಚರ್ನೊಬಿಲ್‍ನಲ್ಲಿ ವಿಕಿರಣ ಉಂಟಾದಾಗ ವಿಚಿತ್ರವೆಂದರೆ ಕೆಲ ಕೀಟಗಳು ಸಾಯದೇ ತಾವೂ ವಿಕಿರಣಶೀಲವಾದದ್ದು. ಇದರ ಪರಿಣಾಮವನ್ನು ಜಗತ್ತು ನೋಡುತ್ತಿದೆ, ಬಹುಷಃ ಇನ್ನೂ ನೋಡಬಹುದು) ಇನ್ನು ವೈಜ್ಞಾನಿಕವಾಗಿ ಇಂಗಾಲದ ಡೈ-ಆಕ್ಸಿಡ್ ಹೊರಸೂಸುವ ಅಗ್ನಿಹೋತ್ರ ತಪ್ಪಲ್ಲವೇ? ಪರಿಸರಕ್ಕೆ ವ್ಯತಿರಿಕ್ತವಲ್ಲವೇ ಎಂಬ ಪ್ರಶ್ನೆಗೆ ಉತ್ತರ - ಅಗ್ನಿಹೋತ್ರದಿಂದ ಸೃಷ್ಟಿಯಾಗುವ ತರಂಗಗಳು ಕೇವಲ ಮನೆಯಲ್ಲದೇ ಸುತ್ತಲಿನ ಗಿಡ ಮರಗಳಿಗೆ ಆ ತರಂಗಗಳು ದ್ಯುತಿಸಂಶ್ಲೇಷಣೆಯನ್ನು (photosynthesis) ಹೆಚ್ಚಿಸಿ ಇಂಗಾಲದ ಡೈ-ಆಕ್ಸೈಡ್‍ಅನ್ನು ಹೀರಿ ಆಮ್ಲಜನಕವನ್ನು ಹೊರಹಾಕುತ್ತವೆ.


ರಷ್ಯಾ, ಜರ್ಮನಿ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಅಗ್ನಿಹೋತ್ರವು ಸಾಮೂಹಿಕವಾಗಿ ಇಲ್ಲವೇ,ಆಸಕ್ತಿಯುಳ್ಳವರ ಸ್ಥಳಗಳಲ್ಲಿ ನಡೆಯುತ್ತಿವೆ. ಅದರಿಂದ ಬರುವ ಭಸ್ಮವನ್ನು ದೈಹಿಕ, ಶಾರೀರಿಕ ಸಮಸ್ಯೆಗಳಿಗೆ ಮದ್ದಾಗಿ ಕೆಲ ವೈದ್ಯರು ಸೂಚಿಸುತ್ತಿದ್ದಾರೆ. ಅಗ್ನಿಹೋತ್ರದ ಭಸ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬೇಕು ಎಂದು ವಿಶ್ವದ ಹಲವಾರು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆ ಭಸ್ಮವನ್ನು ಮುಂದೆ ಆಮದು ಮಾಡುಕೊಳ್ಳುವ ಕೆಲಸವೂ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಆ ದೃಷ್ಟಿಯಿಂದಲೂ ಭಾರತದ ಕಡೆಗೆ ಮುಖ ಮಾಡುವ ಸಾಧ್ಯತೆಗಳು ಸಧ್ಯಕ್ಕೆ ಹೆಚ್ಚಿದೆ ಎಂದು ತೋರಿಸಲಾಗಿದೆ. ಕಾರಣ ಭಾರತದಲ್ಲಿರುವ ಅಗ್ನಿಹೋತ್ರದ ಬಗೆಗಿನ ಜ್ಞಾನ ಹಾಗೂ ಅದನ್ನು ನಿಷ್ಠೆಯಿಂದ ಅನುಸರಿಸುವ ಆಸ್ತಿಕರ ಸಂಖ್ಯೆ.


(Photo taken at Agnihotra deeksha program in Malleshwaram, Bengaluru organised by Sri Sai Bhiksha Kendra where deeksha was given to 500 plus devotees who were interested in Agnihotra)

ಇನ್ನು ಅಗ್ನಿಹೋತ್ರಕ್ಕೆ ಬಳಸುವ ಕುಂಡವು ತಾಮ್ರದ್ದೋ, ಚಿನ್ನದ್ದೋ ಆದರೆ ಉತ್ತಮವೆಂದು ವಾದಿಸುವ, ಹಾಗೂ ಹಿಂದೆಲ್ಲಾ ಬಳಸುತ್ತಿದ್ದುದು ತಾಮ್ರ/ಚಿನ್ನದ ಕುಂಡಗಳೇ ಎಂದು ಹೇಳುವವರಿದ್ದಾರಾದರೂ, ಇಟ್ಟಿಗೆಯ ಕಲ್ಲುಗಳನ್ನು ಚಿಕ್ಕ ಹೋಮಕುಂಡದ ರೀತ್ಯ ಕಟ್ಟಿಕೊಂಡು ಮರಳಲ್ಲಿ ಅಗ್ನಿಹೋತ್ರ ಮಾಡುವುದು (ಕಾರಣ ಚಿನ್ನ, ತಾಮ್ರ ಏಕಧಾತು ಪದಾರ್ಥವಾದರೆ ಮರಳು ಬಹುಧಾತುಗಳನ್ನು ಹೊಂದಿದೆ) ಮತ್ತೂ ಉತ್ತಮವೆಂದು ನಿರೂಪಿಸುವವರು ಇದ್ದಾರೆ.

ಅಗ್ನಿಹೋತ್ರದ ಪರಿಣಾಮಗಳು ಅಧ್ಯಾತ್ಮಿಕವಾಗಿ, ಪರಿಸರದ ಶುಚಿತ್ವಕ್ಕಾಗಿ, ದೈಹಿಕ, ಮಾನಸಿಕ ರೋಗಗಳಿಗೆ ಮದ್ದಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಅಗ್ನಿಹೋತ್ರವನ್ನು ಮಾಡುತ್ತಿರುವವರ ಸಮರ್ಥನೆ. ಕೆಲ ಸಂಘಟನೆಗಳು ತಮ್ಮ ಸೇವಾ ಕಾರ್ಯಗಳನ್ನು ಅಗ್ನಿಹೋತ್ರದಿಂದಲೇ ಮಾಡುತ್ತಿವೆ. ಉದಾಹರಣೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಹಿಂದೂ ಆಧ್ಯಾತ್ಮ ಮತ್ತು ಸೇವಾ ಮೇಳದಲ್ಲಿ  ತಮ್ಮ ಮಳಿಗೆಯಲ್ಲಿ ಅನಂತ ಭಾರತ ಚಾರಿಟಬಲ್ ಟ್ರಸ್ಟ್ ಹೇಳಿಕೆಯ ಪ್ರಕಾರ, ಎಚ್‍ಐವಿ ಪೀಡಿತರು ತಮ್ಮ ಸಂಸ್ಥೆಯ ಮೂಲಕ ಮಾಡಿದ ನಿತ್ಯ  ಅಗ್ನಿಹೋತ್ರದ ವಿಧಿಯಿಂದಾಗಿ ತಮ್ಮ ದೇಹದಲ್ಲಿದ್ದ ಏಡ್ಸ್ ವೈರಾಣುಗಳು ಇಳಿಮುಖಗೊಂಡಿವೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಒಂದು ಅಗ್ನಿಹೋತ್ರದ ದೀಕ್ಷೆಯ ಕಾರ್ಯಕ್ರಮದಲ್ಲಿ ನೆರೆದಿದ್ದ ನಿತ್ಯ ಅಗ್ನಿಹೋತ್ರಿಗಳು ತಮ್ಮ ಧನಾತ್ಮಕ ಚಿಂತನೆಗಳು ಹೆಚ್ಚಿದ್ದ ಪ್ರಸಂಗಗಳನ್ನು ನಮ್ಮ ಮುಂದೆ ಹೇಳಿಕೊಂಡರು. ಕೆಲವರು ಅಗ್ನಿಹೋತ್ರದ ವಿಧಿಯಿಂದ ಬಂದ ಭಸ್ಮವನ್ನು ತಮ್ಮ ಚರ್ಮರೋಗಗಳ ನಿವಾರಣೆಗೆ ಬಳಸಿದ್ದರು( ಗೋಮಯಕ್ಕೆ ವೈದ್ಯಕೀಯ ಉಪಯುಕ್ತತೆ ಹಲವಷ್ಟು ಎಂಬುದು ವಿವಾದಾತೀತ) ಊಟಿಯಲ್ಲಿ ಚಹಾ ತೋಟವನ್ನು ನಿರ್ವಹಿಸುತ್ತಿರುವ ಸುರೇನ್ ಕುಮಾರ್ ದಂಪತಿಗಳು ತಮ್ಮ ತೋಟದ ಮಣ್ಣಿನಲ್ಲಿ ನೀರು ಹೀರಿಕೊಳ್ಳುವ ಪ್ರಮಾಣ ಹೆಚ್ಚಾದುದು ತಾವು ಮಾಡುವ ಅಗ್ನಿಹೋತ್ರದ ಭಸ್ಮವನ್ನು ಗಿಡದ ಬುಡಗಳಿಗೆ ಹಾಕುತ್ತಿರುವುದರಿಂದಲೇ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ. ಅಲ್ಲದೇ ಮಣ್ಣಿನ ಸವಕಳಿ, ಮಳೆ ನೀರು ಇಂಗದೇ ಹರಿದುಹೋಗುವ ಸಮಸ್ಯೆಗಳಿಗೆ ಅಗ್ನಿಹೋತ್ರದ ಭಸ್ಮವೇ ಪರಿಹಾರವೆನ್ನುತ್ತಾರೆ. ಕೆಲ ರೈತರುಗಳು ತಮ್ಮ ಹೊಲಗಳಲ್ಲಿ ಈಗಾಗಲೇ ಕೆಲವರ್ಷಗಳಿಂದಲೇ ಅಗ್ನಿಹೋತ್ರವನ್ನು ಮಾಡುತ್ತಿದ್ದು, ಭಸ್ಮವನ್ನು ಹೊಲದಲ್ಲಿ ಹರಡುವುದರಿಂದ, ಬೆಳೆಗಳ ಮೇಲೆ ಸಿಂಪಡಿಸಿದ್ದರಿಂದ, ಕ್ರಿಮಿ ಕೀಟಗಳು ಬೆಳೆ ನಾಶ ಮಾಡುತ್ತಿದ್ದ ದಿನಗಳು ಇನ್ನಿಲ್ಲವೆಂಬ ನಿಟ್ಟುಸಿರು ಬಿಡುತ್ತಾರೆ. ಅಲ್ಲದೇ ಹೊಲದಲ್ಲಿನ ಇಳುವರಿಯೂ ಹೆಚ್ಚಾಗಿದೆ ಎಂದು ವಾದಿಸುತ್ತಾರೆ.

ಇಂದಿನ ದಿನಗಳಲ್ಲಿ ಯಾವುದೇ ಭಾರತದ ಪುರಾತನ ಕ್ರಿಯಿಯನ್ನೂ ವಿಜ್ಞಾನನದ ಚೌಕಟ್ಟಿನಲ್ಲಿರಿಸಿ ನಂಬಿಕೆಯನ್ನೇ ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲಿ, ಅಗ್ನಿಹೋತ್ರವೂ ವೈಜ್ಞಾನಿಕವಾಗಿ ಹಲವರಿಂದ ಧೃಡಪಟ್ಟಿದೆ. ವೈಜ್ಞಾನಿಕ, ಆಧ್ಯಾತ್ಮ ಕಾರಣಗಳಿಗಾಗಿಯೇ ಅದನ್ನು ಅಭ್ಯಸಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಅಗ್ನಿಹೋತ್ರ ಮಾಡಲು ಬೇಕಿರುವ ಮಂತ್ರಗಳೂ ಕ್ಲಿಷ್ಟಕರವಲ್ಲ.

ಸೂರ್ಯೋದಯದ ಹೊತ್ತಿಗೆ,
ಸೂರ್ಯಾಯ ಸ್ವಾಹಾಃ ಸೂರ್ಯಾಯ ಇದಂ ನ ಮಮ ||
ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ ||

ಎಂದೂ, ಸೂರ್ಯಾಸ್ತದ ಹೊತ್ತಿಗೆ,
ಅಗ್ನಯೇ ಸ್ವಾಹಾಃ ಅಗ್ನಯೇ ಇದಂ ನ ಮಮ ||
ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ  ಇದಂ ನ ಮಮ ||

ಎಂದೂ ಕುಂಡದಲ್ಲಿ ಪ್ರದೀಪನಗೊಳಿಸಿದ ಬೆರಣಿಗೆ ಎರಡು ಚಿಮಟಿಗೆಯಷ್ಟು ಅಕ್ಕಿ, ಗೋವಿನ ತುಪ್ಪವನ್ನು ಆಹುತಿಯನ್ನು ಅರ್ಪಿಸಬೇಕಾಗುತ್ತದೆ.
***



ಪರಿಸರ ಶುದ್ಧತೆ ಆರೋಗ್ಯದ ಬದ್ಧತೆ

ಆಧುನಿಕತೆಯ ಸೋಗಿನಲ್ಲಿ ಜೀವನಶೈಲಿ ಬದಲಾಗುತ್ತಿದೆ. ಸನಾತನ ಆಚರಣೆಗಳು ಮೂಲೆ ಗುಂಪಾಗುತ್ತಿವೆ. ರೋಗಾಣುಗಳಿಗೆ ಮುಕ್ತ ಆಹ್ವಾನ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಕಂಟಕ ತಪ್ಪಿದ್ದಲ್ಲ.

ತಾವರಣ ಕಲುಷಿತ ವಾದಷ್ಟು ದೇಹಾರೋಗ್ಯ ಕೆಡಲು ಆರಂಭಿಸುತ್ತದೆ. ಬೇಸಿಗೆ ಕಾಲದಲ್ಲಿ ಸೆಕೆಯ ಹೆಚ್ಚಳದೊಂದಿಗೆ ಸೋಂಕು ಪಸರಿಸುವ ವೈರಾಣುಗಳ ಆರ್ಭಟವೂ ಹೆಚ್ಚಾಗುತ್ತದೆ. ವೈರಾಣುಗಳ ಕಾರಣ ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ಶಾರೀರಿಕ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ರೋಗಾಣು ಜೀವಿಗಳಿಗೆ ಮುಕ್ತ ಆಹ್ವಾನ ಕೊಟ್ಟಂತೆ. ಇತ್ತೀಚಿನ ದಿನಗಳಲ್ಲಿ ಸನಾತನ ಸಂಸ್ಕೃತಿ ಅಧಃಪತನಕ್ಕೆ ತುಳಿಯುತ್ತಿದೆ. ಈ ಕ್ಷಣದಲ್ಲಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.

ಪರಿಶುದ್ಧತೆಯ ಸಾಧನ : 

ಅಗ್ನಿಹೋತ್ರ ವಾತಾರಣ ಪರಿಶುದ್ಧತೆಗೊಂದು ಸಾಧನ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಅಗ್ನಿಹೋತ್ರವನ್ನು ಆಚರಿಸುವುದರಿಂದ ಶತ್ರುಗಳನ್ನು ಜಯಿಸುವ ಶಕ್ತಿ ಬರುತ್ತದೆ ಎನ್ನುತ್ತದೆ ಶ್ಲೋಕವೊಂದು, ಇಲ್ಲಿ ಶತ್ರು ಎಂದರೆ ಯಾರು? ಜಯಿಸುವ ಶಕ್ತಿ ಎಂದರೆ ಏನು? ಎಂಬ ಪ್ರಶ್ನೆ ಬರುತ್ತದೆ. ಶತ್ರು ಎಂದರೆ ನೆಗೆಟೀವ್ ಎನರ್ಜಿ ಶಕ್ತಿ ಎನ್ನುವುದು ಪಾಸಿಟಿವಿಟಿ. ಎಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳು ವ್ಯಾಪಿಸಿರುತ್ತವೆಯೋ ಅಲ್ಲಿಯವರೆಗೆ ನಕಾರಾತ್ಮಕ ಶಕ್ತಿಗಳಿಗೆ ಪ್ರವೇಶವಿಲ್ಲ. ಈ ಅಂಶವನ್ನೇ –

ಯಾವದಹೋರಾತ್ರೆ ಭವತಃ ತಾಪದಸ್ಯ ಲೋಕಸ್ಯ 
ನಾರ್ತಿಃ ನ ರಿಷ್ಟಿ ನಾಂತೋ ನ ಪರ್ಯಂತೋಸ್ತಿ! //

ಶ್ಲೋಕ ಪ್ರಸ್ತುತ ಪಡಿಸುತ್ತದೆ.

ಅಗ್ನಿಹೋತ್ರ ಎಂದರೇನು? :

ಅಗ್ನಿಹೋತ್ರವೆಂದರೆ ಅಗ್ನಿಯಲ್ಲಿ ಆಹುತಿಯನ್ನು ಅರ್ಪಿಸಿ ಮಾಡುವ ಈಶ್ವರನ ಉಪಾಸನೆ ಎನ್ನುತ್ತಾರೆ ಅಕ್ಕಲಕೋಟೆ ಶಿವಪುರಿಯ ಡಾ. ಶ್ರೀಕಾಂತ ಶ್ರೀ ಗಜಾನನ ಮಹಾರಾಜ ರಾಜೀಮವಾಲೆ .

ಯಾವಾಗ ಮಾಡಬೇಕು? : 

ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ಕಾಲದಲ್ಲಿ ಯಜ್ಞಕುಂಡದಲ್ಲಿ ಪ್ರಜ್ವಲಗೊಳಿಸಿದ ಯಜ್ಞೇಶ್ವರನಿಗೆ ಅಕ್ಕಿ ಮತ್ತು ಹಸುವಿನ ತುಪ್ಪದ ಆಹುತಿಯನ್ನು ಕೊಡಬೇಕು.

ಹೇಗೆ ಕೆಲಸ ಮಾಡುತ್ತದೆ? : 

ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ-ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘಕಾಲ ಉಳಿದುಕೊಳ್ಳುತ್ತದೆ.  ನಿರತವಾಗಿ ಅಗ್ನಿಹೋತ್ರ ಮಾಡುವುದರಿಂದ ಹೋಮಕುಂಡದ ಸುತ್ತ ಕಾಂತೀಯ ವರ್ತುಲವೊಂದು ನಿರ್ಮಾಣವಾಗುತ್ತದೆ. ಇದು ಋಣಾತ್ಮಕ ಶಕ್ತಿಗಳನ್ನು (ನೆಗೆಟೀವ್‌ ಫೋರ್ಸ್) ತಡೆಯುತ್ತದೆ. ಧನಾತ್ಮಕ ಶಕ್ತಿ (ಪಾಸಿಟೀವ್ ಫೋರ್ಸ್) ಪ್ರವೇಶಕ್ಕೆ ಅವಕಾಶ ನೀಡುತ್ತದೆ. 

ಸಂಸ್ಕೃತಿ ಪರಿಣಾಮಗಳೇನು? : 

ಅಗ್ನಿಹೋತ್ರದಲ್ಲಿ ಬಳಸಲ್ಪಡುವ ದ್ರವ್ಯಗಳು ದಹಿಸಲ್ಪಟ್ಟ ನಂತರ ಅಂಶಗಳ ರೂಪದಲ್ಲಿ ವಾತಾವರಣವನ್ನು ತಲುಪುತ್ತವೆ. ಅವುಗಳಿಂದ ಗಾಳಿ ಶುದ್ದೀಕರಣಗೊಳ್ಳುತ್ತದೆ. ಉಸಿರಾಟ ಕ್ರಿಯೆಯನ್ನು ಸರಳಗೊಳಿಸುತ್ತದೆ. ಗಾಳಿಯಿಂದ ಪಸರಿಸುವ ರೋಗಗಳನ್ನು ವಿಶೇಷವಾಗಿ ಸೋಂಕುಗಳನ್ನು ತಡೆಯುತ್ತದೆ.

ಹೊಲಗದ್ದೆ, ತೋಟಗಳಲ್ಲಿ ಅಗ್ನಿಹೋತ್ರ ನಡೆಸುವುದರಿಂದ ಕ್ರಿಮಿಗಳ ಉಪಟಳವನ್ನು ತಡೆಯಬಹುದು. ಸಾವಯವ ಕೃಷಿಗೆ ಸಹಕಾರಿಯಾಗಿದೆ ಎನ್ನುತ್ತವೆ ಇತ್ತೀಚಿನ ಸಂಶೋಧನೆಗಳು.

ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ. ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಉಂಟಾಗುತ್ತವೆ. ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ. 

ಸೃಷ್ಟಿಯಲ್ಲಿ ಏನೆಲ್ಲ ಇದೆಯೋ ಮತ್ತು ಏನೆಲ್ಲ ಕಾಣಿಸುತ್ತದೆಯೋ, ಅವೆಲ್ಲವೂ ಈಶ್ವರನದ್ದೇ ಆಗಿದೆ. ನಿಮ್ಮಲ್ಲಿರುವುದನ್ನು ಅವನಿಗೇ ಸಮರ್ಪಿಸಿ. ದಾನ ಮತ್ತು ತ್ಯಾಗ ಮನೋಭಾವನೆಯಿಂದ ತೃಪ್ತರಾಗಿ.
ಸದ್ಗುರು ಶ್ರೀ ಗಜಾನನ ಮಹಾರಾಜ್

ಈ ಪೂರಕ ಮಾಹಿತಿ : ಸನಾತನ ಸಂಸ್ಥೆ
10:16 AM
****
Vaishwadeva - read here VAISHWADEVA


No comments:

Post a Comment