SEARCH HERE

Tuesday 1 January 2019

ಯಾವ ತಿಥಿಯಲ್ಲಿ ಯಾವ ದೇವತೆಗಳು ಜನಿಸಿದ್ದಾರೆ which thithi which devatha is born


ಯಾವ ತಿಥಿಯಲ್ಲಿ ಯಾವ "ದೇವತೆಗಳು" ಜನಿಸಿದ್ದಾರೆಂದು ತಿಳಿಯೋಣ.."!
 "ತಾರಾದರ್ಶಿನಿ" ಅಂಕಣ
 ಪಾಡ್ಯಮಿ ತಿಥಿ ಯಲ್ಲಿ ಬ್ರಹ್ಮದೇವರು ಹುಟ್ಟಿದ್ದಾರೆ..!

 ಬಿದಿಗೆ ತಿಥಿಯಲ್ಲಿ ಅಶ್ವಿನಿದೇವತೆಗಳು ಹುಟ್ಟಿದ್ದಾರೆ..!

 ತದಿಗೆ ತಿಥಿಯಲ್ಲಿ ಗೌರೀದೇವಿ ಜನಿಸಿದ್ದಾರೆ..
(ಅದಕ್ಕೆ ತದಿಗೆ ಗೌರಿ ಅನ್ನೋದು)

 ಚೌತಿ ತಿಥಿಯಲ್ಲಿ ವಿನಾಯಕ ದೇವರು ಹುಟ್ಟಿದ್ದಾರೆ..!
(ಅದಕ್ಕೆ ವಿನಾಯಕ ಚತುರ್ಥಿ ಅಂಥ ಆಚರಿಸೋದು)

 ಪಂಚಮಿ ತಿಥಿಯಲ್ಲಿ ನಾಗದೇವತೆಗಳು ಜನಿಸಿದ್ದಾರೆ..!
(ಅದಕ್ಕೆ ನಾಗರಪಂಚಮಿ ಅಂಥ ಆಚರಿಸೋದು)

 ಷಷ್ಠೀ ತಿಥಿಯಲ್ಲಿ ಕುಮಾರಸ್ವಾಮಿ ಹುಟ್ಟಿದ್ದಾರೆ..!
(ಅದಕ್ಕೆ ಕುಮಾರ ಷಷ್ಠಿ ಅಂಥ ಆಚರಿಸೋದು)

 ಸಪ್ತಮೀ ತಿಥಿಯಲ್ಲಿ ಸೂರ್ಯನಾರಾಯಣ ದೇವರು ಜನಿಸಿದ್ದಾರೆ..!
(ಅದಕ್ಕೆ ರಥಸಪ್ತಮಿ ಅಂಥ ಆಚರಿಸೋದು)

 ಅಷ್ಟಮಿ ತಿಥಿಯಲ್ಲಿ ಅಷ್ಠಮಾತೃಕೆಯರು ಜನಿಸಿದ್ದಾರೆ..!
(ದೇವಿ ಅಷ್ಟಮಿ, ದುರ್ಗಾಷ್ಟಮಿ ಅಂಥ ಆಚರಿಸ್ತಾರೆ)

 ನವಮಿ ತಿಥಿಯಲ್ಲಿ  ದುರ್ಗಾದೇವಿ ಜನಿಸಿದ್ದಾರೆ..
(ದುರ್ಗಾನವಮಿ ಅಂಥ ಆಚರಿಸ್ತಾರೆ,)

 ದಶಮಿ ತಿಥಿಯಲ್ಲಿ ದಶದಿಕ್ಕುಗಳ ಅಧಿದೇವತೆಗಳು ಹುಟ್ಟಿದ್ದಾರೆ.!

 ಏಕಾದಶಿ  ತಿಥಿಯಲ್ಲಿ ಕುಬೇರ ಹುಟ್ಟಿದ್ದಾರೆ..!

 ದ್ವಾದಶಿ ತಿಥಿಯಲ್ಲಿ ವಿಷ್ಣುನಾರಾಯಣ  ಹುಟ್ಟಿದ್ದಾರೆ..!
(ಉತ್ಥಾನ ದ್ವಾದಶಿ ಅಂಥ ಆಚರಿಸಿ ವಿಷ್ಣು ಮತ್ತು ತುಳಸೀ ಪೂಜೆ ಮಾಡೋದು)

 ತ್ರಯೋದಶಿ ತಿಥಿಯಲ್ಲಿ ಧರ್ಮದೇವತೆ ಹುಟ್ಟಿದ್ದಾರೆ..!

 ಚತುರ್ದಶಿ ತಿಥಿಯಲ್ಲಿ ಈಶ್ವರ ದೇವರು ಹುಟ್ಟಿದ್ದಾರೆ..!
(ಅದಕ್ಕೆ ಶಿವರಾತ್ರಿ ಹಬ್ಬವನ್ನು ಚತುರ್ದಶಿ ದಿನದಂದು ಮಾಡೋದು)

 ಹುಣ್ಣುಮೆ ತಿಥಿಯಂದು ಚಂದ್ರ  ದೇವರು ಹುಟ್ಟಿದ್ದಾರೆ..!

 ಅಮಾವಾಸ್ಯೆ ಯಲ್ಲಿ ಪಿತೃದೇವತೆ ಹುಟ್ಟಿದ್ದಾರೆ..!
(ಅದಕ್ಕೆ ಮಹಾಲಯ ಅಮಾವಾಸ್ಯೆ ಅಂಥ ಮಾಡಿ ಪಿತೃಕಾರ್ಯ ಮಾಡೋದು, ಅಮಾವಾಸ್ಯೆ ಯಲ್ಲಿ ತರ್ಪಣ ಕೊಡೋದು)
*****

No comments:

Post a Comment