SEARCH HERE

Monday, 12 April 2021

ಆವರ್ತನ ಮಹಾ ಪ್ರಳಯ avartanah pralaya distruction of earth

source - vishnu sahasranama
ಆವರ್ತನ:
आवर्तन:
Avartanah
******
ॐ श्री ಆವರ್ತನಾಯ ನಮ:
ॐ श्री आवर्तनाय नमः 
ॐ श्री AvartanAya namah 
*******
ಆವರ್ತನ: = ತಿರುಗುವುದು, ಸುತ್ತುವುದು, ತಡೆಯುವುದು, ಕಲಕುವುದು, ಕರಗಿಸುವಿಕೆ, ಪುನ:ಪುನ: ಮಾಡುವಿಕೆ, ತಿರುಗೋಣ, ಪ್ರದಕ್ಷಿಣೆ, ಇತ್ಯಾದಿ., 

ಆ + ವರ್ತನ = ಆವರ್ತನ:.

ಆ = ಸ್ಮರಣೆ, ನೆನಪು, ಅನುಕಂಪ, ದಯೆ, ಒಟ್ಟುಗೂಡಿಸುವಿಕೆ, ಸಮುಚ್ಚಯ, ಇತ್ಯಾದಿ., 

ವರ್ತನ = ಜೀವನ, ಬದುಕು, ಇರುವಿಕೆ, ವಾಸಮಾಡುವುದು, ಅರೆಯುವುದು, ಮಾರ್ಗ, ದಾರಿ, ಇತ್ಯಾದಿ., 

"ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುತ್ತಿರುವವನು".
ಯಾವುದಕ್ಕೆ ಆದಿ ಇದೆಯೋ ಅದಕ್ಕೆ ಅಂತ್ಯ ಕೂಡಾ ಇದೆ. 
31,104 ಸಾವಿರ ಕೋಟಿ ವರ್ಷಗಳಿಗೊಮ್ಮೆ ಮಹಾಪ್ರಳಯ ಆಗುತ್ತದೆ. 
ಪುನ: 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಮರುಸೃಷ್ಟಿಯಾಗುತ್ತದೆ. 
ಈ ಸೃಷ್ಟಿ-ಪ್ರಳಯ ಎನ್ನುವ ಕ್ರಿಯೆ ನಿರಂತರ. 
ಈ ಮಹಾಪ್ರಳಯವಲ್ಲದೇ 432 ಕೋಟಿ ವರ್ಷಕ್ಕೊಮ್ಮೆ ಮಧ್ಯಮಪ್ರಳಯ, 31 ಕೋಟಿ ವರ್ಷಕ್ಕೊಮ್ಮೆ ಚಿಕ್ಕಪ್ರಳಯವಾಗುತ್ತದೆ. 
ಈ ರೀತಿ ಸೃಷ್ಟಿ-ಪ್ರಳಯಗಳು ಆವರ್ತನಗೊಳ್ಳುತ್ತವೆ. 
ಈ ಸೃಷ್ಟಿಚಕ್ರವನ್ನು ನಿರಂತರ ತಿರುಗಿಸುವ ಭಗವಂತ "ಆವರ್ತನ:". 

"ಆವರ್ತ (ಸುಳಿ) - ನಯತಿ"
ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಯ ಸುಳಿ ಇದ್ದೇ ಇರುತ್ತದೆ. ದೇವಾದಿ ದೇವತೆಗಳಿಗೂ ಇದು ತಪ್ಪಿದ್ದಲ್ಲ. ಹೀಗೆ ಬದುಕಿನಲ್ಲಿ ಆಗಾಗ ನಾವು ಆಪತ್ತಿನ ಸುಳಿಗೆ ಸಿಕ್ಕಿಕೊಂಡಾಗ, ಮುಂದಾಳಾಗಿ ನಮ್ಮನ್ನು ಪಾರು ಮಾಡುವ ಭಗವಂತ "ಆವರ್ತನ:". 

ಭಗವಂತ ಸಂಸಾರವೆಂಬ ಘಟೀಯಂತ್ರ (ಕಾಲವನ್ನು ಅಳೆಯಲು ನೀರಿನಿಂದ ತುಂಬಿದ ಒಂದು ಯಂತ್ರ) ತಿರುಗಿಸುತ್ತಾನೆ. ಆದುದರಿಂದ ಅವನು "ಆವರ್ತನ:" ಎಂದು ಕರೆಯಲ್ಪಡುತ್ತಾನೆ. 

ಶ್ರೀಮನ್ಮಹಾಭಾರತ: 
ಉದ್ಯೋಗಪರ್ವ: 68-12:
"ಕಾಲಚಕ್ರಂ ಜಗಚ್ಚಕ್ರಂ ಯುಗಚಕ್ರಂ ಚ ಕೇಶವ:|
ಆತ್ಮಯೋಗೇನ ಭಗವಾನ್ಪರಿವರ್ತಯತೇನಿಶಮ್||"
ಭಗವಂತನಾದ ಕೇಶವನು ಆತ್ಮಯೋಗದಿಂದ ಕಾಲಚಕ್ರವನ್ನೂ (ಪಕ್ಷ-ಮಾಸಗಳನ್ನೊಳಗೊಂಡ ಸಂವತ್ಸರಾತ್ಮಕವಾದುದು); ಜಗಚ್ಚಕ್ರವನ್ನೂ (ಜಗತ್ತಿನ ಜನ್ಮ-ಸ್ಥಿತಿ-ಲಯರೂಪವಾದುದು); ಯುಗಚಕ್ರವನ್ನೂ (ಯುಗಗಳ ಪರಿವರ್ತನೆಗೆ ಕಾರಣಭೂತವಾದುದು) ಸರ್ವದಾ ತಿರುಗಿಸುತ್ತಿರುತ್ತಾನೆ. 

ಜಡವಾದ ಪ್ರಕೃತಿಯು ಜೀವಂತವಾಗಿ ನರ್ತಿಸಲು ಎಲ್ಲರ ಹೃದಯದಲ್ಲಿ ಇರುವ ಪರಮಾತ್ಮನ ಸಾನ್ನಿಧ್ಯವು ಕಾರಣವಾಗಿದೆ. ಆದುದರಿಂದ ಅವನನ್ನು "ಆವರ್ತನ:" ಎಂದು ಕರೆಯುತ್ತಾರೆ. 

ಕಾಲಚಕ್ರವನ್ನು ತಿರುಗಿಸುವವನು;
ಸಂಸಾರಚಕ್ರವನ್ನು ತಿರುಗಿಸುವ ಸ್ವಭಾವವುಳ್ಳವನು;
ಒಳ್ಳೆಯ ವರ್ತನೆಯಿರುವವನು;
ನದಿಯೇ ಮುಂತಾದುವುಗಳಲ್ಲಿ ನೀರಿನ ಸುಳಿಗಳನ್ನು ಒಯ್ಯುವವನು; 
ಜನನ-ಮರಣವೆಂಬ ಸಂಸಾರಚಕ್ರವು ಮುಂದುವರಿಯುವಂತೆ ಮಾಡುವವನು; 
ಪುನರಪಿಜನನಂ ಪುನರಪಿಮರಣಂ ಮಾಡಿಸುವವನು;
ಆದುದರಿಂದ ಭಗವಂತನಿಗೆ "ಆವರ್ತನ:" ಎಂದು ಹೆಸರು. 

"ಸಂಸಾರಾಖ್ಯಘಟೀಯಂತ್ರೇ ಪರಿವರ್ತನಶೀಲತ:|
ಚಕ್ರವಚ್ಚ ವಿಶೇಷೇಣ ಹ್ಯಾವರ್ತನ ಇತೀರಿತ:||".

Avartanah = Repetition, Iteration, Revolving, Turning around, Study, Alligation, Circular motion, Noon, Churning, Practicing, Doing over again, Returning, Repeating, Year, Melting metals together, Gyration, etc., 

"HE Who Turns the Wheel of Worldly Life or SamsAra."
BhagavAn is "Avartanah" since HE is the Unseen Dynamism behind the ever-whirling wheel of time and the associated endless cycle of birth and death. This is the cycle of night and day, life and death, joy and sorrow, creation and destruction, which are all HIS play - HIS mAyA. 
******

No comments:

Post a Comment