ಶಾಂಭವಿ ದೀಕ್ಷೆ ಎಂದರೇನು ?
ಸಾಧಾರಣವಾಗಿ ಶಾಂಭವಿ ದೀಕ್ಷೆ ಎಂದರೆ ಗುರುವಿನ ಸ್ಪರ್ಶ, ಶಬ್ದ, ನೋಟ ಮತ್ತು ಸಂಕಲ್ಪದಿಂದ ಗುರುವು ಶಿಷ್ಯನಿಗೆ ಮಾಡುವ ಆಶೀರ್ವಾದ ಎಂಬ ಸೀಮಿತವಾದ ಅರ್ಥವು ರೂಢಿಯಲ್ಲಿದೆ. ಆದರೆ ಶಾಂಭವಿ ದೀಕ್ಷೆಯು ಶಿಷ್ಯ ನಲ್ಲಿರುವ ನಾಡಿಗಳ ಮೂಲಕ ಗುರುವು ತನ್ನಲ್ಲಿರುವ ಪಾರಮಾರ್ಥಿಕ ಶಕ್ತಿಯನ್ನು ಹರಿಸುವುದರಿಂದ ಇದನ್ನು ಶಾಂಭವಿ ದೀಕ್ಷೆ ಎಂದು ಕರೆಯುವುದು.
ಭವತಿ ಅಸ್ಮತ್ ಇತಿ ಶಂಭುಃ ಶಂಭು ಎಂದರೆ ಮೋಕ್ಷಾನಂದವೆಂಬ ಅರ್ಥಗಳಿವೆ.
ಶಂ ಭವತಿ ಇತಿ ಶಂಭುಃ ಶುಭವನ್ನು ಉಂಟು ಮಾಡುವವನು
ಶಾಂಭವಿ ದೀಕ್ಷೆ ಎನ್ನುವುದಕ್ಕೆ ಯೋಗಶಾಸ್ತ್ರದಲ್ಲಿ ಶಾಂಭವಿ ವಿದ್ಯೆ ಎಂಬುದಾಗಿಯೂ ಉಲ್ಲೇಖವಿದೆ.
ಈಶ್ವರನಿಗೆ ಜಗತ್ತಿನ ಹಾಗೂ ಜೀವಾತ್ಮನ ಒಡೆಯ , ಶಿವ ಮುಖ್ಯವಾಗಿ ಶಂಭು ಎಂಬುದಾಗಿ ನಾನಾ ನಾಮಗಳಿವೆ ಇವಲ್ಲದೆ ಶಿವನೆಂದರೆ , ಶಂಭು ಎಂದರೆ ಆನಂದಸ್ವರೂಪ ಎಂಬ ಅರ್ಥವೂ ಇದೆ.
ಈ ಮಾರ್ಗದಲ್ಲಿ ಸಾಧಕನಿಗೆ ಶಾಂಭವಿ ಮುದ್ರೆಯಾಗುವುದರಿಂದ ಇದು ಶಾಂಭವೀದೀಕ್ಷೆಯೂ ಹೌದು.
*****
No comments:
Post a Comment