SEARCH HERE

Monday, 1 April 2019

ಬೇಸಿಗೆ ಬಿಸಿಲು ಹೆಚ್ಚಾದಾಗ high summer heat what to do health tips

When the weather reaching 40°+ C drinking ice water will have an increased pressure on the micro blood vessels.
Someone washed his feet with cold water. Then his eyes could not see clearly, and he passed out. Only the ears could hear the sound. He was terrified!
The temperature in some places has reached 40°+ but the danger is not just with drinking ice cold water. The same danger may occur with
even washing hands / face / feet. You must not subject any part of the hot  body to temperature shock with cold water.  You need about 30 minutes to allow the body to cool down and adjusted to the indoor temperature. Drink luke- warm water of  around 34 to 36 degrees C.
There was a very strong man. The doctor had examined him in the hospital about three years ago.
He met the man again and was surprised to find that he had a stroke. He was in a bad condition. The man told the doctor, " Recently,  on a hot day, upon returning home,  in order to quickly cool off from the heat, I immediately took a cold shower. I felt that I could not move my jaws properly. I  immediately called an ambulance to send me to the hospital. That saved my life."
 Remember, especially on a hot day, avoid cold water to cool off as it  will cause rapid contraction of blood vessels.
Adults with young children at home should inform their helpers about this.
 ●The weather is abnormal recently.
It may be nice to have a cold drink to cool down,  but it is very dangerous!
Avoid gulping down the drink, drink it  slowly.
Please pass this message to your family and friends.

It could save a life!
*******

Equinox phenomenon

The Equinox phenomenon  will affect us  during summers. We need to be careful to keep ourselves healthy.  Please stay indoors and keep animals indoor or protected  especially from 12pm-3pm daily. The temperature will fluctuate  and may reach  40 degrees Celsius. This can easily cause dehydration and sun stroke. (Ps: this phenomena is due to the sun directly positioned above the equator line. )

Please keep everyone inclusive of yourself hydrated. Everyone should be consuming about 3 litres of fluid everyday. Monitor everyone's blood pressure as frequent as possible. Many may get heat stroke.

Take Cold showers as frequent as possible. Reduce meat increase fruits & veg.

Heat wave is no joke! Place a new unused candle outside home area or exposed area. If candle can melt, its at a dangerous level.

Always place a pail or 2 of water half filled in living room & each in every room to keep temperature down.

Heat stroke has no indicative symptoms. Once you faint, its serious & dangerous as organ failure kicks in.

Always check lips, eye balls for  moisture.
********

ಬೇಸಿಗೆ ತಂಪಾಗಿರಬೇಕು ಅಂದ್ರೆ ಈ 8 ಕ್ರಮ ಪಾಲಿಸಿದ್ರೆ ಸಾಕು, ಬೇಸಿಗೆ ಕಾಲದಲ್ಲಿ ತಂಪಾಗಿರಲು ಸಲಹೆಗಳು.
ಬೇಸಿಗೆ ಕಾಲದಲ್ಲಿ ಆದಷ್ಟು ನೀರಿನಾಂಶವನ್ನು ಹೊಂದಿರುವ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನುವುದು ಸೂಕ್ತ.

ಬಿಳಿ ಬಟ್ಟೆಗೆ ಹೆಚ್ಚು ಆದ್ಯತೆ ನೀಡಿ.
ಸೂರ್ಯನ ಅತೀ ನೇರಳೇ ಕಿರಣಗಳು (ultra violet rays) ಇವುಗಳಿಂದ ರಕ್ಷಿಸಿಕೊಳ್ಳಲು SPF ಯುಕ್ತ ಸನ್ ಸ್ಕ್ರೀನ್ ಲೋಷನ್ ಮತ್ತು ಸನ್ ಬರ್ನ್ ಕ್ರೀಮ್ ಅನ್ನು ಬಳಸಿ.
ಬಿಸಿಲಲ್ಲಿ ನಾವು ಎಷ್ಟು ನೀರು ಕುಡಿದರೂ ಸಾಲದು.ನೀರು ಕುಡಿಯಲು ಸಾಧ್ಯವಾಗದಿದ್ದಲ್ಲಿ ಯಾವುದೇ ಜಲ ಪದಾರ್ಥವಾದರೂ ಸರಿಯೇ ಕುಡಿಯುತ್ತಿರಿ.ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಬರೀ ನೀರು ಕುಡಿಯುವ ಬದಲು,ನೀರಿನ ಜೊತೆಗೆ ಸ್ವಲ್ಪ ಉಪ್ಪು ಮತ್ತು ಸಕ್ಕರೆಯನ್ನು ಹಾಕಿಕೊಂಡು ಕುಡಿದರೆ ಬೇಸಿಗೆ ಕಾಲದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ ಲಭಿಸುತ್ತದೆ.
ಹೊರಗೆ ಹೋಗುವಾಗ ಕಂಡಕಂಡಲ್ಲಿ ನೀರು ಕುಡಿಯುವುದಕ್ಕಿಂತ ಮನೆಯಲ್ಲಿಯೇ ಒಂದು ಬಾಟಲಿಯಲ್ಲಿ ನೀರನ್ನು ತೆಗೆದುಕೊಂಡು ಹೋಗಿ ಬಾಯಾರಿದಾಗ ಕುಡಿಯಿರಿ ಹೊರಗಡೆಯ ನೀರು ಕುಡಿದರೆ ಅದು ಕಲುಷಿತ ಅಥವಾ ಮಲಿನಗೊಂಡಿರುವ ನೀರಿರಬಹುದು ಮತ್ತೆ ಆರೋಗ್ಯ ಕೆಟ್ಟು ಖಾಯಿಲೆಗಳು ಬರಬಹುದು. ಪ್ರಾರಂಭದಲ್ಲಿ ಕೆಮ್ಮು ,ನೆಗಡಿ ಯಿಂದ ಶುರುವಾಗಿ ವೈರಸ ಅಥವಾ ಬ್ಯಾಕ್ಟೀರಿಯಾ ದಿಂದ ಸೋಂಕು ಉಂಟಾಗಿ ಜ್ವರವೂ ಬರಬಹುದು.
ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಬಿಸಿಯಾಗಿರುವ ನೀರಿನಲ್ಲಿ ಸ್ನಾನ ಮಾಡಬೇಡಿ.ಸ್ನಾನ ಮಾಡಿದರು ಮತ್ತೆ ಬೆವರು ಜಾಸ್ತಿಯಾಗುತ್ತದೆ.ಆದ್ದರಿಂದ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಿ.ಆಗ ಫ್ರೆಶ್ ಅನ್ನಿಸುತ್ತದೆ.
ಫ್ರಿಡ್ಜ್ನಲ್ಲಿಟ್ಟಿರುವ ನೀರನ್ನು ಕುಡಿಯುವುದಕ್ಕಿಂತ ಆದಷ್ಟು ಮಣ್ಣಿನ ಮಡಿಕೆಯಲ್ಲಿ ಇಟ್ಟಿರುವ ನೀರನ್ನು ಕುಡಿಯಿರಿ ಇದು ಆರೋಗ್ಯಕ್ಕೆ ಒಳ್ಳೆಯದು.
ಬಿಸಿಲಿನಲ್ಲಿ ಹೊರಗೆ ಹೋಗುವಾಗ ಕೂಲಿಂಗ್ ಗ್ಲಾಸ್ ಕನ್ನಡಕಗಳನ್ನು ಧರಿಸಿ ಮತ್ತು ಛತ್ರಿಯನ್ನು ತೆಗೆದುಕೊಂಡ ಹೋಗಿ.
ಹೊರಗೆ ಹೋಗುವ ಅನಿವಾರ್ಯ ವಿದ್ದರೆ ಮಾತ್ರ ಹೋಗಿ ಇಲ್ಲವಾದರೆ ಸುಮ್ಮನೇ ತಿರುಗಾಡಲು ಹೋಗಬೇಡಿ.
ಹಣ್ಣುಗಳಾದ ಕಲ್ಲಂಗಡಿ,ನಿಂಬೆಹಣ್ಣಿನ ಜ್ಯೂಸ್, ಕಿತ್ತಳೆ, ಮೂಸಂಬಿ ಇಂತಹ ಹಣ್ಣುಗಳನ್ನು ತಿನ್ನಿ.
ಬೇಳೆ, ತರಕಾರಿಗಳನ್ನು ಹೆಚ್ಚು ಬೇಯಿಸಲು ಹೋಗಬೇಡಿ.ತರಕಾರಿ ಮತ್ತು ಸೊಪ್ಪುಗಳನ್ನು ತೊಳೆದ ನೀರನ್ನು ಎಲ್ಲಿಯೋ ಎಸೆಯುವುದಕ್ಕಿಂತ ಮನೆಯಲ್ಲಿರುವ ಗಿಡಗಳಿಗೆ ಹಾಕಿ.
ಬೇಸಿಗೆ ಕಾಲದಲ್ಲಿ ಆದಷ್ಟು ಮೊಳಕೆ ಬರಿಸಿದ ಹೆಸರುಕಾಳು,ಕಡ್ಲೆಕಾಳು, ಇನ್ನಿತರ ಕಾಳುಗಳನ್ನುಹೆಚ್ಚಾಗಿ ಸೇವಿಸಿ.
ಆದಷ್ಟು ಬಣ್ಣ ಬಿಡುವ ಬಟ್ಟೆಯನ್ನು ಧರಿಸಬೇಡಿ ತೆಳುವಾದ ಬಣ್ಣ ಹೋಗದೆ ಇರುವ ಬಟ್ಟೆಯನ್ನು ಧರಿಸಿದರೆ ಓಳಿತು.
******
ಬೇಸಿಗೆಯಲ್ಲಿ ಆರೋಗ್ಯದಾಯಕ ಪಾನಕಗಳೊಂದಿಗೆ ನವಗ್ರಹಗಳ ಶಾಂತಿಯಾಗಬೇಕಾದರೆ ಹೀಗೆ ಮಾಡಿ. ಬಿಸಿಲುಗಾಲದಲ್ಲಿ ಇದನ್ನು ಹಂಚುವುದರಿಂದ ಆಯಾ ಗ್ರಹಗಳು ಸಂತೃಪ್ತಿ ಹೊಂದುತ್ತವೆ.

ರವಿ ಗೆ...೧) ದಾಸವಾಳದ ಹೂವಿನ ಶರಬತ್ ....ಕೆಂಪು ದಾಸವಾಳವನ್ನು ರುಬ್ಬಿ ರಸ ತೆಗೆದು , ಅದಕ್ಕೆ ಸ್ವಲ್ಪ ನೀರು , ಬೆಲ್ಲ , ಏಲಕ್ಕಿ ಹಾಕಿ ಕುಡಿಯಬಹುದು/ಕೊಡಬಹುದು.

೨) ಕಿತ್ತಳೆ ಹಣ್ಣನ್ನು ಬಿಡಿಸಿ , ರಸ ತೆಗೆದು ,
ಒಂದು ಚಿಟಿಕೆ ಹುರಿದ ಜೀರಿಗೆ ಪುಡಿ , ಒಂದು ಚಿಟಿಕೆ ಕಾಳುಮೆಣಸಿನ ಪುಡಿ, ಒಂದು ಚಿಟಿಕೆ ಉಪ್ಪು ಹಾಕಿ ಕುಡಿಯಬೇಕು/ಕೊಡಬೇಕು.

ಚಂದ್ರ....೧) ನೀರು ಮಜ್ಜಿಗೆಗೆ ಬೆಲ್ಲ , ಏಲಕ್ಕಿ ಪುಡಿ ಹಾಕುವುದು.

೨) ನೀರು ಮಜ್ಜಿಗೆಗೆ ಸೈಂಧವ ಲವಣ , ಹಸಿಶುಂಠಿ ರಸ ಬೆರೆಸಿ ಸೇವಿಸುವುದು.
೩) ತಣ್ಣನೆಯ ಹಾಲಿಗೆ ಕುಟ್ಟಿದ ಬೆಲ್ಲ , ಏಲಕ್ಕಿ ಪುಡಿ ಹಾಕುವುದು.
೪) ಅಕ್ಕಿ ತೊಳೆದ ನೀರಿಗೆ , ಅರ್ಧ ಲೋಟ ಹಾಲು , ಬೆಲ್ಲ ಬೆರೆಸಿ, ಏಲಕ್ಕಿ ಪುಡಿಯೊಂದಿಗೆ ಸೇವಿಸುವುದು.
೫) ಕಲ್ಲಂಗಡಿ ಹಣ್ಣನಿಂದ ಬೀಜಗಳನ್ನು ಬೇರ್ಪಡಿಸಿ , ಅದರ ರಸಕ್ಕೆ ಸಕ್ಕರೆಯನ್ನು ಹಾಕಿ ಸೇವಿಸುವುದು.

ಕುಜ .....ಟೊಮೇಟೊಗಳನ್ನು ಮಿಕ್ಸಿಗೆ ಹಾಕಿ , ಸ್ವಲ್ಪ ನೀರು ಬೆರೆಸಿ , ಶೋಧಿಸಿ , ಬೆಲ್ಲ ಏಲಕ್ಕಿ ಪುಡಿ ಹಾಕಿ ಸೇವಿಸುವುದು.

೨) ಅನಾನಸ್ ಹಣ್ಣು ಹೆಚ್ಚಿ , ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಹಾಕಿ , ಬೆಲ್ಲದ ಪುಡಿ ಸೇರಿಸಿ ಕುಡಿಯಬಹುದು / ಕೊಡಬಹುದು.

ಬುಧ ....೧) ಹೆಸರು ಕಾಳು ಜೂಸ್....

೧/೨ ಬಟ್ಟಲು ಹೆಸರುಕಾಳನ್ನು ೩-೪ ಗಂಟೆ ನೆನೆಸಿ , ಮಿಕ್ಸಿಗೆ ಹಾಕಿ ರುಬ್ಬಿ , ಅದಕ್ಕೆ ನೀರು , ಉಪ್ಪು , ಶುಂಠಿ , ಜೀರಿಗೆ ಪುಡಿ ಬೆರೆಸಿ ಕುಡಿಯಬಹುದು. ಇದಕ್ಕೆ ನೀರಿನ ಬದಲು ಮಜ್ಜಿಗೆ ಕೂಡ ಬೆರೆಸಬಹುದು.
೨) ಪುದಿನಾ ಸೊಪ್ಪನ್ನು ಬಿಡಿಸಿಕೊಂಡು ಮಿಕ್ಸಿಗೆ ಹಾಕಿ , ನೀರು ಬೆರೆಸಿ , ಬೆಲ್ಲ , ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದು.

ಗುರು .....ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ , ಸ್ವಲ್ಪ ಹಾಲನ್ನು ಬೆರೆಸಿ , ತೆಳುವಾಗಿ ಮಾಡಿಕೊಂಡು , ಅದಕ್ಕೆ ಬೆಲ್ಲ , ಏಲಕ್ಕಿ ಪುಡಿ ಹಾಕಿ ಕುಡಿಯುವುದು/ಹಂಚುವುದು.

೨) ಕಬ್ಬಿನ ರಸಕ್ಕೆ ಚಿಟುಕೆ ಕಾಳುಮೆಣಸು , ಶುಂಠಿ ಹಾಕಿ ಕುಡಿಯುವುದು.
೩) ಬೆಲ್ಲದ ನೀರು ಪಾನಕ ಬಾಯಾರಿಕೆಯನ್ನು ಹೋಗಲಾಡಿಸಿ , ಚೈತನ್ಯವನ್ನು ತುಂಬುವುದು.

ಶುಕ್ರ .....೧) ನಿಂಬೆರಸ  , ನೀರು , ಶುಂಠಿ , ಮೆಣಸು ಪುಡಿ , ಜೀರಿಗೆ ಪುಡಿ, ಚಿಟುಕೆ ಉಪ್ಪು ಹಾಕಿ ಸೇವಿಸುವುದು.

೨) ಕಾಮಕಸ್ತೂರಿ ಪಾನಕ....೧/೨ ಬಟ್ಟಲು ಕಾಮಕಸ್ತೂರಿ ಬೀಜವನ್ನು ರಾತ್ರಿ ನೆನೆಸಿಟ್ಟರೆ ಬೆಳಿಗ್ಗೆಗೆ ಅರಳುವುದು. ಇದನ್ನು ಕಿವುಚಿ , ಜೊತೆಗೆ ಬೆಲ್ಲ, ನೀರು , 
ಹಾಲು ಹಾಕಿ ಕುಡಿಯಬೇಕು. ಇದು ಬಾಯಿಹುಣ್ಣಿಗೂ ಒಳ್ಳೆಯದು.
೩) ಹುಣಸೆಹಣ್ಣನ್ನು ಚೆನ್ನಾಗಿ ಕಿವುಚಿ , ಅದರ ೨ ಚಮಚ ರಸ , ನೀರು , ಬೆಲ್ಲ , ಏಲಕ್ಕಿ ಹಾಕಿ ಕುಡಿಯಬಹುದು.

ಶನಿ ....ನೇರಳೇ ಹಣ್ಣಿನ ಬೀಜವನ್ನು ತೆಗೆದು ಸ್ವಲ್ಪ ನೀರು ಹಾಕಿ , ಸಿಪ್ಪೆ ತೆಗೆದು , ಬೆಲ್ಲ  , ಏಲಕ್ಕಿ ಪುಡಿ ಬೆರೆಸಿ ಕುಡಿಯಬೇಕು.

೨) ...ಕಪ್ಪು ದ್ರಾಕ್ಷಿಯನ್ನು ತೊಳೆದು ಮಿಕ್ಸಿಮಾಡಿ  , ಸಕ್ಕರೆ ಹಾಕಿ ಕುಡಿಯುವುದು.

ರಾಹು ....ಸಪೋಟ ಹಣ್ಣನ್ನು ತೊಳೆದು , ಬೀಜ , ಸಿಪ್ಪೆ ತೆಗೆದು , ಹಾಲಿನೊಂದಿಗೆ ಮಿಕ್ಸಿಗೆ ಹಾಕಿ , ಏಲಕ್ಕಿ ಪುಡಿಯೊಂದಿಗೆ ಕುಡಿಯಬಹುದು/ ಹಂಚಬಹುದು.

ಕೇತು ....ಬೆರಕೆ ಹಣ್ಣುಗಳನ್ನು ಮಿಕ್ಸಿಗೆ ಹಾಕಿ , ಬೆಲ್ಲದ ಪುಡಿ , ಹಾಲು ಹಾಕಿ , ಕುಡಿಯುವುದು ಒಳ್ಳೆಯದು.

೨) ..೮-೧೦  ಲಾವಂಚ ದ ಬೇರುಗಳನ್ನು ೧/೨ ಲೀಟರ್ ನಲ್ಲಿ ಎರಡು ಗಂಟೆಗಳ ಕಾಲ ನೆನೆಸಿಟ್ಟು , ನಂತರ ಶೋಧಿಸಿ , ಅರ್ಧಕಪ್ ಬೆಲ್ಲ , ನಿಂಬೆರಸ ,ಏಲಕ್ಕಿ ಪುಡಿ ಹಾಕಿ ಕುಡಿಯಬೇಕು. ಇದು ತಂಪಾಗಿಸುವುದಲ್ಲದೇ ರಕ್ತಶುದ್ಧಿಯನ್ನು ಮಾಡುತ್ತದೆ.

ತಂಪುಪಾನೀಯಗಳನ್ನು ಈ ರೀತಿಯಾಗಿ ತಯಾರಿಸಿ ಬೇಸಿಗೆ ದಿನಗಳಲ್ಲಿ ಕೊಡುವುದರಿಂದ ಬಾಯಾರಿದವರು ಸಂತೃಪ್ತರಾಗಿ ಮನದಲ್ಲೇ ಹರಸುತ್ತಾರೆ.

******

ಸೂರ್ಯನ ಶಾಖದ ಪ್ರಖರತೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು. ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ.  ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿ

1) ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿ
2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ 
3) ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
4) ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ 
5) ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಕೊಡಿ 
6) ಈ ಬಿಸಿಲಿನಲ್ಲಿ ವಿಟಮಿನ್ "ಸಿ" ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿ‌ಸಕ್ಕರೆ ಬದಲು ಬೆಲ್ಲವನ್ನು ಬಳಸಿ
7) ಬೆಳಗ್ಗೆ ಎದ್ದ ತಕ್ಷಣ "ತುಳಸಿ" ಎಲೆಗಳನ್ನು Mixi ಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲ ಮಾಡುವಾಗ ಸುಸ್ತಾಗುವುದಿಲ್ಲ
8 ) ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ,ಇಲ್ಲವಾದರೆ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆ ಜೊತೆಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು!
8 ) ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ  "ಹರಳೆಣ್ಣೆ" ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ.ವಯಸ್ಕರೂ ಇದನ್ನು ಅನುಸರಿಸಬೇಕು
9) ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ,ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ
10) ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು
 ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ
11 ) ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗುಲಬಹುದು
12) ಈ ಸಮಯದಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ,ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ
13) 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು  ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು ಇದರಿಂದ ಮಕ್ಕಳನ್ನು Dehydration ನಿಂದ ಕಾಪಾಡಿಕೊಳ್ಳಬಹುದು
14) ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ, ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ 10 ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದಲ್ಲದೇ ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ
15) ಬಿಗಿಯಾದ ಒಳ ಉಡುಪುಗಳನ್ನು ಕಡ್ಡಾಯವಾಗಿ ಬಳಸಬೇಡಿ,ಇದರಿಂದ ರಕ್ತ ಸಂಚಾರಕ್ಕೂ ತೊಂದರೆಯಾಗುತ್ತದೆ ಪರಿಣಾಮ ಕಡಿಮೆ ರಕ್ತದೊತ್ತಡ ಅಥವಾ ಹೆಚ್ಚಿನ ರಕ್ತದೊತ್ತಡ ಆಗಿ ಮಾರಣಾಂತಿಕ ಆಗಬಹುದು.
**************

ಪ್ರಿಯ ಮಿತ್ರರೇ, ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಫೆಬ್ರವರಿಯಿಂದ ದಿನ ದಿನಕ್ಕೆ ಹೆಚ್ಚಾಗುತ್ತಿದೆ.ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದ ವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕಿದೆ,ಇಲ್ಲವಾದರೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು,ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ.ಆದ್ದರಿಂದ ನಾನು ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿ

1) ಗೃಹಿಣಿಯರು ನಿಮ್ಮ ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳಿ
2) ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿ 
3) ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
4) ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ 
5) ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಕೊಡಿ 
6) ಈ ಬಿಸಿಲಿನಲ್ಲಿ ವಿಟಮಿನ್ "ಸಿ" ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯಿರಿ ಇಲ್ಲಿ‌ಸಕ್ಕರೆ ಬದಲು ಬೆಲ್ಲವನ್ನು ಬಳಸಿ
7) ಬೆಳಗ್ಗೆ ಎದ್ದ ತಕ್ಷಣ "ತುಳಸಿ" ಎಲೆಗಳನ್ನು Mixi ಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯಿರಿ ಇದರಿಂದ ಕೆಲ ಮಾಡುವಾಗ ಸುಸ್ತಾಗುವುದಿಲ್ಲ
8 ) ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬೇಡಿ,ಇಲ್ಲವಾದರೆ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆ ಜೊತೆಗೆ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು!
8 ) ಈ ಸಮಯದಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು ಆದ್ದರಿಂದ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ  "ಹರಳೆಣ್ಣೆ" ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ.ವಯಸ್ಕರೂ ಇದನ್ನು ಅನುಸರಿಸಬೇಕು
9) ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ,ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ
10) ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು
 ದಿನಕ್ಕೆರಡು ಬಾರಿ ಕುಡಿಯಿರಿ ಇದರಿಂದ ದೇಹ ತಂಪಾಗಿರುತ್ತದೆ
11 ) ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು ಇಲ್ಲವಾದರೆ ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗುಲಬಹುದು
12) ಈ ಸಮಯದಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿ,ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ಆಗುವುದಿಲ್ಲ
13) 5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು  ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು ಇದರಿಂದ ಮಕ್ಕಳನ್ನು Dehydration ನಿಂದ ಕಾಪಾಡಿಕೊಳ್ಳಬಹುದು
14) ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ, ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ 10 ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದಲ್ಲದೇ ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ

ಈ ಸಂದೇಶವನ್ನು ನೀವೂ ಪಾಲಿಸಿ 
**********

No comments:

Post a Comment