SEARCH HERE

Monday, 1 April 2019

ಮತ್ಸ್ಯ ಜಯಂತಿ matsya jayanti chaitra shukla triteeya

The Hindu scriptures mention that there have been 10 incarnations of Lord Vishnu and his first incarnation came in the form of the Matsya Avatar.

The occasion of Matsya Jayanti is celebrated to offer prayers and worship Lord Vishnu’s first incarnation, Matsya Avatar. The incarnation took place during the Sat Yuga in the form of an enormous fish. There is only one temple of Lord Vishnu’s Matsya Avatar in the state of Andhra Pradesh - Nagalapuram Veda Narayana Swamy Temple.

As per the Hindu calendar, this propitious occasion is celebrated in the month of Chaitra during the third day of Shukla Paksha and the Greogiran day predicts the day to fall in either March or April. It is being celebrated on April 15 this year.

The devotees on this special day take a holy bath after waking up early in the morning and also observe a fast in the name of Lord Vishnu’s Matsya avatar. The fast is kept a day before Matsya Jayanti and is closed during the evening of Matsya Jayanti after offering prayers to the deity. The Jayanti also observer various charities and donation drive to Brahmins and the poor segment of the society.
The day’s history stems from Lord Vishnu taking the form of a gigantic fish and saving King Manu and the Vedas from the great floods. The deity as per Hindu scriptures directed a king, Manu to construct a ship, gather seeds of all plants, animals, the god of snakes Vasuki and the sacred seven sages and aboard them all on a ship when the great flood arrives.

The scriptures also mention the Matsya Avatar as the first incarnation of Lord Vishnu who saved the universe from Hayagriva, a demon. The devotees believe that the deity saves them from all evils and the worshipping of Lord Vishnu’s Matsya avatar gets rid of all their sins in the past and present and guides them towards the path of righteousness.

Lord Vishnu is considered as the lord of preservation and the diety takes a distinctive form and saves the entire species of the world whenever there is a threat to the earth.
***


ಮತ್ಸ್ಯಾವತಾರ  ಚಿಂತನೆ 

 ಲೇಖಕರು : ಫಣೀಂದ್ರ k 
 

ಪರಮಾತ್ಮನಅನಂತ ಅವತಾರಗಳಲ್ಲಿ ಮತ್ಸ್ಯಾವತಾರ ಕೂಡ ಒಂದು, ದಶಾವತಾರಗಳಲ್ಲಿಗುರುತಿಸುವ ಮೊದಲ ಅವತಾರ ಎಂದೇಹೇಳಬಹುದು ಆದರೆ ಇದೆ ಪ್ರಥಮಅವತಾರ ಎಂದು ನಿಖರವಾಗಿ ಹೇಳಲಾಗುವುದಿಲ್ಲಆದರೂ ನಾವು ಗುರುತಿಸುವ ದಶಾವತಾರಗಲ್ಲಿಮತ್ಸ್ಯಾವತಾರ ಮೊದಲನೇ ಅವತಾರ.

 

ವೈವಸ್ವತಮನುವನ್ನು ಪ್ರಳಯದಿಂದ ಕಾಪಾಡಿದ ಅವತಾರ ಎಂದುಹೇಳಬಹುದು. ಎರಡು ಸಂದರ್ಭದಲ್ಲಿ ಈಮತ್ಸಾವತಾರ ನಮಗೆ ತಿಳಿಯುತ್ತದೆ. ವೈವಸ್ವತಮನ್ವಂತರ ಮತ್ತು ಚಾಕ್ಷುಷ ಮನ್ವಂತರದಲ್ಲಿಈ ಕಥೆಗಳು ಬರುತ್ತವೆ. ಪರಮಾತ್ಮನ ಅದ್ಭುತ ಅವತಾರಗಳಲ್ಲಿ ಈಮತ್ಸ್ಯಾವತಾರ ಒಂದು.

 

ಮೊದಲು ಈ ಕಥೆ ನಡೆದಿದ್ದುಚಾಕ್ಷುಷ ಮನ್ವಂತರದಲ್ಲಿ, ಒಮ್ಮೆ ಬ್ರಹ್ಮದೇವರು ದಿನಪ್ರಳಯಕಾಲದಲ್ಲಿನಿದ್ರಾವಸ್ಥೆಯಲ್ಲಿರುವಾಗ ಹಯಗ್ರೀವಾಸುರ ಎಂಬ ಅಸುರನು,   ಬ್ರಹ್ಮದೇವರಲ್ಲಿದ್ದ ವೇದಗಳನ್ನು ಅಪಹರಿಸಿಕೊಂಡು ಹೋಗುವಾಗ ಪರಮಾತ್ಮನು ಮೀನಿನರೂಪದಲ್ಲಿ ಪ್ರಕಟಗೊಂಡು ಹಯಗ್ರೀವಸುರನ ಸಂಹರಿಸಿ ಪುನಃ ವೇದಗಳನ್ನುಬ್ರಹ್ಮದೇವರಿಗೆ ಕೊಟ್ಟನು. ಬ್ರಹ್ಮದೇವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದಪುರಾಣವೇ ಮುಂದೆ " ಮತ್ಸ್ಯಪುರಾಣ " ಎಂದು ಪ್ರಸಿದ್ಧ ವಾಯಿತು.

 

ವೈವಸ್ವತಮನ್ವಂತರದಲ್ಲಿ ಬರುವ ಕಥೆಯ ಪ್ರಕಾರಸೂರ್ಯನ ಮಗನಾದ ಸತ್ಯವ್ರತ ರಾಜಇವನೇ ಮುಂದೆ ವೈವಸ್ವತ ಮನುಎಂದು ಕರೆಯುತ್ತಾರೆ, ಕೃತಮಾಲ ನದಿಯ ಬಳಿಯಲ್ಲಿನಿರಾಹಾರಿಯಾಗಿ ತಪಸ್ಸು ಮಾಡಲು ಸಂಜೆಯಅರ್ಘ್ಯಪ್ರದಾನ ಸಮಯದಲ್ಲಿ ನದಿಯಲ್ಲಿ ಅರ್ಘ್ಯ ಬಿಡುವ ಸಂದರ್ಭದಲ್ಲಿಒಂದು ಸಣ್ಣ ಮೀನು ಬಂದುಸತ್ಯವ್ರತನ ಕೈ ಬೊಗಸೆಯಲ್ಲಿ ಬಂದುಸೇರಿತು ನಂತರ ಮಾತನಾಡಲು ನನ್ನನ್ನುಸುರಕ್ಷಿತ ಸ್ಥಳಕ್ಕೆ ಸೇರಿಸು ಎಂದು ಕೋರಿತು. ರಾಜ ತಕ್ಷಣ ತನ್ನ ಕಮಂಡಲದಲ್ಲಿಅದನ್ನು ಬಿಡಲು ಆ ಮೀನುಅಲ್ಲೇ ದೊಡ್ಡದಾಯಿತು, ನಂತರ ರಾಜ ತನ್ನಅರಮನೆಯಲ್ಲಿದ್ದ ಬಾವಿಗೆ ಬಿಟ್ಟನು. ಮೀನುಬೆಳೆಯುತ್ತ ಬಾವಿಯು ಸಾಕಾಗಲಿಲ್ಲ. ನಂತರತನ್ನ ಅರಮನೆಯಲ್ಲಿದ್ದ ಕೊಳದಲ್ಲಿ ಬಿಟ್ಟನು, ಮರುದಿನ ಕೊಳದಲ್ಲೂ ಜಾಗಸಾಲದಾಯಿತು, ನಂತರ ಕೃತಮಾಲ ನದಿನಂತರ ಸಮುದ್ರಕ್ಕೆ ಬಿಟ್ಟನು. ಆಗ ರಾಜನಿಗೆ ಆಶ್ಚರ್ಯವಾಗಿಪರಮಾತ್ಮನಿಗೆ ಪ್ರಾರ್ಥನೆ ಮಾಡಿದನು, ಪರಮಾತ್ಮ ಪ್ರತ್ಯಕ್ಷನಾಗಿ ತಾನೇಈ ಮತ್ಸ್ಯವತಾರನಾಗಿ ಅವತರಿಸಿದ್ದೇನೆ, ಇಂದಿನಿಂದ ಸರಿಯಾಗಿ ಏಳನೇ ದಿನಕ್ಕೆಸರಿಯಾಗಿ ಮೂರು ಲೋಕಗಳು ಸಮುದ್ರದಲ್ಲಿಮುಳುಗಲು ನಾನು ಒಂದು ದೋಣಿಯನ್ನು   ನಿನ್ನಬಳಿ ಕಳಿಸುವೆನು, ಎಲ್ಲಾ ತರಕಾರಿ ಆಹಾರಪದಾರ್ಥಗಳನ್ನೂಆ ದೋಣಿಯಲ್ಲಿರಿಸಿ ಋಷಿಗಳನ್ನುದೋಣಿಯಲ್ಲಿ ಕುಳ್ಳರಿಸಿ, ಆ ದೋಣಿಗೆ ಹಗ್ಗವನ್ನುಮತ್ಸ್ಯಾವತಾರನಾದ ನನಗೆ ಕಟ್ಟಿ ಬಿರುಗಾಳಿಯಿಂದರಕ್ಷಿಸಿಕೋ ಎಂದು ಸತ್ಯವ್ರತರಾಜನಿಗೆ ವಿವರಿಸಿಅಂತರ್ಧಾನನಾದನು.

 

ವೈವಸ್ವತಮನು ಪರಮಾತ್ಮ ಹೇಳಿದ ಹಾಗೆಆ ದೋಣಿಯನ್ನು ಆಮೀನಿಗೆ ಕಟ್ಟಿ ದೋಣಿಯೇರಿದನು ಪರಮಾತ್ಮಪ್ರಳಯಕಾಲದಲ್ಲಿ ಆ ದೋಣಿ ಅಲ್ಲಿದ್ದಋಷಿಗಳು ಸಮಸ್ತವನ್ನು ರಕ್ಷಿಸಿದನು, ನಂತರ ವೈವಸ್ವತ ಮತ್ತುಬ್ರಹ್ಮದೇವರ ಪ್ರಶ್ನೆಗಳಿಗೆ ಉತ್ತರ ಕೊಟ್ಟನು ಅದೇಪ್ರಸಿದ್ಧವಾದ "ಮತ್ಸ್ಯಪುರಾಣ" ವಾಯಿತು. ವೇದವ್ಯಾಸರು ತಮ್ಮಅಷ್ಟಾದಶಪುರಾಣಗಳಲ್ಲಿ ಈ ಮತ್ಸ್ಯಪುರಾಣ   ರಚಿಸಿದರು.
ವೈವಸ್ವತಮನ್ವಂತರದಲ್ಲಿ ಬರುವ ಕಥೆಯ ಪ್ರಕಾರಸೂರ್ಯನ ಮಗನಾದ ಸತ್ಯವ್ರತ ರಾಜಇವನೇ ಮುಂದೆ ವೈವಸ್ವತ ಮನುಎಂದು ಕರೆಯುತ್ತಾರೆ, ಕೃತಮಾಲ ನದಿಯ ಬಳಿಯಲ್ಲಿನಿರಾಹಾರಿಯಾಗಿ ತಪಸ್ಸು ಮಾಡಲು ಸಂಜೆಯಅರ್ಘ್ಯಪ್ರದಾನ ಸಮಯದಲ್ಲಿ ನದಿಯಲ್ಲಿ ಅರ್ಘ್ಯ ಬಿಡುವ ಸಂದರ್ಭದಲ್ಲಿಒಂದು ಸಣ್ಣ ಮೀನು ಬಂದುಸತ್ಯವ್ರತನ ಕೈ ಬೊಗಸೆಯಲ್ಲಿ ಬಂದುಸೇರಿತು ನಂತರ ಮಾತನಾಡಲು ನನ್ನನ್ನುಸುರಕ್ಷಿತ ಸ್ಥಳಕ್ಕೆ ಸೇರಿಸು ಎಂದು ಕೋರಿತು. ರಾಜ ತಕ್ಷಣ ತನ್ನ ಕಮಂಡಲದಲ್ಲಿಅದನ್ನು ಬಿಡಲು ಆ ಮೀನುಅಲ್ಲೇ ದೊಡ್ಡದಾಯಿತು, ನಂತರ ರಾಜ ತನ್ನಅರಮನೆಯಲ್ಲಿದ್ದ ಬಾವಿಗೆ ಬಿಟ್ಟನು. ಮೀನುಬೆಳೆಯುತ್ತ ಬಾವಿಯು ಸಾಕಾಗಲಿಲ್ಲ. ನಂತರತನ್ನ ಅರಮನೆಯಲ್ಲಿದ್ದ ಕೊಳದಲ್ಲಿ ಬಿಟ್ಟನು, ಮರುದಿನ ಕೊಳದಲ್ಲೂ ಜಾಗಸಾಲದಾಯಿತು, ನಂತರ ಕೃತಮಾಲ ನದಿನಂತರ ಸಮುದ್ರಕ್ಕೆ ಬಿಟ್ಟನು. ಆಗ ರಾಜನಿಗೆ ಆಶ್ಚರ್ಯವಾಗಿಪರಮಾತ್ಮನಿಗೆ ಪ್ರಾರ್ಥನೆ ಮಾಡಿದನು, ಪರಮಾತ್ಮ ಪ್ರತ್ಯಕ್ಷನಾಗಿ ತಾನೇಈ ಮತ್ಸ್ಯವತಾರನಾಗಿ ಅವತರಿಸಿದ್ದೇನೆ, ಇಂದಿನಿಂದ ಸರಿಯಾಗಿ ಏಳನೇ ದಿನಕ್ಕೆಸರಿಯಾಗಿ ಮೂರು ಲೋಕಗಳು ಸಮುದ್ರದಲ್ಲಿಮುಳುಗಲು ನಾನು ಒಂದು ದೋಣಿಯನ್ನು   ನಿನ್ನಬಳಿ ಕಳಿಸುವೆನು, ಎಲ್ಲಾ ತರಕಾರಿ ಆಹಾರಪದಾರ್ಥಗಳನ್ನೂಆ ದೋಣಿಯಲ್ಲಿರಿಸಿ ಋಷಿಗಳನ್ನುದೋಣಿಯಲ್ಲಿ ಕುಳ್ಳರಿಸಿ, ಆ ದೋಣಿಗೆ ಹಗ್ಗವನ್ನುಮತ್ಸ್ಯಾವತಾರನಾದ ನನಗೆ ಕಟ್ಟಿ ಬಿರುಗಾಳಿಯಿಂದರಕ್ಷಿಸಿಕೋ ಎಂದು ಸತ್ಯವ್ರತರಾಜನಿಗೆ ವಿವರಿಸಿಅಂತರ್ಧಾನನಾದನು.

 

ವೈವಸ್ವತಮನು ಪರಮಾತ್ಮ ಹೇಳಿದ ಹಾಗೆಆ ದೋಣಿಯನ್ನು ಆಮೀನಿಗೆ ಕಟ್ಟಿ ದೋಣಿಯೇರಿದನು ಪರಮಾತ್ಮಪ್ರಳಯಕಾಲದಲ್ಲಿ ಆ ದೋಣಿ ಅಲ್ಲಿದ್ದಋಷಿಗಳು ಸಮಸ್ತವನ್ನು ರಕ್ಷಿಸಿದನು, ನಂತರ ವೈವಸ್ವತ ಮತ್ತುಬ್ರಹ್ಮದೇವರ ಪ್ರಶ್ನೆಗಳಿಗೆ ಉತ್ತರ ಕೊಟ್ಟನು ಅದೇಪ್ರಸಿದ್ಧವಾದ " ಮತ್ಸ್ಯಪುರಾಣ " ವಾಯಿತು. ವೇದವ್ಯಾಸರು ತಮ್ಮಅಷ್ಟಾದಶಪುರಾಣಗಳಲ್ಲಿ ಈ ಮತ್ಸ್ಯಪುರಾಣ   ರಚಿಸಿದರು.

 

ಶ್ರೀಮದ್ಭಾಗವತದಲ್ಲಿ ಬರುವಮತ್ಸಸ್ತುತಿ

|| ಮತ್ಶ್ಯೋಯುಗಾಂತಸಮಯೇ ಮನುನೋಪಲಬ್ಧ: 

 ಕ್ಷೋಣೀಮಯೋನಿಖಿಲಜೀವನಿಕಾಯಕೇತ: |

 ವಿಸ್ರಂಸಿತಾನುರುಭಯೇಸಲಿಲೇ ಮುಖಾನ್ಮೇ 

 ಆದಾಯ ತತ್ರ ವಿಜಹಾರ ಹವೇದಮಾರ್ಗಾನ್ ||

 

ಮಹಾಭಾರತ ತಾತ್ಪರ್ಯನಿರ್ಣಯದಲ್ಲಿಬರುಮತ್ಸ್ಯಸ್ತುತಿ

|| ಅಥೋ ವಿಧಾತುರ್ಮುಖತೋ ವಿನಿಸ್ಸೃತಾನ್ 

 ವೇದಾನ್ಹಯಾಸ್ಯೋ ಜಗೃಹೇ ಸುರೇಂದ್ರ : |

 ನಿಹತ್ಯತಂ ಮತ್ಸ್ಯವಪುರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌವಿಧಾತು: |

 ಮನ್ವಂತರಪ್ರಲಯೇಮತ್ಸ್ಯರೂಪೋವಿದ್ಯಾಮದಾನ್ಮನವೇದೇವದೇವ: |

 ವೈವಸ್ವತಾಯೋತ್ತಮಸಂವಿದಾತ್ಮಾವಿಷ್ಣೋ: ಸ್ವರೂಪಪ್ರತಿಪತ್ತಿರೂಪಾಮ್ ||

 

ಇನ್ನು ನಾರಾಯಣ ವರ್ಮದಲ್ಲಿಬಂದಿರುವಶ್ರೀಮತ್ಸ್ಯಸ್ತುತಿ

 

|| ಜಲೇಷು  ಮಾಂರಕ್ಷತು ಮತ್ಸ್ಯಮೂರ್ತಿ: 

 ಯಾದೋಗಣೇಭ್ಯೋವರುಣಸ್ಯ ಪಾಶಾತ್ ||

 

ನಾರಾಯಣವರ್ಮದಲ್ಲಿ ಬರುವ 13 ನೇ ಶ್ಲೋಕದಲ್ಲಿಬರುವ ಅರ್ಥವನ್ನು ನೋಡೋಣ

 

ಮಾಂ ನನ್ನನ್ನು, ಜಲೇಷು - ಜಲಾಶಯಗಳಲ್ಲಿರುವಾಗ, ಯಾದೋಗಣೇಭ್ಯ: - ಜಲಚರ ಪ್ರಾಣಿಗಳಿಂದ, ವರುಣಸ್ಯ ಪಾಶಾತ್ - ವರುಣದೇವರಪಾಶಗಳಿಂದ ಮತ್ಸ್ಯಮೂರ್ತಿ: ಮೀನಿನ ರೂಪಧಾರಿಯಾದ ವಿಷ್ಣುವುಪರಮಾತ್ಮ ರಕ್ಷತು - ಎನ್ನ ರಕ್ಷಿಸಲಿ. (ಸುವಿದ್ಯೇ೦ದ್ರತೀರ್ಥರ ಪ್ರವಚನ ಆಧಾರಿತ)

 ವಾದಿರಾಜ ಭಗವದ್ಚರಣರದಶಾವತಾರಸ್ತುತಿಯಲ್ಲಿಬರುವಮತ್ಸ್ಯಾವತಾರಚಿಂತನೆ

 

|| ಪ್ರೋಷ್ಠಿಷವಿಗ್ರಹ  ಸುನಿಷ್ಠಿವನೋದ್ಧತ  ವಿಶಿಷ್ಟಾ೦ಬುಚಾರಿಜಲಧೇ |

 ಕೋಷ್ಠಾ೦ತರಾಹಿತವಿಚೇಷ್ಟಾಗಮೌಘ ಪರಮೇಷ್ಠಿಡಿತತ್ವಮಮ ಮಾಂ |

 ಪ್ರೆಷ್ಠಾರ್ಕಸೂನುಮನುಚೇಷ್ಟಾರ್ಥಮಾತ್ಮವಿದತೀಷ್ಟೋಯುಗಾಂತ ಸಮಯೇ |

 ಸ್ಥೆಷ್ಠಾತ್ಮಶೃಂಗಧೃತಕಾಷ್ಠಾ೦ಬುವಾಹನ ವರಾಷ್ಟಾಪದಪ್ರಭತನೋ ||   

 

ಇದರ ವಿವರಣೆ ತಿಳಿಯೋಣ

ಪ್ರೋಷ್ಠಿಷವಿಗ್ರಹ - ಶ್ರೇಷ್ಠವಾದ ಮತ್ಸ್ಯದ ದೇಹದಂತಹ ದೇಹವುಳ್ಳ, ಸುನಿಷ್ಠಿವನೋದ್ಧತ - ಧೂತ್ಕಾರದಿಂದ ಆಕಾಶದೆತ್ತರಕ್ಕೆ ಹಾರುವ, ವಿಶಿಷ್ಟಾ೦ಬುಚಾರಿಜಲಧೇ - ದೊಡ್ಡ ಗಾತ್ರದತಿಮಿಂಗಲವೇ ಮುಂತಾದ ಜಲಚರಪ್ರಾಣಿಗಳಿಂದ ಕೂಡಿದಸಮುದ್ರಉಳ್ಳವನೇ, ಕೋಷ್ಠಾ೦ತರ - ಹೊಟ್ಟೆಯ ಒಳಭಾಗದಲ್ಲಿ, ಅಹಿತ - ಸ್ಥಾಪಿತವಾದ, ವಿಚೇಷ್ಟ - ವ್ಯಾಪಾರವಿಲ್ಲದ, ಆಗಮೌಘ - ವೇದಸಮೂಹ ಉಳ್ಳವನೇ,     ಪರಮೇಷ್ಠಿಡಿತ - ಚತುರ್ಮುಖ ಬ್ರಹ್ಮದೇವರಿಂದ ಸ್ತುತಿಸಲ್ಪಡುವವನೇ, ಯುಗಾಂತಸಮಯೇ - ಯುಗದ ಕೊನೆಯಲ್ಲಿ, ಪ್ರೇಷ್ಠ - ಅತ್ಯಂತ ಪ್ರೀತಿಪಾತ್ರನಾದ, ಆರ್ಕಸುನುಮನು - ಸೂರ್ಯಸುತನಾದ ವೈವಸ್ವತ ಮನುವಿನ, ಚೇಷ್ಟಾರ್ಥಂ - ವ್ಯಾಪಾರಕೊಸ್ಕರ, ಸ್ಥೆಷ್ಠ - ಬಹು ಗಟ್ಟಿಯಾದ, ಆತ್ಮಶೃಂಗ - ತನ್ನ ಶೃಂಗದಿಂದ, ಧೃತ - ಧರಿಸಲ್ಪಟ್ಟ, ಕಾಷ್ಠಾ೦ಬುವಾಹನವರ - ಕಟ್ಟಿಗೆಯಿಂದ ನಿರ್ಮಿತವಾದ ಶ್ರೇಷ್ಠ ನೌಕೆ ಉಳ್ಳವನೇ,   ಅಷ್ಟಾಪದಪ್ರಭತನೋ - ಬಂಗಾರದಂತೆ ಹೊಳೆಯುವ ಮೈ ಉಳ್ಳವನೇಆತ್ಮವಿಧಿತಿಷ್ಠ: ಪರಮಾತ್ಮನನ್ನ ಅರಿತು ಯೋಗಿಗಳಿಗೆ ಅತ್ಯಂತಪ್ರಿಯನಾದ, ತ್ವಂ - ನೀನು, ಮಾಂ - ನನ್ನನ್ನುಆವ ರಕ್ಸಿಸು.

 

ವಾದಿರಾಜರಕಾವ್ಯಶೈಲಿಯೆ ಅಮೋಘ .

 

ದ್ವಾದಶ ಸ್ತೋತ್ರದಲ್ಲಿ ಮತ್ಸ್ಯರೂಪಿಪರಮಾತ್ಮನಚಿಂತನೆ

 

|| ಪ್ರಚಲಿತಲಯಜಲವಿಹರಣಶಾಶ್ವತ 

 ಸುಖಮಯ ಮೀನ ಹೇ ಭವಮಾಮ ಶರಣಂ ||

 

ದ್ವಾದಶಸ್ತೋತ್ರದ ಒಂಬತ್ತನೇ ಪದ್ಯದಲ್ಲಿ ಬರುವ ಐದನೇ ಸಾಲಿನಲ್ಲಿಶ್ರೀ ಜಗದ್ಗುರು ಶ್ರೀ ಆನಂದ ತೀರ್ಥರುಹೇಳುವ ಹಾಗೆ

 

ಉಕ್ಕಿ ಹರಿಯುವ ಪ್ರಳಯ ಸಮುದ್ರದಲ್ಲಿಕ್ರೀಡಿಸುವವನೇ, ನಮ್ಮ ಸಂಸಾರವೆಂಬ ಸಾಗರದಲ್ಲಿಪ್ರತಿನಿತ್ಯ ಕಷ್ಟಗಳೆಂಬ ಪ್ರಳಯದಲ್ಲಿ ನಮ್ಮೊಳಗಿದ್ದು ಕ್ರೀಡಿಸುವ ಪರಮಾತ್ಮನೇ ಅನಾದಿ ನಿತ್ಯನೇ, ಆನಂದಸ್ವರೂಪನೇ ಮತ್ಸ್ಯರೂಪಿ ಪರಮಾತ್ಮನಾದ ನಾರಾಯಣ ನೀನೆ ನನ್ನರಕ್ಷಕ ನೀನೆ ನನ್ನ ರಕ್ಷಿಸು.

 ಜಗನ್ನಾಥ ದಾಸರುತಮ್ಮತತ್ವಸುವ್ವಾಲಿಕೃತಿಯಲ್ಲಿಹೀಗೆಹೇಳುತ್ತಾರೆ 

 

|| ವೇದತತಿಗಳನ್ನುಕದ್ದೊಯ್ದವನ ಕೊಂದು ಪ್ರಳಯೋದಧಿ 

 ಯೊಳಗೆ ಚರಿಸಿದ| ಚರಿಸಿ ವೈವಸ್ವತನಕಾಯ್ದ ಮಹಾಮಹಿಮ ದಯವಾಗೋ| |

 

ವೇದತತಿಗಳನ್ನು - ವೇದಸಮೂಹಗಳನ್ನು (ಬ್ರಹ್ಮ ದೇವರ ಮುಖದಿಂದಹೊರಟ ವೇದಗಳನ್ನು) ಕದ್ದೊಯ್ದವನ - ಅಪಹರಿಸುವ ಹಯಗ್ರೀವಸುರನೆಂಬ ದೈತ್ಯನನ್ನು, ಕೊಂದು - ಸಂಹಾರ ಮಾಡಿ (ಮೊದಲನೇ ಮತ್ಸ್ಯಾವತಾರ ರೂಪದಿಂದ) ಪ್ರಳಯೋದಧಿಯೊಳಗೆ  - ಪ್ರಳಯೋದಕದಲ್ಲಿ, ಚರಿಸಿದ - ವಿಹರಿಸಿದ, ಚರಿಸಿ ಚಕ್ಸುಶ ಮನ್ವಂತರದಪ್ರಳಯೋದಧಿಯೊಳಗೆ ಆವೀರಭೂತನಾಗಿ ಪುನಃ ಸಂಚಾರಮಾಡಿ ವೈವಸ್ವತನ - ಸೂರ್ಯಪುತ್ರನಾದ ಶ್ರಾದ್ಧದೇವನನ್ನ (ಸತ್ಯವ್ರತ) ಕಾಯ್ದ - ಕಾಪಾಡಿದ ಮಹಾಮಹಿಮ - ಅದ್ಭುತಮಹಿಮನಾದ   ಹೇ  ಮತ್ಶ್ಯರೂಪಿಪರಮಾತ್ಮ ದಯವಾಗೋ - ಎನ್ನಲ್ಲಿ ಕೃಪೆಮಾಡು.

 

ಹೀಗೆ ನಮ್ಮ ಗ್ರಂಥಗಳಲ್ಲಿ ಮತ್ಯ್ಸರೂಪಿಪರಮಾತ್ಮನನ್ನ ಸ್ತುತಿಸಿದ್ದಾರೆ.

 

 ಇನ್ನು ಮತ್ಶ್ಯರೂಪಿ ಪರಮಾತ್ಮನಆಲಯಗಳನ್ನುನೋಡೋಣ 

 

1 . ಚಿತ್ತೂರುಸಮೀಪದ ಪುರಾತನ  ವೇದನಾರಾಯಣ ದೇವಾಲಯ - ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿತವಾದ ದೇವಾಲಯ.  ಇಲ್ಲಿವಿಶೇಷವಾಗಿ ಮತ್ಶ್ಯರೂಪಿ ನಾರಾಯಣ ಮತ್ತು ವೇದಗಳನ್ನುರಕ್ಷಿಸುವ ಹಾಗೆ ದೇವಾಲಯ ನಿರ್ಮಿಸಿದ್ದಾರೆ. ಇನ್ನೊಂದು ವಿಶೇಷ ಇಲ್ಲಿ ವಸಂತನವರಾತ್ರಿ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಮೂಲವಿಗ್ರಹದಮೇಲೆ ಬೀಳುತ್ತದೆ.

 

2 . ಮತ್ಸ್ಯ ನಾರಾಯಣ ದೇವಾಲಯ - ಹೆಗ್ದಾಲ್ ಬಳ್ಳಾರಿ ಜಿಲ್ಲೆ.

ನಮ್ಮ ಕರ್ನಾಟಕದಲ್ಲೇ ಇರುವ ದೇವಾಲಯ ಇದಾಗಿದೆಮತ್ತು ಇದು ತುಂಗಭದ್ರಾ ನದಿಯಲ್ಲಿದೊರೆತ ವಿಗ್ರಹ ಎಂಬ ನಂಬಿಕೆಇದೆ (ಹೆಚ್ಚಿನ ಮಾಹಿತಿಗೆ ಸಂಶೋಧನೆಅಗತ್ಯವಿದೇ)
***

ನಾವು ಮತ್ಶ್ಯರೂಪಿ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡೋಣ, ಇಂದಿನ ಸ್ಥಿತಿಗತಿಗಳನ್ನುನೋಡಿದಾಗ ಭವಸಾಗರ ವಾಗಿರುವ ಈಲೋಕದಲ್ಲಿ ನಿನ್ನ ಅನುಗ್ರಹವೆಂಬ ದೋಣಿಯಲ್ಲಿನಮೆಲ್ಲರನ್ನು ಸುರಕ್ಷಿತವಾಗಿ ದಾಟಿಸು ಎಂದು ಬೇಡಿಕೊಳ್ಳುತ್ತಮತ್ಸ್ಯರೂಪಿ ಪರಮಾತ್ಮನ ಸದಾ ಚಿಂತನೆ ಮಾಡೋಣ, ಯಥಾಮತಿಯಾಗಿ ಸಂಗ್ರಹಿಸಿದ ವಿಷಯಗಳನ್ನು ಈ ಲೇಖನದಲ್ಲಿ ಬರೆಯುವಪ್ರಯತ್ನ ಮಾಡಿದ್ದೇನೆ, ತಪ್ಪೇನಾದರೂ ಇದ್ದಾರೆ ನನ್ನದೇ.
ಪ್ರೀತೋಸ್ತು ಕೃಷ್ಣಪ್ರಭೋ 
 ಫಣೀಂದ್ರ * ಕೆ* 
****

ಮತ್ಸ್ಯಜಯಂತಿ 

ಚೈತ್ರ ಶುದ್ಧ ತೃತೀಯ, ಪರಮಾತ್ಮನ ಅವತಾರಗಳಲೊಂದಾದ ಶ್ರೀ ಮತ್ಸಾವತಾರದ ಪುಣ್ಯದಿನ. ಭಾಗವತದ ಅಷ್ಟಮ ಸ್ಕಂದದಲ್ಲಿ ಈ ಮತ್ಸವಾತಾರದ ಬಗ್ಗೆ ಹಲವಾರು ಮಾಹಿತಿಗಳು ಸಿಗುತ್ತವೆ. 

ಶ್ರೀಮತ್ಸ್ಯಸ್ತುತಿ:
ಮತ್ಶ್ಯೋ ಯುಗಾಂತಸಮಯೇ ಮನುನೋಪಲಬ್ಧ:
ಕ್ಷೋಣೀಮಯೋ ನಿಖಿಲಜೀವನಿಕಾಯಕೇತ: |
ವಿಸ್ರಂಸಿತಾನುರುಭಯೇ ಸಲಿಲೇ ಮುಖಾನ್ಮೇ
ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ ||
(ಶ್ರೀಮದ್ಭಾಗವತ)

ಅಥೋ ವಿಧಾತುರ್ಮುಖತೋ ವಿನಿಸ್ಸೃತಾನ್
ವೇದಾನ್ ಹಯಾಸ್ಯೋ ಜಗೃಹೇ ಸುರೇಂದ್ರ: |
ನಿಹತ್ಯ ತಂ ಮತ್ಸ್ಯವಪುರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತು: ||1||
ಮನ್ವಂತರಪ್ರಲಯೇ ಮತ್ಸ್ಯರೂಪೋವಿದ್ಯಾಮದಾನ್ಮನವೇ ದೇವದೇವ: |
ವೈವಸ್ವತಾಯೋತ್ತಮಸಂವಿದಾತ್ಮಾವಿಷ್ಣೋ: ಸ್ವರೂಪಪ್ರತಿಪತ್ತಿರೂಪಾಮ್       || 2 ||
(ಮ.ಭಾ.ತಾ.ನಿ)

ಈ ಕಥೆ ನಡೆದಿದ್ದು ಚಾಕ್ಷುಷ ಮನ್ವಂತರದಲ್ಲಿ, ಒಮ್ಮೆ ಬ್ರಹ್ಮದೇವರು ದಿನಪ್ರಳಯಕಾಲದಲ್ಲಿ ನಿದ್ರಾವಸ್ಥೆಯಲ್ಲಿರುವಾಗ ಹಯಗ್ರೀವಾಸುರ ಎಂಬ ಅಸುರನು,   ಬ್ರಹ್ಮದೇವರಲ್ಲಿದ್ದ ವೇದಗಳನ್ನು ಅಪಹರಿಸಿಕೊಂಡು ಹೋಗುವಾಗ ಪರಮಾತ್ಮನು ಮೀನಿನ ರೂಪದಲ್ಲಿ ಪ್ರಕಟಗೊಂಡು ಹಯಗ್ರೀವಸುರನ ಸಂಹರಿಸಿ ಪುನಃ ವೇದಗಳನ್ನು ಬ್ರಹ್ಮದೇವರಿಗೆ ಕೊಟ್ಟನು. ಬ್ರಹ್ಮದೇವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪುರಾಣವೇ ಮುಂದೆ "ಮತ್ಸ್ಯಪುರಾಣ" ಎಂದು ಪ್ರಸಿದ್ಧ ವಾಯಿತು. 



ಶ್ರೀಮತ್ಸ್ಯಾವತಾರ ಚಿಂತನ  ( ಮತ್ಸ್ಯಜಯಂತಿ ವಿಶೇಷಸಂಚಿಕೆ  )

ಶ್ರೀಮದ್ ಭಾಗವತ.ಪುರಾಣದ  ಅಷ್ಟಮಸ್ಕಂಧದಲ್ಲಿ ಬಂದಿರುವ ಶ್ರೀಹರಿಯ ಮತ್ಸ್ಯಾವತಾರ ಚರಿತ್ರೆಯನ್ನು  ಸಂಕ್ಷಿಪ್ತವಾಗಿ ಯಥಾಮತಿ ತಿಳಿದುಕೊಳ್ಳುವ ಅಲ್ಪಪ್ರಯತ್ನ ಮಾಡೋಣ

ಶ್ರೀಹರಿಯ ಮತ್ಸ್ಯರೂಪವನ್ನು ಕುರಿತು ನಾರಾಯಣಭಕ್ತನಾದ ಸತ್ಯವ್ರತನೆಂಬ ಒಬ್ಬ ರಾಜರ್ಷಿ ಕೇವಲ ನೀರುಕುಡಿಯುತ್ತ ತಪಸ್ಸು ಮಾಡಿದ .

ಯೋsವಸ್ಮಿನ್ ಮಹಾಕಲ್ಪೇ ತನಯಃ ಸ ವಿವಸ್ವತಃ |
ಶ್ರಾದ್ಧದೇವ ಇತಿಖ್ಯಾತೋ ಮನುತ್ವೇ ಹರೀಣಾರ್ಪಿತಃ ||

ಆ ಸತ್ಯವ್ರತರಾಜನೇ ಈ ವೈವಸ್ವತ ಮನುಕಲ್ಪದಲ್ಲಿ ವಿವಸ್ವಾನ್ ಎಂಬ ಸೂರ್ಯನ ಮಗನಾಗಿ ಜನಿಸಿ ಈ ಮನ್ವಂತರದ ಮನುವಿನ ಪದವಿಯನ್ನು ಹರಿಯ ಅನುಗ್ರಹದಿಂದ ಪಡೆದ .
ಒಮ್ಮೆ ಕೃತಮಾಲನದಿಯಲ್ಲಿ ಸತ್ಯವ್ರತನು 
ಅರ್ಘ್ಯ ಪ್ರಧಾನವನ್ನುವನ್ನು ಮಾಡುತಿದ್ದಾಗ ಬೊಗಸೆಯ ನೀರಿನಲ್ಲಿ ಚಿನ್ಮಯವಾದ ಸಣ್ಣ ಮೀನು ಕಾಣಿಸಿಕೊಂಡಿತು ತಕ್ಷಣ ಆ ಸತ್ಯವ್ರತರಾಜನು ಮೀನನ್ನು ನದೀನೀರಿನಲ್ಲಿಯೇ ಬಿಟ್ಟುಬಿಟ್ಟ
ಆ ಮೀನು ರಾಜನಿಗೆ ಹೇಳಿತು ದೀನವತ್ಸಲನಾದ ರಾಜನೆ ತಮ್ಮ ಜಾತಿಯ ಸಣ್ಣ ಮೀನುಗಳನ್ನು ಕೊಲ್ಲುವ ದೊಡ್ಡ ಮೀನುಗಳಿಗೆ ನಾನು ಭಯಪಡುತ್ತೇನೆ ದೀನನಾದ ನನ್ನನ್ನು ಈ ನದಿನೀರಲ್ಲಿ ಹೇಗೆ ಬಿಟ್ಟುಬಿಡುವೆ ?
ತನ್ನನ್ನು ಅನುಗ್ರಹಿಸುವುದಕ್ಕಾಗಿ ಪ್ರೀತಿಯಿಂದ ಮೀನಿನ ರೂಪ ಧರಿಸಿದವನು ಶ್ರೀಹರಿ ಎಂದು ತಿಳಿಯದೆ ಸತ್ಯವ್ರತರಾಜನು ಮೀನಿನ ರಕ್ಷಣೆಗೆ ಸಂಕಲ್ಪಿಸಿದ .

ರಕ್ಷಣೆಯನ್ನು ಕೇಳಿದ ಆ ಮೀನನ್ನು ಕಲಶದ ನೀರಲ್ಲಿ ಅದನ್ನು ಇರಿಸಿಕೊಂಡು ತನ್ನ ಆಶ್ರಮಕ್ಕೆ ತೆಗೆದುಕೊಂಡುಹೋದ .

ಆದರೆ ಆ ಮೀನು ಒಂದೇ ರಾತ್ರಿಯಲ್ಲಿ ಕಲಶದಲ್ಲಿ ಇರಲು ತನಗೆ ಸಾಕಷ್ಟು ಸ್ಥಳಾವಕಾಶ ಸಿಗದಂತೆ ದೊಡ್ಡದಾಗಿ ಬೆಳೆದು ರಾಜನಿಗೆ ಹೇಳಿತು .

ತಾನು ಕಲಶದಲ್ಲಿ ಇರಲು ತನಗೆ ಸಾಕಷ್ಟು ಸ್ಥಳಾವಕಾಶ ಸಿಗದಂತೆ ದೊಡ್ಡದಾಗಿ ಬೆಳೆದು ರಾಜನಿಗೆ ಹೇಳಿತು .

ನಾನು ಈ ಕಲಶದೊಳಗೆ ಕಷ್ಟಪಟ್ಟು ವಾಸಮಾಡಲಾರೆ  ಒಳ್ಳೆಯ ವಿಸ್ತಾರವಾದ ಒಂದು ಜಾಗ ಮಾಡಿಕೊಡು ಎಂದು ಅದರಲ್ಲಿ ನಾನು ಸುಖವಾಗಿ ವಾಸಮಾಡುವೇನು .

ಸತ್ಯವ್ರತನು ಆ ಮೀನನನ್ನು ಎತ್ತಿ ಕಡಾಯಿಯ ನೀರಿನಲ್ಲಿ ಇರಿಸಿದ ಅಲ್ಲಿ ಹಾಕಿದರೆ ಒಂದು ಮಹೂರ್ತ ಕಾಲದಲ್ಲಿ ಅದು ಮೂರು ಮೋಳದಷ್ಟು ದೊಡ್ಡದಾಗಿ ಬೆಳೆಯಿತು .

 ಸತ್ಯವ್ರತನು ಮೀನನ್ನು ಎತ್ತಿ  ಸರೋವರದಲ್ಲಿ ಹಾಕಿದನು ಆಲ್ಲಿಯೂ ತನ್ನ ಶರೀರವನ್ನು ವ್ಯಾಪಿಸಿ  ಬೃಹಾದಾಕಾರದ ಮೀನಾಗಿ ಬೇಳೆಯಿತು  ಜಲಾಶಯದಲ್ಲಿ ಹಾಕಿದ ಜಲಾಶಯವನ್ನು ವ್ಯಾಪಿಸಿ ಬೆಳೆಯಿತು ರಾಜನು.ಸಮುದ್ರದಲ್ಲಿ ಹಾಕಿದ ಆದರೆ ಸಮುದ್ರದಲ್ಲಿ ಹಾಕುವಾಗ ಮೀನು ಹೇಳಿತು -ವೀರನೇ ಇಲ್ಲಿ ಅತಿ ಬಲಿಷ್ಠವಾದ ಮೊಸಳೆ ಮುಂತಾದುವು ನನ್ನನ್ನು ತಿಂದುಬಿಡುತ್ತದೆ ನನ್ನನ್ನು ಇಲ್ಲಿ ಬಿಡಬೇಡ 
ಹೀಗೆ ಮೀನು ಮೋಹಕವಾದ ಮಾತನ್ನಾಡಿ ರಾಜನನ್ನು ಮರಳುಗೊಳಿಸುವಾಗ  ಸತ್ಯವ್ರತರಾಜನು ಕೇಳಿದ ಯಾರು ನೀನು ಮೀನಿನರೂಪದಿಂದ ನನ್ನನ್ನು ಮರಳುಗೊಳಿಸುವವನು ?
ಅಲ್ಪಕಾಲದಲ್ಲಿಯೇ ನೂರು ಯೋಜನದ ಸರೋವರವನ್ನು ವ್ಯಾಪಿಸುವಷ್ಟು ಬೆಳೆದಿರುವೆ .ಇಂಥ ಸಾಮರ್ಥ್ಯದ ಮೀನನ್ನು ನಾನು ನೋಡಿಲ್ಲ ಕೇಳಿಲ್ಲ .

ನೂನಂ ತ್ವಂ ಭಗವಾನ್ ಸಾಕ್ಷಾದ್ಧರಿರ್ನಾರಯಣೋsವ್ಯಯಃ |
ಅನುಗ್ರಹಾಯ ಭೂತಾನಾಂ ಧತ್ಸೇ ರೂಪಂ ಜಲೌಕಸಾಮ್ ||

ನೀನು ನಿಶ್ಚಯವಾಗಿ ಸಾಕ್ಷದ್ ಭಗವಾನ್ ಹರಿಯೇ ನಾಶರಹಿತನಾದ ನಾರಾಯಣನೆ ಜೀವಿಗಳನ್ನು ಅನುಗ್ರಹಿಸಲು ಜಲಚರಗಳ ಆಕಾರವನ್ನು ಧರಿಸುತ್ತಿರುವೆ ಎಂದು ಸ್ತೋತ್ರಮಾಡಿ ಮತ್ಸ್ಯರೂಪಿ ಶ್ರೀಹರಿಗೆ ಸತ್ಯವ್ರತರಾಜನು ನಮಸ್ಕಾರ ಮಾಡಿದನು .ಅವನ ಪ್ರಾರ್ಥನೆಗೆ ಮೆಚ್ಚಿದ ಪರಮಾತ್ಮ ಹೇಳಿದ ಇಂದಿನಿಂದ. ಏಳನೇ ದಿನದಲ್ಲಿ ಜಲಪ್ರಳಯವಾಗುವುದು .ಆಗ ವಿಶಾಲವಾದ ನೌಕೆಯೋಂದು ನಿನ್ನ ಬಳಿಗೆ ಬರುತ್ತದೆ .  ಆಗ ನೀನು ಮುಂದಿನ ಸೃಷ್ಟಿಗೆ ಬೇಕಾಗುವ ಎಲ್ಲ ಸಸ್ಯಗಳನ್ನೂ ದೊಡ್ಡ ಸಣ್ಣ ಬೀಜಗಳನ್ನು ಸಂಗ್ರಹಿಸಿಕೊಂಡು ಸಪ್ತರ್ಷಿಗಳಿಂದಲೂ ಕೂಡಿಕೊಂಡು ಆ ದೊಡ್ಡ ನೌಕೆಯನ್ನೇರು ಬೆಳಕಿಲ್ಲದ ಒಂದೇ ಸಮುದ್ರವಾಗಿರುವ ನೀರಿನಲ್ಲಿ ನೀನು ಋಷಿಗಳ ತೆಜಸ್ಸಿನಿಂದಲೇ ನಿರ್ಭಯವಾಗಿ ಸಂಚುರಿಸುವಿ . .ಬಲವಾದ ಬಿರುಗಾಳಿ ಆ ನೌಕೆಯನ್ನು ಅತ್ತಿತ್ತ ಜೋರಾಗಿ ಅಲುಗಾಡಿಸುವಾಗ ನಿನ್ನ ಬಳಿಗೆ ಬರುವ ನನ್ನ ಕೊಂಬಿಗೆ ಒಂದು ದೊಡ್ಡ ಸರ್ಪದಿಂದ  ನೌಕೆಯನ್ನು  ಕಟ್ಟು ಪ್ರಳಯಮುಗಿಯುವವರೆಗೂ ನಿನ್ನ ನೌಕೆಯನ್ನು ನಾನು ಕಾಪಾಡುತ್ತೇನೆ ಬಳಿಕ ಪ್ರಳಯ ಪ್ರಾರಂಭವಾಯಿತು .

ಆ ಜಲದಲ್ಲಿ ಲಕ್ಷ ಗಾವುದಗಾತ್ರದ  ಒಂದು ಕೊಂಬಿನ ಬಂಗಾರದ ಮೀನಾಗಿ ಶ್ರೀಹರಿ ಮಹಾಸಾಗರದಲ್ಲಿ ಪ್ರಾದುರ್ಭೂತನಾದ ಶ್ರೀಹರಿ ಹಿಂದೆ ಹೇಳಿದಂತೆ ರಾಜ ತನ್ನ ನೌಕೆಯನ್ನು ಅವನ ಕೊಂಬಿಗೆ ಕಟ್ಟಿ ಸ್ತೋತ್ರಮಾಡಿದ ಅವನಿಂದ ಮತ್ಸ್ಯ ಪುರಾಣವನ್ನು ಉಪದೇಶ ಪಡೆದ .ಪ್ರಲಯದ ಬಳಿಕ ಆತ ಈಗ ಈ ವೈವಸ್ವತ ಮನ್ವಂತರದಲ್ಲಿ ವೈವಸ್ವತ ಮನುವಾಗಿ ಹುಟ್ಟಿದ ಈ ಮನ್ವಂತರವನ್ನು ಆಳುತ್ತಿದ್ದಾನೆ .ಶ್ರೀಮದ್ ಭಾಗವತದ ಅಷ್ಟಮಸ್ಕಂಧದಲ್ಲಿ ಮತ್ಸ್ಯಾವತಾರದ ವರ್ಣನೆಯಿದೆ .

ಮತ್ಸ್ಯೋಯುಗಾಂತ ಸಮಯೇ ಮನುನೋಪಲುಬ್ಧಃ
ಕ್ಷೋಣಿಮಯೋ ನಿಖಿಲಜೀವ ನೀಕಾಯಕೇತಃ |
ವಿಸ್ರಂಸಿತಾನುಭಯೇ ಸಲಿಲೇ ಮುಖಾನ್ಮಾ
ಆದಾಯ ತತ್ರ  ಹವೇದಮಾರ್ಗನ್ ||

ಹಯಗ್ರಿವನೆಂಬ ದೈತ್ಯ ಸೃಷ್ಟಿಯ ಆದಿಯಲ್ಲಿ ಚತುರ್ಮುಖ ಬ್ರಹ್ಮದೇವರ ಮುಖದಿಂದ ಹೊರಗೆ ಬಂದ ಎಲ್ಲ ವೇದಗಳನ್ನು ಅಪಹರಿಸಿ ಸಮುದ್ರದಲ್ಲಿ ಅಡಗಿಸಿಟ್ಟ , ಆಗ ಶ್ರೀಹರಿಯು ಮತ್ಸ್ಯನಾಗಿ ಅವತರಿಸಿ ಆವೇದಗಳನ್ನು ಬ್ರಹ್ಮದೇವರಿಗೆ  ತಂದಿತ್ತ . ಆದೈತ್ಯ,ನ್ನು ಕೊಂದು ಸಮುದ್ರದಲ್ಲಿ ವಿಹರಿಸಿದ .
ಮತ್ಸ್ಯಕರೂಪಕ ಲಯೋದ ವಿಹಾರಿನ್ ದ್ವಾದಶಸ್ತೋತ್ರ
ಬಳಿಕ ಚಾಕ್ಷುಷ ಮನ್ವಂತರದ ಕೋನೆಯಲ್ಲಿ ಇನ್ನೊಮ್ಮೆ ಮತ್ಸ್ಯನಾಗಿ ಅವತರಿಸಿ ಮುಂದೆ ವೈವಸ್ವತ ಮನುವಾಗಲಿದ್ದ ಸತ್ಯವ್ರತ ರಾಜನಿಗೆ ದರ್ಶನವಿತ್ತ .ಭೂರೂಪದ ದೋಣಿಗೆ ಆಧಾರವಾಗಿದ್ದು. ಎಲ್ಲ ಜೀವರಿಗಾಶ್ರಯನೆನಿಸಿ ಮನುಪ್ರಲಯದ ಸಮುದ್ರದಲ್ಲಿ ವಿಹರಿಸಿದ .
          ಶ್ರೀಮದ್ ಭಾಗವತಪುರಾಣ 2-7-12

ಶ್ರೀರುಗ್ಮಿಣೀಶವಿಜಯ ಮಹಾಕಾವ್ಯದಲ್ಲಿ ಮತ್ಸ್ಯಾವತಾರ ವರ್ಣನೆ

ಭುವನವಾಸ್ಯನಿಶಂ ಮನುಸಂಸ್ತುತೋ |
ವಿಧಿವಿರೋಧಿವಿನಾಶಕೃದನ್ವಹಮ್ ||
ಅನಿಮಿಷಪ್ರಭುರಾಗಮಹರ್ಷದೋ |
ನಿಜವಶೋ ಜವಶೋಭಿತಸಾಗರಃ || ||

ಸದಾ ಜಲದಲ್ಲಿ ವಾಸಿಸುವ, ಬ್ರಹ್ಮದೇವರ ಪ್ರತಿದಿನದಲ್ಲೂ ವೈವಸ್ವತಮನುವಿನಿಂದ ಚೆನ್ನಾಗಿ ಸ್ತುತಿಸಲ್ಪಡುವ, ಬ್ರಹ್ಮದೇವರ ವಿರೋಧಿಗಳನ್ನು ಸದೆಬಡಿಯುವ, ವೇದಗಳನ್ನು ತಂದುಕೊಡುವ ಮೂಲಕ ಹರ್ಷ ನೀಡುವ, ವೇಗದಿಂದ ಪ್ರಳಯಸಮುದ್ರಕ್ಕೆ ಶೋಭೆನೀಡುವ, ಮೀನುಗಳಿಗೆ ಪ್ರಭುವಾದ, ಮತ್ಸ್ಯರೂಪದ ಶ್ರೀಹರಿಯು ತನ್ನ ಭಕ್ತರಿಗೆ ವಶನಾಗುವವನಾಗಲಿ .
  ರುಗ್ಮಿಣೀಶ ವಿಜಯ 17-15

ಶ್ರೀಸುಮಧ್ವವಿಜಯಮಹಾಕಾವ್ಯದಲ್ಲಿ ಮತ್ಸ್ಯಾವತಾರ ವರ್ಣನೆ

ಚತುರಾನನಾಯ ಚತುರಃ ಪುರಾಽಽಗಮಾನ್ ಪ್ರದದಾವಸಾವನಿಮಿಷೇಶ್ವರಃ ಪ್ರಭುಃ |
ವಿನಿಹತ್ಯ ಹಿ ಶ್ರುತಿಮುಷಂ ಪುರಾತನಮ್ ವಪುಷೋದ್ಧತಂ ಹಯಮುಖೇನ ಸದ್ರಿಪುಮ್ ||

ಹಿಂದೆ ಮತ್ಸ್ರರೂಪವನ್ನು ಪ್ರಕಟಿಸಿ ಈ ಸ್ವಾಮಿಯು ವೇದಗಳನ್ನು ಅಪಹರಿಸಿದ ಸಜ್ಜನಶತೃವಾದ ಹಯಗ್ರೀವನೆಂಬ ದೈತ್ಯನನ್ನು ಸಂಹರಿಸಿ ನಾಲ್ಕು ವೇದಗಳನ್ನು ಚತುರ್ಮುಖ ಬ್ರಹ್ಮದೇವರಿಗೆ ನೀಡಿದನು .
           -ಮಧ್ವವಿಜಯ8-14

 ಶ್ರೀದಶಾವತಾರ ಸ್ತೋತ್ರದಲ್ಲಿ ಮತ್ಸ್ಯಾವತಾರ ವರ್ಣನೆ

ಪ್ರೋಷ್ಠೀಶವಿಗ್ರಹ ಸುನೀಷ್ಠೀವನೋದ್ಧತ ವಿಶಿಷ್ಠಾಂಬುಚಾರಿಜಲಧೇ
ಕೋಷ್ಠಾಂತರಾಹಿತವಿಚೇಷ್ಟಾಗಮೌಘ
ಪರಮೇಷ್ಠಿಡಿತ ತ್ವಮವಮಾಮ್ |
ಪ್ರೇಷ್ಠಾರ್ಕಸೂನುಮನು ಚೇಷ್ಟಾರ್ಥಮಾತ್ಮವಿದತೀಷ್ಟೋ ಯುಗಾಂತಸಮಯೇ
ಸ್ಥೇಷ್ಠಾತ್ಮ ಶೃಂಗಧೃತ ಕಾಷ್ಠಾಂಬುವಾಹನ ವರಾಷ್ಟಾಪದ ಪ್ರಭತನೋ ||

ಮಹಾಜಲಚರ ಪ್ರಾಣಿಗಳಿಂದ ತುಂಬಿದ ಮಹಾಸಮುದ್ರವನ್ನು ತನ್ನ ಅದ್ಭುತವಾದ ಧೂತ್ಕಾರದಿಂದ ಉಕ್ಕೇರಿಸಿದ ವ್ಯಾಪಾರವಿಲ್ಲದ ಅಪೌರುಷೇಯವಾದ ವೇದಗಳನ್ನು  ಪ್ರಲಯಕಾಲದಲ್ಲಿ ತನ್ನ ಉದರದಲ್ಲಿ ಇಟ್ಟುಕೊಂಡು ಸಂರಕ್ಷಿಸಿದ ಯುಗಾಂತ್ಯ ಕಾಲದಲ್ಲಿ ಪರಮಪ್ರಿಯಭಕ್ತ ಸೂರ್ಯನ ಮಗನಾದ ವೈವಸ್ವತ ಮನುವಿಗೆ ಅನುಗ್ರಹ ಮಾಡುವುದಕ್ಕಾಗಿ . ತನ್ನ ಸುಸ್ಥಿರವಾದ ಶೃಂಗದಲ್ಲಿ (ಕೊಡಿನಲ್ಲಿ) ಪೃಥ್ವಿಮಯ ನೌಕೆಯನ್ನು ಧರಿಸಿದ  ಬಂಗಾರದ ಬಣ್ಣದಿಂದ ಕಂಗೋಳಿಸುವ ಸುಂದರ ಶರೀರನಾದ ಆತ್ಮಜ್ಞಾನಿಗಳಿಗೆ ಪರಮ ಇಷ್ಟನಾದ ಚತುರ್ಮುಖ ಬ್ರಹ್ಮದೇವರಿಂದ ಸಂಸ್ತುತನಾದ ಮತ್ಸ್ಯರೂಪಿ ಶ್ರೀಹರಿಯೇ ನನ್ನನ್ನು ಸಂರಕ್ಷಿಸು .

ಮತ್ಸ್ಯಾವತಾರದ ಕೀರ್ತನೆಯ ಫಲ

ಅವತಾರಂ ಹರೇರ್ಯೋಮುಂ ಕೀರ್ತಯೇದನ್ವಹಂ ನರಃ |
ಸಂಕಲ್ಪಾಅಸ್ಯ ಸಿದ್ಧ್ಯಂತಿ ಪ್ರಯಾತಿ ಚ ಪರಾಂ ಗತಿಮ್ ||

ರಾಜರ್ಷಿ ಸತ್ಯವ್ರತನಿಗೂ ಸ್ವೇಚ್ಛೆಯಿಂದ ಮತ್ಸ್ಯರೂಪ ತಳೆದ ವಿಷ್ಣುವಿಗೂ ನಡೆದ ಸಂವಾದದ ಈ ಉತ್ತಮ ಆಖ್ಯಾನವನ್ನು ಕೇಳಿದರೆ ಪಾಪಗಳಿಂದ ಮುಕ್ತಾನಾಗುತ್ತಾನೆ .
ಹರಿಯ ಈ ಅವತಾರವನ್ನು  ಪ್ರತಿದಿನ ಹೇಳುವವರಿಗೆ ಅವರ ಅಭಿಷ್ಟಗಳು ನೆರವೇರುವುವು ಮತ್ತು ಅವನು ಪರಗತಿಯನ್ನು ಹೊಂದುತ್ತಾನೆ .
      ಶ್ರೀಮದ್ ಭಾಗವತಪುರಾಣ 8-23- 59,60


            || ಶ್ರೀಕೃಷ್ಣಾರ್ಪಣಮಸ್ತು ||
************

ಲೋಕ ಕಲ್ಯಾಣದ ಮೊದಲನೇ ಅವತಾರವು - ಮತ್ಸ್ಯಾವತಾರವು :-"


ಭೂಮಂಡಲದಲ್ಲಿ ಅನ್ಯಾಯ ಮತ್ತು ಅಕೃತ್ಯಗಳು ಹೆಚ್ಚಾಗಿ ಎಲ್ಲೆಲ್ಲೂ ಅಧರ್ಮದ ಪ್ರಭಾವವು ಭೀಕರ ರೂಪ ಪಡೆದು ಭೂಮಾತೆಗೆ ಹೊರಲು ಭಾರವೆನಿಸಿದಾಗ ಅಂತಹ ಭಾರದ ಹೊರೆಯನ್ನಿಳಿಸಿ, ಭೂಮಾತೆಯ ಭಾರದ ಹೃದಯವನ್ನು ಹಗುರಗೊಳಿಸುವ ಸದುದ್ದೇಶದಿಂದ ವಾಮನರೂಪಿ ವಿಷ್ಣು ಪರಮಾತ್ಮನು ಇಡೀ ಜಗತ್ತನ್ನು ನಾಶ ಮಾಡುವ ಹಾಗೆ ಜಲಪ್ರಳಯವನ್ನುಂಟು ಮಾಡುವನೆಂದು ಹೇಳಲಾಗುತ್ತದೆ. ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು ಹತ್ತು ಅವತಾರಗಳನ್ನು ತಾಳುತ್ತಾನೆ. ಅವುಗಳಲ್ಲಿ ಮೊದಲನೇ ಅವತಾರವೇ ಮತ್ಸ್ಯಾವತಾರ. 

ಕಲ್ಪಾಂತ್ಯದಲ್ಲಿ ಇಂತಹ ಒಂದು ಸಂದರ್ಭ ಸಂಭವಿಸುತ್ತದೆ. ಬ್ರಹ್ಮಪ್ರಳಯ ಉಂಟಾಗಿ ಮೂರೂ ಲೋಕಗಳಾದ ಭೂ, ಸ್ವರ್ಗ, ಮತ್ತು ಪಾತಾಳವು ಜಲಪ್ರಳಯದಲ್ಲಿ ಮುಳುಗಿಹೋಗುತ್ತದೆ. ಇದೇ ಸಂದರ್ಭದಲ್ಲಿ ಚತುರ್ಮುಖನೆನಿಸಿದ ಬ್ರಹ್ಮನು ನಿದ್ರಾವಸ್ಥೆಯಲ್ಲಿರುವುದನ್ನು ಕಂಡು, ಸೋಮಕ ಎಂಬ ರಾಕ್ಷಸನು ಬ್ರಹ್ಮನ ಬಳಿಯಿದ್ದ ನಾನಾ ವೇದ ಗ್ರಂಥಗಳೆಲ್ಲವನ್ನೂ ಕದ್ದು ತೆಗೆದುಕೊಂಡು ಹೋಗುವನು. ಧರ್ಮದ ಸಂಸ್ಥಾಪನೆಗೆ ಮೂಲಾಧಾರವಾದ ವೇದಗಳನ್ನು ಸೋಮಕ ಎಂಬ ರಾಕ್ಷಸನಿಂದ ಮರಳಿ ಪಡೆದುಕೊಳ್ಳಲು ವೈಕುಂಠದ ಅಧಿಪತಿಯಾದ ವಿಷ್ಣು ದೇವನು ಧರ್ಮ ಸಂಸ್ಥಾಪನಾರ್ಥವಾಗಿ ಮೀನಿನ ಅವತಾರವನ್ನು ಅಂದರೆ, ಮತ್ಸ್ಯಾವತಾರವನ್ನು ತಾಳಿದನು.

ಇಡೀ ವಿಶ್ವವನ್ನೇ ಸತ್ಯವ್ರತ ಮನು ಚಕ್ರವರ್ತಿಯೆಂಬ ರಾಜನು ಆಳುತಿದ್ದನು. ಇವನು ವಿಷ್ಣುವಿನ ಪರಮ ಭಕ್ತನಾಗಿದ್ದು, ತನ್ನ ಬದುಕಿನಲ್ಲಿ ವೈರಾಗ್ಯವನ್ನು ಹೊಂದಿ ತನ್ನ ಬಳಿಯಿದ್ದ ಸಿರಿಸಂಪತ್ತು ಮತ್ತು ಸಾಮ್ರಾಜ್ಯಾದಿ ಸರ್ವಸ್ವವನ್ನು ತ್ಯಜಿಸಿ ನಂತರ "ಕೃತಮಾಲಾ ಎಂಬ ನದಿಯ" ತೀರದಲ್ಲಿ ಪರ್ಣಕುಟೀರವನ್ನು ನಿರ್ಮಿಸಿ ಕೇವಲ ನೀರನ್ನೇ ಆಹಾರವಾಗಿ ಸೇವಿಸುತ್ತಾ, ಘೋರವಾದ ತಪಸ್ಸನ್ನಾಚರಿಸುತ್ತಿದ್ದನು. ಒಂದು ಬಾರಿ ನದಿಯ ನೀರಿನಲ್ಲಿ ಪ್ರಾತಃಕಾಲದ ಕರ್ಮಗಳನ್ನು ಮುಗಿಸಿ ನಂತರ ಸೂರ್ಯದೇವನಿಗೆ ಅರ್ಘ್ಯ ನೀಡುತ್ತಿದ್ದ ಸಮಯದಲ್ಲಿ ಬೊಗಸೆ ನೀರಿನೊಂದಿಗೆ ಒಂದು ಮೀನು ಹೊರಗೆ ಬರುತ್ತದೆ. ಅದನ್ನು ಮತ್ತೆ ನದಿಗೆ ಚೆಲ್ಲಲು ಹೋದಾಗ "ಭಯಭೀತವಾದ ಧ್ವನಿಯಲ್ಲಿ ಮೀನು ತನ್ನನ್ನು ನದಿಯಲ್ಲಿರುವ ಕ್ರೂರ ಮೀನು ಮೊಸಳೆಗಳಿಂದ ರಕ್ಷಿಸುವಂತೆ ಮಾತನಾಡುತ್ತದೆ." ಮೀನು ಮಾತನಾಡಿದ್ದನ್ನು ಕೇಳಿ ಆಶ್ಚರ್ಯಪಟ್ಟ ಸತ್ಯವ್ರತನು ಮೀನನ್ನು ತನ್ನ ಕಮಂಡಲದಲ್ಲಿರಿಸಿಕೊಂಡು ತನ್ನ ಆಶ್ರಮಕ್ಕೆ ಕೊಂಡೊಯ್ದನು. ಮೀನು ಒಂದೇ ರಾತ್ರಿಯಲ್ಲಿ ಆ ಕಮಂಡಲದೊಳಗೆ ತುಂಬಾ ದೊಡ್ಡದಾಗಿ ಬೆಳೆಯಿತು. 

ಈ ವಿಚಿತ್ರ ಮೀನನ್ನು ಕಂಡ ಸತ್ಯವ್ರತನು ಅದನ್ನು ಕಮಂಡಲದಿಂದ ತೆಗೆದು ಹರಿವಾಣದಲ್ಲಿ ತುಂಬಿದ್ದ ನೀರೊಳಗೆ ಬಿಟ್ಟನು. ಅದೇ ಕ್ಷಣದಲ್ಲಿ ಆ ವಿಚಿತ್ರ ಮೀನು ಮೂರು ಗೇಣುಗಳಷ್ಟು ಉದ್ದವಾಯಿತು. ಅಲ್ಲಿಂದ ಮತ್ತೆ ಅದನ್ನು ತೆಗೆದು, ಸತ್ಯವ್ರತನು  ಸರೋವರದಲ್ಲಿ ಬಿಡುವನು. ಅದು ಬೃಹದ್ರೂಪದಲ್ಲಿ ಬೆಳೆದು, ಇಡೀ ಸರೋವರವನ್ನೇ ವ್ಯಾಪಿಸಿತು. ಸತ್ಯವ್ರತ ಮಹರ್ಷಿಗೆ ಈ ಮೀನಿನ ವೈಶಿಷ್ಟ್ಯತೆಯನ್ನು ಕಂಡು, ಅತ್ಯಾಶ್ಚರ್ಯವಾಯಿತು. ನಂತರ ಅದನ್ನು ಅಲ್ಲಿಂದ ತೆಗೆದು ಸಮುದ್ರಕ್ಕೆ ಬಿಡುತ್ತಾ “ಕ್ಷಣಕ್ಷಣಕ್ಕೂ ಹೀಗೆ ಬೃಹದಾಕಾರವಾಗಿ ಬೆಳೆಯುತ್ತಿರುವ ನೀನು ಯಾರು..? ನಮ್ಮ ಬುದ್ಧಿಯನ್ನೇ ಕೆಣಕುತ್ತಿರುವ ನಿನಗೆ ಇಂತಹ ಅಪೂರ್ವ ಶಕ್ತಿ ಹೇಗೆ ಲಭಿಸಿತು..? ನೀನು ಸಾಮಾನ್ಯ ಮೀನಿನಂತೆ ನನಗೆ ಕಂಡುಬರುತ್ತಿಲ್ಲ. ನೀನು ವಿಷ್ಣು ಪರಮಾತ್ಮನೇ ಆಗಿರುವನೆಂಬ ಸಂದೇಹ ನನ್ನಲ್ಲಿ ಮೂಡಿದೆ..!” ಎಂದು ಕೇಳುವನು. ಪರಮಾತ್ಮನಾದ ಶ್ರೀಹರಿಯು ಮೀನಿನ ರೂಪದಲ್ಲಿ ಬಂದಿದ್ದನು. ನಂತರ ಸತ್ಯವ್ರತನ ಕೋರಿಕೆಯಂತೆ ವಿಷ್ಣು ದೇವನು ತನ್ನ ನಿಜ ಸ್ವರೂಪವನ್ನು ಪ್ರತ್ಯಕ್ಷವಾಗಿ ತೋರಿಸುತ್ತಾ "ಸತ್ಯವ್ರತ ಮಹರ್ಷಿಗಳೇ...! ನಾನು ಮತ್ಸ್ಯ ಅವತಾರಿಯಾಗಿ ವೈಕುಂಠದಿಂದ ಭೂಲೋಕದಲ್ಲಿ ಅವತರಿಸುತ್ತಿದ್ದೇನೆ. ಇಂದಿನಿಂದ ಸರಿಯಾಗಿ ಏಳು ದಿನಗಳಲ್ಲಿ ಪ್ರಬಲ ರೂಪದ ಜಲಪ್ರಳಯ ಸಂಭವಿಸಿ, ಸಪ್ತ ಸಮುದ್ರಗಳೂ ಒಂದೆಡೆಯಲ್ಲಿ ಸೇರ್ಪಡೆ ಆಗುತ್ತವೆ. ಆ ಸಮಯದಲ್ಲಿ ಮೂರೂ ಲೋಕಗಳೂ ಜಲರಾಶಿಯಲ್ಲಿ ಮುಳುಗಿಹೋಗುತ್ತವೆ. ಆಗ ನನ್ನ ಭಕ್ತನಾದ ನಿನ್ನನ್ನು ಕಾಪಾಡುವ ಸಲುವಾಗಿ ನಾನು ಮೀನಿನ ರೂಪದಲ್ಲಿ ಬಂದಿದ್ದೇನೆ. ಇಂತಹ ಜಲಪ್ರಳಯದ ಸಂದರ್ಭದಲ್ಲಿ ನಿನ್ನ ಬಳಿಗೆ ಒಂದು ದೋಣಿಯನ್ನು ಕಳುಹಿಸುತ್ತೇನೆ. ಅದರಲ್ಲಿ ಸಪ್ತ ಋಷಿಗಳು ಇರುವರು. ಅದನ್ನು ನೀನು ಏರಿದ ನಂತರ ವಾಸುಕಿ ನಿನ್ನಲ್ಲಿಗೆ ಬರುವನು. ಅವನ ನೆರವಿನಿಂದ ನೀನು ನಿನ್ನ ಎಲ್ಲಾ ಪ್ರಜೆಗಳನ್ನು, ಎಲ್ಲಾ ಸಸ್ಯಾದಿಗಳ ಬೀಜಗಳನ್ನು ಮತ್ತು ಎಲ್ಲಾ ಪ್ರಭೇದಗಳ ಪಶುಪಕ್ಷಿಗಳನ್ನು ನಾವೆಯಲ್ಲಿ ಶೇಖರಿಸಿಡಬೇಕು. ಆಗ ದೋಣಿಯನ್ನು ಮೀನಿನ ರೂಪದಲ್ಲಿ ಬಂದಿರುವ ನಾನು ಹೊತ್ತುಕೊಂಡು, ನಿನ್ನನ್ನು ಸಂರಕ್ಷಿಸುತ್ತೇನೆ. ಜೊತೆಗೆ ಆತ್ಮಜ್ಞಾನದ ದಿವ್ಯಮಂತ್ರವನ್ನೂ ನಿನಗೆ ಉಪದೇಶಿಸುತ್ತೇನೆ” ಎನ್ನುತ್ತಾ ತಪಸ್ವಿಯ ಕಡೆ ತನ್ನ ಅಭಯಹಸ್ತವನ್ನು ತೋರಿಸುತ್ತಾ, ಅಂತರ್ಧಾನನಾದನು.
ಸತ್ಯವ್ರತನು ಪರಮಾತ್ಮನ ಅಣತಿಯಂತೆ ತನಗೊಪ್ಪಿಸಿದ್ದ ಸಕಲ ಕಾರ್ಯಗಳನ್ನು ನಿಷ್ಠೆಯಿಂದ ಪೂರೈಸಿ, ಏಳು ದಿನಗಳವರೆಗೆ ದೋಣಿಗಾಗಿ ಕಾಯುತ್ತಾ ಕುಳಿತನು. ಏಳನೆಯ ದಿನದಲ್ಲಿ ಗುಡುಗು ಸಿಡಿಲುಗಳಿಂದ ಕೂಡಿದ ಅತ್ಯಂತ ವಿನಾಶಕಾರಿಯಾದ ಮಳೆ ಬೀಳತೊಡಗಿತು. ಇಡೀ ಭೂಮಂಡಲದಲ್ಲಿ ಜಲಪ್ರಳಯವುಂಟಾಗುತ್ತದೆ. ಭೂ ಮಂಡಲವು ಜಲರಾಶಿಯಲ್ಲಿ ಮುಳುಗುತ್ತಿದ್ದಂತೆ, ಒಂದು ಚಿನ್ನದ ಬಣ್ಣದ ನೌಕೆ ಅಲ್ಲಿಗೆ ಆಗಮಿಸುತ್ತದೆ.  

ಸತ್ಯವ್ರತನು ವಿಷ್ಣು ಪರಮಾತ್ಮನನ್ನು ಸ್ಮರಿಸುತ್ತಾ ಬೀಜಗಳು, ಔಷಧೋಪಯುಕ್ತ ಮೂಲಿಕೆಗಳು ಸೇರಿದಂತೆ ಮೊದಲಾದವುಗಳನ್ನು ಆ  ನಾವೆಯಲ್ಲಿ ಹಾಕಿ ತಾನು ಏರುವನು. ಸಾಗರದ ಬೃಹದಾಕಾರದ ತೆರೆಗಳ ಹೊಯ್ದಾಟದಲ್ಲಿ ದೋಣಿಯು ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ರಾಜನು ಹರಿಯನ್ನು ಧ್ಯಾನಿಸುತ್ತ ಧೈರ್ಯದಿಂದ ಇದ್ದನು. ಅದೇ ಸಮಯಕ್ಕೆ ಮತ್ಸ್ಯರೂಪದ ಮಹಾವಿಷ್ಣು ತೊಂಬತ್ತು ಲಕ್ಷ ಯೋಜನೆಯ ಉದ್ದದ ಬಂಗಾರದ ಬಣ್ಣದ ಮೀನೊಂದು ದೋಣಿಯ ಬಳಿ ಕಾಣಿಸಿಕೊಂಡಿತು. ಸತ್ಯವ್ರತನು ಅದರ ಮೂತಿಗೆ ವಾಸುಕಿ ರೂಪದ ಹಗ್ಗದಿಂದ ನಾವೆಗೆ ಬಿಗಿದನು. ಇದರಿಂದ ದೋಣಿಯ ಹೊಯ್ದಾಟ ನಿಂತು ಬ್ರಹ್ಮ್ಮನ ಒಂದು ರಾತ್ರಿ ಕಾಲದವರೆಗೂ ನಿಧಾನಕ್ಕೆ ಚಲಿಸತೊಡಗಿತು. ಜೊತೆಗೆ ಎರಡೂ ಕೈಗಳನ್ನು ಜೋಡಿಸಿಕೊಂಡು ಮಹಾವಿಷ್ಣುವನ್ನು ಸ್ತುತಿಸತೊಡಗಿದನು. ಇದೇ ಸಮಯದಲ್ಲಿ ವಿಷ್ಣು ಪರಮಾತ್ಮನು ಸತ್ಯವ್ರತನಿಗೆ ಆತ್ಮಸ್ವರೂಪ, ಭಕ್ತಿಯೋಗ, ಮತ್ಸ್ಯ ಪುರಾಣ ಸಂಹಿತೆಯನ್ನು ಉಪದೇಶಿಸುವನು.

ಮತ್ಸ್ಯಾವತಾರಿಯಾದ ಮಹಾವಿಷ್ಣು ನಾವೆಯನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಸಾಗಿಸಿದನು. ಕೊಟ್ಟ ಮಾತಿನಂತೆ ಸತ್ಯವ್ರತನಿಗೆ ಆತ್ಮಜ್ಞಾನದ ಮಂತ್ರವನ್ನೂ ಉಪದೇಶಿಸಿದನು. ಪ್ರಳಯ ಮುಗಿಯುತ್ತಿದ್ದಂತೆ ಸೋಮಕ ರಾಕ್ಷಸನನ್ನು ಹಿಡಿದು ಆತನ ಉದರವನ್ನೇ ಸೀಳಿ ಆತನಲ್ಲಿದ್ದ ವೇದಗ್ರಂಥಗಳನ್ನು ಪಡೆದು ಬ್ರಹ್ಮ ದೇವನಿಗೆ ಅರ್ಪಿಸಿದನು. ಈ ಸತ್ಯವ್ರತ ಮನು ರಾಜರ್ಷಿಯೇ ವೈವಸ್ವತಮನು.

|| ಓಂ ಶ್ರೀ ವಾಸುದೇವಾಯ ನಮಃ ||

[ ಸಂಗ್ರಹ ]
********

No comments:

Post a Comment