SEARCH HERE

Saturday 20 April 2019

ರಾಮ ರಾಮ ಏನಿದು ರಾಧ್ದಾಂತ.


ರಾಮಾಯಣದಲ್ಲಿ ವಾಲಿಗೂ ಮತ್ತು ರಾವಣನಿಗೂ ದಂಡಕಾರಣ್ಯ ಎಂಬಂತಹ ಘೋರ ಅರಣ್ಯ ಪ್ರದೇಶದಲ್ಲಿ ಅತಿಭಯಂಕರ ಯುದ್ಧ ನಡೆಯುತ್ತೆ,
 ಅದರಲ್ಲಿ ರಾವಣ ವಾಲಿಯಿಂದ ಸೋಲಿಸಲ್ಪಡುತ್ತಾನೆ...

      ಆಗ ಅವರಿಬ್ಬರ ಮಧ್ಯೆ ಒಂದು ಸಂದಿ ಏರ್ಪಡುತ್ತದೆ ಅದೇನೆಂದರೆ ಒಬ್ಬರ ರಾಜ್ಯವನ್ನು ಇನ್ನೊಬ್ಬರು ಯಾವುದೇ ಕ್ಷಣದಲ್ಲಾದರೂ, ಯಾವುದೇ ಸಮಯದಲ್ಲಾಗಲಿ, ರಾತ್ರಿಯಲ್ಲಾಗಲಿ, ಹಗಲಿನಲ್ಲಿಯಾಗಲೀ ಭೇಟಿ ಕೊಡಬಹುದು ಹಾಗೂ ಸಿಂಹಾಸನದಲ್ಲಿ ಉಪ ಕ್ರಮಿಸಬಹುದು ಜೊತೆಗೆ ಒಬ್ಬರ ಧರ್ಮಪತ್ನಿಯನ್ನು ಇನ್ನೊಬ್ಬರು ಉಪಭೋಗಿಸಬಹುದು...

 ಈಗ ಹೇಳಿ ಇದು ಶಿವ ಸಂಸ್ಕೃತಿನೆ...?

ಅವನ್ಯಾವನೋ ಅವಿವೇಕಿ ಜ್ಞಾನ ಎಂಬ ಗಂಡು ನರ ಬಲಿತಿಲ್ಲದವನು ತನ್ನ ಊಹಾಪೋಹ ಸಿದ್ಧಾಂತವನ್ನು ಹರಿಬಿಟ್ಟಿರುವುದು ಒಪ್ಪುತ್ತೀರಾ...?

 ತನ್ನ ತೆವಲಿಗೆ ಸಿದ್ಧಾಂತ ಎಂಬಂತಹ ಸಂಸ್ಕಾರ ಕೊಟ್ಟು ಶಿವಸಂಸ್ಕೃತಿ ಎಂಬಂಥ ಊಹಾಪೋಹ ಹೆಣೆಗಳನ್ನು ಎಳೆದು  ನಾಗರಿಕ ಸಮಾಜದ ದಾರಿ ತಪ್ಪಿಸಲು ಸಿದ್ಧರಾಗಿರುವಂತಾ ಬೌದ್ಧಿಕ ಉಗ್ರನೇ ಈ ಲೇಖನವನ್ನು ಬರೆದವನು..

ಪುರಾಣ ,ಇತಿಹಾಸ ಕಾಲಜ್ಞಾನ ಪ್ರಜ್ಞೆ ಉಳ್ಳ ಪ್ರಾಜ್ಞರಿಗೆ ಗೊತ್ತಿರುವ ವಿಚಾರ ಅಂದರೆ ರಾಮಾಯಣದ ಕಾಲಕ್ಕೂ ಬುದ್ಧನ ಜನ್ಮ ಸಮಯಕ್ಕೂ ಸುಮಾರು 5000 ವರ್ಷಗಳ ಅಂತರ ಇದೆ 

ಕ್ರಿಸ್ತಪೂರ್ವ 2500 ರಲ್ಲಿ ಯೋಗಿಗಳ ಚಕ್ರವರ್ತಿ, ಭಗವಾನ್ ಬುದ್ಧರ ಅವತಾರವಾಯಿತು...

     ಈ ಮೇಲ್ಕಂಡ ಲೇಖನ ಬರೆದ ಮಹಾಶಯನಿಗೆ ಅಶೋಕ ವನಕ್ಕೆ , ಬುದ್ಧನ ಸಿದ್ಧಾಂತಕ್ಕೂ ತಾಳೆ ಮಾಡುತ್ತಾ ಇರುವುದನ್ನು ನೋಡಿದರೆ ಖುಲ್ಲಂ ಖುಲ್ಲಾ ಆತ ನಾಗರಿಕ ಸಮಾಜದ ಮೇಲೆ , ಪ್ರಾಚೀನ ಹಿಂದೂ ಸಿದ್ಧಾಂತದ ಮೇಲೆ ಆಕ್ರಮಣಕಾರಿಯೇ ಸರಿ at least ಐತಿಹಾಸಿಕ ಘಟನೆಗಳ ಪರಿವೇ ಇಲ್ಲದ ಒಬ್ಬ ಧೂರ್ತ ..

ರಾಮjust born and brought up  ಕ್ಷತ್ರಿಯ ಕಣ್ರೀ ....
ಪ್ರಜಾ ರಕ್ಷಣೆ, ಪ್ರಜಾ ಪರಿಪಾಲನ, ರಾಜ್ಯ ಪರಿಪಾಲನ ಅವನ ಧರ್ಮ...
 ಸ್ವಧರ್ಮ ಪರಿಪಾಲನಾ ಅಂತ ಹೇಳುತ್ತೆ ನಮ್ಮ ಶಾಸ್ತ್ರಗಳು, ಆ ರೀತಿ ನಡ್ಕೊಂಡು ರಾಮ.

 ವಿಶ್ವಾಮಿತ್ರರೇ ಹೇಳಿದ ಹಾಗೆ 
 *ಕೌಸಲ್ಯ ಸುಪ್ರಜಾ ರಾಮಾ ಪೂರ್ವ ಸಂಧ್ಯಾ ಪ್ರವರ್ತತೇ 

 ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವ ಮಾಹ್ನಿಕಂ* 

ಹೇ ರಾಮ ಬೆಳಗಾಯಿತು ಎದ್ದೇಳು ಮಾಡುವ ಕೆಲಸವೇ ದೈವ ಆರಾಧನೆ ಅಂತ ವಿಶ್ವಾಮಿತ್ರರು ರಾಮನಿಗೆ  ಕಿವಿಮಾತು ಹೇಳಿದ್ದಾರೆ... ಇದೇ ಮಾತನ್ನು ಬಸವಣ್ಣನವರು ಕಾಯಕವೇ ಕೈಲಾಸ ಅಂದಿದ್ದಕ್ಕೆ ಒಪ್ಕೊಳ್ತೀವಿ, ಆದ್ರೆ ಶ್ರೀರಾಮಚಂದ್ರ ಕ್ಷಾತ್ರ ಧರ್ಮ ಪರಿಪಾಲನಾ ವನ್ನು ಯಾಕೆ ಒಪ್ಪಿಕೊಳ್ಳುವುದಿಲ್ಲ...? ಕುಂಡೀಲ್ಲಿ ಕೆಂಡ ತುರುಕಿದ ಹಾಗೆ ಯಾಕಾಗುತ್ತೆ...
of course ರಾಮಾಯಣದ ಬಗ್ಗೆ ಹಲವಾರು ಜಿಜ್ಞಾಸೆಗಳನ್ನು ನಾನು ಕೇಳಿದ್ದೇನೆ....

 ರಾಮಾಯಣ ಎಂಬ ಹೆಸರಿಗೂ ಮೊದಲು ಸೀತಾ ಚರಿತ್ರೆ ಯಂತೆ ಯಾಕೆ ಇಡಬಾರದು ಅಂತ ವಿಶ್ಲೇಷಣೆ ನಡೀತಂತೆ 

ಆ ಸಮಯದಲ್ಲಿ ಸೀತೆಯ ಹೆಣ್ ಹೃದಯ , ಹೆಣ್ಣು ಮನಸ್ಸು ಕೆಲವು ಸಮಯ ಮಾನವೀಯ ಆಸೆಗಳಿಗೆ ಬಲಿಯಾಗುವಂತಹ  ಪ್ರಸಂಗವನ್ನು ತೋರಿಸಿ ಅದನ್ನು ಅಲ್ಲಗಳೆದರೆ ಅದೇ ಸಮಯದಲ್ಲಿ ಶ್ರೀರಾಮಚಂದ್ರನ ಮನೋಸ್ಥೈರ್ಯವನ್ನು ಯೋಗಿಗಳು ಪಂಡಿತರು ಗುರುತಿಸಿ ಅವನಿಗೆ ಪುರುಷೋತ್ತಮ ಎಂಬಂತಹ ಬಿರುದನ್ನು ಕೊಡ್ತಾರೆ 

ಅಂದ್ರೆ ನರರೂಪಿ ಮಾನವರಿಗೆ ಆಸೆ ಆಕಾಂಕ್ಷೆಗಳು ಇದ್ದರೂ ಸಹ ಅದೆಲ್ಲವನ್ನೂ ಮೀರಿ ಕೇವಲ ಕರ್ತವ್ಯಂ ದೈವ ಮಾಹ್ನಿಕಂ 
ಅಂದರೆ ಪ್ರಜಾ ರಕ್ಷಣೆಗೋಸ್ಕರ ಜೀವನವನ್ನು ಇಟ್ಟಂತಹ ಭೂಲೋಕದ ಪ್ರಪ್ರಥಮ ದೊರೆ ಶ್ರೀರಾಮ ...
ಪ್ರಜಾ ಪರಿಪಾಲನೆಗಾಗಿ ತನ್ನ ಹೆಂಡತಿಯ ಮೇಲೆ ದೋಷ ಇದ್ದರೆ, ಆಕೆಯನ್ನೂ ಸಹ ಬಿಟ್ಟು ಸಮಾಜದ ಕಡೆಯ ವ್ಯಕ್ತಿಗೂ ಸಹ ಮಾತಿನ ಮನ್ನಣೆಯ ನಿಟ್ಟ ಭೂ ಲೋಕದ ಏಕೈಕ ದೊರೆ ಶ್ರೀರಾಮ ...

 ಶಂಭೂಕ ಪ್ರಕರಣ ಶೂದ್ರ ಕುಲದಲ್ಲಿ ಹುಟ್ಟಿ ಸಶರೀರಿಯಾಗಿ ಸ್ವರ್ಗವನ್ನು ತಲುಪಬೇಕೆಂಬ ಇಚ್ಛೆಯಿಂದ ತಪಸ್ಸನ್ನು ಆಚರಿಸುತ್ತಿದ್ದ, ಖಿನ್ನತೆಗೊಳಗಾಗಿ ಮಾನಸಿಕ ಅಸ್ವಸ್ಥನಾಗಿದ್ದ ಒಬ್ಬ ತಪಸ್ವಿ ಹಲವಾರು ವಿಚಿತ್ರ ಶಕ್ತಿಗಳನ್ನು ಹೊಂದಿದ್ದ ಈತ ಸಾಮಾಜಿಕ ನಿಯಮಗಳನ್ನು ಮೀರಿ ಜೀವನ ಮತ್ತು ತಪಸ್ಸನ್ನು ಆಚರಿಸುತ್ತಿದ್ದ ಇದು ಧರ್ಮ ಬಾಹಿರ ,ಸಮಾಜ ಬಾಹಿರ, ಕಾನೂನು ಬಾಹಿರ , ಶಾಸ್ತ್ರ ಬಾಹಿರ ಕರ್ಮ ಹಾಗಾಗಿ ಈ ಅವಿವೇಕಿ ಮಾನಸಿಕ ರೋಗಿಯನ್ನು ಶ್ರೀರಾಮಚಂದ್ರ ಕೊಲ್ಲಲ್ ಪಡಬೇಕಾಗಿತ್ತು ನಿಮಗೆ ಉಮೇಶ್ ರೆಡ್ಡಿ, adalf hitler, osama bin ladenರಂತಹ ಸಮಚಿತ್ತ ವಿಫಲಗೊಂಡ ಮಾನವರೂಪಿ ಕ್ರೂರ ವ್ಯಕ್ತಿತ್ವದ ನೆನಪು ಬರಲಿ 

      ಈ ಒಂದು ದೃಷ್ಟಿಕೋನದಲ್ಲಿ ಶಂಭೂಕನ ಹತ್ಯೆ ಶಾಸ್ತ್ರ ಕಾನೂನಿನ ಪ್ರಕಾರ ಸರಿಯಷ್ಟೆ...

ವಾಲಿ ಸುಗ್ರೀವರ ಕಾಳಗದಲ್ಲಿ ಶ್ರೀರಾಮಚಂದ್ರ ಕಪಟ ಮತ್ತು ಕುಟಿಲ ಮಾರ್ಗದಿಂದ ವಾಲಿಯನ್ನು ಹತ್ಯೆ ಮಾಡುತ್ತಾನೆ 
ಆ ಸಮಯದಲ್ಲಿ ವಾಲಿ ಶ್ರೀರಾಮಚಂದ್ರನನ್ನು ಕಂಡು ಶ್ರೀರಾಮ ಏಕೆ ಹೀಗೆ ಮಾಡಿದೆ ಸುಗ್ರೀವನ ೆಂಬ ಅಯೋಗ್ಯ, ಅಪೌರುಷೇಯ ಸ್ನೇಹ ಸಂಪಾದಿಸಿ ಪರಾಕ್ರಮಿ ವಾಲಿಯನ್ನು ಕೊಂದ ಯಲ್ಲ....  ನೀನು ಹೇಳಿದಲ್ಲಿ ಕ್ಷಣ ಮಾತ್ರದಲ್ಲಿ ಸೀತೆಯನ್ನು ರಾವಣ ನನ್ನು ಕರೆತಂದು ನಿನ್ನ ಪಾದಗಳಿಗೆ ಒಪ್ಪಿಸುತ್ತಿದ್ದೆ ನಲ್ಲ...

ವಾಲಿಯ ಪರಾಕ್ರಮ ಶ್ರೀರಾಮಚಂದ್ರನಿಗೆ ಸರಿಯಾಗಿಯೇ ಅರಿವಿತ್ತು ಆದರೂ ಸಹ ಶ್ರೀರಾಮಚಂದ್ರನು ಪರಾಕ್ರಮಿ ವಾಲಿಯ ಪರ ವಹಿಸದೆ ಧರ್ಮ ಪರಿಪಾಲಕ, ಪ್ರಜಾ ರಕ್ಷಕ ಸುಗ್ರೀವನಿಗೆ ತನ್ನ ಸ್ನೇಹದ ಹಸ್ತ ಚಾಚಿದ್ದು ಮೇಲ್ಕಂಡ ಲೇಖನ ಬರೆದ ಕುಯುಕ್ತಿ ಬುದ್ಧಿಜೀವಿಗಳಿಗೆ ನೆನಪಿಗೆ ಬರುವುದಿಲ್ಲವೇ ...

ಮೇಲ್ಕಂಡ ಮಿಥ್ಯಾರೋಪಗಳನ್ನು ಹೆಣಿ ತಾ ಇದ್ದಂತಹ ಲೇಖಕ ಹಿಂದೂ ಧರ್ಮದ ಮೇಲೆ ಸನಾತನ ಸಿದ್ಧಾಂತದ ಮೇಲೆ,  ತನ್ನ  ಕುಯುಕ್ತಿ ಕತೆಯ ಆಕ್ರಮಣವನ್ನು ಯಜ್ಞ ಯಾಗ ಹೋಮ ಹವನಗಳ ಸಾಂಕೇತಿಕ ರೂಪವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕರ್ಮಕಾಂಡಕ್ಕೂ ಮಿಗಿಲಾದ ಜ್ಞಾನ ಕಾಂಡವೇ ಭರತ ಭೂಮಿಯ ಶ್ರೇಷ್ಠ ಕೊಡುಗೆ ಮಾನವ ಜನಾಂಗಕ್ಕೆ ಎಂಬುದನ್ನ ತಿಳಿಯದಾಗಿದ್ದಾನೆ ವಿದ್ರೋಹಿ ಲೇಖಕ ....

 *ಕರ್ಮಾಣಿ ಚಿತ್ತ ಶುದ್ಯರ್ಥಂ
ಏಕಾಗ್ರಾರ್ಥ ಉಪಾಸನಾಂ
ಮೋಕ್ಷಾರ್ಥಂ ಬ್ರಹ್ಮ ವಿಜ್ಞಾನ ಮಿತಿ ವೇದಾಂತ ಡಿಂಡಿಮ*
 ಎಂಬುದಾಗಿ ನಮ್ಮ ಶಾಸ್ತ್ರಗಳು ಹೇಳುವ ಹಾಗೆ ಹೋಮ ಹವನ ಯಜ್ಞ ಯಾಗ ಎಂಬಂಥ ಧರ್ಮಾಚರಣೆಗಳಿಂದ ಮನಸ್ಸು ಶುದ್ಧವಾಗುತ್ತದೆ

 ಮಂತ್ರ ಜಪ ಪಠಣ ಪಾರಾಯಣದಿಂದ ಮನಸ್ಸು  ಏಕಾಗ್ರ ಗೊಳ್ಳುತ್ತದೆ 

 ಆತ್ಮ ವಿಮೋಚನೆಗಾಗಿ ಬ್ರಹ್ಮಜ್ಞಾನವನ್ನು ಶಾಸ್ತ್ರವ ವಿದಿಸಿರುತ್ತದೆ....

ರಾಮಾಯಣವು ಮತ್ತು ರಾಮನ ನಡೆಯುವ ಶ್ರೇಷ್ಠ ನಾಗರಿಕತೆ ಮತ್ತು ಪ್ರಾಮಾಣಿಕ ಸಮುದಾಯಗಳನ್ನು ಹೊಸೆಯುವ ನಿದರ್ಶನವೇ ಹೌದು ಜೊತೆಗೆ ಸಾಮಾಜಿಕ ವಿರುದ್ಧ ಶಕ್ತಿಗಳ ವಿರುದ್ಧ ಹೋರಾಡುವ ಕಾಲಾತೀತ ಸತ್ಯ ಮಾರ್ಗದ ಉದಾಹರಣೆ .....

ಶ್ರೀರಾಮಚಂದ್ರ ನಲ್ಲಿ ಅನೇಕ ನ್ಯೂನ್ಯತೆಗಳನ್ನ ಆರೋಪಿಸಿದರೂ ಸಹ ಪರಮ ಧ್ಯೇಯವಾದ ಕರ್ತವ್ಯಂ ದೈವ ಮಾಹ್ನಿಕಂ ಎಂಬಂತೆ ನಡೆದು ಪ್ರಜಾ ಸೇವಕರಾಗಿ ಪುರುಷೋತ್ತಮನಾದ

 ರಾವಣನು ಮಹಾ ತಪಸ್ವಿ, ಪರಾಕ್ರಮಿ ಯಾದರೂ ಸಹ ಮಾನವ ಸಹಜ ಆಸೆಗಳಿಂದ ರಾಕ್ಷಸನಾದ...

********

No comments:

Post a Comment