2019 jan Megaravalli Subramanya
ಅಧಿಕಾರಕ್ಕಾಗಿ ಉಚಿತ ಆಹಾರವಸ್ತುಗಳು, ನಿರುದ್ಯೋಗ ಭತ್ಯೆ, ಹಾಗೂ ಇತರೆ ಸೌಲಭ್ಯಗಳ ಆಮಿಷ ಒಡ್ಡುತ್ತಿರುವ ನಮ್ಮ ನಾಯಕರು, ಈ ದೇಶವನ್ನು ಮತ್ತೊಂದು ವೆನೆಝುವೆಲಾವನ್ನಾಗಿ ಮಾರ್ಪಡಿಸುತ್ತಿದ್ದಾರಾ......?
ಸಣ್ಣ ಸಣ್ಣ ತೊರೆಗಳು,ನದಿಗಳು, ಹಚ್ಚಹಸುರಿನ ಪ್ರಕೃತಿ, ಸಮುದ್ರತೀರದಲ್ಲಿ ಯಥೇಚ್ಛವಾಗಿ ದೊರಕಿದ ಪೆಟ್ರೋಲಿಯಂ....., 1970 ರಲ್ಲಿ ವೆನೆಝುವೆಲಾ ದೇಶವು ಪ್ರಪಂಚದ ಅತ್ಯಂತ 20 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು.
ಅಧಿಕಾರಕ್ಕೆ ಬರಬೇಕೆಂಬ ಏಕೈಕ ಆಸೆಯಿಂದ ಒಬ್ಬ ರಾಜಕೀಯ ನಾಯಕ ಮನೆಯಲ್ಲಿ ಮಾಡಲೇನೂ ಕೆಲಸವಿಲ್ಲದವರಿಗೆ, ಬಡಕುಟುಂಬದವರಿಗೆ ತಿಂಗಳು ತಿಂಗಳೂ ಮಾಸಾಶನದ ರೂಪದಲ್ಲಿ ಉಚಿತ ಧನಸಹಾಯವನ್ನು ನೀಡುವುದಾಗಿ ಚುನಾವಣಾ ಕಾಲದಲ್ಲಿ ಪ್ರಕಟಿಸಿದ. ಭಾರೀ ಬಹುಮತದಿಂದ ಗೆದ್ದು ಬಂದ. ದೇಶದ ಐಶ್ವರ್ಯವನ್ನು ಎಲ್ಲರಿಗೂ ಮನಬಂದಂತೆ ಹಂಚಿಕೊಟ್ಟ. ಮುಂದಿನ ಚುಣಾವಣೆಯಲ್ಲಿ ಸರ್ಕಾರಿ ನೌಕರರು ಹಾಗೂ ಕಾರ್ಮಿಕರ ಸಂಬಳವನ್ನು ಐದು ಪಟ್ಟು ಹೆಚ್ಚಿಸಿದ. ಒಂಟಿ ತಾಯಂದಿರಿಗೆ ಅನೂಹ್ಯವಾದ ಕೊಡುಗೆಗಳನ್ನಿತ್ತ.
2008ರಲ್ಲಿ ಮತ್ತೆ ಚನಾವಣೆ ಬಂತು. "ಬೆಲೆಯೇರಿಕೆ ಇಲ್ಲದ ಆಹಾರ ಸರಬರಾಜು ವ್ಯವಸ್ಥೆ" ಎಂದು ಘೋಷಿಸಿ, ಮತ್ತೆ ಅಧಿಕಾರವನ್ನು ವಶಪಡಿಸಿಕೊಂಡ. ಸರ್ಕಾರ ನಿರ್ಧರಿಸಿದ ಬೆಲೆಗೆ ಬ್ರೆಡ್ ಹಾಗೂ ಇತರೆ ಆಹಾರವಸ್ತುಗಳನ್ನು ಸರಬರಾಜು ಮಾಡಲಾಗದೆ ಹಲವಾರು ಕಂಪನಿಗಳು ಬಾಗಿಲಿಗೆ ಬೀಗ ಜಡಿದವು. ಮೂವತ್ತು ಲಕ್ಷಕ್ಕೂ ಅಧಿಕಮಂದಿ ಧನಿಕ ಕೈಗಾರಿಕೋದ್ಯಮಿಗಳು, ನುರಿತ ಕೆಲಸಗಾರರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ದೇಶಬಿಟ್ಟು ಪಲಾಯನಗೈದರು. ಆದರೂ ದೇಶದ ಆಧ್ಯಕ್ಷ ಹಿಂಜರಿಯಲಿಲ್ಲ. ಪೆಟ್ರೋಲ್ ವ್ಯಾಪಾರದಿಂದ ಹಣದ ಹೊಳೆಯೇ ಹರಿದುಬರುತ್ತಿದೆ. ಕಡೆಗೆ ಟಾಯಲೆಟ್ ಪೇಪರನ್ನು ಸಹ ವಿದೇಶಗಳಿಂದ ಆಮದು ಮಾಡಿಕೊಂಡ. ದೇಶದಲ್ಲಿ ಯಾವುದೇ ಯಾರೂ ಯಾವುದೇ ಕೆಲಸಮಾಡುವ ಅವಶ್ಯಕತೆ ಇಲ್ಲವಾಯಿತು. ಸರಕಾರ ಕೊಡುವ ಉಚಿತ ಸವಲತ್ತುಗಳನ್ನು ಬಳಸುವುದು. ಕೈಗೆ ಸಿಕ್ಕ ಪಕ್ಕಟೆ ಹಣದಿಂದ ಐಷರಾಮವಾಗಿ ಕಾಲದೂಡುವುದು ಇದಿಷ್ಟೇ ಪ್ರಜೆಗಳ ಕೆಲಸವಾಗಿತ್ತು........
ಎಲ್ಲದಕ್ಕೂ ಸಬ್ಸಿಡಿ, ಅನಾಯಾಸವಾಗಿ ದೊರೆಯುವ ಹಣದಿಂದ ಮುಂಬರುವ ಆರ್ಥಿಕ ಸುನಾಮಿಯ ಬಗ್ಗೆ ಜನ ಊಹಿಸಲೇ ಇಲ್ಲ.
2005ರಲ್ಲಿ ಪೆಟ್ರೋಲಿಯಂ ಬೆಲೆ ಅಂತರರಾಷ್ಟ್ರೀಯ ಮಾರಕಟ್ಟೆಯಲ್ಲಿ ಬಿದ್ದುಹೋಯಿತು.ಆದರೂ ದೇಶಾಧ್ಯಕ್ಷ ಯಥೇಚ್ಛವಾಗಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಟ್ಟ. ಎಲ್ಲಿನೋಡಿದರೂ ಕಾಸೇ ಕಾಸು....!
ಆದರೆ, ಪೈಸೇ ಬೆಲೆಬಾಳದ ಪೇಪರ್ ಕರೆನ್ಸೀ......
2018ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಪರೀಸ್ಥಿತಿ ಇನ್ನಷ್ಟು ವಿಷಮಿಸಿತು. ದೇಶದಲ್ಲಿ ಹಣದುಬ್ಬರವು ಶೇಕಡಾ13,00,000ರಷ್ಟಾಯಿತು...!
ಉಚಿತ ಸಬ್ಸಿಡಿ ಎಲ್ಲವೂ ನಿಂತುಹೋಯಿತು. ಅದರೆ ಪಗ್ಸಟ್ಟೆ ತಿಂದು ಮಲಗಿ ಅಭ್ಯಾಸವಾಗಿಹೋಗಿದ್ದ ಯುವಜನರು ಕತ್ತಿ ಕಠಾರಿ,ಪಿಸ್ತೂಲುಗಳನ್ನು ಹಿಡಿದು ಸಿಕ್ಕಿದ್ದು ಲೂಟಿಮಾಡಲು ಹೊರಟರು. ತಿನ್ನಲು ಆಹಾರವಿಲ್ಲದೆ ಪ್ರಾಣಿಸಂಗ್ರಹಾಲಯದಲ್ಲಿದ್ದ ಪ್ರಾಣಿಗಳೆಲ್ಲವೂ ಸತ್ತುಹೋದವು.
ವೆನೆಝುವೆಲಾದ ಮುಖ್ಯಪಟ್ಟಣಗಳಲ್ಲಿ ಕ್ಯಾರಕಾಸ್ ಸಹ ಒಂದು. ಆ ನಗರದ ಪ್ರತಿ ಲಕ್ಷಜನಕ್ಕೆ ಇಪ್ಪತ್ತು ಸಾವಿರ ಜನರು ಹತ್ಯೆಗೆ ಗುರಿಯಾಗುತ್ತಿದ್ದಾರೆ. ಪ್ರಪಂಚದ ಅತಿ ಲಂಚಕೋರ ದೇಶಗಳ ಪಟ್ಟಿಯಲ್ಲಿ ಹತ್ತನೆಯ ಸ್ಥಾನದಲ್ಲಿರುವ ವೆನೆಝುವೆಲಾ, ಪ್ರಸ್ತುತ ಪ್ರಪಂಚದ ಅತ್ಯಂತ ಪ್ರಮಾದಕರವಾದ ರಕ್ತಪಾತ ನಡೆಸುವ ದೇಶಗಳ ಪಟ್ಟಿಯಲ್ಲಿ ಒಂದನೆಯ ಸ್ಥಾನವನ್ನು ಪಡೆದಿದೆ.
ಇತರೆ ದೇಶಗಳು ತಮ್ಮ ನಾಗರಿಕರನ್ನು ಆ ದೇಶಕ್ಕೆ ಪ್ರವಾಸಕ್ಕೆ ಹೋಗಬಾರದೆಂದು ಎಚ್ಚರಿಸುತ್ತಿವೆ.
ನಿತ್ಯಾವಶ್ಯಕ ವಸ್ತುಗಳನ್ನು ಅಮದು ಮಾಡಿಕೊಳ್ಳಲು ದೇಶದಲ್ಲಿ ಹಣವಿಲ್ಲ.
ವಿದ್ಯುತ್ ಶಕ್ತಿ ಇಲ್ಲ.
ನಾಲ್ಕು ದಿನಕ್ಕೊಮ್ಮೆ ಕೇವಲ ಒಂದುಗಂಟೆ ಕಾಲ ಬರುವ ನೀರು.
ಅಂಗಡಿಗಳಲ್ಲಿ ಟೂತ್ ಪೇಸ್ಟ್ ಸಹ ಇಲ್ಲ.
ಇದ್ದರೂ ಕೊಳ್ಳಲು ಹಣವಿಲ್ಲ.
ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಶೇಕಡಾ66ಕ್ಕೆ ಮುಟ್ಟಿದೆ.
ಒಂದು ಸಣ್ಣ ತುಣುಕು ರೊಟ್ಟಿಗಾಗಿ ತನ್ನ ಮೈಯ್ಯನ್ನು ಮಾರಿಕೊಳ್ಳಲು ರಾತ್ರಿಯಿಡೀ ರೋಡಿನಮೆಲೆ ನಿಂತು ಕಾಯುತ್ತಿರುವ ಹುಡುಗಿಯರು,
ಸ್ವಲ್ಪ ತಿಂಡಿಗಾಗಿ ಬೆಳಗಿನಜಾವದಿಂದ ಅರ್ಧರಾತ್ರಿಯ ವರೆಗೂ ಸರತಿಸಾಲಿನಲ್ಲಿ ಕಾಯುವ ಸಣ್ಣ ಮಕ್ಕಳು,
ಸೇದುತ್ತಿರುವ ಸಿಗರೇಟಿನ ಅರ್ಧದಷ್ಟಾದರೂ ನಮಗೆ ಕೊಡಿಯೆಂದು ದಾರಿಯುದ್ದಕ್ಕೂ ಬೇಡುವ ಅಂಗಲಾಚುವ ಹಿರಿಯರು........,
ಇದು ಆ ದೇಶದ ಸಧ್ಯದ ಪರೀಸ್ಥಿತಿ.
ಎಲ್ಲವನ್ನೂ ಉಚಿತವಾಗಿ ಕೊಡುವುದರಿಂದ ಸಾಧಿಸಲಾಗದು ಎಂಬುದಕ್ಕೆ ವೆನೆಝುವೆಲಾ ದೇಶದ ಈ ಚರಿತ್ರೆಯ ತುಣುಕು ಒಂದು ಉತ್ತಮ ಉದಾಹರಣೆ.
ಈ ಸತ್ಯವನ್ನು ಜನನಾಯಕರುಗಳು ಮನಗಾಣಬೇಕು. ಅದಕ್ಕಿಂತಾ ಮೊದಲು ಅಂತಹ ನಾಯಕರನ್ನು ಪ್ರಜೆಗಳು ತಿರಸ್ಕರಿಸುವ ಮನಸುಮಾಡಬೇಕು ಈ ದೇಶದ ಉದಾಹರಣೆಯನ್ನು ಕೊಟ್ಟು ಎಲ್ಲರಿಗೂ ಈ ರಾಜಕೀಯ ಪಾಠವನ್ನು ತಿಳಿಹೇಳಬೇಕಾಗಿದೆ
ದುಡಿಯುವ ಕೈಗಳಿಗೆ ಹಣ ಕೊಟ್ಟು ಸೋಮಾರಿಗಳನ್ನಾಗಿಸದಿರಿ
ಬಡವರು ಭಿಕ್ಷುಕರಾಗದಿರಲಿ
ದೇಶಕ್ಕೆ ಅನ್ಯಾಯವೆಸಗುವ ಇಂಥ ಯೋಜನೆಗಳಿಗೆ ಬಲಿಯಾಗದಿರೋಣ
ಸ್ವಾವಲಂಬಿ ಸ್ವಾಭಿಮಾನಿಗಳಾಗೋಣ.
*****
No comments:
Post a Comment