ಚೈತ್ರ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು
ಚಂದ್ರಮಾನ ಯುಗಾದಿ (ಶುಕ್ಲ ಪಾಡ್ಯ)
ಶ್ರೀ ರಾಮ ನವಮಿ (ಶುಕ್ಲ ನವಮಿ)
ಹನುಮ ಜಯಂತಿ (ಹುಣ್ಣಿಮೆ)
ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
ವರಾಹ ಜಯಂತಿ (ಕೃಷ್ಣ ತ್ರಯೋದಶಿ)
ಚೈತ್ರ ಮಾಸದ ಮಹತ್ವವೇನು..? ಶುಕ್ಲ ಪಕ್ಷಕ್ಕೂ, ಕೃಷ್ಣ ಪಕ್ಷಕ್ಕೂ ಇರುವ ವ್ಯತ್ಯಾಸವೇನು..? ಚೈತ್ರ ಮಾಸದ ವಿಶೇಷತೆಯೇನು..?
ಹಿಂದೂ ಕ್ಯಾಲೆಂಡರ್‌ನ ಮೊದಲ ತಿಂಗಳು ಚೈತ್ರ ಮತ್ತು ಕೊನೆಯ ತಿಂಗಳು ಫಾಲ್ಗುಣ ತಿಂಗಳು ಎಂದು ಪರಿಗಹಣಿಸಲಾಗುತ್ತದೆ. ಈ ಎರಡೂ ತಿಂಗಳುಗಳು ವಸಂತಕಾಲದಲ್ಲಿ ಬರುತ್ತವೆ. ಹಿಂದೂ ಹೊಸ ವರ್ಷವು ಚೈತ್ರವು ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಚೈತ್ರ ಮಾಸದ ಮೊದಲ ದಿನವು ನವರಾತ್ರಿ ದುರ್ಗಾ ವ್ರತದಿಂದ ಪ್ರಾರಂಭವಾಗುವುದು ಮಾತ್ರವಲ್ಲ, ಈ ದಿನ ರಾಜ ರಾಮಚಂದ್ರನ ಪಟ್ಟಾಭಿಷೇಕ, ಯುಧಿಷ್ಠಿರನ ಪಟ್ಟಾಭಿಷೇಕ, ಸಿಖ್ ಸಂಪ್ರದಾಯದ ಎರಡನೇ ಗುರು ಅಂಗದ್ದೇವನ ಜನನ. ಪ್ರಾಚೀನ ಕಾಲದಲ್ಲಿ, ವಿಶ್ವದಾದ್ಯಂತ ಮಾರ್ಚ್ ಅನ್ನು ವರ್ಷದ ಮೊದಲ ತಿಂಗಳು ಎಂದು ಪರಿಗಣಿಸಲಾಗಿತ್ತು. ಜ್ಯೋತಿಷ್ಯದಲ್ಲೂ ಕೂಡ ಗ್ರಹಗಳನ್ನು, ಋತುಗಳನ್ನು, ತಿಂಗಳುಗಳನ್ನು ಮತ್ತು ದಿನಾಂಕಗಳನ್ನು ಚೈತ್ರ ಮಾಸದ ಆರಂಭದಿಂದ ಲೆಕ್ಕ ಹಾಕಲಾಗುತ್ತದೆ. ಚೈತ್ರ ಮಾಸದ ಮಹತ್ವವೇನು..? ಉಳಿದೆಲ್ಲಾ ಮಾಸಗಳಿಗಿಂತ ಚೈತ್ರ ಮಾಸವೇಕೇ ವಿಭಿನ್ನ.?
ಚೈತ್ರ ಮಾಸದ ಆರಂಭ
ಅಮಾವಾಸ್ಯೆಯ ನಂತರ ಚಂದ್ರನು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿ ಕಾಣಿಸಿಕೊಂಡಾಗ, ಆತನ ಆಕಾರ ಪ್ರತಿದಿನ ಹೆಚ್ಚಾಗುತ್ತದೆ ಮತ್ತು 15 ನೇ ದಿನದಂದು ಚಿತ್ರ ನಕ್ಷತ್ರದಲ್ಲಿ ಪರಿಪೂರ್ಣತೆಯನ್ನು ಪಡೆಯುತ್ತದೆ, ನಂತರ ಆ ತಿಂಗಳು 'ಚಿತ್ರ' ನಕ್ಷತ್ರದಿಂದಾಗಿ 'ಚೈತ್ರ' ಎಂದು ಕರೆಯಲ್ಪಡುತ್ತದೆ. ಇದನ್ನು ಸಂವತ್ಸರ ಎಂದು ಕರೆಯಲಾಗುತ್ತದೆ, ಇದರರ್ಥ ಈ ಸಂವತ್ಸರದಲ್ಲಿ ವಿಶೇಷವಾಗಿ 12 ತಿಂಗಳುಗಳಿರುತ್ತದೆ.
ಈ ದಿನದ ಪ್ರಾಮುಖ್ಯತೆ
ಪೌರಾಣಿಕ ನಂಬಿಕೆಯ ಪ್ರಕಾರ, ಬ್ರಹ್ಮನು ಚೈತ್ರ ಶುಕ್ಲ ಪ್ರತಿಪಾದದ ದಿನದಿಂದ ಪ್ರಪಂಚದ ಸೃಷ್ಟಿಯನ್ನು ಪ್ರಾರಂಭಿಸಿದನು. ಈ ದಿನ, ವಿಷ್ಣು ದಶಾವತಾರದಲ್ಲಿನ ಮೊದಲ ಅವತಾರವಾದ ಮತ್ಸ್ಯ ಅವತಾರವನ್ನು ತೆಗೆದುಕೊಂಡು, ಪ್ರಳಯಕಾಲದಲ್ಲಿ ನಾಶವಾಗುತ್ತಿದ್ದ ಮನುವನ್ನು ರಕ್ಷಿಸಿದನು. ಪ್ರಳಯಕಾಲದ ಕೊನೆಯಲ್ಲಿ, ಮನುವಿನಿಂದಲೇ ಹೊಸ ಸೃಷ್ಟಿ ಪ್ರಾರಂಭವಾಯಿತು.
ಈ ದಿನ ಏನು ಮಾಡಬೇಕು..?
ಚೈತ್ರ ಮಾಸವು ಸಾಮಾನ್ಯವಾಗಿ ಶುಕ್ಲ ಪಕ್ಷದ ಪ್ರತಿಪಾದ ದಿನದಿಂದ ಪ್ರಾರಂಭವಾಗುತ್ತದೆ, ಅದು ಕಲ್ಪಾದಿ ತಿಥಿಯಾಗಿರುತ್ತದೆ. ಚೈತ್ರ ಶುಕ್ಲ ಪಕ್ಷವನ್ನು ಪ್ರತಿಪಾದ ದಿನಾಂಕದಿಂದ ಸತ್ಯಯುಗದ ಆರಂಭವೆಂದು ಪರಿಗಣಿಸಲಾಗುತ್ತದೆ. ಮೊದಲನೆಯದಾಗಿ, ಈ ದಿನದಿಂದ ಪ್ರತಿಯೊಬ್ಬರಿಗೂ ಹೊಸ ವರ್ಷ ಆರಂಭವಾಗುತ್ತದೆ. ನಂತರ ಈ ತಿಂಗಳಿನಿಂದ ಹಿಡಿದು 4 ತಿಂಗಳುಗಳವರೆಗೆ ಜಲದಾನವನ್ನು ಮಾಡಬೇಕು.
ಚೈತ್ರ ಮಾಸದಲ್ಲಿ ಪೂಜೆ ಹೀಗಿರಲಿ
ಹಿಂದೂ ಧರ್ಮದಲ್ಲಿ ಪ್ರತೀ ತಿಂಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಭಾಗ ಶುಕ್ಲ ಪಕ್ಷ ಮತ್ತು ಎರಡನೆಯ ಭಾಗ ಕೃಷ್ಣ ಪಕ್ಷ. ಚೈತ್ರ ಮಾಸ ಶುಕ್ಲ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಶುಕ್ಲ ಎಂದರೆ ಚಂದ್ರನ ಆಕಾರ ಹೆಚ್ಚಾಗುವುದು ಮತ್ತು ಅಂತಿಮವಾಗಿ ಹುಣ್ಣಿಮೆ ಎದುರಾಗುವುದು. ಈ ತಿಂಗಳ ಪ್ರತಿ ದಿನಾಂಕದಂದು ಕೆಲವು ದೇವತೆಗಳನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ.
ಶುಕ್ಲ ಪಕ್ಷದ ಪೂಜೆ
ಶುಕ್ಲ ತೃತೀಯದಲ್ಲಿ ಉಮಾ, ಶಿವ ಮತ್ತು ಅಗ್ನಿ ದೇವರನ್ನು ಪೂಜಿಸಬೇಕು. ಶುಕ್ಲ ತೃತೀಯವನ್ನು ಮತ್ಸ್ಯ ಜಯಂತಿ ಎಂದು ಆಚರಿಸಲಾಗುತ್ತದೆ. ಏಕೆಂದರೆ ಅದು ಮನ್ವಾದಿ ತಿಥಿ. ಚತುರ್ಥಿ ಗಣೇಶನನ್ನು ಪೂಜಿಸಬೇಕು. ಪಂಚಮಿಯ ಮೇಲೆ ಲಕ್ಷ್ಮಿ ಪೂಜೆ ಮತ್ತು ಸರ್ಪಗಳ ಪೂಜೆ ಮಾಡಬೇಕು. ಶಾಂತಿಗಾಗಿ ಸ್ವಾಮಿ ಕಾರ್ತಿಕೇಯ ಆರಾಧನೆ ಮಾಡಬೇಕು. ಸಪ್ತಮಿಯಂದು ಸೂರ್ಯನ ಆರಾಧನೆ.
ತಾಯಿ ದುರ್ಗಾವನ್ನು ಅಷ್ಟಮಿಯಂದು ಪೂಜಿಸುವುದು ಮತ್ತು ಈ ದಿನ ಬ್ರಹ್ಮಪುತ್ರ ನದಿಯಲ್ಲಿ ಸ್ನಾನ ಮಾಡುವುದು ಸಹ ಮುಖ್ಯವಾಗಿದೆ. ನವಮಿಯಲ್ಲಿ ಭದ್ರಕಾಳಿಯನ್ನು ಪೂಜಿಸಬೇಕು. ದಶಮಿಯಂದು ಧರ್ಮರಾಜನ ಆರಾಧನೆ. ಶುಕ್ಲ ಏಕಾದಶಿ ಎಂಬುದು ಶ್ರೀಕೃಷ್ಣನ ಹಬ್ಬ, ದ್ವಾದಶಿಯನ್ನು ದಮನಕೋತ್ಸವ ಎಂದು ಆಚರಿಸಲಾಗುತ್ತದೆ.
ತ್ರಯೋದಶಿಯಲ್ಲಿ ಕಾಮದೇವನ ಆರಾಧನೆ. ನರಸಿಂಹಮಂಡಲೋತ್ಸವ, ಏಕ್ವೀರ, ಭೈರವ ಮತ್ತು ಶಿವನ ಆರಾಧನೆ. ಅಂತಿಮವಾಗಿ ಪೂರ್ಣಿಮಾದಂದು ಮನ್ವಾದಿ, ಹನುಮಾನ್ ಜಯಂತಿ ಮತ್ತು ವೈಶಾಕ ಸ್ನಾನವನ್ನು ಆಚರಿಸಲಾಗುತ್ತದೆ. ಚೈತ್ರ ಮಾಸದ ಹುಣ್ಣಿಮೆಯನ್ನು 'ಚೈತ ಪೂನಂ' ಎಂದೂ ಕರೆಯುತ್ತಾರೆ.
ಕೃಷ್ಣ ಪಕ್ಷದ ಪೂಜೆ
ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಪಾಪಮೋಚನಿ ಏಕಾದಶಿ ಎಂದು ಕರೆಯಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ ಎಂದು ಕರೆಯಲಾಗುತ್ತದೆ. ಚಳಿಗಾಲದ ಅವಧಿಯು ಅಶ್ವಿನ ತಿಂಗಳಿನಿಂದ ಪ್ರಾರಂಭವಾಗುತ್ತದೆ, ಆದ್ದರಿಂದ ಅಶ್ವಿನ ದಶಮಿ ತಿಂಗಳಲ್ಲಿ 'ಹರೇಲಾ' ಆಚರಿಸಲಾಗುತ್ತದೆ. ಬೇಸಿಗೆ ಕಾಲವು ಚೈತ್ರ ಮಾಸದಿಂದ ಪ್ರಾರಂಭವಾಗುತ್ತದೆ, ಆದ್ದರಿಂದ ಹರೇಲಾವನ್ನು ಚೈತ್ರ ತಿಂಗಳ ನವಮಿಯಲ್ಲಿ ಆಚರಿಸಲಾಗುತ್ತದೆ. ಅಂತೆಯೇ, ಮಳೆಗಾಲವು ಶ್ರಾವಣ ತಿಂಗಳಿಂದ ಪ್ರಾರಂಭವಾಗುತ್ತದೆ, ಆದ್ದರಿಂದ ಹರೇಲಾವನ್ನು ಶ್ರಾವಣದಲ್ಲಿ ಆಚರಿಸಲಾಗುತ್ತದೆ.
*******
ಭವಿಷ್ಯೊತ್ತರ ಪುರಾಣದಲ್ಲಿ ಬಂದ ಚೈತ್ರಮಾಸದ ವಿಚಾರದಲ್ಲಿ ಈ ರೀತಿಯಾಗಿ ವರ್ಣನೆ ಇದೆ:
ವೈಶಾಖಾತ್ ಕಾರ್ತಿಕಃ ಶ್ರೇಷ್ಠಃ ಕಾರ್ತಿಕಾತ್ ಮಾಘ ಎವ ಚ
ಮಾಘಮಾಸಾದ್ ವರಶ್ಚಾಯಂ ಚೈತ್ರಮಾಸೋ ಭವಿಷ್ಯತಿ.
ವೈಶಾಖಕ್ಕಿಂತ ಕಾರ್ತಿಕ ಶ್ರೇಷ್ಠ ಕಾರ್ತಿಕಕ್ಕಿಂತ ಮಾಘ ಶ್ರೇಷ್ಠ ಮಾಘ ಮಾಸಕ್ಕಿಂತಲೂ ಚೈತ್ರ ಇದು ಶ್ರೇಷ್ಠ. ಈ ಮಾಸದಲ್ಲಿ ಮಾಡಿದ ಸತ್ಕಾರ್ಯ, ಸತ್ ಪಾತ್ರರಿಗೆ ದಾನಮಾಡಿದ್ದು, ಯಜ್ಞಯಾಗಾದಿಗಳನ್ನು ಮಾಡಿದ್ದು, ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿದ್ದು, ಶಾಸ್ತ್ರ ವಿಚಾರ ಮಾಡಿದ್ದು ಎಲ್ಲವೂ ಕೋಟಿ ಪಟ್ಟು ಅಧಿಕ ಫಲಪ್ರದವಾಗುತ್ತದೆ. ಅದರಲ್ಲಿಯೂ ಇವೆಲ್ಲವನ್ನು ಅಯೋಧ್ಯದಲ್ಲಿ ಮಾಡಿದರೆ ಇನ್ನೂ ವಿಶೇಷ.
ಹನ್ನೆರಡು ಮಾಸಗಳಲ್ಲಿ ಮೊದಲನೆಯಾದ ಈ ಚೈತ್ರ ಮಾಸವು ಸಕಲ ಜೀವರಾಶಿಗೆ ಇಷ್ಟವಾದುದನ್ನು ಕೊಡುತ್ತಾ ತಾಯಿಯಂತೆ ಶೋಭಿಸುತ್ತದೆ. ಧರ್ಮಪ್ರವರ್ತಕರಾದ ಪ್ರಭು ಶ್ರೀ ರಾಮಚಂದ್ರನು ಈ ಮಾಸದಲ್ಲಿ ಅವತರಿಸಲು, ಸಂತುಷ್ಟರಾದ ದೇವತೆಗಳು ಹಾಗೂ ಸಜ್ಜನರೆಲ್ಲರೂ ದೇವದೇವೋತ್ತಮರಾದ ಆ ಪುರಾಣ ಪುರುಷನನ್ನು ವಿವಿಧ ರೀತಿಯಿಂದ ಸ್ತುತಿಸಿದರು. ಗೀತ – ವಾದ್ಯ- ನೃತ್ಯಗಳೊಂದಿಗೆ ಪ್ರಸನ್ನಗೊಳಿಸಿದರು. ಚೈತ್ರ ಮಾಸದ ಹಿರಿಮೆಯನ್ನು ಕೊಂಡಾಡಿ, ಆ ಮಾಸಕ್ಕೆ ವಿಶೇಷವಾದ ವರದಾನ ಕೊಡುವಂತೆ ಪ್ರಾರ್ಥಿಸಿದರು. ಆಗ ಪ್ರಸನ್ನನಾದ ಶ್ರೀರಾಮಚಂದ್ರನು –
ಸರ್ವೇಷಾಮೇವ ಮಾಸಾನಾಂ ಶ್ರೇಷ್ಠಾಶ್ಚಾಯಂ ಭವಿಷ್ಯತಿ
ಅಯೋಧ್ಯಾಯಾಂ ರಾಮತೀರ್ಥ ಸರಯಾಜಲ ಮಧ್ಯಗೇ
ಚೈತ್ರಸ್ನಾನಂ ಪ್ರರುರ್ವಾಣಾ ಸ್ತ್ರೀ ನರಾ ಮೋಕ್ಷಭಾಗಿನಃ
ಎಲ್ಲ ಮಾಸಗಳಿಗೆ ತಾಯಿಯಂತೆ ಇರುವ ಚೈತ್ರ ಮಾಸವು ಮಾಸಗಳಲ್ಲಿ ಶ್ರೇಷ್ಠವಾಗುವಂತೆ ವರದಾನ ಮಾಡಿದನು. ಅಷ್ಠೇ ಅಲ್ಲದೇ ತಾನು ಸ್ವತಃ ಅದೇ ಮಾಸದಲ್ಲಿ ಅವತಾರ ಮಾಡಿದನು. ಅಯೋಧ್ಯಯಲ್ಲಿರುವ ಸರಯೂ ನದಿ (ರಾಮತೀರ್ಥ) ಅಲ್ಲಿ ಸ್ನಾನ ಮಾಡಿದವರಿಗೆ, ಅವರಿಗೆ ಬರುವ ಎಲ್ಲ ಆಪತ್ತುಗಳನ್ನು ದೂರ ಮಾಡುತ್ತೇನೆ ಎಂದು ಹೇಳಿದ್ದಾನೆ.
ಚೈತ್ರ ಮಾಸದಲ್ಲಿ ಮಾಡಬೇಕಾದ ಕಾರ್ಯಗಳು
ಮಾರ್ಗದಲ್ಲಿ ಹೋಗುವವನಿಗೆ ನೀರಿನ ವ್ಯವಸ್ಥೆ (ಅರವಟ್ಟಿಗೆ)
ಬಿಸಿಲಿನಲ್ಲಿ ಬಂದವರಿಗೆ ಒಳ್ಳೆಯ ನೆರಳಿನ ವ್ಯವಸ್ಥೆ
ಊಟವಿಲ್ಲದವನಿಗೆ ಊಟ ವಸತಿ ವ್ಯವಸ್ಥೆ
ನೀರು ದಾನ ಮಾಡದೆ ಇದ್ದಲ್ಲಿ ಅವನು ಮುಂದೆ ಜಾತಕ ಪಕ್ಷಿಯಾಗಿ ಹುಟ್ಟಿ ನೀರಿಗಾಗಿ ಪರದಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಿಲಾಗಿದೆ.
ಗೋದಿ, ಹಾಸಿಗೆ (ಶಯ್ಯಾ), ಬೆಲ್ಲ, ತುಪ್ಪ, ಮೊಸರು, ನೆಲ್ಲಿಕಾಯಿ, ಮಾವು ಇವೆ ಮೊದಲಾದವುಗಳು ವಿಶೇಷ ಪುಣ್ಯಕಾರಿ.
ಚೈತ್ರ ಮಾಸದಲ್ಲಿ ಅಯೋಧ್ಯಾ ಪಟ್ಟಣದಲ್ಲಿ ಇರುವ ಸರಯೂ ನದಿಯಲ್ಲಿ (ರಾಮತೀರ್ಥದಲ್ಲಿ) ಸ್ನಾನ ಮಾಡಬೇಕು. ವಿಶೇಷವಾಗಿ ರಾಮಾಯಣ ಶ್ರವಣ ಮಾಡಬೇಕು.
ಶ್ರಾಸ್ತ್ರದ ಒಂದು ಶ್ಲೋಕದಲ್ಲಿ ಈ ರೀತಿ ಹೇಳಲಾಗಿದೆ
ಸರ್ವ ತೀರ್ಥೇಷು ಯತ್ ಪುಣ್ಯಂ ಸರ್ವ ದಾನೇಷು ಯತ್ ಫಲಂ |
ರಾಮಾಯಣಸ್ಯ ಪಠಣಾತ್ ತತ್ ಫಲಂ ನವರಾತ್ರಕೇ ||
ಇದರ ಅರ್ಥ :
ಎಲ್ಲ ತೀರ್ಥಗಳಲ್ಲಿ ಹೋಗಿ ಸ್ನಾನಾದಿಗಳನ್ನು ಮಾಡಿದರೆ ಯಾವ ವಿಶಿಷ್ಠ ಪುಣ್ಯ ಪ್ರಾಪ್ತವಾಗುವುದೋ, ಎಲ್ಲ ದಾನಗಳನ್ನು ಮಾಡಿದರೇ ಯಾವ ಪುಣ್ಯ ಪ್ರಾಪ್ತವಾಗುವುದೋ, ಆ ಪುಣ್ಯ ರಾಮಾಯಣ ಶ್ರವಣದಿಂದ ಬರುತ್ತದೆ.
ಈ ಮಾಸದಲ್ಲಿ ಬರುವ ಮುಖ್ಯ ದಿನಗಳು:
೧) ಯುಗಾದಿ — ಶುಕ್ಲ ಪ್ರತಿಪದ
೨) ಗೌರಿ ತೃತಿಯಾ — ಶುಕ್ಲ ತೃತಿಯಾ
೩) ರಾಮನವಮಿ — ಶುಕ್ಲ ನವಮಿ
೪) ಏಕಾದಶಿ
೫) ಹನುಮ ಜಯಂತಿ — ಹುಣ್ಣಿಮೆ — ದವನದ ಹುಣ್ಣಿಮೆ
******
🌷🌹ಚೈತ್ರ ಮಾಸದ ಮಹತ್ವ🌹🌷
🌺ಭಾಗ-1🌺
ಯುಗಾದಿ ಹಬ್ಬದ ಮಹತ್ವ
ಚೈತ್ರಮಾಸಕ್ಕೆ ವಿಷ್ಣುರೂಪಿ ಪರಮಾತ್ಮ ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು . ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿಂಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು
ಯುಗಾದಿಯಂದು ಪ್ರತಿಯೋಬ್ಬರು
ಅಭ್ಯಂಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ ಭಗವಂತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿಂದ ಅಭ್ಯಂಜನನವನ್ನು ಮಾಡಿಸಬೇಕು . ಭಗವಂತನಿಗೆ ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು.
ಸಪ್ತಚಿರಂಜೀವಿ ಸ್ಮರಣೆ
ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು .
ಅಶ್ವತ್ತಾಮಾ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ |
ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿಂಬಕ ದಳ ಬಕ್ಷಣ (ಬೇವು -ಬೆಲ್ಲ)ವನ್ನು ಮಾಡಬೇಕು
ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |
ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು
*************
🌷🌺ಚೈತ್ರಮಾಸದ ಮಹತ್ವ🌺🌷
🌹ಭಾಗ-2🌹
ರಾಮ ನವರಾತ್ರಿಯ ಮಹತ್ವ
ಚೈತ್ರ ಶುಕ್ಲ ಪ್ರತಿಪದೆ ಇಂದ ರಾಮನವಮಿವರೆಗೆ ರಾಮ ನವರಾತ್ರ್ಯುತ್ಸವವನ್ನು ಆಚರಿಸಬೇಕು .
ಈ ಒಂಬತ್ತು ದಿನಗಳಲ್ಲಿ ಪ್ರತಿನಿತ್ಯ ರಾಮದೇವರ ಪೂಜಾದಿಗಳನ್ನು ಮಾಡಬೇಕು. ಈ ದಿನಗಳಲ್ಲಿ ರಾಮಾಯಣ -ಪಾರಾಯಣ ಸುಂದರಕಾಂಡ ಪಾರಾಯಣ ರಾಮದೇವರ ಸ್ತೋತ್ರ ಪಾರಾಯಣ ಮಾಡಬೇಕು ಚೈತ್ರಶುಕ್ಲತೃತಿಯಾದಂದು ಸೀತಾರಮಣನಾದ ರಾಮಚಂದ್ರದೇವರನ್ನು ರಾಜೋಪಚಾರಗಳಿಂದ ಪೂಜಿಸಿ ತೊಟ್ಟಿಲಲ್ಲಿ ಕೂಡಿಸಿ ಧವನದ ಪತ್ರೆಗಳಿಂದ ಪೂಜಿಸಬೇಕು .ಚೈತ್ರ ಮಾಸ ಪೂರ್ತಿಯಾಗಿ ದೋಲಾರೂಢನಾದ ಶ್ರೀರಾಮನನ್ನು ದರ್ಶಿಸಿದವನು ಸಾವಿರಾರು ಅಪರಾಧಗಳಿಂದ ಮುಕ್ತನಾಗುವನು ಈ ವ್ರತವು ನಿತ್ಯವಾಗಿದೆ . ಸರ್ವರೂ ಮಾಡಲೆಬೇಕು.
**************
🌷🌺ಚೈತ್ರಮಾಸದ ಮಹತ್ವ🌺🌷
🌹ಭಾಗ-3🌹
ಚೈತ್ರಮಾಸದಲ್ಲಿ ಡೋಲೋತ್ಸವ ಮತ್ತು ದಮನಕಾರೋಪಣದ ಮಹತ್ವ
ದೋಲಾರೋಢಂಪ್ರಪಶ್ಯಂತಿ ಯೇ ಕೃಷ್ಣಂ ಮಧು ಮಾಧವೆ
ಅಪಾರಾಧಸಹಸ್ರೈಸ್ತು ಮುಕ್ತಾಸ್ತೇ ನಾತ್ರ ಸಂಶಯಃ ||
ಈ ಚೈತ್ರಮಾಸದಲ್ಲಿ ದೋಲಾರೂಢನಾದ ಕೃಷ್ಣನನ್ನು ದರ್ಶಿಸಿದವನು ಸಾವಿರಾರು ಅಪರಾಧಗಳಿoದ ಮುಕ್ತನಾಗುವನು.
ಚೈತ್ರಮಾಸದಲ್ಲಿ ಧವನದ ಪೂಜೆಯ ಮಹತ್ವ
ರುದ್ರದೇವರು ಸತಿದೇವಿಯನ್ನು ಕಳೆದುಕೊಂಡು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿರುವಾಗ.
ರುದ್ರದೇವರನ್ನು ಪಾರ್ವತಿಯು ಸೇವಿಸುತ್ತಿದ್ದಳು .ರುದ್ರದೇವರು ಪಾರ್ವತಿಯಲ್ಲಿ ಅನುರಕ್ತರನ್ನಾಗಿ ಮಾಡಲು ದೇವತೆಗಳಿoದ ಮನ್ಮಥನು ನಿಯುಕ್ತನಾಗಿದ್ದನು .ಮನ್ಮಥನು ತನ್ನ ಪಂಚಬಾಣಗಳನ್ನು ರುದ್ರದೇವರ ಮೇಲೆ ಪ್ರಾಯೋಗಿಸಿದನು .ಇದರಿಂದ ರುದ್ರದೇವರ ತಪೋಭಂಗವಾಗಿ ಕಾಮನನ್ನು ಸುಟ್ಟುಹಾಕಿದರು ಮನ್ಮಥನ ದಮನವಾಯಿತು.
ಪಾಲ್ಗುಣಮಾಸದ ಪೌರ್ಣಮಿಯಂದು ಕಾಮನದಹನವಾಯಿತು ಕಾಮನ
ದಹನದಿಂದ ಪತಿಯನ್ನು ಕಳೆದುಕೊಂಡ ರತಿದೇವಿಯು ದುಃಖಿತಳಾದಳು. ಪರಮೇಶ್ವರನನ್ನು ವಿಧ ವಿಧವಾಗಿ ಸ್ತೋತ್ರ ಮಾಡಿ ಮೆಚ್ಚಿಸಿದಳು ರುದ್ರದೇವರು ಮುಂದೆ ಭಗವಂತನು ಮನ್ಮಥನನ್ನು ಪ್ರಧ್ಯುಮ್ನನನ್ನಾಗಿ ಸೃಷ್ಟಿಸುವನು .ಅದುವರೆಗೂ ಒಂದು ತಿಂಗಳು ಭಗವಂತನ ಪೂಜೆಮಾಡು ಎಂದು ಹೇಳಿದರು . ರತಿದೇವಿಯು ತನ್ನ ಪತಿಯ ಭಸ್ಮದ ಮುಂದೆ ತನ್ನ ಕಣ್ಣಿರು ಹಾಕಿದಾಗ ಅದರಿಂದ ಒಂದು ಗಿಡವುಂಟಾಯಿತು.
ಆ ಗಿಡವೇ ದಮನ ಆಡು ಭಾಷೆಯಲ್ಲಿ ಧವನ ಎನ್ನುವರು.
ಕಾಮಭಸ್ಮಸಮೂದ್ಭೂತ ರತಿಭಾಷ್ಪ ಪರಿಪ್ಲುತಃ |
ರುದ್ರದೇವರಿಂದ ದಮನಹೊಂದಿದ ಕಾಮನ ಭಸ್ಮದಿಂದ ಜನ್ಮತಾಳಿ , ರತಿಯ ಕಣ್ಣಿರಿಂದ ಬೆಳೆದದ್ದು ಧವನ. ಈ ದವನದಿಂದ ಪರಮಾತ್ಮನನ್ನು ಮತ್ತು ದೇವತೆಗಳನ್ನು ಚೈತ್ರಮಾಸ ಪೂರ್ತಿಯಾಗಿ ಪೂಜಿಸಿದರೆ ವಿಶೇಷವಾಗಿ ಸಂತುಷ್ಟರಾಗುವರು ಎಂದು ರುದ್ರದೇವರ ವರವಿದೆ ಆದ್ದರಿಂದ ಚೈತ್ರಮಾಸದಲ್ಲಿ ದವನದ ಪೂಜೆ ವಿಶೇಷವಾಗಿರುತ್ತದೆ. ರಾಮನವರಾತ್ರಿಯಲ್ಲಿ ಒಂಬತ್ತು ದಿವಸಗಳೂ ದವನದ ಪೂಜೆಮಾಡಬೇಕು .
|| ಶ್ರೀಕೃಷ್ಣಾರ್ಪಣಮಸ್ತು ||
🌷🌺ಚೈತ್ರಮಾಸದ ಮಹತ್ವ🌺🌷
🌹ಭಾಗ-4🌹
ಚೈತ್ರಮಾಸದ ಕರ್ತವ್ಯಗಳು ಮತ್ತು ಕೊಡಬೇಕಾದ ದಾನಗಳು
ಚೈತ್ರಮಾಸದಲ್ಲಿ ಸೂರ್ಯನ ತಾಪವು ಪ್ರಾರಂಭವಾಗುತ್ತದೆ .ಇತರ ಮಾಸಗಳಿಗಿಂತ ಈ ಮಾಸದಲ್ಲಿ ಬಾಯಾರಿಕೆಯು ಅಧಿಕವಾಗಿ ಜಲವನ್ನು ಅಪೇಕ್ಷಿಸುವರು .
ಪಾಲ್ಗುಣಮಾಸ ಮುಗಿದು ಚೈತ್ರಮಾಸ ಪ್ರಾರಂಭ.ವಾದಾಗ ಪ್ರಪಾ(ಆರವಟಿಗೆ)ವನ್ನು
ಪ್ರಾರಂಭಿಸಬೇಕು ನಾಲ್ಕು ತಿಂಗಳವರೆಗೂ ನಡೆಸಬೇಕು .
ಆರವಟಿಗೆಯ ಮೂಲಕ ಜಲದಾನವನ್ನು ಮಾಡಬೇಕು ಜಲದಾನವನ್ನು ಮಾಡದವರು ಧರ್ಮಘಟದಾನ ವನ್ನು ಮಾಡಲೇಬೇಕು ಪ್ರತಿದಿವಸವು ಧರ್ಮಘಟವನ್ನು ದಾನ ಮಾಡುವುದರಿಂದ ಪ್ರಪಾದಾನದ ಫಲವನ್ನು ಪಡೆಯಬಹುದು.
ಪ್ರಪಾಂ ದಾತುಮಶಕ್ತೇನ ವಿಶೇಷಾದ್ ಧರ್ಮವಿಪ್ಸುನ |
ಪ್ರತ್ಯಹಂ ಧರ್ಮಘಟಕೋ ವಸ್ತ್ರಸಂವೇಷ್ಟಿತಾಸನಃ ||
ಪ್ರತದಿವಸವು ತಾಮ್ರದ ತಂಬಿಗೆಯಲ್ಲಿ ಲಾವಂಚ ಮುoತಾದ ಔಷಧಿ ಮೂಲಿಕೆಗಳನ್ನು ಸೇರಿಸಿದ ಜಲವನ್ನು ಭಗವಂತನಿಗೆ ಅರ್ಪಿಸಿ ಆದರ ಬಾಯಿಗೆ
ಒದ್ದೆ ಬಟ್ಟೆಯನ್ನು ಸುತ್ತಿ ಬ್ರಾಹ್ಮಣನ ಮನೆಗೆ ತಾನೆ ಹೋಗಿ ಧರ್ಮಘಟದಾನವನ್ನು ಮಾಡಬೇಕು.
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನತ್ಸಕಲಾ ಮಮ ಸಂತು ಮನೋರಥಃ ||
ಎಂಬ ಮಂತ್ರವನ್ನು ಹೇಳಿ ದಾನಕೊಡಬೇಕು .
ಚೈತ್ರಮಾಸದಲ್ಲಿ ಕೊಡಬೇಕಾದ ದಾನಗಳು
1)ಜಲದಾನ
2)ಛತ್ರಿದಾನ
3)ಬಿಸಣಿಕೆದಾನ
4)ಉದಕುಂಭದಾನ
5)ಕನ್ನಡಿದಾನ
6)ತಾಂಬೂಲದಾನ
7)ಗುಡ(ಬೆಲ್ಲ) ದಾನ
8)ಶಯ್ಯಾ(ಹಾಸಿಗೆ)ದಾನ
9)ತುಪ್ಪತುಂಬಿದ ಕಂಚಿನಪಾತ್ರೆದಾನ
10)ಗೋಧಿದಾನ
11)ಮೊಸರು ದಾನ
12)ತೆಂಗಿನಕಾಯಿ ದಾನ
13)ಮಾವಿನಹಣ್ಣಿನದಾನ
14)ತೆಳುವಸ್ತ್ರದಾನ
15)ಗ್ರಂಥದಾನ
16)ಮಠ ಮಂದಿರಗಳಿಗೆ ತೈಲದಾನ
17)ಹಣ್ಣು ,ತರಕಾರಿ ,ಗಡ್ಡೆ ,ಗೆಣಸು ,
ಚಂದನ , ತಂಪುನೀರು ,ಪಚ್ಚಕರ್ಪೂರ ,ಕಸ್ತೂರಿ ಮುಂತಾದವುಗಳನ್ನು ದಾನಕೊಡಬೇಕು
18)ದೀಪದಾನ ,ಆಕಳಹಾಲದಾನ. ,
ತುಪ್ಪ , ಮಜ್ಜಿಗೆ ,ಕುಂಕುಮಕೇಸರಿದಾನ , ಲವಂಗ ,ದಾಳಿಂಬೆ, ಸುಗಂಧದ್ರವ್ಯ . ನಿಂಬೆಹಣ್ಣು , ಹಲಸಿನಹಣ್ಣುದಾನ ಕುಂಬಳಕಾಯಿ , ಚಪ್ಪಲಿದಾನ ,
ನೆಲ್ಲಿಕಾಯಿದಾನ ,ಪಾನಕದಾನ , ಕೊಸಂಬರಿದಾನ .
ಒಂದು ತಟ್ಟೆಯಲ್ಲಿ ಗೋಧಿಹಾಕಿ ಸೀತಾಫಲಗಳನ್ನಿಟ್ಟು ದಾನ ಕೊಡಬೇಕು .
ಇವುಗಳನ್ನು ಚೈತ್ರಮಾಸದಲ್ಲಿ ಬ್ರಾಹ್ಮಣರಿಗೆ ದಾನಕೊಡಬೇಕು ಎಂದು ಚೈತ್ರಮಾಸಮಹಾತ್ಮೆಯಲ್ಲಿ ಪುಣ್ಯಕೀರ್ತಿರಾಜನಿಗೆ ಮಾಂಡವ್ಯ ಋಷಿಗಳು ತಿಳಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*
ಚೈತ್ರಮಾಸದ ಮಹತ್ವ🌷
|| ಸಂಚಿಕೆ-5 ||
🌷🌹ಶ್ರೀರಾಮ ನವಮಿ ಮಹತ್ವ🌹🌷
ಚೈತ್ರಶುಕ್ಲ ನವಮಿಯಂದು ಭಗವಂತನು ಕೌಸಲ್ಯೆಯಲ್ಲಿ ಅವತರಿಸಿದನು .ಶ್ರೀರಾಮಚoದ್ರನು ಪುನರ್ವಸು ನಕ್ಷತ್ರದಲ್ಲಿ ಕರ್ಕಾಟಕ ಲಗ್ನದಲ್ಲಿ ಮೇಷದಲ್ಲಿ ರವಿಯು ಉಚ್ಚನಾಗಿರುವವಾಗ ಮಧ್ಯಾಹ್ನದಲ್ಲಿ ಅವತರಿಸಿದನು .
ಶ್ರೀರಾಮನವಮಿಯಂದು ಶ್ರೀರಾಮ ಜಯಂತಿ ಪ್ರಯುಕ್ತ ಕೃಷ್ಣಾಷ್ಟಮೀ ಉಪವಾಸದಂತೆ ಉಪವಾಸವನ್ನು ಮಾಡಬಾರದು ಮಧ್ಯಹ್ನದವರೆಗೂ ಉಪವಾಸ ಮಾತ್ರ.
ಕಲಿಯುಗಕ್ಕೆ ಸಮೀಪವಾದ ಯಾವ ಯುಗದಲ್ಲಿ ಭಗವಂತನು ಅವತರಿಸಿರುವನೋ ಅಂದು ಮಾತ್ರ ಉಪವಾಸವು .ಕಲಿಯುಗದಲ್ಲಿರುವ ನಮಗೆ ತ್ರೇತಾದಿಗಳಲ್ಲಿ ಅವತರಿಸಿರುವ ಜಯಂತಿಗಳಲ್ಲಿ ಉಪವಾಸ ಮಾಡಬೇಕಿಲ್ಲ .
ನಮಗೆ ದ್ವಾಪರವು ಸನ್ನಿಹಿತವಾಗಿದೆ ಹೊರತು ತ್ರೇತಾಯುಗವಲ್ಲ ಆದ್ದರಿಂದ ಕೃಷ್ಣಜಯಂತಿಯಂದು ಉಪವಾಸ ಶ್ರೀರಾಮನವಮಿಯಂದು ಉಪವಾಸವಿಲ್ಲ .
ಸಾನಿಧ್ಯ ಏವ ಕರ್ತವ್ಯೋ ಹ್ಯುಪವಾಸೋ ನ ದೂರಗೇ
ವಸ್ತುಸ್ಥಿತಿಯು ಹೀಗಿದ್ದರೂ ಕೆಲವು ವಾಕ್ಯಗಳು ರಾಮನವಮಿಯಂದು ಉಪವಾಸವನ್ನು ಮಾಡದಿದ್ದರೇ ಕುಂಭೀಪಾಕದಲ್ಲಿ ಬೀಳುವರೆಂದು ಇದೆ ಆದರೆ ಇಂತಹ ವಾಕ್ಯಗಳು ಕಲಿಯುಗದಲ್ಲಿರುವ ನಮಗೆ ವಿಧಿಸಿದ್ದಲ್ಲ ತ್ರೇತಾಯುಗಕ್ಕೆ ಸಮೀಪವಿರುವ ಜನರಿಗೆ ವಿಧಿಸಿದ್ದು .
**********
ರಾಮನವಮಿ ಪೂಜಾಕ್ರಮ
ಚೈತ್ರಮಾಸೇ ಸಿತೇ ಪಕ್ಷೇ ನವಮ್ಯಾಂ ಚ ಪುನರ್ವಸೌ |
ಶುಭೇ ಕರ್ಕಾಟಕೇ ಲಗ್ನೇ ಜಾತೋ ರಾಮಃ ಸ್ವಯಂ ಹರಿಃ ||
ಇತ್ಯಾದಿ ವಚನಾನುಸಾರೇಣ ಕರ್ಕಾಟಕ ಲಗ್ನಕಾಲೇ ವಿಭವಾನುಸಾರೇಣ ಶ್ರೀರಾಮಪೂಜಾಂ ಕೃತ್ವಾ
ಕೌಸಲ್ಯಾಗರ್ಭಸಂಭೂತ ಸದಾ ಸೌಮಿತ್ರಿವತ್ಸಲ |
ಜಾನಕೀಸಹಿತೋ ರಾಮ ಗೃಹಾಣಾರ್ಘ್ಯಂ ನಮೋಽಸ್ತು ತೇ ||
ಕೌಸಲ್ಯಾನಂದನೋ ವೀರ ರಾವಣಾಸುರಮರ್ದನ |
ಸೀತಾಪತೇ ನಮಸ್ತುಭ್ಯಂ ಗೃಹಾಣಾರ್ಘ್ಯಂ ನಮೋಽಸ್ತು ತೇ ||
ಇತ್ಯಾದಿಮಂತ್ರೈರರ್ಘ್ಯಂ ದತ್ವಾ ಉತ್ಸವಾನಂತರ ಬ್ರಾಹ್ಮಣಾರಾಧನಂ ಕೃತ್ವಾ ಸ್ವಯಂ ಬಂಧುಭಿಃ ಸಹ ಭೋಜನಂ ಕುರ್ಯಾತ್ ||
ತಾತ್ಪರ್ಯ -
ಶ್ರೀರಾಮನವಮಿಯ ಪೂಜಾಕ್ರಮವು ಹೀಗಿದೆ - ಚೈತ್ರಮಾಸದ ಶುಕ್ಲಪಕ್ಷದಲ್ಲಿ ನವಮೀ ತಿಥಿಯಲ್ಲಿ, ಪುನರ್ವಸು ನಕ್ಷತ್ರದಲ್ಲಿ ಮಂಗಳಕರವಾದ ಕರ್ಕಾಟಕ ಲಗ್ನದಲ್ಲಿ ಸ್ವಯಂ ಶ್ರೀಮನ್ನಾರಾಯಣನೇ ಶ್ರೀರಾಮಚಂದ್ರನಾಗಿ ಅವತರಿಸಿದನು. ಇತ್ಯಾದಿ ವಚನಾನುಸಾರವಾಗಿ ರಾಮನವಮಿಯ ದಿನ ಕರ್ಕಾಟಕ ಲಗ್ನಕಾಲದಲ್ಲಿ ತನ್ನ ವೈಭವವನ್ನು ಅನುಸರಿಸಿ ಶ್ರೀರಾಮಪೂಜೆಯನ್ನು ಮಾಡಿ, "ಕೌಸಲ್ಯೆಯ ಗರ್ಭಸಂಭೂತನೇ, ಯಾವಾಗಲೂ ಸುಮಿತ್ರಾಪುತ್ರನಾದ ಲಕ್ಷ್ಮಣನಲ್ಲಿ ವಾತ್ಸಲ್ಯಪೂರ್ಣನೇ, ಜಾನಕೀಸಹಿತನಾದ ಶ್ರೀರಾಮಚಂದ್ರ ! ನಾನು ಕೊಡತಕ್ಕ ಅರ್ಘ್ಯವನ್ನು ಸ್ವೀಕರಿಸು, ನಿನಗೆ ನಮಸ್ಕಾರವಿರಲಿ". ಇತ್ಯಾದಿ ಮಂತ್ರಗಳಿಂದ ಅರ್ಘ್ಯವನ್ನು ಕೊಡಬೇಕು. ಉತ್ಸವಾನಂತರ ಬ್ರಾಹ್ಮಣರ ಆರಾಧನೆಯನ್ನು ನಡೆಸಿ ಬಂಧುಗಳ ಜೊತೆಗೆ ತಾನೂ ಭೋಜನ ಮಾಡಬೇಕು.
-ಸ್ಮೃತಿಮುಕ್ತಾವಳಿ
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
ಚೈತ್ರಮಾಸದ ಮಹತ್ವ 🌷
|| ಸಂಚಿಕೆ-6 ||
ಹನುಮದ್ ಜಯಂತಿ ಮಹತ್ವ
ಚೈತ್ರ ಶುದ್ಧ ಪೂರ್ಣಿಮೆಯಂದು ಹನುಮಂತದೇವರು ಅವತಾರ ಮಾಡಿದ ದಿನ ಈದಿನ ಹನುಮಂತದೇವರ ವಿಗ್ರಹವನ್ನು ತೊಟ್ಟಿಲಲ್ಲಿ ಇಟ್ಟು ಜಯಂತ್ಯುತ್ಸವವನ್ನು ಆಚರಿಸಬೇಕು ವಾಯುದೇವರು ಭೂಭಾರಹರಣಕ್ಕಾಗಿ ಹನುಮಂತ ದೇವರಾಗಿ ಅವತರಿಸಿದರು.ಹುಟ್ಟುವಾಗಲೆ ಹೇಮ(ಬಂಗಾರ)ಮಯವಾದ ಕೌಪೀನ ಸುವರ್ಣಮಯವಾದ ಯಜ್ಞೋಪವೀತವನ್ನು ಧರಿಸಿಯೇ ಬಂದವರು ರಾಮಸೇವಾ ದುರoಧರರಾದ ಹನುಮಂತದೇವರ ಪ್ರೀತಿಗಾಗಿ ಸುಂದರಕಾಂಡ ರಾಮಾಯಣವನ್ನು ಪಾರಾಯಣ ಮಾಡಬೇಕು. ಪ್ರಾತಃಕಾಲದಲ್ಲಿ ವಾಯುಸ್ತುತಿಯನ್ನು ಪಠಿಸುತ್ತ ಪ್ರಾಣದೇವರ ಪ್ರತಿಮೆಗೆ ಮಧು ಅಭಿಷೇಕ ಮಾಡಬೇಕು ಇಂದು ಪವಮಾನ ಹೋಮವು ವಿಹಿತವಾಗಿದೆ .ಇಂದು ಭಗವಂತನಿಗೆ ಹನುಮಂತದೇವರಿಗೆ .ಸರ್ವ ದೇವತೆಗಳಿಗೆ .ಧವನದಿಂದ ಪೂಜಿಸಬೇಕು . ಪಾನಕ ಕೋಸಂಬರಿ ನಿವೇದಿಸಿ ವಿಪ್ರರಿಗೆ ದಾನ ಮಾಡಬೇಕು .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ
******
ಚೈತ್ರಮಾಸದ ಕರ್ತವ್ಯಗಳು ಮತ್ತು ಕೊಡಬೇಕಾದ ದಾನಗಳು
ಚೈತ್ರಮಾಸದಲ್ಲಿ ಸೂರ್ಯನ ತಾಪವು ಪ್ರಾರಂಭವಾಗುತ್ತದೆ .ಇತರ ಮಾಸಗಳಿಗಿಂತ ಈ ಮಾಸದಲ್ಲಿ ಬಾಯಾರಿಕೆಯು ಅಧಿಕವಾಗಿ ಜಲವನ್ನು ಅಪೇಕ್ಷಿಸುವರು .
ಪಾಲ್ಗುಣಮಾಸ ಮುಗಿದು ಚೈತ್ರಮಾಸ ಪ್ರಾರಂಭ.ವಾದಾಗ ಪ್ರಪಾ(ಆರವಟಿಗೆ)ವನ್ನು
ಪ್ರಾರಂಭಿಸಬೇಕು ನಾಲ್ಕು ತಿಂಗಳವರೆಗೂ ನಡೆಸಬೇಕು .
ಆರವಟಿಗೆಯ ಮೂಲಕ ಜಲದಾನವನ್ನು ಮಾಡಬೇಕು ಜಲದಾನವನ್ನು ಮಾಡದವರು ಧರ್ಮಘಟದಾನ ವನ್ನು ಮಾಡಲೇಬೇಕು ಪ್ರತಿದಿವಸವು ಧರ್ಮಘಟವನ್ನು ದಾನ ಮಾಡುವುದರಿಂದ ಪ್ರಪಾದಾನದ ಫಲವನ್ನು ಪಡೆಯಬಹುದು.
ಪ್ರಪಾಂ ದಾತುಮಶಕ್ತೇನ ವಿಶೇಷಾದ್ ಧರ್ಮವಿಪ್ಸುನ |
ಪ್ರತ್ಯಹಂ ಧರ್ಮಘಟಕೋ ವಸ್ತ್ರಸಂವೇಷ್ಟಿತಾಸನಃ ||
ಪ್ರತದಿವಸವು ತಾಮ್ರದ ತಂಬಿಗೆಯಲ್ಲಿ ಲಾವಂಚ ಮುoತಾದ ಔಷಧಿ ಮೂಲಿಕೆಗಳನ್ನು ಸೇರಿಸಿದ ಜಲವನ್ನು ಭಗವಂತನಿಗೆ ಅರ್ಪಿಸಿ ಆದರ ಬಾಯಿಗೆ
ಒದ್ದೆ ಬಟ್ಟೆಯನ್ನು ಸುತ್ತಿ ಬ್ರಾಹ್ಮಣನ ಮನೆಗೆ ತಾನೆ ಹೋಗಿ ಧರ್ಮಘಟದಾನವನ್ನು ಮಾಡಬೇಕು.
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನತ್ಸಕಲಾ ಮಮ ಸಂತು ಮನೋರಥಃ ||
ಎಂಬ ಮಂತ್ರವನ್ನು ಹೇಳಿ ದಾನಕೊಡಬೇಕು .
ಚೈತ್ರಮಾಸದಲ್ಲಿ ಕೊಡಬೇಕಾದ ದಾನಗಳು
1)ಜಲದಾನ
2)ಛತ್ರಿದಾನ
3)ಬಿಸಣಿಕೆದಾನ
4)ಉದಕುಂಭದಾನ
5)ಕನ್ನಡಿದಾನ
6)ತಾಂಬೂಲದಾನ
7)ಗುಡ(ಬೆಲ್ಲ) ದಾನ
8)ಶಯ್ಯಾ(ಹಾಸಿಗೆ)ದಾನ
9)ತುಪ್ಪತುಂಬಿದ ಕಂಚಿನಪಾತ್ರೆದಾನ
10)ಗೋಧಿದಾನ
11)ಮೊಸರು ದಾನ
12)ತೆಂಗಿನಕಾಯಿ ದಾನ
13)ಮಾವಿನಹಣ್ಣಿನದಾನ
14)ತೆಳುವಸ್ತ್ರದಾನ
15)ಗ್ರಂಥದಾನ
16)ಮಠ ಮಂದಿರಗಳಿಗೆ ತೈಲದಾನ
17)ಹಣ್ಣು ,ತರಕಾರಿ ,ಗಡ್ಡೆ ,ಗೆಣಸು ,
ಚಂದನ , ತಂಪುನೀರು ,ಪಚ್ಚಕರ್ಪೂರ ,ಕಸ್ತೂರಿ ಮುಂತಾದವುಗಳನ್ನು ದಾನಕೊಡಬೇಕು
18)ದೀಪದಾನ ,ಆಕಳಹಾಲದಾನ. ,
ತುಪ್ಪ , ಮಜ್ಜಿಗೆ ,ಕುಂಕುಮಕೇಸರಿದಾನ , ಲವಂಗ ,ದಾಳಿಂಬೆ, ಸುಗಂಧದ್ರವ್ಯ . ನಿಂಬೆಹಣ್ಣು , ಹಲಸಿನಹಣ್ಣುದಾನ ಕುಂಬಳಕಾಯಿ , ಚಪ್ಪಲಿದಾನ ,
ನೆಲ್ಲಿಕಾಯಿದಾನ ,ಪಾನಕದಾನ , ಕೊಸಂಬರಿದಾನ .
ಒಂದು ತಟ್ಟೆಯಲ್ಲಿ ಗೋಧಿಹಾಕಿ ಸೀತಾಫಲಗಳನ್ನಿಟ್ಟು ದಾನ ಕೊಡಬೇಕು .
ಇವುಗಳನ್ನು ಚೈತ್ರಮಾಸದಲ್ಲಿ ಬ್ರಾಹ್ಮಣರಿಗೆ ದಾನಕೊಡಬೇಕು ಎಂದು ಚೈತ್ರಮಾಸಮಹಾತ್ಮೆಯಲ್ಲಿ ಪುಣ್ಯಕೀರ್ತಿರಾಜನಿಗೆ ಮಾಂಡವ್ಯ ಋಷಿಗಳು ತಿಳಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***
ಚೈತ್ರಮಾಸದಲ್ಲಿ ಸೂರ್ಯನ ತಾಪವು ಪ್ರಾರಂಭವಾಗುತ್ತದೆ .ಇತರ ಮಾಸಗಳಿಗಿಂತ ಈ ಮಾಸದಲ್ಲಿ ಬಾಯಾರಿಕೆಯು ಅಧಿಕವಾಗಿ ಜಲವನ್ನು ಅಪೇಕ್ಷಿಸುವರು .
ಪಾಲ್ಗುಣಮಾಸ ಮುಗಿದು ಚೈತ್ರಮಾಸ ಪ್ರಾರಂಭ.ವಾದಾಗ ಪ್ರಪಾ(ಆರವಟಿಗೆ)ವನ್ನು
ಪ್ರಾರಂಭಿಸಬೇಕು ನಾಲ್ಕು ತಿಂಗಳವರೆಗೂ ನಡೆಸಬೇಕು .
ಆರವಟಿಗೆಯ ಮೂಲಕ ಜಲದಾನವನ್ನು ಮಾಡಬೇಕು ಜಲದಾನವನ್ನು ಮಾಡದವರು ಧರ್ಮಘಟದಾನ ವನ್ನು ಮಾಡಲೇಬೇಕು ಪ್ರತಿದಿವಸವು ಧರ್ಮಘಟವನ್ನು ದಾನ ಮಾಡುವುದರಿಂದ ಪ್ರಪಾದಾನದ ಫಲವನ್ನು ಪಡೆಯಬಹುದು.
ಪ್ರಪಾಂ ದಾತುಮಶಕ್ತೇನ ವಿಶೇಷಾದ್ ಧರ್ಮವಿಪ್ಸುನ |
ಪ್ರತ್ಯಹಂ ಧರ್ಮಘಟಕೋ ವಸ್ತ್ರಸಂವೇಷ್ಟಿತಾಸನಃ ||
ಪ್ರತದಿವಸವು ತಾಮ್ರದ ತಂಬಿಗೆಯಲ್ಲಿ ಲಾವಂಚ ಮುoತಾದ ಔಷಧಿ ಮೂಲಿಕೆಗಳನ್ನು ಸೇರಿಸಿದ ಜಲವನ್ನು ಭಗವಂತನಿಗೆ ಅರ್ಪಿಸಿ ಆದರ ಬಾಯಿಗೆ
ಒದ್ದೆ ಬಟ್ಟೆಯನ್ನು ಸುತ್ತಿ ಬ್ರಾಹ್ಮಣನ ಮನೆಗೆ ತಾನೆ ಹೋಗಿ ಧರ್ಮಘಟದಾನವನ್ನು ಮಾಡಬೇಕು.
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನತ್ಸಕಲಾ ಮಮ ಸಂತು ಮನೋರಥಃ ||
ಎಂಬ ಮಂತ್ರವನ್ನು ಹೇಳಿ ದಾನಕೊಡಬೇಕು .
ಚೈತ್ರಮಾಸದಲ್ಲಿ ಕೊಡಬೇಕಾದ ದಾನಗಳು
1)ಜಲದಾನ
2)ಛತ್ರಿದಾನ
3)ಬಿಸಣಿಕೆದಾನ
4)ಉದಕುಂಭದಾನ
5)ಕನ್ನಡಿದಾನ
6)ತಾಂಬೂಲದಾನ
7)ಗುಡ(ಬೆಲ್ಲ) ದಾನ
8)ಶಯ್ಯಾ(ಹಾಸಿಗೆ)ದಾನ
9)ತುಪ್ಪತುಂಬಿದ ಕಂಚಿನಪಾತ್ರೆದಾನ
10)ಗೋಧಿದಾನ
11)ಮೊಸರು ದಾನ
12)ತೆಂಗಿನಕಾಯಿ ದಾನ
13)ಮಾವಿನಹಣ್ಣಿನದಾನ
14)ತೆಳುವಸ್ತ್ರದಾನ
15)ಗ್ರಂಥದಾನ
16)ಮಠ ಮಂದಿರಗಳಿಗೆ ತೈಲದಾನ
17)ಹಣ್ಣು ,ತರಕಾರಿ ,ಗಡ್ಡೆ ,ಗೆಣಸು ,
ಚಂದನ , ತಂಪುನೀರು ,ಪಚ್ಚಕರ್ಪೂರ ,ಕಸ್ತೂರಿ ಮುಂತಾದವುಗಳನ್ನು ದಾನಕೊಡಬೇಕು
18)ದೀಪದಾನ ,ಆಕಳಹಾಲದಾನ. ,
ತುಪ್ಪ , ಮಜ್ಜಿಗೆ ,ಕುಂಕುಮಕೇಸರಿದಾನ , ಲವಂಗ ,ದಾಳಿಂಬೆ, ಸುಗಂಧದ್ರವ್ಯ . ನಿಂಬೆಹಣ್ಣು , ಹಲಸಿನಹಣ್ಣುದಾನ ಕುಂಬಳಕಾಯಿ , ಚಪ್ಪಲಿದಾನ ,
ನೆಲ್ಲಿಕಾಯಿದಾನ ,ಪಾನಕದಾನ , ಕೊಸಂಬರಿದಾನ .
ಒಂದು ತಟ್ಟೆಯಲ್ಲಿ ಗೋಧಿಹಾಕಿ ಸೀತಾಫಲಗಳನ್ನಿಟ್ಟು ದಾನ ಕೊಡಬೇಕು .
ಇವುಗಳನ್ನು ಚೈತ್ರಮಾಸದಲ್ಲಿ ಬ್ರಾಹ್ಮಣರಿಗೆ ದಾನಕೊಡಬೇಕು ಎಂದು ಚೈತ್ರಮಾಸಮಹಾತ್ಮೆಯಲ್ಲಿ ಪುಣ್ಯಕೀರ್ತಿರಾಜನಿಗೆ ಮಾಂಡವ್ಯ ಋಷಿಗಳು ತಿಳಿಸಿದ್ದಾರೆ .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***
ಚೈತ್ರಮಾಸದಲ್ಲಿ ಕೊಡಬೇಕಾದ ದಾನಗಳು
1)ಜಲದಾನ
2)ಛತ್ರಿದಾನ
3)ಬಿಸಣಿಕಗೆದಾನ
4)ಉದಕುಂಭದಾನ
5)ಕನ್ನಡಿದಾನ
6)ತಾಂಬೂಲದಾನ
7)ಗುಡ(ಬೆಲ್ಲ) ದಾನ
8)ಶಯ್ಯಾ(ಹಾಸಿಗೆ)ದಾನ
9)ತುಪ್ಪತುಂಬಿದ ಕಂಚಿನಪಾತ್ರೆದಾನ
10)ಗೋಧಿದಾನ
11)ಮೊಸರು ದಾನ
12)ತೆಂಗಿನಕಾಯಿ ದಾನ
13)ಮಾವಿನಹಣ್ಣಿನದಾನ
14)ತೆಳುವಸ್ತ್ರದಾನ
15)ಗ್ರಂಥದಾನ
16)ಮಠ ಮಂದಿರಗಳಿಗೆ ತೈಲದಾನ
17)ಹಣ್ಣು ,ತರಕಾರಿ ,ಗಡ್ಡೆ ,ಗೆಣಸು ,
ಚಂದನ , ತಂಪುನೀರು ,ಪಚ್ಚಕರ್ಪೂರ ,ಕಸ್ತೂರಿ ಮುಂತಾದವುಗಳನ್ನು ದಾನಕೊಡಬೇಕು
18)ದೀಪದಾನ ,ಆಕಳಹಾಲದಾನ. ,
ತುಪ್ಪ , ಮಜ್ಜಿಗೆ ,ಕುಂಕುಮಕೇಸರಿದಾನ , ಲವಂಗ ,ದಾಳಿಂಬೆ, ಸುಗಂಧದ್ರವ್ಯ . ನಿಂಬೆಹಣ್ಣು , ಹಲಸಿನಹಣ್ಣುದಾನ ಕುಂಬಳಕಾಯಿ , ಚಪ್ಪಲಿದಾನ ,
ನೆಲ್ಲಿಕಾಯಿದಾನ ,ಪಾನಕದಾನ , ಕೊಸಂಬರಿದಾನ .
ಮೊಸರನ್ನ ದಾನ , ನೀರುತುಂಬಿದ ತಾಮ್ರದಪಾತ್ರೆ ದಾನ .
ಒಂದು ತಟ್ಟೆಯಲ್ಲಿ ಗೋಧಿಹಾಕಿ ಸೀತಾಫಲಗಳನ್ನಿಟ್ಟು ದಾನ ಕೊಡಬೇಕು .
ಇವುಗಳನ್ನು ಚೈತ್ರಮಾಸದಲ್ಲಿ ಬ್ರಾಹ್ಮಣರಿಗೆ ದಾನಕೊಡಬೇಕು ಎಂದು ಚೈತ್ರಮಾಸಮಹಾತ್ಮೆಯಲ್ಲಿ ಪುಣ್ಯಕೀರ್ತಿರಾಜನಿಗೆ ಮಾಂಡವ್ಯ ಋಷಿಗಳು ತಿಳಿಸಿದ್ದಾರೆ .
*****
2021 ರ ಚೈತ್ರ ಮಾಸವು ಏಪ್ರಿಲ್ 13 ರಂದು ಮಂಗಳವಾರದಿಂದ ಆರಂಭವಾಗಿದ್ದು, ಮೇ 11 ರಂದು ಗುರುವಾರ ಮುಕ್ತಾಯಗೊಳ್ಳುವುದು.
No comments:
Post a Comment