SEARCH HERE

Monday, 1 April 2019

rangoli madhwa sampradaya ಮಾಧ್ವ ಸಂಪ್ರದಾಯ ರಂಗೋಲಿ



CLICK and read more here

buy rangoli plates

CLICK

Rangoli 
Madhwa Sampradaya





 
ಅಕ್ಕಿ ಹಿಟ್ಟಿನಿಂದ ರಂಗೋಲಿ ಬಿಡಿಸಿ. ತಿನ್ನಲು ಗುಬ್ಬಚ್ಚಿಗಳ ಗುಂಪು ಬರುತ್ತದೆ





Rangoli easy way







Navaratri Rangoli












click
ಹೊಸ್ತಿಲ ರಂಗೋಲಿಯ ಬಗ್ಗೆ ಸ್ವಲ್ಪ ವಿವರಣೆಯನ್ನು ಕೊಡಲು ಬಯಸುತ್ತೇನೆ.

ನಮ್ಮ ಮನೆ ಕೂಡ ದೇವಸ್ಥಾನ ಇದ್ದಂತೆ. ಮನೆಯ ಮುಂಬಾಗಲಿನ ಹೊಸ್ತಿಲು ಮಹಾದ್ವಾರವಿದ್ದಂತೆ. ಅಲ್ಲಿ ಲಕ್ಷ್ಮಿಯ ಸಾನಿಧ್ಯ ಇರುತ್ತದೆ. ಲಕ್ಷ್ಮಿ ಎಲ್ಲಿ ಇರುತ್ತಾಳೋ ಅಲ್ಲಿ ನಾರಾಯಣನು ಇರುತ್ತಾನೆ. ರಂಗೋಲಿ ಗೆ ರಂಗನಲಿಯುತ್ತಾನಂತೆ. ಹೊಸ್ತಿಲಕ್ಕೆ ರಂಗೋಲಿ ಮತ್ತು ಅರಿಶಿನ ಕುಂಕುಮ ಬಹಳ ಮಹತ್ವವಾದದ್ದು.

ಹೊಸ್ತಿಲ ಮೇಲೆ ರಂಗೋಲಿಯನ್ನು ಹಾಕುವಾಗ 24 ಗೆರೆಗಳು ಇರಬೇಕು. 24 ಗೆರೆಗಳೆಂದರೆ 24 ಭಗವನಾಮಗಳು ಅವು ಯಾವು ಅಂದರೆ ಕೇಶವ ,ನಾರಾಯಣ ,ಮಾಧವ, ಗೋವಿಂದ, ವಿಷ್ಣು, ಮಧುಸೂದನ ,ತಿವಿಕ್ರಮ, ವಾಮನ, ಶ್ರೀಧರ, ಹ್ಯಷಿಕೇಶ, ಪದ್ಮನಾಭ ,ದಾಮೋದರ, ಸಂಘರ್ಷಣ, ವಾಸುದೇವ, ಪ್ರದುಮನ ,ಅನಿರುದ್ಧ, ಪುರುಷೋತ್ತಮ, ಅಧೊಕ್ಷಜ ,ನರಸಿಂಹ ,ಅಚ್ಚುತ ,ಜನಾರ್ಧನ, ಉಪೇಂದ್ರ, ಶ್ರೀಹರಿ ,ಶ್ರೀ ಕೃಷ್ಣ.,
ಶಂಕ ,ಚಕ್ರ, ಸ್ವಸ್ತಿಕ ಗಳು ಶುಭ ಸೂಚಕಗಳು. ಲಕ್ಷ್ಮಿ ಪಾದಗಳನ್ನು ಹೊಸ್ತಿಲ ಮಧ್ಯ ಹಾಕಬೇಕು ಲಕ್ಷ್ಮೀದೇವಿಯು ತನ್ನೊಂದಿಗೆ ಕಾಮಧೇನು ಅಂದರೆ ಹಸು ಕರುವನ್ನು ತರುತ್ತಾಳೆ. ಅದರ ಪ್ರತೀಕವಾಗಿ ಹಸುವಿನ ಪಾದಗಳನ್ನು ಹಾಕಬೇಕು. ಅಷ್ಟದಳದ ಕಮಲದಲ್ಲಿ ಲಕ್ಷ್ಮಿ ಸಾನಿಧ್ಯ ಇರುವದರಿಂದ ಕಮಲವನ್ನು ಹಾಕಬೇಕು
. ಲಕ್ಷ್ಮೀನಾರಾಯಣರನ್ನು ಸ್ವಾಗತಿಸಲು ಆನೆಗಳನ್ನು ಹಾಕಬೇಕು.
ಯಾರ ಮನೆಯ ಮುಂದೆ ಹಾಗೂ ಹೊಸ್ತಿಲಲ್ಲಿ ಸುಂದರವಾದ ರಂಗೋಲಿಗಳು ಉಷಾ ಸಮಯದಲ್ಲಿ ರಾರಾಜಿಸುತ್ತವೆಯೋ ಅವರ ಮನೆಗೆ ಲಕ್ಷ್ಮೀನಾರಾಯಣರು ಪ್ರೀತಿಯಿಂದ ಸಂತೋಷದಿಂದ ಅವರ ಮನೆಯನ್ನು ಸೇರುತ್ತಾರಂತೆ
ಮನೆಯ ಎಡಬಲಗಳಲ್ಲಿ ಜಯ ವಿಜಯರು  ಗದೆಯನ್ನು ಹಿಡಿದು ನಿಂತು ಮನೆಯನ್ನು ಕಾಯುತ್ತಾರಂತೆ.
ಶುಭಮಸ್ತು.
*****

No comments:

Post a Comment