SEARCH HERE

Monday 1 April 2019

madhwacharyaru ಮಧ್ವಾಚಾರ್ಯರು



Sri Madhvacharya was born in the year 1238 A.D, on the Vijayadashami day of the month of Aswayuja in a village about three miles from Udupi in South Canara. His father was a pious brahmin belonging to Bhagavata Sampradaya and a pauranic by profession. Sri Madhvacharya was born at a late period in his father’s life after constant prayer and dedication of vows to Ananteswara in Udipi.

Madhyageha Bhatta, the father, was therefore happy and proud in no ordinary degree in his son whom he christened Vasudeva. Boy Vasudeva was very precocious and his father taught him the three Rs in the privacy of his house. Not even had the boy attained his teens, when he felt an inner urge he could not resist, to taking to the holy orders and took sanyasa under Achutaprekshacharya in Udipi.

Achutaprekshacharya had been brought up in the then current Adwaita school of thought but the philosophy of that school did not appeal to the new sanyasi. Achutaprekshacharya was somewhat displeased with his new disciple but he was however very much impressed with the earnestness, and scholarship of his disciple whom he had named as Purnaprajna. Purnaprajna thereupon began to preach his own philosophy according to which the world is real, the individual souls are different from Brahman, and Vishnu is the Highest Entity in the universe. Many a pandit and scholar of other schools came to him for debate and went back defeated by his keen and irrefutable logic. Purnaprajna, in order to propagate his faith undertook a pilgrimage to various shrines in South India and the pilgrimage was also an opportunity to meet opponents of other schools in the different places. Immediately after he returned from the pilgrimage Purnaprajna wrote the commentary on BhagavadGita. The Gita Bhashya (commentary on the Gita) is the first work of the Acharya.

Seven years after he took to holy orders Purnaprajna commenced a pilgrimage to the North where he touched Benares, Allahabad, Dwaraka, Delhi and other places and reached the famous Badrikshetra. He composed the Brahmasutra Bhashya at this place and went further North alone, all by himself, to the depths of Himalayas, where Sri Vedavyasa is said to have his abode.. On his return journey Purnaprajna came to the banks of Godavari and had debates with two eminent and scholarly pandits Sobhana Bhatta and Samasastry belonging to Adwaita school. 

The Pandits were defeated in the debate and with the conviction of the truth of the school of philosophy expounded by Purnaprajna, both of them became his disciples taking up Sanyasa. Shobana Bhatta became the famous Padmanabhatirtha who succeeded to the pontifical seat of Purnaprajnacharya. Samasastry became Narahari Thirtha and at the behest of the acharya stayed behind to obtain the images of Mula Rama and Sita from the treasury of the local prince. Padmanabha Tirtha followed his master and was greatly devoted to him. 

After his return to Udipi Purnapragna began to write various works establishing the new system of philosophy which has come to be called Dwaitasiddhanta. The cardinal point which distinguishes his system from others is the essential difference between Brahman who is Independent and all else which are dependent. This system has therefore come t be called Dwaitasiddhanta (the philosophy of Basic difference), Purnaprajnacharya declares himself at the end of many of his works to be an avatar of the Wind God Vayu and says that his avatar as Purnaprajna has been foretold in the srutis where he has been called Madhva. Purnapragnacharya is therefore popularly known as Sri Madhvacharya. The Acharya founded the Sri Krishna temple at Udipi and established eight mutts, the sanyasis of which has to worship the image by rotation. The system of rotation has continued until the present da at Udipi. Sri Madhva wrote commentaries or Bhashyas on the ten principal Upanishads, the special treatises called Prakaranas ten in number, the Gita Tatparya and other works during this period. 

Sri Madhvacharya under took the second tour to the north again. He met Jalaluddin Khilji at Delhi and seems to have conversed with him in Urdu. After returning from North he spent the rest of his life in Udipi occasionally visiting a place called Vishnumangala near Udipi. During one of his visits to Vishnumangala he had to meet a reputed champion of the Adwaita school by name

Trivikramapanditacharya. The debate between them seems to have extended to fifteen days and covered all the different systems of philosophy like the Bauddha, Sankhya, Nyaya and Adwaita. 

In the end Trivikramapanditacharya has to admit defeat. He was very much impressed with the Acharya and became his disciple having renounced Adwaita and accepting the Dvaita sidhanta. The conversion of Pandita Trivikrama was a great moral victory for the Acharya and many were the new adherents to his system. Trivikrama Panditacharya became so devoted the Acharya He wrote the commentary known as Tatvapradipa on the Brahmasutra Bhashya of Sri Madhwacharya. At his request Sri Madhvacharya wrote a metrical commentary on the Brahmasutras which is famous as Anuvyakhyana.

Sri Madhvacharya had many disciples belonging to the Sanyasa ashrama and many disciples who were house holders. He vanished from the sight of men in his eightieth year in the month of Magha on the 9th day of the bright fortnight while he was teaching the Aitareya Upanishad Bhashya to his disciples. A shower of flowers is said to have rained on him and he vanished from the sight of men in the shower of flowers.

Sri Madhvacharya has written in all thirty seven works. and they are collectively called Sarvamula. Four of his works are on Brahmasutras, two on Bhagavad Gita, ten are the commentaries on ten Upanishads, one on the Mahabharata and one on the Bhagavata in order to determine their import and ten are the prakaranas. The Rigbhashya is a commentary on the Rigveda (for a few typical Riks). Seven of his works are of the Stotra type. Nobody can fail to be impressed by his works. His method is very brief and simple. His logic is infallible and energetic. The depth of his scholarship is seen in the profuse ness range and variety of quotations from various religious texts. His familiarity with the Upanishadic, puranic, tantric and other literature is in ample evidence in all his works. He is singularly free from the use of alankaraprayoga and he is very matter of fact in all his arguments. 

The Brahmasutra Bhshya of the Acharya possesses in full measure the characteristics a Bhashya should possess. (A words in which the meaning of the sutras is explained by words similar to those in the sutras and in which the author explains his own words is called a Bhashya.) Accordingly the Brahmasutra Bhashya of the Acharya of Sri Madhvacharya is a very brief and precise composition in contrast with the Bhashyas of the Acharyas of the other systems. Sri Madhvacharya however reserves polemical treatment of the Brahmasutras to be effective in Anuvyakhyana. The commentaries on the Upanishads are peculiar and philosophical hosts in themselves. Sri Madhvacharya invariably quotes appropriate puranic and Vedic literature and samhitas with purport to to explain the Upanishadic passages. 

The direct disciples of Sri Madhvacharya, viz. Padmanabha Tirtha, Narahari Tirtha, Trivikramapanditacharya and others have written commentaries on his works. These are called Prachina tikas. They were followed by the brilliant commentaries of Jayatirtha who is famous as Tikacharya. Jayathirtha has written commentaries on almost all the works of Sri Madhvacharya. In particular the commentary on Anuvyakhyana called “Nyayasudha” is famous as a commentary of the highest merit. The works of Jayathirtha have been commented upon by many later scholars of whom Vyasarja and Raghavendra Tirtha are well known. 
*********

Dwadasha Stotra - vnde vandyam

Dwadasha Stotra - preenayamo vasudevam







Mysuru February 20,  2021


.
ಶ್ರೀಪೂರ್ಣಪ್ರಜ್ಞರು-ಶ್ರೀಮಧ್ವರು. born on Vijayadashami day

ಉಡುಪಿಯ ಸಮೀಪದ ಒಂದು ಪುಟ್ಟ ಹಳ್ಳಿ ಪಾಜಕ. ಪರಾತ್ಪರನಾದ ಶ್ರೀಪರಶುರಾಮನ, ಶ್ರೀದುರ್ಗಾದೇವಿಯ ಸಾನ್ನಿಧ್ಯವಿಶೇಷದಿಂದ ಪವಿತ್ರವಾಗಿದ್ದ ಈ ಪುಣ್ಯಭೂಮಿ ಪವಮಾನನ ಪ್ರಾದುರ್ಭಾವದಿಂದ ಪ್ರಖ್ಯಾತವಾಯಿತು. ತತ್ತ್ವಜ್ಞಾನಕ್ಕೆ ಮಹೋನ್ನತ ಕೊಡುಗೆಯನ್ನು ನೀಡಿದ ಹಿರಿಮೆಗೆ ಭಾಜನವಾಯಿತು. ಮಧ್ಯಗೇಹಭಟ್ಟರು( ನಡಿಲ್ಲಾಯ ನಾರಾಯಣ ಭಟ್ಟರು ) ಮತ್ತು ವೇದವತಿಯರೆಂಬ ಪುಣ್ಯದಂಪತಿಗಳನ್ನು ನಿಮಿತ್ತವಾಗಿರಿಸಿಕೊಂಡು ಪ್ರಾಣದೇವ ಅವತರಿಸುವ ಪೂರ್ವದಲ್ಲಿಯೇ ಉಡುಪಿಯ ಹಿರಿದೈವ ಅನಂತಾಸನ ಲೋಕೋತ್ತರವಾದ ತೇಜಸ್ಸೊಂದು ಭೂಮಿಯಲ್ಲಿ ಅವತರಿಸುವ ಸೂಚನೆಯನ್ನು ನೀಡಿದ್ದ. ನಡಿಲ್ಲಾಯದಂಪತಿಗಳ ದಂಪತಿಗಳ ಪುಣ್ಯಗರ್ಭದಲ್ಲಿ ಅವತರಿಸಿದ ಆ ಅಲೌಕಿಕ ತೇಜಸ್ಸು ತನ್ನ ಅಸದೃಶವಾದ ಪಾಂಡಿತ್ಯದಿಂದ, ಅಸಾಧಾರಣವಾದ ವ್ಯಕ್ತಿತ್ತ್ವದಿಂದ, ಅಪ್ರತಿಮವಾದ ತಪಶ್ಚರ್ಯದಿಂದ, ಅನುಪಮವಾದ ಹರಿಭಕ್ತಿಯಿಂದ, ಅಪ್ರತಿದ್ವಂದ್ವವಾದ ಸಿದ್ಧಾಂತದಿಂದ ಅವನಿಯಲ್ಲಿ ಅದ್ವಿತೀಯವೆನಿಸಿತು. ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯವಾಯಿತು.ವೈದಿಕ ಚಿಂತನಕ್ರಮಕ್ಕೆ ಒಂದು ಶಿಸ್ತನ್ನು, ನಿಖರತೆಯನ್ನು, ಹೊಸನೋಟವನ್ನು ನೀಡಿ, ವೈಚಾರಿಕ ಕ್ರಾಂತಿಯ ಶುಭೋದಯವನ್ನು ಸಾರಿದ ಮಹಾಮನೀಷಿಯ ಅವತರಣದಿಂದ ಅಜ್ಞಾತವಾಗಿದ್ದ ಗ್ರಾಮವೊಂದು ಜಿಜ್ಞಾಸುಗಳ, ಪ್ರಾಜ್ಞರ ಪರಮಗಮ್ಯಸ್ಥಾನವಾಯಿತು.ವಿಲಂಬಿ ಸಂವತ್ಸರದ (ಕ್ರಿ.ಶ 1238)ರ ಆಶ್ವಯುಜ ಶುಕ್ಲಪಕ್ಷದ ವಿಜಯದಶಮಿಯ ಪರ್ವಕಾಲದಲ್ಲಿ ಅವತರಿಸಿದ ಶಿಶುವಿಗೆ ತಂದೆಯಿಟ್ಟ ಹೆಸರು 'ವಾಸುದೇವ'. ಭೂಮಿಯಲ್ಲಿ ವಾಸುದೇವರೂಪದಲ್ಲಿ ಅಸುದೇವ ಅವತರಿಸಿದ ಸಂದರ್ಭದಲ್ಲಿ ಜಿಜ್ಞಾಸುಗಳಿಗೆ ವೇದ-ವೇದಾಂತಗಳ ಪರಿಚಯವಿದ್ದರೂ, ವೇದವ್ಯಾಸರಿಗೆ ಸಮ್ಮತವಾದ, ವೇದಾಂತದ ಅಂತರ್ನಿಹಿತವಾದ ಸತ್ಯ ಅಸ್ಪಷ್ಟವಾಗಿಯೇ ಇತ್ತು. ಹೊಸ ಬೆಳಕಿಗೆ ಜಗತ್ತು ಕಾಯುತ್ತಿತ್ತು. ಭಗವಾನ್ ವೇದವ್ಯಾಸರ ಹೃದ್ಗತವನ್ನು ತೆರೆದಿಡುವ ಮಹಾಮನೀಷಿಯೋರ್ವನ ಆಗಮನಕ್ಕೆ ಜಗತ್ತು ಕಾತರದಿಂದ ಕಾಯುತ್ತಿದ್ದಂತಹ ಸಂದರ್ಭದಲ್ಲಿ,ಭಗವದಾಣತಿಯಂತೆ ಪರಮೇಷ್ಠಿ ಪದಾರ್ಹನಾದ ಪವಮಾನನ ಅವತಾರ ಪಾಜಕದಲ್ಲಾಯಿತು.

ತಮ್ಮ ಅಸಾಧಾರಣವಾದ ಪಾಂಡಿತ್ಯದಿಂದ, ಅನುಪಮವಾದ ಹರಿಭಕ್ತಿಯಿಂದ, ಅಲೌಕಿಕವಾದ ತೇಜಸ್ಸಿನಿಂದ, ಅನನ್ಯವಾದ ವ್ಯಕ್ತಿತ್ವದಿಂದ ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯರಾದ ಶ್ರೀಮಧ್ವಾಚಾರ್ಯರು ವೈದಿಕಚಿಂತನ ಕ್ರಮಕ್ಕೆ ಒಂದು ಹೊಸ ಶಿಸ್ತನ್ನು, ನಿಖರತೆಯನ್ನು ಹೊಸನೋಟವನ್ನು ನೀಡಿ ಬೌದ್ಧಿಕ ಕ್ರಾಂತಿಯ ಶುಭೋದಯವನ್ನು ಸಾರಿದ ಮಹಾಮನೀಷಿಗಳು. ವೇದ,ಉಪನಿಷತ್, ಭಗವದ್ಗೀತೆ, ಬ್ರಹ್ಮಸೂತ್ರಗಳು,ಪುರಾಣಗಳು,ಪಂಚರಾತ್ರವೇ ಮೊದಲಾದ ಸಮಗ್ರ ವೇದಾಂತ ವಾಙ್ಮಯದ ಯಥಾರ್ಥ ಚಿತ್ರಣವನ್ನು ಭಗವಾನ್ ಶ್ರೀವೇದವ್ಯಾಸದೇವರಿಗೆ ಸಮ್ಮತವಾಗುವಂತೆ ನೀಡುವಲ್ಲಿ ಶ್ರೀಮಧ್ವಾಚಾರ್ಯರು ಅತ್ಯಂತ ಪರಿಣಾಮಕಾರಿಯಾದ ಹಾಗೂ ಪ್ರಭಾವಶಾಲಿಯಾದ ಪಾತ್ರವನ್ನು ವಹಿಸಿದರು. ಸಮಸ್ತ ವೈದಿಕವಾಙ್ಮಯವನ್ನು ಅಖಂಡವಾಗಿ ಅರ್ಥೈಸಿ, ತಮ್ಮ ಅಪರೂಪವಾದ ಸಂಶೋಧನಾಪ್ರಜ್ಞೆಯಿಂದ ಅಪಾತತ: ಕಾಣುವ ಅನೇಕ ವಿರೋಧಾಭಾಸಗಳನ್ನು ಪರಿಹರಿಸಿದ ಅಶ್ರುತ ಪ್ರತಿಭೆ ಶ್ರೀಆನಂದತೀರ್ಥರದು. ವೇದಾಂತವೆಂದರೆ ಮೂಢನಂಬಿಕೆಯಲ್ಲ, ಅತ್ಯಂತ ವೈಜ್ಞಾನಿಕವಾದ ಮತ್ತು ಪ್ರಾಯೋಗಿಕವಾದ ಚಿರಂತನ ಸತ್ಯವೆಂದು ತಮ್ಮ 'ತತ್ತ್ವವಾದ'ದಲ್ಲಿ ಪ್ರಚುರ ಪಡಿಸಿದರು. ನಾರಾಯಣನೊಬ್ಬನೇ ಸರ್ವೋತ್ತಮನಾದ ಸ್ವತಂತ್ರನಾದ ಪರದೈವವೆಂದು, ಸಮಸ್ತ ವೇದವಾಙ್ಮಯವೂ ಅಷ್ಟೇ ಅಲ್ಲ ಸಮಸ್ತ ಶಬ್ದರಾಶಿ,ಧ್ವನಿಗಳೂ ಮುಖ್ಯತ: ಅವನ ಗುಣಗಾನವನ್ನೇ ಮಾಡುತ್ತಿವೆ ಎಂದು ವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸಿದ ಶ್ರೀಮಧ್ವಾಚಾರ್ಯರು ವೇದಸೂಕ್ತಗಳಲ್ಲಿ ಇಂದ್ರ,ವರುಣ,ಅಗ್ನಿ ಮುಂತಾದ ನಾನಾಗುಣನಾಮಗಳಿಂದ ಪ್ರತಿಪಾದ್ಯನಾದ ನಾರಾಯಣ ಅನಂತ ಕಲ್ಯಾಣಗುಣಪೂರ್ಣನೆಂದು, ಅವನಿಂದ ಸೃಷ್ಟವಾದ,ವ್ಯಕ್ತವಾದ ಈ ಜಗತ್ತು ಶ್ರೀಹರಿಯ ಅಧೀನವೆಂದು ವೇದಪ್ರತಿಪಾದಿತವಾದ ಸತ್ಯವನ್ನು ಪುನ: ಬೆಳಕಿಗೆ ತಂದರು. ಸಮಸ್ತವೇದಪ್ರತಿಪಾದ್ಯನಾದ ಶ್ರೀಹರಿ ಸರ್ವೋತ್ತಮನೆಂದು, ಉಳಿದ ಎಲ್ಲಾ ದೇವತೆಗಳೂ ಗುರುಸ್ಥಾನೀಯರೆಂದು ತಿಳಿಸಿದರು. ಜಗತ್ತು ಸತ್ಯವೆಂದು ಅತ್ಯಂತ ಸ್ಪಷ್ಟವಾಗಿ ವೇದ, ಉಪನಿಷತ್ತುಗಳ ಸಂದೇಶವನ್ನು ಸಾರಿದ ಶ್ರೀಮಧ್ವಾಚಾರ್ಯರು ಒಂದು ಜೀವಿಯಂತೆ ಇನ್ನೊಂದು ಜೀವಿಯಿಲ್ಲ, ಜಡವಸ್ತುಗಳಲ್ಲಿಯೂ ಪರಸ್ಪರ ಭೇದಗಳಿವೆ. ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಿಶಿಷ್ಟವಾದ ಸ್ವಭಾವವಿದೆ ಎಂದು ತಿಳಿಸಿದರು. ಶ್ರೀಮಧ್ವರು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಪೂರ್ಣವಿಕಾಸವೇ ಜೀವನದ ಗುರಿಯಾಗಬೇಕು ಎಂದು ವ್ಯಕ್ತಿವಿಶಿಷ್ಟವಾದವನ್ನು ಪ್ರತಿಪಾದಿಸಿದರು."ಭಗವಂತನನ್ನು ಅರಿತವನು ಮಾತ್ರವೇ ಜಗತ್ತಿನ ರಹಸ್ಯವನ್ನು ಅರಿಯಬಲ್ಲ, ಭಗವಂತನನ್ನು ಅರಿಯುವುದು ಕಠಿಣತಮವೇ ಆದರೂ, ಜ್ಞಾನ,ವೈರಾಗ್ಯಗಳ ಸಂಪರ್ಕದಲ್ಲಿ ಪರಿಶುದ್ಧವಾದ ಶ್ರೀಹರಿಯ ಚರಣಭಕ್ತಿಯೇ ಅಂತಹ ಪ್ರಯತ್ನವನ್ನು ಯಶಸ್ವಿಗೊಳಿಸುವಲ್ಲಿ ಸಹಕಾರಿಯಾಗಬಲ್ಲುದು' ಎಂದು ತಮ್ಮ ಭಕ್ತಿ ಸಿದ್ಧಾಂತವನ್ನು ಪ್ರಚುರ ಪಡಿಸಿದ ಶ್ರೀಮಧ್ವಮುನಿಗಳು ಜ್ಞಾನಯೋಗ, ಕರ್ಮಯೋಗಗಳು ಪರಸ್ಪರಸಂಬಂಧವಿರದವುಗಳಲ್ಲ, ಪರಸ್ಪರ ಪೂರಕವಾದವು ಅವುಗಳ ಸಮನ್ವಯವೇ ಸಾಧನೆಯ ಪ್ರಮುಖ ಅಂಶವೆಂದು ಜ್ಞಾನಯೋಗ-ಕರ್ಮಯೋಗಗಳ ಸಂಬಂಧವನ್ನು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದರು.

ಶ್ರೀಹರಿಯಲ್ಲಿ ಅಪಾರವಾದ ಪ್ರೀತಿ,ಭಕ್ತಿಗಳೇ ಆತನ ಅನುಗ್ರಹಸಿದ್ಧಿಗೆ ಸಾಧನಗಳೆಂದು ಒತ್ತಿಹೇಳಿದ ಪೂರ್ಣಪ್ರಜ್ಞರು ಸತ್ಯವಾದ ಜಗತ್ತನ್ನು ನಾವು ಪ್ರೀತಿಸಬೇಕು. ಜಗತ್ತು ಶ್ರೀಹರಿಯ ಲೀಲಾತಿಶಯಗಳನ್ನು ಅಭಿವ್ಯಂಜಿಸುವುದರಿಂದ ಜಗತ್ತನ್ನು ಪ್ರೀತಿಸಿದರೆ ಶ್ರೀಹರಿಯ ಲೀಲಾತಿಶಯಗಳನ್ನೂ ಪ್ರೀತಿಸಿದಂತೆ ಎಂದು ತಿಳಿಸಿದರು. ದೀನರಿಗೆ,ದು:ಖಿತರಿಗೆ ನೆರವಾಗುವುದು ಭಗವಂತನ ರಾಜ್ಯದ ಪ್ರಜೆಗಳಾದ ನಾವು ಸಲ್ಲಿಸುವ ಕಂದಾಯವೆಂದು ಸಮಾಜಸೇವೆ ಪ್ರತಿಯೊಬ್ಬನ ವಿಹಿತಕರ್ತವ್ಯವೆಂದು ಉಪದೇಶಿಸಿ ಸಮಾಜಸೇವೆಗೆ ಒತ್ತು ನೀಡಿ ಸಮಾಜಸೇವೆಯೂ ಭಗವತ್ಪೂಜೆಯೆಂದು ಸಾರಿದ ಶ್ರೀಪೂರ್ಣಬೋಧರು ತಮ್ಮ ಸಮಾಜಮುಖಿ ಚಿಂತನದಿಂದ ತತ್ತ್ವಜ್ಞಾನಿಗಳ ಪಂಕ್ತಿಯಲ್ಲಿ ಅಗ್ರಮಾನ್ಯರಾದರು. ನಾವು ಊಹಿಸಲೂ ಆಗದ ಎತ್ತರದ ನೆಲೆ ಸತ್ಯಲೋಕದ ಅಧಿಪತಿಗಳಾಗಿದ್ದ ಶ್ರೀಮುಖ್ಯಪ್ರಾಣರು ನಮ್ಮ ಮೇಲಿನ ಕರುಣೆಯ ಕಾರಣದಿಂದಾಗಿ ಭೂಮಿಗಿಳಿದು ಮಾಡಿದ ಅನುಗ್ರಹ ಅನ್ಯಾದೃಶ. ಒಂದು ದಿನ ಮಾತ್ರವಲ್ಲ ಪ್ರತಿನಿತ್ಯವೂ, ಪ್ರತಿಕ್ಷಣವೂ ನಮ್ಮ ಹೃದಯದಲ್ಲಿ ಶ್ರೀಮಧ್ವರ ಜಯಂತಿಯಾಗುತ್ತಿರಲಿ. ಮಧ್ವರೆಂಬ ಸೂರ್ಯ ಕವಿದ ಕತ್ತಲೆಯನ್ನು ಅತ್ತ ಸರಿಸಲಿ. ಶ್ರೀವೇದವ್ಯಾಸರ ಮಾರ್ಗದಲ್ಲಿ ನಮ್ಮನ್ನು ಮುನ್ನೆಡೆಸಲಿ.
(received in whatsapp)
***

ಜಗದ್ಗುರು ಮಧ್ವರ ಚರಿತ್ರೆ - ಲೇಖನ ಮಧುಸೂದನ ಕಲಿಭಟ್ ಬೆಂಗಳೂರು
ಸನಾತನ ವಿಷ್ಣು ತತ್ವವನ್ನು ಜಗತ್ತಿಗೆ ತಿಳಿಹೇಳಿದವರು ಆಚಾರ್ಯ ಮಧ್ವರು. ಭಕ್ತರಿಗೆ ಪಂಚ ಭೇದ ತಾರತಮ್ಯ ತಿಳಿಸಿದವರು ಆಚಾರ್ಯ ಮಧ್ವರು.ಬ್ರಹ್ಮ ಸೂತ್ರಗಳಿಗೆ ಮಾಯವಾದಿಗಳಿಂದ ತಪ್ಪು ಅರ್ಥವನ್ನು ಸರಿ ಮಾಡಿ ತಿದ್ದಿ ಹೇಳಿದವರು ಆಚಾರ್ಯ ಮಧ್ವರು. ಅದ್ವೈತ, ವಿಶಿಷ್ಟ ಅದ್ವೈತ, ಜೈನ, ಬುದ್ಧ ಮತಗಳನ್ನು ಅವುಗಳ ತತ್ವ ಗಳನ್ನು ವಾದಿಸಿ ದ್ವೈತ ಸಿದ್ಧಾಂತವನ್ನು ಜಗತ್ತಿಗೆ ತೋರಿಸಿದ ಧೀರ ಆಚಾರ್ಯರು ಮಧ್ವರು.
ಪ್ರಸ್ತುತ ಲೇಖನದಲ್ಲಿ ಆಚಾರ್ಯರ ಜೀವನದಲ್ಲಿಯ ಮಹತ್ವದಘಟನೆ ತಿಳಿಸಲು ಪ್ರಯತ್ನಿಸುವೆ. ಇದಕ್ಕೆ ಶ್ರೀ ಎ. ಬೀ.. ಶ್ಯಾಮಚಾರ್ಯರ ಪುಟ್ಟ ಗ್ರಂಥ ಶ್ರೀ ಮಧ್ವ ಕಥಾಮೃತಮ್  ವನ್ನು ಆಧಾರವಾಗಿ ಇಟ್ಟುಕೊಂಡು ಆಚಾರ್ಯ ಮಧ್ವರ ಭವ್ಯ ಜೀವನದ ಕೆಲವು ದಿವ್ಯ ಮಾಹಿತಿಗಳನ್ನು ಕೊಡಲು ಪ್ರಯತ್ನಿಸುವೆ. ಈ ಪುಸ್ತಕಕ್ಕೆ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥರು ಮುನ್ನುಡಿ ಬರೆದಿದ್ದಾರೆ. ಈ ಚಿಕ್ಕ ಲೇಖನಕ್ಕಾಗಿ ಶ್ರೀ ಶಾಮಚಾರ್ಯರಿಗೆ ಕೃತಜ್ಞತೆ ಅರ್ಪಿಸುತ್ತೇನೆ.
ಭಗವಂತನ ಪ್ರೀತಿಯ ಮಗ ಆದ, ಜೀವೋತ್ತಮರು ಎನಿಸಿದ ವಾಯುದೇವರ ಮೂರನೆಯ ಅವತಾರವೇ ಆಚಾರ್ಯ ಮಧ್ವರ ಅವತಾರವಾಗಿದೆ.
ಆಚಾರ್ಯರ ಸಿದ್ಧಾಂತಕ್ಕೆ, ದ್ವೈತ ಸಿದ್ಧಾಂತ, ವೈಷ್ಣವ ಸಿದ್ಧಾಂತ, ಪರಬ್ರಹ್ಮವಾದ, ಪೂರ್ಣಪ್ರಜ್ಞವಾದ, ಎಂದೂ ಕರೆಯಲಾಗಿತ್ತದೆ.
ವೇದವ್ಯಾಸರ ನಂತರ ವೈಷ್ಣವ ತತ್ವ ಮಂಡಿಸಿದವರು ಆಚಾರ್ಯ ಮಧ್ವರು. ವೇದಗಳಲ್ಲಿ ಪ್ರತಿಪಾದ್ಯವಾದ ನಾಮ ಮಧ್ವ.
ಶ್ರೀಮದಚಾರ್ಯರು ಉಡುಪಿಯಿಂದ 8 ಕಿ. ಮಿ. ದೂರದ ಪಾಜಕ ಕ್ಷೇತ್ರದಲ್ಲಿ ಕ್ರಿ. ಶ.1238 ರಲ್ಲಿ., ವಿಳಂಬಿ ಸಂವತ್ಸರ ಆಶ್ವಿನ ಶು. ದಶಮಿ ಬುಧವಾರ, ಮಧ್ಯಾಹ್ನ ಅವತರಿಸಿದರು. ಆಚಾರ್ಯರ ತಾಯಿ ವೇದಾವತಿ, ತಂದೆ ಮಧ್ಯಗೇಹ ಭಟ್ಟರು. ಭಟ್ಟರು ಮೂಲತಃ ಶಿವಳ್ಳಿ ಗ್ರಾಮದವರು. ಪಾಜಕಕ್ಕೆ ವಲಸೆ ಬಂದಿದ್ದರು. ಭಟ್ಟರು ಉಡುಪಿಯ ಅನಂತೇಶ್ವರನಲ್ಲಿ 12 ವರ್ಷ ಸೇವೆ ಮಾಡಿದ್ದರು.ಭಟ್ಟರು ಮಗನಿಗೆ ವಾಸುದೇವ ಎಂದು ನಾಮಕರಣ ಮಾಡಿದ್ದರು. ಮಗುವನ್ನು ದೇವರಿಗೆ ಸಮರ್ಪಸಿಕೊಂಡು ಬರುವಾಗ ಒಂದು ಭೂತವು ಎಲ್ಲರನ್ನೂ ಬೆದರಿಸಿ ಮಗುವಿನ ಕಾರಣದಿಂದ ನೀವೆಲ್ಲರೂ ಬದುಕಿದ್ದೀರಿ ಎಂದೂ ಭೂತ ಹೇಳಿದ ಸ್ಥಳ, ಸಂದಲಿಕೆಪಾಡಿ.
ಭಾವಿ ಮಧ್ವರಿಗೆ ಭಟ್ಟರು ಪಾಜಕದಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಅಂದಿನ ಕಾಲದಲ್ಲಿಯ ಪದ್ಧತಿ ಪ್ರಕಾರ, ಅಭ್ಯಾಸ ಮಾಡಿದ ಹಾಸುಗಲ್ಲು ಇಂದಿಗೂ ಪಾಜಕದಲ್ಲಿ ನೋಡುತ್ತೇವೆ.
ಬಾಲಕ ವಾಸುದೇವ ಕೇವಲ ಒಂದು ವರ್ಷದವನಿದ್ದಾಗ ಎತ್ತಿನ ಬಾಲ ಹಿಡಿದುಕೊಂಡು ಕಾಡಿಗೆ ಹೋಗಿದ್ದನು.
ತಂದೆಯನ್ನು ಋಣಮುಕ್ತರನ್ನಾಗಿ ಮಾಡಲು ಧನಿಕನಿಗೆ ಹುಣಿಸೆಬೀಜ ಕೊಟ್ಟಾಗ ವಾಸುದೇವನಿಗೆ ಕೇವಲ ಒಂದೂವರೆ ವರ್ಷ ವಯಸ್ಸು ಆಗಿತ್ತು.
ವಸುದೇವನು ಎರಡೂವರೆ ವರ್ಷದವನು ಇದ್ದಾಗ, ಶಿವಭಟ್ಟ ಎಂಬ ಪೌರಾಣಿಕನಿಗೆ ಅವನ ತಪ್ಪು ತಿಳಿಹೇಳಿದ ಉರು ನಯಂಪಲ್ಲಿ ಮಲ್ಲಿಕಾರ್ಜುನ ದೇವಸ್ಥಾನ.
ಬಳಗದವರ ಮದುವೆಗೆ ಹೋದಾಗ ಕಾಡಿನಲ್ಲಿಯ ದೇವರ ಗುಡಿಗಳಿಗೆ ಹೋಗಿದ್ದನು. ಆಗ ವಾಸುದೇವನಿಗೆ ಕೇವಲ ಮೂರು ವರ್ಷ.
ತಾಯಿ ಮನೆಯಲ್ಲಿ ಹಾಳು ಕುಡಿಯಲು ಬೆಕ್ಕು ಬರುವದು ಎಂದಾಗ., ಪಾತ್ರೆಮೇಲೆ ಕಲ್ಲು ಚಪ್ಪಡಿಗಳನ್ನು ಇಟ್ಟಿದ್ದು ನಾಲ್ಕು ವರ್ಷದ ಬಾಲಕ. ಅವುಗಳನ್ನು ಈಗಲೂ ನಾವು ಕಾಣುತ್ತೇವೆ. ಇದರಿಂದ ಬಾಲಕ ವಸುದೇವನ ಭೀಮ ಸಾಮರ್ಥ್ಯ ತಿಳಿಯುವದು.
ವಾಸುದೇವನಿಗೆ ಉಪನಯನ ಆದಾಗ ಐದು ವರ್ಷ ಮಾತ್ರ. ಕ್ರಿ. ಶ.1243, ಕ್ರೋಧನ ಪುಷ್ಯ ಶು. ಪಂಚಮಿ. ಅದೇ ವಯಸಿನಲ್ಲಿ ತಾಯಿಗಾಗಿ ಮನೆಯ ಈಶಾನ್ಯ ದಿಕ್ಕಿಗೆ ಒಂದು ಕೋಲಿನಿಂದ ಗೆರೆ ತೆಗೆದು ವಾಸುದೇವ ತೀರ್ಥ ನಿರ್ಮಿಸಿದ ಶೂರರು ಭಾವಿ ಮಧ್ವರು.
ಇನ್ನೊಮ್ಮೆ ಪಾಜಕದಲ್ಲಿಯ ದುರ್ಗಾ ಬೆಟ್ಟದ ಹತ್ತಿರ ಸರ್ಪ ರೂಪದ ಮಣಿಮಂತನನ್ನು ಕಾಲಿನಿಂದ ಹೊಸಕಿ ಸಂಹಾರ ಮಾಡಿದವನೇ ವಾಸುದೇವ ಬಾಲಕ. ಈಗಲೂ ಆ ಜಾಗವನ್ನು ನಾವು ನೋಡುತ್ತೇವೆ.
ಬಾಲಕ ವಾಸುದೇವನಿಗೆ 6 ವರ್ಷ ಆದಾಗ ಈಗಿನ ಕಾಪು ಗ್ರಾಮದ ಹತ್ತಿರ ತೋಟದಮನೆ ಯವರ ಹತ್ತಿರ ಗುರುಕುಲವಾಸ ಮಾಡಿದರೂ. ಬಾಲಕ ವಸುದೇವನು ಹೊಲಕ್ಕೆ ನೀರು ಬೇಕೆಂದು ತನ್ನ ಹತ್ತಿರವಿದ್ದ ಕೋಲಿನಿಂದ ಗೆರೆ ತೆಗೆದು ಒಂದು ಸಣ್ಣ ಕುಂಡ ನಿರ್ಮಿಸಿದನು. ಅದೇ ದಂಡತೀರ್ಥ ಎಂದೂ ಹೆಸರಾಗಿದೆ. ಗುರುಗಳ ಮಗನಿಗೆ ಕಿವಿಯಲ್ಲಿ ಗಾಳಿ ಊದಿ ತಲೆಶೂಲೆ ಕಡಿಮೆ ಮಾಡಿದರು, ಎಂಟುವರ್ಷದ ಬಾಲಕ.9ನೆಯವರ್ಷದ ವರೆಗೆ ಗುರುಕುಲದಲ್ಲಿ ಇದ್ದು ಗುರುಗಳಿಗೆ ಐತರೆಯ ಉಪನಿಷತ್ತಿನ ಪಾಠಹೇಳಿ ಗುರುದಕ್ಷಿಣೆ ಅರ್ಪಿಸಿದರು.
ಅಚ್ಯುತಪ್ರೇಕ್ಷರು ಈಗಿನ ಕರ್ನುರಿನಲ್ಲಿ ಇದ್ದರೂ. ಅವರು ಮೂಲತಃ ಜಗನ್ನಾಥಪುರಿಯವರೆಂದು ಪ್ರತೀತಿ. ತಂದೆಯೂ ಮಗನು ಸನ್ಯಾಸ ತೆಗೆದುಕೊಂಡರೆ ಸಾಯುತ್ತೇನೆ ಎಂದೂ ಹೆದರಿಸಿದಾಗ ಕುತ್ಯಾದಿಮಠದಲ್ಲಿ ಉತ್ತರೀಯ ಹರಿದು ಕೌಪೀನ ಧರಿಸಿ ತಂದೆಗೆ ಸಾವಿನ ಧೈರ್ಯ ಮಾಡಿರೆಂದು ಹೇಳಿದಬಾಲಕ ವಾಸುದೇವ.
ಮಧ್ಯಗೇಹರಿಗೆ ಇನ್ನೊಬ್ಬ ಮಗಹುಟ್ಟಿದಮೇಲೆ ಕುಟ್ಯಾಡಿ ಮಠದಲ್ಲಿ ಅಚ್ಯುತಪ್ರೇಕ್ಷರಿಂದ ಸನ್ಯಾಸ ಸ್ವೀಕರಿಸಿದರು. ಆಗ ಅವರಿಗೆ ಕೇವಲ ಹತ್ತು ವರ್ಷ.ಅಂದು ಪ್ರಭಾವ ಸಂವತ್ಸರ ವೈಶಾಖ ಶು. ತದಿಗೆ ಆಗಿತ್ತು. ಗುರುಗಳು ಪೂರ್ಣಬೋಧ ತೀರ್ಥ, ಎಂದೂ ನಾಮಕರಣ ಮಾಡಿದರು.ಅಚ್ಯುತಪ್ರೇಕ್ಷರಿಗೆ ಮೊದಲೇ ಕೆಲವೂ ಜನ ಸನ್ಯಾಸಿ ಶಿಷ್ಯರು ಇದ್ದರೂ. ಅವರನ್ನು ಜ್ಯೇಷ್ಠ ಯತಿಗಳೆಂದು ಕರೆಯುವರು. ಸತ್ಯತೀರ್ಥರು ಇವರಲ್ಲಿ ಒಬ್ಬರಾಗಿದ್ದರು. ನಂತರ ಮಧ್ವರಲ್ಲಿ ಪಾಠ ಹೇಳಿಸಿಕೊಂಡರು.12 ವರ್ಷದವರು ಇದ್ದಾಗ ಅನಂತಸರೋವರಕ್ಕೆ ಗಂಗೆಯನ್ನು ತರಿಸಿದರು. ಅದು ಮಧ್ವ ಸರೋವರ ಎಂದೂ ಪ್ರಸಿದ್ಧಿ ಹೊಂದಿತು.
ವಾಸುದೇವ ಬಾಲಕ ಸನ್ಯಾಸ ಸ್ವೀಕರಿಸಿದ ನಂತರದ ಘಟನೆಗಳನ್ನು ನೋಡೋಣ.

ಆಶ್ರಮ ಸ್ವೀಕರಿಸಿ 40 ದಿನಕ್ಕೆ ವಾದಕ್ಕೆ ಬಂದ ವೈಷೇಯಿಕ ಪಂಡಿತನನ್ನು ಸೋಲಿಸಿದರು. ಆಗಿನ ಕಾಲದ ಭಯದ ವಾತಾವರಣದಲ್ಲಿ ಅದ್ವೈತ ಗ್ರಂಥ ಪಾಠದಲ್ಲಿ ಮೊದಲ ಶ್ಲೋಕದಲ್ಲಿ 32 ತಪ್ಪು ತೋರಿಸಿದರು. ಸುಮಾರು ಎರಡು ವರ್ಷ ಗುರುಗಳ ಸಂಗಡ ಇದ್ದು ಅನುಮತಿ ಪಡೆದು ದಕ್ಷಿಣ ಯಾತ್ರೆ ಹೊರಟರು.
ಉಡುಪಿಯಲ್ಲಿ ಆಚಾರ್ಯರು ಬುದ್ಧ ಪಂಡಿತ ವಾದಿಸಿಂಹ, ಬುದ್ಧಿಸಾಗರ ರನ್ನು ಸೋಲಿಸಿದರು. ಆಗ ಅವರನ್ನು ಅನುಮಾನತೀರ್ಥ ಎಂದೂ ಕರೆದರು. ಕೇರಳದ ಕಾಸರಗೋಡಿನ ಹತ್ತಿರದ ವಿಷ್ಣುಮಂಗಳ ಎಂಬಲ್ಲಿ ಭಿಕ್ಷೆಯ ನಂತರ,15 ವರ್ಷದ ತರುಣ ಯತಿಗಳು 400 ಬಾಳೆಹಣ್ಣು ತಿಂದು, ತಮ್ಮಲ್ಲಿ ಜಠರ ಅಗ್ನಿ ಅಂಗುಷ್ಟ ಗಾತ್ರ ಇದೆ ಎಂದೂ ಹೇಳಿದರೂ. ಅಂದರೆ ಪ್ರಳಯಕಾಲಕ್ಕೆ ಜಗತ್ತನ್ನೇ ಭಸ್ಮ ಮಾಡುವಷ್ಟು ತೀಕ್ಷಣ ಆಗಿದೆ ಎಂದೂ ಹೇಳಿದರೂ.ಕಲಿಯುಗದಲ್ಲಿ 36000 ವರ್ಷದ ನಂತರ, ಕೇರಳದ ಕಾಸರಗೋಡಿನ ದಕ್ಷಿಣಕ್ಕೆ ಪಯಸ್ವಿನಿ ನದಿ ತೀರದಲ್ಲಿ ದುರ್ಗಾ ದೇವಿ ಅವತಾರ ಆಗುವದೆಂದು ಹೇಳಿದರು.
ಆಚಾರ್ಯರು 16 ವರ್ಷದವರಿದ್ದಾಗ ಆಡೂರಿನ ದೇವಸ್ಥಾನದಲ್ಲಿ ವಿ. ಸ. ನಾ. ವಿಷ್ಣು ಶಬ್ದಕ್ಕೆ ನೂರು ಅರ್ಥ ಹೇಳಿದರು. ಚೆಮ್ಮಾಡಿ ಎಂಬಲ್ಲಿ ಅಪಾಲಾ ಅಂದರೆ ಅತಿತರುಣಿ ಎಂದು ಅರ್ಥಹೇಳಿ ಎಲ್ಲ ಪಂಡಿತರನ್ನು ಬೆರಗು ಗೊಳಿಸಿದರು.

ಅಚ್ಯುತಪ್ರೇಕ್ಷರು ನೂತನ ಯತಿಗೆ ಭಾಗವತದ ಐದನೇಯ ಸ್ಕಂದದ ಗದ್ಯಭಾಗ ಹೇಳಲು ಪರೀಕ್ಷೆ ಮಾಡಿದರು. ಅವರ ವಿದ್ವತ್ತಿಗೆ ಅವರನ್ನು ಆನಂದತೀರ್ಥ ಎಂದೂ ವೇದಾಂತ ಪೀಠದಲ್ಲಿ ಕೂಡ್ರಿಸಿ ಪಟ್ಟಾಭಿಷೇಕ ಮಾಡಿದರು.
 ಆನಂದತೀರ್ಥರ ಮೊದಲ ಗ್ರಂಥ ಗೀತಾಭಾಷ್ಯ. ಆಗ ಅವರಿಗೆ ಕೇವಲ 13 ವರ್ಷ. ಉಡುಪಿಯಲ್ಲಿ ಈಗಿರುವ ಕೃಷ್ಣಮಠದಲ್ಲಿಯೇ ಆಚಾರ್ಯರು ಕೃಷ್ಣ ಸ್ಥಾಪನೆಗೂ ಮೊದಲು ಇದ್ದರು. ಅವರು ಮೊದಲ ಬದರಿ ಯಾತ್ರೆಯನ್ನು ತಮ್ಮ 19 20 ನೇ ವಯಸ್ಸಿಗೆ ಕೈಗೊಂಡರು. ಬದರಿಯಲ್ಲಿಯ ಬದರಿನಾರಾಯಣ ಮಂದಿರದಲ್ಲಿ ಅನಂತಮಠ ಸ್ಥಾಪಿಸಿದರು. ತಮ್ಮ 23ನೇಯ ವಯಸ್ಸಿಗೆ ಉತ್ತರ ಬದರಿಗೆ ಹೋಗಿ ಗೀತಾಭಾಷ್ಯ ಗ್ರಂಥವನ್ನು ಶ್ರೀ ವ್ಯಾಸರಿಗೆ ಅರ್ಪಿಸಿ ನ್ನರ ನಾರಾಯಣರ ಸಂದರ್ಶನ ಮಾಡಿದರು.
ಶ್ರೀ ಮದಾಚಾರ್ಯರು ಬದರಿ ಕ್ಷೇತ್ರದಲ್ಲಿ 48ದಿನ ಕಾಲ ಕಾಷ್ಟ ಮೌನ ಆಚರಿಸಿದರು. ಆಗ ಅವರಿಗೆ 24 ವರ್ಷ ವಯಸ್ಸು. ಬದರಿಯಿಂದ ವೇದವ್ಯಾಸರ ಆಶ್ರಮಕ್ಕೆ ಪರ್ವತದಿಂದ ಪರ್ವತಕ್ಕೆ, ಶಿಖರದಿಂದ ಶಿಖರಕ್ಕೆ ಹಾರುತ್ತಾ ಹೋಗಿ ತಾವು ಹನುಮನ ಅವತಾರವೆಂದು ಸಿದ್ಧಪಡಿಸಿದರು.ಈ ಘಟನೆಯನ್ನು ಅವರ ಶಿಷ್ಯರಾದ ಸತ್ಯತೀರ್ಥರು ಕಣ್ಣಾರೆ ನೋಡಿದ್ದರು. ಇದನ್ನು ತಿಳಿದ ಆಚಾರ್ಯರು ಕೇವಲ ಬೆರಳ ಸಂಜ್ಞೆ ಯಿಂದ ಹಿಂದಿರುಗಲು ಹೇಳಿ ಮಹೂರ್ತ ಸಮಯದಲ್ಲಿ ಸತ್ಯತೀರ್ಥರು ಸಹಪಾಠಿಗಳ ಸಂಗಡ ಇರುವಂತೆ ಮಾಡಿದರು.ಆಚಾರ್ಯರು ಬದರಿಯಿಂದ ಬರುವಾಗ ವ್ಯಾಸರ ಆಜ್ಞೆಯಂತೆ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದು, ಶಿಷ್ಯರ ಸಂಗಡ ಉಡುಪಿಗೆ ಕಳಿಸಿದರು. ಇದೆ ಸಮಯದಲ್ಲಿ ಅಗ್ನಿಶರ್ಮ ಮೊದಲಾದ ಐದೇ ಜನ ವಿಪ್ರರ ಭಿಕ್ಷೆ ಸ್ವೀಕಾರಮಾಡಿ ತಮ್ಮ ಭೀಮ ಶಕ್ತಿ ತೋರಿಸಿ ಎಲ್ಲರನ್ನೂ ಆಶ್ಚರ್ಯ ಗೊಳಿಸಿದರು. ಗೋದಾವರಿ ತೀರದಲ್ಲಿ ಶೋಭನಭಟ್ಟರ ಸಂಗಡ ವಾದಮಾಡಿ ಗೆದ್ದು ಅವರಿಗೆ ಆಶ್ರಮ ಕೊಟ್ಟರು.

ಆಚಾರ್ಯರು ತಮ್ಮ 40 ನೇ ವಯಸ್ಸಿಗೆ ಸಮುದ್ರದಲ್ಲಿ ಬರುತ್ತಿದ್ದ ನಾವೆಯನ್ನು ರಕ್ಷಿಸಿ ಗೋಪಿಚಂದನದ ಗಡ್ಡೆ ಪಡೆದು ಅದರಲ್ಲಿ ಕಡಗೋಲು ಕೃಷ್ಣನನ್ನು ಉಡುಪಿಯಲ್ಲಿ ತಾವು ವಾಸವಾಗಿದ್ದ ಮಠದ ಹತ್ತಿರ ಸರೋವರದ ದಂಡೆಯಲ್ಲಿ ಸ್ಥಾಪನೆ ಮಾಡಿದರು. ಈ ಘಟನೆ ಅಂದಾಜು ಕ್ರಿ. ಶ.1276, ಇರಬಹುದು. ವಿಳಂಬಿ, ಮಾಘ ಶು. ತೃತೀಯ ದಿನ ಆಗಿತ್ತು.
ಆಚಾರ್ಯರು ಎರಡನೇ ಬಾರಿ ಬದರಿ ಯಾತ್ರೆಗೆ ಹೊರಟಾಗ ಈಶ್ವರದೇವ ಎಂಬ ಅಹಂಕಾರಿ ಅರಸನಿಗೆ ದಾರಿಯನ್ನು ಸತತ ಅಗೆಯಲು ಪ್ರಚೋದನೆ ಮಾಡಿದರು. ದಿಲ್ಲಿಗೆ ಹೋದಾಗ ಅಲ್ಲಿಯ ತುರುಷ್ಕ ಖಿಲ್ಜಿ ಅರಸನ ಸಂಗಡ ಅವನದೇ ಭಾಷೆಯಲ್ಲಿ ಮಾತನಾಡಿದರು. ಇದು ಅವರು ಗಂಗನದಿಯನ್ನು ದಾಟಿದ ಸಮಯವಾಗಿತ್ತು. ಆಗ ಅವರಿಗೆ 60 ವರ್ಷ ವಯಸ್ಸು ಆಗಿರಬಹುದು. ತಿರುಗಿ ಬರುವಾಗ ಕಾಶಿಯಲ್ಲಿ ಅಮರಾವತಿ ಅಥವಾ ಇಂದ್ರಪುರಿ ಎಂಬ ಅದ್ವೈತ ಸನ್ಯಾಸಿಯನ್ನು ವಾದದಲ್ಲಿ ಸೋಲಿಸಿದರು. ಕೇರಳದ ತಿರುವನಂತಪುರದಲ್ಲಿ ಕುಡುಪುಸ್ತೂರು ಎಂಬ ಇನ್ನೊಬ್ಬ ಅದ್ವೈತಿಯನ್ನು ಸೋಲಿಸಿ ಮತ್ತೊಮ್ಮೆ ಅವನನ್ನು ರಾಮೇಶ್ವರದ ಹತ್ತಿರ ಎರಡನೇ ಬಾರಿ ಸೋಲಿಸಿದರು. ಶ್ರೀ ಮುಷ್ಣ ಕ್ಷೇತ್ರದಲ್ಲಿ ಒಬ್ಬ ತುಂಬು ಗರ್ಭಿಣಿ ಗಾಗಿ ತಮ್ಮ ದಂಡದಿಂದ ಗೆರೆ ಹಾಕಿ ನೀರು ತರಿಸಿದರು. ಅದು ಇಂದಿಗೂ ದಂಡ ತೀರ್ಥ ಎಂದು. ಕರೆಯಲ್ಪಡುವದು.ಬದರಿಗೆ ಹೋಗುವಾಗ ಕಳ್ಳರನ್ನು ಪರಸ್ಪರ ಜಗಳಾಡುವಂತೆ ಮಾಡಿ ಶಿಷ್ಯರನ್ನು ರಕ್ಷಿಸಿದರು.ಎರಡನೇ ಬಾರಿ ಬದರಿಯಿಂದ ಬರುವಾಗ ಜಲಸ್ತಮ್ಭನ ವಿದ್ಯೆಯಿಂದ ಶಿಷ್ಯರಿಗೆ ನೀರು ತಾಗದಂತೆ ನದಿಯನ್ನು ದಾಟಿಸಿದರು. ಆಗ ಮ. ತಾ. ನಿ. ರಚಿಸಿದರು. ಹಸ್ತಿನಾಪುರದಲ್ಲಿ ಗಂಗಾದೇವಿ ಮೂಲರೂಪದಿಂದ ಗಂಗಾ ಪ್ರವಾಹ ದಲ್ಲಿ ಕಾಣಿಸಿಕೊಂಡಳು.

ಕಾಪುಮಠದಲ್ಲಿ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ತಮ್ಮ ಶಂಕರ ಪಂಡಿತರು ಆಚಾರ್ಯರ ಗ್ರಂಥ ಭಂಡಾರದ ಮೇಲ್ವಿಚಾರಣೆ ಮಾಡುತ್ತಿದ್ದರು. ಚೋಳದೇಶದ ಪದ್ಮತೀರ್ಥ ಎಂಬ ಮಾಯವಾದಿ ಕಾಪುವಿನಲ್ಲಿ ಇದ್ದ ಗ್ರಂಥಗಳನ್ನು ಕದ್ದನು. ಅವನನ್ನು ವಾದದಲ್ಲಿ ಸೋಲಿಸಿ ಈ ವಾದವನ್ನು ತತ್ವೊದ್ಯೋತ ಎಂಬ ಗ್ರಂಥವಾಗಿ ಪ್ರಕಟಿಸಿದರು. ಇದನ್ನು ಕಂಡು ರಾಜನು ಆಚಾರ್ಯರಿಗೆ ಕಳವಾದ ಗ್ರಂಥ ಹುಡುಕಿಸಿ ಕೊಟ್ಟನು. ಈ ಘಟನೆ ವಿಷ್ಣುಮಂಗಳ ಎಂಬಲ್ಲಿ ನಡೆದಿದೆ. ತ್ರಿವಿಕ್ರಮ ಪಂಡಿತರು ಕಾಪು ಗ್ರಾಮದವರು. ಜಯಸಿಂಹ ರಾಜನಲ್ಲಿ ಅಸ್ಥಾನ ಕವಿಗಳಾಗಿದ್ದರು. ಆಚಾರ್ಯರ ಸಂಗಡ 15 ದಿನ ವಾದಿಸಿದರು. ರಾಜನ ಎದುರು ತಮ್ಮ ಪರಾಭವ ಒಪ್ಪಿ ಆಚಾರ್ಯರ ಏಕಾಂತ ಭಕ್ತರಾದರೂ. ಇವರೇ ಶ್ರೀ ಹರಿ ವಾಯುಸ್ತುತಿಯನ್ನು ರಚಿಸಿದರು. ಅದಕ್ಕೆ ಸಂಪುಟಾಕಾರವಾಗಿ ಮಧ್ವರು ನಖಸ್ತುತಿ ರಚಿಸಿದರು. ಆಚಾರ್ಯರ ಗ್ರಂಥಗಳನ್ನು ಶ್ರೀ ಸತ್ಯತೀರ್ಥರು ಹಸ್ತಲೇಖ ಪ್ರತಿ ಮಾಡಿ ಇಟ್ಟರು. ತ್ರಿವಿಕ್ರಮ ಪಂಡಿತರು ಮತ್ತು ಅವರ ಮಗ ನಾರಾಯಣ ಪಂಡಿತರು ಕೊನೆಗೆ ಮಧ್ವರಿಂದ ಸನ್ಯಾಸ ದೀಕ್ಷೆ ತೆಗೆದುಕೊಂಡು ಕಾಪುವಿನಲ್ಲಿ ವೃಂದಾವನ ಪ್ರವೇಶ ಮಾಡಿದರು.
ಆಚಾರ್ಯರು ತಮ್ಮ ಇಳಿವಯಸ್ಸಿನಲ್ಲಿಯೂ ತಾವೂ ಭೀಮಸೇನದೇವರ ರೂಪವೆಂದು ಜನಕ್ಕೆ ತಿಳಿಸಲು ಕೆಲವು ಪವಾಡ ಮಾಡಿದ್ದಾರೆ. ಉಡುಪಿಯ ಹತ್ತಿರದ ಕಾಂತಾವರ ಎಂಬಲ್ಲಿ ಗಂಡವಾಟ ಎಂಬಜಟ್ಟಿ. ಸೋದರರು ಮಧ್ವರನ್ನು ಸೋಲಿಸಲು ಬಂದರೂ. ಆಗ ಗುರುಗಳು ತಮ್ಮ ಕುತ್ತಿಗೆ ಒತ್ತಿ ಹಿಡಿಯಲು ಹೇಳಿದರೂ. ಯೋಗದಿಂದ ಕುಳಿತರು. ಆಗ ಬಂದ ಜಟ್ಟಿಗಳಿಗೆ. ಬೆವರಿಳಿಯಿತು. ಸೋತು ಹೋದರು.. ಇನ್ನೊಮ್ಮೆ 8 ವರ್ಷದ ಬಾಲಕನ ಮೇಲೆ. ಕುಳಿತು ಸಾಗಿದ ಕಥೆಯು ಇದೆ. ಇದರಿಂದ. ಆಚಾರ್ಯರಿಗೆ ಯೋಗವು ಎಷ್ಟು ಕರಗತ ಆಗಿತ್ತು ಎಂಬುದು ತಿಳಿಯುತ್ತದೆ. ಹೀಗೆ ತಮ್ಮ ಶಿಷ್ಯರ ಸಂಗಡ ಮಲ್ಲ ಯುದ್ಧದ ಆಟ ಆಡಿದ್ದಾರೆ. ಒಮ್ಮೆ  ಗೋಮಾತಿನದಿ ತೀರದಲ್ಲಿ ರಾತ್ರಿ ಪಥ ಹೇಳುವಾಗ ದೀಪ ಶಾಂತವಾಯಿತು. ಆಗ ಗುರುಗಳು.ತಮ್ಮ ಕಾಲಿನ ಹೆಬ್ಬೆರಳಿನ ಕಾಂತಿಯ ಬೆಳಕಿನಲ್ಲಿ. ಪಾಠ ಹೇಳಿದರು. ಇನ್ನೊಮ್ಮೆ ಐತರೆಯ ಉಪನಿಷತ್ ಪಾಠ ಹೇಳುವಾಗ ಒಮ್ಮೆಲೇ. ಬೆಳದಿಂಗಳ ಬೆಳಕಿನಂತೆಮೆಲ್ಲ. ಕಡೆಗೆ. ಪ್ರಕಾಶ ಬೀರಿತು. ಆಗ ಆಚಾರ್ಯರು ಶಿಷ್ಯರಿಗೆ ಶೇಷದೇವರು ಪಾಠ ಕೇಳಲುಬಂದಿದ್ದಾರೆಂದು. ಹೇಳಿದರೂ. ಆಚಾರ್ಯರು ತಮ್ಮ 75 ವರ್ಷ ಆಯುಷ್ಯದಲ್ಲಿ ಎಷ್ಟೋ ಮಹಿಮೆಗಳನ್ನು ತೋರಿಸಿದ್ದಾರೆ. ಅವುಗಳನ್ನು ಬರೆಯಲು ಈ ಅಲ್ಪಮತಿಗೆ ಬುದ್ಧಿ ಸಾಲದು ಮತ್ತು ಶಬ್ದಗಳೇ ಹೊಳೆಯದಂತೆ ಆಗಿದೆ ಎಂದೂ ಬರೆದರೆ ತಪ್ಪು ಆಗದು.
ಆಚಾರ್ಯರಿಗೆ ಐತರೆಯ ಉಪನಿಷತ್ತಿನ ಪಾಠ ಎಂದರೆ ಬಹಳ ಇಷ್ಟ. ಒಂದು ದಿನ ಅದು ಮಾಘ ಶುದ್ಧ ನವಮಿ, ಪಾಠ ಹೇಳುತ್ತಾ ಕುಳಿತಾಗ ಒಮ್ಮೆಲೇ ಎಲ್ಲರಿಗೂ ಕಾಣುವಂತೆ ಪುಷ್ಪ ವೃಷ್ಟಿ ಆಯಿತು. ಅದರಲ್ಲಿ ಆಚಾರ್ಯರು ಮುಳುಗಿಹೋದರು. ನಂತರ ಶಿಷ್ಯರು ನೋಡಲಾಗಿ ಆಚಾರ್ಯ ಮಧ್ವರು ಈ ಲೋಕದಿಂದ ಕಣ್ಮರೆ ಆಗಿದ್ದರು. ಅವರ ದೇಹ ಕಾಣಲಿಲ್ಲ. ಈ ಘಟನೆ ನಡೆದಿದ್ದು ಕ್ರಿ. ಶ 1317, ಪಿಂಗಳ ಸಂವತ್ಸರ ಮಾಘ ಶು. ನವಮಿ ಆಗಿತ್ತು. ಅದೇ ದಿನವನ್ನು ಇಂದು ನಾವೆಲ್ಲರೂ ಆಚಾರ್ಯರ ಸ್ಮರಣಾರ್ಥ ಮಧ್ವ ನವಮಿ ಆಚರಿಸುತ್ತಿದ್ದೇವೆ. ಆಚಾರ್ಯರು ಹೇಳಿದಂತೆ ಅವರು ಒಂದಂಶದಿಂದ ಉಡುಪಿಯಲ್ಲೂ,ಒಂದಂಶದಿಂದ ಬದರಿಯಲ್ಲಿ ವ್ಯಾಸರ ಆಶ್ರಮದಲ್ಲಿ ಮತ್ತು ತಮ್ಮ ಗ್ರಂಥಗಳಲ್ಲೂ ಇದ್ದೇವೆ ಎಂದೂ ಹೇಳಿದ್ದಾರೆ. ಇಂತಹ ಆಚಾರ್ಯರ ಅಂತರ್ಯಾಮಿ ಕುಲದೇವರಾದ ಶ್ರೀ ಲಕ್ಷ್ಮೀ ಹಯಗ್ರೀವದೇವರು ಎಲ್ಲರಿಗು ಆಯುರಾರೋಗ್ಯ ಕೊಟ್ಟು ಕಾಪಾಡಲಿ.
ಲೇಖನ ಮಧುಸೂದನ ಕಲಿಭಟ್ ಬೆಂಗಳೂರು
ಶಾರ್ವರಿ ಮಾಘ ಶು ನವಮಿ ಭಾನುವಾರ  Feb 20, 2021
****
ಆಚಾರ್ಯ ಮಧ್ವರ ಸಂಪರ್ಕಕ್ಕೆ ಬಂದಿರುವ ತುಳುನಾಡಿನ ಊರುಗಳು :-
1. ಅವತಾರ ಭೂಮಿ ಪಾಜಕ - ಆಚಾರ್ಯರ ಜನ್ಮಸ್ಥಳ
2. ರಜತಪೀಠಪುರ - ಉಡುಪಿ
3. ಅನಂತಾಸನ-ಮಹೇಂದ್ರದಿಗಾಲಯ (ಚಂದ್ರೇಶ್ವರ)-ಕಾನನ ದೇವತಾಸದನ (ಕೊಡವೂರು)-ತಾಳಕುಡೆ (ಬನ್ನಂಜೆ) - ಈ ೪ ದೇವಾಲಯಗಳನ್ನು ಆಚಾರ್ಯರು ತಮ್ಮ ೭ ವಯಸ್ಸಿನಲ್ಲಿ ನಟ್ಟಿರುಳಿನಲ್ಲಿ ನಡೆದುಕೊಂಡು ಸಂದರ್ಶಿಸಿದ್ದರು.
3. ಅನಂತಾಸನ-ಮಹೇಂದ್ರದಿಗಾಲಯ (ಚಂದ್ರೇಶ್ವರ)-ಕಾನನ ದೇವತಾಸದನ (ಕೊಡವೂರು)-ತಾಳಕುಡೆ (ಬನ್ನಂಜೆ) - ಈ ೪ ದೇವಾಲಯಗಳನ್ನು ಆಚಾರ್ಯರು ತಮ್ಮ ೭ ವಯಸ್ಸಿನಲ್ಲಿ ನಟ್ಟಿರುಳಿನಲ್ಲಿ ನಡೆದುಕೊಂಡುಸಂದರ್ಶಿಸಿದ್ದರು.
4. ಮದ್ದ - ಈ ಗ್ರಾಮದಲ್ಲಿ ಮಧ್ವಾಚಾರ್ಯರು ಒಂದು ಶಿಲೆಯ ಮೇಲೆ ಕುಳಿತುಕೊಂಡಿದ್ದರು. ಹಾಗಾಗಿ ಈ ಊರಿಗೆ ಮಧ್ವ ಮದ್ದ ಎಂದು ಹೆಸರಾಯಿತು.
5. ಘೃತವಲ್ಲೀ - ನೈಯಂಬಳ್ಳಿ.
6. ಕಾಂತಾವರ - ಶ್ರೀ ಕಾಂತೇಶ್ವರ ಸದನ - ಆಚಾರ್ಯರು ತಮ್ಮ ಕಿರುಬೆರಳನ್ನು ನೆಲಕ್ಕೆ ಒತ್ತಿ ಅದನ್ನು ಅಲುಗಾಡಿಸಿ ಎಂದು ಜಟ್ಟಿಗಳಿಗೆ ಸವಾಲು ಹಾಕಿದ ಸ್ಥಳ.
7. ನಾರ್ಶ್ಯ - ನರಸಿಂಹ ಗೇಹ - ಆಚಾರ್ಯರು ಒಬ್ಬ ವಟುವಿನ ಹೆಗಲ ಮೇಲೆ ಕುಳಿತು ನರಸಿಂಹನ ಗುಡಿಗೆ ಪ್ರದಕ್ಷಿಣೆ ಬಂದ ಸ್ಥಳ.
8. ಗುಹಪ್ರಿಯ ಮಹೀಧ್ರ - ಕುಮಾರಪರ್ವತ- ವಿಷ್ಣುತೀರ್ಥಾಚಾರ್ಯರು ಸಂಚರಿಸಿದ ಪರ್ವತ.
9. ಹರಿಶ್ಚಂದ್ರ ಮಹೀಧ್ರ - ವಿಷ್ಣುತೀರ್ಥಾಚಾರ್ಯರು ಗುಹಾ ಪ್ರವೇಶ ಮಾಡಿದ ಪರ್ವತ.
10. ಮಧ್ಯವಾಟ - ಆಚಾರ್ಯರು ಉಡುಪಿ ಹಾಗು ಸುಬ್ರಹ್ಮಣ್ಯಗಳ ಮಧ್ಯೆ ಸಂಚಾರಿಸುತ್ತಿದ್ದಾಗ ಇಳಿದು ಕೊಳ್ಳುತ್ತಿದ್ದ ಸ್ಥಳ. ಇಲ್ಲಿ ಒಂದು ವ್ಯಾಸಮುಷ್ಟಿಯನ್ನು ಪ್ರತಿಷ್ಠಾಪಿಸಿದ್ದಾರೆ.
11. ಎರ್ಕಿಮಠ - ಇಲ್ಲಿನ ಗೃಹಸ್ಥರಿಗೆ ಆಚಾರ್ಯರು ಚನ್ನಕೇಶವ ದೇವರ ವಿಗ್ರಹ ಮತ್ತು ಮುದ್ರೆಗಳನ್ನು ದಯಪಾಲಿಸಿದ್ದಾರೆ.
12. ಅನಂತಶಯನ - ಆಚಾರ್ಯರು ಸಹಸ್ರ ಕದಳಿ ಫಲ ಮತ್ತು ಅನೇಕ ಕೊಡ ಹಾಲನ್ನು ಸ್ವೀಕರಿಸಿ ಅಚ್ಚರಿ ಮೂಡಿಸಿದ ಸ್ಥಳ.
13. ವಿಷ್ಣುಮಂಗಲ - ಆಚಾರ್ಯರು ತ್ರಿವಿಕ್ರಮಪಂಡಿತರನ್ನು ವಾದದಲ್ಲಿ ಜಯಿಸಿದ ಸ್ಥಳ.
14. ಚಿಟ್ಪಾಡಿ ಬೀಡು - ಆಚಾರ್ಯ ಮಧ್ವರ ಮನೆಗೆ ಹಾಲನ್ನು ಒದಗಿಸುತ್ತಿದ್ದ ಮನೆತನ. ಇಲ್ಲಿ ಶ್ರೀ ಭೂ ಸಮೇತನಾದ ಶ್ರೀನಿವಾಸ ದೇವರ ದೇವಳವಿದೆ. ಆಚಾರ್ಯರು ಇವರಿಗೆ ವಿಗ್ರಹಗಳನ್ನು ದಯಪಾಲಿಸಿದ್ದಾರೆ.
15. ನಿಡಂಬೂರು ಪಕ್ಷನಾಥ ಬಲ್ಲಾಳರ ಮನೆ- ಆಚಾರ್ಯರು ಇಲ್ಲಿನ ಗೃಹಸ್ಥರಿಗೆ ಲಕ್ಷ್ಮೀನಾರಾಯಣ ವಿಗ್ರಹವನ್ನು ದಯಪಾಲಿಸಿದ್ದಾರೆ.
16. ಉಜಿರೆ - ಆಚಾರ್ಯರು ಪಂಡಿತರನ್ನು ವಾದದಲ್ಲಿ ಗೆದ್ದು ಕರ್ಮನಿರ್ಣಯ ಗ್ರಂಥವನ್ನು ರಚಿಸಿದ ಸ್ಥಳ.
17. ಪ್ರಾಗ್ರ್ಯವಾಟ - ಕೊಡಿಪಾಡಿ ಜನಾರ್ದನ ದೇವಳ.
18. ಮದನೇಶ್ವರ - ಮಧೂರು ಮದನೇಶ್ವರ ಮಹಾಗಣಪತಿ ದೇವಳ.
19. ಅಡೂರು - ಮಹಾಲಿಂಗೇಶ್ವರ ದೇವಳ. ಇಲ್ಲಿ ಒಂದು ವಿಷ್ಣು ದೇವಳವನ್ನು ಆಚಾರ್ಯರು ಪ್ರತಿಷ್ಠಾಪಿಸಿದ್ದಾರೆ.
20. ಕಾವು ಮಠ - ಆಚಾರ್ಯರು ತ್ರಿವಿಕ್ರಮ ಪಂಡಿತರನ್ನು ವಾದದಲ್ಲಿ ಗೆದ್ದ ಕುರುಹಾಗಿ ಇಲ್ಲಿ ವಿಜಯಸ್ತಂಭವನ್ನು ನೆಡಲಾಗಿದೆ. ಆಚಾರ್ಯರು ಶ್ರೀ ಲಕ್ಷ್ಮೀನಾರಾಯಣ ವಿಗ್ರಹ ಹಾಗು ಪಂಚ ಮುದ್ರೆಗಳನ್ನು ತ್ರಿವಿಕ್ರಮಪಂಡಿತರಿಗೆ ಅನುಗ್ರಹಿಸಿದ್ದಾರೆ.
21. ಸಂದೊಳಿಗೆ ಪಾಡಿ ತಾಂತ್ಯ ಮಠ ಕುಕ್ಕಿಕಟ್ಟೆ.
22. ಕಣ್ವತೀರ್ಥ - ಇಲ್ಲಿಯ ಅಶ್ವತ್ಥ ಕಟ್ಟೆಯ ಕಮಾನಿನಲ್ಲಿ ಆಚಾರ್ಯರು ದ್ವಂದ್ವ ಮಠವನ್ನು ನಿರ್ಣಯಿಸಿದರು. ಪೇಜಾವರ ಮಠದ ಪರಂಪರೆಯಲ್ಲಿ ಬಂದ ಶ್ರೀ ವಿಜಯಧ್ವಜ ತೀರ್ಥರು ಗ್ರಂಥ ರಚನೆ ಮಾಡುವಾಗ ಮರದ ಎಲೆಗಳ ಸದ್ದನ್ನು ಕೈಯೆತ್ತಿ ನಿಲ್ಲಿಸಿದ ಮಹಾತ್ಮರು.
23. ಕಾರ್ಯೂರು ಮಠ.
24. ತೆಂಕನಿಡಿಯೂರು.
25. ಕೊಕ್ಕಡ ವೈದ್ಯನಾಥೇಶ್ವರ ದೇವಾಲಯ.
26. ಮಲ್ಪೆ ಕಡಲಕಿನಾರೆ ವಡಭಾಂಡೇಶ್ವರ- ಆಚಾರ್ಯರಿಗೆ ಕೃಷ್ಣ ಪ್ರತಿಮೆ ದೊರೆತ ಸ್ಥಳ. ಇಲ್ಲಿ ಬಲರಾಮನನ್ನು ಪ್ರತಿಷ್ಠಾಪಿಸಿದ್ದಾರೆ.
27. ಪಾರಂತಿಸುರ ಸದನ - ಆಚಾರ್ಯರು ಜೀರ್ಣಾವಸ್ಥೆಯಲ್ಲಿದ್ದ ಪಂಚ ಮುರಾರಿ ಸನ್ನಿಧಾನವನ್ನು ಜೀರ್ಣೋದ್ಧಾರ ಮಾಡಿ ಬಲಿ ಉತ್ಸವ ನಡೆಸಿದ ಸ್ಥಳ.
28. ತುಂಗಾತೀರ - ಆಚಾರ್ಯರು ಬಂಡೆಯನ್ನು ಹರಿಯುವ ನೀರಿಗೆ ಅಡ್ಡವಾಗಿಟ್ಟ ಸ್ಥಳ.
29. ಸೇತುತಿಲ(ಕಟ್ಟತ್ತಿಲ) - ಆಚಾರ್ಯರು ರಚಿಸಿರುವ ಸರ್ವಮೂಲ ಗ್ರಂಥಗಳ ಮೂಲಪ್ರತಿಗಳನ್ನು ಇಲ್ಲಿ ಭೂಗತ ಮಾಡಿ ಮೇಲೊಂದು ತೀರ್ಥವನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಪುಸ್ತಕ ತೀರ್ಥವೆಂದು ಹೆಸರು. ಮುಂದೆ ಧರ್ಮಖಿಲವಾದಾಗ  ಶ್ರೀ ವಿಷ್ಣುತೀರ್ಥಾಚಾರ್ಯರು ಕುಮಾರಪರ್ವತದಿಂದ ಬಂದು ಭೂಗತವಾಗಿರುವ ಸರ್ವಮೂಲಗ್ರಂಥಗಳನ್ನು ಹೊರ ತೆಗೆದು ಧರ್ಮವನ್ನು ಪುನಃ ಸ್ಥಾಪಿಸುತ್ತಾರೆ.
||ಶ್ರೀಮಧ್ವೇಶಾರ್ಪಣಮಸ್ತು || ಶ್ರೀ ಕೃಷ್ಣಾರ್ಪಣಮಸ್ತು||
***


Madhwa Navami Dates (check, some may be incorrect)
2019 Feb 14 Thursday
2020 Feb 03 Monday
2021 Feb 20 Sunday
2022 Feb 10 Thursday
2023 Jan 30 Monday
2024 Feb 18 Sunday
2025 Feb 06 Thursday
2026 Jan 27 Tuesday
2027 Feb 15 Monday
******
*******


No comments:

Post a Comment