SEARCH HERE

Monday, 1 April 2019

ಗೋವಿನ ಸೃಷ್ಟಿ birth of govu cow


ಗೋವಿನ ಸೃಷ್ಟಿ ಹೇಗಾಯಿತು ? - ಗೋವಿನ ಉತ್ಪತ್ತಿಯ ಬಗ್ಗೆ ಇರುವ ಕಥೆಯನ್ನು ‘ಶತಪಥ ಬ್ರಾಹ್ಮಣ’ ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು. ಆಗ ಅವನ ಮೂಗಿನೊಳಗಿಂದ ಹೂರಗೆ ಬಿದ್ದಶ್ವಾಸದಿಂದಎಲ್ಲೆಡೆ ಸುಗಂಧ ಹರಡಿತು.

ಆ ಶ್ವಾಸದೊಳಗಿಂದ ಒಂದು ಗೋವು ಜನ್ಮತಾಳಿತು. ಸುಗಂಧದೊಳಗಿಂದ ಜನ್ಮ ತಾಳಿದ್ದರಿಂದ ದಕ್ಷ ಪ್ರಜಾಪತಿಯು ಅದಕ್ಕೆ ‘ಸುರಭಿ’ ಎಂದು ಹೆಸರಿಟ್ಟನು. ಸುರಭಿಯಿಂದ ಅನೇಕ ಗೋವುಗಳು ಜನ್ಮತಾಳಿದವು. ಆದ್ದರಿಂದ ಸುರಭಿ ಇದು ಸಂಪೂರ್ಣ ಗೋವಂಶದ ಮಾತೆ, ಜನನಿ ಎಂದು ಪರಿಗಣಿಸಲ್ಪಡುತ್ತದೆ.

ಸುರಭಿಯು ಒಮ್ಮೆ ತಪಸ್ಸನ್ನು ಆರಂಭಿಸಿತು. ಬ್ರಹ್ಮದೇವನು ಆ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದನು ಮತ್ತುಸುರಭಿಗೆ ಅಮರತ್ವವನ್ನುನೀಡಿದನು. ಅಲ್ಲದೇ, ತ್ರಿಲೋಕಗಳ ಮೇಲಿರುವ ಒಂದು ಸ್ವರ್ಗವನ್ನೂ ಅದಕ್ಕೆ ಒಪ್ಪಿಸಿದನು; ಆ ಲೋಕವು ಗೋಲೋಕವೆಂದು ಕರೆಯಲ್ಪಡುತ್ತದೆ. ಸುರಭಿಯು ಈ ಗೋಲೋಕದಲ್ಲಿ ನಿತ್ಯ ನಿವಾಸ ಮಾಡುತ್ತದೆ ಹಾಗೂ ಅದರ ಮಗಳು, ‘ಸುಕನ್ಯಾ’ ಭೂಲೋಕದಲ್ಲಿ ಪೃಥ್ವಿಯ ಮೇಲೆ ಇರುತ್ತದೆ.

ಈ ಗೋಲೋಕದ ಅಧಿಪತಿ ‘ಗೋವಿಂದ’ ಅಂದರೆ’ಶ್ರೀಕೃಷ್ಣ’ನಾಗಿದ್ದಾನೆ.
**********

ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು 

🐂 ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ.

🐂 ಹಣೆಯ ತುದಿಯಲ್ಲಿ ಪಾರ್ವತಿಯ ವಾಸ.

🐂 ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ.

🐂 ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ.

🐂 ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ.

🐂 ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.

🐂 ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ.

🐂 ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ.

🐂 ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ.

🐂 ನಾಲಗೆಯಲ್ಲಿ ವರುಣನ ವಾಸ.

🐂 ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ.

🐂 ತುಟಿಗಳಲ್ಲಿ ಸಂಧ್ಯಾದೇವತೆ ವಾಸ.

🐂 ಕುತ್ತಿಗೆಯಲ್ಲಿ ಇಂದ್ರನ ವಾಸ.

🐂 ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ.

🐂 ತೊಡೆಯಲ್ಲಿ ಧರ್ಮ ದೇವತೆಯ ವಾಸ.

🐂 ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ.

🐂 ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ.

🐂 ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ.

🐂 ಬೆನ್ನಿನಲ್ಲಿ ರುದ್ರರ ವಾಸ.

🐂 ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.

🐂 ಬಾಲದಲ್ಲಿ ಸೋಮದೇವತೆಯ ವಾಸ.

🐂 ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ.

🐂 ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ.

🐂 ಗೋಮೂತ್ರದಲ್ಲಿ ಗಂಗೆಯ ವಾಸ.

🐂 ಗೋಮಯದಲ್ಲಿ ಯಮುನೆಯ ವಾಸ.

🐂 ಹಾಲಿನಲ್ಲಿ ಸರಸ್ವತಿಯ ವಾಸ.

🐂 ಮೊಸರಿನಲ್ಲಿ ನರ್ಮದೆಯ ವಾಸ.

🐂 ತುಪ್ಪದಲ್ಲಿ ಅಗ್ನಿಯ ವಾಸ.

🐂 ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ.

🐂 ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ.

🐂 ಉದರದಲ್ಲಿ ಪೃಥ್ವೀ ದೇವತೆಗಳ ವಾಸ.

🐂 ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ.

🐂ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ ಗೋವು.
*****


 ಕೆ.ಎಲ್.ಮೀಶಿ(ಮೂಡಲಗಿ)
ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!(ಮತ್ಯಾವ ಜೀವಸಂಕುಲದಲ್ಲೂ 
ಹೀಗಿಲ್ಲ)

★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರುಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!.

★ ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂಇರುವುದಿಲ್ಲ...

ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" 
ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು.  H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.

"ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು.  ಈ ಪೂಜೆ, ಹೋಮ, ಹವನ ಅಂದರೆ ಕೆಲವರಿಗೆ ಅಲರ್ಜಿ.  ಆದರೆ ಇಲ್ಲಿ ವೈಜ್ಞಾನಿಕವಾಗಿ ಹೇಳುವುದಾದರೆ ತಾಮ್ರ ಬಿಸಿಯಾದಾಗ ಮತ್ತುಸಗಣಿ, ತುಪ್ಪ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿದಾಗ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ..

ಅಮಿತ್ ವೈದ್ಯ, ಇವರು ಅಮೇರಿಕಾದಲ್ಲಿ ನೆಲೆ ನಿಂತ ಭಾರತದ ಉದ್ಯಮಿ. ಇವರ ತಂದೆ ತಾಯಿ ಇಬ್ಬರು ಕ್ಯಾನ್ಸರ್ ನಿಂದ ತೀರಿ ಹೋಗುತ್ತಾರೆ. ಕೆಲವು ಸಮಯದಲ್ಲಿ ಅಮಿತ್ ರಿಗೂ ಕ್ಯಾನ್ಸರ್ ಬರುತ್ತದೆ. ವೈದ್ಯರು 6 ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡುತ್ತಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಗುಜರಾತ್ ಗೆ ಬಂದ ಅಮಿತ್, ಒಬ್ಬರ ಪರಿಚಯದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ ಒಳಪಡುತ್ತಾರೆ. ಕೆಲವೇ ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು ಬೇರೆಯವರಂತೆ ಆರೋಗ್ಯವಾಗಿ ಬದುಕುತ್ತಿದ್ದಾರೆ. ಅವರ ಮಾಡಿದ ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".  ಇದೇ ಚಿಕಿತ್ಸೆ ಅನೇಕ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ.  "ಪಂಚಗವ್ಯ" ಅಂದರೆ ಗೋಮೂತ್ರ, ಗೋಸಗಣಿ, ಗೋಹಾಲು, ಗೋತುಪ್ಪ, ಗೋಮೊಸರು ಇವೆಲ್ಲದರ ಮಿಶ್ರಣದಿಂದ ತಯಾರಾಗೋ ಔಷಧಿ.  ಈ ಚಿಕಿತ್ಸೆಯಿಂದ ಗುಣಮುಖರಾದ ಅಮಿತ್ ವೈದ್ಯ ಅವರು ಒಂದು ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ. ಅ ಪುಸ್ತಕದ ಕನ್ನಡ ಹೆಸರು "ಒಂದು ದನ ನನ್ನ ಜೀವ ಹೇಗೆ ಕಾಪಾಡಿತು" ಎಂದು.  ದನವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ ಜನಕ್ಕೆ ಇದರ ಮಾಹಿತಿ ಇಲ್ಲ.ಎಷ್ಟೋ ಕಾಯಿಲೆಗಳಿಗೆ ಮೀನಿನಿಂದ ಔಷಧ ತಯಾರಿಸುತ್ತಾರೆ. ಮೀನು ತಿನ್ನದವರು ಔಷಧ ಮುಖಾಂತರ ಆದರು ತಿನ್ನಲೆ ಬೇಕು.  ಹಾಗೆಯೆ ವಿದೇಶಗಳಲ್ಲಿ ದನದ ಮೂತ್ರ, ಸಗಣಿ, ಮಾಂಸದಿಂದ ಔಷಧಿ ತಯಾರಿಸಿ ಭಾರತಕ್ಕೆ ಕಳಿಸುತ್ತಾರೆ.ಅದನ್ನು ನಾವು ತಿನ್ನುತ್ತೇವೆ.  ನಮ್ಮ ಮನೆಯಲ್ಲಿರುವ ದನದ ಬಗ್ಗೆ ನಮಗೆ ತಾತ್ಸಾರ.  ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ನಾವು ವಿದೇಶಿ ಕಂಪನಿಯವರ ದನದ ಮಾಂಸದ ಔಷಧಿ ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ.  ದನ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. ಚಿನ್ನದ ಮೊಟ್ಟೆ ಹಾಗೆ ದನಗಳು ನಮಗೆ ಚಿನ್ನದ ಜೀವನ ನಡೆಸಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಕೊಡುತ್ತದೆ. ಆದರೆ ನಾವು ಅತೀ ಆಸೆಯಿಂದ ಕೋಳಿಯ ಹೊಟ್ಟೆ ಸೀಳಿದ ಹಾಗೆ ಧನವನ್ನು ಕಡಿದು ತಿನ್ನುತ್ತೇವೆ. ಇದು ಬೇಕಾ? ಮನುಷ್ಯನ ದುರಾಸೆಗೆ ಕೊನೆ ಎಲ್ಲಿ.? ನಮ್ಮ ಮನೆಯಲ್ಲಿ ಮೆಡಿಕಲ್ ಸೆಂಟರ್ ಇಟ್ಟುಕೊಂಡು ಕಾಯಿಲೆ ಬಂದಾಗ ಇಡೀ ಪ್ರಪಂಚ ಸುತ್ತುತ್ತೇವೆ.  ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಅಂದರೆ ನಂಬಲೇಬೇಕು! !!!!!

ಎಬೋಲಾದಂತಹ ಹೊಸ ಖಾಯಿಲೆ ಇರಲಿ, ಇನ್ನು ಹೊಸದಾಗಿ ಹುಟ್ಟಿ ಯಾವುದೇ ಖಾಯಿಲೆ ಬರಲಿ ಅದಕ್ಕೆ ಗೋವಿನಿಂದ ಔಷಧಿ ಇದೆ.  ದನದ ಮೂತ್ರದ ಬಗ್ಗೆ ಬಹಳ ಬೇಗ ಎಚ್ಚೆತ್ತ ಅಮೇರಿಕಾ, ಭಾರತದಲ್ಲಿರುವ ಗೋಮೂತ್ರದ ಬಗ್ಗೆ "ಪೇಟೆಂಟ್" ಗೆ ಹೋರಾಟ ನಡೆಸುತ್ತಾರೆ.  ಪ್ರಪಂಚದ ಮುಂದುವರಿದ ಕೆಲವು ದೇಶಗಳ ಯುನಿವರ್ಸಿಟಿಗಳಲ್ಲಿ ಇದರ ಬಗ್ಗೆ ಒಂದು ವಿಷಯ ಇದೆ ಅಂದರೆ ನೀವು ನಂಬಲೇಬೇಕು.  ಆರೋಗ್ಯವಂತ 
ಸಮಾಜವಾಗಲೀ.....
ಸೂಚನೆ: ಕೇವಲ ದೇಸಿತಳಿ ದನಗಳಿಂದ ಮಾತ್ರ ಔಷಧಿ ತಯಾರಿಸುತ್ತಾರೆ.
ಇಲ್ಲಿ ಕೇವಲ ಸಾಂಕೇತಿಕವಾಗಿ ನೀಡಲಾಗಿದ್ದು, ಔಷಧಿ ಪಡೆಯುವವರು ಪರಿಣಿತರ ಸಲಹೆ ಪಡೆಯಲೇಬೇಕು.
"ಆರೋಗ್ಯವಂತ ಸಮಾಜಕ್ಕಾಗಿ ಪ್ರಕಟಣೆ"

**********

1 comment:

  1. This is really a excelelnt information . I will come back and write after I try the "ಅಗ್ನಿ ಹೋತ್ರ" at home, thanks!!

    ReplyDelete