SEARCH HERE

Thursday, 8 April 2021

ಧರ್ಮದ ಅರ್ಥ meaning of dharma

‘ಧರ್ಮ’ದ ಅರ್ಥ - “ಧೃಙ್ / ಧೃ ಅವಧ್ವಂಸನೇ / ಪರಿತ್ಯಾಗೇ”, “ಧೃಙ್ / ಧೃ ಅವಸ್ಥಾನೇ / ಸ್ಥಿತೌ / ಆಲಂಬನೇ”, “ಧೃಞ್ / ಧೃ ಧಾರಣೇ”— ಎಂಬಂತೆ ಧೃ ಎಂಬ ಸಂಸ್ಕೃತಮೂಲದ ಧಾತುವಿನಿಂದ “ಧರ್ಮಃ / ಧರ್ಮನ್ (ಪುಲ್ಲಿಂಗ— ಧರ್ಮಃ, ಧರ್ಮೌ, ಧರ್ಮಾಃ ಅಥವಾ ಧರ್ಮಾ, ಧರ್ಮಾಣೌ, ಧರ್ಮಾಣಃ) ಅಥವಾ ಧರ್ಮನ್ (ನಪುಂಸಕಲಿಂಗ— ಧರ್ಮ, ಧರ್ಮಣೀೀ, ಧರ್ಮಾಣಿ)” ಎಂಬ ಪದವು ಉಂಟಾಗಿದೆ. ಹೀಗಾಗಿ ಮಿತಿಮೀರಿದ ಅರಿಷಡ್ವರ್ಗಾದಿ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಅತಿಗಳ ವರ್ಜನ / ಪರಿತ್ಯಾಗ, ಜಗತ್ತಿನ ಮೂಲಾಧಾರ / ಆಶ್ರಯಸ್ಥಾನ / ಆಲಂಬನ / ಮೂಲಸ್ಥಿತಿ / ಮೂಲನೆಲೆ, ಲೋಕಗಳನ್ನೆಲ್ಲ ಧರಿಸಿರುವ ಧಾರಣಾಶಕ್ತಿ— ಎಂದು ಮುಂತಾಗಿ  ಇದರ ಅರ್ಥ. “ರಾಮೋ ವಿಗ್ರಹವಾನ್ ಧರ್ಮಃ” ಎಂಬುದರಿಂದ ಭಗವಂತನು ಹಾಗೂ ಸತ್ಪುರುಷರು ಧರ್ಮದ ಮೂರ್ತಸ್ವರೂಪ, ಸಾಕಾರಸ್ವರೂಪ. “ಧರತಿ ಲೋಕಾನ್, ಧ್ರಿಯತೇ ಪುಣ್ಯಾತ್ಮಭಿಃ ಇತಿ ವಾ ಧರ್ಮಃ”— ಲೋಕಗಳನ್ನು ಇದು ಧರಿಸುತ್ತದೆ ಅಥವಾ ಪುಣ್ಯಾತ್ಮರಿಂದ ಇದು ಧರಿಸಲ್ಪಡುತ್ತದೆ ಎಂಬುದರಿಂದ ಜಗದ್ಧಾರಣಾಶಕ್ತಿಯೇ ಧರ್ಮವೆನಿಸಿದೆ. ಆದ್ದರಿಂದ ಧರ್ಮಹ್ರಾಸದಿಂದ ಲೋಕಗಳು ಅಲ್ಲೋಲಕಲ್ಲೋಲವಾಗುವುವು. ಆಗ ಭಗವಂತನು ಅವತಾರವೆತ್ತಿ ಬಂದು ದುಷ್ಟಶಿಕ್ಷಣ-ಶಿಷ್ಟರಕ್ಷಣವನ್ನು ಮಾಡಿ ಧರ್ಮವನ್ನು ಪುನಃಸ್ಥಾಪಿಸಿ, ಧರ್ಮದ ಶಕ್ತಿಯಿಂದ ಲೋಕಗಳನ್ನುದ್ಧರಿಸುವನು. (ಭಗವದ್ಗೀತಾ ೪. ೭,೮— “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||”)

ಪಿತುಂ ನು ಸ್ತೋಷಂ ಮಹೀ ಧರ್ಮಾಣಂ ತವಿಷೀಮ್ | (ಋಗ್ವೇದ ೧.೧೮೭.೧, ಶುಕ್ಲಯಜುರ್ವೇದ ೩೪.೭),
ಇಮಮಂಜಸ್ಪಾಮುಭಯೇ ಅಕೃಣ್ವತ ಧರ್ಮಾಣಮಗ್ನಿಂ ವಿದಥಸ್ಯ ಸಾಧನಮ್ | (ಋಗ್ವೇದ ೧೦.೯೨.೨),
ತ್ವೇ ಧರ್ಮಾಣ ಆಸತೇ ಜುಹೂಭಿಃ ಸಿಂಚತೀರಿವ | (ಋಗ್ವೇದ ೧೦.೨೧.೩)
ಈ ಮೇಲಿನ ಮಂತ್ರಗಳಲ್ಲಿ ಧರ್ಮಶಬ್ದವು ಪುಲ್ಲಿಂಗದಲ್ಲಿದೆ. ಉಳಿದ ಕೆಲವೆಡೆ ನಪುಂಸಕಲಿಂಗದಲ್ಲೂ, ಬೇರೆಡೆ ಎರಡೂ ಲಿಂಗದಲ್ಲಿ ತಿಳಿಯಬಹುದಾದ ರೂಪದಲ್ಲೂ ಇದೆ. ಹೆಚ್ಚಿನ ಕಡೆ ಧರ್ಮಶಬ್ದವು ‘ಧಾರ್ಮಿಕ ವಿಧಿಗಳು’ ಅಥವಾ ‘ಧಾರ್ಮಿಕ ಕ್ರಿಯೆ-ಸಂಸ್ಕಾರಗಳು’— ಎಂಬರ್ಥಗಳಲ್ಲಿ ಪ್ರಯೋಗಿಸಲ್ಪಟ್ಟಿರುವುದು.
ಉದಾ— ತ್ರೀಣಿ ಪದಾ ವಿ ಚಕ್ರಮೇ ವಿಷ್ಣುರ್ಗೋಪಾ ಅದಾಭ್ಯಃ | ಅತೋ ಧರ್ಮಾಣಿ ಧಾರಯನ್ || (ಋಗ್ವೇದ ೧.೨೨.೧೮, ಅಥರ್ವವೇದ ೭.೨೭.೫)
ಸಮಿಧಾನಃ ಸಹಸ್ರಜಿದಗ್ನೇ ಧರ್ಮಾಣಿ ಪುಷ್ಯಸಿ | ದೇವಾನಾಂ ದೂತ ಉಕ್ಥ್ಯಃ || (ಋಗ್ವೇದ ೫.೨೬.೬)
ವಿಶಾಂ ರಾಜಾನಮದ್ಭುತಮಧ್ಯಕ್ಷಂ ಧರ್ಮಾಣಾಮಿಮಮ್ | ಅಗ್ನಿಮೀಳೇ ಸ ಉ ಶ್ರವತ್ || (ಋಗ್ವೇದ ೮.೪೩.೨೪)
ವೃಷಾ ಸೋಮ ದ್ಯುಮಾँ ಅಸಿ ವೃಷಾ ದೇವ ವೃಷವ್ರತಃ | ವೃಷಾ ಧರ್ಮಾಣಿ ದಧಿಷೇ | (ಋಗ್ವೇದ ೯.೬೪.೧)
ತಾನಿ ಧರ್ಮಾಣಿ ಪ್ರಥಮಾನ್ಯಾಸನ್ || (ಋಗ್ವೇದ ೧.೧೬೪.೪೩, ೫೦, ೧೦.೯೦.೧೬, ತೈತ್ತಿರೀಯಕೃಷ್ಣಯಜುರ್ವೇದ ೩.೫.೧೧.೫, ಶುಕ್ಲಯಜುರ್ವೇದ ೩೧.೧೬, ಅಥರ್ವವೇದ ೭.೫.೧)

ಪ್ರಥಮ ಹಾಗೂ ಸನಾತನ (ಪ್ರಾಚೀನ) ವಿಧಿಗಳೇ ಧರ್ಮವೆಂಬುದಕ್ಕೆ―
ಸಮಿಧ್ಯಮಾನಃ ಪ್ರಥಮಾನು ಧರ್ಮಾ | (ಋಗ್ವೇದ ೩.೧೭.೧)
ಅಥಾ ಧರ್ಮಾಣಿ ಸನತಾ ನ ದುದೂಷತ್ | (ಋಗ್ವೇದ ೩.೩.೧)
ಎಂಬೀ ಮಂತ್ರಗಳು ಪ್ರಮಾಣ.

ಇನ್ನು ಕೆಲವೆಡೆ ಧರ್ಮಕ್ಕೆ ‘ನಿಶ್ಚಿತ ನಿಯಮ (ವ್ಯವಸ್ಥೆ, ಸಿದ್ಧಾಂತ)’ ಅಥವಾ ‘ಆಚರಣ ನಿಯಮ’ ಎಂಬರ್ಥವಿದೆ.
ಉದಾ— ಆ ಪ್ರಾ ರಜಾಂಸಿ ದಿವ್ಯಾನಿ ಪಾರ್ಥಿವಾ ಶ್ಲೋಕಂ ದೇವಃ ಕೃಣುತೇ ಸ್ವಾಯ ಧರ್ಮಣೇ | (ಋಗ್ವೇದ ೪.೫೩.೩)
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | (ಋಗ್ವೇದ ೫.೬೩.೭)
ದ್ಯಾವಾಪೃಥಿವೀ ವರುಣಸ್ಯ ಧರ್ಮಣಾ ವಿಷ್ಕಭಿತೇ ಅಜರೇ ಭೂರಿರೇತಸಾ | (ಋಗ್ವೇದ ೬.೭೦.೧)
ಅಚಿತ್ತೀ ಯತ್ತವ ಧರ್ಮಾ ಯುಯೋಪಿಮ ಮಾ ನಸ್ತಸ್ಮಾದೇನಸೋ ದೇವ ರೀರಿಷಃ | (ಋಗ್ವೇದ ೭.೮೯.೫, ತೈತ್ತಿರೀಯಕೃಷ್ಣಯಜುರ್ವೇದ ೩.೪.೧೧.೧೯, ಅಥರ್ವವೇದ ೬.೫೧.೩)
ದ್ಯುತಾನಸ್ತ್ವಾ ಮಾರುತೋ ಮಿನೋತು ಮಿತ್ರಾವರುಣೌ ಧ್ರುವೇಣ ಧರ್ಮಣಾ | (ವಾಜಸನೇಯಿಶುಕ್ಲಯಜುರ್ವೇದ ೫.೨೭, ಕಾಣ್ವಶುಕ್ಲಯಜುರ್ವೇದ ೮.೫.೩೪)
ಮಿತ್ರಾವರುಣೌ ತ್ವೋತ್ತರತಃ ಪರಿಧತ್ತಾಂ ಧ್ರುವೇಣ ಧರ್ಮಣಾ ವಿಶ್ವಸ್ಯಾರಿಷ್ಟ್ಯೈ ಯಜಮಾನಸ್ಯ ಪರಿಧಿರಸ್ಯಾಗ್ನಿರಿಡ ಈಡಿತಃ | (ವಾಜಸನೇಯಿಶುಕ್ಲಯಜುರ್ವೇದ ೨.೩, ಕಾಣ್ವಶುಕ್ಲಯಜುರ್ವೇದ ೨.೮.೧)
ಅಗ್ನಿಃ ಪೃಥುರ್ಧರ್ಮಣಸ್ಪತಿರ್ಜುಷಾಣೋऽಅಗ್ನಿಃ ಪೃಥುರ್ಧರ್ಮಣಸ್ಪತಿರಾಜ್ಯಸ್ಯ ವೇತು ಸ್ವಾಹಾ | (ವಾಜಸನೇಯಿಶುಕ್ಲಯಜುರ್ವೇದ ೧೦.೨೯, ಕಾಣ್ವಶುಕ್ಲಯಜುರ್ವೇದ ೧೫.೭.೧೫)
...ಜಙ್ಘಾಭ್ಯಾಂ ಪದ್ಭ್ಯಾಂ ಧರ್ಮೋऽಸ್ಮಿ ವಿಶಿ ರಾಜಾ ಪ್ರತಿಷ್ಠಿತಃ | (ವಾಜಸನೇಯಿಶುಕ್ಲಯಜುರ್ವೇದ ೨೦.೯)

ಅಥರ್ವವೇದದಲ್ಲಿ ಧರ್ಮಶಬ್ದವು “ಧಾರ್ಮಿಕ ಕ್ರಿಯಾ-ಸಂಸ್ಕಾರ ಮಾಡುವುದರಿಂದ ಸಂಗ್ರಹವಾದ ಗುಣ” ಎಂಬರ್ಥದಲ್ಲಿ ಪ್ರಯುಕ್ತವಾಗಿದೆ— ಋತ ಸತ್ಯಂ ತಪೋ ರಾಷ್ಟ್ರಂ ಶ್ರಮೋ ಧರ್ಮಶ್ಚ ಕರ್ಮ ಚ | ಭೂತಂ ಭವಿಷ್ಯದುಚ್ಛಿಷ್ಟೇ ವೀರ್ಯಂ ಲಕ್ಷ್ಮೀರ್ಬಲಂ ಬಲೇ || (ಅಥರ್ವವೇದ ೯.೯.೧೭)
*****

No comments:

Post a Comment