SEARCH HERE

Thursday 8 April 2021

ನಾರಾಯಣ: ಅರ್ಥ narayanah meaning

श्री ನಾರಾಯಣಾಯ ನಮ:
ॐ नारायणाय नमः
ॐ श्री nArAyaNAya namah
******
ನಾರಾಯಣ: = ಮಹಾವಿಷ್ಣು, ಪರಮಾತ್ಮ, ಪರಬ್ರಹ್ಮ, ಅರಳಿಮರ, ನೀರು, ಮಹಾಪದ್ಮ, ಮೀನು, ಎತ್ತು, ಚಂದ್ರ, ಹಿಮಾಚಲ, ಸಮುದ್ರ, ಜಯ, ಮಂಗಳ, ಶುಭ, ಅಶ್ವಮೇಧಯಾಗ ಮಾಡಿದವನು, ಇತ್ಯಾದಿ.,

"ನಾರಸ್ಯ ಅಯನ: ನಾರಾಯಣ:"
ಸೃಷ್ಟಿಗೆ ಪೂರ್ವದಲ್ಲಿ ಪರಬ್ರಹ್ಮನಿಗೆ ನಾರವು (ಜಲ) ಅಯನ (ಆಶ್ರಯ) ವಾಗಿ ಇದ್ದುದರಿಂದ ಭಗವಂತನಿಗೆ "ನಾರಾಯಣ:" ಎಂದು ಹೆಸರು.

ನಿರ್ದೋಷವಾದ ವೇದಗಳಿಂದ ಉಂಟಾದ ಜ್ಞಾನಕ್ಕೆ ನಾರಾ - ಎಂದು ಹೆಸರು. ಅದಕ್ಕೆ ವಿಷಯನಾದವನು "ನಾರಾಯಣ:".

ನರ ಎಂದರೆ ಆತ್ಮನು. ಅದರಿಂದ ಹುಟ್ಟಿದ ಆಕಾಶಾದಿ ಕಾರ್ಯಗಳಿಗೆ 'ನಾರ' ಎಂದು ಹೇಳುತ್ತಾರೆ. ಆತ್ಮನು ಅವುಗಳನ್ನು ಕಾರಣರೂಪದಿಂದ ವ್ಯಾಪಿಸಿರುವನಾದ್ದರಿಂದ ಅವು ಆತ್ಮನ ವಾಸಸ್ಥಾನವಾಗಿ ಇವೆ. ಆದುದರಿಂದ ಭಗವಂತನಿಗೆ "ನಾರಾಯಣ:" ಎಂದು ಹೆಸರು.

ಭಗವಂತನು ಪ್ರಳಯಕಾಲದಲ್ಲಿ ಎಲ್ಲ 'ನಾರ'ಗಳ ಎಂದರೆ ಜೀವರುಗಳ ಆಶ್ರಯಸ್ಥಾನವಾಗುವನು. ಆದ್ದರಿಂದ ಅವನಿಗೆ "ನಾರಾಯಣ:" ಎಂದು ಕರೆಯುತ್ತಾರೆ.‌

ನರರಿಗೆಲ್ಲರಿಗೂ ಕೂಡ ಆಶ್ರಯ ಸ್ಥಾನನು;
ನೀರಿನ ಮೇಲೆ ಮಲಗಿರುವವನು;
ನರರಿಗೆಲ್ಲರಿಗೂ ಏಕಕಮಾತ್ರ ಗತಿಯಾಗಿರುವವನು;
ಸೃಷ್ಟಿಮೂಲವಾದ ಜಲವನ್ನು ಆಶ್ರವನ್ನಾಗಿ ಹೊಂದಿರುವವನು;
ಎಲ್ಲ ಕಾರ್ಯಗಳನ್ನೂ ಕಾರಣರೂಪದಿಂದ ವ್ಯಾಪಿಸಿರುವವನು;
ನರರಿಗೆ (ಜೀವಗಳಿಗೆ) ಪ್ರಳಯಕಾಲದಲ್ಲಿ ಆಶ್ರಯನಾಗಿ ಇರುವವನು;
ಜಲವನ್ನೇ ಆಶ್ರಯವನ್ನಾಗಿ ಹೊಂದಿರುವವನು;
ಗುಣಗಳಿಗೆ ಆಶ್ರಯನಾದವನು;
ಭಕ್ತಾದಿಗೆ, ಮುಕ್ತರಿಗೆ ಆಶ್ರಯನಾದವನು;
ವೇದಾದಿಗಳಿಂದ ಪ್ರತಿಪಾದಿಸಲ್ಪಡುವವನು;
ಒಳಗೂ ಮತ್ತು ಹೊರಗೂ ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು;
ಶ್ರವಣಮನನಾದಿಗಳಿಂದ ಜ್ಞೇಯನು;
ಚರಾಚರ ಜಗತ್ತನ್ನು ತನ್ನ ಉದರದಲ್ಲಿ ಧರಿಸಿದವನು;
ಆದುದರಿಂದ ಭಗವಂತನಿಗೆ "ನಾರಾಯಣ:" ಎಂದು ಹೆಸರು.

"ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ಸರಸೂನವ:|
ತಾ ಯದಸ್ಯಾಯನಂ ಪೂರ್ವಂ ತೇನ ನಾರಾಯಣ: ಸ್ಮೃತ:||".

"ಯಚ್ಚ ಕಿಂಚಿತ್ಜ್ಜಗತ್ಸರ್ವಂ ದೃಶ್ಯತೇ ಶ್ರೂಯತೇಪಿ ವಾ|
ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ: ಸ್ಥಿತ:||".

"ನಾರಂ ಅಯನ: ನಾರಾಯಣ:"

"ನಾರಂ ಅಯನಂ ಯಸ್ಸ್ಯ ನಾರಾಯಣ:"

nArAyaNah = mahAvishNu, BhagavAn.

Whatever object there is in the Universe that is seen or heard, nArAyaNa remains pervading all that, both inside and outside.

"narAjjAtAni tattvAni nArANIti tato vibhuh|
tAnyeva cAyanam tasya tens nArAyaNah smRth||".
The tattva-s are called 'nAra' since they sprung from 'nara' (Atman); BhagavAn is called "nArAyaNa" as they are HIS Abode.
******
ಶ್ರೀಕೃಷ್ಣಾರ್ಪಣಮಸ್ತು.

No comments:

Post a Comment