ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ.
( ಆಚಮನ ಮಾಡಿ )
ಆಚಮ್ಯ
ಕೇಶವಾಯ ಸ್ವಾಹಾ - - - - - - - - - - - - -
- - - - - - - - - - - - - - ಶ್ರೀಕೃಷ್ಣಾಯ ನಮಃ
[ ಶ್ರೀ ಗುರುಭ್ಯೋ ನಮಃ || ಹರಿಃ ಓಂ ||
ಶ್ರೀ ವೈಭವಲಕ್ಷ್ಮೀ ನಮಃ || ಲಕ್ಷ್ಮೀನಾರಾಯಣಾಭ್ಯಾಂ ನಮಃ ||
ಆಚಮ್ಯ ( ಎರಡಾವರ್ತಿ ನೀರನ್ನು ಸೇವಿಸಬೇಕು )
ಕೇಶವಾಯ ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ ||
ನಾಮಸ್ಮರಣೆ
ಗೋವಿಂದಾಯ ನಮಃ | ವಿಷ್ಣುವೇ ನಮಃ |
ಮಧೂಸೂಧನಾಯ ನಮಃ | ತ್ರಿವಿಕ್ರಮಾಯ ನಮಃ |
ವಾಮನಾಯ ನಮಃ | ಶ್ರೀಧರಾಯ ನಮಃ |
ಹೃಶೀಕೇಶಾಯ ನಮಃ | ಪದ್ಮನಾಭಾಯ ನಮಃ |
ದಾಮೋದರಾಯ ನಮಃ | ಸಂಕರ್ಷಣಾಯ ನಮಃ |
ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ |
ಅನಿರುದ್ದಾಯ ನಮಃ | ಪುರುಷೋತ್ತಮಾಯ ನಮಃ |
ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ |
ಅಚ್ಯುತಾಯ ನಮಃ | ಜನಾರ್ಧನಾಯ ನಮಃ |
ಉಪೇಂದ್ರಾಯ ನಮಃ | ಹರಯೇ ನಮಃ |
ಶ್ರೀ ಕೃಷ್ಣಾಯ ನಮಃ || (ಕೈ ಜೋಡಿಸಿ ನಮಸ್ಕರಿಸುವುದು)
ಶ್ರೀ ಗುರುಭ್ಯೋ ನಮಃ | ಶ್ರೀ ಮನ್ಮಹಾಗಣಪತಯೇ ನಮಃ |
ಕುಲದೇವತಾಯೈ ನಮಃ | ಇಷ್ಟದೇವತಾಭ್ಯೋ ನಮಃ |
ಅವಿಘ್ನಮಸ್ತು | ಶಾಂತಿರಸ್ತು | ]
ಪ್ರಾಣಾಯಾಮ
ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋ ಜ್ಯೋತಿರಸೋಮೃತಂ ಬ್ರಹ್ಮ ಭುರ್ಭುವಸ್ವರೋಮ್ ||
ಸಂಕಲ್ಪ
ಶುಭೇ ಶೋಭನೇ ಮುಹೂರ್ಥೆ _ _ _ ಸಂವತ್ಸರಸ್ಯ _ _ _ ಅಯನೆ _ _ _ ಋತೌ _ _ _ ಮಾಸಸ್ಯ _ _ _ ಪಕ್ಷೇ _ _ _ ತಿಥೌ _ _ _ ವಾಸರೇ, ಅಸ್ಮಾಕಂ ( ಖಾಲಿ ಜಾಗದಲ್ಲಿ ಪೂಜಾ ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರಗಳನ್ನು ಹೇಳಿ )
ಸಹಕುಟುಂಬಾನಾಂಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಸಿದ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ ಸಿದ್ದ್ಯರ್ಥಂ ಮನೋಕಾಮನಾ ಸಿದ್ದ್ಯರ್ಥಂ ಶ್ರೀ ಮಹಾಲಕ್ಷ್ಮೀ ದೇವತಾಮುದ್ದಿಶ್ಯ ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
( ಮಂತ್ರಾಕ್ಷತೆಗೆ ನೀರು ಹಾಕಿ ತಟ್ಟೆಗೆ ಹಾಕಿ )
ಧ್ಯಾನಂ
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು..( ಆಚಮನ ಮಾಡಿ )
ಆಚಮ್ಯ
ಕೇಶವಾಯ ಸ್ವಾಹಾ - - - - - - - - - - - - -
- - - - - - - - - - - - - - ಶ್ರೀಕೃಷ್ಣಾಯ ನಮಃ
[ ಶ್ರೀ ಗುರುಭ್ಯೋ ನಮಃ || ಹರಿಃ ಓಂ ||
ಶ್ರೀ ವೈಭವಲಕ್ಷ್ಮೀ ನಮಃ || ಲಕ್ಷ್ಮೀನಾರಾಯಣಾಭ್ಯಾಂ ನಮಃ ||
ಆಚಮ್ಯ ( ಎರಡಾವರ್ತಿ ನೀರನ್ನು ಸೇವಿಸಬೇಕು )
ಕೇಶವಾಯ ಸ್ವಾಹಾ | ನಾರಾಯಣಾಯ ಸ್ವಾಹಾ | ಮಾಧವಾಯ ಸ್ವಾಹಾ ||
ನಾಮಸ್ಮರಣೆ
ಗೋವಿಂದಾಯ ನಮಃ | ವಿಷ್ಣುವೇ ನಮಃ |
ಮಧೂಸೂಧನಾಯ ನಮಃ | ತ್ರಿವಿಕ್ರಮಾಯ ನಮಃ |
ವಾಮನಾಯ ನಮಃ | ಶ್ರೀಧರಾಯ ನಮಃ |
ಹೃಶೀಕೇಶಾಯ ನಮಃ | ಪದ್ಮನಾಭಾಯ ನಮಃ |
ದಾಮೋದರಾಯ ನಮಃ | ಸಂಕರ್ಷಣಾಯ ನಮಃ |
ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ |
ಅನಿರುದ್ದಾಯ ನಮಃ | ಪುರುಷೋತ್ತಮಾಯ ನಮಃ |
ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ |
ಅಚ್ಯುತಾಯ ನಮಃ | ಜನಾರ್ಧನಾಯ ನಮಃ |
ಉಪೇಂದ್ರಾಯ ನಮಃ | ಹರಯೇ ನಮಃ |
ಶ್ರೀ ಕೃಷ್ಣಾಯ ನಮಃ || (ಕೈ ಜೋಡಿಸಿ ನಮಸ್ಕರಿಸುವುದು)
ಶ್ರೀ ಗುರುಭ್ಯೋ ನಮಃ | ಶ್ರೀ ಮನ್ಮಹಾಗಣಪತಯೇ ನಮಃ |
ಕುಲದೇವತಾಯೈ ನಮಃ | ಇಷ್ಟದೇವತಾಭ್ಯೋ ನಮಃ |
ಅವಿಘ್ನಮಸ್ತು | ಶಾಂತಿರಸ್ತು | ]
ಪ್ರಾಣಾಯಾಮ
ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋ ಜ್ಯೋತಿರಸೋಮೃತಂ ಬ್ರಹ್ಮ ಭುರ್ಭುವಸ್ವರೋಮ್ ||
ಸಂಕಲ್ಪ
ಶುಭೇ ಶೋಭನೇ ಮುಹೂರ್ಥೆ _ _ _ ಸಂವತ್ಸರಸ್ಯ _ _ _ ಅಯನೆ _ _ _ ಋತೌ _ _ _ ಮಾಸಸ್ಯ _ _ _ ಪಕ್ಷೇ _ _ _ ತಿಥೌ _ _ _ ವಾಸರೇ, ಅಸ್ಮಾಕಂ ( ಖಾಲಿ ಜಾಗದಲ್ಲಿ ಪೂಜಾ ದಿನದ ಸಂವತ್ಸರ, ಅಯನ, ಋತು, ಮಾಸ, ಪಕ್ಷ, ತಿಥಿ, ವಾರಗಳನ್ನು ಹೇಳಿ )
ಸಹಕುಟುಂಬಾನಾಂಕ್ಷೇಮ ಸ್ಥೈರ್ಯ ವಿಜಯಾಯುರಾರೋಗ್ಯ ಸಿದ್ಯರ್ಥಂ ಸಮಸ್ತ ಸನ್ಮಂಗಳಾವಾಪ್ತ್ಯರ್ಥಂ ಸೌಭಾಗ್ಯ ಸಿದ್ದ್ಯರ್ಥಂ ಮನೋಕಾಮನಾ ಸಿದ್ದ್ಯರ್ಥಂ ಶ್ರೀ ಮಹಾಲಕ್ಷ್ಮೀ ದೇವತಾಮುದ್ದಿಶ್ಯ ಶ್ರೀ ಮಹಾಲಕ್ಷ್ಮೀ ಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
( ಮಂತ್ರಾಕ್ಷತೆಗೆ ನೀರು ಹಾಕಿ ತಟ್ಟೆಗೆ ಹಾಕಿ )
ಧ್ಯಾನಂ
ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ* 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:
1 ಆವಾಹನೆ -
ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2 ಆಸನ-
ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3 ಪಾದ್ಯ -
ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4 ಅರ್ಘ್ಯ -
ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5 ಆಚಮನ -
ಕುಡಿಯುವುದಕ್ಕೆ ನೀರು ಕೊಡುವುದು.
6 ಸ್ನಾನ -
ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7 ವಸ್ತ್ರ -
ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು. ಜೊತೆಗೆ ಉಪವೀತ (ಜನಿವಾರ), ಆಭರಣವನ್ನು(ಬಳೆ-ಬಿಚ್ಚೋಲೆ )ಸಮರ್ಪಿಸುವುದು.
8 ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9 ಪುಷ್ಪ ಮಾಲ -
ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10 ಅರ್ಚನೆ/ಅಷ್ಟೋತ್ತರ -
ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11 ಧೂಪ -
ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12 ದೀಪ -
ದೀಪ ಸಮರ್ಪಣೆ ಮಾಡುವುದು.
13 ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
14 ನೀರಾಜನ -
ಕರ್ಪುರದಿಂದ ಮಂಗಳಾರತಿ ಮಾಡುವುದು.
15 ನಮಸ್ಕಾರ -
ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16 ಪ್ರಾರ್ಥನೆ
ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ.
ಪೂಜೆಯ ಮೂಲ ತತ್ವ :
ದೇವರಿಗೆ ವಂದನೆ ಧನ್ಯವಾದ ಅರ್ಪಿಸುವದು. ಅದಕ್ಕಾಗಿ ದೇವತೆಯನ್ನು, ಅಥವಾ ದೇವತೆಗಳನ್ನು ಮನೆಯ ದೇವ ಮಂಟಪದಲ್ಲಿರುವ ಮೂರ್ತಿಗಳಿಗೆ ಆಹ್ವಾನಿಸಿ ಆ ದೇವತೆಗಳನ್ನು ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಉಪಚಾರ ಮಾಡುವಂತೆ ಉಪಚರಿಸಿ ಬೀಳ್ಕೊಡುವದು. ಉದಾ: ಆವಾಹನೆ -ಅಥಿತಿ ಸ್ವಾಗತ; ಆಸನ- ಕುಳಿತುಕೊಳ್ಳಲು ಆಸನ ಕೊಡುವುದು; ಅರ್ಘ್ಯ ಮತ್ತು ಪಾದ್ಯ- ಕೈಕಾಲು ತೊಳೆಯಲು ನೀರು; ಆಚಮನ- ಕುಡಿಯಲು ನೀರು ಕೊಡುವುದು; ಅಭಿಷೇಕ -ಸ್ನಾನ; ಗಂಧ ,ಹೂ - ಅಲಂಕಾರ; ಧೂಪ, ದೀಪ - ಪರಿಮಳ ಸಿಂಚನ, ಗೌರವ ಅರ್ಪಣ; ನೈವೇದ್ಯ - ಭೋಜನ, ತಾಂಬೂಲ; ಪ್ರಸನ್ನಾರ್ಘ್ಯ - ಕೈತೊಳೆದ ನಂತರ ಕೈಗೆ ಸುವಾಸನೆಯ ನೀರು; ಆರತಿ - ಗೌರವ ಸಮರ್ಪಣೆ; ಪ್ರಾರ್ಥನೆ - ನಮಗೆ ಬೇಕಾದುದನ್ನು ಕೇಳುವುದು. ನಂತರ ಬೀಳ್ಕೊಡಿಗೆ. ಇದರಲ್ಲಿ ಹೆಚ್ಚಿನ ವಿಶೇಷವು ದೇವತೆಗಳಿಗೆ ತೋರಿಸುವ ಭಕ್ತಿಯಲ್ಲಿದೆ. ಆದರೆ ಭಗವದ್ಗೀತೆಯಲ್ಲಿ ಭಗವಂತನನ್ನು ಸರ್ವಾಂತರ್ಯಾಮಿಯೆಂದು ಅರ್ಥಮಾಡಿಕೊಂಡು ದ್ಯಾನ ಮಾಡುವುದೇ ಶ್ರೇಷ್ಠವೆಂದು ಹೇಳಿದೆ.
ಶ್ರೀ ಕೃಷ್ಣಾರ್ಪಣಮಸ್ತು
*********
No comments:
Post a Comment