Graha sameeksha pravachanadalli, Ramanathacharyaru ullekha madida, Grahagalannu olisikolluvudakkagi madabekada kartavyagallannolagonda aparoopada shloka.
ಯಾವ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಸರಳ ಪರಿಹಾರ..
#ಅಶ್ವಿನಿ ...
ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ವಿದ್ಯೆಕ್ಕಿಂತ ಬುದ್ದಿಮಟ್ಟ ಜಾಸ್ತಿ , ಇವರು ಇನ್ನೊಬ್ಬರ ಸ್ನೇಹ ಬೇಗ ಸಂಪಾದಿಸುತ್ತಾರೆ... ಈ ನಕ್ಷತ್ರದಅಧಿಪತಿ ಕೇತು .... ಕುಲದೇವರ ಆರಾಧನೆ ನಿತ್ಯ ಮಾಡಿ
#ಭರಣಿ
ಭರಣಿ ನಕ್ಷತ್ರದವರಿಗೆ ನಾವು ಸಾಮಾನ್ಯ ವಾಗಿ ಹೇಳೊದು ಭರಣಿ ನಕ್ಷತ್ರ ಧರಣಿ ಆಳುತ್ತಾರೆ ಅಂತ ಇವರು ಏನೇ ಕೆಲಸ ಮಾಡಲಿ ಹತ್ತು ಸಲ ಯೊಚನೆ ಮಾಡುತ್ತಾರೆ... ಈ ನಕ್ಷತ್ರದ ಅಧಿಪತಿ ಶುಕ್ರ...... ದುರ್ಗಾದೇವಿ ಆರಾಧನೆ ಮಾಡಬೇಕು
#ಕೃತ್ತಿಕಾ
ಇವರು ಒಳ್ಳೆಯ ಕೆಲಸಗಾರರು ,ಯಾವದೇ ಕೆಲಸಮಾಡಲಿ ಆ ಕೆಲಸಕ್ಕೆ ನ್ಯಾಯ ಒದಗಿಸುವರು..ಆದರೆ ಅಹಂ ಜಾಸ್ತಿ.. ಈ ನಕ್ಷತ್ರದ ಅಧಿಪತಿ ರವಿ .... ಆದಿತ್ಯ ಹೃದಯ ಪಠಣೆ ಒಳ್ಳೆಯದು
#ರೋಹಿಣಿ
ಈ ನಕ್ಷತ್ರ ದವರು ಉತ್ತಮ ಸ್ವಭಾವ , ಅತಿಥಿ ಸತ್ಕಾರ ಮನೋಭಾವದವರು , ಹಲವಾರು ಅಭಿರುಚಿ ಉಳ್ಳವರು... ಈ ನಕ್ಷತ್ರದ ಅಧಿಪತಿ ಚಂದ್ರ .....ಶಿವನಿಗೆ ರುದ್ರಾಭಿಷೇಕ ಮಾಡುವದು ಒಳ್ಳೆಯದು
#ಮೃಗಶಿರಾ
ಇವರಿಗೆ ಒಳ್ಳೆಯ ಬುದ್ಧಿವಂತಿಕೆ ಆದರೆ ಉಪಯೋಗಿಸುವದು ಕಡಿಮೆ ಆಲಸಿಗಳು . ಭೋಗ ಪ್ರೀಯರು... ಈ ನಕ್ಷತ್ರದ ಅಧಿಪತಿ ಕುಜ ... ಗಣಪತಿ ಆರಾಧನೆ , ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದು
#ಆರ್ದ್ರಾ
ಇವರು ಗೊಂದಲ ಮನಸ್ಥಿತಿ ಇರುವವರು.. ಬೇಗನೆ ನಿರ್ದಾರ ತೆಗೆದುಕೊಳ್ಳುವದಿಲ್ಲ . ಆದರೆ ಒಂದು ಸಲ ತೆಗೆದುಕೊಂಡ ನಿರ್ದಾರಕ್ಕೆ ಬದ್ಧರಾಗಿರುತ್ತಾರೆ... ಈ ನಕ್ಷತ್ರ ದ ಅಧಿಪತಿ ರಾಹು ....ಸುಬ್ರಹ್ಮಣ್ಯ ಸ್ತೋತ್ರ ನಿತ್ಯಹೇಳಿ
#ಪುನರ್ವಸು
ಒಳ್ಳೆಯ ಸ್ವಭಾವ . ದೈವ ಭಕ್ತಿ ಎಲ್ಲರೊಂದಿಗೆ ಹಂಚಿ ತಿನ್ನುವ ಪ್ರವೃತ್ತಿ ಯವರು .. ಈ ನಕ್ಷತ್ರದ ಅಧಿಪತಿ ಗುರು ದತ್ತಾತ್ರೇಯ , ಗುರುಚರಿತ್ರೆ ಪಾರಾಯಣ
#ಪುಷ್ಯ
ಇವರು ರಾಜಕೀಯ ಇಷ್ಟ ಪಡುವವರು , ಜನ ಸೇವೆಯಲ್ಲಿ ಇರಲು ಇಷ್ಟಪಡುವರು . ಹಿರಿಯರಿಗೆ ಅಧಿಕ ಗೌರವ ಕೊಡುವವರು ... ಈ ನಕ್ಷತ್ರದ ಅಧಿಪತಿ ಶನಿ ... ಹೆಚ್ಚಾಗಿ ನೀವು ಕೈಕಾಲು ಇಲ್ಲದವರಿಗೆ.ತಿನಿಸನ್ನು ಕೊಡಿಸಿ
#ಆಶ್ಲೇಷಾ
ಈ ನಕ್ಷತ್ರದವರು ಆಡಂಬರ ಪ್ರೀಯರು , ಮತ್ತು ಅಲಂಕಾರಕ್ಕೆ ಮನ ಸೋಲುವವರು . ಸೌಂದರ್ಯ ಪ್ರೀಯರು... ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ
#ಮಖಾ
ಈ ನಕ್ಷತ್ರದವರು ಸ್ವಲ್ಪ ಹೆಚ್ಚೇ ಸ್ವಾಭಿಮಾನಿಗಳು , ಯಾರ ಹತ್ತಿರಾನೂ ಸಹಾಯ ಕೇಳುವದು ಕಡಿಮೆ , ಈ ನಕ್ಷತ್ರದ ಅಧಿಪತಿ ಕೇತು ಕುಲ ದೇವರ ಆರಾಧನೆ
#ಪುಬ್ಬಾ
ಈ ನಕ್ಷತ್ರದವರು ಸ್ವಭಾವತಃ ಹಾಸ್ಯ ಪ್ರೀಯರು ಸ್ವಲ್ಪ ಸಿಟ್ಟು ಕಡಿಮೆ ತಾಳ್ಮೆ ಜಾಸ್ತಿ .... ಈ ನಕ್ಷತ್ರದ ಅಧಿಪತಿ ಶುಕ್ರ ಮಹಾಲಕ್ಷಿ ಅಷ್ಟೋತ್ತರ ಪಾರಾಯಣ
#ಉತ್ತರಾ
ಈ ನಕ್ಷತ್ರದವರ ವ್ಯವಹಾರಿಕವಾಗಿ ತುಂಬಾ ಚತುರರು ..ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವವರು... ಈ ನಕ್ಷತ್ರದ ಅಧಿಪತಿ ರವಿ ತಾಂಬೂಲ ದಾನ ಮಾಡುವದು ಒಳ್ಳೆಯದು
#ಹಸ್ತ
ಈ ನಕ್ಷತ್ರದವರು ವಿಲಾಸಿ ಪ್ರೀಯರು , ಸ್ವಲ್ಪ ಸಿಟ್ಟು ಜಾಸ್ತಿ . ಆದರೆ ಹೃದಯವಂತರು .. ಈ ನಕ್ಷತ್ರದ ಅಧಿಪತಿ ಚಂದ್ರ...... ಶಿವನಿಗೆ ಬಿಲ್ವ ಪತ್ರೆ ಅರ್ಚನೆ
#ಚಿತ್ತ
ಈ ನಕ್ಷತ್ರದಲ್ಲಿ ಜನಿಸಿರುವವರು ಸಮಚಿತ್ತ ಉಳ್ಳವರು , ಕವಿಗಳು , ಸಾಹಿತ್ಯ ಅದ್ಯಯನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರು..... ಈ ನಕ್ಷತ್ರದ ಅಧಿಪತಿ ಕುಜ ಅನ್ನದಾನ ಮಾಡುವಲ್ಲಿ ಹೋಗಿ ಕೈಲಾದ ಧನ ಸಹಾಯ ಹಾಗೂ ಸಹಾಯ ಮಾಡಿ
#ಸ್ವಾತಿ
ಸ್ವಾತಿ ನಕ್ಷತ್ರದವರು ಮೃದು ಸ್ವಭಾವದವರು , ಬೇಗನೆ ಇನ್ನೊಬ್ಬರನ್ನು ನಂಬುವವರು . ಪರರಿಗೆ ಸಹಾಯ ಮಾಡುವವರು .. ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಆರಾಧನೆ
#ವಿಶಾಖ
ಈ ನಕ್ಷತ್ರದವರು ಬುದ್ದಿವಂತರು ಜೊತೆಗೆ ಹಠದ ಸ್ವಭಾವ , ಯಾವದೇ ಕೆಲಸಕ್ಕೂ ತಮ್ಮ ಶ್ರಮದ ಬಗ್ಗೆ ಯೋಚಿಸುವದಿಲ್ಲ... ಈ ನಕ್ಷತ್ರದ ಅಧಿಪತಿ ಗುರು .. ರಾಯರ ಆರಾಧನೆ ಮಾಡಿ
#ಅನೂರಾಧ
ಈ ನಕ್ಷತ್ರದವರು ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾಗುವವರು , ಒಂದು ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವರು..
ಈ ನಕ್ಷತ್ರದ ಅಧಿಪತಿ.... ಈ ನಕ್ಷತ್ರದ ಅಧಿಪತಿ ಶನಿ
ಬೇಳಿಗ್ಗೆ ತೈಲಾಭ್ಯಾಂಗ ಸ್ನಾನ ಮಾಡಿ
#ಜೇಷ್ಠ
ಜಗಳತನದ ಜಾಯಮಾನವಲ್ಲದವರು , ನಿರ್ಮಲ ಸ್ವಭಾವ...ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ..
#ಮೂಲಾ
ಈ ನಕ್ಷತ್ರದವರು ಕಲಾ ಪ್ರೀಯರು , ಎಲ್ಲರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವವರು ಆದರೆ ಇವರಿಗೆ ಆರೋಗ್ಯ ದ ತೊಂದರೆ ಜಾಸ್ತಿ ..ಈ ನಕ್ಷತ್ರದ ಅಧಿಪತಿ ಕೇತು ಸಾದ್ಯವಾದಾಗ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡಿ
#ಪೂರ್ವಾಷಾಢ
ವಿನಯವಂತರು ಮಿತಬಾಷಿಗಳು ಬೇರೆಯವರ ದುಃಖಕ್ಕೆ ಬೇಗ ಸ್ಪಂದಿಸುವವರು ... ಈ ನಕ್ಷತ್ರದ ಅಧಿಪತಿ ಶುಕ್ರ ಲಕ್ಷೀ ಅಷ್ಟೋತ್ತರ ಪಾರಾಯಣ ಮಾಡಿ
#ಉತ್ತರಾಷಾಢ
ಸಮಯ ಚಿತ್ತದಿಂದ ನಡೆದುಕೊಳ್ಳುವವರು , ಅತೀಯಾದ ವಿನಯ ಸೌಮ್ಯ ಮಾತು .... ಈ ನಕ್ಷತ್ರದ ಅಧಿಪತಿ ರವಿ ಆದಿತ್ಯ ಹೃದಯ ಪಾರಾಯಣ ಮಾಡಿ
#ಶ್ರವಣ
ಈ ನಕ್ಷತ್ರದವರು ತಮ್ಮ ತಪ್ಪನ್ನ ಬೇಗ ಒಪ್ಪಿಕೊಳ್ಳುವ ಮನೋಭಾವ , ಇನ್ನೋಬ್ಬರಿಗೆ ನೋವಿಗೆ ಬೇಗ ಸ್ಪಂದಿಸುವ ಮತ್ತು ಪರರಿಗೆ ಉಪಕಾರಿ... ಈ ನಕ್ಷತ್ರದ ಅಧಿಪತಿ ಚಂದ್ರ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.
#ಧನಿಷ್ಠ
ಈ ನಕ್ಷತ್ರದವರು ಸ್ವಲ್ಪ ಕಠೋರ ಮಾತು , ಮಾತಿನಲ್ಲೂ ನಿಪುಣರು.. ಈ ನಕ್ಷತ್ರದ ಅಧಿಪತಿ ಕುಜ ... ಮಂಗಳ ಚಂಡಿಕೆ ಸ್ತೋತ್ರ ಹೇಳಿ
#ಶತಭಿಷಾ
ಈ ನಕ್ಷತ್ರದವರು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಚತುರರು....ಈ ನಕ್ಷತ್ರದ ಅಧಿಪತಿ ರಾಹು ಸುಬ್ರಹ್ಮಣ್ಯ ಸ್ತೋತ್ರ ಪಾರಾಯಣ ಮಾಡಿ
#ಪೂರ್ವಾಭಾದ್ರ
ಈ ನಕ್ಷತ್ರದವರಿಗೆ ಶ್ರದ್ಧೆ ಜಾಸ್ತಿ ಯಾವದೇ ವಿಷಯ ಸರಿಯಾಗಿ ತಿಳಿದುಕಳ್ಳದೇ ಆಳವಾಗಿ ಅದ್ಯಯನ ಮಾಡದೇ ಒಪ್ಪಿಕೊಳ್ಳುವದಿಲ್ಲ ..ಈ ನಕ್ಷತ್ರದ ಅಧಿಪತಿ ಗುರು.... ಗುರು ಚರಿತ್ರೆ ಪಾರಾಯಣ ಮಾಡಿ
#ಉತ್ತರಾಭಾದ್ರ
ಗತ್ತಿನ ಮಾತಿನವರು ಮಾತಿನಲ್ಲಿ ಚಾತುರ್ಯ ಉಳ್ಳವರು ಮಿತ ಬಾಷಿಗರು ..ಈ ನಕ್ಷತ್ರದ ಅಧಿಪತಿ ಶನಿ ಶಿವನಿಗೆ ಬುತ್ತಿ ಪೂಜೆ ಮಾಡಿಸಿ ಸಾದ್ಯವಾದಾಗ
#ರೇವತಿ
ಈ ನಕ್ಷತ್ರದವರು ಸ್ವಭಾವತಃ ಒಳ್ಳೆಯವರು , ಆದ್ಯಾತ್ಮದ ಒಲವು ಹೊಂದಿರುವವರು , ದೇವರನ್ನು ಅಪಾರ ನಂಬುವವರು ಆದರೆ ಸ್ವಲ್ಪ ಅಹಂ ಹೊಂದಿರುವವರು.. ಈ ನಕ್ಷತ್ರದ ಅಧಿಪತಿ ಬುಧ ವಿಷ್ಣು ಸಹಸ್ರನಾಮ ಪಾರಾಯಣೆ ಮಾಡಿ , ..
***
ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ.
ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.
ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.
ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ.
ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ.
ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ.
ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ (ಕಾಷ್ಯಪ ಮಹರ್ಷಿಯ ಪತ್ನಿ - ದೇವತೆ ತಾಯಿ) ಯಾಗಿದ್ದು, ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.
ಪುಷ್ಯ ನಕ್ಷತ್ರದ ಅಧಿದೇವತೆ ಬೃಹಸ್ಪತಿಯಾಗಿದ್ದು, ಪುಷ್ಯ ನಕ್ಷತ್ರದ ದಿವಸ ಬೃಹಸ್ಪತಿಯನ್ನು (ಗುರು) ಪೂಜಿಸಿದರೆ ಹೆಚ್ಚಿನ ವ್ಯವಹಾರಿಕ ಜ್ಞಾನ, ಜಾಣ್ಮೆ ಅಭಿವೃದ್ದಿ ಉಂಟಾಗುತ್ತದೆ.
ಆಶ್ಲೇಷ ನಕ್ಷತ್ರದ ಅಧಿದೇವತೆ ನಾಗನಾಗಿದ್ದು, ಆಶ್ಲೇಷ ನಕ್ಷತ್ರದ ದಿವಸ ನಾಗ (ಸರ್ಪ) ನನ್ನು ಪೂಜಿಸಿದರೆ, ನಾಗದೋಷ ನಿವಾರಣೆಯಾಗುತ್ತದೆ.
ಮಖ ನಕ್ಷತ್ರದ ಅಧಿದೇವತೆ ಪಿತೃ ದೇವತೆಯಾಗಿದ್ದು, ಮಖ ನಕ್ಷತ್ರದ ದಿವಸ ಪಿತೃದೇವತೆಯನ್ನು ಪೂಜಿಸಿದರೆ ಧನ, ಸಂತಾನ, ಹಸುಕರುಗಳು ವೃದ್ದಿಯಾಗುತ್ತದೆ.
ಪೂರ್ವಪಲ್ಗುಣಿ ನಕ್ಷತ್ರದ ಅಧಿದೇವತೆ ಪುಶ ಮಹರ್ಷಿಯಾಗಿದ್ದು, ಪೂರ್ವಪಲ್ಗುಣಿ ನಕ್ಷತ್ರದ ದಿವಸ ಪುಶ ಮಹರ್ಷಿಯನ್ನು ಪೂಜಿಸಿದರೆ, ಅಪೇಕ್ಷಣಿಯ ವಧು/ವರ ಸಿಗುತ್ತಾರೆ. ಧನ ವೃದ್ದಿ ಹಾಗು ಚಟುವಟಿಕೆ ಉಳ್ಳವರಾಗುತ್ತಾರೆ.
ಉತ್ತರಾಪಲ್ಗುಣಿ ನಕ್ಷತ್ರದ ಅಧಿದೇವತೆ ಆರ್ಯಮ ದೇವತೆಯಾಗಿದ್ದು, ಉತ್ತರಾಪಲ್ಗುಣಿ ನಕ್ಷತ್ರದ ದಿವಸ ಆರ್ಯಮ ದೇವತೆಯನ್ನು ಪೂಜಿಸಿದರೆ, ಈ ದೇವತೆ ವಿವಾಹ, ಕರಾರುಗಳ ಪೋಷಕ ಹಾಗೂ ಶೌರ್ಯ ಮತ್ತು ದೀನರ ರಕ್ಷಣೆ ಉಂಟಾಗುತ್ತದೆ.
ಹಸ್ತ ನಕ್ಷತ್ರದ ಅಧಿದೇವತೆ ಸೂರ್ಯನಾಗಿದ್ದು, ಹಸ್ತ ನಕ್ಷತ್ರದ ದಿವಸ ಸೂರ್ಯನನ್ನು ಗಂಧ ಹಾಗೂ ಪುಪ್ಪಗಳಿಂದ ಪೂಜಿಸಿದರೆ, ಧನ, ಅಭಿವೃದ್ದಿಯಾಗುತ್ತದೆ ನೆಮ್ಮದಿ ಉಂಟಾಗುತ್ತದೆ.
ಚಿತ್ತಾ ನಕ್ಷತ್ರದ ಅಧಿದೇವತೆ ತ್ವಷ್ಟ ದೇವತೆಯಾಗಿದ್ದು, ಚಿತ್ತಾ ನಕ್ಷತ್ರದ ದಿವಸ ತ್ವಷ್ಟ ದೇವತೆಯನ್ನು ಪೂಜಿಸಿದರೆ, ಆರೋಗ್ಯ, ಜ್ಞಾನ, ಆಹಾರ ಧಾನ್ಯ ಅಭಿವೃದ್ದಿ ಉಂಟಾಗುತ್ತದೆ.
ಸ್ವಾತಿ ನಕ್ಷತ್ರದ ಅಧಿಪತಿ ವಾಯುದೇವನಾಗಿದ್ದು, ಸ್ವಾತಿ ನಕ್ಷತ್ರದ ದಿವಸ ವಾಯುದೇವನನ್ನು ಪೂಜಿಸಿದರೆ, ದೈವಿಕ ಶಕ್ಷಿಯನ್ನು ನೀಡುತ್ತಾನೆ.
ವಿಶಾಖ ನಕ್ಷತ್ರದ ಅಧಿದೇವತೆ ಇಂದ್ರಾಗ್ನಿಯಾಗಿದ್ದು, ವಿಶಾಖನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದಪೂಜಿಸಿದರೆ ಧನ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.
ಅನುರಾಧ ನಕ್ಷತ್ರ ಅಧಿದೇವತೆ ಮಿತ್ರದೇವನಾಗಿದ್ದು, ಅನುರಾಧ ನಕ್ಷತ್ರ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ಧೀರ್ಘಾಯುವಾಗುತ್ತಾರೆ.
ಜೇಷ್ಟ ನಕ್ಷತ್ರದ ಅಧಿದೇವತೆ ಇಂದ್ರನಾಗಿದ್ದು, ಜೇಷ್ಟ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ.
ಮೂಲ ನಕ್ಷತ್ರದ ಅಧಿದೇವತೆ ಶಿನಿರುತಿಷಿ ದೇವತೆಯಾಗಿದ್ದು, ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ.
ಪೂರ್ವಾಷಾಡ ನಕ್ಷತ್ರದ ಅಧಿದೇವತೆ ಜಲದೇವತೆಯಾಗಿದ್ದು, ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ.
ಉತ್ತರಾಷಾಡ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು, ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ.
ಶ್ರವಣ ನಕ್ಷತ್ರದ ಅಧಿದೇವತೆ ವಿಷ್ಣುವಾಗಿದ್ದು, ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ದಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ.
ಧನಿಷ್ಟ ನಕ್ಷತ್ರದ ಅಧಿದೇವತೆ ವಸುದೇವತೆಯಾಗಿದ್ದು, ಧನಿಷ್ಟ ನಕ್ಷತ್ರದ ದಿವಸ ವಸುದೇವತೆಯನ್ನು ಗಂಧ, ಪುಪ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ.
ಶತಭೀಷ ನಕ್ಷತ್ರದ ಅಧಿದೇವತೆ ವರುಣ ದೇವತೆಯಾಗಿದ್ದು, ಶತಬೀಷ್ ನಕ್ಷತ್ರದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ದಿಯಾಗುತ್ತದೆ.
ಪೂರ್ವಾಬಾದ್ರ ನಕ್ಷತ್ರದ ಅಧಿದೇವತೆ ಅಜನ್ಮ (ರುದ್ರನ ಇನ್ನೊಂದು ಹೆಸರು) ನಾಗಿದ್ದು, ಪೂರ್ವಾಬಾದ್ರ ನಕ್ಷತ್ರದ ದಿವಸ ಅಜನ್ಮನನ್ನು ಪೂಜಿಸಿದರೆ, ಶ್ರದ್ದಾವಂತ, ಧರ್ಮನಿಷ್ಟನಾಗುತ್ತಾನೆ.
ಉತ್ತರಾಬಾದ್ರ ನಕ್ಷತ್ರದ ಅಧಿದೇವತೆ ಅಹಿರ್ಬುದ್ನ (ರುದ್ರ ನ ಮತ್ತೊಂದು ಹೆಸರು) ನಾಗಿದ್ದು, ಉತ್ತರಾಬಾದ್ರ ನಕ್ಷತ್ರದಿವಸ ಅಹಿರ್ಬುದ್ನ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ತ್ರ ನಿಪುಣನಾಗುತ್ತಾನೆ.
ರೇವತಿ ನಕ್ಷತ್ರದ ಅಧಿದೇವತೆ ಪೂಷ ದೇವತೆ (ಸೂರ್ಯನ ಇನ್ನೊಂದು ಹೆಸರು) ಯಾಗಿದ್ದು, ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು, ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ.
********
No comments:
Post a Comment