SEARCH HERE

Monday 1 April 2019

ಯುಗಾದಿ yugadi ugadi lunar new year chaitra shukla pratipada



read


Gudhi Padwa Gudi Padva Ugadi New Hindu New Year 

India is bestowed with rich natural and cultural diversity. Communities in different regions of India have proudly preserved their cultural identity, manifested through the variety of their costumes, food, rites, rituals and festivals. Gudhi Padwa that marks the beginning of the New Year is one of the prominent festivals in India, especially celebrated in Maharashtra, Andhra Pradesh and Karnataka. 

The word Padwa comes from the Prakrit word whose Sanskrit equivalent is Prathama which stands for the first day of the bright phase of the moon called Pratipada in Sanskrit. This day carries special importance for Hindus and people celebrate it with a heightened sense of and joy and abundance.

According to Brahma Purana, an ancient Indian text, this is the day on which Brahma created the universe after the deluge, and time began to tick from this day forth. In mythological terms, this festival is celebrated to commemorate the coronation of Lord Ramachandra on his return to Ayodhya after slaying Ravana. Gudhi Padwa also commemorates the commencement of the Shalivahan calendar named after the emperor Shalivahan who vanquished the Huns, his enemies. Gudhi Padwa is one among the three-and-a-half auspicious days (muhurtas) in the Indian lunar calendar. The special feature is that every moment being auspicious, people can initiate new ventures on this days.

On Gudhi Padwa, a Gudhi which is believed to be Brahma’s flag (Brahmadhwaj), is hoisted outside every house as a symbol of victory and joy. In Maharashtra, it is reminiscent of the valiant Marathas returning home from their successful expeditions of the war. Since the symbol of victory is always held high, so is the Gudhi. Gudhi is a bright green or yellow silk cloth adorned with brocade tied to the tip of a long bamboo pole over which gathi (sugar crystals), neem leaves, a twig of mango leaves and a garland of red flowers is tied. All these things symbolize nature’s bounty in spring. A silver or copper pot is placed on the raised Gudhi in the inverted position. This Gudhi is then hoisted outside the house, in a window, terrace, or a high place so that everybody can see it. Gudhi is also believed to ward off evil, invite prosperity and good luck to the house.

On the festive day, courtyards in village houses are swept clean and plastered with fresh cow dung. Even in the city, people take the time out to do some spring cleaning. Women and girls work on intricate rangoli designs on their doorsteps, the vibrant colours mirroring the burst of happiness and joy associated with the spring. Traditionally, families are supposed to begin the festivities by eating the bitter leaves of the neem tree. Usually, a paste of neem leaves is prepared and mixed with coriander seeds, jaggery and tamarind. All the members of the family consume this paste, which is believed to purify the blood and strengthen the body’s immune system against diseases. There is also a belief behind this tradition that if you start a new year with a bitter taste, the year ahead brings you happiness and sweet success.

India is a predominantly agrarian society. Celebrations and festivals are often linked to the turn of seasons and to the sowing and reaping of the crops. This day marks the end of one agricultural harvest and the beginning of a new one. It is the time when the heat of the sun starts intensifying. Farmers start ploughing the soil on this day. As a result the soil below is churned up. The subtle soil particles get heated in the sun and the ability of the soil to germinate the seeds increases manifold. Towards the first day of the month of Chaitra, the sun assumes a position above the point of intersection of the equator and the meridians and the spring season commences. It is because nature is vibrant with life in the spring. It is for this reason that Gudhi Padwa is also celebrated to welcome the colourful spring which awakens the spirit in each living thing and rejuvenates the beauty of nature. Though mythological and historical references to this festival hold some significance, its close link with the perpetual cycle of seasons is more important. Ancient Indian tradition which always experienced oneness with the nature was aware of the three stages of life - Utpatti, Sthitee and Laya. It means that there is a cycle of birth, state and destruction in the universe. Destruction is not the end of life but just a temporary stage which ultimately leads to new creation.

This ancient Indian philosophy has its roots in the rotation of seasons. After the fall, spring again brings the promise of life. New foliage on the trees, colourful blossom of various flowers, ripening of mangoes and other seasonal fruits, chirping of birds and butterflies let our spirits to soar high. Gudhi Padwa is thus a celebration of life. It is a reminder by nature itself to live and let live in a harmonious relationship.
Pandit. Yogesh Girish Ghanekar
*********

ಯುಗಾದಿ

ಯುಗಾದಿ ದಿನ ಮಂಗಲ ಸ್ನಾನಕ್ಕೆ ಪ್ರಾಶಸ್ತ್ಯ , ಹೊಸವರ್ಷದ ಮೊದಲನೇ ದಿನ, ಫಾಲ್ಗುಣ ಕೃಷ್ಣ ಪ್ರತಿಪತ್ ಹೋಳಿ ಹುಣ್ಣಿಮೆ ದಿನ, ಕಾರ್ತಿಕ ಶುಕ್ಲ ಪ್ರತಿಪತ್ ದೀಪಾವಳಿ ಪಾಡ್ಯ, ಮತ್ತು ನರಕ ಚತುರ್ದಶಿ ಇವಿಷ್ಟು ತಿಥಿಗಳಲ್ಲಿ ನರಕವಾಸ ತಪ್ಪಿಸಲು ತೈಲಾಭ್ಯಂಗ ಮಾಡಬೇಕು ( ಎಣ್ಣೆ , ಅರಿಶಿಣ ಹಚ್ಚಿಕೊಂಡು)
ಹಬ್ಬದ ದಿನ ಎಣ್ಣೆ ಶಾಸ್ತ್ರ ಹೇಗೆ ಮಾಡಬೇಕು ಅಂತ ಹೇಳಿ ಕೊಡುವೆ ಕೆಲವರಿಗೆ ಗೊತ್ತಿರುವುದಿಲ್ಲ ಅದಕ್ಕೆ....
ಎಣ್ಣೆ ಶಾಸ್ತ್ರ ಅಂದರೆ..
ಒಂದು ಬಟ್ಟಲಲ್ಲಿ ಕೊಬ್ಬರಿ ಎಣ್ಣೆ ಹಾಕಿ ಉಗುರು ಬೆಚ್ಚಗೆ ಕಾಯಿಸಿ ಅದಕ್ಕೆ ಸುವಾಸನೆ ಎಣ್ಣೆ  ಸೇರಿಸಿ ನಂತರ 
ಪೂರ್ವ ದಿಕ್ಕಿಗೆ ಮುಖಮಾಡಿ ಮಣೆ ಹಾಕಿ ಮಣೆಯ ಮುಂದೆ ಎರಡು ಎಳೆ  ರಂಗವಲ್ಲಿ ಹಾಕಿ  , ಮಣೆಯ ಮೇಲೆ ಮಕ್ಕಳನ್ನು ಕೂಡಿಸಿ ಹಣೆಗೆ ಕುಂಕುಮ ಹಚ್ಚಿ .. ನಂತರ ಉಂಗುರ ಬೆರಳಿನಿಂದ ಕೊಬ್ಬರಿ ಎಣ್ಣೆ ಯಲ್ಲಿ ಅದ್ದಿ   ಮಣೆಯ ಮೇಲೆ  ಹರಿಸಿ ಬಟ್ಟುಗಳನಿಡಬೇಕು ...
ಆಯುಷ್ಯವಂತನಾಗು (ಚಿರಂಜೀವಿಯಾಗು) , ವಿದ್ಯಾವಂತ ನಾಗು  ಧನವಂತನಾಗು ,ಧಾನ್ಯವಂತನಾಗು , ಕಿರ್ತಿವಂತನಾಗು , ಹೀಗೆ  ಐದು ಬೆಟ್ಟುಗಳನ್ನಿಟ್ಟು ಹರಿಸಿ ನಂತರ ನೆತ್ತಿಯ ಮೇಲೆ  ಐದು ಬೆಟ್ಟುಗಳಿಂದ  ಮೂರು ಬಾರಿ ಎಣ್ಣೆ ಹಾಕುತ್ತಾ ಹರಿಸಬೇಕು. ನಂತರ  ಬಲಗಡೆ ತಲೆಗೆ , ಎಡಗಡೆ ಹೀಗೆ ಎಣ್ಣೆಯನ್ನು ಹಚ್ಚಿ, ಕೊನೆಯ ದಾಗಿ  ಚಿಟಿಕೆ ಅರಿಷಿಣ ಹಾಕಿ ಎಣ್ಣೆ ಮುಖ ಕೈಗಳಿಗೆ ಹಚ್ಚಿ ಹರಿಸಬೇಕು ... ಪ್ರತಿಯೊಬ್ಬ ತಾಯಂದಿರು ಹಬ್ಬದ ದಿನ ಮಕ್ಕಳಿಗೆ ಈ ರೀತಿ ಹಚ್ಚುವುದರಿಂದ ಮಕ್ಕಳ ಅಭ್ಯುದಯ ಆಗುತ್ತದೆ.....ನೆನಪಿರಲಿ
ಈ ರೀತಿ  ಆದಿನ ಮನೆಮಂದಿಯೆಲ್ಲ ಎಣ್ಣೆ ಶಾಸ್ತ್ರ ಮಾಡಿದ ಮೇಲೆ  ದೇವರಿಗೆ ಹಿರಿಯರಿಗೆ ನಮಸ್ಕರಿಸಿ...
ನಿಂಬಪತ್ರ ಸೇವನೆ  (ನಿಂಬಪತ್ರ ಅಂದರೆ ಬೇವಿನ ಎಲೆ ) ಮಾಡಬೇಕು ದೇವರಿಗೂ ಷೋಡಶೋಪಚಾರ ಪೂಜೆ ಮಾಡಿ ನಿಂಬಪತ್ರದ ಹೂ ಏರಿಸಬೇಕು , ವಿಧಿಯಿಂದ ತಯಾರಿಸಿದ ನಿಂಬಪತ್ರದ ಚೂರ್ಣವನ್ನು ನೈವೇದ್ಯ ಮಾಡಿ ನಂತರ ಭಕ್ಷ್ಯ ಭೋಜ್ಯಗಳ ನೈವೇದ್ಯ ಮಾಡಬೇಕು...ಆ ದಿನ ನಾನಾ ತರಹದ ಪಕ್ವಾನ್ನ ಅಡುಗೆ ಮಾಡಿ ಸಂತೋಷದಿಂದ ಕಾಲ ಕಳೆಯಬೇಕು... ತಪ್ಪಿಯೂ ಆ ದಿನ ಕೆಟ್ಟ ಮಾತು ಆಡಬೇಡಿ ,ಕಣ್ಣಿರು ಹಾಕುವುದು ಜಗಳವಾಡುವುದು ಮಾಡಬೇಡಿ...ಸಂಜೆ ಪಂಚಾಂಗ ಶ್ರವಣ ಮಾಡಬೇಕು... ಅಕಸ್ಮಾತ್ತಾಗಿ ನಾನು ಪಂಚಾಂಗ ಶ್ರವಣದ  ವಿಡಿಯೋ ಮಾಡಿದ್ರೆ ಖಂಡಿತಾ ಹಾಕುವೆ..
ಇನ್ನು  ನಿಂಬಪತ್ರ  ಚೂರ್ಣವನ್ನು ಹೇಗೆ ತಯಾರಿಸಬೇಕು ಕೇಳಿ ಹೇಳುತ್ತೇನೆ
ಯುಗಾದಿ ದಿನ ನಿಂಬಪತ್ರ (ಬೇವು) ಸೇವನೆಯಿಂದ , ಸೌಖ್ಯವನ್ನು ,ರೋಗ ಶಾಂತಿಯನ್ನು, ವಿದ್ಯಾ ಆಯುಷ ಐಶ್ವರ್ಯಗಳನ್ನು ಪಡೆಯುತ್ತಾನೆ..
ಮಾಡುವ ವಿಧಾನ
ಅತ್ಯಂತ ಕೋಮಲವಾದ  ಬೇವಿನ ಎಲೆಗಳನ್ನು ಹೂವು ಸಹಿತವಾಗಿ ತಂದು ಬೀದಿಯಿಂದ ಚೂರ್ಣ ಮಾಡಿ ಅರೆದು ಮೆಣಸು, ಇಂಗು, ಸೈಂದಲವಣ, ಅಜವಾನ, ಹುಣಸೆಹಣ್ಣು, ಬೆಲ್ಲ ಇವುಗಳನ್ನೆಲ್ಲ ಕೊಡಿಸಿ ಚೂರ್ಣ ಮಾಡಿ ರೋಗ ಶಾಂತಿಯ ಸಲುವಾಗಿ ಭಕ್ಷಿಸಬೇಕು... ಕೆಳಗಿನ ಮಂತ್ರ ಹೇಳಿ  ಸ್ವೀಕರಿಸಬೇಕು..

#ನಿಂಬಪತ್ರಪ್ರಾಶನ_ಮಂತ್ರ

ಶತಾಯುರ್ವಜ್ರ ದೇಹತ್ವಸರ್ವಸಂಪತ್ಪ್ರದಂ ತಥಾ l
ಸರ್ವಾರಿಷ್ಟ ಹರಂ ಕುರ್ವೇ ನಿಂಬಪತ್ರಾಶನಂ ಶುಭಮ್ ll


ಸಂಜೆ ಶುಕ್ಲ ಪ್ರತಿಪದ ದಿನ ಚಂದ್ರ ದರ್ಶನ ಮಾಡಬೇಕು..  ಆದರೆ ಆದಿನ ಸಂಜೆ ಪಾಡ್ಯ ತಿಥಿ ಮದ್ಯಾಹ್ನ ಕ್ಕೆ ಮುಗಿಯುವದರಿಂದ ನಾಳೆ ಮಂಗಳವಾರ  ಸಂಜೆ ತಪ್ಪದೆ ಚಂದ್ರ ದರ್ಶನ ಮಾಡಿ ಯಾವುದೇ ಕಾರಣಕ್ಕೂ ಬಿಡಬೇಡಿ... ಆಯುಷ್ಯ ವೃದ್ದಿ ಆಗುತ್ತೆ , ಮಾನಸಿಕ ತೊಂದರೆ ದೂರವಾಗುತ್ತದೆ ಚಂದ್ರದರ್ಶನದಿಂದ...
***********


ಯುಗಾದಿ
ಯುಗಾದಿ ವಿಶೇಷ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
 ಹೊಸ  ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ..

ಯುಗಾದಿ ಕಣ್ಣಿಗೆ ತಂಪು
ಕಿವಿಗೆ ಕೋಗಿಲೆ ಗಾನದ ಇಂಪು

ಪೌರಾಣಿಕ ಹಿನ್ನೆಲೆ...

ಈ ಸುಂದರ ಸೃಷ್ಟಿಯನ್ನು ಬ್ರಹ್ಮದೇವ ಸೃಷ್ಟಿಸಲು ಆರಂಭಿಸಿದ್ದು  ಶುಕ್ಲ ಪಕ್ಷದ ಚೈತ್ರ ಪ್ರತಿಪದೆಯ ಮಂಗಳಕರವಾದ ದಿನದಂದು...ಶ್ರೀರಾಮನು ರಾವಣಾಸುರನನ್ನು ಸಂಹರಿಸಿ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗಿ ರಾಮರಾಜ್ಯವನ್ನು
 ಸ್ಥಾಪಿಸಿದ ದಿನ....
ಶ್ರೀವಿಷ್ಣು ಕೃತಯುಗದಲ್ಲಿ ಮತ್ಸ್ಯಾವತಾರ ತಾಳಿದ ದಿನ...
ರಾಜಾ ವಿಕ್ರಮಾದಿತ್ಯ ಶಾಲಿವಾಹನನ್ನು ಕೊಂದು ಹೊಸ ಶಕೆ ಶಾಲಿವಾಹನ ಶಕೆ ಆರಂಭಸಿದ ದಿನ....

ಸಾಮಾಜಿಕ ಮಹತ್ವ,..

 ನಮ್ಮ ಪೂರ್ವಜರು ಪ್ರತಿಯೊಂದು ಹಬ್ಬ ವಿಶೇಷತೆಯಂದು ಅಚರಿಸಿದರು
ವಿದೇಶಿಯರು ಜನೇವರಿಯಲ್ಲಿ ಹೊಸವರ್ಷ ಆಚರಿಸುವಾಗ ಪ್ರಕೃತಿಯ ಒಡಲು ನಿಸ್ತೇಜ ವಾಗಿದ್ದರೆ,  ನಾವು ಹೊಸ ವರ್ಷಾಚರಣೆ ಮಾಡುವಾಗ ಪ್ರಕೃತಿ ಕೂಡ ಹೊಸ ಉಡುಗೆ ತೊಟ್ಟ ಹಾಗೇ ಎಲ್ಲ ಕಡೆಗೆ ಚಿಗುರು ಹಸಿರು ಹೂವು ಹಣ್ಣುಗಳಿಂದ ಸುಂದರವಾಗಿರುತ್ತದೆ...

ಬೇವು ಬೆಲ್ಲ ಏಕೆ ಸೇವಿಸಬೇಕು?

ಬದುಕಿನ ...ಸುಖ ದುಃಖ ,ನಗು ಅಳು..ನೋವು ನಲಿವು, ಸಿಹಿ ಕಹಿ, ಎಲ್ಲವನ್ನೂ ಸಮನಾಗಿ 
ಸ್ವಿಕರಿಸಬೇಕೆಂಬ ಸಂದೇಶ. 

ವೈಜ್ಞಾನಿಕ  ಹಿನ್ನಲೆ...

ಬ್ಯಾಸಗಿ ದಿವಸಕ ಬೇವಿನ ಮರ ತಂಪ.,..ಎಂಬ ಜನಪದರ ಮಾತಿನಂತೆ ಬೇವಿನಲ್ಲಿ ಅನೇಕ ಔಷಧೀಯ ಗುಣಗಳಿವೆ...ಸಂಸ್ಕೃತದ ಒಂದು ಉಕ್ತಿಯಂತೆ ಬೇವನ್ನು ತಿಂದು ವಜ್ರಕಾಯರಾಗಿ ಎಂದು ಹೇಳಲಾಗಿದೆ. ಹೀಗೆ ಯುಗಾದಿಯಂದು ಚಂದ್ರ ದರ್ಶನ ಮಾಡಿ, ಪಂಚಾಂಗ ಪಠಣ ಮಾಡುತ್ತಿದ್ಧರು...
*************


ಯುಗಾದಿ

ನಮ್ಮ ಪೂರ್ವಜರು ಎಷ್ಟು  ಯೋಜನಾಬದ್ಧವಾಗಿ ಹಬ್ಬಗಳನ್ನು ಆಚರಣೆಗೆ ತಂದಿದ್ದಾರೆ ಅಂದರೆ ಯುಗಾದಿಯ ಹಿಂದಿನ ಹಬ್ಬ  ಹೋಳಿ ಹುಣ್ಣಿಮೆ ಕಾಮದಹನ ಅಂದರೆ ವರ್ಷದ ಕೊನೆಯ ಹಬ್ಬ .  ಕೊನೆಯ ಹಬ್ಬವನ್ನು ಹೇಗೆ ಆಚರಿಸಿದರೆಂದರೆ  ಕಾಮದಹನ ಮಾಡುವದರ ಮೂಲಕ ಅಂದರೆ ನಮ್ಮ ಕೆಟ್ಟ ವಿಚಾರಗಳು ,  ದ್ವೇಷ ಅಸೂಯೆ , ನಮ್ಮ ನೋವು ಎಲ್ಲ ವನ್ನೂ ಇಲ್ಲಿಗೆ ಕೊನೆಯದಾಗಲಿ ಅಂತ  ಕಾಮ  ದಹನ ಅಂದರೆ ಕೆಟ್ಟ ಕಾಮನೆಗಳು ಎಲ್ಲವೂ ಸುಟ್ಟು ಬೂದಿಯಾಗಲಿ ... ಮುಂದೆ ಬರುತ್ತಿರುವದು ಹೊಸ ವರುಷ  , ಹೊಸ ಹುರುಪಿನೊಂದಿಗೆ ಬರಮಾಡಿಕೊಳ್ಳೊಣ   ಹಾಗಾದರೆ ಈ ಯುಗಾದಿ ಹಬ್ಬ ಹೇಗೆ ಆಚರಿಸಬೇಕು ಬನ್ನಿ ತಿಳಿಸಿಕೊಡುತ್ತೇನೆ ಸರಳ ರೀತಿಯಲ್ಲಿ.

ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಿದೆ ಜಗತ್ತು ಸೃಷ್ಟಿ ಆದದ್ದು  ಚೈತ್ರ ಶುದ್ಧ ಪಾಡ್ಯಮಿಯಂದು ಆದ್ದರಿಂದ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದಿನ .‌
ಶುರುವಾದದ್ದು ಶುಕ್ಲಪಕ್ಷದ ಪಾಡ್ಯಮಿ ಸೂರ್ಯೋದಯಕ್ಕೆ  ಗ್ರಹ ಋತು ತಿಂಗಳುಗಳನ್ನು  ಸಮಸ್ತ ಲೋಕವನ್ನು ಬ್ರಹ್ಮ ಸೃಷ್ಟಿಸಿದ...
ಯುಗಾದಿಯ  ಈ  ಪವಿತ್ರ ಮೂರು ದಿನಗಳು  ನರಕವಾಸ ತಪ್ಪಿಸಲು  ಎಣ್ಣೆ ಹಚ್ಚಿಕೊಂಡು ಸ್ನಾನ ಮೋಡಬೇಕು...
ಈ ಮೂರು ದಿನದಲ್ಲಿ ಯಾವ ಶುಭಕಾರ್ಯ ಬೇಕಾದರೂ ಮಾಡಬಹುದು ...
ಯುಗಾದಿಯ ದಿನ ಎಣ್ಣೆಸ್ನಾನವನ್ನು ಮಾಡಿ ..ಮನೆಯ ಅಂಗಳದಲ್ಲಿ ರಂಗವಲ್ಲಿ ಬಿಡಿಸಿ ಮನೆಗೆ ತೋರಣಕಟ್ಟಿ  ಒಪ್ಪ ಓರಣವಾಗಿ ಮನೆಮಂದಿಯೆಲ್ಲ ಹೊಸಬಟ್ಟೆ ತೊಟ್ಟು ಒಳ್ಳೆಯ ಮಾತನಾಡುತ್ತಾ  ನಿಂಬಪತ್ರವನ್ನು ಸೇವನೆ ಮಾಡಬೇಕು...ನಂತರ ದೇವರ ದರ್ಶನ  ಪಂಚಾಂಗ ಶ್ರವಣ ಮಾಡಬೇಕು...

ಹೇಗೆ ತಯಾರು ಮಾಡಬೇಕು ಅಂದರೆ..‌‌
 ಎಳೆಯ ನಿಂಬಪತ್ರ ( ಬೇವಿನ ಎಲೆ) ಮತ್ತು ಹೂಗಳನ್ನು  ಅರೆದು  ಮೇಣಸು , ಇಂಗು  ,ಸೈಂಧಲವಣ ,ಅಜವಾನ , ಹುಣಸೆಹಣ್ಣು , ಬೆಲ್ಲ ಸೇರಿಸಿ ದೇವರಿಗೆ ನೈವೇದ್ಯ ಮಾಡಿ  ಎಲ್ಲರೂ  ಸೇವಿಸಬೇಕು.. ಈ ನಿಂಬಪತ್ರ ಸೇವಿಸಿದರೆ  ರೋಗಶಾಂತಿ  ವಿದ್ಯಾ , ಸೌಖ್ಯವನ್ನು ಪಡೆಯುತ್ತಾರೆ...

ಸಂಜೆ ಪಂಚಾಂಗ ಶ್ರವಣ  ಯಾಕೆ ಮಾಡಬೇಕು ಅಂದರೆ
ಒಳ್ಳೆಯ ತಿಥಿಗಳಲ್ಲಿ ಆರಂಭಿಸಿದ ಕಾರ್ಯ ಗಳು ಯಾವಾಗಲೂ ಯಶಸ್ಸನ್ನು ತಂದು ಕೊಡುತ್ತವೆ..  ..
ಹಿಡಿದ ಕಾರ್ಯಗಳು ಯಶಸ್ವಿಯಾಗಿ ಮುಗಿಯುತ್ತವೆ ... ಆಯುಷ್ಯವೃದ್ಧಿ ,  ಒಳ್ಳೆಯ ಸಂತಾನ ಪ್ರಾಪ್ತಿ  , ಸುಖ ಸಮೃದ್ಧಿಗಳು , ಗಂಗಾಸ್ನಾನ ಫಲ ದೊರೆಯುತ್ತದೆ ಯುಗಾದಿಯ ದಿನ ಪಂಚಾಂಗ ಶ್ರವಣದಿಂದ...
  ಯುಗಾದಿ ದಿನ ಹೋಳಿಗಿ ಊಟಕ್ಕೆ ಪ್ರಾಶಸ್ತ್ಯ , ನಾನಾ ತರಹದ ಕೋಸಂಬರಿ , ಪಾಯಸ  ದೇವರ ನೈವೇದ್ಯ... ಬಾಳೆಎಲೆ ಊಟ ಅತ್ಯಂತ ಶ್ರೇಷ್ಠ ..

ಇನ್ನು ಮಾರನೇಯ ದಿನ ..

ಇದನ್ನು ವರ್ಷದ ತೊಡಕು  ಅಂತ ಅಂತೇವೆ ಆ ದಿನ ನೀವು ಎನು ಒಳ್ಳೆಯ ಕೆಲಸಗಳನ್ನು ಮಾಡುತ್ತೀರೊ ಅವು ನಿಮಗೆ ವರ್ಷ ಪೂರ್ತಿ ಒಳ್ಳೆಯ ಫಲಗಳನ್ನ ಕೊಡುತ್ತವೆ...  ನೆನಪಿಡಿ ಬಿದಿಗಿ  ದಿನ ಸಂಜೆ ಚಂದ್ರ ದರ್ಶನ ಮಾಡುವದನ್ನು ಮರೆಯಬೇಡಿ ಮನೆಮಂದಿ ಎಲ್ಲರೂ ಚಂದ್ರ ದರ್ಶನ ಮಾಡಿದರೆ  ಆಯುಷ್ಯವೃದ್ಧಿ ವಿಶೇಷ ಫಲ ಪ್ರಾಪ್ತಿ...

ನಂತರ  ತದಿಗೆ ಚೈತ್ರದ ಗೌರಿ ಆಹ್ವಾನ  ಆ ದಿನ ಮುತ್ತೈದೆಯರನ್ನು ಕರೆದು ಉಡಿತುಂಬಿ ಪಾನಕ ಕೋಸಂಬರಿ ಕೊಡುವದು ಪದ್ಧತಿ.‌‌ ಈ ದಿನ ಶಿವಪಾರ್ವತಿಯರಿಗೆ ಡೋಲೋತ್ಸವ  ಅಂದರೆ  ಗೌರಿಮತ್ತು ಶಿವನನ್ನು ತೂಗುಮಂಚದ ದಲ್ಲಿ ಪೂಜಿಸಿದರೆ ಮಕ್ಕಳ ಭಾಗ್ಯ ದೊರೆಯುತ್ತದೆ... ದೇವಿ ಪುರಾಣದಲ್ಲಿದೆ

ವಸಂತ ಮಾಸದ ನವರಾತ್ರಿ ಯಲ್ಲಿ ದೇವಿ ಪಾರಾಯಣ ಮಾಡಿದರೆ ವಿಷೇಶ ಫಲವಿದೆ
******

ಯುಗಾದಿ ಹಬ್ಬದ ಮಹತ್ವ

ಚೈತ್ರಮಾಸಕ್ಕೆ  ವಿಷ್ಣುರೂಪಿ ಪರಮಾತ್ಮ ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ  ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು ಹೊಸ ವಸ್ತ್ರಗಳನ್ನು ಇರಿಸಿ ಮಂಗಳಾರತಿಯನ್ನು ಮಾಡಬೇಕು
 ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು

ಯುಗಾದಿಯಂದು ಪ್ರತಿಯೋಬ್ಬರು
ಅಭ್ಯಂಜನ ಮಾಡಲೇಬೇಕು .  ಈ ಮೊದಲು ಪೂಜಕನು ಸ್ನಾನ ಮಾಡಿ ಭಗವಂತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿಂದ ಅಭ್ಯಂಜನನವನ್ನು ಮಾಡಿಸಬೇಕು . ಭಗವಂತನಿಗೆ ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು.

ಸಪ್ತಚಿರಂಜೀವಿ ಸ್ಮರಣೆ

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ  ಸ್ಮರಿಸಬೇಕು .

अश्वत्तामा बलिर्व्यास: हनूमांश्च विभीषण: । 
कृप: परशुरामश्च सप्तैते चिरंजीविन: ।

ಅಶ್ವತ್ತಾಮಾ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ |

ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು  ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿಂಬಕ ದಳ ಬಕ್ಷಣ (ಬೇವು -ಬೆಲ್ಲ)ವನ್ನು ಮಾಡಬೇಕು

ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ

शतायुर्वज्रदेहाय सर्वसंपत्कराय च  
सर्वारिष्टविनाशाय निंबकदळभक्षणम||

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |

ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ  ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು
ಅನಂತಾರ್ಯದಾಸ ಪಂ.ಮುಕುಂದಾಚಾರ್ಯ ಜೋಶಿ
ಸಂಚಾಲಕರು ಸೌರಭ ದಾಸ ಸಾಹಿತ್ಯ ವಿದ್ಯಾಲಯ
ರಾಯಚೂರು ಹಾಗೂ ಶಕ್ತಿ ನಗರ ವಿಭಾಗ
******

ಯುಗಾದಿಯ ದಿನ ' ಬೇವು ಬೆಲ್ಲ ' ಯಾಕೆ ತಿನ್ನಬೇಕು ಅಂತ ಗೊತ್ತಾ ?

ಬೇವಿನ ಎಲೆಯಲ್ಲಿ  ಔಷದೀಯ ಅಂಶಗಳು ಇದೆ. ಬೇವಿನ ಎಲೆಯಲ್ಲಿ Anti Fungal, Anti Bacterial , Anti Viral, ANTI INFLAMMATORY ಸತ್ವವಿದ್ದು  ಇವು ಸರ್ವ ರೋಗಗಳನ್ನು ನಾಶ ಮಾಡುತ್ತವೆ. ನಿಯಮಿತವಾಗಿ ಬೇವಿನ ಎಲೆ ತಿನ್ನುವುದರಿಂದ ರಕ್ತದಲ್ಲಿರುವ ನಂಜು ನಾಶವಾಗಿ ರಕ್ತವನ್ನು ಶುದ್ದೀಕರಣ ಮಾಡುತ್ತದೆ  ಮತ್ತು ಶ್ವಾಸಕೋಶ, ಯಕೃತ್, ಮತ್ತು ಮೆದುಳಿನ ಕ್ಷಮತೆಯನ್ನು ಹೆಚ್ಚು ಮಾಡುತ್ತದೆ. ಬೇವಿನ ಎಲೆ ಚರ್ಮ ರೋಗಗಳು ಆದ ಕಜ್ಜಿ, ಮುಂತಾದ ಚರ್ಮರೋಗಗಳಿಗೆ ಒಳ್ಳೆಯ ಔಷದಿ ಆಗಿ ಕೆಲಸ ಮಾಡುತ್ತದೆ. ಮಲೇರಿಯಾ ಜೀವಾಣುಗಳನ್ನು ನಾಶ ಮಾಡುವ ಶಕ್ತಿ ಇದೆ ಈ ಬೇವಿನ ಎಲೆಗೆ. ಬೇವಿನ ಜೊತೆ ಸೇವಿಸುವ ಬೆಲ್ಲದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟಾಷಿಯಂ, ತಾಮ್ರ, ರಂಜಕ, ಸತು ಮುಂತಾದವುಗಳಿದ್ದು ಈ ಬೆಲ್ಲ ಆರೋಗ್ಯವನ್ನು ಕಾಪಾಡುತ್ತದೆ. ಬೆಲ್ಲ ರಕ್ತವನ್ನು ಶುಚಿ  ಮಾಡುತ್ತದೆ. ಕೀಲು ನೋವನ್ನು ನಿಯಂತ್ರಣ ಮಾಡುತ್ತದೆ. ಬೇವು ಬೆಲ್ಲ ನಮ್ಮದೇಹದ ರೋಗಗಳಿಗೆ, ಚರ್ಮರೋಗಗಳಿಗೆ ಔಷಧಿ. ಬೇವಿನ ಹೂವುಗಳಲ್ಲಿ ಕೂಡ ಔಷದೀಯ ಗುಣ ಇದೆ. ಯುಗಾದಿ ಯಲ್ಲಿ ಮಾಡೋ ಹೋಳಿಗೆ, ಕೋಸುಂಬರಿ, ಪಾಯಸ ಮುಂತಾದ ಸಿಹಿ ತಿಂಡಿಗಳು ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ನಮ್ಮ ಪೂರ್ವಜರು ಇಂತಿಂತ ಹಬ್ಬಗಳಿಗೆ ಇಂತಹುದೇ ಸಿಹಿ ತಿಂಡಿ ಮಾಡಿಕೊಂಡು ತಿನ್ನಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಅಂತ ನಿಯಮ ಮಾಡಿದ್ದಾರೆ. ನಾವು ತಿಳಿದು ಕೊಳ್ಳಬೇಕು ಅಷ್ಟೇ. ಬೇವು ಬೆಲ್ಲನ ಯುಗಾದಿಯ ದಿನ ಮಾತ್ರ ತಿನ್ನದೆ ಒಂದು ತಿಂಗಳು ನಿಯಮಿತವಾಗಿ (Control ) ತಿಂದರೆ ಮುಂದೆ ಬರುವ ರೋಗಗಳನ್ನು ನಿಯಂತ್ರಣ ಮಾಡಬಹುದು. ಯುಗಾದಿಯ ವೇಳೆಯಲ್ಲೇ ಯಾಕೆ ಬೇವು ಬೆಲ್ಲ ತಿನ್ನಬೇಕು ಅಂದರೆ ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿನಿಂದ ನಮ್ಮ ದೇಹಕ್ಕೆ ರೋಗಗಳು ಜಾಸ್ತಿ ಬರುತ್ತದೆ. ಮತ್ತು ವಸಂತ ಕಾಲದಲ್ಲಿ ಬೇವಿನ ಮರ ಚಿಗುರುತ್ತದೆ ಆಗ ಈ ಚಿಗುರು, ಎಲೆ , ಬೇವಿನ ಹೂವಿನಲ್ಲಿ ಔಷದೀಯ ಗುಣ ಜಾಸ್ತಿ ಇರುತ್ತದೆ. ಮತ್ತು ಈ ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿನಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಕಮ್ಮಿ ಆಗುತ್ತದೆ. ಆಗ ಒಂದು ತಿಂಗಳು ನಿಯಮಿತಯಾಗಿ ( Control )ಬೇವು ಬೆಲ್ಲ ತಿಂದರೆ ಮುಂದಿನ ಮಳೆಗಾಲದಲ್ಲಿ ನಮ್ಮ ದೇಹಕ್ಕೆ ಬರುವ ರೋಗಗಳನ್ನು ನಿಯಂತ್ರಣ ಮಾಡಬಹುದು. ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಜಾಸ್ತಿ ಆಗುತ್ತದೆ. ಅತಿಯಾಗಿ ತಿಂದರೆ ಅಮೃತ ಕೂಡ ವಿಷ ಆಗುತ್ತೆ. ಆದ್ದರಿಂದ ಬೇವು ಬೆಲ್ಲನ ನಿಯಮಿತವಾಗಿ ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಿ ಅಂತ ನಮ್ಮ ಪೂರ್ವಜರು ಯುಗಾದಿಯಲ್ಲೇ ಬೇವು ಬೆಲ್ಲ ತಿನ್ನಿ ಅಂತ ನಿಯಮ ಮಾಡಿದ್ದಾರೆ. ನಮ್ಮ ಪೂರ್ವಜರು ಅನುಭವದಿಂದ ಈ ರೀತಿಯ ನಿಯಮಗಳನ್ನು ಮಾಡಿದ್ದಾರೆ ನಾವು ಅರ್ಥ ಮಾಡಿಕೊಳ್ಳಬೇಕು ಅಷ್ಟೇ.
******

ಚೈತ್ರ ಮಾಸದ ಮಹತ್ವ
             
ಭಾಗ-1  ಯುಗಾದಿ ಹಬ್ಬದ ಮಹತ್ವ

ಚೈತ್ರಮಾಸಕ್ಕೆ  ವಿಷ್ಣುರೂಪಿ ಪರಮಾತ್ಮ ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ  ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು . ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿಂಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು

ಯುಗಾದಿಯಂದು ಪ್ರತಿಯೋಬ್ಬರು
ಅಭ್ಯಂಜನ ಮಾಡಲೇಬೇಕು .  ಈ ಮೊದಲು ಪೂಜಕನು ಸ್ನಾನ ಮಾಡಿ ಭಗವಂತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿಂದ ಅಭ್ಯಂಜನನವನ್ನು ಮಾಡಿಸಬೇಕು . ಭಗವಂತನಿಗೆ ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು.

ಸಪ್ತಚಿರಂಜೀವಿ ಸ್ಮರಣೆ

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ  ಸ್ಮರಿಸಬೇಕು .

अश्वत्तामा बलिर्व्यास: हनूमांश्च विभीषण: । 
कृप: परशुरामश्च सप्तैते चिरंजीविन: ।

ಅಶ್ವತ್ತಾಮಾ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ |

ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು  ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿಂಬಕ ದಳ ಬಕ್ಷಣ (ಬೇವು -ಬೆಲ್ಲ)ವನ್ನು ಮಾಡಬೇಕು

ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ

शतायुर्वज्रदेहाय सर्वसंपत्कराय च  
सर्वारिष्टविनाशाय निंबकदळभक्षणम||

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |
 ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |

ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ  ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*****

ಚೈತ್ರಮಾಸದ ಮಹತ್ವ
           ಭಾಗ-4

ಚೈತ್ರಮಾಸದ ಕರ್ತವ್ಯಗಳು ಮತ್ತು ಕೊಡಬೇಕಾದ ದಾನಗಳು

ಚೈತ್ರಮಾಸದಲ್ಲಿ ಸೂರ್ಯನ  ತಾಪವು ಪ್ರಾರಂಭವಾಗುತ್ತದೆ .ಇತರ ಮಾಸಗಳಿಗಿಂತ ಈ ಮಾಸದಲ್ಲಿ ಬಾಯಾರಿಕೆಯು ಅಧಿಕವಾಗಿ ಜಲವನ್ನು ಅಪೇಕ್ಷಿಸುವರು .

ಪಾಲ್ಗುಣಮಾಸ ಮುಗಿದು ಚೈತ್ರಮಾಸ ಪ್ರಾರಂಭ.ವಾದಾಗ ಪ್ರಪಾ(ಆರವಟಿಗೆ)ವನ್ನು 
ಪ್ರಾರಂಭಿಸಬೇಕು ನಾಲ್ಕು ತಿಂಗಳವರೆಗೂ ನಡೆಸಬೇಕು .
ಆರವಟಿಗೆಯ ಮೂಲಕ ಜಲದಾನವನ್ನು ಮಾಡಬೇಕು ಜಲದಾನವನ್ನು ಮಾಡದವರು ಧರ್ಮಘಟದಾನ ವನ್ನು ಮಾಡಲೇಬೇಕು ಪ್ರತಿದಿವಸವು ಧರ್ಮಘಟವನ್ನು  ದಾನ ಮಾಡುವುದರಿಂದ ಪ್ರಪಾದಾನದ ಫಲವನ್ನು ಪಡೆಯಬಹುದು.

ಪ್ರಪಾಂ  ದಾತುಮಶಕ್ತೇನ ವಿಶೇಷಾದ್ ಧರ್ಮವಿಪ್ಸುನ |
ಪ್ರತ್ಯಹಂ ಧರ್ಮಘಟಕೋ ವಸ್ತ್ರಸಂವೇಷ್ಟಿತಾಸನಃ ||

ಪ್ರತದಿವಸವು ತಾಮ್ರದ ತಂಬಿಗೆಯಲ್ಲಿ ಲಾವಂಚ ಮುoತಾದ ಔಷಧಿ ಮೂಲಿಕೆಗಳನ್ನು ಸೇರಿಸಿದ ಜಲವನ್ನು ಭಗವಂತನಿಗೆ ಅರ್ಪಿಸಿ ಆದರ ಬಾಯಿಗೆ 
ಒದ್ದೆ ಬಟ್ಟೆಯನ್ನು ಸುತ್ತಿ ಬ್ರಾಹ್ಮಣನ ಮನೆಗೆ ತಾನೆ ಹೋಗಿ ಧರ್ಮಘಟದಾನವನ್ನು ಮಾಡಬೇಕು.

ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನತ್ಸಕಲಾ ಮಮ ಸಂತು ಮನೋರಥಃ ||
ಎಂಬ ಮಂತ್ರವನ್ನು ಹೇಳಿ ದಾನಕೊಡಬೇಕು .

ಚೈತ್ರಮಾಸದಲ್ಲಿ ಕೊಡಬೇಕಾದ ದಾನಗಳು

1)ಜಲದಾನ 
2)ಛತ್ರಿದಾನ
3)ಬಿಸಣಿಕೆದಾನ
4)ಉದಕುಂಭದಾನ
5)ಕನ್ನಡಿದಾನ
6)ತಾಂಬೂಲದಾನ
7)ಗುಡ(ಬೆಲ್ಲ) ದಾನ
8)ಶಯ್ಯಾ(ಹಾಸಿಗೆ)ದಾನ
9)ತುಪ್ಪತುಂಬಿದ ಕಂಚಿನಪಾತ್ರೆದಾನ
10)ಗೋಧಿದಾನ
11)ಮೊಸರು ದಾನ
12)ತೆಂಗಿನಕಾಯಿ ದಾನ
13)ಮಾವಿನಹಣ್ಣಿನದಾನ
14)ತೆಳುವಸ್ತ್ರದಾನ
15)ಗ್ರಂಥದಾನ
16)ಮಠ ಮಂದಿರಗಳಿಗೆ ತೈಲದಾನ
17)ಹಣ್ಣು ,ತರಕಾರಿ ,ಗಡ್ಡೆ ,ಗೆಣಸು ,
ಚಂದನ , ತಂಪುನೀರು ,ಪಚ್ಚಕರ್ಪೂರ ,ಕಸ್ತೂರಿ ಮುಂತಾದವುಗಳನ್ನು ದಾನಕೊಡಬೇಕು 
18)ದೀಪದಾನ ,ಆಕಳಹಾಲದಾನ. ,
ತುಪ್ಪ , ಮಜ್ಜಿಗೆ ,ಕುಂಕುಮಕೇಸರಿದಾನ , ಲವಂಗ ,ದಾಳಿಂಬೆ, ಸುಗಂಧದ್ರವ್ಯ . ನಿಂಬೆಹಣ್ಣು , ಹಲಸಿನಹಣ್ಣುದಾನ ಕುಂಬಳಕಾಯಿ , ಚಪ್ಪಲಿದಾನ ,
ನೆಲ್ಲಿಕಾಯಿದಾನ ,ಪಾನಕದಾನ , ಕೊಸಂಬರಿದಾನ .

ಒಂದು ತಟ್ಟೆಯಲ್ಲಿ ಗೋಧಿಹಾಕಿ ಸೀತಾಫಲಗಳನ್ನಿಟ್ಟು ದಾನ ಕೊಡಬೇಕು .

ಇವುಗಳನ್ನು ಚೈತ್ರಮಾಸದಲ್ಲಿ ಬ್ರಾಹ್ಮಣರಿಗೆ ದಾನಕೊಡಬೇಕು ಎಂದು ಚೈತ್ರಮಾಸಮಹಾತ್ಮೆಯಲ್ಲಿ ಪುಣ್ಯಕೀರ್ತಿರಾಜನಿಗೆ ಮಾಂಡವ್ಯ ಋಷಿಗಳು ತಿಳಿಸಿದ್ದಾರೆ .

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್

*****

ಯುಗಾದಿಕೃತ್: = ಭಗವಂತ.

ಯುಗಾದಿ (ಯುಗ + ಆದಿ) + ಕೃತ್ = ಯುಗಾದಿಕೃತ್.

ಯುಗಾದಿ = ಹೊಸ ಸಂವತ್ಸರದ ಪ್ರಾರಂಭದ ದಿನ. (ಚಾಂದ್ರಮಾನದಂತೆ ಚೈತ್ರಶುಕ್ಲ ಪ್ರತಿಪತ್; ಸೌರಮಾನದಂತೆ ಮೇಷಸಂಕ್ರಮಣದ ಮರುದಿನ.)

ಕೃತ್ = ಧಾತುಗಳಿಗೆ ವಿಹಿತವಾದ ಪ್ರತ್ಯಯ; ಅದರಿಂದ ಪ್ರಾತಿಪದಿಕಗಳು ಮತ್ತು ಅವ್ಯಯಗಳು ಸಿದ್ಧವಾಗುತ್ತವೆ. ಮಾಡುವವ, ಉತ್ಪಾದನೆ, ನಟನೆ, ಪ್ರದರ್ಶನ, ಸಾಧಿಸು, ಮಾಡುವ, ಘಟನೆಗಳ ಜನಕ, ಪರಿಣಾಮ, ಇತ್ಯಾದಿ.,

ಯುಗ = ನಾಲ್ಕು ಯುಗಗಳು, ನೇಗಿಲಿನ ಮತ್ತು ಬಂಡಿಯ ನೊಗ, ಬಂಡಿಯ ಮೂಕಿಮರ, ನಾಲ್ಕು ಹಸ್ತಗಳ ಪ್ರಮಾಣ, ಇತ್ಯಾದಿ.,

ಆದಿ = ಮೊದಲು, ಪ್ರಾರಂಭ, ಮೊದಲನೆಯ ಭಾಗ, ಮುಖ್ಯವಾದ, ಪ್ರಧಾನವಾದ, ಸದೃಶವಾದ, ಆಶ್ರಯ, ಅವಲಂಬನ, ಸಾಮೀಪ್ಯ, ಕಾರಣ, ಇತ್ಯಾದಿ.,

ಯುಗದ ಆದಿಯಲ್ಲಿ ಬ್ರಹ್ಮ-ಸರಸ್ವತಿ ಹಾಗೂ ಪ್ರಾಣ-ಭಾರತಿಯರನ್ನು ಸೃಷ್ಟಿ ಮಾಡಿದ ಭಗವಂತನನ್ನು "ಯುಗಾದಿಕೃತ್" ಎಂದು ಕರೆಯುತ್ತಾರೆ.

ಯುಗಗಳ ನಾಲ್ಕು ಗುಂಪು ಸೇರಿ ಯುಗಚಕ್ರವಾಗುತ್ತದೆ.
ಎಲ್ಲಕ್ಕಿಂತ ಚಿಕ್ಕಯುಗ ಕಲಿಯುಗ; ಇದರ ಅವಧಿ 4,32,000 ವರ್ಷಗಳು.
ದ್ವಾಪರಯುಗದ ಅವಧಿ ಕಲಿಯುಗದ ಎರಡರಷ್ಟು; ಅಂದರೆ 8,64,000 ವರ್ಷಗಳು.
ತ್ರೇತಾಯುಗದ ಅವಧಿ ಕಲಿಯುಗದ ಮೂರರಷ್ಟು; ಅಂದರೆ 12,96,000 ವರ್ಷಗಳು.
ಯುಗದ ಆದಿ ಕೃತಯುಗ; ಇದರ ಅವಧಿ ಕಲಿಯುಗದ ನಾಲ್ಕುಪಟ್ಟು; ಅಂದರೆ 17,28,000 ವರ್ಷಗಳು.
ಆದ್ದರಿಂದ ಒಂದು ಯುಗಚಕ್ರದಲ್ಲಿ 43,20,000 ವರ್ಷಗಳು.
ಕಲಿಯುಗದಲ್ಲಿದ್ದು ಕೃತಯುಗದ ಆನಂದವನ್ನು ಭಗವಂತನ ಉಪಾಸನೆಯಿಂದ ಪಡೆಯಬಹುದು. ಇದು ಭಗವಂತನ "ಯುಗಾದಿಕೃತ್" ನಾಮ ಉಪಾಸನೆಯ ತಾತ್ಪರ್ಯ.

ಯುಗ, ಕಲ್ಪ, ವರ್ಷ, ಮಾಸ, ವಾರ, ದಿನ, ಗಂಟೆ, ನಿಮಿಷ, ಕ್ಷಣ, ಕ್ಷಣಾಂಶ ಮುಂತಾದ ಕಾಲ ವಿಭಾಗವನ್ನು ಮಾಡುವವನು ಭಗವಂತ. ಆದುದರಿಂದ ಅವನನ್ನು "ಯುಗಾದಿಕೃತ್" ಎಂದು ಕರೆಯುತ್ತಾರೆ.‌

ಒಂದು ಯುಗದ ನಂತರ ಇನ್ನೊಂದು ಯುಗವನ್ನು ಪ್ರಾರಂಭಿಸುತ್ತಾನೆ ಭಗವಂತ. ಆದುದರಿಂದ ಅವನು "ಯುಗಾದಿಕೃತ್" ಎಂದು ಕರೆಯಲ್ಪಡುತ್ತಾನೆ.

ಒಟ್ಟು ಯುಗಗಳು ನಾಲ್ಕು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ. ಭಗವಂತ ಈ ಎಲ್ಲ ಯುಗಗಳ ಕರ್ತ್ರು. ಆದ್ದರಿಂದ ಅವನಿಗೆ "ಯುಗಾದಿಕೃತ್" ಎಂದು ಹೆಸರು.

ಕಾಲಭೇದವನ್ನು ಉಂಟುಮಾಡುವವನು;
ಯುಗಗಳ ಆರಂಭವನ್ನು ಮಾಡುವವನು;
ಯುಗಗಳನ್ನು ಪ್ರಾರಂಭಿಸಿದವನು;
ಯುಗದ ಕೊನೆಯಲ್ಲಿ ಬೇರೊಂದು ಯುಗವನ್ನು ಆರಂಭಿಸವವನು;
ವಟಪತ್ರಶಾಯಿಯಾದ ಭಗವಂತನು;
ಬ್ರಹ್ಮಸರಸ್ವತಿಯರನ್ನು ಸೃಷ್ಟಿಸಿ, ಆ ಮೂಲಕ ಬ್ರಹ್ಮಾಂಡ ಸೃಷ್ಟಿ ಮಾಡಿದವನು;
ಯುಗದ ಆರಂಭ ಮಾಡುವ ಯುಗಪ್ರವರ್ತಕನು;
ಕಾಲನಿಯಂತ್ರಕನು;
ಆದುದರಿಂದ ಭಗವಂತನಿಗೆ "ಯುಗಾದಿಕೃತ್" ಎಂದು ಹೆಸರು.

"ನ್ಯಗ್ರೋಧಶಾಯೀ ಭಗವಾನ್ಪುರಾಣಪುರುಷೋತ್ತಮ:|
ಕರೋತ್ಯಾದಿಂ ಯುಗಸ್ಯಾನ್ತೇ ಯುಗಾದಿಕೃದುದೀರಿತ:||".

yugAdikRt = BhagavAn.

yugAdi + kRt = yugAdikRt.

yugAdi = Beginning of the world, Commencement of a yuga, etc.,

kRt = Acting, Performing, Accomplishing, One Who Accomplished, One Who performs anything, etc.,

One Who is the Creator of the Divisions of AEONS, described in our Puranas, as Yuga-s. These Yuga-s are four in number. KRta, Treta, Dvapara, and Kali. In short, HE is the Lord of Time.
By the term 'adi', it must be understood to indicate all other divisions of Time as Centuries, Years, Months, Weeks, Days, Hours, Minutes, and Seconds.
HE is not only the Lord of the Yuga-s, but HE is the Light of Consciousness that illumines the duration of each experience and the very interval between every pair of subjective experiences.
So BhagavAn is called "yugAdikRt".
*************


ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ - ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.

ಐತಿಹಾಸಿಕ ಕಾರಣಗಳು: ಈ ದಿನದಂದು ರಾವಣನ ವಧೆಯಾದ ನಂತರ ಅಯೋಧ್ಯೆಗೆ ಆಗಮಿಸಿದ ಶ್ರೀರಾಮಚಂದ್ರ ಯುಗಾದಿ ದಿನದಿಂದಲೇ ನೂತನ ರಾಜ್ಯಭಾರಸೂತ್ರವನ್ನು ವಹಿಸಿಕೊಂಡನಂತೆ. ಹಾಗೂ ವಿಜಯೋತ್ಸವ ಆಚರಿಸುವಂತೆ ಮಾಡಿದನಂತೆ. ಆ ವಿಜಯದ ಸಂಕೇತವೇ ಈ ಯುಗಾದಿ ಹಬ್ಬ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದುದಾಗಿತ್ತು.

ಆಧ್ಯಾತ್ಮಿಕ ಕಾರಣಗಳು : ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು
ಚೈತ್ರ ಮಾಸಿ ಜಗದ್ಬ್ರಹ್ಮಾ ಸಸೃಜ ಪ್ರಥಮೇ ಹನಿ |
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದದೇ ಸತಿ |

ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.

ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕಾರ್ಯಗಳು
ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು.

ತೋರಣವನ್ನು ಕಟ್ಟುವುದು: ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು.
ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು ಅಭ್ಯಂಗಸ್ನಾನವೆನ್ನುವರು. ಕೆಲವೆಡೆ, ಕಿರಿಯರೆಲ್ಲರನ್ನೂ ಒಂದೆಡೆ ಕೂಡಿಸಿ, ಅರಿಶಿನ (ಸ್ತ್ರೀಯರಿಗೆ), ಕುಂಕುಮಾದಿಗಳನ್ನು ಹಣೆಗೆ ಹಚ್ಚಿ, ನೆತ್ತಿ (ಸುಳಿಯ ಮೇಲೆ), ಮುಂಗೈ ಹಾಗೂ ಮುಂಗಾಲುಗಳ ಮೇಲೆ, ಗರಿಕೆ ಇಲ್ಲವೆ ಪುಷ್ಪ ಮುಖೇನ ಮೂರು ಮೂರು ಬಾರಿ ತೈಲವನ್ನು ಹಚ್ಚುತ್ತಾರೆ.
ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಉದ್ದೀಪನಗೊಳ್ಳುತ್ತದೆಂದು ಶಾಸ್ತ್ರಗಳು ಹೇಳುತ್ತವೆ.
ಈ ದಿನ
ನೂತನ ವಸ್ತ್ರಧಾರಣೆ, ಪರಮಾನ್ನಾದಿ ಭಕ್ಷ್ಯವನ್ನು ದೇವರಿಗೆ ನಿವೇದಿಸಿ ನೂತನ ಪಂಚಾಂಗವನ್ನು ದೇವರಮನೆಯಲ್ಲಿ ಪಂಚಾಂಗಪಠನ-ಶ್ರವಣದೊಂದಿಗೆ ವರ್ಷದ ರಾಜ-ಮಂತ್ರಿ ಮುಂತಾದ ಸಂವತ್ಸರಫಲ ಮತ್ತು ಗ್ರಹಸ್ಥಿತಿಯನ್ನು ತಿಳಿಯಬೇಕು.

ಜೀವನದಲ್ಲಿ ಒದಗುವ ಸುಖದುಃಖಗಳ, ಕಹಿ-ಸಿಹಿಗಳ ಪ್ರತೀಕವೆನಿಸುವ ಬೇವು-ಬೆಲ್ಲಗಳನ್ನು ದೇವರಿಗೆ ನಿವೇದಿಸಿ:

ಶತಾಯುರ್ವಜ್ರದೇಹಾಯ ಸರ್ವಸಂಪತ್ಸಮೃದ್ಧಯೇ |
ಸರ್ವಾರಿಷ್ಟವಿನಾಶಾಯ ಗುಡನಿಂಬಕಭಕ್ಷಣಮ್ ||

’ಶತಾಯುಷ್ಯದ, ಗಟ್ಟಿದೇಹಕ್ಕಾಗಿ, ಸರ್ವಸಂಪತ್ಸಮೃದ್ಧಿಗಾಗಿ, ಸರ್ವಾರಿಷ್ಟನಿವೃತ್ತಿಗಾಗಿ ಬೇವು-ಬೆಲ್ಲಗಳನ್ನು ತಿನ್ನುತ್ತೇನೆ’ ಈ ಶ್ಲೋಕದ ಪಠಣದೊಂದಿಗೆ ’ಸುಖ ದುಃಖೇ ಸಮೇ ಕೃತ್ವಾ’ ಎಂಬ ಗೀತಾಚಾರ್ಯನ ಯೋಗದ ಅನುಸಂಧಾನದೊಂದಿಗೆ ಬೇವು-ಬೆಲ್ಲಗಳನ್ನು ಸ್ವೀಕರಿಸಬೇಕು.

ಹಿಂದಿನ ವರ್ಷವೆಂಬ ಕಾಲಪುರುಷನ ಮರಣ ಮತ್ತು ಹೊಸವರ್ಷದ ರೂಪದ ಶಿಶುವಿನ ಜನನಸೂಚಕ, ಈ ಸಂವತ್ಸರಾರಂಭ ಕಾಲ.
ಸಂವತ್ಸರವು ಯಜ್ಞಗಳಿಗೆ ಮೂಲ. ಅದು ಕೇವಲ ಕಾಲಪರಿಮಾಣ ಮಾತ್ರವಲ್ಲ; ಆಧ್ಯಾತ್ಮಿಕತೆಯ ಅಡಿಪಾಯವೂ ಹೌದು. ಸಂವತ್ಸರವನ್ನು ಅಶ್ವಕ್ಕೆ ಹೋಲಿಸಿ, ಒಂದು ವರ್ಷ ಪೂರ್ಣವಾಗಿ ನಡೆಯುವ ಅಶ್ವಮೇಧಯಜ್ಞ ಈ ಸಂವತ್ಸರ ಎಂದು ವೇದಗಳು ಸಾರುತ್ತವೆ.

ಎಲ್ಲರ ಜೀವನವೂ ಸುಖ-ದು:ಖ, ಲಾಭ-ನಷ್ಟ, ಮಾನ-ಅಪಮಾನ, ಜಯ-ಅಪಜಯ - ಈ ದ್ವಂದ್ವಗಳ ಸಮ್ಮಿಲನ. ಯಾರಿಗೂ ದು:ಖ, ನಷ್ಟ, ಅಪಮಾನ, ಪರಾಜಯಗಳು ಸ್ಥಿರವಲ್ಲ. ಹಾಗೆಯೇ ಸುಖ, ಲಾಭ, ಮಾನ, ಜಯಗಳು. ಇವೆಲ್ಲ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿರುತ್ತವೆ.


ಆದ್ದರಿಂದ ಮಾನವನು ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ, ಈ ದ್ವಂದ್ವಗಳನ್ನು ಜಯಿಸಿ, ಸಮತೆ ಸಾಧಿಸಬೇಕು; ಸ್ಥಿತಪ್ರಜ್ಞನಾಗಬೇಕು - ಇದು ಯುಗಾದಿಯ ಬೇವು-ಬೆಲ್ಲಗಳ ಸಂದೇಶ.*
*************

【◆◆◆ಯುಗಾದಿ ಹಬ್ಬ ಮತ್ತು ವಿಶೇಷತೆಗಳು◆◆◆】

ಹಬ್ಬ-ಹರಿದಿನ, ಉತ್ಸವಗಳು , ನಮ್ಮ ಭಾರತೀಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿ ಬಂದಿದೆ.. 
ಬಹುಷಃ ನಮ್ಮ ದೇಶದಲ್ಲಿ ನಡೆಯೋ ಹಬ್ಬ ಹರಿದಿನ ಜಾತ್ರೆಗಳು ಬೇರೆಲ್ಲೂ ನಡೆಯುವುದಿಲ್ಲ..
ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಸಂಸ್ಕೃತಿ, ಕಾರಣಗಳು ಇವೆ. ಇದೇ ಕಾರಣಕ್ಕೆ ನಮ್ಮ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿವೆ..
ಇಂತಹುದರಲ್ಲಿ ಹಿಂದೂ ವರ್ಷದ, ಹೊಸ ಸಂವತ್ಸರದ ಮೊದಲ ಹಬ್ಬ "ಯುಗಾದಿ"ಯೂ ಒಂದು..
ಈ "ಯುಗಾದಿ" ಹಬ್ಬವು ಚಾಂದ್ರಮಾನ ಮತ್ತು ಸೌರಮಾನ ಎಂದು ಎರಡು ವಿಧಾನವಾಗಿದೆ..
ಆಂಧ್ರ ಮತ್ತು ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ..
ಕೆಲವು ಕಡೆ ಸೌರಮಾನ ಯುಗಾದಿ ಆಚರಿಸುತ್ತಾರೆ..

ಯುಗಾದಿ ಅಂದರೆ ಯುಗದ ಆದಿ, ಯುಗದ ಪ್ರಾರಂಭ ಎಂದರ್ಥ..
ಈ ದಿನವನ್ನು ಬ್ರಹ್ಮದೇವರು ಸೃಷ್ಟಿಸಿದ್ದಾನೆಂದು ತುಂಬಾ ಗ್ರಂಥಗಳು ಹೇಳುತ್ತವೆ..
ಈ ದಿನದಂದು ಮಹಾವಿಷ್ಣುವು " ಮತ್ಸ್ಯಾವತಾರವನ್ನು " ತಾಳಿದನು..

"ಶ್ರೀ ರಾಮಚಂದ್ರರು ಕಾಡಿನಿಂದ ಅಯೋಧ್ಯೆಗೆ ಹಿಂತಿರುಗಿದ ದಿನವಿದು, ಈ ದಿನ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ ,ಎಂದು ಗ್ರಂಥಗಳು ಹೇಳುತ್ತವೆ..
ವಸಂತ ನವರಾತ್ರಿಗಳು ಈ ದಿನದಂದು ಪ್ರಾರಂಭವಾಗಿ, ಶ್ರೀ ರಾಮಚಂದ್ರ ಪಟ್ಟಾಭಿಷೇಕದ ಪೂಜೆಗಳು, ದುರ್ಗಾಸಪ್ತಶತೀ ಪಾರಾಯಣಗಳು, ಈ ದಿನ ಪ್ರಾರಂಭವಾಗುವುದು ತುಂಬಾ ವಿಶೇಷ..

ಈ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಏಳಬೇಕು. ಎದ್ದ ತಕ್ಷಣ ದೇವರನ್ನು ಧ್ಯಾನಿಸಿ ನಂತರ ಅಭ್ಯಂಜನ ಸ್ನಾನ ಮಾಡಬೇಕು.
ತಲೆಗೆ ಎಣ್ಣೆಯನ್ನು ಮನೆಯ ಹೆಂಗಸರು ಸುಮಂಗಲಿಯರಿಂದನೇ ಹಚ್ಚಿಸಿಕೊಳ್ಳಬೇಕು..
ಮನೆಯನ್ನು ಶುದ್ಧಗೊಳಿಸಿ, ಮಾವಿನ ಎಲೆಗಳಿಂದ ತೋರಣ ಕಟ್ಟಬೇಕು..
ದೇವರ ಪೂಜೆ, ಅಭಿಷೇಕ, ನೈವೇದ್ಯ, ಪಂಚಾಂಗ ಪೂಜೆ ಮಾಡುವುದು ತುಂಬಾ ಒಳ್ಳೆಯದು ..
"ಬ್ರಾಹ್ಮಣರಿಗೆ ಫಲತಾಂಬೂಲದೊಂದಿಗೆ ಪಂಚಾಂಗ ದಾನ ಮಾಡಿದರೆ ತುಂಬಾ ಒಳ್ಳೆಯದು..
ನಂತರ ದೇವರಿಗೆ ಬೇವು ಬೆಲ್ಲ ನೈವೇದ್ಯ ಮಾಡಿ, ಸುಖ ದುಃಖ ಏನೇ ಬಂದರೂ ನಿಮ್ಮ ಆಶೀರ್ವಾದ ಇರಲಿ, ನಮಗೆ ಆಯಸ್ಸು ಆರೋಗ್ಯ ಕರುಣಿಸಿ ಎಂದು ಪ್ರಾರ್ಥಿಸಿ, ಬೇವು ಬೆಲ್ಲವನ್ನು, ಮೊದಲು ಹಸುವಿಗೆ ಕೊಟ್ಟು ನಮಸ್ಕರಿಸಿ, ನಂತರ ಮನೆಯ ಹಿರಿಯರಿಗೆ ಮತ್ತು ಗುರುಸ್ಥಾನದ ವ್ಯಕ್ತಿಗಳಿಗೆ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು..
ನಂತರ ನೀವು ಸ್ವೀಕರಿಸಬೇಕು.. 

***

ಬೇವು ಬೆಲ್ಲ ಸೇವಿಸುವಾಗ..
"ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||"

ತಾತ್ಪರ್ಯ : ನೂರುವರ್ಷ ವಜ್ರದಂತೆ ಗಟ್ಟಿಯಾದ ದೇಹದ ಶಕ್ತಿ, ಎಲ್ಲಾ ರೀತಿಯ ಐಶ್ವರ್ಯ ಸಂಪತ್ತುಗಳ ಪ್ರಾಪ್ತಿಗಾಗಿ,ಮತ್ತು ಸಕಲಾರಿಷ್ಟಗಳೂ ನಿವಾರಣೆಯಾಗಲೆಂದು ಬೇವು ಬೆಲ್ಲ ಸೇವನೆ ಮಾಡುತ್ತೇನೆ.."!

ವಿಶೇಷ ವಿಷಯ:

ಯುಗಾದಿಯ ದಿನ "ವಿದ್ಯಾವ್ರತವನ್ನು" ಬೇಕಾದರೂ ಮಾಡಬಹುದು. ಯಾರಿಗೆ ವಿದ್ಯೆ ಸರಿಯಾಗಿ ಬರುತ್ತಿಲ್ಲ, ಓದಿದ್ದೆಲ್ಲಾ ಮರೆತು ಹೋಗುತ್ತಿದೆ, ತುಂಬಾ ದಡ್ಡರಾಗಿದ್ದಾರೆ ಅನ್ನುವವರು "ಹಯಗ್ರೀವ ದೇವರನ್ನು ಮತ್ತು ದತ್ತಾತ್ರೇಯ"ರನ್ನು ಪೂಜಿಸಿ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ವಸ್ತುಗಳು ದಾನ ಮಾಡಬೇಕು.."
ಈ ದಿನ
"ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||"

ಈ ಸರಸ್ವತೀ ದೇವಿ ಸ್ತೋತ್ರ ೩೩ ಸಾರಿ ಹೇಳಿ, ಸರಸ್ವತೀ ದೇವಿ ಪೂಜಿಸಿ, "ಬೆಲ್ಲದನ್ನ" ಅಥವಾ ಪೊಂಗಲ್ ನೈವೇದ್ಯ ಮಾಡಿದರೆ, ಮಕ್ಕಳು ತುಂಬಾ ತುಂಬಾ ವಿದ್ಯಾವಂತರಾಗುತ್ತಾರೆ ಮತ್ತು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ..

ಪಂಚಾಂಗ ಶ್ರವಣ ಅಥವಾ ಓದುವುದರಿಂದ ಫಲ.

"ಚೈತ್ರ ಶುಕ್ಲಪಕ್ಷದಲ್ಲಿ ವರ್ಷದ ರಾಜ ಮಂತ್ರಿ ಮೊದಲಾದ ಪಂಚಾಂಗದಲ್ಲಿನ ಫಲಗಳನ್ನು ಯಾರು ಕೇಳುತ್ತಾರೋ, ಅಂಥವರು ಪಾಪ ಫಲಗಳಿಂದ ಮುಕ್ತರು, ಆರೋಗ್ಯವಂತರು, ಆಯುಷ್ಯವಂತರೂ , ಐಶ್ವರ್ಯವಂತರೂ ಸುಖನುಭವಿಗಳೂ ಆಗುತ್ತಾರೆ..

ತಿಥಿಯಿಂದ ಐಶ್ವರ್ಯ, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ರೋಗ ಪರಿಹಾರ, ಕರಣದಿಂದ ಕಾರ್ಯಸಿದ್ಧಿ, ಮುಂತಾದ ಶುಭಫಲಗಳು ಪಂಚಾಂಗದಿಂದ ಲಭಿಸುತ್ತವೆ..

"ಹೀಗೆ ವಿಧಾನೋಕ್ತವಾಗಿ ಯುಗಾದಿ ಆಚರಣೆ ಮಾಡಿದರೆ ಇಡೀ ವರ್ಷ ಶುಭದಾಯಕವಾಗಿರುವುದರಲ್ಲಿ ಸಂದೇಹವಿಲ್ಲ..

***

🌿🌱ಯುಗಾದಿ🌱🌿
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ 
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !! 
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ, ಜೊತೆಗೆ  ತರಲಿ
****

ಯುಗಾದಿ  * ಬರುತ್ತಿದೆ *

          ಆದ್ದರಿಂದ

😔 ದುಃಖ--- Delete ಮಾಡಿಬಿಡಿ

😄 ಆನಂದ-- Save  ಮಾಡಿರಿ

👥 ेಸಂಬಂದಗಳನ್ನು---Recharge ಮಾಡಿರಿ

👭 ಸ್ನೇಹ----Download ಮಾಡಿರಿ

👹 ವೈರತ್ವ --- Erase ಮಾಡಿರಿ

👆 ಸತ್ಯ---Broadcast  ಮಾಡಿರಿ

😷 ಸುಳ್ಳು---Switch Off ಮಾಡಿಬಿಡಿे

🙄 ಆತಂಕಕ್ಕೆ---Not Reachable  ಆಗಿರಿे

❤ ಪ್ರೀತಿ --- Incoming  ಇರಲಿे

💔 ದ್ವೇಷ--Outgoing
                 ಆಗಿರಲಿ

😃 ಹಾಸ್ಯ---Inbox ನಲ್ಲಿರಲಿ

😭 ಕಣ್ಣೀರು--- Outbox ನಲ್ಲಿಡಿ

😡 ಕೋಪ----Hold ಇರಲಿ

😊 ಮುಗುಳುನಗೆ---Send  ಮಾಡಿರಿ

📩 ಸಹಾಯಕ್ಕೆ----Ok ಅನ್ನಿರಿ

💟 ಮನಸ್ಸನ್ನು---Vibrate ಮೋಡನಲ್ಲಿಡಿ

*ಆಗ ನೋಡಿರಿ, ನಿಮ್ಮ ಜೀವನದ * *Ringtone ಹೇಗೆ ಬದಲಾಗುತ್ತೆ

ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆಮುಂಚಿತವಾಗಿ,

ಬೇವಿನ ಮತ್ತು ಬೆಲ್ಲ ಹಬ್ಬದ  ಶುಭಾಶಯಗಳು
***

  ಹೊಸ ವರ್ಷ

ಗತಿಸಿತಿನ್ನೊಂದು ವರ್ಷ

   ಎಂದರು ಗಣಿತಜ್ಞರು |

ತಗ್ಗಿತೆಮ್ಮ ಶೇಷಾಯುಷ್ಯ

   ಎಂದರು ಹರಿ ಭಕ್ತರು ||


ವರ್ಷದ ಗಣನೆಗೆ ಹಲವು ಗಣಿತ

   ಉಂಟೆಂದರು ಗಣಿತಜ್ಞರು |

ಎಟುಕನಾವ ಗಣಿತಕು

   ಅನಂತನೆಂದರು ಹರಿಭಕ್ತರು ||


ಇಂದಿನ ಸೂರ್ಯೋದಯದಿಂದ

   ಮರುದಿನದ ಸೂರ್ಯೋದಯಕೆ

   ಒಂದು ದಿನ ಎಂದರು ಗಣಿತಜ್ಞರು |

ಭೂದೇವಿ ತನ್ನಂತರ್ಯಾಮಿಯ

   ನೆನೆದು ಸ್ವಪ್ರದಕ್ಷಿಣೆ ಗೈದಿಹಳು,

   ಬರಿದೆ ದಿನವಲ್ಲವ

   ಎಂದರು ಹರಿ ಭಕ್ತರು ||


ಇಂತಿಪ್ಪ ಮುನ್ನೂರ ಅರವತ್ತೈದು

   ದಿನಗಳಿಗೆ ಒಂದು ಸಂವತ್ಸರವು

   ಎಂದರು ಎಣಿಸುತ ಗಣಿತಜ್ಞರು |

ಬರಿದೆ ಸಂವತ್ಸರವಲ್ಲ ಭೂದೇವಿ

  ತನ್ನಿನಿಯ ಇನ ನಾರಾಯಣಗೆ ಗೈದ

  ಪ್ರದಕ್ಷಿಣೆಯದೆಂದರು ಹರಿ ಭಕ್ತರು ||


ಶುಕ್ಲ-ಕೃಷ್ಣ ಪಕ್ಷದ್ವಯಕೊಂದು

   ಮಾಸವು, ದ್ವಾದಶ ಮಾಸಕೊಂದು

   ಅನುವತ್ಸರವೆಂದರು ಗಣಿತಜ್ಞರು |

ಬರಿದೆ ಮಾಸವಲ್ಲವು, ಶಶಿಮಂಡಲ

  ಮಧ್ಯಸ್ಥ ಶಿವ ಗೈದಿಹ ಲಕುಮಿಕೆ

  ಪ್ರದಕ್ಷಿಣಿಯನೆಂದರು ಹರಿ ಭಕ್ತರು ||


ಇಪ್ಪತ್ತೇಳು ತಾರೆಗಳ 

   ದ್ವಾದಶ ಮಾಸದ ಮುನ್ನೂರ

   ಇಪ್ಪತ್ನಾಕು ದಿನದ ತಾರಾ

   ವತ್ಸರವೆಂದರು ಗಣಿತಜ್ಞರು |

ತಾರೆಯರು ಪೂಜಿಪರು 

   ತಮ್ಮಿನಿಯ ಶಶಿಯೊಳಗಿಪ್ಪ

   ಶಿವನೊಳಗಿಪ್ಪ ಪ್ರಾಣನೊಳಗಿಪ್ಪ ನರಹರಿಯನೆಂದರು ಹರಿ ಭಕ್ತರು ||


ಇವೆಲ್ಲ ತೊರೆದಿಹ ಅರ್ಥವಿಲ್ಲದ

   ವತ್ಸರವೊಂದನನುಸರಿಪರೀ ಜನ

   ಎಂದು ಹಳಿಯೆ ಗಣಿತಜ್ಞರು |

ವರ್ಷಕೊಮ್ಮೆ ಹಳಿದು ಬಳಿಕ

   ನೀವೂ ಅನುಸರಿಸುವುದು ಇದೇ

   ವತ್ಸರವ ಎಂದರು ಹರಿ ಭಕ್ತರು ||


ನೋಡಿ ಎಂತು ಕುಣಿದಾಡುತಿಹರು

   ಕುಡಿದು ನಲಿದು ಖಡಿದು ಜಗಿದು

   ಜಡಿದು ನುಲಿದು ಈ ಜನ 

   ಎನಲು ಗಣಿತಜ್ಞರು |

ಅದೆಂತೇ ಇರಲಿ ಸ್ವಾಗತಿಸುವ

   ನಾವೀ ನೂತನ ವ್ಯಾವಹಾರಿಕ 

   ವರ್ಷವ ನೆನೆಯುತ ಜನಾರ್ದನನ 

   ಎಂದರು ಹರಿ ಭಕ್ತರು ||

****

 ಚಾಂದ್ರಮಾನ ಯುಗಾದಿ ಎಂದರೇನು..? ಸೌರಮಾನ ಯುಗಾದಿ ಎಂದರೇನು..?

ಯುಗಾದಿ ಹಬ್ಬವನ್ನು ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಆಚರಿಸುವ ಪದ್ಧತಿಯಿದೆ. 2021 ರ ಏಪ್ರಿಲ್‌ 13 ರಂದು ಮಂಗಳವಾರ ಚಾಂದ್ರಮಾನ ಯುಗಾದಿಯಾದರೆ, 2021 ರ ಏಪ್ರಿಲ್‌ 14 ರಂದು ಬುಧವಾರ ಸೌರಮಾನ ಯುಗಾದಿಯಾಗಿದೆ. ಈ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಎಂದರೇನು..? ಚಾಂದ್ರಮಾನ ಯುಗಾದಿಗೂ, ಸೌರಮಾನ ಯುಗಾದಿಗೂ ಇರುವ ವ್ಯತ್ಯಾಸವೇನು..?

ಯುಗಾದಿಯ ಅರ್ಥ

ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ವ್ಯತ್ಯಾಸ

ವಿವಿಧ ರಾಜ್ಯಗಳಲ್ಲಿ ಯುಗಾದಿ ಆಚರಣೆ

ಚಾಂದ್ರಮಾನ ಯುಗಾದಿ ಎಂದರೇನು..?

ಸೌರಮಾನ ಯುಗಾದಿ ಎಂದರೇನು..?

ಯುಗಾದಿ ಹಬ್ಬವನ್ನು ಸಾಮಾನ್ಯವಾಗಿ ದೇಶದ ಮೂಲೆ ಮೂಲೆಯಲ್ಲೂ ಆಚರಿಸುತ್ತಾರೆ. ಕರ್ನಾಟಕದ ಹಲವಾರು ಕಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ, ಕರಾವಳಿ ಭಾಗದಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಹಾಗಾದರೆ, ಸೌರಮಾನ ಯುಗಾದಿ ಮತ್ತಿ ಚಾಂದ್ರಮಾನ ಯುಗಾದಿಗೂ ಇರುವ ವ್ಯತ್ಯಾಸವೇನು..? ಈ ಯುಗಾದಿಗಳು ಭಿನ್ನ ಭಿನ್ನವೇ.? ಈ ಯುಗಾದಿಯ ಮಹತ್ವವೇನು..?

1. ಯುಗಾದಿಯ ಅರ್ಥ:

ಇಂದು ಅಂದರೆ ಏಪ್ರಿಲ್‌ 13 ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂದು ಚಾಂದ್ರಮಾನ ಯುಗಾದಿಯಾದರೆ, ನಾಳೆ ಅಂದರೆ ಏಪ್ರಿಲ್‌ 14 ರಂದು ಬುಧವಾರ ಸೌರಮಾನ ಯುಗಾದಿ ಹಬ್ಬವನ್ನು ಆಚರಿಸಲಾಗುವುದು. 'ಯುಗಾದಿ' ಎಂಬ ಪದವು ಸಂಸ್ಕೃತ ಭಾಷೆಯಿಂದ ಆಯ್ದುಕೊಂಡ ಪದವಾಗಿದ್ದು, 'ಯುಗ' ಎಂದರೆ 'ವಯಸ್ಸು' ಮತ್ತು 'ಆದಿ' ಎಂದರೆ 'ಪ್ರಾರಂಭ'. ಇದರರ್ಥ, "ಹೊಸ ಯುಗದ ಪ್ರಾರಂಭ" ಎಂದು. ಈ ಸಾಂಪ್ರದಾಯಿಕ ಹಬ್ಬವನ್ನು ಸಾಮಾನ್ಯವಾಗಿ ಮಾರ್ಚ್ ದ್ವಿತೀಯಾರ್ಧದಲ್ಲಿ ಅಥವಾ ಏಪ್ರಿಲ್ ನ ಪ್ರಾರಂಭದಲ್ಲಿ ಆಚರಿಸಲಾಗುತ್ತದೆ.


2. ವಿವಿಧ ರಾಜ್ಯದಲ್ಲಿ ಯುಗಾದಿ:

ವಿಂಧ್ಯ ಬೆಟ್ಟಗಳ ಉತ್ತರದಲ್ಲಿ ವಾಸಿಸುವವರು ಇದನ್ನು "ಬರ್ಹಸ್ಪತ್ಯಮಾನ" ಎಂದು ಆಚರಿಸುತ್ತಾರೆ. ವಿಂಧ್ಯ ಬೆಟ್ಟಗಳ ದಕ್ಷಿಣದಲ್ಲಿ ವಾಸಿಸುವ ಜನರು ಇದನ್ನು "ಸೌರಮಾನ" ಅಥವಾ "ಚಾಂದ್ರಮಾನ" ಎಂದು ಆಚರಿಸುತ್ತಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಮತ್ತು ಕರ್ನಾಟಕದಲ್ಲಿನ ಜನರು ಇದನ್ನು ಯುಗಾದಿ ಹಬ್ಬವೆಂದು ಆಚರಿಸಿದರೆ, ಇನ್ನು ಮಹಾರಾಷ್ಟ್ರದ ಜನರು ಇದೇ ಹಬ್ಬವನ್ನು 'ಗುಡಿ ಪಾಡ್ವಾ' ಎಂದು ಆಚರಿಸುತ್ತಾರೆ.


3. ಸೌರಮಾನ ಯುಗಾದಿ:

ಸೌರಮಾನ ಯುಗಾದಿಯನ್ನು ತಮಿಳುನಾಡಿನಲ್ಲಿ 'ವರುಷ ಪಿರಪ್ಪು', 'ಚಿತಿರೈವಿಶು', 'ಪುತಂಡು' ಎಂದು ಆಚರಿಸಲಾಗುತ್ತದೆ. ಕೇರಳ ಜನರು ಈ ಮಲಯಾಳಂ ರಾಶಿಚಕ್ರಗಳ ಹೊಸ ವರ್ಷವನ್ನು 'ವಿಷು' ಹೆಸರಿನೊಂದಿಗೆ ಆಚರಿಸುತ್ತಾರೆ. 'ಪೊಹೆಲಾ ಬೋಯ್ಷಾಕ್' ಮತ್ತು 'ನಬಾ ಬರ್ಷ' ಎನ್ನುವುದು ಬಂಗಾಳಿಯಲ್ಲಿ ಹೊಸ ವರ್ಷದ ದಿನವಾದರೆ, 'ಮಹಾ ವಿಷುಬ ಸಂಕ್ರಾಂತಿ' (ಪನ ಸಂಕ್ರಾಂತಿ) ಎಂಬುದು ಒರಿಸ್ಸಾದ ಹೊಸ ವರ್ಷ ದಿನ. 'ಬೊಹಾಗ್ ಬಿಹು' ಅಥವಾ 'ರೊಂಗಾಲಿ ಬಿಹು' ಎನ್ನುವುದು ಅಸ್ಸಾಮೀಯರ ಹೊಸ ವರ್ಷ. ಬೈಸಾಖಿಯಲ್ಲಿ ಪಂಜಾಬಿಗರು ಹೊಸ ವರ್ಷವನ್ನು ಆಚರಿಸುತ್ತಾರೆ. ಮಂಗಳೂರಿನಲ್ಲಿ ಈ ಹಬ್ಬವನ್ನು ವಿಷು ಹಬ್ಬವೆಂದು ಆಚರಿಸುತ್ತಾರೆ.

ಒಂದು ನಕ್ಷತ್ರದ ಅಂತರವನ್ನು ಸರಿದೂಗಿಸಲು ಸೂರ್ಯ, ಸುಮಾರು 13 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನನ್ನು ಕಾಣುವ ನಕ್ಷತ್ರವನ್ನು 'ಮಹಾನಕ್ಷತ್ರ' ಎಂದು ಕರೆಯಲಾಗುತ್ತದೆ. ಒಂದು ರಾಶಿಯನ್ನು ಆವರಿಸಲು ಸೂರ್ಯ 30 ಅಥವಾ 31 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಸೂರ್ಯ ಮತ್ತೊಂದು ನಕ್ಷತ್ರಕ್ಕೆ ದಾಟುತ್ತಾನೆ. ಆ ದಾಟುವ ಸಮಯವನ್ನು 'ಸಂಕ್ರಮಣ' ಎಂದು ಕರೆಯಲಾಗುತ್ತದೆ. ಈ ರೀತಿ, ಸೂರ್ಯ ಈ ಹನ್ನೆರಡು ರಾಶಿಗಳನ್ನು ಆವರಿಸಲು 365.25 ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೌರ ಮಾರ್ಗದ ಪ್ರಕಾರ (ಭೂಮಿಗೆ ಸಂಬಂಧಿಸಿದಂತೆ), ವರ್ಷದಲ್ಲಿ 365.25 ದಿನಗಳಿವೆ. ಸೂರ್ಯ,ರೇವತಿ ನಕ್ಷತ್ರದಿಂದ ಅಶ್ವಿನಿ ನಕ್ಷತ್ರಕ್ಕೆ ದಾಟಿದ ಮರುದಿನವನ್ನು ಹೊಸ ವರ್ಷದ ದಿನವೆಂದು ಪರಿಗಣಿಸಲಾಗುತ್ತದೆ.

4. ಸೌರಮಾನ ಯುಗಾದಿಯ ಶುಭ ಸಮಯ:

ಸೌರಮಾನ ಯುಗಾದಿಯ ಸಂಕ್ರಾಂತಿಯ ಸಮಯವನ್ನು ಅತ್ಯಂತ ಪವಿತ್ರವಾದ ಹಾಗೂ ಶ್ರೇಷ್ಠ ಸಮಯವೆಂದು ಪರಿಗಣಿಸಲಾಗುತ್ತದೆ. ಈ ದಿನ ಗೃಹ ಪ್ರವೇಶ ಮುಂತಾದ ಶುಭ ಕಾರ್ಯಕ್ಕೆ ತುಂಬಾ ಯೋಗ್ಯವಾದ ದಿನವೆಂದು ಪರಿಗಣಿಸಲಾಗಿದೆ.

ಮೇಷ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಗ್ಗೆ 05:46 ರಿಂದ 07:53 ರವರೆಗೆ

ಮೇಷ ಸಂಕ್ರಾಂತಿ ಪುಣ್ಯ ಕಾಲ: ಬೆಳಗ್ಗೆ 05:46 ರಿಂದ ಮಧ್ಯಾಹ್ನ 12:07 ರವರೆಗೆ


5. ಚಾಂದ್ರಮಾನ ಯುಗಾದಿ

ಚಂದ್ರನ ಸ್ಥಾನ ಬದಲಾವಣೆಯನ್ನುಅನುಸರಿಸುವ ಮೂಲಕ ವರ್ಷದಲ್ಲಿನ ದಿನಗಳನ್ನು ಲೆಕ್ಕಮಾಡುವುದಕ್ಕೆ ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯ ಪ್ರಕಾರ, ಹನ್ನೆರಡು ತಿಂಗಳು ಸೇರಿ ಒಂದು ವರ್ಷ. ಈ ವ್ಯವಸ್ಥೆಯ ಪ್ರಕಾರ ವರ್ಷದಲ್ಲಿ 354 ದಿನಗಳಿವೆ. ಇದು ಸೌರಮಾನ ಮತ್ತು ಚಾಂದ್ರಮಾನ ವರ್ಷಗಳ ನಡುವೆ ಹನ್ನೊಂದು ದಿನಗಳ ಕೊರತೆಗೆ ಕಾರಣವಾಗುತ್ತದೆ. ಆದ್ದರಿಂದ ಮೂರು ವರ್ಷಗಳಿಗೊಮ್ಮೆ, ವ್ಯತ್ಯಾಸವು ಒಂದು ತಿಂಗಳಿಗೆ ಸಮನಾಗಿರುವಾಗ ನಾವು ಒಂದು ತಿಂಗಳನ್ನು ಹೆಚ್ಚಾಗಿ ಸೇರಿಸಿ, ಆ ತಿಂಗಳನ್ನು 'ಚಂದ್ರ ಅಧಿಕ ಮಾಸ' ಎಂದು ಕರೆದು ಸೌರಮಾನ ವರ್ಷಕ್ಕೆ ಸೇರಿಸುತ್ತೇವೆ. ಈ ಕಾರಣಕ್ಕಾಗಿಯೇ 'ಸೌರ ಸಂವತ್ಸರ' ವನ್ನು ಸ್ಥಿರ ಸಂವತ್ಸರ ಎಂದೂ 'ಚಂದ್ರ ಸಂವತ್ಸರ' ವನ್ನು ಅಸ್ಥಿರ ಸಂವತ್ಸರವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಕರಾವಳಿಯ ಭಾಗದಲ್ಲಿ ಸೂರ್ಯಮಾನ ಯುಗಾದಿ ಅಂದರೆ 'ವಿಷು' ಹಬ್ಬವನ್ನು ಆಚರಿಸುತ್ತಾರೆ. ಕರ್ನಾಟದ ಇತರ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಈ ದಿನ ಕುಟುಂಬದ ಸದಸ್ಯರೆಲ್ಲರೂ ಬೇವು - ಬೆಲ್ಲ ಸವಿದು ಹಿರಿಯರ ಆಶೀರ್ವಾದವನ್ನು ಪಡೆದು ನಂತರ ತಮ್ಮ ದಿನವನ್ನು ನಡೆಸುತ್ತಾರೆ. ಕೇರಳದಲ್ಲಿ ವಿಷು ಕಣಿ ಇಡುವ ಸಂಪ್ರದಾಯವಿದೆ. ಈ ದಿನ ವಿಷು ಕಣಿಗೆ ಇಟ್ಟ ವಸ್ತುಗಳನ್ನು ಮೊದಲು ನೋಡುವುದರಿಂದ ಜೀವನದುದ್ದಕ್ಕೂ ಸಮೃದ್ಧಿ, ಸಂಪತ್ತು ಮತ್ತು ಸಂತೋಷ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.

*******


January 1, 2022

ಯುಗಾದಿ ಎಂದರೇನು ? - Yugadi is on April 2, 2022


ಯುಗ + ಆದಿ = ಯುಗಾದಿ. ಯುಗದ ಆರಂಭ ದಿನ


ಕಲಿಯುಗದ ಆರಂಭ ದಿನ


Yuga + aadi  = Yugadi – Meaning starting day  of yuga.   i.e.,  Yuga  = era,      Aadi = beginning.


It is the starting day of Kaliyuga.


Kali Yuga began on Feb 20, midnight 3102 BC.   Kaliyuga started the day when Sri Krishna paramathma finished his avatara of dusta jana bhanjana at Dwaraka and at the same time Duryodhana breathed his last.


There are 4 yugadees.


Vaishaka Shukla Triteeya – Tretayuga

Bhadrapada Krishna Trayodashi – Kaliyuga

Kartika Shukla Navami – Krutayuga

Maga Shukla pournami – Dwaparayuga

(Brahma did the srusti of this world in suryodaya kaala on Chaitra Shukla Paadya – that is why it is termed Yugadi)


ಬ್ರಹ್ಮ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯ ದಿನ ಆರಂಭಿಸಿದ್ದರಿಂದ ಯುಗಾದಿ.


Yugadi as per Kaliyuga starts from Chaitra Shudda Paadya (Vasanta Rutu) “Samvatsara” means varsha, i.e., year.  As per Hindu tradition, there are 60 samvatsaraas, each has different names. As per pouranika belief, we are in the 51st year of Chaturmukha Brahma.   One day of Chaturmukha brahma =   chaturyuga sahasraani brahmaNO dinamuchyatE – 4 Yugachakras to be rotated 1000 times.    One time rotation of yugachakra would be 4320000 years.  In Brahma’s one morning, there will be 14 manvantaraas.  Now, we are in the seventh manvantara, the Vaivasvata Manvantara.  Out of 432000 years, only 5122 years have been completed and we are in the 5123rd year.  We are in the 1944 Shaalivaahana Shaka.  That is a shaka based on the date of founding of the empire by Shalivahana,   The initiation of the era known as Shalivahana Saka to celebrate his victory against the Sakas in the year 78AD.


On this day, we have to get up at Arunodayakala itself (daily we have to get up at Arunodaya kaala) with bhagavannamasmarane – we have to take abhyanjana snaana.    We have to get the idols of Srihari with Abhyanjana snaana  using Oil and seegepudi (sheekakai).    After doing the same the remaining portion of oil and seegepudi to be used for our oil bath.


*We must have the smarane of 

sapta chiranjeevigalu* –


ashwathaamaa balirvyaasa: hanUmaanscha vibhIShaNa: |

kRupa: parashuraamaScha saptaitE chiranjIvina: |

अश्वत्तामा बलिर्व्यास: हनूमांश्च विभीषण: । 

कृप: परशुरामश्च सप्तैते चिरंजीविन: ।

ಅಶ್ವತ್ತಾಮಾ ಬಲಿರ್ವ್ಯಾಸ: 

ಹನೂಮಾಂಶ್ಚ ವಿಭೀಷಣ: |

ಕೃಪ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |

After this, we have to do the vishesha pooja Then we must have the panchangashravana brahmana mukhena.


If in the morning it is not possible, then we can do the same in the evening also.  We will get the punya of Gangasnaanadhi punya with the panchanga shravana


Bevu bella  Samarpane –    During Naivedya we must do the samarpana of Bevu-bella (nimbaka dala) and after samarpana to Srihari, Lakshmidevaru, Mukyapraanadigalu, we have to take that Bevu – bella by chanting the following mantra


ಬೇವು ಬೆಲ್ಲ ಸ್ವೀಕಾರ ಮಂತ್ರ 


shataayurvajradEhaaya sarvasampatkaraaya cha |

sarvaariShTavinaashaaya nimbakadaLabhakShaNam |

शतायुर्वज्रदेहाय सर्वसंपत्कराय च । 

सर्वारिष्टविनाशाय निंबकदळभक्षणम् ।


ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |


Meaning – With the bhakshana of Nimbaka dala (bevu-bella, Our body will be fit and strong as a Diamond and it is sarvaarista naashaka.  It raises our ayassu.)

Ingredients required – Jaggery, Bevu (neem), water,


How to prepare? – We have to clean the neem leaves, grind with a bit of water and mix jiggery into it,   Bevu-bella mixture is ready.   This we have to take after taking Theertha on the Yugadi Day.


Bevu or Neem leaf preparation symbolically represents the different facets of life – sweet and bitter experiences of life.  Bevu Bella is just a simple mixture of fresh neem leaves and unprocessed broken jaggery.  It ls symbolic to  welcome the new year by first taking a mixture of neem flowers (Bevu) and jaggery  (bella),  which represents that we treat the bitterness and sweetness of life alike. Its significance is that life is a mixture of joys and sorrows and we should accept both in the right spirit.


Why is  Panchanga shravana required?

ಪಂಚಾಂಗ ಶ್ರವಣ ಫಲ


Panchanga = 5 angaas = 

 tithi (day)+ Vaara (ವಾರ) + Nakshatra (star) + Yoga + Karana.


By knowing the Tithi for the day - We will get wealth (shriya)

By knowing the "Week" for the day - We will have vruddhi in ayushya

By knowing the "Nakshatra" - Our sins will be destroyed

By knowing the "Yogas" -  "Rogaas (diseases) will be removed"

By knowing the "Karana" - Karyasiddi


In this way the panchanga shravana brings us good to every one who hears/reads :


ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ |

ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗನಿವಾರಣಂ |

ಕರಣಾತ್ಕಾರ್ಯಸಿದ್ಧಿಂ ಚ ಪಂಚಾಂಗ ಫಲಮುತ್ತಮಂ |

ಯ:ಶೃಣೋತಿ ಮಧುಶುಕ್ಲಪಕ್ಷಕೇ ವರ್ಷನಾಥ ಸಚಿವಾದಿಕಂ ಫಲಂ |


ಪ್ರಾಪ್ನೋಯಾದ್ದುರಿತ ಮುಕ್ತವಿಗ್ರಹಶ್ಚ ಆಯುರರ್ಥಮತುಲಂ ಯಶಸ್ಸುಖಂ |

ಆಯುರ್ವೃದ್ಧಿಂ ಪುತ್ರಪೌತ್ರಾಭಿವೃದ್ಧಿಂ 

ನಿತ್ಯಾರೋಗ್ಯಂ ಸಂಪದಂಚಾನಪಾಯಾಂ |

ಅಚ್ಚಿನಾನಾಮುತ್ಸವಾನಾಮವಾಪ್ತಿಂ 

ಯಚ್ಚಂತ್ಯೇತೇ ವತ್ಸರಾಧೀಶ ಮುಖ್ಯಾ: |


पंचांग श्रवण फल

तिथेश्च श्रियमाप्नोति वारादायुष्यवर्धनं ।

नक्षत्राद्धरतेपापं योगाद्रोगनिवारणं ।

करणात्कार्यसिद्धिं च पंचांग फलमुत्तमं ।

य:शृणोति मधुशुक्लपक्षके वर्षनाथ सचिवादिकं फलं । प्राप्नोयाद्दुरित मुक्तविग्रहश्च आयुरर्थमतुलं यशस्सुखं । आयुर्वृद्धिं पुत्रपौत्राभिवृद्धिं नित्यारोग्यं संपदंचानपायां । अच्चिनानामुत्सवानामवाप्तिं यच्चंत्येते वत्सराधीश मुख्या: ।

***

ಯುಗಾದಿ ಹಬ್ಬದ ಮಹತ್ವ

ಚೈತ್ರಮಾಸಕ್ಕೆ  ವಿಷ್ಣುರೂಪಿ ಪರಮಾತ್ಮ ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ  ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ ಮುಂತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು . ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿಂಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು

ಯುಗಾದಿಯಂದು ಪ್ರತಿಯೋಬ್ಬರು
ಅಭ್ಯಂಜನ ಮಾಡಲೇಬೇಕು .  ಈ ಮೊದಲು ಪೂಜಕನು ಸ್ನಾನ ಮಾಡಿ ಭಗವಂತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿಂದ ಅಭ್ಯಂಜನನವನ್ನು ಮಾಡಿಸಬೇಕು . ಭಗವಂತನಿಗೆ ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು.

ಸಪ್ತಚಿರಂಜೀವಿ ಸ್ಮರಣೆ

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ  ಸ್ಮರಿಸಬೇಕು .

ಅಶ್ವತ್ತಾಮಾ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ |

ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು  ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿಂಬಕ ದಳ ಬಕ್ಷಣ (ಬೇವು -ಬೆಲ್ಲ)ವನ್ನು ಮಾಡಬೇಕು

ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |

ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ  ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು.

***

ಯುಗಾದಿ ಹಬ್ಬದ ವಿಶಿಷ್ಟತೆ.

ಲೇಖನ  ಮಧುಸೂದನ ಕಲಿಭಟ್ ಬೆಂಗಳೂರು (ಧಾರವಾಡ ) 

ಜಗತ್ತಿನಾದ್ಯಂತ ಹೊಸ ವರ್ಷವೆಂದು ಕ್ರಿ. ಶ.  ಜನೆವರಿ ತಿಂಗಳ ಮೊದಲ ದಿನವನ್ನೇ ವರ್ಷಾರಂಭ ಮತ್ತು ಉಗಾದಿ ಎಂದು ಆಚರಿಸುವ ಜನವೇ ಹೆಚ್ಚು.  ಆದರೆ ಇದು ಪಾಶ್ಚಿಮಾತ್ಯ ಸಂಸ್ಕೃತಿ. ನಾವು ಭಾರತೀಯರು ನಾವು ಹಬ್ಬ ಹರಿದಿನಗಳನ್ನು ಆಚರಿಸುವ ವಿಧಾನ ತೀರ ಭಿನ್ನ.  ಅದಕ್ಕೆ ವೇದಕಾಲದಿಂದಲೂ ಬಂದ ಕಥೆ ಪುರಾಣಗಳು ಸಾಕ್ಷಿ ಆಗಿವೆ. 

ಈ ಯುಗಾದಿ ಶಬ್ದವೇ ಹೇಳಿದಂತೆ ಅಂದು ಹೊಸ ವರ್ಷ ಯುಗಕ್ಕೆ ಆದಿ ಅಂದರೆ ಪ್ರಾರಂಭದ ದಿನವಾಗಿದೆ. ಯುಗವು ಬರಲು ಬದಲಾಗಲು ಎಷ್ಟೋ ವರ್ಷಗಳು ಬೇಕು.  ಆದರೆ ಈ ದಿನ ಚೈತ್ರ ಮಾಸದ ಶುಕ್ಲಪಕ್ಷದ ಮೊದಲ ದಿನ ಯುಗವು ಆರಂಭವಾಗಿದ್ದರಿಂದ ಈ ದಿನ ಯುಗಾದಿ ಎಂದು ಕರೆಸಿಕೊಂಡು ಸಕಲ ಭಾರತೀಯರು ಹಬ್ಬವೆಂದು ಸಂಭ್ರಮ ದಿಂದ ಆಚರಿಸುತ್ತ, ಭಾರತೀಯ ಸಂಸ್ಕೃತಿಯನ್ನು ಬಾನಿನಲ್ಲಿ ಅಂಗಳಕ್ಕೆ ಧ್ವಜದಂತೆ ಹಾರಿಸಿ ಹೆಮ್ಮೆ ಪಡುತ್ತಾರೆ. 

ಯುಗಾದಿಯು ಎರಡು ಬಗೆ . ಮೊದಲನೆಯದು ಚಾಂದ್ರಮಾನ ಯುಗಾದಿ.  ಈ ಯುಗಾದಿ ಬರಬೇಕೆಂದರೆ ಚಂದ್ರನು ತಿಂಗಳ ಶುಕ್ಲಪಕ್ಷ ಪ್ರತಿಪದೆ ಯಿಂದ ಅಮಾವಾಸ್ಯೆ ವರೆಗೆ ಚಲಿಸುತ್ತ ಹನ್ನೆರಡು ತಿಂಗಳ ನಂತರ ಮತ್ತೆ ಚೈತ್ರ ಶುಕ್ಲಪಕ್ಷ ಪ್ರತಿಪದೆಗೆ  ಬಂದಾಗಲೇ ಯುಗಾದಿ ಹಬ್ಬ ಬರುವದು. ಎರಡನೆಯದು ಸೌರಮಾನ ಯುಗಾದಿ.  ಇದು ಹೆಸರೇ ತಿಳಿಸಿದಂತೆ ಸೂರ್ಯನು ಹನ್ನೆರಡು ರಾಶಿಗಳನ್ನು ತಿರುಗಿ ಮೇಷ ರಾಶಿಗೆ ಪ್ರವೇಶ ಮಾಡಿದ ದಿನ ಸೌರ ಯುಗಾದಿ ಎಂದು ಕರೆಸಿಕೊಳ್ಳುತ್ತದೆ. ಭಾರತದೇಶದಲ್ಲಿ ಕೆಲವರು ಸೌರಮಾನ ಪದ್ಧತಿ, ಇನ್ನು ಕೆಲವರು ಚಾಂದ್ರಮಾನ ಪದ್ಧತಿಯನ್ನು ಅನುಸರಿ ಸುತ್ತಾರೆ.

ಯುಗಾದಿ ದಿನ ಕಲ್ಪದ ಬ್ರಹ್ಮನ ದಿನದ ಆರಂಭವೂ ಆಗುವದು.  ಈಗಿನ ಕಲ್ಪದ ಹೆಸರು ಶ್ವೇತವರಾಹ ಕಲ್ಪ.  ಈ ಹೆಸರು ಬರಲು ಒಂದು ಕಥೆ ಇದೆ. ಹಿರಣ್ಯಾಕ್ಷ ಭೂದೇವಿ ಯನ್ನು ಕರೆದುಕೊಂಡು ಅಪಹರಿಸಿ ಸಮುದ್ರ ಮಧ್ಯದಲ್ಲಿ ಇದ್ದನು.  ಭೂದೇವಿಯನ್ನು ತಿರುಗಿ ತರಲು ದೇವಗಣ ಶ್ರೀಹರಿಗೆ ಮೊರೆಹೋಯಿತು. ಅದಕ್ಕೆ ಹರಿಯು ಮುಂದಾದನು.  ಆಗ ಬ್ರಹ್ಮ ಸೀನಿದಾಗ ಆತನ ಮೂಗಿನಿಂದ ಒಂದು ಸಣ್ಣ ಬಿಳಿಬಣ್ಣದ ವರಾಹ ಉದ್ಭವವಾಯಿತು. ತಕ್ಷಣ ಬೆಳೆದು ಬೃಹದಾಕಾರಕ್ಕೆ ಬಂದು ಹಿರಣ್ಯಾಕ್ಷನನ್ನು ಹುಡುಕಿ ಆತನನ್ನು ಸಂಹರಿಸಿ ಭೂದೇವಿಯನ್ನು ರಕ್ಷಿಸಿ ಲೋಕಕ್ಕೆ ಹಿತವನ್ನು ಬಯಸಿದನು.ಇಲ್ಲಿ ಒಂದು ಪ್ರಶ್ನೆ ಉದ್ಭವಿಸುವದು. ವರಾಹ ರೂಪ ಅವತಾರ ಎಷ್ಟು ಸಲ ಆಯಿತು. ಹಿರಣ್ಯಾಕ್ಷ ಎರಡು ಸಲ ಬಂದಿದಾನೆ ಏನು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿ ಭಾಗವತ ಪುರಾಣದಲ್ಲಿ ಬರುವದು. ಹರಿಯು ಮೊದಲ ಬಾರಿ ಭೂಮಿ ನೀರಲ್ಲಿಮುಳುಗಿ ಹೋಗುತ್ತಿತ್ತು. ಆಗ ಆದಿವರಾಹ ನಾಗಿ ಭೂಮಿಯನ್ನು ಆದರ ಕಕ್ಷೆಯಲ್ಲಿ ಇಟ್ಟನು.  ಆಗ ಈ ಕಾರ್ಯಕ್ಕೆ ವಿಘ್ನ ತಂದ ಆದಿ ಹಿರಣ್ಯಾಕ್ಷನನ್ನು ಸಂಹರಿಸಿದನು.  ಎರಡನೇಸಲ ಶ್ವೇತ ವರಾಹನಾಗಿಹಿರಣ್ಯಾಕ್ಷ ರಾಕ್ಷಸನಿಂದ ರಕ್ಷಿಸಿದನು. 

ಶ್ವೇತವರಾಹ ಕಲ್ಪಕ್ಕಿಂತ ಮೊದಲು ಪಾದ್ಮ ಕಲ್ಪ ಎಂಬ ಹೆಸರು ಕಲ್ಪಕ್ಕೆ ಇತ್ತು. ಶ್ರೀ ಹರಿಯ ನಾಭಿಕಮಲದಿಂದ ಬ್ರಹ್ಮ ಹುಟ್ಟಿದನು.  ಆಗ ಅವನೂ ಕಣ್ಣು ತೆರೆದಾಗ ವಿಷ್ಣು ಸೃಷ್ಟಿ ಮಾಡೆಂದು ಹೇಳಿದನು.  ಆದರೆ ಸೃಷ್ಟಿಗೆ ಸಲಕರಣೆ ಬೇಕು ಎಂಬ ವಿಚಾರ ಬಂದಿತು. ಆಗ ತಪ  ಎಂಬ ಶಬ್ದ ಆದೇಶ ಬಂದಿತು.  ಅಂದರೆ ಬ್ರಹ್ಮ ಆಲೋಚನೆ ಮಾಡಿ ತಪಸ್ಸು ಮಾಡಿದನು.  ಈ ಸಮಯಕ್ಕೆ ಪಾದ್ಮಕಲ್ಪ ಎಂದು ಹೆಸರು ಬಂದಿತು.

ಈರೀತಿಯಿಂದ ಈ ಕಲ್ಪಕ್ಕೆ ಶ್ವೇತವರಾಹ ಕಲ್ಪ ಎಂಬ ಹೆಸರು ಬಂದಿತು.  ಈ ಯುಗಾದಿ ದಿನ ಬೇಸಿಗೆ ಕಾಲ ಎಂದು ಊರಲ್ಲಿ ಅಲ್ಲಲ್ಲಿ ಪ್ರವಾಸಿಗಳಿಗೆ, ಬಡ ಕಾರ್ಮಿಕರಿಗೆ ನೀರಿನ ದಾಹ ನೀಗಿಸಲು ಅರವಟ್ಟಿಗೆಗಳನ್ನು ತೆರೆಯುತ್ತಾರೆ. ಇದರಿಂದ ಸಾವಿರ ವರ್ಷ್ ಪಿತೃಗಳು ಸುಖದಿಂದ ಇರುವರೆಂದು ನೀತಿ ತತ್ವ ನುಡಿಗಳಿವೆ. 

ಭಾರತದಲ್ಲಿ ಈ ಯುಗಾದಿಯನ್ನು ನಾನಾ ರೀತಿಯಿಂದ ಅವಹರಿಸುತ್ತಿದ್ದಾರೆ.  ಮಹಾರಾಷ್ಟ್ರ ದಲ್ಲಿ ಮನೆಯ ಮುಂಭಾಗದಲ್ಲಿ ಕೋಲು ನೆಟ್ಟು ಆದರ ಮೇಲೆ ತಂಬಿಗೆ ಹಾಕಿ ಅದಕ್ಕೆ ಒಂದು ಬಣ್ಣದ ಅರಿವೆ ಕಟ್ಟಿ ಅದಕ್ಕೆ ಗುಡಿ ಎಂದು ಕರೆಯುವವರು. ಗುಡಿ ಎಂದರೆ ಗೋಪುರ ಯುಗಾದಿ ಪ್ರತಿಪದೆ ದಿನ ಈ ಧ್ವಜ ಹಾರಿಸಿದಂತೆ ಹಾರಿಸುವರು.  ಇದಕ್ಕೆ ಆ ದೇಶದಲ್ಲಿ ಗುಡಿ ಪಾಡವಾ  ಎನ್ನುವರು. ಇನ್ನು ಕೆಲವು ದೇವಸ್ಥಾನ ಗಳಲ್ಲಿ ಧ್ವಜಾರೋಹಣ ಮಾಡುವರು.  ಹೊಸವರುಷದ ಶುಭಾರಂಭ ಎಂದು ಶುಭ ಸೂಚಕವಾಗಿ ಧ್ವಜ ಹಾರಿಸುವರು. ದೇವರ ದರ್ಶನಕ್ಕೆಂದು ಜನರು ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಒಬ್ಬರಿಗೊಬ್ಬರು ಶುಭ ಹಾರೈಸುವರು. 

ಮನೆಯಲ್ಲಿ ಶುದ್ಧ ಹವೆ ಬರಲಿ ಎಂದು ಬಾಗಿಲಿಗೆ ಬೇವಿನ ಟೊಂಗೆ ಯನ್ನು ಕಟ್ಟುತ್ತಾರೆ. ಬೇವಿನ ಕಹಿ ವಾತಾವರಣವನ್ನು ಶುದ್ಧ ಮಾಡುತ್ತದೆ. ಪಂಚಾಂಗ ಪ್ರಕಾರ ಬೇವು ಬೆಲ್ಲ ಬೆರೆಸಿ ತಿನ್ನುವ ರೂಢಿಇದೆ. ಇದು ಆಯುರ್ವೇದ ಪ್ರಕಾರ ಒಳ್ಳೆಯದು ಆರೋಗ್ಯ ಸುಧಾರಿಸುವದು. ಆಧ್ಯಾತ್ಮಿಕವಾಗಿ ಈ ಬೇವುಬೆಲ್ಲದ ಅರ್ಥ ಬೇರೆ ಇದೆ. ಜೀವನದಲ್ಲಿ ಸಿಹಿಕಹಿ  ಘಟನೆ ಸಹಜವಾಗಿ ಬರುತ್ತವೆ. ಸಿಹಿಘಟನೆ ಬಂದಾಗ ಖುಷಿಯಾಗಿ, ಕಹಿಘಟನೆ  ಬಂದಾಗ ದುಃಖ ಪಡುವ ಅವಶ್ಯಕತೆ ಇಲ್ಲ.  ಎರಡನ್ನು ಧೈರ್ಯದಿಂದ ಎದುರಿಸಿ ಭವ ಸಾಗರವನ್ನು ದಾಟಬೇಕು ಎಂಬುದೇ ಇಲ್ಲಿ ಅಡಗಿದ ಮುಖ್ಯ ತತ್ವ. ಭಗವದ್ಗೀತೆಯಲ್ಲಿ ಪರಮಾತ್ಮ ಲಾಭಾ ಲಾಭೌ... ಜಯಾಜಯೌ  ಎಂಬ ವಾಕ್ಯದಿಂದ ಈ ತತ್ವ ದ ಅಂತರಾರ್ಥ ಹೇಳಿದ್ದಾನೆ.ಬೇವಿನ ಹೂವನ್ನು ಬೆಲ್ಲದೊಂದಿಗೆ ಕೂಡಿಸಿ ತಿನ್ನುವದಲ್ಲದೆ, ಒಂದೊಂದು ಕಡೆಗೆ ಹೂವು ಹಾಕಿ ಮಾವಿನಕಾಯಿ ಮಿಶ್ರಣ ಮಾಡಿ ಪಾನಕ ಕುಡಿಯಲು ಕೊಡುತ್ತಾರೆ. ಇನ್ನು ಕೆಲವೆಡೆ ಹೊಸ ವರ್ಷಕ್ಕೆ ಬರುವ ವಸಂತ ಋತುಗೆ ಹಾರ್ದಿಕ ಸ್ವಾಗತವನ್ನು ಹದಿನೈದು ದಿನ ಮೊದಲೇ ಹೋಳಿಬಣ್ಣ ಓಕುಳಿ ಆಡಿ ಕೋರುತ್ತಾರೆ. ಎಂಟು ದಿನಗಳಲ್ಲಿ ಶ್ರೀ ರಾಮನವಮಿ ಬರುವದೆಂದು ರಾಮನವರಾತ್ರಿ ಉಗಾದಿಯಿಂದಲೇ ಪ್ರಾರಂಭಿಸುತ್ತಾರೆ..  ವಸಂತದ ಕುರುಹಾಗಿ ಎಲ್ಲಾಗಿಡಮರಗಳು ತಮಗೆ ಮೊದಲೇ ತಿಳಿದ ವಿಷಯ ವೆಂಬಂತೆ ಪ್ರಕೃತಿಮಾತೆಗೆ ಹಸಿರು ಬಣ್ಣದ ಎಲೆಗಳಿಂದ ಅಲಂಕಾರ ಮಾಡಿದಂತೆ ತೋರುವದು.ಇಂಥ ಭಾರತೀಯ ಪರಂಪರೆಯ ಯುಗಾದಿ ಹಬ್ಬ ಸಕಲರಿಗೂ ಆಯುರಾರೋಗ್ಯ ತರಲೆಂದು ಕುಲದೇವತೆ ಹಯಗ್ರೀವ ದೇವರಲ್ಲಿ ಪ್ರಾರ್ಥಿಸುವೆ.…

end

***


ಯುಗಾದಿ 2022

ಪುರಾಣದ ಪ್ರಕಾರ ಬ್ರಹ್ಮದೇವರು ಮೊದಲನೇ ಯುಗವಾದ ಕೃತ ಯುಗವನ್ನು ಆರಂಭಿಸಿದ ದಿನ. ಹಾಗಾಗಿ ಈ ಯುಗಾದಿ ದಿನದಿಂದಲೇ ಚಾಂದ್ರಮಾನ ಪದ್ಧತಿಯ ಕಾಲಗಣನೆ ಆರಂಭವಾಗುತ್ತದೆ. 

   ಚಂದ್ರ ಭೂಮಿಯ ಸುತ್ತ ಸುತ್ತುವ ವೇಗದ ಗತಿಯನ್ನು  ಆಧರಿಸಿ ಚಾಂದ್ರಮಾನ ಪದ್ಧತಿಯನ್ನು ರೂಪಿಸಲಾಗಿದೆ. 

  ಚಾಂದ್ರಮಾನ ಪದ್ಧತಿಯ ವರ್ಷ (ಸಂವತ್ಸರ)ದ ಮೊದಲ ದಿನ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ. ಹಾಗಾಗಿ ಈ ಪದ್ಧತಿಯನ್ನು ಅನುಸರಿಸುವವರಿಗೆ ಈ ದಿನ ಯುಗಾದಿಯಾಗಿರುತ್ತದೆ. ಹಾಗಾಗಿ ಚಾಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ.

 ಇದೇ ರೀತಿ ಸೂರ್ಯನ ಗತಿಯನ್ನು ಆಧರಿಸಿ ಸೌರಮಾನ ಪದ್ಧತಿಯನ್ನು ರೂಪಿಸಲಾಗಿದೆ. ಸೂರ್ಯ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳಲ್ಲಿ ಒಂದೊಂದು ತಿಂಗಳು ಇರುವುದರಿಂದ ಈ ಪದ್ಧತಿ ಅನುಸರಣೆಯನ್ನು ಸೌರಮಾನ ಎನ್ನಲಾಗುತ್ತದೆ. ಹಾಗಾಗಿ ಸೂರ್ಯ ಮೇಷ ರಾಶಿಗೆ ಪ್ರವೇಶಿಸುವ ಸಂಕ್ರಮಣ ದಿನದ ಮರು ದಿನವನ್ನು ಸೌರಮಾನ ಯುಗಾದಿ ಎನ್ನಲಾಗುತ್ತದೆ. 

  02-04-2022 ರಂದು ಶನಿವಾರ ನಮಗೆಲ್ಲಾ ಚಾಂದ್ರಮಾನ ಯುಗಾದಿ. ಈ ವರ್ಷ ಪಾಡ್ಯಮಿ ದೃಗ್ಗಣಿತ ಪಂಚಾಂಗದ ಪ್ರಕಾರ ಮಧ್ಯಾಹ್ನ 12.01 ನಿಮಿಷಕ್ಕೆ ಮುಗಿಯಲಿದೆ. ಬೇಗನೆ (ಮುಗಿಯುವುದರಿಂದ ಹಬ್ಬವನ್ನು ಬೆಳಗ್ಗೆ ಬೇಗನೆ ಆಚರಿಸುವುದು ಉತ್ತಮ.

  ಹಬ್ಬದ ದಿನ ಮುಂಜಾನೆ ಎದ್ದು ಹೊಸ ವರ್ಷ ಹರುಷ ತರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ. ನಂತರ ಶುದ್ಧವಾದ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದಕ್ಕೆ ನಿಮ್ಮಲ್ಲಿ ಶ್ರೀಗಂಧದೆಣ್ಣೆ ಮತ್ತಿತರ ಸುಗಂಧದ ಎಣ್ಣೆಯಿದ್ದರೆ ಮಿಶ್ರಣ ಮಾಡಿ. ಇಲ್ಲವಾದಲ್ಲಿ ಮಾವಿನ ಚಿಗುರು, ಬೇವಿನ ಚಿಗುರು ಹಾಕಿ ಮತ್ತೆ ಸ್ವಲ್ಪ ಬಿಸಿ ಮಾಡಿ, ದೇಹಕ್ಕೆ ಈ ಎಣ್ಣೆಯನ್ನು ಹಚ್ಚಿ ಮರ್ಧನ  (ಮಸಾಜ್) ಮಾಡಿಸಿಕೊಳ್ಳಿ. ಅತಿ ಹೆಚ್ಚು ಬಿಸಿಯಿಲ್ಲದ ನೀರನ್ನು ಎರೆದುಕೊಂಡು ಸೀಗೆಪುಡಿಯೊಟ್ಟಿಗೆ ಸ್ನಾನ ಮಾಡಿ. ಅಭ್ಯಂಗ ಸ್ನಾನವನ್ನು ಸ್ತ್ರೀ, ಪುರುಷ, ಬಾಲ, ವೃದ್ಧ ಎಂಬ ಭೇದವಿಲ್ಲದೆ ಎಲ್ಲರೂ ಮಾಡಬೇಕು. ಈ ಅಭ್ಯಂಗ ಸ್ನಾನ ದೇಹಕ್ಕೆ ಹಿತ ನೀಡುವುದರ ಜತೆ ಬಿಗಿದ ಸ್ನಾಯುಗಳನ್ನು ಸಡಿಲಗೊಳಿಸಿ ಬಲಗೊಳಿಸುತ್ತದೆ. 

    ಹೊಸವರ್ಷದ ಅಂಗವಾಗಿ ಮನೆ ಮುಂದೆ ರಂಗೋಲಿ ಬಿಡಿಸಿ, ಬಾಗಿಲುಗಳಿಗೆ ಮಾವಿನ ತಳಿರಿನ ತೋರಣ ಕಟ್ಟಿ, ಬೇವಿನ ಸೊಪ್ಪು ಸಿಕ್ಕಿಸಬೇಕು. ನಂತರ ಹೊಸ ಬಟ್ಟೆ ಧರಿಸಿ, ದೇವರಿಗೆ ಯಥಾಶಕ್ತಿ ಭಕ್ತಿಯಿಂದ ಪೂಜೆ ಸಲ್ಲಿಸಿ, ತಂದೆ ತಾಯಿ ಹಾಗೂ ಹಿರಿಯರಿಗೆ ನಮಿಸಿ. ಇದಾದ ಬಳಿಕ ಮನೆ ಮಂದಿಯೊಂದಿಗೆ ದೇವರಿಗೆ ಸಮರ್ಪಿಸಿದ ಬೇವು ಬೆಲ್ಲವನ್ನು ಸ್ವೀಕರಿಸಿ.

 ಅದ್ಧೂರಿ, ಆಡಂಬರ ಇಲ್ಲದಿದ್ದರೂ ಶುದ್ಧತೆ ಹಾಗೂ ಶುದ್ಧ ಮನಸ್ಸಿನಿಂದ ಹಬ್ಬ ಆಚರಣೆ ಮಾಡಿ. 

ಯುಗಾದಿ ಹಬ್ಬದ ದಿನ ಮಹಾ ಪರ್ವದಿನ.  ಬ್ರಹ್ಮಾಂಡ ಸೃಷ್ಠಿಯಾದ ದಿನ.

ಶ್ರೀಬ್ರಹ್ಮದೇವರು ಬ್ರಹ್ಮಾಂಡ ಸೃಷ್ಠಿ ಮಾಡಿದಾಗ ಸ್ವಯಂಭುವ  ಮನ್ವಂತರ, ಕೃತಯುಗ, ಪ್ರಭವ ಸಂವತ್ಸರ, ಉತ್ತರಾಯಣ,  ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯಮಿ ತಿಥಿ, ಭಾನುವಾರ, ಅಶ್ವಿನಿನಕ್ಷತ್ರ, ವಿಷ್ಕಾಂಭ ಯೋಗ ಹಾಗೂ ಭವಕರಣ ಆರಂಭವಾದ ದಿನ.

ಮತ್ಸಾವತಾರದ ದಿನ:

 ರಾಕ್ಷಸನೊಬ್ಬ ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿಸಿದ್ದ, ಅವನನ್ನು ಸಂಹರಿಸಲು ಮಹಾವಿಷ್ಣು ಮತ್ಸ್ಯರೂಪ ತಾಳಿದದಿನ.

ಶ್ರೀರಾಮಚಂದ್ರನ ಪಟ್ಟಾಭಿಷೇಕ: 

 ಹದಿನಾಲ್ಕು ವರ್ಷ ವನವಾಸ ಮಾಡಿ ಅಯೋಧ್ಯೆಗೆ  ವಾಪಾಸ್ಸಾದ ಶ್ರೀರಾಮಚಂದ್ರ ಮಹಾರಾಜನಿಗೆ ಪಟ್ಟಾಭಿಷೇಕವಾದ ದಿನ. 

 ಶಾಲಿವಾಹನ ಮಹಾರಾಜನಾದ ದಿನ: 

  ದಕ್ಷಿಣ ಭಾರತದ ಪ್ರಸಿದ್ಧ ದೊರೆ ಶಾಲಿವಾಹನ ಮಹಾರಾಜ  ಪಟ್ಟಾಭಿಷಿಕ್ತನಾದ ದಿನವಿದು. 

 ಇಷ್ಟೆಲ್ಲಾ ಹಿನ್ನೆಲೆಯುಳ್ಳ ಈ ದಿನ ಋತುಗಳಲ್ಲಿ ಅತ್ಯಂತ ಶ್ರೇಷ್ಠವಾದ ವಸಂತ ಋತು ಆಗಮನದ ದಿನ. ಪ್ರಕೃತಿಯಲ್ಲಿ ಮರಗಿಡ ಚಿಗುರಿ ನಳನಳಿಸುವ ಕಾಲವಿದು. ಇಂತಹ ಸಂಭ್ರಮದ ಹಬ್ಬವನ್ನು ಸಡಗರದಿಂದ ಆಚರಿಸೋಣ.

 ಹಬ್ಬದ ದಿನ ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಈ ಶ್ಲೋಕವನ್ನು ಹೇಳಿಕೊಳ್ಳಿ.

 ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ|

ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ||

  ( ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸುತ್ತೇನೆ ).

   ಬೇವು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ, ಶತ್ರುತ್ವ ಬಿಟ್ಟು ಪ್ರೀತಿಯ ಸ್ನೇಹತ್ವ ಬೆಳೆಸೋಣ. ಮತ್ತೊಮ್ಮೆ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

 ‌(received in WhatsApp)

***

ಹೊಸ ವರ್ಷಕ್ಕೆ ಹೊಸ ಡೈರಿ ಕೊಂಡು ಹೊಸ ಹಾಳೆಯಲ್ಲಿ ಹೊಸ ಪೆನ್ನು ಹಿಡಿದು ಹತ್ತಾರು resolutions ಬರೆಯುವವರನ್ನು ನೋಡಿಯೇ ಇರುತ್ತೀರಿ. ಅಥವಾ ನೀವಾದರೂ ಒಂದಲ್ಲ ಒಂದು ವರ್ಷದಲ್ಲಿ ಹಾಗೆ ಬರೆದೇ ಇರುತ್ತೀರಿ. ಹೊಸ ವರ್ಷದ ಆರಂಭದಂದು ಹೊಸ ನಿರ್ಧಾರಗಳನ್ನು ಮಾಡುವುದೇ ಆದರೆ ಈ ಕೆಳಗಿನವನ್ನು ಮಾಡಿ:


೧. ಇಂದಿನಿಂದ ನಾನು ಕನಿಷ್ಠ ವಾರಕ್ಕೊಮ್ಮೆ ಒಂದು ಹಿಂದೂ ದೇವಸ್ಥಾನಕ್ಕೆ ಹೋಗುತ್ತೇನೆ.


೨. ದೇವಸ್ಥಾನಕ್ಕೆ ಹೋಗುವಾಗ ಭಾರತೀಯ ಸಂಸ್ಕೃತಿ ಬಿಂಬಿಸುವ ಬಟ್ಟೆಯನ್ನೇ ಧರಿಸುತ್ತೇನೆ.


೩. ವರ್ಷದಲ್ಲಿ ಕನಿಷ್ಠ ಮೂರು ಹಬ್ಬಗಳನ್ನಾದರೂ ಅರ್ಥ ಅರಿತು, ಸಂಪೂರ್ಣ ಭಾಗವಹಿಸಿ, ಆಚರಿಸುತ್ತೇನೆ.


೪. ಭಾರತೀಯ ಪಂಚಾಂಗದಲ್ಲಿ ಬಳಸುವ ಋತು, ಮಾಸ, ನಕ್ಷತ್ರಗಳ ಹೆಸರುಗಳನ್ನು ತಿಳಿದುಕೊಳ್ಳುತ್ತೇನೆ.


೫. ಪ್ರತಿ ತಿಂಗಳು ಇಂತಿಷ್ಟೆಂದು ಮೊತ್ತವನ್ನು ತೆಗೆದಿಟ್ಟು ಮಠಮಾನ್ಯರು ನಡೆಸುವ ಗೋಶಾಲೆಗಳಿಗೆ ದಾನ ಕೊಡುತ್ತೇನೆ.


೬. ಪ್ರತಿ ದಿನ ಭಗವದ್ಗೀತೆಯ ಎರಡು ಶ್ಲೋಕಗಳನ್ನು ಓದಿ, ಅರ್ಥ ಓದಿಕೊಳ್ಳುತ್ತೇನೆ.


೭. ರೇಷನ್/ತರಕಾರಿ/ಹಣ್ಣುಹಂಪಲು ಇತ್ಯಾದಿಗಳಿಗೆ ಪ್ರತಿ ತಿಂಗಳು ನಾನು ಖರ್ಚು ಮಾಡುವ ದುಡ್ಡಿನಲ್ಲಿ ಒಂದೇ ಒಂದು ರುಪಾಯಿಯೂ ದೇಶದ್ರೋಹದ ಕೆಲಸಕ್ಕೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.


೮. ಈ ವರ್ಷ ಮನೆಯಲ್ಲಿ ನಡೆಯುವ ಎಲ್ಲ ಹುಟ್ಟುಹಬ್ಬಗಳನ್ನೂ ಭಾರತೀಯ ಕ್ರಮದಲ್ಲೇ ಆಚರಿಸುತ್ತೇನೆ. 


೯. ಡಿ-ಗ್ಯಾಂಗ್ ಬಂಡವಾಳ ಹೂಡುವ ಯಾವುದೇ ಸಿನೆಮವನ್ನು ನಾನು ಈ ಸಲ ದುಡ್ಡುಕೊಟ್ಟು ನೋಡುವುದಿಲ್ಲ.


೧೦. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕನಿಷ್ಠ ೫ ಪುಸ್ತಕಗಳನ್ನು ಈ ವರ್ಷ ಓದುತ್ತೇನೆ.


೧೧. ಈ ವರ್ಷ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಕನಿಷ್ಠ ೨೦ ಶ್ಲೋಕಗಳನ್ನು ಕಂಠಪಾಠ ಮಾಡಿ, ಅರ್ಥ ತಿಳಿದು, ಪ್ರತಿ ದಿನ ಪಠಿಸುತ್ತೇನೆ; ಮನೆಮಕ್ಕಳಿಗೆ ಹೇಳಿಕೊಡುತ್ತೇನೆ.


೧೨. ಹಿಂದೂ ಧರ್ಮದ ಪರಂಪರೆ, ಇತಿಹಾಸಗಳ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನಿಸುತ್ತೇನೆ. ನಾನೊಬ್ಬ ಜಾಗೃತ ಹಿಂದೂ. ಈ ವರ್ಷದ ಒಂದಾದರೂ ಕಾರ್ಯಕ್ರಮದಲ್ಲಿ ತಿಲಕ ಧರಿಸಿ, ಸಕ್ರಿಯವಾಗಿ ಭಾಗವಹಿಸುತ್ತೇನೆ.


- ಈ ಪಟ್ಟಿಗೆ ನೀವೂ ನಿಮ್ಮ ನಿರ್ಧಾರಗಳನ್ನು ಸೇರಿಸಬಹುದು.


#ಶುಭಕೃತ್..

**



No comments:

Post a Comment