Akshaya Thruteeya (Glory-Significance-Merits.....)
Vaisaakha Sukla Trutheeya is celebrated as Akshaya Thrutheeya, one of the most auspicious days in Hindu calendar.
Akshaya means...
the one that is not perishable;
ever lasting;
the one that makes every thing in life abundant.
Trutheeya is the 3rd day in Hindu Lunar calendar known as Jaya thithi.
Akshaya Thrutheeya is assumed as the day Tretha Yuga had commenced known as Tretha Yugaadi. It is also reckoned as Kalpaadi (Niilalohita).
According to sacred scripts,
Tretha Yuga had commenced on 3rd day of the bright fortnight (sukla Thrutheeya) in the lunar month Vaisakha Masam;
Krutha Yuga on the 9th day of the bright fortnight (sukla Navami) in Kaartheeka Masam;
Dwaapara Yuga on the New Moon day (Bahula Amaavaasya) in Maagha Masam;
Kali Yuga on 13th day of the dark fortnight (Trayodasi) in Bhaadrapada Masam;
Akshaya Thrutheeya is reckoned as Sri Parashurama Jayanthi the sacred day Lord Parashuraama (Lord Vishnu’s Avathara) was born;
Arghya to be given to Parashurama Devaru with the following sloka…
Jamadagnisutho Veera Kshatriaanthakara Prabho!
Gruhaanaarghyam Mayaa Dattam Krupayaa Parameswara!!
In MahaBharatha, Lord Sri Krishna enlightened Dharmaraja about the significance of Akshaya Thrutheeya.
Vishnu Purana; Bhavishyottara Purana have also described the prominence of Akshaya Thrutheeya.
Astrologically Akshaya Thrutheeya is the day royal planets Sun and Moon will be in their signs of exaltation;
Sun in Aries (Mesha Raasi) and
Moon in Vrushabha Raasi (Taurus).
If the day coincide with Wednesday and Rohini constellation it is considered to be more meritorious.
Special celebrations are held at all Vishnu related temples on this sacred day of Akshaya Thrutheeya;
Brundavanas of Sri Raaghavendra Swamy including the Moola Brundavana at Mantralayam will be adorned with Chandana lepana on the day of Akshaya Thrutheeya.
At Simhachalam Sri Varaaha Lakshmi Narasimha Swamy temple, special celebrations are held on this sacred day with a unique ritual called Chandanotsavam.
It is only on this particular day in the year, Lord gives darshan in Nija roopa without any decoration which is otherwise always fully covered with Chandana (sandalwood paste).
Worshiping Lord Sri Krishna with Chandana (sandalwood paste) on this day is highly meritorious;
Ya: karothi thruteeyaayaam Krushnam Chandana Bhooshitham!
Vaisaakhasya sithe pakshe sayaachyuta mandiram!!
One who worships Lord Sri Krishna with Chandana on this day will attain Vishnu Loka.
Reading/Listening/sponsoring Sri Venkatesa Mahaatmya (Srinivasa KalyaAna) PuraAna for a week days starting from this day is highly meritorious.
Giving daana on this auspicious day is given lot of significance; which is highly sacred; celestial that will give multi-folded meritorious results.
➡ What daana can be given/prescribed on the day of Akshaya Thrutheeya?
Though there are many types of charities that can be given; giving Udaka Kumbha Dana on this auspicious day is given lot of prominence.
Yesha DharmaGhato Dhattoh Brahma Vishnu Sivathmaka
Asya Pradhanathsakalam mamasanthu manoratha;
Meaning: Let this water pot called Dharma Ghata signifying the trinal lords (Brahma, Vishnu and Siva) bring unto me fulfillment of all desires. This can be given either in memory of fore fathers or to please the Lord;
Apart from Udaka Kumbha Daana; what else can be given as charity on this day?
wheat;
curd rice;
umbrella;
paada raksha;
vasthra (clothes);
Gho-Daana (cow),
Bhoodana;
Hiranya Daana (Gold/silver/Cash)
on this day is sacred, punyadayaka
which will produce multifold and everlasting (Akshaya) merits.
> Vasantha Pooja: giving Paanaka, Kosambari etc.(Palahara Pooja), to Brahmanas;
> Yava homa, Yava Daana (charity), Yava Bhakshana on this sacred day meritorious - paapa parihaara;
➡ AKSHAYA THRUTHEEYA = SADE THEEN MUHURTHA....
In Hindu electional astrology Akshaya Thrutheeya is an auspicious day when one need not look into the Almanac (Panchaanga) to select an auspicious moment. It is called as Sade Theen Muhurtha.
Sade theen means 3½ and muhurtha means auspicious time.
Four such auspicious days in Hindu calendar are…
> Chaithra Sukla Prathama (Paadyami) – Ugaadi day;
> Vaisakha Sukla Thrutheeya (Tadiya) – Akshaya Thrutheeya;
> Aaswayuja Sukla Dasami (Vijaya Dasami) – Dussera;
> Kaartheeka Sukla Prathama (Paadyami) – Bali Paadyami;
Akshaya Thrutheeya is one of the most sacred days (Parvadina) in Hindu religious/spiritual calendar.
Maxims of sacred texts prescribe that during any Parva-Punya kaala one should perform meritorious activities (punya kaarya) like Snaana - Daana - Prayer - Pithru tharpana etc.
➡ PARASHURAMA JAYANTHI.....
6th in the line of Dasavatharas, Parashurama was an incarnation of Lord Vishnu, born to Sage Jamadagni (one of the Saptha Rishis) and Renuka in Tretha Yuga.
Born in the clan of Sage Bhrigu he is also known as BhargavaRama.
He derived his name Parashurama from his weapon called Parashu (axe).
In sloka # 61 of Sri Vishnu Sahasranama Stothram,
Lord Vishnu is described as Khanda-Parashuh;
Parashurama the axe wielder.
He is the one with a punishing axe.
The power of that axe was so immense that all Kshathriyas who were arrogant were destroyed by it. He is the Lord wielding the invincible axe which was like a thunderbolt.
We come across the character of Parashurama in the epics Ramayana and Maha Bharatha.
Bheeshma, Drona and Karna of Mahabharatha fame were his disciples.
Lord Parashurama was known for his ardent devotion towards his parents.
Known for his valor and aggression Lord Parashurama killed the evil minded Kshathriyas 21 times to protect the world from their oppression and to suppress their pride and arrogance.
He later donated the land thus acquired to Brahmins and created a new land by pushing Samudra back throwing his arrow.
The area of land thus acquired came to be known as Parashurama Kshethra (Parashurama Srushti) which is believed to be the region between Arabian Sea and the western Ghats stretching from Nasik in Maharashtra up to Kanyakumari in Tamil Nadu covering the coastal belt of Kerala along with the Konkan region of Karnataka, Goa and Maharashtra.
***
Akshaya Tritiya
In Sanskrit, the word akshaya (अक्षय्य) means "never decreasing" in the sense of "prosperity, hope, joy, success."
Akshaya also means inexhaustible, that which never lessens or deteriorates,
while tritiya means "third phase of the moon."
It is observed & named after the 3rd lunar day of the spring month of Vaisakha in the Hindu calendar.
Celebrated with great devotion and ardour, the religious occasion marks the birth of Lord Parasurama.
There are many lores & legends associated with this day.
One of the stories is that, on this day the Ganges came to Earth to purify mankind.
Akshaya Tritiya commemorates the day the Pandavas while in exile received an 'Akshaya Patra' from Surya Dev which ensured an endless supply of food for them each day till Draupadi finished eating.
This is also the day when Sudama received his unlimited blessings & gifts from his friend, Lord Krishna.
It is also believed that Lord Kubera received his wealth and position as the custodian of wealth on this day.
Goddess Annapoorna, the Goddess of Food & nourishment also appeared on this day and set up her eternal kitchen at Kashi.
People celebrate this day in the hope that their Wealth too will multiply during the year and their prosperity will never end.
It is thus believed that the festival of Akshaya Tritiya brings good fortune and success.
The entire day of Akshaya Tritiya is considered fruitful to invest in gold, silver and other investments.
It is considered to be the most auspicious day for new beginnings.
Start something new today, a new venture, a new investment, a new learning.
As we celebrate Akshaya Tritiya today, lets bow our head in gratitude & thank God for the umpteen blessings & wonderful journey ahead.
Wish your wealth too multiplies manifold and God grants and blesses you with an 'Akshya Patra' and may you stay blessed forever.
-by Dr Ullas Mahesh..
***
ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ
ಅಕ್ಷಯವಾಗಲಿ ಪ್ರೀತಿ ವಿಶ್ವಾಸ
ಅಕ್ಷಯವಾಗಲಿ ಸ್ನೇಹ ಗೆಳೆತನ
ಅಕ್ಷಯವಾಗಲಿ ಮಮತೆ
ಅಕ್ಷಯವಾಗಲಿ ಒಲವು
ಅಕ್ಷಯವಾಗಲಿ ಗೆಲುವು
ಅಕ್ಷಯವಾಗಲಿ ಉತ್ತಮ ಆರೋಗ್ಯ
ಅಕ್ಷಯವಾಗಲಿ ನಂಬಿಕೆ ವಿಶ್ವಾಸ
ಅಕ್ಷಯವಾಗಲಿ ಅಭಿವೃದ್ಧಿ
ಅಕ್ಷಯವಾಗಲಿ ಕಾರ್ಯಸಿದ್ಧಿ
ಅಕ್ಷಯ ತೃತೀಯದ ಈ ಶುಭದಿನದಂದು ಕಷ್ಟ, ಚಿಂತೆ ನೋವು ಕ್ಷಯವಾಗಲಿ,
ಸದಾ ಸುಖ ನೆಮ್ಮದಿ ಆನಂದ ನಿಮ್ಮದಾಗಲಿ
ಶುಭಮುಂಜಾನೆಯೊಂದಿಗೆಅಕ್ಷಯ ತ್ರತಿಯಾ ಹಬ್ಬದ ಶುಭಾಶುಗಳು
ಅಕ್ಷಯ ತೃತೀಯ ಮಹತ್ವ
ಅಕ್ಷಯ ತೃತೀಯದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ಏನು ?
ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ! ಎನ್ನುವಂತಹ ಅವರ ಭಾಷಣಗಳು.
ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠದಲ್ಲಿ ಸಾಲವನ್ನಾದರೂ ಮಾಡಿ ತೆಗೆದುಕೊಳ್ಳುವ ಎಷ್ಟೋ, ಮಂದಿಗೆ ನಿಜವಾದ ಅಕ್ಷಯ ತೃತೀಯದ ಬಗ್ಗೆ ಗೊತ್ತೇ ಇರುವುದಿಲ್ಲ.
ಶ್ರೀಮಂತರ ಆದಿಯಾಗಿ ಕೂಲಿ ಮಾಡುವವರಿಗೂ ಕೂಡ ಅಂದು ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠ ಎಲ್ಲರ ಮನಸ್ಸಿಗೂ ಚಾಪು ಒತ್ತಿದಂತೆ ಮಾಡಿರುವುದು ಚಿನ್ನದ ಅಂಗಡಿಯವರು. ನಿಜವಾದ ಅಕ್ಷಯ ತೃತೀಯ ಬಗ್ಗೆ ತಿಳಿದುಕೊಳ್ಳೋಣ..
ಅಕ್ಷಯ ತೃತಿಯದ ಆಚರಣೆಗಳ ಬಗ್ಗೆ ಎಲ್ಲಿ ಉಲ್ಲೇಖವಿದೆ ?
ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.
ಶ್ಲೋಕ : ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ |
ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||
ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ, ದೀಪ, ಪುಷ್ಪ ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿನವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ.
ಅಕ್ಷಯ ತೃತಿಯದ ಅರ್ಥ ಏನು ?
ಶ್ಲೋಕ | ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತಫಲಂ ಲಭೇತ್ ||
ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಈ ಹೆಸರು ಹೊಂದಾಣಿಕೆಯಾಗುತ್ತದೆ.
ಅಕ್ಷಯ ತೃತಿಯದ ಹಿಂದೂ ಪಂಚಾಗದ ಪ್ರಕಾರ ಯಾವಾಗ ಬರುತ್ತದೆ ?
ಶ್ಲೋಕ | ಪೂರ್ವಾಹ್ಣೇ ತು ಸದಾ ಕಾರ್ಯಾಃ ಶುಕ್ಲೇ ಮನುಯುಗಾದಯಃ |
ದೈವ್ಯೇ ಕರ್ಮಣಿ ಪಿತ್ಯ್ರೇ ಚ ಕೃಷ್ಣೇ ಚೈವಾಪರಾಹ್ಣಿಕಾಃ ||
ವೈಶಾಖಸ್ಯ ತೃತೀಯಾಂ ಚ ಪೂರ್ವವಿದ್ಧಾಂ ಕರೋತಿ ವೈ |
ಹವ್ಯಂ ದೇವಾ ನ ಗೃಹ್ಣನ್ತಿ ಕವ್ಯಂ ಚ ಪಿತರಸ್ತಥಾ ||
ವೈಶಾಖ ಮಾಸ ಶುಕ್ಲಪಕ್ಷ ತೃತೀಯ ದಿನ ರೋಹಿಣಿ ನಕ್ಷತ್ರವು ಇದ್ದರೆ ಅಂದು ಮೂರುವರೆಗಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ.
2020 ರಅಕ್ಷಯ ತೃತಿಯದ ಪೂಜಾ ಮುಹೂರ್ತದ ಅವಧಿ ?
26/04 /2020 ಭಾನುವಾರ ಬೆಳಿಗ್ಗೆ 06 ಗಂಟೆ 01 ನಿಮಿಷದಿಂದ ಅದೇ ದಿನ ಮಧ್ಯಾಹ್ನ 12 ಗಂಟೆ 17 ನಿಮಿಷದವರೆಗೂ.
ಒಟ್ಟು ಪೂಜಾ ಮುಹೂರ್ತದ ಅವಧಿ 06 ಗಂಟೆ 16 ನಿಮಿಷಗಳು ಇರುತ್ತದೆ. ಈ ಸಮಯದಲ್ಲಿ ಮಾತ್ರ ಎಲ್ಲಾ ಶುಭಕೆಲಸಗಳನ್ನು ಪ್ರಾರಂಭಿಸುವುದು.
ಅಕ್ಷಯ ತೃತಿಯದ ಮುಹೂರ್ತದ ಮಹತ್ವ ?
ಗೃಹ ಪ್ರವೇಶ, ಮದುವೆ, ಹೊಸ ಉದ್ಯಮಗಳು, ಹೂಡಿಕೆಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.
ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಬಹುದೇ ?
ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನವನ್ನು ಮಾಡಬಹುದು ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ.
ಅಕ್ಷಯ ತೃತಿಯದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖ ಇದೆಯಾ ? ಹಾಗಾದರೆ ಯಾವ ಸಂದರ್ಭದಲ್ಲಿ ?
ಮಹಾಭಾರತದಲ್ಲಿ ದ್ರೌಪದಿಗೆ ಶ್ರೀಕೃಷ್ಣನು ಅಕ್ಷಯ ಪಾತ್ರೆಯನ್ನು ಕೊಟ್ಟು ಅದರಿಂದ ಅವನು ಊಟ ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿದಂತಹ ಘಟನೆ ನಿಮಗೆ ಗೊತ್ತಿರಬಹುದು. ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಅತ್ಯಂತ ಪವಿತ್ರ ದಿನವನ್ನಾಗಿ ಆಚರಿಸುತ್ತಾರೆ.
ಪುರಾಣಗಳಲ್ಲಿ ಅಕ್ಷಯ ತೃತಿಯದ ದಿನದ ಮಹತ್ವ?
* ವಿಷ್ಣುವಿನ ಅವತಾರವಾದ ಪರಶು ರಾಮ ಅವತಾರ ಅಕ್ಷಯ ತೃತೀಯದ ದಿನವೇ ಆಗಿತ್ತು.
* ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನಿಗೆ, ನೀಡಿದ ಅಕ್ಷಯವಾದಂತಹ ಐಶ್ವರ್ಯ ಪ್ರಾಪ್ತಿಗಳು..
* ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಸುಮುಹೂರ್ತವೇ ಅಕ್ಷಯ ತೃತೀಯ.
* ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಅವತರಿಸಿದ ದಿನವೂ ಅಕ್ಷಯ ತೃತಿಯ
ಈ ದಿನವು ತ್ರೇತ ಯುಗದ ಆರಂಭವನ್ನು ಸೂಚಿಸುತ್ತದೆ.
* ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು,
* ದಾನಸೂರ ಕರ್ಣನು ಜನಿಸಿದ್ದು,
* ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ಸಂಯೋಜಿಸಲಾರಂಭಿಸಿದ್ದು.
* ಕಾಯಕ ಯೋಗಿ ಬಸವಣ್ಣನವರು ಜನಿಸಿದ್ದು.
* ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಷ್ಟೈಶ್ವರ್ಯವ ಪ್ರಾಪ್ತಿ ಪಡೆದದ್ದು.
ಅಕ್ಷಯ ತೃತಿಯದ ಹೇಗೆ ಆಚರಿಸಬೇಕು ? ಹಾಗೂ ಅದರ ಫಲಗಳೇನು ?
ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದುಕೊಳ್ಳಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ.
ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬಹುದು ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳನ್ನು ದೇವರ ದರ್ಶನವನ್ನು ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
* ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ ಆಗಬಹುದು.
* ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗುತ್ತದೆ.
* ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ.
* ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.
* ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ.
* ಬೆಳಿಗ್ಗೆ ಗೋ ಮಾತೆಗೆ ಪೂಜೆ ಪುನಸ್ಕಾರಗಳನ್ನು ಮಾಡಿ ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ.
*************
ಪುರಾಣಗಳಲ್ಲಿ ಅಕ್ಷಯ ತೃತೀಯದ ದಿನದ ಮಹತ್ವ
ಅಕ್ಷಯ ಎಂದರೆ ಕ್ಷಯಿಸದೆ,
ವೃದ್ಧಿಯಾಗುವುದು ಎಂದು ಅರ್ಥ.
ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು.!
ಅಕ್ಷರಾಭ್ಯಾಸ, ಮದುವೆ,ಉಪನಯನ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ,
ಪಂಚಾಂಗಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.
ಈ ದಿನಕ್ಕೆ ಕೆಲವೊಂದು ಘಟನೆಗಳು ಪುರಾಣಗಳಲ್ಲಿವೆ.
ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.
ಶ್ರೀ ಮಹಾವಿಷ್ಣುವು ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.
ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯತದಿಗೆಯಂದು.
ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನಿತ್ತ ಸುದಿನ ಅಕ್ಷಯ ತದಿಗೆ.
ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.
ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯತೃತೀಯ.
ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ ನಂಬಿಕೆ ಜನಮಾನಸದಲ್ಲಿದೆ.
೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವೇಶ್ವರರು ಜನಿಸಿದ್ದು ಇದೇ ದಿನದಂದು.
ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜವತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ
ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ, ಎಂದು.ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ,ರಾವಣನ ಅಣ್ಣ.
ರಾವಣ ಅಣ್ಣನಿಂದ, ಲಂಕಾನಗರವನ್ನು
ವಶಪಡಿಸಿಕೊಂಡು,
ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ. ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯತೃತಿಯದಂದು ಸುವರ್ಣ ವಿಶ್ವಕರ್ಮರಿಂದ ಭೂಮಿಪೂಜೆಯನ್ನು ಮಾಡಿಸಿದ್ದನು.
ಇದರಿಂದ ಲಂಕಾನಗರವು ಸ್ವರ್ಣಲಂಕೆಯಾಯಿತು ಎಂದು ರಾಮಯಣದಲ್ಲಿ ಹೇಳಿದೆ.
#ಅಕ್ಷಯ*
ಕ್ಷಯ ಅಂದರೆ ನಾಶ. ನಾಶವಿಲ್ಲದ್ದು ಅಕ್ಷಯ.
ನಾಶವಾಗುವದು ತಾತ್ಕಾಲಿಕ. ನಾಶವಾಗದ್ದು ಶಾಶ್ವತ. ಮಾಡುವ ಕೆಲಸವಿರಲಿ, ಬೇಡುವ ಫಲವಿರಲಿ. ಎಲ್ಲದರಲ್ಲಿಯೂ ಎರಡು ವಿಧ. - ಕ್ಷಯ ಮತ್ತು ಅಕ್ಷಯ.
ಲೌಕಿಕ ಸಾಧನೆ, ಲೌಕಿಕ ಫಲ - ಎರಡೂ ಕ್ಷಯ - ತಾತ್ಕಾಲಿಕ.
ಪಾರಮಾರ್ಥಿಕ ಸಾಧನೆ, ಪರಮ ಪುರುಷಾರ್ಥ ಫಲ - ಈ ಎರಡೂ ಅಕ್ಷಯ. ನಾಶವಾಗದ ಸಾಧನೆ, ಮತ್ತು ಮೋಕ್ಷವೆಂಬ ಶಾಶ್ವತ ಸುಖಕ್ಕೆ ಕಾರಣ.
ಅಕ್ಷಯ ತೃತಿಯಾ - ಬಂಗಾರ ಕೊಂಡಿಟ್ಟುಕೊಳ್ಳಿ ಎನ್ನುತ್ತಾರೆ ಮನೆಯಲ್ಲಿ ಹಿರಿಯರು.
ಏನದು ಬಂಗಾರ? ಎಂಥ ಬಂಗಾರ?
ಮತ್ತೆ ಆಭರಣದ ಬಂಗಾರವಾದರೆ - ಅದು ತಾತ್ಕಾಲಿಕ.
ಇಂದು ನಮ್ಮದು, ನಾಳೆ ಮತ್ತೊಬ್ಬರದು. ಶಾಶ್ವತ, ನಾಶವಾಗದ ಬಂಗಾರ ಕೊಳ್ಳಿ ಎನ್ನುತ್ತಾರೆ ಜ್ಞಾನಿಗಳು.
' ರಂಗನಾಥನ ದಿವ್ಯ ಮಂಗಳ ನಾಮವೆಂಬ ಬಂಗಾರವಿಡಬಾರೆ' ಇದು ನಿನಗೊಪ್ಪುವ ಬಂಗಾರ.
ಇದನ್ನೇ ಇಡು, ತೊಡು. ಶಾಶ್ವತ ಸುಖ ಸೂರಾಡು.- ಎನ್ನುತ್ತಾರೆ ಪುರಂದರವಿಠಲನಿಗೆ ಅತಿ ಪ್ರಿಯದಾಸರು.
ಹರಿನಾಮ ತಂದು ಕೊಡುವಂಥ ಸುಖವೇ ನಿಜವಾದ ಬಂಗಾರದಂಥ ಸುಖ. ಅದಕ್ಕೂ ಮಿಗಿಲೂ ಹೌದು. ಯಾಕೆ?
ಕಲಿಯುಗದಲ್ಲಿ ಹರಿನಾಮವೇ ಸಾಧಕ, ಮತ್ತೆ ತಾರಕ.
ಶರೀರ ನಾಶವಾಗುತ್ತದೆ. ಅದಕ್ಕಾಗಿ ಶರೀರ ವಿರುವವರೆಲ್ಲಾ ಕ್ಷರರು. ಲಕ್ಷ್ಮೀದೇವಿ ಅಪ್ರಾಕೃತ ಶರೀರೆ. ನಾಶವಿಲ್ಲ ಅವಳ ಶರೀರಕ್ಕೆ.ಅವಳು 'ಅಕ್ಷರ'ಳು. ಈ ಕ್ಷರ ಅಕ್ಷರರಿಗಿಂತ ನಾನು ಉತ್ತಮ, ಪುರುಷೋತ್ತಮ. ಎಂದು ಸರ್ವೋತ್ತಮ ಶ್ರೀ ಕೃಷ್ಣ ಗೀತೆಯಲ್ಲಿ ಸಾರುತ್ತಾನೆ.
ಶ್ರೀ ಹರಿಯೇ ಕೃಷ್ಣ. ಅದಕ್ಕಾಗಿ ಹರಿನಾಮವೇ ಶ್ರೇಷ್ಠ. ಅದುವೇ ಬಂಗಾರ. ಅದಕ್ಕಾಗಿ ಈ ಬಂಗಾರ ಕೊಂಡುಕೊಳ್ಳಿ.
- ಹರಿನಾಮ ನಾಲಿಗೆ ಮೇಲಿರಲಿ ಎನ್ನುತ್ತಾರೆ ಹಿರಿಯರು.
ಮತ್ತೆ ಅಕ್ಷಯ ಫಲ ಕೊಡುವವನು ಶ್ರೀ ಹರಿಯೇ. ನಾವು ಪರಮಾತ್ಮನಿಗೆ ಕೊಡುವದು ಕ್ಷಯ ಮತ್ತು ಮಿತ. ಅದೂ ಅವನದೇ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ.
ಆದರೆ ಆತನು ಕೊಡುವದು - ಅಕ್ಷಯ, ಅಮಿತ. ಅದಕ್ಕಾಗಿ ದಾಸರು ಹೇಳಿದ್ದು - ಕೊಟ್ಟಿದುದ ಅನಂತ ಮಡಿ ಮಾಡಿ ಕೊಡುವ.
ಆಪತ್ತಿನಲ್ಲಿ ದ್ರೌಪದಿ ಕೊಟ್ಟದ್ದೇನು?
ಭಕ್ತಿ ಪುಷ್ಪ. ಕೃಷ್ಣ ಮರಳಿ ಕೊಟ್ಟದ್ದು ಅಕ್ಷಯ ವಸ್ತ್ರ.
ತೊಳೆದಿಟ್ಟ ಅಕ್ಷಯಪಾತ್ರೆಯಿಂದ ಅಕ್ಷಯ ಅಡಿಗೆ, ದ್ರೌಪದಿಗೆ ದೊರಕಿಸಿ ಕೊಟ್ಟಿದ್ದು ಶ್ರೀ ಕೃಷ್ಣನೇ.
ಒಪ್ಪಿಡಿ ಅವಲಕ್ಕಿಗೆ, ಕುಚೇಲನಿಗೆ ಅಖಿಳಾರ್ಥವ ಕೊಟ್ಟ ಕರುಣಾನಿಧಿ.
ತರಳ ಧ್ರುವರಾಯನಿಗೆ, ಭಕ್ತ ವಿಭೀಷಣನಿಗೆ ಅಕ್ಷಯ ಪಟ್ಟವನ್ನಿತ್ತ.
ಅಹಲ್ಯೆ ಅಕ್ಷಯ ಸೌಭಾಗ್ಯ, ಶಬರಿ ಸದ್ಗತಿ, ಪಡೆದರು. ಹನುಮಂತ ದೇವರು ಬೇಡಿ ನಿಜ ಭಕುತಿ ಪಡೆದವರು. ಜಯ ವಿಜಯರು ಅಕ್ಷಯ ಸುಖದ ಸದ್ಗತಿ ಪಡೆದರು.
ಅಕ್ಷಯ ದಾತನಿಂದ, ಅಕ್ಷಯ ಸುಖ ಪಡೆದವರ ಪಟ್ಟಿ ಅಕ್ಷಯವಾಗಿ ಬೆಳೆಯುತ್ತದೆ.
ಕೊನೆಗೆ ಮುಕ್ತರಿಗೆ ಯಾರು ಗತಿ?
ಶ್ರೀ ಮದಾಚಾರ್ಯರು ಹೇಳುತ್ತಾರೆ -
' ಆನಂದದಶ್ಚ ಮುಕ್ತಾನಾಂ ಸ ಏವ ಏಕೋ ಜನಾರ್ದನಃ'
ಏಕಮೇವ ಅದ್ವೀತೀಯ ಜನಾರ್ಧನ -
ಶ್ರೀ ವಿಷ್ಣುವೇ ಮುಕ್ತರಿಗೆ ಶಾಶ್ವತ ಅಕ್ಷಯ ಆನಂದ ಕೊಡುವವನು.
ಹಿರಿಯರು ಹೇಳಿದಂತೆ ಇಂದು ಬಂಗಾರ ಕೊಳ್ಳೋಣ. ಕೂಡಿಸಿ ಉಳಿಸಿ ಬೆಳೆಸೋಣ. ಹರಿನಾಮವೆಂಬ. ೨೪ ಕ್ಯಾರೆಟ್ ಗೂ ಅನಂತಮಡಿ ಮಿಗಿಲಾದ, ದಿವ್ಯ ಬಂಗಾರ - ಉಚ್ಛರಿಸಿದವರಿಗೆ ಅಕ್ಷಯ ಸುಖ ಕೊಡುವ. ಲಕ್ಷ್ಮೀ ನರಸಿಂಹನ ನಾಮ
ವೆಂಬ ಚೊಕ್ಕಬಂಗಾರ ಕೊಂಡಿಟ್ಟು, ಹೃದಯದಲ್ಲಿ ಉಳಿಸಿ ಬೆಳೆಸೋಣ.
ಅಕ್ಷಯತೃತಿಯ ದಿನ ಸ್ವರ್ಣವನ್ನ ಖರೀದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂಬ ನಂಬಿಕೆ ಜನರಲ್ಲಿ ಇತ್ತೀಚಿಗೆ ಬಂದಿದೆ.
ಮನೆಯಲ್ಲಿ ಬಂಗಾರವೂ ಅಕ್ಷಯವಾಗಲಿ ಎಂಬ ಚಿನ್ನದ ವ್ಯಾಮೋಹದ ಪರಿಣಾಮವಿದು.
ಅಕ್ಷಯ ತದಿಗೆಯು ಸರ್ವರಿಗೂ ಸುಖ-ಸಂತೋಷ-ಶಾಂತಿ-ಆರೋಗ್ಯ-ಸಂಪತ್ತು-ಸ್ನೇಹ-ಪ್ರೀತಿಗಳನ್ನು ಅಕ್ಷಯವಾಗಿಸಲಿ.
ಶುಭವಾಗಲಿ
ಸರ್ವೇ ಜನಾಃ ಸುಖಿನೋ ಭವಂತು.
ಈ ಅಕ್ಷಯ ಎಲ್ಲರ ಪಾಲಿಗೆ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಎಲ್ಲವನ್ನೂ ಕೊಡಲಿ
ಅದೆಲ್ಲಾ ಅಕ್ಷಯವಾಗಲಿ
ಸಾಧ್ಯ ಆದರೆ ಅಂದು ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮಿ ಅಥವಾ ಲಲಿತ ಸಹಸ್ರ ನಾಮ ಪಠನೆ ಮಾಡಿದರೆ ಸಕಲ ಸೌಭಾಗ್ಯ ನಿಮ್ಮದಾಗುತ್ತದೆ.
********
🍁 ಅಕ್ಷಯ ತದಿಗೆ ವಿಶೇಷ 🍁
ಇತ್ತೀಚಿನ ಬೆಳವಣಿಗೆಯಲ್ಲಿ ಅಕ್ಷಯ ತೃತೀಯಾ ತಿಥಿಗೆ ಮಹತ್ವದ ಬೆಲೆ ಬಂದಿದೆ. ಈ ದಿನದ ವಿಶೇಷತೆಯನ್ನು ನಮ್ಮ ಪ್ರಾಚೀನ ಆರ್ಷಪರಂಪರೆಯ ಗ್ರಂಥಗಳಲ್ಲೂ ಕೊಂಡಾಡಿದ್ದಿದೆ.ಈಗ ಇಲ್ಲಿನ 'ಅಕ್ಷಯ' ಎಂಬುದು ಪ್ರಧಾನವಾಗಿ ಚಿನ್ನವನ್ನು ಮಾತ್ರ ಆಶ್ರಯಿಸಿರುವಂತೆ ಭಾಸವಾಗುತ್ತಿದೆ.ಈ ದಿನವಿಶೇಷವನ್ನು ಬಂಡವಾಳ ಮಾಡಿಕೊಂಡು ವ್ಯಾಪಾರಿ ಮನೋಭಾವ ಬೆಳೆದು,ಜಾಹೀರಾತುಗಳಿಗೆ ಶರಣಾದ ಬುದ್ಧಿವಂತ ಜನರೂ ಮುಗಿಬಿದ್ದು ಚಿನ್ನ ಖರೀದಿಸಿ ತಮ್ಮಲ್ಲಿ ಚಿನ್ನವು ಅಕ್ಷಯವಾಯಿತು ಎಂದು (ಸಂ)ಭ್ರಮಿಸುತ್ತಾರೆ.!
ದುಡ್ಡೇ ದೊಡ್ಡಾದಗಿ ಕಾಣುವ ಈ ಕಾಲದಲ್ಲಿ ದುಡ್ಡನ್ನು ಗಳಿಸಲು,ಉಳಿಸಲು,ಬೆಳೆಸಲು ಇಂಥಹ ಉಪಾಯಗಳು ಬಂದರೆ ಅಚ್ಚರಿಯೇನಿಲ್ಲ.
ಮೂಲತಃ ಅಕ್ಷಯ ಎಂಬು ಪದವು, ಎಂದೂ ಕ್ಷಯವಿಲ್ಲದ ಎಂಬ ಅರ್ಥಹೊಂದಿದ್ದರೆ; ತೃತೀಯಾ ತಿಥಿ ಎಂಬುದು 'ಮೂರನೆಯ ದಿನ' ಎಂಬ ಅರ್ಥವನ್ನು ನೀಡುತ್ತದೆ.ಅಕ್ಷಯ ತೃತೀಯಾವನ್ನು ವೈಶಾಖ ಮಾಸದ ಶುದ್ಧ ತದಿಗೆಯಂದು ಆಚರಿಸುತ್ತಾರೆ.ಇದೇ ಮಹತ್ತರವಾದ ದಿನವನ್ನು ಪರಶುರಾಮ ಅವತಾರವಾದ ದಿನವೆಂದು ಆಚರಿಸುತ್ತಾರೆ.
ಪ್ರಾಚೀನ ಕಾಲದಿಂದಲೂ ಈ ದಿನಕ್ಕೆ ವಿಶೇಷ ಮನ್ನಣೆ ಇತ್ತು.ಪುರಾಣಗಳು ಈ ಬಗ್ಗೆ ಬೆಳಕು ಚೆಲ್ಲುತ್ತವೆ.ಉತ್ತರ ಭಾರತದ ಕೇದಾರನಾಥ,ಬದರೀನಾಥ ಕ್ಷೇತ್ರಗಳು ತೆರೆಯುವುದು ಅಕ್ಷಯ ತೃತೀಯಾದಂದು.ಅಲ್ಲಿಯವರೆಗೆ ದೇವತೆಗಳು ಆ ವಿಗ್ರಹವನ್ನು ಪೂಜಿಸುತ್ತಾರೆ ಎಂದು ನಾರದೀಯ ಪುರಾಣವು ಹೇಳುತ್ತದೆ.
ಪ್ರಧಾನ ಹದಿನೆಂಟು ಪುರಾಣಗಳಲ್ಲೊಂದಾದ ಸ್ಕಂದ ಪುರಾಣದ ವೈಷ್ಣವಖಂಡದಲ್ಲಿ ವೈಶಾಖಮಾಸ ಮಾಹಾತ್ಮ್ಯದ ನಾರದಾಂಬರೀಷ ಸಂವಾದದಲ್ಲಿ ಅಕ್ಷಯ ತೃತೀಯಾ ಶ್ರೇಷ್ಠತ್ವ ವರ್ಣನ ಎಂಬ ಇಪ್ಪತ್ತೊಂದನೆಯ ಅಧ್ಯಾಯದಲ್ಲಿ ಇದರ ಮಹತ್ವವನ್ನು ಹೇಳಲಾಗಿದೆ.
ಅಲ್ಲಿನ ಶ್ರುತದೇವ ಸಂವಾದದಲ್ಲಿ ಅಕ್ಷಯತೃತೀಯಾದ ಶ್ರೇಷ್ಠತ್ವದ,ಅಂದು ಮಾಡಬೇಕಾದ ಕಾರ್ಯಗಳ ನಿರೂಪಣೆ ಇದೆ.ಸರಳವಾಗಿ ಅವುಗಳನ್ನು ಕ್ರೋಢೀಕರಿಸಿದರೆ ಪ್ರಾತಃ ಸೂರ್ಯೋದಯಕ್ಕೆ ಸರಿಯಾಗಿ ಸ್ನಾನ ಮಾಡಬೇಕು,ಈ ತಿಥಿಯು ದೇವ,ಋಷಿ,ಪಿತೃಗಳಿಗೆ ಪ್ರಿಯವಾದದು.ಅವರಿಗೆ ತರ್ಪಣ ನೀಡಿ ತೃಪ್ತಿ ಪಡಿಸಿದರೆ ಈ ಮೂರು ಋಣಗಳಿಂದ ಮುಕ್ತರಾಗಬಹುದು.ಈ ದಿನದಂದು ಮಾಡಿದ ಅಧ್ಯಯನವೂ,ಯಜ್ಞವೂ ನೂರುಶ್ರಾದ್ಧಗಳನ್ನು ಮಾಡಿದ ಫಲವನ್ನು ನೀಡುವುದು ಎಂದು ಆರಂಭಿಸಿ ಅಂದು ವಿಶೇಷವಾಗಿ ಮಧುಸೂದನ ಪೂಜೆ,ಅವನ ಲೀಲೆ ಸತ್ಕಥಾಶ್ರವಣ ಮಾಡಬೇಕು,ಆ ಮೂಲಕ ಮನುಷ್ಯನು ಪಾಪಗಳನ್ನು ತೊಳೆದುಕೊಳ್ಳುವನು ಎಂದು ಹೇಳಿದೆ.
ಮಧುಸೂದನಸಮಭ್ಯರ್ಚ್ಯ ಕಥಾಂ ಶೃಣ್ವಂತಿ ಯೇ ನರಾಃ|
ಅಕ್ಷಯ್ಯಾಯಾಂ ತೃತೀಯಾಯಾಂ ತೇ ನರಾಃ ಮುಕ್ತಿಭಾಗಿನಃ||
ಮುಖ್ಯವಾಗಿ ಶ್ರೀಕೃಷ್ಣ ಪ್ರೀತ್ಯರ್ಥ ಮಾಡಿದ ದಾನ ಅಕ್ಷಯ ಫಲವನ್ನು ಕೊಡುವುದು ಎಂದು ಒತ್ತಿಹೇಳಿದೆ.
ಇನ್ನು ಈ ದಿನಕ್ಕೆ ವಿಶೇಷವಾದ ಮಹತ್ವ ಬರಲು ಕಾರಣವಾದ ಒಂದು ಘಟನೆಯನ್ನು ಪುರಾಣವು ತೆರೆದಿಡುತ್ತದೆ. ಈ ಕಥೆಯು ಇತರ ಪುರಾಣಗಳಲ್ಲಿಯೂ (ಕಥಾವ್ಯತ್ಯಾಸ,ಪಾತ್ರವ್ಯತ್ಯಾಸ) ಬಂದಿದೆಯಾದರೂ ಇಲ್ಲಿ ವೈಶಾಖಶುದ್ಧತೃತೀಯಾ ದಿನದೊಂದಿಗೆ ಸಮೀಕರಿಸಿ ಹೇಳಿರುವುದು ಸ್ಕಂದ ಪುರಾಣದ ವಿಶೇಷತೆ.
ಹಿಂದೆ ದೇವೆಂದ್ರನಿಗೂ ಬಲಿಚಕ್ರವರ್ತಿಗೂ ಯುದ್ಧವಾಗಿ ಇಂದ್ರನಿಗೆ ಗೆಲುವಾಯಿತು.ಗೆದ್ದ ಇಂದ್ರನು ಭೂಲೋಕದಲ್ಲಿನ ಉತಥ್ಯನ ಆಶ್ರಮಕ್ಕೆ ಬಂದನು.ಅಲ್ಲಿ ಗರ್ಭಿಣಿಯಾಗಿದ್ದ ಉತಥ್ಯನ ಮಡದಿಯಾದ ಭದ್ರೆಯನ್ನು ಕಂಡಯ ಮೋಹಗೊಂಡು,ಅವಳನ್ನು ಬಲಾತ್ಕರಿಸುತ್ತಾನೆ.ಆದರೆ ಅವಳ ಗರ್ಭದಲ್ಲಿದ್ದ ಶಿಶುವು, ಹೊಸ ಗರ್ಭದಿಂದ ತನ್ನ ಪತನವಾಗುವದೆಂಬ ಭಯದಿಂದ ಯೋನಿಯ ದ್ವಾರವನ್ನು ಪಾದದಿಂದ ಮುಚ್ಚಿಬಿಟ್ಟಿತು. ಇಂದ್ರನ ವೀರ್ಯವು ಭೂಮಿಯಲ್ಲಿ ಬಿದ್ದು ಹೋಯಿತು. ಕೋಪಗೊಂಡು ಇಂದ್ರನು ಗರ್ಭದ ಶಿಶುವಿಗೆ ಶಾಪ ನೀಡಿದನು. ಉತಥ್ಯನ ಶಾಪದ ಭಯದಿಂದ ಆಶ್ರಮದಿಂದ ಓಡಿಹೋದನು,ಆಗ ಆಶ್ರಮದ ಬ್ರಹ್ಮಚಾರಿಗಳೆಲ್ಲ ಇಂದ್ರನ ದುರವಸ್ಥೆ ಕಂಡು ನಗಾಡಿದರು.ಲಜ್ಜೆಯಿಂದ ಇಂದ್ರನು ಮೇರುವಿನ ಒಂದು ಗುಹೆಯನ್ನಾಶ್ರಯಿಸಿದನು.
ಇಂದ್ರನಿಲ್ಲವೆಂದು ತಿಳಿದ ಬಲಿಯು ಮತ್ತೆ ಅಮರಾವತಿಯನ್ನು ಆಕ್ರಮಿಸಿದನು.ದೇವತೆಗಳು ಇಂದ್ರನಿಗಾಗಿ ಹುಡುಕಾಡಿ,ಕೊನೆಗೆ ಬೃಹಸ್ಪತಿಯನ್ನಾಶ್ರಯಿಸಿ,ಅವರಿಂದ ವಿಚಾರ ತಿಳಿದು ಮೇರುವಿಗೆ ಬಂದು ಇಂದ್ರನ ಕಂಡರು.ಆದರೆ ಇಂದ್ರನು ತಾನು ಮಾಡಿದ ಕಾರ್ಯದಿಂದ ನಾಚಿಕೆಪಟ್ಟು ಸ್ವರ್ಗಕ್ಕೆಬರಲು ನಿರಾಕರಿಸಿದನು.ಬೃಹಸ್ಪತಿಯು ಸಮಾಧಾನಪಡಿಸಿ, ಪರಸ್ತ್ರೀಯನ್ನು ಬಲಾತ್ಕರಿಸಿದ ಫಲವಾಗಿ,ಬಲ,ಪರಾಕ್ರಮ,ಯಶಸ್ಸು,ಮಂತ್ರಶಕ್ತಿ,ಶಾಸ್ತ್ರಜ್ಞಾನ,ವಿದ್ಯಾಬಲವು ಕುಂದಿರುವುದಾಗಿ ತಿಳಿಸಿ, ಪ್ರಾಯಶ್ಚಿತ್ತವಾಗಿ ವೈಶಾಖಮಾಸದ ಶುದ್ಧತೃತೀಯಾ ತಿಥಿಯು ಸಮೀಪಿಸುತ್ತಲಿದ್ದು, ಅಂದು ಸ್ನಾನದಾನಗಳಿಗೆ ಅಕ್ಷಯಫಲವಿರುವುದೆಂದು ತಿಳಿಸಿದನು.ಬೃಹಸ್ಪತಿಯ ನೇತೃತ್ವದಲ್ಲಿ ದೇವತೆಗಳೊಡನೆ ಕೂಡಿ ವಿಷ್ಣುಪ್ರೀತಿರವಾದ ಕಾರ್ಯಗಳನ್ನು ಮಾಡಿದನು.
ತದಾ ಪ್ರಭೃತಿ ಲೋಕೇ sಸ್ಮಿನ್ ತೃತೀಯಾ ಚಾಕ್ಷಯಾsಹ್ವಯಾ|
ಪ್ರಖ್ಯಾತಾ ಸರ್ವಲೋಕೇಷು ದೇವರ್ಷಿಪಿತೃತುಷ್ಟಿದಾ|
ತ್ಮಾತ್ಪುಣ್ಯತಮಾ ಚೈಷಾ ಸರ್ವಕರ್ಮನಿಕೃಂತನೀ|
ಭುಕ್ತಿಮುಕ್ತಿಪ್ರದಾ ನೃಣಾಂ ತೃತೀಯಾ ಚಾsಕ್ಷಯಾsಹ್ವಯಾ||
ಎಂದು ಹೇಳುವ ಮೂಲಕ ಅಂದಿನಿಂದ ಈ ತಿಥಿಯು ಅಕ್ಷಯ ತೃತೀಯಾ ಎಂದು ಪ್ರಸಿದ್ಧವಾಗಿ,ಇಂದು ಮಾಡಿದ ಸ್ನಾನ,ದಾನಾದಿಗಳು ಅಕ್ಷಯವಾಗುವವು,ದೇವ,ಋಷಿ,ಪಿತೃ ದೇವತೆಗಳು ತೃಪ್ತರಾಗುವರು,ಲೋಕದಲ್ಲಿ ಸುಖವು ಪರದಲ್ಲಿ ಬಿಡುಗಡೆಯೂ ದೊರಕುವುದು ಎಂದು ಹೇಳಿದೆ.
ಪುರಾಣಗಳಲ್ಲಿ ಉಲ್ಲೇಖಗೊಂಡ ವಿಚಿತ್ರ ಕಥೆಗಳನ್ನು ಕಂಡಾಗ ಸಂದೇಹಗಳು ಮೂಡುವುದು ಸಹಜ.
ಇತರರ ವಸ್ತುಗಳನ್ನು ಉಪಭೋಗಿಸುವ ಇಂದ್ರ ನಮ್ಮೊಳಗೆ ಇದ್ದಾನೆ,ಬಳಿಕ ಪಶ್ಚಾತ್ತಾಪ ಪಟ್ಟು ಅಡಗಿಕೊಳ್ಳುವ ಇಂದ್ರನೂ.! ಆಗ ವಿದ್ಯೆಯೆಂಬ ಬೃಹಸ್ಪತಿ ನಮ್ಮನ್ನು ತಿದ್ದುವ ಕಾರ್ಯ ಮಾಡಿದರೆ ಇತರ ಇಂದ್ರಿಯಗಳು,ದೇವತೆಗಳು ಸತ್ ಕಾರ್ಯದಲ್ಲಿ ಸಾಧನರಾಗುತ್ತಾರೆ.(ಇನ್ನೊಂದು ಕಥೆಯಲ್ಲಿ ವಿದ್ಯೆಯನ್ನು ತಿಳಿದ ಬೃಹಸ್ಪತಿಯೂ ಬಲಾತ್ಕಾರ ಮಾಡಿದ್ದಿದೆ,ವಿದ್ಯೆಯ ಜೊತೆ ಶ್ರದ್ಧೆ ಇರದಿದ್ದರೆ ಅವಾಂತರವಾಗುವುದು ನಿಶ್ಚಯ.!) ಈ ದೇಹದಲ್ಲಿದ್ದುಕೊಂಡು ಇಂದ್ರಿಯಗಳ ಜೊತೆ ಸೇರಿ ನಾವು ಮನಃಶುದ್ಧಿಗೊಳಿಸಿ (ಸ್ನಾನ)ದಾನಾದಿಗಳನ್ನು ಮಾಡಿ ಪುಣ್ಯ ಸಂಪಾದಿಸಬೇಕು.ಕೊಡುವುದರಲ್ಲಿ ಸಂತೋಷವನ್ನು ಕಾಣಲಾರಂಭಿಸಿದರೆ ಕೊಟ್ಟವನ,ಸ್ವೀಕರಿಸಿದವನ ಒಳಗಿರುವ ಭಗವಂತನೂ ತೃಪ್ತನಾಗುತ್ತಾನೆ.
****
Akshaya Triteeya ಅಕ್ಷಯ ತೃತೀಯ
is the Yugadi Day for Tretaayuga
(Kartheeka Shukla Navami – Kruthayuga Yugadi,
Maagha Amaavasye – Dwapara yuga Yugaadi
Bhadrapada Krishna Trayodashi – Kaliyuga Yugadi
Chaitra Shukla paadya – Starting Day of Srushti)
Akshaya Triteeya – Akshaya indicates “it does not have kshaya”. Meaning the punya got from yajna, yaajana daana will be hundreds times when compared to the punya performed.
ಅಕ್ಷಯ ತೃತೀಯ ಮಹತ್ವ :-.
1. ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ.
2. ಪಾಂಡವರು ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು,
3. ಪರಶುರಾಮನ ಅವತಾರವಾದ ದಿನ
4. ಕುಚೇಲನು ಕೃಷ್ಣನ ಮನೆಗೆ ಸಹಾಯ ಯಾಚಿಸಲು ಹೋಗಿ, ಕೃಷ್ಣನಿಂದ ಪಾದಪೂಜೆ ಪಡೆದು ಅವನಿಂದ ಅನುಗ್ರಹಿತನಾದನು.
5. ವೇದವ್ಯಾಸರು ಇದೇ ದಿನ ಮಹಾಭಾರತ ಗ್ರಂಥ ಆರಂಭಿಸಿದ್ದು.
6. ಪರಮಾತ್ಮ ತನ್ನ ದೇಹದ ಗಂಧದಿಂದ ಮಂಡೋದರಿಯನ್ನು ಸೃಷ್ಟಿಸಿದ್ದು ಇದೇ ದಿನ.
7. ಇದೇ ದಿನ ದೇವೇಂದ್ರ ತಾನು ಕಳೆದುಕೊಂಡಿದ್ದ ಪದವಿಯನ್ನು ಬೃಹಸ್ಪತ್ಯಾಚಾರ್ಯರ ನಿರ್ದೇಶನದಂತೆ ಜಪ ತಪ ಯಜ್ಞ ಮಾಡಿ ವಾಪಸ್ ಪಡೆದನು.
ಅಕ್ಷಯ ತೃತೀಯ ಕರ್ತವ್ಯಗಳು :
೧. ಸೂರ್ಯೋದಯ ಮುನ್ನ ಏಳಬೇಕು.
೨. ಸಂಕಲ್ಪ ಸಹಿತ ಸ್ನಾನ
೩. ಆಹ್ನೀಕ, ಪೂಜೆ, ಜಪ, ಪಾರಾಯಣ
೪. ತರ್ಪಣಾಧಿಕಾರಿಗಳು ತರ್ಪಣ ನೀಡಬೇಕು.
೫. ಯಥಾಶಕ್ತಿ ದಾನಧರ್ಮ
೬. ಗಂಧ ಸಮರ್ಪಣೆ ದೇವರಿಗೆ
ಅಕ್ಷಯ ತೃತೀಯ ದಿನದಂದು ಗಂಧಲೇಪನ ವೈಶಿಷ್ಟ್ಯ :
ಇದೇ ದಿನ ಭಗವಂತನು ತನ್ನ ದೇಹದ ಸುಗಂಧದಿಂದ ಮಂಡೋದರಿಯ ಸೃಷ್ಟಿ ಮಾಡಿದ್ದರಿಂದ ದೇವರಿಗೆ ಗಂಧ ಸಮರ್ಪಣೆ ಮಾಡುವ ಸಂಪ್ರದಾಯ ಇದೆ.
ಅಕ್ಷಯ ತೃತೀಯ ಬಗ್ಗೆ ನಮ್ಮ ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಉಲ್ಲೇಖವಿದೆ . ಅಕ್ಷಯ ಎನ್ನುವುದು ಕ್ಷಯವಾಗದೆ ಇರುವುದು ಎಂದರ್ಥ. ಅಕ್ಷಯ ಅಂದರೆ ಕ್ಷಯರಹಿತ.
ವೈಶಾಖ ಶುದ್ಧ ತೃತೀಯ ದಿನದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ.
ಅಕ್ಷಯ ತೃತೀಯ - ಬಂಗಾರ ಕೊಂಡರೆ ಇಮ್ಮಡಿಯಾಗುವುದೇ
--
ಬಹಳ ಜನರಿಗೆ ಅಕ್ಷಯ ತೃತೀಯ ಬಗ್ಗೆ ತಪ್ಪು ತಿಳುವಳಿಕೆ ಇದೆ. ಅಂದು ಬಂಗಾರ ತೆಗೆದುಕೊಳ್ಳಲೇ ಬೇಕು ಅದು ಇಮ್ಮಡಿ ಆಗುತ್ತದೆ ಎಂದು ಪ್ರಚೋದಿಸಿದ್ದಾರೆ ಕೆಲವು ಬಂಗಾರದ ಅಂಗಡಿಗಳು ಮತ್ತು ಜ್ಯೋತಿಷಿಗಳು. ಟೀವೀ ಛಾನೆಲ್ ಮೂಲಕ ಬಂಗಾರ ತೆಗೆದುಕೊಂಡರೆ ವೃದ್ಧಿಯಾಗುತ್ತದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವ ಪುರಾಣದಲ್ಲೂ ಬಂಗಾರ ಇಮ್ಮಡಿಯಾಗುವ ಪ್ರಸ್ತಾಪ ಇಲ್ಲ. ಜನಗಳು ಇದಕ್ಕೋಸ್ಕರ ಸಾಲ ಮಾಡಿ ಬಂಗಾರ ಕೊಳ್ಳುತ್ತಿದ್ದಾರೆ. ಹೌದು. ಸಾಲ ಇಮ್ಮಡಿಯಾಗುತ್ತದೆ. ಬಂಗಾರ ಅಲ್ಲ. ಬಂಗಾರ ಎಂದೇ ಕೊಂಡರೂ ಅದರ ಬೆಲೆ ಇದ್ದೇ ಇರುತ್ತದೆ.
ಅಕ್ಷಯ ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ ಅಂದು ರೋಹಿಣಿ ನಕ್ಷತ್ರವು ಇದ್ದರೆ ಅಂದು ಮೂರುವರೆ ಘಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ.
ಅಕ್ಷಯ ತೃತಿಯದ ಮುಹೂರ್ತದ ಮಹತ್ವ ?
ಗೃಹ ಪ್ರವೇಶ , ಮದುವೆ, ಹೊಸ ವ್ಯವಹಾರ, ದಾನ ಧರ್ಮ ಗಳನ್ನು ಮಾಡಲು ಅಕ್ಷಯ ತೃತೀಯ ಅತ್ಯುತ್ತಮ ದಿನ.
ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ.
ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು
“ಅಕ್ಷಯ” ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ.
ಇದೊಂದು ಸ್ವಯಂಸಿದ್ಧ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಈ ದಿನ ಮುಹೂರ್ತ ಇಡುವಾಗ ನಕ್ಷತ್ರ, ವಾರ, ತಿಥಿ, ಮುಂತಾದವನ್ನು ನೋಡುವ ಅವಶ್ಯಕತೆ ಇಲ್ಲ.
This is one “swayam sidda” auspious day. There are 3 1/2 muhoorthas termed as “Swayamsidda”. Vijayadashami, Yugaadi, and Akshayatruteeya and on balipadyami half muhoortha. On these days, dinashuddi, Vaarashuddi, Nakshatra, karanaadi shuddi need not be enquired. We can perform Upanayana, Aksharaabhyaasa, devara prathiste, Borewell digging, annaprashana etc. without looking for Panchanga. Akshaya Triteeya day, tarpana adhikarigalu should give Tarpana as it is yugadhi day.
On Akshaya Triteeya Day snaana, japa, homa, svaadhyaaya, pitru tarpana, daana all will give Akshaya phala.
It is on this day that Sri Vedavyasa devaru began his composition of Sri Mahabharatha.
It is on this day that Paandavaas received Akshaya Paathra from Sri Krishna paramathma
This is the Day on which Paramathma made the srusti of Mandodari (One among the Pancha pathivratheyaru) with the Gandha
It is on this day that Sudama (Kuchela) visited Srikrishna carrying Avalakki with the intention of asking help . But could not ask anything with Sri Krishna.
The significance of the three and half auspicious days is that there is no need to look for auspicious time. Each second on the day is highly auspicious. The day is chosen for marriages, house warming, opening of new business.
As per traditional Hindu astrology, the Sun (Surya) and Moon (Chandra) are astrologically believed to be at their most exalted position on the day.
Gold purchase on Akshaya Triteeya – Now a days, there is a trend in the market that on “Akshaya Tirteeya” day, the people are running after jewel shops for purchase of various ornaments. They have a belief that whatever bought on this day will make their wealth richer. But it is not so. There is no such saying anywhere in any purana as to the increase of the wealth. Our Shaastraas say that on this day, one has to do yajna, yaajana, daana and pratigraha, which makes their punya akshaya. As such, please do not go after purchase of gold, instead one has to make daana or do some saatvika krama.
Gandha Lepana –
ಈ ದಿನ ಎಲ್ಲಾ ದೇವಸ್ಥಾನಗಳಲ್ಲೂ, ಮಠಗಳಲ್ಲೂ, ದೇವರಿಗೆ, ಮುಖ್ಯಪ್ರಾಣ ದೇವರಿಗೆ ಗಂಧಲೇಪನ ಸೇವಾ ನಡೆಯಲಿದೆ
by NARAHARI
SUMADHWASEVA
*****
ಅಕ್ಷಯ ತೃತೀಯ ಕೊಡಬೇಕಾದ ದಾನಗಳು
ಪಾದರಕ್ಷೆ - ಬೀಸಣಿಕೆ, ಛತ್ರಿ - ತೆಳುವಾದ ವಸ್ತ್ರ, ನೀರು, ಪಾನಕ, ನೀರುಮಜ್ಜಿಗೆ, ದ್ರಾಕ್ಷಾದಿಫಲಗಳು, ಎಳನೀರು, ಜಲಕುಂಭ, ಪಚ್ಚಕರ್ಪೂರ, ಗಂಧ, ಕೇಸರಿ, ರಸಾಯನ, ಸೌತೆಕಾಯಿ, ಮುoತಾದ ಜಲಪೂರ್ಣ ತರಕಾರಿಗಳು ಕೇಕ್ಕುರಿಕ (ಖರಭೂಜ) ಹಣ್ಣು ಉದ್ದು, ಕಡಲೆ ಮೊಸರನ್ನ ದಾನ ,ಇವುಗಳನ್ನು ಮಧೂಸೂಧನನ ಪ್ರೀತಿಗಾಗಿ ದಾನ ಮಾಡಬೇಕು.
***
ಅಂದು ಪರಶುರಾಮದೇವರ ಜನ್ಮ ದಿನ
ಪವಿತ್ರ ಗಂಗಾ ನದಿ ಭೂಮಿಗೆ ಹಾದು ಬಂದ ಪರ್ವ ದಿನ.
ತ್ರೆತಾ ಯುಗವು ಆರಂಭವಾದ ದಿನ.
ಶ್ರೀ ಕೃಷ್ಣ ತನ್ನ ಬಾಲ್ಯ ಮಿತ್ರನಾದ ಕುಚೇಲನ ಭೇಟಿ ಆದ ದಿನ.
ಶ್ರೀ ವೇದವ್ಯಾಸ ಮಹರ್ಷಿಗಳು ಶ್ರೀ ಮನ್ ಮಹಾ ಭಾರತವನ್ನು ಗಣಪತಿಯು ಲೇಖಕ ನಾಗಿ ಪ್ರಾರಂಭ ಮಾಡಿದ ದಿನ.
ವನವಾಸ ದಲ್ಲಿ ಇದ್ದ ಪಾಂಡವರಿಗೆ ಸೂರ್ಯ ದೇವರು ಅಕ್ಷಯ ಪಾತ್ರೆ ಕೊಟ್ಟ ದಿನ
ರುದ್ರ ದೇವರು ಅನುಗ್ರಹ ದಿಂದ ಮಹಾಲಕ್ಷ್ಮಿ ಅನುಷ್ಠಾನವಾದ ಎಲ್ಲಾ ಸಂಪತ್ತಿಗೆ ಕುಬೇರನನ್ನ ಸಂರಕ್ಷಗನಾಗಿ ಮಾಡಿದ ದಿನ.
ಕನಕಧಾರ ಸ್ತೋತ್ರವನ್ನು ಶ್ರೀ ಆದಿ ಶಂಕರ ಚಾರ್ಯರು ಅನುಗ್ರಹಿಸಿದ ದಿನ
ಅನ್ನಪೂರ್ಣ ದೇವಿ ಅವತಾರ ಮಾಡಿದ ದಿನ.
ಶ್ರೀ ಕೃಷ್ಣ ದ್ರೌಪದಿಗೆ ಅಕ್ಷಯ ವಸ್ತ್ರ ಸೀರೆ ಕೊಟ್ಟು (ವಸ್ತ್ರಾಪಹರಣ ಕಾಲದಲ್ಲಿ)ಮಾನ ಕಾಪಾಡಿದ ದಿನ.
***
ಅಕ್ಷಯ ತೃತೀಯ ದಂದು ದಾನ ಮಾಡುವುದರಿಂದ ಸಿಗುವ ಫಲಗಳು
ಅರಿಶಿನ ಕುಂಕುಮ ಹಾಗೂ ತಾಂಬೂಲವನ್ನು ದಾನ ಮಾಡಿದರೆ ರಾಜಯೋಗ ಪ್ರಾಪ್ತಿ ಆಗುತ್ತದೆ
ಕುಂಕುಮವನ್ನು ದಾನ ಮಾಡುವುದರಿಂದ ಪತಿಗೆ ಆಯುಷ್ಯ ಹಾಗೂ ಉನ್ನತ ಪದವಿ
ಚಂದನ ವನ್ನು ದಾನ ಮಾಡುವುದರಿಂದ ಶತ್ರುಗಳಿಂದ ಹಾಗೂ ವಾಹನಗಳಿಂದ ಅಪಾಯ ಇಲ್ಲ
ನಾರಿ ಕೇ ಳ ವನ್ನ ದಾನ ಮಾಡುವುದರಿಂದ ಕೊನೆಯ ಏಳು ಪಿತೃ ಗಳಿಗೆ ನರಕದಿಂದ ವಿಮುಕ್ತಿ
ಹೊಸ ಬಟ್ಟೆ ದಾನ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ
ಹಾಸಿಗೆ ದಾನ ಮಾಡಿದರೆ ಜೀವನದ ಉದ್ದಕ್ಕೂ ಬರುವ ಸಂಕಷ್ಟಗಳು ನೀಗಿ ಸುಖ ಸಂತೋಷಗಳು.ಪ್ರಾಪ್ತಿಯಾಗುತ್ತದೆ
ತಾವರೆ ಹೂವು ದಾನ ಮಾಡಿದರೆ ಮಹಾ ವಿಷ್ಣುವಿನ ಕೃಪೆಯಾಗುತ್ತದೆ
ಮಜ್ಜಿಗೆಯನ್ನು ದಾನ ಮಾಡುವುದರಿಂದ 64 ವಿದ್ಯೆ ಗಳಲ್ಲಿ ನಮಗೆ ಅವಶ್ಯ ವಿರುವ ವಿದ್ಯೆ ಸುಸೂತ್ರವಾಗಿ ಒಲಿಯುತ್ತದೆ
ನವದಾನ್ಯವನ್ನು ದಾನ ಮಾಡುವುದರಿಂದ ಮೃತ್ಯು, ಅಫಘಾತ ,ಅಪಾಯದಿಂದ ಪಾರು
ಮೊಸರನ್ನವನ್ನು ದಾನ ಮಾಡುವುದರಿಂದ ಆಯುಷ್ಯ ವೃದ್ಧಿ
ಗೋವಿಗೆ ಪೂಜಿಸಿ ಬಾಳೆ ಎಲೆಯಲ್ಲಿ ಸಿಹಿ ತಿನ್ನಿಸುವ ದರಿಂದ ವಿವಾಹ ಸಂಬಂಧಿ ದೋಷ ಗಳು ದೂರವಾಗುತ್ತವೆ.
***********
ಶ್ರೀ ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ.
ಶುಭ ದಿನ ಶುಭ ವಾರ ಶುಭದಿನದಂದು ಆತ್ಮೀಯ ಸದಸ್ಯರೆಲ್ಲರಿಗೂ ಶ್ರೀ ಕೃಷ್ಣನ ಸ್ಮರಣೆ ಯೊಂದಿಗೆ "ಆಯು ಆರೋಗ್ಯ ಸಂಪತ್ತು ಮತ್ತು ಶ್ರೀ ಹರಿಯಲ್ಲಿ ಭಕ್ತಿ , ಜ್ಞಾನ ವೈರಾಗ್ಯ ವನ್ನು ಅಕ್ಷಯವನ್ನುಂಟು ಮಾಡಲಿ ಎಂದು ಪ್ರಾರ್ಥನೆ.
ಶ್ರೀ ಕೃಷ್ಣ ಪರಮಾತ್ಮ ನೇ ಅಕ್ಷಯತೃತೀಯಾ ದ ಅಸಾಧಾರಣ ಮಹಿಮೆ ಗಳನ್ನು ವರ್ಣಿಸಿದ್ದಾರೆ.
ಗಂಗಾ ಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ ದೀಪ, ಪುಷ್ಪ ಗಳಿಂದ ಮತ್ತು ವಿಶೇಷ ವಾಗಿ ಚಂದನಲೇಪದಿಂದ ಅರ್ಚನೆ ಮಾಡುವುದು ಇಂದಿನ ವಿಶೇಷ.
ಈ ದಿನದಂದು ನಾವು ಆಚರಿಸುವ ಸಂಕಲ್ಪ ಪೂರ್ವಕ ಸ್ನಾನ,ಜಪ ತಪ, ಅಧ್ಯಯನ,ತರ್ಪಣ,ದಾನಾದಿಗಳೆಲ್ಲವೂ ಅಕ್ಷಯವಾದ
ಫಲವನ್ನು ನೀಡುವುದರಿಂದ "ಇಂದಿನ ಶುಭ ದಿನವನ್ನು
ಅಕ್ಷಯ ತೃತೀಯಾ"ಎಂದು ಕರೆಯಲ್ಪಡುವುದು.
ಮಹಾಭಾರತ ದಲ್ಲಿ ದ್ರೌಪದಿ ಗೆ ಶ್ರೀ ಕೃಷ್ಣನು ಅಕ್ಷಯಪಾತ್ರೆ ಯನ್ನು ಕೊಟ್ಟ ದಿನ.ಅಕ್ಷಯ ತೃತೀಯ.
ಪರಶುರಾಮ ದೇವರ ಅವತಾರ ವೂ ಇಂದೇ ಆಗಿದ್ದರಿಂದ ಪರಶುರಾಮ ಜಯಂತಿ ಎಂದೂ ಕರೆಯುತ್ತಾರೆ.
ಮಹಾಭಾರತ ವನ್ನು ವ್ಯಾಸರು ರಚಿಸಿದ ದಿನವೂ ಅಕ್ಷಯ ತೃತೀಯ.
ಭಗೀರಥ ನು ಶಿವನ ಜಟೆಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದ ದಿನವೂ ಅಕ್ಷಯ ತೃತೀಯಾ.
ಹೀಗಾಗಿ ಇಂದಿನ ಶುಭ ದಿನವನ್ನು ಜಪ ತಪ ದಾನಗಳಿಂದ ಗೋಮಾತೆಗೆ ಗೋಗ್ರಾಸ ನೀಡಿ ಪೂಜಿಸುವುದರಿಂದ ನಮ್ಮ ಪುಣ್ಯದ ಫಲಗಳು ಅಕ್ಷಯವಾಗಿ ಶ್ರೀ ಹರಿ ಯ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷ ವನ್ನು ಪಡೆಯುವ ಶುಭ ದಿನ..
ಸರ್ವ ಸದಸ್ಯರಿಗೂ ಶ್ರೀ ಕೃಷ್ಣನ ಅನುಗ್ರಹ ವಾಗಲಿ.
ಶ್ರೀ ಮಹಾಲಕ್ಷ್ಮಿ ದೇವಿಯರು ಕೃಪೆ ತೋರಲಿ.
ಗುರುಗಳು ಅನುಗ್ರಹ ಮಾಡಲಿ.
//ಶ್ರೀ ಹರಿ ಸಮರ್ಪಣೆ//.
*************
ಶ್ರೀ ವಾದಿರಾಜಾಯ ನಮಃ.
ಭಾವೀ ಸಮೀರ ವಾದಿರಾಜರು ರಚಿಸಿದ ಶ್ರೀ ಲಕ್ಷ್ಮೀ ಶೋಭಾನ ದಲ್ಲಿ ಶ್ರೀ ಲಕ್ಷ್ಮೀ ದೇವಿಯ ಅಲಂಕಾರ ವನ್ನು ಅತಿ ಭವ್ಯವಾಗಿ ಸುಂದರ ವಾಗಿ ವರ್ಣಿಸಿದ್ದಾರೆ.
ಅದರಲ್ಲಿಯ ಕೆಲವು ಭಾಗಗಳ ವಿವರಣೆ.
ಇಂದಿನ ಶುಭ ದಿನ
ಅಕ್ಷಯ ತೃತೀಯಾ ದಂದು ಶ್ರೀ ಲಕ್ಷ್ಮೀ ದೇವಿಯನ್ನು ಆಹ್ವಾನಿಸಿ ಪೂಜಿಸಿ, ಅನುಗ್ರಹ ವನ್ನು ಪಡೆಯೋಣ.
ಶ್ರೀ ಮತ್ ಸೌಭಾಗ್ಯ ಜನನೀಂ ಸ್ತೌಮಿ ಲಕ್ಷ್ಮೀಂ ಸನಾತನೀಂ ಸರ್ವಕಾಮಫಲಾವಾಪ್ತಿ ಸಾಧನೈಕ ಸುಖಾವಹಾಮ್//.
ಶ್ರೀ ಪುರಂದರ ದಾಸರು ತಮ್ಮ ಒಂದು ಕೃತಿ ಯಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯರನ್ನು ಇಪ್ಪತ್ತು ನಾಲ್ಕು ನಾಮಗಳಿಂದ ಅಲಂಕರಿಸಿದ ಸುಂದರ ಕೃತಿ.
ಶ್ರೀ ಮಹಾಲಕ್ಷ್ಮಿ ಯ ಅಲಂಕರಿಸಿ ಕರೆದರು//
ಕೇಶವ ನಿಮ್ಮ ನಾಮ ಮಾಂಗಲ್ಯ ಸೂತ್ರ ತಾಳಿ/
ನಾರಾಯಣ ನಿಮ್ಮ ನಾಮ ತಾಳಿ ಪದಕವು//
ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೊಧಿಯ ಸರವು//೧//.
(ಶ್ರೀ ಪುರಂದರ ದಾಸರು).
ಶ್ರೀ ಭಾವೀ ಸಮೀರ ಶ್ರೀ ಮದ್ವಾದಿರಾಜ ತೀರ್ಥ ಪೂಜ್ಯ ಚರಣ ವಿರಚಿತ ಲಕ್ಷ್ಮೀ ಶೋಭಾನ".
ಶೋಭಾನವೆನ್ನಿರೆ ಸುರರೊಳು ಸುಭಗನೀಗೆ
ಶೋಭಾನವೆನ್ನಿ ಸುಗುಣನಿಗೆ/
ಶೋಭಾನವೆನ್ನಿ ತ್ರಿವಿಕ್ರಮ ರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ//.
ಸರ್ವಮಂಗಳದಾಯಕಳಾದ ಮಹಾಲಕ್ಷ್ಮಿ ದೇವಿಯ ಮತ್ತು ಶ್ರೀ ನಾರಾಯಣ ನ ಮಂಗಳಕರವಾದ ಮಹಾಮೆಯನ್ನು ಮಂಗಳರೂಪವಾದ ಈ ಗ್ರಂಥವನ್ನು ಶ್ರೀ ವಾದಿರಾಜರು ರಚಿಸಿದ್ದಾರೆ.
ದೇವತೆಗಳಲ್ಲೆಲ್ಲ ಮಹಾ ಸೌಭಾಗ್ಯ ಶಾಲಿಯಾದ ಭಾಗ್ಯಲಕ್ಷ್ಮಿ ತಾನಾಗಿಯೇ ವರಿಸಿದ ಶ್ರೀ ಹರಿ ಗೆ ಗುಣಪೂರ್ಣನಾದ ತ್ರಿವಿಕ್ರಮನಿಗೆ ಸುರರಿಗೆ ಅತ್ಯಂತ ಪ್ರಿಯಕರನಾದವನಿಗೆ ಶೋಭಾನವೆನ್ನಿ.
ಲಕ್ಷ್ಮೀ ನಾರಾಯಣ ರ ಚರಣಕ್ಞೆ ಶರಣೆಂಬೆ
ಪಕ್ಷಿವಾಹನ್ನಗೆರುಗುವೆ/
ಪಕ್ಷಿವಾಹನ್ನಗೆರುಗುವೆ ಅನುದಿನ
ರಕ್ಷಿಸಲಿ ನಮ್ಮ ವಧುವರರ//೧//
ಪರಮಮಂಗಳ ಸ್ವರೂಪ ನಾದ ಲಕ್ಷ್ಮೀ ನಾರಾಯಣ ರ
ಚರಣಗಳಿಗೆ ಶರಣು! ಪ್ರಣಾಮ ಗಳನ್ನು ಅರ್ಪಿಸುತ್ತೇನೆ.
ನಮ್ಮ ವಧುವರರನ್ನು ಲಕ್ಷ್ಮೀ ನಾರಾಯಣರು ಅನುದಿನವು ರಕ್ಷಿಸುತ್ತಿರಲಿ.
//ಶ್ರೀ ಹರಿ ಸಮರ್ಪಣೆ//.
****************
|| ಶ್ರೀ ವಿಠ್ಠಲ ಪ್ರಸೀದತು ||
ಸರ್ವರಿಗೂ “ಅಕ್ಷಯ ತೃತೀಯದ “ ಶುಭಾಶಯಗಳು . ಇಂದು ಸಾಕ್ಷಾತ್ ಭಗವಂತನ ಆರನೇ ಅವತಾರ ಪರುಶುರಾಮ ಜಯಂತಿ ಕೂಡ .
ಅಕ್ಷಯ ತೃತೀಯದ ಮುಖ್ಯ ಮಹತ್ವ ,ಅಕ್ಷಯ ಪಾತ್ರೆ ಪ್ರಧಾನ .
ಚಕ್ರವರ್ತಿಯಾಗಿ ಮೆರೆಯಬೇಕಿದ್ದ ಧರ್ಮರಾಯ ಮೋಸದ ಜೂಜಾಟದಲ್ಲಿ ಸರ್ವಸ್ವವನ್ನು ಕಳೆದುಕೊಂಡು ವನವಾಸ ಅಜ್ಞಾತ ವಾಸಕ್ಕೆ ತಮ್ಮಂದಿರೊಡನೆ ಹೊರಡುತ್ತಾನೆ ಗಂಗಾತೀರಕ್ಕೆ ಬಂದರು ಪಾಂಡವರು . ಧರ್ಮರಾಯ ಬಹಳ ದುಃಖ ಪಡುತ್ತಾನೆ . ತನಗೆ ಮತ್ತೆ ಹಿರಿಯರು ಆಶಿರ್ವಧಿಸಿಕೊಟ್ಟ ರಾಜ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಅಳುಕು ಅವನದು . ತನ್ನಿಂದಾಗಿ ತಮ್ಮಂದಿರು ದ್ರೌಪತಿ
ಕಷ್ಟಪಡುವಂತಾಯಿತು , ಅತಿಥಿಗಳಿಗೆ ಎಂದು ನಾಸ್ತಿ ಎಂದು ಹೇಳಿದವನಲ್ಲ ಎಂದು ಪರಿತಾಪ ಪಟ್ಟ ಧರ್ಮರಾಜನಿಗೆ ಧೌಮ್ಯರು “ ಯೋಚನೆ ಮಾಡಬೇಡ ಎಲ್ಲ ಕಾರ್ಯಗಳಿಗೆ ಕರ್ಮಗಳಿಗೆ
ಸೂರ್ಯ ಸಾಕ್ಷಿಯಾಗಿದ್ದಾನೆ , ಅವನನ್ನು ಕುರಿತು
ಏಕಾಗ್ರತೆಯಿಂದ ಪ್ರಾರ್ಥನೆ ಮಾಡು ಪರಿಹಾರ
ಸಿಗುತ್ತದೆ “ ಎಂದು ಹೇಳಿದರು
ಋಷಿಗಳ ಉಪದೇಶದಂತೆ ಬೆಳಗಿನಜಾವ ಉದಯಿಸಿದ ಆದಿತ್ಯನನ್ನು ಧರ್ಮರಾಜ ಭಕ್ತಿಯಿಂದ ಪ್ರಾರ್ಥಿಸಿದ . ಸೂರ್ಯ ಪ್ರತ್ಯಕ್ಷನಾಗಿ ಈ ಅಕ್ಷಯ ಪಾತ್ರೆಯನ್ನು ದಯಪಾಲಿಸಿದ . ಹಾಗೆ ಅದರ ಉನ್ನತ ಗುಣಗಳನ್ನು ತಿಳಿಸಿದ . ಧರ್ಮರಾಜನನ್ನು ಪ್ರಶಂಸಿಸುತ್ತಾ “ ಈ ಧಿವ್ಯವಾದ ಅಕ್ಷಯ ಪಾತ್ರೆಯನ್ನು ದಯಪಾಲಿಸಿದ್ದೇನೆ , ಇದರಲ್ಲಿ ನೀವು ಅಪೇಕ್ಷಿಸಿದ ಮೃಷ್ಟಾನ್ನ ದೊರೆಯುವುದು
ದ್ರೌಪದಿಯ ಭೋಜನಾನಂತರ ಈ ಪಾತ್ರೆಯಿಂದ ಏನೂ ಲಭಿಸದು “ ಎಂದು ಹೇಳಿ
ಅಕ್ಷಯ ಪಾತ್ರೆ ಪ್ರಧಾನ ಮಾಡಿದ ದಿನ ಇದು .
ಋಷಿಮುನಿಗಳಿಗೆ ದಾನ ಧರ್ಮ ಯುಧಿಷ್ಠಿರನಿಗೆ ಅನುವು ಮಾಡಿಕೊಟ್ಟದಿನ ಇವತ್ತು ಹೊರತು
ಚಿನ್ನದ ಆಭರಣ ಖರೀದಿಸಿ ಸಂಪತ್ತನ್ನು ಬೆಳಸುವ ದಿನ ಇದಲ್ಲ .
ಇನ್ನು ಗಂಧಲೇಪನಕ್ಕೂ ವೈಜ್ಞಾನಿಕ ಹಿನ್ನೆಲೆ ಇದೆ
ನಿತ್ಯ ಕಲ್ಯಾಣ ನಾದ ವೆಂಕಟೇಶನ ಮೂರನೇದಿನದ ಸ್ಮರಣೆ
ಹರಿಕಥಾಮೃತ ಸಾರದಲ್ಲಿ ಶ್ರೀ ಜಗನ್ನಾಥ ದಾಸರು , “ಚಂಡ ವಿಕ್ರಮ ಚಕ್ರ ಶಂಖವ ತೊಂಡಮಾನ ನೃಪಾಲಾಗಿತ್ತನು “ ಎಂದು ಹೇಳಿದ್ದಾರೆ . ಶ್ರೀನಿವಾಸ ಪದ್ಮಾವತಿಯರ ವಿವಾಹ ಆದ ಆರುತಿಂಗಳ ನಂತರ
ಶ್ರೀನಿವಾಸ ಪದ್ಮಾವತಿಯರು ಆಕಾಶರಾಜನನ್ನು ಸಂದರ್ಶಿಸಿದ .
ಅವನ ನಂತರ ತೊಂಡಮಾನ ರಾಜನಾದ .
ತೊಂಡಮಾನ ಭಕ್ತಿಯಿಂದ ಸ್ತೋತ್ರ ಮಾಡುತ್ತಾನೆ .”ಗೋವಿಂದ ಪುರಾಣ ಪುರುಷೋತ್ತಮ ,ಅಪ್ರಾಕೃತ ರೂಪ ಪ್ರಳಯಕಾಲದಲ್ಲಿ ಸರ್ವಜಗತ್ತನ್ನು ಉದರದಲ್ಲಿಟ್ಟು ಮಲಗುವಿ ರಮಣೀಯಾಂಗ
ವಿಕ್ರಮ, ಶ್ರೀವೆಂಕಟೇಶ , ಶ್ರೀಮದನಂತ, ಶೇಷಗಿರಿ ವಾಸನೆ , ಶ್ರೀನಿವಾಸನೆ, ಪರಬ್ರಹ್ಮನೇ ನಮೋನಮಃ . ಎಂದು ಸ್ತುತಿಸಿದಾಗ ಶ್ರೀನಿವಾಸ ಸಂತುಷ್ಟನಾದ . ಅವನನ್ನು ಪ್ರಶಂಸಿಸಿದ ಆದರೂ ಕಲಿಯುಗ ರೀತ್ಯ
ಬರಿ ಪ್ರಶಂಸೆಯಿಂದ ಏನಾಯಿತು , ಆಕಾಶರಾಜನಂತ ಮಹಾನುಭಾವನ ಅಳಿಯ ನಾನು , ನನಗೆ ಸ್ವಂತ ಆಲಯ ಇಲ್ಲ ಅದನ್ನು ಕೊಡಲು ಕೇಳಿದ . ಹಾಗು ತಾನೇ ಎಲ್ಲಿ ಮಾಡಬೇಕು ಹೇಗೆ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ .
ವರಾಹದೇವರು ನೀಡಿದ ಪುಷ್ಕರಿಣಿಯ ದಕ್ಷಿಣ ದಿಕ್ಕಿನ ನೂರು ಹೆಜ್ಜೆ ಅಳತೆಯಭೂಮಿಯಲ್ಲಿ
ಪೂರ್ವ ಅಭಿಮುಖ , ಎರಡು ಗೋಪುರ , ಪ್ರಾಕಾರ ತ್ರಯ , ಸಪ್ತದ್ವಾರ ,ಹೊಸ್ತಿಲು
ತೋರಣ ,ದ್ವಜ ಸ್ತಂಭ ,ಆಸ್ಥಾನ ಮಂಟಪ , ಯಾಗಮಂಟಪ ,ಗೋಶಾಲೆ , ಧಾನ್ಯ ಶಾಲೆ ,
ಮಾಲಾಕಾರ ಗೃಹ , ವಸ್ತ್ರಗೃಹ , ತೈಲಾಶಾಲೆ
ಭಕ್ಷ್ಯ ಶಾಲಾ , ಭೂಷಣ ಗೃಹ ,ಕರ್ಪುರ , ಗಂಧ ಪುನುಗು ಮಾರ್ಜಾಲ ,ಕಸ್ತೂರಿ ಗೃಹ, ಗಜಭವನ
ಅಶ್ವ ಭವನ ಕೊನೆಗೆ ತುಪ್ಪಕ್ಕಾಗಿ ಭವನ
ಈ ಎಲ್ಲವನ್ನು ಆದೇಶಿಸಿ ಸ್ವತಃ ತಾನೇ ಮಾಡಿಸಿಕೊಂಡ . ತೊಂಡಮಾನ
ತನ್ನ ಹಿಂದಿನ ಜನ್ಮದಲ್ಲಿ ನಿರ್ಮಾಣ ಮಾಡಿದ್ದ ಸ್ಥಳಗಳನ್ನೂ ಜೀರ್ಣೋದ್ದಾರಮಾಡಿದ . ಗರುಡನಿಂದ ಸುವರ್ಣ ಕಲಶಗಳಿಂದ ಅಲಂಕೃತವಾದ ವಿಮಾನ . ನಡೆದು ಬೆಟ್ಟ ಹತ್ತುವವರಿಗಾಗಿ
ಮೆಟ್ಟಿಲು ಮಾರ್ಗ ವಿಶ್ರಾಂತಿ ಮಂಟಪ ಅರವಟ್ಟಿಗೆಗಳನ್ನು ನಿರ್ಮಿಸಿದ .
ಎಲ್ಲವನ್ನು ವ್ಯವಸ್ಥೆಗೊಳಿಸಿ ಶ್ರೀನಿವಾಸ ಪದ್ಮಾವತಿಯರನ್ನು ನೂತನ ಮಂಟಪದಲ್ಲಿ ನೆಲೆಸಲು ಪ್ರಾರ್ಥಿಸಿದನು .
ಬ್ರಹ್ಮಾದಿ ದೇವತೆಗಳು , ಋಷಿಪುಂಗವರು , ವೇದೋಕ್ತ ಮಂತ್ರಗಳಿಂದ ವಾದ್ಯ ವಿಶೇಷಗಳಿಂದ , ಪುಷ್ಪವೃಷ್ಟಿಗಳಿಂದ ಶ್ರೀನಿವಾಸನು ಆ ಮಂದಿರದಲ್ಲಿ ಪ್ರವೇಶಮಾಡಿದನು . ವಿಮಾನದಲ್ಲಿ ಶ್ರೀನಿವಾಸ
ರಾರಾಜಿಸಿದಾಗ ಅದನ್ನು “ಆನಂದ ನಿಲಯ “ ಎಂದು ಕರೆಯಲ್ಪಟ್ಟಿತು . ಒಂದು ಸಂದರ್ಭದಲ್ಲಿ ಶಂಖ ಚಕ್ರ ವನ್ನು ತೊಂಡಮಾನ ರಾಯನಿಗೆ ಕೊಟ್ಟುಬಿಟ್ಟಿದ್ದರಿಂದ ಅದನ್ನು ಹಿಡಿಯದೇ , ಕೆಳಗಿನ ಬಲಗೈಯನ್ನು ತನ್ನ ಪಾದ ತೋರುತ್ತಾ “ಇದೇ ಎಲ್ಲ ಭಕ್ತರಿಗೆ ಗತಿ “ ಎಂದುಹೇಳುತ್ತಾ
ಎಡಗೈಯನ್ನು ಸೊಂಟದಲ್ಲಿಟ್ಟು “ ನನ್ನ ಪಾದಾರವಿಂದ ದ್ವಂದ್ವವನ್ನು ಭಕ್ತಿಯಿಂದ ಭಜಿಸುವವರಿಗೆ ಸಂಸಾರ ಸಮುದ್ರ ಕಟಿಯಷ್ಟು
ಪ್ರವಾಹವುಳ್ಳ ನೀರಿನಂತೆ ದಾಟಲು ಅತಿಸುಲಭ “ ಎನ್ನುವ ಭಂಗಿಯಲ್ಲಿ ನಿಂತ .
ಬ್ರಹ್ಮದೇವರು ದೀಪದ್ವಯವನ್ನು ಹೊತ್ತಿಸಿ ಕಲಿಯುಗ ಪರ್ಯಂಕವಿರಲಿ ಎಂದರು .
ಇಂದು “ಅಕ್ಷಯ ತೃತೀಯ “ ಸಂದರ್ಭದಲ್ಲಿ
ತೊಂಡಮಾನ ಮಂದಿರಕಟ್ಟಿಸ್ಸಿದ್ದನ್ನು ಮಾತ್ರ ಧ್ಯಾನಿಸಲು ಸಾಧ್ಯ . ಆದೇವ ದೇವನಲ್ಲಿ ನಾವು ಮಾಡಿದ ಅಲ್ಪ ಸ್ತೋತ್ರ ಅಕ್ಷಯ ಮಾಡಿಸು ಎಂದಷ್ಟೇ ನಮ್ಮ ಪ್ರಾರ್ಥನೆ.
ಮುಂದಿನ ಸಂಚಿಕೆಯಲ್ಲಿ , ಶ್ರೀಜಗನ್ನಾಥ ದಾಸರುಹೇಳಿದ ಪದ್ಯದ ಭಾಗದ ವಿವರಣೆ .
ಎರಡುಸಲ ಶಂಖ ಚಕ್ರ ದಯಪಾಲಿಸಿದ್ದ ಪರಮಾತ್ಮ ತೊಂಡ ಮಾನ ರಾಯನಿಗೆ. ಆ ಕುರಿತು ಕಿಂಚಿತ್ ವಿವರಣೆ ನಾಲ್ಕನೇ ಭಾಗದಲ್ಲಿ.
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀನಿವಾಸಾರ್ಪಣಮಸ್ತು||
***
ಶ್ರೀ ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ.
ಶುಭ ದಿನ ಶುಭ ವಾರ ಶುಭದಿನದಂದು ಆತ್ಮೀಯ ಸದಸ್ಯರೆಲ್ಲರಿಗೂ ಶ್ರೀ ಕೃಷ್ಣನ ಸ್ಮರಣೆ ಯೊಂದಿಗೆ "ಆಯು ಆರೋಗ್ಯ ಸಂಪತ್ತು ಮತ್ತು ಶ್ರೀ ಹರಿಯಲ್ಲಿ ಭಕ್ತಿ , ಜ್ಞಾನ ವೈರಾಗ್ಯ ವನ್ನು ಅಕ್ಷಯವನ್ನುಂಟು ಮಾಡಲಿ ಎಂದು ಪ್ರಾರ್ಥನೆ.
ಶ್ರೀ ಕೃಷ್ಣ ಪರಮಾತ್ಮ ನೇ ಅಕ್ಷಯತೃತೀಯಾ ದ ಅಸಾಧಾರಣ ಮಹಿಮೆ ಗಳನ್ನು ವರ್ಣಿಸಿದ್ದಾರೆ.
ಗಂಗಾ ಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ ದೀಪ, ಪುಷ್ಪ ಗಳಿಂದ ಮತ್ತು ವಿಶೇಷ ವಾಗಿ ಚಂದನಲೇಪದಿಂದ ಅರ್ಚನೆ ಮಾಡುವುದು ಇಂದಿನ ವಿಶೇಷ.
ಈ ದಿನದಂದು ನಾವು ಆಚರಿಸುವ ಸಂಕಲ್ಪ ಪೂರ್ವಕ ಸ್ನಾನ,ಜಪ ತಪ, ಅಧ್ಯಯನ,ತರ್ಪಣ,ದಾನಾದಿಗಳೆಲ್ಲವೂ ಅಕ್ಷಯವಾದ
ಫಲವನ್ನು ನೀಡುವುದರಿಂದ "ಇಂದಿನ ಶುಭ ದಿನವನ್ನು
ಅಕ್ಷಯ ತೃತೀಯಾ"ಎಂದು ಕರೆಯಲ್ಪಡುವುದು.
ಮಹಾಭಾರತ ದಲ್ಲಿ ದ್ರೌಪದಿ ಗೆ ಶ್ರೀ ಕೃಷ್ಣನು ಅಕ್ಷಯಪಾತ್ರೆ ಯನ್ನು ಕೊಟ್ಟ ದಿನ.ಅಕ್ಷಯ ತೃತೀಯ.
ಪರಶುರಾಮ ದೇವರ ಅವತಾರ ವೂ ಇಂದೇ ಆಗಿದ್ದರಿಂದ ಪರಶುರಾಮ ಜಯಂತಿ ಎಂದೂ ಕರೆಯುತ್ತಾರೆ.
ಮಹಾಭಾರತ ವನ್ನು ವ್ಯಾಸರು ರಚಿಸಿದ ದಿನವೂ ಅಕ್ಷಯ ತೃತೀಯ.
ಭಗೀರಥ ನು ಶಿವನ ಜಟೆಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದ ದಿನವೂ ಅಕ್ಷಯ ತೃತೀಯಾ.
ಹೀಗಾಗಿ ಇಂದಿನ ಶುಭ ದಿನವನ್ನು ಜಪ ತಪ ದಾನಗಳಿಂದ ಗೋಮಾತೆಗೆ ಗೋಗ್ರಾಸ ನೀಡಿ ಪೂಜಿಸುವುದರಿಂದ ನಮ್ಮ ಪುಣ್ಯದ ಫಲಗಳು ಅಕ್ಷಯವಾಗಿ ಶ್ರೀ ಹರಿ ಯ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷ ವನ್ನು ಪಡೆಯುವ ಶುಭ ದಿನ..
ಸರ್ವ ಸದಸ್ಯರಿಗೂ ಶ್ರೀ ಕೃಷ್ಣನ ಅನುಗ್ರಹ ವಾಗಲಿ.
ಶ್ರೀ ಮಹಾಲಕ್ಷ್ಮಿ ದೇವಿಯರು ಕೃಪೆ ತೋರಲಿ.
ಗುರುಗಳು ಅನುಗ್ರಹ ಮಾಡಲಿ.
//ಶ್ರೀ ಹರಿ ಸಮರ್ಪಣೆ//.
*************
ಶ್ರೀ ವಾದಿರಾಜಾಯ ನಮಃ.
ಭಾವೀ ಸಮೀರ ವಾದಿರಾಜರು ರಚಿಸಿದ ಶ್ರೀ ಲಕ್ಷ್ಮೀ ಶೋಭಾನ ದಲ್ಲಿ ಶ್ರೀ ಲಕ್ಷ್ಮೀ ದೇವಿಯ ಅಲಂಕಾರ ವನ್ನು ಅತಿ ಭವ್ಯವಾಗಿ ಸುಂದರ ವಾಗಿ ವರ್ಣಿಸಿದ್ದಾರೆ.
ಅದರಲ್ಲಿಯ ಕೆಲವು ಭಾಗಗಳ ವಿವರಣೆ.
ಇಂದಿನ ಶುಭ ದಿನ
ಅಕ್ಷಯ ತೃತೀಯಾ ದಂದು ಶ್ರೀ ಲಕ್ಷ್ಮೀ ದೇವಿಯನ್ನು ಆಹ್ವಾನಿಸಿ ಪೂಜಿಸಿ, ಅನುಗ್ರಹ ವನ್ನು ಪಡೆಯೋಣ.
ಶ್ರೀ ಮತ್ ಸೌಭಾಗ್ಯ ಜನನೀಂ ಸ್ತೌಮಿ ಲಕ್ಷ್ಮೀಂ ಸನಾತನೀಂ ಸರ್ವಕಾಮಫಲಾವಾಪ್ತಿ ಸಾಧನೈಕ ಸುಖಾವಹಾಮ್//.
ಶ್ರೀ ಪುರಂದರ ದಾಸರು ತಮ್ಮ ಒಂದು ಕೃತಿ ಯಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯರನ್ನು ಇಪ್ಪತ್ತು ನಾಲ್ಕು ನಾಮಗಳಿಂದ ಅಲಂಕರಿಸಿದ ಸುಂದರ ಕೃತಿ.
ಶ್ರೀ ಮಹಾಲಕ್ಷ್ಮಿ ಯ ಅಲಂಕರಿಸಿ ಕರೆದರು//
ಕೇಶವ ನಿಮ್ಮ ನಾಮ ಮಾಂಗಲ್ಯ ಸೂತ್ರ ತಾಳಿ/
ನಾರಾಯಣ ನಿಮ್ಮ ನಾಮ ತಾಳಿ ಪದಕವು//
ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೊಧಿಯ ಸರವು//೧//.
(ಶ್ರೀ ಪುರಂದರ ದಾಸರು).
ಶ್ರೀ ಭಾವೀ ಸಮೀರ ಶ್ರೀ ಮದ್ವಾದಿರಾಜ ತೀರ್ಥ ಪೂಜ್ಯ ಚರಣ ವಿರಚಿತ ಲಕ್ಷ್ಮೀ ಶೋಭಾನ".
ಶೋಭಾನವೆನ್ನಿರೆ ಸುರರೊಳು ಸುಭಗನೀಗೆ
ಶೋಭಾನವೆನ್ನಿ ಸುಗುಣನಿಗೆ/
ಶೋಭಾನವೆನ್ನಿ ತ್ರಿವಿಕ್ರಮ ರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ//.
ಸರ್ವಮಂಗಳದಾಯಕಳಾದ ಮಹಾಲಕ್ಷ್ಮಿ ದೇವಿಯ ಮತ್ತು ಶ್ರೀ ನಾರಾಯಣ ನ ಮಂಗಳಕರವಾದ ಮಹಾಮೆಯನ್ನು ಮಂಗಳರೂಪವಾದ ಈ ಗ್ರಂಥವನ್ನು ಶ್ರೀ ವಾದಿರಾಜರು ರಚಿಸಿದ್ದಾರೆ.
ದೇವತೆಗಳಲ್ಲೆಲ್ಲ ಮಹಾ ಸೌಭಾಗ್ಯ ಶಾಲಿಯಾದ ಭಾಗ್ಯಲಕ್ಷ್ಮಿ ತಾನಾಗಿಯೇ ವರಿಸಿದ ಶ್ರೀ ಹರಿ ಗೆ ಗುಣಪೂರ್ಣನಾದ ತ್ರಿವಿಕ್ರಮನಿಗೆ ಸುರರಿಗೆ ಅತ್ಯಂತ ಪ್ರಿಯಕರನಾದವನಿಗೆ ಶೋಭಾನವೆನ್ನಿ.
ಲಕ್ಷ್ಮೀ ನಾರಾಯಣ ರ ಚರಣಕ್ಞೆ ಶರಣೆಂಬೆ
ಪಕ್ಷಿವಾಹನ್ನಗೆರುಗುವೆ/
ಪಕ್ಷಿವಾಹನ್ನಗೆರುಗುವೆ ಅನುದಿನ
ರಕ್ಷಿಸಲಿ ನಮ್ಮ ವಧುವರರ//೧//
ಪರಮಮಂಗಳ ಸ್ವರೂಪ ನಾದ ಲಕ್ಷ್ಮೀ ನಾರಾಯಣ ರ
ಚರಣಗಳಿಗೆ ಶರಣು! ಪ್ರಣಾಮ ಗಳನ್ನು ಅರ್ಪಿಸುತ್ತೇನೆ.
ನಮ್ಮ ವಧುವರರನ್ನು ಲಕ್ಷ್ಮೀ ನಾರಾಯಣರು ಅನುದಿನವು ರಕ್ಷಿಸುತ್ತಿರಲಿ.
//ಶ್ರೀ ಹರಿ ಸಮರ್ಪಣೆ//.
****************
|| ಶ್ರೀ ವಿಠ್ಠಲ ಪ್ರಸೀದತು ||
ಸರ್ವರಿಗೂ “ಅಕ್ಷಯ ತೃತೀಯದ “ ಶುಭಾಶಯಗಳು . ಇಂದು ಸಾಕ್ಷಾತ್ ಭಗವಂತನ ಆರನೇ ಅವತಾರ ಪರುಶುರಾಮ ಜಯಂತಿ ಕೂಡ .
ಅಕ್ಷಯ ತೃತೀಯದ ಮುಖ್ಯ ಮಹತ್ವ ,ಅಕ್ಷಯ ಪಾತ್ರೆ ಪ್ರಧಾನ .
ಚಕ್ರವರ್ತಿಯಾಗಿ ಮೆರೆಯಬೇಕಿದ್ದ ಧರ್ಮರಾಯ ಮೋಸದ ಜೂಜಾಟದಲ್ಲಿ ಸರ್ವಸ್ವವನ್ನು ಕಳೆದುಕೊಂಡು ವನವಾಸ ಅಜ್ಞಾತ ವಾಸಕ್ಕೆ ತಮ್ಮಂದಿರೊಡನೆ ಹೊರಡುತ್ತಾನೆ ಗಂಗಾತೀರಕ್ಕೆ ಬಂದರು ಪಾಂಡವರು . ಧರ್ಮರಾಯ ಬಹಳ ದುಃಖ ಪಡುತ್ತಾನೆ . ತನಗೆ ಮತ್ತೆ ಹಿರಿಯರು ಆಶಿರ್ವಧಿಸಿಕೊಟ್ಟ ರಾಜ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಅಳುಕು ಅವನದು . ತನ್ನಿಂದಾಗಿ ತಮ್ಮಂದಿರು ದ್ರೌಪತಿ
ಕಷ್ಟಪಡುವಂತಾಯಿತು , ಅತಿಥಿಗಳಿಗೆ ಎಂದು ನಾಸ್ತಿ ಎಂದು ಹೇಳಿದವನಲ್ಲ ಎಂದು ಪರಿತಾಪ ಪಟ್ಟ ಧರ್ಮರಾಜನಿಗೆ ಧೌಮ್ಯರು “ ಯೋಚನೆ ಮಾಡಬೇಡ ಎಲ್ಲ ಕಾರ್ಯಗಳಿಗೆ ಕರ್ಮಗಳಿಗೆ
ಸೂರ್ಯ ಸಾಕ್ಷಿಯಾಗಿದ್ದಾನೆ , ಅವನನ್ನು ಕುರಿತು
ಏಕಾಗ್ರತೆಯಿಂದ ಪ್ರಾರ್ಥನೆ ಮಾಡು ಪರಿಹಾರ
ಸಿಗುತ್ತದೆ “ ಎಂದು ಹೇಳಿದರು
ಋಷಿಗಳ ಉಪದೇಶದಂತೆ ಬೆಳಗಿನಜಾವ ಉದಯಿಸಿದ ಆದಿತ್ಯನನ್ನು ಧರ್ಮರಾಜ ಭಕ್ತಿಯಿಂದ ಪ್ರಾರ್ಥಿಸಿದ . ಸೂರ್ಯ ಪ್ರತ್ಯಕ್ಷನಾಗಿ ಈ ಅಕ್ಷಯ ಪಾತ್ರೆಯನ್ನು ದಯಪಾಲಿಸಿದ . ಹಾಗೆ ಅದರ ಉನ್ನತ ಗುಣಗಳನ್ನು ತಿಳಿಸಿದ . ಧರ್ಮರಾಜನನ್ನು ಪ್ರಶಂಸಿಸುತ್ತಾ “ ಈ ಧಿವ್ಯವಾದ ಅಕ್ಷಯ ಪಾತ್ರೆಯನ್ನು ದಯಪಾಲಿಸಿದ್ದೇನೆ , ಇದರಲ್ಲಿ ನೀವು ಅಪೇಕ್ಷಿಸಿದ ಮೃಷ್ಟಾನ್ನ ದೊರೆಯುವುದು
ದ್ರೌಪದಿಯ ಭೋಜನಾನಂತರ ಈ ಪಾತ್ರೆಯಿಂದ ಏನೂ ಲಭಿಸದು “ ಎಂದು ಹೇಳಿ
ಅಕ್ಷಯ ಪಾತ್ರೆ ಪ್ರಧಾನ ಮಾಡಿದ ದಿನ ಇದು .
ಋಷಿಮುನಿಗಳಿಗೆ ದಾನ ಧರ್ಮ ಯುಧಿಷ್ಠಿರನಿಗೆ ಅನುವು ಮಾಡಿಕೊಟ್ಟದಿನ ಇವತ್ತು ಹೊರತು
ಚಿನ್ನದ ಆಭರಣ ಖರೀದಿಸಿ ಸಂಪತ್ತನ್ನು ಬೆಳಸುವ ದಿನ ಇದಲ್ಲ .
ಇನ್ನು ಗಂಧಲೇಪನಕ್ಕೂ ವೈಜ್ಞಾನಿಕ ಹಿನ್ನೆಲೆ ಇದೆ
ನಿತ್ಯ ಕಲ್ಯಾಣ ನಾದ ವೆಂಕಟೇಶನ ಮೂರನೇದಿನದ ಸ್ಮರಣೆ
ಹರಿಕಥಾಮೃತ ಸಾರದಲ್ಲಿ ಶ್ರೀ ಜಗನ್ನಾಥ ದಾಸರು , “ಚಂಡ ವಿಕ್ರಮ ಚಕ್ರ ಶಂಖವ ತೊಂಡಮಾನ ನೃಪಾಲಾಗಿತ್ತನು “ ಎಂದು ಹೇಳಿದ್ದಾರೆ . ಶ್ರೀನಿವಾಸ ಪದ್ಮಾವತಿಯರ ವಿವಾಹ ಆದ ಆರುತಿಂಗಳ ನಂತರ
ಶ್ರೀನಿವಾಸ ಪದ್ಮಾವತಿಯರು ಆಕಾಶರಾಜನನ್ನು ಸಂದರ್ಶಿಸಿದ .
ಅವನ ನಂತರ ತೊಂಡಮಾನ ರಾಜನಾದ .
ತೊಂಡಮಾನ ಭಕ್ತಿಯಿಂದ ಸ್ತೋತ್ರ ಮಾಡುತ್ತಾನೆ .”ಗೋವಿಂದ ಪುರಾಣ ಪುರುಷೋತ್ತಮ ,ಅಪ್ರಾಕೃತ ರೂಪ ಪ್ರಳಯಕಾಲದಲ್ಲಿ ಸರ್ವಜಗತ್ತನ್ನು ಉದರದಲ್ಲಿಟ್ಟು ಮಲಗುವಿ ರಮಣೀಯಾಂಗ
ವಿಕ್ರಮ, ಶ್ರೀವೆಂಕಟೇಶ , ಶ್ರೀಮದನಂತ, ಶೇಷಗಿರಿ ವಾಸನೆ , ಶ್ರೀನಿವಾಸನೆ, ಪರಬ್ರಹ್ಮನೇ ನಮೋನಮಃ . ಎಂದು ಸ್ತುತಿಸಿದಾಗ ಶ್ರೀನಿವಾಸ ಸಂತುಷ್ಟನಾದ . ಅವನನ್ನು ಪ್ರಶಂಸಿಸಿದ ಆದರೂ ಕಲಿಯುಗ ರೀತ್ಯ
ಬರಿ ಪ್ರಶಂಸೆಯಿಂದ ಏನಾಯಿತು , ಆಕಾಶರಾಜನಂತ ಮಹಾನುಭಾವನ ಅಳಿಯ ನಾನು , ನನಗೆ ಸ್ವಂತ ಆಲಯ ಇಲ್ಲ ಅದನ್ನು ಕೊಡಲು ಕೇಳಿದ . ಹಾಗು ತಾನೇ ಎಲ್ಲಿ ಮಾಡಬೇಕು ಹೇಗೆ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ .
ವರಾಹದೇವರು ನೀಡಿದ ಪುಷ್ಕರಿಣಿಯ ದಕ್ಷಿಣ ದಿಕ್ಕಿನ ನೂರು ಹೆಜ್ಜೆ ಅಳತೆಯಭೂಮಿಯಲ್ಲಿ
ಪೂರ್ವ ಅಭಿಮುಖ , ಎರಡು ಗೋಪುರ , ಪ್ರಾಕಾರ ತ್ರಯ , ಸಪ್ತದ್ವಾರ ,ಹೊಸ್ತಿಲು
ತೋರಣ ,ದ್ವಜ ಸ್ತಂಭ ,ಆಸ್ಥಾನ ಮಂಟಪ , ಯಾಗಮಂಟಪ ,ಗೋಶಾಲೆ , ಧಾನ್ಯ ಶಾಲೆ ,
ಮಾಲಾಕಾರ ಗೃಹ , ವಸ್ತ್ರಗೃಹ , ತೈಲಾಶಾಲೆ
ಭಕ್ಷ್ಯ ಶಾಲಾ , ಭೂಷಣ ಗೃಹ ,ಕರ್ಪುರ , ಗಂಧ ಪುನುಗು ಮಾರ್ಜಾಲ ,ಕಸ್ತೂರಿ ಗೃಹ, ಗಜಭವನ
ಅಶ್ವ ಭವನ ಕೊನೆಗೆ ತುಪ್ಪಕ್ಕಾಗಿ ಭವನ
ಈ ಎಲ್ಲವನ್ನು ಆದೇಶಿಸಿ ಸ್ವತಃ ತಾನೇ ಮಾಡಿಸಿಕೊಂಡ . ತೊಂಡಮಾನ
ತನ್ನ ಹಿಂದಿನ ಜನ್ಮದಲ್ಲಿ ನಿರ್ಮಾಣ ಮಾಡಿದ್ದ ಸ್ಥಳಗಳನ್ನೂ ಜೀರ್ಣೋದ್ದಾರಮಾಡಿದ . ಗರುಡನಿಂದ ಸುವರ್ಣ ಕಲಶಗಳಿಂದ ಅಲಂಕೃತವಾದ ವಿಮಾನ . ನಡೆದು ಬೆಟ್ಟ ಹತ್ತುವವರಿಗಾಗಿ
ಮೆಟ್ಟಿಲು ಮಾರ್ಗ ವಿಶ್ರಾಂತಿ ಮಂಟಪ ಅರವಟ್ಟಿಗೆಗಳನ್ನು ನಿರ್ಮಿಸಿದ .
ಎಲ್ಲವನ್ನು ವ್ಯವಸ್ಥೆಗೊಳಿಸಿ ಶ್ರೀನಿವಾಸ ಪದ್ಮಾವತಿಯರನ್ನು ನೂತನ ಮಂಟಪದಲ್ಲಿ ನೆಲೆಸಲು ಪ್ರಾರ್ಥಿಸಿದನು .
ಬ್ರಹ್ಮಾದಿ ದೇವತೆಗಳು , ಋಷಿಪುಂಗವರು , ವೇದೋಕ್ತ ಮಂತ್ರಗಳಿಂದ ವಾದ್ಯ ವಿಶೇಷಗಳಿಂದ , ಪುಷ್ಪವೃಷ್ಟಿಗಳಿಂದ ಶ್ರೀನಿವಾಸನು ಆ ಮಂದಿರದಲ್ಲಿ ಪ್ರವೇಶಮಾಡಿದನು . ವಿಮಾನದಲ್ಲಿ ಶ್ರೀನಿವಾಸ
ರಾರಾಜಿಸಿದಾಗ ಅದನ್ನು “ಆನಂದ ನಿಲಯ “ ಎಂದು ಕರೆಯಲ್ಪಟ್ಟಿತು . ಒಂದು ಸಂದರ್ಭದಲ್ಲಿ ಶಂಖ ಚಕ್ರ ವನ್ನು ತೊಂಡಮಾನ ರಾಯನಿಗೆ ಕೊಟ್ಟುಬಿಟ್ಟಿದ್ದರಿಂದ ಅದನ್ನು ಹಿಡಿಯದೇ , ಕೆಳಗಿನ ಬಲಗೈಯನ್ನು ತನ್ನ ಪಾದ ತೋರುತ್ತಾ “ಇದೇ ಎಲ್ಲ ಭಕ್ತರಿಗೆ ಗತಿ “ ಎಂದುಹೇಳುತ್ತಾ
ಎಡಗೈಯನ್ನು ಸೊಂಟದಲ್ಲಿಟ್ಟು “ ನನ್ನ ಪಾದಾರವಿಂದ ದ್ವಂದ್ವವನ್ನು ಭಕ್ತಿಯಿಂದ ಭಜಿಸುವವರಿಗೆ ಸಂಸಾರ ಸಮುದ್ರ ಕಟಿಯಷ್ಟು
ಪ್ರವಾಹವುಳ್ಳ ನೀರಿನಂತೆ ದಾಟಲು ಅತಿಸುಲಭ “ ಎನ್ನುವ ಭಂಗಿಯಲ್ಲಿ ನಿಂತ .
ಬ್ರಹ್ಮದೇವರು ದೀಪದ್ವಯವನ್ನು ಹೊತ್ತಿಸಿ ಕಲಿಯುಗ ಪರ್ಯಂಕವಿರಲಿ ಎಂದರು .
ಇಂದು “ಅಕ್ಷಯ ತೃತೀಯ “ ಸಂದರ್ಭದಲ್ಲಿ
ತೊಂಡಮಾನ ಮಂದಿರಕಟ್ಟಿಸ್ಸಿದ್ದನ್ನು ಮಾತ್ರ ಧ್ಯಾನಿಸಲು ಸಾಧ್ಯ . ಆದೇವ ದೇವನಲ್ಲಿ ನಾವು ಮಾಡಿದ ಅಲ್ಪ ಸ್ತೋತ್ರ ಅಕ್ಷಯ ಮಾಡಿಸು ಎಂದಷ್ಟೇ ನಮ್ಮ ಪ್ರಾರ್ಥನೆ.
ಮುಂದಿನ ಸಂಚಿಕೆಯಲ್ಲಿ , ಶ್ರೀಜಗನ್ನಾಥ ದಾಸರುಹೇಳಿದ ಪದ್ಯದ ಭಾಗದ ವಿವರಣೆ .
ಎರಡುಸಲ ಶಂಖ ಚಕ್ರ ದಯಪಾಲಿಸಿದ್ದ ಪರಮಾತ್ಮ ತೊಂಡ ಮಾನ ರಾಯನಿಗೆ. ಆ ಕುರಿತು ಕಿಂಚಿತ್ ವಿವರಣೆ ನಾಲ್ಕನೇ ಭಾಗದಲ್ಲಿ.
ನಾಹಂ ಕರ್ತಾ ಹರಿಃ ಕರ್ತಾ
||ಶ್ರೀನಿವಾಸಾರ್ಪಣಮಸ್ತು||
***
ಅಕ್ಷಯ ತೃತೀಯಾ ಹಬ್ಬದ ಪೌರಾಣಿಕ ಹಿನ್ನೆಲೆ. ಭಾಗ 1
ಲೇಖನ ಮಧುಸೂದನ ಕಲಿಭಟ್. ಬೆಂಗಳೂರು (ಧಾರವಾಡ )18.03.2020
ವೈಶಾಖ ಮಾಸ, ಹೆಸರೇ ಹೇಳಿದಂತೆ ಶಾಖ ಹೆಚ್ಚು. ಸೆಕೆ, ನೀರಿಗಾಗಿ ದಾಹ ಇಂಥ ಲಕ್ಷಣಗಳು ಕಾಣುತ್ತಲೇ ಬರುವದು ಅಕ್ಷಯ ತೃತೀಯಾ ಅಥವಾ ಆಡುಭಾಷೆಯಲ್ಲಿ ಅಕ್ಷತ್ತದಿಗೆ. ಸಾಮಾನ್ಯವಾಗಿ ಬೇಸಗೆ ಇರುವದರಿಂದ ನೀರಡಿಸಿದ ಜೀವಿಗೆ ಅಲ್ಲಲ್ಲಿ ಅರವಟ್ಟಿಗೆ ಗಳನ್ನು ರಾಜರು ಪಂಚರು ಜಮೀನುದಾರರು ಪಟೇಲರು ಇಟ್ಟು ಪುಣ್ಯದ ಕಾರ್ಯ ಎಂದು ಮಾಡುತ್ತಿದ್ದರು. ಆಧ್ಯಾತ್ಮಿಕವಾಗಿ ಈ ದಿನ ಒಂದು ತಂಬಿಗೆ ಲೋಟ ಯಾವದಾದರಲ್ಲಿ ಪೂರ್ಣ ನೀರು ತುಂಬಿಸಿ ಶ್ರೀಹರಿ ಪ್ರೀತಿಗೆ ಎಂದು ಸಂಕಲ್ಪಿಸಿ ಸತ್ಪಾತ್ರರಿಗೆ ದಾನ ಮಾಡಿದರೆ, ದಾನಿಯ ಪಿತೃಗಳು ಲೌಕಿಕದಲ್ಲಿ ಎಷ್ಟೇ ಪಾಪ ಕರ್ಮ ಮಾಡಿದ್ದರೂ ಮುಕ್ತಿಮಾರ್ಗಕ್ಕೆ ಹೋಗುವರು. ಅಲ್ಲದೇ ಆ ದಿನ ಮಾಡಿದ ಪುಣ್ಯ ಕರ್ಮದ ಫಲವು ಅನಂತವಾಗುವದರಲ್ಲಿ ಸಂಶಯವಿಲ್ಲ. ಇನ್ನು ಮುಖ್ಯವಾಗಿ ಭಕ್ತಿಯಿಂದ ಮಾಡಿದ್ದಾರೆ ಅಕ್ಷಯ ವಾಗುವದು.ಇನ್ನು ಈ ಪರ್ವಕಾಲವು ಸಾಡೆತೀನ್ ಮಹೂರ್ತದಲ್ಲಿ ಒಂದು ಆಗಿದೆ. ಅಂದರೆ ಯಾವದೇ ಶುಭ ಕಾರ್ಯಕ್ಕೆ ನಾವು ಮಹೂರ್ತ ನೋಡುವ ಅಗತ್ಯವಿಲ್ಲ. ಇನ್ನು ಕೆಲವು ಪ್ರಾಂತಗಳಲ್ಲಿ ಈ ದಿನ ಖರೀದಿಸಿದ ಬಂಗಾರಕ್ಕೆ ಯಾವ ದೋಷವು ಇರುವದಿಲ್ಲ. ಏಕೆಂದರೆ ಮಹಾಭಾರತದ ಅಂತಿಮ ವೇಳೆಯಲ್ಲಿ ಪರೀಕ್ಷಿತ ರಾಜನಿಗೆ ಕಲಿಪುರುಷನು ವಿನಂತಿಸಿಕೊಂಡಾಗ ರಾಜನು ಕೊನೆಗೆ ಬಂಗಾರದಲ್ಲಿ ಅತೀ ಹೆಚ್ಚು ಇರುವಲ್ಲಿ ನಿನ್ನ ಒಂದು ಅಂಶ ಇರಲಿ ಎಂದು ಆಶ್ವಾಸನೆ ಕೊಟ್ಟಿದ್ದಪೌರಾಣಿಕವಾಗಿ ನೋಡಿದರೆ ಈ ಪರ್ವಕಾಲದ ದಿನದಂದು ಕೆಲವು ಘಟನೆಗಳು ನಡೆದ ಸಂಗತಿ ತಿಳಿದರೆ ಆಶ್ಚರ್ಯ ಆಗುವದು. ಚಾಕ್ಷುಷ ಮನ್ವಂತರದಲ್ಲಿ ದೇವ ದಾನವರು ಅಮೃತಕ್ಕಾಗಿ ಮೈತ್ರಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಪ್ರಾರಂಭಿಸಿದ ದಿನವಾಗಿದೆ. ತ್ರೇತಾ ಯುಗದ ಪ್ರಾರಂಭದ ದಿನವೂ ಇದಾಗಿದೆ. ವಸಿಷ್ಠ ಋಷಿಗಳಂತೆ ಆಶ್ರಮದಲ್ಲಿ ಕಾಮಧೇನು ವನ್ನು ಇಟ್ಟುಕೊಂಡು ಸಾವಿರಾರು ಜನರಿಗೆ ನಿತ್ಯ ಅನ್ನದಾನ ಮಾಡಿದ ಪರಮಯೋಗಿ ಜಮದಗ್ನಿ ಮತ್ತು ರೇಣುಕೆಯರ ಪುತ್ರನಾಗಿ ಶ್ರೀಹರಿಯು ಪರಶುರಾಮನಾಗಿ ಅವತರಿಸಿದ ಪರಮ ಪಾವನ ದಿನ ಅಕ್ಷಯ ತೃತೀಯಾ ದಿನವಾಗಿದೆ.
ರಾಜಾ ಭಗೀರಥನು ತನ್ನ ಪೂರ್ವಜರಾದ ಸಗರ ಪುತ್ರರಿಗೆ ಮುಕ್ತಿಯನ್ನು ಕೊಡಿಸಲು ದೇವಲೋಕದ ಗಂಗೆಯನ್ನು ಒಲಿಸಿಕೊಂಡು ಭೂಲೋಕಕ್ಕಾರ್ ಹರಿದುಬರಲು ವಿನಂತಿಸಿಕೊಳ್ಳುತ್ತಾನೆ. ಆದರೆ ದೇವಲೋಕದಿಂದ ಇಳಿಯುವ ರಭಸವನ್ನು ತಡೆಯಲು ರುದ್ರದೇವನನ್ನು ಕುರಿತು ತಪಸ್ಸು ಮಾಡಿದನು. ರುದ್ರ ತನ್ನ ಜತೆಯಲ್ಲಿ ಗಂಗೆಯನ್ನು ಬಂಧಿಸಿ ಇಟ್ಟುಕೊಳ್ಳುತ್ತಾನೆ. ಇದರಿಂದ ಭಗೀರಥ ಪುನಃ ರುದ್ರನನ್ನು ಒಲಿಸಿಕೊಂಡು ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ಬಿಡಲು ವಿನಂತಿ ಮಾಡಿಕೊಂಡನು. ಆಗ ಶಿವನು ಈ ದಿನ ಅಕ್ಷಯತೃತೀಯಾ ದಿನ ಭೂಮಿಗೆ ಗಂಗೆಯನ್ನು ಹರಿಸಿದನು.
ಅಕ್ಷಯ ತೃತೀಯಾ ಹಬ್ಬದ ಪೌರಾಣಿಕ ಹಿನ್ನೆಲೆ. ಭಾಗ 2. 18.03,2020.
ಇನ್ನು ಈ ದಿನದಲ್ಲಿ ದ್ವಾಪರ ಯುಗದಲ್ಲಿ ಏನಾಯಿತು ತಿಳಿಯೋಣ. ಮಹಾಭಾರತ ಕಥೆಯಲ್ಲಿ ಪಾಂಡವರು ವನವಾಸಕ್ಕೆ ಹೊರಟಾಗ ಅವರ ಹಿಂದಿನಿಂದ 80, 000 ಮುನಿಗಳು 10, 000ಸನ್ಯಾಸಿಗಳು ಅದಲ್ಲದೆ ಎಷ್ಟೋ ಜನ ಸಜ್ಜನರು ಹಿಂಬಾಲಿಸಿದ್ದರು. ಅವರ ಉದರಪೋಷಣೆಗಾಗಿ ವಿಚಾರಿಸಿ ಧೌಮ್ಯ ಋಷಿಗಳ ಆದೇಶದಂತೆ ಧರ್ಮರಾಜ ರಥಸಪ್ತಮಿ ದಿನದಿಂದ ಸೂರ್ಯದೇವನ ಉಪಾಸನೆ ಮಾಡಿ, ಈ ದಿನ ಸೂರ್ಯನಿಂದ ಅಕ್ಷಯಪಾತ್ರೆ ಸ್ವೀಕರಿಸಿದ್ದರಿಂದ ಈ ದಿನಕ್ಕೆ ಅಕ್ಷಯ ತೃತೀಯಾ ಎಂದು ಹೆಸರು ಬಂದಿದೆ.
ಕೃಷ್ಣನ ಗುರುಕುಲದ ಸಹಪಾಠಿ ಸುದಾಮ ಬಡ ಬ್ರಾಹ್ಮಣ ಪತ್ನಿಯ ಆದೇಶದಂತೆ ಶ್ರೀ ಹರಿಯ ಅವತಾರಿಯಾದ ಗೆಳೆಯನಾದ ಕೃಷ್ಣ ನನ್ನು ಕಾಣಲು ಹಿಡಿ ಅವಲಕ್ಕಿಯನ್ನೇ ತೆಗೆದುಕೊಂಡು ಹೋದನು. ಭಕ್ತಿಯಿಂದ ತಂದ ಅವಲಕ್ಕಿಗೆ ತೃಪ್ತನಾದ ಕೃಷ್ಣ ಸುದಾಮನಿಗೆ ಅಕ್ಷಯ ಐಶ್ವರ್ಯ ಕೊಟ್ಟು ದಯಪಾಲಿಸಿದ ದಿನವಿದು. ಈ ಕಲಿಯುಗದಲ್ಲಿ ನಾವಾದರೂ ಪರಮಾತ್ಮನಿಗೆ ಪ್ರೀತ್ಯರ್ಥವಾಗಿ ನಮ್ಮ ಯಥಾಶಕ್ತಿ ಯಥಾಮತಿ ಏನಾದರು ವಸ್ತುವನ್ನು ಸತ್ಪಾತ್ರರಿಗೆ ದಾನ ಮಾಡಿದರೆ ಆದರ ಫಲ ಅಕ್ಷಯವಾಗುವದೆನ್ನುವದಕ್ಕೆ ಈ ಸುಧಾಮನ ಕಥೆ ನಿದರ್ಶನವಾಗಿದೆ.
ಶ್ರೀ ಹರಿಯ ಅವತಾರಿಗಳಾದ ಶ್ರೀ ವೇದವ್ಯಾಸರು ವೇದಗಳನ್ನು ವಿಂಗಡಿಸಿದರು. ಪುರಾಣ ಉಪನಿಷತ್ತು ಬರೆದರೂ. ಕೊನೆಗೆ ನಡೆದುಹೋದ ಇತಿಹಾಸ ಮಹಾಭಾರತ ರೂಪದಲ್ಲಿ ಬರೆದರು. ಅವರೂ ಹೇಳಿದ್ದನ್ನು ತಿಳಿದುಕೊಂಡು ವೇಗವಾಗಿ ಬರೆದುಕೊಳ್ಳುವ ಸಾಮರ್ಥ್ಯ ಕೇವಲ ಉಮಾಸುತ ಗಣಪತಿಗೆ ಮಾತ್ರ ಇತ್ತು . ಕಾರಣ ಆತನನ್ನು ಕರೆದು ಮಹಾಭಾರತ ಪುರಾಣವನ್ನು ಹೇಳಿ ಬರೆಸಿದರು.ವ್ಯಾಸರು ಗಣಪತಿಗೆ ಬರೆದುಕೊಳ್ಳಲು ಹೇಳಿದ ದಿನವೇ ಇಂದಿನ ಅಕ್ಷಯ ತೃತೀಯಾ ಆಗಿದೆ.ಇನ್ನು ಕಲಿಯುಗದಲ್ಲಿ ಭಾಗವತಕ್ಕೆ ವ್ಯಾಖ್ಯಾನ ಬರೆದು ಮಧ್ವ ಸಮಾಜಕ್ಕೆ ಸಮರ್ಪಿಸಿದ, ಮಹಾನುಭಾವರಾದ ಉಡುಪಿ ಪೇಜಾವರ ಮಠದ ಯತಿಗಳಾದ ವಿಜಯಧ್ವಜ ತೀರ್ಥರ ಪುಣ್ಯ ತಿಥಿಯೂ ಇಂದೇ ಅಕ್ಷಯ ತೃತೀಯಾ ದಿನ ಇದೇ ಎಂದು ಬರೆಯಲು ಹೆಮ್ಮೆ ಎನಿಸುವದು.
by madhusudan kali bhat
***
||ಶ್ರೀ ವಿಠ್ಠಲ ಪ್ರಸೀದ ||
ವೈಶಾಖ ಮಾಸ
ಜಗನ್ಮಾತಾಪಿತ್ರರ ವಿವಾಹ ಸಂಭ್ರಮ . ಈ ಸುಸಂದರ್ಭದಲ್ಲಿ
ಜಗದೊಡೆಯ ಭಕ್ತರನ್ನು ಉದ್ಧಾರಮಾಡಿದ , ಇತರೆ ಪುರಾಣಗಳಲ್ಲಿ ಉಲ್ಲೇಖಮಾಡಿದ ವೆಂಕಟಾಚಲ ಮಹಿಮೆಯನ್ನು ಸಾರುವ ಕೆಲವು ಪ್ರಸಂಗಗಳು ಈ ಹತ್ತುದಿನ .
ಮೊದಲನೇದಿನ - ವಾಮನ ಪುರಾಣದ ಒಂದು ಪ್ರಸಂಗ
ಒಮ್ಮೆ ಋಷಿಗಳು ಹಾಗು ದೇವತೆಗಳು ಧರ್ಮವಿಚಾರದಲ್ಲಿ ಚರ್ಚೆ ನಡೆಸಿದರು.
ಆ ಸಮಯದಲ್ಲಿ ಭೂಲೋಕದಲ್ಲಿ ಉಪರಿಚರ ವಸು ರಾಜನಾಗಿದ್ದ .
ಯಜ್ಞದಲ್ಲಿ ಹೋಮಿಸುವುದು ಪಶುವಿನಿಂದ ಎನ್ನುವ ಅಭಿಪ್ರಾಯ ದೇವತೆಗಳದಾದರೆ , ಧಾನ್ಯದಿಂದ ಎನ್ನುವುದು ಋಷಿಗಳ ಅಭಿಪ್ರಾಯ.
ರಾಜನಬಳಿ ಬಂದು ಈ ಎರಡರಲ್ಲಿ ಯಾವುದು ಸರಿ ಎಂದು ನೀನೆ ತೀರ್ಪು ಕೊಡು ಎಂದು ಕೇಳಿದರು .
ವಸು ರಾಜ ದೇವತೆಗಳ ಅಭಿಪ್ರಾಯಕ್ಕೆ ತಲೆಬಾಗಿದ . ಅವನ ಪ್ರಕಾರ ಋಷಿಗಳಿಗಿಂತ ದೇವತೆಗಳು ಮಿಗಿಲಾದವರು ಅವರದೇ ಸರಿಯಿರಬಹುದು ಎನ್ನುವ ಲೆಕ್ಕಾಚಾರ.
ಋಷಿಗಳು ಕೋಪಗೊಂಡರು ಹಾಗು
ರಸಾತಳಕ್ಕೆ ಬೀಳು ಎಂದು ಶಪಿಸಿದರು. ವಸು ತಾನು ಶಾಪಗ್ರಸ್ತನಾಗಿ ಅಧಃ ಪಾತಾಳಕ್ಕೆ ಬಿಳುತ್ತಿರುವಾಗಲು ನಿರಂತರ ಹರಿಧ್ಯಾನ ಮಾಡುತ್ತಿದ್ದ . ಭಗವಂತನ ಆಜ್ಞೆಯಂತೆ ವಾಯುದೇವ ಬೀಳುತ್ತಿದ್ದ ವಸುವನ್ನು ಹಿಡಿದುಕೊಂಡು ಯಾವ ಹಿಂಸೆಯಿಲ್ಲದೆ ಸುಖವಾಗಿ ರಸಾತಳದಲ್ಲಿ ಇಳಿಸಿದನು . ಭಗವಂತ ಹೀಗೆ ಋಷಿಗಳಮಾತು ನಡೆಯುವಂತೆ ಮಾಡಿದನು
ಅಲ್ಲಿಯೂ ವಸುವಿಗೆ ವೈರಿಗಳು ಇದ್ದರು . ಪೂರ್ವ ವೈರಿಗಳಾದ ಅಸುರರು ಕೊಲ್ಲಲು ಬಂದರು ಆದರೂ ವಸುವಿನ ದ್ವಾದಶ ಮಂತ್ರ ಪಠಣ ನಿರಂತರ ನಡೆದೇ ಇತ್ತು . ಭಗವತ್ಪ್ರೇರಿತ ಚಕ್ರ ಅಲ್ಲಿಗೆ ಆಗಮಿಸಿ ರಾಕ್ಷಸರ ಅಸ್ತ್ರ ಶಸ್ತ್ರಗಳನ್ನು ನಾಶಮಾಡಿ ಭಕ್ತನನ್ನು ರಕ್ಷಿಸಿತು . ಗರುಡನಿಗೆ ಶ್ರೀ ಹರಿ ಆದೇಶ ನೀಡಿ ಅವನ ರಾಜ್ಯಕ್ಕೆ ಕಳುಹಿಸಿಕೊಡುವಂತೆ ಹೇಳಿದ . ಗರುಡ ಆಗಮಿಸಿದ ಗರುಡ ಭಗವಂತನ ಇಚ್ಚೆಯನ್ನು ತಿಳಿಸಿದ .
ವಸು ಎಂತ ಭಕ್ತನೆಂದರೆ , ಶ್ರೀಹರಿಯ ವಾಹನನಾದ ಗರುಡನ ಹೆಗಲಿನಲ್ಲಿ ಕುಳಿತು ಪ್ರಯಾಣಮಾಡಲು ನಿರಾಕರಿಸಿದ .
ಗರುಡ ತನ್ನ ಕೈಗಳಿಂದ ವಸುವನ್ನು ಹಿಡಿದು ಅವನರಾಜ್ಯಕ್ಕೆ ಸೇರಿಸಿದನು.
ಅನೇಕ ವರ್ಷ ರಾಜ್ಯವಾಳಿ ಭೋಗಭಾಗ್ಯ ಅನುಭವಿಸಿದ ವಸುರಾಜನಿಗೆ ಅಗಸ್ತ್ಯಾದಿ ಋಷಿಮುನಿಗಳೊಂದಿಗೆ ಸ್ವಾಮಿ ಪುಷ್ಕರಣಿ ತೀರದಲ್ಲಿ ಶ್ರೀನಿವಾಸ ಪ್ರತ್ಯಕ್ಷ ದರ್ಶನಾದಿಗಳನ್ನು ಕೊಟ್ಟು
ಅನುಗ್ರಹಿಸಿದನು .
ಮುಂದೆ ಹನ್ನೆರಡು ವರ್ಷ ತಪಸ್ಸಾನಚರಿಸಿದ ಉಪಚರಿವಸು ಸ್ವರ್ಗ ಸೇರಿದನೆಂದು ವಾಮನ ಪುರಾಣ ನಿರೂಪಿಸುತ್ತದೆ .
ಈ ಮೂಲಕ ದೇವರೇ ತನ್ನ ವಾಹನವನ್ನು ಕಳುಹಿಸಿಕೊಟ್ಟಾಗ ಎಷ್ಟು ವಿಧೇಯನಾಗಿರಬೇಕೆಂದು ಉಪಚರಿವಸು ಲೋಕಕ್ಕೆ ತಿಳಿಸಿಕೊಟ್ಟ.
ಇದಕ್ಕೆ ಶ್ರೀ ವಾದಿರಾಜರು ತಮ್ಮ ಒಂದು ಸುಳಾದಿಯಲ್ಲಿ “ ಕೈವಲ್ಯವ ನೀವ ನಮ್ಮ ಶ್ರೀವಲ್ಲಭನ ಕೈಯಿಂದ
ನೀವೆಲ್ಲ ಕ್ಷುದ್ರವ ಬೇಡಿ ಗಾವಿಲವ ಪೊಲದಿರಿ , ವೆಂಕಟಪತಿ ಹಯವದನನ್ನ ಪದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು “ ಎನ್ನುತ್ತಾರೆ
ಇದರ ಭಾವ “ ಶ್ರೀ ನಿವಾಸನನ್ನು
ಮೂರ್ಖರಂತೆ ಲೌಕಿಕವನ್ನು ಬೇಡದಿರಿ ಎಂಬ ತಿಳುವಳಿಕೆ ಇಲ್ಲಿದೆ .
||ನಾಹಂ ಕರ್ತಾ ಹರಿಃ ಕರ್ತಾ||
||ಶ್ರೀನಿವಾಸಾರ್ಪಣಮಸ್ತು||
***
ಅಕ್ಷಯವಾಗಲಿ ಭಗವಂತನಲ್ಲಿ ಭಕ್ತಿ
ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ
ಅಕ್ಷಯವಾಗಲಿ ಪ್ರೀತಿ
ಅಕ್ಷಯವಾಗಲಿ ಸ್ನೇಹ
ಅಕ್ಷಯವಾಗಲಿ ಮಮತೆ
ಅಕ್ಷಯವಾಗಲಿ ಒಲವು
ಅಕ್ಷಯವಾಗಲಿ ಗೆಲುವು
ಅಕ್ಷಯವಾಗಲಿ ಉತ್ತಮ ಆರೋಗ್ಯ
ಅಕ್ಷಯವಾಗಲಿ ನಂಬಿಕೆ- ವಿಶ್ವಾಸ
ಅಕ್ಷಯವಾಗಲಿ ಅಭಿವೃದ್ಧಿ
ಅಕ್ಷಯವಾಗಲಿ ಕಾರ್ಯಸಿದ್ಧಿ
ಅಕ್ಷಯ ತೃತೀಯದ ಈ ಶುಭದಿನದಂದು ನಿಮ್ಮೆಲ್ಲಾ ಕಷ್ಟ , ಚಿಂತೆ ನೋವು ಕ್ಷಯವಾಗಲಿ,
ಸದಾ ಆನಂದ ನಿಮ್ಮದಾಗಲಿ ಎಂಬ ಅಕ್ಷಯ ಹಾರೈಕೆ
ಕಳಬೇಡ ಕೊಲಬೇಡ ಇದಿರ ಬಣ್ಣಿಸಬೇಡ, ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದರೆ ನರಕ ಇದೇ ನಮ್ಮ ಕೂಡಲ ಸಂಗಮ ದೇವನ ಪರಿ,
***
ಅಕ್ಷಯ ತೃತಿಯದ ವಿಶೇಷತೆ ತಿಳಿದುಕೊಳ್ಳೋಣ.
1. ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದ ದಿನ.
2. ದುರ್ಯೋಧನನ ದುಷ್ಟ ಬೋಧನೆಗೆ ಒಳಗಾಗಿ ದೂರ್ವಾಸರು ತಮ್ಮ ಸಹಸ್ರಾರು ಶಿಷ್ಯರೊಂದಿಗೆ ವನವಾಸದಲ್ಲಿ ಇದ್ದ ಪಾಂಡವರಲ್ಲಿದ್ದ ಕಡೆಗೆ ಭೋಜನ ಮಾಡಲು ಅಕ್ಷಯಪಾತ್ರೆ ಸಮಯ ಮೀರಿದಮೇಲೆ ಬಂದರು. ಕೊನೆಗೆ ದ್ರೌಪತಿ ಕೊನೆಗೆ ಶ್ರೀಕೃಷ್ಣ ದೇವರನ್ನ ಪ್ರಾರ್ಥನೆಮಾಡಿದಳು. ದ್ರೌಪತಿ ಕರೆದರೇ ಬಾರನೆ ? ಬಂದವನೇ ತಕ್ಷಣ ತನಗೂ ಹಸಿವೆ ಆಗಿದೆ ಏನಾದರೂ ಕೊಡು ಎಂದು ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿ ದಂತಹ ಅದೇ ದಿನವೇ ಅಕ್ಷಯ ತೃತೀಯ.
3. ವಿಷ್ಣುವಿನ ಅವತಾರವಾದ ಪರಶುರಾಮರ ಅವತಾರ ಆದ ದಿನವೇ ಅಕ್ಷಯ ತೃತೀಯ.
4. ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ . ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನು ನೀಡಿದ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅವನಿಗೆ ಐಶ್ವರ್ಯಗಳು ಪ್ರಾಪ್ತಿಯಾಗಿ.. ಸುಧಾಮನಾದ.
5. ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಸುಮುಹೂರ್ತವೇ ಅಕ್ಷಯ ತೃತೀಯ.
5. ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಬಂದ ದಿನವೇ ಅಕ್ಷಯ ತೃತಿಯ . ಈ ದಿನವು ತ್ರೇತಯುಗದ ಆರಂಭವನ್ನು ಸೂಚಿಸುತ್ತದೆ.
ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಕ್ಷಯ ತೃತೀಯ ದಿನವೇ ಅಷ್ಟೈಶ್ವರ್ಯವ ಪಡೆದನು.
ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ! ಎನ್ನುವಂತಹ ಅವರ ಭಾಷಣಗಳು.ಇದರ ಉಲ್ಲೇಖ ಯಾವ ಪುರಾಣದಲ್ಲೂ ಕಂಡುಬರುವುದಿಲ್ಲ.
ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ. " ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ l ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||
ಅರ್ಥ... ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ, ದೀಪ, ಪುಷ್ಪ ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡಲು ಪ್ರಶಸ್ತವಾದ ದಿನ. " ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತ ಫಲಂ ಲಭೇತ್ " ಈ ಹಬ್ಬ ದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿ ಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಅಕ್ಷಯ ತೃತೀಯ ಎಂದು ಕರೆಯುತ್ತಾರೆ. ಗೃಹ ಪ್ರವೇಶ, ಮದುವೆ, ಹೊಸ ಉದ್ಯಮಗಳು, ಹೂಡಿಕೆ ಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.
ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಲೇ ಬೇಕು.
ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನ ವನ್ನು ಮಾಡ ಬಹುದು ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ.
ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರ, ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ. ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.ಕೊನೆ ಪಕ್ಷ ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪ ಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ.
ಬೆಳಿಗ್ಗೆ ಗೋವುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡಿದರೆ, ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದ ರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ. ಸಂಗ್ರಹ.
***
ವೈಶಾಖ ಮಾಸದ ಶುಕ್ಲಪಕ್ಷದ ತೃತೀಯ ದಿನವನ್ನು
"ಅಕ್ಷಯತದಿಗೆ" ಎಂದು ಆಚರಿಸಲಾಗುತ್ತಿದೆ.
ಅಕ್ಷಯ ಎಂದರೆ ಕ್ಷಯಿಸದೆ,
ವೃದ್ಧಿಯಾಗುವುದು ಎಂದು ಅರ್ಥ.
'ಅಕ್ಷಯ ತೃತೀಯ'.ಸನಾತನ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅವುಗಳೆಂದರೆ: -
1) ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ, ಸತ್ಯ ಅಥವಾ ಕೃತಯುಗ ಪ್ರಾರಂಭವಾಗಿದ್ದು 'ಅಕ್ಷಯ ತೃತೀಯ' ದಿನದಂದು.
2) ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು 'ಅಕ್ಷಯ ತೃತೀಯ' ದಿನದಂದು.
3) ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) 'ಅಕ್ಷಯ ತೃತೀಯ' ದಿನದಂದು.
4) ದಶಾವತಾರಗಳಲ್ಲಿ ಒಂದಾದ 'ಪರಶುರಾಮಾವತಾರ' ಪ್ರಾರಂಭವಾಗಿದ್ದು (ಹುಟ್ಟಿದ ದಿನ) 'ಅಕ್ಷಯ ತೃತೀಯ' ದಿನದಂದು.
5) ಸಂಪತ್ತಿನ ಒಡೆಯ ಮತ್ತು ಯಕ್ಷರ ರಾಜ 'ಕುಬೇರ'ನಿಗೆ ನಿಧಿ/ಸಂಪತ್ತು ದೊರೆತದ್ದು 'ಅಕ್ಷಯ ತೃತೀಯ' ದಿನದಂದು.
6) ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು 'ಅಕ್ಷಯ ತೃತೀಯ' ದಿನದಂದು.
7) ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುತ್ತಿದ್ದ ವೇಳೆ ಲಕ್ಷ್ಮೀ ಹುಟ್ಟಿದ್ದು 'ಅಕ್ಷಯ ತೃತೀಯ' ದಿನದಂದು.
8)ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದ ವೇಳೆ ಶ್ರೀಕೃಷ್ಣನು ಆಕೆಯ ಮಾನವನ್ನು (ಸೀರೆಯನ್ನು ನೀಡುವುದರ ಮೂಲಕ) ಕಾಪಾಡಿದ್ದು 'ಅಕ್ಷಯ ತೃತೀಯ' ದಿನದಂದು.
ಈ ದಿನದಂದು ತಮ್ಮ ಶಕ್ತ್ಯಾನುಸಾರ ಯಾವುದೇ ಹೊಸ ವಸ್ತುಗಳನ್ನು ಖರೀದಿಸಿದರೆ ಅದು ಅಕ್ಷಯವಾಗಿ ಮುಂದೆ ಲಭಿಸುತ್ತದೆ ಎಂದು ಪ್ರತೀತಿ
4) 'ಅಕ್ಷಯ ತೃತೀಯ' ದಿನದ ಇಡೀ ದಿನದ ಪ್ರತಿಯೊಂದು ಘಳಿಗೆಯೂ ಶುಭ ಮುಹೂರ್ತದ್ದೇ ಆಗಿರುತ್ತದೆ. ಅಂದು ಮಾತ್ರ ಯಾವುದೇ ರಾಹುಕಾಲ, ಗುಳಿಕಕಾಲ ಅಥವಾ ಇನ್ಯಾವುದೇ ಅಶುಭಕಾಲದ ಮಹತ್ವ ಇರುವುದಿಲ್ಲ.
ಅಕ್ಷರಾಭ್ಯಾಸ, ಮದುವೆ,ಉಪನಯನ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ,
ಪಂಚಾಂಗಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.
ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.
***
ಅಕ್ಷಯ ತೃತೀಯಾದ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !🌼
ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ?
🌸 ಎಳ್ಳುನೀರಿನ ತರ್ಪಣವೆಂದರೆ ದೇವತೆಗಳು ಮತ್ತು ಪೂರ್ವಜ ರಿಗೆ ಎಳ್ಳು ಮತ್ತು ನೀರನ್ನು ಅರ್ಪಿಸುವುದು. ಎಳ್ಳು ಸಾತ್ತ್ವಿಕತೆಯ ಪ್ರತೀಕವಾಗಿದೆ ಮತ್ತು ನೀರು ಬ್ರಹ್ಮಾಂಡದಲ್ಲಿನ ಶುದ್ಧ ಸ್ರೋತದ ಪ್ರತೀಕವಾಗಿದೆ.
🌸 ಎಳ್ಳಿನಂತಹ ಸಾತ್ತ್ವಿಕ ಘಟಕದ ಮಾಧ್ಯಮದಿಂದ ತರ್ಪಣ ಕೊಡುವುದರಿಂದ ದೇವತೆಗಳು ಮತ್ತು ಪಿತೃಗಳು ಸಂತುಷ್ಟರಾಗುತ್ತಾರೆ ಮತ್ತು ಅವರ ಆಶೀರ್ವಾದ ಸಿಗುತ್ತದೆ.
೧. ಮಹತ್ವ
ಅ. ಅಕ್ಷಯ ತೃತೀಯಾದಂದು ಇಡೀ ದಿನ ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.
ಆ. ಈ ದಿನದಂದು ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ.
ಇ. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವು ಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.
ಈ. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ) ವಾಗುತ್ತವೆ. (ಆಧಾರ : ‘ಮದನರತ್ನ’)
೨. ಅಕ್ಷಯ ತೃತೀಯಾದಂದು ಮಾಡಬೇಕಾದ ಕೃತಿಗಳು
ಅ. ಪವಿತ್ರ ಜಲದಲ್ಲಿ ಸ್ನಾನ : ಈ ದಿನ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಬೇಕು, ಸಾಧ್ಯವಿಲ್ಲದಿದ್ದರೆ ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು.
ಆ. ಶ್ರೀವಿಷ್ಣುಪೂಜೆ, ಜಪ ಮತ್ತು ಹೋಮ : ಅಕ್ಷಯ ತೃತೀಯಾ ದಂದು ಸತತವಾಗಿ ಸುಖ-ಸಮೃದ್ಧಿಯನ್ನು ಪ್ರಾಪ್ತ ಮಾಡಿ ಕೊಡುವ ದೇವತೆಯ ಮೇಲೆ ಕೃತಜ್ಞತೆಯ ಭಾವವನ್ನಿಟ್ಟು ಉಪಾಸನೆ ಮಾಡಿದರೆ ನಮ್ಮ ಮೇಲಾಗುವ ಆ ದೇವತೆಯ ಕೃಪಾದೃಷ್ಟಿಯು ಯಾವತ್ತೂ ಕ್ಷಯವಾಗುವುದಿಲ್ಲ. ಈ ದಿನ ಶ್ರೀವಿಷ್ಣುವಿನೊಂದಿಗೆ ವೈಭವ ಲಕ್ಷ್ಮೀಯ ಪ್ರತಿಮೆಯನ್ನು ಕೃತಜ್ಞತೆಯ ಭಾವವನ್ನಿಟ್ಟು ಭಕ್ತಿಭಾವದಿಂದ ಪೂಜಿಸಬೇಕು. ಈ ದಿನವನ್ನು ಹೋಮ ಹವನ ಮತ್ತು ಜಪ ಮಾಡುತ್ತ ಕಳೆಯಬೇಕು.
ಇ. ಅಕ್ಷಯ ತೃತೀಯಾದಂದು ಶ್ರೀವಿಷ್ಣುವಿನ ತತ್ತ್ವವನ್ನು ಆಕರ್ಷಿ ಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಬೇಕು.
೩. ಎಳ್ಳುನೀರಿನಿಂದ ತರ್ಪಣ ಏಕೆ ಮಾಡುತ್ತಾರೆ ?
ಅ. ಎಳ್ಳುನೀರಿನ ತರ್ಪಣವೆಂದರೆ ದೇವತೆಗಳು ಮತ್ತು ಪೂರ್ವಜ ರಿಗೆ ಎಳ್ಳು ಮತ್ತು ನೀರನ್ನು ಅರ್ಪಿಸುವುದು. ಎಳ್ಳು ಸಾತ್ತ್ವಿಕತೆಯ ಪ್ರತೀಕವಾಗಿದೆ ಮತ್ತು ನೀರು ಬ್ರಹ್ಮಾಂಡದಲ್ಲಿನ ಶುದ್ಧ ಸ್ರೋತದ ಪ್ರತೀಕವಾಗಿದೆ.
ಆ. ಎಳ್ಳಿನಂತಹ ಸಾತ್ತ್ವಿಕ ಘಟಕದ ಮಾಧ್ಯಮದಿಂದ ತರ್ಪಣ ಕೊಡುವುದರಿಂದ ದೇವತೆಗಳು ಮತ್ತು ಪಿತೃಗಳು ಸಂತುಷ್ಟರಾಗುತ್ತಾರೆ ಮತ್ತು ಅವರ ಆಶೀರ್ವಾದ ಸಿಗುತ್ತದೆ.
ಇ. ನೀರು ಶುದ್ಧತೆಯ ಪ್ರತೀಕವಾಗಿರುವುದರಿಂದ ಜಲ ತರ್ಪಣ ಮಾಡುವವರ ಪಾಪ ನಾಶವಾಗುತ್ತದೆ. (ಆವಶ್ಯಕತೆ ಅನಿಸಿದರೆ ಎಳ್ಳುನೀರಿನ ತರ್ಪಣ ವಿಧಿಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪುರೋಹಿತರಲ್ಲಿ ಕೇಳಿಕೊಳ್ಳಬೇಕು.)
೪. ದಾನ
ಅಕ್ಷಯ ತೃತೀಯಾದಂದು ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅದಕ್ಕೆ ತಕ್ಕ ಫಲ ಖಂಡಿತವಾಗಿಯೂ ಸಿಗುತ್ತದೆ.
೪ ಅ. ಸತ್ಪಾತ್ರೆ ದಾನವನ್ನು ಏಕೆ ಮಾಡಬೇಕು ? : ಅಕ್ಷಯ ತೃತೀಯಾದಂದು ಮಾಡಿದ ದಾನದಿಂದ ವ್ಯಕ್ತಿಯ ಪುಣ್ಯಸಂಗ್ರಹ ಹೆಚ್ಚಾಗುತ್ತದೆ. ಪುಣ್ಯದಿಂದ ವ್ಯಕ್ತಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ; ಆದರೆ ಸ್ವರ್ಗ ಸುಖವನ್ನು ಭೋಗಿಸಿದ ನಂತರ ಪುನಃ ಪೃಥ್ವಿಯ ಮೇಲೆ ಜನಿಸ ಬೇಕಾಗುತ್ತದೆ. ಮನುಷ್ಯನ ನಿಜವಾದ ಧ್ಯೇಯವು ‘ಪುಣ್ಯವನ್ನು ಗಳಿಸಿ ಸ್ವರ್ಗಪ್ರಾಪ್ತಿ ಮಾಡುವುದಲ್ಲ’, ‘ಪಾಪ-ಪುಣ್ಯಗಳ ಆಚೆಗೆ ಹೋಗಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಾಗಿದೆ’. ಆದ್ದರಿಂದ ಮನುಷ್ಯನು ಸತ್ಪಾತ್ರರಿಗೆ ದಾನ ಮಾಡುವುದು ಆವಶ್ಯಕವಾಗಿದೆ. ಸತ್ಪಾತ್ರೆ ದಾನ ಮಾಡುವುದರಿಂದ ದಾನದ ಕರ್ಮವು ಅಕರ್ಮ ಕರ್ಮ (ಅಕರ್ಮ ಕರ್ಮವೆಂದರೆ ಪಾಪ-ಪುಣ್ಯದ ಲೆಕ್ಕಾಚಾರ ಅನ್ವಯವಾಗದಿರುವುದು.) ವಾಗುವುದರಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ, ಅಂದರೆ ಅವನು ಸ್ವರ್ಗಲೋಕಕ್ಕೆ ಹೋಗದೇ ಅದಕ್ಕಿಂತಲೂ ಮುಂದಿನ ಉಚ್ಚ ಲೋಕಗಳಿಗೆ ಹೋಗುತ್ತಾನೆ. ಸಂತರಿಗೆ, ಧಾರ್ಮಿಕ ಕಾರ್ಯವನ್ನು ಮಾಡುವ ವ್ಯಕ್ತಿಗಳಿಗೆ, ಸಮಾಜದಲ್ಲಿ ಧರ್ಮ ಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮತ್ತು ರಾಷ್ಟ್ರ ಮತ್ತು ಧರ್ಮ ಜಾಗೃತಿಗಾಗಿ ಕಾರ್ಯ ಮಾಡುವ ಧರ್ಮಾಭಿಮಾನಿಗಳಿಗೆ ಅರ್ಪಣೆ ನೀಡುವುದು (ದಾನ ಕೊಡುವುದು) ‘ಸತ್ಪಾತ್ರೇ ದಾನ’ವಾಗಿದೆ.
೫. ಮೃತ್ತಿಕಾಪೂಜೆ, ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ ಮತ್ತು ಗಿಡಗಳನ್ನು ನೆಡುವುದು.
‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣ ಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ. ಇದೇ ರೀತಿಯಲ್ಲಿ ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪಾದನೆಯನ್ನು ನೀಡುತ್ತದೆ.
೬. ಅರಿಶಿನ ಕುಂಕುಮ
ಸ್ತ್ರೀಯರಿಗೆ ಈ ದಿನವು ಮಹತ್ವದ್ದಾಗಿರುತ್ತದೆ. ಚೈತ್ರದಲ್ಲಿ ಪ್ರತಿಷ್ಠಾಪಿಸಿದ ಚೈತ್ರಗೌರಿಯನ್ನು ಅವರಿಗೆ ವಿಸರ್ಜಿಸಬೇಕಾಗಿರುತ್ತದೆ. ಇದಕ್ಕಾಗಿ ಅವರು ಅರಿಶಿನ ಕುಂಕುಮದ ಕಾರ್ಯಕ್ರಮವನ್ನು ಮಾಡುತ್ತಾರೆ.
(ಆಧಾರ ಗ್ರಂಥ : ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)
ಈ ದಿನ ಅಂದರೆ ವೈಶಾಖ ಶುಕ್ಲ ಪಕ್ಷ ತೃತೀಯಾದಂದು “ಪರಶುರಾಮ ಜಯಂತಿ”ಯೂ ಇರುತ್ತದೆ. ಈ ಲೇಖನವನ್ನೂ ವಿವರವಾಗಿ ಇಲ್ಲಿ ಓದಿ – sanatan.org/kannada
***
don't buy gold?
**
No comments:
Post a Comment