SEARCH HERE

Tuesday, 1 January 2019

vedavyasa jayanti vaishakha shukla trayodashi






SRI VEDAVYASA JAYANTHI.... Two events generally we come across in Hindu calendar related to Sri Veda Vyasa.

One is Veda Vyasa Jayanthi celebrated on 13th lunar day (Trayodasi) of waxing period (sukla paksha) of Vaisakha Masam. It is believed to be the day Sri Veda Vyasa was born.

The other is Guru Pournima also called Vyasa Poornima falling on the 15th day (full Moon day) of Aashada Masa.

An incarnation of Lord Vishnu; He is also called as Lord Veda Vyasa or Vyasa Bhagavantha.

Regarded as the Aadi Guru, greatest of all Gurus, a Guru of Gurus He is adored even today by one and all and whose powers and knowledge are unsurpassed.

Great sages like Lord Veda Vyasa are responsible for the unassailable and grand Hindu Philosophy, civilization and culture ie. Bhaarateeya Samskriti.

Hindu heritage and culture would be indebted to this illustrious seer Sage Sri VedaVyasaru forever.

Perhaps the most befitting way to pay our respects and obeisance to this great legendary divine Sage would be, by living according to his ideals and propagating his noble and divine works.

Vyaasam Vasishhta Naptaaram Shakteh Pautramakalmasham
Paraasharaatmajam Vande Shukataatam Taponidhim;

Vyasaaya Vishnu Roopaaya Vyaasa Roopaaya Vishnave 
Namo Vai Brahma Nidhaye Vaasishtaaya Namo Namah;

KrishnaDvaipayanam Vyasam sarvalokahite ratam
VedaabjaBhaskaram Vande Samadhinilayam Munim

MEANING:

Salutations to that Vyasa who is free from all defects; 
who is a treasure of austerities, 
who is the great-grandson of sage Vasishta, 
grand-son of Shakti, 
son of Parasara and 
father of Sukha.

My repeated salutations are to Vyasa, 
who is a form of Lord Vishnu and 
to Vishnu who is a form of Vyasa, 
who is a descendent of sage Vasishta, 
who is a treasure of Brahman.

Let us worship sage (Muni) Vyasa 
who is Krishna Dvaipayana, 
who is devoted to the welfare of the world, 
who is like a Sun to the Vedas.

SRI VEDAVYASA - The Divine Literary Incarnation of Lord Vishnu

Lord Sri Krishna says in Bhagawadgita - Vibhoothi Yoga that, "Of all sages, I am Vyasa” ("Muneenamapyaham Vyasah")

He was also called as Badarayana meaning the one who is an inhabitant of Badarika forest which is full of Jujube trees. His hermitage is believed to be in Badari Kshethra.

Originally Vyasa was called as Krishna Dvaipaayana. Since Vyasa was dark (Krishna) in colour and born on an island (Dweepa) in Yamuna river he was called Krishna Dvaipaayana;

He was called VedaVyasa since he had organized Vedas into four divisions.

Since He was descent to Sage Vasishta he was also known as Vasishta Krishna;

Put together he is known as VedaVyasa – Krishna Dwaipayana – Badarayana -VasistaKrishna

Vyasa does not indicate/signify the name of an individual. It is a role/status/title like that of Indra or Sapta Rishi that keeps befalling on divine sacred persons based on their merits.

As per Vishnu Purana, Vyasa will be present in every 3rd age (Yuga) of the quartet ie. Dwapara Yuga to take up the divine literary works, reorganize and edit the scripts (Vedas and Puranas) and to inculcate the spiritual knowledge.

Thus 28 Vyasas have passed through in this Manvanthara and the divine scripts have been reorganized 28 times. In the first Dwapara Yuga it was Chaturmukha Brahma himself and in the second age it was Prajapathi Manu who acted as Vyasa; so on......

We are currently in the 28th Maha Yuga of this Manvanthara (Vaivasvatha Manvanthara) in which Dwapara Yuga has already passed through. In this 28th Dwapara Yuga, Lord Vishnu himself took birth as Vyasa in order to fulfill the promise given to the sage Parasara.

Vyasa whom we all know and heard of in Mahabharatha was the 28th Vyasa of this Manvanthara who was also a contemporary of Lord Sri Krishna born to Sage Parashara and Sathyavathi;

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |
ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮಃ |

Literally Vyasa means one who explains, elaborates, describes, compiles, arranges. Generally we find the word Vyasa Kartha in the literary world meaning the one who has authored/scripted an article on a topic. In terms of Vedic/Divine literature Vyasa has become a legend.

Sri Madhvacharya the Poornaprajna the one who is equipped with thorough and comprehensive knowledge is at the service of Lord Vedavyaasa (incarnation of Lord Vishnu) in establishing the Hari Sarvottamattva.

Hari Sarvottama - Vaayu Jeevottama
Sri GururRaajo Vijayate
**********


"When the second millenium ('Dwarpa Yuga') overlapped the third ('Treta Yuga'), the great sage Vyasa maharshi was born to Parasara Muni in the womb of Satyati, the daughter of Vasu (the fisherman).

In sage Vyasa maharshi's childhood he was called Krsna, because of his dark complexion, and because he was born on an island at the confluence of the Sati and Mati Rivers he was called Dwaipayana. After dividing the Vedas he got the name Veda Vyasa. There are some who say that Krsnadwaipayana Veda Vyasa took his birth at a place now known as Vyasa Goofer, the cave of sage Vyasa maharshi in present day Nepal, on the road from Pokara to Kathmandu which was, in days of yore, part of the kingdom of King Janaka. There are local records that support this statement, which say this was the 'ashrama' of Parasara Muni and at this place sage Vyasa maharshi was conceived. They also lay claim that later sage Vyasa maharshi came back to that 'ashrama' and stayed there for some time, and this being why there is a small Deity of Him at the entrance of the cave. Anyway, everyone at least agrees that the date of sage Vyasa maharshi's appearance was on the twelfth day of the light fortnight in the month of Vaisaka (April-May), called Vasant Dwadasi. 

The following is the story that we just touched upon mentioning how sage Vyasa maharshi came to make His appearance. 

Once the hermit Parasara became attracted to a fisher girl of the name Matsya-Gandha.Parasara Muni asked the beautiful Matsya-Gandha, so named because of her fishy aroma, to take him in her boat from one side of the river to the other, but the beauty of this damsel, her bodily movements from the rowing, aroused lusty desires in Parasara. When he sat close to her she moved away, and asked him not to violate her chastity, but Parasara Muni being already too far carried away, created an artificial fog on the river and seduced her right there in the boat. He then created an island in the river and on that island the girl conceived a child in her womb. Parasara explained to her that even after the child was born she would remain a virgin and the son born to her would be a portion of Lord Visnu and would be famous throughout the three worlds. He would be a man of purity, the spiritual master of the entire world, and He would divide the Vedas. 
Sage Vyasa maharshi soon grew into everything that Parasara had described, and had many disciples. 

Later in life it is recorded that Sage Vyasa maharshi returned to this island in the river and there compiled the Srimad Bhagavatam. Recorded is another instance when Sage Vyasa maharshi called for Ganesha (the elephant-headed 'deva') to write the Mahabharata as he related it to him. He did so on the condition that Sage Vyasa maharshi continually recited, and Ganesha, having perfectly understood the meaning, wrote down the Mahabharata. The word "Vyasa" means one who describes elaborately. 

"The great sage, Sage Vyasa maharshi who was fully equipped with knowledge, could see through his transcendental vision the deterioration of everything material, due to the influence of the age. He could also see that the faithless people in general would be reduced in duration of life and would be impatient due to lack of goodness. Then he contemplated for the welfare of men in all statuses and orders of life. He saw that the sacrifices mentioned in the Vedas were means by which people's occupations could be purified, and to simplify the process, he divided the one Veda into four, in order to expand them among men. The four divisions of the original sources of knowledge (the Vedas) were made separately, but historical facts and authentic stories mentioned in the Puranas are called the fifth Veda.

"Thus the great Sage Vyasa maharshi , who is very kind to the ignorant mass, edited the Vedas so they might be assimilated by less intellectual men. Still he was not satisfied, even though he was engaged in working for the total welfare of all people. Thus Sage Vyasa maharshi , being dissatisfied in heart, began to reflect within himself. 'I have, under strict disciplinary vows, unpretentiously worshipped the Vedas, the spiritual master and the altar of sacrifice. I also abided by the rulings and have shown the import of disciplic succession through the explanation of the Mahabharata, by which even women, shudras and others (friends of the twice born) can see the path of religion. I am feeling incomplete, though myself I am fully equipped with everything required by the Vedas. This may be because I did not specifically point out the devotional service of the Lord, which is dear both to perfect beings and to the infallible Lord'." 

"Sage Narada Muni (who was another son of Prajapati Brahma) reached the cottage of Sage Vyasa maharshi on the banks of the Sarasvati, where Sage Vyasa maharshi was staying at that time, just when Sage Vyasa maharshi was regretting his defects. At the auspicious arrival of Sage Narada, Sage Vyasa maharshi got up respectfully and worshipped him, giving him veneration equal to that given to Sri Brahma, the creator. Sage Narada then said: 'O Vyasa maharshi , your vision is completely perfect. Your good fame is spotless. You are firm in vow and situated in truthfulness, and thus you can think of the pastimes of the Lord in trance for the liberation of the people in general from all material bondage. The people in general are naturally inclined to enjoy, and you have encouraged them in that way in the name of religion. This is verily condemned and is quite unreasonable. Because they are guided under your instructions, they will accept such activities in the name of religion and will hardly care for prohibitions.' And so Narada Muni, Sage Vyasa maharshi's spiritual master, instructed Sage Vyasa maharshi to compile the Maha-Bhagavat Purana (Srimad Bhagavatam) now in his maturity for the benefit of all mankind, to which Sage Vyasa maharshi agreed. He presented the glories of Krsna and His many incarnations just after the departure of Lord Krsna from this world. 

"In this yuga the son of Parasara, who is glorified as a part of Visnu and who is known as Dvaipayana, the vanquisher of all enemies, became Sage Vyasa maharshi. Urged by Brahma, he undertook the task of classifying the Vedas. Sage Vyasa maharshi accepted four disciples to preserve and continue the Vedas. They were Jaimini who took care of the Sama Veda, Sumantu - the Atharva Veda, Vaisampayana - the Yajur Veda and Paila - the Rg Veda, and for the Itihasa and Puranas - Lomaharsana.

According to Vayu Purana it says, "Previously there have been twenty-eight Vyasas, but when the twenty-eighth appears, Lord Visnu, the most Glorious, Great Father of the three worlds, becomes Dvaipayana Vyasa. Then Lord Sri Krsna, the best amongst the Yadus will be born of Vasudeva and will be known as Vasudeva. Then in due course I (Vayu) will come in the form of an ascetic and assuming the body of a religious student, will surprise the world by means of the Lord's 'yoga maya'. Actually, this is Vayudeva announcing his appearance as Sriman Madhwacarya.
****
Vaishaka Shudda Trayodashi, the avatara day of Shriman Narayana as Shri VedaVyasaru. He was born to Sage Parashara and Satyavathi. He is also known as BAdarayana, Krishna Dwaipayana and Vasishta Krishna.

It is Shri VedaVyasaru who complied the Vedas into four – Rig, Yajur, Sama and Atharvana veda and it is this astounding effort that gave him the title Veda Vyasa.

He wrote the 18 Puranas (main epics) viz.,

Brahma Purana
Padma Purana
Vishnu Purana
Shaiva Purana
Bhagwata Purana
Narayana Purana
Markandeya Purana
Agni Purana
Bhavishyottara Purana
Brahma Vaivarta Purana
Linga Purana
Varaha Purana
Skanda Purana
Vamana Purana
Kurma Purana
Matsya Purana
Garuda Purana
Brahmanda Purana

Out of the 18 puranas, six are Sattvika Puranas and glorify Vishnu ; They tell about Vishnu Sarvottamatva, – Vishnu Purana, Naradiya Purana, Padma Purana, Garuda Purana, Varaha Purana, and Bhagavatha  Purana are Sattvika Puranas.

Six are Rajasa and glorify Lord Brahma; - Brahmanda Purana, Brahmavaivarta Purana, Markandeya Purana, Bhavishya Purana, Vamana Purana, Brahma Purana are Rajasic Puranas.

Six are Tamasa and they glorify Lord Shiva; – Matsya Purana, Kurma Purana, Linga Purana, Shiva Purana, Skanda Purana and Agni Purana are Tamasic Puranas.

Further, 18 Upa-Puranas (subsidiary epics) and 

Shri VedaVyasaru is the author of the grandest and largest epic – the Mahabharat which contains the Bhagawad Geeta -one of the greatest scriptures of the world. He is also the author of the “Bhagavata Purana” and the “Brahma Sutras”.  But for Him, we would not have had so vast a range of Sanatana literature.

Jagadguru Shriman Madhwacharya and His shishyas have written several commentaries on works of Shri Vedavyasaru to simplify the understanding. 

Lets pray through our gurugalu to our paramagurugalu through them to Shri VedaVyasaru to give us Jnana Bhakti and Vairagya🙏🏻

|| Shri Krishnarpanamasthu
**
ಶ್ರೀ ವಿಠ್ಠಲ ಪ್ರಸೀದತು .
ವೈಶಾಖ ಶುದ್ಧ ತ್ರಯೋದಶಿ  ವೇದವ್ಯಾಸ ಜಯಂತಿ .
ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಿಯೇ 
ಹೃದ್ಯಯಾ  ಶುದ್ದವಿದ್ಯಾಯ ಮಧ್ವಾಯಚ ನಮೋನಮಃ 
ಶ್ರೀ ವೇದವ್ಯಾಸರನ್ನು  ಒಬ್ಬ ಋಷಿ ಎಂದು ತಿಳಿದಿದ್ದಾರೆ ಇತರೆ ಮತದವರು .  ಆದರೆ ಶ್ರೀಮದಾಚಾರ್ಯರು  ಅವರು ಸಾಕ್ಷಾತ್ ಭಗವದವತಾರ  ಎಂದು ನಿರೂಪಿಸಿದ್ದಾರೆ .
ವೇದಗಳನ್ನು ವಿಂಗಡಿಸಿ ಹದಿನೆಂಟು  ಪುರಾಣಗಳನ್ನು  ಉಪಪುರಾಣಗಳನ್ನು ಬ್ರಹ್ಮ ಸೂತ್ರ ಭಾಷ್ಯ  ಮೇರು ಕೃತಿಯಾದ ಮಹಾಭಾರತವನ್ನು ಅದು ನಡೆಯುವ ೬೦೦ ವರ್ಷಗಳ ಮುಂಚೆಯೇ ರಚಿಸಿ ತಮ್ಮ ಶಿಷ್ಯರಿಂದ 
ಎಲ್ಲೆಡೆ ಪ್ರಚಾರ ಮಾಡಿಸಿದವರು .
ಹೆಸರಿಗೆ ಪರಾಶರ , ಸತ್ಯವತಿಯರ ಕುವರ 
ಸತ್ಯವತಿ “ಹೃದಯಾನಂದನ ವ್ಯಾಸ  “ ಎಂದು
ಜನಪ್ರಿಯರಾದವರು .
ಮಹಾಭಾರತವನ್ನು ಬಹುಹಿಂದೆಯೇ ರಚಿಸಿದ್ದರೂ.  ಬಿಡುಗಡೆ ಮಾಡಿಸಿದ್ದು  ಪಾಂಡವ ಕುಡಿ ಜನಮೇಜಯನ ಸಮ್ಮುಖದಲ್ಲಿ  ಶಿಷ್ಯ ವೈಶಂಪಾಯನರಿಂದ .
ಶ್ರೀ ವಿಷ್ಣು ಸಹಸ್ರನಾಮ , ಶ್ರೀಮದ್ಭಗವದ್ಗೀತಾ 
ಶ್ರೀಮನ್ಮಹಾಭಾರತದ  ಅಂತರ್ಗತವಾದದ್ದು 
ಆದ್ದರಿಂದಲೇ ಅದು “ವ್ಯಾಸ ಭಗವಾನ್ ಉವಾಚ “
 ಹರಿದಾಸರ ವಿಷಯಕ್ಕೆ ಬಂದರೆ  ಕನಕದಾಸರು ತಮ್ಮ ಮೇರುಕೃತಿ ಹರಿಭಕ್ತಿಸಾರದಲ್ಲಿ ಅನೇಕ ಮಹಾಭಾರತದ ಪ್ರಮೇಯಗಳನ್ನು  ಉಲ್ಲೇಖಿಸಿದ್ದಾರೆ . ಇಂದು ‘ವ್ಯಾಸ ಜಯಂತಿ’
ಸಂದರ್ಭದಲ್ಲಿ  ವ್ಯಾಸರ ಶಿಷ್ಯ ಪ್ರೇಮ ಕುರಿತಾದ ಒಂದು ಮಾಹಿತಿ .
 ಭಗವಾನ್ ವೇದವ್ಯಾಸರಿಗೆ  ಹಲವಾರು ಶಿಷ್ಯರು 
ಅವರುಗಳೆಂದರೆ ಸ್ವತಃ ಪುತ್ರ ರುದ್ರಾo ಶ  ಸಂಭೂತರಾದ ಶುಕಾಚಾರ್ಯರು , ವೈಶಂಪಾಯನರು , ಜೈಮಿನಿ ಋಷಿಗಳು  ಮುಂತಾದವರು .
ಶಿಷ್ಯ ವಾತ್ಸಲ್ಯದಿಂದ  ಶಿಷ್ಯರಿಗೆ ಕೆಲವು ಕಿವಿಮಾತುಗಳನ್ನು ಉಪದೇಶಿಸುತ್ತಿದ್ದರು . ಇಂದ್ರಿಯ ನಿಗ್ರಹವಿರಬೇಕು . ಎಚ್ಚರಿಕೆ ಇಲ್ಲದಿದ್ದರೆ ಎಂತಹ  ಸಾಧಕನನ್ನು ಅದು ಸೆಳೆದುಬಿಡುತ್ತದೆ ಎಂದರು .
ಉಪದೇಶ ಕೇಳುತ್ತಿದ್ದ ಶಿಷ್ಯ ಜೈಮಿನಿ ಈ ವಿಷಯವನ್ನು ಒಪ್ಪಲು ತಯಾರಿರಲಿಲ್ಲ 
ಪಾಂಡಿತ್ಯವಿದ್ದು , ಇಂದ್ರಿಯನಿಗ್ರಹವಿದ್ದು ಬಲಿಷ್ಠನಾಗಿದ್ದರೆ ಇವುಗಳು ಏನುಮಾಡಲು 
ಸಾಧ್ಯವಿಲ್ಲ ಎಂದು ವಾದಿಸಿದ . 
ಒಂದು ಸುಂದರವಾgದ ಸಂಜೆ , ತಂಪಾದ ವಾತಾವರಣ  ಪ್ರಕೃತಿ ಆಹ್ಲಾದ ವಾತಾವರಣದಲ್ಲಿ ಬಹುಸುಂದರವಾಗಿತ್ತು .
ಒಬ್ಬ ಸುಂದರವಾದ ತರುಣಿ ಜೈಮಿನಿ ಆಶ್ರಮದ ಬಳಿ ಸುಳಿದಾಡುತ್ತಿದ್ದಳು . ಮಳೆ ಬಂದು ಅವಳ ವಸ್ತ್ರಗಳೆಲ್ಲ ಒದ್ದೆಯಾಯಿತು . ದಾರಿ ತಪ್ಪಿ ಬಂದವಳಂತೆ ಕಾಣುತ್ತಿದ್ದ ಅವಳನ್ನು ಜೈಮಿನಿ
ಆಶ್ರಮದೊಳಗೆ ಕರೆದು ಅವಳಿಗೆ ಹಣ್ಣು ಹಂಪಲನ್ನು ಕೊಟ್ಟು ಉಪಚರಿಸಿದ . ಸಾಯಂ ಸಂಧ್ಯಾವಂಧನೆ ಮಾಡುವ ಸಮಯ , ಅದೆಲ್ಲವನ್ನು ಮರೆತು ಅವಳನ್ನು ಉಪಚರಿಸಿದ
ಅವಳೊಡನೆ ಮೋಹದಿಂದ ಸರಸ ಸಂಭಾಷಣೆಯಲ್ಲಿ ತೊಡಗಿದ . ಅವಳ ಮೇಲೆ ಮೊಹ  ಉಕ್ಕಿ ಅವಳನ್ನು ಸಮೀಪಿಸಿ ಇನ್ನುಮೇಲೆ ಜೊತೆಯಲ್ಲೇ ಇರೋಣ ಎಂದು ಅವಳ ಸಮೀಪಹೋದಾಗ , ಕ್ಷಣಮಾತ್ರದಲ್ಲಿ 
ತರುಣಿಯ ರೂಪ ಹೋಗಿ ಬಿಳಿಯ ಕುರುಚಲು  
ಗಡ್ಡದ ವ್ಯಾಸರಾದರು .  ಜೈಮಿನಿ ನಾಚಿಕೆಯಿಂದ ಗುರುಗಳ ಪಾದಕ್ಕೆ ನಮಿಸಿದ .
ವ್ಯಾಸರು ಮಗು “ನಾನೇ ಬಂದಿದ್ದರಿಂದ ಸರಿಯಾಯಿತು  ಇಲ್ಲದಿದ್ದರೆ ಇಂತಹ ಮನಸ್ಥಿತಿಯಿಂದ ಏನಾಗಿಬಿಡುತ್ತಿತ್ತು . 
ನೀನು ವಿದ್ವಾಂಸನಲ್ಲವೇ , ನಿನ್ನ ಇಂದ್ರಿಯಗಳು 
ಬಲಿಷ್ಠವಾಗಿಲ್ಲವೇ ,   ವಿದ್ವಾಂಸನನ್ನು  ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದೆಯಲ್ಲ ಈಗೇನಾಯಿತು ನೋಡು ಎಂದರು  ವ್ಯಾಸರು.
ಹೀಗೆ ಭಗವಂತ ಭಕ್ತ ಪರಾಧೀನ . ಸೂಕ್ತ ಸಮಯದಲ್ಲಿ ಪಾಠ ಕಲಿಸುತ್ತಾನೆ ಸಜ್ಜೀವರಿಗೆ 
ಶ್ರೀಮಾನ್ಮಹಾಭಾರತದ  ಅನೇಕ ಪ್ರಮೇಯಗಳನ್ನು ತಮ್ಮ ಹರಿಭಕ್ತಿಸಾರದಲ್ಲಿ ಆದರಿಸಿರುವ  ಶ್ರೀ ಕನಕದಾಸರು “ ನೊಂದೆನ ಪಂಚೇಂದ್ರಿಯ ಭಾದೆಗಳಿಂದ “
ನೊಂದೆನ ಷಡ್ವರ್ಗದಾಯತದಿಂದ 
ನಿಜರೂಪಿನಲಿ ಬಂದು ರಕ್ಷಿಸು “ ಎಂದು
ಜೈಮಿನಿಯನ್ನು ರಕ್ಷಿಸಿದಂತೆ ಎಂದು ಹೇಳಿದ್ದಾರೆ.
“ನೀ ಮಾಯೆಯೋ ನಿನ್ನೊಳು ಮಾಯೆಯೋ ಎಂದಿದ್ದಾರೆ “
ಭಗವಾನ್ ವೇದವ್ಯಾಸ ಜಯಂತಿಯಂದು ನಮ್ಮ ಪ್ರಾರ್ಥನೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕೊಟ್ಟು
ಉದ್ಧರಿಸು ಎಂದು.
               ನಾಹಂ ಕರ್ತಾ ಹರಿಃ ಕರ್ತಾ
            ||ಶ್ರೀ ವಾಸಿಷ್ಠ ಕೃಷ್ಣಾರ್ಪಣಮಸ್ತು ||
********

" ದಿನಾಂಕ : 24.05.21 ಸೋಮವಾರ - ಶ್ರೀ ವೇದವ್ಯಾಸ ಜಯಂತೀ "
ಶ್ರೀ ವಾದಿರಾಜರು....
ವ್ಯಾಸಾಯ ಭಾವನಾಶಾಯ
ಶ್ರೀಶಾಯ ಗುಣರಾಶಯೇ ।
ಹೃದ್ಯಾಯ ಶುದ್ಧ ವಿದ್ಯಾಯ 
ಮಧ್ವಾಯ ಚ ನಮೋ ನಮಃ ।।
" ಶ್ರೀ ವ್ಯಾಸಾವತಾರದ ಹಿನ್ನೆಲೆ "
28ನೇ ದ್ವಾಪರ ಯುಗದ ಕೊನೆಯಲ್ಲೊಮ್ಮೆ 12 ವರ್ಷಗಳ ಕಾಲ ಭೀಕರ ಕ್ಷಾಮ ಉಂಟಾದಾಗ ಋಷಿ ಮುನಿಗಳೆಲ್ಲರಿಗೂ ಕರ್ಮಾನುಷ್ಠಾನ ಹಾಗೂ ಜೀವನವೇ ದುರ್ಬರವಾಯಿತು.
ಆದರೆ ಆಗ ಶ್ರೀ ಗೌತಮ ಋಷಿಗಳ ತಪಃ ಪ್ರಭಾವದಿಂದ ಅವರ ಆಶ್ರಮದ ಪರಿಸರದಲ್ಲಿ ಮಾತ್ರ ಸುಭಿಕ್ಷೆ ಇತ್ತು. 
ಇದನ್ನರಿತ ಋಷಿ ಮುನಿಗಳೆಲ್ಲರೂ ಅವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. 
ದುರ್ಭಿಕ್ಷೆಯ ಕಾಲ ಮುಗಿದು ಎಲ್ಲಾ ಕಡೆಯಲ್ಲೂ ಸುಭಿಕ್ಷೆ ಉಂಟಾದಾಗ ಋಷಿಗಳೆಲ್ಲರೂ ತಮ್ಮ ತಮ್ಮ ಸ್ಥಳಕ್ಕೆ ಹೊರಡಲುದ್ಯುಕ್ತರಾಗಿ ಶ್ರೀ ಗೌತಮರ ಅನುಮತಿಯನ್ನು ಕೇಳಿದರು.
ಸ್ನೇಹ ಪರವಶರಾದ ಶ್ರೀ ಗೌತಮರು ಅವರನ್ನು ಬೀಳ್ಕೊಡಲು ಮನಸ್ಸಿಲ್ಲದೆ ನಾಳೆ ನಾಳೆ ಎಂದು ಕಾಲವನ್ನು ಮುಂದೂಡುತ್ತಾ ಬಂದರು. 
ಕೊನೆಗೊಮ್ಮೆ ಋಷಿಗಳೆಲ್ಲರೂ ಸೇರಿ ಶ್ರೀ ಗೌತಮರಿಂದ ಅನುಮತಿ ದೊರೆಯುತ್ತಿಲ್ಲ - ಏನು ಮಾಡುವುದು? ಎಂದು ಚಿಂತಿಸುತ್ತಿರುವಾಗ ಇತ್ತ ಶ್ರೀ ರುದ್ರದೇವರ ಮುಡಿಯಲ್ಲಿದ್ದ ಗಂಗೆಯನ್ನು ಕೆಳಗಿಳಿಸ ಬಯಸಿದ ಪಾರ್ವತಿಯಿಂದ ಪ್ರೇರಿತನಾಗಿ ಗಣೇಶನು ಬಂದು ಋಷಿಗಳಿಗೆ ಒಂದು ಉಪಾಯವನ್ನು ಸೂಚಿಸಿದನು.
ಅದರಂತೆ ಆ ಋಷಿಗಳು ತಮ್ಮ ತಪಃ ಶಕ್ತಿಯಿಂದ ಮುಟ್ಟಿದರೆ ಸಾಯುವಂತಹ ಒಂದು ಬಡಕಲು ಹಸುವನ್ನು ನಿರ್ಮಿಸಿ ಶ್ರೀ ಗೌತಮರ ಗದ್ದೆಯಲ್ಲಿ ಮೇಯಲು ಬಿಡುವರು. 
ಅದನ್ನು ಓಡಿಸಲೆಂದು ಶ್ರೀ ಗೌತಮರು ಮೆಲ್ಲನೆ ದರ್ಭೆಯಿಂದ ಹೊಡೆದ ಕೂಡಲೇ ಹಸು ಸಾಯುವುದು. 
ಆಗ ಶ್ರೀ ಗೌತಮರ ಮೇಲೆ ಗೋ ಹತ್ಯೆಯ ಅಪವಾದವನ್ನು ಹೊರಿಸಿ ಇಂಥವರ ಅನ್ನವನ್ನು ಸ್ವೀಕಾರ ಮಾಡಬಾರದೆಂದು ನೆಪ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಸ್ಥಳಕ್ಕೆ ತೆರಳುವರು.
ಬಳಿಕ ಶ್ರೀ ಗೌತಮರು ಶ್ರೀ ರುದ್ರದೇವರನ್ನು ಒಲಿಸಿಕೊಂಡು ಅವರ ಜಟೆಯಿಂದ ಗಂಗೆಯನ್ನಿಳಿಸಿ ತರಿಸಿ ಆ ಜಲದಿಂದ ಹಸುವನ್ನು ಬದುಕಿಸಿದರು. 
ಆ ಜಲ ಪ್ರವಾಹವೇ ಅಂದಿನಿಂದ ಗೋದಾವರಿ ( ಗೋದಾವರೀ = ಹಸುವನ್ನು ಬದುಕಿಸಿ ಕೊಟ್ಟ ನೀರು ) ಎಂದು ಪ್ರಸಿದ್ಧವಾಯಿತು.
ಅನಂತರ ಶ್ರೀ ಗೌತಮರು ಹೀಗೇಕಾಯಿತು ಎಂದು ಯೋಗ ಬಲದಿಂದ ಯೋಚಿಸಿದಾಗ ನಡೆದ ಸಂಗತಿಯೆಲ್ಲವೂ ತಿಳಿಯಿತು. 
ತಮ್ಮಲ್ಲೇ ಆಶ್ರಯ ಪಡೆದು ಕೊನೆಗೆ ತಮಗೆ ದ್ರೋಹ ಮಾಡಿದರೆಂದು ಆ ಋಷಿಗಳ ಮೇಲೆ ಕೋಪಗೊಂಡು " ಸರ್ವತ್ರ ಜ್ಞಾನವು ನಶಿಸಲಿ " ಎಂದು ಶಾಪ ನೀಡಿದರು. 
ಇದರಿಂದ ವೇದಾದಿಗಳ  ಪ್ರವಚನ ಪರಂಪರೆ ನಶಿಸಿ ಎಲ್ಲರಲ್ಲಿಯೂ ಅಜ್ಞಾನ ವಿಪರೀತ ಜ್ಞಾನವು ಮನೆ ಮಾಡಿತು.
ಆಗ ಸಜ್ಜನರ ಮೇಲಿನ ದಯೆಯಿಂದ ಶ್ರೀ ಬ್ರಹ್ಮ ರುದ್ರಾದಿ ದೇವತೆಗಳೆಲ್ಲರೂ ಕ್ಷೀರ ಸಮುದ್ರ ತೀರಕ್ಕೆ ಬಂದು ಶ್ರೀ ಹರಿಯನ್ನು ಬಹು ವಿಧವಾಗಿ ಸ್ತೋತ್ರ ಮಾಡಿದರು.
" ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ..... 
ಜ್ಞಾನಪ್ರದಾನಾಯ ಸತಾಂ ತದನ್-
ಯಜ್ಞಾನಪ್ರಣಾಶಾಯ ಚ ವಿಷ್ಣುನೈತೇ ।
ಕ್ಲ್ರುಪ್ತಾಸತ್ತಸ್ತೇ ಸವಿರಿಂಚಶರ್ವಾ 
ವಿಜ್ಞಾಪಯಾಮಾಸುರುಪೇತ್ಯ ವಿಷ್ಣುಮ್ ।। 
" ಕಲಿಯ ಪ್ರಭಾವದಿಂದ ಮತ್ತು ಗೌತಮರ ಶಾಪದಿಂದ ವೇದಾದಿ ಸಚ್ಛಾಸ್ತ್ರಗಳು ಉಪ್ತವಾಗಿ ಸಮೀಚೀನ ಜ್ಞಾನವೇ ಇಲ್ಲದಂತಾಗಿದೆ. 
ಆದ್ದರಿಂದ ನೀನು ಭೂಮಿಯಲ್ಲಿ ಅವತರಿಸಿ ವೇದಗಳನ್ನು ಉದ್ಧಾರ ಮಾಡಿ, ಸಚ್ಛಾಸ್ತ್ರಗಳನ್ನು ರಚಿಸಿ ಅಜ್ಞಾನ ವಿಪರೀತ ಜ್ಞಾನಗಳನ್ನು ನಾಶ ಪಡಿಸಿ ಸುಜನರನ್ನು ಉದ್ಧಾರ ಮಾಡು ಎಂದು ಪ್ರಾರ್ಥಿಸಿದರು.
ಶ್ರೀ ಹರಿಯು ಅವರಿಗೆ ಅಭಯ ಪ್ರದಾನ ಮಾಡಿ ಭೂಮಿಯಲ್ಲಿ ಅವತಾರ ಮಾಡಿದನು.
" ಶ್ರೀ ವ್ಯಾಸಾವತಾರ "
ಜಯತಿ ಪರಾಶರ ಸೂನು: 
ಸತ್ಯವತೀ ಹೃದಯ ನಂದನೋ ವ್ಯಾಸಃ ।
ಯಸ್ಯಾಸ್ಯ ಕಮಲಗಲಿತಂ ವಾಙ್ಞಯ -
ಮಮೃತಂ ಸತ್ಯಂ ಜಗತ್ ಪಿಬತಿ ।।
ಶ್ರೀ ಬ್ರಹ್ಮದೇವರ ಮಕ್ಕಳು ಶ್ರೀ ವಶಿಷ್ಠ ಮಹರ್ಷಿಗಳು.
ಶ್ರೀ ವಶಿಷ್ಠ ಮಹರ್ಷಿಗಳ ಮಕ್ಕಳು " ಶಕ್ತಿ " ಎಂಬ ಋಷಿಗಳು. 
ಅವರು ತಮಗೆ ಶ್ರೀ ಹರಿಯೇ ಮಗನಾಗಿ ಅವತರಿಸಬೇಕೆಂದು ಇಚ್ಛಿಸಿ ತಪಸ್ಸು ಮಾಡಿದರು. 
ಆಗ ಶ್ರೀ ಹರಿಯು ಅವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ...
ನನ್ನ ಭಕ್ತನಾದ ವಸು ಚಕ್ರವರ್ತಿಯು ಒಂದು ಸಲ ಬೇಟೆಗಾಗಿ ಕಾಡಿಗೆ ಹೋದಾಗ ಮನಸ್ಸಿನಲ್ಲಿ ಹೆಂಡತಿಯನ್ನು ಸ್ಮರಿಸಿದನು. 
ಅದರ ಪರಿಣಾಮವಾಗಿ ಅವನಿಗೆ ವೀರ್ಯಪಾತವಾಯಿತು. 
ಅವನು ಅದನ್ನು ತನ್ನ ಹೆಂಡತಿಗೆ ತಲುಪಿಸಲೆಂದು ಒಂದು ಗಿಡುಗದ ಮೂಲಕ ಕೊಟ್ಟು - ಅದು ಯಮುನಾ ನದಿಯ ಮೇಲಿಂದ ಆಕಾಶದಲ್ಲಿ ಹಾರಿ ಹೋಗುತ್ತಿರುವಾಗ ಮತ್ತೊಂದು ಗಿಡುಗವು ಬಂದು ಇದರೊಂದಿಗೆ ಹೋರಾಡಿತು. 
ಆ ಜಗಳದಲ್ಲಿ ವೀರ್ಯವು ಕೆಳಗೆ ಯಮುನಾ ನದಿಯಲ್ಲಿ ಬಿದ್ದಿತು. 
ಅದನ್ನು ಒಂದು  ಹೆಣ್ಣು ಮೀನು ನುಂಗಿತು. 
ಅದನ್ನು ಬೆಸ್ತರು ಹಿಡಿದರು. 
ಕಾಲ ಕ್ರಮೇಣ ಆ ಮೀನಿನ ಗರ್ಭದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವು ಹುಟ್ಟಿತು.
ಬೆಸ್ತರು ಆ ಮಕ್ಕಳನ್ನು ತಮ್ಮ ರಾಜನಿಗೆ ಅರ್ಪಿಸಿದರು. 
ಅವನು ಆ ಮಕ್ಕಳನ್ನು ವಸು ಚಕ್ರವರ್ತಿಗೆ ಕೊಟ್ಟಾಗ ವಸುವು ಗಂಡು ಮಗುವನ್ನು ತಾನು ತೆಗೆದುಕೊಂಡು ಹೆಣ್ಣು ಮಗುವನ್ನು ಬೆಸ್ತರ ರಾಜನಿಗೇ ಬಿಟ್ಟನು. 
ಅವಳೇ ಈಗ " ಸತ್ಯವತೀ " ಎಂಬ ಹೆಸರಿನಿಂದ ಸುಂದರಿಯಾಗಿ ಬೆಳೆದಿದ್ದಾಳೆ.
ಪೂರ್ವದಲ್ಲಿ ಅವಳು ಪಿತೃ ದೇವತೆಗಳ ಮಗಳಾಗಿದ್ದಾಗ ನನ್ನನ್ನು ತಪಸ್ಸಿನಿಂದ ಮೆಚ್ಚಿಸಿದ್ದಳು. 
ಆಗ ಅವಳಿಗೆ.....
" ನಾನೇ ನಿನ್ನಲ್ಲಿ ಮಗನಾಗಿ ಅವತರಿಸುವೆ " 
ನೆಂದು ವರವಿತ್ತಿದ್ದೆನು. 
ಆದ್ದರಿಂದ ನೀವು ಆ ಸತ್ಯವತಿಯನ್ನು ವಿವಾಹ ಮಾಡಿಕೊಳ್ಳಿರಿ. 
ನಾನು ನಿಮಗೆ ಅವಳಲ್ಲಿ ಮಗನಾಗಿ ಅವತರಿಸತ್ತೆನೆ ಎಂದು ಹೇಳಿದನು!
ಈ ರೀತಿಯಲ್ಲಿ ಶ್ರೀ ಹರಿಯಿಂದ ವರ ಪಡೆದ ಶ್ರೀ ಪರಾಶರರು ಯಮುನಾ ನದಿಗೆ ಹೋದರು.
ದಾಶ ಕನ್ಯೆಯಾದ ಸತ್ಯವತಿಯೇ ಅವರನ್ನು ದೋಣಿಯಲ್ಲಿ ದಾಟಿಸುತ್ತಿದ್ದಳು. 
ಶ್ರೀ ಪರಾಶರರು ಶ್ರೀ ಹರಿಯ ಆಜ್ಞೆಯಂತೆ ಆಕೆಯನ್ನು ವಿವಾಹವಾಗಲು ಯಮುನಾ ನದಿಯ ದ್ವೀಪದಲ್ಲಿಳಿದರು.
ಅಲ್ಲಿಗೆ ಶ್ರೀ ವಶಿಷ್ಠ, ಶ್ರೀ ಯಜ್ಞವಲ್ಕ್ಯಾದಿಗಳು ಬಂದು ವಿವಾಹ ಹೋಮ ಮೊದಲಾದ ವಿಧಿಗಳನ್ನು ಸಾಂಗವಾಗಿ ನಡೆಸಿದರು. 
ವಸು ಚಕ್ರವರ್ತಿಯೇ ಬಂದು ಶ್ರೀ ಪರಾಶರರಿಗೆ ಸತ್ಯವತಿಯನ್ನು ಧಾರೆ ಎರೆಡು ದಾನ ಮಾಡಿದರು.
ಬಳಿಕ ಕಂಭದಿಂದ ಶ್ರೀ ನೃಸಿಂಹದೇವರು ಪ್ರಾದುರ್ಭವಿಸಿದಂತೆ ಶ್ರೀ ಪರಾಶರರ ಸ್ಪರ್ಶ ಮಾತ್ರದಿಂದ ಸತ್ಯವತಿಯಲ್ಲಿ " ಶ್ರೀ ವೇದವ್ಯಾಸರು " ಪ್ರಾದುರ್ಭವಿಸಿದರು.
" ನೀಲವರ್ಣರಾದ್ದರಿಂದ ಮತ್ತು ವಶಿಷ್ಠ ಗೋತ್ರದಲ್ಲಿ ಅವತರಿಸಿದ್ದರಿಂದ "....... 
ವಾಸಿಷ್ಠ ಕೃಷ್ಣ " ಎಂದೂ, ದ್ವೀಪದಲ್ಲಿ ಅವತರಿಸಿದ್ದರಿಂದ " ಕೃಷ್ಣ ದ್ವೈಪಾಯನ " ಎಂದೂ ಪ್ರಸಿದ್ಧರಾದರು.
" ಶ್ರೀ ವೇದವ್ಯಾಸದೇವರ ವರ್ಣನೆ  "
ಬ್ರಹ್ಮಾಂಡದ ಒಳಗೂ ಹೊರಗೂ ಬೆಳೆಯತಕ್ಕವರಾಗಿ, ಜ್ಞಾನವೆಂಬ ಕಿರಣ ಸಮೂಹ ಉಳ್ಳವರಾಗಿ - ಅಧಮ ಮಾಧ್ಯಮ ಉತ್ತಮ ಅಧಿಕಾರಿಗಳಿಗೆ ಕ್ರಮವಾಗಿ ದರ್ಶನ ಯೋಗ್ಯವಾದ ಸಹಸ್ರ - ಲಕ್ಷ - ಅನಂತ ಸೂರ್ಯರಂತೆ ಕಿರಣವುಳ್ಳವರಾಗಿ ಪ್ರಾಕಾಶಿಸಿದರು.
ಅನಿರ್ದೋಷರೂ - ಗುಣಪೂರ್ಣರೂ - ಜಗತ್ಪ್ರಭುಗಳೂ - ಸಮಸ್ತ ವಿದ್ಯಾಧಿಪತಿಗಳೂ ಆದ ಶ್ರೀ ಕೃಷ್ಣದ್ವೈಪಾಯನರು ಶುಭ್ರವಾದ ಇಂದ್ರನೀಲ ಮಣಿಯಂತೆ ಬಣ್ಣ ಉಳ್ಳವರಾಗಿಯೂ - ಕೆಂಪಾದ ಅಂಗಾಲು - ಅಂಗೈ - ಕಣ್ಣು - ಕೆಳತುಟಿ - ಉಗುರು - ನಾಲಿಗೆ ತುಟಿಯುಳ್ಳವರಾಗಿಯೂ - ಅಂಗೈ ಅಂಗಾಲುಗಳಲ್ಲಿ ಚಕ್ರ ಶಂಖ ಕಮಲದ ರೇಖೆಯುಳ್ಳವರಾಗಿಯೂ - ಜಿಂಕೆಯ ಚರ್ಮದ ಉಡುಗೆ - ತಲೆಯಲ್ಲಿ ಮಿಂಚಿನಂತಹ ಜಟೆ - ವಿಸ್ತೃತವಾದ ಎದೆ - ವಿಶಾಲವಾದ ಕಣ್ಣು - ಬೃಹತ್ತಾದ ಭುಜ - ಶಂಖದಂಥ ಕಂಠ - ಸಮಸ್ತ ವೇದಗಳನ್ನುಚ್ಛರಿಸುತ್ತಿರುವ ವದನ - ಮುಖದಲ್ಲಿ ಅನಂತ ಚಂದ್ರರಿಗೂ ಮಿಗಿಲಾದ ಕಾಂತಿ - ಜ್ಞಾನಮುದ್ರೆ ಅಭಯಮುದ್ರೆಗಳಿಂದ ಕೂಡಿದ ಎರಡು ಕೈಗಳು - ಕೃಷ್ಣಾಜಿನ ಸಹಿತವಾದ ಜನಿವಾರ - ಅಜ್ಞಾನವನ್ನು ಪರಿಹರಿಸುವ ನೋಟ ಇವುಗಳಿಂದ ಕೂಡಿದವರಾಗಿಯೂ ಶೋಭಿಸಿದರು.
ಲೋಕ ಧರ್ಮ ಪಾಲನೆಗಾಗಿ ಪ್ರಾದುರ್ಭಾವವಾಗಿ ಏಳು ದಿನಗಲ್ಲಿಯೇ ತಂದೆಯಿಂದ ಉಪನೀತರಾದರು. 
ತಂದೆ ಪರಾಶರರಿಗೆ ಉತ್ತಮವಾದ ಜ್ಞಾನವನ್ನು ದಯಪಾಲಿಸಿದರು. 
ತಂದೆ ತಾಯಿಗಳಿಬ್ಬರಿಗೂ ಸ್ಮರಿಸಿದ ಕೂಡಲೇ ತಾನು ಬಂದು ಪ್ರತ್ಯಕ್ಷನಾವುವೆನೆಂದು ವರವಿತ್ತರು.
ಶ್ರೀ ಪರಾಶರರು ಸತ್ಯವತಿಗೆ ಕನ್ಯತ್ವ ವರವನ್ನು ಕೊಟ್ಟು ತಂದೆಯ ಕಳುಹಿಸಿದರು!!
" ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ..... 
ಸ ಲೋಕಧರ್ಮಾಭಿರಿರಕ್ಷಯಾ ಪಿತುರ್ದ್ವಿಜತ್ವ-
ಮಾಪ್ಯಶು ಪಿತುರ್ದದೌ ನಿಜಮ್ ।
ಜ್ಞಾನಂ ತಯೋಸ್ಸಂಸ್ಮೃತಿಮಾತ್ರತತ್ಸದಾ 
ಪ್ರತ್ಯಕ್ಷಭಾವಂ ವರಮಾತ್ಮನೋ ದದೌ ।।                 
" ವೇದ ವಿಭಾಗ - ಮಹಾಭಾರತ ರಚನೆ "
ಬಳಿಕ ಶ್ರೀ ವೇದವ್ಯಾಸರು ಬ್ರಹ್ಮಾದಿಗಳಿಂದ ಸಹಿತರಾಗಿ ಮೇರುಪರ್ವತಕ್ಕೆ ಹೋಗಿ ವೇದವನ್ನು ಉದ್ಧಾರ ಮಾಡಿದರು. 
" ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ..... 
ದ್ವೈಪಾಯನಃ ಸೋsಥ ಜಗಾಮ ಮೇರುಂ 
ಚತುರ್ಮುಖಾದ್ಯೈರನುಗಮ್ಯಮಾನಃ ।।      
ಅಂದರೆ......
ಅಪಪಾಠಗಳಿಂದ ತಿರೋಹಿತವಾದ ವೇದವನ್ನು ಅಭಿವ್ಯಕ್ತಗೊಳಿಸಿ ದೇವತೆಗಳಿಗೆ ಮತ್ತು ಮುನಿಗಳಿಗೆ ಉಪದೇಶಿಸಿದರು. 
ಸಮಸ್ತ ಶಾಸ್ತ್ರಗಳನ್ನೂ ವೇದಾರ್ಥ ನಿರ್ಣಾಯಕವಾದ " ಬ್ರಹ್ಮ ಸೂತ್ರ " ಗಳನ್ನೂ ರಚಿಸಿದರು.
" ಸ್ಕಂದ ಪುರಾಣ " ದಲ್ಲಿ... 
ಅಲ್ಪಾಕ್ಷರಸಂದಿಗ್ಧ೦ಸಾರ-
ವದ್ವಿಶ್ವತೋಮುಖಮ್ ।
ಅಸ್ತೋಭಮನವಧ್ಯಂ ಚ 
ಸೂತ್ರ೦ ಸೂತ್ರವಿದೋ ವಿದುಃ ।।      
ಸಕಲ ಶಾಸ್ತ್ರ ಪ್ರಮೇಯಗಳಿಗೆ ದೃಷ್ಟಾಂತ ರೂಪವಾದ " ಮಹಾಭಾರತ" ವನ್ನು ರಚಿಸಿದರು.
ಕೃಷ್ಣದ್ವೈಪಾಯನಂ ವ್ಯಾಸಂ 
ವಿದ್ಧಿ ನಾರಾಯಣಂ ಪ್ರಭುಮ್ ।
ಕೋ ಹ್ಯನ್ಯಃ ಪುಂಡರೀಕ್ಷಾನ್ಮ-
ಹಾಭಾರತಕೃದ್ಭವೇತ್ ।।    
ಶ್ರೀ ವೇದವ್ಯಾಸರು ಸಜ್ಜನರ ಮನಸ್ಸಿನಲ್ಲಿ ಉಳಿದ ಕಲಿಯನ್ನು ನಾಶ ಪಡಿಸಲುದ್ಯುಕ್ತರಾಗಿ ಅವರ ಮಂದ ಬುದ್ಧಿ ಮತ್ತು ಅಲ್ಪವಾದ ಆಯುಷ್ಯವನ್ನು ಪರಿಗಣಿಸಿ ವೇದವನ್ನು 4 ಪ್ರಕಾರವಾಗಿ ವಿಭಾಗ ಮಾಡಿದರು. 
ಅಂದರೆ..... 
ಶ್ರೀ ವ್ಯಾಸಾವತಾರಕ್ಕೂ ಮೊದಲು ಮೂಲ ವೇದವು " ಋಕ್ - ಯಜು  - ಸಾಮ - ಅಥರ್ವ " ಎಂದು 4 ಉಪವೇದವಾಗಿ ವಿಭಾಗವಾಗಿತ್ತು.
ಶ್ರೀ ವೇದವ್ಯಾಸರು ಅವತರಿಸಿ ತಿರೋಹಿತವಾದ ಅವಗಳನ್ನೇ ಅಭಿವ್ಯಕ್ತಗೊಳಿಸಿ ದೇವಮುನಿಗಳಿಗೆ ಉಪದೇಶಿಸಿದರು. 
ಅನಂತರ ಮನುಷ್ಯರಿಗಾಗಿ ಅವುಗಳಿಂದಲೇ ಒಂದೊಂದರಿಂದ ಸ್ವಲ್ಪ ಸ್ವಲ್ಪ ಮಂತ್ರಗಳನ್ನು ಸಂಗ್ರಹಿಸಿ " ಋಗ್ವೇದ - ಯಜುರ್ವೇದ - ಸಾಮವೇದ - ಅಥರ್ವವೇದ " ಎಂದು ಅವಾಂತರ ವೇದಗಳನ್ನಾಗಿ ವಿಭಾಗಿಸಿದರು.
ಪುನಃ ಅವುಗಳನ್ನು ಕ್ರಮವಾಗಿ 24, 101, 1000 ಮತ್ತು 12 ಶಾಖೆಗಳನ್ನಾಗಿ ಮಾಡಿದರು.
ರಾಗ : ಅರಭಿ ತಾಳ : ಆದಿ
ಏನೋ ಈ ವೇಷ -
ವೇದವ್ಯಾಸ ।। ಪಲ್ಲವಿ ।।
ಭಾನುಕೋಟಿ ಪ್ರಕಾಶ-
ಬದರೀ ನಿವಾಸ ।। ಅ ಪ ।।
ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆ ।
ಕೌಪೀನ ಧರಿಸಿದ -
ಕೌತುಕವೆನಯ್ಯ ।। ಚರಣ ।।
ಮುತ್ತು ಮಾಣಿಕ ನವ-
ರತುನ ಮುಕುಟವಿರೆ ।
ನೆತ್ತಿಲಿ ಕೆಂಜೆಡೆ ಪೊತ್ತು 
ಕೊಂಡಿಪ್ಪುದು ।। ಚರಣ ।।
ವರ ವೈಕುಂಠವ ಬಿಟ್ಟು -
ಮೋಹನ್ನ ವಿಠ್ಠಲ ।
ಧರೆಯೊಳು ಬೋರೆಯ -
ಮರದಡಿಲಿರುವೋದು ।। ಚರಣ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
*********

ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |
ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮ: ||

ಇಂದು ವೈಶಾಕ ಶುದ್ಧ ತ್ರಯೋದಶಿ, ಶ್ರೀಮನ್ ನಾರಾಯಣನು, ಶ್ರೀ ವೇದಾವ್ಯಸರಾಗಿ ಅವತರಿಸಿದ ದಿನ.

ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹರಡುವ ಕಡೆಗೆ ಶ್ರೀಮನ್ ನಾರಾಯಣರ ಮತ್ತೊಂದು ಅವತಾರವೆಂದರೆ ಶ್ರೀ ವೇದವ್ಯಾಸರು. ಅವರು ಪರಾಶರ ಮತ್ತು ಸತ್ಯವತಿಗೆ ಜನಿಸಿದರು. ಅವರ ಕೃತಿಗಳು ನಮ್ಮ ಯುಗಕ್ಕೆ ಅತ್ಯಂತ ಮಹತ್ವದ್ದಾಗಿದೆ ಮತ್ತು ನಮ್ಮ ಜೀವನೋಪಾಯದ ಸಿದ್ಧಾಂತಗಳನ್ನು ರೂಪಿಸುತ್ತವೆ. ಅವನನ್ನು ಬದಾರಾಯಣ, ಕೃಷ್ಣದ್ವೈಪಯನ ಮತ್ತು ವಸಿಷ್ಟಕೃಷ್ಣ ಎಂದೂ ಕರೆಯುತ್ತಾರೆ.

ಶ್ರೀಮನ್ ಮಾಧ್ವಾಚಾರ್ಯರು ಮತ್ತು ಅವರ ಶಿಷ್ಯರು ಈ ಕೃತಿಗಳ ಬಗ್ಗೆ ಹಲವಾರು ವ್ಯಾಖ್ಯಾನಗಳನ್ನು ಬರೆದಿದ್ದಾರೆ🙏

ಇಲ್ಲಿದೆ ಸೋಸಲೆ ಶ್ರೀ ವ್ಯಾಸರಾಜ ಮಠ ಮಹಾಸಸ್ಥಾನದಲ್ಲಿ ಪೂಜಿಸಲ್ಪಡುವ ಶ್ರೀ ಶ್ರೀನಾಥ ತೀರ್ಥರ ಕರಾರ್ಚಿತಾ ಶ್ರೀ ವೇದವ್ಯಾಸ ದೇವರು. ಜ್ಞಾನ ಮುದ್ರೆ ಜೊತೆ ಕೂರ್ಮಾ ಪೀಠದಲ್ಲಿ ಬಹಳ ಸುಂದರವಾದ ಮೂರ್ತಿ ಜ್ಞಾನದ ಮಹತ್ವವನ್ನು ಸೂಚಿಸುತ್ತದೆ ಮತ್ತು ಸೋಸಲೆ ಶ್ರೀ ವ್ಯಾಸರಾಜ ಮಹಾಸಮಸ್ಥಾನದಲ್ಲಿ ಇಂದಿಗೂ ಪೂಜಿಸಲ್ಪಡುವ ಶ್ರೀ ವ್ಯಾಸ ಮುಷ್ಟಿಯ ದರ್ಶನ🙏

ನಮಗೆ ಜ್ಞಾನ ಭಕ್ತಿ ಮತ್ತು ವೈರಾಗ್ಯವನ್ನು ನೀಡುವಂತೆ ನಮ್ಮ ಗುರುಗಳ ಮೂಲಕ ನಮ್ಮ ಪರಮಗುರುಗಳ ಮೂಲಕ ಅವರ ಮೂಲಕ ಶ್ರೀ ವೇದವ್ಯಾಸ ದೇವರನ್ನ ಪ್ರಾರ್ಥಿಸೋಣ🙏🙏🙏

|| ಶ್ರೀಕೃಷ್ಣಾರ್ಪಣಮಸ್ತು ||

Today is Vaishaka Shudda Trayodashi, the avatara dina Shriman Narayana as Shri Vedavyasaru. 

Shri Vedavyasaru is another avatara of Shriman Narayana towards spreading the knowledge and wisdom. He was born to Sage Parashara and Satyavathi. His works are of utmost importance to our yuga and forms the tenets of our livelihood. He is also known as Badarayana, Krishna Dwaipayana and Vasista Krishna. 

Shriman Madhwacharya and his shishyas have written several commentaries on this works to simplify the understanding. 

Here is moorthi of Shri VedaVyasaru (Shri Srinatha theertha kararchitha) worshipped in the Mahasamsthana of Shri Vyasaraja Matha (Sosale). A very beautiful moorthi on koorma peeta with Jnana mudre indicating the importance of knowledge. Lets also have the darshana of Shri Vyasa Mushti which is worshipped at the samsthana of Shri Vyasaraja Matha (Sosale).

Lets pray through our gurugalu to our paramagurugalu through them to Shri VedaVyasaru to give us Jnana Bhakti and Vairagya

|| Shri Krishnarpanamasthu ||
***



 ಶ್ರೀವಿಷ್ಣುಪುರಾಣ  ಸಂಚಿಕೆ - 468  ತೃತೀಯಾಂಶ: ಚತುರ್ಥೋಧ್ಯಾಯ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||

ಶ್ರೀಪರಾಶರ ಉವಾಚ:

ಅದ್ಯೋ ವೇದಶ್ಚತುಷ್ಪಾದ: ಶತಸಾಹಸ್ರಸಮ್ಮಿತ:|
ತತೋ ದಶಗುಣ: ಕೃತ್ಸ್ನೋ ಯಜ್ಞೋಯಂ ಸರ್ವಕಾಮಧುಕ್||1||

ತತೋತ್ರ ಮತ್ಸುತೋ ವ್ಯಾಸೋ ಅಷ್ಟಾವಿಂಶತಿಮೇಂತರೇ|
ವೇದಮೇಕಂ ಚತುಷ್ಪಾದಂ ಚತುರ್ಧಾ ವ್ಯಭಜತ್ಪ್ರಭು:||2||

ಯಥಾ ಚ ತೇನ ವೈ ವ್ಯಸ್ತಾ ವೇದವ್ಯಾಸೇನ ಧೀಮತಾ|
ವೇದಾಸ್ತಥಾ ಸಮಸ್ತೈಸ್ತೈರ್ವ್ಯಸ್ತಾ ವ್ಯಾಸೈಸ್ತಥಾ ಮಯಾ||3||

ತದನೇನೈವ ವೇದಾನಾಂ ಶಾಖಾಭೇದಾನ್ ದ್ವಿಜೋತ್ತಮ|
ಚತುರ್ಯುಗೇಷು ಪಠಿತಾನ್ ಸಮಸ್ತೇಷ್ವವಧಾರಯ||4||

ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್|
ಕೋ ಹ್ಯನ್ಯೋ ಭುವಿ ಮೈತ್ರೇಯ ಮಹಾಭಾರತಕೃದ್ಭವೇತ್||5||

ತೇನ ವ್ಯಸ್ತಾ ಯಥಾ ವೇದಾ ಮತ್ಪುತ್ರೇಣ ಮಹಾತ್ಮನಾ|
ದ್ವಾಪರೇ ಹ್ಯತ್ರ ಮೈತ್ರೇಯ ತಸ್ಮಿನ್ ಶೃಣು ಯಥಾತಥಮ್||6||

ಪರಾಶರರು ನುಡಿದರು:

ಸೃಷ್ಟಿಯ ಆದಿಯಲ್ಲಿ ಈಶ್ವರನಿಂದ ಆವಿರ್ಭೂತವಾದ ಆದ್ಯವೇದವು ನಾಲ್ಕು ಪಾದಗಳಿಂದ ಯುಕ್ತವಾಗಿ ಒಂದು ಲಕ್ಷ ಮಂತ್ರಗಳಿಂದ ಕೂಡಿತ್ತು. ಅದರಿಂದ ಸಮಸ್ತ ಕಾಮನೆಗಳನ್ನೂ ಪೂರೈಸುವ ಸರ್ವಯಜ್ಞವೂ ಹತ್ತು ಬಗೆಯಲ್ಲಿ ಪ್ರಕಾಶಿತವಾಯಿತು.
(ಅಗ್ನಿಹೋತ್ರ, ದಶಪೂರ್ಣಮಾಸ, ಅಶ್ವಮೇಧ, ಚಾತುರ್ಮಾಸ್ಯ, ಸೋಮಯಜ್ಞ - ಇವು ಐದು ಪ್ರಕೃತಿರೂಪ ಯಜ್ಞಗಳು, ಇವುಗಳ ವಿಕೃತಿರೂಪಗಳು ಐದು ಸೇರಿ ಒಟ್ಟು ಹತ್ತು ಯಜ್ಞಗಳು.)

ಇಪ್ಪತ್ತೆಂಟನೆಯ ದ್ವಾಪರಯುಗದಲ್ಲಿ ನನ್ನ ಪುತ್ರನಾದ ವ್ಯಾಸನು ನಾಲ್ಕು ಪಾದಗಳಿದ್ದ ಒಂದು ವೇದವನ್ನು, ಋಗ್ವೇದ - ಯಜುರ್ವೇದ - ಸಾಮವೇದ - ಅಥರ್ವವೇದ ಎಂದು ನಾಲ್ಕು ವೇದಗಳನ್ನಾಗಿ ವಿಂಗಡಿಸಿದನು.

ಧೀಮಂತನಾದ ವೇದವ್ಯಾಸನು ವೇದವನ್ನು ವಿಂಗಡಿಸಿದಂತೆಯೇ ಹಿಂದೆ ಹೇಳಿದ ಇತರ ವ್ಯಾಸರೂ ನಾನೂ ಪೂರ್ವದಲ್ಲಿ ವಿಭಾಗಿಸಿದ್ದೇವೆ.

ಈ ವ್ಯಾಸನು ಹೇಗೆ ಶಾಖಾಭೇದಗಳನ್ನು ವಿಭಜಿಸಿದನೋ ಅದೇ ಪ್ರಕಾರ ಹಿಂದಿನ ಎಲ್ಲ ಚತುರ್ಯುಗಗಳಲ್ಲಿ ಬರುವ ದ್ವಾಪರದಲ್ಲಿಯೂ ವಿಭಕ್ತವಾಗಿ ಅಧ್ಯಯನ ಮಾಡಲ್ಪಡುತ್ತಿದ್ದವೆಂದು ತಿಳಿ.

ಮೈತ್ರೇಯ, ಕೃಷ್ಣದ್ವೈಪಾಯನ ವ್ಯಾಸನು ಸ್ವಾಮಿಯಾದ ಶ್ರೀಮನ್ನಾರಾಯಣನೆಂದೇ ತಿಳಿದುಕೊ. ಅವನಲ್ಲದೆ ಬೇರಾವನೂ ಈ ಜಗತ್ತಿನಲ್ಲಿ ಮಹಾಭಾರತವನ್ನು ರಚಿಸಲು ಶಕ್ತನಾದಾನು?

ನನ್ನ ಪುತ್ರನಾದ ಆ ಮಹಾತ್ಮನು ಈ ದ್ವಾಪರಯುಗದಲ್ಲಿ ವೇದವನ್ನು ಯಾವ ಪ್ರಕಾರವಾಗಿ ವಿಭಾಗಿಸಿದ್ದನೋ ಅದನ್ನು ಕ್ರಮವಾಗಿ ಹೇಳುತ್ತೇನೆ, ಕೇಳು.
********
ಬ್ರಹ್ಮಣಾ ಚೋದಿಚೋ ವ್ಯಾಸೋ ವೇದಾನ್ವ್ಯಸ್ತುಂ ಪ್ರಚಕ್ರಮೇ|
ಅಥ ಶಿಷ್ಯಾನ್ಪ್ರಜಗ್ರಾಹ ಚತುರೋ ವೇದಪಾರಗಾನ್||7||

ಋಗ್ವೇದಪಾಠಕಂ ಪೈಲಂ ಜಗ್ರಾಹ ಸ ಮಹಾಮುನಿ:|
ವೈಶಂಪಾಯನನಾಮಾನಂ ಯಜುರ್ವೇದಸ್ಯ ಚಾಗ್ರಹೀತ್||8||

ಜೈಮಿನಿಂ ಸಾಮವೇದಸ್ಯ ತಥೈವಾಥರ್ವವೇದವಿತ್|
ಸುಮಂತುಸ್ತಸ್ಯ ಶಿಷ್ಯೋಭೂದ್ವೇದವ್ಯಾಸಸ್ಯ ಧೀಮತ:||9||

ರೋಮಹರ್ಷಣನಾಮಾನಂ ಮಹಾಬುದ್ಧಿಂ ಮಹಾಮುನಿ:|
ಸೂತಂ ಜಗ್ರಾಹ ಶಿಷ್ಯಂ ಸ ಇತಿಹಾಸಪುರಾಣಯೋ:||10||

ಏಕ ಆಸೀದ್ಯಜುರ್ವೇದಸ್ತಂ ಚತುರ್ಧಾ ವ್ಯಕಲ್ಪಯತ್|
ಚಾತುರ್ಹೋತ್ರಮಭೂತ್ತಸ್ಮಿಂಸ್ತೇನ ಯಜ್ಞಮಥಾಕರೋತ್||11||

ಅಧ್ವರ್ಯವಂ ಯಜುರ್ಭಿಸ್ತು ಋಗ್ಭಿರ್ಹೋತ್ರಂ ತಥಾ ಮುನಿ:|
ಔದ್ಗಾತ್ರಂ ಸಾಮಭಿಶ್ಚಕ್ರೇ ಬ್ರಹ್ಮತ್ವಂ ಚಾಪ್ಯಥರ್ವಭಿ:||12||

ಬ್ರಹ್ಮದೇವರಿಂದ ಪ್ರೇರಿತನಾದ ವ್ಯಾಸನು ವೇದಗಳನ್ನು ವಿಭಜಿಸಲು ಆರಂಭಿಸಿದನು. ಅದರ ಪ್ರಚಾರಕ್ಕಾಗಿ ವೇದ ಪಾರಂಗತರಾದ ನಾಲ್ವರು ಶಿಷ್ಯರನ್ನು ಮೊದಲು ಸ್ವೀಕರಿಸಿದನು. 

ಆ ಶಿಷ್ಯರಲ್ಲಿ ಮಹರ್ಷಿ ಪೈಲನನ್ನು ಋಗ್ವೇದದ ಪಾಠಕನೆಂದೂ;
ವೈಶಂಪಾಯನನ್ನು ಯಜುರ್ವೇದದ ಪಾಠಕನೆಂದೂ;
ಜೈಮಿನಿಯು ಸಾಮವೇದದ ಪಾಠಕನೆಂದೂ; 
ಗೊತ್ತು ಮಾಡಿದನು. 

ಧೀಮಂತನಾದ ವೇದವ್ಯಾಸನಿಗೆ ಸುಮಂತುವು ಅಥರ್ವವೇದವನ್ನು ಬಲ್ಲ ಪಾಠಕನಾದ ಶಿಷ್ಯನಾದನು. 
(ಈ ನಾಲ್ವರು ಶಿಷ್ಯರೂ ಒಂದೇ ಆಗಿದ್ದ ವೇದಗಳಲ್ಲಿ ಪಾರಂಗತರಾಗಿದ್ದರು; 
ಋಗ್ವೇದಾದಿ ವಿಭಾಗವು ಮಾತ್ರ ಅವರಿಗೆ ತಿಳಿದಿರಲಿಲ್ಲ;
ವೇದವ್ಯಾಸರು ವಿಭಾಗವನ್ನು ಮಾಡಿ ಆಯಾ ವೇದಭಾಗವನ್ನು ಪೈಲಾದಿ ಶಿಷ್ಯರು ತಮ್ಮ ಶಿಷ್ಯರಿಗೆ ಕಲಿಸಬೇಕೆಂದು ಗೊತ್ತುಮಾಡಿದರು - ಎಂದು ತಾತ್ಪರ್ಯ.) 

ವ್ಯಾಸಮುನಿಯು ರೋಮಹರ್ಷಣನೆಂಬ ಮಹಾಬುದ್ಧಿಶಾಲಿಯಾದ ಸೂತಜಾತಿಯ ಶಿಷ್ಯನನ್ನು ಇತಿಹಾಸ-ಪುರಾಣಗಳ ಪಾಠಕನನ್ನಾಗಿ ಸ್ವೀಕರಿಸಿದರು.  
(ಇತಿಹಾಸ ಹಾಗೂ ಪುರಾಣಗಳಿಂದಲೇ ವೇದದ ತತ್ತ್ವವನ್ನು ಜನರಿಗೆ ತಿಳಿಸಿಕೊಡಬೇಕೆಂಬ ವಿಧಿಯಿದೆ. 
 ಆದುದರಿಂದ ಇತಿಹಾಸ-ಪುರಾಣಗಳ ಪ್ರವಚನವು ಈ ಹಿಂದೆ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುತ್ತಿತ್ತು.) 

ಯಜ್ಞವಿಧಿಯಲ್ಲಿ ಮೊದಲು ಯಜುರ್ವೇದ ಒಂದೇ ಆಗಿತ್ತು. 
ವ್ಯಾಸರು ಅದನ್ನು ನಾಲ್ಕು ಭಾಗ ಮಾಡಿ ನಾಲ್ವರು ಯಾಜಕರುಳ್ಳ ಚಾತುರ್ಹೋತ್ರ ಪದ್ಧತಿಯನ್ನು ತಂದು ಯಜ್ಞವಿಧಾನವನ್ನು ಗೊತ್ತುಪಡಿಸಿದರು. 

ಯಜುರ್ ಗಳಿಂದ ಅಧ್ವರ್ಯುವಿನ, ಋಕ್ಕುಗಳಿಂದ ಹೋತೃವಿನ, ಸಾಮಗಳಿಂದ ಉದ್ಗಾತೃವಿನ, ಅಥರ್ವ ಮಂತ್ರಗಳಿಂದ ಬ್ರಹ್ಮನ ಕರ್ಮವನ್ನು ಯಜ್ಞದಲ್ಲಿ ಗೊತ್ತುಮಾಡಿದರು. 
********
ತತಸ್ಸ ಋಚ ಉದ್ ಧೃತ್ಯ ಋಗ್ವೇದಂ ಕೃತವಾನ್ ಮುನಿ:|
ಯಜೂಂಷಿ ಚ ಯಜುರ್ವೇದಂ ಸಾಮವೇದಂ ಚ ಸಾಮಭಿ:||13||

ರಾಜ್ಞಾಂ ಚಾಥರ್ವವೇದೇನ ಸರ್ವಕರ್ಮಾಣಿ ಚ ಪ್ರಭು:|
ಕಾರಯಾಮಾಸ ಮೈತ್ರೇಯ ಬ್ರಹ್ಮತ್ವಂ ಚ ಯಥಾಸ್ಥಿತಿ||14||

ಸೋಯಮೇಕೋ ಯಥಾ ವೇದಸ್ತರುಸ್ತೇನ ಪೃಥಕ್ಕೃತ:|
ಚತುರ್ಧಾಥ ತತೋ ಜಾತಂ ವೇದಪಾದಪಕಾನನಮ್||15||

ಬಿಭೇದ ಪ್ರಥಮಂ ವಿಪ್ರ ಪೈಲೋ ಋಗ್ವೇದಪಾದಪಮ್|
ಇಂದ್ರಪ್ರಮಿತಯೇ ಪ್ರಾದಾತ್ ಬಾಷ್ಕಲಾಯ ಚ ಸಂಹಿತೇ||16||

ಚತುರ್ಧಾ ಸ ಬಿಭೇದಾಥ ಭಾಷ್ಕಲೋಪಿ ಚ ಸಂಹಿತಾಮ್|
ಬೋಧ್ಯಾದಿಭ್ಯೋ ದದೌ ತಾಶ್ಚ ಶಿಷ್ಯೇಭ್ಯಸ್ಸ ಮಹಾಮುನಿ:||17||

ಬೋಧ್ಯಾಗ್ನಿಮಾಢಕೌ ತದ್ವದ್ಯಾಜ್ಞವಲ್ಕ್ಯಪರಾಶರೌ|
ಪ್ರತಿಶಾಖಾಸ್ತು ಶಾಖಾಯಾಸ್ತಸ್ಯಾಸ್ತೇ ಜುಗೃಹುರ್ಮುನೇ||18||

ವ್ಯಾಸ ಮುನಿಯು ವೇದದಿಂದ ಋಕ್ಕುಗಳನ್ನು ಪೃಥಕ್ಕರಿಸಿ ಋಗ್ವೇದವನ್ನೂ ಯಜುಸ್ಸುಗಳಿಂದ ಯಜುರ್ವೇದವನ್ನೂ  ಸಾಮಗಳಿಂದ ಸಾಮವೇದವನ್ನೂ ನಿರ್ಮಿಸಿದರು. 

ಅಥರ್ವವೇದದಿಂದ ರಾಜರ ಸಮಸ್ತಕರ್ಮಗಳನ್ನೂ ಬ್ರಹ್ಮತ್ವವನ್ನೂ ಗೊತ್ತುಪಡಿಸಿದನು. 
ಹೀಗೆ ಒಂದು ವೇದವೃಕ್ಷವನ್ನು ವ್ಯಾಸನು ಪೃಥಕ್ಕರಿಸಿ ನಾಲ್ಕುವೇದವೃಕ್ಷಗಳನ್ನು ಮಾಡಿದನು. 
ಅಲ್ಲಿಂದ ಮುಂದೆ ವೇದವೃಕ್ಷಗಳ ಒಂದು ಅರಣ್ಯವೇ ನಿರ್ಮಿತವಾಯಿತು.

ಮೊದಲು ಪೈಲನು ಋಗ್ವೇದ ವೃಕ್ಷವನ್ನು ಎರಡಾಗಿ ವಿಂಗಡಿಸಿ ಒಂದು ಸಂಹಿತೆಯನ್ನು ಇಂದ್ರಪ್ರಮಿತಿಗೂ ಇನ್ನೊಂದು ಸಂಹಿತೆಯನ್ನು ಬಾಷ್ಕಲನಿಗೂ ಉಪದೇಶಿಸಿದನು. 
ಬಾಷ್ಕಲಮುನಿಯು ತನ್ನ ಸಂಹಿತೆಯನ್ನು ನಾಲ್ಕು ಭಾಗಗಳಾಗಿ (ಪ್ರತಿಶಾಖೆಗಳಾಗಿ) ವಿಂಗಡಿಸಿ ಬೋಧಿ ಮುಂತಾದ ಶಿಷ್ಯರಿಗೆ ಕಲಿಸಿದನು. 

ಆ ಶಿಷ್ಯರು ಯಾರೆಂದರೆ:-
ಬೋಧಿ, ಅಗ್ನಿಮಾಢಕ, ಯಾಜ್ಞವಲ್ಕ್ಯ, ಮತ್ತು ಪರಾಶರ (ಇವರು ವ್ಯಾಸರ ತಂದೆಯ ಹೆಸರನ್ನೇ ಹೊಂದಿದ್ದ ಇನ್ನೊಬ್ಬ ಮುನಿಗಳು).  
ಈ ಶಿಷ್ಯರು ಋಗ್ವೇದ ಶಾಖೆಯ ನಾಲ್ಕು ಪ್ರತಿಶಾಖೆಗಳನ್ನು ಅಧ್ಯಯನ ಮಾಡಿದರು. 

********
ಇಂದ್ರಪ್ರಮಿತಿರೇಕಾಂ ತು ಸಂಹಿತಾಂ ಸ್ವಸುತಂ ತತ:|
ಮಾಂಡುಕೇಯಂ ಮಹಾತ್ಮಾನಂ ಮೈತ್ರೇಯಾಧ್ಯಾಪಯತ್ತದಾ||19||

ತಸ್ಯ ಶಿಷ್ಯಪ್ರಶಿಷ್ಯೇಭ್ಯ: ಪುತ್ರಶಿಷ್ಯಕ್ರಮಾದ್ಯಯೌ|
ವೇದಮಿತ್ರಸ್ತು ಶಾಕಲ್ಯ: ಸಂಹಿತಾಂ ತಾಮಧೀತವಾನ್||20||

ಚಕಾರ ಸಂಹಿತಾ: ಪಂಚ ಶಿಷ್ಯೇಭ್ಯ: ಪ್ರದದೌ ಚ ತಾ:|
ತಸ್ಯ ಶಿಷ್ಯಾಸ್ತು ಯೇ ಪಂಚ ತೇಷಾಂ ನಾಮಾನಿ ಮೇ ಶೃಣು||21||

ಮುದ್ಗಲೋ ಗೋಮುಖಶ್ಚೈವ ವಾತ್ಸ್ಯಶ್ಯಾಲೀಯ ಏವ ಚ|
ಶಿಶಿರ: ಪಂಚಮಶ್ಚಾಸೀನ್ಮೈತ್ರೇಯ ಸುಮಹಾಮತಿ:||22||

ಸಂಹಿತಾತ್ರಿತಯಂ ಚಕ್ರೇ ಶಾಕಪೂರ್ಣಿಸ್ತಥೇತರ:|
ನಿರುಕ್ತಮಕರೋತ್ತದ್ವಚ್ಚತುರ್ಥಂ ಮುನಿಸತ್ತಮ||23||

ಕ್ರೌಂಚೋ ವೈತಾಲಿ ಕಸ್ತದ್ವದ್ ಬಲಾಕಶ್ಚ ಮಹಾಮುನಿ:|
ನಿರುಕ್ತಕೃಚ್ಚತುರ್ಥೋಭೂದ್ವೇದವೇದಾಂಗಪಾರಗ:||24||

ಇತ್ಯೇತಾ: ಪ್ರತಿಶಾಖಾಭ್ಯೋ ಹ್ಯನುಶಾಖಾ ದ್ವಿಜೋತ್ತಮ|
ಬಾಷ್ಕಲಶ್ಚಾಪರಾಸ್ತಿಸ್ರಸ್ಸಂಹಿತಾ: ಹೃತವಾನ್ ದ್ವಿಜ||25||

ತಿಷ್ಯಂ ಕಾಲಾಯನಿರ್ಗಾರ್ಗ್ಯಸ್ತೃತೀಯಶ್ಚ ಕಥಾಜವ:|
ಇತ್ಯೇತೇ ಬಹ್ ವೃಚಾ: ಪ್ರೋಕ್ತಾ: ಸಂಹಿತಾ: ಯೈ: ಪ್ರವರ್ತಿತಾ:||26||

ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಚತುರ್ಥೋಧ್ಯಾಯ:||

ಇಂದ್ರಪ್ರಮಿತಿಯಾದರೋ ತನ್ನ ಶಾಖೆಯನ್ನು ತನ್ನ ಮಗನೂ ಮಹಾತ್ಮನೂ ಆದ ಮಾಂಡುಕೇಯನಿಗೆ ಅಧ್ಯಾಪನ ಮಾಡಿದನು. 

ಆ ಶಾಖೆಯು ಶಿಷ್ಯ, ಪ್ರಶಿಷ್ಯ, ಪುತ್ರ, ಶಿಷ್ಯ - ಕ್ರಮದಲ್ಲಿ ಮುಂದುವರಿಯಿತು. 
ಆ ಕ್ರಮದಲ್ಲಿ ವೇದಮಿತ್ರನೆಂಬ ಶಾಕಲ್ಯನು ಇಂದ್ರಪ್ರಮಿತಿಯ ಸಂಹಿತೆಯನ್ನು ಅಧ್ಯಯನ ಮಾಡಿದನು. 

ಆ ಶಾಕಲ್ಯನು ತಾನು ಕಲಿತ ಸಂಹಿತೆಯನ್ನು ಐದು ವಿಭಾಗ ಮಾಡಿ ಐವರು ಶಿಷ್ಯರಿಗೆ ಉಪದೇಶಿಸಿದನು. 

ಆ ಐವರು ಶಿಷ್ಯರ ಹೆಸರನ್ನು ಕೇಳು:-
ಮುದ್ಗಲ, ಗೋಮುಖ, ವಾತ್ಸ್ಯ, ಶಾಲೀಯ ಮತ್ತು  ಮಹಾತೇಜಸ್ವಿಯಾದ ಶಿಶಿರ. 

ಶಾಕಪೂರ್ಣಿ ಎಂಬ ಶಿಷ್ಯನು ಶಾಕಲ್ಯ ಸಂಹಿತೆಯ (ಐದು ವಿಭಾಗಗಳಲ್ಲಿ ಒಂದೊಂದನ್ನೂ) ಮೂರು ಸಂಹಿತೆಗಳನ್ನಾಗಿ ವಿಂಗಡಿಸಿದನು.

ಇನ್ನೊಬ್ಬ ಶಿಷ್ಯನು (ಹೆಸರು ರಥಂತರ ಎಂದು ವಾಯುಪುರಾಣದಲ್ಲಿದೆ) ನಾಲ್ಕನೆಯದಾಗಿ ನಿರುಕ್ತ (ಶಬ್ದಾರ್ಥಕೋಶ) ವನ್ನು ರಚಿಸಿದನು. 

ನಿರುಕ್ತಕಾರರಾದ ಇನ್ನು ಮೂವರು ಕ್ರೌಂಚ, ವೈತಾಲಿಕ, ಬಲಾಕ. (ಇವರು ಶಾಕಪೂರ್ಣಿಯ ಮೂರು ಸಂಹಿತೆಗಳನ್ನು ಅಧ್ಯಯನ ಮಾಡಿದ ಶಿಷ್ಯರು.)

ನಾಲ್ಕನೆಯ ನಿರುಕ್ತಕಾರನು ವೇದವೇದಾಂಗ ಪಾರಂಗತನಾದ ಇನ್ನೊಬ್ಬನು. (ಅವನ ಹೆಸರು ರಥಂತರ). 

ಮೈತ್ರೇಯ, ಇವೆಲ್ಲವೂ ಪ್ರತಿಶಾಖೆಗಳಿಂದ ಹುಟ್ಟಿದ ಅನುಶಾಖೆಗಳು. 
ಬಾಷ್ಕಲಿ ಎಂಬ ಇನ್ನೊಬ್ಬನು ಇನ್ನೂ ಮೂರು ಸಂಹಿತೆಗಳನ್ನು ನಿರ್ಮಿಸಿದನು. 

ಅವನ್ನು ಕಲಿತ ಶಿಷ್ಯರು ಕಾಲಾಯನಿ, ಗಾರ್ಗ್ಯ, ಕಥಾಜವ. 
ಇವರೆಲ್ಲರೂ ಋಗ್ವೇದ ಸಂಹಿತೆಗಳನ್ನು ಪ್ರವರ್ತಿಸಿದ ಬಹ್ವೃಚರು. 

ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ನಾಲ್ಕನೆಯ ಅಧ್ಯಾಯ ಮುಗಿಯಿತು. 

*********


ವೇದವ್ಯಾಸರೆಂಬ ಅತಿ ದೊಡ್ಡ ಅದ್ಭುತ. -
        ಹಿಮಾಲಯಪರ್ವತ ಅನೇಕ ಅಚ್ಚರಿಗಳ ಆಗರ. ವಿವಿಧ ದೇವತೆಗಳ, ಋಷಿಗಳ ಆವಾಸಸ್ಥಾನ. ಘೋರಕಲಿಯುಗದಲ್ಲೂ ಕಲಿಪ್ರವೇಶವಿಲ್ಲದ ಒಂದು ಸ್ಥಳ ಹಿಮಾಲಯದಲ್ಲಿ ಇದೆ. ಅದುವೇ ವ್ಯಾಸಾಶ್ರಮ. ಉತ್ತರಬದರಿ ಎಂದೂ ಇದಕ್ಕೆ ಹೆಸರು. ಪ್ರಸ್ತುತ ಭಕ್ತರು ಯಾತ್ರೆ ಹೋಗುವ ಬದರಿ ಅತಿಪೂಜ್ಯ ಸ್ಥಳವಾಗಿದ್ದರೂ ಅದು ವ್ಯಾಸಾಶ್ರಮ ಅಲ್ಲ. ವ್ಯಾಸಾಶ್ರಮ ಮನುಷ್ಯರಿಗೆ ಅಗಮ್ಯ. ಎಂತಹಾ ಉಪಗ್ರಹಕ್ಕೂ ಅದರ ಚಿತ್ರ ಸೆರೆಸಿಕ್ಕುವುದಿಲ್ಲ. ಇಂತಹಾ ವ್ಯಾಸಾಶ್ರಮದ ವೈಶಿಷ್ಟ್ಯಕ್ಕೆ ಕಾರಣ ವೇದವ್ಯಾಸರು ಅಲ್ಲಿರುವುದು. ಇಂದಿಗೂ ಋಷಿಗಳಿಗೆ ಜ್ಞಾನೋಪದೇಶ ಮಾಡುತ್ತಿದ್ದಾರೆ. ಉತ್ತರಬದರಿಯೇ ವ್ಯಾಸರಿಗೆ  ಅಯನ ಅಂದರೆ ವಾಸಸ್ಥಾನ ಆಗಿರುವುದರಿಂದ ಅವರಿಗೆ ಬಾದರಾಯಣ ಎಂಬ ಹೆಸರಿದೆ. 
      ಲೋಕದಲ್ಲಿ ಸರಸ್ವತಿ ಅಥವಾ ಶಾರದೆ ವಿದ್ಯಾದೇವತೆ ಎಂದು ಪ್ರಸಿದ್ಧಿ. ಶಾರದೆ ವಿದ್ಯಾದೇವತೆ ಹೌದಾದರೂ ಮುಖ್ಯವಾಗಿ ವಿದ್ಯಾನಿಯಾಮಕ ವೇದವ್ಯಾಸರೇ. ಅವರ ಅನುಗ್ರಹದಿಂದ ಶಾರದೆ ವಿದ್ಯಾದೇವತೆ ಎನಿಸಿದ್ದಾಳೆ. ಕಾಶ್ಮೀರದಲ್ಲಿರುವ ಶಾರದಾಸನ್ನಿಧಾನವನ್ನು ಬಹುಮುಖ್ಯವಿದ್ಯಾದೇವತಾಸ್ಥಾನ ಎಂದು ಕೆಲವರು ತಿಳಿದಿದ್ದಾರೆ.  ಅದು ವಿದ್ಯಾದೇವತಾಸ್ಥಾನ ಹೌದು. ಆದರೆ ಅದಕ್ಕಿಂತಲೂ ಮುಖ್ಯವಾದ ವಿದ್ಯಾದೇವತಾಸ್ಥಾನ ಉತ್ತರಬದರಿ. ಯಾಕೆಂದರೆ ನಮಗೆಲ್ಲಾ ಪರಮಪೂಜ್ಯಳಾದ ಶಾರದಾದೇವಿಯಿಂದ ಅನಂತಪಟ್ಟು ಶ್ರೇಷ್ಠರು ವೇದವ್ಯಾಸರು. ಇದು ಅರ್ಥವಾಗಬೇಕಾದರೆ ವೇದವ್ಯಾಸರ ಕೆಲವು ಮಹಿಮೆಗಳನ್ನು ತಿಳಿಯಬೇಕಾಗುತ್ತದೆ.
         ಗೌತಮಋಷಿಯ ಶಾಪದಿಂದ ಲೋಕದಲ್ಲಿ ವೈದಿಕಜ್ಞಾನ ಭ್ರಷ್ಟವಾಯಿತು. ಆ ಸಮಯದಲ್ಲಿ ಬ್ರಹ್ಮಾದಿದೇವತೆಗಳು ನಾರಾಯಣನಲ್ಲಿ ಪ್ರಾರ್ಥಿಸಿದಾಗ ಭಗವಂತ ವೇದವ್ಯಾಸರೂಪದಿಂದ ಅವತಾರ ಮಾಡಿದ. ಕೆಲವರು ವೇದವ್ಯಾಸರನ್ನು ಅಪಾಂತರತಮ ಎಂಬ ಒಬ್ಬ ಸಾಮಾನ್ಯ ಋಷಿ ಎಂದು ಅವಮಾನ ಮಾಡಿದ್ದಾರೆ. ಆದರೆ "ಕೋಹ್ಯನ್ಯ: ಪುಂಡರೀಕಾಕ್ಷಾತ್ ಮಹಾಭಾರತಕೃದ್ಭವೇತ್" ಎಂಬ ಮಹಾಭಾರತದ ವಚನ ಮುಂತಾದ ಪ್ರಮಾಣಗಳು ಅವರು ಹರಿಯ ಅವತಾರ ಎಂದು ತಿಳಿಸುತ್ತವೆ. ಆದರೆ ವೇದವ್ಯಾಸರ ಬಗ್ಗೆ ಸಾಮಾನ್ಯರಿಗೆ ಅಜ್ಞಾನ ಸಹಜ. ಯಾಕೆಂದರೆ ಭಗವಂತನ ಅವತಾರರಲ್ಲದ ವೇದವ್ಯಾಸರೂ ಇದ್ದಾರೆ. ( ಅವರಲ್ಲಿ ಅಪಾಂತರತಮರು ಒಬ್ಬರು ) ಪ್ರತಿ ದ್ವಾಪರಯುಗದಲ್ಲಿ ವೇದವ್ಯಾಸಾವತಾರ ಆಗುತ್ತದೆ. ಕೆಲವು ದ್ವಾಪರಗಳಲ್ಲಿ ಹರಿಯೇ ವೇದವ್ಯಾಸರಾಗಿ ಬರುತ್ತಾರೆ. ಕೆಲವು ದ್ವಾಪರಗಳಲ್ಲಿ ಅನ್ಯರು ಬರುತ್ತಾರೆ. ಉದಾಹರಣೆಗೆ ಮುಂದಿನ ದ್ವಾಪರದಲ್ಲಿ ಅಶ್ವತ್ಥಾಮ ಆಚಾರ್ಯರು ವ್ಯಾಸರೆನಿಸುತ್ತಾರೆ. ಆದರೆ ಈ ಹಿಂದಿನ ದ್ವಾಪರದಲ್ಲಿ ಬಂದ ಬ್ರಹ್ಮಸೂತ್ರಾದಿಗಳನ್ನು ರಚಿಸಿ ಇಂದಿಗೂ ಉತ್ತರಬದರಿಯಲ್ಲಿರುವ ವೇದವ್ಯಾಸರು ಸಾಕ್ಷಾತ್ ಹರಿಯ ಅವತಾರ.
       ಮುಖ್ಯವಾಗಿ ವಿದ್ಯಾನಿಯಾಮಕ ಹರಿಯ ಅಂಶರಾದ  ವೇದವ್ಯಾಸರೇ ಎಂಬುದಕ್ಕೆ ಈ ವಿಚಾರಗಳು ಕಾರಣಗಳಾಗಿವೆ.
1) ವೇದಜ್ಞಾನದಿಂದ ಲೋಕವು ಭ್ರಷ್ಟವಾದ ಸಮಯದಲ್ಲಿ ಅವತರಿಸಿ ಅನಂತವಾದ ವೇದರಾಶಿಗಳಿಂದ ಕಾಲಕ್ಕೆ ಬೇಕಾದಷ್ಟು ವೇದಗಳನ್ನು ಕೊಟ್ಟದ್ದು. (ವೇದಗಳು ಮೊದಲೇ ನಾಲ್ಕು ವಿಭಾಗವಾಗಿ ಇದ್ದವು. ಆದರೆ ಅನಂತ ಋಗ್ವೇದದಿಂದ ಹತ್ತು ಮಂಡಲಗಳುಳ್ಳ ಋಗ್ವೇದದ ಉಪದೇಶ ಈ ಪ್ರಕಾರ ವೇದವಿಭಜನೆ ಆಯಿತು.) ಈ ಅನಂತವೇದದ ಜ್ಞಾನ ಇರುವ ಇನ್ನೊಂದು ದೇವತೆ ಇಲ್ಲ.
2) ವೇದಗಳ ಅರ್ಥನಿರ್ಣಯಕ್ಕೆ ಬ್ರಹ್ಮಸೂತ್ರಗಳನ್ನು ರಚಿಸಿದರು. ಈ ಬ್ರಹ್ಮಸೂತ್ರಗಳಿಗೆ ಸಾಟಿಯಾದ ಇನ್ನೊಂದು ಪ್ರಮಾಣ ಗ್ರಂಥ ಲೋಕದಲ್ಲಿ ಇಲ್ಲ. ಬ್ರಹ್ಮಸೂತ್ರ ವೇದಮೂಲವಾದ್ದರಿಂದ ವೇದವು ಅದನ್ನು ವಿದ್ಯಾಸ್ಥಾನಗಳಲ್ಲಿ ಒಂದು ಎಂದು ಹೇಳಿದ್ದರಿಂದ ಅದು ಪ್ರಮಾಣ. ಆದರೆ ವೇದಗಳ ಮುಖ್ಯಾರ್ಥಜ್ಞಾನಕ್ಕೆ ಬ್ರಹ್ಮಸೂತ್ರ ಅವಶ್ಯ. ವೇದವು ಪರವಿದ್ಯೆ ಎಂದು ಅನ್ನಿಸುವುದೇ ಬ್ರಹ್ಮಸೂತ್ರದ ಆಧಾರದಲ್ಲಿ ಅರ್ಥ ಮಾಡಿದಾಗ. ಹಾಗಾಗಿ ಮುಖ್ಯವಾಗಿ ಪರವಿದ್ಯೆ ಬ್ರಹ್ಮಸೂತ್ರವೇ. ಅನಂತ ವೇದಗಳ ಪರಮಮುಖ್ಯ ಅರ್ಥವನ್ನು 564 ( ಸೂತ್ರಸಂಖ್ಯೆಯಲ್ಲಿ ಎರಡು ಮೂರು ಸಂಖ್ಯೆಗಳ ವ್ಯತ್ಯಾಸದಲ್ಲಿ ಭಿನ್ನಾಭಿಪ್ರಾಯ ಇರಬಹುದು ) ಬ್ರಹ್ಮಸೂತ್ರಗಳಲ್ಲಿ ಸೆರೆಹಿಡಿಯುವುದೆಂದರೆ ಅದು ಸಾಮಾನ್ಯ ಕಾರ್ಯವೇ? ಯಾವ ದೇವತೆಯೂ ಇಂತಹಾ ಕಾರ್ಯಕ್ಕೆ ಶಕ್ತವಾಗುವುದಿಲ್ಲ.
3) ಹದಿನೆಂಟು ಮಹಾಪುರಾಣಗಳ ಮತ್ತು ಹದಿನೆಂಟು ಉಪಪುರಾಣಗಳ ರಚನೆ ವೇದವ್ಯಾಸರಿಂದ ಆಯಿತು. ಅಲ್ಲದೆ ಮಹಾಭಾರತವೆಂಬ ಇತಿಹಾಸ ಗ್ರಂಥದ ರಚನೆಯೂ ಆಗಿದೆ. (ಇನ್ನೆರಡು ಇತಿಹಾಸಗಳು ಇವೆ. ಅವು ಪಂಚರಾತ್ರ ಮತ್ತು ರಾಮಾಯಣ. ಪಂಚರಾತ್ರದ ಕರ್ತೃ ನಾರಾಯಣ. ರಾಮಾಯಣದ ಕರ್ತೃ ವಾಲ್ಮೀಕಿ ಆದರೂ ಅದಕ್ಕೆ ಆಧಾರವಾದ 100 ಕೋಟಿ ಶ್ಲೋಕಗಳುಳ್ಳ ಮೂಲರಾಮಾಯಣದ ಕರ್ತೃ ಹರಿಯೇ. ಹೀಗೆ ಇತಿಹಾಸ ಪುರಾಣಗಳು ಭಗವಂತನಿಂದಲೇ ರಚಿತವಾದವು.) ಬ್ರಹ್ಮಸೂತ್ರಗಳು ವೇದಗಳ ಪರಮಮುಖ್ಯ ಅರ್ಥವನ್ನೇ ವಿಶೇಷವಾಗಿ ತಿಳಿಸಲು ರಚಿತವಾಗಿದ್ದರೆ ಪುರಾಣಗಳು ಮತ್ತು ಇತಿಹಾಸ ಪರಮಮುಖ್ಯ ಮತ್ತು ಸಾಮಾನ್ಯ ಅರ್ಥಗಳನ್ನು ತಿಳಿಸುವುದಕ್ಕಾಗಿ ರಚಿತವಾದವು. 
4) ವ್ಯಾಸಸ್ಮೃತಿ ಮುಂತಾದ ಲೆಕ್ಕವಿಲ್ಲದಷ್ಟು ಗ್ರಂಥಗಳು ವೇದವ್ಯಾಸರಿಂದ ರಚಿತವಾಗಿದ್ದವು. ಬ್ರಹ್ಮತರ್ಕ ಎಂಬ 50,00,000 ಶ್ಲೋಕಾತ್ಮಕ ವಾದ ಗ್ರಂಥ ವ್ಯಾಸರಿಂದ ರಚನೆಯಾಗಿತ್ತು. ಪ್ರತಿವೇದಭಾಗದ ವಿಸ್ತಾರವಾದ ಅರ್ಥನಿರ್ಣಯವಿರುವ ಗ್ರಂಥಗಳೂ ರಚಿತವಾಗಿದ್ದವು. ಆದರೆ ಅವು ಇಂದು ಸಿಗುತ್ತಿಲ್ಲ.
   ಹೀಗೆ ಅನಂತವೇದಗಳಿಂದ ವೇದವಿಭಾಗ ಮಾಡಿ ಅದರ ಅರ್ಥನಿರ್ಣಯಕ್ಕಾಗಿ ಇಷ್ಟೊಂದು ಗ್ರಂಥರಚನೆ ವೇದವ್ಯಾಸರಿಂದ ಆಗಿದೆ. ಒಂದೊಂದು ಪುರಾಣದಲ್ಲೂ ಸಾವಿರಗಟ್ಟಲೆ ಶ್ಲೋಕಗಳಿವೆ. ಭಾಗವತದಲ್ಲಿ 18,000, ಸ್ಕಾನ್ದಪುರಾಣದಲ್ಲಿ 70,000 ಕ್ಕೂ ಹೆಚ್ಚು ಶ್ಲೋಕಗಳು ಹೀಗೆ ಸಾಗುತ್ತದೆ ಪಟ್ಟಿ. 
      ಒಟ್ಟಾರೆ ಹೇಳುವುದಾದರೆ ಜ್ಞಾನಕ್ಕೆ ಮೂಲವಾದದ್ದು ವೇದ. ಆ ವೇದದ ವಿಭಾಗ ಮತ್ತು ಅದರ ಅರ್ಥನಿರ್ಣಯಕ್ಕಾಗಿ ಗ್ರಂಥರಚನೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಇನ್ನೊಂದು ದೇವತೆಯಾಗಲೀ ಋಷಿಯಾಗಲೀ ಮಾಡಿದ್ದಿಲ್ಲ. ಹಾಗಾಗಿ ಮುಖ್ಯವಿದ್ಯಾದೇವತೆ ವೇದವ್ಯಾಸರೇ. ಅವರ ಅನುಗ್ರಹದಿಂದ ಇತರರು ವಿದ್ಯಾದೇವತೆಗಳಾಗಿದ್ದಾರೆ. ಇಂದಿಗೂ ಅವತಾರಸಮಾಪ್ತಿ ಮಾಡದೇ ಉತ್ತರಬದರಿಯ ವ್ಯಾಸಾಶ್ರಮದಲ್ಲಿ ಋಷಿಗಳಿಗೆ ಜ್ಞಾನೋಪದೇಶ ಮಾಡುತ್ತಿರುವ ವೇದವ್ಯಾಸರು ವೈದಿಕರಿಗೆ ತುಂಬಾ ಮುಖ್ಯರು. ಅವರನ್ನು ಕಡೆಗಣಿಸಿ ಶಾರದೆಯನ್ನೇ ಮೆರೆಸುವುದು, ಉತ್ತರಬದರಿಯ ವ್ಯಾಸಾಶ್ರಮವನ್ನು ಕಡೆಗಣಿಸಿ ಕಾಶ್ಮೀರದ ಶಾರದಾಕ್ಷೇತ್ರವನ್ನೇ ವಿದ್ಯೆಯ ಅಧಿಕೃತ ಕ್ಷೇತ್ರವೆಂಬಂತೆ ಹೇಳುವುದು ಪರಮವೈದಿಕರಿಗೆ ತಕ್ಕುದಾದುದಲ್ಲ. ಅಭಿಪ್ರಾಯವಿಷ್ಟೇ. ಹರಿಯ ಅಂಶರಾದ ವೇದವ್ಯಾಸರಿಗೆ ಸಮಾನರಾದ ಜ್ಞಾನಿಗಳಿಲ್ಲ. ಉತ್ತರಬದರಿಯ ವ್ಯಾಸಾಶ್ರಮಕ್ಕೆ ಸಮಾನವಾದ ವಿದ್ಯಾಕ್ಷೇತ್ರವಿಲ್ಲ.
  - ಮಹೇಂದ್ರ ಸೋಮಯಾಜೀ.
******

year 2021 July 24
On ocassion of “Ashada Shudha Poornima” H.H. Shri Swamiji performed “Mrithika Sangrahanam”. The holy Mrithika(Soil) is collected from Tulasi Vana(Garden) located between the Mutt and the Tungabhadra River. H.H. Shri Swamiji himself went to Tulasi Vana in a procession to collect Mrithika from the bottom of the Tulasi plant. This Mrithika was brought in Suvarna Pallaki to Shri Raghavendra Swamy Sannidana and will be placed on the top of Brindavana.



***

ವ್ಯಾಸರಿಗೆ ನಾಮಾಂತರಗಳು

ವ್ಯಾಸ-ಎಂದರೆ ವಿ + ಆಸ. ಸಂಕೀರ್ಣವಾಗಿದ್ದ ವೇದರಾಶಿಯನ್ನು ವಿಂಗಡಿಸಿದ ಮಹಾತ್ಮರಿಗೆ ವೇದ ವ್ಯಾಸ ಎಂದು ಹೆಸರಾಯಿತು. ವೇದ ಪರ್ವತವನ್ನು ಋಗ್ವದ, ಯಜುರ್ವೇದ, ಸಾಮವೇದ, ಅಥರ್ವವೇದ ಗಳೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ ವೇದಜ್ಞರೆಂದರೆ ವೇದವ್ಯಾಸರು. ವ್ಯಾಸರಿಗೆ ಅನೇಕ ಹೆಸರುಗಳಿವೆ. ಅವುಗಳಲ್ಲಿ ಕೆಲವನ್ನು ಈಗ ನೋಡೋಣ:

1. ಕೃಷ್ಣದೈಪಾಯನ: ದ್ವೀಪಮ್ ಅಯನಂ ಯಸ್ಯ ಸಃ ದೈಪಾಯನಃ; ಯಮುನಾ ನದಿಯ ದ್ವೀಪದಲ್ಲಿ ಹುಟ್ಟಿದ್ದರಿಂದ ವೇದವ್ಯಾಸರಿಗೆ ದೈಪಾಯನ-ಎಂದು ಹೆಸರಾಯಿತು. ಬಣ್ಣದಲ್ಲಿ ಕಪ್ಪಾಗಿದ್ದದ್ದರಿಂದ ಇವರು ಕೃಷ್ಣ ದೈಪಾಯನರಾದರು.

2. ಪಾರಾಶರ್ಯ: ತಪೋಮೂರ್ತಿಗಳೂ ಸಕಲಶಾಸ್ತ್ರಾರ್ಥಸಾರಜ್ಞರೂ ಆದ ಪರಾಶರಮಹರ್ಷಿಗಳ ಸುಪುತ್ರರಾದ್ದರಿಂದ (ಪರಾಶರಸ್ಯ ಅಪತ್ಯಂ ಪುಮಾನ್) ವ್ಯಾಸರು ಪಾರಾಶರ್ಯ ಎಂದೇ ಪ್ರಸಿದ್ಧರಾದರು.

3  ಬಾದರಾಯಣ: ಬದರಿಕಾಶ್ರಮದಲ್ಲಿ ವಾಸವಾಗಿದ್ದು, ಬದರವೃಕ್ಷದ
ಬುಡದಲ್ಲಿ ತಪಸ್ಸನ್ನು ಆಚರಿಸುತ್ತಾ ಇದ್ದದ್ದರಿಂದ ಈ ವೇದವ್ಯಾಸರಿಗೆ ಬಾದರಾಯಣ-ಎಂಬ ಹೆಸರೂ ಬಂದಿರುತ್ತದೆ.
 4. ಬ್ರಹ್ಮನಿಧಿ: ಬ್ರಹ್ಮವೆಂದರೆ ಬೃಹತ್ತಾದ ಜ್ಞಾನರಾಶಿ, ಅದೇ ವೇದಗಳು.

ವೇದವ್ಯಾಸರು ವೇದನಿಧಿ, ಎಂದರೆ ವೇದಗಳ ಗಣಿ. ವೇದಗಳ ಸಾಕಾರ ಸ್ವರೂಪರೇ ವೇದವ್ಯಾಸರು. ವೇದವ್ಯಾಸರ ಸ್ಮರಣೆಯೆಂದರೆ ವೇದಗಳ ಸ್ಮರಣೆಯೇ. ವ್ಯಾಸಪೂಜೆಯೆಂದರೆ ವೇದಪೂಜೆಯೇ

5  ವಾಸಿಷ್ಟ: ಬ್ರಹ್ಮಮಾನಸಪುತ್ರರಾದ ವಸಿಷ್ಟಮಹರ್ಷಿಗಳ ವಂಶದಲ್ಲಿ
ಅವತರಿಸಿದ್ದರಿಂದ ಮಹಾತ್ಮರಾದ ವೇದವ್ಯಾಸರು ವಾಸಿಷ್ಠರಾದರು.

 6. ಸತ್ಯವತೀಸುತ: ಸತ್ಯವತಿಯ ಪುತ್ರರೇ ವೇದವ್ಯಾಸರು. ಮಾತೃಭಕ್ತಿಯ ಮಹತ್ತ್ವವನ್ನು ಜಗತ್ತಿಗೆ ತೋರಿಸಿದ ಮಹಾತ್ಮರೇ ವೇದವ್ಯಾಸರು. 
7. ತಪೋನಿಧಿ: ತಪಸ್ಸಿನ ಸಾಕಾರಮೂರ್ತಿಯೇ ವೇದವ್ಯಾಸರು. ಜ್ಞಾನರೂಪವಾದ ತಪಸ್ಸಿನಲ್ಲಿ ಮಗ್ನರಾದವರಿವರು!
***

ವೇದವ್ಯಾಸ ಜಯಂತಿ.ವೈಶಾಖ ಶುದ್ಧ. ತ್ರಯೋದಶಿ ಲೇಖನ. ಮಧುಸೂದನ ಕಲಿಭಟ್.ಧಾರವಾಡ.


ಶುದ್ಧ ತ್ರಯೋದಶಿ ವೇದವ್ಯಾಸ ದೇವರ ಜನ್ಮದಿನ. ವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಅವರ ತಾಯಿ, ತಂದೆ, ಇತಿಹಾಸ ತಿಳಿದಷ್ಟು ಬರೆಯಲು ಈ ಅಲ್ಪಮತಿ ವಾಚಕರ ಅನುಮತಿ ಪಡೆಯುವೆ. ವ್ಯಾಸರಾಜ ತಾಯಿ ಸತ್ಯವತೀದೇವಿ. ತಂದೆ ಪರಾಶರ ಋಷಿಗಳು.ಇಬ್ಬರೂ ಭಗವಂತನೇ ತಮ್ಮ ಮಗನಾಗಿ ಜನಿಸಬೇಕೆಂದು ತಾಪವನ್ನು ಆಚರಿಸಿದ್ದರು.   ಸತ್ಯವತಿ ಪೂರ್ವದಲ್ಲಿ ಅಗ್ನಿಶ್ವಾತ್ತ ಎಂಬ ಪಿತೃ ದೇವತೆಯ ಮಾನಸ ಕನ್ಯೆ.  ತಂದೆಯನ್ನು ಹುಡುಕಿಕೊಬುದು ಹೋಗುವಾಗ ಎದುರಿಗೆ ತಂದೆ ಬಂದರೂ  ತಿಳಿಯದೇ, ಅಮಾವಾಸು ಎಂಬ ಗಂಧರ್ವ ಅದ್ರಿಕೆ ಎಂಬ ಅಪ್ಸರೆ ಕೂಡ ಮಧುಚಂದ್ರಕ್ಕೆ ಹೊರಟಾಗ ಅಮಾವಾಸುವನ್ನು ನೀನೇ ನನ್ನ ತಂದೆ ಎಂದು ಆಲಿಂಗನ ಮಾಡಿಕೊಂಡಳು. ಈ ಘಟನೆಯಿಂದ ಅವಳು ತಂದೆಗೆ ದ್ರೋಹ ಮಾಡಿದಂತಾಗಿ  ಕೆಳಗೆ ಬೀಳತೊಡಗಿ ರಕ್ಷಿಸಿ ಎಂದು ಕೂಗುತ್ತಿದ್ದಳು.  ಆಗ ಅವಳ ನಿಜವಾದ ತಂದೆ ಅಗ್ನಿಶ್ವಾತ್ತರು ಮುಂದೆ ಬಂದು ತಾವೇ ಅವಳ ತಂದೆ ಎಂದು ಹೇಳಿದರು. ಆದರೆ ಅವಳಿಗೇ ಬಂದ ದೋಷ ಪ್ರಕಾರ ಅವಳು ಭೂಮಿಯಲ್ಲಿ ಅವತರಿಸಬೇಕಾಯಿತು.  ಅಮಾವಾಸು ಉಪರಿಚರ  ಎಂಬ ರಾಜನಾಗಿ ಜನಿಸಿದನು. ಅವನ ಹೆಂಡತಿ ಒಂದು ಹೆಣ್ಣು ಮೀನವಾಗಿ ಜನಿಸಿದರು. 
ಒಂದು ದಿನ ಉಪರಿಚರ ರಾಜ ಬೇಟೆಗೆಂದು ದೂರ ಅಡವಿಯಲ್ಲಿ ಬರುವನು. ಆಗ ಆತನಿಗೆ ಋತುಮತಿಯಾದ ರಾಣಿಯ ನೆನಪಾಗಿ ವಿಕಾರಗೊಂಡು ವೀರ್ಯ ಸ್ಖಲನ ಆಗುವದು.  ರಾಜ ವೀರ್ಯವನ್ನು ಒಂದು ದೊನ್ನೆಯಲ್ಲಿ ಹಾಕಿ ಒಂದು ಪಕ್ಷಿಗೆ ಇದನ್ನು ಜೋಪಾನದಿಂದ ನನ್ನ ರಾಣಿಗೆ ಮುಟ್ಟಿಸು ಎಂದು ಹೇಳಿ ಕಳಿಸಿದನು. ಪಕ್ಷಿ ಹಾರುವಾಗ ಮಾರ್ಗ ಮಧ್ಯದಲ್ಲಿ ನದಿ ಬಂದು ಇನ್ನೊಂದು ಪಕ್ಷಿ ದೊನ್ನೆಯನ್ನು ಆಹಾರ ವೆಂದು ಕಸಿದುಕೊಂಡಿತು.  ವೀರ್ಯ ನದಿಯಲ್ಲಿ ಬಿದ್ದು  ಅದ್ರಿಕೆ ಎಂಬ ಅಪ್ಸರೆಯೇ ಮೀನಿನ ರೂಪದಲ್ಲಿ ಇದ್ದು ಅದನ್ನು ನುಂಗಿದಳು.  
ಇದರ ಪರಿಣಾಮ ಮುಂದೆ ಕುತೂಹಲಕಾರಿ ಕಥೆಯಾಗಿದೆ. ಮೀನಿನ ಗರ್ಭದಲ್ಲಿ ಒಂದು ಗಂಡು ಒಂದು ಹೆಣ್ಣು ಭ್ರೂಣ ಬೆಳೆದವು.  ದಿನಕಳೆದಂತೆ ಮೀನುಗಾರರು ಈ ಮೀನನ್ನು ಬಲೆಯಲ್ಲಿ ಹಿಡಿದು ಹೊಟ್ಟೆಯಲ್ಲಿ ಇದ್ದ ಮಕ್ಕಳನ್ನು ರಾಜ ಲಕ್ಷಣ ಕಂಡು ಬಂದಿದ್ದರಿಂದ ತಂದು ಉಪರಿಚರ  ಮಹಾರಾಜನಿಗೆ ಒಪ್ಪಿಸಿದರು. ರಾಜ ಅವಳಿ ಮಕ್ಕಳನ್ನು ನೋಡಿ ರಾಜಲಕ್ಷಣ ಕಂಡು ತನ್ನ ಮಕ್ಕಳು ಎಂದು ತಿಳಿದು ಗಂಡು ಮಗುವನ್ನು ತಾನು ಇಟ್ಟುಕೊಂಡು, ಹೆಣ್ಣು ಮಗುವನ್ನು ಮೀನುಗಾರರ ರಾಜ ದಾಶರಾಜನಿಗೆ ಕೊಡುತ್ತಾನೆ.  
ಇತ್ತ ದಾಶರಾಜ ಮಗುವಿಗೆ ಸತ್ಯವತಿ ಎಂದುನಾಮಕರಣ ಮಾಡಿ ನದಿ ದಾಟಲು ಅಂಬಿಗ ವಿದ್ಯೆ ಕಳಿಸುವನು.ಮೀನಿನ ಗರ್ಭದಿಂದ ಬಂದಿದ್ದರಿಂದ ಅವಳದೇಹ ಮೀನಿನ ವಾಸನೆಯಿಂದ ಕೂಡಿದ್ದರಿಂದ ಮತ್ಸ್ಯಗಂಧಿ ಎಂದೂ, ಒಂದು ಯೋಜನ ವರೆಗೆ ವಾಸನೆ ಹರಡುತ್ತಿದ್ದರಿಂದ ಯೋಜನಗಂಧಿ ಎಂಬ ಹೆಸರು ಅವಳಿಗೆ  ಬಂದವು. ಒಂದು ಬಾರಿ ಮಹರ್ಷಿ ಪರಾಶರರು ನದಿ ದಾಟಲು ದೋಣಿಯಲ್ಲಿ ಕುಳಿತರು.  ಸತ್ಯವತಿಯ ಸೌಂದರ್ಯಕ್ಕೆ ಮಾರುಹೋಗಿ ದರ್ಭೆಯಿಂದ ದೋಣಿಯಲ್ಲಿ ಒಂದು ಆವರಣ ನಿರ್ಮಿಸಿ ಅವಳಿಗೆ ಗರ್ಭದಾನ ಮಾಡಿದರು. ಈ ಘಟನೆ ನಡೆದಿದ್ದು ಯಮುನಾ ನದಿಯ ದ್ವೀಪದಲ್ಲಿ. ಪರಾಶರರು ಸತ್ಯವತಿಗೆ ನಿನಗೆ ಕನ್ಯತ್ವ ಕಡೆತನಕ ಇರಲಿಯೆಂದು ಹೇಳಿ ತಪಸ್ಸಿಗೆ ಹೋದರು.  ಅದೇಕ್ಷಣ ಅವಳ ಎದುರು 32ಲಕ್ಷಣಗಳುಳ್ಳ ಮುನಿ ವೇದವ್ಯಾಸರು ನಿಂತರು.  ತಾಯಿ ನೀನು   ಮತ್ತು ಪರಾಶರರು ನನ್ನ ಈ ಅವತಾರಕ್ಕೆ ನಿಮಿತ್ತ ಮಾತ್ರ ನನಗೆ ಗರ್ಭವಾಸವಿಲ್ಲ. ನಿನಗೆ ತಂದೆ ಹೇಳಿದಂತೆ ಕನ್ಯತ್ವ ಇರುವದು. ನೀನು ಒಬ್ಬ ಚಕ್ರವರ್ತಿಯ ಮದುವೆಯಾಗಿ ಮುಂಬರುವ ಕಥೆಗೆ ನಂದಿ ಹಾಡುವೆ ಎಂದೂ ಆಶೀರ್ವದಿಸಿ, ನೀನು ಮುಂದೆ ಯಾವದೇ ತರಹದ ಸಮಸ್ಯೆ ಬಂದಾಗ ನನ್ನನ್ನು ಸ್ಮರಿಸು ನಾನು ಸಮಸ್ಯೆ ಬಗೆಹರಿಸುವೆ ಎಂದೂ ಹೇಳಿ ಬದರಿಕಾಶ್ರಮಕ್ಕೆ ಹೋದರು. ಇದು ವ್ಯಾಸಮಹರ್ಷಿಗಳ ಜನ್ಮ ರಹಸ್ಯ.

ವೇದವ್ಯಾಸರು ಬದರಿಗೆ ಬಂದು ಶ್ರೀ ಸಾಮಾನ್ಯರಿಗೆ ಅನುಕೂಲ ವಾಗಲೆಂದು ಅನಂತ ವೇದಗಳನ್ನು ವಿಂಗಡಿಸಿ ಚತುರ್ವೇದಗಳನ್ನು ರಚಿಸಿದರು. ಹದಿನೆಂಟು ಪುರಾಣ, ಉಪ ಪುರಾಣ ಉಪನಿಷತ್ತು, ಬ್ರಹ್ಮಸೂತ್ರಗಳನ್ನು ಬರೆದರಲ್ಲದೆ ಮಹಾಭಾರತ ಬರೆದು ಪಂಚಮ ವೇದ ಎಂದು  ಕರೆದರು. ಆದರೆ ವ್ಯಾಸರಿಗೆ ಇದು ತೃಪ್ತಿಯಾಗದೆ ನಾರದರ ಪ್ರಾರ್ಥನೆ ನಿಮಿತ್ತ ವಾಗಿ ಇಟ್ಟುಕೊಂಡು ಪುರಾಣಗಳ ರಾಜನೆನಿಸಿದ ಭಾಗವತ ಪುರಾಣ ಗ್ರಂಥ ರಚಿಸಿ ಹರಿಸರ್ವೋತ್ತಮ ತತ್ವವನ್ನು ಪ್ರಚಾರ ಮಾಡಿದರು. 
 ವ್ಯಾಸರು ವೈಶಾಖ, ಕಾರ್ತೀಕ, ಮಾಘ ಮತ್ತು ಆಷಾಢ ಮಾಸದಲ್ಲಿ ವೇದ ವಿಂಗಡಣೆ ಮಾಡಿದ್ದರಿಂದ ಈ ತಿಂಗಳ ಪೌರ್ಣಿಮೆ ದಿನ ವ್ಯಾಸಪೂರ್ಣಿಮೆ ಎಂದೂ ಆಚರಿಸಿ ಮನೆಯಲ್ಲಿ ಇದ್ದ ಪುರಾಣ ತತ್ವ ಗ್ರಂಥ ಪೂಜೆ ಮಾಡುವ ಸಂಸ್ಕಾರ ಬಂದಿದೆ. ವ್ಯಾಸರು ಶ್ರೀಹರಿಯ ಅವತಾರ. ಆಚಾರ್ಯ ಮಧ್ವರಿಗೆ ಉತ್ತರಬದರಿಗೆ ಬರಲು ಹೇಳಿ  ಅವರಿಗೆ  ತಾತ್ಪರ್ಯ ನಿರ್ಣಯ, ಭಾಷ್ಯ ಗಳನ್ನು ಬರೆಯಲು ಮಾರ್ಗದರ್ಶನ ಮಾಡಿದ ಮಹಾನುಭಾವರು.  ಅದರಂತೆ ಶ್ರೀ ವಾದಿರಾಜರಿಗೆ ದರ್ಶನವಿತ್ತು ಅವರ ತಾಯಿಯ ಹರಕೆಗಾಗಿ ಮಹಾಭಾರತಕ್ಕೆ ಅರ್ಥ ಬರೆಸಿ ಲಕ್ಷಾಭರಣ ಎಂದು ಗ್ರಂಥ ಹೆಸರು ಹೇಳಿದರು. ಮಹಾಭಾರತಕಾಲದಲ್ಲಿ ಪಾಂಡವರಿಗೆ ಸಂಕಟ ಕಾಲ ಬಂದಾಗ ತಕ್ಷಣ ಬಂದು ಸಮಸ್ಯೆ ಬಗೆಹರಿಸಿ ಮುಂದಾಗುವ ಘಟನೆಗಳನ್ನು ಹೇಳಿ ಧೈರ್ಯ ಹೇಳಿದ್ದಾರೆ. ಸಂಭವಾಮಿ ಯುಗೇ ಯುಗೇ.ಎಂಬ ಮಾತಿನಂತೆ ವಿಭೂತಿ ಪುರುಷರು, ದೇವಾಂಶ ಸಂಭೂತರಲ್ಲಿ ಒಂದಂಶ ದಿಂದ ಇದ್ದು ಧರ್ಮ ಸ್ಥಾಪನೆ ಮಾಡಿಸಿದ ಮಹಾನುಭಾವರನ್ನು ನಾವು ಎಷ್ಟು ಸ್ಮರಿಸಿದರು ಕಡಿಮೆ ಅದರಲ್ಲೂ ಈ ಕಲಿಕಾಲದಲ್ಲಿ ಅವರ ಸ್ಮರಣ ಮಾತ್ರೇಣ ಮುಕ್ತಿ ಎಂಬ ವಾಕ್ಯ ನೂರಕ್ಕೆ .ನೂರು ಸತ್ಯ ಎನ್ನುವದರಲ್ಲಿ ಸಂಶಯವಿಲ್ಲ. ವ್ಯಾಸರ ಭಿನ್ನಾ ಭಿನ್ನ ಹಯಗ್ರೀವರೂಪಿ ಎಲ್ಲರಿಗೂ ಸತ್ಯ ಜ್ಞಾನ ಕೊಡಲೆಂದು ಪ್ರಾರ್ಥಿಸುವೆ.
by ಮಧುಸೂದನ ಕಲಿಭಟ್
***



No comments:

Post a Comment