SEARCH HERE

Tuesday, 1 January 2019

ಗೋಪೀಚಂದನಮುದ್ರಾಧಾರಣವಿಧಿ gopichandana dharana vidhi


#ಗೋಪೀಚಂದನಮುದ್ರಾಧಾರಣವಿಧಿ 

ಆಚಮನ, ಪ್ರಾಣಾಯಾಮ ಮಾಡಿ ದೇಶ ಕಾಲೋಚ್ಚಾರಣೆ ಮಾಡಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೇರಣ್ಯ ಶ್ರೀ ವಿಷ್ಣು ಪ್ರೀತ್ಯರ್ಥಂ ಗೋಪಿಚಂದನ ತಿಲಕಾಯುಧ ತುಲಸೀಕಾಷ್ಟ ಮಾಲಾದಿ ಧಾರಣಂ ಕರಿಷ್ಯೇ ಎಂದು ಸಂಕಲ್ಪ ಮಾಡಬೇಕು ಮತ್ತು ಗೋಪಿಚಂದನಕ್ಕೆ ಪ್ರಾರ್ಥನೆ ಸಲ್ಲಿಸ ಬೇಕು.

ಗೋಪಿಚಂದನ ಪಾಪಘ್ನ ವಿಷ್ಣು ದೇಹ ಸಮುದ್ಭವ

ಚಕ್ರಾಂತಿತ ನಮಸ್ತುಭ್ಯಂ ಧಾರಣಾನ್ಮುಕ್ತಿಧೋ ಭವ.

ಗಾಯತ್ರಿ ಮಂತ್ರದಿಂದ ಎಡಗೈಯಲ್ಲಿ ನೀರನ್ನು ಹಾಕಿಕೊಂಡು

” ಓಂ ನಮೋನಾರಾಯಣಾಯ” ಎಂಬ ಮಂತ್ರದಿಂದ ಗೋಪಿಚಂದನವನ್ನು ತೇಯಬೇಕು. ಅಲ್ಲಿ ಮೂಲ ಮಂತ್ರವನ್ನು ತುಳಸೀದಳದಿಂದ ಬರೆಯಬೇಕು. ನಾರಾಯಣ ಮುದ್ರೆಯನ್ನು ಅದರಲ್ಲಿ ಮೂಡಿಸಬೇಕು. ಶುಕ್ಲ ಪಕ್ಷದಲ್ಲಿ ಕೇಶವಾದಿ ದ್ವಾದಶ ನಾಮಗಳಿಂದಲು, ಕೃಷ್ಣ ಪಕ್ಷದಲ್ಲಿ ಸಂಕರ್ಷಣನಾದಿ ನಾಮಗಳಿಂದಲು ಲಲಾಟವೇ ಮೊದಲಾದ 12 ಸ್ಥಾನ ಗಳಲ್ಲಿ ನಾಮಗಳನ್ನು ಧರಿಸಬೇಕು.

ಗೋಪಿಚಂದನ ಪಾಪಘ್ನ ವಿಷ್ಣು ದೇಹ ಸಮುದ್ಭವ

ಚಕ್ರಾಂತಿತ ನಮಸ್ತುಭ್ಯಂ ಧಾರಣಾನ್ಮುಕ್ತಿಧೋ ಭವ.

ಗಾಯತ್ರಿ ಮಂತ್ರದಿಂದ ಎಡಗೈಯಲ್ಲಿ ನೀರನ್ನು ಹಾಕಿಕೊಂಡು

ದಿನ ನಿತ್ಯದಲ್ಲಿ ಗೋಪಿಚಂದನದಿಂದ ನಾಮಗಳನ್ನು ಹಣೆಗೆ ದಂಡಾಕಾರವಾಗಿ ಧರಿಸಬೇಕು. ಎದೆಗೆ ಕಮಲಾಕಾರವಾಗಿ ಧರಿಸಿ , ಭುಜಗಳಿಗೆ ವೇಣು(ಬಿದಿರು) ಪತ್ರಾಕಾರದಂತೆ ಧರಿಸಬೇಕು. ಮಾಧ್ವರು (ವೈಷ್ಣವರು) ಪ್ರತಿದಿನ ಮುಧ್ರಾಧಾರಣೆ ಮಾಡಿಕೊಂಡು.ಶ್ರೀಹರಿಗುರುಗಳ ಕೃಪೆಗೆ ಪಾತ್ರರಾಗ ಬೇಕು.

1.ಚಕ್ರ ಮುದ್ರೆ:

ಬಲ ಕೆನ್ನೆಯಲ್ಲಿ ಒಂದು, ಕುತ್ತಿಗೆ ಎಡ ಬದಿಯಲ್ಲಿ ಒಂದು, ಹೊಟ್ಟೆಯ ಮಧ್ಯದಲ್ಲಿ ಐದು, ಬಲಬದಿ ಮೂರು, ಬಲಭುಜದ ನಾಮದ ಮೇಲೆ ಎರಡು, ಎಡಭುಜದ ನಾಮದ ಕೆಳಗೆ ಒಂದು, ಕುತ್ತಿಗೆಯ ಮಧ್ಯ ಒಂದು, ಕುತ್ತಿಗೆ ಬಲಬದಿ ಒಂದು.

2. ಶಂಖ ಮುದ್ರೆ:

ಎಡ ಭುಜದ ನಾಮದ ಮೇಲೆ ಎರಡು , ಬಲಭುಜದ ನಾಮದ ಕೆಳಗೆ ಒಂದು, ಎಡಕೆನ್ನೆಯಲ್ಲಿ ಒಂದು, ಹೊಟ್ಟೆಯ ಎಡ ಬದಿಯಲ್ಲಿ ಎರಡು, ಏಡ ಎದೆಬದಿ ಮೂರು.

3.ಗದಾ ಮುದ್ರೆ:

ಹಣೆಗೆ ಎರಡು, ಎಡ ಹೊಟ್ಟೆ ಒಂದು, ಎಡ ಎದೆ ಒಂದು, ಎಡಭುಜದ ನಾಮದ ಕೆಳಗೆ ಎರಡು.

4.ಪದ್ಮ ಮುದ್ರೆ:

ಎದೆ ಮಧ್ಯ ಒಂದು, ಬಲ ಹೊಟ್ಟೆ ಒಂದು, ಬಲ ಎದೆ ಒಂದು ,ಬಲಭುಜದ ನಾಮದ ಕೆಳಗೆ ಎರಡು.

5. ಶ್ರೀಮನ್ನಾರಯಣ ಮುದ್ರೆ:

‘ಸರ್ವತ ‘ ಧರಿಸಿ ಕೊಳ್ಳ ಬೇಕು.

ಶ್ರೀಮನ್ನಾರಯಣನ ಆಯುಧಗಳಾದ ಚಕ್ರ ಮತ್ತು ಗದೆ ಧರಿಸಿರುವುದರಿಂದ ಅವುಗಳ ದರ್ಶನ ಮಾತ್ರದಿಂದ ಶತ್ರುಗಳು ನಾಶವಾಗುತ್ತಾರೆ. ಇನ್ನು ಶಂಖ ಮತ್ತು ಪದ್ಮ ಗಳಲ್ಲಿ ಮಹಾಲಕ್ಷೀ ಸಾನಿದ್ಯವಿರುತ್ತದೆ. ಈ ಮುದ್ರಾಧಾರಣೆಯಿಂದ ಮಹಾಲಕ್ಷೀ ಪ್ರಸನ್ನಳಾಗಿ ಐಶ್ವರ್ಯವಂತ ರಾಗುತ್ತಾರೆ. ಶ್ರೀಮನ್ನಾರಯಣ ಮುದ್ರೆಯಲ್ಲಿ

ಶ್ರೀ ಮನ್ನಾರಾಯಣ ಮಹಾ ಮಂತ್ರವಿರುವುದರಿಂದ ಭೂತ, ಪ್ರೇತ, ಪಿಶಾಚ, ಯಕ್ಷಗಳು ಹತ್ತಿರ ಸುಳಿಯಲಾರವು. ವ್ಯಾಧಿಗಳು, ಜ್ವರ, ಶತ್ರು ಭಯನಾಶ ವಾಗುತ್ತದೆ. ಹಾಗಯೇ ಪ್ರತಿನಿತ್ಯ ಅಂಗಾರ ಅಕ್ಷತೆಯನ್ನು ಧಾರಣೆ ಮಾಡಿಕೊಂಡು ಶ್ರೀಮನ್ನಾರಯಣನ ಹಾಗು ಗುರುಗಳ ಪರಿಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕು. ಏಕಾದಶಿಯಲ್ಲಿ ಮಾತ್ರ ಅಕ್ಷತೆ ನಿಷಿದ್ಧ. ಗೋಪಿಚಂದನ ಸಹಿತ ಮದ್ರಾಧಾರಣೆ ಪ್ರತಿನಿತ್ಯ ಧರಿಸ ಬೇಕು.

ಗದೆಯಲ್ಲಿ ‘ನಿಧನ’ ಎಂಬ ಹೆಸರಿನಿಂದ, ನಾಮ ಮುದ್ರೆಯಲ್ಲಿ ‘ಉಧ್ಗೀತ’ ಎಂಬ ಹೆಸರಿನಲ್ಲಿ ಪರಮಾತ್ಮನಿರುವನು.....
ಪದ್ಮ ಪುರಾಣ

*******

The Gopichandana is closely interlinked with Krishna, Arjuna and his beloved Dwaraka. The Gopichandana was first found in a small pond which today is called Gopi Talab. This pond is 21 kms away from Dwaraka in Gujarat.

The Mahabharata war had just ended and the Pandavas had emerged victorious. Arjuna was puffed up with pride and thought he had a major role to play in the victory. Krishnarealised that he had to help Arjuna get rid of his “dhurankara”. He asked Arjuna to escort his queens to Bet Dwaraka. While on the way, Arjuna and the queens of Krishna were attacked by archers and warrior of the Kaba community. Though Arjuna put up a fierce fight, he was defeated. The queens, who were shocked at the turn of events, jumped into this pond and drowned. Since then, this pond is called Gopi Talab. The mud in and around the talab is called Gopichandana. It is due to this incident that the phrase “Kabe Arjuna luntiyo, wohi danush wohi ban” became famous. This chandana is believed to have miraculous and curative powers. Locals say it cures almost all types of skin diseases. Brahmins use the Gopichandana to adorn 12 parts of their body before commencing Sandhavandana.  When one applies gopichandana, it is believed to set into motion, the process of purifying a body. Once adorned, the gopichandana protects its wearer from all evil influences, mishaps and  diseases. It also soothes the body and mind.  The Garga Samhita, (Canto Six, Chapter 15) gives us a beautiful description of the gopichandana and its effects. It compares the adornment of Gopichandana, with bathing in the Ganga. The daily use of  Gopichandana is akin to bathing in all the sacred rivers and water tanks. This task is so sacred that it equals the performance of  a thousand Aswamedha Yajnas and a hundred Rajasuya Yajnas.

The Samhita says Gopichandana is twice as sacred as the mud of the Ganga and ten times more sacred than the dust of Panchavati-tirtha. It is equal to the dust of Vrindavana, the place of Krishna. It says if a person adorns himself with Gopichandana twice a day, he goes to Gokula, the abode of Lord Krishna. Even Yama, the God of Death cannot touch such a person. The Gopichandana is so powerful that it can wash away the sins of a person. The Samhita relates a story of a cruel king to illustrate this point. Even though the king committed many sins, it was washed away when his body came in contact with the Gopichandana from Dwaraka which had accidentally fallen on the place.

********



1 comment:

  1. ಸ್ವಾಮಿ ನಮಸ್ಕಾರ ಚಕ್ರಮುದ್ರೆ ಕುತ್ತಿಗಯ ಎಡಬದಿ ಅಲ್ಲ ಬಲಬದಿ ಆಗಬೇಕು ಕ್ಷಮಿಸಿ

    ReplyDelete