SEARCH HERE

Friday 20 December 2019

ಶ್ರಾದ್ಧ shraddha shradha shradda shraadha



why shraddha explained here



ಶ್ರಾದ್ಧದ ಮಹಿಮೆ ಮತ್ತು ವಿಧಾನ
📌ಶ್ರಾದ್ಧಗಳು ಒಟ್ಟು 96 ಎಂಬುದಾಗಿ ಹೇಳಲಾಗಿದೆ. ಆವು ಯಾವೆಂದರೆ ?
⭕2) ಸಂಕ್ರಮಣ ಶ್ರಾದ್ಧಗಳು 12.
⭕1) ಅಮಾವಾಸ್ಯ ಶ್ರಾದ್ಧಗಳು 12.
⭕3) ಯುಗಾದಿ ಶ್ರಾದ್ಧಗಳು 4.
⭕4) ವ್ಯೆದೃತಿ ಶ್ರಾದ್ಧಗಳು 13.
( ಮಾಘ ಅಮಾವಾಸ್ಯೆ, ಭಾದ್ರಪದ ಕೃಷ್ಣ ತ್ರಯೋದಶಿ, ವ್ಯೆಶಾಖ ಶುಕ್ಲ ತೃತೀಯಾ, ಕಾರ್ತಿಕ ಶುಕ್ಲ ನವಮಿ. )
⭕5) ವ್ಯತಿಪಾತ ಶ್ರಾದ್ಧಗಳು 13.
⭕8) ಮನ್ವಾದಿ ಶ್ರಾದ್ಧಗಳು 14.
⭕6) ಮಹಾಲಯ ಶ್ರಾದ್ಧಗಳು 16.
⭕7) ಅಷ್ಟಕ ಶ್ರಾದ್ಧಗಳು 12.
( ಹಿಂದಿನ ದಿನದ ಶ್ರಾದ್ಧ - 4. ಮರುದಿನದ ಶ್ರಾದ್ಧ 4 ಸೇರಿ)
ಹೀಗೆ ಒಟ್ಟು ಶ್ರಾದ್ಧಗಳು 96.
⭕4) ವೃದ್ಧಿ ಶ್ರಾದ್ಧ.
📌ಶ್ರಾದ್ಧಗಳನ್ನು 12 ಪ್ರಕಾರವಾಗಿದೆಯೆಂದು ವಿಶ್ವಾಮಿತ್ರ ಋಷಿಗಳು ಹೇಳಿರುತ್ತಾರೆ.
ಅವುಗಳು ಹೀಗಿವೆ. ⭕1) ನಿತ್ಯಶ್ರಾದ್ಧ. ⭕2) ನ್ಯೆಮಿತ್ತಿಕ ಶ್ರಾದ್ಧ.
⭕7) ಗೋಷ್ಠ್ಯ ಶ್ರಾದ್ಧ.
⭕3) ಕಾಮ್ಯ ಶ್ರಾದ್ಧ. ⭕5) ಸಪಿಂಡೀಕರಣ ಶ್ರಾದ್ಧ. ⭕6) ಪಾರ್ವಣಶ್ರಾದ್ಧ
📌 ಕರ್ಮಭೂಮಿ ಎನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ " ಶ್ರಾದ್ಧ " ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ.
⭕8) ಶುದ್ಧಿ ಶ್ರಾದ್ಧ.
⭕9) ಕರ್ಮಾಂಗ ಶ್ರಾದ್ಧ.
⭕10) ದ್ಯೆವಿಕ ಶ್ರಾದ್ಧ.
⭕11) ಯಾತ್ರಾ ಶ್ರಾದ್ಧ.

⭕12) ಪುಷ್ಟಿ ಶ್ರಾದ್ಧ.
📌ಇದಕ್ಕೆ " ಪಿತೃಯಜ್ಞ " ವೆಂದು ಕರೆಯುವದುಂಟು.
ಶ್ರಾದ್ಧ ಎಂದರೇನು ?
ಪಿತೃನುದ್ದಿಶ್ಯ ವಿಪ್ರೇಭ್ಯೋ ದತ್ತಂ ಶ್ರಾದ್ಧಮುದಾಹೃತಮ್
📌ನಮ್ಮ ಜನ್ಮಕ್ಕೆಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ ನಮ್ಮ ಉದ್ದಾರಕ್ಕೇ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ -ತಾಯಿ ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನಜಲಾದಿಗಳನ್ನು ಕೊಡುವ ಪಿತೃಕಾರ್ಯಕ್ಕೆ " ಶ್ರಾದ್ಧ " ವೆಂದು ಹೆಸರು.
ಪಿತೃಗಳನ್ನುದ್ದೇಶಿಸಿ ಬ್ರಾಹ್ಮಣರಿಗೆ ಕೊಟ್ಟದ್ದು " ಶ್ರಾದ್ಧ " ವೆಂದು ಕರೆಯಲ್ಪಡುತ್ತದೆ. ಪಿತ್ರುದ್ದೇಶೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ಬ್ರಾಹ್ಮಣ್ಯೆರ್ಯತ್ಸ್ವೀಕರಣಂ ತತ್ ಶ್ರಾದ್ಧಮ್
ನಾವು ಕೊಟ್ಟ ಅನ್ನವನ್ನು ಅಂದರೆ ಅದರ ಸಾರ ಭಾಗವನ್ನು ವಸು, ರುದ್ರ, ಆದಿತ್ಯ ತದಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಹುಟ್ಟಿ, ಎಲ್ಲಿ ಇರುವರೋ, ಅಲ್ಲಿ ಅವರಿಗೆ ಆಹಾರರೂಪವಾಗಿ ಸೂಕ್ತರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ ಭಗವಂತ.
ಪಿತೃಗಳನ್ನುದ್ದೇಶಿಸಿ ಶ್ರದ್ದೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ ಶ್ರಾದ್ಧವೆಂದು ಹೆಸರು.
📌ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯಗಳನ್ನು ತನ್ನ ಪಿತೃಗಳನ್ನುದ್ದೇಶಿಸಿ ಕೊಡುವ " ಪಿಂಡಪ್ರದಾನ " ಕ್ರಿಯೆಗೆ ಶ್ರಾದ್ಧವೆಂದು ಹೇಳುತ್ತಾರೆ.
📌ಇಲ್ಲಿ ಕೆಲವರು ಪ್ರಶ್ನೆ ಕೇಳುವುದುಂಟು - ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ, ಪಿಂಡಪ್ರದಾನದಿಂದ ಅವರು ಹೇಗೆ ತೃಪ್ತರಾಗುತ್ತಾರೆ ? ನಾವು ಇಲ್ಲಿ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟದ್ದು ಪಿತೃಗಳಿಗೆ ಹೇಗೆ ತಲುಪುತ್ತದೆ ?
📌 ಉತ್ತರ. ನ ಸಂತಿ ಪಿತರಶ್ಚೇತಿ ಕೃತ್ವಾ ಮನಸಿ ಯೋ ನರಃ !
📌ಯಾವ ಮನುಷ್ಯರು ಪಿತೃಗಳ ದೇಹವನ್ನು ಸುಟ್ಟು ಭಸ್ಮ ಮಾಡಿದಮೇಲೆ ಅವರಿಗೆ ಹೊಟ್ಟೇಇಲ್ಲ ಎಂಬ ಭಾವನೆಯಿಂದ ಪಿತೃಗಳ ಶ್ರಾದ್ಧಾದಿಗಳನ್ನು ಯಾರು ಮಾಡುವುದಿಲ್ಲವೋ, ಇಂಥವರ ಪಿತೃಗಳು ಸಿಟ್ಟಾಗಿ ಈ ನಾಸ್ತಿಕರ ರಕ್ತವನ್ನು ಹೀರುತ್ತಾರೆ.
ಶ್ರಾದ್ಧಂ ನ ಕುರುತೇ ತತ್ರ ತಸ್ಯ ರಕ್ತಂ ಪಿಬಂತಿ ತೇ !!
************

ನಿಯಮೇನ ಪಿತೃ ತರ್ಪಣ ಕೂಡಲೇ ಬೇಕು. ಯಾರು ಮರೆಯಬೇಡಿ.

ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ - ಋಷಿ - ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು ಕೊಡಬೇಕು. ತರ್ಪಣ " ಎರಡು ವಿಧ ".
೧. ಜಲ ತರ್ಪಣ  ೨. ತಿಲ ತರ್ಪಣ

ಜಲ ತರ್ಪಣವನ್ನು ಪ್ರತಿನಿತ್ಯ " ಬ್ರಹ್ಮಯಜ್ಞ " ದಲ್ಲಿ ಕೊಡಬೇಕು.

ದರ್ಶ ( ಅಮಾವಾಸ್ಯೆ ) ಪರ್ವಕಾಲ, ಸೂರ್ಯ - ಚಂದ್ರ ಗ್ರಹಣ, ಉತ್ತರ - ದಕ್ಷಿಣಾಯನ - ಮಾತಾ ಪಿತೃಗಳ ಶ್ರಾದ್ಧಗಳಲ್ಲಿ - ಮಹಾಲಯ ಇತ್ಯಾದಿ " ಷಣ್ಣವತಿ " ಅಂದರೆ ೯೬ ಪರ್ವ ಕಾಲಗಳಲ್ಲಿ ಪಿತೃಗಳಿಗೆ " ತಿಲ ತರ್ಪಣ " ಗಳನ್ನು ಕೊಡಬೇಕು. ಹೀಗೆ ತರ್ಪಣ ಕೊಡುವುದರಿಂದ ದೇವ - ಋಷಿ - ಗುರು - ಪಿತೃಗಳು ಸಂತೃಪ್ತರಾಗಿ ಆಶೀರ್ವದಿಸುವರು. ಅದರಿಂದ ಸಮಸ್ತ ಮಂಗಲವಾಗುವುದು!

ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣವನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು

ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು.

ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ " ತುಳಸೀದಳ " ವನ್ನು ಸಿಕ್ಕಿಸಿ ಕೊಂದಾದರೂ ತರ್ಪಣವನ್ನು ಕೊಡಬಹುದು.

೧. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.

೨. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.

೩. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ " ಯಜ್ಞಪ್ಪ " ಎಂದು ಗಂಡಸರಿಗೂ; " ಯಜ್ಞಮ್ಮ " ಎಂದು ಹೆಂಗಸರಿಗೂ ಹೇಳಬೇಕು.

೪. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ " ಕಾಶ್ಯಪ " ಗೋತ್ರ ಎಂದು ಹೇಳಬೇಕು.

೫. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲವನ್ನಿಟ್ಟುಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ ( ಹೆಬ್ಬಟ್ಟಿನ ) ಮತ್ತು ತೋರು ಬೆರಳಿನ ಬುಡಗಳ ಮಧ್ಯದಿಂದ ಮೂಸಲಾ ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.

೬. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.
***

" ಮಾಸಿಕಗಳ ಫಲ " ವ್ಯಕ್ತಿಯು ಮೃತನಾದ ಕೂಡಲೇ ಪ್ರೇತ ಎನಿಸುತ್ತಾನೆ. ಪ್ರೇತತ್ವ ನಿವೃತ್ತಿಗಾಗಿ...ನವ ಶ್ರಾದ್ಧಗಳನ್ನೂ, ಮತ್ತು ೧೬ ಮಾಸಿಕಗಳನ್ನೂ ಮಾಡಬೇಕು. ಈ ದಶಾಹ ವಿಧಿಯಲ್ಲಿ ಯಾವುದೇ ಕಾಲಕ್ಕೂ ನಿಷಿದ್ಧ ಪದಾರ್ಥಗಳನ್ನು ಪಿಂಡದಲ್ಲಿ ಮಿಶ್ರ ಮಾಡಬಾರದು. ಒಂದುವೇಳೆ ನಿಷಿದ್ಧ ಪದಾರ್ಥಗಳನ್ನು ಉಪಯೋಗಿಸಿದಲ್ಲಿ ಯುಗ ಪರ್ಯಂತ ಪ್ರೇತ ಜನ್ಮದಿಂದ ಮುಕ್ತಿ ಹೊಂದದೆ ಪ್ರೇತ ಜನ್ಮದಲ್ಲೇ ಕೊಳೆಯುತ್ತದೆ. ಅಲ್ಲದೆ ಪ್ರಾಯಶ್ಚಿತ್ತವೇ ಇಲ್ಲ!! " ಶ್ರಾದ್ಧ ಕರ್ಮದಲ್ಲಿ ನಿಷಿದ್ಧ ಪದಾರ್ಥಗಳು " ಶ್ರೀ ವೇದವ್ಯಾಸ ಪ್ರಣೀತ ಶ್ರೀಮನ್ಮಹಾಭಾರತದ ಅನುಶಾಸನ ಪರ್ವದಲ್ಲಿ.. ಅಶ್ರಾದ್ಧೇ ಯಾನಿ ಧಾನ್ಯಾನಿ ಕ್ರೋಧವಾ: ಪುಲಕಾಸ್ತಾಥಾ । ಹಿಂಗುದ್ರವ್ಯೆಷು ಪಾಲಾಂಡುಂ ವೃಂತಕ ಲಸುನಂ ತಥಾ ।। ಸೌಭಾಂಜನ: ಕೋವಿದಾರಸ್ತಥಾ ಗೃ೦ಜನಕಾದಯಃ । ಕೂಷ್ಮಾ೦ಡಜಾತ್ಯಲಾಬು೦ ಚ ಕೃಷ್ಣ೦ ಲವಣಮೇ ಚ ।। ಇಂಗು - ಈರುಳ್ಳಿ - ಬೆಳ್ಳುಳ್ಳಿ - ಬದನೇಕಾಯಿ - ನುಗ್ಗೆಕಾಯಿ - ಕೆಂಚನಾಳದ ಕಾಯಿ - ಗಜ್ಜರಿ - ಬೂದುಗುಂಬಳ, ಸೋರೆಕಾಯಿ, - ಕರಿ ಉಪ್ಪು ಮುಂತಾದವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದೆಂದು ಅಖಿಲಾಂಡಕೋಟಿ ಬ್ರಹ್ಮಾಂಡನಾಯಕರಾದ ಶ್ರೀ ಭಗವಾನ್ ವೇದವ್ಯಾಸದೇವರು ಹೇಳಿದ್ದಾರೆ. ನವ ಶ್ರಾದ್ಧ ವೆಂದರೆ... ಪ್ರಥಮ - ತೃತೀಯ - ಪಂಚಮ - ಸಪ್ತಮ - ನವಮ ಹೀಗೆ ೧೦ ದಿವಸಗಳಲ್ಲಿ ಮಾಡುವ ವಿಷಮ ಶ್ರಾದ್ಧಗಳಿಗೆ " ನವ ಶ್ರಾದ್ಧ " ಎನ್ನುತ್ತಾರೆ. ನವ ಶ್ರಾದ್ಧ ಮಾಡದೇ ಪ್ರೇತತ್ವ ನಿವೃತ್ತಿಯಾಗುವುದಿಲ್ಲ. ನವ ಶ್ರಾದ್ಧ; ತ್ರಿಪಕ್ಷ ಶ್ರಾದ್ಧ; ಮಾಸಿಕ; ಷಣ್ಮಾಸಿಕಾ ಇವು ಮಾಡದ ಪುತ್ರನ ಪಿತೃಗಳು ಅಧೋಗತಿ ಹೊಂದುವರು. 10 ದಿನಗಳಲ್ಲಿ ಮಾಡುವ ಪ್ರೇತ ಶ್ರಾದ್ಧದಲ್ಲಿ ಪಿತೃ ಶಬ್ದ ಹೇಳದೆ " ಪ್ರೇತ " ಯೆಂದು ಮಂತ್ರವಿಲ್ಲದೆ ಎಳ್ಳು ಹಾಕಬೇಕು. ಪ್ರೇತ ಶಬ್ದದಿಂದ " ಪಾಣಿ ಹೋಮ ಮಾಡಬೇಕು. ಪ್ರೇತ ಸ್ಥಾನದಲ್ಲಿ ಬಳಿ ನೀಡಿ ಅಸ್ಥಿಗಳನ್ನು ಹಾಲಿನಿಂದ ತೊಳೆದು ಬಿಳಿ ವಸ್ತ್ರದಿಂದ ಸುತ್ತಿ ಮಡಿಕೆಯಲ್ಲಿ ಹಾಕಿ ಭೂಮಿಯಲ್ಲಿ ಸ್ಥಾಪಿಸಬೇಕು. ನಂತರ ೧೦ ದಿನದೊಳಗೆ ಗಂಗೆಯಲ್ಲಿ ಹಾಕಿದರೆ ಗಂಗೆಯಲ್ಲಿ ಮರಣವಾದಂತೆ. ಯಾರ ಆಸ್ತಿಯು ಗಂಗೆಯಲ್ಲಿ ಬೀಳುವದೋ ಅವನಿಗೆ ಸ್ವರ್ಗಲೋಕ ಲಭಿಸುತ್ತದೆ. ಮಾಸಿಕ 16 ಇರುತ್ತದೆ. ಆದ್ಯ - ಊನ - ತ್ರೈ ಪಕ್ಷಿಕ, ದ್ವಿತೀಯಾ - ತೃತೀಯಾ - ಚತುರ್ಥ - ಪಂಚಮ - ಊನ ಷಣ್ಮಾಸಿಕ - ಷಷ್ಟಮ - ಸಪ್ತಮ - ಅಷ್ಟಮ - ನವಮ - ದಶಮ - ಏಕಾದಶ - ದ್ವಾದಶ - ಊನಾಬ್ಧಿಕ - ಅಬ್ಧಿ ವಿಮೋಖ - ಆಬ್ಧಿಕ. 11ನೇ ದಿನ ಏಕೋದಿಷ್ಟ ಶ್ರಾದ್ಧ ಮಾಡಬೇಕು. ಈ ಶ್ರಾದ್ಧದಿಂದ ಪ್ರೇತನಿಗೆ ಯಮ ಮಾರ್ಗದಲ್ಲಿ ನಡೆಯುವ ಶಕ್ತಿ ಬರುತ್ತದೆ. ಪ್ರೇತನು ಪರವಿತ್ತಾಪಹಾರ - ಪರ ಕಲತ್ರ ಅಪಹಾರ ಮಾಡಿದ್ದರೆ " ನವ ಶ್ರಾದ್ಧ " ದಿಂದ ಪರಿಹೃತವಾಗುತ್ತದೆ. 12ನೇ ದಿನದ ಶ್ರಾದ್ಧದಿಂದ " ಯಂತ್ರ ನರಕ " ದಿಂದ ಬಿಡುಗಡೆ ಹೊಂದುತ್ತದೆ. ಮಾಸಿಕ ಶ್ರಾದ್ಧ ಮಾಡುವುದರಿಂದ " ಸೂರ್ಮಿ " ಎಂಬ ನರಕದಿಂದ ಪಾರಾಗುವನು. ( ಸೂರ್ಮಿ ನರಕ ಅಂದರೆ ಚೆನ್ನಾಗಿ ಕಾದಿರುವ ತಾಮ್ರದ ಸ್ತ್ರೀ ಬೊಂಬೆಯನ್ನು ಆಲಂಗಿಸುತ್ತಾ ಕಾದ ಮಂಚದ ಮೇಲೆ ಮಲಗಬೇಕು ). ತ್ರೈಪಕ್ಷಿಕ ಶ್ರಾದ್ಧದಿಂದ " ಸಾರಮೇಯಾದನ " ಎಂಬ ನರಕದಿಂದ ಪಾರಾಗುವನು. ( ಈ ನರಕದಲ್ಲಿ ಕಬ್ಬಿಣದಂತೆ ಗಟ್ಟಿಯಾಗಿ ಕೋರೆ ಹಲ್ಲುಗಳಿರುವ " ನಾಯಿ " ಗಳು ಪ್ರೇತನ ಪೃಷ್ಠ ಮಾಂಸವನ್ನೇ ಅಪೇಕ್ಷಿಸಿ ಕಿತ್ತು ತಿನ್ನುತ್ತದೆ ). 2ನೇ ಮಾಸಿಕ ಶ್ರಾದ್ಧದಿಂದ " ಲೋಹಚಂಚು ಕಾಗೆ " ಗಳಿಂದ ಕಾಟವಿರುವುದಿಲ್ಲ. 3ನೇ ಮಾಸಿಕ ಶ್ರಾದ್ಧದಿಂದ " ಶಾಲ್ಮಲೀ " ಮೊದಲಾದ ನರಕದಿಂದ ಪಾರು ಮಾಡುತ್ತದೆ. 4ನೇ ಮಾಸಿಕ ಶ್ರಾದ್ಧದಿಂದ " ರೌರವ ನರಕ " ದಿಂದ ಮುಕ್ತರಾಗುತ್ತಾರೆ. 5ನೇ ಮಾಸಿಕ ಶ್ರಾದ್ಧದಿಂದ " ಕುಂಭೀಪಾಕ " ನರಕ ಪರಿಹಾರ. ಊನಷಾಣ್ಮಾಸಿಕದಂದು ಗೋದಾನ ಮಾಡಬೇಕು. ಇದರಿಂದ ವೈತರಣೀ ನದಿ ದಾಟಲು ಸುಲಭವಾಗುವದು. 6ನೇ ಮಾಸಿಕ ಶ್ರಾದ್ಧದಿಂದ " ವೈತರಣೀ " ಯಿಂದ ಬಿಡುಗಡೆ. 7ನೇ ಮಾಸಿಕ ಶ್ರಾದ್ಧ " ಸಂವರ್ತಕ ನರಕ " ದಿಂದ ಪಾರು ಮಾಡುತ್ತದೆ. 8ನೇ ಮಾಸಿಕ ಶ್ರಾದ್ಧ " ಸಂದಂಶ " ನರಕದಿಂದ ಪಾರು ಮಾಡುತ್ತದೆ. 9ನೇ ಮಾಸಿಕ ಶ್ರಾದ್ಧ " ಅಗ್ನಿಕೂಟ " ಎಂಬ ನರಕದಿಂದ ಉದ್ಧಾರ ಮಾಡುತ್ತದೆ. ಗುರು - ತಂದೆ - ತಾಯಿ - ಅನ್ನ ನೀಡಿದ ಸ್ವಾಮಿ ಇವರುಗಳಿಗೆ ದ್ರೋಹ ಮಾಡಿದವರು ಉರಿಯುತ್ತಿರುವ ಕೆಂಡ ರಾಶಿಗಳಲ್ಲಿ ಮುಳುಗುತ್ತಾರೆ. 10ನೇ ಮಾಸಿಕ ಶ್ರಾದ್ಧ ಮಾಡುವುದರಿಂದ ಇದಕ್ಕೆ ಸ್ವಲ್ಪ ತೃಪ್ತಿ. ದೊಡ್ಡವರು - ಸ್ವಾಮಿಗಳು ಬಂದಾಗ ಅವರಿಗೆ ಸಿಗದೇ ತಲೆ ಮರೆಸಿಕೊಳ್ಳುವ ವ್ಯಕ್ತಿಗಳು ಕಾದಿರುವ ಮರಳಿನಿಂದ ತುಂಬಿರುವ ನರಕದಲ್ಲಿ ಬಿದ್ದು ಸುತ್ತು ಬೆಂದು ಹೋಗುತ್ತಾರೆ. 12ನೇ ಮಾಸಿಕ ಶ್ರಾದ್ಧದಿಂದ ಇದಕ್ಕೆ ಮುಕ್ತಿ. ಸಪಿಂಡೀ ಕರಣವಾಗುವ ವರೆಗೂ ಪ್ರೇತತ್ವ ಹೋಗುವುದಿಲ್ಲ " ಯಾವತ್ ಸಪಿಂಡೀತಾ ನೈವಾ ತಾವತ್ ಪ್ರೇತಃ ಸ ತಿಷ್ಠತಿ " ಧರ್ಮಿಷ್ಠರಾಗಿದ್ದರೂ ಸಪಿಂಡೀ ಆಗದೆ ಪ್ರೇತತ್ವ ತೊಲಗದು " ಅಪಿ ಧರ್ಮ ಸಮೋಪೇತಃ ತಪಸ್ಯಾಪಿ ಸಮನ್ವಿತಃ " ವಿಶೇಷ ವಿಚಾರ : ಮೃತನಾಗಿ ಪ್ರೇತತ್ವವನ್ನು ಹೊಂದಿದ ಚೇತನನೂ ಮೊದಲನೆಯ ದಿನ ಸ್ಥೂಲ ದೇಹವನ್ನು ಬಿಟ್ಟು ಕೇವಲ ಸೂಕ್ಷ್ಮ ದೇಹದಿಂದ ಕೂಡಿದವನಾಗಿ ಮೊದಲಿನ ೧೦ ದಿನಗಳಲ್ಲಿ ಕೊಡಲ್ಪಟ್ಟ ಪಿಂಡ ಬಲಿಗಳಿಂದ ಉತ್ಪನ್ನವಾದ ಪೂರ್ಣವಾದ ಪ್ರೇತ ದೇಹದಿಂದ ಕೂಡಿದವನಾಗಿ ಅತ್ಯಧಿಕವಾದ ಹಸಿವಿನಿಂದ " ಏಕೋದಿಷ್ಟ ಶ್ರಾದ್ಧಾನ್ನ " ಗಳನ್ನು ಭುಂಜಿಸಿ; ೧೨ನೇ ದಿನವೂ ಕರ್ತೃವಿನ ಮನೆಯ ಬಾಗಿಲಲ್ಲೇ ನಿಂತು ಅವನಿಂದ ಕೊಡಬಹುದಾದ ಪಾತೇಯ ಶ್ರಾದ್ಧಾನ್ನವನ್ನು ಎದುರು ನೋಡುತ್ತಿರುತ್ತದೆ. 13ನೇ ದಿನದಿಂದ ಹಗಲೂ ರಾತ್ರಿ ಸೇರಿ ಪ್ರತಿದಿನವೂ 247 ಯೋಜನಗಳಷ್ಟು ನಡೆದು ವರ್ಷದ ಕೊನೆಯಲ್ಲಿ " ಶ್ರೀ ಯಮಧರ್ಮರಾಜ " ರ ಆಸ್ಥಾನವನ್ನು ಸೇರುತ್ತದೆ. ( ಮೃತ ವ್ಯಕ್ತಿಯ ವಾಯು ಶರೀರ ನಗ್ನವಾಗಿರುತ್ತದೆ ) ಇಡೀ ವರ್ಷ ಹಸಿವು ದಾಹಗಳಿರುವುದರಿಂದ ಅವುಗಳಿಗೆ ಪುತ್ರನು ವರ್ಷಾಬ್ಧಿಕ ಪರ್ಯಂತ ಒಂದು ವರ್ಷ ಕಾಲ ಪ್ರತಿನಿತ್ಯವೂ ತಪ್ಪದೆ ಪಾತ್ರೆ ಅಥವಾ ಉಡಕುಂಭ ಸಹಿತ ( ಸೋದಕುಂಭ ) ಶ್ರಾದ್ಧವನ್ನು ಮಾಡಲೇಬೇಕು. ನನ್ನನ್ನು ( ಪ್ರೇತ ) ದುಃಖದಿಂದ ಪಾರು ಮಾಡುವ ಪುತ್ರರು ಅಥವಾ ಬಂಧುಗಳಾದರೂ ಇದ್ದಾರೆಯೇ ಎಂದು ಚಿಂತಿಸುತ್ತಾ " ಯಮಪುರಿ " ಗೆ ಕಾಲಿಡುತ್ತದೆ. ಆದ್ದರಿಂದ ಮೃತ ಜೀವಿಗೆ ಪುತ್ರಾದಿಗಳು ತಪ್ಪದೆ ಶ್ರದ್ಧೆಯಿಂದ ಶ್ರಾದ್ಧಾನವನ್ನೂ - ಜಲ ದಾನಗಳನ್ನು ಕೊಟ್ಟು ತಮ್ಮ ಪಿತೃಗಳನ್ನು ತೃಪ್ತಿ ಪಡಿಸಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗುವುದು!! ಶ್ರಾದ್ಧಾಧಿಕಾರ ಗಂಡು ಮಕ್ಕಳಿಗೆ ಮಾತ್ರ! ಸಂಗ್ರಹ
***

ಪ್ರತಿ ತಿಂಗಳು ಅಮಾವಾಸ್ಯೆಯ ದಿನ ದ್ವಾದಶ ಪಿತೃಗಳಿಗೆ ( ೧೨ ಜನಕ್ಕೆ ) ತಿಲ ತರ್ಪಣ ಕೊಡಬೇಕು. ದ್ವಾದಶ ಪಿತೃಗಳು ಯಾರೆಂದರೆ...

೧. ಪಿತೃ ವರ್ಗ ( ೩ ) =
 ಪಿತೃ .. ತಂದೆಯ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿತರ್ಪಯಾಮಿ ತರ್ಪಯಾಮಿ
 
ಪಿತಾಮಹ .. ತಾತನ ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ 
ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಪ್ರಪಿತಾಮಹ.. ಮುತ್ತಾತನ ಹೆಸರು, ಗೋತ್ರ ಹೇಳಿ  ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

೨. ಮಾತೃ ವರ್ಗ ( ೩ ) = 
ಮಾತೃ .. ಕರ್ತೃವಿನ ತಾಯಿ ಹೆಸರು,ಗೋತ್ರ 
ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿತರ್ಪಯಾಮಿ ತರ್ಪಯಾಮಿ
 
ಪಿತಾಮಹಿಮ್ .. ತಂದೆಯ ತಾಯಿ..ಆಕೆಯ ಹೆಸರು, ಗೋತ್ರ,
ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ 
ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಪ್ರಪಿತಾಮಹಿ.. ತಂದೆಯ ಅಜ್ಜಿ . ಆಕೆಯ ಹೆಸರು , ಗೋತ್ರ, ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

೩. ಮಾತಾಮಹ ವರ್ಗ ( ೩ ) = 
ಮಾತಾ ಮಹ .. ತಾಯಿಯ ತಂದೆ , ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪಿತಾಮಹ .. ತಾಯಿಯ ಅಜ್ಜ, ಹೆಸರು, ಗೋತ್ರ ಹೇಳಿ ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪ್ರಪಿತಾಮಹ... ತಾಯಿಯ ಮುತ್ತಜ್ಜ .. ಹೆಸರು, ಗೋತ್ರ ಹೇಳಿ 
ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

೪. ಮಾತಾಮಹಿ ವರ್ಗ ( ೩ ) = ಮಾತಾಮಹಿ.. ತಾಯಿಯ ತಾಯಿ, ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪಿತಾಮಹಿ...ತಾಯಿಯ ಅಜ್ಜಿ, ಅವರ ಹೆಸರು, ಗೋತ್ರ ಹೇಳಿ
ರುದ್ರಾಂತರ್ಗತ ಭಾರತಿ ಮುಖ್ಯ ಪ್ರಾಣ ಅಂತರ್ಗತ  ಸಂಕರ್ಷಣಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಮಾತು: ಪ್ರಪಿತಾಮಹಿ.. ತಾಯಿಯ ಮುತ್ತಜ್ಜಿ .. ಅವಳ ಹೆಸರು, ಗೋತ್ರ ಹೇಳಿ 
ಆದಿತ್ಯಾ ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ವಾಸು ದೇವಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಪತ್ನಿಂ .. ಹೆಂಡತಿ, ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಸುತಮ್. .ಮಗ..ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಭ್ರಾತರಂ.. ಅಣ್ಣ ತಮ್ಮ , ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಪಿತೃವ್ಯಂ .. ದೊಡ್ಡಪ್ಪ,  ಚಿಕ್ಕಪ್ಪ ಅವರ ಹೆಸರು, ಗೋತ್ರ ಹೇಳಿ  ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಮಾತೃಶ್ವಸಾರಂ .. ದೊಡ್ಡಮ್ಮ, ಚಿಕ್ಕಮ್ಮ ಅವರ ಗೋತ್ರ ಹೇಳಿ 
ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ಚ್ವ ಶುರಂ .. ಹೆಣ್ಣು ಕೊಟ್ಟ ಮಾವ ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮದ್ ಗುರುಂ ..ಶಾಸ್ತ್ರವನ್ನು ಮಂತ್ರವನ್ನು ಹೇಳಿಕೊಟ್ಟ ಗುರುಗಳು . ಅವರ ಹೆಸರು, ಗೋತ್ರ ಹೇಳಿ ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಅಸ್ಮತ್ ಆಚಾರ್ಯಮ್ .. ಪುರೋಹಿತರು ಅವರ ಹೆಸರು, ಗೋತ್ರ ಹೇಳಿ 
ವಸು ಅಂತರ್ಗತ ಭಾರತಿ ಮುಖ್ಯಪ್ರಾಣ ಅಂತರ್ಗತ  ಪ್ರದ್ಯುಮ್ನಮ್ ಸ್ವಧಾ ನಮಃ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ.

ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು । ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।।ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ ।
ಯತ್ಕೃತಂತು ಮಯಾದೇವಂ ಪರಿಪೂರ್ಣ೦ ತದಸ್ತುಮೇ ।।ಎಂದು ಹೇಳಿ.. ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!

ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು.
ಸಂಗ್ರಹ.  
****

ಶ್ರಾದ್ಧ
ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨 ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ . ಅವು ೧) ಮಲಿನ ಷೋಡಶ ೨) ಮಧ್ಯಮ ಷೋಡಶ ೩) ಉತ್ತಮ ಷೋಡಶ ಎಂಬುದಾಗಿ ಮೂರು ವಿಭಾಗಗಳು . ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ| ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ|| ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ ಮಲಿನ ಷೋಡಶ ಎಂದು ಹೆಸರು . ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ| ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್|| ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್| ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ || ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ| ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ|| ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್| ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್|| ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ| ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ|| ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು ಮಧ್ಯಮ ಷೋಡಶ ಎನಿಸಿಕೊಳ್ಳುವವು . ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ | ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ || ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್| ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ || ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . ಇವುಗಳು ಉತ್ತಮ ಷೋಡಶ ಎಂದು ಕರೆಸಿಕೊಳ್ಳುವವು . ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ ಸೌಮ್ಯ ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ ಉತ್ತಮ ಷೋಡಶ ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ . ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು . ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ ....... ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ , ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ . ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ .
***

ಶ್ರಾದ್ಧಕರ್ಮದಲ್ಲಿ ಪಿತೃಗಳಿಗೆ ಪಿಂಡಮಾಧ್ಯಮದಲ್ಲಿ ಆರಾಧನೆ ಏಕೆ?"
ಶ್ರಾದ್ಧಕರ್ಮದಲ್ಲಿ ಪಿತೃಗಳಿಗೆ ಅಂದರೆ, ಪಿತೃ, ಪಿತಾಮಹ, ಪ್ರಪಿತಾಮಹರನ್ನು ಕರಿತು ಮೂರು ಪಿಂಡಗಳನ್ನು ಇಟ್ಟು ಪೂಜಿಸುವುದು ರೂಢಿಯಲ್ಲಿ ಬಂದಿದೆ.ಇದರ ಹಿನ್ನಲೆಯನ್ನು ಶ್ರೀಮನ್‍ಮಹಾಭಾರತ ಶಾಂತಿಪರ್ವದಲ್ಲಿ ತಿಳಿಸಿದ್ದಾರೆ.
ಹಿಂದೆ ನಾರದರು ದೇವಕಾರ್ಯವನ್ನು ಪೊರೈಸಿ ಪಿತೃಕಾರ್ಯದಲ್ಲಿ ತೊಡಗಿದ್ದರು ಆ ಸಮಯದಲ್ಲಿ ಅವರು ನರನಾರಾಯಣರನ್ನು ಕುರಿತು ಶ್ರಾದ್ಧದಲ್ಲಿ ಪಿಂಡಾರಾಧನೆಯ ಬಗ್ಗೆ ಪ್ರಶ್ನೆ ಕೇಳುವರು.
ನಾರದನೇ ಕೇಳು ! ಹಿಂದೆ ಗೋವಿಂದನು ನಷ್ಟವಾಗಿ ಹೋಗಿದ್ದ ಸಾಗರಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಭೂಮಿಯನ್ನು ವರಹರೂಪ ಧರಿಸಿ ಬೇಗನೆ ಮೇಲಕ್ಕೆತ್ತಿದ್ದನು.ಲೋಕಹಿತದ ಕಾರ್ಯವನ್ನು ಆರಂಭಿಸಿದ ಆ ಭಗವಂತನು ಭೂಮಿಯನ್ನು ಉದ್ಧಾರಮಾಡಿ ಸ್ವಸ್ಥಾನವನ್ನು ಸ್ಥಾಪಿಸಿದನು.ಆಗ ಸೂರ್ಯನು ಹಗಲಿನ ಮಧ್ಯ ಭಾಗಕ್ಕೆ ಬಂದು ಮಾಧ್ಯಾಹಿಕ ಕಾಲವು ಪ್ರಾಪ್ತವಾಗಲು,ವರಾಹ ರೂಪೀ ಭಗವಂತನು ತನ್ನ ಕೋರೆ ಹಲ್ಲುಗಳಿಗೆ ಮತ್ತಿಕೊಂಡಿದ್ದ ಮಣ್ಣಿನಿಂದ ಮೂರು ಪಿಂಡಗಳನ್ನು ಮಾಡಿ ನೆಲದ ಮೇಲೆ ದರ್ಭೆ ಹಾಸಿ ಅದರ ಮೇಲೆ ಮೂರು ಪಿಂಡಗಳನ್ನು ಸ್ಥಾಪಿಸಿ ತನ್ನನ್ನೇ ಉದ್ದೇಶಿಸಿ ಆ ಪಿಂಡಗಳಲ್ಲಿ ಪಿತೃಗಳನ್ನು ಆವಾಹಿಸಿ ಮಾಡಿ ಯಥಾ ವಿಧಿಯಾಗಿ ಪೂಜಿಸಿದನು.
ದೇವತೆಗಳು ಮೊದಲು ನೆಲದ ಮೇಲೆ ದರ್ಭೆಗಳನ್ನು ಹಾಸಿ ನಂತರ ಅವುಗಳ ಮೇಲೆ ಮೂರು ಪಿಂಡಗಳನ್ನು ಇಟ್ಟು ಪೂಜಿಸುತ್ತಿದ್ದುದರ ಕಾರಣವೇನು? ಪಿತೃಸಂಜ್ಞೆ ಯನ್ನು ಹೇಗೆ ಪಡೆದರು? "ಇದಕ್ಕೆ ಉತ್ತರವಾಗಿ ನರನಾರಾಯಣರು ಹೇಳುತ್ತಾರೆ" - ತ್ರೀನ್ ಪಿಂಡಾನ್ ನ್ಯಸ್ಯವೈ ಪೃಥ್ವ್ಯಾಂ ಪೂರ್ವಂ ದತ್ವಾ ಕುಶಾನಿತಿ | ಕಥಂ ತು ಪಿಂಡಸಂಜ್ಞಾಂ ತೇ ಪಿತರೋ ಲೇಭಿರೇ ಪುರಾ ||
"ಈ ಮೂರು ಪಿಂಡಗಳ ಮೇಲೆ ಅಪಸವ್ಯದಿಂದ ತನ್ನ ದೇಹದಿಂದಲೇ ಹುಟ್ಟಿದ ಎಳ್ಳುಗಳಿಂದ ಪ್ರೋಕ್ಷಿಸಿ ಪಿಂಡ ಪೂಜೆಯ" ವಿಷಯದಲ್ಲಿ ಒಂದು ನಿಯಮವನ್ನು ಸ್ಥಾಪಿಸುವ ಸಲುವಾಗಿ ವರಾಹ ರೂಪಿಯು ಹೀಗೆ ಹೇಳಿದನು.
(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345 ಅಧ್ಯಾಯ) ಪ್ರಾಪ್ತೇ ಚಾಹ್ನಿಕಕಾಲೇ ತು ಮಧ್ಯದೇಶಗತೇ ರವೌ | ದಂಷ್ಟ್ರಾವಿಲಗ್ನಾತ್ ತ್ರೀನ್ ಪಿಂಡಾತ್ ವಿಧಾಯ ಸಹಸಾ ಪ್ರಭು || ಸ್ನಾಪಯಾಮಾಸ ವೈಪೃಥ್ವ್ಯಾಂ ಕುಶಾನಾಸ್ತೀರ್ಯ ನಾರದ | ಸ ತೇಷು ಆತ್ಮಾನಮುದ್ದಿಶ್ಯ ಪಿತ್ರ್ಯಂ ಚಕ್ರೇ ಯಥಾವಿಧಿ || (ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345 ಅಧ್ಯಾಯ)
ಯಸ್ಯ ಚಿಂತಯತಃ ಸದ್ಯಃ ಪಿತೃಕಾರ್ಯ ವಿಧೀನ್ ಪರಾನ್ ||
ನಾನೇ ಎಲ್ಲ ಲೋಕಗಳ ಸೃಷ್ಟಿಕರ್ತನಾಗಿದ್ದೇನೆ.ನಾನು ಯಾವಾಗ ಪಿತೃದೇವತೆಗಳನ್ನು ಸೃಷ್ಟಿಸಲು ಆರಂಭಿಸಿದೆನೋ ಮತ್ತು ಇತರ ಪಿತೃಕಾರ್ಯ ವಿಧಿಗಳನ್ನು ಯೋಚಿಸುತ್ತಿದ್ದೆನೋ ಆ ಕ್ಷಣದಲ್ಲಿ ನನ್ನ ಕೋರೆಹಲ್ಲುಗಳಿಂದ ಮೂರು ಪಿಂಡಗಳು ದಕ್ಷಿಣ ದಿಕ್ಕಿಗೆ ಭೂಮಿಯ ಮೇಲೆ ಬಿದ್ದವು.ಆದ್ದರಿಂದ ಈ ಮೂರು ಪಿಂಡಗಳು ಪಿತೃಸ್ವರೂಪಗಳೇ ಆಗಿದೆ. ಅಹಂ ಹಿ ಪಿತರಃ ಸ್ರಷ್ಟುಮುದ್ಯತೋ ಲೋಕಕೃತ್ ಸ್ವಯಮ್ | ದಂಷ್ಟ್ರಾ ಧರಣೀಂ ಪಿಂಡಾಸ್ತಸ್ಮಾತ್ ಪಿತರ ಏವ ತೇ || (ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345 ಅಧ್ಯಾಯ) ದೇಹರಹಿತರಾದ ಪಿತೃಗಳು ಪಿಂಡಾಕಾರವನ್ನು ಧರಿಸುತ್ತಾರೆ.ನನ್ನಿಂದ ಸೃಷ್ಟರಾದ ಪಿಂಡರೂಪದಲ್ಲಿರುವ ಈ ಮೂವರು ಸನಾತನ ಪಿತೃಗಳಾಗಲಿ.
ಏಷಾ ತಸ್ಯ ಸ್ಥಿತಿರ್ವಿಪ್ರ ಪಿತರಃ ಪಿಂಡ ಸಂಸ್ಥಿತಾಃ |
ತ್ರಯೋ ಮೂರ್ತಿ ವಿಹೀನಾ ವೈ ಪಿಂಡಮೂರ್ತಿಧರಾಸ್ತ್ವಿಮೇ | ಭವಂತು ಪಿತರೋ ಲೋಕೇ ಮಯಾ ಸೃಷ್ಟಾಃ ಸನಾತನಾಃ || (ಶಾಂತಿ ಪರ್ವ)* ಈ ವಿಶ್ವದಲ್ಲಿ ನನ್ನಿಂದ ಅಧಿಕನಾದವನು ಯಾರೂ ಇಲ್ಲ. ಸಾಕ್ಷಾತ್ ನನ್ನಿಂದ ಪೂಜೆ ಮಾಡಲ್ಪಡುವವನು ಯಾವನಿದ್ದಾನೆ? ಈ ಪ್ರಪಂಚದಲ್ಲಿ ನನಗೆ ತಂದೆ ಯಾರು? ಎಲ್ಲರಿಗೂ ಪಿತಾಮಹನಾಗಿರುತ್ತೇನೆ.ಪಿತಾಮಹನಿಗೂ ನಾನೇ ತಂದೆಯಾಗಿದ್ದೇನೆ.ಈ ಜಗತ್ತಿಗೆ ನಾನೇ ಕಾರಣನಾಗಿದ್ದೇನೆ. ಕೋ ವಾ ಮಮ ಪಿತಾ ಲೋಕೇ ಅಹಮೇವ ಪಿತಾಮಹ | ಪಿತಾಮಹ ಪಿತಾ ಚೈವ ಅಹಮೇವಾತ್ರಕಾರಣಮ್ || (ಶಾಂತಿ ಪರ್ವ)* ಹೀಗೆ ಸಂದೇಶ ನೀಡಿದೆ.ವರಾಹರೂಪೀ ಭಗವಂತನ ಸಂದೇಶಕ್ಕನುಸಾರವಾಗಿ ಪಿತೃಗಳು ಪಿಂಡದಲ್ಲಿದ್ದು ಕೊಂಡು ಪೂಜೆಯನ್ನು ಸ್ವೀಕರಿಸುವರು. ಲಭಂತೇ ಸತತಂ ಪೂಜಾಂ ವೃಷಾಕಪಿವಚೋ ಯಥಾ ||
ಮೊದಲು ಶ್ರಾದ್ಧದ ಹಿನ್ನಲೆ ತಿಳುದುಕೊಳ್ಳೋಣ . ಬ್ರಹ್ಮವೈವತ್ವ ಪುರಾಣ , ಹರಿವಂಶ ಪುರಾಣ, ಗರುಡ ಪುರಾಣ,ವಾಯು ಪುರಾಣ, ನಾರದೀಯ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ಇವುಗಳನ್ನೆಲ್ಲಾ ಅಧ್ಯಯನ ಮತ್ತು ವಿಶ್ಲೇಷಣೆ , ಶ್ರೇಷ್ಠ ದಾಸರಾದ ಜಗನ್ನಾಥ ದಾಸರು "ಹರಿಕಥಾಮೃತ ಸಾರದಲ್ಲಿನ "14 ನೇ ಸಂಧಿ ಯಾದ "ಪಿತೃಗಣ" ಸಂಧಿಯಲ್ಲಿ ಬರೆದಿದ್ದಾರೆ .
ಪಿತೃ ಪಿತಾಮಹಶ್ಚೈವ ತಥೈವ ಪ್ರಪಿತಾಮಹ | ಅಹಮೇವಾತ್ರ ವಿಜ್ಞೇಯಸ್ತ್ರಿಷು ಪಿಂಡೇಷು ಸಂಸ್ಥಿತಃ || (ಶಾಂತಿ ಪರ್ವ)* ಶ್ರಾದ್ಧಕರ್ಮದಲ್ಲಿ ವರಾಹರೂಪೀ ಭಗವಂತನು ಪಿಂಡಪ್ರದಾನ ಕ್ರಿಯೆಯ ಮೂಲಕ ಪಿತೃಗಳ ಆರಾಧನೆಯನ್ನು ನಡೆಸಲು ಸಂದೇಶ ನೀಡಿದ ಪ್ರಯುಕ್ತ ಅವನನ್ನು ಕೂಡ ಅವಶ್ಯವಾಗಿ ಶ್ರಾದ್ಧ ದಿನದಂದು ಪೂಜಿಸಬೇಕು.ಇದರಿಂದ ಅವನ ಪ್ರೀತಿ ಉಂಟಾಗುವುದು ನಿಶ್ಚಿತ. ***** ಶ್ರಾದ್ಧ ಮತ್ತುಪಕ್ಷಮಾಸ ಪ್ರಿಯಾ ಪ್ರಾಣೇಶ ಹರಿದಾಸ ಇದರ ಮೂಲ ಪ್ರಾಂಭವಾದದ್ದು ಮಾಹಾಭಾರತದಲ್ಲಿ. ವೇದವ್ಯಾಸರು ಇದರ ವಿವರಣೆಯನ್ನು "ಹರಿವಂಶ" ಪುರಾಣದ , "ವಿಷ್ಣು ಪರ್ವ" ದಲ್ಲಿ 16 ರಿಂದ 24 ಅಧ್ಯಾಯವರೆಗೆ ಹೇಳಿದ್ದಾರೆ .
ಭೀಷ್ಮಾಚಾರ್ಯರರು ನನಗೆ ಯಾವ ಮೋಹ , ಲೋಭ ಗಳಿಲ್ಲ , ಆದರೆ ನನಗೆ ಶ್ರಾಧ್ದದ ಹಿಂದಿನ ಉದ್ದೇಶ ಹೇಳಿ ಅನ್ನುತ್ತಾನೆ .ಆಗ ಶಂತನು ಹೇಳಲು ನಾನು ಸಮರ್ಥನಲ್ಲಾ ಇಷ್ಟರಲ್ಲೇ ಮಾರ್ಕಂಡೇಯ್ಯ ಋಷಿಗಳು ಬರುತ್ತಾರೆ. ಇವರು ಪರಮಾತ್ಮನ ಪ್ರಳಯ ಕಾಲ ನೋಡಿರುವರು , ಜ್ಞಾ ನಿಗಳು , ಅವರಿಗೆ ನಿನ್ನ ಉದ್ದೇಶ ಹೇಳಿ ತಿಳಿದುಕೊ ಎಂದು ಅದೃಶ್ಯನಾಗುತ್ತಾನೆ
ಒಮ್ಮೆ ಭೀಷ್ಮಾಚಾರ್ಯರರು ತಂದೆಯಾದ ಶಂತುವಿನ ಶ್ರಾದ್ಧ ಮಾಡಿ ಆಚಾರ್ಯರ ನಿರ್ದೇಶನದಂತೆ ನೆಲಕ್ಕೆ ದರ್ಬೆ ಮೇಲೆ ಪಿಂಡ ಇಡಲು ಮುಂದಾದಾಗ , ಭೂಮಿಯಿಂದ ಆಭರಣ ಸಹಿತ ಕೈಗಳು ಮೇಲೆ ಬಂದವಂತೆ ಆಗ ಭೀಷ್ಮಾಚಾರ್ಯರರು ತಮ್ಮ ತಂದೆಯ ಕೈಗಳನ್ನು ಗುರ್ತಿಸಿದರು , ಅಷ್ಟರಲ್ಲೇ ಅಶರೀರವಾಣಿ ಮೂಲಕ ನಿಮ್ಮ ತಂದೆಯಾದ ಶಂತನು ನಾನು , ಸ್ವತಃಹ ಬಂದಿದ್ದೇನೆ , ಪಿಂಡಗಳನ್ನು ನೆಲಕ್ಕೆ ಇಡದೆ ನನ್ನ ಕೈಗಳಲ್ಲೇ ಕೊಡು ಅಂದಾಗ , ಭೀಷ್ಮಾಚಾರ್ಯರರು ಶಾಸ್ತ್ರದ ವಿರುದ್ಧ ನಾನು ಈ ಕೆಲಸ ಮಾಡಲಾರೆ , ನನ್ನನ್ನು ಕ್ಷಮಿಸಿ ಅನ್ನುತ್ತಾನೆ .ಆಗ ಶಂತನು , ಭೀಷ್ಮಾಚಾರ್ಯರರಿಗೆ ನಿನ್ನ ಈ ಶ್ರದ್ಧೆಯಿಂದ ಮಾಡಿದ ಶ್ರಾದ್ಧ ನನಗೆ ಬಹಳ ಮೆಚ್ಚಗೆ ಆಯಿತು .ನಾನು ವರ ಕೋಡಬೇಕೆಂದಿರುವೆ , ಅಂದಾಗ ಸ್ವಲ್ಪ ಹೊತ್ತಿನಲ್ಲೇ ಮಾರ್ಕಂಡೇಯ್ಯ ಋಷಿಗಳು ಬಂದರು .ತಮ್ಮ ಮನದ ಇಂಗಿತವನ್ನು ಋಷಿಗಳ ಹತ್ತಿರ ಹೇಳಿದಾಗ , ನನಗೆ ಬ್ರಹ್ಮ ದೇವರು ನಿನ್ನ ಮನದ ಇಂಗಿತ ಹೇಳಿ ಕಳಿಸಿರುವರು ಎಂದು ಹೇಳಿದರು . ಶ್ರಾದ್ಧದ ಏ0ದರೇನು ?
ಜ್ಞಾನಿಗಳು , ಯತಿಗಳು ಬಂದಾಗ ಪಿತೃಗಳಿಗೆ ಉದ್ದೇಶವಾಗಿ ಮಾಡುವ ಶ್ರಾದ್ಧ. ಕ್ರತು ಮತ್ತು ದಕ್ಷ ದೇವತೆಗಳು.
ಪಿತೃ ದೇವತೆಗಳು , ಮೂಲ ಚತುರ್ಮುಖ ಬ್ರಹ್ಮ ದೇವರ ಮಕ್ಕಳು . ದೇವಲೋಕದ ದೇವತೆಗಳು, ಗಂಧರ್ವರು, ಯಕ್ಷರರು, ಕಿನ್ನರರು ಶ್ರದ್ಧೆಯಿಂದ ಮಾಡುವ ಅರ್ಚನೆಯನ್ನು ಪಿತೃಗಳ ಅಂತರ್ಯಾಮಿಯಾದ ಪರಮಾತ್ಮನನ್ನು ಪೂಜಿಸುವುದೇ "ಶ್ರಾದ್ಧ" ಎನ್ನುವರು . ಮಾನವರು ಮಾಡಿದಂತಹ ಶ್ರಾದ್ಧದಲ್ಲಿ ಅವರು ಕೊಡತಕ್ಕಂತಹ "ಸ್ವಾಧ್ಧಾ" ವನ್ನು ತಗೆದುಕೊಂಡು ಹೋಗಿ, ತಂದೆ , ತಾತಾ, ಮುತ್ತಾತ , ಅಜ್ಜಿ , ಮುತ್ತಜ್ಜಿ ಇವರಿಗೆ ತಗೆದುಕೊಂಡು ಹೋಗಿ ಮುಟ್ಟಿಸುತ್ತಾರೆ . ಅವರು ಯಾವುದೇ ಯೋನಿಗಳಲ್ಲಿ ಹುಟ್ಟಿದರು , ಅವರು ಹುಟ್ಟಿದ ಯೋನಿಗೆ ಅನುಸಾರವಾಗಿ ಮಾರ್ಪಾಡಿಸಿ ಅನ್ನವನ್ನು ಮುಟ್ಟಿಸುವ ಕಾರ್ಯ ಈ ಪಿತೃ ದೇವತೆಗಳ ಕೆಲಸ . ಇದೆ ಶ್ರಾದ್ಧದ ಅರ್ಥ ಮತ್ತು ಉದ್ದೇಶ . ಶ್ರಾಧ್ದದಲ್ಲಿ 5 ಪ್ರಕಾರಗಳು 1)ಸಪಿಂಡಿಕರಣ ಶ್ರಾದ್ಧ :- ಇದು ಮರಣದ 12 ನೇ ದಿನದಲ್ಲಿ ಪಿಂಡದಲ್ಲಿ ಕಾಮ ಮತ್ತು ಕಾಲ ಎಂಬ ದೇವತೆಗಳು ಪ್ರವೇಶ ಪ್ರವೇಶ ಮಾಡುತ್ತಾರೆ . 2) ನಾಂದಿ ಶ್ರಾದ್ಧ :- ಇದು ಮಂಗಳ ಕಾರ್ಯದಲ್ಲಿ ಹಿರಿಯರ ಸ್ಮರಣೆಯಲ್ಲಿ ಮಾಡುವ ಶ್ರಾಧ್ದ. ಸತ್ಯ ಮತ್ತು ವಸು ದೇವತೆಗಳು. 3) ಇಷ್ಟ ಶ್ರಾದ್ಧ :- 4) ನೈಮಿತ್ತಿಕ ಶ್ರಾದ್ಧ :-
ಇನ್ನು ಪಕ್ಷ ಮಾಸದ ಪೌರಾಣಿಕ ಹಿನ್ನೆಲೆ ತಿಳಿದುಕೊಳ್ಳೋಣ .ಯುದ್ಧದಲ್ಲಿ ಅರ್ಜುನ ಕೈಯಿಂದ ಕರ್ಣನ ಮೃತ್ಯುವಾದಾಗ , ಅವನ ಆತ್ಮ ಸ್ವರ್ಗಕ್ಕೆ ಹೋಗುವಾಗ ಅವನಿಗೆ ಕೇವಲ ಚಿನ್ನ , ಬೆಳ್ಳಿ ಸಿಗುತ್ತೆ ಅನ್ನ ಸಿಗುವದಿಲ್ಲ , ಆಗ ಕರ್ಣನು ನೊಂದುಕೊಂಡು ಯಮಧರ್ಮರಾಯನಿಗೆ ಕೇಳುತ್ತಾನೆ . ನಾನು ಭೂಮಿಯಲ್ಲಿದ್ದಾಗ ಬೇಕಾದಷ್ಟು ದಾನ ಧರ್ಮ ಮಾಡಿರುವೆ ನನಗೇಕೆ ಈ ಗತಿ ಎಂದು ಕೇಳಿದಾಗ , ಆಗ ಯಮಧರ್ಮರಾಯ ಹೇಳುತ್ತಾನೆ , ನೀನು ಎಲ್ಲವನ್ನು ದಾನ ಮಾಡಿದ್ದಿಯಾ ಆದರೆ ಅನ್ನದಾನ ಮತ್ತು ಪಿತೃ ಕರ್ಮ ಮಾಡಲಾರದಕ್ಕೆ ಈ ಸ್ಥಿತಿ ನಿನಗೆ ಬಂದಿದೆ ಎಂದು ಹೇಳುತ್ತಾನೆ . ಮಾತೇನು ಇದಕ್ಕೆ ಪರಿಹಾರ ಅಂದಾಗ , ನಿನಗೆ ಭಾದ್ರಪದ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ( ಮಹಾಲಯ ಅಮಾವಾಸ್ಯೆ) ಸಮಯ ಕೊಡುತ್ತೇನೆ , ಅಷ್ಟರಲ್ಲಿ ನೀನು ಅನ್ನದಾನ , ವಸ್ತ್ರದಾನ ಮಾಡಿ ಮತ್ತು ಪಿತೃ ತರ್ಪಣ ಕೊಟ್ಟು ಬಾ ಆಗ ನಿನಗೆ ಸ್ವರ್ಗದಲ್ಲಿ ಅನ್ನ ಸಿಗುತ್ತೆ ಎಂದು ಹೇಳುತ್ತಾನೆ .ಅದೇ ರೀತಿ ಕರ್ಣನು ಈ ಹದಿನೈದು ದಿನಗಳಲ್ಲಿ ಎಲ್ಲ ಕಾರ್ಯ ಮಾಡಿ ಸ್ವರ್ಗಕ್ಕೆ ಹೋದಾಗ ಅನ್ನ ಸಿಗುತ್ತದೆ .
ಇದು ಕ್ಷೇತ್ರಗಳಲ್ಲಿ ಮತ್ತು ಪಕ್ಷ ಮಾಸದಲ್ಲಿ ಮಾಡುವ ಶ್ರಾಧ್ದ.ಧೂರಿ ಮತ್ತು ವಿಲೋಚನ ದೇವತೆಗಳು. 5) ಕಾಲ ಶ್ರಾದ್ಧ :- ಪಿತೃಗಳು ಮರಣ ಹೊಂದಿದ ತಿಥಿ ಯನ್ನು, ಪ್ರತಿ ಸಾ0ವತ್ಸರದಲ್ಲಿ ಬರುವ ಅದೇ ತಿಥಿಗೆ ಮಾಡುವಶ್ರಾದ್ಧ .ಪುರೂರವ ಮತ್ತು ಆದ್ರ೯ವ ದೇವತೆಗಳು . ಮನುಷ್ಯ ತೀರಿ ಹೋದಮೇಲೆ ಅವರ ಸ್ಮರಣೆಯಲ್ಲಿ ಷಣ್ಣವತಿ ಶ್ರಾಧ್ದ ಮಾಡಬೇಕು . "ಷಣ್ಣವತಿ " ಎಂದರೆ ಸಂಸ್ಕೃತದಲ್ಲಿ 96 ಎಂದರ್ಥ . ಅಂದರೆ ವರ್ಷದಲ್ಲಿ 96 ಶ್ರಾದ್ಧಗಳನ್ನು ಮಾಡಬೇಕು . ವರ್ಷದಲ್ಲಿ ಬರುವ ಷಣ್ಣವತಿ ಶ್ರಾದ್ಧಗಳು 1) ಮನ್ವಾದಿಗಳಲ್ಲಿ - 14 2)ಮಹಾಲಯ - 16 3) ಯುಗಾದಿಗಳು - 04 4) ಸಂಕ್ರಮಣ - 12 5) ದರ್ಶಗಳು - 12 6) ವ್ಯತಿಪಾತಗಳು - 13 7) ವೈಧೃತಿಗಳು - 13 8) ತ್ರಿಸ್ರೋಷ್ಟಕಗಳು - 12 ಒಟ್ಟಾರೆಯಾಗಿ ಇವೆ 96 ಷಣ್ಣವತಿ ಶ್ರಾದ್ಧ ಗಳು . ಆದರೆ ನಾವು ಹಾಗೆ ಮಾಡುವುದಿಲ್ಲ . ಕೇವಲ ವರ್ಷದಲ್ಲಿ ಎರಡು ಶ್ರಾಧ್ದ ಮಾಡುತ್ತೇವೆ .1) ಪ್ರತಿ ಸಂವತ್ಸರದ ತಿಥಿಯಂದು ಮಾಡುವ "ಕಾಲ್ ಶ್ರಾದ್ಧ " 2) ಇನ್ನು ಪಕ್ಷಮಾಸದಲ್ಲಿ ಮಾಡುವ " ಪಿತೃ ಪಕ್ಷ ". #ಪಕ್ಷಮಾಸ #ನಿಯಮ.
ಇನ್ನು ಜಗನ್ನಾಥ ದಾಸರು ಹರಿಕಥಾಮೃತಸಾರ "ಭೋಜನ ಸಂಧಿಯಲ್ಲಿನ 21 ನೇ ನುಡಿಯಲ್ಲಿ ಹೇಳಿರುವಂತೆ ಶ್ರಾಧ್ದಗತ ಭಗವದ್ರೂಪಗಳಲ್ಲಿ "ಅನಿರುಧ್ದ ರೂಪಿಯಾದ ಪರಮಾತ್ಮನು ತ್ರಿನವತಿ (93) ರೂಪಗಳಿಂದ ( ವಸುಗಳು - 08 ರೂಪಗಳು, ರುದ್ರರಲ್ಲಿ - 11ರೂಪಗಳು,, ಆದಿತ್ಯರಲ್ಲಿ - 12 ರೂಪ ಗಳು ಹೀಗೆ ಕೂಡಿಸಿ ಒಟ್ಟಾರೆ 31 ರೂಪಗಳನ್ನು ಆಗುತ್ತದೆ . ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ ಎಂಬ 3 ನಾಮಗಳಿಂದ ಗುಣಿಸಿದಾಗ 93 ರೂಪಗಳು ಆಗುತ್ತದೆ .) ಇದಕ್ಕೆ ತ್ರಿನವತಿ ರೂಪ ಎನ್ನುವರು. ಸಂಸ್ಕೃತದಲ್ಲಿ ತ್ರಿನವತಿ ಎಂದರೆ 93 ಎಂದರ್ಥ . ಶ್ರಾಧ್ದ ಮಾಡುವ ಯಜಮಾನನಲ್ಲಿ ಈ ವಸು,ಆದಿತ್ಯ, ರುದ್ರರ ಮೂಲಕ ಪಿತೃಗಳಿಗೆ ಪ್ರದ್ಯುಮ್ನ ರೂಪದಿಂದ ಅನ್ನನಾಗಿರುತ್ತಾನೆ .
ಈ ನೈಮಿತ್ತಿಕ ಶ್ರಾಧ್ದದಲ್ಲಿ ಬರುವ ಪಕ್ಷಮಾಸದಲ್ಲಿ ಮಾಡುವ ಶ್ರಾಧ್ದವೆ "ಪಿತೃ ಪಕ್ಷ " ಅನ್ನುತ್ತಾರೆ . ಇಲ್ಲಿ ಸರ್ವ ಪಿತೃಗಳನ್ನು ಸ್ಮರಿಸಿ ತರ್ಪಣ ಬಿಡುತ್ತಾರೆ . ಇದರ ದೇವತೆ ಧೂರಿ ಮತ್ತು ವಿಲೋಚನ. ಇಲ್ಲಿ ಮೂರು ತಲೆಮಾರಿನ ಪಿತೃಗಳ ಸ್ಮರಣೆ ಮಾಡಿ ಸಾಮುಹಿಕವಾಗಿ ತಿಲ್ ,ಜಲ್, ತರ್ಪಣ , ಪಿಂಡ ಬಿಡುವುದೇ ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎನ್ನುತ್ತಾರೆ .ಈ ಮೂರು ತಲೆಮಾರಿನವರ ಆತ್ಮಗಳು ಇದು ಸೂಕ್ಷ್ಮ ಶರೀರ ಇರುವದರಿಂದ ಭೂಮಿ ಮತ್ತು ಸ್ವರ್ಗ ದ ಮಧ್ಯದಲ್ಲಿ ಇರುತ್ತಾರೆ . ಈ ಶ್ರಾದ್ಧ ಕಾಲದಲ್ಲಿ ಜನಾರ್ಧನ ರೂಪಿಯಾದ ಪರಮಾತ್ಮನು 3555 ರೂಪಗಳಲ್ಲಿ ಇರುತ್ತಾನೆ .
ಹಾಗೆ ಪರಮಾತ್ಮನ ಪಂಚ ರೂಪಗಳಾದ ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ , ವಾಸುದೇವ , ನಾರಾಯಣ ಹೀಗೆ ಐದು ರೂಪಗಳಲ್ಲಿ ಇರುತ್ತಾನೆ . ಸಂಕರ್ಷಣ ರೂಪದಿಂದ ದೇವಭಾಗ ಮತ್ತು ಪಿತೃಭಾಗ ಎಂದು ವಿಭಾಗ ಮಾಡುತ್ತಾನೆ . ನಿತ್ಯಾನಂದನಾದ ಭಗವಂತನು ತುರ್ಯ ನಾಮಕನಾಗಿ ವಾಸುದೇವನ ಮೂಲಕ ತಾನು ಉಂಡು , ಸಕಲರಿಗೂ ಉಣಿಸುವನು . ಇನ್ನು ಭೋಜನ ಸಂಧಿಯ 22 ನೇ ನುಡಿಯಲ್ಲಿ ಹೇಳಿರುವ ಪ್ರಕಾರ
ಹೀಗೆ ಸಪ್ತಾನ್ನಗಳಾದ ( 7 ತರಹದ ಅನ್ನ )
"ಷಣ್ಣವತಿ " ನಾಮಕನಾಗಿ ವಸು , ಮುಕ್ಕಣ್ಣ(ರುದ್ರ), ಭಾಸ್ಕರಲ್ಲಿ ನಿಂತು ತನಗೆ ಶರಣು ಬಂದವರ ಜನರನ್ನು ನಿತ್ಯದಲ್ಲಿ ಕಾಪಾಡ್ತಾ , ಅವರ ಪುಣ್ಯ ಕರ್ಮ ಸ್ವೀಕರಿಸಿ ಪಿತೃಗಳಿಗೆ ಸುಖವ ನೀಡುತ್ತಾನೆ . #ಭಗವಂತನ #ಷಣ್ಣವತಿ(96) #ರೂಪಗಳ ವಸುಗಳು 8 , ಏಕಾದಶ ರುದ್ರರು 11, ದ್ವಾದಶ ಆದಿತ್ಯರು 12 , ಹಾಗೆಯೇ ಒಟ್ಟಾರೆಯಾಗಿ ಕೂಡಿಸಿದಾಗ 31 ರೂಪಗಳನ್ನು , ವೈಕಾರಿಕ , ತೈಜಸ , ತಾಮಸ , ಎಂಬ ಗುಣಗಳಿಂದ ಗುಣಿಸಿದಾಗ 93 ಬರುತ್ತದೆ , ಮತ್ತೆ ಈ ಮೇಲಿನ 3 ಗುಣಗಳು ಕೂಡಿಸಿದಾಗ ಷಣ್ಣವತಿ(96) ಆಗುತ್ತದೆ . ಹೀಗೆ ಭಗವಂತನನ್ನು ಚಿಂತಿಸಬೇಕು .
***
ಮನಸ್ಸು , ವಾಕ್ , ಪ್ರಾಣ , ಬಲಿ , ಹೋಮ , ಹಾಲು ಇವೆ
#ಸಪ್ತಾನ್ನಗಳು .
1)"ಸ್ವಾಹಾ ಮಾಯಾಪತಿ " ವಾಸುದೇವ ಅನ್ನ ಕಲ್ಪಿಸಿ ದೇವತೆಗಳಿಗೆ ಬಡಿಸುವನು.
2 ) " ಸ್ವಾಧ್ಧಾ ಜಯಾಪತಿ ಸಂಕರುಷಣ ಅನ್ನ ಕಲ್ಪಿಸಿ ಪಿತೃಗಳಿಗೆ ತೃಪ್ತಿ ಪಡಿಸುತ್ತಾನೆ.
3 ) ಕೃತಿ ಪತಿ ಪ್ರದ್ಯುಮ್ನ ಚತುರ್ವಿಧ ರಸಗಳಲ್ಲಿ ಅನ್ನ ಕಲ್ಪಿಸಿ ಮನುಷ್ಯರಿಗೆ ತೃಪ್ತಿ ಪಡಿಸುವನು .
4) ಶಾಂತಿ ಪತಿ ಅನಿರುಧ್ದನು ಅನ್ನ ಕಲ್ಪಿಸಿ ಪಶುಗಳಿಗೆ ತೃಪ್ತಿ ಪಡಿಸುವನು . 5 ) ಮಾಯಾಪತಿ ವಾಸುದೇವನಿಂದ ಈ ಸಪ್ತಾನ್ನಗಳ ಮೂಲಕ ತಾನು ಉಂಡು ಸಕಲರಿಗೂ ಉಣಿಸುವನು .
ಹಾಗೆಯೇ ಈ ಹದಿನೈದು ದಿನಗಳಲ್ಲಿ ಮುತೈದೆ ತೀರಿ ಹೋದಲ್ಲಿ ನವಮಿ ತಿಥಿಯಂದು " ಅವಿಧವಾ ನವಮಿ " ಅಂತ ವಂಶದಲ್ಲಿ ಯತಿ ಆಗಿ ಹೋದವರಿಗೆ ದ್ವಾದಶಿ ಅಂದು " ಯತಿ ದ್ವಾದಶಿ "ಅಂತಾ ಅಪಘಾತಗಳಲ್ಲಿ ತೀರಿ ಹೋದವರಿಗೆ ಚತುರ್ದಶಿ ತಿಥಿಯಲ್ಲಿ " ಘಾತ ಚತುರ್ದಶಿ" ತರ್ಪಣ ನೀಡಬೇಕಾಗುತ್ತದೆ . ಈ ಮಾಸದೊಳೊಗೆ ಅನಾನುಕೂಲತೆಯಿಂದ ಆಚರಿಸಲಾಗದಿದ್ದರೆ ತುಲಾ ಮಾಸ ಮುಗಿಯುವದೊರೊಳಗೆ ಆಚರಿಸಬೇಕು .
ಹೀಗೆ ಸರ್ವಾಂತರ್ಯಾಮಿಯಾದ ಪರಮಾತ್ಮನು ಎಲ್ಲದರಲ್ಲೂ ಇದ್ದು ಕಾರ್ಯ ಮಾಡಿಸುವನು . ಅವರಅವರ ಸುಕರ್ಮವನ್ನು ಸ್ವೀಕರಿಸಿ ಸಕಲ ಜೀವರಾಶಿಗಳಿಗೂ ಮತ್ತು ಪಿತೃಗಳಿಗೂ ಸುಖವಿನಿತ್ತು ಎಲ್ಲ ಕಾಲದಲ್ಲಿಯೂ ಕಾರುಣ್ಯ ಸಾಗರನಾದ ಪರಮಾತ್ಮಾ ಕಾಯುತ್ತಿರುವನು .
ಶ್ರೀಕೃಷ್ಣಾರ್ಪಣಮಸ್ತು
*********

ಪರ್ವಕಾಲೇಷು ಪಿತರಸ್ತಿಥಿಕಾಲೇಷು ದೇವತಾಃ|
ಪುರುಷಂ ಸ್ವಯಮಾಯಂತಿ ನಿಪಾನಮಿವ ಧೇನವಃ||
ಬಾಯಾರಿದ ಹಸುಗಳು ಜಲಾಶಯದ ಬಳಿ ಬರುವಂತೆ, ಪರ್ವಕಾಲದಲ್ಲಿ ಪಿತೃಗಳೂ, ವಿಶೇಷ ತಿಥಿಗಳಲ್ಲಿ ದೇವತೆಗಳೂ ಮನೆಗೆ ಬರುವರು. ಪಿತೃ-ದೇವತೆಗಳು ಯಾವ ಗೃಹಸ್ಥನ ಮನೆಯಲ್ಲಿ ಸತ್ಕಾರವಿಲ್ಲದೇ ಹಿಂತಿರುಗಿ ಹೋಗುವರೋ; ಆ ಗೃಹಸ್ಥನ ಇಷ್ಟ-ಪೂರ್ತವೆಂಬ ಎರಡು ಬಗೆಯ ಧರ್ಮಗಳು ನಾಶವಾಗುವವು.
ಇಲ್ಲಿ ಎರಡು ಬಗೆಯ ಧರ್ಮಗಳನ್ನು ಹೇಳಿದೆ. ಮೊದಲನೆಯದು ಇಷ್ಟ. ಇಷ್ಟವೆಂದರೆ ಅಭಿಲಾಷೆ, ಬಯಕೆ ಎಂಬುದು ಸಾಮಾನ್ಯ ಅರ್ಥವಾದರೆ, ಯಾಗ, ಯಜ್ಞದಿಂದ ತೃಪ್ತಿಪಡಿಸಲ್ಪಟ್ಟ ಪರಮಾತ್ಮ, ಪೂಜಿಸಲ್ಪಟ್ಟ, ಗೌರವಿಸಲ್ಪಟ್ಟ ಮುಂತಾದ ಅರ್ಥಗಳಿವೆ. ಅಗ್ನಿಹೋತ್ರಂ ತಪಃ ಸತ್ಯಂ ವೇದಾನಾಂಚಾನುಪಾಲನಮ್|
ಪುಷ್ಕರಿಣ್ಯಃ ಸಭಾವಾಪೀದೇವತಾಯತನಾನಿ ಚ|
ಆತಿಥ್ಯಂ ವೈಶ್ವದೇವಂ ಚ ಪ್ರಾಹುರಿಷ್ಟಮಿತಿ ಸ್ಮೃತಮ್|| ಅಗ್ನಿಹೋತ್ರ, ತಪಸ್ಸು, ಸತ್ಯ, ವೇದಧರ್ಮದ ಪಾಲನೆ, ಅತಿಥಿ ಸತ್ಕಾರ, ವೈಶ್ವದೇವಗಳನ್ನು ಇಷ್ಟವೆಂದು ಕರೆಯುವರು ಎಂಬುದಾಗಿ ವಿಸ್ತಾರವಾದ ಅರ್ಥವೂ ಹೇಳಲ್ಪಟ್ಟಿದೆ. ಪೂರ್ತವೆಂದರೆ ಪಾಲನೆ, ಪೋಷಣೆ, ಸಾಕುವುದು ಎಂಬುದು ಸಾಮಾನ್ಯ ಅರ್ಥ.
ಪಿತೃ-ದೇವತೆಗಳು ನಿರಾಶರಾದರೆ ಈ ಇಷ್ಟ ಮತ್ತು ಪೂರ್ತಗಳ ಆಚರಣೆಯಿಂದ ಒದಗಿದ ಪುಣ್ಯಗಳ ನಾಶವಾಗುವುದು.
ಆರಾಮಶ್ಚ ವಿಶೇಷೇಣ ಪೂರ್ತಕರ್ಮ ವಿನಿರ್ದಿಶೇತ್|| ಬಾವಿಕೆರೆಗಳನ್ನು ತೋಡಿಸುವುದು, ಯಾತ್ರಿಗಳ ಸೌಕರ್ಯಕ್ಕಾಗಿ ತೋಪುಗಳು, ಅನ್ನಸತ್ರಗಳು, ಹಣ್ಣುಹಂಪಲುಗಳ ಉದ್ಯಾನ, ದೇವಾಲಯ ನಿರ್ಮಾಣ ಮೊದಲಾದ ಧರ್ಮಕಾರ್ಯಗಳು ಪೂರ್ತವೆಂದು ಕರೆಯಲ್ಪಡುವವು. ಇದನ್ನು ಮುಂದಿನ ಮಾತುಗಳಲ್ಲಿ ಸ್ಪಷ್ಟಪಡಿಸುತ್ತಾರೆ.
ಆದುದರಿಂದ ದೈವ-ಪಿತೃ ಕಾರ್ಯಗಳಲ್ಲಿ ಯಾವಾಗಲೂ ಆದರ ಉಳ್ಳವನಾಗಿ ಸದಾಚಿರಿಯಾಗಿರಬೇಕು.
ಪಿತೃನಿಶ್ವಾಸವಿಧ್ವಸ್ತಂ ಸಪ್ತಜನ್ಮಾರ್ಜಿತಂ ಧನಮ್| ತ್ರಿಜನ್ಮಪ್ರಭವಂ ದೈವೋ ನಿಶ್ವಾಸೋ ಹಂತ್ಯಸಂಶಯಮ್|| ನಿರಾಶರಾಗಿ ಹೋಗುವ ಪಿತೃಗಳ ನಿಶ್ವಾಸದಿಂದ ಗೃಹಸ್ಥನ ಏಳುಜನ್ಮಗಳಲ್ಲಿ ಗಳಿಸಿದ ಧನವನ್ನೂ, ದೇವತೆಗಳ ನಿಶ್ವಾಸವು ಮೂರುಜನ್ಮಗಳಲ್ಲಿ ಗಳಿಸಿದ ಧನವನ್ನು ನಾಶಮಾಡುವುದರಲ್ಲಿ ಸಂಶಯವಿಲ್ಲ.
****

ಶ್ರದ್ಧೆಯಿಂದ ಶ್ರಾದ್ಧ - " ಶ್ರದ್ಧಾಯತ್ರ ವಿದ್ಯತೇ ತತ್ ಶ್ರಾದ್ಧಮ್ " ಶ್ರದ್ಧೆಯಿಂದ, ಅಚಲವಾದ ನಂಬಿಕೆಯಿಂದ ಮಾಡುವ ಕಾರ್ಯ ! ಪ್ರತಿಯೊಬ್ಬ ಮನುಷ್ಯನೂ ಜನನದಿಂದಲೇ ಪಡೆದುಕೊಂಡು ಬಂದಿರುವ ಮೂರೂ ಋಣಗಳಾದ ದೇವಋಣ, ಋಷಿಋಣ ಮತ್ತು ಪಿತೃಋಣ ಗಳಲ್ಲಿ ಪಿತೃ ಋಣದಿಂದ ಮುಕ್ತನಾಗಲು ಶ್ರಾದ್ಧಾಚರಣೆಯು ಮುಖ್ಯ ಸಾಧನೆಯಾಗಿದೆ. ಪಿತೃ ಋಣವನ್ನು ತಿರಿಸದೆ, ದೇವ ಋಣ, ಋಷಿ ಋಣಗಳು ತಿರುವುದಿಲ್ಲ. ನಾವು ಜೀವಂತವಾಗಿರುವವರೆಗೂ ಪಿತೃಋಣ ತಿರಿಸಬೇಕೆಂದರೆ, ನಾವು ಪಿತೃಗಳಿಗೆ ಕಾಲ ಕಾಲಕ್ಕೆ ತಕ್ಕಂತೆ ಶ್ರಾದ್ಧ ಮಾಡಿದರೆ ನಮ್ಮ ವಂಶದ ಶ್ರೇಯೋಭಿವೃದ್ಧಿಯಾಗುತ್ತದೆ. ಈ ಶ್ರಾದ್ಧ ಕರ್ಮವನ್ನು ಶೃತಿ,ಸ್ಮೃತಿ ಮತ್ತು ನಮ್ಮ ಪುರಾಣಗಳು ತಿಳಿಸಿದ ವಿಧಿಯಿಂದ ಅನುಸರಿಸಬೇಕು. ಪ್ರೇತತ್ವ ನಿವೃತ್ತಿಗಾಗಿ...ನವ ಶ್ರಾದ್ಧಗಳನ್ನೂ ಮತ್ತು ೧೬ ಮಾಸಿಕಗಳನ್ನೂ ಮಾಡಬೇಕು.ಈ ದಶಾಹ ವಿಧಿಯಲ್ಲಿ ಯಾವುದೇ ಕಾಲಕ್ಕೂ ನಿಷಿದ್ಧ ಪದಾರ್ಥಗಳನ್ನು ಪಿಂಡದಲ್ಲಿ ಮಿಶ್ರ ಮಾಡಬಾರದು. ಒಂದುವೇಳೆ ನಿಷಿದ್ಧ ಪದಾರ್ಥಗಳನ್ನು ಉಪಯೋಗಿಸಿದಲ್ಲಿ ಯುಗ ಪರ್ಯಂತ ಪ್ರೇತ ಜನ್ಮದಿಂದ ಮುಕ್ತಿ ಹೊಂದದೆ ಪ್ರೇತ ಜನ್ಮದಲ್ಲೇ ಕೊಳೆಯುತ್ತದೆ. ಅಲ್ಲದೆ ಪ್ರಾಯಶ್ಚಿತ್ತವೇ ಇಲ್ಲ!! " ಶ್ರಾದ್ಧ ಕರ್ಮದಲ್ಲಿ ನಿಷಿದ್ಧ ಪದಾರ್ಥಗಳು " ಶ್ರೀ ವೇದವ್ಯಾಸ ಪ್ರಣೀತ ಶ್ರೀಮನ್ಮಹಾಭಾರತದ ಅನುಶಾಸನ ಪರ್ವದಲ್ಲಿ.. ಅಶ್ರಾದ್ಧೇ ಯಾನಿ ಧಾನ್ಯಾನಿ ಕ್ರೋಧವಾ: ಪುಲಕಾಸ್ತಾಥಾ । ಹಿಂಗುದ್ರವ್ಯೆಷು ಪಾಲಾಂಡುಂ ವೃಂತಕ ಲಸುನಂ ತಥಾ ।। ಸೌಭಾಂಜನ: ಕೋವಿದಾರಸ್ತಥಾ ಗೃ೦ಜನಕಾದಯಃ । ಕೂಷ್ಮಾ೦ಡಜಾತ್ಯಲಾಬು೦ ಚ ಕೃಷ್ಣ೦ ಲವಣಮೇಚಚ ।। ಇಂಗು - ಈರುಳ್ಳಿ - ಬೆಳ್ಳುಳ್ಳಿ - ಬದನೇಕಾಯಿ - ನುಗ್ಗೆಕಾಯಿ - ಕೆಂಚನಾಳದ ಕಾಯಿ - ಗಜ್ಜರಿ - ಬೂದುಗುಂಬಳ ಸೋರೆಕಾಯಿ - ಕರಿ ಉಪ್ಪು ಮುಂತಾದವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದೆಂದು ಅಖಿಲಾಂಡಕೋಟಿ ಬ್ರಹ್ಮಾಂಡನಾಯಕರಾದ ಶ್ರೀ ಭಗವಾನ್ ವೇದವ್ಯಾಸದೇವರು ಹೇಳಿದ್ದಾರೆ. ನವ ಶ್ರಾದ್ಧವೆಂದರೆ... ಪ್ರಥಮ - ತೃತೀಯ - ಪಂಚಮ - ಸಪ್ತಮ - ನವಮ ಹೀಗೆ ೧೦ ದಿವಸಗಳಲ್ಲಿ ಮಾಡುವ ವಿಷಮ ಶ್ರಾದ್ಧಗಳಿಗೆ " ನವ ಶ್ರಾದ್ಧ " ಎನ್ನುತ್ತಾರೆ. ನವ ಶ್ರಾದ್ಧ ಮಾಡದೇ ಪ್ರೇತತ್ವ ನಿವೃತ್ತಿಯಾಗುವುದಿಲ್ಲ. ನವ ಶ್ರಾದ್ಧ; ತ್ರಿಪಕ್ಷ ಶ್ರಾದ್ಧ; ಮಾಸಿಕ; ಷಣ್ಮಾಸಿಕಾ ಇವು ಮಾಡದ ಪುತ್ರನ ಪಿತೃಗಳು ಅಧೋಗತಿ ಹೊಂದುವರು. 10 ದಿನಗಳಲ್ಲಿ ಮಾಡುವ ಪ್ರೇತ ಶ್ರಾದ್ಧದಲ್ಲಿ ಪಿತೃ ಶಬ್ದ ಹೇಳದೆ " ಪ್ರೇತ " ಯೆಂದು ಮಂತ್ರವಿಲ್ಲದೆ ಎಳ್ಳು ಹಾಕಬೇಕು. ಪ್ರೇತ ಶಬ್ದದಿಂದ " ಪಾಣಿ ಹೋಮ ಮಾಡಬೇಕು. ಪ್ರೇತ ಸ್ಥಾನದಲ್ಲಿ ಬಳಿ ನೀಡಿ ಅಸ್ಥಿಗಳನ್ನು ಹಾಲಿನಿಂದ ತೊಳೆದು ಬಿಳಿ ವಸ್ತ್ರದಿಂದ ಸುತ್ತಿ ಮಡಿಕೆಯಲ್ಲಿ ಹಾಕಿ ಭೂಮಿಯಲ್ಲಿ ಸ್ಥಾಪಿಸಬೇಕು. ನಂತರ ೧೦ ದಿನದೊಳಗೆ ಗಂಗೆಯಲ್ಲಿ ಹಾಕಿದರೆ ಗಂಗೆಯಲ್ಲಿ ಮರಣವಾದಂತೆ. ಯಾರ ಆಸ್ತಿಯು ಗಂಗೆಯಲ್ಲಿ ಬೀಳುವದೋ ಅವನಿಗೆ ಸ್ವರ್ಗಲೋಕ ಲಭಿಸುತ್ತದೆ. ಮಾಸಿಕ 16 ಇರುತ್ತದೆ. ಆದ್ಯ - ಊನ - ದ್ವಿತೀಯಾ - ತೃತೀಯಾ - ಚತುರ್ಥ - ಪಂಚಮ - ಷಷ್ಠ - ಊನ ಷಣ್ಮಾಸಿಕ - ಸಪ್ತಮ - ಅಷ್ಟಮ - ನವಮ - ದಶಮ - ಏಕಾದಶ - ದ್ವಾದಶ - ಊನಾಬ್ಧಿಕ - ಆಬ್ಧಿಕ. 11ನೇ ದಿನ ಏಕೋದಿಷ್ಟ ಶ್ರಾದ್ಧ ಮಾಡಬೇಕು. ಈ ಶ್ರಾದ್ಧದಿಂದ ಪ್ರೇತನಿಗೆ ಯಮ ಮಾರ್ಗದಲ್ಲಿ ನಡೆಯುವ ಶಕ್ತಿ ಬರುತ್ತದೆ. ಪ್ರೇತನು ಪರವಿತ್ತಾಪಹಾರ - ಪರ ಕಲತ್ರ ಅಪಹಾರ ಮಾಡಿದ್ದಾರೆ " ನವ ಶ್ರಾದ್ಧ " ದಿಂದ ಪರಿಹೃತವಾಗುತ್ತದೆ. 12ನೇ ದಿನದ ಶ್ರಾದ್ಧದಿಂದ " ಯಂತ್ರ ನರಕ " ದಿಂದ ಬಿಡುಗಡೆ ಹೊಂದುತ್ತದೆ. ಮಾಸಿಕ ಶ್ರಾದ್ಧ ಮಾಡುವುದರಿಂದ " ಸೂರ್ಮಿ " ಎಂಬ ನರಕದಿಂದ ಪಾರಾಗುವನು. ( ಸೂರ್ಮಿ ನರಕ ಅಂದರೆ ಚೆನ್ನಾಗಿ ಕಾದಿರುವ ತಾಮ್ರದ ಸ್ತ್ರೀ ಬೊಂಬೆಯನ್ನು ಆಲಂಗಿಸುತ್ತಾ ಕಾದ ಮಂಚದ ಮೇಲೆ ಮಲಗಬೇಕು ). ತ್ರೈಪಕ್ಷಿಕ ಶ್ರಾದ್ಧದಿಂದ " ಸಾರಮೇಯಾದನ " ಎಂಬ ನರಕದಿಂದ ಪಾರಾಗುವನು. ( ಈ ನರಕದಲ್ಲಿ ಕಬ್ಬಿಣದಂತೆ ಗಟ್ಟಿಯಾಗಿ ಕೋರೆ ಹಲ್ಲುಗಳಿರುವ " ನಾಯಿ " ಗಳು ಪ್ರೇತನ ಪೃಷ್ಠ ಮಾಂಸವನ್ನೇ ಅಪೇಕ್ಷಿಸಿ ಕಿತ್ತು ತಿನ್ನುತ್ತದೆ ). 2ನೇ ಮಾಸಿಕ ಶ್ರಾದ್ಧದಿಂದ " ಲೋಹಚಂಚು ಕಾಗೆ " ಗಳಿಂದ ಕಾಟವಿರುವುದಿಲ್ಲ. 3ನೇ ಮಾಸಿಕ ಶ್ರಾದ್ಧದಿಂದ " ಶಾಲ್ಮಲೀ " ಮೊದಲಾದ ನರಕದಿಂದ ಪಾರು ಮಾಡುತ್ತದೆ. 4ನೇ ಮಾಸಿಕ ಶ್ರಾದ್ಧದಿಂದ " ರೌರವ ನರಕ " ದಿಂದ ಮುಕ್ತರಾಗುತ್ತಾರೆ. 5ನೇ ಮಾಸಿಕ ಶ್ರಾದ್ಧದಿಂದ " ಕುಂಭೀಪಾಕ " ನರಕ ಪರಿಹಾರ. 6ನೇ ಮಾಸಿಕ ಶ್ರಾದ್ಧದಿಂದ " ವೈತರಣೀ " ಯಿಂದ ಬಿಡುಗಡೆ. 7ನೇ ಮಾಸಿಕ ಶ್ರಾದ್ಧ " ಸಂವರ್ತಕ ನರಕ " ದಿಂದ ಪಾರು ಮಾಡುತ್ತದೆ. 8ನೇ ಮಾಸಿಕ ಶ್ರಾದ್ಧ " ಸಂದಂಶ " ನರಕದಿಂದ ಪಾರು ಮಾಡುತ್ತದೆ. 9ನೇ ಮಾಸಿಕ ಶ್ರಾದ್ಧ " ಅಗ್ನಿಕೂಟ " ಎಂಬ ನರಕದಿಂದ ಉದ್ಧಾರ ಮಾಡುತ್ತದೆ. ಗುರು - ತಂದೆ - ತಾಯಿ - ಅನ್ನ ನೀಡಿದ ಸ್ವಾಮಿ ಇವರುಗಳಿಗೆ ದ್ರೋಹ ಮಾಡಿದವರು ಉರಿಯುತ್ತಿರುವ ಕೆಂಡ ರಾಶಿಗಳಲ್ಲಿ ಮುಳುಗುತ್ತಾರೆ. 10ನೇ ಮಾಸಿಕ ಶ್ರಾದ್ಧ ಮಾಡುವುದರಿಂದ ಇದಕ್ಕೆ ಸ್ವಲ್ಪ ತೃಪ್ತಿ. ದೊದ್ದವರು - ಸ್ವಾಮಿಗಳು ಬಂದಾಗ ಅವರಿಗೆ ಸಿಗದೇ ತಲೆ ಮರೆಸಿಕೊಳ್ಳುವ ವ್ಯಕ್ತಿಗಳು ಕಾದಿರುವ ಮರಳಿನಿಂದ ತುಂಬಿರುವ ನರಕದಲ್ಲಿ ಬಿದ್ದು ಸುತ್ತು ಬೆಂದು ಹೋಗುತ್ತಾರೆ. 12ನೇ ಮಾಸಿಕ ಶ್ರಾದ್ಧದಿಂದ ಇದಕ್ಕೆ ಮುಕ್ತಿ. ಸಪಿಂಡೀ ಕರಣವಾಗುವ ವರೆಗೂ ಪ್ರೇತತ್ವ ಹೋಗುವುದಿಲ್ಲ " ಯಾವತ್ ಸಪಿಂಡೀತಾ ನೈವಾ ತಾವತ್ ಪ್ರೇತಃ ಸ ತಿಷ್ಠತಿ " ಧರ್ಮಿಷ್ಠರಾಗಿದ್ದರೂ ಸಪಿಂಡೀ ಆಗದೆ ಪ್ರೇತತ್ವ ತೊಲಗದು " ಅಪಿ ಧರ್ಮ ಸಮೋಪೇತಃ ತಪಸ್ಯಾಪಿ ಸಮನ್ವಿತಃ " ವಿಶೇಷ ವಿಚಾರ : ಮೃತನಾಗಿ ಪ್ರೇತತ್ವವನ್ನು ಹೊಂದಿದ ಚೇತನನೂ ಮೊದಲನೆಯ ದಿನ ಸ್ಥೂಲ ದೇಹವನ್ನು ಬಿಟ್ಟು ಕೇವಲ ಸೂಕ್ಷ್ಮ ದೇಹದಿಂದ ಕೂಡಿದವನಾಗಿ ಮೊದಲಿನ 10 ದಿನಗಳಲ್ಲಿ ಕೊಡಲ್ಪಟ್ಟ ಪಿಂಡ ಬಲಿಗಳಿಂದ ಉತ್ಪನ್ನವಾದ ಪೂರ್ಣವಾದ ಪ್ರೇತ ದೇಹದಿಂದ ಕೂಡಿದವನಾಗಿ ಅತ್ಯಧಿಕವಾದ ಹಸಿವಿನಿಂದ " ಏಕೋದಿಷ್ಟ ಶಾದ್ಧಾನ್ನ " ಗಳನ್ನು ಭುಂಜಿಸಿ; ೧೨ನೇ ದಿನವೂ ಕರ್ತೃವಿನ ಮನೆಯ ಬಾಗಿಲಲ್ಲೇ ನಿಂತು ಅವನಿಂದ ಕೊಡಬಹುದಾದ ಶ್ರಾದ್ಧನ್ನವನ್ನು ಎದುರು ನೋಡುತ್ತಿರುತ್ತದೆ. 13ನೇ ದಿನದಿಂದ ಹಗಲೂ ರಾತ್ರಿ ಸೇರಿ ಪ್ರತಿದಿನವೂ 247 ಯೋಜನಗಳಷ್ಟು ನಡೆದು ವರ್ಷದ ಕೊನೆಯಲ್ಲಿ " ಶ್ರೀ ಯಮಧರ್ಮರಾಜ " ರ ಆಸ್ಥಾನವನ್ನು ಸೇರುತ್ತದೆ. ( ಮೃತ ವ್ಯಕ್ತಿಯ ವಾಯು ಶರೀರ ನಗ್ನವಾಗಿರುತ್ತದೆ ) ಇಡೀ ವರ್ಷ ಹಸಿವು ದಾಹಗಳಿರುವುದರಿಂದ ಅವುಗಳಿಗೆ ಪುತ್ರನು ವರ್ಷಾಬ್ಧಿಕ ಪರ್ಯಂತ ಒಂದು ವರ್ಷ ಕಾಲ ಪ್ರತಿನಿತ್ಯವೂ ತಪ್ಪದೆ ಪಾತ್ರೆ ಅಥವಾ ಉಡಕುಂಭ ಸಹಿತ ( ಸೋದಕುಂಭ ) ಶ್ರಾದ್ಧವನ್ನು ಮಾಡಲೇಬೇಕು. ನನ್ನನ್ನು ( ಪ್ರೇತ ) ದುಃಖದಿಂದ ಪಾರು ಮಾಡುವ ಪುತ್ರರು ಅಥವಾ ಬಂಧುಗಳಾದರೂ ಇದ್ದಾರೆಯೇ ಎಂದು ಚಿಂತಿಸುತ್ತಾ " ಯಮಪುರಿ " ಗೆ ಕಾಲಿಡುತ್ತದೆ. ಆದ್ದರಿಂದ ಮೃತ ಜೀವಿಗೆ ಪುತ್ರಾದಿಗಳು ತಪ್ಪದೆ ಶ್ರದ್ಧೆಯಿಂದ ಶ್ರಾದ್ಧಾನವನ್ನೂ - ಜಲ ದಾನಗಳನ್ನು ಕೊಟ್ಟು ತಮ್ಮ ಪಿತೃಗಳನ್ನು ತೃಪ್ತಿ ಪಡಿಸಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗುವುದು!! ಆಧಾರ: ಗರುಡ ಪುರಾಣ ಕೃಷ್ಣಾರ್ಪಣಮಸ್ತು (ಸತ್ಸಂಗ ಸಂಗ್ರಹ)
****

ಪಿತೃ ಪಕ್ಷ, ಪಕ್ಷದ ಮಹತ್ವ, ಪೂಜಾ ವಿಧಾನ 

ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ. ಹದಿನಾರು ದಿನಗಳ ಈ ಪಿತೃ ಪಕ್ಷದ ಅವಧಿಯಲ್ಲಿ ಮೃತರ ಆತ್ಮಕ್ಕೆ ನೆಮ್ಮದಿ ಸಿಗಲಿ, ಅವರ ಪುನರ್ಜನ್ಮ ಮತ್ತು ಶಾಶ್ವತವಾಗಿ ಈ ವಿಶ್ವದಿಂದ ಮುಕ್ತ ಹರಿವಿಗೆ ತರ್ಪಣವನ್ನು ನೀಡುವುದು ಪದ್ಧತಿ. 

ಶ್ರದ್ಧಾ ಪೂಜೆ ವೇಳೆ ಈ ನಿಯಮಗಳನ್ನು ತಪ್ಪದೇ ಪಾಲಿಸಿ ಏನಿದು ಪಿತೃಪಕ್ಷ?

 ಅಕಾಲಿಕವಾಗಿ ಮೃತಪಟ್ಟವರ ಸಾವು ನಮಗೆ ನೋವು ಮತ್ತು ಸಂಕಟಗಳನ್ನು ನೀಡುತ್ತದೆ ಹಾಗೂ ಅವರ ದೇಹವು ಸಾಯುತ್ತದೆ ಆದರೆ ಆತ್ಮಗಳು ಸಾಯುವುದಿಲ್ಲ ಎಂದು ಹೇಳಲಾಗುತ್ತದೆ. ಈ ಬ್ರಹ್ಮಾಂಡದ ಕೊನೆಯವರೆಗೂ ಆತ್ಮಗಳು ಇರುತ್ತವೆ ಮತ್ತು ಯಾರಾದರೂ ಅಕಾಲಿಕ ಮರಣದಿಂದ ಸತ್ತರೆ ಹೊಸ ಜನ್ಮದ ರೂಪದಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳಲು ಮುಕ್ತರಾಗಬೇಕು ಎಂಬ ನಂಬಿಕೆ ಇದೆ. ಅತೃಪ್ತ ಆತ್ಮವು ತನ್ನ ಕುಟುಂಬ ಸದಸ್ಯರಿಗಿಂತ ಹೆಚ್ಚು ನೋವಿನಿಂದ ಕೂಡಿದೆ ಆದ್ದರಿಂದ ಈ ಅಮರ ಪ್ರಪಂಚದಿಂದ ಅದನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ಅವರ ಕುಟುಂಬ ಸದಸ್ಯರ ಮೇಲಿದೆ. ಹಿಂದೂ ಧರ್ಮದಲ್ಲಿ, ನಮ್ಮ ಆಪ್ತರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು 13 ದಿನಗಳಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಇದೆ. ಆದರೆ ಒಬ್ಬ ವ್ಯಕ್ತಿಯು ಅಕಾಲಿಕ ಮರಣವನ್ನು ಅನುಭವಿಸಿದಾಗ, 13 ದಿನಗಳ ಪ್ರಕ್ರಿಯೆಗೆ ಸಲಹೆ ನೀಡಲಾಗುವುದಿಲ್ಲ. ಜನರು ಚಂದ್ರಗ್ರಹಣದಲ್ಲಿ ಅಂದರೆ ಭಾದ್ರಪದ ತಿಂಗಳಲ್ಲಿ ಅಂದರೆ ಕೃಷ್ಣ ಪಕ್ಷ ತಿಂಗಳ ದ್ವಿತೀಯಾರ್ಧದಲ್ಲಿ ಪಿತೃ ಪಕ್ಷ ಪೂಜೆಯನ್ನು ಮಾಡುತ್ತಾರೆ. 15 ಚಂದ್ರ ದಿನಗಳನ್ನು ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷ ಪೂಜೆಯ ಮಹತ್ವ ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ಮೊದಲ ವರ್ಷದಲ್ಲಿ ಶ್ರಾದ್ಧ ಆಚರಣೆಗಳನ್ನು ಮಾಡಲು ಸೂಚಿಸಲಾಗಿದೆ ಏಕೆಂದರೆ ಸಾವಿನ ನಂತರ ಒಂದು ವರ್ಷದ ನಂತರ ಅವರಿಗೆ ತಿನ್ನಲು ಆಹಾರ ಪಡೆಯುತ್ತಾರೆ. ಮೊದಲ ವರ್ಷದಲ್ಲಿ ಈ ಪಿತೃಪಕ್ಷದಲ್ಲಿ ನಾವು 13 ದಿನಗಳ ಕಾಲ ಆಹಾರ ನೀಡಬೇಕು ಎಂದು ನಂಬಲಾಗಿದೆ. ಒಬ್ಬ ವ್ಯಕ್ತಿಯು 13 ದಿನಗಳ ನಿರ್ಗಮನ ಮಾಡಿದಾಗ ಅದರ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರವನ್ನು ಮಾಡುತ್ತಾರೆ ಮತ್ತು ಅವರಿಗೆ ಆಹಾರವನ್ನು ನೀಡಲಾಗುತ್ತದೆ. 13 ದಿನಗಳ ನಂತರ ಆತ್ಮವು ತನ್ನ ಪ್ರಯಾಣವನ್ನು ಆರಂಭಿಸುತ್ತದೆ ಮತ್ತು ಹನ್ನೊಂದು ತಿಂಗಳಲ್ಲಿ ಯಮಲೋಕವನ್ನು ತಲುಪುತ್ತದೆ ಮತ್ತು ಕೊನೆಯ ಒಂದು ತಿಂಗಳಲ್ಲಿ ಅವರು ಯಮನ ಆಸ್ಥಾನವನ್ನು ತಲುಪುತ್ತಾರೆ. ಆಗ ಮಾತ್ರ ಅವನಿಗೆ ತಿನ್ನಲು ಆಹಾರ ಸಿಗುತ್ತದೆ. ಈ ಕಾರಣದಿಂದ ಶ್ರಾದ್ಧ ಮಾಡುವುದು ಬಹಳ ಮುಖ್ಯ ಎನ್ನಲಾಗುತ್ತದೆ. ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಡುವ ಅಮವಾಸ್ಯೆಯು ಅಗಲಿದ ಆತ್ಮಗಳಿಗೆ ಸಮರ್ಪಿತವಾಗಿದೆ. ನೀವು ಈ ದೇಹವನ್ನು ತೊರೆದಾಗ ಪುರೂರವ, ವಿಶ್ವದೇವ ಎಂಬ ದೇವತೆಗಳಿಂದ ಇನ್ನೊಂದು ಜಗತ್ತಿಗೆ ಮಾರ್ಗದರ್ಶನ ಪಡೆಯುತ್ತೀರಿ. ಅವರು ಬಂದು ನಿಮ್ಮನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಮಹಾಲಯ ಅಮಾವಾಸ್ಯೆಯು ನೀವು ಅಗಲಿದ ಎಲ್ಲ ಆತ್ಮಗಳನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ಮತ್ತು ಅವರಿಗೆ ಶಾಂತಿಯನ್ನು ಬಯಸುವ ದಿನವಾಗಿದೆ. ಪುರಾತನ ಸಂಪ್ರದಾಯದ ಪ್ರಕಾರ ಕುಟುಂಬದ ಸದಸ್ಯರು ಎಳ್ಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ತಮ್ಮ ಪೂರ್ವಜರನ್ನು ಪ್ರಾರ್ಥಿಸುತ್ತಾ 'ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಬಹುದು'. ಇದನ್ನು ಮೂರು ಬಾರಿ ಹೇಳಿ ಮತ್ತು ನಂತರ ಅವರು ಸ್ವಲ್ಪ ಎಳ್ಳಿನ ಕಾಳುಗಳನ್ನು ನೀರಿನಲ್ಲಿ ಬಿಡುತ್ತಾರೆ. ಈ ಆಚರಣೆಯ ಮಹತ್ವವೆಂದರೆ ಅಗಲಿದವರಿಗೆ ಹೇಳುವುದು - ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಆಸೆಗಳಿದ್ದರೆ, ಅವು ಎಳ್ಳಿನಂತೆ ಎಂದು ತಿಳಿಯಿರಿ. ಅವು ಗಮನಾರ್ಹವಲ್ಲ, ಅವುಗಳನ್ನು ಬಿಡಿ. ನಾವು ನಿಮಗಾಗಿ ಅವುಗಳನ್ನು ನೋಡಿಕೊಳ್ಳುತ್ತೇವೆ. ನೀವು ಮುಕ್ತ, ಸಂತೋಷ ಮತ್ತು ತೃಪ್ತರಾಗಿರುತ್ತೀರಿ ಎಂದು ಹೇಳುವ ಪದ್ಧತಿ ಇದೆ. ತರ್ಪಣ ಎಂದರೆ ಅಗಲಿದವರಿಗೆ ತೃಪ್ತಿಯನ್ನು ತರುವುದು. ಅವರಿಗೆ ತೃಪ್ತಿ ಮತ್ತು ಮುಂದೆ ಸಾಗುವಂತೆ ಹೇಳಲು ಇದನ್ನು ಮಾಡಲಾಗುತ್ತದೆ. ನೀರು ಪ್ರೀತಿಯ ಸಂಕೇತ. ಯಾರಿಗಾದರೂ ನೀರು ಕೊಡುವುದು ಎಂದರೆ ಪ್ರೀತಿಯನ್ನು ನೀಡುವುದು. ಮಹಾಲಯ ಅಮಾವಾಸ್ಯೆಯ ಮಹತ್ವ ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ. ಇದು ಸರ್ವಪತ್ರಿ ಅಮಾವಾಸ್ಯೆ ಅಥವಾ ಸರ್ವಪಿತೃ ಮೋಕ್ಷ ಅಮವಾಸ್ಯೆ ಎಂದೂ ಕರೆಯಲ್ಪಡುವ ಪ್ರಮುಖ ದಿನವಾಗಿದೆ. ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ. ಪೂರ್ವಜರ ಸಾವಿನ ಸಮಯ, ದಿನಾಂಕ ಮತ್ತು ಸ್ವಭಾವವನ್ನು ಲೆಕ್ಕಿಸದೆ ಶ್ರಾದ್ಧವನ್ನು ಮಾಡುವ ಮೂಲಕ ಒಬ್ಬನು ತನ್ನ ಪೂರ್ವಜರಿಗೆ ಕರ್ತವ್ಯವನ್ನು ಪೂರೈಸುವ ದಿನ ಇದು. ಇದು ಒಂದು ರೀತಿಯ ಪರ್ವಾಣ ಶ್ರಾದ್ಧ. ಈ ದಿನ ಶ್ರಾದ್ಧ, ತರ್ಪಣವನ್ನು ಮಾಡಲಾಗುತ್ತದೆ. ಈ ದಿನವು ಎಲ್ಲಾ ಪೂರ್ವಜರು ಅಥವಾ ಕುಟುಂಬದ ಸದಸ್ಯರಿಗೆ ಅಪರಾ ಕರ್ಮವನ್ನು ಮಾಡಲು ಸೂಕ್ತವಾಗಿದೆ. ಒಂದು ವೇಳೆ ಪಿತೃಪಕ್ಷದ ಇತರ ಎಲ್ಲ ದಿನಗಳಲ್ಲಿ ಆಚರಣೆಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮಹಾಲಯ ಅಮಾವಾಸ್ಯೆಯಂದು ಇದನ್ನು ಮಾಡಬಹುದು. ಕೆಲವರು ಕುಟುಂಬ ಸದಸ್ಯರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸ್ವಚ್ಛಗೊಳಿಸುವುದು ಮತ್ತು ಪಿತೃ ಪಕ್ಷ ಪೂಜೆ ಮಾಡುವುದು ಮತ್ತು ಆ ದಿನ ಮೃತರನ್ನು ಸಮಾಧಾನಪಡಿಸಲು ವಿವಿಧ ಆಹಾರ ಪದಾರ್ಥಗಳನ್ನು ನೀಡುವುದು ಸಾಮಾನ್ಯವಾಗಿದೆ.
***

ಶ್ರಾದ್ಧ ಕರ್ಮದ ಉದ್ದೇಶವೇನು?
ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಅಮರತ್ವ. ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು? 
ಸಾಮಾನ್ಯವಾಗಿ ವೈದಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ. 

ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ.
ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆ ಎಂಬ ಸ್ಥಾನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತಿಯೊಬ್ಬರ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. 
ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿ-ಅತೃಪ್ತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ "ಪಿತೃಶಾಪ" ಎನ್ನುತ್ತದೆ ಜ್ಯೋತಿಃಶಾಸ್ತ್ರ. ಪಿತೃಕಾರ್ಯಗಳು ಸರಿಯಾಗಿ ನಡೆಯದಿದ್ದರೆ ಮೇಲ್ಕಂಡ ಸ್ಥಿತಿ ಏರ್ಪಡುತ್ತದೆ ಎಂದರ್ಥ. 
ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಪಿತೃಗಳನ್ನು ಎಲ್ಲರೂ ನೆನೆಯಬೇಕು .

ಪಿತೃಪ್ರಾರ್ಥನೆ : 
ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ | 
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ || 
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ | 
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ

ಪ್ರಶಾಂತಭಟ್ ಕೋಟೇಶ್ವರ🙏
***

ಮಕ್ಕಳ ಶ್ರಾದ್ಧವನ್ನು ಮಾಡಬೇಕೆ ಅಥವಾ ಬೇಡವೇ

  2 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಾರ್ಷಿಕ ತಿಥಿ ಹಾಗೂ 
ಶ್ರಾದ್ಧವನ್ನು ಮಾಡಲಾಗುವುದಿಲ್ಲ 

ಒಂದು ವೇಳೆ ಮರಣ ಹೊಂದಿದ ಮಗು 
 ಎರಡರಿಂದ  ಆರು ವರ್ಷಗಳ ವಯಸ್ಸಿನ ಮದ್ಯಯದ್ದಾಗಿದ್ದರೂ ಕೂಡ ಅದರ ಶ್ರಾದ್ಧ ಮಾಡಬಾರದು.
 ಅವರ ಮೃತ್ಯುವಿನ ೧೦ ದಿನಗಳ ಒಳಗೆ ಕೇವಲ ೧೬ ಪಿಂಡ ದಾನ (ಮಲೀನ ಷೋಡಶಿ) ಮಾಡಬೇಕು 

ಒಂದು ವೇಳೆ ಮೃತ ಮಗುವಿನ ವಯಸ್ಸು 6 ವರ್ಷಗಳಿಗಿಂತ ಅಧಿಕವಾಗಿದ್ದರೆ 
ಶ್ರಾದ್ಧ ಸಂಪೂರ್ಣ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ ...

ಎರಡರಿಂದ ಹತ್ತು ವರ್ಷದ ಅವಧಿಯಲ್ಲಿ ಕನ್ಯೆಯ ಮರಣ ಸಂಭವಿಸಿದರೆ ಆಕೆಯ ಶ್ರಾದ್ಧ ಮಾಡಬಾರದು 
ಕೇವಲ ಮಲೀನ ಷೋಡಶೀ ವರೆಗಿನ ಪ್ರಕ್ರಿಯೆ ಮಾಡಬೇಕು..

 ಅವಿವಾಹಿತ ಮೃತ ಕನ್ಯೆಯ ವಯಸ್ಸು ೧೦ವರ್ಷಕ್ಕಿಂತ ಅಧಿಕವಾಗಿದ್ದರೆ ಮಲೀನ ಷೋಡಶೀ ಏಕಾದಶಾಹ ಸಪಿಂಡ ಇತ್ಯಾದಿ ಕ್ರಿಯೆಗಳನ್ನು ಮಾಡಲಾಗುತ್ತದೆ 

ವಿವಾಹಿತ ಕನ್ಯೆಯ ಮರಣ ಸಂಭವಿಸಿದಾಗ ತಂದೆ ತಾಯಿಯ ಮನೆಯಲ್ಲಿ ಶ್ರಾದ್ಧಾದಿ ಕಮ೯ಗಳನ್ನು ಮಾಡಬಾರದು.
*****

ಶ್ರಾದ್ಧದಂದು ಕಾಗೆಗಳಿಗೆ ಆಹಾರ ನೀಡುವುದು ಯಾಕೆ ಗೊತ್ತಾ? 

 ನಾವು ಎಲ್ಲಿಂದ ಬಂದಿದ್ದೇವೆ? ಮರಣದ ನಂತರ ಎಲ್ಲಿಗೆ ಸೇರುತ್ತೇವೆ.. ಇಂತಹ ಪ್ರಶ್ನೆಗಳು ಹುಟ್ಟಿದಾಗಿನಿಂದಲೂ ನಮ್ಮ ಮನಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತಲೇ ಇರುತ್ತವೆ. ಆದರೆ ಹಿರಿಯರು ಇದಕ್ಕೆ ಕೊಡುವ ಉತ್ತರ ಕಾಗೆ.. ಹೌದು, ನಾವು ಸತ್ತ ಮೇಲೆ ಕಾಗೆಗಳಾಗುತ್ತೇವೆ ಎಂಬ ಮಾತು ಹೇಳುವುದನ್ನು ಕೇಳಿರುತ್ತೀರಿ. ಭಾರತವನ್ನು ಹೊರತುಪಡಿಸಿ, ಪ್ರಾಚೀನ ಸಂಸ್ಕೃತಿಗಳು ಮತ್ತು ನಾಗರಿಕತೆಗಳಲ್ಲಿ ಇನ್ನೂ ಕೆಲವು ದೇಶಗಳಲ್ಲಿ ಕಾಗೆಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಕೆಲವು ಹಬ್ಬಗಳ ಸಮಯದಲ್ಲಿ ಅವುಗಳಿಗೆ ಆಹಾರವನ್ನು ನೀಡಿ, ಪೂಜ್ಯನೀಯ ದೃಷ್ಟಿಯಿಂದ ನೋಡುವುದುಂಟು. ಅಂತಹ ಒಂದು ಸಮಯವೆಂದರೆ, ಪಿತೃಪಕ್ಷ ಕಾಲ. ಹಾಗಾದ್ರೆ ಈ ಸಂದರ್ಭದಲ್ಲಿ ಕಾಗೆಗಳಿಗೆ ಆಹಾರ ಏಕೆ ನೀಡಲಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಕಾಗೆಗಳಿಗೆ ಪ್ರಾಮುಖ್ಯತೆ ಏಕೆ ನೀಡಲಾಗುತ್ತದೆ?: 

1. ಹ್ಯುಗಿನ್ ಮತ್ತು ಮುನಿನ್ ಎನ್ನುವ ತಳಿಗೆ ಕಾಗೆಗಳ ಬಗ್ಗೆ ನಾರ್ಸ್ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದು, ಇವುಗಳನ್ನು ದೇವರ ಉತ್ಸಾಹದ ಸಂಕೇತವೆಂದು ವಿವರಿಸಲಾಗಿದೆ. 

2. ಗ್ರೀಕ್ ಪುರಾಣದಲ್ಲಿ, ಕಾಗೆಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದ್ದು, ಇದನ್ನು ದೇವರ ಸಂದೇಶವಾಹಕಗಳು ಮತ್ತು ವಿಶ್ವದ ಸೃಷ್ಟಿಕರ್ತರಲ್ಲಿ ಒಬ್ಬರು ಎಂದು ಹೇಳಲಾಗಿದೆ.

ಪಿತೃ ಪಕ್ಷದ ಸಮಯದಲ್ಲಿ ಕಾಗೆಗೆ ಆಹಾರ ನೀಡುವ ಮಹತ್ವ:

 ಶ್ರಾದ್ಧ ಅಥವಾ ಪಿತೃ ಪಕ್ಷವು 2021ರಲ್ಲಿ ಸೆಪ್ಟೆಂಬರ್ 20ರಂದು ಆರಂಭವಾಗಲಿದ್ದು, ಮುಂದಿನ ಹದಿನಾರು ದಿನಗಳ ಕಾಲ ಇರಲಿದೆ. ಶ್ರಾದ್ಧದ ಮೊದಲನೇ ದಿನವೇ ಪೌರ್ಣಮಿ ಶ್ರಾದ್ಧವಾಗಿರುತ್ತದೆ. ಧರ್ಮಗ್ರಂಥಗಳ ಪ್ರಕಾರ, ಪಿತೃ ಪಕ್ಷದಂದು ಶ್ರಾದ್ಧ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ನಾವು ಪಿತೃ ಪಕ್ಷದ ಸಮಯದಲ್ಲಿ ಸರಿಯಾದ ಸಂಸ್ಕಾರಗಳೊಂದಿಗೆ ಶ್ರಾದ್ಧ ಸಂಸ್ಕಾರಗಳನ್ನು ನಡೆಸದಿದ್ದರೆ, ನಮ್ಮ ಪೂರ್ವಜರಿಗೆ ಶಾಂತಿ ಸಿಗುವುದಿಲ್ಲ ಮತ್ತು ಅವರ ಆತ್ಮಗಳು ಈ ಪ್ರಪಂಚದಲ್ಲಿ ಸುತ್ತಾಡುತ್ತವೆ ಎಂದು ನಂಬಲಾಗಿದೆ. ಶ್ರಾದ್ಧ ಅವಧಿಯಲ್ಲಿ ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ

ಗರುಡ ಪುರಾಣದಲ್ಲಿ ಕಾಗೆ ಬಗ್ಗೆಯಿರುವ ಕಥೆ: 

ಗರುಡ ಪುರಾಣದಲ್ಲಿ ಕಾಗೆಯನ್ನು ಯಮರಾಜನ ಸಂದೇಶವಾಹಕ ಎಂದು ಹೇಳಲಾಗಿದೆ. ಶ್ರದ್ಧಾ ದಿನಗಳಲ್ಲಿ, ಕಾಗೆಗೆ ಆಹಾರ ನೀಡುವುದು ಒಂದು ಪ್ರಸಿದ್ಧ ಸಂಪ್ರದಾಯ ಮತ್ತು ಅದರ ಅಡಿಯಲ್ಲಿ ಹಸುವಿಗೆ ಆಹಾರವನ್ನು ಇಡಲಾಗುತ್ತದೆ ಎಂದು ನಂಬಲಾಗಿದೆ. ಕಾಗೆಯು ಆ ಆಹಾರವನ್ನು ಸ್ವೀಕರಿಸಿದರೆ, ಪೂರ್ವಜರು ಆಹಾರವನ್ನು ತೆಗೆದುಕೊಂಡಿದ್ದಾರೆ ಎಂದರ್ಥ. ಯಮನು ಒಮ್ಮೆ ಪ್ರಸಿದ್ಧ ರಾಜ ಮಾರುತಿಯ ಯಜ್ಞದ ಸಮಯದಲ್ಲಿ ಕಾಗೆಗೆ ವರವನ್ನು ನೀಡಿರುವುದರಿಂದ ಇಂದು ನಾವು ಕಾಗೆಗಳಿಗೆ ಪಿತೃ ಪಕ್ಷದಲ್ಲಿ ಪ್ರಮುಖವಾಗಿ ಆಹಾರವನ್ನು ನೀಡಲಾಗುತ್ತಿದೆ. ಯಮನು ಯಜ್ಞದ ಸಮಯದಲ್ಲಿ ಕಾಗೆಗಳನ್ನು ಕುರಿತು ನಿಮ್ಮನ್ನು ಪಿತೃ ಪಕ್ಷದ ಸಮಯದಲ್ಲಿ ಪೂಜಿಸುವಂತಾಗಲಿ. ಪಿತೃಗಳಿಗೆ ಸಲ್ಲಿಸಿದ ಆಹಾರಗಳು ನಿಮ್ಮ ಮೂಲಕ ಪಿತೃಗಳಿಗೆ ಸೇರುವಂತಾಗಲಿ ಎಂದು ವರವನ್ನು ನೀಡುತ್ತಾನೆ. ಆದ್ದರಿಂದ ಪಿತೃಪಕ್ಷದಂದು ಕಾಗೆಗಳಿಗೆ ಆಹಾರ ನೀಡಲಾಗುತ್ತದೆ.

ರಾಮ ಮತ್ತು ಸೀತೆಯ ವಿಚಾರದಲ್ಲಿ ಕಾಗೆ: 

ಕಾಗೆಗೆ ಸಂಬಂಧಿಸಿದ ಮತ್ತೊಂದು ದಂತಕಥೆಯ ಪ್ರಕಾರ, ಇಂದ್ರನ ಮಗನಾದ ಜಯಂತನು ಸೀತಾ ದೇವಿಯ ಮೇಲೆ ಆಕರ್ಷಿತನಾಗಿ ಆಕೆಯನ್ನು ಪಡೆಯಲು ಹಸುವಿನ ರೂಪವನ್ನು ತೆಗೆದುಕೊಂಡು ಸೀತೆಯ ಬಳಿ ಬರುತ್ತಾನೆ. ಸೀತೆಯಲ್ಲಿ ತನ್ನ ಪ್ರೇಮವನ್ನು ಹೇಳಿಕೊಂಡಾಗ ಸೀತೆ ಜಯಂತನನ್ನು ತಿರಸ್ಕರಿಸುತ್ತಾಳೆ. ಇದರಿಂದ ಕೋಪಗೊಂಡ ಜಯಂತನು ಸೀತೆಯ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಆಗ ಶ್ರೀರಾಮನು ಅವನನ್ನು ಬ್ರಹ್ಮಾಸ್ತ್ರದಿಂದ ಬಲವಾಗಿ ಹೊಡೆದನು. ಸ್ವಲ್ಪ ಸಮಯದ ನಂತರ, ಜಯಂತ ತನ್ನ ತಪ್ಪನ್ನು ಅರಿತುಕೊಂಡು, ರಾಮನಲ್ಲಿ ಕ್ಷಮೆಯಾಚಿಸಿದನು. ಭಗವಾನ್ ರಾಮನಿಗೆ ಪರಿಶುದ್ಧ ಹೃದಯವಿದ್ದುರಿಂದ ಆತನು ಅವನನ್ನು ಕ್ಷಮಿಸಿ, ಅವನಿಗೊಂದು ವರ ನೀಡಿದನು. ಅದೇನೆಂದರೆ, ಪಿತೃಪಕ್ಷದ ಸಮಯದಲ್ಲಿ ನಿಮಗೆ ಆಹಾರವನ್ನು ನೀಡಲಾಗುವುದು ಮತ್ತು ನಿಮ್ಮ ದೈವಿಕ ಬೆಂಬಲದ ಮೂಲಕ ನಿನ್ನ ಪೂರ್ವಜರಿಗೆ ಶ್ರಾದ್ಧದ ದಿನಗಳಲ್ಲಿ ಸ್ವರ್ಗದಲ್ಲಿ ಆಹಾರವನ್ನು ನೀಡಲಾಗುವುದು ಎಂಬ ವರ ನೀಡಿ ಆಶೀರ್ವದಿಸಿದನು.
*****

ಏಕಾದಶಿಯಂದುಯಾಕೆಮಾಧ್ವರು_ಶ್ರಾದ್ಧಮಾಡುವುದಿಲ್ಲ ! ಮಾಧ್ವರು ಏಕಾದಶಿಯಂದು ದೇವತೆಗಳಿಗೆ ನೈವೇದ್ಯವನ್ನು ಅಥವಾ ಶ್ರಾದ್ಧವಿದ್ದರೂ ಮಾಡುವುದಿಲ್ಲ. ಅನ್ಯಮತೀಯರು ಹೇಳುವುದುಂಟು " ಮಾಧ್ವರು ಮೃತತಿಥಿಯಲ್ಲಿ ಮಾಡದೆ ದ್ವಾದಶಿಯಂದು ಮಾಡುತ್ತಾರೆ ಅದಲ್ಲದೆ ಮಧ್ಯಾಹ್ನ ಮಾಡಬೇಕಾದ ಶ್ರಾದ್ಧವನ್ನು ಬೆಳಿಗ್ಗೆಯೇ ಮುಗಿಸಿ ಶಾಸ್ತ್ರವಿರುದ್ಧವಾಗಿ ನಡೆದುಕೊಳ್ಳುತ್ತಾರೆ" ಎನ್ನುವರು. ಹಾಗಾದರೆ ಮಾಧ್ವರು ಮಾಡುತ್ತಿರುವುದು ಶಾಸ್ತ್ರವಿರುದ್ಧವೇ !? ನೋಡೋಣ. ಏಕಾದಶಿವ್ರತದ ಮಾಹಾತ್ಮೆಯನ್ನು ಹೇಳುವಾಗ ಸಾತ್ವಿಕವಾದ ಪಾದ್ಮಪುರಾಣವು - ಏಕಾದಶೀಂ ಪರಿತ್ಯಜ್ಯ ಯೋ ಹ್ಯನ್ಯದ್ವ್ರತಮಾಚರೇತ್ ಸ ಕರಸ್ಥಂ ಮಹಾರಾಜ್ಯಂ ತ್ಯಕ್ತ್ವಾ ಭೈಕ್ಷ್ಯಂ ತು ಯಾಚತೇ ೯ ಏಕಾದಶಿಯೆಂಬ ಮಹಾವ್ರತವನ್ನು ಬಿಟ್ಟು ಬೇರೆ ವ್ರತಗಳನ್ನು ಯಾರು ಆಚರಿಸುವರೋ ಅಂತವರು ತನ್ನ ಕೈಯಲ್ಲಿದ್ದ ಮಹಾಸಾಮ್ರಾಜ್ಯವನ್ನು ಮರೆತು ಭಿಕ್ಷೆಯನ್ನು ಯಾಚಿಸಿದಂತೆ ಎನ್ನುತ್ತಾರೆ. ಅಂದರೆ ಏಕಾದಶಿಯ ದಿವಸ ಅದರ ಪರಿಪಾಲನೆಯೇ ಪಿತೃವ್ರತವೇ ಮೊದಲಾದ ವ್ರತಗಳಿಗಿಂತ ಹಿರಿದಾದ್ದು. ಶ್ರಾದ್ಧಕ್ಕಾಗಿ ಏಕಾದಶಿ ಬಿಟ್ಟರೆ ದೊಡ್ಡ ಹಾನಿಯು. ಹಾಗಾದರೆ ಏಕಾದಶಿಯ ದಿವಸ ಶ್ರಾದ್ಧಾದಿಗಳು ಬಂದರೆ ಏನುಮಾಡುವುದು !? ಎಂದರೆ ಮುಂದುವರೆದು ಪದ್ಮಪುರಾಣವು - ಏಕಾದಶ್ಯಾಂ ಚ ಪ್ರಾಪ್ತಾಯಾಂ ಮಾತಾಪಿತ್ರೋರ್ಮೃತೇಽಹನಿ ೧೩ ದ್ವಾದಶ್ಯಾಂ ತು ಪ್ರದಾತವ್ಯಂ ನೋಪವಾಸದಿನೇ ಕ್ವಚಿತ್ ಗರ್ಹಿತಾನ್ನಂ ನ ವಾಶ್ನಂತಿ ಪಿತರಶ್ಚ ದಿವೌಕಸಃ ೧೪ ಏಕಾದಶಿಯು ಒಂದು ವೇಳೆ ಮಾತಾದಿಗಳ ಮೃತತಿಥಿಯಾಗಿದ್ದರೆ ಆ ಶ್ರಾದ್ಧವನ್ನು ದ್ವಾದಶಿಯಂದು ಮಾಡಬೇಕೇ ಹೊರತು ಉಪವಾಸದಿನದಂದು ಅಲ್ಲ. ಏಕಾದಶಿಯಂದು ಅನ್ನವನ್ನು ಕೊಟ್ಟರೆ ಪಿತೃಗಳಾಗಲಿ ದೇವತೆಗಳಾಗಲಿ ಸ್ವೀಕರಿಸುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಅದೇ ಪದ್ಮಪುರಾಣದ ಪುಷ್ಕರಕಾಂಡದಲ್ಲಿ - ಏಕಾದಶ್ಯಾಂ ಯದಾ ರಾಮ ಶ್ರಾದ್ಧಂ ನೈಮಿತ್ತಿಕಂ ಭವೇತ್ | ತದ್ದಿನಂ ತು ಪರಿತ್ಯಜ್ಯ ದ್ವಾದಶ್ಯಾಂ ಶ್ರಾದ್ಧಮಾಚರೇತ್ || ಹೇ ರಾಮನೇ ಒಂದು ವೇಳೆ ಏಕಾದಶಿಯಂದು ನೈಮಿತ್ತಿಕ ಶ್ರಾದ್ಧವು ಬಂದರೆ ಆ ದಿನದಂದು ಮಾಡದೆ ದ್ವಾದಶಿಯಂದು ಮಾಡಬೇಕು ಎಂದಿದ್ದಾರೆ. ಹಾಗೆಯೇ ರಾಜಸಪುರಾಣವಾದ ಬ್ರಹ್ಮವೈವರ್ತಪುರಾಣದಲ್ಲಿ - ಯೇ ಕುರ್ವ್ವನ್ತಿ ಮಹೀಪಾಲ ಶ್ರಾದ್ಧಂ ತ್ವೇಕಾದಶೀದಿನೇ| ತ್ರಯಸ್ತೇ ನರಕಂ ಯಾನ್ತಿ ದಾತಾ ಭೋಕ್ತಾ ಪರೇತಕಃ || ರಾಜನೇ ! ಯಾರು ಏಕಾದಶಿಯಂದು ಶ್ರಾದ್ಧವನ್ನು ಮಾಡಿದರೆ ಮಾಡಿದವರು, ಪಿತೃಗಳು ಹಾಗೆಯೇ ಮಾಡಿಸಿದವನು ಹೀಗೆ ಮೂವರೂ ನರಕವನ್ನು ಹೊಂದುವರು ಎಂದಿದ್ದಾರೆ. ತಾಮಸವಾದ ಸ್ಕಾಂದಪುರಾಣ - ಏಕಾದಶೀ ಯದಾ ನಿತ್ಯಾ ಶ್ರಾದ್ಧಂ ನೈಮಿತ್ತಿಕಂ ಭವೇತ್ | ಉಪವಾಸಂತದಾ ಕುರ್ಯ್ಯಾತ್ ದ್ವಾದಶ್ಯಾಂ ಶ್ರಾದ್ಧಮಾಚರೇತ್ || ಏಕಾದಶಿಯ ದಿವಸ ಶ್ರಾದ್ಧವು ಬಂದರೆ ಆ ಶ್ರಾದ್ಧವನ್ನು ದ್ವಾದಶಿಯಂದೇ ಮಾಡಬೇಕೆಂದಿದ್ದಾರೆ. ಇದೇ ಅಭಿಪ್ರಾಯವನ್ನು ತಿಳಿಸುವ ಸ್ಮೃತಿವಚನಗಳನ್ನು ವಾಚಸ್ಪತ್ಯ, ವೈಖಾನಸಗೃಹ್ಯ ಮೊದಲಾದವು ಕಡೆ ಉದ್ದರಿಸಿದ್ದಾರೆ. ಸೂತಾಕಾದೌ ಯದಾ ಶ್ರಾದ್ಧಂ ಭೂತಕಾನ್ತೇ ಯಥಾ ಭವೇತ್ | ತಥಾ ಚೈಕಾದಶೀಶ್ರಾದ್ಧಂ ದ್ವಾದಶ್ಯಾಮೇವ ಕಾರಯೇತ್ || ವೃದ್ಧಹಾರೀತ ಪಿತ್ರೋಃ ಶ್ರಾದ್ಧಂ ನ ಕುವನ ಏಕಾದಶ್ಯಾಂ ದ್ವಿಜೋತ್ತಮಃ | ದ್ವಾದಶ್ಯಾಂ ತತ್ ಪ್ರಕುರ್ವೀತ ನೋಪಾಸದಿನೇ ಕ್ವಚಿತ್ || ಹಾರೀತ ಏಕಾದಶ್ಯಾಂ ನ ಭುಞ್ಜೀತ ಪಕ್ಷಯೋರುಭಯೋರಪಿ | ಅನೇನ ವಿಧಿವಾಕ್ಯೇನ ತತ್ರ ಶ್ರಾದ್ಧೇ ಪರೇಽಹನಿ || ಪರಾಶರ ಆದಿಶ್ರಾದ್ಧಂ ಹರೇದೇನೇ ಯದಿ ಸ್ಯಾತ್ ತನ್ನ ಕಾರವೇತ್ | ಪಿಂಡಮೇಕಂ ಭದಾಯಾಽಥ ದ್ವಾದಶ್ಯಾಂ ಶ್ರಾದ್ಧಮಾಚರೇತ್ || ಶೋಧಾಯನ ಏಕಾದಶಾಹೇ ಯದಿ ಶುಕ್ರವಾರೋ ರೋಹಿಣ್ಯಥಾಪ್ಯುತರಫಲ್ಗುನೀ ವಾ | ಪ್ರೇತಾಯ ದದ್ಯಾದಥ ಪಿಂಡಮೇಕಂ ಶ್ರಾದ್ಧಂ ತು ದದ್ಯಾದಪರೇದ್ಯುರೇವ || ಅಂಗಿರ ನಿತ್ಯಶ್ರಾದ್ಧಂ ನ ಕುಚತ ಸಂಪ್ರಾಪ್ತೇ ಹರಿವಾಸರೇ | ಅಪರೇಽಹನಿ ತನ್ತ್ರೇಣ ಶ್ರಾದ್ಧದ್ವಿತಯಮಾಚರೇತ್ || ಆದ್ಯಶ್ರಾದ್ಧಂ ವಿಷ್ಣುದಿನೇ ಯದಿ ಕುರ್ಯಾದ್ವಿಮೋಹಿತಃ | ಕರ್ತಾ ಪ್ರತಿಗೃಹೀತಾ ಚ ಉಭೌ ನರಕಾಮಿನೌ || ಉಶನಾ ಹೀಗೆ ಹಲವಾರು ಪ್ರಮಾಣಗಳ ಅನುಸಾರ ಮಾಧ್ವರು ಏಕಾದಶಿ ಶ್ರಾದ್ಧವನ್ನು ಮಾಡದೆ ದ್ವಾದಶಿಯಲ್ಲೇ ಮಾಡುತ್ತಾರೆ. ಇನ್ನೂ ಪಂಚರಾತ್ರದ ಶೇಷಸಂಹಿತೆಯಲ್ಲಿ - ತದ್ವದೇಕಾದಶೀಶ್ರಾದ್ಧಂ ತತ್ಕುರ್ಯಾತದನನ್ತರಮ್ | ಬ್ರಾಹ್ಮೇ ಮುಹೂರ್ತೇ ಸಂಪ್ರಾಪ್ತೇ ಸ್ವಗಹ್ಯೋಕ್ತವಿಧಾನತಃ ||.... ಏಕಾದಶಿಯ ಶ್ರಾದ್ಧವನ್ನು ದ್ವಾದಶಿಯಂದು ಸ್ವಗೃಹ್ಯೋಕ್ತವಿಧಾನದಂತೆ ಮಾಡಿ ದೇವಪೂಜೆ ವೈಶ್ವದೇವ ಬ್ರಾಹ್ಮಣಾರಾಧನಾದಿಗಳೊಂದಿಗೆ ಪಾರಣೆಯನ್ನು ಮಾಡುವಂತೆ ತಿಳಿಸುತ್ತದೆ. ದ್ವಾದಶಿಯ ಪ್ರಾತಃಕಾಲದಲ್ಲಿ ಶ್ರಾದ್ಧವು ಶಾಸ್ತ್ರ ಸಮ್ಮತ. ಇದೇ ನಿಯಮ ಕೃಷ್ಣಜಯಂತಿಯಲ್ಲೂ ಅನುಸರಿಸುತ್ತಾರೆ. ಯಾಕೆಂದರೆ ಭವಿಷ್ಯತ್ಪುರಾಣದಲ್ಲಿ ಯುಧಿಷ್ಠಿರನು ಕೃಷ್ಣನು ಭಗವಂತನನ್ನು ಪ್ರಶ್ನಿಸುವಾಗ ಕೀದೃಶಂ ತದ್ವ್ರತಂ ದೇವ ಸರ್ವೈರ್ದೇವೈರನುಷ್ಠಿತಮ್ ಎಂಬುದಾಗಿ ಎಲ್ಲಾ ದೇವತೆಗಳು ಕೃಷ್ಣಜಯಂತಿಯನ್ನು ಆಚರಿಸುತ್ತಾರೆ ಎಂಬುದನ್ನು ತಿಳಿಸಿದ್ದಾನೆ. ಆದ್ದರಿಂದ ಅವತ್ತೂ ದೇವಪಿತೃಗಳಿಗೆ ಅನ್ನಸಮರ್ಪಣೆ ಇಲ್ಲ. ಹರಿಪ್ರೀಯತಾಮ್ -ಬೆಳ್ಳೆ ಸುದರ್ಶನ ಆಚಾರ್ಯ
*****
**

ಶ್ರದ್ಧೆ ಮತ್ತು ಶ್ರಾದ್ಧ

ಏನೋ ಇಷ್ಟು ದಿನ ರಾಮಾಯಣಾನೋ, ಮಹಾಭಾರತದ ಕಥೆಯೋ ಬರೆಯತ್ತಿದ್ದವನ ದಿಕ್ಕು ಇದ್ದಕ್ಕಿಂದಂತೆ ಸ್ಮಶಾನ, ಅಂತ್ಯಕ್ರಿಯೆ,ಶ್ರಾದ್ಧ, ಪಿಂಡಪ್ರದಾನ ಮುಂತಾದವುಗಳತ್ತ ತಿರುಗುತ್ತಿದೆಯಲ್ಲಾ ಅಂತೀರಲ್ವಾ.! ಜೊತೆಗೆ ಇದೆಲ್ಲಾ ಯಾಕೆ ಬೇಕು‌ ಅನ್ನುವ ಪ್ರಶ್ನೆ.?
ಯಾರೋ ಪಂಡಿತರು, ಪುರೋಹಿತರು, ಹಿರಿಯರು ಹೇಳ್ತಾರೆ ಅಂದ ಮಾತ್ರಕ್ಕೆ ಪ್ರತಿವರ್ಷ ಪಿತೃಗಳ ಶ್ರಾದ್ಧ ಮಾಡಲೇಬೇಕಾ.....?
ಹೇಗೆ ಪೂಜೆಯ ಪ್ರಾರಂಭದಲ್ಲಿ ಬಾವಿಯಿಂದಲೋ, ನದಿಯಿಂದಲೋ ಅಥವ ನಲ್ಲಿಯಿಂದ ಇನ್ನೆಲ್ಲಿಂದಲೋ ತಂದ ನೀರನ್ನು ಕಳಶದಲ್ಲಿಟ್ಟು ವಿಧಿವತ್ತಾಗಿ "'ಗಂಗೇಚ ಯಮುನೇಚ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರುಮ್ '' ಎಂಬುದಾಗಿ ಸಂಕಲ್ಪ ಮಾಡಿ ಆವಾಹನೆ ಮಾಡಿದಾಗ, ಆ ಕಳಶದ ನೀರು ಸರ್ವ ತೀರ್ಥಗಳಾಗಿ ಪರಿವರ್ತನೆಗೊಂಡು ಆ ಕಳಶದಲ್ಲಿ ಅಡಗಿದೆ ಎಂಬುದು ನಂಬಿಕೆ. ಅದೇರೀತಿ ಮಾರುಕಟ್ಟೆಯಿಂದ ಯಾರೋ ತಯಾರಿಸಿದ ಮಣ್ಣಿನ ಗಣಪನನ್ನು ಮನೆಗೆ ತಂದು ವಿಧಿವತ್ತಾಗಿ ಪ್ರಾಣ ಪ್ರತಿಷ್ಠೆ ಮಾಡಿದಾಗ ಅದು ದೈವ ಸ್ವರೂಪ ತಾಳುವುದು ಎಂಬುದು ಸಹಾ ನಮ್ಮೆಲ್ಲರ ನಂಬಿಕೆ. ಹಾಗೆಯೇ, ತಂದೆ ತಾಯಿಯರಿಂದ ಬಂದ ಈ ನಮ್ಮ ಶರೀರಕ್ಕೆ ಪ್ರಾಣವಾಯು ನೀಡಿದವನು ಆ ಭಗವಂತ, ಅವನು ನಮ್ಮೆಲ್ಲರ ಹೃದಯದಲ್ಲಿ ಅಡಗಿದ್ದಾನೆ ಎಂಬುದು ಸಹಾ ನಂಬಿಕೆ.
ಹೌದು, ಪಿತೃಗಳ ಋಣವನ್ನು ತೀರಿಸಲು ಶ್ರಾದ್ಧ ಮಾಡಲೇಬೇಕು. ನಮ್ಮ ದೇಹದ ಅಂಗಾಂಗಳು ಅಂದರೆ ಈ ಶರೀರಕ್ಕೆ ಕಾರಣ ಕರ್ತರು ತಂದೆ ತಾಯಿಗಳು. ಈ ಶರೀರಕ್ಕೆ ಪ್ರಾಣವಾಯು ನೀಡಿದವನು ಭಗವಂತ. ಪಿತೃ ಋಣ ಎಂದರೇನು?
ಉತ್ತರ ಸುಲಭ:- ಹೇಗೆ, ನಮಗೆ ಅವಶ್ಯಕತೆ ಇದ್ದಾಗ ಸಾಲ ಪಡೆದು ಅದನ್ನು ಮುಂದೊಂದು ದಿನ ಹಿಂತಿರುಗಿಸುವುದು ಧರ್ಮವೋ, ಅದೇರೀತಿ ತಂದೆ ತಾಯಿಗಳಿಗೆ ಅಸೆ ಆಕಾಂಕ್ಷೆಗಳು ಇಲ್ಲವಾದರೂ ನಾವು ಸ್ವಲ್ಪಮಟ್ಟಿಗಾದರೂ ಋಣ ಮುಕ್ತರಾಗ ಬೇಕಲ್ಲವೆ. ಅವರ ಅವಶ್ಯಕತೆಗಳು, ಅನಾರೋಗ್ಯ, ವೃದ್ಧಾಪ್ಯದ ದಿನಗಳಲ್ಲಿ ಮತ್ತು ಮರಣ ಹೊಂದಿದ ನಂತರವೂ ಋಣವನ್ನು ತೀರಿಸಲೇ ಬೇಕಲ್ಲವೇ.? ಹಾಗಾಗಿ ಪಿತೃಗಳ ಶ್ರಾದ್ಧವೂ ಒಂದು ಋಣ ಪರಿಹಾರದ ಧರ್ಮ ಮಾರ್ಗ.
ನಮ್ಮ ಬಾಲ್ಯಾವಸ್ಥೆಯಿಂದಲೂ ಪಾಲನೆ, ಪೋಷಣೆ ಮಾಡಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದವರು ತಂದೆ ತಾಯಂದಿರು. ಇದರ ಅನುಭವ ಎಲ್ಲರಿಗೂ ಉಂಟು, ಹಾಗಾಗಿ ಇಲ್ಲಿ ಹೆಚ್ಚು ವಿವರಣೆ ಬೇಕಿಲ್ಲ. ಇದಕ್ಕೆ ಪ್ರತಿಯಾಗಿ ನಾವು ತಂದೆ ತಾಯಿಯರಿಗೆ ಕೊಡುವುದಾದರೂ ಮತ್ತು ಕೊಟ್ಟದ್ದಾದರೂ ಏನು?
ಇದೇನಿದ್ದರೂ "ಅನುಕೂಲ ಸಿಂಧು" ಕರ್ತವ್ಯಗಳಿಂದ ನುಸುಳಿಕೊಳ್ಳುವ ಪ್ರಯತ್ನ ಮಾತ್ರ, ಹಾಗಂತ ಇದನ್ನು ಯಾವ ಶಾಸ್ತ್ರದಲ್ಲೂ ಹೇಳಿಲ್ಲ. ಎಲ್ಲಿಯವರೆಗೆ 'ಕರ್ತೃ' ಆದವನು ಬದುಕಿರುತ್ತಾನೋ, ಅಲ್ಲಿಯವರೆಗೆ ಪಿತೃಗಳಿಗೆ ಶ್ರಾದ್ಧ ಮಾಡಲೇ ಬೆಕು. ವಯೋ ವೃದ್ಧರು, ಅನಾರೋಗ್ಯಸ್ಥರು ಕನಿಷ್ಠ ತಿಲ ತರ್ಪಣವನ್ನಾದರೂ ಕೊಡಲೇಬೇಕು.
ಇನ್ನು ಕಾಶಿ, ಗಯಾಕ್ಕೆ ಹೊಗಿ ಒಮ್ಮೆ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ ನಂತರ ಪ್ರತಿವರ್ಷ ಶ್ರಾದ್ಧ ಮಾಡುವ ಅವಶ್ಯಕತೆ ಇಲ್ಲ ಎನ್ನುದು ಕೆಲವರ ವಾದ.! ಸರಿ ಅದರಲಿ, ಈ ಪಿತೃ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವುದನ್ನು 'ಶ್ರಾದ್ಧ' ಎನ್ನುವುದಾದರೆ.! ನಾವು ದೇವರಿಗೂ ಸಹಾ ಶ್ರದ್ಧೆಯಿಂದಲೇ ಪೂಜೆ ಮಾಡುತ್ತೇವಲ್ಲವೇ.? ಆದರೆ ಅದನ್ನು ನಾವೇಕೆ ಶ್ರಾದ್ಧ ಎನ್ನುವುದಿಲ್ಲ ಎಂಬ ಸಂದೇಹ ಮೂಡುವುದು ಸಹಜ ಅಲ್ವಾ?
ಜೀವನದಲ್ಲಿ 'ಶ್ರದ್ಧೆ'ಯಿಂದ 'ಶ್ರಾದ್ಧ' ಮಾಡುವ ಅವಕಾಶ ಉಂಟು
ಪಿತೃಗಳ‌ ಋಣ ಪರಿಹಾರಕ್ಕಾಗಿ ಬದುಕ್ಕಿದ್ದಾಗ ಅವರ ಸೇವೆ ಮಾಡಿ ನಂತರ ಶ್ರಾದ್ಧ ಕರ್ಮಗಳನ್ನು ಮಾಡಿ ಸ್ವಲ್ಪಮಟ್ಟಿಗಾದರೂ ಋಣ ಪರಿಹಾರ ಮಾಡಿಕೊಳ್ಳಲು ಅವಕಾಶಗಳು ಉಂಟು. ಆದರೆ, ಭಗವಂತ ನಮ್ಮ ಬಯಕೆಗಳನ್ನು‌ ಈಡೇರಿಸಿ, ನಮ್ಮಿಂದ ಏನನ್ನೂ ಬಯಸದೆ ಇರುವಾಗ ಯಾವರೀತಿಯ ಋಣ ತೀರಿಸಲು ಸಾಧ್ಯ.! ನಮ್ಮಿಂದ ಭಗವಂತ ಬಯಸುವುದು ಕೇವಲ ಭಕ್ತಿ ಮಾತ್ರ, ಹಾಗಾಗಿ ಇಲ್ಲಿ ಋಣದ ಪ್ರಶ್ನೆ ಉದ್ಭವಿಸುವುದಿಲ್ಲ, ಮತ್ತು ಋಣಮುಕ್ತರಾಗಲು ಸಾಧ್ಯವಿಲ್ಲದ್ದು. ಮತ್ತು 'ಭಕ್ತಿ'ಯಿಂದ 'ಮುಕ್ತಿ' ಪಡೆಯುವ ಅವಕಾಶವೂ ಉಂಟು.
*******
ದೊರೆತ ಅವಕಾಶವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ವೈಯಕ್ತಿಕ ವಿವೇಚನೆಗೆ ಬಿಟ್ಟದ್ದು ಎಂಬ ಅಭಿಪ್ರಾಯದೊಂದಿಗೆ.
ವಿ‌.ಎಸ್ ಮಣಿ.

****


[11:55 am, 05/03/2022] Prasad Karpara Group: ಮಹಾಭಾರತ ಸಾರ-
ಶ್ರಾದ್ಧ ಏಕೆ, ಏನು, ಹೇಗೆ?
ಧರ್ಮಾರಣೆ ಬಗ್ಗೆ ತಳಿಸಿಕೊಡಿ. ಶ್ರಾದ್ಧದ ಬಗ್ಗೆ ಅರಿತುಕೊಳ್ಳುವ ಆಸೆಯಾಗಿದೆ. ಶ್ರಾದ್ಧದ ಬಗ್ಗೆ ಸವಿಸ್ತಾರವಾಗಿ ತಿಳಿಸು ಎಂದು ಯುಧಿಷ್ಠಿರ ಭೀಷ್ಮಾಚಾರ್ಯರಲ್ಲಿ ಪ್ರಾರ್ಥಿಸುತ್ತಾನೆ.
ಪ್ರತಿಯೊಬ್ಬರು ಬಯಸುವುದು ಋಣರಹಿತ ಬದುಕು. ಸಾಲವಿಲ್ಲದ ಸಂಸಾರವೇ ಸರ್ವಾಪೇಕ್ಷಿತ. ಲೌಖಿಕವಾಗಿ ಶ್ರಮಪಟ್ಟು ಸಂಪಾದನೆ ಮಾಡಿ  ಸಾಲವಿಲ್ಲದೆ ಬದುಕಬಹುದು. ಆದರೆ ಹುಟ್ಟುವಾಗಲೆ ಸಂಪಾದಿಸಿಕೊಂಡು ಬಂದ ಸಾಲದ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ.
ಜನಿಸುವಾಗಲೇ ದೇವಋಣ, ಋಷಿ ಋಣ, ಪಿತೃಋಣ, ಭೂತ ಋಣ ಹಾಗೂ ಜನಋಣ  ಹೀಗೆ ಐದು ಪ್ರಕಾರದ ಸಾಲಗಳು ಮನುಷ್ಯನ ಜತೆಯಲ್ಲಿಯೇ ಬಂದಿರುತ್ತವೆ. ಧನ ಸಂಪಾದಿಸಬೇಕಾದರೆ ಈ ಶರೀರ ಬೇಕು. ಈ ದೇಹವನ್ನು ಕೊಟ್ಟವರು ಯಾರು?. ತಂದೆ ತಾಯಿಯಿಂದ ಬಂದ ಈ ದೇಹ ಅವರಿಂದಲೇ ಬೆಳದಿದ್ದು, ಶರೀರ ಇರುವಷ್ಟು ಕಾಲ ಪಿತೃಋಣ ಅವರ್ಜನೀಯ. ಇದಕ್ಕಾಗಿಯೇ ಪಿತೃತರ್ಪಣ, ಪಿಂಡ ಪ್ರದಾನ, ತೀರ್ಥಯಾತ್ರೆ, ಗಯಾ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧ ಮಾಡಬೇಕಾಗುತ್ತದೆ.
ಶ್ರಾದ್ಧ ಎಂದರೇನು ?. ಹೇಗೆ ಮಾಡಬೇಕು. ಏಕೆ ಮಾಡಬೇಕು. ಮಾಡದಿದ್ದರೆ ಏನಾಗುತ್ತದೆ ?. ಇಲ್ಲಿ ನಾವು ಕೊಟ್ಟ ಅನ್ನಾದಿಗಳು ಪಿತೃಗಳಿಗೆ ಮುಟ್ಟುತ್ತವಯೇ?. ನಾವು ಕರೆದಾಗ ಬರುವಷ್ಟು ಅವರು ದೈವಿಶಕ್ತಿಗಳುಳ್ಳವರೆ ?. ಪಿತೃಗಳು ನರಕಾದಿಗಳಲ್ಲಿದ್ದರೆ ಅಥವಾ ಪುನರ್ಜನ್ಮ ತೆಗೆದುಕೊಂಡಿದ್ದರೆ  ಅವರು ಶ್ರಾದ್ಧಕಾಲದಲ್ಲಿ ಹೇಗೆ ಬರುವರು ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ.
ಕೆಲವರು ಶ್ರಾದ್ಧವನ್ನು ನಾಮಕಾವಾಸ್ತೆ ಮಾಡುತ್ತಾರೆ. ತಂದೆ,ತಾಯಿಯಶ್ರಾದ್ಧ ಮಾಡದಿದ್ದರೆ ನಾಲ್ಕು ಜನ ಏನಂದಾರೂ ಎಂದು ಕೆಲವರು ಮಾಡುತ್ತಾರೆ. ಯಾವುದೆ ಕರ್ಮವನ್ನು ಮಾಡಬೇಕಾದರೆ ಮೊದಲು ಅದರ ಮಹತ್ವ ತಿಳಿದುಕೊಳ್ಳಬೇಕು.
ತನ್ನ ಕುಟುಂಬದವ ಒಳಿತಿಗಾಗಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಕಾರ್ಯಕ್ಕೆ ಶ್ರಾದ್ಧ ಎನ್ನುವರು. ಮಂತ್ರಪೂರ್ವಕವಾಗಿ ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಅತ್ರೇಯ ಮುನಿಯ ಪುತ್ರ ನಿಮಿಯು ಪ್ರಥಮ ಶ್ರಾದ್ಧಕರ್ತ ಎಂದು ವರಹಾಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ದೇವಕಾರ್ಯಕಿಂತಲೂ ಪಿತೃಕಾರ್ಯ ಶ್ರೇಷ್ಠ. ಶ್ರಾದ್ಧ ಮಾಡದಿದ್ದರೆ ಅಂಥವರ ರಕ್ತವನ್ನು ಪಿತೃಗಳು ಪಾನ ಮಾಡುತ್ತಾರೆ. ಎಂದರೆ ದೇಹದಲ್ಲಿನ ರಕ್ತ ಸೇವಿಸುವುದು ಎಂದಲ್ಲ. ರೋಗಿಗಳು, ದರಿದ್ರರು ಅವರ ಅಂಶದಲ್ಲಿ ಜನಿಸುತ್ತಾರೆ.
ನಾವು ಕೊಟ್ಟ ಪಿಂಡದ ಅನ್ನಾದಿಗಳು ಇಲ್ಲಿಯೇ ನಾಶವಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ನಾವುಕೊಟ್ಟ ಪಿಂಡದ ಅನ್ನ ನೇರವಾಗಿ ಪಿತೃಗಳಿಗೆ ಮುಟ್ಟುವುದಿಲ್ಲ. ಇಲ್ಲಿ ನಾವು ವಸು,ರುದ್ರ, ಅದಿತ್ಯಾಂತರ್ಗತನಾದ ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ರೂಪಿಯಾದ ಭಗವಂತನನ್ನು ಉದ್ದೇಶಿಸಿ ಪಿತೃಗಳ ನಾಮ-ಗೋತ್ರಗಳನ್ನು ಉಚ್ಚರಿಸಿ ಅನ್ನಾದಿಗಳನ್ನು ಕೊಟ್ಟಾಗ ಆಯಾ ದೇವತೆಗಳು ಅದರ ಸಾರವನ್ನು ಸ್ವೀಕರಿಸಿ ಅದರ ಲವನ್ನು ಪಿತೃಗಳು ಎಲ್ಲಿ ಯಾವ ರೂಪದಲ್ಲಿರುತ್ತಾರೋ ಯಾವ ಆಹಾರದಿಂದ ತೃಪ್ತರಾಗುತ್ತಾರೋ ಅಂಥ ಆಹಾರವನ್ನು ನೀಡುತ್ತಾರೆ.
ನಮ್ಮ ಪಿತೃಗಳಿಗೂ- ಶ್ರಾದ್ಧ ಕಾರ್ಯಕ್ಕೂ ಮಧ್ಯೆ ಮಾದ್ಯಮವಾಗಿ ಚಿರ ಪಿತೃಗಳು ನಿಂತಿರುತ್ತಾರೆ. ಅವರನ್ನು ಪ್ರಾರ್ಥಿಸಿ ಶ್ರಾದ್ಧ ಆರಂಭಿಸಬೇಕು. ಶ್ರಾದ್ಧದಲ್ಲಿ ಕುತುಪಕಾಲಕ್ಕೆ ಬಹಳ ಮಹತ್ವ ನೀಡಲಾಗಿದೆ.
ಕುತುಪ ಎಂದರೆ ಉತ್ತಮವಾದ ಭೂಮಿ, ಉತ್ತಮ ಕಾಲ, ಉತ್ತಮ ಸ್ಥಳದಲ್ಲಿ ಶ್ರಾದ್ಧ ಮಾಡುವುದು. ಕುತ್ಸಿವಾದ ಪಾಪವನ್ನು ಸುಟ್ಟು ಹಾಕುವ ಕಾಲಕ್ಕೆ(ಸಮಯ) ಕುತುಪ ಕಾಲ ಎನ್ನುವರು. ಬೆಳಗ್ಗೆ 11.36ಕ್ಕೆ ಆರಂಭವಾಗಿ ಮಧ್ಯಾಹ್ನ 3.30ರ ವರೆಗಿನ ವೇಳೆಗೆ ಕುತುಪ ಕಾಲ ಎನ್ನುವರು. ಇಷ್ಟರೊಳಗಾಗಿ ಶ್ರಾದ್ಧಕರ್ಮ, ಬ್ರಾಹ್ಮಣರ ಭೋಜನ, ತರ್ಪಣ ಹಾಗೂ ಕತೃವಿನ ಭೋಜನ ಮುಗಿಯಬೇಕು.
ಅಮವಾಸ್ಯ ದರ್ಶ
ಮಾನವರ ಒಂದು ತಿಂಗಳ ಕಾಲಾವಧಿ ಪಿತೃಗಳಿಗೆ ಒಂದು ದಿವಸವಾಗುತ್ತದೆ. ಅಮವಾಸ್ಯೆಯ ದಿನ ಪಿತೃಗಳಿಗೆ ಮಧ್ಯಾಹ್ನ ಕಾಲ. ಹುಣ್ಣಿಮೆ ದಿನ ರಾತ್ರಿಕಾಲ. ಮಧ್ಯಾಹ್ನ ಸೂರ್ಯನ ಕಿರಣದಿಂದ ನೊಂದ ಪಿತೃಗಳಿಗೆ ತಿಲತರ್ಪಣ ಕೊಡುವುದುರಿಂದ ಪಿತೃಗಳು ತೃಪ್ತರಾಗುತ್ತಾರೆ.
ಕೃಷ್ಣಪಕ್ಷದಲ್ಲಿ ಸೂರ್ಯ-ಚಂದ್ರರು ಸಮ್ಮುಖದಲ್ಲಿ ಬರುವುದರಿಂದ ಪಿತೃಗಳಿಗೆ ಸೂರ್ಯ ದರ್ಶನವಾಗುತ್ತದೆ. ದರ್ಶನವಿದ್ದ ದಿನ ಪಿತೃಗಳಿಗೆ ತಿಲತರ್ಪಣ ಕೊಡಬೇಕು.ದರ್ಶನದ ಅನಂತರದ ದಿನಗಳಲ್ಲಿ ತಿಲವಿಲ್ಲದೆ ಸರ್ವಪಿತೃಗಳಿಗೆ ನಿರ್ಮಾಲ್ಯ ತೀರ್ಥದಿಂದ ತರ್ಪಣ ಕೊಡಬೇಕು.
ವರಹಾರೂಪಿಯಾದ ಭಗವಂತನು ಹಿರಾಣ್ಯಾಕ್ಷನನ್ನು ಸಂಹರಿಸಿ ಭೂದೇವಿ ಜತೆಗೆ ಬರುತ್ತಿರುವಾಗ ಆತನ ಗಲ್ಲಕ್ಕೆ ಮೆತ್ತಿಕೊಂಡಿದ್ದ ಮಣ್ಣಿನ ಮುದ್ದೆಯೂ ಮೂರು ಪಿಂಡಗಳಾಗಿ ಭೂಮಿ ಮೇಲೆ ಬಿದ್ದವು ಅವುಗಳನ್ನು ಪಿತೃ, ಪಿತಾಮಹ, ಪ್ರಪಿತಾಮಹ ಎಂದು ಮೂರು ಪಿತೃಗಳನ್ನು ಉದ್ದೇಶಿಸಿ ಆರಾಧಿಸುವ ಪದ್ಧತಿ ರೂಢಿಯಲ್ಲಿ ಬಂದಿದೆ.
ವಿಶ್ವದೇವರ ಸ್ಥಾನದಲ್ಲಿ ಸಮಸಂಖ್ಯೆಲ್ಲಿ ಹಾಗೂ ಪಿತೃಸ್ಥಾನದಲ್ಲಿ ವಿಷಮ ಸಂಖ್ಯೆಲ್ಲಿ ಬ್ರಾಹ್ಮಣರು ಇರಬೇಕು. ಶ್ರಾದ್ಧ ಭೋಜನಕ್ಕೆ ಆಮಂತ್ರಿತನಾದ ಬ್ರಾಹ್ಮಣನು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಅಂಥ ಬ್ರಾಹ್ಮಣ ಪತಿತನಾಗಿ ರೋಗಿಯಾಗುತ್ತಾನೆ.ಅಲ್ಲದೆ ನರಕಯಾತನೆ ಅನುಭವಿಸುತ್ತಾನೆ. 
ಶ್ರಾದ್ಧ ಮಾಡುವ ದಿನದಂದು ಕತೃಗಳು  ತಾಂಬೂಲ ಸೇವಿಸಬಾರದು. ತೈಲಾಭ್ಯಂಜನ ಮಾಡಬಾರದು. ಎರಡು ಬಾರಿ ಊಟ, ಸ್ತ್ರೀ ಸಂಗ, ಔಷಧಿ ಸೇವೆ, ಪರಾನ್ನ ಭೋಜನ ನಿಷೇಧ. ಇವು ಶ್ರಾದ್ಧದ ಹಿಂದಿನ ದಿನ ಮತ್ತು ಶ್ರಾದ್ಧದ ದಿವಸ ಅನ್ವಯವಾಗುತ್ತದೆ. ಶ್ರಾದ್ಧಕ್ಕೆ ಆಮಂತ್ರಿಸಿದ ಬ್ರಾಹ್ಮಣನನ್ನು ಯಾವ ಕಾರಣಕ್ಕೂ ವಾಪಸ್ ಕಳಿಸಬಾರದು. ಕಳಿಸಿದರೆ ಬ್ರಹ್ಮ ಹತ್ಯೆ ಪಾಪಕ್ಕೆ ಗುರಿಯಾಗುತ್ತಾನೆ. ಶ್ರಾದ್ಧಕರ್ಮ ಮಾಡಿಸುವುದಾಗಿ ಒಪ್ಪಿ ಹಚ್ಚಿನ ದಕ್ಷಿಣೆ ಆಸೆಗಾಗಿ ಬರುವುದಿಲ್ಲ ಎಂದು ವೈದಿಕರು ಹೇಳಬಾರದು. ಬ್ರಾಹ್ಮಣರು ಲೋಭಾದಿಗಳನ್ನು ಬಿಡಬೇಕು.
ಶ್ರಾದ್ಧ ಕರ್ಮ ಮಾಡಿದವರು ಅಂದು ಒಂದೇ ಸಲ ಊಟ ಮಾಡಬೇಕು. ವೇದ ಅಧ್ಯಯನ, ಪರ ಊರಿಗೆ ಪಯಣ, ಸ್ತ್ರೀ ಸಂಗ ಮಾಡಕೂಡದು. ಆದಿನ ಪ್ರಯಾಣ ಮಾಡಿದರೆ ಮುಂದಿನ ಜನ್ಮದಲ್ಲಿ ಕುದುರೆಯಾಗಿ, ಎರಡು ಬಾರಿ ಊಟ ಮಾಡಿದವರು ಕಾಗೆಯಾಗಿ ಜನಿಸುತ್ತಾರೆ. ಹೊರಗಿನ ತಿಂಡಿ ತಿನಸು ಸೇವಿಸಿದರೆ ಹಂದಿ ಜನ್ಮ. ಆ ದಿನ ದಾನ ಸ್ವೀಕರಿಸಿದರೆ ಬಡತನ ಪ್ರಾಪ್ತಿ. ದಾನ ಕೊಟ್ಟವನಿಗೂ ಪುಣ್ಯ ಫಲ ಸಿಗದು.
ಶ್ರಾದ್ಧವನ್ನು ಪಿಂಡ ಪ್ರದಾನ ಸಹಿತವಾಗಿಯೇ ಮಾಡಬೇಕು. ಮೃತ ತಿಥಿಯನ್ನು ಬಿಟ್ಟು ಅನಿವಾರ್ಯ ಕಾರಣದಿಂದ ಬೇರೆ ತಿಥಿಯಂದು ಶ್ರಾದ್ಧ ಮಾಡಬೇಕಾದ ಪ್ರಸಂಗ ಬಂದರೆ ಕೃತ್ತಿಕಾ, ರೋಹಿಣಿ , ರೇವತಿ, ಮಘಾ, ಜೇಷ್ಠಾ, ಮೂಲಾ ನಕ್ಷತ್ರಗಳನ್ನು  ಹಾಗೂ ಭಾನುವಾರ ಶುಕ್ರವಾರ ಬಿಟ್ಟು ಉಳಿದ ದಿನಗಳಲ್ಲಿ ಮಾಡಬೇಕು. ಪಿಂಡ ಪ್ರದಾನ ಶ್ರಾದ್ಧ ಮಾಡಲು ಅಸಮರ್ಥರಾದವರು ಸಂಕಲ್ಪ ಶ್ರಾದ್ಧ ವನ್ನಾದರೂ  ಮಾಡಲೇಬೇಕು. ಇಷ್ಟೂ ಮಾಡಲೂ ಆಗದವರು ಪಿತೃಸೂಕ್ತವನ್ನು ಪಠಿಸಬೇಕು ಎಂದು ಭೀಷ್ಮರು ಶ್ರಾಧ್ದ ಮಾಡುವ ವಿಧಾನ ಮತ್ತು ಮಹಿಮೆ ವಿವರಿಸಿದರು.
ನಮ್ಮನ್ನು ಹೆತ್ತು-ಹೊತ್ತು ಸಾಕಿ ಸಲುಹಿದ ತಂದೆ ತಾಯಿಗಳಿಗೆ ವರ್ಷಕ್ಕೊಮ್ಮೆ ಶ್ರಾದ್ಧ  ಮಾಡುವ ಮೂಲಕ ಅವರ ಋಣ ತೀರಿಸಲು ನಮ್ಮಿಂದ ಆಗುತ್ತಿಲ್ಲವಲ್ಲ. ಮೂರ್ನಾಲ್ಕು ಜನ  ಅಣ್ಣ ತಮ್ಮಂದಿ
ರಿದ್ದರೆ  ನಾನೊಬ್ಬನೇ ಮಾಡಿಕೊಳ್ಳಬೇಕೇನು ಎಂಬ ತಕರಾರಿನ ಮಾತುಗಳು ಕೇಳಿ ಬರುತ್ತವೆ. ಇದು ಸರಿಯಲ್ಲ ಶ್ರಾದ್ಧ ಕರ್ಮ ಮಾಡುವಾಗ ಮನೆಯಲ್ಲಿ ಕಲಹ ಮಾಡಬಾರದು ಎಂದಿದೆ.
ಶ್ರಾದ್ಧ ಮಾಡುವುದು ಕತೃವಿನ ಆದ್ಯ ಕರ್ತವ್ಯವಾಗಿದೆ. ಯಾವ ಕಾರಣಕ್ಕೂ ಅದನ್ನು ಬಿಡಕೂಡದು ಎಂದು ಭೀಷ್ಮರು ಹೇಳಿದರು.
by ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ
***
ಶ್ರೀವಿಷ್ಣುಪುರಾಣ  ಸಂಚಿಕೆ - 547  ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||

********
ತೃತೀಯಾಂಶ: ಚತುರ್ದಶೋಧ್ಯಾಯ:

ಶ್ರಾದ್ಧದ ಪ್ರಶಂಸೆ.  ಶ್ರಾದ್ಧದಲ್ಲಿ ಪಾತ್ರಾಪಾತ್ರಗಳ ವಿವರಣೆ.
********

ಔರ್ವ ಉವಾಚ:

ಬ್ರಹ್ಮೇಂದ್ರರುದ್ರನಾಸತ್ಯ ಸೂರ್ಯಾಗ್ನಿ ವಸುಮಾರುತಾನ್|
ವಿಶ್ವೇದೇವಾನ್ ಪಿತೃಗಣಾನ್ ವಯಾಂಸಿ ಮನುಜಾನ್ ಪಶೂನ್||1||

ಸರೀಸೃಪಾನೃಷಿಗಣಾನ್ಯಚ್ಚಾನ್ಯದ್ಭೂತಸಂಜ್ಞಿತಮ್|
ಶ್ರಾದ್ಧಂ ಶ್ರದ್ಧಾನ್ವಿತ: ಕುರ್ವನ್ ಪ್ರೀಣಯತ್ಯಖಿಲಂ ಜಗತ್||2||

ಮಾಸಿ ಮಾಸ್ಯಸಿತೇ ಪಕ್ಷೇ ಪಂಚದಶ್ಯಾಂ ನರೇಶ್ವರ|
ತಥಾಷ್ಟಕಾಸು ಕುರ್ವೀತ ಕಾಮ್ಯಾನ್ಕಾಲಾನ್ ಶೃಣುಷ್ವ ಮೇ||3||

ಶ್ರಾದ್ಧಾರ್ಹಮಾಗತಂ ದ್ರವ್ಯಂ ವಿಸಿಷ್ಟಮಥವಾ ದ್ವಿಜಮ್|
ಶ್ರಾದ್ಧಂ ಕುರ್ವೀತ ವಿಜ್ಞಾಯ ವ್ಯತೀಪಾತೇಯನೇ ತಥಾ||4||

ಪರಾಶರರು ಹೇಳಿದರು:-

ಔರ್ವನು ಸಗರನಿಗೆ ಮತ್ತೆ ಹೇಳಿದ್ದೇನೆಂದರೆ "ರಾಜ, ಶ್ರದ್ಧೆಯಿಂದ ಶ್ರಾದ್ಧಕರ್ಮ ಮಾಡತಕ್ಕವನು ಬ್ರಹ್ಮ, ಇಂದ್ರ, ರುದ್ರ, ಅಶ್ವಿನಿದೇವತೆಗಳು, ಸೂರ್ಯ, ಅಗ್ನಿ, ವಸು, ಮಾರುತ, ವಿಶ್ವೇದೇವರು, ಪಿತೃಗಣಗಳು, ಹಕ್ಕಿಗಳು, ಮಾನವರು, ಪಶುಗಳು, ಹರಿದಾಡುವ ಸರ್ಪಾದಿ ಜಂತುಗಳು, ಋಷಿಗಳು, ಭೂತಗಣಗಳು ಹೀಗೆ ಸಮಸ್ತ ಜಗತ್ತನ್ನೂ ತೃಪ್ತಿಪಡಿಸುತ್ತಾನೆ.

ಪ್ರತಿಮಾಸದಲ್ಲಿಯೂ ಕೃಷ್ಣಪಕ್ಷದ ಹದಿನೈದನೆಯ ದಿನ - ಎಂದರೆ ಅಮಾವಾಸ್ಯೆಯಲ್ಲಿ ಮತ್ತು ಅಷ್ಟಕಾ ದಿನಗಳಲ್ಲಿ (ಅಷ್ಟಕಾ = ಮಾರ್ಗಶಿರಾ, ಪುಷ್ಯ, ಮಾಘ, ಫಾಲ್ಗುಣ ಮಾಸಗಳ ಬಹುಳ ಅಷ್ಟಮೀ) ಶ್ರಾದ್ಧವನ್ನು ನಿತ್ಯವಾಗಿ ಮಾಡಬೇಕು.
ಇನ್ನು ಕಾಮ್ಯಶ್ರಾದ್ಧಗಳ ಕಾಲವನ್ನು ಹೇಳುತ್ತೇನೆ, ಕೇಳು.

ಶ್ರಾದ್ಧಯೋಗ್ಯವಾದ ಪದಾರ್ಥವು ದೊರಕಿದಾಗ, ಅರ್ಹನಾದ ಬ್ರಾಹ್ಮಣನು ಮನೆಗೆ ಬಂದಾಗ ಮತ್ತು ವ್ಯತೀಪಾತದಲ್ಲಿಯೂ ದಕ್ಷಿಣಾಯನ - ಉತ್ತರಾಯಣಗಳ ಸಂಕ್ರಾಂತಿ ಕಾಲದಲ್ಲಿಯೂ ಕಾಮ್ಯಶ್ರಾದ್ಧವನ್ನು ಮಾಡಬೇಕು.
(ಕಾಮ್ಯ = ಫಲಾಭಿಲಾಷೆಯಿಂದ ಮಾಡುವ ಕರ್ಮ.)

********
ವಿಷುವೇ ಚಾಪಿ ಸಂಪ್ರಾಪ್ತೇ ಗ್ರಹಣೇ ಶಶಿಸೂರ್ಯಯೋ:|
ಸಮಸ್ತೇಷ್ವೇವ ಭೂಪಾಲ ರಾಶಿಷ್ವರ್ಕೇ ಚ ಗಚ್ಛತಿ||5||

ನಕ್ಷತ್ರಗ್ರಹಪೀಡಾಸು ದುಷ್ಟಸ್ವಪ್ನಾವಲೋಕನೇ|
ಇಚ್ಛಾಶ್ರಾದ್ಧಾನಿ ಕುರ್ವೀತ ನವಸಸ್ಯಾಗಮೇ ತಥಾ||6||

ಅಮಾವಾಸ್ಯಾ ಯದಾ ಮೈತ್ರವಿಶಾಖಾಸ್ವಾತಿಯೋಗಿನೀ|
ಶ್ರಾದ್ಧೈ: ಪಿತೃಗಣಸ್ತೃಪ್ತಿಂ ತಥಾಪ್ನೋತ್ಯಷ್ಟವಾರ್ಷಿಕೀಮ್||7||

ಅಮಾವಾಸ್ಯಾ ಯದಾ ಪುಷ್ಯೇ ರೌದ್ರೇ ಚರ್ಕ್ಷೇ ಪುನರ್ವಸೌ|
ದ್ವಾದಶಾಬ್ದಂ ತಥಾ ತೃಪ್ತಿಂ ಪ್ರಯಾಂತಿ ಪಿತರೋರ್ಚಿತಾ:||8||

ವಾಸವಾಜೈಕಪಾದರ್ಕೇ ಪಿತೃಣಾಂ ತೃಪ್ತಿಮಿಚ್ಛತಾಮ್|
ವಾರುಣೇ ವಾಪ್ಯಮಾವಾಸ್ಯಾ ದೇವಾನಾಮಪಿ ದುರ್ಲಭಾ||9||

ನವಸ್ವೃಕ್ಷೇಷ್ವಮಾವಾಸ್ಯಾ ಯದೈತೇಷ್ವವನೀಪತೇ|
ತದಾ ಹಿ ತೃಪ್ತಿದಂ ಶ್ರಾದ್ಧಂ ಪಿತೃಣಾಂ ಶೃಣು ಚಾಪರಮ್||10||

ವಿಷಿವತ್ಪುಣ್ಯ ಕಾಲದಲ್ಲಿ ಚಂದ್ರಸೂರ್ಯರ ಗ್ರಹಣ ಬಂದಾಗ, ಸೂರ್ಯನು ಬೇರೆ ಬೇರೆ ರಾಶಿಯನ್ನು ಸೇರುವ ಎಲ್ಲ ಸಂಕ್ರಾಂತಿಗಳಲ್ಲಿಯೂ ಕಾಮ್ಯಶ್ರಾದ್ಧವನ್ನು ಮಾಡಬೇಕು. 

ನಕ್ಷತ್ರ ಗ್ರಹಗಳ ಪೀಡೆಯಾದಾಗಲೂ ಕೆಟ್ಟ ಸ್ವಪ್ನವನ್ನು ಕಂಡಾಗಲೂ ನವಧಾನ್ಯವು ಬಂದಾಗಲೂ ಕಾಮ್ಯಶ್ರಾದ್ಧವನ್ನು ಮಾಡಬಹುದು. 

ಅನುರಾಧಾ, ವಿಶಾಖಾ ಅಥವಾ ಸ್ವಾತಿ ನಕ್ಷತ್ರದಿಂದ ಯುಕ್ತವಾದ ಅಮಾವಾಸ್ಯೆಯಂದು ಮಾಡುವ ಶ್ರಾದ್ಧದಿಂದ ಪಿತೃಗಣವು ಎಂಟುವರ್ಷಗಳ ವರೆಗೆ ತೃಪ್ತಿಯನ್ನೈದುವುದು. 

ಹಾಗೆಯೇ ಪುಷ್ಯ, ಆರ್ದ್ರಾ ಅಥವಾ ಪುನರ್ವಸು ನಕ್ಷತ್ರದಿಂದ ಕೂಡಿದ ಅಮಾವಾಸ್ಯೆಯಂದು ಅರ್ಚಿತರಾದ ಪಿತೃಗಳು ಹನ್ನೆರಡು ವರ್ಷಗಳವರೆಗೆ ತೃಪ್ತಿಯನ್ನೈದುವರು. 

ಪಿತೃಗಳಿಗೆ ತೃಪ್ತಿಯನ್ನು ಬಯಸುವವರಿಗೆ ಧನಿಷ್ಠಾ, ಪೂರ್ವಾಭಾದ್ರ ಅಥವಾ ಶತಭಿಷಾ ನಕ್ಷತ್ರದಿಂದ ಕೂಡಿದ ಅಮಾವಾಸ್ಯೆ ಪ್ರಶಸ್ತವಾದದ್ದು. 
ಅದು ದೇವತೆಗಳಿಗೂ ತೃಪ್ತಿಯನ್ನೀಯುತ್ತದೆ. 

ರಾಜ-ಸಗರ, ಹಿಂದೆ ಹೇಳಿದ ಒಂಬತ್ತು ನಕ್ಷತ್ರಗಳಿಂದ ಕೂಡಿದ ಅಮಾವಾಸ್ಯೆಯಲ್ಲಿ ಮಾಡುವ ಕಾಮ್ಯಶ್ರಾದ್ಧವು ಪಿತೃಗಳಿಗೆ ವಿಶೇಷ ತೃಪ್ತಿಯನ್ನೂ ಕೊಡುತ್ತದೆ. ಇನ್ನೊಂದು ವಿಷಯವನ್ನು ಕೇಳು.

******

ಗೀತಂ ಸನತ್ಕುಮಾರೇಣ ಯಥೈಲಾಯ ಮಹಾತ್ಮನೇ|
ಪೃಚ್ಛತೇ ಪಿತೃಭಕ್ತಾಯ ಪ್ರಶ್ರಯಾವನತಾಯ ಚ||11||

ಶ್ರಿಸನತ್ಕುಮಾರ ಉವಾಚ:

ವೈಶಾಖಮಾಸಸ್ಯ ಚ ಯಾ ತೃತೀಯಾ ನವಮ್ಯಸೌ ಕಾರ್ತಿಕಶುಕ್ಲಪಕ್ಷೇ|
ನಭಸ್ಯಮಾಸಸ್ಯ ಚ ಕೃಷ್ಣಪಕ್ಷೇ ತ್ರಯೋದಶೀ ಪಂಚದಶೀ ಚ ಮಾಘೇ||12||

ಏತಾ ಯುಗಾದ್ಯಾ: ಕಥಿತಾ: ಪುರಾಣೇಷ್ವನಂತ ಪುಣ್ಯಾಸ್ತಿಥಯಶ್ಚತಸ್ರ:|
ಉಪಪ್ಲವೇ ಚಂದ್ರಮಸೌ ರವೇಶ್ಚ ತ್ರಿಷ್ವಷ್ಟಕಾಸ್ವಪ್ಯಯನದ್ವಯೇ ಚ||13||

ಪಾನೀಯಮಪ್ಯತ್ರ ತಿಲೈರ್ವಿಮಿಶ್ರಂ ದದ್ಯಾತ್ಪಿತೃಭ್ಯ: ಪ್ರಯತೋ ಮನುಷ್ಯ:|
ಶ್ರಾದ್ಧಂ ಕೃತಂ ತೇನ ಸಮಾಸಹಸ್ರಂ ರಹಸ್ಯಮೇತತ್ಪಿತರೋ ವದಂತಿ||14||

ಮಹಾತ್ಮನೂ ಪಿತೃಭಕ್ತನೂ ಇಲಾಪುತ್ರನೂ ಆದ ಪುರೂರವನು ವಿನಯದಿಂದ ನಮಸ್ಕರಿಸಿ ಪ್ರಶ್ನೆ ಮಾಡಿದಾಗ ಸನತ್ಕುಮಾರರು ಈ ರೀತಿ ಹೇಳಿದರು. 

ವೈಶಾಖಮಾಸದ ತದಿಗೆ, ಕಾರ್ತಿಕ ಶುದ್ಧ ನವಮೀ, ಭಾದ್ರಪದ ಕೃಷ್ಣಪಕ್ಷದ ತ್ರಯೋದಶೀ, ಮಾಘ ಬಹುಳ ಅಮಾವಾಸ್ಯೆ - ಇವು "ಯುಗಾದಿ" ಗಳೆಂದು ಪುರಾಣಗಳಲ್ಲಿ ಉಕ್ತವಾಗಿದೆ. 

ಈ ನಾಲ್ಕು ತಿಥಿಗಳು ಅನಂತ ಪುಣ್ಯಪ್ರದಗಳು. 
ಹಾಗೆಯೇ ಚಂದ್ರಸೂರ್ಯರ ಗ್ರಹಣಕಾಲ, ಅಷ್ಟಕಾ ಎಂಬ ಸಂಜ್ಞೆಯುಳ್ಳ ಮೂರು ತಿಥಿಗಳು, ಉತ್ತರಾಯಣ ದಕ್ಷಿಣಾಯನಗಳು ಪ್ರಶಸ್ತವಾದವು. 

ಈ ದಿನಗಳಲ್ಲಿ ಮನುಷ್ಯನು ಶುಚಿಯಾಗಿದ್ದು ಪಿತೃಗಳಿಗೆ ತಿಲಮಿಶ್ರಿತವಾದ ಜಲತರ್ಪಣವನ್ನಾದರೂ ಕೊಡಬೇಕು. ಇದರಿಂದ ಸಾವಿರ ವರ್ಷಗಳವರೆಗೂ ಆತನು ಕಾಮ್ಯಶ್ರಾದ್ಧವನ್ನು ಮಾಡಿದಂತೆಯೇ ಎಂಬ ರಹಸ್ಯವನ್ನು ಪಿತೃದೇವತೆಗಳು ಹೇಳುತ್ತಾರೆ. 

********

ಮಾಘೇಸಿತೇ ಪಂಚದಶೀ ಕದಾಚಿದುಪೈತಿ ಯೋಗಂ ಯದಿ ವಾರುಣೇನ|
ಋಕ್ಷೇಣ ಕಾಲಸ್ಯ ಪರ: ಪಿತೃಣಾಂ ನ ಹ್ಯಲ್ಪಪುಣ್ಯೈರ್ನೃಪಲಭ್ಯತೇಸೌ||15||

ಕಾಲೇ ಧನಿಷ್ಠಾ ಯದಿ ನಾಮ ತಸ್ಮಿನ್ ಭವೇತ್ತು ಭೂಪಾಲ ತದಾ ಪಿತೃಭ್ಯ:|
ದತ್ತಂ ಜಲಾನ್ನಂ ಪ್ರದದಾತಿ ತೃಪ್ತಿಂ ವರ್ಷಾಯುತಂ ತತ್ಕುಲಜೈರ್ಮನುಷ್ಯೈ:||16||

ತತ್ರೈವ ಚೇದ್ಭಾದ್ರಪದಾ ನು ಪೂರ್ವಾ ಕಾಲೇ ಯಥಾವತ್ ಕ್ರೀಯತೇ ಪಿತೃಭ್ಯ:|
ಶ್ರಾದ್ಧಂ ಪರಾಂ ತೃಪ್ತಿಮುಪೇತ್ಯ ತೇನ ಯುಗಂ ಸಹಸ್ರಂ ಪಿತರಸ್ಸ್ವಪಂತಿ||17||

ಗಂಗಾಂ ಶತದ್ರೂಂ ಯಮುನಾಂ ವಿಪಾಶಾಂ ಸರಸ್ವತೀಂ ನೈಮಿಷಗೋಮತೀಂ ವಾ|
ತತ್ರಾವಗಾಹ್ಯರ್ಚನಮಾದರೇಣ ಕೃತ್ವಾ ಪಿತೃಣಾಂ ದುರಿತಾನಿ ಹಂತಿ||18||

ಮಾಘ ಬಹುಳ ಅಮಾವಾಸ್ಯೆಯಂದು ಶತಭಿಷಾ ನಕ್ಷತ್ರದ ಯೋಗವಾದರೆ, ಅದು ಪಿತೃಗಳಿಗೆ ಪರಮಪ್ರಿಯವಾದ ಕಾಲ. 
ರಾಜ-ಪುರೂರವ, ಇಂತಹ ಕಾಲವು ಅಲ್ಪಪುಣ್ಯರಿಗೆ ಲಭಿಸುವುದಿಲ್ಲ. 

ಅದೇ ಕಾಲದಲ್ಲಿ ಎಂದರೆ ಮಾಘ ಬಹುಳ ಅಮಾವಾಸ್ಯೆಯಲ್ಲಿ ಧನಿಷ್ಠಾ ನಕ್ಷತ್ರ ಯೋಗವಾದಾಗ, ತಮ್ಮ ಕುಲದಲ್ಲಿ ಹುಟ್ಟಿದ ಜನರು ಕೊಡುವ ಜಲವೂ ಅನ್ನವೂ ಆ ಪಿತೃಗಳಿಗೆ ಹತ್ತು ಸಾವಿರ ವರ್ಷಗಳ ವರೆಗೆ ತೃಪ್ತಿಯನ್ನೀಯುವುದು. 

ಅದೇ ದಿನ ಪೂರ್ವಭಾದ್ರ ಪದಾಯೋಗವಿದ್ದಾಗ ಯಥಾವತ್ತಾಗಿ ಶ್ರಾದ್ಧವನ್ನು ಮಾಡಿದರೆ, ಅದರಿಂದ ಪಿತೃಗಳು ತೃಪ್ತರಾಗಿ ಸಾವಿರ ಯುಗಗಳವರೆಗೆ ಮಲಗಿಕೊಳ್ಳುತ್ತಾರೆ. 

ಗಂಗಾ, ಶತದ್ರು, ಯಮುನಾ, ವಿಪಾಶಾ, ಸರಸ್ವತೀ, ನೈಮಿಷಾರಣ್ಯದಲ್ಲಿರುವ ಗೋಮತೀ - ಈ ನದಿಗಳಲ್ಲಿ ಸ್ನಾನ ಮಾಡಿ ಪಿತೃಗಳನ್ನು ಅರ್ಚಿಸುವುದರಿಂದ ಎಲ್ಲ ದುರಿತಗಳನ್ನೂ ಮನುಷ್ಯನು ಹೋಗಲಾಡಿಸಿಕೊಳ್ಳುತ್ತಾನೆ. 
*******
ಗಾಯಂತಿ ಚೈತತ್ಪಿತರ: ಕದಾನು ವರ್ಷಾಮಘಾತೃಪ್ತಿಮವಾಪ್ಯ ಭೂಯ:|
ಮಘಾಸಿತಾಂತೇ ಶುಭತೀರ್ಥತೋಯೈರ್ಯಾಸ್ಯಾಮ ತೃಪ್ತಿಂ ತನಯಾದಿದತ್ತೈ:||19||

ಚಿತ್ತಂ ನ ವಿತ್ತಂ ಚ ನೃಣಾಂ ವಿಶುದ್ಧಂ ಶಸ್ತಶ್ಚ ಕಾಲ: ಕಥಿತೋ ವಿಧಿಶ್ಚ|
ಪಾತ್ರಂ ಯಥೋಕ್ತಂ ಪರಮಾ ಚ ಭಕ್ತಿರ್ನೃಣಾಂ ಪ್ರಯಚ್ಛಂತ್ಯಭಿವಾಂಛಿತಾನಿ||20||

ಪಿತೃಗೀತಾನ್ ತಥೈವಾತ್ರ ಶ್ಲೋಕಾಂಸ್ತಾನ್ ಶೃಣು ಪಾರ್ಥಿವ|
ಶ್ರುತ್ವಾ ತಥೈವ ಭವತಾ ಭಾವ್ಯಂ ತತ್ರಾದೃತಾತ್ಮನಾ||21||

ಅಪಿ ಧನ್ಯ: ಕುಲೇ ಜಾಯದಸ್ಮಾಕಂ ಮತಿಮಾನ್ನರ:|
ಅಕುರ್ವನ್ವಿತ್ತಶಾಠ್ಯಂ ಯ: ಪಿಂಡಾನ್ನೋ ನಿರ್ವಪಿಷ್ಯತಿ||22||

"ವರ್ಷಾಕಾಲದ ಮಘಾನಕ್ಷತ್ರದಲ್ಲಿ (ಭಾದ್ರಪದ ಬಹುಳ ತ್ರಯೋದಶೀ ಮಘಾನಕ್ಷತ್ರದಲ್ಲಿ) ನಾವು ಶ್ರಾದ್ಧದಿಂದ ತೃಪ್ತಿಯನ್ನು ಹೊಂದಿ, ಪುನ: ಮಾಘಮಾಸದ ಬಹುಳ ಅಮಾವಾಸ್ಯೆಯಂದು ನಾವು ಯಾವಾಗ ತೃಪ್ತಿಯೊಂದಿಯೇವು" - ಎಂಬುದಾಗಿ ಪಿತೃದೇವತೆಗಳು ಹಾರೈಸಿ ಹೇಳಿಕೊಳ್ಳುತ್ತಾರೆ. 

ಶುದ್ಧವಾದ ಚಿತ್ತ, ಶುದ್ಧವಾದ ವಿತ್ತ, ಪ್ರಶಸ್ತವಾದ ಕಾಲ, ಹಿಂದೆ ಹೇಳಿದ ವಿಧಾನ, ಯೋಗ್ಯವಾದ ಪಾತ್ರ, ಪರಮಭಕ್ತಿ - ಇವು ಮನುಷ್ಯರಿಗೆ ಇಷ್ಟಾರ್ಥಗಳನ್ನೀಯುತ್ತವೆ. 

ರಾಜ-ಪುರೂರವ, ಪಿತೃದೇವತೆಗಳು ಹಾಡಿದ ಕೆಲವು ಶ್ಲೋಕಗಳನ್ನು ಹೇಳುತ್ತೇನೆ ಕೇಳು. ನೀನು ಆದರವಿಟ್ಟು ಅದರಂತೆ ನಡೆದುಕೊಳ್ಳಬೇಕು. 

ಪಿತೃಗಳು ಹೀಗೆ ಹೇಳಿದ್ದಾರೆ:- "ವಿತ್ತಲೋಭವನ್ನು ಮಾಡದೆ ನಮಗೆ ಪಿಂಡದಾನವನ್ನು ಮಾಡತಕ್ಕ ಬುದ್ಧಿಶಾಲಿಯು ಧನ್ಯನೂ ಆದ ಒಬ್ಬನು ನಮ್ಮ ಕುಲದಲ್ಲಿ ಹುಟ್ಟಿಯಾನೆ!"

********
ರತ್ನಂ ವಸ್ತ್ರಂ ಮಹಾಯಾನಂ ಸರ್ವಭೋಗಾದಿಕಂ ವಸು|
ವಿಭವೇ ಸತಿ ವಿಪ್ರೇಭ್ಯೋ ಯೋಸ್ಮಾನುದ್ದಿಶ್ಯ ದಾಸ್ಯತಿ||23||

ಅನ್ನೇನ ವಾ ಯಥಾಶಕ್ತ್ಯಾ ಕಾಲೇಸ್ಮಿನ್ ಭಕ್ತಿನಮ್ರಧೀ:|
ಭೋಜಯಿಷ್ಯತಿ ವಿಪ್ರಾಂಗ್ರ್ಯಾಂಸ್ತನ್ಮಾತ್ರವಿಭವೋ ನರ:||24||

ಅಸಮರ್ಥೋನ್ನದಾನಸ್ಯ ಧಾನ್ಯಮಾಮಂ ಸ್ವಶಕ್ತಿತ:|
ಪ್ರದಾಸ್ಯತಿ ದ್ವಿಜಾಗ್ರ್ಯೇಭ್ಯ: ಸ್ವಲ್ಪಾಲ್ಪಾಂ ವಾಪಿ ದಕ್ಷಿಣಾಮ್||25||

ತತ್ರಾಪ್ಯಸಾಮರ್ಥ್ಯಯುತ: ಕರಾಗ್ರಾಗ್ರಸ್ಥಿತಾಂಸ್ತಿಲಾನ್|
ಪ್ರಣಮ್ಯ ದ್ವಿಜಮುಖ್ಯಾಯ ಕಸ್ಮೈಚಿದ್ಭೂಪ ದಾಸ್ಯತಿ||26||

ತಿಲೈಸ್ಸಪ್ತಾಷ್ಟಭಿರ್ವಾಪಿ ಸಮವೇತಂ ಜಲಾಂಜಲಿಮ್|
ಭಕ್ತಿನಮ್ರಸ್ಸಮುದ್ದಿಶ್ಯ ಭುವ್ಯಸ್ಮಾಕಂ ಪ್ರದಾಸ್ಯತಿ||27||

ರತ್ನ, ವಸ್ತ್ರ, ವಾಹನ, ಸರ್ವಭೋಗ ಸಾಮಗ್ರಿ, ಧನ - ಇವನ್ನು ತನಗೆ ಸಂಪತ್ತಿರುವಾಗ ನಮಗೋಸ್ಕರ (ಬ್ರಾಹ್ಮಣರಿಗೆ) ದಾನಮಾಡತಕ್ಕ ಪುರುಷನು ನಮ್ಮ ವಂಶದಲ್ಲಿ ಹುಟ್ಟುವನೆ! 

ತನ್ನಲ್ಲಿ ಸಂಪತ್ತು ಇಲ್ಲದಿದ್ದರೆ ಯಥಾಶಕ್ತಿಯಾಗಿ ಅನ್ನದಿಂದಾದರೂ ಭಕ್ತಿನಮ್ರನಾಗಿ ವಿಪ್ರರಿಗೆ ಭೋಜನ ಮಾಡಿಸತಕ್ಕವನು ನಮ್ಮ ವಂಶದಲ್ಲಿ ಹುಟ್ಟಿುವನೆ! 

ಅನ್ನವನ್ನು ನೀಡಲೂ ಅಸಮರ್ಥನಾದರೆ, ತನ್ನ ಶಕ್ತ್ಯಾನುಸಾರವಾಗಿ ಆಮಧಾನ್ಯವನ್ನೂ (ಪಕ್ವಮಾಡದ ಅಡಿಗೆ ಸಾಹಿತ್ಯ) ಸ್ವಲ್ಪವೇ ಆದರೂ ದಕ್ಷಿಣೆಯನ್ನೂ ಬ್ರಾಹ್ಮಣೋತ್ತಮರಿಗೆ (ನಮಗೋಸ್ಕರ) ನೀಡತಕ್ಕ ಪುರುಷನು ನಮ್ಮ ವಂಶದಲ್ಲಿ ಹುಟ್ಟಬಹುದೆ! 

ಅದನ್ನು ಮಾಡುವುದಕ್ಕೂ ಶಕ್ತಿಯಿಲ್ಲದವನಾದರೆ, ಯಾರಾದರೊಬ್ಬ ದ್ವಿಜೋತ್ತಮನಿಗೆ ನಮಸ್ಕರಿಸಿ ಒಂದು ಮುಷ್ಟಿ ಎಳ್ಳನ್ನು ದಾನಮಾಡತಕ್ಕವನಾಗಲಿ! 

ಅಥವಾ ಏಳೆಂಟು ಎಳ್ಳಿನ ಕಾಳುಗಳಿಂದ ಕೂಡಿದ ಜಲಾಂಜಲಿಯನ್ನು ನಮಗೋಸ್ಕರ ಭಕ್ತಿನಮ್ರನಾಗಿ ನೆಲದ ಮೇಲೆ ಅರ್ಪಿಸಲಿ! 
********

ಯತ: ಕುತಶ್ಚಿತ್ಸಂಪ್ರಾಪ್ಯಂ ಗೋಭ್ಯೋ ವಾಪಿ ಗವಾಹ್ನಿಕಮ್|
ಅಭಾವೇ ಪ್ರೀಣಯನ್ನಸ್ಮಾನ್ ಶ್ರದ್ಧಾಯುಕ್ತ: ಪ್ರದಾಸ್ಯತಿ||28||

ಸರ್ವಭಾವೇ ವನಂ ಗತ್ವಾ ಕಕ್ಷಮೂಲಪ್ರದರ್ಶಕ:|
ಸೂರ್ಯಾದಿಲೋಕಪಾಲಾನಾಂ ಇದಮುಚ್ಚೈರ್ವದಿಷ್ಯತಿ||29||

ನ ಮೇಸ್ತಿ ವಿತ್ತಂ ನ ಧನಂ ಚ ನಾನ್ಯತ್ ಶ್ರಾದ್ಧೋಪಯೋಗ್ಯಂ ಸ್ವಪಿತೃನ್ನತೋಸ್ಮಿ|
ತೃಪ್ಯಂತು ಭಕ್ತ್ಯಾ ಪಿತರೋ ಮಯೈತೌ ಕೃತೌ ಭುಜೌ ವರ್ತ್ಮನಿ ಮಾರುತಸ್ಯ||30||

ಔರ್ವ ಉವಾಚ:-
ಇತ್ಯೇತತ್ಪಿತೃಭಿರ್ಗೀತಂ ಭಾವಭಾವಪ್ರಯೋಜನಮ್|
ಯ: ಕರೋತಿ ಕೃತಂ ತೇನ ಶ್ರಾದ್ಧಂ ಭವತಿ ಪಾರ್ಥಿವ||31||

ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಚತುರ್ದಶೋಧ್ಯಾಯ:||

ತನ್ನಲ್ಲಿ ಧನ-ಧಾನ್ಯ ಏನೂ ಇಲ್ಲದಿದ್ದರೆ, ಗೋವಿನ ಒಂದು ದಿನಕ್ಕಾಗುವಷ್ಟು ತೃಣಾದಿಗಳನ್ನು ಎಲ್ಲಿಂದಾದರೂ ತಂದು, ಶ್ರದ್ಧಾಯುಕ್ತನಾಗಿ ನಮಗೆ ಪ್ರೀತಿಯಾಗಲೆಂದು ಗೋವುಗಳಿಗೆ ಅರ್ಪಿಸಲಿ. 

ಈ ಎಲ್ಲಕ್ಕೂ ಅಭಾವವಾದ ಪಕ್ಷದಲ್ಲಿ, ಆತನು ಅರಣ್ಯಕ್ಕೆ ಹೋಗಿ ತನ್ನ ಬಗಲನ್ನು ತೋರಿಸುತ್ತಾ (ಎರಡೂ ಕೈಗಳನ್ನು ಮೇಲೆತ್ತಿ) ಸೂರ್ಯಾದಿ ಲೋಕಪಾಲರ ಸಾಕ್ಷಿಯಾಗಿ, ಈ ರೀತಿ ಗಟ್ಟಿಯಾಗಿ ಕೂಗಿ ಹೇಳಲಿ! 

ಏನೆಂದರೆ, "ನನ್ನ ಬಳಿ ಶ್ರಾದ್ಧಕ್ಕೆ ಬೇಕಾದ ಸಾಮಗ್ರಿ ಇಲ್ಲ, ಹಣವಿಲ್ಲ. ಬೇರೆ ಯಾವ ಸಾಧನವೂ ಇಲ್ಲ. ನನ್ನ ಪಿತೃಗಳಿಗೆ ನಮಸ್ಕಾರ ಮಾಡಿದ್ದೇನೆ. ನನ್ನ ಭಕ್ತಿಯಿಂದಲೇ ಪಿತೃಗಳು ಸಂತೃಪ್ತರಾಗಲಿ. ಇದೋ ನನ್ನ ಕೈಗಳನ್ನು ಆಕಾಶದಲ್ಲಿ ಎತ್ತಿ ಹಿಡಿದಿದ್ದೇನೆ". 
ಈ ರೀತಿಯಾಗಿ ಸನತ್ಕುಮಾರರು ಪುರೂರವನಿಗೆ ಹೇಳಿದ್ದಾರೆಂದು ತಿಳಿ ಎಂದು ಔರ್ವನು ಹೇಳಿದನು. 

ರಾಜ-ಸಗರ, ಈ ರೀತಿಯಲ್ಲಿ, ಧನವಿರಲಿ-ಇಲ್ಲದಿರಲಿ, ಶ್ರಾದ್ಧನಿಮಿತ್ತವಾಗಿ ಮಾಡಬೇಕಾದದ್ದು ಏನೆಂಬುದನ್ನು ಪಿತೃದೇವತೆಗಳು ಹೇಳಿದ್ದಾರೆ. ಅದರಂತೆ ಯಾವನು ಆಚರಿಸುತ್ತಾನೋ ಆತನು ಶ್ರಾದ್ಧವನ್ನು ಮಾಡುತ್ತಾನೆಂದು ತಿಳಿಯಬೇಕು. 

ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಹದಿನಾಲ್ಕನೆಯ ಅಧ್ಯಾಯ ಮುಗಿಯಿತು. 

********

 ಶ್ರೀವಿಷ್ಣುಪುರಾಣ🙏🏽
🌷*🔔ॐ🔔*🌷
🔯🔔 ಸಂಚಿಕೆ - 554🔔🔯
********
ಶ್ರೀಮನ್ನಾರಾಯಣಾಯ ನಮ:

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
********
ತೃತೀಯಾಂಶ:

ಪಂಚದಶೋಧ್ಯಾಯ:

ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಯೋಗ್ಯರಾದವರು
ಶ್ರಾದ್ಧವಿಧಿ. 
********
ಔರ್ವ ಉವಾಚ:

ಬ್ರಾಹ್ಮಣಾನ್ಭೋಜಯೇತ್ ಶ್ರಾದ್ಧೇ ಯದ್ ಗುಣಾಂಸ್ತಾನ್ನಿಬೋಧ ಮೇ|
ತ್ರಿಣಾಚಿಕೇತಸ್ತ್ರಿಮಧುಸ್ತ್ರಿಸುಪರ್ಣಷ್ಷಡಂಗವಿತ್||1||

ವೇದವಿತ್ ಶ್ರೋತ್ರಿಯೋ ಯೋಗೀ ತಥಾ ವೈ ಜ್ಯೇಷ್ಠಸಾಮಗ:|
ಋತ್ವಿಕ್ ಸ್ವಸ್ರೇಯದೌಹಿತ್ರಜಾಮಾತೃಶ್ವಶುರಾಸ್ತಥಾ||2||

ಮಾತುಲೋಥ ತಪೋನಿಷ್ಠ: ಪಂಚಾಗ್ನ್ಯಭಿರತಸ್ತಥಾ|
ಶಿಷ್ಯಾಸ್ಸಂಬಂಧಿನಶ್ಚೈವ ಮಾತಾಪಿತೃರತಶ್ಚ ಯ:||3||

ಏತಾನ್ನಿಯೋಜಯೇತ್ ಶ್ರಾದ್ಧೇ ಪೂರ್ವೋಕ್ತಾನ್ ಪ್ರಥಮೇ ನೃಪ|
ಬ್ರಾಹ್ಮಣಾನ್ ಪಿತೃತುಷ್ಟ್ಯರ್ಥಮನುಕಲ್ಪೇಷ್ವನಂತರಾನ್||4||

ಪರಾಶರರು ಹೇಳಿದರು:-

ಮೈತ್ರೇಯ, ಔರ್ವನು ಮುಂದುವರಿಸಿ ಹೀಗೆಂದನು:
ಯಾವ ಗುಣಗಳುಳ್ಳ ಬ್ರಾಹ್ಮಣರನ್ನು ಶ್ರಾದ್ಧದಲ್ಲಿ ಭೋಜನ ಮಾಡಿಸಬೇಕೋ ಅಂಥವರನ್ನು ಹೇಳುತ್ತೇನೆ, ಕೇಳು. 
ಆ ಬ್ರಾಹ್ಮಣನು ತ್ರಿಣಾಚಿಕೇತನೂ ತ್ರಿಮಧುವೂ ತ್ರಿಸುಪರ್ಣನೂ ಷಡಂಗವೇದಿಯೂ ಆಗಿರಬೇಕು. 

ವೇದಾರ್ಥವನ್ನು ಬಲ್ಲವನು, ವೇದಾಧ್ಯಾಯೀ, ಯೋಗಿ, ಜ್ಯೇಷ್ಠಸಾಮವನ್ನು ಗಾನಮಾಡತಕ್ಕವನು, ಋತ್ವಿಕ್, ಸೋದರೀಪುತ್ರ, ಮಗಳ ಮಗ, ಅಳಿಯ, ಮಾವ, ಸೋದರಮಾವ, ತಪಸ್ವಿ, ಪಂಚಾಗ್ನಿ ವಿದ್ಯೆಗಳನ್ನು ಅನುಷ್ಠಾನ ಮಾಡತಕ್ಕವನು, ಶಿಷ್ಯ, ಬಂಧು, ತಾಯಿತಂದೆಗಳ ಸೇವೆ ಮಾಡತಕ್ಕವನು - ಇವರು ಶ್ರಾದ್ಧಭೋಜನಕ್ಕೆ ಅರ್ಹರಾದವರು. 

ಇವರಲ್ಲಿ ಮೊದಲು ಹೇಳಿದ ಬ್ರಾಹ್ಮಣರನ್ನು (ತ್ರಿಣಾಚಿಕೇತನಿಂದ ಜ್ಯೇಷ್ಠಸಾಮಗನವರೆಗೆ ಹೇಳಿದವರನ್ನು) ಶ್ರಾದ್ಧದಲ್ಲಿ ಪಿತೃಗಳ ತೃಪ್ತಿಗಾಗಿ ಮುಖ್ಯರೆಂದು ನಿಮಂತ್ರಿಸಬೇಕು. 
ಮುಂದಿನ ಋತ್ವಿಕ್ ಮೊದಲಾದವರನ್ನು ಅನುಕಲ್ಪದಲ್ಲಿ (ಮೊದಲನೆಯವರು ದೊರೆಯದಾಗ) ನಿಮಂತ್ರಿಸಬೇಕು. 

********
ಮಿತ್ರಧ್ರುಕ್ಕುನಖೀ ಕ್ಲೀಬಶ್ಯಾವದಂತಸ್ತಥಾ ದ್ವಿಜ:|
ಕನ್ಯಾದೂಷಯಿತಾ ವಹ್ನಿವೇದೋಜ್ಝಸ್ಸೋಮವಿಕ್ರಯೀ||5||

ಅಭಿಶಸ್ತಥಾ ಸ್ತೇನ: ಪಿಶುನೋ ಗ್ರಾಮಯಾಜಕ:|
ಭೃತಕಾಧ್ಯಾಪಕಸ್ತದ್ವದ್ ಭೃತಕಾಧ್ಯಾಪಿತಶ್ಚ ಯ:||6||

ಪರಪೂರ್ವಾಪತಿಶ್ಚೈವ ಮಾತಾಪಿತ್ರೋಸ್ತಥೋಜ್ಝಕ:|
ವೃಷಲೀಸೂತಿಪೋಷ್ಟಾ ಚ ವೃಷಲೀಪತಿರೇವ ಚ||7||

ತಥಾ ದೇವಲಕಶ್ಚೈವ ಶ್ರಾದ್ಧೇ ನಾರ್ಹತಿ ಕೇತನಮ್||8||

ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಅನರ್ಹರು ಯಾರೆಂದರೆ:
ಮಿತ್ರದ್ರೋಹಿ, ಕೆಟ್ಟ ಉಗುರುಳ್ಳವನು, ನಪುಂಸಕ, ಮಲಿನವಾದ ಹಲ್ಲುಳ್ಳವನು, ಅವಿವಾಹಿತ ಕನ್ಯೆಯ ಸಂಗ ಮಾಡಿದವನು, ಅಗ್ನಿಯ ಆರಾಧನೆ ಮತ್ತು ವೇದಗಳನ್ನು ನಿಂದಿಸುವವನು, ಸೋಮಲತೆಯನ್ನು ಮಾರತಕ್ಕವನು, ಲೋಕನಿಂದಿತನಾದವನು, ಕಳ್ಳ, ಚಾಡಿಕೋರ, ಹಳ್ಳಿಯ ಪುರೋಹಿತ, ಸಂಬಳವನ್ನು ತೆಗೆದುಕೊಂಡು ವೇದಮಂತ್ರ ಹೇಳಿಕೊಡುವವನು, ಅಂಥವನಿಂದ ವೇದಾಧ್ಯಯನ ಮಾಡಿದವನು,  ತಂದೆತಾಯಿಗಳನ್ನು ತ್ಯಜಿಸಿದವನು, ಶೂದ್ರಸಂತತಿಯನ್ನು ಪೋಷಿಸತಕ್ಕವನು, ಶೂದ್ರಳನ್ನು ಮದುವೆಯಾದವನು, ವೇತನವನ್ನು ಪಡೆಯುವ ಅರ್ಚಕ - ಇವರು ನಿಮಂತ್ರಣಕ್ಕೆ ಯೋಗ್ಯರಲ್ಲ. 
********

ಪ್ರಥಮೇಹ್ನಿ ಬುಧಶ್ಯಸ್ತಾನ್ ಶ್ರೋತ್ರಿಯಾದೀನ್ನಿಮಂತ್ರಯೇತ್|
ಕಥಯೇಚ್ಚ ತಥೈವೈಷಾಂ ನಿಯೋಗಾನ್ ಪಿತೃದೈವಿಕಾನ್||9||

ತತ: ಕ್ರೋಧವ್ಯವಾಯಾದೀನಾಯಾಸಂ ತೈರ್ದ್ವಿಜೈಸ್ಸಹ|
ಯಜಮಾನೋ ನ ಕುರ್ವೀತ ದೋಷಸ್ತತ್ರ ಮಹಾನಯಮ್||10||

ಶ್ರಾದ್ಧೇ ನಿಯುಕ್ತೋ ಭುಕ್ತ್ವಾ ವಾ ಭೋಜಯಿತ್ವಾ ನಿಯಜ್ಯ ಚ|
ವ್ಯವಾಯೀ ರೇತಸೋ ಗರ್ತೇ ಮಜ್ಜಯತ್ಯಾತ್ಮನ: ಪಿತೃನ್||11||

ತಸ್ಮಾತ್ ಪ್ರಥಮಮಂತ್ರೋಕ್ತಂ ದ್ವಿಜಾಗ್ರ್ಯಾಣಾಂ ನಿಮಂತ್ರಣಮ್|
ಅಭಿಮಂತ್ರ್ಯ ದ್ವಿಜಾನೇವಮಾಗತಾನ್ ಭೋಜಯೇದ್ಯತೀನ್||12||

ಬುದ್ಧಿಶಾಲಿಯು ಶ್ರಾದ್ಧದ ಹಿಂದಿನ ದಿನ ಪ್ರಶಸ್ತರಾದ ಶ್ರೋತ್ರಿಯರನ್ನು ನಿಮಂತ್ರಿಸಿ "ನೀವು ಪಿತೃಸ್ಥಾನಕ್ಕೆ ನಿಮಂತ್ರಿತರಾಗಿದ್ದೀರಿ, ನೀವು ವಿಶ್ವೇದೇವಸ್ಥಾನಕ್ಕೆ ನಿಮಂತ್ರಿತರಾಗಿದ್ದೀರಿ" ಎಂದು ತಿಳಿಸಬೇಕು. 

ಅನಂತರ ಶ್ರಾದ್ಧಮಾಡತಕ್ಕ ಯಜಮಾನನೂ ಆ ಬ್ರಾಹ್ಮಣರೂ ಸಹ ಕ್ರೋಧ, ಮೈಥುನ, ಶ್ರಮದ ಕೆಲಸ ಮುಂತಾದ್ದನ್ನು ವರ್ಜಿಸಬೇಕು. ಇಲ್ಲದಿದ್ದರೆ ಮಹತ್ತರವಾದ ದೋಷವು ಸಂಭವಿಸುತ್ತದೆ. 

ಶ್ರಾದ್ಧಕ್ಕೆ ನಿಯುಕ್ತನಾದ ವಿಪ್ರನು (ಶ್ರಾದ್ಧ ಭೋಜನವಾಗುವವರೆಗೂ), ಶ್ರಾದ್ಧಬೋಜನವಾದ ಮೇಲೆ ಆ ದಿನವೂ ಸ್ತ್ರೀಸಂಗ ಮಾಡತಕ್ಕದ್ದಲ್ಲ. 
ಹಾಗೆಯೇ ಯಜಮಾನನು ವಿಪ್ರರಿಗೆ ನಿಮಂತ್ರಣವನ್ನು ಕೊಟ್ಟಮೇಲೆಯೂ ಶ್ರಾದ್ಧಭೋಜನವನ್ನು ಮಾಡಿಸಿದ ದಿನವೂ ಸ್ತ್ರೀಸಂಗವನ್ನು ಮಾಡಬಾರದು. 
ಹಾಗೆ ಮಾಡಿದರೆ ಪಿತೃಗಳನ್ನು ರೇತಸ್ಸಿನ ಗರ್ತದಲ್ಲಿ ಮುಳುಗಿಸಿದವನಾಗುತ್ತಾನೆ. 

ಆದ್ದರಿಂದ, ರಾಜ, ಬ್ರಾಹ್ಮಣರ ನಿಮಂತ್ರಣದ ವಿಷಯವನ್ನು ಮೊದಲೇ ಹೇಳಿದ್ದೇನೆ. 
ಹೀಗೆ ನಿಮಂತ್ರಣವನ್ನಿತ್ತ ಮೇಲೆ ಶ್ರಾದ್ಧದ ದಿನ ಯಾರಾದರೂ ಉತ್ತಮ ಬ್ರಾಹ್ಮಣರಾಗಲಿ ಯತಿಗಳಾಗಲಿ ಆಕಸ್ಮಿಕವಾಗಿ ಆಗಮಿಸಿದರೆ, ಅವರಿಗೂ ಶ್ರಾದ್ಧಭೋಜನವನ್ನು ಮಾಡಿಸಬೇಕು. 
********

ಪಾದಶೌಚಾದಿನಾ ಗೇಹಮಾಗತಾನ್ ಪೂಜಯೇದ್ ದ್ವಿಜಾನ್|
ಪವಿತ್ರಪಾಣಿರಾಚಾಂತಾನಾಸನೇಷೂಪವೇಶಯೇತ್||13||

ಪಿತೃಣಾಮಯುಜೋ ಯುಗ್ಮಾನ್ ದೇವಾನಾಮಿಚ್ಛಯಾ ದ್ವಿಜಾನ್|
ದೇವಾನಾಮೇಕಮೇಕಂ ವಾ ಪಿತೃಣಾಂ ಚ ನಿಯೋಜಯೇತ್||14||

ತಥಾ ಮಾತಾಮಹಶ್ರಾದ್ಧಂ ವೈಶ್ವದೇವಸಮನ್ವಿತಮ್|
ಕುರ್ವೀತ ಭಕ್ತಿಸಂಪನ್ನಸ್ತಂತ್ರಂ ವಾ ವೈಶ್ವದೈವಿಕಮ್||15||

ಪ್ರಾಙ್ಮುಖಾನ್ ಭೋಜಯೇದ್ವಿಪ್ರಾನ್ ದೇವಾನಾಮುಭಯಾತ್ಮಕಾನ್|
ಪಿತೃಮಾತಾಮಹಾನಾಂ ಚ ಭೋಜಯೇಚ್ಚಾಪ್ಯುದಙ್ಮುಖಾನ್||16||

ಮನೆಗೆ ಬಂದ ದ್ವಿಜರನ್ನು ಪಾದ್ಯಾದಿಗಳಿಂದ ಉಪಚರಿಸಿ, ಅವರು ಆಚಮನ ಮಾಡಿದ ಮೇಲೆ ಪವಿತ್ರಪಾಣಿಯಾಗಿ ಆಸನದಲ್ಲಿ ಕುಳ್ಳಿರಿಸಬೇಕು. 
ಪಿತೃಗಳ ಸ್ಥಾನದಲ್ಲಿ ಬ್ರಾಹ್ಮಣರನ್ನು ಬೆಸಸಂಖ್ಯೆಯಲ್ಲಿಯೂ ವಿಶ್ವೇದೇವರ ಸ್ಥಾನದಲ್ಲಿ ಸಮಸಂಖ್ಯೆಯವರನ್ನೂ ನಿಯೋಜಿಸಬೇಕು. 

ಅಥವಾ ವಿಶ್ವೇದೇವರ ಸ್ಥಾನದಲ್ಲಿ ತನ್ನ ಇಚ್ಛೆಯಂತೆ ಯಾವ ಸಂಖ್ಯೆಯವರನ್ನಾದರೂ ನಿಯೋಜಿಸಬಹುದು. 
ಇಲ್ಲದಿದ್ದರೆ ಪಿತೃಗಳ ಮತ್ತು ವಿಶ್ವೇದೇವರ ಸ್ಥಾನದಲ್ಲಿ ಒಬ್ಬೊಬ್ಬ ಬ್ರಾಹ್ಮಣನನ್ನಾದರೂ ನಿಯೋಜಿಸಬಹುದು. 

ಹಾಗೆಯೇ ಮಾತಾಮಹನ ಶ್ರಾದ್ಧವನ್ನೂ ವಿಶ್ವೇದೇವರ ಆವಾಹನೆಯೊಡನೆ ಮಾಡಬೇಕು. 
ಅಥವಾ ಭಕ್ತಿಪೂರ್ವಕವಾಗಿ ವಿಶ್ವೇದೇವರನ್ನು ಮಾತ್ರ ಆವಾಹಿಸಿ ಉಭಯಶ್ರಾದ್ಧವನ್ನೂ ಮಾಡಬಹುದು. 

ಪಿತೃಶ್ರಾದ್ಧ ಮತಾಮಹಶ್ರಾದ್ಧ ಎರಡರಲ್ಲಿಯೂ ವಿಶ್ವೇದೇವರ ಸ್ಥಾನದ ವಿಪ್ರರನ್ನು ಪೂರ್ವಾಭಿಮುಖವಾಗಿಯೂ, ಪಿತೃದೇವತೆಗಳ ಸ್ಥಾನದವರನ್ನು ಉತ್ತರಾಭಿಮುಖವಾಗಿಯೂ ಕುಳ್ಳಿರಿಸಬೇಕು.

********
ಪೃಥಕ್ತಯೋ: ಕೇಚಿದಾಹು: ಶ್ರಾದ್ಧಸ್ಯ ಕರಣಂ ನೃಪ|
ಏಕತ್ರೈಕೇನ ಪಾಕೇನ ವದಂತ್ಯನ್ಯೇ ಮಹರ್ಷಯ:||17||

ವಿಷ್ಟರಾರ್ಥಂ ಕುಶಂ ದತ್ತ್ವಾ ಸಂಪೂಜ್ಯಾರ್ಘ್ಯಂ ವಿಧಾನತ:|
ಕುರ್ಯಾದಾವಾಹನಂ ಪ್ರಾಜ್ಞೋ ದೇವಾನಾಂ ತದನುಜ್ಞಯಾ||18||

ಯವಾಂಬುನಾ ಚ ದೇವಾನಾಂ ದದ್ಯಾದರ್ಘ್ಯಂ ವಿಧಾನವಿತ್|
ಸ್ರಗ್ಗಂಧಧೂಪದೀಪಾಂಶ್ಚ ತೇಭ್ಯೋ ದದ್ಯಾದ್ಯಥಾವಿಧಿ||19||

ಪಿತೃಣಾಮಪಸವ್ಯಂ ತತ್ಸರ್ವಮೇವೋಪಕಲ್ಪಯೇತ್|
ಅನುಜ್ಞಾಂ ಚ ತತ: ಪ್ರಾಪ್ಯ ದತ್ತ್ವಾ ದರ್ಭಾನ್ ದ್ವಿಧಾಕೃತಾನ್||20||

ಮಂತ್ರಪೂರ್ವಂ ಪಿತೃಣಾಂ ತು ಕುರ್ಯಾಚ್ಚಾವಾಹನಂ ಬುಧ:|
ತಿಲಾಂಬುನಾ ಚಾಪಸವ್ಯಂ ದದ್ಯಾದರ್ಘ್ಯಾದಿಕಂ ನೃಪ||21||

ಪಿತೃಮಾತಾಮಹಾಶ್ರಾದ್ಧಗಳಲ್ಲಿ ಶ್ರಾದ್ಧವು ಬೇರೆ ಬೇರೆ ಆಗಬೇಕೆಂದು ಕೆಲವರು ಹೇಳುತ್ತಾರೆ. 
ಒಂದೇ ಪಾಕದಿಂದ ಒಂದೇ ಕಡೆ ಮಾಡಬಹುದೆಂದೂ ಕೆಲವು ಮಹರ್ಷಿಗಳು ಹೇಳಿದ್ದಾರೆ. 

ಪ್ರಾಜ್ಞನಾದವನು ಆಸನಕ್ಕಾಗಿ ದರ್ಬೆಯನ್ನು ಕೊಟ್ಟು ಅರ್ಘ್ಯವನ್ನಿತ್ತು ವಿಧಿಪೂರ್ವಕವಾಗಿ ಅರ್ಚಿಸಿ, ವಿಶ್ವೇದೇವಾತ್ಮಕ ಬ್ರಾಹ್ಮಣರ ಅನುಮತಿಯನ್ನು ಪಡೆದು ವಿಶ್ವೇದೇವರನ್ನೂ ಪಿತೃಗಣಗಳನ್ನೂ ಆವಾಹಿಸಬೇಕು. 

ವಿಧಿಜ್ಞನಾದವನು ಯವಮಿಶ್ರಿತಜಲದಿಂದ ವಿಶ್ವೇದೇವರಿಗೆ ಅರ್ಘ್ಯವನ್ನು ಕೊಟ್ಟು, ಹೂ ಗಂಧ ಧೂಪದೀಪಾದಿಗಳನ್ನು ವಿಧ್ಯನುಸಾರವಾಗಿ ಅರ್ಪಿಸಬೇಕು. 

ಅಪಸವ್ಯವಾಗಿ ಯಜ್ಞೋಪವೀತವನ್ನು ಧರಿಸಿ, ಹಿಂದೆ ಹೇಳಿದ್ದೆಲ್ಲವನ್ನೂ ಪಿತೃಸ್ಥಾನದ ಬ್ರಾಹ್ಮಣರಿಗೆ ಅರ್ಪಿಸಬೇಕು. ಅವರ ಅನುಮತಿಯಿಂದ ದರ್ಬೆಗಳನ್ನು ಎರಡಾಗಿ ಮಡಿಸಿ ಆಸನಾರ್ಥನಾಗಿ ಕೂಡಬೇಕು. 

ಮಂತ್ರಪೂರ್ವಕವಾಗಿ ಪಿತೃಗಳನ್ನು ಅವರಲ್ಲಿ ಆವಾಹನ ಮಾಡಬೇಕು. 
ರಾಜ-ಸಗರ, ಪಿತೃಗಳಿಗೆ ತಿಲಮಿಶ್ರಿತವಾದ ಅರ್ಘ್ಯಾದಿಗಳನ್ನು ಅಪಸವ್ಯವಾಗಿ ಕೊಡಬೇಕು. 

********

ಕಾಲೇ ತತ್ರಾತಿಥಿಂ ಪ್ರಾಪ್ತಮನ್ನಕಾಮಂ ನೃಪಾಧ್ವಗಮ್|
ಬ್ರಾಹ್ಮಣೈರಭ್ಯನುಜ್ಞಾತ: ಕಾಮಂ ತಮಸಿ ಭೋಜಯೇತ್||22||

ಯೋಗಿನೋ ವಿವಿಧೈರೂಪೇರ್ನರಾಣಾಮುಪಕಾರಿಣ:|
ಭ್ರಮಂತಿ ಪೃಥಿವೀಮೇತಾಮವಿಜ್ಞಾತ ಸ್ವರೂಪಿಣ:||23||

ತಸ್ಮಾದಭ್ಯರ್ಚಯೇತ್ ಪ್ರಾಪ್ತಂ ಶ್ರಾದ್ಧಕಾಲೇತಿಥಿಂ ಬುಧ:|
ಶ್ರಾದ್ಧಕ್ರಿಯಾಫಲಂ ಹಂತಿ ನರೇಂದ್ರಾಪೂಜಿತೋತಿಥಿ:||24||

ಜುಹುಯಾದ್ವ್ಯಂಜನಕ್ಷಾರವರ್ಜಮನ್ನಂ ತತೋನಲೇ|
ಅನುಜ್ಞಾತೋ ದ್ವಿಜೈಸ್ತೈಸ್ತು ತ್ರಿಕೃತ್ವ: ಪುರುಷರ್ಷಭ||25||

ಶ್ರಾದ್ಧ ಸಮಯದಲ್ಲಿ ಅನ್ನಾಪೇಕ್ಷಿಯಾಗಿ ಪ್ರಯಾಣಿಕನಾದ ಅತಿಥಿಯು ಬಂದರೆ, ಈ ಬ್ರಾಹ್ಮಣರ ಅನುಜ್ಞೆಯನ್ನು ಪಡೆದು ಆತನಿಗೂ ಭೋಜನ ಮಾಡಿಸಬೇಕು. 

ಏಕೆಂದರೆ, ಯೋಗಿಪುರುಷರು ತಮ್ಮ ಸ್ವರೂಪವನ್ನು ತೋರಿಸದೆಯೇ ಬೇರೆ ಬೇರೆ ರೂಪಗಳಿಂದ ಜನೋಪಕಾರಕ್ಕಾಗಿ ಸಂಚರಿಸುತ್ತ ಇರುತ್ತಾರೆ. 

ಆದ್ದರಿಂದ ಶ್ರಾದ್ಧಕಾಲದಲ್ಲಿ ಬಂದ ಅತಿಥಿಯನ್ನು ವಿದ್ವಾಂಸನು ಅರ್ಚಿಸತಕ್ಕದ್ದು. 
ಸಗರ, ಅತಿಥಿಯು ಸತ್ಕೃತನಾಗದೆ ಹೋದರೆ ಶ್ರಾದ್ಧದ ಫಲವನ್ನು ನಾಶಮಾಡುತ್ತಾನೆ. 

ಆಮೇಲೆ ಯಜಮಾನನು ತರಕಾರಿ ಮತ್ತು ಕ್ಷಾರ - ಮೊದಲಾದವಿಲ್ಲದ ಅನ್ನವನ್ನು, ದ್ವಿಜರ ಅನುಮತಿಯಿಂದ, ಅಗ್ನಿಯಲ್ಲಿ ಮೂರು ಸಲ ಹೋಮ ಮಾಡಬೇಕು. 

********

ಅಗ್ನಯೇ ಕವ್ಯವಾಹಾಯ ಸ್ವಾಹೇತ್ಯಾದೌ ನೃಪಾಹುತಿ:|
ಸೋಮಾಯ ವೈ ಪಿತೃಮತೇ ದಾತವ್ಯಾ ತದನಂತರಮ್||26||

ವೈವಸ್ವತಾಯ ಚೈವಾನ್ಯಾ ತೃತೀಯಾ ದೀಯತೇ ತತ:|
ಹುತಾವಶಿಷ್ಟಮಲ್ಪಾನ್ನಂ ವಿಪ್ರಪಾತ್ರೇಷು ನಿರ್ವಪೇತ್||27||

ತತೋನ್ನಂ ಮೃಷ್ಟಮತ್ಯರ್ಥಮಭೀಷ್ಟಮತಿಸಂಸ್ಕೃತಮ್|
ದತ್ತ್ವಾ ಜುಷಧ್ವಮಿಚ್ಚಾತೋ ವಾಚ್ಯಮೇತದನಿಷ್ಠುರಮ್||28||

ಭೋಕ್ತವ್ಯಂ ತೈಶ್ಚ ತಚ್ಚಿತ್ತೈರ್ಮೌನಿಭಿಸ್ಸುಮುಖೈ: ಸುಖಮ್|
ಅಕ್ರುದ್ಧ್ಯತಾ ಚಾತ್ವರತಾ ದೇಯಂ ತೇನಾಪಿ ಭಕ್ತಿತ:||29||

ರಕ್ಷೋಘ್ನ ಮಂತ್ರಪಠನಂ ಭೂಮೇರಾಸ್ತರಣಂ ತಿಲೈ:|
ಕೃತ್ವಾ ಧ್ಯೇಯಾಸ್ಸ್ವಪಿತರಸ್ತ ಏವ ದ್ವಿಜಸತ್ತಮಾ:||30||

'ಅಗ್ನಯೇ, ಕವ್ಯವಾಹಾಯ ಸ್ವಾಹಾ (ಸ್ವಧಾ)' - ಎಂದು ಪ್ರಥಮಾಹುತಿ; 
'ಸೋಮಾಯ ಪಿತೃಮತೇ ಸ್ವಾಹಾ' - ಎಂದು ದ್ವಿತೀಯಾಹುತಿ; 
'ವೈವಸ್ವತಾಯ (-ಯಮಾಯಾಂಗಿರಸ್ವತೇ) ಸ್ವಾಹಾ' - ಎಂದು ತೃತೀಯಾಹುತಿ.
ಆ ಮೇಲೆ ಹುತಾವಶಿಷ್ಟವಾದ ಸ್ವಲ್ಪ ಅನ್ನವನ್ನು ಬ್ರಾಹ್ಮಣರ ಭೋಜನ ಪಾತ್ರೆಗಳಿಗೆ ಹಾಕಬೇಕು. 

ಅನಂತರ ಅವರಿಗೆ ಅತ್ಯಂತ ಪ್ರಿಯವೂ ಚೆನ್ನಾಗಿ ಸಂಸ್ಕರಿಸಲ್ಪಟ್ಟದ್ದೂ ಆದ ಮೃಷ್ಟಾನ್ನವನ್ನು ಬಡಿಸಿ "ಯಥೇಚ್ಛವಾಗಿ  (ಜುಷಧ್ವಂ) ಪ್ರೀತಿಯಿಂದ ಸೇವಿಸಿರಿ" - ಎಂದು ಮೃದುವಾಗಿ ಹೇಳಬೇಕು. 

ಬ್ರಾಹ್ಮಣರೂ ಸಹ ಏಕಾಗ್ರತೆಯಿಂದ ಪ್ರಸನ್ನಮುಖರಾಗಿ ಮೌನದಿಂದ ಸುಖವಾಗಿ ಭೋಜನ ಮಾಡತಕ್ಕದ್ದು.‌ ಯಜಮಾನನೂ ಸಹ ಕೋಪಗೊಳ್ಳದೆ ತ್ವರೆಪಡಿಸದೆ ಭಕ್ತಿಯಿಂದ ಬಡಿಸತಕ್ಕದ್ದು. 

ಮತ್ತು 'ಓಂ ಅಪಹತಾ ಅಸುರಾ ರಕ್ಷಗ್ಂಸಿ ವೇದಿಷದ:' ಎಂಬ ರಕ್ಷೋಘ್ನ ಮಂತ್ರವನ್ನು ಪಠಿಸಿ ನೆಲದ ಮೇಲೆ ಎಳ್ಳನ್ನು ಹರಡಿ, ತನನ ಪಿತೃರೂಪರೆಂದು ಆ ದ್ವಿಜೋತ್ತಮರನ್ನು ಧ್ಯಾನಿಸುತ್ತಿರಬೇಕು. 

********
ಪಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹ:|
ಮಮ ತೃಪ್ತಿಂ ಪ್ರಯಾಂತ್ವದ್ಯ ವಿಪ್ರದೇಹೇಷು ಸಂಸ್ಥಿತಾ:||31||

ಪಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹ:|
ಮಮ ತೃಪ್ತಿಂ ಪ್ರಯಾಂತ್ವದ್ಯ ಹೋಮಾಪ್ಯಾಯಿತಮೂರ್ತಯ:||32||

ಪಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹ:|
ತೃಪ್ತಿಂ ಪ್ರಯಾಂತು ಪಿಂಡೇನ ಮಯಾ ದತ್ತೇನ ಭೂತಲೇ||33||

ಪಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹ:|
ತೃಪ್ತಿಂ ಪ್ರಯಾಂತು ಮೇ ಭಕ್ತ್ಯಾ ಮಯೈತತ್ಸಮುದಾಹೃತಮ್||34||

ಪಿತೃರೂಪರೆಂದು ಆ ದಿವಿಜೋತ್ತಮರನ್ನು ಧ್ಯಾನಿಸುತ್ತ ಹೀಗೆ ಹೇಳತಕ್ಕದ್ದು "ಈ ಬ್ರಾಹ್ಮಣರ ದೇಹಗಳಲ್ಲಿ ಆವಾಹಿತರಾದ ನನ್ನ ಪಿತಾ, ಪಿತಾಮಹ, ಪ್ರಪಿತಾಮಹರು ಈಗ ತೃಪ್ತಿಯನ್ನೈದಲಿ. 

ಈಗ ನಾನು ಹೋಮದಿಂದ ಆಪ್ಯಾಯಿತರಾದ ನನ್ನ ಪಿತಾ, ಪಿತಾಮಹ, ಪ್ರಪಿತಾಮಹರು ತೃಪ್ತಿಯನ್ನೈದಲಿ. 

ನಾನು ನೆಲದ ಮೇಲೆ ನೀಡಿದ ಪಿಂಡದಿಂದ ಪಿತಾ, ಪಿತಾಮಹ, ಪ್ರಪಿತಾಮಹರು ತೃಪ್ತಿಯನ್ನೈದಲಿ. 

ನನ್ನ ಪಿತಾ, ಪಿತಾಮಹ, ಪ್ರಪಿತಾಮಹರು ನನ್ನ ಭಕ್ತಿಯಿಂದ ತೃಪ್ತಿಯನ್ನೈದಲಿ - ಎಂದು ನಿವೇದಿಸಿಕೊಂಡಿದ್ದೇನೆ. 

********
ಮಾತಾಮಹಸ್ತೃಪ್ತಿಮುಪೈತು ತಸ್ಯ ತಥಾ ಪಿತಾ ತಸ್ಯ ಪಿತಾ ತತೋನ್ಯ:|
ವಿಶ್ವೇ ಚ ದೇವಾ: ಪರಮಾಂ ಪ್ರಯಾಂತು ತೃಪ್ತಿಂ ಪ್ರಣಶ್ಯಂತು ಚ ಯಾತುಧಾನಾ:||35||

ಯಜ್ಞೇಶ್ವರೋ ಹವ್ಯಸಮಸ್ತಕವ್ಯಭೋಕ್ತಾವ್ಯಯಾತ್ಮಾ ಹರಿರೀಶ್ವರೋತ್ರ|
ತತ್ಸನ್ನಿಧಾನಾದಪಯಾಂತು ಸದ್ಯೋ ರಕ್ಷಾಂಸ್ಯಶೇಷಾಣ್ಯಸುರಾಶ್ಚ ಸರ್ವೇ||36||

ತೃಪ್ತೇಷ್ವೇತೇಷು ವಿಕಿರೇದನ್ನಂ ವಿಪ್ರೇಷು ಭೂತಲೇ|
ದದ್ಯಾದಾಚಮನಾರ್ಥಾಯ ತೇಭ್ಯೋ ವಾರಿ ಸಕೃತ್ ಸಕೃತ್||37||

"ನನ್ನ ಮಾತಾಮಹ, ಮಾತಾಮಹನ ಪಿತಾ, ಆತನ ಪಿತಾ - ಇವರು ತೃಪ್ತರಾಗಲಿ. 
ವಿಶ್ವೇದೇವರು ಪರಮತೃಪ್ತಿಯನ್ನು ಪಡೆಯಲಿ. 
ರಾಕ್ಷಸರು ನಾಶವನ್ನೈದಲಿ. 
ಯಜ್ಞೈಶ್ವರನೂ ಸಮಸ್ತ ಹವ್ಯಕವ್ಯಗಳ ಭೋಕ್ತೃವೂ ಅವ್ಯಯಾತ್ಮನೂ ಜಗದೀಶ್ವರನೂ ಆದ ಶ್ರೀಹರಿಯು ಇಲ್ಲಿ ಸನ್ನಿಹಿತನಾಗಿದ್ದಾನೆ. 
ಅವನ ಸಾನ್ನಿಧ್ಯದ ಬಲದಿಂದ ಸಮಸ್ತ ರಾಕ್ಷಸರೂ ಅಸುರರೂ ಒಡನೆಯೇ ಇಲ್ಲಿಂದ ಹೊರಟುಹೋಗಲಿ."
ಈ ರೀತಿಯಾಗಿ ದ್ವಿಜೋತ್ತಮರನ್ನು ಧ್ಯಾನಿಸುತ್ತಿರಬೇಕು. 

ಅನಂತರ ಬ್ರಾಹ್ಮಣರು ಸಂತೃಪ್ತರಾದ ಮೇಲೆ ಭೂತಳದಲ್ಲಿ ಅನ್ನವನ್ನು ಹರಡಬೇಕು. 
ಆಮೇಲೆ ಬ್ರಾಹ್ಮಣರಿಗೆ ಆಚಮನಕ್ಕಾಗಿ ಒಂದೊಂದೇ ಸಲ ಜಲವನ್ನು ಹಾಕಬೇಕು. 
********


ಸುತೃಪ್ತೈಸ್ತೈರನುಜ್ಞಾತಸ್ಸರ್ವೇಣಾನ್ನೇನ ಭೂತಲೇ|
ಸತಿಲೇನ ತತ: ಪಿಂಡಾನ್ ಸಮ್ಯಗ್ದದ್ಯಾತ್ಸಮಾಹಿತ:||38||

ಪಿತೃತೀರ್ಥೇನ ಸತಿಲಂ ತಥೈವ ಸಲಿಲಾಂಜಲಿಮ್|
ಮತಾಮಹೇಭ್ಯಸ್ತೇನೈವ ಪಿಂಡಾಂಸ್ತೀರ್ಥೇನ ನಿರ್ವಪೇತ್||39||

ದಕ್ಷಿಣಾಗ್ರೇಷು ದರ್ಭೇಷು ಪುಷ್ಪಧೂಪಾದಿಪೂಜಿತಮ್|
ಸ್ವಪಿತ್ರೇ ಪ್ರಥಮಂ ಪಿಂಡಂ ದದ್ಯಾದುಚ್ಛಿಷ್ಟಸನ್ನಿಧೌ||40||

ಪಿತಾಮಹಾಯ ಚೈವಾನ್ಯಂ ತತ್ಪಿತ್ರೇ ಚ ತಥಾಪರಮ್|
ದರ್ಭಮೂಲೇ ಲೇಪಭುಜ: ಪ್ರೀಣಯೇಲ್ಲೇಪಘರ್ಷಣೈ:||41||

ಬ್ರಾಹ್ಮಣರು ತೃಪ್ತರಾದ ಮೇಲೆ ಅನುಜ್ಞೆಯನ್ನು ಪಡೆದು ವ್ಯಂಜನಾದಿ ಸರ್ವಪಾಕವಸ್ತು ಸಮನ್ವಿತವಾದ ತಿಲಮಿಶ್ರ ಅನ್ನದಿಂದ ಸಮಾಹಿತನಾಗಿ ನೆಲದ ಮೇಲೆ ಪಿಂಡಗಳನ್ನು ಹಾಕತಕ್ಕದ್ದು. 

ತನ್ನ ಪಿತೃವರ್ಗದವರಿಗೆ ತಿಲಮಿಶ್ರ ಜಲದಿಂದ ಪಿತೃತೀರ್ಥದ ಮೂಲಕ ತರ್ಪನವನ್ನೀಯಬೇಕು. 
ಹಾಗೆಯೇ ಮತಾಮಹಾದಿಗಳಿಗೂ ಪಿಂಡಗಳನ್ನೂ ತರ್ಪಣಗಳನ್ನೂ ಕೊಡತಕ್ಕದ್ದು. 

ದಕ್ಷಿಣಾಗ್ರವಾಗಿ ಹಾಸಿದ ದರ್ಬೆಗಳ ಮೇಲೆ ಪುಷ್ಪಧೂಪಾದಿಗಳಿಂದ ಅರ್ಚಿಸಿ ಉಚ್ಛಿಷ್ಟದ ಬಳಿಯಲ್ಲಿ ಮೊದಲು ತನ್ನ ತಂದೆಗೆ ಪಿಂಡವನ್ನು ಹಾಕಬೇಕು. 

ಅನಂತರ ಪಿತಾಮಹನಿಗೂ ಪ್ರಪಿತಾಮಹನಿಗೂ ಬೇರೆ ಬೇರೆ ಪಿಂಡವನ್ನು ಹಾಕಬೇಕು. 
ಆಮೇಲೆ ಕೈಗೆ ಅಂಟಿದ ಅನ್ನವನ್ನು ದರ್ಭೆಗಳ ಬುಡದಲ್ಲಿ ತೀಡುತ್ತ (ಇದರಿಂದ ಲೇಪಭೋಜಿಗಳಾದ ಚತುರ್ಥಾದಿ ಪಿತೃಗಳು ಸಂತೃಪ್ತಿಯನ್ನೈದಲಿ) ಎಂದು ಅವರನ್ನು ಸಂತೃಪ್ತಿಗೊಳಿಸಬೇಕು.

********

ಪಿಂಡೈರ್ಮಾತಾಮಹಾಂಸ್ತದ್ವದ್ ಗಂಧಮಾಲ್ಯಾದಿ ಸಂಯುತೈ:|
ಪೂಜಯಿತ್ವಾ ದ್ವಿಜಾರ್ಗ್ರ್ಯಾಣಾಂ ದದ್ಯಾಚ್ಚಾಚಮನಂ ತತ:||42||

ಪಿತೃಭ್ಯ: ಪ್ರಥಮಂ ಭಕ್ತ್ಯಾ ತನ್ಮನಸ್ಕೋ ನರೇಶ್ವರ|
ಸುಸ್ವಧೇತ್ಯಾಶಿಷಾ ಯುಕ್ತಾಂ ದದ್ಯಾತ್ ಶಕ್ತ್ಯಾ ಚ ದಕ್ಷಿಣಾಮ್||43||

ದತ್ತ್ನಾ ಚ ದಕ್ಷಿಣಂ ತೇಭ್ಯೋ ವಾಚಯೇದ್ವೈಶ್ವದೇವಿಕಾನ್|
ಪ್ರಿಯಂತಾಮಿಹ ಯೇ ವಿಶ್ವೇದೇವಾಸ್ತೇನ ಇತೀರಯೇತ್||44||

ತಥೇತಿ ಚೋಕ್ತೇ ತೈರ್ವಿಪ್ರೈ: ಪ್ರಾರ್ಥನೀಯಾಸ್ತಥಾಶಿಷ:|
ಪಶ್ಚಾದ್ವಿಸರ್ಜಯೇದ್ದೇವಾನ್ ಪೂರ್ವಂ ಪಿತ್ರ್ಯಾನ್ಮಹೀಪತೇ||45||

ಮಾತಾಮಹಾನಾಮಪ್ಯೇವಂ ಸಹ ದೇವೈ: ಕ್ರಮ: ಸ್ಮೃತ:|
ಭೋಜನೇ ಚ ಸ್ವಶಕ್ತ್ಯಾ ಚ ದಾನೇ ತದ್ವದ್ವಿಸರ್ಜನೇ||46||

ಹೀಗೆಯೇ ಗಂಧ್ಯಮಾಲ್ಯಾದಿಗಳಿಂದ ಅರ್ಚಿತಗಳಾದ ಪಿಂಡಗಳನ್ನು ಮಾತಾಮಹಾದಿಗಳಿಗೆ ಅರ್ಪಿಸಿ, ಬ್ರಾಹ್ಮಣರಿಗೆ ಆಚಮನವನ್ನು ಕೊಡಬೇಕು. 

ರಾಜ-ಸಗರ, ಭಕ್ತಿಯಿಂದ ತನ್ಮಯನಾಗಿ ಮೊದಲು ಪಿತೃಗಳಿಗೆ ಅವರಿಂದ 'ಸುಸ್ಸಧಾ' ಎಂದು ಆಶೀರ್ವಾದವನ್ನು ಸ್ವೀಕರಿಸುತ್ತ, ಯಥಾಶಕ್ತಿಯಾಗಿ ದಕ್ಷಿಣೆಯನ್ನು ಕೊಡಬೇಕು. 

ಪಿತೃಗಳಿಗೆ ದಕ್ಷಿಣೆಯನ್ನು ಕೊಟ್ಟಮೇಲೆ ವಿಶ್ವೇದೇವರ ಬಳಿಗೆ ಹೋಗಿ ದಕ್ಷಿಣೆಯನ್ನಿತ್ತು ವಿಶ್ವೇದೇವರು ಸಂಪ್ರೀತರಾಗಲಿ ಎಂದು ಹೇಳತಕ್ಕದ್ದು. 

ಅವರು 'ತಥಾಸ್ತು' ಎಂದು ಹೇಳಿದ ಮೇಲೆ ಆಶೀರ್ವದಿಸಬೇಕೆಂದು ಪ್ರಾರ್ಥಿಸಿಕೊಂಡು, ಮೊದಲು ಪಿತೃಗಳನ್ನೂ ಆಮೇಲೆ ವಿಶ್ವೇದೇವರನ್ನೂ ವಿಸರ್ಜಿಸಬೇಕು. 

ವಿಶ್ವೇದೇವಸಹಿತವಾದ ಮಾತಾಮಹಾದಿ ಶ್ರಾದ್ಧದಲ್ಲಿಯೂ ಭೋಜನ ದಕ್ಷಿಣದಾನ ವಿಸರ್ಜನೆಗಳ ವಿಷಯದಲ್ಲಿ ಇದೇ ಕ್ರಮವು ವಿಹಿತವಾಗಿದೆ. 

********
ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಯೋಗ್ಯರಾದವರು
ಶ್ರಾದ್ಧವಿಧಿ. 
********
ಅಪಾದಶೌಚನಾತ್ಪೂರ್ವಂ ಕುರ್ಯಾದ್ದೇವದ್ವಿಜನ್ಮಸು|
ವಿಸರ್ಜನಂ ತು ಪ್ರಥಮಂ ಪೈತ್ರಮಾತಾಮಹೇಷು ವೈ||47||

ವಿಸರ್ಜಯೇತ್ ಪ್ರೀತಿವಚಸ್ಸಮ್ಮಾನ್ಯಾಭ್ಯರ್ಥಿತಾಂಋಸ್ತತ:|
ನಿವರ್ತೇತಾಭ್ಯನುಜ್ಞಾತ ಆದ್ವಾರಂ ತಾನನುವ್ರಜೇತ್||48||

ತತಸ್ತು ವೈಶ್ವದೇವಾಖ್ಯಂ ಕುರ್ಯಾನ್ನಿತ್ಯಕ್ರಿಯಾಂ ಬುಧ:|
ಭುಂಜ್ಯಾಚ್ಚೈವ ಸಮಂ ಪೂಜ್ಯಭೃತ್ಯಬಂಧುಭಿರಾತ್ಮನ:||49||

ಏವಂ ಶ್ರಾದ್ಧಂ ಬುಧ: ಕುರ್ಯಾತ್ ಪಿತ್ರ್ಯಂ ಮಾತಾಮಹಂ ತಥಾ|
ಶ್ರಾದ್ಧೈರಾಪ್ಯಾಯಿತಾ ದದ್ಯುಸ್ಸರ್ವಾನ್ ಕಾಮಾನ್ ಪಿತಾಮಹಾ:||50||

ಪಿತೃವರ್ಗ ಮತ್ತು ಮಾತಾಮಹವರ್ಗಗಳ ಶ್ರಾದ್ಧದಲ್ಲಿ ಬ್ರಾಹ್ಮಣರ ಕಾಲು ತೊಳೆಯುವುದರಿಂದ ಹಿಡಿದು ಎಲ್ಲ ವಿಧಿಗಳನ್ನೂ ಮೊದಲು ವಿಶ್ವೇದೇವರಿಗೂ, ವಿಸರ್ಜನವನ್ನು ಮಾತ್ರ ಪಿತೃವರ್ಗ ಮಾತಾಮಹವರ್ಗದವರಿಗೆ ಮೊದಲೂ ಮಾಡತಕ್ಕದ್ದು. 

ಅನಂತರ ಒಳ್ಳೆಯ ಮಾತುಗಳಿಂದ ಆದರಿಸಿ ನಿಮಂತ್ರಿತ ಬ್ರಾಹ್ಮಣರನ್ನು ಕಳಿಸುತ್ತ ಮನೆಯ ಬಾಗಿಲಿನವರೆಗೆ ಅವರ ಹಿಂದೆ ಹೋಗಬೇಕು. 
ಅವರ ಅನುಜ್ಞೆಯಿಂದ ಹಿಂದಿರುಗಬೇಕು. 

ತರುವಾಯ ವಿದ್ವಾಂಸನಾದವನು ವೈಶ್ವದೇವವೆಂಬ ನಿತ್ಯಕರ್ಮವನ್ನು ಆಚರಿಸಿ, ತನಗೆ ಪೂಜ್ಯರಾದವರಿಂದಲೂ ಭೃತ್ಯರಿಂದಲೂ ಬಂಧುಗಳಿಂದಲೂ ಸಹಿತನಾಗಿ ಭೋಜನ ಮಾಡತಕ್ಕದ್ದು. 

ಈ ಪ್ರಕಾರವಾಗಿ ಬುದ್ಧಿಶಾಲಿಯು ಪಿತೃವಿನ ಮತ್ತು ಮಾತಾಮಹನ ಶ್ರಾದ್ಧವನ್ನು ಮಾಡತಕ್ಕದ್ದು. 
ಶ್ರಾದ್ಧದಿಂದ ಸಂತೃಪ್ತರಾದ ಪಿತೃದೇವತೆಗಳು ಸಮಸ್ತ ಕಾಮನೆಗಳನ್ನೂ ಪೂರ್ಣಮಾಡುತ್ತಾರೆ. 

********
ತ್ರೀಣಿ ಶ್ರಾದ್ಧೇ ಪವಿತ್ರಾಣಿ ದೌಹಿತ್ರ: ಕುತಪಸ್ತಿಲಾ:|
ರಜತಸ್ಯ ತಥಾ ದಾನಂ ಕಥಾ ಸಂಕೀರ್ತನಾದಿಕಮ್||51||

ವರ್ಜಾನಿ ಕುರ್ವತಾ ಶ್ರಾದ್ಧಂ ಕ್ರೋಧೋಧ್ವಗಮನಂ ತ್ವರಾ|
ಭೋಕ್ತುರಪ್ಯತ್ರ ರಾಜೇಂದ್ರ ತ್ರಯಮೇತನ್ನ ಶಸ್ಯತೇ||52||

ವಿಶ್ವೇದೇವಾಸ್ಸಪಿತರಸ್ತಥಾ ಮಾತಾಮಹಾ ನೃಪ|
ಕುಲಂ ಚಾಪ್ಯಯತೇ ಪುಂಸಾಂ ಸರ್ವಂ ಶ್ರಾದ್ಧಂ ಪ್ರಕುರ್ವತಾಮ್||53||

ಸೋಮಾಧಾರ: ಪಿತೃಗಣೋ ಯೋಗಾಧಾರಶ್ಚ ಚಂದ್ರಮಾ:|
ಶ್ರಾದ್ಧೇ ಯೋಗಿನಿಯೋಗಸ್ತು ತಸ್ಮಾದ್ ಭೂಪಾಲ ಶಸ್ಯತೇ||54||

ಸಹಸ್ರಸ್ಯಾಪಿ ವಿಪ್ರಾಣಾಂ ಯೋಗೀ ಚೇತ್ಪುರತ: ಸ್ಥಿತಾ:|
ಸರ್ವಾನ್ ಭೋಕ್ತೃಂಸ್ತಾರಯತಿ ಯಜಮಾನಂ ತಥಾ ನೃಪ||55||

ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಪಂಚದಶೋಧ್ಯಾಯ:||

ಶ್ರಾದ್ಧದಲ್ಲಿ ಈ ಮೂರು ಪವಿತ್ರವಾದವುಗಳು. 
ಯಾವುವೆಂದರೆ - ಮಗಳ ಮಗ (ದೌಹಿತ್ರ), ಕುತಪಕಾಲ, ಮತ್ತು ಎಳ್ಳು. ಅಲ್ಲದೆ ರಜತದಾನ ಮತ್ತು ರಜತದ ವಿಷಯದಲ್ಲಿ ಸಂಭಾಷಣೆ, ದರ್ಶನ ಮೊದಲಾದದ್ದೂ ಪವಿತ್ರವೇ. 

ಶ್ರಾದ್ಧವನ್ನು ಮಾಡತಕ್ಕ ಯಜಮಾನನಿಗೆ ಕ್ರೋಧ (ಕೋಪ), ಮಾರ್ಗಗಮನ (ಪ್ರಯಾಣ), ತ್ವರೆ  (ಆತುರತೆ) - ಇವು ಮೂರು ವರ್ಜ್ಯಗಳು. 
ಶ್ರಾದ್ಧಭೋಜನ ಮಾಡತಕ್ಕವನಿಗೂ ಈ ಮೂರು ಪ್ರಶಸ್ತವಲ್ಲ. 

ವಿಶ್ವೇದೇವರೂ, ಪಿತೃವರ್ಗದವರೂ, ಮಾತಾಮಹಾದಿಗಳೂ, ಶ್ರಾದ್ಧಮಾಡತಕ್ಕವರ ವಂಶದವರೂ ಶ್ರಾದ್ಧದಿಂದ ಸಂಪ್ರೀತರಾಗುತ್ತಾರೆ. 

ಪಿತೃಗಣಕ್ಕೆ ಚಂದ್ರನು ಆಧಾರ. 
ಚಂದ್ರನಿಗೆ ಯೋಗವು ಆಧಾರ.
ಆದ್ದರಿಂದ ಶ್ರಾದ್ಧದಲ್ಲಿ ಯೋಗಿಗಳನ್ನು ನಿಮಂತ್ರಿಸುವುದು ಪ್ರಶಸ್ತವಾದದ್ದು. 

ಶ್ರಾದ್ಧಭೋಜಿಗಳಾದ ಬ್ರಾಹ್ಮಣರ ಎದುರಿನಲ್ಲಿ ಒಬ್ಬ ಯೋಗಿ ಇದ್ದರೆ ಸಾಕು, ಆತನು ಆ ಎಲ್ಲ ಬ್ರಾಹ್ಣರನ್ನೂ ಶ್ರಾದ್ಧಕರ್ತೃವಾದ ಯಜಮಾನನನ್ನೂ ಉದ್ಧಾರ ಮಾಡುತ್ತಾನೆ. 

ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಹದಿನೈದನೆಯ ಅಧ್ಯಾಯ ಮುಗಿಯಿತು. 
***

by ಶಾಮಸುಂದರ, ಕುಲಕರ್ಣಿ, ಕಲ್ಬುರ್ಗಿ
ಮಹಾಭಾರತಸಾರ-120
ವಿಭಿನ್ನ ನಕ್ಷತ್ರಗಳಲ್ಲಿ ಶ್ರಾದ್ಧದ ಫಲ
ಯಮನು ಶಶಬಿಂದುವಿಗೆ ಭಿನ್ನ ಭಿನ್ನ ನಕ್ಷತ್ರಗಳಲ್ಲಿ ಮಾಡಬೇಕಾದ ಕಾವ್ಯಶ್ರಾದ್ಧಗಳನ್ನು ಹೇಳಿರುವುದನ್ನು. ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳುತ್ತಾರೆ. 
ಯಾವ ಮನುಷ್ಯರು ಕೃತಿಕಾ ನಕ್ಷತ್ರವಿದ್ದ ದಿನದಲ್ಲಿ ಶ್ರಾದ್ಧವನ್ನು ಮಾಡುವರೋ ಅವರು ಪುತ್ರವಂತನಾಗಿ, ರೋಗಗಳಿಂದಲೂ, ಚಿಂತೆ ಗಳಿಂದಲೂ ವಿಮುಕ್ತನಾಗಿ, ಯಾಗಗಳನ್ನು ಮಾಡುವನು.
ಸಂತಾನವನ್ನು ಅಪೇಕ್ಷಿಸುವವರು ರೋಹಿಣಿ ನಕ್ಷತ್ರಯುಕ್ತವಾದ ದಿನದಲ್ಲಿ, ತೇಜಸ್ಸನ್ನು ಅಪೇಕ್ಷಿಸುವವರು ಮೃಗಶಿರಾ ನಕ್ಷತ್ರಯುಕ್ತ ವಾದ ದಿನದಲ್ಲಿ ಶ್ರಾದ್ಧ ಮಾಡಬೇಕು. ಆರಿದ್ರಾ ನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ಕ್ರೂರಿಯಾಗುತ್ತಾನೆ. (ಆದುದರಿಂದ ಆರಿದ್ರಾ ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಬಾರದು.)
ಧನಕಾಮನು ಪುನರ್ವಸುನಕ್ಷತ್ರದಲ್ಲಿ,  ಪುಷ್ಟಿ ಕಾಮನು ಪುಷ್ಯ ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡ ಬೇಕು.
ಆಶ್ಲೇಷಾನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ಧೀರರಾದ ಮಕ್ಕಳನ್ನು ಪಡೆಯುತ್ತಾರೆ. ಮಘಾನಕ್ಷತ್ರದಲ್ಲಿ ಶ್ರಾದ್ಧ ಮಾಡಿ ಪಿತೃಗಳಿಗೆ ಪಿಂಡದಾನ ಮಾಡುವವರು ತನ್ನ ಜ್ಞಾತಿ-ಬಾಂಧವರೆಲ್ಲರಿಗಿಂತಶ್ರೇಷ್ಠನಾಗುತ್ತಾರೆ. 
ಪೂರ್ವಫಲ್ಗುಣ ನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ಸೌಭಾಗ್ಯಶಾಲಿ ಯಾಗುತ್ತಾರೆ. ಹಸ್ತಾ ನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ಅಭಿಷ್ಟವಾದ ಫಲವನ್ನು ಹೊಂದುತ್ತಾರೆ.
ಚಿತ್ತಾನಕ್ಷತ್ರದಲ್ಲಿ ಶ್ರಾದ್ಧ ಮಾಡಿ ಪಿಂಡಪ್ರದಾನವನ್ನು ಮಾಡುವವರು ರೂಪವಂತರಾದ ಮಕ್ಕಳನ್ನು ಪಡೆಯುತ್ತಾರೆ. ಸ್ವಾತೀನಕ್ಷತ್ರದಲ್ಲಿ ಪಿತೃ ಯಜ್ಞವನ್ನು ಮಾಡುವವರು ವಾಣಿಜ್ಯ ವೃತ್ತಿಯಿಂದ ಜೀವಿಸುತ್ತಾರೆ. 
ಪುತ್ರಾಪೇಕ್ಷಿಯಾಗಿ ವಿಶಾಖಾ ನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ಬಹು ಪುತ್ರರನ್ನು ಪಡೆಯುತ್ತಾರೆ. ಅನುರಾಧಾನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ರಾಜ್ಯ ಮಂಡಲದ ಶಾಸಕನಾಗುತ್ತಾರೆ. ಜೇಷ್ಠಾ ನಕ್ಷತ್ರದಲ್ಲಿ ಇಂದ್ರಿಯ ಸಂಯಮ ಪೂರ್ವಕವಾಗಿ ಪಿಂಡಪ್ರದಾನ ಮಾಡುವವರು ಸಮೃದ್ಧಿಶಾಲಿಯಾಗುತ್ತಾರೆ. ಮತ್ತು ಜನ್ಮಾಂತರದಲ್ಲಿ ಪ್ರಭುತ್ವವನ್ನು ಪಡೆಯುತ್ತಾರೆ. ಮೂಲಾ‌ನಕ್ಷತ್ರದಲ್ಲಿ ಮಾಡುವವರು‌ ಆರೋಗ್ಯವಂತರಾಗುತ್ತಾರೆ. ಪೂರ್ವಾಷಾಢ ನಕ್ಷತ್ರದಲ್ಲಿ‌ ಮಾಡಿದವರು ಯಶಸ್ಸು ಗಳಿಸುತ್ತಾರೆ. ಉತ್ತರಾಷಾಢ ನಕ್ಷತ್ರದಲ್ಲಿ ಶ್ರಾದ್ಧ ಮಾಡುವವರು ಶೋಕರಹಿತರಾಗುತ್ತಾರೆ. ಅಭಿಜಿನ ನಕ್ಷತ್ರದಲ್ಕಿ ಮಾಡಿದರೆ ಉತ್ತಮ‌ ವೈದ್ಯನಾಗುತ್ತಾರೆ. ಶ್ರವಣಾ ನಕ್ಷತ್ರದಲ್ಲಿ ಮಾಡಿದರೆ ಅವಸಾನ ನಂತರಸಲ್ಲಿ ಸದ್ಗತಿ ಪಡೆಯುತ್ತಾರೆ.ಧನಿಷ್ಠಾ ನಕ್ಷತ್ರದಲ್ಲಿ ಮಾಡಿದರೆ ರಾಜ್ಯಕ್ಕೆ‌ಅಧಿಪತಿ ಯಾಗುತ್ತಾರೆ. ಶತಭಿಷಾ ನಕ್ಷತ್ರದಲ್ಲಿ ಮಾಡಿದರೆ ವೈದ್ಯ ಸಿದ್ಧಿ ಪಡೆಯುತ್ತಾರೆ. ಪೂರ್ವ ಬಾದ್ರಪದ ನಕ್ಷತ್ರದಲ್ಲಿ ಮಾಡಿದರೆ ಬಹುಸಂಖ್ಯಾ ಆಡು- ಕುರಿಗಳನ್ನು ಹೊಂದುತ್ತಾರೆ. ರೇವತಿ ನಕ್ಷತ್ರದಲ್ಲಿ ಮಾಡಿದರೆ ಚಿನ್ನ, ಬೆಳಿಯನ್ನು ಬಿಟ್ಟು ಉಳಿದೆಲ್ಲ ಸಂಪತ್ತು ಪಡೆಯುತ್ತಾರೆ, ಅಶ್ವಿನಿ ನಕ್ಷತ್ರದಲ್ಲಿ ಮಾಡಿದರೆ ದೀರ್ಘಾಯುಷ್ಯವನ್ನು ಪಡಡಯುತ್ತಾರೆ.
ಯಮನು ಹೇಳಿದ ಹಾಗೆ ಶತಬಿಂದು ಆಯಾ ನಕ್ಷತ್ರದಲ್ಲಿ ಶ್ರಾದ್ಧ ಕರ್ಮ ಮಾಡಿದನು. ಅದರ ಫಲವಾಗಿ ಆ ರಾಜನು ಸ್ವಲ್ಪವೂ ಕ್ಲೇಷವಿಲ್ಲದೇ ಪೃಥ್ವಿಯನ್ನು ಜಯಿಸಿ ಆಳತೊಡಗಿದನು ಎಂದು ಭೀಷ್ಮರು ಹೇಳಿದರು.
ಶಾಮಸುಂದರ, ಕುಲಕರ್ಣಿ, ಕಲ್ಬುರ್ಗಿ
****

ಮಹಾಭಾರತಸಾರ-124
ಶ್ರಾದ್ಧ ಏಕೆ, ಏನು, ಹೇಗೆ?
ಪ್ರತಿಯೊಬ್ಬರು ಬಯಸುವುದು ಋಣರಹಿತ ಬದುಕು. ಸಾಲವಿಲ್ಲದ ಸಂಸಾರವೇ ಸರ್ವಾಪೇಕ್ಷಿತ. ಲೌಖಿಕವಾಗಿ ಶ್ರಮಪಟ್ಟು ಸಂಪಾದನೆ ಮಾಡಿ  ಸಾಲವಿಲ್ಲದೆ ಬದುಕಬಹುದು. ಆದರೆ ಹುಟ್ಟುವಾಗಲೆ ಸಂಪಾದಿಸಿಕೊಂಡು ಬಂದ ಸಾಲದ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ.
ಜನಿಸುವಾಗಲೇ ದೇವಋಣ, ಋಷಿ ಋಣ, ಪಿತೃಋಣ, ಭೂತ ಋಣ ಹಾಗೂ ಜನಋಣ  ಹೀಗೆ ಐದು ಪ್ರಕಾರದ ಸಾಲಗಳು ಮನುಷ್ಯನ ಜತೆಯಲ್ಲಿಯೇ ಬಂದಿರುತ್ತವೆ. ಧನ ಸಂಪಾದಿಸಬೇಕಾದರೆ ಈ ಶರೀರ ಬೇಕು. ಈ ದೇಹವನ್ನು ಕೊಟ್ಟವರು ಯಾರು?. ತಂದೆ ತಾಯಿಯಿಂದ ಬಂದ ಈ ದೇಹ ಅವರಿಂದಲೇ ಬೆಳದಿದ್ದು, ಶರೀರ ಇರುವಷ್ಟು ಕಾಲ ಪಿತೃಋಣ ಅವರ್ಜನೀಯ. ಇದಕ್ಕಾಗಿಯೇ ಪಿತೃತರ್ಪಣ, ಪಿಂಡ ಪ್ರದಾನ, ತೀರ್ಥಯಾತ್ರೆ, ಗಯಾ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧ ಮಾಡಬೇಕಾಗುತ್ತದೆ.
ಶ್ರಾದ್ಧ ಎಂದರೇನು ?,ಹೇಗೆ ಮಾಡಬೇಕು. ಏಕೆ ಮಾಡಬೇಕು. ಮಾಡದಿದ್ದರೆ ಏನಾಗುತ್ತದೆ ?. ಇಲ್ಲಿ ನಾವು ಕೊಟ್ಟ ಅನ್ನಾದಿಗಳು ಪಿತೃಗಳಿಗೆ ಮುಟ್ಟುತ್ತವಯೇ?. ನಾವು ಕರೆದಾಗ ಬರುವಷ್ಟು ಅವರು ದೈವಿಶಕ್ತಿಗಳುಳ್ಳವರೆ ?. ಪಿತೃಗಳು ನರಕಾದಿಗಳಲ್ಲಿದ್ದರೆ ಅಥವಾ ಪುನರ್ಜನ್ಮ ತೆಗೆದುಕೊಂಡಿದ್ದರೆ  ಅವರು ಶ್ರಾದ್ಧಕಾಲದಲ್ಲಿ ಹೇಗೆ ಬರುವರು ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ.
ಕೆಲವರು ಶ್ರಾದ್ಧವನ್ನು ನಾಮಕಾವಾಸ್ತೆ ಮಾಡುತ್ತಾರೆ. ತಂದೆ,ತಾಯಿಯ ಶ್ರಾದ್ಧ ಮಾಡದಿದ್ದರೆ ನಾಲ್ಕು ಜನ ಏನಂದಾರೂ ಎಂದು ಕೆಲವರು ಮಾಡುತ್ತಾರೆ. ಯಾವುದೆ ಕರ್ಮವನ್ನು ಮಾಡಬೇಕಾದರೆ ಮೊದಲು ಅದರ ಬಗ್ಗೆ ಸರಿಯಾಗಿ  ತಿಳಿದುಕೊಳ್ಳಬೇಕು.
ತನ್ನ ಕುಟುಂಬದವರ ಒಳಿತಿಗಾಗಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಕಾರ್ಯಕ್ಕೆ ಶ್ರಾದ್ಧ ಎನ್ನುವರು. ಮಂತ್ರಪೂರ್ವಕವಾಗಿ ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಅತ್ರೇಯ ಮುನಿಯ ಪುತ್ರ ನಿಮಿ ಯು ಪ್ರಥಮ ಶ್ರಾದ್ಧಕರ್ತ ಎಂದು ವರಹಾಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ದೇವಕಾರ್ಯಕಿಂತಲೂ ಪಿತೃಕಾರ್ಯ ಶ್ರೇಷ್ಠ. ಶ್ರಾದ್ಧ ಮಾಡದಿದ್ದರೆ ಅಂಥವರ ರಕ್ತವನ್ನು ಪಿತೃಗಳು ಪಾನ ಮಾಡುತ್ತಾರೆ. ಎಂದರೆ ದೇಹದಲ್ಲಿನ ರಕ್ತ ಸೇವಿಸುವುದು ಎಂದಲ್ಲ. ರೋಗಿಗಳು, ದರಿದ್ರರು ಅವರ ಅಂಶದಲ್ಲಿ ಜನಿಸುತ್ತಾರೆ.
ನಾವು ಕೊಟ್ಟ ಪಿಂಡದ ಅನ್ನಾದಿಗಳು ಇಲ್ಲಿಯೇ ನಾಶವಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ನಾವುಕೊಟ್ಟ ಪಿಂಡದ ಅನ್ನ ನೇರವಾಗಿ ಪಿತೃಗಳಿಗೆ ಮುಟ್ಟುವುದಿಲ್ಲ. ಇಲ್ಲಿ ನಾವು ವಸು,ರುದ್ರ, ಅದಿತ್ಯಾಂತರ್ಗತನಾದ ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ರೂಪಿಯಾದ ಭಗವಂತನನ್ನು ಉದ್ದೇಶಿಸಿ ಪಿತೃಗಳ ನಾಮ-ಗೋತ್ರಗಳನ್ನು ಉಚ್ಚರಿಸಿ ಅನ್ನಾದಿಗಳನ್ನು ಕೊಟ್ಟಾಗ ಆಯಾ ದೇವತೆಗಳು ಅದರ ಸಾರವನ್ನು ಸ್ವೀಕರಿಸಿ ಅದರ ಲವನ್ನು ಪಿತೃಗಳು ಎಲ್ಲಿ ಯಾವ ರೂಪದಲ್ಲಿರುತ್ತಾರೋ ಯಾವ ಆಹಾರದಿಂದ ತೃಪ್ತರಾಗುತ್ತಾರೋ ಅಂಥ ಆಹಾರವನ್ನು ನೀಡುತ್ತಾರೆ.
ನಮ್ಮ ಪಿತೃಗಳಿಗೂ- ಶ್ರಾದ್ಧ ಕಾರ್ಯಕ್ಕೂ ಮಧ್ಯೆ ಮಾದ್ಯಮವಾಗಿ ಚಿರ ಪಿತೃಗಳು ನಿಂತಿರುತ್ತಾರೆ. ಅವರನ್ನು ಪ್ರಾರ್ಥಿಸಿ ಶ್ರಾದ್ಧ ಆರಂಭಿಸಬೇಕು. ಇದು ಅಂಚೆ ವ್ಯವಸ್ಥೆ ಇದ್ದಂತೆ. ಒಂದು ಪತ್ರದ ಮೇಲೆ  ವಿಳಾಸ ಬರೆದು ಅಂಚೆ ಡಬ್ಬಾಲ್ಲಿ ಹಾಕಿದರೆ ಅದು ಯಾವ ಮೂಲೆಯಲ್ಲಿದ್ದರೂ ತಲುಪುತ್ತದೆ. ಅದರಂತೆ ನಾಮ-ಗೋತ್ರಾದಿಗಳನ್ನು  ಸರಿಯಾಗಿ ಉಚ್ಚರಿಸಿ ಶ್ರದ್ಧೆಯಿಂದ ಮಾಡಿದ ಶ್ರಾದ್ಧವೂ ನಮ್ಮ ಪಿತೃಗಳು ಎಲ್ಲಿಯೇ ಇದ್ದರೂ ಅವರಿಗೆ ಅನ್ನಾದಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಚಿರಪಿತೃಗಳು ಮಾಡುತ್ತಾರೆ. ಶ್ರಾದ್ಧದಲ್ಲಿ ಕುತಪಕಾಲಕ್ಕೆ ಬಹಳ ಮಹತ್ವ ನೀಡಲಾಗಿದೆ.
ಕುತಪ ಎಂದರೆ ಉತ್ತಮವಾದ ಭೂಮಿ, ಉತ್ತಮ ಕಾಲ, ಉತ್ತಮ ಸ್ಥಳದಲ್ಲಿ ಶ್ರಾದ್ಧ ಮಾಡುವುದು. ಕುತ್ಸಿವಾದ ಪಾಪವನ್ನು ಸುಟ್ಟು ಹಾಕುವ ಕಾಲಕ್ಕೆ(ಸಮಯ) ಕುತಪ ಕಾಲ ಎನ್ನುವರು. ಬೆಳಗ್ಗೆ 11.36ಕ್ಕೆ ಆರಂಭವಾಗಿ ಮಧ್ಯಾಹ್ನ 3.30ರ ವರೆಗಿನ ವೇಳೆಗೆ ಕುತಪ ಕಾಲ ಎನ್ನುವರು. ಇಷ್ಟರೊಳಗಾಗಿ ಶ್ರಾದ್ಧಕರ್ಮ, ಬ್ರಾಹ್ಮಣರ ಭೋಜನ, ತರ್ಪಣ ಹಾಗೂ ಕತೃವಿನ ಭೋಜನ ಮುಗಿಯಬೇಕು.
ಅಮವಾಸ್ಯ ದರ್ಶ:
ಮಾನವರ ಒಂದು ತಿಂಗಳ ಕಾಲಾವಧಿ ಪಿತೃಗಳಿಗೆ ಒಂದು ದಿವಸವಾಗುತ್ತದೆ. ಅಮವಾಸ್ಯೆಯ ದಿನ ಪಿತೃಗಳಿಗೆ ಮಧ್ಯಾಹ್ನ ಕಾಲ. ಹುಣ್ಣಿಮೆ ದಿನ ರಾತ್ರಿಕಾಲ. ಮಧ್ಯಾಹ್ನ ಸೂರ್ಯನ ಕಿರಣದಿಂದ ನೊಂದ ಪಿತೃಗಳಿಗೆ ತಿಲತರ್ಪಣ ಕೊಡುವುದುರಿಂದ ಪಿತೃಗಳು ತೃಪ್ತರಾಗುತ್ತಾರೆ.
ಕೃಷ್ಣಪಕ್ಷದಲ್ಲಿ ಸೂರ್ಯ-ಚಂದ್ರರು ಸಮ್ಮುಖದಲ್ಲಿ ಬರುವುದರಿಂದ ಪಿತೃಗಳಿಗೆ ಸೂರ್ಯ ದರ್ಶನವಾಗುತ್ತದೆ. ದರ್ಶನವಿದ್ದ ದಿನ ಪಿತೃಗಳಿಗೆ ತಿಲತರ್ಪಣ ಕೊಡಬೇಕು.ದರ್ಶನದ ಅನಂತರದ ದಿನಗಳಲ್ಲಿ ತಿಲವಿಲ್ಲದೆ ಸರ್ವಪಿತೃಗಳಿಗೆ ನಿರ್ಮಾಲ್ಯ ತೀರ್ಥದಿಂದ ತರ್ಪಣ ಕೊಡಬೇಕು.
ಪಿಂಡ ಪ್ರದಾನ:
ವರಹಾರೂಪಿಯಾದ ಭಗವಂತನು ಹಿರಾಣ್ಯಾಕ್ಷನನ್ನು ಸಂಹರಿಸಿ ಭೂದೇವಿ ಜತೆಗೆ ಬರುತ್ತಿರುವಾಗ ಆತನ ಗಲ್ಲಕ್ಕೆ ಮೆತ್ತಿಕೊಂಡಿದ್ದ ಮಣ್ಣಿನ ಮುದ್ದೆಯೂ ಮೂರು ಪಿಂಡಗಳಾಗಿ ಭೂಮಿ ಮೇಲೆ ಬಿದ್ದವು ಅವುಗಳನ್ನು ಪಿತೃ, ಪಿತಾಮಹ, ಪ್ರಪಿತಾಮಹ ಎಂದು ಮೂರು ಪಿತೃಗಳನ್ನು ಉದ್ದೇಶಿಸಿ ಆರಾಧಿಸುವ ಪದ್ಧತಿ ರೂಢಿಯಲ್ಲಿ ಬಂದಿದೆ.
ಶಾಮಸುಂದರ, ಕುಲಕರ್ಣಿ, ಕಲ್ಬುರ್ಗಿ
****

" ಶ್ರಾದ್ಧದಲ್ಲಿ ರಜತ ಪಾತ್ರೆಯ ವಿಶೇಷತೆ "

🕉️ಶ್ರಾದ್ಧ ಕರ್ಮಕ್ಕೆ ಉಪಯೋಗಿಸುವ ಪಾತ್ರೆಗಳು ಬೆಳ್ಳಿಯದ್ದೇ ಆಗಿರಬೇಕು.

🕉️ಬೆಳ್ಳಿಯು ಶ್ರೀ ರುದ್ರದೇವರ ಕಣ್ಣಿನಿಂದ ಹುಟ್ಟಿದೆ.

🕉️ಪಿತೃಗಳಿಗೆ ಈ ಧಾತುವು ಅತ್ಯಂತ ಪ್ರಿಯವಾಗಿದೆ.

🕉️ದೇವ ಬ್ರಾಹ್ಮಣರಿಗೆ ದಕ್ಷಿಣೆ ಕೊಡುವಾಗ ಸುವರ್ಣವನ್ನು ಕೊಟ್ಟರೇ, ಪಿತೃಗಳಿಗೆ " ತತ್ತುಲ್ಯ೦ ರಜತಂ " ಎಂಬಂತೆ ಬೆಳ್ಳಿಯನ್ನು ಕೊಡುವುದುಂಟು.

🕉️ಪಿತೃಗಳಿಗೆ ಅನ್ನ ನಿದರ್ಶನ ಮಾಡುವಾದ " ರಜತಮಯ ಪಾತ್ರೇ ಸ್ಥಿತಮನ್ನಂ " ಎಂದು ಹೇಳಲಾಗುತ್ತದೆ.

🕉️ಆದ್ದರಿಂದ ಪಿತೃ ಕಾರ್ಯಗಳಿಗೆ ರಜತ ಪಾತ್ರೆಗಳು ಅವಶ್ಯ ಮತ್ತು ಅನಿವಾರ್ಯ.

🕉️ಈ ಪಿತೃ ಕಾರ್ಯಗಳಲ್ಲಿ ಬೇಕಾದಷ್ಟು ಬೆಳ್ಳಿಯ ಪಾತ್ರಗಳನ್ನೂ ಸಂಗ್ರಹ ಮಾಡುವಷ್ಟು ಯೋಗ್ಯತೆ ಇಲ್ಲದಿದ್ದರೆ ಒಂದಾದರೂ ಬೆಳ್ಳಿಯ ಪಾತ್ರಯನ್ನಿಟ್ಟು ಪಿತೃ ಕಾರ್ಯವನ್ನು ನಡೆಸಬೇಕು.

🕉️ಶ್ರಾದ್ಧ ಕರ್ಮದಲ್ಲಿ ಉಪಯೋಗಿಸಿದ ವಸ್ತುಗಳಲ್ಲಿ ಸ್ವಲ್ಪ ಕಬ್ಬಿಣದ ಅಂಶವಿದ್ದರೂ ಪಿತೃಗಳು ಶ್ರಾದ್ಧದಲ್ಲಿ ಕೊಡಲ್ಪಟ್ಟ ಅನ್ನ ಜಲಾದಿಗಳನ್ನು ಸ್ವೀಕರಿಸದೇ ಆ ಸ್ಥಳದಿಂದ ಓಡಿ ಹೋಗುತ್ತಾರೆ.

" ಪದ್ಮ ಪುರಾಣದ ನಾಗರಖಂಡ " ದಲ್ಲಿ...
ಅಯಸೋ ದರ್ಶನಾದೇವ ಪಿತರೋ ವಿದ್ರವಂತಿ ಹಿ ।।

🕉️ಎಲ್ಲಾ ಪಿತೃಗಳ ಪ್ರೀತ್ಯರ್ಥವಾಗಿ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಮಿಶ್ರಿತವಾದ ಪಾತ್ರೆಯಲ್ಲಿ " ಸ್ವಧಾ ಪಿತೃಭ್ಯ: " ಎಂದು ಹೇಳಿ ಮಾಡಲ್ಪಟ್ಟ ಶ್ರಾದ್ಧವು ಪಿತೃಗಳಿಗೆ ತೃಪ್ತಿಯನ್ನುಂಟು ಮಾಡುತ್ತದೆ.

ಸರ್ವೇಷಾ೦ ರಜತಂ ಪಾತ್ರಮಥವಾ ರಜತಾನ್ವಿತಮ್ ।
ದತ್ತಂ ಸ್ವಧಾ೦ ಪುರೋಧಾಯ ಶ್ರಾಧ್ಧ೦ ಪ್ರೀಣಾತಿ ವೈ ಪಿತ್ರೂನ್ ।।

" ನಾರದೀಯ ಪುರಾಣದನ್ವಯ ಶ್ರಾದ್ಧದಲ್ಲಿ ತುಳಸಿಯ ಮಹತ್ವ "

🕉️ಪ್ರತಿಯೊಂದು ದಾನ ಕೊಡುವಾಗಲೂ, ಶ್ರಾದ್ಧದಲ್ಲಿ ಯವೋದಕ - ತಿಲೋದಕಗಳನ್ನು ಬಿಡುವಾಗಲೂ, ದತ್ತ ಮಾಡುವಾಗಲೂ, ತಾಂಬೂಲ - ದಕ್ಷಿಣೆಗಳನ್ನು ಕೊಡುವಾಗಲೂ ತುಳಸೀ ದಳವನ್ನು ಸೇರಿಸಿಕೊಂಡೇ ಕೊಡಬೇಕು.

ತುಳಸೀ ಗಂಧ ಮಾತ್ರೇಣ ಪಿತರಃ ತುಷ್ಟಿಮಾಪ್ನುಯು: ।
ಪ್ರಯಾಂತಿ ಮುಕ್ತಿ ಮಾರ್ಗೇಣ ತತ್ಪದಂ ಚಕ್ರಪಾಣಿನಃ ।।

🕉️ಪರಮಾತ್ಮನಿಗೆ ಅರ್ಪಿಸಿರುವ ತುಳಸಿಯ ವಾಸನೆಯಿಂದ ಮಾತ್ರವೇ ಪಿತೃಗಳು ಸಂತೋಷವನ್ನು ಹೊಂದುತ್ತಾರೆ. ಚಕ್ರಪಾಣಿಯಾದ ಶ್ರೀಮಹಾವಿಷ್ಣುವಿನ ಲೋಕವನ್ನೂ ಮುಕ್ತಿ ಮಾರ್ಗದಿಂದ ಹೋಗಿ ಸೇರುತ್ತಾರೆ.

ತುಳಸೀ ಶ್ರಾದ್ಧ ಕಾಲೇ ತು ದತ್ವಾ ಶಿರಸಿಧಾರಿತೇ ।
ದಾತಾ ಭೋಕ್ತಾ ಪಿತಾ ತಸ್ಯ ವಿಷ್ಣು ಲೋಕೇ ಮಹೀಯತೇ ।।

🕉️ಶ್ರಾದ್ಧ ಕಾಲದಲ್ಲಿ ಕರ್ತೃವು ಕೊಟ್ಟ ತುಳಸಿಯನ್ನು ( ಅದನ್ನು ) ಭೋಕ್ತೃವು ತಲೆಯಲ್ಲಿ ಧರಿಸುವುದರಿಂದ ಕರ್ತೃ, ಕರ್ತೃವಿನ ತಂದೆ ಅಥವಾ ತಾಯಿ ಮತ್ತು ಭೋಜನ ಮಾಡಿದವರು ಮುಂದೆ ವಿಷ್ಣು ಲೋಕದಲ್ಲಿ ಪ್ರಕಾಶಿತರಾಗಿರುತ್ತಾರೆ.

ಪಿತೃ ಪಿಂಡಾರ್ಚನಂ ಶ್ರಾದ್ಧೇ ಯೈ: ಕೃತಂ ತುಳಸೀದಲೈ: ।
ತರ್ಪಿತಾ ಪಿತರಸ್ತೈಶ್ಚ ಯಾವಚ್ಚ೦ದ್ರಾರ್ಕ ಮೇದಿನೀ ।।

🕉️ಶ್ರಾದ್ಧದಲ್ಲಿ ಯಾರಿಂದ ಪಿತೃ ಪಿಂಡಗಳ ಅರ್ಚನವು ತುಲಸೀದಳಗಳಿಂದ ಮಾಡಲ್ಪಡುತ್ತದೆಯೋ ಅವರಿಂದ ಎಲ್ಲಿಯವರೆಗೂ ಚಂದ್ರ ಸೂರ್ಯಗಳು ಭೂಮಿಗಳಿರುತ್ತವೆಯೋ ಅಲ್ಲಿಯ ವರೆಗೂ ಪಿತೃಗಳು ಸಂತುಷ್ಟರಾಗಿರುವಂತೆ ಮಾಡಲ್ಪಡುತ್ತದೆ.

" ನಾರದೀಯ ಪುರಾಣದನ್ವಯ ವಸ್ತ್ರ - ಜನಿವಾರದ ಮಹತ್ವ "

ವಾಸೋsಸಿ ಸರ್ವ ದೈವತ್ಯಂ ಸರ್ವ ದೇವೈರಭಿಷ್ಟುತಮ್ ।
ವಸ್ತ್ರಾಭಾವೇ ಕ್ರಿಯಾ ನಶ್ಯಾತ್ ಯಜ್ಞ ದಾನಾದಿಕಾ: ಕ್ವಚಿತ್ ।
ತಸ್ಮಾದ್ವಸ್ತ್ರಾಣಿ ದೇಯಾನಿ ಶಾದ್ಧ ಕಾಲೇ ವಿಶೇಷತಃ ।।

🕉️ವಸ್ತ್ರವಾದರೋ ಎಲ್ಲಾ ದೇವತೆಗಳ ಸಾನ್ನಿಧ್ಯವನ್ನು ಹೊಂದಿರುವುದು. ಎಲ್ಲಾ ದೇವತೆಗಳಿಂದಲೂ ಸ್ತುತಿಸಲ್ಪಟ್ಟಿರುವುದು. ಕೆಲೆವೆಡೆ ಯಜ್ಞ ದಾನಾದಿ ಕ್ರಿಯೆಗಳು ವಸ್ತ್ರದಾನ ಮಾಡದುದರಿಂದ ನಷ್ಟವಾಗುತ್ತದೆ. ಆದ್ದರಿಂದ ಶ್ರಾದ್ಧ ಕಾಲದಲ್ಲಿ ವಿಶೇಷವಾಗಿ ವಸ್ತ್ರಗಳನ್ನು ಕೊಡಬೇಕು.

ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣಿ ।
ಆಯು: ಶ್ರೀ: ಕಾಮಂ ಐಶ್ವರ್ಯ೦ ರೂಪಂ ಚ ಲಭತೇ ಧ್ರುವಮ್ ।।

🕉️ಶ್ರಾದ್ಧ ಕರ್ಮದಲ್ಲಿ ಬ್ರಾಹ್ಮಣರಿಗೆ ಯಾವನು ಉತ್ತಮವಾದ ವಸ್ತ್ರವನ್ನು ಕೊಡುತ್ತಾನೆಯೋ; ಅವನು ನಿಶ್ಚಯವಾಗಿಯೂ ದೀರ್ಘ ಕಾಲದ ಆಯುಷ್ಯವನ್ನೂ, ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕವನ್ನೂ, ಸಕಲೈಶ್ವರ್ಯಗಳನ್ನೂ, ತೇಜಸ್ಸಿನಿಂದ ರೂಪವನ್ನೂ ಹೊಂದುತ್ತಾನೆ.

🕉️ಉತ್ತಮವಾದ ವಸ್ತ್ರವನ್ನು ತಗೆದುಕೊಡಲು ಹಣದ ಸೌಕರ್ಯ ಇಲ್ಲದವರು ತಮ್ಮ ಶಕ್ತಿಗನುಗುಣವಾಗಿ ವಸ್ತ್ರಕ್ಕೆ ಪ್ರತಿಯಾಗಿ ಕೇವಲ ಹಣವನ್ನಾದರೂ ದಾನ ಮಾಡಬೇಕು.

ಯಜ್ನೋಪವೀತಂ ವೈ ದದ್ಯಾತ್ ಶ್ರಾದ್ಧ ಕಾಲೇಷು ಧರ್ಮವಿತ್ ।
ಪಾವನಂ ಸರ್ವ ವಿಪ್ರಾಣಾ೦ ಬ್ರಹ್ಮ ದಾನಸ್ಯ ತತ್ಫಲಂ ।।

🕉️ಧರ್ಮವನ್ನರಿತವನು ಎಲ್ಲಾ ವಿಪ್ರರನ್ನು ಶುದ್ಧಿಗೊಳಿಸಿವ ಜನಿವಾರವನ್ನು ಶ್ರಾದ್ಧ ಕಾಲದಲ್ಲಿ ಕೊಡಬೇಕು. ಅದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನನ್ನೇ ಅಂದರೆ ವಿಶ್ವದಲ್ಲಿರುವ ಎಲ್ಲಾ ವಸ್ತುಗಳನ್ನೂ ದಾನ ಮಾಡಿದ ಫಲ ಉಂಟಾಗುತ್ತದೆ.

✍🏻 ಸಂಗ್ರಹ-ಶ್ರೀ ಕೃಷ್ಣ ಮೂರ್ತಿ ಊರ್ಡಿಗೆರೆ
***
ಪಿಂಡ ದಾನ ಮಾಡುವ ಪವಿತ್ರ ಸ್ಥಳಗಳು
ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡುವಾಗ ಎಲ್ಲಾ ಸ್ಥಳಗಳಲ್ಲೂ ಪಿಂಡ ದಾನ ಮಾಡಲಾಗುವುದಿಲ್ಲ. ಕೆಲವೊಂದು ಪವಿತ್ರ ಸ್ಥಳಗಳಲ್ಲಿ ಪಿಂಡವನ್ನು, ಶ್ರಾದ್ಧಾ ಕಾರ್ಯಗಳನ್ನು ಮಾಡಲಾಗುತ್ತದೆ.

🌸ಪಿಂಡ ದಾನ ಮಾಡುವ ಪ್ರಮುಖ ಸ್ಥಳಗಳಾವುವು ಗೊತ್ತೇ🌸

🪷ಬ್ರಹ್ಮಕಪಾಲ ಘಾಟ್

🌹ಉತ್ತರಾಖಂಡದಲ್ಲಿರುವ ಬ್ರಹ್ಮಕಪಾಲ ಘಾಟ್ ಕೂಡ ಶ್ರಾದ್ಧಾ ಮತ್ತು ಪಿಂಡ ದಾನ ಕರ್ಮಗಳಿಗೆ ಅತ್ಯಂತ ಮಹತ್ವವನ್ನು ಹೊಂದಿದೆ. ಈ ಸ್ಥಳದಲ್ಲಿ ಶಿವನು ಬ್ರಹ್ಮ ಹತ್ಯೆ ದೋಷದಿಂದ ಮುಕ್ತಿಯನ್ನು ಪಡೆದನೆಂಬ ಉಲ್ಲೇಖವಿದೆ. ಅಷ್ಟು ಮಾತ್ರವಲ್ಲ, ಈ ಸ್ಥಳ ಮಹಾಭಾರತದೊಂದಿಗೂ ಕೂಡ ಸಂಬಂಧವನ್ನು ಹೊಂದಿದೆ. ಮಹಾಭಾರತ ಯುದ್ಧದ ನಂತರ ಪಾಂಡವರು ನಾವು ಮಾಡಿದ ಪಾಪಗಳಿಗೆ ಮುಕ್ತಿಯನ್ನು ಪಡೆಯಲು ಇಲ್ಲಿ ಪೂಜೆಯನ್ನು ನಡೆಸಿದ್ದರು. ಬ್ರಹ್ಮಕಪಾಲ ಘಾಟ್ ಬದ್ರಿನಾಥದ ಬಳಿಯಿರುವ ಅಲಕಾನಂದ ತೀರದಲ್ಲಿದೆ.

🌹ಕಾಶಿ:

ಎಂಬುವುದು ದೇವಾದಿ ದೇವ ಮಹಾದೇವನ ಸ್ಥಳ. ಇದು ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಶ್ರದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದಕ್ಕಾಗಿ ದೂರದಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಚಿತಾಭಸ್ಮವನ್ನು ಬಿಡಲು, ಸತ್ತ ವ್ಯಕ್ತಿಗಳ ಮೂಳೆಯನ್ನು ನೀರಿನಲ್ಲಿ ಹರಿ ಬಿಡಲು ಮತ್ತು ಶ್ರಾದ್ಧಾ ಕ್ರಮಗಳನ್ನು ಮಾಡಲು ಇಲ್ಲಿ ಸಂಪೂರ್ಣ ಅವಕಾಶವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ, ಕಾಶಿಯಲ್ಲಿ ಸತ್ತವರು ನರಕ ಅಥವಾ ಯಮಲೋಕಕ್ಕೆ ಹೋಗುವುದಿಲ್ಲ. ಬದಲಾಗಿ, ಅವರು ಸ್ವರ್ಗವನ್ನು ಸೇರುತ್ತಾರೆನ್ನುವ ನಂಬಿಕೆಯಿದೆ.

🪷ಮೇಘಂಕರ :

🌸ಬ್ರಹ್ಮಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲಿ ಶ್ರಾದ್ಧಾ ಮತ್ತು ಪಿಂಡ ದಾನ ಕಾರ್ಯಗಳಿಗೆ ಮಹಾರಾಷ್ಟ್ರದ ಮೇಘಂಕರ ಕೂಡ ಪವಿತ್ರವಾದ ಸ್ಥಳವೆಂದು ಉಲ್ಲೇಖಿಸಲಾಗಿದೆ. ಮೇಘಂಕರವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ. ಈ ಪವಿತ್ರ ಸ್ಥಳದಲ್ಲಿ ಶ್ರಾದ್ಧಾವನ್ನು ಮಾಡುವುದರಿಂದ ಆ ವ್ಯಕ್ತಿಯ ಎಲ್ಲಾ ಪಾಪ - ಕರ್ಮಗಳು ದೂರಾಗುವುದು ಮತ್ತು ಮೋಕ್ಷದ ದಾರಿಯು ಸಿಗುವುದೆನ್ನುವ ನಂಬಿಕೆಯಿದೆ.

🪷ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ :

🌹ಗಂಗಾ, ಯಮುನಾ ಮತ್ತು ಸರಸ್ವತಿಯು ಸಂಗಮವಾಗುವ ಸ್ಥಳದಲ್ಲಿ ಪಿಂಡ ದಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ತೀರ್ಥಯಾತ್ರೆಯ ರಾಜನೆಂದೇ ಪ್ರಸಿದ್ಧಿಯನ್ನು ಪಡೆದ ಪ್ರಯಾಗರಾಜದಲ್ಲಿ ಪ್ರತಿ ವರ್ಷ ಪಿತೃ ಪಕ್ಷದ ಸಮಯಕ್ಕೆ ದೊಡ್ಡ ಜಾತ್ರೆಯೇ ನಡೆಯುತ್ತದೆ. ಜನರು ದೂರದ ಊರಿನಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾರೆ. ಈ ಸ್ಥಳದಲ್ಲಿ ಸೃಷ್ಟಿಕರ್ತ ಬ್ರಹ್ಮನು ಸೃಷ್ಟಿ ನಿರ್ಮಾಣದ ಕಾರ್ಯ ಮುಗಿದ ನಂತರ ಇಲ್ಲಿ ದೊಡ್ಡ ಯಜ್ಞವನ್ನು ಮಾಡಿದನೆಂಬ ನಂಬಿಕೆಯಿದೆ. ಭಗವಾನ್ ವಿಷ್ಣು ಈ ಪವಿತ್ರ ಸ್ಥಳದ ಅಧಿಪತಿಯಾಗಿದ್ದಾನೆ.

🪷ಮಥುರಾ :

🌹ಶ್ರೀಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲೂ ಶ್ರಾದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದು ಅತ್ಯಂತ ಶ್ರೇಷ್ಟವಾಗಿದೆ. ಈ ಸ್ಥಳವನ್ನು ಪುರಾಣದಲ್ಲಿ ಅತ್ಯಂತ ಶ್ರೇಷ್ಟವೆಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಧಾರ್ಮಿಕ ಸ್ಥಳಗಳನ್ನು ಇಲ್ಲಿ ನಾವು ನೋಡಬಹುದು. ಮಥುರಾದಲ್ಲಿ ಪೂರ್ವಜರಿಗೆ ಅಥವಾ ಪಿತೃಗಳಿಗೆ ತರ್ಪಣವನ್ನು ನೀಡುವುದರಿಂದ ಅವರ ಆತ್ಮವು ಶಾಂತಿಯಿಂದಿರುತ್ತದೆ ಮತ್ತು ಕೃಷ್ಣನ ಆಶೀರ್ವಾದ ಪಡೆದುಕೊಳ್ಳುವರು ಎನ್ನುವ ನಂಬಿಕೆಯಿದೆ.

🪷ಗಯಾ :

🌹ಕರ್ನಾಟಕದಲ್ಲಿನ ಲಕ್ಷ್ಮಣಬಾಣ ಕೂಡ ಪಿಂಡ ದಾನಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ಭಗವಾನ್ ಶ್ರೀ ರಾಮನು ತನ್ನ ತಂದೆ ದಶರಥನ ಶ್ರಾದ್ಧಾ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮವು ಜನನ ಮತ್ತು ಮರಣ ಬಂಧನದಿಂದ ಮುಕ್ತಿಯನ್ನು ಪಡೆಯುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಕೆಲವೊಂದು ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ತನ್ನ ತಾಯಿ, ಪತ್ನಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಗಯಾದಲ್ಲಿ ತಂದೆಗೆ ಪಿಂಡ ದಾನ ಮಾಡಿದನೆಂದು ಹೇಳಲಾಗುತ್ತದೆ.

🪷ಹಂಸ ಕುಂಡ ಮತ್ತು ರೇತಸ ಕುಂಡ :

🌹ಕೇದಾರನಾಥದಲ್ಲಿನ ಹಂಸ ಕುಂಡ ಮತ್ತು ರೇತಸ ಕುಂಡದಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ಆತ್ಮಗಳಿಗೆ ಮೋಕ್ಷ ದೊರೆಯುವುದೆನ್ನುವ ನಂಬಿಕೆಯಿದೆ. ಮೋಕ್ಷವಿಲ್ಲದೇ ಅಲೆದಾಡುತ್ತಿರುವ ಆತ್ಮಗಳಿಗೆ ಇಲ್ಲಿ ಮೋಕ್ಷವನ್ನು ನಿಡಲಾಗುವುದು. ಈ ಸ್ಥಳದಲ್ಲಿ ಶ್ರಾದ್ಧಾ ಕರ್ಮಗಳನ್ನು, ಪಿಂಡ ದಾನವನ್ನು ಮಾಡಬಹುದಾಗಿದೆ. ಅಯೋಧ್ಯೆಯಲ್ಲಿ ಪಿಂಡ ದಾನ ಮಾಡುವುದನ್ನು ಕೂಡ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಸಪ್ತಪುರಿಗಳಲ್ಲಿ ಅಯೋಧ್ಯೆಯನ್ನು ಮೊದಲ ಪುರಿಯೆಂದು ಗೌರವಿಸಲಾಗುವುದು. ಅಯೋಧ್ಯೆ ಪುರಿಯಲ್ಲಿ ಪಿಂಡ ದಾನ ಮಾಡುವುದರಿಂದ ಪಿತೃಪೂಜೆ ಮಾಡುವುದರಿಂದ ಪಿತೃಗಳು ಆಶೀರ್ವಾದವನ್ನು ಪಡೆದುಕೊಳ್ಳುವರು.
***

ಪಿತೃಗಳನ್ನು ಮತ್ತು ಅವರ ಪೂರ್ವಿಕರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಹಿರಿಯರು ಹಾಕಿದ ಗೆರೆಯಲ್ಲಿಯೇ ನಡೆಯಬೇಕೆಂದೇನೂ ಅಲ್ಲ. ಆದರೆ, ಅವರು ತೋರಿಸಿದ ಸನ್ಮಾರ್ಗ ಹಾಗೂ ತಮ್ಮನ್ನು ಭೂಮಿಗೆ ಕರೆ ತರುವಂತೆ ಮಾಡಿದ ಅವರಿಗೆ ಥ್ಯಾಂಕ್ಸ್ ಹೇಳು ಈ ಪದ್ಧತಿ

ಪುದಿತಿ ನರಕವ್ಯಾಖ್ಯಾಃ ದುಃಖಂ ಚ ನರಕಂ ವಿದುಃ ।
ಪುದಿತ್ರಾಣಾತ್ತತಃ ಪುತ್ರಂ 
ಹೇಚ್ಚಂತಿ ಪರತ್ರ ಚ ।।

ಶ್ರುತಿಯಲ್ಲಿಯೂ ತಂದೆಗೆ (Father) ಒಳ್ಳೆಯ ಲೋಕಗಳನ್ನು ಸಂಪಾದಿಸಿ ಕೊಡುವವನು ಪುತ್ರನೆಂದೂ.
ಪುತ್ರಃ ಪಿತ್ರೇ ಲೋಕಕೃತ್ ಜಾತವೇದಾಃ ।। - ತೈತ್ತಿರೇಯ ಬ್ರಾಹ್ಮಣ

ಆದ್ದರಿಂದ ತಂದೆ ತಾಯಿಗಳ ಶ್ರಾದ್ಧ ಮಾಡುವ ಅಧಿಕಾರ ಪುತ್ರನಿಗೆ (ಮಗನಿಗೆ) ಮಾತ್ರ ಶ್ರುತಿ - ಸ್ಮೃತಿಗಳು ಅಧಿಕಾರವನ್ನು ನೀಡಿದೆ.

ಆಷಾಢದ ಹುಣ್ಣಿಮೆಯಿಂದ ಐದನೇ ಪಕ್ಷ ಅಂದರೆ ಭಾದ್ರಪದ ಕೃಷ್ಣ ಪಕ್ಷವು ಪಂಚಮ. ಇದಕ್ಕೆ ಅಪರ ಪಕ್ಷವೆಂದೂ, ಪಿತೃ ಪಕ್ಷವೆಂದೂ, ಮಹಾಲಯ (Mahalaya) ಪಕ್ಷವೆಂದೂ ಪ್ರಸಿದ್ಧ. ಈ ಅವಧಿಯಲ್ಲಿ ಕನ್ಯಾ ರಾಶಿಯಲ್ಲಿ ರವಿಯಿದ್ದರೆ ಇನ್ನೂ ವಿಶೇಷ. ಈ ಸಮಯದಲ್ಲಿ ಪಿತೃಗಳು ತಮ್ಮವರಿಂದ ಪಿಂಡದಾನ, ತಿಲೋದಕಗಳನ್ನು ನಿರೀಕ್ಷೆ ಮಾಡಿರುತ್ತಾರೆ. ಯಾರು ಶ್ರದ್ಧೆಯಿಂದ ಈ ಅವಧಿಯಲ್ಲಿ ಪಿತೃ ಆರಾಧನೆ ಮಾಡುವರೋ ಅವರಿಗೆ ಸಂತೃಪ್ತರಾದ ಪಿತೃಗಳು ಆಯುಷ್ಯ, ಸಂತಾನ, ಐಶ್ವರ್ಯ (Prosperity), ಜ್ಞಾನ (Knowledge), ಭಕ್ತಿ (Devotion), ವೈರಾಗ್ಯಗಳು (Detachement) ಆಗಲೆಂದು ಆಶೀರ್ವಾದ ಮಾಡುತ್ತಾರೆ.

ಈ ಮಹಾಲಯ ಪಕ್ಷದಲ್ಲಿ ಪ್ರತಿನಿತ್ಯವೂ ಪಿತೃ ದೇವತೆಗಳ ತೃಪ್ತ್ಯರ್ಥ ಶ್ರಾದ್ಧವನ್ನು ಮಾಡಬೇಕು. ಅದಕ್ಕೆ ಶಕ್ಯವಿಲ್ಲದಿದ್ದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಪಿಂಡ ಪ್ರದಾನ ಪೂರ್ವಕ ಮಾಡಲೇಬೇಕು. ಪ್ರತಿನಿತ್ಯ ಶ್ರಾದ್ಧದ ಪ್ರತಿನಿಧಿಯಾಗಿ ತಿಲ ತರ್ಪಣವನ್ನು ಕೊಡಲೇಬೇಕು. ಯಾರು ಈ ಕಾಲದಲ್ಲಿ ಪಿತೃಗಳಿಗೆ ಪಿತೃ ತರ್ಪಣ, ಪಿಂಡ ದಾನಗಳನ್ನು ಸಮರ್ಪಿಸುವುದಿಲ್ಲವೋ ಅವರಿಗೆ ಪಿತೃಗಳು ನಿರಾಶರಾಗಿ ಶಾಪವನ್ನು ಕೊಟ್ಟು ಹೋಗುವರು. ಪಿತೃ ಕೋಪವು ನಮ್ಮ ಭವಿಷ್ಯದ ಭಾಗ್ಯವನ್ನೂ, ವಂಶಾಭಿವೃದ್ಧಿಯನ್ನೂ ತಡೆಗಟ್ಟುವುದು. ಪಿತೃ ಪ್ರಸಾದವಿದ್ದರೇ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಪಿತೃಗಳ ಶುಭ ಹರಿಕೆಯಿಂದ ಆರೋಗ್ಯ, ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುವರು..

ಶ್ರಾದ್ಧದಲ್ಲಿ ಹಾಗೂ ತಿಲ ತರ್ಪಣ ದಲ್ಲಿ ದಾನದ  ವೈಶಿಷ್ಟ್ಯ  ಆಚ್ಚಾದನಂ ತು ಯೋ ದದ್ಯಾತ್ ಅಹತಂ ಶ್ರಾದ್ಧ ಕರ್ಮಣೀ ।
ಆಯುಃ ಶ್ರೀಃ ಕಾಮಂ ಐಶ್ವರ್ಯಂ ರೂಪಂ ಚ ಲಭತೇ ಧ್ರುವಮ್ ।।

ಶ್ರಾದ್ಧ ಕರ್ಮ ಹಾಗೂ ತಿಲಾ ತರ್ಪಣ ದಲ್ಲಿ ಬ್ರಾಹ್ಮಣರಿಗೆ ಯಾವನು ದಾನವನ್ನು ನೀಡುವಾಗ.. ತುಳಸಿ.ಯನ್ನು ಇಟ್ಟು...ಉತ್ತಮವಾದ ದಾನಗಳು.. ಹೊಸ ವಸ್ತ್ರ .(New Cloth) ಕೊಡುತ್ತಾನೆಯೋ, ಅವನು ನಿಶ್ಚಯವಾಗಿಯೂ ದೀರ್ಘಕಾಲದ ಆಯುಷ್ಯವನ್ನೂ (Long Life), ಸಂಪತ್ತನ್ನೂ, ತನ್ನ ಇಷ್ಟವಾದ ಧನ ಕನಕಾದಿ ಸಕಲೈಶ್ವರ್ಯಗಳನ್ನೂ; ತೇಜಸ್ಸಿನಿಂದ ಕೂಡಿದ ಒಳ್ಳೆಯ ರೂಪವನ್ನೂ ಹೊಂದುತ್ತಾನೆ!

ಸರ್ವ ಪಿತರಂತರ್ಯಾಮಿ  ಪ್ರಾಣಸ್ಥ ಶ್ರೀಲಕ್ಷ್ಮೀಜನಾರ್ದನ ಪ್ರಿಯತಾಂ....
***

ಮಕ್ಕಳ ಶ್ರಾದ್ಧವನ್ನು ಮಾಡಬೇಕೆ ಅಥವಾ ಬೇಡವೇ

  2 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಾರ್ಷಿಕ ತಿಥಿ ಹಾಗೂ 
ಶ್ರಾದ್ಧವನ್ನು ಮಾಡಲಾಗುವುದಿಲ್ಲ 

ಒಂದು ವೇಳೆ ಮರಣ ಹೊಂದಿದ ಮಗು 
 ಎರಡರಿಂದ  ಆರು ವರ್ಷಗಳ ವಯಸ್ಸಿನ ಮದ್ಯಯದ್ದಾಗಿದ್ದರೂ ಕೂಡ ಅದರ ಶ್ರಾದ್ಧ ಮಾಡಬಾರದು.
 ಅವರ ಮೃತ್ಯುವಿನ ೧೦ ದಿನಗಳ ಒಳಗೆ ಕೇವಲ ೧೬ ಪಿಂಡ ದಾನ (ಮಲೀನ ಷೋಡಶಿ) ಮಾಡಬೇಕು 

ಒಂದು ವೇಳೆ ಮೃತ ಮಗುವಿನ ವಯಸ್ಸು 6 ವರ್ಷಗಳಿಗಿಂತ ಅಧಿಕವಾಗಿದ್ದರೆ 
ಶ್ರಾದ್ಧ ಸಂಪೂರ್ಣ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ ...

ಎರಡರಿಂದ ಹತ್ತು ವರ್ಷದ ಅವಧಿಯಲ್ಲಿ ಕನ್ಯೆಯ ಮರಣ ಸಂಭವಿಸಿದರೆ ಆಕೆಯ ಶ್ರಾದ್ಧ ಮಾಡಬಾರದು 
ಕೇವಲ ಮಲೀನ ಷೋಡಶೀ ವರೆಗಿನ ಪ್ರಕ್ರಿಯೆ ಮಾಡಬೇಕು..

 ಅವಿವಾಹಿತ ಮೃತ ಕನ್ಯೆಯ ವಯಸ್ಸು ೧೦ವರ್ಷಕ್ಕಿಂತ ಅಧಿಕವಾಗಿದ್ದರೆ ಮಲೀನ ಷೋಡಶೀ ಏಕಾದಶಾಹ ಸಪಿಂಡ ಇತ್ಯಾದಿ ಕ್ರಿಯೆಗಳನ್ನು ಮಾಡಲಾಗುತ್ತದೆ 

ವಿವಾಹಿತ ಕನ್ಯೆಯ ಮರಣ ಸಂಭವಿಸಿದಾಗ ತಂದೆ ತಾಯಿಯ ಮನೆಯಲ್ಲಿ ಶ್ರಾದ್ಧಾದಿ ಕಮ೯ಗಳನ್ನು ಮಾಡಬಾರದು.
***
ಘಾತ ಚತುರ್ದಶಿ
ಸುಮಧ್ವ ಸೇವಾ Sumadhwa Seva:
Ghata Chaturdashi – 
ಘಾತ ಚತುರ್ದಶಿ

Bhadrapada Krishna Chaturdashi –
ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |
ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |

ಘಾತ ಚತುರ್ದಶಿ ಶ್ರಾದ್ಧವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ.

ಭಾದ್ರಪದ ಕೃಷ್ಣ ಚತುರ್ದಶಿ ದಿನದಂದೇ ಮೃತರಾದವರಿಗೆ ಅಂದು ಕಾಲಶ್ರಾದ್ಧ ಮಾಡಬೇಕು.  ಪಕ್ಷ ಮಾಡುವಂತಿಲ್ಲ.


ಘಾತ ಚತುರ್ದಶಿ ಶ್ರಾದ್ಧ ಯಾರನ್ನು ಕುರಿತು ಮಾಡಬೇಕು ?
- ಅಪಘಾತದಲ್ಲಿ ಮೃತರಾದವರಿಗಾಗಿ, ಆತ್ಮಹತ್ಯೆ ಮಾಡಿಕೊಂಡವರಿಗಾಗಿ,  ಹತ್ಯೆಗೊಳಗಾದವರಿಗಾಗಿ,  ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವರು, ಇತ್ಯಾದಿ ಕಾರಣದಿಂದ ಮೃತರಾದವರ ಕುರಿತು ಮಾಡುವ ಶ್ರಾದ್ಧ.    

ಇಲ್ಲಿ ಪ್ರತ್ಯೇಕವಾಗಿ ಅಂತಹವರಿಗೇ ಶ್ರಾದ್ಧ ಮಾಡತಕ್ಕದ್ದು.    ಈ ದಿನ ಬೇರೆ ಯಾರೂ ಪಕ್ಷ ಶ್ರಾದ್ಧ ಮಾಡತಕ್ಕದ್ದಲ್ಲ.

ಆದರೆ ಪಕ್ಷ ಮಾಸ ಪೂರ್ತಿ ಪಕ್ಷ ಶ್ರಾದ್ಧ ಮಾಡುವವರು ಈ ದಿನ ಕೂಡ ಪಕ್ಷ ಮಾಡತಕ್ಕದ್ದು.  

ತಂದೆ ಚತುರ್ದಶಿ ದಿನ ಮೃತರಾಗಿದ್ದರೂ ಅವರ ಪಕ್ಷ ಘಾತ ಚತುರ್ದಶಿ ದಿನ ಮಾಡುವಂತಿಲ್ಲ.  ಬೇರೆ ಸೂಕ್ತ ದಿನ ಮಾಡಬೇಕು.  

ಘಾತ ಚತುರ್ದಶಿ ದಿನದಂದೇ ಮೃತರಾದವರಿಗೆ ಸಾಂವತ್ಸರಿಕ ಶ್ರಾದ್ಧ ಮಾಡತಕ್ಕದ್ದು.  

ಸಹಗಮನ ಮಾಡಿದವರು, ಅಗ್ನಿಯಲ್ಲಿ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡವರು, ಅನಾರೋಗ್ಯದಿಂದ ಗುರುಹಿರಿಯರ ಅಪ್ಪಣೆಯಂತೆ ಅಗ್ನಿ ಅಥವಾ ನೀರಿನಲ್ಲಿ ಆತ್ಮಾಹುತಿ ಮಾಡಿಕೊಂಡವರು "ಘಾತರು" ಎನಿಸುವುದಿಲ್ಲ.  ಅಂತಹವರಿಗೆ ಘಾತ ಚತುರ್ದಶಿ ದಿನ ಪಕ್ಷ ಮಾಡಬೇಕಿಲ್ಲ.

This day is meant for  those who have passed away due to accidents or those who met with unnatural death like snake bites, accidents, suicide, war, and other natural calamities, etc.  The day is known as Ghata Chaturdashi.  There is a strong belief that the souls of these people who had an unnatural death, like death due to weapons, poison, Snake bite, etc., will be wandering around and do not rest in peace.   Others not to do paksha on this day.  The tithi is meant for Accidental victims only.  For those who are doing “Sakrunmahaalaya”. that is shraddha on only a particular day of the paksha maasa, they need not do it on this day.  However for those who are doing paksha daily, they can do it on this day also.  Even in case of pitru having dead on Chaturdashi day, Paksha not to be performed on this day.  However general shraddha to be performed on the death day.
Please note :
1. This Ghata Chaturdashi does not apply to those who have died by deha tyaaga (self death) through entering agni, jumping in water due to ill health, shastra reethya, or a lady doing “sahagamana” .  They are not considered as “Ghaata”.  As such, Paksha not to be performed for these people.
2.  This paksha for “Ghata” to be performed for only those victims  and not for others.  If for pitamahadees also paksha performed on this day, the punya will be taken away by rakshaas.  If all the three pitru – pitamaha – prapitamaha are dead due to “Ghata” (shastra), then for all the three Ghata chaturdashi paksha to be performed.

Ghata Chaturdashi – ಘಾತ ಚತುರ್ದಶಿ
Bhadrapada Krishna Chaturdashi –

ಪ್ರತಿಪತ್ ಪ್ರಭೃತಿಷ್ವೇಕಾಂ ವರ್ಜಯಿತ್ವಾ ಚತುರ್ದಶೀಂ |
ಶಸ್ತ್ರೇಣ ತು ಹತಾ ಯೇ ವೈ ತೇರ್ಭ್ಯಸ್ತತ್ರ ಪ್ರದೀಯತೇ |

ಘಾತ ಚತುರ್ದಶಿ - ಅಪಘಾತದಲ್ಲಿ ಮೃತರಾದವರು, ಪ್ರಾಣಿಗಳಿಂದ ಹತರಾದವರು,  ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವರು, ಇತ್ಯಾದಿ ಕಾರಣದಿಂದ ಮೃತರಾದವರ ಕುರಿತು ಮಾಡುವ ಶ್ರಾದ್ಧ.    ಇಲ್ಲಿ ಪ್ರತ್ಯೇಕವಾಗಿ ಅಂತಹವರಿಗೇ ಶ್ರಾದ್ಧ ಮಾಡತಕ್ಕದ್ದು.    ಈ ದಿನ ಬೇರೆ ಯಾರೂ ಪಕ್ಷ ಶ್ರಾದ್ಧ ಮಾಡತಕ್ಕದ್ದಲ್ಲ.

ಆದರೆ ಪಕ್ಷ ಮಾಸ ಪೂರ್ತಿ ಪಕ್ಷ ಶ್ರಾದ್ಧ ಮಾಡುವವರು ಈ ದಿನ ಕೂಡ ಪಕ್ಷ ಮಾಡತಕ್ಕದ್ದು.  

ತಂದೆ ಚತುರ್ದಶಿ ದಿನ ಮೃತರಾಗಿದ್ದರೂ ಅವರ ಪಕ್ಷ ಘಾತ ಚತುರ್ದಶಿ ದಿನ ಮಾಡುವಂತಿಲ್ಲ.  ಬೇರೆ ಸೂಕ್ತ ದಿನ ಮಾಡಬೇಕು.  

ಘಾತ ಚತುರ್ದಶಿ ದಿನದಂದೇ ಮೃತರಾದವರಿಗೆ ಸಾಂವತ್ಸರಿಕ ಶ್ರಾದ್ಧ ಮಾಡತಕ್ಕದ್ದು.  

ಸಹಗಮನ ಮಾಡಿದವರು, ಅಗ್ನಿಯಲ್ಲಿ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡವರು, ಅನಾರೋಗ್ಯದಿಂದ ಗುರುಹಿರಿಯರ ಅಪ್ಪಣೆಯಂತೆ ಅಗ್ನಿ ಅಥವಾ ನೀರಿನಲ್ಲಿ ಆತ್ಮಾಹುತಿ ಮಾಡಿಕೊಂಡವರು "ಘಾತರು" ಎನಿಸುವುದಿಲ್ಲ.  ಅಂತಹವರಿಗೆ ಘಾತ ಚತುರ್ದಶಿ ದಿನ ಪಕ್ಷ ಮಾಡಬೇಕಿಲ್ಲ.
****


Yati Mahalaya ಯತಿಮಹಾಲಯ 
#Yathi #Dwadashi*
🌺🌺🌺🌺🌺🌺
ಭಾದ್ರಪದ ಬಹುಳ ದ್ವಾದಶಿ ತಿಥಿಯನ್ನು ಯತಿಗಳಿಗೆ ಮೀಸಲಾಗಿಟ್ಟಿದ್ದಾರೆ.  ಅಂದು ಯಾರೂ ಪಕ್ಷ ಮಾಡುವಂತಿಲ್ಲ. 
ಆದರೆ ಪಕ್ಷ ಮಾಸ ಪೂರ್ತಿ ಪಕ್ಷ ಮಾಡುವ ಸಂಕಲ್ಪ ಮಾಡಿರುವವರು ಮಾಡಬಹುದು. 

 ಅದೇ ದಿನ ತಂದೆ ತಾಯಿಯ ಶ್ರಾದ್ಧವಿದ್ದರೆ ಶ್ರಾದ್ಧ ಮಾಡಬಹುದು.   ಆದರೆ ಪಕ್ಷ ಮಾಡುವಂತಿಲ್ಲ.  

ಯತಿಮಹಾಲಯರಂದು ಯತಿಗಳಿಗೂ ಪಿಂಡಪ್ರದಾನ ಮಾಡಬೇಕಾ ?

ಇಲ್ಲ. ಅವರಿಗೆ ಎಂದಿನಂತೆ ಹಸ್ತೋದಕ ನೀಡಬೇಕು. ಈ ದಿನ ಸಮಸ್ತ ಗತಿಸಿದ ಯತಿಗಳಿಗೂ ಹಸ್ತೋದಕ ನೀಡಬೇಕು.  

ಶ್ರೀ ಪದ್ಮನಾಭ ತೀರ್ಥರು (ಆನೆಗೊಂದಿ)
ಶ್ರೀ ನರಹರಿ ತೀರ್ಥರು (ಹಂಪಿ)
ಶ್ರೀ ಮಾಧವತೀರ್ಥರು (ಮಣ್ಣೂರು)
ಶ್ರೀ ಅಕ್ಷೋಭ್ಯತೀರ್ಥರು (ಮಳಖೇಡ)
ಶ್ರೀ ಜಯತೀರ್ಥರು (ಮಳಖೇಡ)
ವಿದ್ಯಾಧಿರಾಜತೀರ್ಥರು
ಕವೀಂದ್ರತೀರ್ಥರು (ಆನೆಗೊಂದಿ)
ವಾಗೀಶತೀರ್ಥರು (ಆನೆಗೊಂದಿ)
ರಾಮಚಂದ್ರ ತೀರ್ಥರು (ಮಳಖೇಡ) ವಿಭುದೇಂದ್ರತೀರ್ಥರು (ತಿರುನಲ್ವೇಲಿ) ವಿದ್ಯಾನಿಧಿತೀರ್ಥರು (ಮಳಖೇಡ)
ಬ್ರಹ್ಮಣ್ಯತೀರ್ಥರು (ಅಬ್ಬೂರು)
ಶ್ರೀಪಾದರಾಜರು (ಮುಳಬಾಗಿಲು)
ಶ್ರೀ ವ್ಯಾಸರಾಜರು (ಆನೆಗೊಂದಿ)
ಶ್ರೀ ವಾದಿರಾಜರು (ಸೋಂದಾ)
ಶ್ರೀ ಸುರೇಂದ್ರತೀರ್ಥರು (ಮಧುರೈ)
ಶ್ರೀ ವಿಜಯೀಂದ್ರತೀರ್ಥರು (ಕುಂಭಕೋಣಂ)
ಶ್ರೀ ಸುಧೀಂದ್ರ ತೀರ್ಥರು (ಆನೆಗೊಂದಿ)
ಶ್ರೀ ರಘೋತ್ತಮರು (ತಿರುಕೋಯಿಲೂರು)
ಶ್ರೀ ರಾಘವೇಂದ್ರತೀರ್ಥರು 
(ಮಂತ್ರಾಲಯ)
+

ಹೀಗೆ ಎಲ್ಲಾ ಪರಂಪರೆಯ ಯತಿಗಳಿಗೂ / ಅಥವಾ ನಿಮ್ಮ ನಿಮ್ಮ ಮಠದ ಪರಂಪರೆಯ ಯತಿಗಳ ಸ್ಮರಣೆ ಪೂರ್ವಕ ಹಸ್ತೋದಕ ನೀಡಬೇಕು. 

ಯತಿಗಳಿಗೆ ತರ್ಪಣ ಕೊಡಬೇಕಾ ?
ಇಲ್ಲ. ಹಸ್ತೋದಕ ಮಾತ್ರ.

ಹಸ್ತೋದಕ ಯಾವಾಗ ಕೊಡಬೇಕು

ನೈವೇದ್ಯ
ರಮಾ ನೈವೇದ್ಯ
ಬ್ರಹ್ಮ ವಾಯುಗಳಿಗೆ ನೈವೇದ್ಯ
ಗರುಡ ಶೇಷರಿಗೆ ನೈವೇದ್ಯ
ವೈಶ್ವದೇವ

ನಂತರ ಹಸ್ತೋದಕ ಯತಿಗಳ ತಾರತಮ್ಯ ಪ್ರಕಾರ (ಯತಿಗಳ ವೃಂದಾವನ ಪ್ರವೇಶ ಕ್ರಮದಲ್ಲಿ)

ಯತಿ ಹಸ್ತೇ ಜಲಂ ದದ್ಯಾತ್ 
ಭೈಕ್ಷ್ಯಂ ದದ್ಯಾತ್ ಪುನರ್ಜಲಂ !
ತದನ್ನಂ ಮೇರುಣಾ ತುಲ್ಯಂ
ತಜ್ಜಲಂ ಸಾಗರೋಪಮಂ!

ಯತಿಗಳ ಕೈಯಲ್ಲಿ ಜಲವನ್ನು ಹಾಕಿ ನಂತರ ಭಿಕ್ಷೆಯನ್ನು ಹಾಕಬೇಕು. ನಂತರ ಜಲವನ್ನು ಕೊಡಬೇಕು. ಭಿಕ್ಷೆಗಾಗಿ ನೀಡಿದ ಅನ್ನವು ಮೇರು ಪರ್ವತಕ್ಕೆ ಭೋಜನ ಹಾಕಿದ ಪುಣ್ಯ ಸಮ.

ವಟೌ ತು ಸಮದತ್ತಂ ಸ್ಯಾತ್
ಗೃಹಸ್ತೇ ದ್ವಿಗುಣಂ ಭವೇತ್ !
ವಾನಪ್ರಸ್ಥೇ ಶತಗುಣೌ 
ಯತೌ ದತ್ತಂ ಅನಂತಕಂ !

ಬ್ರಹ್ಮಚಾರಿಗೆ ಭೋಜನ ಹಾಕಿದರೆ ಸಮಸಮ ಫಲ ಬರುತ್ತದೆ. ಅಂದರೆ ನಾವು ಏನು ದಾನ ನೀಡುತ್ತೇವೋ ಅದರ ಫಲ ಬರುತ್ತದೆ.    ಗೃಹಸ್ಥನಿಗೆ ನೀಡಿದರೆ ಎರಡು ಪಟ್ಟು ಫಲ ಬರುತ್ತದೆ. ವಾನಪ್ರಸ್ಥನಲ್ಲಿ ನೀಡಿದರೆ ನೂರು ಪಟ್ಟು ಹೆಚ್ಚು ಫಲ ಬರುತ್ತದೆ.
ಆದರೆ ಒಬ್ಬ ಯತಿಗೆ ಭೋಜನ ಮಾಡಿಸಿದರೆ ಅನಂತ ಫಲ ಪ್ರಾಪ್ತಿಯಾಗುತ್ತದೆ.  ಅದಕ್ಕೇ ಯತಿಗಳ ಭಿಕ್ಷೆ ಮಾಡಿಸುವುದು.

ಯತಿರ್ಯತ್ರ ಗೃಹೇ ಭುಂಕ್ತೇ
ತತ್ರ ಭುಂಕ್ತೇ ಹರಿಸ್ವಯಂ !
ಹರಿರ್ಯತ್ರ ಗೃಹೇ ಭುಂಕ್ತೇ 
ತತ್ರ ಭುಂಕ್ತೇ ಜಗತ್ರಯಂ !

ಒಬ್ಬ ಯತಿಗೆ ಭೋಜನ ಮಾಡಿಸಿದರೆ ಹರಿ ಅವರಲ್ಲಿದ್ದು ತಾನುಣ್ಣುವನು. ಯಾರ ಮನೆಯಲ್ಲಿ ಹಿರಿ ಯತಿಯಲ್ಲಿದ್ದು ತಾನು ಭುಂಜಿಸುವನೋ ಆ ಮನೆಯಲ್ಲಿ ಮೂರು ಲೋಕವೇ ತಿಂದಂತಾಗುತ್ತದೆ.

ಅದಕ್ಕೇ ಮನೆಯಲ್ಲಿ ಯತಿಗೆ ಭೋಜನ ಮಾಡಿಸಲಾಗದಿದ್ದಾಗ ಮಠಗಳಲ್ಲಿ ಹಸ್ತೋದಕಕ್ಕೆ ಸೇವೆ ಕೊಡುತ್ತಾರೆ.

ನಿತ್ಯ ಯತಿಗಳಿಗೆ ಹಸ್ತೋದಕ ನೀಡಬೇಕು. ಕನಿಷ್ಠ ಇಂದಾದರೂ ಹಸ್ತೋದಕ ನೀಡಿ.

ಯತಿಗಳಿಗೆ ಏಕೆ ಹಸ್ತೋದಕ ನೀಡಬೇಕು -.   ಯತಿಗಳು ನಮ್ಮ ಸನಾತನ ಪರಂಪರೆಯ ಎತ್ತಿಹಿಡಿದು ಶಿಷ್ಯ ಪರಂಪರೆಯ ಪರವಾಗಿ ಸಮಸ್ತ ಜಗತ್ತಿಗೇ ಕಲ್ಯಾಣವನ್ನು ಪ್ರಾರ್ಥಿಸುತ್ತಾರೆ.  ಹಲವಾರು ಟೀಕಾ ಟಿಪ್ಪಣಿಗಳ , ವ್ಯಾಖ್ಯಾನಗಳ ರಚಿಸಿ ನಮಗೆ ವೇದವ್ಯಾಸರ ಬ್ರಹ್ಮ ಸೂತ್ರಾದಿಗಳ ಅರ್ಥವಾಗುವಂತೆ ಮಾಡಿರುತ್ತಾರೆ.  ಉಪದೇಶಾಮೃತ ನೀಡಿ ನಮ್ಮನ್ನು ಉದ್ಧಾರ ಮಾಡಿರುತ್ತಾರೆ. ಅದಕ್ಕಾಗಿ ನಮಗೆ ಯತಿಋಣ ವಿರುತ್ತದೆ.  ಅದಕ್ಕಾಗೇ ಯತಿಗಳಿಗೆ ಹಸ್ತೋದಕ ನೀಡಬೇಕು.

Bhadrapada Bahula Dwadashi is meant for Yathigalu.  On this day, hastodaka will be given to all the Yatigalu who have entered Vrundavana.  On this day, Paksha for other pitrugalu and forefathers not to be done.  This day is exclusively reserved for Yathigalu.

The reason for performing the Shraddha for Sanyaasis and saints is that they have preserved and passed on the knowledge of sanatharma dharma and had done great service to the society.  We have to do yathi dwadashi shraddha to get ourselves free from Yati Runa, that is why it is called as “Yati Dwadashi”.  These Yatigalu having prepared so many shastra granthaas, vyaakyaanaanaas, Teeka granthaas have helped us a lot in learning ancient granthaas.  So, we have Runa to them  – Yati Runa.  That is why we have do Yati Mahalaya.

 

This shraaddha to be done by Yatiputraaas only.  Who are Yatiputraas?  Those who have grantha/shastra runa from the yatigalu are termed as “yati putraas”. Yati Shraadda does not mean that we need to give pinda pradhana to yatigalu. This is anna santarpana/hastodaka to yatigalu in the form of bhojana to brahmana suvasini santarpane.

Those who are doing daily paksha shraddha can do it on Yathi Mahalaya Dwadashi also.

ನರಹರಿ ಸುಮಧ್ವ
ಸುಮಧ್ವ ಸೇವಾ
***

ಪಿತೃಗಳಿಗೆ ತಿಲ ತರ್ಪಣವೇಕೆ ?

ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ).  ಅವು ಅವನ ವೃದ್ಧಿಗೂ ಕಾರಣವಾಗಿವೆ.  ಅವನೇ ಪಿತೃಗಳಿಗೆ ಆಧಾರ.  ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ.  ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ.  ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ.    ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾಲವು ನಡೆಯಲು ಕಾರಣವಾಗಿವೆ.  ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ಶುಕ್ಲಪಕ್ಷದ ಹದಿನೈದು ದಿನ ರಾತ್ರಿ, ಕೃಷ್ಣಪಕ್ಷದ ಹದಿನೈದು ದಿನ ಹಗಲು ಹೀಗೆ ಒಂದು ತಿಂಗಳ ನಮ್ಮ ಕಾಲವು ಅವರಿಗೆ ಒಂದು ದಿನವಾಗುವುದು.  ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. (ಪೂರ್ಣ ದಿವಾರಾತ್ರಿ) ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ.  ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ.  ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ.  ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?

ದರ್ಬೆ, ಕುಶ,  ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು.  ಒಮ್ಮೆ ಗರುಡನು  ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯದ  ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಬರಲು ಹೇಳುತ್ತಾನೆ. ಮತ್ತು ಆ‌ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆಯ ಮೇಲೆ ಇಟ್ಟಿರುತ್ತಾನೆ.  ಅಷ್ಟರಲ್ಲಿ ದೇವೇಂದ್ರನು ಬಂದು  ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಭೆಯ ಮೇಲೆ ಬೀಳುತ್ತದೆ.  ಆದ್ದರಿಂದ ದರ್ಭೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಭೆಯೂ, ಬೆವರಿನಿಂದ ಎಳ್ಳೂ ಹೊರ ಬಂದ ಕಾರಣ ಇವು ಎಲ್ಲಾ ಕಾರ್ಯಗಳಿಗೂ ಪಾವಿತ್ರ್ಯತೆ ನೀಡಲು ಬೇಕಾಗುತ್ತವೆ.
***
.


ಅಧಿಕ ಮಾಸದಲ್ಲಿ ಶ್ರಾದ್ಧ ವಿಚಾರ – examples

ಯಾವುದೋ ಸಂವತ್ಸರದಲ್ಲಿ ಶ್ರಾವಣ ಮಾಸದಲ್ಲಿ ಮೃತರಾದವರ ಶ್ರಾದ್ಧ  : 

ಅಧಿಕ ಮಾಸದಲ್ಲಿ ಪ್ರತಿ ಸಾಂವತ್ಸರಿಕ ಶ್ರಾದ್ಧವನ್ನು ಸಂಕಲ್ಪ ಶ್ರಾದ್ಧ ಆಯಾ ದಿನದಲ್ಲಿ ಮಾಡಿ ನಿಜ ಮಾಸದಲ್ಲಿ ಪಿಂಡಸಹಿತ ಶ್ರಾದ್ಧ ಮಾಡಬೇಕು.   

ಆದರೆ, ಹಿಂದಿನ ಯಾವುದೋ ಅಧಿಕ ಶ್ರಾವಣ ಮಾಸದಲ್ಲೇ ಮೃತರಾದವರಿಗೆ ಅಧಿಕ ಶ್ರಾವಣ ಮಾಸದಲ್ಲಿ ಪಿಂಡಸಹಿತ ಶ್ರಾದ್ಧ ಮಾಡಿ ನಿಜ ಮಾಸದಲ್ಲಿ ಸಂಕಲ್ಪ ಸಹಿತ ಶ್ರಾದ್ಧ ಮಾಡತಕ್ಕದ್ದು.  (ಉದಾಹರಣೆ – ಅಕಸ್ಮಾತ್ ಹಿಂದಿನ ಯಾವುದಾದರೂ ಅಧಿಕ  ಶ್ರಾವಣ ಮಾಸದಲ್ಲಿ ಮೃತರಾದವರ ಶ್ರಾದ್ಧವನ್ನು ಈ ಸಲದ ಅಧಿಕ ಶ್ರಾವಣ ಮಾಸದಲ್ಲಿ ಪಿಂಡಪ್ರದಾನ ಪೂರ್ವಕ ಶ್ರಾದ್ಧ ಮಾಡತಕ್ಕದ್ದು.).


ಹೋದ ವರ್ಷ ಶ್ರಾವಣ ಮಾಸದಲ್ಲಿ ಮೃತರಾದವರ ಶ್ರಾದ್ಧ ಯಾವಾಗ ಮಾಡಬೇಕು ?

ಹಿಂದಿನ ವರ್ಷ ಮೃತರಾದವರಿಗೆ ಹನ್ನೆರಡು ತಿಂಗಳು ಈ ಅಧಿಕ ಮಾಸದಲ್ಲಿ ತುಂಬಿದರೆ ಅವರ ಊನಾಬ್ದಿಕ, ವಿಮೋಕ, ವರ್ಷಾಬ್ಧಿಕಗಳನ್ನು ಅಧಿಕ ಮಾಸದಲ್ಲೇ ಮಾಡತಕ್ಕದ್ದು.  (ಉದಾಹರಣೆ – ಕಳೆದ ಸಂವತ್ಸರದ ಶ್ರಾವಣ ಮಾಸದಲ್ಲಿ ಮೃತರಾದವರಿಗೆ ಈ ಅವಧಿಯಲ್ಲಿ ಅಧಿಕ ಮಾಸದಲ್ಲಿ ಹನ್ನೆರಡು ತಿಂಗಳು ತುಂಬಿದವರು). ಆದರೆ ಪ್ರತಿ ಸಾಂವತ್ಸರಿಕ ಶ್ರಾದ್ಧವನ್ನು ನಿಜ ಶ್ರಾವಣ ಮಾಸದಲ್ಲಿ ಮಾಡತಕ್ಕದ್ದು.

ಸತ್ತ ವರ್ಷದಲ್ಲಿ ಮಾಡುವ ಪ್ರತಿತಿಂಗಳ ಶ್ರಾದ್ಧ ಅಥವಾ ತ್ರೈಪಕ್ಷಿಣಿ, ಅಥವಾ ಇನ್ನಿತರ ವರ್ಷದಲ್ಲಿ ಮಾಡತಕ್ಕ ಶ್ರಾದ್ಧವನ್ನು ಅಧಿಕ ಮಾಸದಲ್ಲೇ ಮಾಡತಕ್ಕದ್ದು.  ಸರಿಯಾಗಿ ಹನ್ನೆರಡು ತಿಂಗಳು ಮಾತ್ರ ಮಾಡತಕ್ಕದ್ದು.  ಮತ್ತು  ನಿಜ ಮಾಸದಲ್ಲಿ ಸಾಂವತ್ಸರಿಕ ಶ್ರಾದ್ಧವನ್ನು ಮಾಡತಕ್ಕದ್ದು.  ಉದಾಹರಣೆ – ಈ ವರ್ಷ ಶ್ರಾವಣದಲ್ಲಿ ಸತ್ತವರ ಪ್ರತಿ ತಿಂಗಳ ಶ್ರಾದ್ಧ, ಊನಾಬ್ಧಿಕ, ವಿಮೋಕ, ವರ್ಷಾಬ್ಧಿಕ ಇತ್ಯಾದಿಗಳನ್ನು ಮುಂದಿನ ವರ್ಷ ಆಷಾಢ ಮಾಸದಲ್ಲಿ ಮಾಡಬೇಕು ಮತ್ತು ಸಾಂವತ್ಸರಿಕ ಶ್ರಾದ್ಧವನ್ನು ಶ್ರಾವಣದಲ್ಲಿ ಮಾಡತಕ್ಕದ್ದು.
***




No comments:

Post a Comment