SEARCH HERE

Friday, 17 January 2020

ಪ್ರದಕ್ಷಿಣ ನಮಸ್ಕಾರ ಯಾರಿಗೆ ಎಷ್ಟು

ಪ್ರದಕ್ಷಿಣನಮಸ್ಕಾರ -

ಯಾರಿಗೆ ಎಷ್ಟು ಪ್ರದಕ್ಷಿಣೆ?

ಏಕಾಂ ವಿನಾಯಕೇ ಕುರ್ಯಾತ್
ದ್ವೇ ಸೂರ್ಯೇ ತಿಸ್ರ ಈಶ್ವರೇ |
ಚತಸ್ರಃ ಕೇಶವೇ ಪಂಚ
ದುರ್ಗಾಯಾಂ ಷಟ್ ಕುಮಾರಕೇ ||
ಸಪ್ತಾಶ್ವತ್ಥೇ ವಿಧಿವತ್ 
ನಮಸ್ಕಾರಪ್ರದಕ್ಷಿಣಮ್ ||

ಗಣಪತಿಗೆ ಒಂದು, ಸೂರ್ಯನಿಗೆ ಎರಡು, ಈಶ್ವರನಿಗೆ ಮೂರು, ವಿಷ್ಣುವಿಗೆ ನಾಲ್ಕು, ದುರ್ಗೆಗೆ ಐದು, ಸ್ಕಂದನಿಗೆ (ಸುಬ್ರಹ್ಮಣ್ಯ) ಆರು, ಅಶ್ವತ್ಥಕ್ಕೆ ಏಳು- ವಿಧಿಪ್ರಕಾರ ಪ್ರದಕ್ಷಿಣ ಹಾ‍ಕಿ ನಮಸ್ಕಾರ ಮಾಡಬೇಕು.

ಪ್ರದಕ್ಷಿಣೆ ಹೇಗೆ ಮಾಡಬೇಕು?

ಪದೇ ಪದಾಂತರಂ ಕೃತ್ವಾ ಕರೌ ಚಲನವರ್ಜಿತೌ |
ಸ್ತುತಿರ್ವಾಚಾ ಹೃದಿ ಧ್ಯಾನಂ ಚತುರಂಗಂ ಪ್ರದಕ್ಷಿಣೇ ||

ಹೆಜ್ಜೆಗೆ ತಾಗಿ ಮುಂದಿನ ಹೆಜ್ಜೆ ಇಡಬೇಕು.
ಚಲನೆಯಿಲ್ಲದ ಕೈಗಳು,ನಾಲಗೆಯಲ್ಲಿ ಸ್ತುತಿ,ಹೃದಯದಲ್ಲಿ ಧ್ಯಾನ- ಇವುಗಳು ಪ್ರದಕ್ಷಿಣೆಯ ನಾಲ್ಕು ಅಂಗಗಳು.
ಹೀಗೆ ಪ್ರದಕ್ಷಿಣೆ ಮಾಡಬೇಕು.

ಪುರುಷರಿಗೆ ಅಷ್ಟಾಂಗ ನಮಸ್ಕಾರ-

ಉರಸಾ ಶಿರಸಾ ದೃಷ್ಟ್ಯಾ
ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ
ಪ್ರಣಾಮೋSಷ್ಟಾಂಗ ಉಚ್ಯತೇ ||

ನಮಸ್ಕಾರಕ್ಕೆ ಎಂಟು ಅಂಗಗಳು- 
ಎದೆ, ಶಿರಸ್ಸು, ದೃಷ್ಟಿ, ಮನಸ್ಸು, ಮಾತು, ಕೈಗಳೆರಡು, ಕಾಲುಗಳೆರಡು, ಮೊಣಕಾಲುಗಳೆರಡು, ಇವೆಲ್ಲವೂ ಭೂ ಸ್ಪರ್ಶ ಮಾಡುವಂತೆ ಮುಖ ಕೆಳಗೆ ಮಾಡಿ (ಕವುಚಿ) ದೀರ್ಘದಂಡದಲ್ಲಿ ನಮಸ್ಕರಿಸುವ ಅಷ್ಟ ಅಂಗಗಳು.

ಸ್ತ್ರೀಯರಿಗೆ ಪಂಚಾಂಗ ನಮಸ್ಕಾರ-

ಬಾಹುಭ್ಯಾಮಥ ಜಾನುಭ್ಯಾಂ
ಶಿರಸಾ ಮನಸಾ ಧಿಯಾ |
ಪಂಚಾಂಗಕಃ ಪ್ರಣಾಮಃ ಸ್ಯಾತ್
ಸ್ತ್ರೀಣಾಂ ನಮನಲಕ್ಷಣಮ್ ||

ಸ್ತ್ರೀಯರು ನಮಸ್ಕರಿಸುವಾಗ ಕೈಗಳೆರಡು, ಮೊಣಕಾಲುಗಳೆರಡು ಮತ್ತು ತಲೆ ನೆಲಕ್ಕೆ ಮುಟ್ಟಬೇಕು. ಮನಸ್ಸು ಮತ್ತು ಬುದ್ಧಿಯಲ್ಲಿ ಭಗವಂತನನ್ನು ಧ್ಯಾನಿಸಿ ನೆನೆಯಬೇಕು. ಇವು ಸ್ತ್ರೀಯರ ನಮಸ್ಕಾರದ ಐದು ಅಂಗಗಳು.
******

No comments:

Post a Comment