SEARCH HERE

Thursday, 9 January 2020

ಹಸ್ತೋದಕ ಅಂದರೆ ಏನು



Like

Comments
  • ವೆಂಕ ಟೇಶ ಯತಿಗಳಿಗೆ ( ಗುರುಗಳಿಗೆ) ಅನ್ನಾದಿಗಳು ಮೂಲಕ ಸಮರ್ಪಣೆ ಮಾಡುವುದನ್ನು ಹಸ್ತೋದಕ ಎಂದು ಕರೆಯಲಾಗುತ್ತದೆ. ದೇವರಿಗೆ ದೇವತೆಗಳಿಗೆ ಮಾಡುವ ಅನ್ನಾದಿಗಳು ನೈವೇದ್ಯ ಎಂದು ಕರೆಯಲಾಗುತ್ತದೆ.
    ಇದರ ಬಗ್ಗೆ ಇನ್ನೂ ಜಿಜ್ಞಾಸೆ ಇದ್ದರೆ ಸುಧೀರ್ಘವಾದ ಚರ್ಚೆ ವಿಶ್ವನಂದನಿ ಅ್ಯಪ್ ಒಳಗೆ ಆಗಿದೆ.
  • Mahesh Bhat ಹಸ್ತ ಎಂದರೆ ಕೈ. ಉದಕ ಎಂದರೆ ನೀರು. ಹಸ್ತೋದಕ ಎಂದರೆ ಕೈಯಲ್ಲಿ ನೀರು ತೆಗೆದುಕೊಳ್ಳುವುದು.
    3
  • Ramesh N Rao I too feel.no.one tell why they collect. Hosthodaka and how.it is used
    • Prakash Shyamala ಮೂಲ ಉದ್ಧೇಶ ಕಾಣಿಕೆಯನ್ನು ಕೊಟ್ಟು ಊಟವನ್ನು ಪ್ರಸಾದದ ರೂಪದಲ್ಲಿ ಸೇವಿಸಬೇಕು ಎಂಬುದು. ನಿಮ್ಮ ಕಾಣಿಕೆಯಿಂದ ಹಿರಿಯರಿಗೆ ಅನ್ನದಾನ ನೀಡಲಾಗುತ್ತದೆ. ಮಠವನ್ನೂ ಹೋಟೆಲ್ ಅಂದುಕೊಳ್ಳುವವರಿಗೆ ಅರ್ಥವಾಗುವುದಿಲ್ಲ.
  • Vadiraj V Kulkarni ಇಂತಹ ಸೂಕ್ಷ್ಮ ವಿಷಯಗಳನ್ನು ಫೇಸ್ಬುಕ್ ಅಲ್ಲಿ ಕೇಳಿ ಮನಬಂದಂತೆ ಎಲ್ಲರೂ ಕಾಮೆಂಟ್ ಮಾಡಿದಾಗ clarification ಸಿಗುವ ಬದಲು confusion ಶುರು ಆಗುತ್ತದೆ, ನಿಮಗೆ ನಿಜವಾಗಿಯೂ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಿಳಿದ ಆಚಾರ್ಯರನ್ನು ಕೇಳಿ, online ಅಲ್ಲಿ ತುಂಬಾ ಪ್ರವಚನಗಳು ಸಿಗುತ್ತವೆ ಕೇಳಿ, Vishwanandini aap ಇದೆ ಅದರಲ್ಲಿ ಕೇಳಿ ಉತ್ತರ ಸಿಗುತ್ತದೆ,
    6
    • Ramesh H G Vadiraj V Kulkarni ವಿಷಯ ತಿಳಿದ ಅನೇಕ ಪಂಡಿತರು ಹಾಗೂ ಉಪನ್ಯಾಸ ಮಾಡುವರು ಇದ್ದಾರೆ.
      ಆದರೆ ಅನುಷ್ಠಾನ ಮಾಡುವರು ಎಷ್ಟು?
      ನಾವು ಇಂದು ಉತ್ತಮ ಸಂಸ್ಕೃತಿ, ಗುಣಮಟ್ಟದ, ಮಕ್ಕಳನ್ನು ಸಮಾಜಕ್ಕೆ ಕೊಡಲು ವಿಫಲವಾಗಿದ್ದೆವೇ.?


      ಧಾರ್ಮಿಕ, ರಾಜಕೀಯ, ಶಿಕ್ಷಣ, ಆರೋಗ್ಯ, ಸೇವೆ ಆಗಿ ಉಳಿದಿಲ್ಲ. ಎಲ್ಲಾ ಹಣ,ಹಣ,

      ಪರಿಸರ ಚೆನ್ನಾಗಿ ಇದ್ದರೆ ಸಮಾಜ ಚೆನ್ನಾಗಿ ಇರುತ್ತದೆ.
      ನಿಮ್ಮ ಅಭಿಪ್ರಾಯದಲ್ಲಿ ಗುರು ಹೇಗೆ ಇದ್ದರೆ ಚಿಂತೆ ಇಲ್ಲ ಅವರು ಮಕ್ಕಳು ಮಾತ್ರ ಸುಸಂಸ್ಕೃತ ರಾಗಿ ಇರಬೇಕು
      ಹೇಗೆ ಸಾಧ್ಯ.?.

      ಬಿಂಬ ದಂತೆ ಪ್ರತಿ ಬಿಂಬ

      ಅದಕ್ಕೆ ಸ್ವಾಮಿ ಬಾರ್ ಕ್ಲಬ್ ಮಾದಕ ದ್ರವ್ಯ ಮನೆಒಡೆಯುವ ಧಾರಾವಾಹಿ ಇತ್ಯಾದಿ.
      ಈಗಿನ ಕಾಲದಲ್ಲಿ ಓದು ಸಂಪಾದನೆ
    • Vadiraj V Kulkarni Ramesh H G
      ಮೊದಲನೆಯದು ನಿಮ್ಮ ಕಾಮೆಂಟ್ ಇಲ್ಲಿ ಕೇಳಿದ ಪ್ರಶ್ನೆಗೆ ಸಂಬಂಧಿಸಿದ್ದು ಅಲ್ಲ,
      ಹಾಗೂ ಎಲ್ಲರೂ ಇದೆ ಪ್ರಶ್ನೆ ಕೇಳುತ್ತಾರೆ ಆಚಾರ್ಯರು ಪಂಡಿತರು ಹೇಳುತ್ತಾರೆ ಆದರೆ ಅವರೇ ಅನುಷ್ಠಾನ ಮಾಡುವುದಿಲ್ಲ ಅಂತ, ಯಾಕೆ ಇದು ನಮ್ಮಿಂದ ಶುರು ಆಗಬಾರದು, ಅನುಷ್ಠಾನ ಅವರು ಮಾಡಲಿಲ್ಲ ಸರಿ ಆದರೆ ಅನುಷ್ಠಾನದ ಹಾದಿಯನ್ನು ಖಂಡಿತ ಹೇಳಿ ಕೊಡುತ್ತಾರೆ, ನಮ್ಮ ಶ್ರದ್ಧೆ ಭಕ್ತಿಗೆ ತಕ್ಕಂತೆ ನಾವು ಅನುಷ್ಠಾನ ಮಾಡಬಹುದಲ್ಲವೇ
      3
  • Anand Rao ಮಠದಲ್ಲಿ ಹಸ್ತೋದಕ ಎಂದರೆ ಬೃಂದಾವನಸ್ಥ ಯತಿಗಳಿಗೆ ಭಿಕ್ಷೆ ಮಾಡಿಸುವುದು ಎಂದು ಅರ್ಥ. ಆ ಭಿಕ್ಷೆ ನೀವು ತನು, ಮನ, ಧನದಲ್ಲಿ ಯಾವುದಾದರೂ ಯತಿಗಳ ಉಪಯೋಗಕ್ಕೆ ಬರುವಂತಹ ಭಿಕ್ಷೆ ಕೊಡತಕ್ಕದ್ದು
    3
  • ಜೀವೊತ್ತಮ ದಾಸ ಹಸ್ತೋದಕ ಎನ್ನುವುದು ಯತಿಗಳ ಪೂಜಾ ಕೈಂಕರ್ಯದಲ್ಲಿ ಒಂದು .....
    ಯತಿಯಲ್ಲಿ ತಾನು ವಿಶೇಷವಾಗಿ ಸನ್ನಿಹಿತ ಅಗಿ‌ಇರುತ್ತೆನೆ ಎಂದು ಭಗವತ್ ಗೀತೆಯಲ್ಲಿ ಹೇಳಿದ್ದನ್ನು ನಾವು ಕಾಣಬಹುದು....
    ಯಾವುದೇ ಮಠದಲ್ಲಿ ಸುಮ್ಮನೆ ತೀರ್ಥಪ್ರಸಾದ ತೆಗೆದುಕೊಳ್ಳಬಾರದು ಹಾಗೇ ಯತಿಗಳು ಇರುವ ಸ್ಥಳಕ್ಕೆ ಬರಿಗೈಲ್ಲಿ ಹೊಗಲುಬಾರದು ಹಾ
    ಗೆ ಯತಿಗಳಿಗೆ ನೀವೇದಿಸಲು ಬೇಕಾದ ಅನ್ನವನ್ನು ನಾವು ಮನೆಯಲ್ಲಿ ಮಾಡಿ ಸೇವೆ ಮಾಡುವ ಪರಿಸ್ಥಿತಿಯಲ್ಲಿ ನಾವು ಇಲ್ಲ ...ಇದಕ್ಕೆಲ್ಲದಕ್ಕೂ ಪರಿಹಾರವಾಗಿ ಮಠಗಳಲ್ಲಿ ಹಸ್ತೋದಕ ಹಾಕಿ ಮಾನಸಿಕವಾಗಿ ಪ್ರಾರ್ಥನೆ ಮಾಡುವ ಕ್ರಮ ಹಸ್ತೋದಕ ಹಾಕುವುದು...ಇ ವಿಚಾರ ಮಾದ್ಯಮದಲ್ಲಿ ಚರ್ಚೆಸುವುದಕ್ಕಿಂತ ಉತ್ತಮ ಪಂಡಿತರ ಬಳಿ‌ಕೇಳಿ ತಿಳಿಯುವುದೇ ಉತ್ತಮ
    2
    • Ramesh H G ಜೀವೊತ್ತಮ ದಾಸ ಭಗವಂತ ಹಲವರಿಗೆ ಸಕಲವೂ ಕೊಟ್ಟಿರುತ್ತಾನೆ.
      ಅದರೆ ಶುಭಾ ಅಶುಭ ಕಾರ್ಯಕ್ರಮ ಮನೆಯಲ್ಲಿ ಮಾಡುವ ಮನಸ್ಥಿತಿ ಇಲ್ಲದಿರುವುದು ವಿಷಾದನೀಯ ಸಂಗತಿ.
      ನನಗೆ ಹೆಚ್ಚಿನ ಜ್ಞಾನ ಇಲ್ಲದಿದ್ದರೂ ನಮ್ಮ ಕುಟುಂಬದವರು ಮನೆಯಲ್ಲೇ ಮಾಡುತ್ತೇವೆ ಖರ್ಚು ಮಾಡಿದರು

      ಬ್ರಾಹ್ಮಣರಿಗೂ ಬಂಧುಬಳಗಕ್ಕೆ ತೃಪ್ತಿ ಸಿಗುತ್ತದೆ.

      ಅದೇ ಅಪ್ಪಿ, ತಪ್ಪಿ, ಬೇರೆ ಕಡೆ ಮಾಡಿದರೆ ಮನೆಯಲ್ಲಿ ನೆಡೆಯುವಷ್ಟು ಮಾಡಿ ಮೈಲಿಗೆ ಅಡಿಗೆ ಇತ್ಯಾದಿ ತೃಪ್ತಿ ಸಿಗುವುದಿಲ್ಲ.
      • Like
      • 2d
    • ಜೀವೊತ್ತಮ ದಾಸ Ramesh H G ನೋಡಿ ಸರ್ ನನ್ನ ಮನೆಯಲ್ಲಿ ಇಂದಿಗೂ ಶ್ರಾದ್ಧ ಮನೆಯಲ್ಲೆ ಹೊರತು ಮಠಕ್ಕೆ ಹೋಗುವುದಿಲ್ಲ ಕಾರಣ ಎರಡು ರೀತಿಯ ಮಠಗಳನ್ನು ನಾವು ನೋಡಿದ್ದೆವೆ...ಮಡಿ ಮೈಲಿಗೆ ಕಟ್ಟು ನಿಟ್ಟಿನಿಂದ ಪಾಕಿಸುವ ಮಠ ಹಾಗೂ ಹಧ ವಸೂಲಿ ಮಾಡಿ ನಿಯಮಗಳನ್ನು ಗಾಳಿಗೆ ತೂರುವ ಮಠ...ಮೊನ್ನೆ ಬೆಂಗಳೂರಿ ಒಂದು ಮಠಕ್ಕೆ ದ್ವಾದಶಿ ನಿಮಿತ್ತ ತೀರ್ಥಪ್ರಸಾದ ಬರೆಸಲು ಹೋಗಿದ್ವೀ ಮಠದವರು ಹೊರ ಊರಿನಿಂದ ಬರುವವರಿಗೆ ಎಲೆ ಹಾಕುವುದಿಲ್ಲ ಅಂಥ ಒಂದೇ ಮಾತಿನಲ್ಲಿ ಮುಗಿಸಿದ್ರು....ದ್ವಾದಶಿ ದಿನ ಪಾರಣೆ ಸುಸಮಕ್ಕೆ ಆಗಬೇಕು ಅ ಮಠ ಇಲ್ಲ ಅಂದರೆ ಇನ್ನೊಂದು ಮಠ ಆದರೆ ಇಲ್ಲಿ ವಿಚಾರ ಬೇರೆ ಯಾರೋ ಒಬ್ವರು ಮಾಡಿದ್ರು ಅಂಥ ಎಲ್ಲ ಮಠಗಳನ್ನು ತೆಗೆಳುವುದು ಬೇಡ.....
      ಮನೆಯಲ್ಲಿ ವ್ಯವಸ್ಥೆ ಇರುವವರು ಮನೆಯಲ್ಲಿ ..ವ್ಯವಸ್ಥೆ ಇಲ್ಲದವರು ಮಠದಲ್ಲಿ ಸೇವೆ ಮಾಡಿ....ಕೃಷ್ಣಾರ್ಪಣ ಹೇಳುವುದು ಉತ್ತಮ ಆದರೆ ಮಠದಲ್ಲಿ ಸ್ಥಿತಿ ಗತಿಗಳು ಬದಲಾಗಬೇಕು ಅದರ ಬಗ್ಗೆ ಪ್ರತಿಯೊಂದು ಮಠದ ಶ್ರೀ ಪಾದರು ಗಮನ ಕೊಡಬೇಕು.... ವಿನಯವೇ ಇಲ್ಲದೆ ವ್ಯಕ್ತಿಗಳು ವಿದ್ಯೆ ಕಲಿತಿರಲು ಸಾದ್ಯವೇ
      1
    • Ramesh H G ಜೀವೊತ್ತಮ ದಾಸ ಮಠಗಳ ಮೂಲ ಸಂಸ್ಥಾನದಲ್ಲಿ ಬಿಟ್ಟರೆ ಉಳಿದ ಕಡೆ, ಭಾಗಶಃ ವ್ಯಾಪಾರ ಕೇಂದ್ರ. ಅಡಿಗೆ ಮಾಡುವರು ಅಡಿಗೆ ಶಾಲೆಗೆ ಹೋಗಬಾರದು.

      ನನಗೆ ಹೆಚ್ಚಿನ ಜ್ಞಾನ ಇಲ್ಲದಿದ್ದರೂ ಸಹಾ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕ ಜೀವನ ನಡೆಸಲು ಇಚ್ಚಿಸುತ್ತೇನೆ.
      2
    • ಜೀವೊತ್ತಮ ದಾಸ Ramesh H G ಕೆಲವು ವಿಚಾರಗಳು ನೋಡಿ ನಾವು ದೂರದಿಂದಲೇ ನಮಸ್ಕಾರ ಮಾಡಿಬಿಟ್ಟಿದ್ದೆವೆ‌‌..‌.ಮಠದ ರಾಜಕೀಯ ವಿಚಾರದಿಂದ ಮಠದ ವಿಚಾರದಿಂದ ದೂರ ಇರುವುದೇ ಉತ್ತಮ
  • 1
  • Venkatesh Kulkarni ದೇವಸ್ಥಾನದ ಕೆಲವು ಪದ್ಧತಿಗಳನ್ನು ಹಾಗೂ ಸಂಭಂದಪಟ್ಟ ಧರ್ಮ ಕಾರ್ಯಗಳನ್ನು ಅಲ್ಲಿಯೇ ಕೇಳಿ ತಿಳಿದುಕೊಳ್ಳುವುದು ಉತ್ತಮ. ಇಂಥವುಗಳನ್ನು ಸಾರ್ವಜನಿಕವಾಗಿ media ದಲ್ಲಿ ಕೇಳುವದು ಸರಿಯಲ್ಲ.
    8
    • Mohan Prasad Venkatesh Kulkarni Vichara vinimaya madikolluvudaralli tappenilla! Allade_____ __{_bahuteka Dharmika kendragalu} indina paristhithiyalli daari tappive mattu vyavaharika mano dharmavanne hondive endu vishada dinda oppikollale bekaguttade!
      2
  • Mohan Prasad Nanna abhiprayadalli Hastodaka andare Devarige namage ashirvadisada, mattu, anugrahisida soulabhyagalige naavuv krutagnyata poorvakavagi samarpisida vandane galu. ! Adakke navu prasada sweekarisuva, (ootakke) munche pravara poorvaka vaagi samarpane!
    2
    • Like
    • 1d
  • Raghu Raghu ಹಸ್ತೋದಕ ಎಂದರೆ ಯತಿಗಳಿಗೆ ಊಟ ಹಾಕುವುದು
    3
  • Raghu Raghu ಗೃಹಸ್ಥರು ಹಸ್ತೋದಕ ಮಾಡದೇ ಊಟ ಮಾಡಬಾರದು
  • Raghavendra Krishnacharya Katti Yaaru Yatigalige Oota hakabeku antirtaro avaru kanike sallisi seve madabahudu. Madidare Punya, Illavadalli Yeno Illa. Madalebekemba Kaddaya niyamadinda Yava Mathadalliyoo keluvadilla, idannu yellaroo chennagi artha madikollabekada vishayavagide,
  • Susheela S Upadhyaya ಯತಿಗಳಿಗೆ ನಮ್ಮ ಯತಾನುಶಕ್ತಿ ಹಸ್ತೋದಕ ಕೊಡುವುದು ಅಂತ ನನ್ನ ಅನಸಿಕೆ ತಪ್ಪಿದ್ದರೆ ತಿಳಿಸಿ ನನಗು ತಿಳಿಯಬೇಕು ಎಂದು ಆಸೆ
    2
  • Raghu Raghu ನಮ್ಮ ಮನೆಗೆ ಯತಿಗಳನ್ನು ಕರೆಸಿ ಭಿಕ್ಷೆ ಹಾಕಿಸಲು ಬಹಳ ಹಣ ವ್ಯಯಿಸಬೇಕಾಗುತ್ತದೆ ಆದ್ದರಿಂದ ಮಠದಲ್ಲಿ ಯತಿಗಳ ಬೃಂದಾವನಕ್ಕೆ ನಿತ್ಯ ಹಸ್ತೋದಕವಾಗುತ್ತದೆ ಹೀಗೆ ಹಸ್ತೋದಕ ಮಾಡುವ ಸಮಯದಲ್ಲಿ ಯಾರಾದರೂ ತಮ್ಮ ಶಕ್ತ್ಯಾನುಸಾರ ದಕ್ಷಿಣೆಯನ್ನು ಗುರುಗಳಿಗೆ ಊಟಕ್ಕಾಗಿ ಎಂದು ನೀಡುವುದೇ ಹಸ್ತೋದಕ
  • Harish Ramaprasad ಎಲ್ಲಾ ಬ್ರಾಹ್ಮಣರು ಮಾಡುವ ಪದ್ಧತಿ ಇದು. ಮನೆಗೆ ಬಂದ ಬ್ರಾಹ್ಮಣರು ದೇವರ ಸ್ವರೂಪ ಅವರಿಗೆ, ಊಟಕ್ಕೆ ಕೂತಾಗ, ಯಜಮಾನ ದಕ್ಷಿಣೆ ಕೊಟ್ಟು ಭಕ್ತಿ ತೋರುವ ಪದ್ಧತಿ ಇದು. ತದನಂತರ ಕೃಷ್ಣಾರ್ಪಣ ಹೇಳಿ, ಅವರನ್ನು ಊಟಕ್ಕೆ ಕೂಡಿಸಿ, ನಂತರ ತಮ್ಮ ಊಟ. ಇನ್ನು ನಮ್ಮ ಮಠಗಳಲ್ಲಿ, ಸೇವಾಕರ್ತರು, ಅಲ್ಲಿ ಸನ್ನಿಧಾನವಿರುವ ಯತಿಗಳು, ಅವರ ಪರಂಪರೆಯನ್ನು ನೆನೆದು ಭಕ್ತಿಯಿಂದ ಕೊಡುವ ಕಾಣಿಕೆ ಇದು.
    9
  • Raghavendra Joshi ನಮ್ಮ ಮನೆಗೆ ಯತಿಗಳನ್ನು ಕರೆಸಿ ಭಿಕ್ಷೆ ಹಾಕಿಸಲು ಬಹಳ ಹಣ ವ್ಯಯಿಸಬೇಕಾಗುತ್ತದೆ ಆದ್ದರಿಂದ ಮಠದಲ್ಲಿ ಯತಿಗಳ ಬೃಂದಾವನಕ್ಕೆ ನಿತ್ಯ ಹಸ್ತೋದಕವಾಗುತ್ತದೆ ಹೀಗೆ ಹಸ್ತೋದಕ ಮಾಡುವ ಸಮಯದಲ್ಲಿ ಯಾರಾದರೂ ತಮ್ಮ ಶಕ್ತ್ಯಾನುಸಾರ ದಕ್ಷಿಣೆಯನ್ನು ಗುರುಗಳಿಗೆ ಊಟಕ್ಕಾಗಿ ಎಂದು ನೀಡುವುದೇ ಹಸ್ತೋದಕ
    6
  • Vijaya Lakshmi Agrahara ಹಸ್ತೋದಕ
    ಹಸ್ತ=ಕೈ ,ಉದಕ=ನೀರು
    ಬ್ರಾಹ್ಮಣ ಮುತ್ತೈದೆಯರನ್ನು ಊಟಕ್ಕೆ ಕೂರಿಸಿ ಬಾಳೆ ಎಲೆಗೆ ಅಬಿಗಾರ ಮಾಡಿ ಪಾಂಗಿತವಾಗಿ ಮಾಡಿದ ಅಡಿಗೆ ಕ್ರಮವಾಗಿ ಬಡಿಸಿ,ನಂತರ ಬ್ರಾಹ್ಮಣರು ಪರಿಶಂಚನೆ ಮಾಡಿದ ಮೇಲೆ ಬ್ರಾಹ್ಮಣ ಮತ್ತು ಮುತ್ತೈದೆಯರಿಗೆ ಅಥಿತೇಯ ಒಂದು ಉದ್ದರಣೆ ನೀರನ್ನು ಊಟಕ್ಕೆ ಕುಳಿತವರ ಬಲ ಕೈಗೆ ಹಾಕುವುದ
    ಕ್ಕೆ ಹಸ್ತೋದಕ ಎನ್ನುವರು.ನಂತರ ಪಂಕ್ತಿ ಮಧ್ಯೆ ಉತ್ತರಾಭಿ ಮುಖವಾಗಿ ನಿಂತು ಒಂದು ಉದ್ಧರಣೆ ನೀರು ನೆಲದ ಮೇಲೆ ಉದ್ದಕ್ಕೆ ಶ್ರೀ ಕೃಷ್ಣಾರ್ಪಣಮಸ್ತು ಎಂದು ಹಾಕುವರು.ನಂತರ ಬ್ರಾಹ್ಮಣ ಮುತ್ತೈದೆಯರು ಹಸ್ತಕ್ಕೆ ಹಾಕಿದ ನೀರನ್ನು ಸೇವಿಸಿ ಪಾಯಸ ತಿನ್ನುವ ಮೂಲಕ ಊಟ ಪ್ರಾರಂಭಿಸುವರು.
    ಊಟ ಶುರು ಮಾಡುವ ಮುಂಚೆ ಸ್ವಲ್ಪ ಮಾತ್ರ ನೀರು ಕುಡಿಯುವುದು ಊಟ ಮಡಿದರೆ ನೆತ್ತಿ ಹತ್ತುವುದು ಹಾಗಾಗದಿರಲು ಒಳಿತು.
    ಅಲ್ಲದೆ ಬ್ರಾಹ್ಮಣರ ಮನೆಯಲ್ಲಿ ಊಟಕ್ಕೂ ಒಂದು ಕ್ರಮ ಇದೆ .ಎಲ್ಲವೂ ಬಡಿಸಿದ್ದು ಆಯಿತು.ಊಟ ಸ್ವೀಕರಿಸ ಬಹುದು ಎಂದು ಗೌರವದಿಂದ ವಿನಂತಿಸುವ ಒಂದು ಬಗೆ ಅಥವಾ ಕ್ರಮವೂ ಆಗುವುದು.ಇದರಿಂದ ಪುಣ್ಯ ಲಭಿಸುವುದು ಎಂದು.
    • Raghavendra Venugopal Vijaya Lakshmi Agrahara very interesting and inspiring details
      1
    • Janardana Bhat Vijaya Lakshmi Agrahara ನನಗನಿಸುವಂತೆ ಇದೇ ಸರಿಯಾದ ವಿವರಣೆ. ನಾನು ಉಡುಪಿ ಜಿಲ್ಲೆಯ ತುಳು ಮಾತೃಭಾಷೆ ಯ ಮಾಧ್ವ ಬ್ರಾಹ್ಮಣ. ನಮ್ಮ ಊರಿನಲ್ಲಿ ಹಸ್ತೋದಕ ಅಂದರೆ ಇದೇ. ಮುಖ್ಯ ಬ್ರಾಹ್ಮಣರ ಪಂಕ್ತಿಗೆ (ಅದರಲ್ಲೂ ಪುರೋಹಿತರು ಮತ್ತು ಹತ್ತಿರದಲ್ಲಿರುವ ಹತ್ತು ಹದಿನೈದು ಬ್ರಾಹ್ಮಣರ ಕೈಗೆ) ಮತ್ತು ಊಟಕ್ಕೆ ಕುಳಿತಿರುವ ನಾಲ್ಕು ಸುಮಂಗಲಿಯರ ಕೈಗೆ ಯಜಮಾನರು ಹಸ್ತೋದಕ ಕೊಟ್ಟ ನಂತರ ಗೋವಿಂದ ಹೇಳಿದರೆ ಎಲ್ಲರೂ ಒಟ್ಟಾಗಿ ಅದನ್ನು ಕುಡಿದು ಊಟ ಪ್ರಾರಂಭಿಸುತ್ತಾರೆ.
      ಹಸ್ತೋದಕ ಎಲ್ಲರಿಗೂ ಕೊಡಲು ಸಾಧ್ಯವಾಗದ ಕಾರಣ ಪ್ರಾತಿನಿಧಿಕವಾಗಿ ಕೆಲವರಿಗೆ ಕೊಡುವುದು. ಉಳಿದವರು ಕೂಡ ಪರಿಷಿಂಚನೆ ಮಾಡಿ ಕೈಯಲ್ಲಿ ನೀರನ್ನು ತೀರ್ಥದಂತೆ ಹಿಡಿದುಕೊಂಡು ಕಾದಿರುತ್ತಾರೆ. ತಮ್ಮ ಕೈಗೆ ಹಸ್ತೋದಕದ ನೀರು ಕೊಡಲಿ ಕೊಡದಿರಲಿ ಎಲ್ಲರೂ ಒಟ್ಟಿಗೆ ಗೋವಿಂದ ಹೇಳಿದ ಮೇಲೆ. ಸ್ವೀಕರಿಸುವುದು.
      1
    • Harish Ramaprasad ನಮ್ಮಲ್ಲಿ ಹಸ್ತೋದಕವನ್ನು ಆಪೋಶನ ಮಾಡುವುದಿಲ್ಲ, ತೀರ್ಥವನ್ನು. ಹಸ್ತೋದಕವನ್ನು ಅವರು ಬಲಕ್ಕೆ ವಿಸರ್ಜಿಸುತ್ತಾರೆ.
  • Raghavendra Kulkarni Hastah + oodakh ಕೈ ನಿ ರು. Devarige naivedya madidamele , gurgalige hastodaka. Idu grahastaru maduva kartavvy. This is my understanding, others have also said it. There could be deeper significance, only learned man can clarify. Thetefore , it is not wrong to ask, in fact better so that we can get meaning of words commonly use or hear somebody using, and we wonder. Once we were struck during lunch time, and saw a matha, elderly lady of our group said"ಕೇಳಿ ,ಅಲ್ಲಿ ಹಸ್ತೂೕದಕ ಸಿಗಬಹುದು"
    Young age, living in big city, I did not get it. I feel in public forum sarcasm is double edged sword. Otherwise, hastodak andare Kavala ಕವಳ annabahude!
    1
  • Prashanth Malur Eega adu mathadalli free yaagi, tamma aarthika kashtadindaagi oota maaduttare, adakke seruttade.
  • Raghavendra Rao Chilakaladona ಮೊದಲು ಹಸ್ತೋದಕ ಅಂದರೆ..ಯತಿ ಭಿಕ್ಷಾ.. ಅಂದರೆ ಯತಿಗಳಿಗೆ ಊಟ ಮಾಡಿಸಿವುದು ಎಂದು ಅದರ ಅರ್ಥ..ಒಂದು ದಿವಸ ರಾಯರಿಗೆ ಹಸ್ತೋದಕ ಮಾಡಿದರೆ ಅದು ಒಂದು ಲಕ್ಷ ಮಂದಿ ಬ್ರಾಹ್ಮಣರಿಗೆ ಊಟ ಮಾಡಿಸಿದ್ದಕ್ಕೆ ಸಮ..ಅಂದರೆ ನೀವು ಹಾಕಿದ ಹಸ್ತೋದಕ ರೋಕ್ಕ್ ಎಷ್ಟೇ ಇರಬಹುದು ಆದರೆ ಒಂದು ಲಕ್ಷ ಬ್ರಾಹ್ಮಣರಿಗೆ ಊಟ ಮಾಡಿಸಿದ ಫಲ ನಿಮಗೆ ತುಂಬಾ easy ಆಗಿ ಸಿಕ್ಕಿದಂತಾಯುತು..This is an golden opertunity.
    5
  • Uma Krishnamurthy Here is a detailed explanation of the same by Vishnudasa Nagendraachar
    http://vishwanandini.com/fullprashnottara.php...
    हस्तोदकद कुरित चर्चॆ
    VISHWANANDINI.COM
    हस्तोदकद कुरित चर्चॆ
    हस्तोदकद कुरित चर्चॆ

    2
  • Vijay Bharadwaj ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನನಗೆ ಉತ್ತರ ಸಿಕ್ಕಿದೆ ಹಾಗಾಗಿ ಈ ಪೋಸ್ಟನ್ನು ಇಲ್ಲಿಗೆ ಮುಕ್ತಾಯಗೊಳಿಸುವೆ Yogendra Ramanathapura
  • Janardana Bhat Vijaya Lakshmi Agrahara ಅವರು ನೀಡಿರುವ ವಿವರಣೆ ನಮ್ಮಲ್ಲಿಯ ಕ್ರಮಕ್ಕೆ ಸರಿಯಾಗಿದೆ. ಹಣದ ಪ್ರಶ್ನೆಯೆ ಇಲ್ಲ ಇಲ್ಲಿ. ನಾನು ಉಡುಪಿ ಜಿಲ್ಲೆಯ ತುಳು ಮಾತೃಭಾಷೆ ಯ ಮಾಧ್ವ ಬ್ರಾಹ್ಮಣ. ನಮ್ಮ ಊರಿನಲ್ಲಿ ಹಸ್ತೋದಕ ಅಂದರೆ ಇದೇ. ಬ್ರಾಹ್ಮಣರ ಎಲ್ಲ ಸಾಮೂಹಿಕ ಊಟಗಳಲ್ಲೂ ಹಸ್ತೋದಕ ಇರುತ್ತದೆ.
    ಮುಖ್ಯ ಬ್ರಾಹ್ಮಣರ ಪ
    ಂಕ್ತಿಗೆ (ಅದರಲ್ಲೂ ಪುರೋಹಿತರು ಮತ್ತು ಹತ್ತಿರದಲ್ಲಿರುವ ಹತ್ತು ಹದಿನೈದು ಬ್ರಾಹ್ಮಣರ ಕೈಗೆ) ಮತ್ತು ಊಟಕ್ಕೆ ಕುಳಿತಿರುವ ನಾಲ್ಕು ಸುಮಂಗಲಿಯರ ಕೈಗೆ ಯಜಮಾನರು ಹಸ್ತೋದಕ ಕೊಟ್ಟ ನಂತರ ಗೋವಿಂದ ಹೇಳಿದರೆ ಎಲ್ಲರೂ ಒಟ್ಟಾಗಿ ಅದನ್ನು ಕುಡಿದು ಊಟ ಪ್ರಾರಂಭಿಸುತ್ತಾರೆ.
    ಹಸ್ತೋದಕ ಎಲ್ಲರಿಗೂ ಕೊಡಲು ಸಾಧ್ಯವಾಗದ ಕಾರಣ ಪ್ರಾತಿನಿಧಿಕವಾಗಿ ಕೆಲವರಿಗೆ ಕೊಡುವುದು. ಉಳಿದವರು ಕೂಡ ಪರಿಷಿಂಚನೆ ಮಾಡಿ ಕೈಯಲ್ಲಿ ನೀರನ್ನು ತೀರ್ಥದಂತೆ ಹಿಡಿದುಕೊಂಡು ಕಾದಿರುತ್ತಾರೆ. ತಮ್ಮ ಕೈಗೆ ಹಸ್ತೋದಕದ ನೀರು ಕೊಡಲಿ ಕೊಡದಿರಲಿ ಎಲ್ಲರೂ ಒಟ್ಟಿಗೆ ಗೋವಿಂದ ಹೇಳಿದ ಮೇಲೆ. ಸ್ವೀಕರಿಸುವುದು.

No comments:

Post a Comment