Parashurama Jayanti vaishaka shukla triteeya
The great Parashuram, who is known to be the sixth incarnation of Lord Vishnu, was born to a Bramhin saptarishi sage Jamadagni and his wife Renuka. Born in the Treta-yuga, he is one of the seven immortals known in Hinduism. Even though he was a Bramhin by birth, he possessed the aggression and courage of a Kshatriya, this got him the name of 'Brahma-Kshatriya’.
He was extremely skilled in methods of warfare, so much so that he solely killed all the corrupt warriors on earth for 21 times. The Story Behind Parashurama Beheading His Mother The legends state that Parashuram went on killing every single Kshatriya that came in his way till there were none left.
This caused him to be shunned by the rest of the Bramhins, for he had violated the norms of lifestyle for sages and was tainted by the murders. Many such unknown facts about Parashuram still lay hidden in the legends of the Hindu mythology. Read further to know more of these little known facts about Parashuram.
Birthplace Of Lord Parashuram
The birthplace of the great Lord Parashuram is said to be Renuka tirth. It has also been mentioned that his lineage took place in the modern day Maheshwar. His father, rishi Jamadagni, was a direct descendent of Lord Bramha.
Was Named Rambhadra At Birth
Before his birth, both his parents meditated for the blessings of Lord Shiva. This led them to have the sixth incarnation of Lord Vishnu as their fifth son, whom they named 'Rambhadra' at birth. He performed a hard penance and pleased Lord Shiva. Lord Shiva gave him a divine axe. An axe is known as Farsha or Parsha in Hindi. Hence, he was named as Parshuram.
His Celestial Weapon
Even at a very young age Parashuram bore great interest in weapons. He went through a severe penance to please Lord Shiva, who finally granted him with a boon of a celestial axe. However, this only happened after he proved himself worthy of it, for which Lord Shiva himself became his spiritual master. After receiving this celestial weapon, he came to be known as 'Parashuram'.
Battle Between His Master And Him
The great Lord Shiva challenged Parashuram to test his warfare skills. A fierce battle took place between the master and disciple that lasted for 21 days.
Lord Shiva Pleased With Parashuram's Warfare Skills During the battle, while avoiding the trident of the great Lord, Parashuram attacking Lord Shiva struck him with his axe on his forehead. Seeing this Lord Shiva was extremely pleased, as his disciple had mastered the art of warfare. He embraced the wound and preserved it to assure his disciple's reputation eternally and came to be known as 'Khand-Parashu' since then.
Parashuram's Story Of Being An Obedient Son
Lord Parashuram's mother, Renuka, was an extremely devoted wife, so much so that the power of her faith allowed her to fetch water in an unbaked clay. Sadly, one day while filling up the pot, she saw a gandharva's chariot passing from the sky and just for a moment she was filled with desire. As a result, the pot melted away in the river. Her husband on becoming aware of this, through his yogic powers, in rage asked his sons to kill her with an axe. None except Lord Parashuram did the task. He beheaded his mother and the four brothers, as asked by his father. Later, his father asked him for two boons and thus he asked for the lives of his mother and brothers back, which was granted to him by his father.
Parshuram Was Born Upon The Request Of Earth
The Puranas say that once when the sin and atrocities increased on the Earth, she approached Lord Vishnu for help. Lord Vishnu promised her that he would take birth as a human being and save her from the atrocities of the sinners. As a result he took birth as Parshuram. Parshuram killed the demons and saved the mother Earth.
He Killed The Demons Twenty One Times
It is believed that Kartaveerya Arjuna, who was also known as Sahastrabahu had a hundred sons. They had killed the sons of the father of Parshuram. Its is said that his mother beat her head twenty one times when she heard the news of his death. This enraged him so much that he went about killing all the demons on Earth. He therefore, cleared the Earth of demons twenty one times.
Went To Live On The Mount Mahendragiri
After he killed the demons twenty one times and had become the lord of it, sage Kashyap had to come before him and as an attempt to stop him, he asked him to give the Earth away as a donation to him. This way, Lord Parshuram gave away the Earth as a donation and went to live on the Mount Mahendragiri. It is believed that he still comes to save his devotees from the miseries and problems upon their calls. It is also said that he might come to the earth during the day time, but stays there the whole night.
Is One Of The 'Ashta Chiranjeevi'
There are eight warriors who are believed to have the blessing of immortality. These eight are collectively known as the Ashta Chiranjeevi. Parshuram had the blessing of immortality from his father, sage Jamdagni. Thus the brave warrior sage, continues to protect his devotees until today and forever.
*******
About Parshuram Jayanti:
Parshuram Jayanti is celebrated on Tritiya of Shukla Paksha, meaning the third day of Shukla Paksha. Lord Parshuram was born on Vaishakh Shukla Tritiya. Hence, this day is celebrated as Parshuram Jayanti. Parshuram is the sixth incarnation of Lord Vishnu. He was born to King Prasenjit’s daughter Renuka and Sage Jamdagni of Bhrigu dynasty. Parshuram was the fifth son of Jamdagni and Renuka. He had four elder brothers named Rumanvant, Sushen, Vishwa and Vishwavasu.
Parshuram was devoted to Lord Shiva. He had immense knowledge. He was a great warrior. Parshuram Jayanti is celebrated all over India with a lot of zeal and excitement. A Parshuram Shobha Yatra is organized on this day along with Havans, Pujas, and Bhandaras. Originally, his was named Ram. Because of the mystical weapon Parshu which as given to him by Lord Shiva, she was known as Parshuram. According to beliefs, he defeated Kshatriyas. He was born to free the world of Kshatriyas’ pride. It is believed that Tretayug began on the day of Vaishakh Shukla Paksha Tritiya. According to Bhagwat, Parshuram was born to destroy the kings of Haideya dynasty. He wanted to live for the benefit of mankind. Parshuram always helped the needy people took.
Significance of Parashuram Jayanti:
Dating back to the Dvapara Yug, he was a Brahmin warrior who was a great disciple of Lord Shiva. Parashuram had the legendary axe Parashu He was the mentor of Mahabharata characters Dronacharya, Bhishma and Karna. According to a legend, Lord Vishnu in his Parshuram Avatar ended the treachery of the Kshatriya race and defeated demon king Kiratarjuna. He restored peace and Dharma on earth. The day of Parashuram Jayanti holds special religious significance. Devotees fast throughout the day and offer worship to Lord Vishnu to seek his blessings.
Legend:
There are two popular stories about Lord Parshuram’s birth. According to Hari Vansh Purana, in ancient times Mahishmati Nagri was ruled by King Kartaveerya Arjun (Sahastra Bahu) of Haiheya dynasty. He was a cruel king. Goddess Earth went to Lord Vishnu as she was disturbed by the cruelties of Kshatriyas. She asked for his help. Lord Vishnu promised her that he would be born as a son to Jamdagni and destroy the kingdom of Kshatriyas. Lord Vishnu Incarnated as Parshuram and defeated the kings.
Parshuram killed Kartraveerya Arjun and freed the Earth of Kshatriyas 21 times. He filled five ponds with their blood in Samantpanchak district. Saint Trichik asked Parshuram to stop doing this. Hence, he gifted the Earth to Sage Kashyap and went to Mahendra Parvat.
Celebrations and Rituals:
Devotees keep fast from the night before to the day of Parshuram Jayanti. They visit temples and Offer prayers to Lord Vishnu. Devotees stay awake at night and recite Vishnu Sahasranama Stotra. Donating food to Brahmans Is consider very auspicious on this day. Observing fasts and other religious works have been the trademarks of this day for centuries. Any auspicious work done on this day gives fruitful results. The day is considered very auspicious.
Other Important Notes:
Other Names: Bhargava rama, Ramabhadra
Affiliation: Sixth avatar of Vishnu, Considered as one of God
Abode: Mahendragiri, Odisha
Weapon: Axe
Consort: Dharini, also known as Anamika
Parents: Jamadagni (father), Renuka (mother)
****
Parashurama - by Narahari Sumadhwa
ಶ್ರೀ ಪರಶುರಾಮ ದೇವರ ಅವತಾರ ಆಗಿದ್ದು
ವೈಶಾಖ ಶುದ್ಧ ತೃತೀಯ ಅಕ್ಷಯ ತೃತೀಯ ದಿನದಂದು
ಅಂಗಾರವರ್ಣಮಭಿತೋಂಡಬಹಿ:
ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಮ್ |
ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿ
ರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||
(ಇತಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯಕೃತ ತಂತ್ರಸಾರಸಂಗ್ರಹಸ್ಠ ಪರಶುರಾಮ ಧ್ಯಾನಮ್)
अंगारवर्णमभितोंडबहि: प्रभाभिर्व्याप्तं परश्वधधनुर्धरमेकवीरम् ।
ध्यायेदजेशपुरुहूतमुखैस्तुवद्भि रावीतमात्मपदवीं प्रतिपादयंतम् ॥
(इति श्रीमदानंदतीर्थ भगवत्पादाचार्यकृत
तंत्रसारसंग्रहस्ठ परशुरामध्यानम्)
ಕ್ಷತ್ರ ಕ್ಷಯಾಯ ವಿಧಿನೋಪಹೃತಂ ಮಹಾತ್ಮಾ
ಬ್ರಹ್ಮಧೃಗುಜ್ಜಿತಪಥಂ ನರಕಾರ್ತಿಲಿಪ್ಸು |
ಉದ್ಧಂತ್ಯಸಾವವನಿಕಂಟಕಮುಗ್ರವೀರ್ಯ
ಸ್ತ್ರಿ:ಸಪ್ತಕೃತ್ವ ಉರುಧಾರಪರಶ್ವಧೇನ ||
क्षत्र क्षयाय विधिनोपहृतं महात्मा ब्रह्मधृगुज्जितपथं नरकार्तिलिप्सु ।
उद्धंत्यसाववनिकंटकमुग्रवीर्य स्त्रि:सप्तकृत्व उरुधारपरश्वधेन ॥
kShatra kShayaaya vidhinOpahRutaM mahaatmaa
brahmadhRugujjitapathaM narakaartilipsu |
uddhaMtyasaavavanikaMTakamugravIrya
stri:saptakRutva urudhaaraparashvadhEna ||
(SrimadbhagavatE parashuraamastuti:)
ಹಡೆದಾ ತಾಯಿಯ ಶಿರವಾ ಕಡಿದ ಪರಶುರಾಮ
ಪರಮಾತ್ಮನ ದಶಾವತಾರಗಳಲ್ಲಿ ಗುರುತಿಸಲ್ಪಟ್ಟ ಶ್ರೀ ಪರಶುರಾಮ ದೇವರ ಅವತಾರ ಆಗಿದ್ದು ವೈಶಾಖ ಶುದ್ಧ ತೃತೀಯ ಅಕ್ಷಯ ತೃತೀಯ ದಿನದಂದು.
ಜಮದಗ್ನಿ ರೇಣುಕಾ ದಂಪತಿಗಳ ಮಗನಾಗಿ ಅವತರಿಸಿದ ರೂಪ ಪರಶುರಾಮ. ಪರಶುರಾಮನ ಮಡದಿಯ ಹೆಸರು ಹರಿಣಿ.
ಜಮದಗ್ನಿ ಮುನಿಗಳ ಪುತ್ರನಾಗಿ ಅವತರಿಸಿದ ಶ್ರೀಹರಿಯ ಹೆಸರು ರಾಮ. ಆದರೆ ಅವನ ಆಯುಧ ಪರಶು ಅಂದರೆ ಕೊಡಲಿ. ಯಾವಾಗಲೂ ಪರಶು ಒಂದಿಗೆ ಸುತ್ತಾಡುತ್ತಿದ್ದರಿಂದ ಅವನು ಪರಶುರಾಮ ಎಂದು ಪ್ರಸಿದ್ಧನಾದ.
ಭೃಗು ಮಹರ್ಷಿಗಳ ವಂಶದಲ್ಲಿ ಬಂದಿರುವುದರಿಂದ ಅವನನ್ನು ಭಾರ್ಗವ ರಾಮ ಎನ್ನುತ್ತಾರೆ.
ಹಡೆದಾ ತಾಯಿಯ ಶಿರವಾ ಕಡಿದ :
ಒಮ್ಮೆ ಪರಶುರಾಮನ ತಾಯಿ ರೇಣುಕಾದೇವಿ ನೀರು ತರಲು ನದಿಗೆ ಹೋಗಿದ್ದಾಗ, ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಅಲ್ಲಿ ಇರುತ್ತಾನೆ. ಒಂದು ಕ್ಷಣ ಮೈಮರೆತು ತನಗೂ ಆ ವೈಭೋಗ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಾರೆ. ಅದು ಜಮದಗ್ನಿಗಳ ದಿವ್ಯದೃಷ್ಟಿಗೆ ತಿಳಿದು ಅವರು ಕೋಪಗೊಳ್ಳುತ್ತಾರೆ. ತಮ್ಮ ಮಕ್ಕಳನ್ನು ಕರೆದು ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆದೇಶಿಸುತ್ತಾರೆ. ಮಾತೃ ಹತ್ಯೆ ಮಾಡುವುದೇ? ಅಂತಹ ಪಾಪ ಮಾಡಲಾರೆ’ ಎಂದು ಎಲ್ಲ ಮಕ್ಕಳೂ ಹೇಳಲು, ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ತನ್ನ ತಂದೆಯ ಶಕ್ತಿಯನ್ನು ಅರಿತ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತತ್‌ಕ್ಷಣ ಕೊಲ್ಲುತ್ತಾನೆ. ಜಮದಗ್ನಿಯು ಸಂತಸಗೊಂಡು, ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ. ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು. ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.ಇದರಿಂದ ಪಿತೃವಾಕ್ಯ ಪರಿಪಾಲಕನಾದ..
ಜಮದಗ್ನಿ ಮುನಿಗಳ ಕಾಮಧೇನು :
ಒಮ್ಮೆ ರಾಜ ಕಾರ್ತವೀರ್ಯಾರ್ಜುನ ತನ್ನ ಪರಿವಾರದೊಂದಿಗೆ ಜಮದಗ್ನಿ ಆಶ್ರಮಕ್ಕೆ ಬಂದಾಗ, ಮಹಾ ಋಷಿಯು ತನ್ನ ಅತಿಥಿಗಳನ್ನು ಸತ್ಕರಿಸುತ್ತಾರೆ. ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದಾಗ, ಜಮದಗ್ನಿಗಳ ಬಳಿ ಇರುವ ಕಾಮಧೇನುವೇ ಕಾರಣ ಎಂದು ತಿಳಿಯಿತು. ಕಾರ್ತವೀರ್ಯಾರ್ಜುನ ತನಗೇ ಆ ಕಾಮಧೇನುವನ್ನು ಕೊಡಲು ಕೇಳಿದಾಗ, ಜಮದಗ್ನಿಯು ಸಾಧ್ಯವಿಲ್ಲವೆನ್ನುತ್ತಾರೆ. ಆಗ ಕಾರ್ತವೀರ್ಯಾರ್ಜುನ ಕಾಮಧೇನುವನ್ನು ಕದ್ದು ಒಯ್ಯುತ್ತಾನೆ. ಒಯ್ದ ವಿಷಯ ಪರಶುರಾಮನಿಗೆ ತಿಳಿಯುತ್ತದೆ. ಕಾಮಧೇನುವನ್ನು ರಕ್ಷಿಸುವೆ’ ಎಂದು ತನ್ನ ಕೊಡಲಿ, ಬಿಲ್ಲು ಬಾಣ ಹಿಡಿದು ದೊರೆಯ ಬೆನ್ನಟ್ಟುತ್ತಾನೆ. ರಾಜ ಮತ್ತು ಪರಶುರಾಮನ ಮಧ್ಯೆ ಭೀಕರ ಕಾಳಗ ನಡೆಯುತ್ತದೆ. ಸಾವಿರ ಬಾಹುಗಳುಳ್ಳ ಕಾರ್ತವೀರ್ಯನನ್ನು ಕೊಂದು ಪರಶುರಾಮನು ಕಾಮಧೇನುವನ್ನು ಆಶ್ರಮಕ್ಕೆ ವಾಪಸು ತರುತ್ತಾನೆ. ಅಂತೂ ಕಾಮಧೇನು ವಾಪಸಾದಳು. ಜಮದಗ್ನಿಯು ಪರಶುರಾಮನ ಕೃತ್ಯ ಸರಿಯಲ್ಲ ಎಂದು ವಿವರಿಸುತ್ತಾರೆ. ಬ್ರಾಹ್ಮಣರು ಕ್ಷಮಾ ಗುಣ ಹೊಂದಿರಬೇಕು’ ಎಂದು ಹೇಳುತ್ತಾರೆ. ಪಾಪ ಪರಿಹಾರಕ್ಕೆ ತೀರ್ಥಯಾತ್ರೆಗೆ ಹೋಗು’ ಎನ್ನುತ್ತಾರೆ. ತಂದೆಯ ಸೂಚನೆಯಂತೆ ಪರಶುರಾಮ ಯಾತ್ರೆ ಹೊರಡುತ್ತಾನೆ.
ಇತ್ತ ರಾಜನ ಮಕ್ಕಳು ಕುಪಿತರಾಗಿ, ಅವರೆಲ್ಲ ಜಮದಗ್ನಿ ಆಶ್ರಮಕ್ಕೆ ಬಂದು ಜಮದಗ್ನಿಯ ಕೊಂದು ಅವರ ಶಿರವನ್ನು ಒಯ್ಯುತ್ತಾರೆ. ತೀರ್ಥಯಾತ್ರೆಯಿಂದ ಹಿಂತಿರುಗಿದ ಪರಶುರಾಮನಿಗೆ ತನ್ನ ತಂದೆಯನ್ನು ಕೊಂದಿರುವುದು ತಿಳಿಯುತ್ತದೆ. ಇದರಿಂದ ಅವನಿಗೆ ತುಂಬ ಕೋಪ ಉಂಟಾಗಿ ಕ್ಷತ್ರಿಯರನ್ನೆಲ್ಲಾ ಕೊಲ್ಲುವೆ’ ಎಂದು ವೀರಾವೇಶದಿಂದ ಹೊರಡುತ್ತಾನೆ. ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಸಂಚರಿಸಿ ಕ್ಷತ್ರಿಯರನ್ನು ಸಂಹರಿಸುತ್ತ ಹೋಗುತ್ತಾನೆ.
ಸಮಂತ ಪಂಚಕ – ಪರಶುರಾಮ ೨೧ ಬಾರಿ ಭೂ ಪ್ರದಕ್ಷಿಣೆ ಮಾಡಿ ಸಮಸ್ತ ದುಷ್ಟ ಕ್ಷತ್ರಿಯರ ಕೊಂದು ಅವರ ರಕ್ತವನ್ನು ತುಂಬಿದ ಐದು ಕೊಳಗಳೇ ಸಮಂತಪಂಚಕ.
ಪರಶುರಾಮ ತೀರ್ಥ –
ಪರಶುರಾಮನು ತಂದೆಯ ಶಿರ ತಂದು ದೇಹದೊಂದಿಗೆ ಜೋಡಿಸುತ್ತಾನೆ . ಜಮದಗ್ನಿಗೆ ಪುನಃ ಜೀವ ಬರುತ್ತದೆ.
ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು. ಪಾಪಿಷ್ಠರನ್ನು ನಾಶ ಪಡಿಸುವುದು. ಆದರೆ ಯಾವ ಕ್ಷತ್ರಿಯ ರಾಜನು ಬ್ರಾಹ್ಮಣರಿಗೆ ವಿಧೇಯರಾಗಿರುತ್ತಾರೋ ಅವರನ್ನು ಕೊಲ್ಲುತ್ತಿರಲಿಲ್ಲ. . ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ. ದುಷ್ಟ ಕ್ಷತ್ರಿಯರ ಕೊಂದ ಕೊಡಲಿಯಲ್ಲಿ ಮೆತ್ತಿದ್ದ ರಕ್ತದ ಕಲೆಯನ್ನು ತೊಳೆಯಲು ಎಲ್ಲೂ ಸಾಧ್ಯವಾಗಿದೆ ಕೊನೆಗೆ ತೀರ್ಥಹಳ್ಳಿ ಗ್ರಾಮದಲ್ಲಿ ತುಂಗಾನದಿಯಲ್ಲಿ ತೊಳೆದಾಗ ಆ ರಕ್ತದ ಕಲೆ ಹೋಯಿತಂತೆ. ಅದು ಪರಶುರಾಮ ತೀರ್ಥ ಎಂದು ಪ್ರಸಿದ್ಧಿಯಾಗಿದೆ
ಪರಶುರಾಮರ ಬಳಿ ಪಿತಾಮಹ ಭೀಷ್ಮಾಚಾರ್ಯರು 425 ವರ್ಷಗಳ ಕಾಲ ವಿದ್ಯಾರ್ಜನೆ ಮಾಡಿದರು.
ದ್ರೋಣಾಚಾರ್ಯರಿಗೆ ಎಲ್ಲಾ ಆಯುಧ ಪ್ರದಾನ: ದ್ರೋಣಾಚಾರ್ಯರು ಯಾರಲ್ಲೂ ಏನನ್ನೂ ಕೇಳುತ್ತಿರಲಿಲ್ಲ. ಆದರೆ ತನ್ನ ಮಗ ಅಶ್ವತ್ಥಾಮನಿಗಾಗಿ ಕುಡಿಯಲು ಹಾಲಿಗೂ ಪರದಾಡುತ್ತಿದ್ದಾಗ ಪರಮಾತ್ಮನಲ್ಲಿ ಬೇಡಿದರೆ ತಪ್ಪಿಲ್ಲವೆಂದು ಪರಶುರಾಮನಲ್ಲಿ ಕೋರುತ್ತಾನೆ. ಅಷ್ಟರಲ್ಲಿ ಪರಶುರಾಮ ತನ್ನಲ್ಲಿರುವ ಸಮಸ್ತವನ್ನೂ ಬ್ರಾಹ್ಮಣರಿಗೆ ದಾನ ಕೊಟ್ಟಿದ್ದ. ತನ್ನ ಬಳಿಯಿದ್ದ ಆಯುಧಗಳನ್ನೆಲ್ಲಾ ದ್ರೋಣಾಚಾರ್ಯರಿಗೆ ನೀಡಿದನು. ಅದೇ ಆಯುಧದಿಂದ ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಿದರು ದ್ರೋಣಾಚಾರ್ಯರು.
ಕರ್ಣನಿಗೆ ವಿದ್ಯಾದಾನ ಮತ್ತು ಶಾಪ :
ಪರಶುರಾಮ ಮೊದಲು ಕ್ಷತ್ರಿಯರಿಗೆ ವಿದ್ಯಾದಾನ ಮಾಡಿದ್ದರೂ, ಕ್ಷತ್ರಿಯ ರಾಜ ತನ್ನ ತಂದೆಯ ಶಿರ ಕುಡಿದು ನಂತರದಲ್ಲಿ ಯಾವ ಕ್ಷತ್ರಿಯರಿಗೂ ವಿದ್ಯಾದಾನ ಮಾಡುವುದಿಲ್ಲವೆಂದು ತೀರ್ಮಾನಿಸಿದ್ದ. ಕರ್ಣ ಸೂತಪುತ್ರನಾದ್ದರಿಂದ ದ್ರೋಣಾಚಾರ್ಯರಿಂದ ನಿರಾಕರಿಸಲ್ಪಟ್ಟು ಪರಶುರಾಮರ ಬಳಿ ಬಂದು ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿದ್ಯಾರ್ಜನೆ ಮಾಡಿದ್ದ. ಒಮ್ಮೆ ಪರಶುರಾಮರು ಕರ್ಣನ ತೊಡೆಯಲ್ಲಿ ವಿರಮಿಸಿದ್ದಾಗ ಒಂದು ಕೀಟವು ಕರ್ಣನ ತೊಡೆಯ ಭಾಗದಲ್ಲಿ ಕಡಿಯಿತು. ಆ ನೋವು ಎಷ್ಟೇ ತೀವ್ರವಿದ್ದರೂ ನೋವು ತಡೆದುಕೊಂಡ ಕರ್ಣ. ಆದರೆ ರಕ್ತಸ್ರಾವ ಹರಿದು ಪರಶುರಾಮನ ಸ್ಪರ್ಶಿಸಲು ಎಚ್ಚರಗೊಂಡು ಕರ್ಣನಿಗೆ ಹೇಳುತ್ತಾನೆ – ಇಷ್ಟು ನೋವು ತಡೆದುಕೊಳ್ಳಲು ಬ್ರಾಹ್ಮಣರಿಗೆ ಸಾಧ್ಯವಿಲ್ಲ. ನೀನು ಯಾವ ಜಾತಿ ಎಂದಾಗ, ತನ್ನ ಜನ್ಮಜಾತಿ ಗೊತ್ತಿಲ್ಲ ಎನ್ನುತ್ತಾನೆ ಕರ್ಣ. ನೀನೊಬ್ಬ ಕ್ಷತ್ರಿಯನೇ ಎಂದು ನಿರ್ಧರಿಸಿದ ಪರಶುರಾಮ “ನಿನಗೆ ಒಳ್ಳೆಯ ಸಂದರ್ಭದಲ್ಲಿ ಬಾಣ ಪ್ರಯೋಗ ಸಮಯದಲ್ಲಿ ಮಂತ್ರ ಫ” ಎಂದು ಶಪಿಸಿದರು. ಅದೇ ಕಾರಣಕ್ಕೆ ಕುರುಕ್ಷೇತ್ರದಲ್ಲಿ ತನ್ನ ರಥ ಹೂತುಹೋದಾಗ ಅರ್ಜುನನ ಬಾಣಕ್ಕೆ ಉತ್ತರವಾಗಿ ಬ್ರಹ್ಮಾಸ್ತ್ರ ಉಪಯೋಗಿಸಲಾಗದೆ ಪ್ರಾಣತೆತ್ತ ಕರ್ಣ.
ಪರಶುರಾಮ ಕ್ಷೇತ್ರ – ಪರಶುರಾಮ ಎಲ್ಲಾ ದುಷ್ಟ ಕ್ಷತ್ರಿಯರ ಕೊಂದ ನಂತರ ಸಮಸ್ತ ಭೂಮಂಡಲವನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ನಂತರ ತನ್ನ ವಾಸಕ್ಕಾಗಿ ತನ್ನ ಕೊಡಲಿಯನ್ನು ಎಸೆದ (ಅಥವಾ ಬಾಣವನ್ನು ಹೊಡೆದ) ಸ್ಥಳವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬಾಗ್ಲಾನ್ ತಾಲೂಕಿನ ಸಲ್ಹೇರ್ ಕೋಟೆಯಲ್ಲಿದೆ (ಮಹಾರಾಷ್ಟ್ರದ ಎರಡನೇ ಅತಿ ಎತ್ತರದ ಶಿಖರ ಮತ್ತು ಅತಿ ಎತ್ತರದ ಕೋಟೆ). ಈ ಕೋಟೆಯ ಶಿಖರದ ಮೇಲೆ ಪರಶುರಾಮನಿಗೆ ಸಮರ್ಪಿತವಾದ ದೇವಾಲಯವಿದೆ ಮತ್ತು ಬಂಡೆಯಲ್ಲಿ ಸಾಮಾನ್ಯ ಮಾನವರ 4 ಪಟ್ಟು ಗಾತ್ರದ ಹೆಜ್ಜೆಗುರುತುಗಳಿವೆ.
ಗೋಕರ್ಣದಿಂದ ಕನ್ಯಾಕುಮಾರಿವರೆಗಿನ ಭಾರತದ ಪಶ್ಚಿಮ ಕರಾವಳಿಯ ಪ್ರದೇಶವನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ.
ಉಡುಪಿ ಕ್ಷೇತ್ರ, ಗೋಕರ್ಣ ಇವೆಲ್ಲ ಪರಶುರಾಮ ಕ್ಷೇತ್ರಗಳು
ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ. ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.
ಪರಶುರಾಮನ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಭಾರ್ಗವರಾಮ – ಭೃಗುವಂಶದಲ್ಲಿ ಜನಿಸಿದ್ದರಿಂದ.
ಭೃಗು – ಚ್ಯವನ – ಔರ್ವ – ಋಚೀಕ – ಜಮದಗ್ನಿ – ಪರಶುರಾಮ.
ರೇಣುಕೇಯ- ರೇಣುಕಾದೇವಿಯ ಮಗನಾದ್ದರಿಂದ
ಜಾಮದಗ್ಯ – ಜಮದಗ್ನಿ ಋಷಿಗಳ ಮಗನಾದ್ದರಿಂದ
ಪರಶುಧರ / ಪರಶುರಾಮ – ಪರಶುವನ್ನು ಹೋಗುತ್ತಿರುವುದರಿಂದ
ಮಾತೃಕಾಚ್ಛಿದ – ತಾಯಿಯ ತಲೆಯನ್ನು ಕಡಿದುದರಿಂದ
ಮಾತೃಪ್ರನಾದ – ತಲೆ ಕಡಿದ ತಾಯಿಗೆ ಮತ್ತೆ ಜೀವವನ್ನು ತಂದೆಯ ವರಮೂಲಕ ಪಡೆದಿದ್ದರಿಂದ
ಕಾರ್ತವೀರ್ಯಾರಿ – ತನ್ನ ತಂದೆಯ ಶಿರವ ಕಡಿದ ಕಾರ್ತವೀರ್ಯನ ಕೊಂದದ್ದರಿಂದ
ಕ್ಷತ್ರಾಂತಕ – 21 ಬಾರಿ ಭೂಪ್ರದಕ್ಷಿಣೆ ಮಾಡಿ ಸಮಸ್ತ ದುಷ್ಟ ಕ್ಷತ್ರಿಯರ ಕೊಂದಿದ್ದರಿಂದ
ಸಹ್ಯಾದ್ರಿವಾಸಿ – ಈಗಲೂ ಸಹ್ಯಾದ್ರಿಯಲ್ಲಿ ಪರಶುರಾಮ ಕ್ಷೇತ್ರ ಸೃಷ್ಟಿಸಿ ನೆಲೆಸಿದ್ದರಿಂದ
ಚಿರಂಜೀವಿ – ಸಪ್ತ ಚಿರಂಜೀವಿಗಳಲ್ಲಿ ಇವನೂ ಒಬ್ಬನಾದ್ದರಿಂದ
- ನರಹರಿ ಸುಮಧ್ವ
**********
ಶ್ರೀ ಗುರುಭ್ಯೋ ನಮಃ 🕉
ಪರಶುರಾಮ ಶ್ರೀ ಮಹಾವಿಷ್ಣುವಿನ ಆರನೆಯ ಅವತಾರ
ಪರಶುರಾಮ ಶ್ರೀವಿಷ್ಣುವಿನ ಆರನೆಯ ಅವತಾರ. ಅವರ ಕಥೆಗಳು ರಾಮಾಯಣ, ಮಹಾಭಾರತ ಹಾಗೂ ಕೆಲವು ಪುರಾಣಗಳಲ್ಲಿ ಕಂಡು ಬರುತ್ತವೆ. ಅವರ ಮೊದಲಿನ ಅವತಾರಗಳಂತೆ ಅವರ ಹೆಸರಿನ ಸ್ವತಂತ್ರ ಪುರಾಣಗಳಿಲ್ಲ.
ಪರಶುರಾಮರ ತಂದೆ ತಾಯಿ
ಪರಶುರಾಮರ ತಾಯಿ ರೇಣುಕಾ ಮತ್ತು ತಂದೆ ಭೃಗುಕುಲೋತ್ಪನ್ನ ಋಷಿಗಳಾದ ಜಮದಗ್ನಿ. ಹತ್ತೊಂಭತ್ತನೆಯ ತ್ರೇತಾಯುಗದಲ್ಲಿ (ಮಹಾಭಾರತಕ್ಕನುಸಾರ ತ್ರೇತಾ ಹಾಗೂ ದ್ವಾಪರಯುಗಗಳ ಸಂಧಿಕಾಲದಲ್ಲಿ) ಪರಶುರಾಮರ ಜನನವಾಯಿತು.
ಪರಶುರಾಮರ ಕಾರ್ಯ
ಅಧಮ ಕ್ಷತ್ರಿಯರ ವಧೆ
ವಾಲ್ಮೀಕಿಯು ಪರಶುರಾಮರನ್ನು ‘ರಾಜವಿಮರ್ದನ’ ಎಂದು ಸಂಬೋಧಿಸಿದ್ದಾರೆ. ಇದರಿಂದ ’ಪರಶುರಾಮ ಸಾರಾಸಗಟಾಗಿ ಎಲ್ಲಾ ಕ್ಷತ್ರಿಯರನ್ನು ಸಂಹರಿಸದೆ ದುಷ್ಟ-ದುರ್ಜನ ಕ್ಷತ್ರಿಯ ರಾಜರನ್ನು ಸಂಹರಿಸಿದರು.’ ಎಂದು ಹೇಳಬಹುದು.
ಕಾರ್ತವೀರ್ಯನು ಜಮದಗ್ನಿ ಋಷಿಗಳ ಆಶ್ರಮದಿಂದ ಕಾಮಧೇನು ಹಾಗೂ ಅದರ ಕರುವನ್ನು ಅಪಹರಿಸಿದನು. ಆಗ ಪರಶುರಾಮ ಅಲ್ಲಿ ಇರಲಿಲ್ಲ. ಮರಳಿ ಬಂದ ನಂತರ ಅವರಿಗೆ ಈ ಸಂಗತಿ ತಿಳಿಯುತ್ತಲೇ ಅವರು ಕಾರ್ತವೀರ್ಯನನ್ನು ವಧಿಸುವುದಾಗಿ ಪ್ರತಿಜ್ಞೆಗೈದರು. ನರ್ಮದಾ ನದಿಯ ತೀರದಲ್ಲಿ ಅವರಿಬ್ಬರ ನಡುವೆ ದ್ವಂದ್ವಯುದ್ಧ ನಡೆಯಿತು. ಈ ಯುದ್ಧದಲ್ಲಿ ಪರಶುರಾಮ ಕಾರ್ತವೀರ್ಯನನ್ನು ವಧಿಸಿದರು. ಅನಂತರ ತಂದೆ ಜಮದಗ್ನಿಯ ಆಜ್ಞೆಯಂತೆ ಅವರು ತೀರ್ಥಯಾತ್ರೆ ಹಾಗೂ ತಪಸ್ಸು ಮಾಡಲು ಹೋದರು.
ಪರಶುರಾಮ ಹೋದನಂತರ ಕಾರ್ತವೀರ್ಯನ ವಧೆಯ ಸೇಡು ತೀರಿಸಿಕೊಳ್ಳಲು ಹೈಹಯ ಜಮದಗ್ನಿ ಋಷಿಗಳ ಶಿರಚ್ಛೇದನಗೊಳಿಸಿ ಅವರ ಹತ್ಯೆಗೈದನು. ಇದು ತಿಳಿಯುತ್ತಲೇ ಪರಶುರಾಮ ತಕ್ಷಣ ಆಶ್ರಮಕ್ಕೆ ಧಾವಿಸಿದರು. ಜಮದಗ್ನಿಯ ಶರೀರದ ಮೇಲಿನ ಇಪ್ಪತ್ತೊಂದು ಗಾಯಗಳನ್ನು ಕಂಡು ಅವರು ತಕ್ಷಣ ’ಹೈಹಯ ಹಾಗೂ ಇತರ ಕ್ಷತ್ರೀಯ ಅಧಮರು ಮಾಡಿದ ಈ ಬ್ರಹ್ಮಹತ್ಯೆಯ ಶಿಕ್ಷೆ ಎಂದು ’ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯಗೊಳಿಸುವೆನು’ ಎಂದು ಪ್ರತಿಜ್ಞೆ ಮಾಡಿದರು. ಈ ಪ್ರತಿಜ್ಞೆಗನುಸಾರ ಅವರು ಮದೋನ್ಮತ್ತರಾದ ಕ್ಷತ್ರಿಯರನ್ನು ನಾಶಗೊಳಿಸುವುದು, ಯುದ್ಧದ ನಂತರ ಮಹೇಂದ್ರ ಪರ್ವತದ ಮೇಲೆ ಹೋಗುವುದು, ಕ್ಷತ್ರಿಯರು ಸೊಕ್ಕಿನಿಂದ ವರ್ತಿಸಿದರೆ ಪುನಃ ಅವರನ್ನು ನಾಶಗೊಳಿಸುವುದು, ಹೀಗೆ ಇಪ್ಪತ್ತೊಂದು ಬಾರಿ ದಂಡೆತ್ತಿ ಹೋದರು. ಸಮಂತಪಂಚಕದಲ್ಲಿ ಕೊನೆಯ ಯುದ್ಧ ಮಾಡಿ ರಕ್ತದಿಂದ ಕೊಳೆಯಾದ ತನ್ನ ಪರಶುವನ್ನು ತೊಳೆದು ಶಸ್ತ್ರಗಳನ್ನು ಕೆಳಗಿಟ್ಟರು.
ಕ್ಷೇತ್ರಪಾಲ ದೇವತೆಗಳ ಸ್ಥಾನಗಳನ್ನು ಪ್ರತಿಷ್ಠಾಪಿಸುವುದು
ಪರಶುರಾಮ ೨೧ ಬಾರಿ ಪೃಥ್ವಿಯ ಪ್ರದಕ್ಷಿಣೆ ಮಾಡುವಾಗ ೧೦೮ ಶಕ್ತಿಪೀಠಗಳನ್ನು, ತೀರ್ಥಕ್ಷೇತ್ರಗಳನ್ನು, ಅಂದರೆ ಕ್ಷೇತ್ರಪಾಲ ದೇವತೆಗಳ ಸ್ಥಾನಗಳನ್ನು ಪ್ರತಿಷ್ಠಾಪಿಸಿದರು.
ಪರಶುರಾಮರ ವೈಶಿಷ್ಟ್ಯಗಳು
ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||
ಅರ್ಥ : ನಾಲ್ಕು ವೇದಗಳು ಮುಖೋದ್ಗತವಾಗಿವೆ, ಅಂದರೆ ಪೂರ್ಣ ಜ್ಞಾನವಿದೆ ಹಾಗೂ ಬೆನ್ನ ಮೇಲೆ ಬಾಣದೊಂದಿಗೆ ಧನುಷ್ಯವಿದೆ, ಅಂದರೆ ಶೌರ್ಯವಿದೆ; ಅಂದರೆ ಇಲ್ಲಿ ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜ ಹೀಗೆ ಎರಡು ತೇಜಗಳಿವೆ. ಯಾರು ವಿರೋಧಿಸುವರೋ, ಅವರನ್ನು ಪರಶುರಾಮ ಶಾಪದಿಂದ ಅಥವಾ ಬಾಣದಿಂದ ಸೋಲಿಸಬಲ್ಲರು.
ರಾಮನೊಳಗೆ ತೇಜವನ್ನು ಸಂಕ್ರಮಿತ ಗೊಳಿಸುವುದು
ಒಮ್ಮೆ ಶ್ರೀರಾಮನ ಕೀರ್ತಿಯನ್ನು ಕೇಳಿ ಪರಶುರಾಮ ಅವರ ಪರಾಕ್ರಮವನ್ನು ಪರೀಕ್ಷಿಸಲು ಅವರ ದಾರಿಯಲ್ಲಿ ಅಡ್ಡ ಬಂದು ತನ್ನ ಧನಸ್ಸನ್ನು ರಾಮನ ಕೈಯಲ್ಲಿ ಕೊಟ್ಟು ಅದನ್ನು ಬಗ್ಗಿಸಿ ಅದಕ್ಕೆ ಬಾಣವನ್ನು ಹಚ್ಚಿ ತೋರಿಸಲು ಹೇಳಿದರು. ಶ್ರೀರಾಮ ಹಾಗೆ ಮಾಡಿ ತೋರಿಸಿ ’ಈ ಬಾಣವನ್ನು ನಾನು ಎಲ್ಲಿ ಬಿಡಲಿ’ ಎಂದು ಕೇಳಿದರು. ಪರಶುರಾಮರು ‘ನನ್ನ ಈ (ಕಾಶ್ಯಪಿ) ಭೂಮಿಯ ಮೇಲಿನ ಗತಿಯನ್ನು ನಿಲ್ಲಿಸು’ ಎಂದು ಹೇಳಿದಾಗ ಶ್ರೀರಾಮ ಹಾಗೆ ಮಾಡಿದರು. ಈ ಪ್ರಸಂಗದಲ್ಲಿ ಪರಶುರಾಮ ತನ್ನ ಧನಸ್ಸನ್ನು ಶ್ರೀರಾಮನಿಗೆ ನೀಡಿ, ತನ್ನ ಕ್ಷಾತ್ರತೇಜವನ್ನು ರಾಮನೊಳಗೆ ಸಂಕ್ರಮಿತಗೊಳಿಸಿದರು.
ಸರ್ವೋತ್ತಮ ಧನುರ್ವಿದ್ಯಾ ಶಿಕ್ಷಕ
ಒಮ್ಮೆ ಶಸ್ತ್ರವನ್ನು ಕೆಳಗಿಟ್ಟ ನಂತರ ಪರಶುರಾಮರು ಕ್ಷತ್ರಿಯರ ಮೇಲಿನ ವೈರಿಭಾವವನ್ನು ತ್ಯಜಿಸಿದರು ಹಾಗೂ ಬ್ರಾಹ್ಮಣ, ಕ್ಷತ್ರಿಯರೆಲ್ಲರಿಗೂ ಸಮಭಾವದಿಂದ ಶಸ್ತ್ರವಿದ್ಯೆಯನ್ನು ಕಲಿಸಲಾರಂಭಿಸಿದರು. ಮಹಾಭಾರತದಲ್ಲಿ ಭೀಷ್ಮಾಚಾರ್ಯರು, ದ್ರೋಣಾಚಾರ್ಯರು ಮುಂತಾದ ಹಿರಿಯ ಯೋಧರು ಪರಶುರಾಮರ ಶಿಷ್ಯರೇ ಆಗಿದ್ದರು.
ದಾನಶೂರ
ಪರಶುರಾಮರು ಕ್ಷತ್ರಿಯರನ್ನು ವಧಿಸಲು ದಂಡೆತ್ತಿ ಹೋದುದರಿಂದ ಸಂಪೂರ್ಣ ಪೃಥ್ವಿಯು ಅವರ ಸ್ವಾಮಿತ್ತ್ವದಲ್ಲಿ ಬಂದಿತು. ಆದುದರಿಂದ ಅವರಿಗೆ ಅಶ್ವಮೇಧಯಜ್ಞ ಮಾಡುವ ಅಧಿಕಾರ ಪ್ರಾಪ್ತಿಯಾಗಿ ಅವರು ಅಶ್ವಮೇಧ ಯಜ್ಞ ಮಾಡಿದರು. ಯಜ್ಞದ ಕೊನೆಯಲ್ಲಿ ಪರಶುರಾಮರು ಆ ಯಜ್ಞದ ಪೌರೋಹಿತ್ಯ ವಹಿಸಿದ (ಅಧ್ವರ್ಯು) ಕಶ್ಯಪನಿಗೆ ಭೂಮಿಯನ್ನು ದಾನವಾಗಿ ನೀಡಿದರು.
ಹೊಸಭೂಮಿಯ ನಿರ್ಮಿತಿ
ಎಲ್ಲಿಯವರೆಗೆ ಪರಶುರಾಮನು ಈ ಭೂಮಿಯಲ್ಲಿ ಇರುವನೋ ಅಲ್ಲಿಯವರೆಗೆ ಕ್ಷತ್ರಿಯರ ಕುಲದ ಉನ್ನತಿಯಾಗುವಂತಿಲ್ಲ, ಎಂದು ತಿಳಿದು ಕಶ್ಯಪನು ಪರಶುರಾಮನಿಗೆ ‘ಈಗ ಈ ಭೂಮಿಯ ಮೇಲೆ ನನ್ನ ಅಧಿಕಾರವಿದೆ. ನಿನಗೆ ಇಲ್ಲಿ ಉಳಿಯುವ ಅಧಿಕಾರವಿಲ್ಲ.’ ಎಂದು ಹೇಳಿದರು. ಅನಂತರ ಪರಶುರಾಮರು ಸಮುದ್ರವನ್ನು ಸರಿಸಿ ಸ್ವಂತದ ಕ್ಷೇತ್ರವನ್ನು ನಿರ್ಮಿಸಿದರು. ವೈತರಣಾದಿಂದ ಕನ್ಯಾಕುಮಾರಿಯವರೆಗೆ ಇರುವ ಈ ಭೂಭಾಗಕ್ಕೆ ‘ಪರಶುರಾಮ ಕ್ಷೇತ್ರ’ ಎಂದು ಕರೆಯಲಾಗುತ್ತದೆ.
ಪರಶುರಾಮರು ಸಪ್ತ ಚಿರಂಜೀವಿಗಳಲ್ಲಿ ಒಬ್ಬರಾಗಿದ್ದಾರೆ.
ಪರಶುರಾಮಕ್ಷೇತ್ರಗಳು
ಸಹ್ಯಾದ್ರಿ ಪರ್ವತಗಳ ಉತ್ತರ ತುದಿಯಲ್ಲಿ ಸಾಲ್ಹೇರದ ಬೆಟ್ಟದ ಮಧ್ಯಯುಗದ ಕೋಟೆಯಲ್ಲಿ, ಪಂಜಾಬಿನ ಕಾಂಗಡಾ ಜಿಲ್ಲೆಯಲ್ಲಿ, ಕೊಂಕಣದಲ್ಲಿ ಚಿಪಳುಣನಿಂದ ಐದು ಮೈಲು ದೂರದಲ್ಲಿರುವ ಒಂದು ಬೆಟ್ಟದಲ್ಲಿ, ಹಾಗೆಯೇ ಗೋಮಂತಕದ ಕಾಣಕೋಣದಲ್ಲಿ ಕರ್ನಾಟಕದ ಸೌಂದತ್ತಿಯ ಶ್ರೀ ರೇಣುಕಾದೇವಿಯ ಮಡಿಲಲ್ಲಿ ಪರಶುರಾಮನ ಒಂದು ಪ್ರಾಚೀನ ಮಂದಿರವಿದೆ.
ಮೂರ್ತಿ
ನೋಡಲು ಭೀಮಕಾಯ ದೇಹವುಳ್ಳ, ಜಟಾಧಾರಿ, ಹೆಗಲಿಗೆ ಧನುಷ್ಯ ಹಾಗೂ ಕೈಯಲ್ಲಿ ಪರಶು – ಪರಶುರಾಮ ಮೂರ್ತಿ ಹೀಗೆ ಇರುತ್ತದೆ. ಕ್ಷಾತ್ರ ತೇಜದ ಋಷಿಪುತ್ರನ ರೋಚಕ ಕಥೆ
ಋಷಿ ಕುಲದಲ್ಲಿ ಹುಟ್ಟಿಯೂ ಪರಶುರಾಮನಲ್ಲಿ ಕ್ಷಾತ್ರ ಗುಣವಿತ್ತು. ಇದರ ಹಿನ್ನೆಲೆಯೊಂದು ರೋಚಕ ಅಧ್ಯಾಯ. ಇಂಥಾ ಪರಶುರಾಮನ ಹುಟ್ಟು ಮತ್ತು ಸಾಹಸ ಕಥನ ಇಲ್ಲಿದೆ ಓದಿ…
ಋಷಿ ಪರಶುರಾಮರು ಸಮುದ್ರವನ್ನು ಹಿಂದೆ ಸರಿಯವಂತೆ ಮಾಡಿ ಪಶ್ಚಿಮ ಕರಾವಳಿಯ ಸೃಷ್ಟಿಗೆ ಕಾರಣರಾದರು ಎನ್ನುತ್ತವೆ ಪುರಾಣಗಳು. ಪರಶುರಾಮ ಶೌರ್ಯವೇ ಮೊದಲಾದ ಕ್ಷಾತ್ರ ಗುಣಗಳನ್ನು ಪಡೆದಿದ್ದು, ಯುದ್ಧ ಮಾಡಿದ್ದು, ಸಮುದ್ರ ಸರಿಯುವಂತೆ ಮಾಡಿದ್ದು… ಇವೆಲ್ಲ ಕಥೆ ಒಂದಕ್ಕಿಂದ ಒಂದು ರೋಚಕ!!
ವಿಷ್ಣುವಿನ ಅವತಾರ ಎಂದೇ ಪರಿಗಣಿಸಲಾಗುವ ಪರಶುರಾಮ, ಭೃಗು ವಂಶದ ಜಮದಗ್ನಿ ಋಷಿಯ ಪುತ್ರ. ಈ ಕಾರಣದಿಂದ ಪರಶುರಾಮನಿಗೆ ‘ಭಾರ್ಗವ’ ಎಂಬ ಹೆಸರೂ ಇದೆ.
ವಯೋವೃದ್ಧನಾಗಿದ್ದ ಋಚೀಕ, ಗಾಧಿ ರಾಜನ ಮಗಳು ಸತ್ಯವತಿಯನ್ನು ವಿವಾಹವಾಗಿದ್ದ. ಗಾಧಿ ರಾಜನಿಗೆ ಸತ್ಯವತಿಯನ್ನು ಬಿಟ್ಟು ಬೇರೆ ಮಕ್ಕಳಿರುವುದಿಲ್ಲ. ಆದ್ದರಿಂದ ಸತ್ಯವತಿ ತನ್ನ ಪತಿ ಋಚೀಕನ ಬಳಿ ತವರು ಮನೆಗೊಂದು ಸಂತಾನ ಕರುಣಿಸೆಂದು ಕೇಳಿಕೊಳ್ಳುತ್ತಾಳೆ. ಪತ್ನಿಯ ಮಾತಿಗೆ ಇಲ್ಲವೆನ್ನದ ಋಚೀಕ ವ್ರತಾಚರಣೆ ಮಾಡುವಂತೆ ಹೇಳಿ, ನಿಯಮಗಳನ್ನು ಸೂಚಿಸುತ್ತಾನೆ. ಅದೇ ವೇಳೆ ಆತನ ಪತ್ನಿ ಸತ್ಯವತಿಯೂ ಉತ್ಕೃಷ್ಟ ಸಂತಾನದ ಬೇಡಿಕೆ ಇಟ್ಟಿದ್ದರಿಂದ ನೀನೂ ನಿನ್ನ ತಾಯಿಯೊಡನೆ ವ್ರತ ನಡೆಸು ಎಂದು ಹೇಳುತ್ತಾನೆ. ಮತ್ತು ಅವಳಿಗೆ ಬೇರೊಂದು ವಿಧಾನ ಸೂಚಿಸಿ ಪ್ರತ್ಯೇಕ ಮಂತ್ರ ನೀಡುತ್ತಾನೆ. ಮತ್ತು ಇಬ್ಬರಿಗೂ ಪ್ರತ್ಯೇಕ ಚರುಗಳನ್ನು ಸಿದ್ಧಪಡಿಸಿ ಕೊಡುತ್ತಾನೆ.
ಆದರೆ ಸತ್ಯವತಿಯ ತಾಯಿಗೆ ಈತ ತನ್ನ ಹೆಂಡತಿಗೆ ನನಗಿಂತ ಉತ್ಕೃಷ್ಟವಾದ ಚರು ನೀಡಿರಬಹುದು ಎಂಬ ಅನುಮಾನ ಶುರುವಾಗುತ್ತದೆ. ಮಗಳ ಬಳಿ ಬಂದು, “ದಯವಿಟ್ಟು ನಿನ್ನ ಚರುವನ್ನು ನನಗೆ ಕೊಡು, ನನ್ನದನ್ನು ನೀನು ತೆಗೆದುಕೋ. ನಿನ್ನ ತವರಿನ ಕೀರ್ತಿ ದಶದಿಕ್ಕುಗಳಿಗೂ ಹರಡುವಂತೆ ಮಾಡು. ನೀನು ಬೇಕಿದ್ದರೆ ನಿನ್ನ ಗಂಡನಿಂದ ಪುನಃ ಸಂತಾನ ಪಡೆಯಬಹುದು” ಎಂದು ಕೇಳುತ್ತಾಳೆ. ಸತ್ಯವತಿ ಅದಕ್ಕೊಪ್ಪಿ ತನ್ನ ಚರುವನ್ನು ಅವಳಿಗೆ ಕೊಟ್ಟುಬಿಡುತ್ತಾಳೆ. ವಾಸ್ತವದಲ್ಲಿ ಋಚೀಕ ರಾಜನ ಪತ್ನಿಯಾದ ಸತ್ಯವತಿಯ ತಾಯಿಗೆ ಕ್ಷಾತ್ರಗುಣವುಳ್ಳ ಸಂತಾನ ಪಡೆಯಲು ಸೂಕ್ತವಾದ ಮಂತ್ರ ನೀಡಿರುತ್ತಾನೆ. ಹಾಗೂ ಋಷಿಪತ್ನಿಯಾದ ಸತ್ಯವತಿಗೆ ಸತ್ವಗುಣದ ಮಂತ್ರ ನೀಡಿರುತ್ತಾನೆ. ಆದರೀಗ ಅದು ಅದಲುಬದಲಾಗಿ ಋಚೀಕ – ಸತ್ಯವತಿಯರಿಗೆ ಕ್ಷಾತ್ರಗುಣದ ಜಮದಗ್ನಿಯೂ ಗಾದಿರಾಜ ಮತ್ತವನ ಪತ್ನಿಗೆ ಆರ್ಷ ಗುಣವುಳ್ಳ ವಿಶ್ವಾಮಿತ್ರನೂ ಜನಿಸುತ್ತಾರೆ.
ಮುಂದೆ ಜಮದಗ್ನಿ ರೇಣುಕೆಯನ್ನು ಮದುವೆಯಾಗುತ್ತಾನೆ. ಆತನ ಮೂರು ಮಕ್ಕಳಲ್ಲಿ ಕಿರಿಯವನು ರಾಮ. ಸದಾ ಪರಶುಧಾರಿಯಾದುದರಿಂದ ಪರಶುರಾಮನೆಂದೂ ಖ್ಯಾತ. ಈತನಿಗೆ ತಂದೆಯ ಗುಣಗಳು ಬಳುವಳಿಯಾಗಿ ಬಂದಿರುತ್ತದೆ. ಕ್ಷಾತ್ರತೇಜದ ಕಾರಣದಿಂದಾಗಿ ಪರಶುರಾಮ ಮಹಾ ಶೂರನೂ ಕೋಪಿಷ್ಠನೂ ಹಿರಿಯರಲ್ಲಿ ವಿನಮ್ರನೂ ಆಗಿರುತ್ತಾನೆ.
ಒಮ್ಮೆ ಜಮದಗ್ನಿಯ ಆಶ್ರಮದಲ್ಲಿ ಪುತ್ರರು ಯಾರೂ ಇಲ್ಲದೆ ಇದ್ದಾಗ ಕಾರ್ತವೀರ್ಯಾರ್ಜುನನೆಂಬ ರಾಜ ತನ್ನ ಅಗಾಧ ಸೈನ್ಯದೊಡನೆ ಅಲ್ಲಿಗೆ ಬರುತ್ತಾನೆ. ಜಮದಗ್ನಿ ಅವನನ್ನು ಸತ್ಕರಿಸಿ ಇಡೀ ಸೈನ್ಯಕ್ಕೆ ಮೃಷ್ಟಾನ್ನ ಭೋಜನ ಮಾಡಿಸುತ್ತಾನೆ. ಎಲೆಮನೆಯ ಒಬ್ಬ ಋಷಿ ಇಷ್ಟು ದೊಡ್ಡ ಸೈನ್ಯಕ್ಕೆ ಹೇಗೆ ವೈಭವದ ಉಪಚಾರ ಮಾಡಿದ ಎಂದು ಕಾರ್ತವೀರ್ಯಾರ್ಜುನ ಅಚ್ಚರಿಪಡುತ್ತಾನೆ. ಜಮದಗ್ನಿಯನ್ನೇ ವಿಚಾರಿಸಿದಾಗ ಆಶ್ರಮದಲ್ಲಿರುವ ಕಾಮಧೇನುವಿನ ವಿಷಯ ತಿಳಿಯುತ್ತದೆ. ಕಾಮಧೇನು ಕೇಳಿದ್ದೆಲ್ಲವನ್ನೂ ಕೊಡುವ ದೇವಲೋಕದ ಗೋವು.
ಕಡುಲೋಭಿಯಾದ ಕಾರ್ತವೀರ್ಯಾರ್ಜುನ, “ಅಮೂಲ್ಯ ವಸ್ತುಗಳೇನಿದ್ದರೂ ರಾಜನಿಗೇ ಸೇರಬೇಕು. ಈ ಕಾಮಧೇನುವನ್ನು ನನ್ನೊಡನೆ ಕರೆದೊಯ್ಯುತ್ತೇನೆ” ಎಂದು ದುಂಬಾಲು ಬೀಳುತ್ತಾನೆ. ಅದಕ್ಕೆ ಜಮದಗ್ನಿ ಒಪ್ಪುವುದಿಲ್ಲ. ಅವನ ವಿರೋಧದ ನಡುವೆಯೂ ಹಲ್ಲೆ ನಡೆಸಿ ಕಾಮಧೇನುವನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಅದು ನಿಂತಲ್ಲಿಂದ ಕದಲುವುದಿಲ್ಲ. ಜಮದಗ್ನಿ ಇರುವಲ್ಲಿ ಮಾತ್ರ ಕಾಮಧೇನು ಇರುತ್ತದೆ ಎಂಬ ರಹಸ್ಯ ತಿಳಿದ ಕಾರ್ತವೀರ್ಯಾರ್ಜುನ ಜಗದಗ್ನಿಯನ್ನು ಕೊಂದು, ಅವನ ತಲೆ ಕತ್ತರಿಸಿ ತೆಗೆದುಕೊಂಡು ಹೊರಡುತ್ತಾನೆ. ಕಾಮಧೇನು ಕಾರ್ತವೀರ್ಯಾರ್ಜುನನನ್ನು ಹಿಂಬಾಲಿಸುತ್ತದೆ.
ಈ ವಿಷಯ ತಿಳಿದ ಪರಶುರಾಮ ರೌದ್ರಾವತಾರ ತಾಳುತ್ತಾನೆ. ತನ್ನ ಗಂಡುಗೊಡಲಿಯನ್ನೆತ್ತಿಕೊಂಡೇ ಕಾರ್ತವೀರ್ಯಾರ್ಜುನನ ಬಳಿ ಹೋಗಿ ಒಂದೇ ಏಟಿಗೆ ಅವನ ತಲೆ ಕತ್ತರಿಸುತ್ತಾನೆ. ಅಷ್ಟಾದರೂ ಕೋಪ ತೀರದೆ, ಇಡೀ ಭೂಮಂಡಲವನ್ನು 24 ಬಾರಿ ಪ್ರದಕ್ಷಿಣೆ ಹಾಕಿ ಸಿಕ್ಕ ಸಿಕ್ಕ ಕ್ಷತ್ರಿಯರ ವಧೆ ಮಾಡುತ್ತಾನೆ. ಈ ಎಲ್ಲ ಅರಸರ ಸೊತ್ತು ಪರಶುರಾಮನಿಗೆ ಸೇರುತ್ತದೆ.
ಆದರೆ ಪರಶುರಾಮ “ನಾನೊಬ್ಬ ಬ್ರಾಹ್ಮಣ. ನನಗೇಕೆ ಭೂಮಿಯ ಗೊಡವೆ..?” ಎಂದು ಆಲೋಚಿಸಿ ತನ್ನೆಲ್ಲ ಭೂಮಿಯನ್ನು ದಾನ ಮಾಡುತ್ತಾನೆ. ಅನಂತರ ತಪಶ್ಚರಣೆಗೆ ಹೊರಡುತ್ತಾನೆ. ಆಗ ತನ್ನೆಲ್ಲ ಭೂಮಿಯನ್ನು ತಾನು ದಾನ ಮಾಡಿಬಿಟ್ಟಿರುವುದು ನೆನಪಾಗುತ್ತದೆ. ಒಮ್ಮೆ ದಾನ ಮಾಡಿದ ಭೂಮಿಯನ್ನು ಮತ್ತೆ ಕೇಳುವುದು ಸರಿಯಲ್ಲ. ಈಗೇನು ಮಾಡುವುದು… ಎಲ್ಲಿ ಕುಳಿತು ತಪಸ್ಸು ಮಾಡುವುದು? ಯೋಚನೆಯಾಗುತ್ತದೆ.
ಕೊನೆಗೊಂದು ಉಪಾಯ ಹೊಳೆದು, ಪಶ್ಚಿಮ ಘಟ್ಟದ ಬೆಟ್ಟದ ಮೇಲೆ ನಿಂತು ತನ್ನ ಪರಶುವನ್ನು ಸಮುದ್ರದೆಡೆಗೆ ಎಸೆಯುತ್ತಾನೆ. ಸಮುದ್ರ ಹಿಂದೆ ಸರಿದು ಒಂದಷ್ಟು ಜಾಗ ಬಿಟ್ಟುಕೊಡುತ್ತದೆ. ಹೀಗೆ ಸೃಷ್ಟಿಯಾಗುವ ಕರಾವಳಿಯಲ್ಲಿ ಪರಶುರಾಮ ತಪಶ್ಚರಣೆಗೆ ನಿಲ್ಲುತ್ತಾನೆ. ಹೀಗೆ ರಾಮ ಎಸೆದ ಪರಶುವಿನ ಕಾರಣದಿಂದ ಸಮುದ್ರ ಸರಿದು ಉಂಟಾದ ನೆಲವನ್ನೇ ‘ಪರಶುರಾಮ ಸೃಷ್ಟಿ’ ಎಂದು ಕರೆಯುವುದು. ದಕ್ಷಿಣ ಕನ್ನಡ, ಗೋವಾ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಪರಶುರಾಮ ಸೃಷ್ಟಿ ಎಂಬ ಹೆಸರಿದೆ. ಪರಶುರಾಮ ಜಯಂತಿ ಪರಶುರಾಮ ಜಯಂತಿಯನ್ನು ಶುಕ್ಲ ಪಕ್ಷದ ತೃತೀಯ ದಿನದಂದು ಅಂದರೆ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಭಗವಾನ್ ಪರಶುರಾಮ ವೈಶಾಖ ಶುಕ್ಲ ತೃತೀಯ ದಿನದಂದು ಜನಿಸಿದನು. ಆದ್ದರಿಂದ ಈ ದಿನವನ್ನು ಪರಶುರಾಮ ಜಯಂತಿ ಎಂದೇ ಆಚರಿಸಲಾಗುತ್ತದೆ. ಪರಶುರಾಮ ವಿಷ್ಣುವಿನ ಆರನೇ ಅವತಾರ. ಭೃಗು ರಾಜವಂಶದ ರಾಜ ಪ್ರಸೇನ್ಜಿತ ಅವರ ಮಗಳು ರೇಣುಕಾ ಮತ್ತು ಮಹರ್ಷಿ ಜಮದಗ್ನಿ ದಂಪತಿಗೆ ಮಗನಾಗಿ ಜನಿಸಿದವ ಪರಶುರಾಮ. ಜಮದಗ್ನಿ ಮತ್ತು ರೇಣುಕಾ ಅವರ ಐದನೇ ಮಗನಾದ ಪರಶುರಾಮನಿಗೆ ರುಮನ್ವಂತ, ಸುಶೇನ, ವಿಶ್ವ ಮತ್ತು ವಿಶ್ವವಾಸು ಎಂಬ ನಾಲ್ಕು ಹಿರಿಯ ಸಹೋದರರು ಇದ್ದರು.
ಪರಶುರಾಮ ಶಿವನಿಗೆ ಪ್ರಿಯವಾದವನು. ಶಿವನಿಗೆ ತನ್ನನ್ನು ತಾನು ಭಕ್ತಿಯಿಂದ ಅರ್ಪಿಸಿಕೊಂಡವನು. ಹಾಗಾಗಿಯೇ ಶಿವನಂಥ ಶಕ್ತಿ ಅವನಿಗೆ! ಪರಶುರಾಮ ಅಪಾರ ಜ್ಞಾನಿ. ಆತ ಒಬ್ಬ ಮಹಾನ್ ಯೋಧನೂ ಕೂಡ ಹೌದು. ಪರಶುರಾಮ ಜಯಂತಿಯನ್ನು ಭಾರತದಾದ್ಯಂತ ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಹವನ, ಪೂಜಾ ವಿಧಿವಿಧಾನಗಳ ಜೊತೆಗೆ ಪರಶುರಾಮ ಶೋಭಯಯಾತ್ರೆ ಯನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತದೆ.
ಮೂಲತಃ, ಪರಶುರಾಮನನ್ನು ರಾಮ ಎಂಬ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಶಿವನು ಪರಶುರಾಮನಿಗೆ 'ಪರಶು' ಎಂಬ ಅತೀಂದ್ರಿಯ ಆಯುಧವನ್ನು ಕೊಡುತ್ತಾನೆ. ಇದರಿಂದಾಗಿ ಪರಶುರಾಮ ಎಂದು ಕರೆಯಲಾಗುತ್ತದೆ. ಪುರಾಣಗಳ ನಂಬಿಕೆಗಳ ಪ್ರಕಾರ, ಪರಶುರಾಮ ಕ್ಷತ್ರಿಯರನೇ ಸೋಲಿಸಿದವನು. ಕ್ಷತ್ರಿಯರ ಹೆಮ್ಮೆಯ ಜಗತ್ತನ್ನು ಮುಕ್ತಗೊಳಿಸುವ ಸಲುವಾಗಿಯೇ ಪರಶುರಾಮ ಜನಿಸಿದನು ಎಂದು ಹೇಳಲಾಗುತ್ತದೆ.
ವೈಶಾಖ ಶುಕ್ಲ ಪಕ್ಷ ತೃತೀಯ ದಿನದಂದು ತ್ರೇತಾಯುಗ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ (ಭಗವದ್ಗೀತೆ), ಹೈದೇಯ ರಾಜವಂಶದ ರಾಜರನ್ನು ನಾಶಮಾಡಲು ಪರಶುರಾಮ ಜನ್ಮ ತಾಳಿದನು. ಮಾನವಕುಲದ ಹಿತಕ್ಕಾಗಿಯೇ ಬದುಕಲು ನಿರ್ಧಸಿದ್ದವನು ಪರಶುರಾಮ! ಅಗತ್ಯವಿರುವ ಜನರಿಗೆ, ಪರಶುರಾಮ ಸದಾ ಸಹಾಯಹಸ್ತ ಚಾಚುತ್ತಿದ್ದನು.
ಪರಶುರಾಮ ಜಯಂತಿಯ ಮಹತ್ವ
ದ್ವಾಪರ ಯುಗದಲ್ಲಿ, ಪರಶುರಾಮ ಒಬ್ಬ ಬ್ರಾಹ್ಮಣ ಯೋಧನಾಗಿದ್ದನು. ಅವನು ಶಿವನ ಮಹಾನ್ ಶಿಷ್ಯ ಎಂದೇ ಗುರುತಿಸಿಕೊಂಡಿದ್ದಾನೆ. ಪರಶುರಾಮ, ಶಿವನಿಂದ ಪಡೆದ ಪೌರಾಣಿಕ ಕೊಡಲಿಯಾದ 'ಪರಶು' ವನ್ನು ಹೊಂದಿದ್ದು, ಮಹಾಭಾರತ ಪಾತ್ರಗಳಾದ ದ್ರೋಣಾಚಾರ್ಯ, ಭೀಷ್ಮ ಮತ್ತು ಕರ್ಣರಿಗೆ ಮಾರ್ಗದರ್ಶಕನಾಗಿದ್ದನು.
ಒಂದು ದಂತಕಥೆಯ ಪ್ರಕಾರ, ವಿಷ್ಣು ತನ್ನ ಪರಶುರಾಮನ ಅವತಾರದಲ್ಲಿ ಕ್ಷತ್ರಿಯ ಜನಾಂಗದ ವಿಶ್ವಾಸಘಾತುಕತನವನ್ನು ಕೊನೆಗೊಳಿಸಿದನು ಮತ್ತು ರಾಕ್ಷಸ ರಾಜ ಕಿರತಾರ್ಜುನನನ್ನು ಸೋಲಿಸಿದನು. ಈ ಮೂಲಕ ಮಹಾ ವಿಷ್ಣುವು ಭೂಮಿಯ ಮೇಲೆ ಶಾಂತಿ ಮತ್ತು ಧರ್ಮವನ್ನು ಪುನಃಸ್ಥಾಪಿಸಿದನು ಎನ್ನಲಾಗುತ್ತದೆ. ಹೀಗಾಗಿ ಪರಶುರಾಮ ಜಯಂತಿಯ ದಿನವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ಭಕ್ತರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಆಚರಣೆಗಳು ಮತ್ತು ಕ್ರಿಯಾವಿಧಾನಗಳು
ಭಕ್ತರು, ಪರಶುರಾಮ ಜಯಂತಿಯ ಹಿಂದಿನ ರಾತ್ರಿಯಿಂದ ಜಯಂತಿಯ ದಿನದವರೆಗೆ ಉಪವಾಸವನ್ನು ಮಾಡುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ, ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮಹಾವಿಷ್ಣುವಿನ ಭಕ್ತರು ರಾತ್ರಿಯಿಡೀ ಎಚ್ಚರವಾಗಿದ್ದು, ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತಾರೆ. ಈ ದಿನದಂದು ಬ್ರಾಹ್ಮಣರಿಗೆ ಫಲಾಹಾರವನ್ನು ದಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಪರಶುರಾಮ ಜಯಂತಿಯಂದು ಉಪವಾಸ ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಮಾಡುವುದು ಶತಮಾನಗಳಿಂದ ಈ ದಿನದ ಗುರುತಾಗಿವೆ. ಈ ದಿನ ಮಾಡಿದ ಯಾವುದೇ ಶುಭ ಕಾರ್ಯವು ಫಲಪ್ರದ ಫಲಿತಾಂಶವನ್ನು ನೀಡುತ್ತದೆ. ಜೊತೆಗೆ ಈ ದಿನವನ್ನು ಬಹಳ ಶುಭವೆಂದು ಹೇಳಲಾಗುತ್ತದೆ.
ಪರಶುರಾಮನ ಬಗ್ಗೆ ಇನ್ನಷ್ಟು ಮಾಹಿತಿ
ಪರಶುರಾಮನ ಇತರ ಹೆಸರುಗಳು: ಭಾರ್ಗವ ರಾಮ, ರಾಮಭದ್ರ
ಸಂಬಂಧ (ಅಫಿಲಿಯೇಶನ್): ವಿಷ್ಣುವಿನ ಆರನೇ ಅವತಾರ, ಪರಶುರಾಮನನ್ನು ದೇವರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ
ವಾಸಸ್ಥಾನ: ಮಹೇಂದ್ರಗಿರಿ, ಒರಿಸ್ಸಾ
ಶಸ್ತ್ರಾಸ್ತ್ರ: ಕೊಡಲಿ
ಪತ್ನಿ: ಧಾರಿಣಿ, ಅನಾಮಿಕಾ ಎಂದೂ ಕರೆಯುತ್ತಾರೆ.

ದಿನಾಂಕ : 14.05.2021 ಶುಕ್ರವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ತೃತೀಯಾ - ಶ್ರೀ ಪರಶುರಾಮ ಜಯಂತೀ "
" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಕಣ್ಣಲ್ಲಿ ಶ್ರೀ ಪರಶುರಾಮದೇವರು "
ಚಂದ್ರಮಾ ಇವ ಭುವೋ ರಚಯನ್ನಕ್ಷತ್ರ
ಯೋಗಮಪಿ ಯತ್ತ್ವಮಲಾಸೀಃ ।
ತೇನ ಶಾತ್ರವ ಯಶೋಂಬುಜರಾಜೀ-
ಮುದ್ರಣಂ ತವ ಕೃತಿಂ ಬಹುಮನ್ಯೇ ।।
ಹೇ ಮೂಲರಾಮೋsಭಿನ್ನ ಪರಶುರಾಮದೇವಾ!
ಭೂಮಿಯಲ್ಲಿರುವ ಕ್ಷತ್ರಿಯ ಸಂಹಾರ ದ್ವಾರಾ ನಕ್ಷತ್ರ ಯೋಗವನ್ನೂ - ಶತ್ರುಗಳ ಕೀರ್ತಿ ಎಂಬ ಕಮಲಗಳ ಸಂಕೋಚವನ್ನು ಮಾಡಿರುವುದರಿಂದ ಚಂದ್ರನಂತೆ ಪ್ರಕಾಶಮಾನವಾದ ನಿನ್ನ ಪರಶುರಾಮ ರೂಪವನ್ನು ಪೂಜಿಸುತ್ತೇನೆ!!
" ಶ್ರೀ ರಾಯರ ವಿದ್ಯಾ ಶಿಷ್ಯರೂ - ಗ್ರಂಥಕಾರರೂ ಆದ ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣಾಚಾರ್ಯರ ಮಾತಲ್ಲಿ... "
ಯೋ ಭೂಮಾವಾವಿರಾಸೀದ್ಭೃಗುಕುಲತಿಲಕೋ
ರಾಮನಾಮದ್ಯ ದೇವೋ ದೈತ್ಯಾನ್
ಕ್ಷತ್ರೇಷು ಜಾತಾನ್ ಶಿವವರ ಬಲತೋ
ಗರ್ವಿತಾನಪ್ಯವಧ್ಯಾನ್ ।
ಹತ್ವಾ ತದ್ದೇಹಜಾತೈರ್ಬಹುರುಧಿರಗಣೈಃ
ಸೇವ್ಯ ತೀರ್ಥಾನಿ ಕೃತ್ವಾ ರಕ್ಷನ ಲೋಕಾನ್
ಸಮಸ್ತಾನ್ ಸಮವತು ಸತತಂ
ಮಾಂ ಪ್ರಸನ್ನಂ ಸ ಈಶಃ ।। 7 ।।
" ಶ್ರೀ ಪರಶುರಾಮದೇವರ ಅವತಾರ "
ಶ್ರೀ ಜಮದಗ್ನಿ ರೇಣುಕಾ ದಂಪತಿಗಳ ಮಗನಾಗಿ ಅವತರಿಸಿದ ರೂಪ ಶ್ರೀ ಪರಶುರಾಮ.
ಶ್ರೀ ಪರಶುರಾಮನ ಮಡದಿಯ ಹೆಸರು ಶ್ರೀ ಹರಿಣಿ.
ಒಮ್ಮೆ ಶ್ರೀ ಪರಶುರಾಮನ ತಾಯಿ ರೇಣುಕಾದೇವಿ ನೀರು ತರಲು ನದಿಗೆ ಹೋಗಿದ್ದಾಗ - ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಅಲ್ಲಿ ಇರುತ್ತಾನೆ.
ಒಂದು ಕ್ಷಣ ಮೈಮರೆತು ತನಗೂ ಆ ವೈಭೋಗ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುತ್ತಾರೆ.
ಅದು ಶ್ರೀ ಜಮದಗ್ನಿಗಳಿಗೆ ದಿವ್ಯ ದೃಷ್ಟಿಗೆ ತಿಳಿದು ಅವರು ಕೋಪಗೊಳ್ಳುತ್ತಾರೆ.
ತಮ್ಮ ಮಕ್ಕಳನ್ನು ಕರೆದು.....
`ನಿಮ್ಮ ತಾಯಿಯನ್ನು ಕೊಲ್ಲಿ’
ಎಂದು ಆದೇಶಿಸುತ್ತಾರೆ.
`ಮಾತೃ ಹತ್ಯೆ ಮಾಡುವುದೇ?
ಅಂತಹ ಪಾಪ ಮಾಡಲಾರೆ’
ಎಂದು ಎಲ್ಲ ಮಕ್ಕಳೂ ಹೇಳಲು - ಶ್ರೀ ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಶ್ರೀ ಪರಶುರಾಮನಿಗೆ ಆದೇಶಿಸುತ್ತಾರೆ.
ತನ್ನ ತಂದೆಯ ಶಕ್ತಿಯನ್ನು ಅರಿತ ಶ್ರೀ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತತ್‌ಕ್ಷಣ ಕೊಲ್ಲುತ್ತಾನೆ.
ಶ್ರೀ ಜಮದಗ್ನಿಯು ಸಂತಸಗೊಂಡು - ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ.
ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು.
ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.
ಒಮ್ಮೆ ರಾಜ ಕಾರ್ತವೀರ್ಯಾರ್ಜುನ ತನ್ನ ಪರಿವಾರದೊಂದಿಗೆ ಶ್ರೀ ಜಮದಗ್ನಿ ಆಶ್ರಮಕ್ಕೆ ಬಂದಾಗ, ಮಹಾ ಋಷಿಯು ತನ್ನ ಅತಿಥಿಗಳನ್ನು ಸತ್ಕರಿಸುತ್ತಾರೆ.
ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದಾಗ.....
ಶ್ರೀ ಜಮದಗ್ನಿಗಳ ಬಳಿ ಇರುವ ಕಾಮಧೇನುವೇ ಕಾರಣ ಎಂದು ತಿಳಿಯಿತು.
ಕಾರ್ತವೀರ್ಯಾರ್ಜುನ ತನಗೇ ಆ ಕಾಮಧೇನು ವನ್ನು ಕೊಡಲು ಕೇಳಿದಾಗ - ಶ್ರೀ ಜಮದಗ್ನಿಯು ಸಾಧ್ಯವಿಲ್ಲವೆನ್ನುತ್ತಾರೆ.
ಆಗ ಕಾರ್ತವೀರ್ಯಾರ್ಜುನ ಕಾಮಧೇನುವನ್ನು ಕದ್ದು ಒಯ್ಯುತ್ತಾನೆ.
ಒಯ್ದ ವಿಷಯ ಶ್ರೀ ಪರಶುರಾಮನಿಗೆ ತಿಳಿಯುತ್ತದೆ.
` ಕಾಮಧೇನುವನ್ನು ರಕ್ಷಿಸುವೆ ’
ಎಂದು ತನ್ನ ಕೊಡಲಿ - ಬಿಲ್ಲು ಬಾಣ ಹಿಡಿದು ದೊರೆಯ ಬೆನ್ನಟ್ಟುತ್ತಾನೆ.
ರಾಜ ಮತ್ತು ಶ್ರೀ ಪರಶುರಾಮನ ಮಧ್ಯೆ ಭೀಕರ ಕಾಳಗ ನಡೆಯುತ್ತದೆ - ರಾಜನನ್ನು ಕೊಲ್ಲುತ್ತಾನೆ..
ಅನಂತರ ಶ್ರೀ ಪರಶುರಾಮ ಕಾಮಧೇನುವನ್ನು ಆಶ್ರಮಕ್ಕೆ ವಾಪಸು ತರುತ್ತಾನೆ.
ಅಂತೂ ಕಾಮಧೇನು ವಾಪಸಾದಳು.
ಶ್ರೀ ಜಮದಗ್ನಿಯು ಶ್ರೀ ಪರಶುರಾಮನ ಕೃತ್ಯ ಸರಿಯಲ್ಲ ಎಂದು ವಿವರಿಸುತ್ತಾರೆ.
" ಬ್ರಾಹ್ಮಣರು ಕ್ಷಮಾ ಗುಣ ಹೊಂದಿರಬೇಕು " ಎಂದು ಹೇಳುತ್ತಾರೆ.
" ಪಾಪ ಪರಿಹಾರಕ್ಕೆ ತೀರ್ಥಯಾತ್ರೆಗೆ ಹೋಗು " ಎನ್ನುತ್ತಾರೆ.
ತಂದೆಯ ಸೂಚನೆಯಂತೆ ಶ್ರೀ ಪರಶುರಾಮ ಯಾತ್ರೆ ಹೊರಡುತ್ತಾನೆ.
ಇತ್ತ ರಾಜನ ಮಕ್ಕಳು ಕುಪಿತರಾಗಿ - ಅವರೆಲ್ಲ ಜಮದಗ್ನಿ ಆಶ್ರಮಕ್ಕೆ ಬಂದು ಜಮದಗ್ನಿಯ ಕೊಂದು ಅವರ ಶಿರವನ್ನು ಒಯ್ಯುತ್ತಾರೆ.
ತೀರ್ಥಯಾತ್ರೆಯಿಂದ ಹಿಂತಿರುಗಿದ ಶ್ರೀ ಪರಶುರಾಮನಿಗೆ ತನ್ನ ತಂದೆಯನ್ನು ಕೊಂದಿರುವುದು ತಿಳಿಯುತ್ತದೆ.
ಇದರಿಂದ ಅವನಿಗೆ ತುಂಬ ಕೋಪ ಉಂಟಾಗಿ " ಕ್ಷತ್ರಿಯರನ್ನೆಲ್ಲಾ ಕೊಲ್ಲುವೆ " ಎಂದು ವೀರಾವೇಶದಿಂದ ಹೊರಡುತ್ತಾನೆ.
21 ಬಾರಿ ಭೂಮಿಯಲ್ಲಿ ಸಂಚರಿಸಿ ಕ್ಷತ್ರಿಯರನ್ನು ಸಂಹರಿಸುತ್ತ ಹೋಗುತ್ತಾನೆ.
ಶ್ರೀ ಪರಶುರಾಮನು ತಂದೆಯ ಶಿರ ತಂದು ದೇಹದೊಂದಿಗೆ ಜೋಡಿಸುತ್ತಾನೆ .
ಶ್ರೀ ಜಮದಗ್ನಿಗೆ ಪುನಃ ಜೀವ ಬರುತ್ತದೆ.
ಶ್ರೀ ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು.
ಪಾಪಿಷ್ಠರನ್ನು ನಾಶ ಪಡಿಸುವುದು.
ಶ್ರೀ ವಿಷ್ಣುವು ಶ್ರೀ ಪರಶುರಾಮನ ಅವತಾರದಲ್ಲಿ 21 ಬಾರಿ ಕ್ಷತ್ರಿಯರನ್ನು ಕೊಲ್ಲುತ್ತಾನೆ.
ಆದರೆ ಯಾವ ಕ್ಷತ್ರಿಯ ರಾಜನು ಬ್ರಾಹ್ಮಣರಿಗೆ ವಿಧೇಯರಾಗಿರುತ್ತಾರೋ ಅವರನ್ನು ಕೊಲ್ಲುತ್ತಿರಲಿಲ್ಲ.
ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ.
ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರ ಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ.
ಶ್ರೀ ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.
ಶ್ರೀ ವಾದಿರಾಜ ಗುರುಸಾರ್ವಭೌಮರು....
ಕರ್ಣೇಪದನ್ಯಸ್ತರುಚೀರಂಸು:
ವಾರಾಶಿವಸ್ತ್ರಂ ಜಘನಾದ್ಧಿ ಯಸ್ಯಾ: ।
ಅಮೂಮುಚದ್ಬಾಣಕರೇಣ ಭೂಮೇ:
ಶ್ರೀ ಭಾರ್ಗವಸ್ಸಾ ಜಯತಿ ಕ್ಷಿತಿರ್ನಃ ।।
ಹಿಂದೆ ಶ್ರೀ ಪರಶುರಾಮದೇವರು ಕ್ಷತ್ರಿಯರನ್ನು ಜಯಿಸಿ ಸಮಸ್ತ ಭೂಮಂಡಲವನ್ನು ವಶ ಪಡಿಸಿಕೊಂಡು ಬ್ರಾಹ್ಮಣರಿಗೆ ಅದನ್ನು ದಾನವಾಗಿ ಕೊಟ್ಟು - ದಾನ ಮಾಡಿದ ಪ್ರದೇಶದಲ್ಲಿ ತಾನು ಇರಕೂಡದೆಂದು - ತಮ್ಮ ವಾಸಕ್ಕೋಸ್ಕರ ಭೂಮಿಯನ್ನು ಅಪೇಕ್ಷಿಸಿದರು.
ಆಗ ಅವರು ಗೋಕರ್ಣದಲ್ಲಿ ನಿಂತು ಬಾಣ ಪ್ರಯೋಗ ಮಾಡಿ ಬಾಣವು ಎಲ್ಲಿ ಬಿತ್ತೋ ಅಲ್ಲಿಯವರೆಗೆ [ ಕನ್ಯಾಕುಮಾರಿಯ ವರೆಗೆ ] ಸಹ್ಯಾದ್ರಿ ಪ್ರದೇಶದಿಂದ ಸಮುದ್ರವನ್ನು ದೂರಕ್ಕೆ ಸರಸಿದರು ಎಂದು ಪುರಾಣ ಪ್ರಸಿದ್ಧಿ.
ಪುರಾಣವನ್ನನುಸರಿಸಿ ಇಲ್ಲಿ ಶ್ರೀ ವಾದಿರಾಜರು ಶ್ರೀ ಪರಶುರಾಮದೇವರ ಕ್ಷೇತ್ರ ವರ್ಣನೆ ಮಾಡಿದ್ದಾರೆ.
ಶ್ರೀ ಪರಶುರಾಮದೇವರು ಗೋಕರ್ಣದಲ್ಲಿ ಹೆಜ್ಜೆಯಿಟ್ಟು ಭೂದೇವಿಗೆ ಕಾಂತಿಯನ್ನುಂಟು ಮಾಡಿದರು ಮತ್ತು ಆ ಭೂಮಿ ಪ್ರದೇಶದಲ್ಲಿ ವಿಹಾರ ಮಾಡಬೇಕೆಂಬ ಇಚ್ಛೆಯಿಂದ ಭೂದೇವಿಗೆ ವಸ್ತ್ರದಂತೆ ಅವರಣವಾಗಿದ್ದ ಸಮುದ್ರವನ್ನು ತಮ್ಮ ಬಾಣವೆಂಬ ಕೈಯಿಂದ ದೂರಕ್ಕೆ ಸರಸಿದರು.
ಹೀಗೆ ಶ್ರೀ ಪರಶುರಾಮದೇವರಿಗೆ ಅತ್ಯಂತ ಪ್ರೀತಿಪಾತ್ರವಾದ ಸಹ್ಯಾದ್ರಿಯ ಪಶ್ಚಿಮ ತಪ್ಪಲಿಯ ಭೂಮಿಯು [ ತೌಳವ ದೇಶವು ] ಉತ್ಕೃಷ್ಟವಾಗಿದೆ.
" ಶ್ರೀ ನಾರದಾಂಶ ಪುರಂದರದಾಸರ ಕಣ್ಣಲ್ಲಿ... "
ಮುನಿಯ ಗರ್ಭದಲಿ ಹುಟ್ಟಿ ।
ಜನನಿಯ ಶಿರವನೆ ತರಿದಿ ।
ಘನವೆಷ್ಟು ಹೇಳಾಲೋ ।
ನಿನ್ನ ಹೇ ರಂಗಧಾಮಾ ।।
ಜನಕನ ವಚನ ಮೀರದೆ ।
ಜನನಿಯ ಶಿರವನೆ ತರಿದಿ ।
ಘನ ಶಾಸ್ತ್ರ । ಸ ।
ಮತವಾಗಿ ಯಲ ಸತ್ಯಭಾಮೆ ।।
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
ಹರಿಣೀಪತಿ ಶ್ರೀಪರಶುರಾಮ ದೇವರ ಜಯಂತಿ.
ತ್ರೇತಾಯುಗದಲ್ಲಿ ಕೆಲ ದುಷ್ಟ ಕ್ಷತ್ರಿಯರು ಅನಾಚಾರ ಮಾಡುತ್ತಿದ್ದರು. ಇದರಿಂದ ಭೂಭಾರ(ಲೋಕ ಸಂಕಟ) ಹೆಚ್ಚಾಗುತ್ತಿತ್ತು. ಇದನ್ನು ಗಮನಿಸಿದ ಶ್ರೀಹರಿ, ಲೋಕ ಸಂಕಟಕ್ಕೆ ಕಾರಣೀಭೂತರಾದ ದುಷ್ಟ ಕ್ಷತ್ರಿಯರನ್ನು ಸದೆ ಬಡೆಯಬೇಕಿತ್ತು. ಇದಕ್ಕಾಗಿ ಶ್ರೀರೇಣುಕಾದೇವಿ ಹಾಗೂ ಶ್ರೀಜಮದಗ್ನಿ ಮಹರ್ಷಿಗಳ ಸುಪುತ್ರನಾಗಿ ಶ್ರೀಪರಶುರಾಮದೇವರ ಅವತಾರಿತಾಗಿ ಭುವಿಯಲ್ಲಿ ಅವತರಿಸಿದ ದಿನ.
ಶ್ರೀಪರಶುರಾಮರು ಶ್ರೀಮಹಾವಿಷ್ಣುವಿನ 6 ನೇ ಅವತಾರ. ಇವರು ಜಮದಗ್ನಿ ಮಹರ್ಷಿ ಹಾಗೂ ರೇಣುಕಾದೇವಿಯರ ಸುಪುತ್ರರಾಗಿ, ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡದಲ್ಲಿ ಜನ್ಮತಾಳಿದರು ಎನ್ನಲಾಗಿದೆ.
ಇವರಿಗೆ ರಮಣ್ವಂತ, ಸುಷೇಣ ವಸು, ವಿಶ್ವಾವಸು ಎಂಬ ನಾಲ್ಕು ಜನ ಸಹೋದರರಿದ್ದರು.
ಇವರ ಮೂಲ ಹೆಸರು ಭಾರ್ಗವರಾಮ (ಭೃಗು ವಂಶದವನಾದ ಹಾಗೂ ಋಷಿಗಳ ಮನಸ್ಸನ್ನು ರಮಿಸುವವ).
ಬಾಲ್ಯದಲ್ಲೇ ಕ್ಷಾತ್ರ ವಿದ್ಯೆ ಸೇರಿದಂತೆ ಸಕಲ ವಿದ್ಯೆಗಳನ್ನು ಕಲಿತಿದ್ದರು. ನಂತರ ತಪಸ್ಸು ಮಾಡಿ, ತನ್ನ ಮೂಲರೂಪವಾದ ಮಹಾವಿಷ್ಣುವಿನಿಂದ ಪರಶು (ಕೊಡಲಿ) ಪಡೆಯುತ್ತಾರೆ. ಅಂದಿನಿಂದ ಪರಶುರಾಮ ಎಂದು ಕರೆಯಲಾಗುತ್ತದೆ.
ಒಮ್ಮೆ ತಮ್ಮ ಪತ್ನಿ ರೇಣುಕಾದೇವಿಯ ಶಿರಸ್ಸನ್ನು ಛೇದಿಸುವಂತೆ ಜಮದಗ್ನಿ ಮಹರ್ಷಿಗಳು ತಮ್ಮ ಮಕ್ಕಳಿಗೆ ಹೇಳುತ್ತಾರೆ. ಹಿರಿಯರಾದ ನಾಲ್ಕು ಮಂದಿ ತಾಯಿಯ ಮೇಲಿನ ಮಮಕಾರದಿಂದ ಆಕೆಯನ್ನು ಕೊಲ್ಲಲು ಹಿಂಜರಿದು ತಂದೆಯ ಶಾಪಕ್ಕೆ ಗುರಿಯಾದರು. ಕೊನೆಗೆ ತಂದೆಗೆ ಅತಿ ಪ್ರೀತಿಪಾತ್ರರಾದ ಪರಶುರಾಮರು ತಮ್ಮ ಕೊಡಲಿಯಿಂದ ತಾಯಿಯ ಶಿರಶ್ಚೇದ ಮಾಡಿದರು. ಶಾಂತನಾದ ತಂದೆಯಿಂದ ವರಪಡೆದು ತಾಯಿಯನ್ನು ಬದುಕಿಸಿದರಲ್ಲದೇ, ಸಹೋದರರ ಶಾಪ ವಿಮೋಚನೆ ಮಾಡಿಸಿದರು.
ಒಮ್ಮೆ ಇವರು ಹೊರಗಡೆ ಹೋಗಿದ್ದಾಗ ಆಶ್ರಮಕ್ಕೆ ಧಾಳಿಯಿಟ್ಟ ಕಾರ್ತವೀರ್ಯಾರ್ಜುನ ಎಂಬ ಗರ್ವಿಷ್ಠ ರಾಜ, ಜಮದಗ್ನಿ ಋಷಿಗಳನ್ನು ಕೊಲ್ಲುತ್ತಾನೆ. ಸುದ್ದಿ ತಿಳಿದ ಪರಶುರಾಮರು, ಈ ದುಷ್ಟರಾಜನನ್ನು ಸಂಹರಿಸಿದರಲ್ಲದೇ 21 ಬಾರಿ ಭೂಪ್ರದಕ್ಷಿಣೆ ನಡೆಸಿ ಕ್ಷತ್ರಿಯರನ್ನು ಸಂಹರಿಸಿದರು.
ಕೊನೆಗೆ ಸದ್ಗುಣವಂತನಾದ ಕೋಸಲ ದೇಶದ ದಶರಥ ಮಹಾರಾಜನನ್ನು ಕ್ಷಮಿಸಿ, ತನ್ನದೇ ಮತ್ತೊಂದು ರೂಪವಾದ ಶ್ರೀರಾಮ ದೇವರಿಗೆ ಕೋದಂಡ ಎಂಬ ಬಿಲ್ಲನ್ನು ನೀಡಿ ಅನುಗ್ರಹಿಸುತ್ತಾರೆ. ನಂತರ ತಾವು ಗೆದ್ದ ಭೂಮಿಯನ್ನು ಕಶ್ಯಪ ಮಹರ್ಷಿಗಳಿಗೆ ದಾನ ನೀಡಿ, ಸಹ್ಯಾದ್ರಿ ಪರ್ವತದ ತಪ್ಪಲಿಗೆ ತಪಸ್ಸಿಗೆ ತೆರಳುತ್ತಾರೆ.
ಇಂತಹ ಶ್ರೀಪರಶುರಾಮ ದೇವರು, ಪ್ರಜೆಗಳಿಗೆ ಸಂತಸವೀಯಲಿ. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಹಾಗೂ ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಸುಖ ಸಂತೋಷ ಕರುಣಿಸಲಿ ಎಂದು ಬೇಡೋಣ.
ಅಂಗಾರವರ್ಣಮಭಿತೋಂಡಬಹಿ: ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಂ | ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||
ಶ್ರೀಪರಶುರಾಮಾಯ ನಮಃ.....🙏🙏🙏
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
*****
According to Hindu literature "Chiranjeevi" means a person who has no death.
Below are the Chiranjeevis according to Hindu purana
1. Hanuman
2. Parashurama
3. Vedavyasa
4. Bhakta markandeya
5. Vibheeshana
6. Krupa
7. Ashwatthama
8. Mahabali
********
23 apr 2020 parashurama jayanti
No comments:
Post a Comment