SEARCH HERE

Thursday, 25 March 2021

ಸಣ್ಣ ಆಗುವುದು ಹೇಗೆ go slim

 become slim


***

ದೇಹದ ತೂಕ ಕಡಿಮೆ ಮಾಡುವ ಜೊತೆಗೆ ಬೊಜ್ಜು ನಿವಾರಣೆಗೆ!!!

🔸🔰🔸🔰🔸🔰🔸🔰🔸

ಬಹಳ ದಪ್ಪ ಇರುವವರು ತೆಳ್ಳಗಾಗಲು ಎಲ್ಲಾ ಆಹಾರಗಳನ್ನು ತ್ಯಜಿಸಿ, ಸಾಕಷ್ಟು ವ್ಯಾಯಾಮಗಳನ್ನೂ ಮಾಡುತ್ತಾ ಇರುತ್ತಾರೆ. ನಾವು ತಿಳಿಸುವ ಈ ಲೇಖನದ ಮೂಲಕ ತಿಳಿಸುವ ಮನೆಮದ್ದನ್ನು ಮಾಡುವುದರಿಂದ ಕೇವಲ ಐದು ದಿನಗಳಲ್ಲಿ ಕೊಬ್ಬನ್ನು ಕರಾಗಿಸಿಕೊಳ್ಳಬಹುದು. ಈ ಮನೆಮದ್ದನ್ನ ಮಾಡುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಇರುವುದರಿಂದ ಇದನ್ನು ಹೆಣ್ಣು ಮಕ್ಕಳು ಗಂಡು ಮಕ್ಕಳು ವಯಸ್ಸಾದವರು ಹಾಗೂ ಹದಿನೈದು ವರ್ಷ ಮೇಲ್ಪಟ್ಟ ಮಕ್ಕಳು ಕೂಡಾ ಮಾಡಬಹುದು. ಇದನ್ನು ಮಾವುವುದರಿಂದ ಯಾವುದೇ ಊಟ ತಿಂಡಿ ಬಿಡಬೇಕು ಎನ್ನುವ ಚಿಂತೆ ಕೂಡಾ ಇರುವುದಿಲ್ಲ. ಈ ಮನೆಮದ್ದನ್ನು ಹೇಗೆ ತಯಾರಿಸಿಕೊಳ್ಳುವುದು ಹಾಗೂ ಇದನ್ನು ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.


ನಾವು ಇಲ್ಲಿ ಬಳಸುವ ಪದಾರ್ಥಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರತ್ತೆ. ಕುಂಬಳಕಾಯಿ ಇದನ್ನು ನಾವು ನಮ್ಮ ಮನೆಯ ಅಡುಗೆಯಲ್ಲಿ ಬಳಸಿಯೇ ಇರುತ್ತೇವೆ ಇದು ಅಡುಗೆಗೆ ಮಾತ್ರವಲ್ಲದೆ ತೂಕ ಇಳಿಸಿಕೊಳ್ಳಲು ಒಂದು ರಾಮ ಬಾಣ ಎನ್ನಬಹುದು. ಇದನ್ನು ನಾವು ತಿಳಿಸುವ ರೀತಿಯಲ್ಲಿ ತೆಗೆದುಕೊಂಡರೆ ಮತ್ತಷ್ಟು ಎನರ್ಜಿ ಪಡೆಯಬಹುದು ಸಣ್ಣ ಪುಟ್ಟ ಕಾಯಿಲೆಗಳೂ ಸಹ ಮಾಯವಾಗುತ್ತವೆ ಹಾಗೂ ಶುಗರ್ ಬಿಪಿ ಇರುವವರಿಗೂ ಕೂಡಾ ಇದು ತುಂಬಾ ಒಳ್ಳೆಯದು. ಕುಂಬಳಕಾಯಿ ಬಳಸಿಕೊಂಡು ಹೇಗೆ ನಾವು ತೂಕ ಇಳಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ. 


ಚೆನ್ನಾಗಿ ಬೆಳೆದಿರುವ ಕುಂಬಳ ಕಾಯಿ ತೆಗೆದುಕೊಂಡು ಅದನ್ನು ಕಟ್ ಮಾಡಿಕೊಂಡು ಕಾಲು ಭಾಗದಷ್ಟು ಕುಂಬಳಕಾಯಿ ತೆಗೆದುಕೊಂಡು ಅದರ ಸಿಪ್ಪೆ, ಬೀಜ ಮತ್ತು ತಿರುಳು ತೆಗೆದುಕೊಂಡು ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ರಸ ತೆಗೆದುಕೊಳ್ಳಬೇಕು ಅಥವಾ ತುರಿದುಕೊಂದು ಆದರೂ ಅದರ ರಸವನ್ನು ತೆಗೆದುಕೊಳ್ಳಬಹುದು.

ಒಂದು ಲೋಟದಷ್ಟು ಶುದ್ಧವಾದ ಕುಂಬಳಕಾಯಿಯ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿಕೊಂಡು ಕುಡಿಯಬಹುದು. ಆದರೆ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಇದಕ್ಕೆ ಉಪ್ಪು ಸಕ್ಕರೆ ಅಥವಾ ಜೇನುತುಪ್ಪ ಏನನ್ನೂ ಸೇರಿಸಬಾರದು. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಲ್ಲಿ ಯಾವುದೇ ಕಹಿಯ ಅಂಶ ಕೂಡಾ ಇರುವುದಿಲ್ಲ. ಈ ಜ್ಯೂಸ್ ಕುಡಿದು ಆದ ನಂತರ ಒಂದು ಗಂಟೆ ಬಿಟ್ಟು ಎಲ್ಲಾ ರೀತಿಯ ಹಸಿ ತರಕಾರಿಗಳನ್ನು ಒಂದು ಬೌಲ್ ಅಷ್ಟು ತಿನ್ನಬೇಕು. ಇದರ ನಂತರ ಬೆಳಿಗ್ಗೆ ಬೇರೆ ಏನೂ ಆಹಾರ ಸೇವನೆ ಮಾಡಬಾರದು. ನಾವು ಒಂದರ ನಂತರ ಒಂದು ಆಹಾರ ಸೇವನೆ ಮಾಡುತ್ತಲೇ ಇದ್ದರೆ ಅದು ಅತಿಯಾಗಿ ನಮ್ಮ ದೇಹದಲ್ಲಿ ಬೊಜ್ಜು ಶೇಖರಣೆ ಆಗಲು ಆರಂಭ ಆಗುತ್ತದೆ. ಹಾಗಾಗಿ ನಾವು ಬೆಳಗಿನ ಸಮಯದಲ್ಲಿ ಕಡಿಮೆ ಆಹಾರವನ್ನು ಹಾಗೂ ಬೇಗ ಜೀರ್ಣ ಆಗುವ ಆಹಾರವನ್ನು ತೆಗೆದುಕೊಳ್ಳಬೇಕು. ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಬೇಗ ಹಸಿವೇ ಆಗುವುದಿಲ್ಲ ಒಂದು ಲೀಟರ್ ಹಾಲು ಕುಡಿದಷ್ಟು ಶಕ್ತಿ ದೊರೆಯುತ್ತದೇ. ಇದೊಂದು ಶಕ್ತಿ ವರ್ಧಕ ಆಗಿದ್ದು ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಹಾಯಕ ಆಗುವುದು.

ಇನ್ನು ಇದು ಶುಗರ್ ಇರುವವರಿಗೆ ಅಂತೂ ಬಹಳ ಒಳ್ಳೆಯದು. ಕುಂಬಳಕಾಯಿ ಜ್ಯೂಸ್ ಜೊತೆಗೆ ಸ್ವಲ್ಪ ಬಿಲ್ವ ಪತ್ರೆ ಎಲೆಗಳನ್ನು ಕೂಡಾ ಪೇಸ್ಟ್ ಮಾಡಿ ಹಾಕಿಕೊಂಡು ಕುಡಿಯುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಥೈರಾಯಿಡ್ ಸಮಸ್ಯೆ ಇರುವವರೂ ಸಹ ಕುಂಬಳಕಾಯಿ ಜ್ಯೂಸ್ ಜೊತೆಗೆ ಒಂದೆರಡು ಸ್ಪೂನ್ ಅಷ್ಟು ಕೊತ್ತಂಬರಿ ಸೊಪ್ಪಿನ ರಸವನ್ನು ಸೇರಿಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಥೈರಾಯಿಡ್ ಸಮಸ್ಯೆ ಕಡಿಮೆ ಆಗುವುದು. ಇನ್ನು ಮೂತ್ರ ಕೋಷದಲ್ಲಿ ಕಲ್ಲು ಆಗಿದ್ದರೆ ಅಂತವರು ಕುಂಬಳಕಾಯಿ ಜ್ಯೂಸ್ ಜೊತೆಗೆ ಸ್ವಲ್ಪ ಬಾಳೆದಂಡಿನ ಜ್ಯೂಸ್ ಸೇರಿಸಿಕೊಂಡು ಕುಡಿಯುವುದು ಉತ್ತಮ. ಇನ್ನು ಇದಕ್ಕೆ ಬೇವಿನ ರಸವನ್ನು ಸೇರಿಸಿಕೊಂಡು ಕುಡಿಯುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುವುದು ಹಾಗೂ ರಕ್ತ ಹೀನತೆ ಕೂಡಾ ಕಡಿಮೆ ಆಗುತ್ತದೆ. ಇನ್ನು ಇದನ್ನು ಎಷ್ಟು ದಿನದವರೆಗೆ ತೆಗೆದುಕೊಳ್ಳಬಹುದು ಅಂತ ನೋಡುವುದಾದರೆ , ತೂಕ ಇಳಿಯುವವರೆಗೂ ಕುಂಬಳಕಾಯಿ ಜ್ಯೂಸ್ ತೆಗೆದುಕೊಳ್ಳಬೇಕು ಹಾಗೂ ಇದರ ಜೊತೆಗೆ ಸ್ವಲ್ಪ ವಾಕಿಂಗ್ ಹಾಗೂ ವ್ಯಾಯಾಮ ಮಾಡುವುದರಿಂದಲೂ ಬಹು ಬೇಗ ತೂಕ ಇಳಿಸಿಕೊಳ್ಳಬಹುದು. ಮತ್ತೆ ತೂಕಾ ಹೆಚ್ಚಾಯಿತು ಅನಿಸಿದಾಗ ಮತ್ತೆ ಕುಂಬಳಕಾಯಿಯ ಜ್ಯೂಸ್ ಮಾಡಿ ಕುಡಿಯಬಹುದು.

ಹೆಲ್ತ್ ಅಂಡ್ ಫಿಟ್ನೆಸ್

***



No comments:

Post a Comment